ಯೋಗಿ ಆದಿತ್ಯನಾಥ್‌

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನಾಥ ಪಂಥದ ಯೋಗಿ ಆದಿತ್ಯನಾಥ್[ಬದಲಾಯಿಸಿ]

ಮಹಾಂತ ಯೋಗಿ ಆದಿತ್ಯನಾಥ್ (ಅಜಯ್ ಸಿಂಗ್: ಜನನ: 5 ಜೂನ್ 1972)[೧]). ಭಾರತೀಯ ಅರ್ಚಕ ಮತ್ತು ನಾಥ ಪಂಥದ ಧಾರ್ಮಿಕ ಮುಖ್ಯಸ್ಥ. "ಕಠೋರ ಹಿಂದುತ್ವದ (ಹಿಂದೂ ರಾಷ್ಟ್ರೀಯತೆಯ)" ಮೂರ್ತರೂಪದ ರಾಜಕಾರಣಿ ಇವರು ಉತ್ತರ ಪ್ರದೇಶ ರಾಜ್ಯದ ಪ್ರಸ್ತುತ ಮುಖ್ಯಮಂತ್ರಿ. ಮುಖ್ಯಮಂತ್ರಿ ಆಗಿರುವ ಮೊದಲು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತಾರಾ ವರ್ಚಸ್ಸಿನ ಚಳುವಳಿಗಾರ. 1998ರಿಂದ ಸತತ ಐದು ಅವಧಿಗೆ ಅವರು ಉತ್ತರ ಪ್ರದೇಶದ ಗೋರಕ್ಪುರ ಕ್ಷೇತ್ರದ, ಸಂಸತ್ ಸದಸ್ಯರಾಗಿದ್ದಾರೆ. ಗೋರಕ್ಪುರದ ಹಿಂದೂ ದೇವಾಲಯದ ಅರ್ಚಕರಾಗಿದ್ದರು. ಅವರ ಆಧ್ಯಾತ್ಮಿಕ ಗುರು "ತಂದೆ" (ಸಾಕೇತಿಕ) ಮಹಂತ ಅವಿದ್ಯಾನಾಥರು. ಸೆಪ್ಟೆಂಬರ್ 2014 ರಲ್ಲಿ ಗೋರಕನಾಥ ಮಠದ ಮಹಾಂತ ಅವಿದ್ಯಾನಾಥರು ಮರಣಾನಂತರ, ಆದಿತ್ಯನಾಥ್ ಮಹಾಂತ ಸಹ ಆಗಿದ್ದಾರೆ. ಅಥವಾ ಮುಖ್ಯಸ್ಥರಾಗಿರುತ್ತಾರೆ. ಅವರು ‘ಹಿಂದೂ ಯುವ ವಾಹಿನಿ’, ಒಂದು ಯುವ ಸಂಘಟನೆಯು ಸ್ಥಾಪಕರು. ಅದು ಕೋಮು ಹಿಂಸೆಯಲ್ಲಿ ತೊಡಗಿದೆ ಎಂಬ ದೂರಿದೆ. [೨] [೩]

ಆರಂಭಿಕ ಜೀವನ ಮತ್ತು ಶಿಕ್ಷಣ[ಬದಲಾಯಿಸಿ]

