ವಿಷಯಕ್ಕೆ ಹೋಗು

ಭಾರತೀಯ ದಂಡ ಸಂಹಿತೆ ಕಲಂ ೩೭೭

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬ್ರಿಟಿಷ್ ವಸಾಹತುಶಾಹಿ ದಂಡ ಸಂಹಿತೆ ಕಲಂ ೩೭೭ಯ ಪ್ರಕಾರ "ಪ್ರಕೃತಿಯ ನಿಯಮದ ವಿರುದ್ಧ"ವಾದ ಎಲ್ಲಾ ಲೈಂಗಿಕ ಕ್ರಿಯೆಗಳನ್ನು ಅಪರಾಧವೆಂದು ಪರಿಗಣಿಸಲಾಗಿದೆ. ಸಲಿಂಗಕಾಮಿ ಚಟುವಟಿಕೆಯೊಂದಿಗೆ ಮೌಖಿಕ ಮತ್ತು ಗುದ ಸಂಭೋಗದಲ್ಲಿ ತೊಡಗಿರುವ ಜನರನ್ನು ವಿಚಾರಣೆಗೆ ಒಳಪಡಿಸಲು ಕಾನೂನನ್ನು ಬಳಸಲಾಗುತಿತ್ತು. ೨೦೧೮ ರಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ, ಭಾರತೀಯ ದಂಡ ಸಂಹಿತೆಯ ಕಲಂ ೩೭೭ ಅನ್ನು ಸಲಿಂಗಕಾಮಿಗಳ ನಡುವೆ ಸಮ್ಮತಿಯಿಲ್ಲದ ಲೈಂಗಿಕ ಚಟುವಟಿಕೆಗಳನ್ನು ಅಪರಾಧ ಎಂದು ಗುರುತಿಸಲು ಅನ್ವಯವಾಗುತ್ತದೆ ಹಾಗು ಕನಿಷ್ಠ ಹತ್ತು ವರ್ಷಗಳ ಜೈಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ವಿಸ್ತರಿಸಲಾಯಿತು. ಮ್ಯಾನ್ಮಾರ್‌ನಲ್ಲಿನ ಆಪ್ವಿಂಟ್‌ನಂತಹ ಮೂರನೇ ಲಿಂಗ ಜನರನ್ನು ಅಪರಾಧಿಗಳಾಗಿಸಲು ಇದನ್ನು ಬಳಸಲಾಗಿದೆ. [] ೨೦೧೮ ರಲ್ಲಿ, ಆಗಿನ ಬ್ರಿಟಿಷ್ ಪ್ರಧಾನ ಮಂತ್ರಿ ಥೆರೆಸಾ ಮೇ ಅವರು ಬ್ರಿಟಿಷ್ ವಸಾಹತುಶಾಹಿ-ಸೋಡೋಮಿ ವಿರೋಧಿ ಕಾನೂನು ಪರಂಪರೆಗಳು ಇಂದು ತಾರತಮ್ಯ, ಹಿಂಸೆ ಮತ್ತು ಸಾವಿನ ರೂಪದಲ್ಲಿ ಹೇಗೆ ಮುಂದುವರೆದಿದೆ ಎಂಬುದನ್ನು ಒಪ್ಪಿಕೊಂಡರು. []

ಇತಿಹಾಸ

[ಬದಲಾಯಿಸಿ]

ಬ್ರಿಟೀಷ್ ಸಾಮಾನ್ಯ ಕಾನೂನಿನ ಅಡಿಯಲ್ಲಿ ಕೆಲವೊಮ್ಮೆ ಇಂಗ್ಲೆಂಡ್‌ನಲ್ಲಿ ಸೋಡೋಮಿಯ ಕೃತ್ಯವನ್ನು ವಿಚಾರಣೆಗೆ ಒಳಪಡಿಸಲಾಗಿದ್ದರೂ, ಇದನ್ನು ಮೊದಲು ಬ್ರಿಟಿಷ್ ಸಾಮ್ರಾಜ್ಯದಲ್ಲಿ ಭಾರತೀಯ ದಂಡ ಸಂಹಿತೆ ಕಲಂ ೩೭೭ ಎಂದು ೧೮೬೦ ರಲ್ಲಿ "ಪ್ರಕೃತಿಯ ನಿಯಮದ ವಿರುದ್ಧವಾದ ವಿಷಯಲೋಲುಪತೆಯ ಸಂಭೋಗ" ಎಂದು ಕ್ರೋಡೀಕರಿಸಲಾಯಿತು. ನಂತರ ಕಲಂ ೩೭೭ ಅನ್ನು ಇತರ ವಸಾಹತುಗಳಿಗೆ ಮತ್ತು ಇಂಗ್ಲೆಂಡ್‌ಗೆ ರಫ್ತು ಮಾಡಲಾಯಿತು, ಇದು ವ್ಯಕ್ತಿಗಳ ವಿರುದ್ಧದ ಅಪರಾಧಗಳ ಕಾಯ್ದೆ (೧೮೬೧) ನಲ್ಲಿನ ' ಬಗ್ಗರಿ ' ಕ್ರಿಯೆಗೆ ಕಾನೂನು ಮಾದರಿಯನ್ನು ಒದಗಿಸುತ್ತದೆ. [] ಅಲೋಕ್ ಗುಪ್ತಾ ೨೦೦೮ ರಲ್ಲಿ ಬರೆದ ಮಾನವ ಹಕ್ಕುಗಳ ವಾಚ್ ವರದಿಯ ಪ್ರಕಾರ ಈ ವಿಧಿಯನ್ನು ಕ್ರಿಶ್ಚಿಯನ್ ವಸಾಹತುಶಾಹಿ ಪ್ರಜೆಗಳನ್ನು " ಭ್ರಷ್ಟಾಚಾರ " ದಿಂದ ತಡೆಯುವ ಮತ್ತು ವಸಾಹತುಶಾಹಿ ಅಧಿಕಾರಕ್ಕೆ ಅನುಗುಣವಾಗಿ ಕ್ರೈಸ್ತೀಕರಣಕ್ಕೆ ಒಳಗಾಗುತ್ತಿರುವ ವಸಾಹತುಶಾಹಿ ಪ್ರಜೆಗಳನ್ನು ಪರಿಸ್ಥಿತಿಗೆ ಒಳಪಡಿಸವ ಉದ್ದೇಶ ಬ್ರಿಟಿಷರು ಹೊಂದಿದ್ದರು. [] ಇದರ ಪರಿಣಾಮವಾಗಿ ಭಾರತದಲ್ಲಿ ವಸಾಹತುಶಾಹಿ ಯುಗದ ಲೈಂಗಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿತು.

ಸಲಿಂಗಕಾಮಿ ಪದವನ್ನು ಕಲಂ ೩೭೭ ಸ್ಪಷ್ಟವಾಗಿ ಒಳಗೊಂಡಿಲ್ಲವಾದರೂ, ಸಲಿಂಗಕಾಮಿ ಚಟುವಟಿಕೆಯ ಮೇಲೆ ಕಾನೂನು ಕ್ರಮ ಜರುಗಿಸಲು ಇದನ್ನು ಬಳಸಲಾಗಿದೆ. ಈ ನಿಬಂಧನೆಯನ್ನು ೧೮೬೨ ರಲ್ಲಿ ರಾಜ್‌ನಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ ೩೭೭ರಂತೆ ಪರಿಚಯಿಸಲಾಯಿತು ಮತ್ತು ಇದೇ ವಿಭಾಗ ಸಂಖ್ಯೆ ವಿವಿಧ ವಸಾಹತುಗಳಾದ್ಯಂತ "ಅಸ್ವಾಭಾವಿಕ ಅಪರಾಧಗಳು" ಎಂದು ಕರೆಯಲ್ಪಡುವ ಮತ್ತು ಹಲವಾರು ಪ್ರಕರಣಗಳಲ್ಲಿ ಅಪರಾಧೀಕರಣದ ಹಿಂದಿನ ಕಾನೂನು ಪ್ರಚೋದನೆಯಾಗಿ ಕಾರ್ಯನಿರ್ವಹಿಸಿತು. [] [] []

ಕಲಂ ೩೭೭ ಅನ್ನು ಜಾರಿಗೊಳಿಸಿದಾಗಿನಿಂದ ಹೆಚ್ಚಿನ ವಸಾಹತುಗಳು ರಾಜ್ಯತ್ವದ ಮೂಲಕ ಸ್ವಾತಂತ್ರ್ಯವನ್ನು ಪಡೆದಿದ್ದರೂ, ಅದು ಈ ಕೆಳಗಿನ ದೇಶಗಳ ದಂಡಸಂಹಿತೆಗಳಲ್ಲಿ ಉಳಿದಿದೆ:

ಭಾರತೀಯ ದಂಡ ಸಂಹಿತೆಯ ಕಲಂ ೩೭೭ ಭಾರತದ ಬ್ರಿಟಿಷರ ಆಳ್ವಿಕೆಯಲ್ಲಿ ೧೮೬೧ ರಲ್ಲಿ ಪರಿಚಯಿಸಲಾದ ಭಾರತೀಯ ದಂಡ ಸಂಹಿತೆಯ ಒಂದು ವಿಭಾಗವಾಗಿದೆ. ಬಗ್ಗರಿ ಕಾಯಿದೆ ೧೫೩೩ರ ಮಾದರಿಯಲ್ಲಿ, ಇದು "ಪ್ರಕೃತಿಯ ನಿಯಮದ ವಿರುದ್ಧ"ವಾದ ಲೈಂಗಿಕ ಚಟುವಟಿಕೆಗಳನ್ನು ಕಾನೂನು ಬಾಹಿರವಾಗಿಸುತ್ತದೆ. ೬ ಸೆಪ್ಟೆಂಬರ್ ೨೦೧೮ ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ವಯಸ್ಕರ ನಡುವಿನ ಸಮ್ಮತಿಯ ಸಲಿಂಗಕಾಮಕ್ಕೆ ಕಲಂ ೩೭೭ ರ ಅನ್ವಯವು ಅಸಂವಿಧಾನಿಕ, "ತರ್ಕಬದ್ಧವಲ್ಲದ, ಅಸಮರ್ಥನೀಯ ಮತ್ತು ಸ್ಪಷ್ಟವಾಗಿ ಅನಿಯಂತ್ರಿತವಾದದ್ದು", [] ಆದರೆ ಅಪ್ರಾಪ್ತರೊಂದಿಗೆ ಲೈಂಗಿಕತೆಗೆ, ಒಪ್ಪಿಗೆಯಿಲ್ಲದ ಲೈಂಗಿಕ ಕ್ರಿಯೆಗಳು ಮತ್ತು ಮೃಗೀಯತೆ ಸಂಬಂಧಿಸಿದಂತೆ ಕಲಂ ೩೭೭ ಜಾರಿಯಲ್ಲಿದೆ ಎಂದು ತೀರ್ಪು ಪ್ರಕಟಿಸಿತು . []

ಜುಲೈ ೨೦೦೯ ರಲ್ಲಿ ದೆಹಲಿ ಉಚ್ಛ ನ್ಯಾಯಾಲಯವು ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ಈ ವಿಭಾಗದ ಭಾಗಗಳನ್ನು ಮೊದಲು ಅಸಂವಿಧಾನಿಕ ಎಂದು ಹೊಡೆದು ಹಾಕಿತು. [] [೧೦] [೧೧] ಆ ತೀರ್ಪನ್ನು ಭಾರತದ ಸರ್ವೋಚ್ಚ ನ್ಯಾಯಾಲಯ (SC) ೧೧ ಡಿಸೆಂಬರ್ ೨೦೧೩ ರಂದು ಸುರೇಶ್ ಕುಮಾರ್ ಕೌಶಲ್ ವರ್ಸಸ್ ನಾಜ್ ಫೌಂಡೇಶನ್ನಲ್ಲಿ ರದ್ದುಗೊಳಿಸಿತು. ಕಲಂ ೩೭೭ ಯನ್ನು ತಿದ್ದುಪಡಿ ಮಾಡುವುದು ಅಥವಾ ರದ್ದುಗೊಳಿಸುವುದು ಸಂಸತ್ತಿಗೆ ಬಿಟ್ಟ ವಿಚಾರವೇ ಹೊರತು ನ್ಯಾಯಾಂಗಕ್ಕಲ್ಲ ಎಂದು ನ್ಯಾಯಲಯವು ಅಭಿಪ್ರಾಯಪಟ್ಟಿತು. [೧೨] [೧೩] ೬ ಫೆಬ್ರವರಿ ೨೦೧೬ ರಂದು, ನ್ಯಾಯಾಲಯದ ತ್ರಿಸದಸ್ಯ ಪೀಠವು ನಾಜ್ ಫೌಂಡೇಶನ್ ಮತ್ತು ಇತರರು ಸಲ್ಲಿಸಿದ ಕ್ಯುರೇಟಿವ್ ಅರ್ಜಿಗಳನ್ನು ಪರಿಶೀಲಿಸಿ, ಅವುಗಳನ್ನು ಐದು ಸದಸ್ಯರ ಸಾಂವಿಧಾನಿಕ ಪೀಠವು ಪರಿಶೀಲಿಸುತ್ತದೆ ಎಂದು ನಿರ್ಧರಿಸಿತು. [೧೪]

