ಭವಿಷ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭವಿಷ್ಯ ಎಂದರೆ ಕಾಲದಲ್ಲಿ ವರ್ತಮಾನದ ನಂತರ ಆಗುವಂಥದ್ದು. ಕಾಲ ಮತ್ತು ಭೌತಶಾಸ್ತ್ರದ ನಿಯಮಗಳ ಅಸ್ತಿತ್ವದ ಕಾರಣ ಅದರ ಆಗಮನ ಅನಿವಾರ್ಯವೆಂದು ಪರಿಗಣಿಸಲಾಗುತ್ತದೆ. ವಾಸ್ತವಿಕತೆಯ ಸ್ಪಷ್ಟ ಸ್ವರೂಪ ಮತ್ತು ಭವಿಷ್ಯದ ಅನಿವಾರ್ಯತೆಯ ಕಾರಣ, ಪ್ರಸಕ್ತವಾಗಿ ಅಸ್ತಿತ್ವದಲ್ಲಿರುವ ಮತ್ತು ಮುಂದೆ ಅಸ್ತಿತ್ವದಲ್ಲಿರುವ ಎಲ್ಲವನ್ನೂ ಶಾಶ್ವತ, ಅಂದರೆ ಎಂದೆಂದಿಗೂ ಅಸ್ತಿತ್ವದಲ್ಲಿರುವಂಥದ್ದು, ಅಥವಾ ತಾತ್ಕಾಲಿಕ, ಅಂದರೆ ಅಂತ್ಯವಾಗುವಂಥದ್ದು, ಎಂದು ವರ್ಗೀಕರಿಸಬಹುದು. ಭವಿಷ್ಯ ಮತ್ತು ಶಾಶ್ವತತೆಯ ಪರಿಕಲ್ಪನೆ ತತ್ತ್ವಶಾಸ್ತ್ರ, ಧರ್ಮ, ಮತ್ತು ವಿಜ್ಞಾನದ ಪ್ರಧಾನ ವಿಷಯಗಳಾಗಿವೆ, ಮತ್ತು ಅವುಗಳನ್ನು ವಿವಾದಾತ್ಮಕವಲ್ಲದ ರೀತಿಯಲ್ಲಿ ವ್ಯಾಖ್ಯಾನಿಸುವುದು ಏಕಪ್ರಕಾರವಾಗಿ ಅತ್ಯಂತ ಮಹಾನ ಮನಸ್ಸುಗಳಿಗೂ ಸಾಧ್ಯವಾಗಿಲ್ಲ.[೧] ಕಾಲದ ರೇಖೀಯ ಕಲ್ಪನೆಯನ್ನು ಬಳಸುವ ಪಾಶ್ಚಾತ್ಯ ದೃಷ್ಟಿಕೋನದಲ್ಲಿ, ಭವಿಷ್ಯವು ಅಂದಾಜಿಸಲಾದ ಕಾಲರೇಖೆಯ ಉಂಟಾಗುವುದೆಂದು ನಿರೀಕ್ಷಿಸಲಾದ ಭಾಗವಾಗಿದೆ. ವಿಶಿಷ್ಟ ಸಾಪೇಕ್ಷತೆಯಲ್ಲಿ, ಭವಿಷ್ಯವನ್ನು ಪರಮ ಭವಿಷ್ಯ, ಅಥವಾ ಭವಿಷ್ಯದ ಪ್ರಕಾಶ ಶಂಕು ಎಂದು ಪರಿಗಣಿಸಲಾಗುತ್ತದೆ.

