ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಆಸ್ಕರ್‌ ಫೆರ್ನಾಂಡಿಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಸ್ಕರ್‌ ಫೆರ್ನಾಂಡಿಸ್
೪ ಮೇ ೨೦೦೪ರಂದು ನವದೆಹಲಿಯಲ್ಲಿ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ (ಸ್ವತಂತ್ರ) ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸುತ್ತಿರುವ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್

ದ ಯಂಗ್‌ ಇಂಡಿಯಾದ ನಿರ್ದೇಶಕ
ಅಧಿಕಾರ ಅವಧಿ
೨೨ ಜವವರಿ ೨೦೧೧ – ೧೩ ಸೆಪ್ಟೆಂಬರ್ ೨೦೨೧

ನಿರ್ದೇಶಕ, ದ ಅಸೋಸಿಯೇಟೆಡ್‌ ಜರ್ನಲ್ಸ್‌ ಪ್ರೈ. ಲಿಮಿಟೆಡ್
ಅಧಿಕಾರ ಅವಧಿ
೧೭ ಜೂನ್‌ ೨೦೧೦ – ೧೩ ಸೆಪ್ಟೆಂಬರ್ ೨೦೨೧

ಅಧಿಕಾರ ಅವಧಿ
೧ ಜುಲೈ ೧೯೯೮ – ೧೩ ಸೆಪ್ಟೆಂಬರ್ ೨೦೨೧
ಮತಕ್ಷೇತ್ರ ಕರ್ನಾಟಕ

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ
ಅಧಿಕಾರ ಅವಧಿ
೧೭ ಜೂನ್‌ ೨೦೧೩ – ೨೬ ಮೇ ೨೦೧೪
ಪ್ರಧಾನ ಮಂತ್ರಿ ಮನಮೋಹನ್‌ ಸಿಂಗ್
ಪೂರ್ವಾಧಿಕಾರಿ ಸಿ.ಪಿ.ಜೋಷಿ
ಉತ್ತರಾಧಿಕಾರಿ ನಿತಿನ್‌ ಗಢ್ಕರಿ

ಅಧಿಕಾರ ಅವಧಿ
೧೮ ಜನವರಿ ೧೯೮೦ – ೧೦ ಮೇ ೧೯೯೬
ಪೂರ್ವಾಧಿಕಾರಿ ಟಿ.ಎ.ಪೈ
ಉತ್ತರಾಧಿಕಾರಿ ಐ.ಎಮ್‌ ಜಯರಾಮ ಶೆಟ್ಟಿ
ಮತಕ್ಷೇತ್ರ ಉಡುಪಿ ಲೋಕಸಭಾ ಕ್ಷೇತ್ರ
ವೈಯಕ್ತಿಕ ಮಾಹಿತಿ
ಜನನ (1941-03-27) ೨೭ ಮಾರ್ಚ್ ೧೯೪೧ (ವಯಸ್ಸು ೮೩)
ಉಡುಪಿ
ಮರಣ 13 September 2021(2021-09-13) (aged 80)[]
ಮಂಗಳೂರು,ಕರ್ನಾಟಕ
ರಾಷ್ಟ್ರೀಯತೆ ಭಾರತೀಯ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಬ್ಲಾಸಮ್‌ ಫೆರ್ನಾಂಡಿಸ್
ಮಕ್ಕಳು
ವಾಸಸ್ಥಾನ ಅಂಬಲಪಾಡಿ, ಉಡುಪಿ

ಆಸ್ಕರ್‌ ಫೆರ್ನಾಂಡಿಸ್, (೨೭ ಮಾರ್ಚ್‌ ೧೯೪೧ - ೧೩ ಸೆಪ್ಟೆಂಬರ್ ೨೦೨೧) ಓರ್ವ ಭಾರತೀಯ ರಾಜಕಾರಣಿ. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರಸ್‌ನ ಹಿರಿಯ ನಾಯಕರಲ್ಲೊಬ್ಬರಾಗಿದ್ದರು. ಮೂಲತಃ ಕರ್ನಾಟಕ ರಾಜ್ಯದ ಉಡುಪಿಯವರು.[]

ಜನನ ಹಾಗೂ ಕೌಟುಂಬಿಕ ಹಿನ್ನಲೆ

[ಬದಲಾಯಿಸಿ]

