ಮಿಂಚುಳ್ಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kingfisher
Sacred Kingfisher
Scientific classification
ಸಾಮ್ರಾಜ್ಯ:
ವಿಭಾಗ:
Chordata
ವರ್ಗ:
ಗಣ:
ಉಪಗಣ:
Alcedines
Families

Alcedinidae
Halcyonidae
Cerylidae

ಮಿಂಚುಳ್ಳಿಗಳು ಕಾರಸೈಯಿಫಾರ್ಮೀಸ್ ಗಣದಲ್ಲಿನ ಚಿಕ್ಕದಿಂದ ಮಧ್ಯಮ ಗಾತ್ರದ, ಪ್ರಕಾಶಮಾನವಾದ ಬಣ್ಣವನ್ನು ಹೊಂದಿದ, ಪಕ್ಷಿಗಳ ಒಂದು ಕುಟುಂಬ. ಇವು ಜಗದ್ವ್ಯಾಪಕ ವಿತರಣೆಯನ್ನು ಹೊಂದಿವೆ. ಇವುಗಳ ಬಹುತೇಕ ತಳಿಗಳನ್ನು ಪುರಾತನ ಪ್ರಪಂಚ ಮತ್ತು ಆಸ್ಟ್ರೇಲಿಯದಲ್ಲಿ ಕಾಣಲಾಗಿತ್ತು. ಪ್ರಾಚೀನ ಪ್ರಪಂಚ, ಮುಖ್ಯವಾಗಿ ಆಗ್ನೇಯ ಏಷ್ಯ ಹಾಗೂ ಈಸ್ಟ್ ಇಂಡೀಸ್‌ಗಳು ಮೀಂಚುಳ್ಳಿಗಳ ಸಂಖ್ಯಾಬಾಹುಳ್ಯಕ್ಕೂ ವೈವಿಧ್ಯಕ್ಕೂ ಹೆಸರಾಂತಿದ್ದು ಮೀಂಚುಳ್ಳಿಗಳ ಒಟ್ಟು ಪ್ರಭೇದಗಳ ಪೈಕಿ ಮುಕ್ಕಾಲುಪಾಲು ಇಲ್ಲಿಯೆ ಕಾಣಸಿಕ್ಕುತ್ತವೆ. ನವಪ್ರಪಂಚದಲ್ಲಾದರೋ ಕೇವಲ 6 ಪ್ರಭೇದಗಳು ಮಾತ್ರ ಇವೆ. ಆಫ್ರಿಕದಲ್ಲಿ 15 ಪ್ರಭೇದಗಳುಂಟು. ಈ ಕುಟುಂಬವನ್ನು ಒಂಟಿ ಸಂತತಿಯ ಆಲ್ಸಿಡಿನಿಡೇ, ಅಥವಾ ಮೂರು ಸಂತತಿಗಳುಳ್ಳ ಆಲ್ಸಿಡಿನಿಡೇ (ನದಿಯ ಮಿಂಚುಳ್ಳಿಗಳು), ಹಾಲ್ಸಿಯೊನಿಡೇ (ಮರದ ಮಿಂಚುಳ್ಳಿಗಳು), ಮತ್ತು ಸೆರಿಲಿಡೇ (ನೀರಿನ ಮಿಂಚುಳ್ಳಿಗಳು) ಒಳಗೊಂಡ ಉಪವರ್ಗ ಆಲ್ಸೆಡಿನೀಸ್ ಎಂದು ಪರಿಗಣಿಸಲಾಗುತ್ತದೆ. ಸುಮಾರು 90 ಮಿಂಚುಳ್ಳಿ ತಳಿಗಳಿವೆ. ಇವೆಲ್ಲವೂ ದೊಡ್ಡದಾದ ತಲೆಗಳನ್ನು, ಉದ್ದನೆಯ, ತೀಕ್ಷ್ಣ, ಮೊನಚಾದ ಕೊಕ್ಕುಗಳನ್ನು, ಕುಳ್ಳಗಿರುವ ಕಾಲುಗಳನ್ನು, ಮತ್ತು ಮೋಟುಮೋಟಾದ ಬಾಲಗಳನ್ನು ಹೊಂದಿವೆ. ಬಹುತೇಕ ತಳಿಗಳು ಪ್ರಕಾಶಮಾನವಾದ ಪುಕ್ಕಗಳನ್ನು ಹೊಂದಿವೆ, ಲಿಂಗಗಳ ನಡುವೆ ಇವು ಸ್ವಲ್ಪ ಮಟ್ಟಿಗೆ ವಿಭಿನ್ನವಾಗಿರುತ್ತವೆ. ಬಹುತೇಕ ತಳಿಗಳು ಉಷ್ಣವಲಯದವಾಗಿರುತ್ತವೆ, ಮತ್ತು ಕೇವಲ ಅರಣ್ಯಗಳಲ್ಲಿ ಸ್ವಲ್ಪ ಹೆಚ್ಚಿನ ಸಂಖ್ಯೆಯಲ್ಲಿ ಕಾಣಬಹುದಾಗಿದೆ. ಇವು ಪ್ರಾಣಿ ಬೇಟೆಗಳನ್ನು ಹಾಗು ಮೀನುಗಳನ್ನು ಸೇವಿಸುತ್ತವೆ, ಸಾಮಾನ್ಯವಾಗಿ ಕೂತ ರೆಂಬೆಯ ಮೇಲಿನಿಂದ ಕೆಳಕ್ಕೆ ಆಕಸ್ಮಿಕವಾಗಿ ದಾಳಿಮಾಡುವುದರ ಮೂಲಕ ಇವನ್ನು ಹಿಡಿದು ತಿನ್ನುತ್ತವೆ. ಇವುಗಳ ಗಣದ ಉಳಿದ ಸದಸ್ಯರಂತೆ ಇವು ಸಹ ಬಿಲಗಳಲ್ಲಿ ಗೂಡುಗಳನ್ನು ಹೊಂದಿರುತ್ತವೆ, ಸಾಮಾನ್ಯವಾಗಿ ನೆಲದಲ್ಲಿ ನೈಸರ್ಗಿಕವಾಗಿ ಅಥವಾ ಕೃತಕವಾಗಿ ಮಾಡಲ್ಪಟ್ಟ ಸುರಂಗಗಳಲ್ಲಿ. ಕೆಲವೇ ಪ್ರಭೇದಗಳು, ಪ್ರಮುಖವಾಗಿ ಸಂಕುಚಿತ ಭಾವನೆಯ ರೂಪಗಳು, ನಿರ್ನಾಮವಾಗುವ ಅಪಾಯದಲ್ಲಿವೆ.

ಭಾರತದಲ್ಲಿ ಸಾಮಾನ್ಯವಾಗಿ ಕಾಣಸಿಕ್ಕುವ ಮೀಂಚುಳ್ಳಿಗಳೆಂದರೆ:

  1. ನೀಲಿ ಮೀಂಚುಳ್ಳಿ (ಕಾಮನ್ ಅಥವಾ ಸ್ಮಾಲ್ ಬ್ಲೂ ಕಿಂಗ್‌ಫಿಶರ್)
  2. ಬಿಳಿಯೆದೆಯ ಮೀಂಚುಳ್ಳಿ (ಹ್ವೈಟ್ ಬ್ರೆಸ್ಟೆಡ್ ಕಿಂಗ್ ಫಿಶರ್)
  3. ಹಂಡಬಂಡ ಮೀಂಚುಳ್ಳಿ (ಪೈಡ್ ಕಿಂಗ್‌ಫಿಶರ್)
  4. ಮೂರು ಬೆರಳಿನ ಮೀಂಚುಳ್ಳಿ (ತ್ರೀಟೋಡ್ ಕಿಂಗ್‌ಫಿಶರ್) ಮತ್ತು
  5. ದೊಡ್ಡ ನೀಲಿ ಮೀಂಚುಳ್ಳಿ (ಗ್ರೇಟ್ ಬ್ಲೂ ಕಿಂಗ್‌ಫಿಶರ್).

ಜೀವಿವರ್ಗೀಕರಣ ಶಾಸ್ತ್ರ ಮತ್ತು ವಿಕಸನ[ಬದಲಾಯಿಸಿ]

ಮೂರು ಸಂತತಿಗಳ ಜೀವಿವರ್ಗೀಕರಣ ಶಾಸ್ತ್ರವು ಸಂಕೀರ್ಣವಾಗಿದೆ ಮತ್ತು ಹೆಚ್ಚಾಗಿ ವಿವಾದಾಸ್ಪದವಾಗಿದೆ. ಕೊರಾಸಿಪೋರ್ಮಸ್ ವರ್ಗಕ್ಕೆ ಸೇರಿಸಿದರೂ, ಇದರಿಂದ ಗೊಂದಲ ಉಂಟಾಗುತ್ತದೆ.