ಕಾಲದ ತತ್ವಶಾಸ್ತ್ರದಲ್ಲಿ, ವರ್ತಮಾನವಾದವು ಕೇವಲ ವರ್ತಮಾನ ಅಸ್ತಿತ್ವದಲ್ಲಿದೆ ಮತ್ತು ಭವಿಷ್ಯ ಹಾಗೂ ಭೂತಕಾಲಗಳು ಅವಾಸ್ತವ ಎಂಬ ನಂಬಿಕೆ. ಧರ್ಮಗಳು ಕರ್ಮ, ಮರಣಾನಂತರದ ಬದುಕು ಮತ್ತು ಕಾಲದ ಅಂತ್ಯ ಮತ್ತು ವಿಶ್ವದ ಅಂತ್ಯ ಏನಾಗಿರುತ್ತದೆ ಎಂದು ಅಧ್ಯಯನಮಾಡುವ ಅಂತಿಮಗತಿಶಾಸ್ತ್ರಗಳಂತಹ ವಿಷಯಗಳನ್ನು ಗುರುತಿಸುವಾಗ ಭವಿಷ್ಯವನ್ನು ಪರಿಗಣಿಸುತ್ತವೆ. ಕಣಿ ಹೇಳುವವರು ಮತ್ತು ಪ್ರವಾದಿಗಳಂತಹ ಧಾರ್ಮಿಕ ವ್ಯಕ್ತಿಗಳು ಭವಿಷ್ಯದೊಳಗೆ ನೋಡಬಲ್ಲೆವು ಎಂದು ಸಾಧಿಸುತ್ತಾರೆ. ಮುಂದಾಗುವುದನ್ನು ಹೇಳುವ ಅಥವಾ ಮುನ್ಸೂಚನೆ ಕೊಡುವ ಸಂಘಟಿತ ಪ್ರಯತ್ನಗಳು ಆರಂಭಿಕ ಮನುಷ್ಯನ ಆಕಾಶಕಾಯಗಳ ವೀಕ್ಷಣೆಗಳಿಂದ ಹುಟ್ಟಿಕೊಂಡಿರಬಹುದು.

ಭವಿಷ್ಯ ಅಧ್ಯಯನ, ಅಥವಾ ಭವಿಷ್ಯ ಶಾಸ್ತ್ರವು, ಸಂಭಾವ್ಯ ಭವಿಷ್ಯಗಳನ್ನು ಸೂಚಿಸುವ ವಿಜ್ಞಾನ, ಕಲೆ ಮತ್ತು ಅಭ್ಯಾಸ. ಆಧುನಿಕ ವೃತ್ತಿಗರು ಏಕ ಅಖಂಡ ಭವಿಷ್ಯದ ಬದಲು ಪರ್ಯಾಯ ಮತ್ತು ಬಹು ಭವಿಷ್ಯಗಳ ಪ್ರಾಮುಖ್ಯತೆ, ಮತ್ತು ಸಂಭಾವ್ಯ ಹಾಗೂ ಅಪೇಕ್ಷಣೀಯ ಭವಿಷ್ಯಗಳ ಸೃಷ್ಟಿಯ ವಿರುದ್ಧ ಭವಿಷ್ಯವಾಣಿ ಹಾಗೂ ಸಂಭವನೀಯತೆಯ ಮಿತಿಗಳನ್ನು ಒತ್ತಿಹೇಳುತ್ತಾರೆ.

೨೦ನೇ ಶತಮಾನದ ಭವಿಷ್ಯವಾದದಂತಹ ಸಂಪೂರ್ಣವಾಗಿ ಭವಿಷ್ಯದ ಸ್ಪಷ್ಟೀಕರಣಕ್ಕೆ ಮೀಸಲಾದ ಕಲಾ ಚಳುವಳಿಗಳು ಮತ್ತು ಪ್ರಕಾರಗಳನ್ನು ಒಳಗೊಂಡಂತೆ, ಸಾಂಸ್ಕೃತಿಕ ಉತ್ಪಾದನೆಯಲ್ಲಿ ಭವಿಷ್ಯದ ಪರಿಕಲ್ಪನೆಯನ್ನು ವ್ಯಾಪಕವಾಗಿ ಸಂಶೋಧನೆ ಮಾಡಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Hastings, J., Selbie, J. A., & Gray, L. H. (1908). Encyclopædia of religion and ethics. Edinburgh: T. & T. Clark. Page 335–337.
"https://kn.wikipedia.org/w/index.php?title=ಭವಿಷ್ಯ&oldid=939966" ಇಂದ ಪಡೆಯಲ್ಪಟ್ಟಿದೆ