ಆಸ್ಕರ್‌ ಫೆರ್ನಾಂಡಿಸ್ ಅವರು ಮಾರ್ಚ್‌ ೨೭ ೧೯೧೧ರಂದು ಉಡುಪಿ ಜಿಲ್ಲೆಯ ಉದ್ಯಾವರಕ್ಕೆ ಸೇರಿದ ಮಂಗಳೂರು ಕ್ಯಾಥೋಲಿಕ್‌ ಸಂಪ್ರದಾಯವನ್ನು ಅನುಸರಿಸುವ ಕುಟುಂಬ ಒಂದರಲ್ಲಿ ಜನಿಸಿದರು. ಇವರು ತನ್ನ ಕುಟುಂಬದ ೧೨ ಮಕ್ಕಳಲ್ಲಿ ಒಬ್ಬರಾಗಿದ್ದರು. ಆಸ್ಕರ್‌ ಅವರ ತಂದೆ ರೂಕ್‌ ಫೆರ್ನಾಂಡಿಸ್‌ ಸರ್ಕಾರಿ ಸಂಯುಕ್ತ ಪದವಿಪೂರ್ವ ಕಾಲೇಜಿನ ಮುಖ್ಯಸ್ಥರಾಗಿದ್ದರಷ್ಟೇ ಅಲ್ಲದೆ ಮಣಿಪಾಲ ತಾಂತ್ರಿಕ ವಿದ್ಯಾಲಯದ ಮೊದಲ ಅಧ್ಯಕ್ಷರಾಗಿದ್ದರು. ಹಾಗೂ ಹಾಗೂ ತಾಯಿ ಲಿಯೋನಿಸ್ಸಾ ಎಮ್‌ ಫೆರ್ನಾಂಡಿಸ್‌,ಮ್ಯಾಜೀಸ್ಟ್ರೇಟ್‌ ಆಗಿ ನೇಮಕಗೊಂಡ ಭಾರತದ ಮೊದಲ ಮಹಿಳೆಯಾಗಿದ್ದರು. ಇವರ ಕುಟುಂಬ ಕ್ಯಾಥೋಲಿಕ್‌ ಸಮಫ್ರದಾಯವನ್ನು ಪ್ರಬಲವಾಗಿ ಅನುಸರಿಸುವ ಪ್ರುಭು-ಫೆರ್ನಾಂಡಿಸ್‌ ಸಮುದಾಯಕ್ಕೆ ಸೇರಿದ್ದದಾಗಿತ್ತು.[] ಆಸ್ಕರ್‌ ಅವರು ಬಾಲ್ಯದಿಂದಲೇ ಚರ್ಚ್‌ನ ಚಟುವಟಿಕೆಗಳಲ್ಲೆ ಮುಂಚೂಣಿಯಲ್ಲಿದ್ದರು. ಬಾಲ್ಯದಲ್ಲಿ ಚರ್ಚಿನ ಆಲ್ಟರ್‌ ಬಾಯ್‌ ಆಗಿದ್ದ ಇವರು, ಯೌವ್ವನದಲ್ಲಿ ಚರ್ಚಿನ ಎಲ್ಲಾ ಕೆಲಸಗಳಲ್ಲಿ ಸಕ್ರಿಯರಾಗಿದ್ದರು. ೨೦೦೨ರಲ್ಲಿ ಆಸ್ಕರ್‌, ತಮ್ಮ ತಂದೆ ರೂಕ್‌ ಅವರ ಸ್ಮರಣಾರ್ಥ ಉಡುಪಿಯ ಅಂಬಲಪಾಡಿಯಲ್ಲಿ ಗ್ಲೊವಿನ್‌ ಸ್ಟಾರ್‌ ಅಕಾಡೆಮಿ ಎಂಬ ಸಂಸ್ಥೆಯನ್ನು ಉದ್ಘಾಟಿಸಿದರು.

ರಾಜಕೀಯ ಜೀವನ

[ಬದಲಾಯಿಸಿ]