ಮಿಂಚುಳ್ಳಿಗಳನ್ನು ಸಾಂಪ್ರದಾಯಿಕವಾಗಿ ಒಂದೇ ಸಂತತಿ ಎಂದು, ಮತ್ತು ಆಲ್ಸಿಡಿನಿಡೇಗಳನ್ನು ಮೂರು ಉಪ ಸಂತತಿಗಳೆಂದು ಪರಿಗಣಿಸಲಾಗಿತ್ತು, ಆದರೆ ಪಕ್ಷಿಗಳ ಜೀವಿವರ್ಗೀಕರಣ ಶಾಸ್ತ್ರದಲ್ಲಿ 1990ರ ಮೂಲ ಬದಲಾವಣೆಯನ್ನು ಅನುಸರಿಸುತ್ತಾ, ಮೊದಲಿನ ಮೂರು ಉಪಸಂತತಿಗಳನ್ನು ಈಗ ಒಂದೇ ಸಂತತಿಯ ಮಟ್ಟಕ್ಕೆ ಅಭಿವೃದ್ಧಿಪಡಿಸಲಾಯಿತು. ಈ ಚಲನೆಗೆ ವರ್ಣತಂತು ಮತ್ತು ಡಿಎನ್‌ಎ-ಡಿಎನ್‌ಎ ಸಂಕರವನ್ನುಂಟುಮಾಡುವಿಕೆಯ ಅಧ್ಯಯನವು ಅನುಕೂಲವಾಯಿತು, ಆದರೆ ವಾಸ್ತವವಾಗಿ ಎಲ್ಲ ಮೂರು ಗುಂಪುಗಳು ಇತರ ಕೊರಾಸಿಪೋರ್ಮಸ್‌ಗೆ ಅನುಗುಣವಾಗಿ ಏಕಸ್ರೋತೋದ್ಭವ (ಒಂದೇ ವಂಶದ) ಎಂಬ ಸವಾಲನ್ನು ಒಳಗೊಂಡಿವೆ. ಇದು ಅವನ್ನು ಆಲ್ಸೆಡಿನೀಸ್ ಎಂಬ ಉಪವರ್ಗಗಳನ್ನಾಗಿ ವಿಂಗಡಿಸಲು ಕಾರಣವಾಯಿತು.

ಮರದ ಮಿಂಚುಳ್ಳಿಗಳನ್ನು ಮೊದಲು ಅವುಗಳ ಸಂತತಿಯ ಹೆಸರು ಡಸೆಲೊನೈಡೆಯಿಂದ ಗುರುತಿಸಲಾಗುತ್ತಿತ್ತು ಆದರೆ ಹಾಲ್ಸಿಯೊನಿಡೇ ಹೆಚ್ಚಿನ ಆದ್ಯತೆಯನ್ನು ಪಡೆಯಿತು.

ಮಿಂಚುಳ್ಳಿಯ ವೈವಿಧ್ಯದ ಕೇಂದ್ರವು ಆಸ್ಟ್ರಲೇಸಿಯನ್ ಪ್ರಾಂತವಾಗಿದೆ, ಆದರೆ ಅದು ಇದರ ಸಂತತಿಯ ಮೂಲವಾಗಿಲ್ಲ, ಬದಲಾಗಿ ಅವು ಉತ್ತರದಿಕ್ಕಿನ ಗೋಳಾರ್ಧದಲ್ಲಿ ವಿಕಸಿಸಿದವು, ಮತ್ತು ಆಸ್ಟ್ರಲೇಸಿಯನ್ ಪ್ರಾಂತವನ್ನು ಅನೇಕ ಬಾರಿ ಮುತ್ತಿಗೆ ಹಾಕಿದ್ದವು.[೧] ಪಳೆಯುಳಿಕೆಯ ಮಿಂಚುಳ್ಳಿಗಳನ್ನು ಸುಮಾರು 30-40 ಮಿಲಿಯನ್ ವರ್ಷಗಳ ಹಿಂದೆ, ವಿಯೊಮಿಂಗ್‌ನಲ್ಲಿನ ಕೆಳಗಿನ ಯೊಸಿನೆ ಬಂಡೆಗಳು ಮತ್ತು ಜರ್ಮನಿಯಲ್ಲಿನ ಮಧ್ಯ ಯೊಸೆನೆ ಬಂಡೆಗಳಿಂದ ವಿವರಿಸಲಾಯಿತು. ಬಹು ಇತ್ತೀಚಿನ ಪಳೆಯುಳಿಕೆ ಮಿಂಚುಳ್ಳಿಗಳನ್ನು ಆಸ್ಟ್ರೇಲಿಯಾದ ಮಿಯೊಸಿನೆ ಬಂಡೆಗಳಿಂದ ವಿವರಿಸಲಾಯಿತು (5-25 ಮಿಲಿಯನ್ ವರ್ಷಗಳಷ್ಟು ಹಳೆಯವು). ಅನೇಕ ಪಳೆಯುಳಿಕೆ ಪಕ್ಷಿಗಳನ್ನು ಮಿಂಚುಳ್ಳಿಗಳೆಂದು ತಪ್ಪಾಗಿ ಹೇಳಲಾಗಿತ್ತು, ಇವುಗಳಲ್ಲಿ ಕೆಂಟ್‌ನಲ್ಲಿನ ಕೆಳಗಿನ ಯೊಸೆನೆ ಬಂಡೆಗಳಿಂದ ಪಡೆದ ಹಾಲ್ಸಿಯೋರ್ನಿಸ್ ಸಹ ಸೇರಿದ್ದು, ಇದನ್ನು ಗಲ್ ಎಂದು ಸಹ ಪರಿಗಣಿಸಲಾಗಿತ್ತು, ಆದರೆ ಈಗ ಇದನ್ನು ಗತಿಸಿದ ಸಂತತಿಯ ಸದಸ್ಯ ಎಂದು ಭಾವಿಸಲಾಗಿದೆ. ಮಿಂಚುಳ್ಳಿಗಳು ಅವುಗಳಲ್ಲಿ 85000 ತಳಿಗಳನ್ನು ಹೊಂದಿವೆ.[೨]

Alcedines
Alcedines

Alcedinidae




Halcyonidae



Cerylidae




Based on Moyle (2006)

ಮೂರು ಸಂತತಿಗಳಲ್ಲಿ ಆಲ್ಸಿಡಿನಿಡೇಗಳು ಇತರ ಎರಡು ಸಂತತಿಗಳ ತಳಹದಿಗಳಾಗಿವೆ. ಅಮೆರಿಕಾದಲ್ಲಿ ಕಾಣಲಾಗಿದ್ದ ಕೆಲವು ತಳಿಗಳು, ಎಲ್ಲವೂ ಸೆರಿಲೈಡೆ ಸಂತತಿಯವಾಗಿದ್ದು, ಪಾಶ್ಚಿಮಾತ್ಯ ಭೂಗೋಳಾರ್ಧದಲ್ಲಿನ ಅಲ್ಪ ಸಂಖ್ಯೆಯ ಪ್ರಾತಿನಿಧ್ಯವು ಕೇವಲ ಎರಡು ಮೂಲ ಸಮೂಹದ ತಳಿಗಳಿಂದ ಉದ್ಭವಿಸಿದೆ ಎಂಬುದನ್ನು ಸೂಚಿಸುತ್ತದೆ. ಸಂತತಿಯು ಹಾಲ್ಸಿಯೊನಿಡೇಯಿಂದ ತುಲನಾತ್ಮಕವಾಗಿ ವಿಭಜನೆಯಾಗಿ, ಹಳೇ ಪ್ರಪಂಚದಲ್ಲಿ ಇತ್ತೀಚಿನ ಮಿಯೊಸಿನೆ ಅಥವಾ ಪ್ಲಿಯೊಸಿನೆಯಾಗಿ ವೈವಿಧ್ಯಮಯಗೊಂಡಿದೆ.[೧]

ಹರಡಿಕೆ ಮತ್ತು ಆವಾಸಸ್ಥಾನ[ಬದಲಾಯಿಸಿ]

ಫುಜಿಯಲ್ಲಿನ ಕೊರಳು ಪಟ್ಟಿಯ ಮಿಂಚುಳ್ಳಿ. ದಕ್ಷಿಣ ಪೆಸಿಫಿಕ್‌ನಲ್ಲಿ ಈ ತಳಿಗಳು ಆಫ್ರಿಕಾದಿಂದ ಟೊಂಗಾದವರೆಗೂ ವ್ಯಾಪಿಸಿವೆ.