 • ಆರಂಭಿಕ ಜೀವನ ಮತ್ತು ಶಿಕ್ಷಣ
 • ಯೋಗಿ ಆದಿತ್ಯನಾಥ್ ಅಜಯ್ ಸಿಂಗ್ ಬಿóಷ್ಟ್ ಒಂದು ಗಡ್ವಾಲಿ ರಜಪೂತ್ ಕುಟುಂಬದಲ್ಲಿ 5 ಜೂನ್ 1972 ರಲ್ಲಿ ಉತ್ತರಖಂಡ್ ದ ಪೌರಿ ಗಡ್ವಾಲ್ ಜಿಲ್ಲೆಯಲ್ಲಿರುವ ಪಂಚೂರ್ ಹಳ್ಳಿಯಲ್ಲಿ, (ಮೊದಲಿನ ಉತ್ತರ ಪ್ರದೇಶ) ಜನಿಸಿದರು. ಅವರ ತಂದೆ ಆನಂದ್ ಸಿಂಗ್ ಬಿಷ್ಟ್ ಒಬ್ಬ ಫಾರೆಸ್ಟ್ ರೇಂಜರ್ ಆಗಿದ್ದರು ಅಜಯ್ ಸಿಂಗ್ ಉತ್ತರಾಖಂಡದಲ್ಲಿ ರವ ಶ್ರೀನಗರದ, ಹೇಮ್ವತಿ ನಂದನ್ ಬಹುಗುಣ ಗರ್ವಾಲ್ ವಿಶ್ವವಿದ್ಯಾಲಯದಿಂದ ಗಣಿತದಲ್ಲಿ ತಮ್ಮ ಬ್ಯಾಚಲರ್ ಪದವಿ ಮುಗಿಸಿದರು
 • ಅಜಯ್ ಸಿಂಗ್ ಅಯೋಧ್ಯೆಯಲ್ಲಿ ರಾಮ ಮಂದಿರ ಚಳುವಳಿ ಸೇರಲು ಸುಮಾರು 1990ರಲ್ಲಿ ಮನೆ ಬಿಟ್ಟರು. ಅವರು ಮಹಾಂತ ಆವೈದ್ಯನಾಥ ಗೋರಕನಾಥ ಮಠದ ಪ್ರಧಾನ ಅರ್ಚಕ ಪ್ರಭಾವಕ್ಕೆ ಒಳಗಾಗಿ , ಅವರ ಶಿಷ್ಯರಾದರು. ಅದಾದ ನಂತರ ಅವರು ತಮ್ಮ ಹೆಸರನ್ನು 'ಯೋಗಿ ಆದಿತ್ಯನಾಥ್' ಮತ್ತು ಮಹಾಂತ ಅವಿದ್ಯಾನಾಥ ಗೋರಕನಾಥರ ಉತ್ತರಾಧಿಕಾರಿಯಾಗಿ ಯೋಜಿಸಲಾಗಿತ್ತು. ನಂತರ ಗೋರಕ್ಪುರದಲ್ಲಿದ್ದರೂ, ಆದಿತ್ಯನಾಥ್ ಸಾಮಾನ್ಯವಾಗಿ ಮೂಲದ ತನ್ನ ಪೂರ್ವಿಕರ ಗ್ರಾಮಕ್ಕೆ, ಭೇಟಿಕೊಡುತ್ತಿದ್ದರು. 1998 ರಲ್ಲಿ ಅಲ್ಲಿ ಒಂದು ಶಾಲೆಯನ್ನು ಸ್ಥಾಪಿಸಿದರು.[೪]

ಜೀವನ ವಿವರ[ಬದಲಾಯಿಸಿ]

ಸನ್ಯಾಸ ದೀಕ್ಷೆ[ಬದಲಾಯಿಸಿ]

 • ರಾಜಪುತ್‌ ಮನೆತನದಲ್ಲಿ 1972ರ ಜೂನ್ 5ರಂದು ಉತ್ತರಾಖಂಡ್‌‌ನ ಗಡ್ವಾಲ್ ಜಿಲ್ಲೆಯಲ್ಲಿ ಯೋಗಿ ಜನಿಸಿದ ಇವರ ಮೂಲ ಹೆಸರು ಅಜಯ್‌ ಸಿಂಗ್‌. ಬಿಎಸ್ಸಿ ಪದವೀಧರಾದ ಅಜಯ್‌ ಸಿಂಗ್‌ ತಮ್ಮ 22ನೇ ವಯಸ್ಸಿಗೆ ಮನೆ ತೊರೆದಿದ್ದರು. ತಮ್ಮ ಪರಿವಾರವನ್ನು ತೊರೆದು ಗೋರಖ್‌ಪುರಕ್ಕೆ ಬಂದ ಅವರು ಇಲ್ಲಿ ಸನ್ಯಾಸ ಜೀವನದತ್ತ ಒಲವು ಹೊಂದಿದರು. ಅಂತೆಯೇ 1994ರಲ್ಲಿ ಸನ್ಯಾಸತ್ವವನ್ನು ಸ್ವೀಕರಿಸಿದರು.