೨೫ ಆಗಸ್ಟ್ ೨೦೧೭ ರಂದು, ಸರ್ವೋಚ್ಚ ನ್ಯಾಯಾಲಯವು ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ (ನಿವೃತ್ತ) ಮತ್ತು ಅನ್ಆರ್. vs ಯೂನಿಯನ್ ಆಫ್ ಇಂಡಿಯಾ ಅಂಡ್ ಓರ್ಸ್. ತೀರ್ಪಿನಲ್ಲಿ ಸಂವಿಧಾನದ ಅಡಿಯಲ್ಲಿ ಖಾಸಗಿತನದ ಹಕ್ಕನ್ನು ಮೂಲಭೂತ ಹಕ್ಕು ಎಂದು ಎತ್ತಿಹಿಡಿಯಿತು. ನ್ಯಾಯಾಲಯವು ತಾರತಮ್ಯವನ್ನು ಖಂಡಿಸಿ ಸಮಾನತೆಗೆ ಕರೆ ನೀಡಿತು, ಹಾಗು ಲೈಂಗಿಕ ದೃಷ್ಟಿಕೋನದ ರಕ್ಷಣೆ ಮೂಲಭೂತ ಹಕ್ಕುಗಳ ಭಾಗ ಮತ್ತು LGBT ಜನಸಂಖ್ಯೆಯ ಹಕ್ಕುಗಳು ನೈಜ ಮತ್ತು ಸಾಂವಿಧಾನಿಕ ಸಿದ್ಧಾಂತದ ಮೇಲೆ ಸ್ಥಾಪಿಸಲಾಗಿದೆ ಎಂದು ಹೇಳಿತು. [೧೫] ಈ ತೀರ್ಪು ಕಲಂ ೩೭೭ ರ ಅಸಂವಿಧಾನಿಕತೆಯನ್ನು ಸೂಚಿಸುತ್ತದೆ ಎಂದು ನಂಬಲಾಗಿದೆ. [೧೬] [೧೭] [೧೮]

ಜನವರಿ ೨೦೧೮ ರಲ್ಲಿ, ೨೦೧೩ರ ನಾಜ್ ಫೌಂಡೇಶನ್ ತೀರ್ಪನ್ನು ಮರುಪರಿಶೀಲಿಸುವ ಅರ್ಜಿಯನ್ನು ಆಲಿಸಲು ಸರ್ವೋಚ್ಚ ನ್ಯಾಯಾಲಯವು ಒಪ್ಪಿಕೊಂಡಿತು. ಸೆಪ್ಟೆಂಬರ್ ೬, ೨೦೧೮ ರಂದು, ನವತೇಜ್ ಸಿಂಗ್ ಜೋಹರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾದಲ್ಲಿ ನ್ಯಾಯಾಲಯವು ಕಲಂ ೩೭೭ ಅಸಂವಿಧಾನಿಕವಾಗಿದೆ, "ಇದುವರೆಗೆ ಇದು ಒಂದೇ ಲಿಂಗದ ವಯಸ್ಕರ ನಡುವೆ ಸಮ್ಮತಿಯ ಲೈಂಗಿಕ ನಡವಳಿಕೆಯನ್ನು ಅಪರಾಧವಾಗೆಸುತ್ತದೆ" ಎಂದು ಸರ್ವಾನುಮತದಿಂದ ತೀರ್ಪು ನೀಡಿತು. [೧೯] [೨೦] ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಡಿವೈ ಚಂದ್ರಚೂಡ್, ಎ ಎಂ ಖಾನ್ವಿಲ್ಕರ್ ಮತ್ತು ಇಂದು ಮಲ್ಹೋತ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಪೀಠ ಈ ತೀರ್ಪು ನೀಡಿದೆ.

377. Unnatural offences: Whoever voluntarily has carnal intercourse against the order of nature with any man, woman or animal, shall be punished with imprisonment for life, or with imprisonment of either description for a term which may extend to ten years, and shall also be liable to fine.

Explanation: Penetration is sufficient to constitute the carnal intercourse necessary to the offence described in this section.[೨೧][೨೨]

ಸಾರ್ವಜನಿಕ ಗ್ರಹಿಕೆ

[ಬದಲಾಯಿಸಿ]
The Aam Aadmi party is disappointed with the judgment of the Supreme Court upholding the Section 377 of the IPC and reversing the landmark judgment of the Delhi High Court on the subject. The Supreme Court judgment thus criminalises the personal behaviour of consenting adults. All those who are born with or choose a different sexual orientation would thus be placed at the mercy of the police. This not only violates the human rights of such individuals, but goes against the liberal values of our Constitution, and the spirit of our times. Aam Aadmi Party hopes and expects that the Supreme Court will review this judgment and that the Parliament will also step in to repeal this archaic law.[೨೩]
ಭುವನೇಶ್ವರ್ ಪ್ರೈಡ್ ಪರೇಡ್‌ನಲ್ಲಿ ಭಾಗವಹಿಸುವವರು ಕಲಂ 377 ರ ಬಗ್ಗೆ ಪೋಸ್ಟರ್ ಅನ್ನು ಹಿಡಿದೆದ್ದಾರೆ.

ಬೆಂಬಲ

[ಬದಲಾಯಿಸಿ]

೨೦೦೮ ರಲ್ಲಿ " ಸಲಿಂಗಕಾಮವು ಒಂದು ಸಾಮಾಜಿಕ ದುರ್ಗುಣ ಮತ್ತು ರಾಜ್ಯವು ಅದನ್ನು ತಡೆಯುವ ಅಧಿಕಾರವನ್ನು ಹೊಂದಿದೆ. [ಸಲಿಂಗಕಾಮವನ್ನು ನಿರ್ಲಕ್ಷಿಸುವುದು] ಶಾಂತಿ ಭಂಗವನ್ನು ಉಂಟುಮಾಡಬಹುದು. ಅದನ್ನು ಅನುಮತಿಸಿದರೆ [ಏಡ್ಸ್ ] ದುಷ್ಟ ಖಾಯಿಲೆ ಮತ್ತು ಎಚ್ಐವಿ ಮತ್ತಷ್ಟು ಹರಡುತ್ತದೆ, ಹಾತು ಜನರಿಗೆ ಹಾನಿ ಮಾಡುತ್ತದೆ. ಇದು ದೊಡ್ಡ ಅಪಾಯಕ್ಕೆ ಕಾರಣವಾಗುತ್ತದೆ ಮತ್ತು ಸಮಾಜದ ನೈತಿಕ ಮೌಲ್ಯಗಳು ಕುಸಿಯುತ್ತದೆ." ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ ಪಿ ಮಲ್ಹೋತ್ರಾ ಹೇಳಿದರು. ಈ ಅಭಿಪ್ರಾಯವನ್ನು ಗೃಹ ಸಚಿವಾಲಯ ಹಂಚಿಕೊಂಡಿದೆ. [೨೪]

೧೧ ಡಿಸೆಂಬರ್ ೨೦೧೩ರ ಕಲಂ ೩೭೭ ಅನ್ನು ಎತ್ತಿಹಿಡಿಯುವ ಸರ್ವೋಚ್ಚ ನ್ಯಾಯಾಲಯದ ತೀರ್ಪು ಧಾರ್ಮಿಕ ಮುಖಂಡರ ಬೆಂಬಲ ಪಡೆಯಿತು. ಡೈಲಿ ನ್ಯೂಸ್ ಮತ್ತು ಅನಾಲಿಸಿಸ್ ಇದನ್ನು "ತಮ್ಮ ಸಲಿಂಗಕಾಮಿ ವಿರೋಧಿ ಮನೋಭಾವವನ್ನು ವ್ಯಕ್ತಪಡಿಸುವಲ್ಲಿ ಧಾರ್ಮಿಕ ಮುಖಂಡರ ಏಕತೆ ಎಂದು ಕರೆಯಿತು. ಸಾಮಾನ್ಯವಾಗಿ ಮುಖಂಡರು ವಿಭಜಿತವಾಗಿದ್ದು, ಯಾವಾಗಲೂ ಪರಸ್ಪರರ ಧಾರ್ಮಿಕ ನಂಬಿಕೆಗಳನ್ನು ವಿರೋಧಿಸುವವರಾದರು, ವಿಭಾಗಗಳಾದ್ಯಂತದ ನಾಯಕರು ಸಲಿಂಗಕಾಮವನ್ನು ಖಂಡಿಸಲು ಮತ್ತು ತೀರ್ಪಿನ ಬಗ್ಗೆ ತಮ್ಮ ಐಕಮತ್ಯವನ್ನು ವ್ಯಕ್ತಪಡಿಸಲು ಮುಂದಾದರು" ಎಂದು ಕರೆಯಿತು. ಈ ವರದಿಯಲ್ಲಿ ಡೈಲಿ ನ್ಯೂಸ್ ಮತ್ತು ಅನಾಲಿಸಿಸ್ ಲೇಖನವು ಭಾರತದ ಪ್ರಸಿದ್ಧ ಯೋಗ ಗುರು ಬಾಬಾ ರಾಮ್‌ದೇವ್ ಅವರು ಪತ್ರಕರ್ತರು "ಸಲಿಂಗಕಾಮಿಯಾಗಬೇಡಿ" ಎಂದು ಪ್ರಾರ್ಥಿಸಿದ ನಂತರ, ಯೋಗದ ಮೂಲಕ ಸಲಿಂಗಕಾಮವನ್ನು "ಗುಣಪಡಿಸಬಹುದು" ಎಂದು ಹೇಳಿದರು ಎಂಬುದನ್ನು ಸೇರಿಸಿತು. [೨೫]

ವಿರೋಧ ಮತ್ತು ಟೀಕೆ

[ಬದಲಾಯಿಸಿ]

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಲಂ ೩೭೭ ಅನ್ನು ಎತ್ತಿಹಿಡಿಯುವುದನ್ನು ವಿರೋಧಿಸಿ, ಇದು HIV/AIDS ವಿರೋಧಿ ಪ್ರಯತ್ನಗಳಿಗೆ ಅಡ್ಡಿಯಾಗುತ್ತದೆ ಎಂದು ಹೇಳಿತು. [೨೬] [೨೭]ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಪ್ರಕಾರ, ೨೦೧೫ ರಲ್ಲಿ, ೨೦೭ ಅಪ್ರಾಪ್ತ ವಯಸ್ಕರು (೧೪%) ಮತ್ತು ೧೬ ಮಹಿಳೆಯರು ಸೇರಿದಂತೆ ೧,೪೯೧ ಜನರನ್ನು ಕಲಂ ೩೭೭ [೨೮] ಅಡಿಯಲ್ಲಿ ಬಂಧಿಸಲಾಗಿದೆ. [೨೯] ಮಾನವ ಹಕ್ಕುಗಳ ವಾಚ್ ವಾದದ ಪ್ರಕಾರ ಕಲಂ ೩೭೭ ಸಂಬಂಧಿಸಿದಂತೆ ಆರೋಪಿಗಳ ಸುಲಿಗೆ ಮಾಡುವವರು ತಪ್ಪಿತಸ್ಥರೆಂದು ಕಂಡುಬಂದರೆ ಐಪಿಸಿಯ ಕಲಂ ೩೮೯ ರ ವಿಶೇಷ ನಿಬಂಧನೆಯ ಅಡಿಯಲ್ಲಿ ಜೀವಾವಧಿ ಶಿಕ್ಷೆಯನ್ನು ಎದುರಿಸಬಹುದಾದರು HIV/AIDS ತಡೆಗಟ್ಟುವ ಪ್ರಯತ್ನಗಳನ್ನು ತಡೆಯಲು, ಜೊತೆಗೆ ಲೈಂಗಿಕ ಕಾರ್ಯಕರ್ತರು, ಸಲಿಂಗಕಾಮಿಗಳು ಮತ್ತು ರೋಗದ ಅಪಾಯದಲ್ಲಿರುವ ಇತರ ಗುಂಪುಗಳಿಗೆ ಕಿರುಕುಳ ನೀಡಲು ಬಳಸುತ್ತಿದ್ದರು[೩೦]. ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರು [೩೧] ಮತ್ತು ನಿರ್ದಿಷ್ಟವಾಗಿ ಮಂಗಳಮುಖಿಯರು ಎದುರಿಸುತ್ತಿರುವ ಹಕ್ಕುಗಳ ಉಲ್ಲಂಘನೆಗಳ ಕುರಿತು ಎರಡು ವರದಿಗಳನ್ನು ಪ್ರಕಟಿಸಿತು. [೩೨]