ಮಿಂಚುಳ್ಳಿಗಳು ಪ್ರಪಂಚದಾದ್ಯಂತ ಉಷ್ಣಪದೇಶಗಳಲ್ಲಿ ಮತ್ತು ಸಮಶೀತೋಷ್ಣದ ಪ್ರದೇಶಗಳಲ್ಲಿ ಗೋಚರಿಸುವುದರ ಮೂಲಕ, ಜಗದ್ವ್ಯಾಪಕ ವಿತರಣೆಯನ್ನು ಹೊಂದಿವೆ. ಧ್ರುವಪ್ರದೇಶದ ಪ್ರಾಂತಗಳಲ್ಲಿ ಮತ್ತು ಪ್ರಪಂಚದ ಕೆಲವು ಅತೀ ಶುಷ್ಕ ಮರುಭೂಮಿಗಳಲ್ಲಿ ಅವು ಕಾಣಿಸಿಕೊಳ್ಳುವುದಿಲ್ಲ. ಬಹು ಸಂಖ್ಯೆಯ ತಳಿಗಳು ದ್ವೀಪಗಳ ಗುಂಪುಗಳನ್ನು ತಲುಪಿವೆ, ಮುಖ್ಯವಾಗಿ ದಕ್ಷಿಣ ಮತ್ತು ಪೂರ್ವ ಪೆಸಿಫಿಕ್ ಸಾಗರದಲ್ಲಿರುವ ದ್ವೀಪಗಳು. ಹಳೆ ಪ್ರಪಂಚದ ಉಷ್ಣ ಕಟಿಪ್ರದೇಶಗಳು ಮತ್ತು ಆಸ್ಟ್ರಲೇಸಿಯಗಳು ಈ ಗುಂಪಿನ ಕೇಂದ್ರ ಪ್ರಾಂತಗಳಾಗಿವೆ. ಯುರೋಪ್ ಮತ್ತು ಉತ್ತರ ಅಮೆರಿಕಾ ಮೆಕ್ಸಿಕೋದ ಉತ್ತರ ಭಾಗಗಳು ಬಹಳ ಅಲ್ಪ ಸಂಖ್ಯೆಯಲ್ಲಿ ಕೇವಲ ಒಂದೇ ಒಂದು ಸಾಮಾನ್ಯ ಮಿಂಚುಳ್ಳಿಯನ್ನು ಪ್ರತಿಬಿಂಬಿಸುತ್ತವೆ (ಕ್ರಮವಾಗಿ ಸಾಧಾರಣ ಮಿಂಚುಳ್ಳಿ ಮತ್ತು ಪಟ್ಟಿಯ ಮಿಂಚುಳ್ಳಿ), ಮತ್ತು ಅಸಾಧಾರಣ ಜೋಡಿ ಮಿಂಚುಳ್ಳಿಗಳು ಅಥವಾ ಎರಡೂ ಸ್ಥಳೀಯ ತಳಿಗಳನ್ನು ಕಾಣಬಹುದಾಗಿದೆ: (ನೈಋತ್ಯ ಯುಎಸ್‌ಎಯಲ್ಲಿ ವಲಯಗಳನ್ನು ಹೊಂದಿದ ಮಿಂಚುಳ್ಳಿ ಮತ್ತು ಹಸಿರು ಮಿಂಚುಳ್ಳಿ, ಆಗ್ನೇಯ ಯುರೋಪಿನಲ್ಲಿ, ನಾನಾವರ್ಣದ ಮಿಂಚುಳ್ಳಿ ಮತ್ತು ಬಿಳಿ-ಕೊರಳಿನ ಮಿಂಚುಳ್ಳಿ). ಅಮೆರಿಕಾದಲ್ಲಿ ಗೋಚರಿಸುವ ಆರು ತಳಿಗಳಲ್ಲಿ ನಾಲ್ಕು ಮಿಂಚುಳ್ಳಿಗಳು ಕ್ಲೊರೊಸೆರೈಲ್ ಕುಲಕ್ಕೆ ಬಹಳ ಹತ್ತಿರದ ಸಂಬಂಧವನ್ನು ಹೊಂದಿವೆ ಮತ್ತು ಎರಡು ದೊಡ್ಡ ಜುಟ್ಟಿನ ಮಿಂಚುಳ್ಳಿಗಳು ಮೆಗಸಿರೈಲೆ ಕುಲದ ಸಂಬಂಧವನ್ನು ಹೊಂದಿವೆ. ದಕ್ಷಿಣ ಅಮೆರಿಕಾದ ಉಷ್ಣ ಕಟಿಪ್ರದೇಶಗಳು ಸಹ ಕೇವಲ ಐದಕ್ಕಿಂತ ಸ್ವಲ್ಪ ಹೆಚ್ಚಿನ ಸಂಖ್ಯೆಯ ಚಳಿಗಾಲದ ಪಟ್ಟಿಯನ್ನು ಹೊಂದಿದ್ದ ಮಿಂಚುಳ್ಳಿ ತಳಿಗಳನ್ನು ಹೊಂದಿವೆ. ಹೋಲಿಕೆಯಲ್ಲಿ, ಚಿಕ್ಕದಾದ ಆಫ್ರಿಕನ್ ದೇಶ ಗ್ಯಾಂಬಿಯಾ ಇದರ 120 ಬೈ 20 ಮಿ. (192 ಬೈ 32 ಕಿಮೀ) ವಿಸ್ತೀರ್ಣದಲ್ಲಿ ಎಂಟು ಸ್ಥಳೀಯ ತಳಿಗಳನ್ನು ಹೊಂದಿದೆ.

ಪ್ರತ್ಯೇಕ ತಳಿಗಳು ದೃಢವಾದ ವ್ಯಾಪ್ತಿಗಳನ್ನು ಹೊಂದಿವೆ, ಉದಾಹರಣೆಗೆ ಸಾಧಾರಣ ಮಿಂಚುಳ್ಳಿಗಳು, ಐರ್‌ಲ್ಯಾಂಡ್‌ನಿಂದ ಪ್ರಾರಂಭಿಸಿ ಯುರೋಪಿನಾದ್ಯಂತ, ಉತ್ತರ ಆಫ್ರಿಕಾ ಮತ್ತು ಏಷ್ಯಾ ಹಾಗು ಆಸ್ಟ್ರೇಲಿಯಾದಲ್ಲಿನ ಸೊಲೊಮನ್ ದ್ವೀಪಗಳವರೆಗೂ ಇವುಗಳ ವ್ಯಾಪ್ತಿಯನ್ನು ಹೊಂದಿವೆ, ಅಥವಾ ನಾನಾ ವರ್ಣದ ಮಿಂಚುಳ್ಳಿಯು, ಆಫ್ರಿಕಾ ಮತ್ತು ಏಷ್ಯಾದ ಎಲ್ಲೆಡೆ ವಿಶಾಲ ವ್ಯಾಪ್ತಿಯ ವಿತರಣೆಯನ್ನು ಹೊಂದಿದೆ. ಇತರ ತಳಿಗಳು ಬಹು ಕಡಿಮೆಯಾದ ವ್ಯಾಪ್ತಿಯನ್ನು ಹೊಂದಿವೆ, ಮುಖ್ಯವಾಗಿ ಸಂಕುಚಿತ ಭಾವನೆಯ ತಳಿಗಳು ಒಂದೇ ಚಿಕ್ಕ ದ್ವೀಪಕ್ಕೆ ಸ್ಥಾನಿಕವಾಗಿವೆ. ಕೊಫಿಯೊ ಪ್ಯಾರಡೈಸ್ ಮಿಂಚುಳ್ಳಿಯು ನ್ಯೂ ಗಿನಿಯಾದ ಕೊಫಿಯೊನ ಚಿಕ್ಕ ದ್ವೀಪಕ್ಕೆ ಸೀಮಿತವಾಗಿದೆ.[೨]

ಮಿಂಚುಳ್ಳಿಗಳು ವಿಶಾಲ ವ್ಯಾಪ್ತಿಯ ಆವಾಸಸ್ಥಾನಗಳಿಗೆ ವ್ಯಾಪಿಸುತ್ತವೆ. ಹೆಚ್ಚಾಗಿ ಇವನ್ನು ನದಿಗಳ ಹತ್ತಿರ ಮತ್ತು ಸರೋವರಗಳ ಹತ್ತಿರ ಕಾಣಲಾಗುತ್ತದಾಗಿದ್ದರೂ, ಪ್ರಪಂಚದ ಅರ್ಧಭಾಗದ ತಳಿಗಳು ಅರಣ್ಯಗಳು ಮತ್ತು ಅರಣ್ಯದಿಂದ ಕೂಡಿದ ಹೊಳೆಗಳಲ್ಲಿ ಕಾಣುತ್ತವೆ. ಇವು ವಿಶಾಲ ವ್ಯಾಪ್ತಿಯ ಇತರ ಆವಾಸಸ್ಥಾನಗಳನ್ನು ಸಹ ಆಕ್ರಮಿಸುತ್ತವೆ. ಆಸ್ಟ್ರೇಲಿಯಾದ ಕೆಂಪು-ಹಿಂಬದಿಯ ಮಿಂಚುಳ್ಳಿಯು ಅತೀ ಶುಷ್ಕ ಮರುಭೂಮಿಗಳಲ್ಲಿ ಜೀವಿಸುತ್ತದೆ, ಆದಾಗ್ಯೂ ಸಹಾರಾಗಳಂತಹ ಇತರ ಮರುಭೂಮಿಗಳಲ್ಲಿ ಮಿಂಚುಳ್ಳಿಗಳನ್ನು ಕಾಣಲಾಗುವುದಿಲ್ಲ. ಇತರ ತಳಿಗಳು ಎತ್ತರದ ಪರ್ವತಗಳಲ್ಲಿ, ಅಥವಾ ಅಡವಿಪ್ರದೇಶದ ಬಯಲಿನಲ್ಲಿ ಜೀವಿಸುತ್ತವೆ, ಮತ್ತು ಬಹು ಸಂಖ್ಯೆಯ ತಳಿಗಳು ಉಷ್ಣ ಕಟಿಪ್ರದೇಶದ ಹವಳದ ಅಡಲುಗಳಲ್ಲಿ ಜೀವಿಸುತ್ತವೆ. ಅನೇಕ ತಳಿಗಳು ಮಾನವ ಬದಲಾಯಿತ ಆವಾಸಸ್ಥಾನಗಳಿಗೆ ಹೊಂದಿಕೊಂಡಿವೆ, ಮುಖ್ಯವಾಗಿ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡ ತಳಿಗಳನ್ನು, ಸಾಗುವಳಿಮಾಡಿದ ಮತ್ತು ವ್ಯವಸಾಯದ ಪ್ರಾಂತಗಳಲ್ಲಿಯೂ ಹಾಗು ನಗರ ಮತ್ತು ಪಟ್ಟಣಗಳ ಉದ್ಯಾನವನಗಳು ಮತ್ತು ತೋಟಗಳಲ್ಲಿಯೂ ಕಾಣಬಹುದಾಗಿದೆ.[೨]