ರಾಮಜನ್ಮಭೂಮಿ ಚಳವಳಿಯಲ್ಲಿ[ಬದಲಾಯಿಸಿ]

 • ಆದಿತ್ಯನಾಥ್ ಪದವಿ ಮುಗಿಯುವ ಹೊತ್ತಿಗೆ ದೇಶದಲ್ಲಿ, ಅದರಲ್ಲೂ ಉತ್ತರ ಪ್ರದೇಶದಲ್ಲಿ ರಾಮ ಜನ್ಮಭೂಮಿ ಹೋರಾಟ ಉತ್ತುಂಗದಲ್ಲತ್ತು. ಸಹಜವಾಗಿ ಇದು ಆದಿತ್ಯನಾಥ್ ಮೇಲೆಯೂ ಪ್ರಭಾವ ಬೀರಿತ್ತು.1990ರಲ್ಲಿ ರಾಮ ಜನ್ಮಭೂಮಿ ಹೋರಾಟದಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದ ಬಿಜಿಪಿಯ ಮಾಜಿ ಸಂಸತ್ ಸದಸ್ಯ ಮಹಾಂತಾ ಅವಿದ್ಯಾನಾಥ್ ಸಂಪರ್ಕಕ್ಕೆ ಬರುತ್ತಾರೆ ಯೋಗಿ. ಅಲ್ಲಿಂದ ಅವರ ಬದುಕಿನ ಎರಡನೇ ಅಧ್ಯಾಯ ತೆರೆದುಕೊಳ್ಳುತ್ತದೆ. ಮಹಾಂತಾ ಅವಿದ್ಯಾನಾಥ್ ತಮ್ಮ ಉತ್ತರಾಧಿಕಾರಿ ಪಟ್ಟವನ್ನು ಯೋಗಿ ಆದಿತ್ಯನಾಥ್ ಗೆ ದಯಪಾಲಿಸಿದ್ದರು. ಅಲ್ಲಿಂದ ಮುಂದಿನದು ಯೋಗಿಯ ಶಕೆ. ತಮ್ಮ ಉದ್ರೇಕ ಭಾಷಣದ ಮೂಲಕ ವಿವಾದಿತ ಹಿಂದೂ ನಾಯಕರಾಗಿ ಆದಿತ್ಯನಾಥ್ ಉದಯಿಸಿದರು.

ಸಂಸತ್ ಸದಸ್ಯ[ಬದಲಾಯಿಸಿ]

 • 1998ರಲ್ಲಿ ಗೋರಖ್ ಪುರ್ ನಲ್ಲಿ ಚುನಾವಣೆಗೆ ನಿಂತ ಆದಿತ್ಯನಾಥ್ ನೇರ ಸಂಸತ್ತಿಗೆ ಪ್ರವೇಶ ಗಿಟ್ಟಿಸಿದ್ದರು. ಅಲ್ಲಿಂದ ಮುಂದೆ ಅವರನ್ನು ಅಲ್ಲಾಡಿಸಲು ಯಾರಿಂದಲೂ ಸಾಧ್ಯವಾಗಲೇ ಇಲ್ಲ. ಐದು ಬಾರಿ ಭಾರೀ ಮತಗಳ ಅಂತರದಿಂದ ಗೋರಖ್ ಪುರ್ ಎಂಪಿ ಸ್ಥಾನವನ್ನು ಕೈವಶ ಮಾಡಿಕೊಂಡಿದ್ದರು ಆದಿತ್ಯನಾಥ್. ಅವರಿಗೆ ಪೈಪೋಟಿ ಅಂತ ಕೊಟ್ಟಿದ್ದೆಂದರೆ ಅದು ಸಮಾಜವಾದಿ ಪಕ್ಷದ ಜಮುನಾ ನಿಶಾದ್ ಮಾತ್ರ. 2004ರಲ್ಲಿ ಆದಿತ್ಯನಾಥ್ ಕೇವಲ 5,000 ಮತಗಳ ಅಂತರದಿಂದ ಗೆಲುವು ಕಂಡಿದ್ದರು. ಇದೊಂದು ನಿದರ್ಶನ ಬಿಟ್ಟರೆ ಯೋಗಿಯನ್ನು ಸೋಲಿಸುವುದು ಅಥವಾ ಸರಿಯಾಗಿ ಸ್ಪರ್ಧೆ ಒಡ್ಡಲೂ ಯಾರಿಂದಲೂ ಸಾಧ್ಯವಾಗಿಲ್ಲ.