೨೦೦೬ ರಲ್ಲಿ, ಕಲಂ ೩೭೭ ೧೦೦ ಭಾರತೀಯ ಸಾಹಿತ್ಯ ವ್ಯಕ್ತಿಗಳಿಂದ ಟೀಕೆಗೆ ಒಳಗಾಯಿತು, [೩೩] ಪ್ರಮುಖವಾಗಿ ವಿಕ್ರಮ್ ಸೇಠ್. ಆನಂತರ ಕಾನೂನು ಹಲವಾರು ಮಂತ್ರಿಗಳಿಂದ ಇನ್ನೂ ಹೆಚ್ಚಿನ ಟೀಕೆಗೆ ಗುರಿಯಾಯಿತು, ಪ್ರಮುಖವಾಗಿ ಅನ್ಬುಮಣಿ ರಾಮದಾಸ್[೩೪] ಮತ್ತು ಆಸ್ಕರ್ ಫೆರ್ನಾಂಡಿಸ್. [೩೫] ೨೦೦೮ ರಲ್ಲಿ, ಬಾಂಬೆ ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ಕಾನೂನನ್ನು ರದ್ದುಗೊಳಿಸುವಂತೆ ಕರೆ ನೀಡಿದರು. [೩೬]

ಈ ನಿಷೇಧವು ಅಂತಾರಾಷ್ಟ್ರೀಯ ಕಾನೂನನ್ನು ಉಲ್ಲಂಘಿಸಿದೆ ಎಂದು ವಿಶ್ವಸಂಸ್ಥೆಯೂ ಹೇಳಿತು. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ನವಿ ಪಿಳ್ಳೆ ಅವರು "ಖಾಸಗಿ ಹಾಗು ಒಪ್ಪಿಗೆಯ ಸಲಿಂಗ ಲೈಂಗಿಕ ನಡವಳಿಕೆಯನ್ನು ಅಪರಾಧೀಕರಿಸುವುದು ಭಾರತವು ಅಂಗೀಕರಿಸಿದ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದದಲ್ಲಿ ಪ್ರತಿಪಾದಿಸಲಾದ ಗೌಪ್ಯತೆ ಮತ್ತು ತಾರತಮ್ಯದ ಹಕ್ಕುಗಳನ್ನು ಉಲ್ಲಂಘಿಸುತ್ತದೆ" ಮತ್ತು ಈ ನಿರ್ಧಾರವು "ಭಾರತದ ಗಮನಾರ್ಹವಾದ ಹಿಮ್ಮುಖ ಹೆಜ್ಜೆಯನ್ನು ಪ್ರತಿನಿಧಿಸುತ್ತದೆ ಮತ್ತು ಮಾನವ ಹಕ್ಕುಗಳಿಗೆ ಹೊಡೆತವಾಗಿದೆ." ಎಂದು ಹೇಳಿಕೆ ನೀಡಿದ್ದು ನ್ಯಾಯಾಲಯವು ತನ್ನ ಪರಿಶೀಲನಾ ಕಾರ್ಯವಿಧಾನವನ್ನು ಚಲಾಯಿಸಬಹುದೆಂಬ ಭರವಸೆಯನ್ನು ವ್ಯಕ್ತಪಡಿಸುತ್ತದೆ. [೩೭]

ರಾಜಕೀಯ ಪಕ್ಷಗಳ ನೋಟ

[ಬದಲಾಯಿಸಿ]

ರದ್ದುಗೊಳಿಸಲು ವಿರೋಧ

[ಬದಲಾಯಿಸಿ]

೨೦೧೩ ರಲ್ಲಿ ಕಾನೂನನ್ನು ಮರುಸ್ಥಾಪಿಸಿದ ಕೆಲವೇ ದಿನಗಳಲ್ಲಿ ಆಡಳಿತ ಪಕ್ಷ ಬಿಜೆಪಿಯ ಸದಸ್ಯ ಮತ್ತು ಗೃಹ ಸಚಿವ ರಾಜನಾಥ್ ಸಿಂಗ್ ಅವರ ದಾಖಲದ ಹೇಳಿಕೆ, ಅವರ ಪಕ್ಷವು "ನಿಸ್ಸಂದಿಗ್ಧವಾಗಿ" ಕಾನೂನಿನ ಪರವಾಗಿದೆ, "ನಾವು ಕಲಂ ೩೭೭ ಅನ್ನು ಬೆಂಬಲಿಸುತ್ತೇವೆ ಎಂದು (ಸರ್ವಪಕ್ಷ ಸಭೆ ಕರೆದರೆ) ಹೇಳುತ್ತೇವೆ, ಏಕೆಂದರೆ ಸಲಿಂಗಕಾಮವು ಅಸ್ವಾಭಾವಿಕ ಕ್ರಿಯೆಯಾಗಿದೆ ಮತ್ತು ಅದನ್ನು ಬೆಂಬಲಿಸಲಾಗುವುದಿಲ್ಲ ಎಂದು ನಾವು ನಂಬುತ್ತೇವೆ." [೩೮] ಬಿಜೆಪಿ ಸಂಸದರಾದ ಯೋಗಿ ಆದಿತ್ಯನಾಥ್ರವರು ೨೦೧೩ರ ತೀರ್ಪನ್ನು ಸ್ವಾಗತಿಸಿದರು ಮತ್ತು "ಸಲಿಂಗಕಾಮವನ್ನು ನಿರಪರಾಧೀಕರಿಸುವ ಯಾವುದೇ ಕ್ರಮವನ್ನು ವಿರೋಧಿಸುತ್ತಾರೆ" [೩೯] ಎಂದರು.

ಸಲಿಂಗಕಾಮವನ್ನು "ಅನೈತಿಕ ಮತ್ತು ನೀತಿಗೆಟ್ಟತನ" ಎಂದು ಕರೆದಿರುವ ಸಮಾಜವಾದಿ ಪಕ್ಷ ಸಂಸತ್ತಿನಲ್ಲಿ ಚರ್ಚೆಗೆ ಬಂದರೆ ವಿಧಿಗೆ ಯಾವುದೇ ತಿದ್ದುಪಡಿಗಳನ್ನು ವಿರೋಧಿಸುತ್ತದೆ ಎಂದು ಸ್ಪಷ್ಟಪಡಿಸಿತು. [೪೦] ರಾಮ್ ಗೋಪಾಲ್ ಯಾದವ್ "ಇದು ನಮ್ಮ ರಾಷ್ಟ್ರದ ಸಂಸ್ಕೃತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ", ಸುಪ್ರೀಂ ಕೋರ್ಟ್ ತೀರ್ಪನ್ನು ಬೆಂಬಲಿಸುತ್ತೆನೆ ಎಂದು ಹೇಳಿದರು.[]

ಕಾಂಗ್ರೆಸ್ ಪಕ್ಷದ ನೇತೃತ್ವದ ಯುಪಿಎ ಸರ್ಕಾರವು ನಾಜ್ ಫೌಂಡೇಶನ್ ಪ್ರಕರಣದ ಆರಂಭಿಕ ಹಂತದಲ್ಲಿ ಸಲಿಂಗಕಾಮವು 'ಅನೈತಿಕ' ಮತ್ತು ಅದನ್ನು ಅಪರಾಧೀಕರಿಸಲಾಗುವುದಿಲ್ಲ ಎಂದು ಹೇಳಿ ಕಾನೂನನ್ನು ಬೆಂಬಲಿಸಿತು. [೪೧]

ಭಾರತೀಯ ಜನತಾ ಪಕ್ಷದ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಸಲಿಂಗಕಾಮ ಸಾಮಾನ್ಯ ವಿಷಯವಲ್ಲ ಮತ್ತು ಹಿಂದುತ್ವದ ವಿರುದ್ಧವಾಗಿದೆ ಎಂದು ಹೇಳಿದ್ದರು. [೪೨] ಇದು ನಮ್ಮ ರಾಷ್ಟ್ರೀಯ ಭದ್ರತೆಗೆ ಅಪಾಯಕಾರಿ ಮತ್ತು ಸಲಿಂಗಕಾಮವನ್ನು ಗುಣಪಡಿಸಬಹುದೇ ಎಂದು ನೋಡಲು ಸರ್ಕಾರವು ವೈದ್ಯಕೀಯ ಸಂಶೋಧನೆಯಲ್ಲಿ ಹೂಡಿಕೆ ಮಾಡಬೇಕು ಎಂದು ಹೇಳಿದ್ದರು. "ಇದರ ಹಿಂದೆ ಸಾಕಷ್ಟು ಹಣವಿದೆ. ಅಮೆರಿಕನ್ನರು ಸಲಿಂಗಕಾಮಿ ಬಾರ್‌ಗಳನ್ನು ತೆರೆಯುವ ಆಲೋಚನೆ ಹೊಂದಿದ್ದಾರೆ ಮತ್ತು ಇದು ಶಿಶುಕಾಮಿಗಳಿಗೆ ಮುಖವಾಡ ಆಗಲಿದೆ ಹಾಗು ಎಚ್‌ಐವಿ ಪ್ರಕರಣಗಳಲ್ಲಿ ಭಾರಿ ಏರಿಕೆಯಾಗುತ್ತದೆ" ಎಂದು ಹೇಳಿದ್ದರು. [೪೩]

ಸರ್ವೋಚ್ಚ ನ್ಯಾಯಾಲಯ ೨೦೧೮ರ ತೀರ್ಪಿನ ನಂತರ, ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ 'ಸಲಿಂಗಕಾಮವು ಭಾರತೀಯ ಸಂಸ್ಕೃತಿಗೆ ವಿರುದ್ಧವಾಗಿದೆ' ಎಂದು ಹೇಳುವ ಮೂಲಕ ನಿರಪರಾಧೀಕರಣವನ್ನು ವಿರೋಧಿಸುವುದನ್ನು ಮುಂದುವರೆಸಿತು. [೪೪]

ರದ್ದತಿಗೆ ಬೆಂಬಲ

[ಬದಲಾಯಿಸಿ]

ಮಾಜಿ ಹಣಕಾಸು ಸಚಿವ ಮತ್ತು ಬಿಜೆಪಿ ಸದಸ್ಯ ಅರುಣ್ ಜೇಟ್ಲಿ ಅವರು "ಸಲಿಂಗಕಾಮಿಗಳ ನಡುವಿನ ಸಮ್ಮತಿಯ ಲೈಂಗಿಕತೆಯನ್ನು ನಿರಪರಾಧೀಕರಣವಾಗಿಸುವ ದೆಹಲಿ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ಹಿಂತೆಗೆದುಕೊಳ್ಳಬಾರದು" ಮತ್ತು "ವಿಶ್ವದಾದ್ಯಂತ ಲಕ್ಷಾಂತರ ಜನರು ಪರ್ಯಾಯ ಲೈಂಗಿಕ ಆದ್ಯತೆಗಳನ್ನು ಹೊಂದಿರುವಾಗ, ಅವರನ್ನು ಜೈಲಿಗೆ ಹಾಕಬೇಕು ಎಂಬ ಅಭಿಪ್ರಾಯವನ್ನು ಪ್ರತಿಪಾದಿಸಲು ತುಂಬಾ ತಡವಾಗಿದೆ" ಎಂದು ಹೇಳಿದರು. [೨೩] [೪೫] ಬಿಜೆಪಿ ವಕ್ತಾರರಾದ ಶೈನಾ ಎನ್‌ಸಿ ಅವರು ತಮ್ಮ ಪಕ್ಷವು ಸಲಿಂಗಕಾಮದ ನಿರಪರಾಧೀಕರಣವನ್ನು ಬೆಂಬಲಿಸುತ್ತದೆ "ಸಲಿಂಗಕಾಮವು ಅಪರಾಧವಲ್ಲ. ಅದು ಪ್ರಗತಿಪರ ಮಾರ್ಗವಾಗಿದೆ." [೪೬] ಎಂದು ಹೇಳಿದರು.