ವಿವರಣೆ[ಬದಲಾಯಿಸಿ]

ನ್ಯೂ ಗಿನೀಯದ ಹೊನ್ನಾಡು ಮಿಂಚುಳ್ಳಿಗಳು ಸಾಮಾನ್ಯವಾಗಿ ಉದ್ದನೆಯ ಬಾಲವನ್ನು ಹೊಂದಿರುತ್ತವೆ

ಮಿಂಚುಳ್ಳಿಗಳ ಅತೀ ಚಿಕ್ಕದಾದ ತಳಿ ಎಂದರೆ ಆಫ್ರಿಕಾದ ಡ್ವಾರ್ಫ್ ಮಿಂಚುಳ್ಳಿ (ಇಸ್ಪಿಡಿನ ಲೆಕೋಂಟೀ ), ಇದು ಸರಾಸರಿ 0.4 ಗ್ರಾಂ. ಮತ್ತು 10 ಸೆಂ.ಮೀ (4 ಇಂಚುಗಳು) ಇರುತ್ತದೆ. ಎಲ್ಲದರಲ್ಲೂ ಅತೀ ದೊಡ್ಡದಾದ ತಳಿ ದೈತ್ಯ ಮಿಂಚುಳ್ಳಿ (ಮೆಗಸೆರಿಲೆ ಮ್ಯಾಕ್ಸಿಮಾ), ಇದು ಸರಾಸರಿ 355 ಗ್ರಾಂ. ಮತ್ತು 45 ಸೆಂ.ಮೀ (18 ಇಂಚುಗಳು) ಇರುತ್ತದೆ. ಆದಾಗ್ಯೂ, ಚಿರಪರಿಚಿತ ಆಸ್ಟ್ರೇಲಿಯಾದ ಮಿಂಚುಳ್ಳಿಯನ್ನು ನಗುವ ಕೂಕಬುರ್ರ (ಡಸೆಲೊ ನೊವೆಗ್ವಿನೀ) ಎಂದು ಸೂಚಿಸಲಾಗುತ್ತದೆ, ಹೆಚ್ಚಾಗಿ ಇವುಗಳ ಪ್ರತಿಯೊಂದು ದೊಡ್ಡ ಗಾತ್ರದ್ದಿದ್ದು 450 ಗ್ರಾಂ. ಮೀರುವುದರಿಂದ, ಬಹುಶಃ ಇದು ಅತಿ ಭಾರದ ತಳಿ ಆಗಿರಬಹುದು.

ಮೀಂಚುಳ್ಳಿಗಳು ಕುಳ್ಳಾದರೂ ಬಲಯುತವಾದ ಮೈಯುಳ್ಳವು. ಮೋಟುಕತ್ತು, ಚೋಟುಬಾಲ, ದೇಹದ ಗಾತ್ರಕ್ಕೆ ಹೋಲಿಸಿದರೆ ಕೊಂಚ ದೊಡ್ಡದೆನ್ನಬಹುದಾದ ತಲೆ, ಉದ್ದವಾದ, ಬಲವಾದ ಮತ್ತು ಚೂಪಾದ ಕೊಕ್ಕು, ಕುಳ್ಳುಕಾಲು, ಚಿಕ್ಕ ಹಾಗೂ ದುರ್ಬಲವಾದ ಪಾದಗಳು ಈ ಹಕ್ಕಿಗಳ ಲಕ್ಷಣಗಳ ಪೈಕಿ ಕೆಲವು. ಎಲ್ಲ ಮೀಂಚುಳ್ಳಿಗಳಲ್ಲೂ ಕಾಣಬರುವ ಮತ್ತು ಇಡೀ ಕುಟುಂಬದ ವಿಶಿಷ್ಟ ಲಕ್ಷಣವೆಂದರೆ ಇವುಗಳ ಕಾಲ್ಬೆರಳುಗಳು ಬುಡದಿಂದ ಕೊಂಚ ಉದ್ದದವರೆಗೆ ಕೂಡಿಕೊಂಡಿರುವುದು. ಬಹುಪಾಲು ಮೀಂಚುಳ್ಳಿಗಳು ಉಜ್ಜ್ವಲ ವರ್ಣದವು. ಹಸುರು, ನೀಲಿಗಳೇ ಇವುಗಳ ಪ್ರಧಾನ ವರ್ಣಗಳಾಗಿದ್ದು ಕೆಲವೊಮ್ಮೆ ಬಿಳಿ ಹಾಗೂ ಮಾಸಲು ಕೆಂಪುಬಣ್ಣಗಳು ಮಿಳಿತವಾಗಿ ಹಕ್ಕಿಗಳು ತುಂಬ ಸುಂದರವಾಗಿ ಕಾಣುವುವು. ಕೊಕ್ಕು ಕೂಡ ಕೆಂಪು ಅಥವಾ ಹಳದಿ ಬಣ್ಣದ್ದಾಗಿದೆ. ಮತ್ತೆ ಕೆಲವು ಮೀಂಚುಳ್ಳಿಗಳು ಬಿಳಿ ಕಪ್ಪುಬಣ್ಣಗಳ ಹಂಡಬಂಡ ಮಿಶ್ರಣದಿಂದ ಕೂಡಿವೆ. ಗಂಡು ಹೆಣ್ಣುಗಳ ನಡುವೆ ಸಾಮಾನ್ಯವಾಗಿ ವರ್ಣವ್ಯತ್ಯಾಸವಿಲ್ಲ.

ಬಹುತೇಕ ಮಿಂಚುಳ್ಳಿಗಳ ಪುಕ್ಕಗಳು ಹೊಳೆಯುತ್ತಿದ್ದು, ನೀಲಿ ಮತ್ತು ಹಸಿರು ಇವುಗಳ ಸಾಮಾನ್ಯ ಬಣ್ಣಗಳಾಗಿರುತ್ತವೆ. ಬಣ್ಣಗಳ ಹೊಳಿಯುವಿಕೆಯು ವರ್ಣವೈವಿಧ್ಯದ ಪರಿಣಾಮವೂ ಅಲ್ಲ (ಅಮೆರಿಕಾದ ಮಿಂಚುಳ್ಳಿಗಳನ್ನು ಹೊರತುಪಡಿಸಿ) ಅಥವಾ ವರ್ಣದ್ರವ್ಯಗಳೂ ಅಲ್ಲ, ಆದರೆ ಇದು ಗರಿಗಳ ವಿನ್ಯಾಸದಿಂದ ಉಂಟಾಗುತ್ತದೆ, ಇದು ನೀಲಿ ಬೆಳಕನ್ನು ಚದುರುವಂತೆ ಮಾಡುತ್ತದೆ (ಟಿಂಡಲ್ ಪರಿಣಾಮ).[೩] ಬಹುತೇಕ ತಳಿಗಳಲ್ಲಿ ಲಿಂಗ ಭೇದಗಳಿಲ್ಲ, ಭಿನ್ನತೆಗಳಿದ್ದಾಗ ಅವು ತೀರಾ ಚಿಕ್ಕದಾಗಿವೆ (10% ಗಿಂತಲೂ ಕಡಿಮೆ).[೨]