ಗೋರಖ್ ಪುರ್ ದೇವಸ್ಥಾನದ ಮುಖ್ಯ ಗುರು[ಬದಲಾಯಿಸಿ]

 • ಫೆಬ್ರವರಿ 1994ರಲ್ಲಿ ಆದಿತ್ಯನಾಥ್ ಗೋರಖ್ ಪುರ್ ದೇವಸ್ಥಾನದಲ್ಲಿ ನಾಥ ಪಂಥದ ದೀಕ್ಷೆ ಸ್ವೀಕರಿಸಿದ್ದರು. ಈ ದೀಕ್ಷೆ ಪ್ರಕಾರ ಆದಿತ್ಯನಾಥ್ ಕಿವಿ ಚುಚ್ಚಲಾಗಿತ್ತು. ನಂತರ ಯೋಗಿ ಅವಿದ್ಯಾನಾಥ್ ಶಿಷ್ಯರಾಗಿ ಯೋಗಿ ಆದಿತ್ಯನಾಥ್ ಗುರುತಿಸಿಕೊಂಡಿದ್ದರು. ಅವಿದ್ಯಾನಾಥರನ್ನು ಆದಿತ್ಯನಾಥ್ ಗುರೂಜಿ ಎಂದು ಕರೆಯುತ್ತಿದ್ದರು. 2014ರಲ್ಲಿ ಅವಿದ್ಯಾನಾಥ್ ಸಾವನ್ನಪ್ಪಿದ ನಂತರ ಆದಿತ್ಯನಾಥ್ ಗೋರಖ್ ಪುರ್ ದೇವಸ್ಥಾನದ ಮುಖ್ಯ ಗುರುವಿನ ಪಟ್ಟಕ್ಕೆ ಏರಿದ್ದರು.

ವಿವಾದಿತ ನಾಯಕ[ಬದಲಾಯಿಸಿ]

 • ಆದಿತ್ಯನಾಥ್ ಯೋಗಿಯ ಮೊದಲ ವಿವಾದ ಆರಂಭವಾಗಿದ್ದು 1999ರಲ್ಲಿ. ಅಂದು ಮಹಾರಾಜ್ ಗಂಜ್ ಜಿಲ್ಲೆಯ ಪಂಚ್ ರುಖಿಯಾ ಗ್ರಾಮದಲ್ಲಿ ಸ್ಮಶಾನಭೂಮಿಯನ್ನು ವಶಕ್ಕೆ ಪಡೆಯಲು ಅಲ್ಲಿ ಅಶ್ವಥ್ಥ ಮರಗಳನ್ನು ನೆಡಿಸಿದ್ದರು. ಆಗ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಅವರ ಮೇಲೆ ಹಲವು ಕೇಸುಗಳನ್ನು ಹಾಕಲಾಗಿತ್ತು.

ಜೈಲಿಗೆ ಆದಿತ್ಯನಾಥ್[ಬದಲಾಯಿಸಿ]

 • 2007ರಲ್ಲಿ ಇನ್ನೇನು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳಿರುವಾಗ ಆದಿತ್ಯನಾಥ್ ಜೈಲು ಪಾಲಾಗಿದ್ದರು. ಗೋರಖ್ ಪುರ್ ಕೋಮು ದಂಗೆಗೆ ಪ್ರೇರಣೆ ನೀಡಿದ ಆರೋಪದಲ್ಲಿ 15 ದಿನ ಆದಿತ್ಯನಾಥ್ ಜೈಲಿನಲ್ಲಿ ಕಳೆಯಬೇಕಾಗಿ ಬಂದಿತ್ತು. ಆ ಸಂದರ್ಭದಲ್ಲಿ ಗಲಭೆಯಿದಾಗಿ ಹಲವು ಮುಸ್ಲಿಮರು ಪ್ರಾಣವನ್ನೂ ಕಳೆದುಕೊಂಡಿದ್ದರು. ಗಲಭೆಯೊಂದರಲ್ಲಿ ಹಿಂದೂ ಯುವಕನೊಬ್ಬನನ್ನು ಕೊಲೆ ಮಾಡಿಲಾಗಿತ್ತು. ತರುವಾಯ ಗುಂಪನ್ನುದ್ದೇಶಿಸಿ ಆದಿತ್ಯನಾಥ್ ಉದ್ರೇಕಕಾರಿ ಭಾಷಣ ಮಾಡಿದ. ಮರುಕ್ಷಣವೇ ಕೋಮು ಗಲಭೆಯ ಬೆಂಕಿ ಹೊತ್ತಿಕೊಂಡಿತ್ತು. ಇವತ್ತಿಗೂ ಈ ಪ್ರಕರಣದ ವಿಚಾರಣೆಯನ್ನು ಆದಿತ್ಯನಾಥ್ ಎದುರಿಸುತ್ತಿದ್ದಾರೆ.

