ಅವಧಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅವಧಿ ಘಟನೆಯ ಸಂಬಂಧದಲ್ಲಿ, ಗಡುವು, ಸಮಯ ಅಥವಾ ಸಂಭವಿಸುವಿಕೆಯ ಕಾಲ. ಕಾಲಾವಕಾಶ ಅಥವಾ ಗಡುವನ್ನು ಪ್ರತ್ಯೇಕಿಸಲು, ಸಮಯದ ಅನುಸರಣೆಯನ್ನು ವ್ಯತ್ಯಾಸಮಾಡಲು ಬಳಸಲಾಗುವ ಸಾಮಾನ್ಯ ಪದಗಳೆಂದರೆ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ.

ಇದನ್ನು ಕ್ಯಾಲೆಂಡರ್ ವರ್ಷದ ಭಾಗವಾಗಿಯೂ ಬಳಸಲಾಗುತ್ತದೆ, ಯುನೈಟಡ್ ಕಿಂಗ್ಡಮ್‍ನಲ್ಲಿ ವಿಶೇಷವಾಗಿ ಶೈಕ್ಷಣಿಕ ಅವಧಿ ಮತ್ತು ಕೆಲಸ ವರ್ಷದ ಮೂರು ಭಾಗಗಳಲ್ಲಿ ಒಂದಕ್ಕೆ: ಮೈಕಲ್‍ಮಾಸ್ ಅವಧಿ, ಹಿಲರಿ ಅವಧಿ ಮತ್ತು ಟ್ರಿನಿಟಿ ಅವಧಿ. ಅಮೇರಿಕದಲ್ಲಿ, ನಾಲ್ಕು-ವರ್ಷದ ಅಧ್ಯಕ್ಷೀಯ ಅವಧಿಯ ಮಧ್ಯದಲ್ಲಿ ನಡೆಸಲಾಗುವ ಮಧ್ಯಂತರ ಚುನಾವಣೆಗಳಿರುತ್ತವೆ. ಶೈಕ್ಷಣಿಕ ಮಧ್ಯಂತರ ಪರೀಕ್ಷೆಗಳೂ ಇರುತ್ತವೆ.

ಅರ್ಥಶಾಸ್ತ್ರದಲ್ಲಿ, ಇದು ಸಂಪನ್ಮೂಲಗಳನ್ನು ಪುನರ್ವಿಂಗಡಿಸಲು ಮತ್ತು ಸಾಮಾನ್ಯವಾಗಿ ಸಮತೋಲನವನ್ನು ಪುನಃ ಸ್ಥಾಪಿಸಲು ಆರ್ಥಿಕ ದಳ್ಳಾಳಿಗಳಿಗೆ ಬೇಕಾದ ಗಡುವು. ಸಾಮಾನ್ಯವಾಗಿ ವರ್ಷಗಳು ಅಥವಾ ದಶಕಗಳಲ್ಲಿ ಗುರುತಿಸಲಾದ ಈ ಅವಧಿಯ ವಾಸ್ತವಿಕ ಉದ್ದ ಸಂದರ್ಭೋಚಿತ ಪರಿಸ್ಥಿತಿಯನ್ನು ಆಧರಿಸಿ ವ್ಯಾಪಕವಾಗಿ ಬದಲಾಗುತ್ತದೆ. ದೀರ್ಘಾವಧಿಯಲ್ಲಿ, ಎಲ್ಲ ಅಂಶಗಳು ಬದಲಾಗಬಲ್ಲವು.

ಹಣಕಾಸಿನಲ್ಲಿ ಅಥವಾ ಸಾಲತೆಗೆದುಕೊಳ್ಳುವ ಮತ್ತು ಹೂಡುವ ಹಣಕಾಸು ಕ್ರಿಯೆಗಳಲ್ಲಿ, ದೀರ್ಘಾವಧಿಯನ್ನು ಸಾಮಾನ್ಯವಾಗಿ ೩ ವರ್ಷಕ್ಕಿಂತ ಹೆಚ್ಚೆಂದು, ಮಧ್ಯಮಾವಧಿಯನ್ನು ೧ ರಿಂದ ೩ ವರ್ಷದ ನಡುವೆ ಎಂದು ಮತ್ತು ಅಲ್ಪಾವಧಿಯನ್ನು ೧ ವರ್ಷಕ್ಕಿಂತ ಕಡಿಮೆ ಎಂದು ಪರಿಗಣಿಸಲಾಗುತ್ತದೆ. ಕೆಲವು ದೇಶಗಳಲ್ಲಿ ಇದನ್ನು ಗಡುವಿನ ಠೇವಣಿಯಂತಹ ಸ್ಥಿರಾವಧಿಯ ಹೂಡಿಕೆಯನ್ನು ಸೂಚಿಸಲೂ ಬಳಸಲಾಗುತ್ತದೆ.

ಕಾನೂನಿನಲ್ಲಿ, ಒಪ್ಪಂದದ ಅವಧಿಯು ಅದು ಕಾರ್ಯಕಾರಿಯಾಗಿ ಇರಬೇಕಾದ ಗಡುವು. ಸ್ಥಿರಾವಧಿಯ ಒಪ್ಪಂದವು ಪೂರ್ವನಿರ್ಧಾರಿತ ಸಮಯದ ನಂತರ ಮುಕ್ತಾಯವಾಗುವ ಒಪ್ಪಂದ.

"https://kn.wikipedia.org/w/index.php?title=ಅವಧಿ&oldid=805151" ಇಂದ ಪಡೆಯಲ್ಪಟ್ಟಿದೆ