೧೯೮೦ರಲ್ಲಿ ಭಾರತದ ಏಳನೇ ಲೋಕಸಭೆಗೆ ಪ್ರತಿನಿಧಿಯಾಗಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾದರು. ಬಳಿಕ ೧೯೮೪,೧೯೮೯,೧೯೯೧ ಹಾಗೂ ೧೯೯೬ರವರೆಗೂ ಲೋಕಸಭಾ ಸದಸ್ಯರಾಗಿ ಉಡುಪಿ ಲೋಕಸಭಾ ಕ್ಷೇತ್ರದಿಂಧ ಸತತವಾಗಿ ಚುನಾಯಿತರಾದರು.೧೯೯೮ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದರು. ತಮ್ಮ ಸದಸ್ಯತ್ವದ ಅವಧಿ ೨೦೦೪ರಲ್ಲಿ ಮುಗಿದಾಗ ರಾಜ್ಯಸಭೆಗೆ ಮರು ಆಯ್ಕೆಗೊಂಡರು.[]ಭಾರತ ಸರ್ಕಾರದ ಕೆಂದ್ರ ಸಂಪುಟದಲ್ಲಿ ಹಲವಾರು ಖಾತೆಗಳ ಸಂಪುಟ ಹಾಗೂ ರಾಜ್ಯ ದರ್ಜೆಯ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿವಿಧ ಅವಧಿಗಳಲ್ಲಿ ಪ್ರಮುಖವಾಗಿ ಸಾರಿಗೆ ಖಾತೆ,ಅಂಕಿ ಅಂಶ ಖಾತೆ, ಯುವಜನ ಮತ್ತು ಕ್ರೀಡಾ ಖಾತೆ, ಕಾರ್ಮಿಕ ಸಚಿವಾಲಯ, ಅನಿವಾಸಿ ಭಾರತೀಯರ ಸಚಿವಾಲಯಗಳ ಸಚಿವರಾಗಿದ್ದರು. ಎರಡು ಅವಧಿಗಳ ಕಾಲ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿಯೂ ಸದಸ್ಯರಾಗಿದ್ದರು. ಬಾರತದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರಿಗೆ ಆಪ್ತರಾಗಿದ್ದ ಇವರು, ರಾಜೀವ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. ಕಾಂಗ್ರಸ್‌ ಪಕ್ಷದ ಕೇಂದ್ರ ಚುನಾವಣಾ ಸಮಿತಿಯ ಅಧ್ಯಕ್ಷರಾಗಿದ್ದರು, ಜೊತೆಗೆ ಒಂದು ಅವಧಿಗೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿಯೂ ಆಗಿದ್ದರು[]. ಕಾಗ್ರೆಸ್‌ ಪಕ್ಷದ ಪ್ರಮುಖ ನಿರ್ಧಾರಗಳಿಗೆ ಇವರ ಸಲಹೆಗಳೂ ಪ್ರಮುಖ ಪಾತ್ರವಹಿಸುತ್ತಿದ್ದವು.

ವೈವಾಹಿಕ ಜೀವನ

[ಬದಲಾಯಿಸಿ]

೧೯೮೧ ಆಗಸ್ಟ್‌ ೨೬ರಂದು ಬ್ಲಾಸಮ್‌ ಮಥಾಯಿಸ್‌ ಪ್ರಭು ಅವರೊಂದಿಗೆ ವಿವಾಹವಾದರು.ವೈವಾಹಿಕ ಜೀವನದಿಂದ ಓಶನ್ ಎಂಬ ಪುತ್ರನನ್ನು ಹಾಗೂ ಓಶಾನಿ ಎಂಬ ಪುತ್ರಿಯನ್ನು ಪಡೆದಿದ್ದಾರೆ.[] ಮಗ ಓಶನ್ ಅವರ ವಿವಾಹ ‌ಫ್ರಾಜೀಲ್‌ ಕ್ವಾಡ್ರಸ್ ಅವರೊಂದಿಗೆ ಹಾಗೂ ಪುತ್ರಿ ಒಶಾನಿ ಅವರ ವಿವಾಹ ಮಾರ್ಕ್‌ ಸಾಲ್ಡಾನ ಅವರೊಂದಿಗೆ ಜರುಗಿದೆ.[]

ಸೆಪ್ಟೆಂಬರ್‌ ೧೩, ೨೦೨೧ರಂದು ಅನಾರೋಗ್ಯದ ಕಾರಣ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.[]

ಉಲ್ಲೇಖಗಳು

[ಬದಲಾಯಿಸಿ]
  1. "Congress veteran and former Union minister Oscar Fernandes passes away". Vinobha K T. The Times of India. 13 September 2021. Retrieved 13 September 2021.
  2. https://www.india.gov.in/my-government/indian-parliament/shri-oscar-fernandes
  3. Lobo 2000, p. 250
  4. https://www.outlookindia.com/photos/people/oscar-fernandes/3921?photo-123564
  5. https://economictimes.indiatimes.com/news/politics-and-nation/rajiv-gandhi-manmohan-singh-laid-foundation-of-indias-growth-oscar-fernandes/articleshow/45215569.cms
  6. "ಆರ್ಕೈವ್ ನಕಲು". Archived from the original on 2021-07-24. Retrieved 2021-07-24.
  7. https://www.daijiworld.com/news/newsDisplay.aspx?newsID=161087
  8. https://www.indiatvnews.com/news/india/oscar-fernandes-senior-congress-leader-rajya-sabha-mp-passes-away-in-mangaluru-733674