ಡಿಸೆಂಬರ್ ೨೦೧೩ ರಲ್ಲಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ LGBT ಹಕ್ಕುಗಳನ್ನು ಬೆಂಬಲಿಸಿ "ಪ್ರತಿಯೊಬ್ಬ ವ್ಯಕ್ತಿಗೆ ಆಯ್ಕೆ ಮಾಡುವ ಹಕ್ಕಿದೆ" ಎಂದು ಹೇಳಿದರು. "ಇವುಗಳು ವೈಯಕ್ತಿಕ ಆಯ್ಕೆಗಳು. ಈ ದೇಶವು ಅದರ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಹೆಸರುವಾಸಿಯಾಗಿದೆ. ಅದು ಹಾಗೆ ಇರಲಿ. ಸಂಸತ್ತು ಈ ಸಮಸ್ಯೆಯನ್ನು ಪರಿಹರಿಸುತ್ತದೆ ಮತ್ತು ತೀರ್ಪಿನಿಂದ ನೇರವಾಗಿ ಪ್ರಭಾವಿತರಾದವರ ಸಹಿತ ಭಾರತದ ಎಲ್ಲಾ ನಾಗರೀಕರಿಗೆ ಜೀವನ ಮತ್ತು ಸ್ವಾತಂತ್ರ್ಯದ ಸಾಂವಿಧಾನಿಕ ಖಾತರಿಯನ್ನು ಎತ್ತಿಹಿಡಿಯುತ್ತದೆ ಎಂದು ನಾನು ಭಾವಿಸುತ್ತೇನೆ. " ಎಂದು ಅವರು ಹೇಳಿದರು. ಭಾರತದಲ್ಲಿ LGBT ಹಕ್ಕುಗಳ ಚಳುವಳಿಯು ೨೦೧೪ ಸಾರ್ವತ್ರಿಕ ಚುನಾವಣೆಯ ಕಾಂಗ್ರೆಸ್ನ ಚುನಾವಣಾ ಪ್ರಣಾಳಿಕೆಯ ಭಾಗವಾಗಿತ್ತು. [೨೩] ಸೋನಿಯಾ ಗಾಂಧಿ ಕೂಡ ಇದೇ ಅಭಿಪ್ರಾಯ ಹಂಚಿಕೊಂಡಿದ್ದರು. [೪೭] ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಅವರು ೨೦೧೩ರ ಸುರೇಶ್ ಕುಮಾರ್ ಕೌಶಲ್ ವರ್ಸಸ್ ನಾಜ್ ಫೌಂಡೇಶನ್ ತೀರ್ಪನ್ನು ತ್ವರಿತವಾಗಿ ಹಿಂತೆಗೆದುಕೊಳ್ಳಬೇಕು ಎಂದು ಹೇಳಿದ್ದರು. [] "ನನ್ನ ದೃಷ್ಟಿಯಲ್ಲಿ ಕಲಂ ೩೭೭ ಅನ್ನು ನ್ಯಾಯಮೂರ್ತಿ ಎಪಿ ಶಾ ಅವರು ದೆಹಲಿ ಉಚ್ಚ ನ್ಯಾಯಾಲಯದ ತೀರ್ಪಿನಿಂದ ಸರಿಯಾಗಿ ಹೊಡೆದು ಹಾಕಿದ್ದಾರೆ" ಎಂದು ಅವರು ಹೇಳಿದ್ದರು. [೪೮]

ನಾಯಕ ದತ್ತಾತ್ರೇಯ ಹೊಸಬಾಳೆ ಅವರು ಆರ್‌ಎಸ್‌ಎಸ್ ನಿಲುವನ್ನು ಪರಿಷ್ಕರಿಸಿ, "ಅಪರಾಧೀಕರಣ ಬೇಡ, ಆದರೆ ವೈಭವೀಕರಣವೂ ಬೇಡ" ಎಂದು ಹೇಳಿದ್ದರು. [೪೯] ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ LGBTQIA+ ಸಮುದಾಯವನ್ನು ಬೆಂಬಲಿಸಿ ಅವರನ್ನು ಸಮಾಜದ ಅವಿಭಾಜ್ಯ ಅಂಗವಾಗಿ ಒಪ್ಪಿಕೊಳ್ಳಬೇಕು ಎಂದು ಹೇಳಿದ್ದಾರೆ. ೨೦೧೩ರ ತೀರ್ಪಿನ ನಂತರ, ಆಮ್ ಆದ್ಮಿ ಪಕ್ಷವು ತಮ್ಮ ವೆಬ್‌ಸೈಟ್‌ನಲ್ಲಿ ಹಾಕಿದ ಹೇಳಿಕೆ:

If there is one constitutional tenet that can be said to be underlying theme of the Indian Constitution, it is that of 'inclusiveness'. This Court believes that Indian Constitution reflects this value deeply ingrained in Indian society, nurtured over several generations. The inclusiveness that Indian society traditionally displayed, literally in every aspect of life, is manifest in recognising a role in society for everyone. Those perceived by the majority as 'deviants' or 'different' are not on that score excluded or ostracised.

Where society can display inclusiveness and understanding, such persons can be assured of a life of dignity and non-discrimination. This was the 'spirit behind the Resolution' of which Nehru spoke so passionately. In our view, Indian Constitutional law does not permit the statutory criminal law to be held captive by the popular misconceptions of who the LGBTs are. It cannot be forgotten that discrimination is antithesis of equality and that it is the recognition of equality which will foster the dignity of every individual.[೫೦]

ಕಮ್ಯುನಿಸ್ಟ್ ಪಕ್ಷದ ಬೃಂದಾ ಕಾರಟ್ ಅವರು ಸರ್ವೋಚ್ಚ ನ್ಯಾಯಾಲಯದ ಆದೇಶವು ಹಿಮ್ಮುಖವಾಗಿದ್ದು ಪರ್ಯಾಯ ಲೈಂಗಿಕತೆಯನ್ನು ಅಪರಾಧೀಕರಿಸುವುದು ತಪ್ಪು ಎಂದು ಹೇಳಿದ್ದರು. [೫೧]

ಜನತಾ ದಳ ಯುನೈಟೆಡ್‌ನ ನಾಯಕ ಶಿವಾನಂದ್ ತಿವಾರಿ ಅವರು ಸಲಿಂಗಕಾಮವನ್ನು ಪ್ರಾಯೋಗಿಕ ಮತ್ತು ಅಸಂವಿಧಾನಿಕ ಎಂದು ಕರೆಯುವ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಬೆಂಬಲಿಸಲಿಲ್ಲ. "ಇದು ಸಮಾಜದಲ್ಲಿ ನಡೆಯುವ ವಿಷಯ ಮತ್ತು ಇದನ್ನು ಸಹಜ ಎಂದು ಜನರು ನಂಬಿದರೆ, ಸುಪ್ರೀಂ ಕೋರ್ಟ್ ಅವರನ್ನು ತಡೆಯಲು ಏಕೆ ಪ್ರಯತ್ನಿಸುತ್ತಿದೆ?" [] ಎಂದು ಹೇಳಿದ್ದರು.

ತೃಣಮೂಲ ಕಾಂಗ್ರೆಸ್‌ನ ಡೆರೆಕ್ ಒ'ಬ್ರೇ ಅವರು ತಾವು ವೈಯಕ್ತಿಕ ಮಟ್ಟದಲ್ಲಿ ನಿರಾಶೆಗೊಂಡಿದ್ದು, ಇಂದು ನಾವು ವಾಸಿಸುತ್ತಿರುವ ಉದಾರವಾದಿ ಜಗತ್ತಿನಲ್ಲಿ ಇದನ್ನು ನಿರೀಕ್ಷಿಸಲಾಗುವುದಿಲ್ಲ ಎಂದು ಹೇಳಿದರು. []

ಶಾಸಕಾಂಗ ಕ್ರಮ

[ಬದಲಾಯಿಸಿ]

೧೮ ಡಿಸೆಂಬರ್ ೨೦೧೫ ರಂದು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಲೋಕಸಭಾ ಸದಸ್ಯ ಶಶಿ ತರೂರ್ ಅವರು ಭಾರತೀಯ ದಂಡ ಸಂಹಿತೆಯಲ್ಲಿ ಕಲಂ ೩೭೭ ಅನ್ನು ಬದಲಿಸಲು ಮತ್ತು ಒಮ್ಮತದ ಸಲಿಂಗ ಸಂಬಂಧಗಳನ್ನು ನಿರಪರಾಧೀಕರಿಸಲು ಖಾಸಗಿ ಸದಸ್ಯರ ಮಸೂದೆಯನ್ನು ಮಂಡಿಸಿದರು. ಬಿಲ್ ಮೊದಲ ಓದುವಿಕೆಯಲ್ಲಿ ೭೧-೨೪ ರಲ್ಲಿ ಸೋಲನುಭವಿಸಿತು. [೫೨] ಈ ಆರಂಭಿಕ ಹಂತದಲ್ಲಿ ಮಸೂದೆಯನ್ನು ತಿರಸ್ಕರಿಸಿದ ಬಗ್ಗೆ ತರೂರ್ ಆಶ್ಚರ್ಯ ವ್ಯಕ್ತಪಡಿಸಿದ್ದರು. ಬೆಂಬಲ ಸಂಗ್ರಹಿಸಲು ನನಗೆ ಈಗ ಸಮಯವಿಲ್ಲ, ಮಸೂದೆಯನ್ನು ಮತ್ತೆ ಮಂಡಿಸಲು ಪ್ರಯತ್ನಿಸುತ್ತೇನೆ ಎಂದು ಅವರು ಹೇಳಿದ್ದರು. [೫೨]

ಮಾರ್ಚ್ ೨೦೧೬ ರಲ್ಲಿ, ತರೂರ್ ಸಲಿಂಗಕಾಮವನ್ನು ನಿರಪರಾಧೀಕರಿಸುವ ಖಾಸಗಿ ಸದಸ್ಯರ ಮಸೂದೆಯನ್ನು ಪುನಃ ಪರಿಚಯಿಸಲು ಪ್ರಯತ್ನಿಸಿದರಾದರು ಎರಡನೇ ಬಾರಿಗೆ ತಿರಸ್ಕಾರವಾಯಿತು. [೫೩]

ನ್ಯಾಯಾಂಗ ಕ್ರಮ

[ಬದಲಾಯಿಸಿ]

೨೦೦೯ ನಾಜ್ ಫೌಂಡೇಶನ್ V. ಸರ್ಕಾರ ದೆಹಲಿಯ NCT ನ

[ಬದಲಾಯಿಸಿ]
೨ ಜುಲೈ ೨೦೦೯ ರ ದೆಹಲಿಯ ಉಚ್ಛ ನ್ಯಾಯಾಲಯದ ತೀರ್ಪು ವಯಸ್ಕರಲ್ಲಿ ಒಪ್ಪಿಗೆಯ ಲೈಂಗಿಕತೆ ಸಂಬಂಧಿಸಿದಂತೆ ವಿಧಿ ೩೭೭ರ ಭಾಗಗಳನ್ನು ಅಸಂವಿಧಾನಿಕವೆಂದು ಕಘೋಷಿಸಿತು

ಕಲಂ ೩೭೭ ಅನ್ನು ರದ್ದುಗೊಳಿಸುವ ಆಂದೋಲನವನ್ನು ೧೯೯೧ ರಲ್ಲಿ ಏಡ್ಸ್ ಭೇದಭಾವ ವಿರೋಧಿ ಆಂದೋಲನ್ ಪ್ರಾರಂಭಿಸಿತು. ಅವರ ಐತಿಹಾಸಿಕ ಪ್ರಕಟಣೆ Less than Gay: A Citizen's Report, ಕಲಂ ೩೭೭ರೊಂದಿಗಿನ ಸಮಸ್ಯೆಗಳನ್ನು ವಿವರಿಸಿ ಅದನ್ನು ರದ್ದುಗೊಳಿಸುವಂತೆ ಕೇಳಿತು. ವಿಮಲ್ ಬಾಲಸುಬ್ರಹ್ಮಣ್ಯನ್ ಅವರ 1996 ರ ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿಯಲ್ಲಿ 'ಗೇ ರೈಟ್ಸ್ ಇನ್ ಇಂಡಿಯಾ' ಎಂಬ ಶೀರ್ಷಿಕೆಯ ಲೇಖನವು ಆರಂಭಿಕ ಇತಿಹಾಸವನ್ನು ವಿವರಿಸುತ್ತದೆ. ಮುಂದಿನ ವರ್ಷಗಳಲ್ಲಿ ಈ ಪ್ರಕರಣವು ಸುದೀರ್ಘವಾದಂತೆ, ನಾಜ್ ಫೌಂಡೇಶನ್ (ಇಂಡಿಯಾ) ಟ್ರಸ್ಟ್ ಎಂಬ ಕಾರ್ಯಕರ್ತ ಗುಂಪು, ೨೦೧೧ ರಲ್ಲಿ ದೆಹಲಿ ಉಚ್ಚ ನ್ಯಾಯಾಲಯವನ್ನು ವಯಸ್ಕರ ನಡುವಿನ ಒಪ್ಪಿಗೆಯ ಸಲಿಂಗಕಾಮಿ ಸಂಭೋಗವನ್ನು ಕಾನೂನು ಬದ್ಧಗೊಳಿಸುವಂತೆ ಕೋರಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಸಲ್ಲಿಸಿ ಮುಂದಿನ ದಶಕದಲ್ಲಿ ಅದನ್ನು ಪುನರುಜ್ಜೀವನಗೊಳಿಸಿತು. [೫೪] ನಾಜ್ ಫೌಂಡೇಶನ್ ನ್ಯಾಯಾಲಯದಲ್ಲಿ ತೊಡಗಿಸಿಕೊಳ್ಳಲು ವಕೀಲರ ಕಲೆಕ್ಟಿವ್‌ನ ಕಾನೂನು ತಂಡದೊಂದಿಗೆ ಕೆಲಸ ಮಾಡಿತು. [೫೫] ೨೦೦೩ ರಲ್ಲಿ, ದೆಹಲಿ ಉಚ್ಚ ನ್ಯಾಯಾಲಯವು ಕಾನೂನಿನ ಕಾನೂನುಬದ್ಧತೆಗೆ ಸಂಬಂಧಿಸಿದ ಅರ್ಜಿಯನ್ನು ಪರಿಗಣಿಸಲು ನಿರಾಕರಿಸಿ, ಅರ್ಜಿದಾರರಿಗೆ ಈ ವಿಷಯದಲ್ಲಿ ಯಾವುದೇ ಅಂಗೀಕೃತ ಸ್ಥಾನವಿಲ್ಲ ಎಂದು ಹೇಳಿತು. ಈ ಕಲಂ ಅಡಿಯಲ್ಲಿ ಇತ್ತೀಚಿನ ದಿನಗಳಲ್ಲಿ ಯಾರನ್ನೂ ವಿಚಾರಣೆಗೆ ಒಳಪಡಿಸದ ಕಾರಣ, ಅರ್ಜಿದಾರರ ಅನುಪಸ್ಥಿತಿಯಲ್ಲಿ ದೆಹಲಿ ಉಚ್ಚ ನ್ಯಾಯಾಲಯವು ಈ ವಿಧಿಯನ್ನು ಕಾನೂನುಬಾಹಿರವೆಂದು ತಳ್ಳಿಹಾಕುವ ಸಾಧ್ಯತೆಯಿರಲಿಲ್ಲ.