ಮಿಂಚುಳ್ಳಿಗಳು ಉದ್ದನೆಯ, ಚೂರಿಯಂತಹ ಕೊಕ್ಕನ್ನು ಹೊಂದಿವೆ. ಮೀನನ್ನು ಬೇಟೆಯಾಡುವ ತಳಿಗಳಲ್ಲಿ ಕೊಕ್ಕು ಸಾಮಾನ್ಯವಾಗಿ ಉದ್ದವಾಗಿರುತ್ತದೆ ಮತ್ತು ಅಡಕವಾಗಿರುತ್ತದೆ, ಮತ್ತು ನೆಲದ ಮೆಲಿನ ಬೇಟೆಗಳನ್ನು ಬೇಟೆಯಾಡುವ ತಳಿಗಳಲ್ಲಿ ಇದು ಚಿಕ್ಕದಾಗಿರುತ್ತದೆ ಮತ್ತು ಹೆಚ್ಚು ಅಗಲವಾಗಿರುತ್ತದೆ. ದೊಡ್ಡದಾದ ಮತ್ತು ಅತ್ಯಂತ ವಿಶಿಷ್ಟ ಕೊಕ್ಕನ್ನು ಷೊವೆಲ್-ಬಿಲ್ಡ್ ಕೂಕಬುರ್ರ ಹೊಂದಿದೆ, ಇದು ತನ್ನ ಕೊಕ್ಕಿನಿಂದ ಅರಣ್ಯದ ನೆಲವನ್ನು ಬೇಟೆಗಾಗಿ ಅಗೆಯುತ್ತದೆ. ಇವು ಸಾಮಾನ್ಯವಾಗಿ ಕುಳ್ಳಗಿನ ಕಾಲುಗಳನ್ನು ಹೊಂದಿರುತ್ತವೆ, ಆದಾಗ್ಯೂ ನೆಲದ ಮೇಲೆ ಆಹಾರ ಪಡೆಯುವ ತಳಿಗಳು ಉದ್ದನೆಯ ಪಾದವನ್ನು ಹೊಂದಿವೆ. ಬಹುತೇಕ ತಳಿಗಳು ನಾಲ್ಕು ಕಾಲ್ಬೆರಳುಗಳನ್ನು ಹೊಂದಿದ್ದು, ಅವುಗಳಲ್ಲಿ ಮೂರು ಮುಂದುಗಡೆ ಚೂಪಾಗಿರುವಂತಹವಾಗಿರುತ್ತವೆ.

ಬಹುತೇಕ ತಳಿಗಳ ಕಣ್ಪೊರೆಗಳು ಅತೀ ಕಂದು ಬಣ್ಣದಲ್ಲಿರುತ್ತವೆ. ಮಿಂಚುಳ್ಳಿಗಳು ಅತ್ಯುತ್ತಮ ದೃಷ್ಟಿಯನ್ನು ಹೊಂದಿವೆ; ಅವು ಬೈನಾಕುಲರ್ ದೃಷ್ಟಿಯ ಸಾಮರ್ಥ್ಯವನ್ನು ಹೊಂದಿವೆ, ಮುಖ್ಯವಾಗಿ ಅವು ಉತ್ತಮ ಬಣ್ಣದ ದೃಷ್ಟಿಯನ್ನು ಹೊಂದಿವೆ ಎಂದು ಭಾವಿಸಲಾಗಿದೆ. ಅವು ಕಣ್ಣಿನ ಕುಳಿಗಳಲ್ಲಿ ನಿರ್ಬಂಧಿತ ಕಣ್ಣಿನ ಚಲನೆಯನ್ನು ಹೊಂದಿವೆ, ಆದ್ದರಿಂದ ಅವು ಬೇಟೆಯ ಜಾಡು ಪತ್ತೆಹಚ್ಚಲು ತಮ್ಮ ತಲೆಯ ಚಲನೆಯನ್ನು ಉಪಯೋಗಿಸುತ್ತವೆ. ಇದರ ಜೊತೆಗೆ ಅವು ನೀರಿನಲ್ಲಿ ಬೇಟೆಯಾಡುವಾಗ ನೀರಿನ ವಕ್ರೀಭವನವನ್ನು ಸಮತೂಗಿಸುವ ಮತ್ತು ಪ್ರತಿಬಿಂಬಿಸುವ ಸಾಮರ್ಥ್ಯವನ್ನು ಹೊಂದಿವೆ ಮತ್ತು ಅವು ನೀರಿನ ಒಳಗಿನ ಆಳವನ್ನು ನಿಖರವಾಗಿ ತೀರ್ಮಾನಿಸುವ ಸಾಮರ್ಥ್ಯವನ್ನೂ ಹೊಂದಿವೆ. ಅವು ಮಿಟುಕಿಸುವ ಪೊರೆಗಳನ್ನು ಹೊಂದಿದ್ದು, ತಮ್ಮ ರಕ್ಷಣೆಗಾಗಿ ನೀರಿಗೆ ಡಿಕ್ಕಿ ಹೊಡೆದಾಗ ಈ ಪೊರೆಗಳು ಕಣ್ಣುಗಳನ್ನು ಮುಚ್ಚುತ್ತವೆ; ಕಪ್ಪುಬಿಳಿ ಮಿಂಚುಳ್ಳಿಗಳು ಎಲುಬಿನ ಫಲಕಗಳನ್ನು ಹೊಂದಿದ್ದು, ಪಕ್ಷಿಗಳು ನೀರಿಗೆ ಡಿಕ್ಕಿ ಹೊದೆದಾಗ ಇವು ಕಣ್ಣಿಗೆ ಅಡ್ಡಲಾಗಿ ಸರಿಯುತ್ತವೆ.[೨]

ವರ್ತನೆ[ಬದಲಾಯಿಸಿ]

ಆಹಾರಕ್ರಮ ಮತ್ತು ಸೇವನೆ[ಬದಲಾಯಿಸಿ]

ಮಿಂಚುಳ್ಳಿಗಳು ಹೆಚ್ಚಾಗಿ ಮೀನಿನ ಸಂಗಡ ಇರುತ್ತವೆ ಆದರೂ, ಬಹುತೇಕ ತಳಿಗಳು, ಇತರ ಬೇಟೆಗಳನ್ನು ಸಹ ಸೇವಿಸುತ್ತವೆ. ಇಲ್ಲಿ ಸೈಪನ್‌ನಲ್ಲಿ ಕೊರಳು ಪಟ್ಟಿಯ ಮಿಂಚುಳ್ಳಿ ಹಲ್ಲಿಯನ್ನು ಬೇಟಿಯಾಡಿದ್ದನ್ನು ಕಾಣಲಾಗಿದೆ.

ಮಿಂಚುಳ್ಳಿಗಳು ವಿವಿಧ ರೀತಿಯ ಆಹಾರಗಳನ್ನು ಸೇವಿಸುತ್ತವೆ. ಅವು ಮೀನನ್ನು ಬೇಟೆಯಾಡಿ ಸೇವಿಸುವುದರಲ್ಲಿ ಬಹಳ ಪ್ರಸಿದ್ಧವಾಗಿವೆ, ಮತ್ತು ಕೆಲವು ತಳಿಗಳು ಮೀನನ್ನು ಹಿಡಿಯುವಲ್ಲಿ ಪರಿಣಿತವಾಗಿವೆ, ಆದರೆ ಇತರ ತಳಿಗಳು ವಲ್ಕವಂತ ಜಲಚರಗಳನ್ನು, ಕಪ್ಪೆಗಳನ್ನು ಮತ್ತು ಇತರ ಉಭಯಚರಿಗಳನ್ನು, ವಲಯವಂತ ಕ್ರಿಮಿಗಳನ್ನು, ಮೃದ್ವಂಗಿಗಳನ್ನು, ಕೀಟಗಳನ್ನು, ಜೇಡರ ಹುಳುಗಳನ್ನು, ಜರಿಗಳನ್ನು, ಸರೀಸೃಪಗಳನ್ನು (ಹಾವುಗಳನ್ನೊಳಗೊಂಡು) ಮತ್ತು ಪಕ್ಷಿಗಳನ್ನೂ ಮತ್ತು ಸಸ್ತನಿವರ್ಗದ ಪ್ರಾಣಿಗಳನ್ನೂ ಸೇವಿಸುತ್ತವೆ. ವಿಶಿಷ್ಟ ತಳಿಗಳು ಕೆಲವೇ ಬೇಟೆಗಳ ಪರಿಣತಿಯನ್ನು ಹೊಂದಿರಬಹುದು ಅಥವಾ ವಿವಿಧ ತರಹದ ಬೇಟೆಗಳಲ್ಲೂ ತೊಡಗಿರಬಹುದು, ಮತ್ತು ದೊಡ್ಡ ಸಂಖ್ಯೆಯಲ್ಲಿ ವಿಶ್ವವ್ಯಾಪಿಯಾಗಿ ಹರಡಿದ ವಿವಿಧ ತಳಿಗಳು ವಿಭಿನ್ನ ಆಹಾರ ಪದ್ಧತಿಗಳನ್ನು ಹೊಂದಿರಬಹುದಾಗಿವೆ. ಅರಣ್ಯ ಮತ್ತು ವನ್ಯ ಮಿಂಚುಳ್ಳಿಗಳು ಪ್ರಮುಖವಾಗಿ ಕೀಟಗಳನ್ನು ಸೇವಿಸುತ್ತವೆ, ಮುಖ್ಯವಾಗಿ ಮಿಡತೆ ಹುಳಗಳನ್ನು, ಅಂತೆಯೇ ನೀರಿನ ಮಿಂಚುಳ್ಳಿಗಳು ಮೀನನ್ನು ಹಿಡಿದು ಸೇವಿಸುವಲ್ಲಿ ಹೆಚ್ಚು ಪರಿಣಿತರಾಗಿರುತ್ತವೆ. ಕೆಂಪು-ಹಿಂಬದಿಯ ಮಿಂಚುಳ್ಳಿಗಳು ತಮ್ಮ ಚಿಕ್ಕ ಮರಿಗಳಿಗೆ ಆಹಾರ ಒದಗಿಸಲು ಫೇರಿ ಮಾರ್ಟಿನ್‌ಗಳ ಮಣ್ಣಿನ ಗೂಡುಗಳನ್ನು ಅಗೆಯುವುದನ್ನು ಕಾಣಬಹುದು.[೪] ಮಿಂಚುಳ್ಳಿಗಳು ಸಾಮಾನ್ಯವಾಗಿ ಎತ್ತರದ ಕೂರುರೆಂಬೆಗಳಿಂದ ಬೇಟೆಯನ್ನು ಹುಡುಕುತ್ತವೆ, ಮತ್ತು ಬೇಟೆಯು ಕಂಡಕೂಡಲೇ ಮೇಲಿನಿಂದ ಕೆಳಕ್ಕೆ ಹಠಾತ್ತನೆ ದಾಳಿಮಾಡಿ ಪಕ್ಕನೆ ಕಸಿದುಕೊಂಡು ತನ್ನ ಕೂರುರೆಂಬೆಗೆ ವಾಪಸಾಗುತ್ತದೆ. ಎಲ್ಲ ಮೂರು ಸಂತತಿಯ ಮಿಂಚುಳ್ಳಿಗಳು ಕೂರುರೆಂಬೆಯಲ್ಲಿ ದೊಡ್ಡ ಬೇಟೆಯನ್ನು ಸೋಲಿಸಿ, ಅದನ್ನು ಸಾಯಿಸುತ್ತವೆ ಮತ್ತು ನೆಲೆತಪ್ಪಿಸುತ್ತವೆ ಅಥವಾ ರಕ್ಷಣಾತ್ಮಕ ಬೆನ್ನುಮೂಳೆಗಳನ್ನು ಮತ್ತು ಎಲುಬುಗಳನ್ನು ಮುರಿದು ಹಾಕುತ್ತವೆ. ಬೇಟೆಯನ್ನು ಸೋಲಿಸಿದ ನಂತರ ತನ್ನ ಕೈಚಳಕದಿಂದ ಬೇಕಾದ ರೀತಿಯಲ್ಲಿ ಪರಿವರ್ತಿಸಿ ನಂತರ ಸೇವಿಸುತ್ತದೆ.[೨]