ಬಿಜೆಪಿ ಮೇಲೆ ತಿರುಗಿ ಬಿದ್ದ ಯೋಗಿ[ಬದಲಾಯಿಸಿ]

 • 2007ರಲ್ಲಿ ಕೋಮು ಗಲಭೆಯಲ್ಲಿ ಜೈಲು ಪಾಲಾದಾಗ ಬಿಜೆಪಿ ತನ್ನ ಸಹಾಯಕ್ಕೆ ಧಾವಿಸಲಿಲ್ಲ ಎದು ಯೋಗಿ ಆದಿತ್ಯಾಥ್ ಕೇಸರಿ ಪಕ್ಷದ ಮೇಲೆಯೇ ಸಿಟ್ಟಾಗಿದ್ದರು. ಬಿಜೆಪಿಯ ಅಭ್ಯರ್ಥಿಗಳ ವಿರುದ್ಧವೇ ಯೋಗಿ ಆದಿತ್ಯನಾಥ್ ತಮ್ಮ ಹಿಂದೂ ಯುವ ವಾಹಿನಿಯಿಂದ ಸ್ಪರ್ಧಿಗಳನ್ನು ಕಣಕ್ಕಿಳಿಸಿ ಸುದ್ದಿಯಾಗಿದ್ದರು. ಹಿಂದೂ ಮಹಾಸಭಾದಿಂದ ರಾಧಾ ಮೋಹನ್ ದಾಸ್ ಅಗರ್ವಾಲ್ ಎಂಬುವವರನ್ನು ನಿಲ್ಲಿಸಿ ಯೋಗಿ ಗೆಲ್ಲಿಸಿಕೊಂಡು ಬಿಟ್ಟಿದ್ದರು. ಈ ಮೂಲಕ ಬಿಜೆಪಿಗೆ ತೀಕ್ಷ್ಣ ಸಂದೇಶವನ್ನೂ ರವಾನಿಸಿದ್ದರು. 2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗಲೂ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಂಡಿಲ್ಲ ಎಂದು ಬಿಜೆಪಿಯ ಕೇಂದ್ರ ನಾಯಕತ್ವದ ವಿರುದ್ಧ ಯೋಗಿ ಸಿಟ್ಟಾಗಿದ್ದರು.
ಆದಿತ್ಯನಾಥ್‍ಗೆ ಅಪ್ಪನ ಹಿತೋಪದೇಶ
 • ಎಲ್ಲರನ್ನೂ ಸಮಾನವಾಗಿ ಕಾಣಬೇಕು, ಬುರ್ಖಾ ಧರಿಸುವ ಮಹಿಳೆಯರೂ ಆತನಿಗೆ ಮತ ನೀಡಿದ್ದರು. ಎಲ್ಲ ಧರ್ಮಗಳನ್ನು ಗೌರವಿಸುವ ಮೂಲಕ ಆತ ಹೃದಯ ಗೆಲ್ಲಬೇಕು' ಹೀಗೆ ಹೇಳಿದ್ದು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಅಪ್ಪ ಆನಂದ್ ಸಿಂಗ್ ಭಿಷ್ತ್.
 • ಅರಣ್ಯ ರೇಜಂರ್ ಆಗಿ ನಿವೃತ್ತರಾಗಿರುವ 84ರ ಹರೆಯದ ಬಿಷ್ತ್, ಮುಸ್ಲಿಂ ಮಹಿಳೆಯರೂ ಬಿಜೆಪಿಗೆ ಮತ ನೀಡಿದ್ದಾರೆ. ತ್ರಿವಳಿ ತಲಾಖ್ ಮತ್ತು ಇನ್ನಿತರ ಸಮಸ್ಯೆಗಳನ್ನು ಹೋಗಲಾಡಿಸಲು ಬಿಜೆಪಿ ಸಹಾಯ ಮಾಡುತ್ತದೆ ಎಂಬ ಭರವಸೆಯಿಂದ ಅವರು ಮತ ನೀಡಿದ್ದರು. ಬಿಜೆಪಿ ಮತ್ತು ಆದಿತ್ಯನಾಥ್ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಾರೆ ಎಂಬ ನಂಬಿಕೆ ಇಲ್ಲಿನ ಜನರಿಗಿದೆ. ಆದಿತ್ಯನಾಥ್ ಈ ಎಲ್ಲ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದಿದ್ದಾರೆ.[೫]
.