ತಾಂತ್ರಿಕ ಕಾರಣಗಳಿಗಾಗಿ ಅರ್ಜಿಯನ್ನು ವಜಾಗೊಳಿಸಿದ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ನಾಜ್ ಫೌಂಡೇಶನ್ ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿತು. ಈ ಪ್ರಕರಣದಲ್ಲಿ ಪಿಐಎಲ್ ಸಲ್ಲಿಸಲು ನಾಜ್ ಫೌಂಡೇಶನ್ ಅಂಗೀಕೃತ ಸ್ಥಾನವನ್ನು ಹೊಂದಿದೆ ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿ ಅರ್ಹತೆಯ ಆಧಾರದ ಮೇಲೆ ಮರುಪರಿಶೀಲಿಸಲು ಪ್ರಕರಣವನ್ನು ದೆಹಲಿ ಉಚ್ಚ ನ್ಯಾಯಾಲಯಕ್ಕೆ ಕಳುಹಿಸಿತು. [೫೬] ನಂತರ, ದೆಹಲಿ ಮೂಲದ 'ವಾಯ್ಸ್ ಎಗೇನ್ಸ್ಟ್ ೩೭೭' ಎಂಬ ಎಲ್‌ಜಿಬಿಟಿಯ ಒಕ್ಕೂಟ, ಮಹಿಳಾ ಮತ್ತು ಮಾನವ ಹಕ್ಕುಗಳ ಕಾರ್ಯಕರ್ತರು ಪ್ರಕರಣದಲ್ಲಿ ಮಹತ್ವದ ಹಸ್ತಕ್ಷೇಪವನ್ನು ನಡೆಸಿ, ಕಲಂ ೩೭೭ ವ್ಯಾಪ್ತಿಯಿಂದ ವಯಸ್ಕ ಸಮ್ಮತಿಯ ಲೈಂಗಿಕತೆಯನ್ನು ಹೊರಗಿಡಬೇಕೆಂಬ ಬೇಡಿಕೆಯನ್ನು ಬೆಂಬಲಿಸಿತು. . [೫೭]

ಸುನಿಲ್ ಮೆಹ್ರಾ ಅವರಂತಹ ಖ್ಯಾತ ಪತ್ರಕರ್ತರಿಂದಲು ಬೆಂಬಲವಿತ್ತು. ಅವರ ಪ್ರತಿಭಟನೆ ನವತೇಜ್ ಸಿಂಗ್ ಜೋಹರ್ ಅವರೊಂದಿಗೆ ಹೊಂದಿದ್ದ ಸಂಬಂಧದ ವೈಯಕ್ತಿಕ ಅನುಭವಗಳ ಮೇಲು ಆಧರಿಸಿತ್ತು. ರಿತು ದಾಲ್ಮಿಯಾ ಕೂಡ ತೀವ್ರ ಕ್ರಿಯಾಶೀಲತೆಯನ್ನು ಪ್ರದರ್ಶಿಸಿದರು. ಬರಹಗಾರ, ಇತಿಹಾಸಕಾರ ಮತ್ತು ಹೋಟೆಲ್ ಉದ್ಯಮಿ ಅಮನ್ ನಾಥ್ ಅವರು ಕಲಂ ೩೭೭ರ ನಿರಪರಾಧೀಕರಣಕ್ಕಾಗಿ ಹೋರಾಡಿದರು. ಅವರು ವಾಝಿಯಾರ್ಗ್ ನಿಧನರಾಗುವವರೆಗೂ ೨೩ ವರ್ಷಗಳ ಕಾಲ ಫ್ರಾನ್ಸಿಸ್ ವಾಝಿಯಾರ್ಗ್ ಅವರೊಂದಿಗೆ ಸಂಬಂಧವನ್ನು ಹೊಂದಿದ್ದರು. [೫೮] ಆಯೇಶಾ ಕಪೂರ್ ಹೊಸ ಇ-ಕಾಮರ್ಸ್ ವಲಯದಲ್ಲಿ ಕೆಲಸ ಮಾಡಿದ ಒಂದು ದಶಕದಲ್ಲಿ ಯಶಸ್ವಿಯಾದರು, ಆದಾಗ್ಯೂ, ಜನರು ತಮ್ಮ ಲೈಂಗಿಕತೆಯ ಬಗ್ಗೆ ತಿಳಿದುಕೊಳ್ಳುತ್ತಾರೆ ಎಂಬ ಭಯದಿಂದ ಅವರು ತನ್ನ ಕೆಲಸವನ್ನು ತೊರೆಯಬೇಕಾಯಿತು. ಕಾಲಾನಂತರದಲ್ಲಿ, ಅವರು ಹೊರಬಂದು ಕಲಂ ೩೭೭ ಅನ್ನು ಸವಾಲು ಮಾಡುವ ಧೈರ್ಯವನ್ನು ತೋರಿದರು. [೫೯]

ಮೇ ೨೦೦೮ ರಲ್ಲಿ, ಪ್ರಕರಣವು ದೆಹಲಿ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು, ಆದರೆ ಗೃಹ ವ್ಯವಹಾರಗಳ ಸಚಿವಾಲಯವು ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ಕಲಂ ೩೭೭ರ ಜಾರಿ ವಿಚಾರದಲ್ಲಿ ಆರೋಗ್ಯ ಸಚಿವಾಲಯದ ನಿಲುವಿಗೆ ವ್ಯತಿರಿಕ್ತ ಸ್ಥಾನವನ್ನು ಕಾಯ್ದುಕೊಳ್ಳುವುದರೊಂದಿಗೆ ಸರ್ಕಾರವು ತನ್ನ ನಿಲುವನ್ನು ನಿರ್ಧರಿಸಲಿಲ್ಲ. [೬೦]೭ ನವೆಂಬರ್ ೨೦೦೮ ರಂದು, ಏಳು ವರ್ಷಗಳ ಹಳೆಯ ಅರ್ಜಿ ವಿಚಾರಣೆಯನ್ನು ಪೂರ್ಣಗೊಳಿಸಿತು. ೬ [೬೧] ೧೨ ಜೂನ್ ೨೦೦೯ ರಂದು, ಭಾರತದ ಹೊಸ ಕಾನೂನು ಸಚಿವ ವೀರಪ್ಪ ಮೊಯ್ಲಿ ಅವರು ಕಲಂ ೩೭೭ ಹಳೆಯದಾಗಿರಬಹುದು ಎಂದು ಒಪ್ಪಿಕೊಂಡರು. [೬೨]

ಅಂತಿಮವಾಗಿ, ೨ ಜುಲೈ ೨೦೦೯ ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ದೆಹಲಿ ಉಚ್ಚ ನ್ಯಾಯಾಲಯವು ೧೫೦ ವರ್ಷಗಳ ಹಳೆಯ ವಿಭಾಗವನ್ನು ರದ್ದುಗೊಳಿಸಿ, [೬೩] ವಯಸ್ಕರ ನಡುವಿನ ಸಮ್ಮತಿಯ ಸಲಿಂಗಕಾಮ ಚಟುವಟಿಕೆಗಳನ್ನು ಕಾನೂನು ಬದ್ಧಗೊಳಿಸಿತು. [೬೪] ಕಲಂ‌ನ ಸಾರವು ಮಾನವ ನಾಗರಿಕರ ಮೂಲಭೂತ ಹಕ್ಕಿಗೆ ವಿರುದ್ಧವಾಗಿದೆ ಎಂದು ಉಚ್ಚ ನ್ಯಾಯಾಲಯವು ಅದನ್ನು ಹೊಡೆದು ಹಾಕಿತು. ೧೦೫ ಪುಟಗಳ ತೀರ್ಪಿನಲ್ಲಿ, ಮುಖ್ಯ ನ್ಯಾಯಮೂರ್ತಿ ಅಜಿತ್ ಪ್ರಕಾಶ್ ಶಾ ಮತ್ತು ನ್ಯಾಯಮೂರ್ತಿ ಎಸ್.ಮುರಳೀಧರ್ ಅವರ ಪೀಠವು ತಿದ್ದುಪಡಿ ಮಾಡದಿದ್ದರೆ, ಐಪಿಸಿಯ ೩೭೭ ನೇ ಕಲಂ ಭಾರತೀಯ ಸಂವಿಧಾನದ ೧೪ ನೇ ವಿಧಿಯನ್ನು ಉಲ್ಲಂಘಿಸುತ್ತದೆ ಎಂದು ಹೇಳಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಮಾನವಾದ ಜೀವನ ಅವಕಾಶವಿದೆ ಮತ್ತು ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತದೆ ಎಂದರು.

ದ್ವಿಸದಸ್ಯ ಪೀಠವು ಇದನ್ನು ಮುಂದುವರಿಸಿತು:

If there is one constitutional tenet that can be said to be underlying theme of the Indian Constitution, it is that of 'inclusiveness'. This Court believes that Indian Constitution reflects this value deeply ingrained in Indian society, nurtured over several generations. The inclusiveness that Indian society traditionally displayed, literally in every aspect of life, is manifest in recognising a role in society for everyone. Those perceived by the majority as 'deviants' or 'different' are not on that score excluded or ostracised.

Where society can display inclusiveness and understanding, such persons can be assured of a life of dignity and non-discrimination. This was the 'spirit behind the Resolution' of which Nehru spoke so passionately. In our view, Indian Constitutional law does not permit the statutory criminal law to be held captive by the popular misconceptions of who the LGBTs are. It cannot be forgotten that discrimination is antithesis of equality and that it is the recognition of equality which will foster the dignity of every individual.[೫೦]

ಕಾನೂನನ್ನು ತಿದ್ದುಪಡಿ ಮಾಡಲು ಸಂಸತ್ತು ಆಯ್ಕೆ ಮಾಡುವವರೆಗೆ ಈ ತೀರ್ಪು ಇರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ ತೀರ್ಪಿನ ಪ್ರಕಾರ ಕಲಂ ೩೭೭ರ ನಿಬಂಧನೆಗಳನ್ನು ಒಪ್ಪಿಗೆಯಿಲ್ಲದ, ಯೋನಿ ಅಲ್ಲದ ಸಂಭೋಗ ಮತ್ತು ಅಪ್ರಾಪ್ತರೊಂದಿಗಿನ ಸಂಭೋಗಕ್ಕೆ ಹಾಗೆಯೇ ಅನ್ವಯವಾಗಿರುಸುತ್ತದೆ. [೬೩]

ದೆಹೆಲಿ ಉಚ್ಚ ನ್ಯಾಯಾಲಯ ತೀರ್ಪನ್ನು ಪ್ರಶ್ನಿಸಿ ಸರ್ವೋಚ್ಛ ನ್ಯಾಯಾಲಯಕ್ಕೆ ಒಂದು ಮೇಲ್ಮನವಿಗಳ ಸಂಗ್ರಹವನ್ನು ಸಲ್ಲಿಸಿತು. ೨೧ ಮಾರ್ಚ್ ೨೦೧೨ ರಂದು, ಸರ್ವೋಚ್ಛ ನ್ಯಾಯಾಲಯವು ಇವುಗಳ ತೀರ್ಪನ್ನು ಕಾಯ್ದಿರಿಸಿತ್ತು. [೬೫] ಆರಂಭದಲ್ಲಿ ತೀರ್ಪನ್ನು ವಿರೋಧಿಸಿದ ನಂತರ, ಅಟಾರ್ನಿ ಜನರಲ್ ಜಿಇ ವಾಹನವತಿಯವರು ದೆಹಲಿ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧ ಯಾವುದೇ ಮೇಲ್ಮನವಿ ಸಲ್ಲಿಸದಿರಲು ನಿರ್ಧರಿಸಿದರು, "[ಭಾರತೀಯ ದಂಡ ಸಂಹಿತೆಯ ಕಲಂ ೩೭೭] ಬ್ರಿಟಿಷ್ ಆಡಳಿತಗಾರರ ನೈತಿಕ ದೃಷ್ಟಿಕೋನಗಳಿಂದ ವಯಸ್ಕರ ಖಾಸಗಿಯಾದ ಸಮ್ಮತಿಯ ಲೈಂಗಿಕ ಕ್ರಿಯೆಗಳ ಆಪರಾಧಿಕರಣವನ್ನು [ ಇದನ್ನು ಉಚ್ಚ ನ್ಯಾಯಾಲಯವು ಹೊಡೆದು ಹಾಕಿತು] ಭಾರತೀಯ ಸಮಾಜದ ಮೇಲೆ ಹೇರಲಾಯಿತು." [೬೫] ಎಂದರು.

೨೦೧೩ ಸುರೇಶ್ ಕುಮಾರ್ ಕೌಶಲ್ ವಿರುದ್ಧ ನಾಜ್ ಫೌಂಡೇಶನ್

[ಬದಲಾಯಿಸಿ]

ಸುರೇಶ್ ಕುಮಾರ್ ಕೌಶಲ್ ಮತ್ತು ಇನ್ನೊಂದು v. NAZ ಫೌಂಡೇಶನ್ ಮತ್ತು ಇತರರು ೨೦೧೩ರ ಪ್ರಕರಣವಾಗಿದ್ದು, ಇದರಲ್ಲಿ ಜಿಎಸ್ ಸಿಂಘ್ವಿ ಮತ್ತು ಎಸ್.ಜೆ.ಮುಖೋಪಾಧ್ಯಾಯ ಅವರನ್ನೊಳಗೊಂಡ ದ್ವಿಸದಸ್ಯ ಸರ್ವೋಚ್ಛ ನ್ಯಾಯಾಲಯ ಪೀಠವು ದೆಹಲಿ ಉಚ್ಚ ನ್ಯಾಯಾಲಯದ ನಾಜ್ ಫೌಂಡೇಶನ್ v. ದೆಹಲಿ ಸರ್ಕಾರ NCT ಪ್ರಕರಣವನ್ನು ಅನೂರ್ಜಿತಗೊಳಿಸಿ ಭಾರತೀಯ ದಂಡ ಸಂಹಿತೆಯ ಕಲಂ ೩೭೭ ಅನ್ನು ಮರುಸ್ಥಾಪಿಸಿತು.

ಈ ತೀರ್ಪು ಮಾನಸಿಕ ಆರೋಗ್ಯ ತಜ್ಞರು ತಮ್ಮ ವೃತ್ತಿಪರರ ಅಭಿಪ್ರಾಯದ ಆಧಾರದ ಮೇಲಿನ ಪ್ರಕರಣದ ವ್ಯಾಖ್ಯಾನದೊಂದಿಗೆ ಲಿಖಿತ ಸಲ್ಲಿಕೆಗಳ ಸಂಗ್ರಹವನ್ನು ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಿಸಿದ ಹೊರತಾಗಿಯೂ ನೀಡಲಾಗಿತ್ತು. [೬೬] ಮಾನಸಿಕ ಆರೋಗ್ಯ ವೃತ್ತಿಪರರು ಆಗಾಗ್ಗೆ ತಮ್ಮ LGBT ಅಥವಾ ಕ್ವೀರ್ ರೋಗಿಗಳು ಭಾರತೀಯ ಮಾನದಂಡನೆ ಕಲಂ ೩೭೭ ಒಡ್ಡಿದ ಬೆದರಿಕೆ ಮತ್ತು ಸಾಮಾಜಿಕ ಖಂಡನೆಯಿಂದಾಗಿ ಗಮನಾರ್ಹವಾದ ಮಾನಸಿಕ ಯಾತನೆ-ಖಿನ್ನತೆ, ಆತಂಕ ಮತ್ತು ಬಹಳಷ್ಟು ಲಕ್ಷಣಗಳು ಅನುಭವಿಸುತ್ತಾರೆಂದು ಗಮನಿಸಿದರು. ಈ ಮಾನಸಿಕ ಆರೋಗ್ಯ ವೃತ್ತಿಪರರು ಭಾರತೀಯ ಮಾನದಂಡನೆ ೩೭೭ಯು LGBT ಮತ್ತು ಕ್ವೀರ್ ವ್ಯಕ್ತಿಗಳು ತಾವು "ಅಪರಾಧಿಗಳು" ಎಂದು ಭಾವಿಸುವಂತೆ ಮಾಡುತ್ತದೆ ಮತ್ತು ಈ ಸ್ಥಿತಿಯು ಅವರ ಮಾನಸಿಕ ಯಾತನೆಯ ಗಮನಾರ್ಹ ಭಾಗವಾಗಿದೆ ಎಂದು ವಾದಿಸಿದರು.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥೆ ನವಿ ಪಿಳ್ಳೆ [೬೭] ಭಾರತದಲ್ಲಿ ಒಮ್ಮತದ ಸಲಿಂಗ ಸಂಬಂಧಗಳ ಮರು-ಅಪರಾಧೀಕರಣದ ಬಗ್ಗೆ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿ, ಇದು ದೇಶಕ್ಕೆ "ಮಹತ್ವದ ಹಿಮ್ಮೊಗ ಹೆಜ್ಜೆ" ಎಂದು ಕರೆದರು. ಸಲಿಂಗಕಾಮ ಕಾನೂನುಬಾಹಿರ ಎಂಬ ಭಾರತೀಯ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಯುಎನ್ ಮುಖ್ಯಸ್ಥ ಬಾನ್ ಕಿ-ಮೂನ್ ಸಮಾನತೆಯ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಸಲಿಂಗಕಾಮಿಗಳು ಮತ್ತು ದ್ವಿಲಿಂಗಿಗಳ ವಿರುದ್ಧ ಯಾವುದೇ ತಾರತಮ್ಯವನ್ನು ವಿರೋಧಿಸಿದರು. [೬೮]

ತೀರ್ಪಿನ ನಂತರ, ಆಗಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಲಂ ೩೭೭ ಅನ್ನು ತೆಗೆದುಹಾಕುವಂತೆ ಸಂಸತ್ತಿಗೆ ಕೇಳಿದರು. ಆಕೆಯ ಮಗ ಮತ್ತು ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ಕೂಡ ಕಲಂ ೩೭೭ ರದ್ದಾಗಬೇಕೆಂದು ಬಯಸಿದ್ದರು ಮತ್ತು ಸಲಿಂಗಕಾಮಿ ಹಕ್ಕುಗಳನ್ನು ಬೆಂಬಲಿಸಿದರು. [೬೯] ಜುಲೈ ೨೦೧೪ ರಲ್ಲಿ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಐಪಿಸಿಯ ಕಲಂ ೩೭೭ರ ಬಗ್ಗೆ ಸರ್ವೋಚ್ಛ ನ್ಯಾಯಾಲಯವು ತೀರ್ಪು ಪ್ರಕಟಿಸಿದ ನಂತರವೇ ನಿರ್ಧಾರ ತೆಗೆದುಕೊಳ್ಳಬಹುದು ಎಂದು ಹೇಳಿದರು. [೭೦] ಆದಾಗ್ಯೂ, ೧೩ ಜನವರಿ ೨೦೧೫ ರಂದು, ಎನ್‌ಡಿಟಿವಿಯಲ್ಲಿ ಕಾಣಿಸಿಕೊಂಡ ಬಿಜೆಪಿ ವಕ್ತಾರ ಶೈನಾ ಎನ್‌ಸಿ, "ನಾವು [ಬಿಜೆಪಿ] ಸಲಿಂಗಕಾಮದ ನಿರಪರಾಧಿಕರಣವನ್ನು ಬೆಂಬಳಿಸುತ್ತೇವೆ. ಅದು ಪ್ರಗತಿಪರ ಮಾರ್ಗವಾಗಿದೆ." [೭೧] ಎಂದು ಹೇಳಿದ್ದರು.

೨೦೧೬ ನಾಜ್ ಫೌಂಡೇಶನ್ ಕ್ಯುರೇಟಿವ್ ಅರ್ಜಿ

[ಬದಲಾಯಿಸಿ]

೨ ಫೆಬ್ರವರಿ ೨೦೧೬ ರಂದು, ನಾಜ್ ಫೌಂಡೇಶನ್ ಮತ್ತು ಇತರರು ಸಲ್ಲಿಸಿದ ಪರಿಹಾರಿಕ ಅರ್ಜಿಯ ಅಂತಿಮ ವಿಚಾರಣೆಯು ಸರ್ವೋಚ್ಛ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿತು. ಭಾರತದ ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್ ನೇತೃತ್ವದ ತ್ರಿಸದಸ್ಯ ಪೀಠವು ಸಲ್ಲಿಸಿದ ಎಲ್ಲಾ ೮ ಪರಿಹಾರಿಕ ಅರ್ಜಿಗಳನ್ನು ಐವರು ಸದಸ್ಯರ ಸಾಂವಿಧಾನಿಕ ಪೀಠವು ಹೊಸದಾಗಿ ಪರಿಶೀಲಿಸುತ್ತದೆ ಎಂದು ಹೇಳಿತು. [೧೪]

ಗೌಪ್ಯತೆಯ ಹಕ್ಕು ತೀರ್ಪು

[ಬದಲಾಯಿಸಿ]

೨೪ ಆಗಸ್ಟ್ ೨೦೧೭ ರಂದು, ಭಾರತದ ಸರ್ವೋಚ್ಚ ನ್ಯಾಯಾಲಯವು ಗೌಪ್ಯತೆಯ ಹಕ್ಕು ತೀರ್ಪು ನೀಡಿತು. ನ್ಯಾಯಮೂರ್ತಿ ಕೆ.ಎಸ್.ಪುಟ್ಟಸ್ವಾಮಿ (ನಿವೃತ್ತ) ಮತ್ತು ಅನ್ಆರ್. vs ಯೂನಿಯನ್ ಆಫ್ ಇಂಡಿಯಾ ಅಂಡ್ ಓರ್ಸ್. ಪ್ರಕರಣದಲ್ಲಿ ಖಾಸಗಿತನದ ಹಕ್ಕು ಭಾರತೀಯ ಸಂವಿಧಾನದ ವಿಧಿ ೨೧ ಮತ್ತು ಭಾಗ III ರ ಅಡಿಯಲ್ಲಿ ರಕ್ಷಿಸಲ್ಪಟ್ಟ ಮೂಲಭೂತ ಹಕ್ಕು ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ತೀರ್ಪಿನಲ್ಲಿ ಕಲಂ ೩೭೭ ಅನ್ನು "ಗೌಪ್ಯತೆಯ ಹಕ್ಕಿನ ಮೇಲೆ ಸಾಂವಿಧಾನಿಕ ನ್ಯಾಯಶಾಸ್ತ್ರದ ವಿಕಾಸದ ಮೇಲೆ ನೇರವಾಗಿ ಹೊಂದಿರುವ ಅಸಂಗತ ಟಿಪ್ಪಣಿ" ಎಂದು ಉಲ್ಲೇಖಿಸಲಾಗಿದೆ. ೯ ನ್ಯಾಯಾಧೀಶರ ಪೀಠ ನೀಡಿದ ತೀರ್ಪಿನಲ್ಲಿ, ನ್ಯಾಯಮೂರ್ತಿ ಚಂದ್ರಚೂಡ್ (ನ್ಯಾಯಮೂರ್ತಿಗಳಾದ ಖೇಹರ್, ಅಗರ್ವಾಲ್, ಅಬ್ದುಲ್ ನಜೀರ್ ಮತ್ತು ಅವರದೆ ಲೇಖಕರು), ಸುರೇಶ್ ಕೌಶಲ್ (೨೦೧೩) ತೀರ್ಪಿನ ಹಿಂದಿನ ತಾರ್ಕಿಕತೆ ತಪ್ಪಾಗಿದೆ ಎಂದು ಹೇಳಿದರು ಮತ್ತು ನ್ಯಾಯಾಧೀಶರು ತಮ್ಮ ಭಿನ್ನಾಭಿಪ್ರಾಯವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದರು. ಜನಸಂಖ್ಯೆಯ ಒಂದು ಸಣ್ಣ ಭಾಗವು ಬಾಧಿತವಾಗಿದ್ದರೂ ಸಹ ಗೌಪ್ಯತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂಬ ನ್ಯಾಯಮೂರ್ತಿ ಚಂದ್ರಚೂಡ್ ಅವರ ಅಭಿಪ್ರಾಯವನ್ನು ನ್ಯಾಯಮೂರ್ತಿ ಕೌಲ್ ಒಪ್ಪಿಕೊಂಡರು. ಸಾಂವಿಧಾನಿಕ ಹಕ್ಕುಗಳಿಗೆ ಬಹುಸಂಖ್ಯಾತ ಪರಿಕಲ್ಪನೆಯು ಅನ್ವಯಿಸುವುದಿಲ್ಲ ಮತ್ತು ನ್ಯಾಯಾಲಯಗಳಿಗೆ ಬಹುಸಂಖ್ಯಾತವಲ್ಲದ ದೃಷ್ಟಿಕೋನದಿಂದ ವರ್ಗೀಕರಿಸಬಹುದಾದಂತಹದನ್ನು ಭಾರತದ ಸಂವಿಧಾನದ ಅಡಿಯಲ್ಲಿ ಕಲ್ಪಿಸಲಾದ ಪರಿಶೀಲನೆ ಮತ್ತು ಅಧಿಕಾರದ ಸಮತೋಲನದಲ್ಲಿ ತೆಗೆದುಕೊಳ್ಳಲು ಆಗಾಗ್ಗೆ ಕರೆ ನೀಡಲಾಗುತ್ತದೆ ಎಂದು ಅವರು ಹೇಳಿದರು. [೧೫]