ಮತ್ಸ್ಯಾಹಾರಿ ಮೀಂಚುಳ್ಳಿಗಳು ಸಾಮಾನ್ಯವಾಗಿ ಹಳ್ಳ ತೊರೆ ಕೆರೆಗಳ ಬಳಿಯೇ ವಾಸಿಸುತ್ತಿದ್ದು. ನೀರಹಾಳೆಯ ಮೇಲೆ ಚಾಚಿರುವಂಥ ರೆಂಬೆಗಳ ಮೇಲೆ ನಿಶ್ಚಲವಾಗಿ, ನೀರೊಳಗೆ ಈಜುವ ಮೀನುಗಳನ್ನು ನಿರೀಕ್ಷಿಸುತ್ತ ಹೊಂಚು ಹಾಕಿ ಕುಳಿತಿರುವುವು. ಎರೆ ಕಣ್ಣಿಗೆ ಬಿದ್ದ ತತ್‌ಕ್ಷಣ ಶರವೇಗದಲ್ಲಿ ಅದರ ಮೇಲೆ ಎರಗಿ ಹಿಡಿದು, ರೆಂಬೆಗೆ ಮರಳಿ ಎರೆಯನ್ನು ತಲೆ ಮುಂದಾಗುವಂತೆ ಬಾಯೊಳಕ್ಕೆ ಎಸೆದು ನುಂಗುತ್ತವೆ. ಮತ್ತೆ ಕೆಲವು ಮೀಂಚುಳ್ಳಿಗಳು (ಉದಾಹರಣೆಗೆ ಭಾರತದಲ್ಲಿ ಕಾಣದೊರೆಯುವ ಹಂಡಬಂಡ ಮೀಂಚುಳ್ಳಿ (ಪೈಡ್ ಕಿಂಗ್‌ಫಿಶರ್) ಕೆರೆ ನದಿ ಮುಂತಾದವುಗಳ ನೀರ ಪಾತಳಿಗಳ ಮೇಲೆ 8-10 ಮೀಟರುಗಳ ಎತ್ತರದಲ್ಲಿ ಹೆಲಿಕಾಪ್ಟರಿನ ರೀತಿ ನಿಂತಲ್ಲೇ ಹಾರುತ್ತಿದ್ದು ಮೀನುಗಳನ್ನು ನಿರೀಕ್ಷಿಸುತ್ತ ಅವು ಸುಳಿದಾಗ ಎರಗಿ ಹಿಡಿಯುತ್ತವೆ.

ಸಂತಾನೋತ್ಪತ್ತಿ[ಬದಲಾಯಿಸಿ]

ಮಿಂಚುಳ್ಳಿಗಳು ಪ್ರಾಂತೀಯ ಪಕ್ಷಿಗಳಾಗಿದ್ದು, ಈ ಪ್ರಾದೇಶಿಕ ಗುಣಗಳು ಕೆಲವು ತಳಿಗಳಿಗೆ ಹುರುಪಿನಿಂದ ಕೂಡಿದ ರಕ್ಷಕ ಕವಚಗಳಾಗಿವೆ. ಅವು ಸಾಮಾನ್ಯವಾಗಿ ಏಕಸಂಗಾತಿಯುಳ್ಳವು (ವಿರುದ್ಧ ಲಿಂಗದ ಏಕ ಪಕ್ಷಿಯೊಂದಿಗೆ ಸೇರುವಂತಹವು) ಆಗಿರುತ್ತವೆ, ಆದಾಗ್ಯೂ ಕೆಲವು ತಳಿಗಳಲ್ಲಿ ಸಹಕಾರದ ಸಂತಾನೋತ್ಪತ್ತಿಯನ್ನು ಸಹ ಕಾಣಬಹುದಾಗಿದೆ. ಕೆಲವು ತಳಿಗಳಲ್ಲಿ ಸಹಕಾರದ ಸಂತಾನೋತ್ಪತ್ತಿಯು ಸರ್ವೇಸಾಮಾನ್ಯ,[೨] ಉದಾಹರಣೆಗೆ ನಗುವ ಕೂಕಬುರ್ರದಲ್ಲಿ. ಇವುಗಳು ಸಂತತಿಯನ್ನು ಬೆಳವಣಿಗೆ ಮಾಡಲು ಪ್ರಬಲ ಸಂತಾನೋತ್ಪತ್ತಿ ಜೋಡಿಗೆ ನೆರವಿಗರ ಜೀವಿಗಳು ಸಹಾಯ ಮಾಡುವವು.[೫]

ಬಹುತೇಕ ಅರಣ್ಯವಾಸಿ ಮಿಂಚುಳ್ಳಿಗಳಂತೆ ಹಳದಿ-ಪಟ್ಟಿಯ ಮಿಂಚುಳ್ಳಿ ಹೆಚ್ಚಾಗಿ ಮರದಸಂಬಂಧ ಗೆದ್ದಲು ಗೂಡುಗಳಲ್ಲಿ ಗೂಡುಕಟ್ಟುತ್ತವೆ.