ಉತ್ತರಪ್ರದೇಶದ ಮುಖ್ಯಮಂತ್ರಿ ಆಯ್ಕೆ ಹಿನ್ನಲೆ[ಬದಲಾಯಿಸಿ]

 • ಒತ್ತಡ,
 • ಆದರೂ, ಇವರ ಮಾತಿಗೆ ಬಿಜೆಪಿ ಬೆಲೆ ಕೊಡಲಿಲ್ಲ. ಆದರೆ ಯೋಗಿ ಆದಿತ್ಯನಾಥ್‍ರನ್ನು ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯಾಗಿ ಬಿಂಬಿಸಬೇಕು ಎಂಬ ಕೂಗು ಉತ್ತರ ಪ್ರದೇಶ ಚುನಾವಣೆಗೂ ಮುನ್ನ ಮತ್ತು ಸಂತರ ಆ ವಲಯದಿಂದಲೇ ಕೇಳಿ ಬಂದಿತ್ತು. 2016ರಲ್ಲೇ ಗೋರಖ್ ಪುರ್ ದೇವಸ್ಥಾನದಲ್ಲಿ ಸಭೆ ನಡೆಸಿದ್ದ ಅಯೋಧ್ಯೆ ಮೊದಲಾದ ಪ್ರದೇಶಗಳ ಸಂತರು ಯೋಗಿಯವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಬೇಕು. ಆದಿತ್ಯನಾಥ್ ಮುಖ್ಯಮಂತ್ರಿಯಾದರೆ ಮಾತ್ರ ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಸಾಧ್ಯ ಎಂದು ಹೇಳಿದ್ದರು. ಆದರೆ ಕೂಗು ಎಷ್ಟೇ ಬಲವಾದರೂ ಬಿಜೆಪಿ ಮಾತ್ರ ಕಿವಿ ಮೇಲೆ ಹಾಕಿಕೊಂಡಿರಲಿಲ್ಲ.
 • ಮತ ದ್ರುವೀಕರಣದ ನೇತಾರ
 • ಮತ ದ್ರುವೀಕರಣ ಮಾಡಿ 2017ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುವಂತೆ ಮಾಡಿದವರು ಯೋಗಿ ಆದಿತ್ಯನಾಥ್. ಹಿಂದೂ ಮತ್ತು ಮುಸ್ಲಿಂ ಹಬ್ಬಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸಗಳಾಗುತ್ತವೆ ಎಂಬ ವಿಚಾರದಿಂದ ತಮ್ಮ ದ್ರುವೀಕರಣ ತಂತ್ರವನ್ನು ಯೋಗಿ ಆರಂಭಿಸಿದ್ದರು. ಖಬರಿಸ್ತಾನ್ ಮತ್ತು ಶಂಶಾನ್ ಗಳಿಗೆ ಸ್ಥಳ ಮೀಸಲಿಡುವ ವಿಚಾರದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದೂ ಆಪಾದಿಸಿದ್ದರು. ಮುಂದೆ ಇದನ್ನೇ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿಯೂ ಪ್ರಸ್ತಾಪಿಸಿ ಅದು ದೊಡ್ಡ ಸುದ್ದಿಯಾಗಿತ್ತು. ಲವ್ ಜಿಹಾದ್, ಗೋ ಹತ್ಯೆ, ಬಲವಂತದ ಮತಾಂತರ ಹೀಗೆ ಮತ ದ್ರುವೀಕರಣಕ್ಕೆ ಬೇಕಾದ ವಿಚಾರಗಳೆಲ್ಲಾ ಅವರ ಮಾತುಗಳಲ್ಲಿ ಹಾದು ಹೋಗಿತ್ತು.
 • ಚುನಾವಣೆಯಲ್ಲಿ ಆದಿತ್ಯನಾಥ್ ಬೆಂಬಲಿಗರಿಗೆ ಟಿಕೆಟ್ ನಿರಾಕರಿಸಿದಾಗ ಅವರೆಲ್ಲಾ ಬಿಜೆಪಿ ವಿರುದ್ಧವೇ ಬಂಡಾಯವೆದ್ದಿದ್ದರು. ಬಂಡಾಯ ಅ಻ಭ್ಯರ್ಥಿಗಳು ಶಿವಸೇನೆಯ ಬೆಂಬಲದೊಂದಿಗೆ ಬಿಜೆಪಿ ವಿರುದ್ಧವೇ ಸ್ಪರ್ಧಿಸಲು ಹೊರಟಿದ್ದರು. ಕೊನೆಗೆ ಇವರನ್ನೆಲ್ಲಾ ಯೋಗಿ ಬಿಜೆಪಿಯಿಂದಲೇ ಕಿತ್ತು ಬಿಸಾಕಿದರು. ಕೊನೆಗೆ ಯೋಗಿ ಒತ್ತಾಯದ ಮೇರೆಗೆ ಅವರೆಲ್ಲಾ ನಾಮಪತ್ರ ಹಿಂತೆಗೆದುಕೊಂಡು ಬಿಜೆಪಿಯನ್ನು ಸೋಲಿನಿಂದ ಬಚಾವು ಮಾಡಿದ್ದರು.[೬]