Sexual orientation is an essential attribute of privacy. Discrimination against an individual on the basis of sexual orientation is deeply offensive to the dignity and self-worth of the individual. Equality demands that the sexual orientation of each individual in society must be protected on an even platform. The right to privacy and the protection of sexual orientation lie at the core of the fundamental rights guaranteed by Articles 14, 15 and 21 of the Constitution.[೧೫]

...Their rights are not "so-called" but are real rights founded on sound constitutional doctrine. They inhere in the right to life. They dwell in privacy and dignity. They constitute the essence of liberty and freedom. Sexual orientation is an essential component of identity. Equal protection demands protection of the identity of every individual without discrimination.[೧೫]

ಆದಾಗ್ಯೂ, ಪರಿಹಾರಿಕ ಅರ್ಜಿಯು (ಕಲಂ ೩೭೭ ಅನ್ನು ಪ್ರಶ್ನಿಸುವುದು) ಪ್ರಸ್ತುತ ಉಪ-ನ್ಯಾಯಾಲಯವಾಗಿರುವುದರಿಂದ, ಸಾಂವಿಧಾನಿಕ ಸಿಂಧುತ್ವವನ್ನು ಸೂಕ್ತ ಪ್ರಕ್ರಿಯೆಯಲ್ಲಿ ನಿರ್ಧರಿಸಲು ಬಿಡುವುದಾಗಿ ನ್ಯಾಯಾಧೀಶರು ಅಧಿಕಾರ ನೀಡಿದರು. ಈ ತೀರ್ಪಿನೊಂದಿಗೆ, ನ್ಯಾಯಾಧೀಶರು ೨೦೧೩ ರ ತೀರ್ಪಿನ ಹಿಂದಿನ ತಾರ್ಕಿಕತೆಯನ್ನು ಅಮಾನ್ಯಗೊಳಿಸಿದ್ದಾರೆ, ಹೀಗಾಗಿ ಕಲಂ ೩೭೭ ಅನ್ನು ಓದಲು ಮತ್ತು ೨೦೦೯ರ ಉಚ್ಚ ನ್ಯಾಯಾಲಯದ ತೀರ್ಪಿನ ಮರುಸ್ಥಾಪನೆಗೆ ಅಡಿಪಾಯ ಹಾಕಿ, ಆ ಮೂಲಕ ಸಲಿಂಗಕಾಮಿ ಲೈಂಗಿಕತೆಯನ್ನು ನಿರಪರಾಧಿಕರಿಸಲಾಗಿದೆ ಎಂದು ಅನೇಕ ಕಾನೂನು ತಜ್ಞರು ಸಲಹೆ ನೀಡಿದ್ದಾರೆ.[೭೨] [೭೩]

೨೦೧೮ ನವತೇಜ್ ಸಿಂಗ್ ಜೋಹರ್ ವಿರುದ್ಧ ಯೂನಿಯನ್ ಆಫ್ ಇಂಡಿಯಾ

[ಬದಲಾಯಿಸಿ]

೨೦೧೮ ರಲ್ಲಿ, ದಶಕಗಳ ತಳಮಟ್ಟದ ಕ್ರಿಯಾಶೀಲತೆಯ ನಂತರ, ಸರ್ವೋಚ್ಚ ನ್ಯಾಯಾಲಯವು ಪುರುಷರ ನಡುವಿನ ಖಾಸಗಿ ಸಹಮತದ ಲೈಂಗಿಕತೆಗೆ ಭಾರತೀಯ ದಂಡ ಸಂಹಿತೆಯ ಕಲಂ ೩೭೭ರ ಅನ್ವಯವು ಅಸಂವಿಧಾನಿಕ ಎಂದು ತೀರ್ಪು ನೀಡಿ ಸಲಿಂಗಕಾಮಿ ಚಟುವಟಿಕೆಯನ್ನು ನಿರಪರಾಧಿಕರಣಗೊಳಿಸಿತು. [೨೩] [೭೪]

ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಧನಂಜಯ ವೈ. ಚಂದ್ರಚೂಡ್, ಅಜಯ್ ಮಾಣಿಕ್ರಾವ್ ಖಾನ್ವಿಲ್ಕರ್, ಇಂದು ಮಲ್ಹೋತ್ರಾ ಮತ್ತು ರೋಹಿಂಟನ್ ಫಾಲಿ ನಾರಿಮನ್ ಅವರನ್ನೊಳಗೊಂಡ ಸರ್ವೋಚ್ಚ ನ್ಯಾಯಾಲಯದ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕಲಂ ೩೭೭ರ ಸಾಂವಿಧಾನಿಕತೆಯ ಸವಾಲಿನ ವಿಚಾರಣೆಯನ್ನು ಪ್ರಾರಂಭಿಸಿತು. ಕೇಂದ್ರ ಸರ್ಕಾರವು ಈ ವಿಷಯದ ಬಗ್ಗೆ ಯಾವುದೇ ನಿಲುವು ತೆಗೆದುಕೊಳ್ಳಲಿಲ್ಲ ಮತ್ತು ಕಲಂ ೩೭೭ ಅನ್ನು ನಿರ್ಧರಿಸಲು "ನ್ಯಾಯಾಲಯದ ಬುದ್ಧಿವಂತಿಕೆ" ಗೆ ಬಿಟ್ಟಿತು. ಅರ್ಜಿದಾರರು ಕಲಂ ೩೭೭ ರ ಸಾಂವಿಧಾನಿಕತೆಯ ವಿರುದ್ಧ ವಾದಿಸಲು ಲೈಂಗಿಕ ಗೌಪ್ಯತೆ, ಘನತೆ, ತಾರತಮ್ಯದ ವಿರುದ್ಧದ ಹಕ್ಕು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ಚಲಾಯಿಸಿದರು. ನಾಲ್ಕು ದಿನಗಳ ಕಾಲ ಅರ್ಜಿದಾರರ ಮನವಿಯನ್ನು ಆಲಿಸಿದ ನ್ಯಾಯಾಲಯವು ತನ್ನ ತೀರ್ಪನ್ನು ಜುಲೈ ೧೭, ೨೦೧೮ ರಂದು ಕಾಯ್ದಿರಿಸಿತ್ತು. ಪೀಠವು ತನ್ನ ತೀರ್ಪನ್ನು ೬ ಸೆಪ್ಟೆಂಬರ್ ೨೦೧೮ ರಂದು ಪ್ರಕಟಿಸಿತು. [೭೫] ತೀರ್ಪನ್ನು ಪ್ರಕಟಿಸಿದ ನ್ಯಾಯಾಲಯವು, ಸಲಿಂಗಕಾಮಿಗಳನ್ನು ಬಲಿಪಶು ಮಾಡಲು ಭಾರತೀಯ ದಂಡ ಸಂಹಿತೆಯ ಕಲಂ ಅನ್ನು ಬಳಸುವುದು ಅಸಂವಿಧಾನಿಕ ಮತ್ತು ಇನ್ನು ಮುಂದೆ ಕ್ರಿಮಿನಲ್ ಕೃತ್ಯ ಎಂದು ಹೇಳುವ ಮೂಲಕ ಕಲಮ್ ೩೭೭ ಅನ್ನು ಮರುಸ್ಥಾಪಿಸುವ ತನ್ನದೇ ಆದ ೨೦೧೩ರ ತೀರ್ಪನ್ನು ರದ್ದುಗೊಳಿಸಿತು. [೭೬] [೭೭] ತನ್ನ ತೀರ್ಪಿನಲ್ಲಿ, ಹಿಂದಿನ ಕಾನೂನನ್ನು "ತರ್ಕಬದ್ಧವಲ್ಲದ, ಅನಿಯಂತ್ರಿತ ಮತ್ತು ಅಗ್ರಾಹ್ಯ" ಎಂದು ಪರಿಗಣಿಸಿ ಸರ್ವೋಚ್ಚ ನ್ಯಾಯಾಲಯವು ವಯಸ್ಕರ ನಡುವಿನ ಸಮ್ಮತಿಯ ಲೈಂಗಿಕ ಕ್ರಿಯೆಗಳು ಅಪರಾಧವಾಗುವುದಿಲ್ಲ ಎಂದು ಹೇಳಿತು. [೭೮] [೭೯]

ದಿ ವೈರ್ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತು ಎಡ್ವರ್ಡ್ಸ್ vs ಕೆನಡಾ (AG) ನಲ್ಲಿ ಮಹಿಳೆಯರಿಗೆ ಕೆನಡಾದ ಸೆನೆಟ್‌ನಲ್ಲಿ ಕುಳಿತುಕೊಳ್ಳಲು ಅವಕಾಶ ಮಾಡಿಕೊಟ್ಟ ೧೯೨೯ರ ಪ್ರಿವಿ ಕೌನ್ಸಿಲ್‌ನ ತೀರ್ಪಿನ ನಡುವೆ ಸಮಾನಾಂತರಗಳನ್ನು ವಿವರಿಸಿತು. ಇದು ಅರ್ಜಿದಾರರನ್ನು ಕೆನಡಿಯನ್ ಫೇಮಸ್ ಫೈವ್‌ಗೆ ಹೋಲಿಸಿತು. [೮೦]

ಸಾಕ್ಷ್ಯಚಿತ್ರ

[ಬದಲಾಯಿಸಿ]

೨೦೧೧ ರಲ್ಲಿ, ಇಟಾಲಿಯನ್ ಚಲನಚಿತ್ರ ನಿರ್ಮಾಪಕ ಅಡೆಲೆ ಟುಲ್ಲಿ, ೨೦೦೯ ರಲ್ಲಿನ ಮಹತ್ವದ ತೀರ್ಪು ಮತ್ತು ಬಾಂಬೆಯಲ್ಲಿನ ಭಾರತೀಯ LGBTQ ಸಮುದಾಯದ ಆಚರಣೆಗಳನ್ನು ಅನುಸರಿಸಿ '365 Without 377' ಅನ್ನು ನಿರ್ಮಿಸಿದರು. [೮೧] ಇದು ೨೦೧೧ ರಲ್ಲಿ ಟುರಿನ್ LGBT ಫಿಲ್ಮ್ ಫೆಸ್ಟ್ ಪ್ರಶಸ್ತಿಯನ್ನು ಗೆದ್ದುಕೊಂಡಿತು [೮೨]

ಸಿಂಗಾಪುರ

[ಬದಲಾಯಿಸಿ]

ಸಿಂಗಾಪುರ್ ದಂಡ ಸಂಹಿತೆಯ ಕಲಂ ೩೭೭ ಎ ೨೯ ನವೆಂಬರ್ ೨೦೨೨ ರಂದು ಸಂಪೂರ್ಣವಾಗಿ ರದ್ದುಗೊಳ್ಳುವವರೆಗೆ ಪುರುಷರ ನಡುವಿನ ಲೈಂಗಿಕತೆಯನ್ನು ಅಪರಾಧೀಕರಿಸಲಾಗಿತ್ತು.

ಈ ನಿಬಂಧನೆಯನ್ನು ರದ್ದುಗೊಳಿಸುವುದಾಗಿ ೨೦೨೨ರ ಆಗಸ್ಟ್‌ನಲ್ಲಿ ಪ್ರಧಾನಿ ಲೀ ಸಿಯೆನ್ ಲೂಂಗ್ ಘೋಷಿಸಿದ್ದರು. [೮೩] [೮೪]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Chua, Lynette J.; Gilbert, David (2016). "State violence, human-rights violations and the case of apwint of Myanmar". Gender, Violence and the State in Asia. Taylor & Francis. ISBN 9781317325949.
  2. ೨.೦ ೨.೧ Rao, Rahul (2020). Out of Time: The Queer Politics of Postcoloniality. Oxford University Press. pp. 7–9. ISBN 9780190865535.
  3. Gupta, Alok (2008). This Alien Legacy: The Origins of "Anti-Sodomy" Laws in British Colonialism. Human Rights Watch. p. 16. ISBN 9781564324191.
  4. ೪.೦ ೪.೧ ೪.೨ ೪.೩ ೪.೪ Stoddard, Eve; Collins, John (2016). Social and Cultural Foundations in Global Studies. Taylor & Francis. p. 135. ISBN 9781317509776.
  5. McCann, Hannah; Monaghan, Whitney (2020). Queer Theory Now. Red Globe Press. p. 163. ISBN 9781352007510.
  6. ೬.೦ ೬.೧ ೬.೨ ೬.೩ Elliott, Josh (6 September 2018). "India legalized homosexuality, but many of its neighbours haven't". Global News (in ಇಂಗ್ಲಿಷ್). Retrieved 19 January 2022.
  7. Rajagopal, Krishnadas (7 September 2018). "SC decriminalises homosexuality". The Hindu – via www.thehindu.com.
  8. Pundir, Pallavi (6 September 2018). "I Am What I Am. Take Me as I Am". Vice News. Retrieved 8 September 2018.
  9. "Delhi high court decriminalizes homosexuality". www.livemint.com. 2 July 2009. Retrieved 10 July 2018.
  10. "Indian court decriminalises homosexuality in Delhi". the Guardian (in ಇಂಗ್ಲಿಷ್). Associated Press. 2 July 2009. Retrieved 10 July 2018.
  11. Reuters Editorial. "Delhi High Court overturns ban on gay sex". IN (in Indian English). Archived from the original on 10 ಜುಲೈ 2018. Retrieved 10 July 2018. {{cite news}}: |last= has generic name (help)
  12. Monalisa (11 December 2013). "Policy". Livemint. Retrieved 10 July 2018.
  13. Venkatesan, J. (11 December 2013). "Supreme Court sets aside Delhi HC verdict decriminalising gay sex". The Hindu (in Indian English). ISSN 0971-751X. Retrieved 10 July 2018.
  14. ೧೪.೦ ೧೪.೧ "Supreme Court agrees to hear petition on Section 376, refers matter to five-judge bench". 2 February 2016. Retrieved 2 February 2016.
  15. ೧೫.೦ ೧೫.೧ ೧೫.೨ ೧೫.೩ "Right to Privacy Judgement" (PDF). Supreme Court of India. 24 August 2017. pp. 121, 123–24. Archived from the original (PDF) on 28 August 2017.
  16. Balakrishnan, Pulapre (25 August 2017). "Endgame for Section 377?". The Hindu (in Indian English). ISSN 0971-751X. Retrieved 10 July 2018.
  17. "Supreme Court rights old judicial wrongs in landmark Right to Privacy verdict, shows State its rightful place". www.firstpost.com. 29 August 2017. Retrieved 10 July 2018.
  18. "Right to Privacy Judgment Makes Section 377 Very Hard to Defend, Says Judge Who Read It Down". The Wire. Retrieved 10 July 2018.
  19. Judgment, par. 156.
  20. "Supreme Court Scraps Section 377; 'Majoritarian Views Cannot Dictate Rights,' Says CJI". The Wire. Retrieved 6 September 2018.
  21. "Section 377 in The Indian Penal Code". Indian Kanoon. Retrieved 2017-10-30.
  22. "The Indian Penal Code, 1860" (PDF). Chandigarh District Court. Archived from the original (PDF) on 14 January 2007. Retrieved 30 October 2017.
  23. ೨೩.೦ ೨೩.೧ ೨೩.೨ ೨೩.೩ Hans, Namit (14 February 2017). "Increasing support for gay rights from BJP leaders. A rainbow in sight?". Catch News. Retrieved 3 November 2017.
  24. "HC pulls up government for homosexuality doublespeak". India Today. 26 September 2008.
  25. "Rare unity: Religious leaders come out in support of Section 377". DNAIndia.com. 12 December 2013. Retrieved 30 December 2017.
  26. "Section 377 and the law: What courts have said about homosexuality over time". hindustantimes.com/ (in ಇಂಗ್ಲಿಷ್). 2018-02-05. Retrieved 2018-09-24.
  27. "Gay sex is immoral and can't be decriminalised, Govt tells HC". outlookindia.com/. Retrieved 2018-09-24.
  28. "Section 389 in The Indian Penal Code". IndianKanoon.org. Retrieved 30 December 2017.
  29. Thomas, Shibu (29 September 2016). "14% of those arrested under section 377 last year were minors". The Times Of India. Retrieved 4 November 2017.
  30. India: Repeal Colonial-Era Sodomy Law, report from Human Rights Watch, 11 January 2006.
  31. "Archived copy". Archived from the original on 25 July 2009. Retrieved 2 July 2009.{{cite web}}: CS1 maint: archived copy as title (link)
  32. "Archived copy". Archived from the original on 2 February 2007. Retrieved 5 February 2007.{{cite web}}: CS1 maint: archived copy as title (link)
  33. Ramesh, Randeep (18 September 2006). "India's literary elite call for anti-gay law to be scrapped". The Guardian. London. Retrieved 1 September 2007.
  34. Kounteya Sinha (9 August 2008). "Legalise homosexuality: Ramadoss". The Times of India. Archived from the original on 25 October 2012. Retrieved 2 July 2009.
  35. Vikram Doctor (2 July 2008). "Reverse swing: It may be an open affair for gays, lesbians". The Economic Times. Retrieved 2 July 2009.
  36. Shibu Thomas (25 July 2008). "Unnatural-sex law needs relook: Bombay HC". The Times of India. Retrieved 12 February 2009.
  37. "Ban on gay sex violates international law". Reuters. 12 December 2013. Archived from the original on 8 ಸೆಪ್ಟೆಂಬರ್ 2018. Retrieved 4 November 2017.
  38. Rameshan, Radhika (13 December 2011). "BJP comes out, vows to oppose homosexuality". The Telegraph. Archived from the original on December 16, 2013.
  39. Jyoti, Dhrubo (12 December 2013). "Political Leaders React To Supreme Court Judgement On Sec 377". Gaylaxy. Archived from the original on 11 May 2014. Retrieved 3 November 2017.
  40. "Homosexuality Is Unethical And Immoral: Samajwadi Party". News 18. 12 December 2013. Retrieved 3 November 2017.
  41. "Gay sex is immoral and can't be decriminalised, Govt tells HC". www.outlookindia.com. Retrieved 11 September 2018.
  42. "Being gay is against Hindutva, it needs a cure: BJP MP Subramanian Swamy". The Times of India (in ಇಂಗ್ಲಿಷ್). 10 July 2018. Retrieved 15 September 2020.
  43. "Section 377: Homosexuality against Hindutva, cannot celebrate it, says BJP leader Subramanian Swamy | India News". www.timesnownews.com (in ಬ್ರಿಟಿಷ್ ಇಂಗ್ಲಿಷ್). Retrieved 2019-04-11.
  44. "Indian Union Muslim League opposes Supreme Court verdict, says it is against Indian culture". Times of India.
  45. Roy, Sandip (3 February 2016). "The BJP And Its 377 Problem". HuffPost. Retrieved 3 November 2017.
  46. "BJP supports decriminalization of homosexuality: Shaina NC". 14 January 2015.
  47. "Statements of Sonia, Rahul Gandhi and Kapil Sibal on Section 377 exposes character of Congress leaders: Baba Ramdev". DNAIndia.com. 13 December 2013. Retrieved 30 December 2017.
  48. "Court should take relook at Section 377 after today's verdict: Chidambaram". United News of India. 24 August 2017. Retrieved 4 November 2017.
  49. Tiwari, Ravish (19 March 2016). "Section 377: Unlike RSS, BJP shies away from taking a stand on homosexuality". The Economic Times. Retrieved 3 November 2017.
  50. ೫೦.೦ ೫೦.೧ "Naz Foundation v. NCT of Delhi" (PDF). Delhi High Court. Archived from the original (PDF) on 26 ಆಗಸ್ಟ್ 2009. Retrieved 2 ಜುಲೈ 2009.
  51. "Section 377: Where does each party stand?". The News Minute. 29 November 2015. Retrieved 3 November 2017.
  52. ೫೨.೦ ೫೨.೧ "Shashi Tharoor's bill to decriminalise homosexuality defeated in Lok Sabha". IndianExpress.com. 18 December 2015. Retrieved 30 December 2017.
  53. "BJP thwarting Bill on gays: Tharoor". The Hindu. 11 March 2016. Retrieved 22 May 2016.
  54. "Chronology: 8-year-long legal battle for gay rights". CNN-IBN. Archived from the original on 5 July 2009. Retrieved 2 July 2009.
  55. Kian Ganz (2 July 2009). "Lawyers Collective overturns anti-gay law". legallyindia.com. Retrieved 9 April 2011.
  56. Sheela Bhatt (3 February 2006). "Gay Rights is matter of Public Interest: SC". Rediff News. Retrieved 7 July 2009.
  57. Shibu Thomas (20 May 2008). "Delhi HC to take up PIL on LGBT rights". The Times of India. Archived from the original on 25 October 2012. Retrieved 7 July 2009.
  58. "Section 377: The famous and fearless 5 who convinced SC - Times of India ►". The Times of India. Retrieved 2018-09-26.
  59. Schultz, Kai (2 June 2018). "Gay in India, Where Progress Has Come Only With Risk". The New York Times (in ಇಂಗ್ಲಿಷ್). Retrieved 2018-09-26.
  60. "Centre divided on punishment of homosexuality". DNA.
  61. "Delhi high court all set to rule on same-sex activity petition - Livemint". www.Livemint.com. Retrieved 30 December 2017.
  62. "Moily signals rethink on anti-gay law". The Times of India. 12 June 2009. Archived from the original on 25 October 2012. Retrieved 7 July 2009.
  63. ೬೩.೦ ೬೩.೧ "Delhi High Court legalises consensual gay sex". CNN-IBN. Archived from the original on 5 July 2009. Retrieved 2 July 2009.
  64. "Gay sex decriminalised in India". BBC. 2 July 2009. Retrieved 2 July 2009.
  65. ೬೫.೦ ೬೫.೧ "Verdict reserved on appeals in gay sex case". The Hindu. New Delhi, India. 27 March 2012. Retrieved 3 October 2012.
  66. Shesadri, Shekha; et al. "Mental Health Professionals--Written Submissions" (PDF). Retrieved March 22, 2021.
  67. "United Nations Criticizes SC Verdict on Sec 377". enewspaper of India. December 12, 2013. Archived from the original on February 21, 2014. Retrieved March 22, 2021.
  68. "UN chief Ban Ki-moon calls for equality for lesbians, gays and bisexuals". The Economic Times. 12 December 2013. Archived from the original on December 16, 2013. Retrieved March 22, 2021.
  69. "Rahul Gandhi too wants Section 377 to go, supports gay rights". India Today Online New Delhi. December 12, 2013. Retrieved March 22, 2021.
  70. Press Trust of India (July 22, 2014). "No plans to amend Section 377 till SC decision: Modi govt". The Indian Express. Retrieved March 22, 2021.
  71. Ratnam, Dhamini (14 January 2015). "BJP supports decriminalization of homosexuality: Shaina NC". Mint. Retrieved March 22, 2021.
  72. "Legal experts on 377 and Right to Privacy". 24 August 2017. Retrieved 24 August 2017.
  73. "The Hindu on 377 and Right to Privacy". The Hindu. 25 August 2017.
  74. "India Just Decriminalized Gay Sex". BuzzFeed News (in ಇಂಗ್ಲಿಷ್). Retrieved 2018-09-06.
  75. "Section 377 Verdict By Supreme Court Tomorrow: 10-Point Guide". NDTV.com. Retrieved 5 September 2018.
  76. "One India, Equal In Love: Supreme Court Ends Section 377". NDTV.com. Retrieved 6 September 2018.
  77. "India decriminalises gay sex in landmark verdict". www.aljazeera.com. Retrieved 6 September 2018.
  78. "'Gay sex is not a crime,' says Supreme Court in historic judgment". The Times of India. Retrieved 6 September 2018.
  79. "NAVTEJ SINGH JOHAR v. UNION OF INDIA MINISTRY OF LAW AND JUSTICE SECRETARY. [2018] INSC 746 (6 September 2018)". Legal Information Institute of India. Retrieved 1 April 2020.
  80. "From Canada to India, 'Valiant Five' Have Secured a Marginalised Group's Rights". The Wire. Retrieved 12 September 2018.
  81. "365 without 377 - Adele Tulli". www.queerdocumentaries.com (in ಇಂಗ್ಲಿಷ್). Archived from the original on 14 ಮೇ 2019. Retrieved 14 May 2019.
  82. Paternò, Cristiana (11 February 2019). "Adele Tulli: "Italy is a lab for gender"". news.cinecitta.com. Archived from the original on 14 ಮೇ 2019. Retrieved 14 May 2019.
  83. "NDR 2022: Govt to repeal Section 377A, amend Constitution to protect marriage definition from legal challenges". TODAY (in ಇಂಗ್ಲಿಷ್). Retrieved 2022-08-21.
  84. Auto, Hermes (2022-08-21). "NDR 2022: Govt will repeal Section 377A, decriminalise sex between men | The Straits Times". www.straitstimes.com (in ಇಂಗ್ಲಿಷ್). Retrieved 2022-08-21.

ಬಾಹ್ಯ ಕೊಂಡಿಗಳು

[ಬದಲಾಯಿಸಿ]