ಎಲ್ಲ ಕೊರಾಸಿಫಾರ್ಮ್‌ಗಳಂತೆ ಮಿಂಚುಳ್ಳಿಗಳು ಪೊಳ್ಳಾದ ಗೂಡುಗಳನ್ನು ಹೊಂದಿರುವಂತಹವು, ಆದ್ದರಿಂದ ಬಹುತೇಕ ತಳಿಗಳು ನೆಲವನ್ನು ಅಗೆದು ನಿರ್ಮಿಸಿದ ಬಿಲಗಳಲ್ಲಿ ಗೂಡುಗಳನ್ನು ಹೊಂದಿರುತ್ತವೆ. ಈ ಬಿಲಗಳು ಸಾಮಾನ್ಯವಾಗಿ ನದಿಗಳ, ಸರೋವರಗಳ ದಡಗಳಲ್ಲಿ, ಅಥವಾ ಮಾನವ ನಿರ್ಮಿತ ಹೊಂಡಗಳ ಒಡ್ಡುಗಳಲ್ಲಿ ಮತ್ತು ನದೀತೀರಗಳಲ್ಲಿ ಇರುತ್ತವೆ. ಕೆಲವು ತಳಿಗಳು ಮರಗಳಲ್ಲಿನ ಪೊಟರೆಗಳಲ್ಲಿ, ನೆಲಕ್ಕೆ ಅಂಟಿಕೊಂಡು ಮೇಲಕ್ಕೆ ಕಾಣಿಸಿಕೊಳ್ಳುವ ಮರದ ಬೇರುಗಳಲ್ಲಿ, ಅಥವಾ ಗೆದ್ದಲುಗಳ (ಟರ್ಮಿಟೇರಿಯಮ್) ಮರದ ಗೂಡುಗಳಲ್ಲಿ ವಾಸಿಸುತ್ತವೆ. ಈ ರೀತಿಯ ಗೆದ್ದಲುಗಳ ಗೂಡುಗಳಲ್ಲಿ ವಾಸಿಸುವುದು ಅರಣ್ಯ ತಳಿಗಳಲ್ಲಿ ಸರ್ವೆ ಸಾಮಾನ್ಯ. ಗೂಡುಗಳು ತೋಡಿನ ಕೊನೆಯಲ್ಲಿ ಚಿಕ್ಕ ಕೊಠಡಿಯ ರಚನೆಯನ್ನು ಹೊಂದಿರುತ್ತವೆ. ಗೂಡನ್ನು ತೋಡುವ ಕೆಲಸಗಳನ್ನು ವಿಭಾಗಿಸಿ ಹಂಚಲಾಗುತ್ತದೆ; ಆರಂಭದ ಅಗೆತದ ಸಮಯದಲ್ಲಿ ಪಕ್ಷಿಯು ಆಯ್ದ ಸ್ಥಳಕ್ಕೆ ಗಣನೀಯವಾದ ದೈಹಿಕ ಶಕ್ತಿಯೊಂದಿಗೆ ಹಾರುತ್ತದೆ, ಈ ರೀತಿ ಮಾಡುವಾಗ ಪಕ್ಷಿಗಳು ಮಾರಕವಾಗಿ ಗಾಯಗೊಳ್ಳಬಹುದು. ತೋಡಿನ ಉದ್ದವು ತಳಿಗಳು ಮತ್ತು ಪ್ರಾಂತಕ್ಕೆ ಅನುಗುಣವಾಗಿ ವಿಭಿನ್ನವಾಗಿರುತ್ತದೆ, ಗೆದ್ದಲುಗೂಡುಗಳಲ್ಲಿನ ಹಕ್ಕಿಗೂಡುಗಳು ನೆಲದಲ್ಲಿ ಅಗೆದು ಮಾಡಿದ ಗೂಡುಗಳಿಗಿಂತಲೂ ಅವಶ್ಯಕವಾಗಿ ಅತೀ ಚಿಕ್ಕದಾಗಿರುತ್ತವೆ, ಮತ್ತು ಕಠಿಣ ತಳಹದಿಯ ಗೂಡುಗಳು ಮೃದುವಾದ ನೆಲ ಅಥವಾ ಮಣ್ಣಿನಲ್ಲಿನ ಗೂಡುಗಳಿಗಿಂತಲೂ ಚಿಕ್ಕದಾಗಿರುತ್ತವೆ. ದಾಖಲಾದ ಅತೀ ದೊಡ್ಡ ತೋಡಿನ ಗೂಡುಗಳೆಂದರೆ, ದೈತ್ಯ ಮಿಂಚುಳ್ಳಿಗಳಿಂದ ಮಾಡಲ್ಪಟ್ಟ ಗೂಡುಗಳು, ಇವು 8.5 ಮೀ ಉದ್ದವಾಗಿರುತ್ತವೆ ಎಂದು ತಿಳಿಯಲಾಗಿದೆ.[೨]

ಮಿಂಚುಳ್ಳಿಗಳ ಮೊಟ್ಟೆಗಳು ಏಕಪ್ರಕಾರವಾಗಿ ಬಿಳಿಯಾಗಿದ್ದು ಹೊಳೆಯುತ್ತಿರುತ್ತವೆ. ಮೊಟ್ಟೆಗಳ ಗಾತ್ರವು ತಳಿಗಳಿಗನುಗುಣವಾಗಿ ವಿಭಿನ್ನವಾಗಿರುತ್ತದೆ; ಕೆಲವು ಬಹು ದೊಡ್ಡ ಮತ್ತು ಅತೀ ಚಿಕ್ಕ ತಳಿಗಳು ಒಂದು ಸಲಕ್ಕೆ ಎರಡು ಮೊಟ್ಟೆಗಳನ್ನು ಇಡುತ್ತವೆ, ಅದರಂತೆ ಇತರ ತಳಿಗಳು 10 ಮೊಟ್ಟೆಗಳನ್ನು ಇಡುವ ಸಾಮರ್ಥ್ಯವನ್ನು ಹೊಂದಿದ್ದು, ಇವುಗಳು ಸರಾಸರಿ 3 ರಿಂದ ಆರು ಮೊಟ್ಟೆಗಳನ್ನು ಇಡುತ್ತವೆ. ಎರಡೂ ಲಿಂಗದ ಪಕ್ಷಿಗಳು ಮೊಟ್ಟೆಗಳಿಗೆ ಕಾವುಕೊಡುತ್ತವೆ.[೨] ಮರಿಗಳು ಹುಟ್ಟಿದಮೇಲೆ ಅವನ್ನು ಪೋಷಿಸುವುವು. ಮೊಟ್ಟೆಯೊಡೆದು ಮರಿಗಳಾಗುವುದಕ್ಕೆ ಹಿಡಿಯುವ ಅವಧಿ 18-24 ದಿನಗಳು. ಮರಿಗಳು ಹುಟ್ಟಿದಾಗ ಕಣ್ಣು ತೆರೆದಿರುವುದಿಲ್ಲ ಮತ್ತು ಪುಕ್ಕಗಳ ಹೊದಿಕೆ ಪಡೆದಿರುವುದಿಲ್ಲ. 3 ಅಥವಾ 4 ವಾರಗಳ ಕಾಲ ಗೂಡಿನಲ್ಲಿದ್ದು ಅನಂತರ ಮರಿಗಳು ಹೊರಹೋಗುವುವು. ಆದರೆ ತಂದೆತಾಯಿ ಹಕ್ಕಿಗಳು ಹಲವಾರು ದಿನಗಳ ಕಾಲ ಮರಿಗಳೊಡನೆಯೇ ಇದ್ದು ಅವು ಮೀನು ಹಿಡಿಯಲು ಸಮರ್ಥವಾಗುವ ತನಕ ಉಣಿಸು ಕೊಟ್ಟು ನೋಡಿಕೊಳ್ಳುವುವು.

ಮಾನವರ ಜೊತೆಗಿನ ಸಂಬಂಧ[ಬದಲಾಯಿಸಿ]

ಮೂಡಣ ಡ್ವಾರ್ಫ್ (ಕುಳ್ಳ) ಮಿಂಚುಳ್ಳಿಯನ್ನು ಬೊರ್ನೆಯೊದ ವಿವಿಧ ಡಸನ್ ಬುಡಕಟ್ಟು ಜನಾಂಗದಿಂದ ಕೆಟ್ಟ ಶಕುನ ಎಂದು ಪರಿಗಣಿಸಲಾಗಿದೆ

ಮಿಂಚುಳ್ಳಿಗಳು ಸಾಮಾನ್ಯವಾಗಿ ನಾಚಿಕೆಯ ಸ್ವಭಾವದ ಪಕ್ಷಿಗಳು, ಇದನ್ನು ಹೊರತುಪಡಿಸಿಯೂ ಇವು ಮಾನವ ಸಂಪ್ರದಾಯದಲ್ಲಿ ಹೆಚ್ಚಿನ ವಿಶೇಷತೆಯನ್ನು ಪಡೆದಿವೆ, ಸಾಮಾನ್ಯವಾಗಿ ಅವುಗಳ ಹೊಳೆಯುವ ಪುಕ್ಕಗಳು ಅಥವಾ ಕೆಲವು ತಳಿಗಳಲ್ಲಿನ ಅವುಗಳ ಕುತೂಹಲಕಾರಿ ವರ್ತನೆಯೇ ಇದಕ್ಕೆ ಕಾರಣ. ಪವಿತ್ರ ಮಿಂಚುಳ್ಳಿಯನ್ನು, ಇತರ ಪೆಸಿಫಿಕ್ ಮಿಂಚುಳ್ಳಿಗಳೊಂದಿಗೆ, ಪೊಲಿನೆಸಿಯಾದವರಿಂದ ಪೂಜಿಸಲಾಗುತ್ತದೆ, ಅವರು ಇದು ಸಾಗರಗಳ ಮೇಲೆ ಮತ್ತು ಅಲೆಗಳ ಮೇಲೆ ಹತೋಟಿಯನ್ನು ಹೊಂದಿದೆ ಎಂದು ನಂಬುತ್ತಾರೆ. ಬೋರ್ನೆಯೊದ ದಸನ್ ಜನರು, ಮೂಡಣ ಡ್ವಾರ್ಫ್ ಮಿಂಚುಳ್ಳಿಯನ್ನು ಕೆಟ್ಟ ಶಕುನ ಎಂದು ಪರಿಗಣಿಸುತ್ತಾರೆ, ಮತ್ತು ನೇನಾನಿಗಳು ಯುದ್ಧಕ್ಕೆ ಹೋಗುವ ದಾರಿಯಲ್ಲಿ ಇದನ್ನು ಕಂಡರೆ ಮನೆಗೆ ಮರಳಿ ಬರುತ್ತಾರೆ. ಬೋರ್ನೆಯಾದ ಇನ್ನೊಂದು ಪಂಗಡದವರು ಪಟ್ಟಿಯ ಮಿಂಚುಳ್ಳಿಯನ್ನು ಶಕುನದ ಪಕ್ಷಿ ಎಂದು ಪರಿಗಣಿಸುತ್ತಾರೆ, ಆದರೆ ಸಾಮಾನ್ಯವಾಗಿ ಶುಭ ಶಕುನವಾಗಿ ಪರಿಗಣಿಸಲಾಗುತ್ತದೆ. ಹಾಲ್ಸಿಯೊನಿಡೇ ಸಂತತಿಯ, ಹಾಲ್ಸಿಯೋನ್ ಮಿಂಚುಳ್ಳಿ ಮಾದರಿಯ ಕಟ್ಟುಕಥೆಯ ಪಕ್ಷಿ ಆಗಿದೆ.