ಅಮಿತ್ ಶಾ ಮೇಲೆ ಪ್ರಭಾವ[ಬದಲಾಯಿಸಿ]

 • ಆಗ ಯುಪಿಯಲ್ಲಿದ್ದರು ಅಮಿತ್ ಶಾ ಅದು 2013. ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿದ್ದ ಅಮಿತ್ ಶಾ, ಆ ವರ್ಷ ನಡೆದಿದ್ದ ಉಪ ಚುನಾವಣೆಗಳ ಕಾಲದಲ್ಲಿ ಬಿಜೆಪಿ ಪರ ಪ್ರಚಾರ ಕೈಗೊಂಡಿದ್ದರು. ಹಳ್ಳಿಗಳ ಕಡೆಯಿಂದ ಸಾಗುವಾಗ ಅದೊಂದು ಸ್ಥಳದಲ್ಲಿ ಕೆಲವಾರು ಹಳ್ಳಿಗರು ಅಮಿತ್ ಶಾ ಅವರ ಕಾರನ್ನು ಅಡ್ಡಗಟ್ಟಿದ್ದರು.
 • ಸಂಧಾನ ವ್ಯರ್ಥವಾಗಿತ್ತು ಹಳ್ಳಿಗರ ಗುಂಪು ದಾಂಧಲೆ ನಡೆಸಲೂ ಮುಂದಾಗಿತ್ತು. ಪ್ರಾಯಶಃ ಅವರು, ಅಮಿತ್ ಶಾ ಅವರು ಸಚಿವರೋ, ಶಾಸಕರೋ ಆಗಿರಬೇಕು ಎಂಬುದು ಅವರು ಅಂದುಕೊಂಡಿದ್ದಿರಬೇಕು. ತಮ್ಮ ಹಳ್ಳಿಗೆ ಅದು ಬೇಕು, ಇದು ಬೇಕು ಎಂದು ಘೋಷಣೆಗಳನ್ನು ಕೂಗುತ್ತಾ ಕಾರಿಗೆ ಘೆರಾವ್ ಹಾಕಿದ್ದರು ಅವರು. ಅಮಿತ್ ಶಾ ಅವರ ಡ್ರೈವರ್, ಕಾರಿನಲ್ಲಿದ್ದ ಕೆಲವೇ ಕೆಲವು ಬಿಜೆಪಿ ನಾಯಕರು ಕೆಳಗಿಳಿದು ಹೋಗಿ ಜನರನ್ನು ಎಷ್ಟೇ ಸಮಾಧಾನಪಡಿಸಿದರೂ ಜನ ಒಪ್ಪಲು ಸಿದ್ಧರಿರಲಿಲ್ಲ. ಅಲ್ಲದೆ, ನೋಡ ನೋಡುತ್ತಿದ್ದಂತೆ ಜನರ ಗುಂಪೂ ದೊಡ್ಡದಾಗಿ ಹೋಗಿ ಬಿಜೆಪಿ ನಾಯಕರಿಗೆ ಒಂದು ರೀತಿಯಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಯಿತು.
 • ಆಗಲೇ, ಕಾರಿನೊಳಗಿದ್ದ ಅಮಿತ್ ಶಾ ತಕ್ಷಣವೇ ಅವರು ಯೋಗಿ ಆದಿತ್ಯಾನಂದ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದರು. ಅಷ್ಟೇ. ಕೆಲವೇ ನಿಮಿಷಗಳಲ್ಲಿ ಮೋಟಾರ್ ಬೈಕ್ ಗಳಲ್ಲಿ ಅವರ ಶಿಷ್ಯಂದಿರ ಪಡೆ ನೂರಾರು ಬೈಕ್ ಗಳಲ್ಲಿ ಆಗಮಿಸಿದರು ಇಷ್ಟು ಜನರನ್ನು ನೋಡಿ ಖುದ್ದು ಅಮಿತ್ ಶಾ ಅವರೇ ಬೆಕ್ಕಸ ಬೆರಗಾದರು.
 • ಮೋಟಾರ್ ಬೈಕ್ ಗಳಲ್ಲಿ ಬಂದವರು ಹಳ್ಳಿಗರತ್ತ ವಾದ ವಿವಾದಕ್ಕಿಳಿಯಲಿಲ್ಲ. ಇವರು ಆದಿತ್ಯನಾಥರ ಆಪ್ತರು. ದಾರಿ ಬಿಡಿ. ತೊಂದರೆ ಕೊಡಬೇಡಿ ಎಂದು ಶಿಷ್ಯರ ಪಡೆ ಹೇಳಿದ ಒಂದೇ ಒಂದು ಮಾಡಿಗೆ ತಪ್ಪಾಯ್ತು ಕ್ಷಮಿಸಿ ಎನ್ನುತ್ತಾ ದಾರಿ ಬಿಟ್ಟರು ಹಳ್ಳಿಗರು. ಇದು ಆದಿತ್ಯನಾಥ್ ಅವರು ಆ ಪ್ರಾಂತ್ಯದಲ್ಲಿ ಅದರಲ್ಲೂ ಹಳ್ಳಿಗರ ಅಭಿಮಾನ ಸಂಪಾದಿಸಿದ್ದರ ಸಾಕ್ಷಾತ್ ದರುಶನವನ್ನು ಅಮಿತ್ ಶಾ ಅವರಿಗೆ ತೆರೆದಿಟ್ಟಿತು.
 • ಅಲ್ಲಿಂದ ಆದಿತ್ಯ ಅವರನ್ನು ದೂರದಿಂದಲೇ ಅಧ್ಯಯನ ಮಾಡಿದ್ದ ಶಾ, ಅವರ ನಾಯಕತ್ವ ಗುಣ, ಜನರನ್ನು ಒಗ್ಗೂಡಿಸುವ ಕಲೆಗಾರಿಕೆಯನ್ನು ಮೆಚ್ಚಿಕೊಂಡಿದ್ದರು. ತೀರಾ ಇತ್ತೀಚೆಗೆ, ಅವರು ಯುಪಿಯಲ್ಲಿ ಪ್ರಧಾನಿ ಮೋದಿ ಬಿಟ್ಟರೆ ಅತಿ ಹೆಚ್ಚು ಜನಪ್ರಿಯತೆ ಗಳಿಸಿರುವ ವ್ಯಕ್ತಿ ಯೋಗಿ ಎಂಬುದು ಮನದಟ್ಟಾಗಿತ್ತು. ಯುಪಿಯಲ್ಲಿ ಇಂಥ ಒಬ್ಬ ಪವರ್ ಫುಲ್ ಲೀಡರ್ ಇರಬೇಕು ಎಂದುಕೊಂಡಿದ್ದರು ಶಾ. ಹಾಗಾಗಿಯೇ, ಅವರು ಯುಪಿ ಸಿಎಂ ಆಯ್ಕೆ ವಿಚಾರದಲ್ಲಿ ಯೋಗಿಗೆ ಪ್ರಾಶಸ್ತ್ರ್ಯ ಕೊಟ್ಟರು[೭]

ಟೀಕೆಗಳು[ಬದಲಾಯಿಸಿ]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]