"ಓವಿದ್ ಮತ್ತು ಹೈಜಿನಸ್ ಎರಡೂ ರೂಪ ಪರಿವರ್ತನೆಯನ್ನು ಮಾಡುತ್ತವೆ, ಇದು ಚಳಿಗಾಲದಲ್ಲಿ ಚಂಡಮಾರುತಗಳು ಖಂಡಿತವಾಗಿಯೂ ಆಗದೇ ಇರುವಂತಹ ಏಳು ದಿನಗಳು, "ಹಾಲ್ಸೋನ್ ದಿನಗಳಿಗಾಗಿ" ವ್ಯುತ್ಪತ್ತಿಯ ಆರಂಭವಾಗಿದೆ. ಅವರ ಹೇಳಿಕೆಯ ಪ್ರಕಾರ ಮೂಲತಃ ಪ್ರತಿವರ್ಷದ ಈ ಏಳುದಿನಗಳ (ಯಾವುದಾದರೊಂದು ಬದಿಯಲ್ಲಿ ವರ್ಷದ ಅತೀ ಚಿಕ್ಕ ದಿನವನ್ನು ಹೊಂದುವುದರೊಂದಿಗೆ) ಸಮಯದಲ್ಲಿ ಆಲ್ಸ್ಯೋನ್ (ಮಿಂಚುಳ್ಳಿಯಂತೆ) ಅದರ ಮೊಟ್ಟೆಗಳನ್ನು ಇಡುತ್ತದೆ ಮತ್ತು ತನ್ನ ಗೂಡನ್ನು ಸರೋವರದ ತೀರದಲ್ಲಿ ಮಾಡಿಕೊಳ್ಳುತ್ತದೆ, ಈ ಸಮಯದಲ್ಲಿ ವಾಯು ದೇವರು ಎಂದೇ ಗುರುತಿಸುವ ಅದರ ತಂದೆ ಯೋಲಸ್, ವಾಯುವನ್ನು ತಡೆಹಿಡಿದು ಅಲೆಗಳನ್ನು ಪ್ರಶಾಂತಗೊಳಿಸುತ್ತಾನೆ, ಇದರಿಂದ ಅದು ಸುರಕ್ಷತೆಯಲ್ಲಿ ತನ್ನ ಕೆಲವನ್ನು ಪೂರ್ಣಗೊಳಿಸಲು ಅನುಕೂಲವಾಗುತ್ತದೆ. ಅಂದಿನಿಂದ ಈ ನುಡಿಗಟ್ಟನ್ನು ಸಾಮಾನ್ಯವಾಗಿ ಶಾಂತಿಯುತವಾದ ಸಮಯವನ್ನು ಸೂಚಿಸಲು ಉಪಯೋಗಿಸಲಾಗುತ್ತಿದೆ."

ಮಿಂಚುಳ್ಳಿಗಳ (ಆಲ್ಸೆಡೊ ಅಟ್‌ದಿಸ್) ವ್ಯುತ್ಪತ್ತಿಯು ಅಸ್ಪಷ್ಟವಾದುದು; ಪದವು ಕಿಂಗ್'ಸ್ ಫಿಷೆರ್‌ ನಿಂದ ಬಂದಿದೆ, ಆದರೆ ಆ ಹೆಸರೇ ಏಕೆ ಅನ್ವಯವಾಗಿದೆ ಎಂಬುದು ತಿಳಿದಿಲ್ಲ[೬].

ಮಾನ್ಯತೆ ಮತ್ತು ಸಂರಕ್ಷಣೆ[ಬದಲಾಯಿಸಿ]

ರುಫಸ್ (ಕೆಂಪುಮಿಶ್ರಿತ ಕಂದುಬಣ್ಣ)-ಕೊರಳು ಪಟ್ಟಿಯ ಮಿಂಚುಳ್ಳಿಯನ್ನು ಅವನತಿಯ-ಹತ್ತಿರದ್ದು ಎಂದು ವರ್ಗೀಕರಿಸಲಾಗಿದೆ, ಇದಕ್ಕೆ ಕಾರಣ ಇವುಗಳ ಅವಾಸಸ್ಥಾನಗಳಾದ ಅಚ್ಚಹಸಿರು ಅರಣ್ಯಗಳು ಶೀಘ್ರವಾಗಿ ನಶಿಸುತ್ತಿರುವುದು

ಬಹು ಸಂಖ್ಯೆಯ ತಳಿಗಳು ಮಾನವ ಚಟುವಟಿಕೆಗಳಿಂದ ವಿಪತ್ತಿನಲ್ಲಿವೆ ಮತ್ತು ಅವು ನಿರ್ನಾಮವಾಗುವ ಅಪಾಯದಲ್ಲಿವೆ ಎಂದು ಪರಿಗಣಿಸಲ್ಪಟ್ಟಿವೆ. ಇವುಗಳಲ್ಲಿ ಹೆಚ್ಚಿನವು ಮಿತಿಯ ವಿತರಣೆಯನ್ನು ಹೊಂದಿದ್ದ ಅರಣ್ಯ ತಳಿಗಳು, ಮುಖ್ಯವಾಗಿ ಸಂಕುಚಿತ ಭಾವನೆಯ ತಳಿಗಳು. ಅವು ಅರಣ್ಯಗಳ ತೀರುವಳಿಯ ಅಥವಾ ಕೆಳಮಟ್ಟಕ್ಕೆ ತರುವಿಕೆಯಿಂದ ಆವಾಸಸ್ಥಾನಗಳನ್ನು ಕಳೆದುಕೊಳ್ಳುವ ಭಯದಲ್ಲಿವೆ, ಮತ್ತು ಕೆಲವು ಹೊಸ ತಳಿಗಳ ಪರಿಚಯದಿಂದ ತಮ್ಮ ನೆಲೆಯನ್ನು ಕಳೆದುಕೊಳ್ಳುವ ಭಯದಲ್ಲಿವೆ. ಫ್ರೆಂಚ್ ಪೊಲಿನೇಷಿಯಾದ ಮಾರ್ಕ್ವೆಸನ್ ಮಿಂಚುಳ್ಳಿಯು ಗಂಭೀರವಾಗಿ ಅಪಾಯದಲ್ಲಿದೆ, ಇದಕ್ಕೆ ಕಾರಣ ಆವಾಸಸ್ಥಾನದ ನಾಶ, ಮತ್ತು ಜಾನುವಾರುಗಳ ಪರಿಚಯದಿಂದ ಉಂಟಾದ ಕೆಳಮಟ್ಟ, ಮತ್ತು ತಳಿಗಳ ಪರಿಚಯದಿಂದ ಉಂಟಾದ ಬೇಟೆಯ ಕೊರತೆಗಳು.[೭]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Moyle, Robert G (2006). "A Molecular Phylogeny of Kingfishers (Alcedinidae) With Insights into Early Biogeographic History". Auk. 123 (2): 487–499. doi:10.1642/0004-8038(2006)123[487:AMPOKA]2.0.CO;2.
  2. ೨.೦ ೨.೧ ೨.೨ ೨.೩ ೨.೪ ೨.೫ ೨.೬ ೨.೭ ೨.೮ Woodall, Peter (2001). "Family Alcedinidae (Kingfishers)". In del Hoyo, Josep; Elliott, Andrew; Sargatal, Jordi (eds.). Handbook of the Birds of the World. Volume 6, Mousebirds to Hornbills. Barcelona: Lynx Edicions. pp. 103–187. ISBN 978-84-87334-30-6.
  3. Bancroft, Wilder (1923). "Blue Feathers" (PDF). The Auk. 40 (2): 275–300. Archived from the original (PDF) on 2012-08-13. Retrieved 2010-10-06. {{cite journal}}: Unknown parameter |coauthors= ignored (|author= suggested) (help)
  4. Schulz, M (1998). "Bats and Other Fauna in Disused Fairy Martin Hirundo ariel Nests". Emu. 98 (3): 184–191. doi:10.1071/MU98026.
  5. Legge, S (2000). "Social and mating system of cooperatively breeding laughing kookaburras ( Dacelo novaeguineae )". Behavioral Ecology and Sociobiology. 47 (4): 220. doi:10.1007/s002650050659. {{cite journal}}: Unknown parameter |coauthors= ignored (|author= suggested) (help)
  6. Douglas Harper (2001). "Online Etymology Dictionary". Retrieved 2007-07-14.
  7. Birdlife International (2009). "Todiramphus godeffroyi". Red List. IUCN. Archived from the original on 4 ಜೂನ್ 2011. Retrieved 12 December 2009.

ಬಾಹ್ಯ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: