ಪ್ರಾಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪ್ರಾಂತ ವೆಂಬುದು ಒಂದು ಪ್ರಾದೇಶಿಕ ಘಟಕವಾಗಿದ್ದು, ಬಹುತೇಕ ಒಂದು ರಾಷ್ಟ್ರ ಅಥವಾ ರಾಜ್ಯದ ಒಳಗಿರುವ ಒಂದು ಆಡಳಿತಾತ್ಮಕ ವಿಭಾಗವಾಗಿರುತ್ತದೆ.

ವ್ಯುತ್ಪತ್ತಿ[ಬದಲಾಯಿಸಿ]

ಆಂಗ್ಲ ಪದವಾದ "ಪ್ರಾವಿನ್ಸ್"(ಪ್ರಾಂತ) ಸುಮಾರು 1330ರಿಂದಲೂ ಪ್ರಮಾಣೀಕರಣಗೊಂಡಿದೆ. ಅಲ್ಲದೇ ಇದು 13ನೇ ಶತಮಾನದ ಹಳೆ ಫ್ರೆಂಚ್ ಪದ "ಪ್ರಾವಿನ್ಸ್ " ನಿಂದ ಹುಟ್ಟಿಕೊಂಡಿದೆ, ಈ ಪದ ಸ್ವತಃ ಲ್ಯಾಟಿನ್ ಪದ "ಪ್ರಾವಿನ್ಸಿಯ"ದಿಂದ ವ್ಯುತ್ಪತ್ತಿಯನ್ನು ಹೊಂದಿದೆ. ಇದು ಮ್ಯಾಜಿಸ್ಟ್ರೇಟ್‌‌ ಅವರ ಅಧಿಕಾರ ಕ್ಷೇತ್ರಕ್ಕೆ ಸೂಚಿತವಾಗಿದೆ; ನಿರ್ದಿಷ್ಟವಾಗಿ ಹೇಳುವುದಾದರೆ, ಇದು ಒಂದು ವಿದೇಶಿ ಭೂಪ್ರದೇಶಕ್ಕೆ ಸೂಚಿತವಾಗಿದೆ.

ಲ್ಯಾಟಿನ್ ಪದವು "ಪ್ರೊ- "("ಪರವಾಗಿ") ಹಾಗು "ವಿನ್ಸೆರೆ " ("ಜಯಗಳಿಸುವುದು" ಅಥವಾ "ನಿಯಂತ್ರಣವನ್ನು ಗಳಿಸುವುದು") ಎಂಬ ಪದಗಳಿಂದ ಸಂಭಾವ್ಯವಾಗಿ ವ್ಯುತ್ಪತ್ತಿಯನ್ನು ಹೊಂದಿರಬಹುದು.

ಈ ರೀತಿಯಾಗಿ "ಪ್ರಾಂತ" ಎಂಬುದು ಒಂದು ಭೂಪ್ರದೇಶ ಅಥವಾ ರೋಮನ್ ನ್ಯಾಯಾಧೀಶ ತನ್ನ ಸರ್ಕಾರದ ಪರವಾಗಿ ಆಯಾ ಭೂಪ್ರದೇಶದಲ್ಲಿ ನಿಯಂತ್ರಣವನ್ನು ಹೊಂದಿರುವುದು. ಆದಾಗ್ಯೂ, ಇದು, ಲ್ಯಾಟಿನ್ ಪದದ ಹಿಂದಿನ ಬಳಕೆಯೊಂದಿಗೆ ತಾಳೆಯಾಗುವುದಿಲ್ಲ. ರೋಮನ್ ಕಾನೂನಿಗೆ ಸಂಬಂಧಿಸಿದಂತೆ ನ್ಯಾಯಾಧಿಕರಣದ ವ್ಯಾಪ್ತಿ ಎಂಬ ಪದವನ್ನು ಸಾರ್ವತ್ರಿಕವಾಗಿ ಬಳಸಲಾಗುತ್ತಿತ್ತು.

ಭೂವಿಜ್ಞಾನ[ಬದಲಾಯಿಸಿ]

ಭೂವಿಜ್ಞಾನದಲ್ಲಿ, "ಪ್ರಾಂತ" ಎಂಬ ಪದವು, ಆಳಮಾಪನದ ಅಥವಾ ಹಿಂದಿನ ಆಳಮಾಪನದ ಅಂಶಗಳನ್ನು ಒಳಗೊಳ್ಳುವ ನಿರ್ದಿಷ್ಟ ಫಿಸಿಯೋಜಿಯಾಗ್ರಫಿಕ್ ಪ್ರದೇಶಗಳಿಗೆ ಸೂಚಿತವಾಗಿದೆ (ಇದೀಗ ನೀರಿನ ಮಟ್ಟಕ್ಕಿಂತ ಮೇಲಿರುವ ಸಂಚಿತ ಸ್ತರ). ಇವುಗಳ ಲಕ್ಷಣಗಳು ಸುತ್ತಮುತ್ತಲಿನ ಪ್ರದೇಶಗಳು, ಅಥವಾ ಇತರ "ಪ್ರಾಂತಗಳಿಗಿಂತ" ಸ್ಪಷ್ಟವಾಗಿ ವಿರುದ್ಧವಾಗಿರುತ್ತವೆ. ಒಂದು ನಿರ್ದಿಷ್ಟ ಅವಧಿಯಲ್ಲಿ ಗುರುತಿಸಲಾದ ಕ್ರೆಟನ್ ನ ವಿಭಾಗಗಳು ಅಥವಾ ಪ್ರದೇಶಗಳಿಗೆ ಈ ಪದವನ್ನು ಸಾಮಾನ್ಯವಾಗಿ ಸೂಚಿಸಲಾಗುತ್ತದೆ-ಸ್ತರವಿಜ್ಞಾನ, ಅದೆಂದರೆ., ಒಂದು ಭೂವೈಜ್ಞಾನಿಕ ಅವಧಿಯೊಳಗೆ, ಸಮಯದ ಪ್ರಮುಖ ವಿಭಾಗವನ್ನು ಗುರುತಿಸುವುದು.

ಇತಿಹಾಸ ಹಾಗು ಸಂಸ್ಕೃತಿ[ಬದಲಾಯಿಸಿ]

ಫ್ರಾನ್ಸ್ ನಲ್ಲಿ, "ಎನ್ ಪ್ರಾವಿನ್ಸ್ " ಎಂಬ ಪದವು ಇಂದಿಗೂ "ಪ್ಯಾರಿಸ್ ಪ್ರದೇಶದ ಆಚೆಗೆ" ಎಂಬ ಅರ್ಥ ನೀಡುತ್ತದೆ. ಇದಕ್ಕೆ ಸಮಾನಾಂತರವಾದ ಪದವನ್ನು ಪೆರು("ಎನ್ ಪ್ರಾವಿನ್ಸಿಯಸ್ ", ಲಿಮ ನಗರದ ಹೊರಭಾಗ"), ಮೆಕ್ಸಿಕೋ("ಲಾ ಪ್ರಾವಿನ್ಸಿಯ ," ಮೆಕ್ಸಿಕೋ ನಗರದ ಹೊರಭಾಗದಲ್ಲಿರುವ ಭೂಮಿ"), ರೊಮೇನಿಯ ("ಇನ್ ಪ್ರೋವಿನ್ಸಿ ," "ಬುಕಾರೆಸ್ಟ್ ಪ್ರದೇಶದ ಹೊರಭಾಗ"), ಪೋಲಂಡ್ ("prowincjonalny ," "ಪ್ರಾವಿನ್ಷಿಯಲ್") ಹಾಗು ಬಲ್ಗೇರಿಯ ("в провинцията ," "v provintsiyata ,"ಪ್ರಾಂತಗಳಲ್ಲಿ"; "провинциален ," "provintsialen ," "provincial")ಗಳಲ್ಲಿ ಬಳಸಲಾಗುತ್ತದೆ.

ಫ್ರೆಂಚ್ ಕ್ರಾಂತಿಗೆ ಮುಂಚೆ, ಫ್ರಾನ್ಸ್ ಹಲವಾರು ನ್ಯಾಯಾಧಿಕರಣದ ಕ್ಷೇತ್ರಗಳನ್ನು ಒಳಗೊಂಡಿತ್ತು. (ಉದಾಹರಣೆಗೆ., ಇಲೆ-ಡೆ-ಫ್ರಾನ್ಸ್, ಇದು ಪೂರ್ವದ ಕಾಪೇಟಿಯನ್ ರಾಜನ ಜಮೀನಿನ ಸುತ್ತಮುತ್ತ ನಿರ್ಮಿತವಾಗಿತ್ತು, ಇದರಲ್ಲಿ ಕೆಲವನ್ನು "ಪ್ರಾಂತಗಳೆಂದು" ಪರಿಗಣಿಸಲಾಗಿತ್ತು, ಆದಾಗ್ಯೂ ಈ ಪದವನ್ನು ಆಡುಮಾತಿನಲ್ಲಿ ಜಹಗೀರಿನಂತಹ(ಚಾಟೆಲ್ಲೆನಿ ) ಸಣ್ಣ ಭೂಪ್ರದೇಶಗಳಿಗೂ ಸೂಚಿಸಲಾಗುತ್ತಿತ್ತು. ಬಹುತೇಕವಾಗಿ "ಪ್ರಾಂತಗಳೆಂದು" ಸೂಚಿಸಲಾಗುತ್ತಿತ್ತು, ಆದಾಗ್ಯೂ, ಇವುಗಳು ಗ್ರ್ಯಾಂಡ್ಸ್ ಗವರ್ನಮೆಂಟ್ಸ್ , ಸಾಧಾರಣವಾಗಿ ಹಿಂದಿನ ಮಧ್ಯಕಾಲೀನ ಊಳಿಗಮಾನ್ಯ ಸಂಸ್ಥಾನಗಳಾಗಿದ್ದವು, ಅಥವಾ ಇಂತಹವುದಕ್ಕೆ ಸಂಘಟಿತವಾಗಿರುತ್ತಿದ್ದವು. ಇಂದು "ಪ್ರಾಂತ " ಎಂಬ ಪದಕ್ಕೆ ಬದಲಾಗಿ ಕೆಲವೊಂದು ಬಾರಿ "ಎನ್ ರೀಜನ್ ," "ಪ್ರದೇಶ " ವೆಂದು ಕರೆಯಲಾಗುತ್ತದೆ. ಈ ಪದವನ್ನು ಸರ್ಕಾರದ ದ್ವಿತೀಯಕ ಮಟ್ಟವನ್ನು ಹೆಸರಿಸಲು ಅಧಿಕೃತವಾಗಿ ಬಳಸಲಾಗುತ್ತದೆ.

ಇಟಲಿಯಲ್ಲಿ, "ಇನ್ ಪ್ರಾವಿನ್ಸಿಯ " ಎಂಬ ಪದವು ಸಾಮಾನ್ಯವಾಗಿ "ಅತ್ಯಂತ ದೊಡ್ಡ ಪ್ರಾದೇಶಿಕ ರಾಜಧಾನಿಗಳ ಹೊರಗಿರುವ" ನಗರಗಳಿಗೆ ಸೂಚಿಸಲಾಗುತ್ತದೆ. (ಉದಾಹರಣೆಗೆ ರೋಮ್, ಮಿಲಾನ್, ನೇಪಲ್ಸ್, ಮುಂತಾದವು).

ಐತಿಹಾಸಿಕ ಯುರೋಪಿಯನ್ ಪ್ರಾಂತಗಳು ಹಲವು ಸಣ್ಣ ಪ್ರದೇಶಗಳಿಂದ ನಿರ್ಮಿತವಾಗಿವೆ, ಇದನ್ನು ಫ್ರೆಂಚರು ಪೆಯ್ಸ್ ಎಂದು, ಸ್ವಿಸ್ಸ್ ಜನರು "ಕ್ಯಾನ್ಟನ್" ಎಂದು ಕರೆಯುತ್ತಾರೆ, ಇದರಲ್ಲಿ ಪ್ರತಿ ವಿಭಾಗವು ಸ್ಥಳೀಯ ಸಾಂಸ್ಕೃತಿಕ ಸ್ವರೂಪ ಹೊಂದಿದೆ. ಜೊತೆಗೆ ಇವುಗಳು ಪಟ್ಟಣದ ಮಾರುಕಟ್ಟೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿವೆ-ಇದನ್ನು ಫಾರ್ನಾಂಡ್ ಬ್ರೌಡಲ್, ಪೂರ್ವ ಆಧುನಿಕ ಯುರೋಪ್ ನ ಪೂರ್ವ ಕೈಗಾರಿಕೆಯಲ್ಲಿ ಪ್ರಶಸ್ತ ಗಾತ್ರದ ರಾಜಕೀಯ ಘಟಕವೆಂದು ವಿವರಿಸುತ್ತಾರೆ. "ಪ್ರಾಂತವು ನಿವಾಸಿಗಳ ನಿಜವಾದ 'ಜನ್ಮಭೂಮಿಯೇ'?" ಎಂದು ಪ್ರಶ್ನಿಸುತ್ತಾರೆ[೧] ಪೂರ್ವದ ರಾಷ್ಟ್ರ-ರಾಜ್ಯವಾಗಿ ಕೇಂದ್ರೀಯವಾಗಿ ರೂಪುಗೊಂಡಿದ್ದ ಫ್ರಾನ್ಸ್ ಸಹ, ಒತ್ತಡದ ಮೇರೆಗೆ ಸ್ವಯಮಾಧಿಕಾರದ ಪ್ರಾಂತೀಯ ಪ್ರದೇಶಗಳಾಗಿ, ಫ್ರೆಂಚ್ ವಾರ್ಸ್ ಆಫ್ ರಿಲಿಜನ್ ನ ಸತತ ಬಿಕ್ಕಟ್ಟಿನ ಅವಧಿಯಲ್ಲಿ ಪತನಗೊಳ್ಳುವುದರಲ್ಲಿತ್ತು. (1562—98).

ಯುರೋಪ್ ನ 19 ಹಾಗು 20ನೇ ಶತಮಾನದ ಇತಿಹಾಸಜ್ಞರಿಗೆ, ಕೇಂದ್ರೀಕೃತ ಸರ್ಕಾರವು ಆಧುನಿಕತೆ ಹಾಗು ರಾಜಕೀಯ ಪರಿಪೂರ್ಣತೆಯ ಸಂಕೇತವಾಗಿತ್ತು. 20ನೇ ಶತಮಾನದ ನಂತರದ ಭಾಗದಲ್ಲಿ, ಯುರೋಪಿಯನ್ ಒಕ್ಕೂಟವು ರಾಷ್ಟ್ರ-ರಾಜ್ಯಗಳನ್ನು ಒಟ್ಟುಗೂಡಿಸಿತು, ಕೇಂದ್ರಾಭಿಗಾಮಿ ಬಲಗಳು, ರಾಷ್ಟ್ರಗಳನ್ನು ಒಟ್ಟಾರೆ ಯುರೋಪಿಯನ್ ಒಕ್ಕೂಟದ ಛಾವಣಿಯಡಿಯಲ್ಲಿ ಹೆಚ್ಚು ಸ್ಥಳೀಕರಿಸಿದ, ಪ್ರಾಂತೀಯ ಆಡಳಿತಾತ್ಮಕ ಅಸ್ತಿತ್ವಗಳನ್ನು ಸಂದರ್ಭಕ್ಕೆ ಹೊಂದಿಕೊಳ್ಳುವ ವ್ಯವಸ್ಥೆಯೆಡೆಗೆ ಏಕಕಾಲಿಕವಾಗಿ ಸೆಳೆಯುವಂತೆ ಕಂಡುಬಂದಿತು. ಸ್ಪೇನ್, ಫ್ರ್ಯಾನ್ಸಿಸ್ಕೋ ಫ್ಯಾನ್ಕೋ ವನ್ನು ಸ್ಟೇಟ್ ಆಫ್ ಅಟೋನಮೀಸ್ ಎಂದು ಘೋಷಿತವಾದ ನಂತರ, ಇವುಗಳು ಅಧಿಕೃತವಾಗಿ ಏಕೀಕೃತವಾದರೂ ಸಂಯುಕ್ತ ಸರ್ಕಾರದ ಅಟಾನಮಸ್ ಕಮ್ಯೂನಿಟಿಗಳಿಗೆ ಕಾರ್ಯ ನಿರ್ವಹಿಸುವುದರ ಜೊತೆಗೆ, ಪ್ರತಿಯೊಂದು ವಿವಿಧ ಚಲಾವಣಾ ಅಧಿಕಾರಗಳನ್ನು ಹೊಂದಿತ್ತು. (ಸ್ಪೇನ್ ನ ರಾಜಕೀಯವನ್ನು ನೋಡಿ.)

ಯುಗೊಸ್ಲೋವಿಯದ ಹಿಂದಿನ ಪಾರ್ಲಿಮೆಂಟಿನ ಭಾಗವಾಗಿದ್ದ ಸರ್ಬಿಯ, ಕೊಸೊವೊ ಪ್ರಾಂತದಲ್ಲಿ ಪ್ರತ್ಯೇಕತಾ ನೀತಿಗೆ ಹೋರಾಡಿತು, ಯುನೈಟೆಡ್ ಕಿಂಗ್ಡಮ್ "ವಿಕೇಂದ್ರೀಕರಣ"ವೆಂಬ ರಾಜಕೀಯ ನೀತಿಯಡಿಯಲ್ಲಿ, ಸ್ಕಾಟ್ಲ್ಯಾಂಡ್, ವೇಲ್ಸ್ ಹಾಗು ನಾರ್ದನ್ ಐರ್ಲೆಂಡ್ ನಲ್ಲಿ ಸ್ಥಳೀಯ ಶಾಸನಸಭೆಯನ್ನು ಸ್ಥಾಪಿಸಿತು(1998).

ಬ್ರಿಟನ್ ನ ಕಾರ್ನ್ವಾಲ್, ಫ್ರಾನ್ಸ್ ನ ಬ್ರಿಟಾನಿ, ಲಾಂಗುಯೇಡಾಕ್ ಹಾಗು ಕಾರ್ಸಿಕ, ಸ್ಪೇನ್ ನ ಕ್ಯಾಟಲೋನಿಯ ಹಾಗು ದಿ ಬಾಸ್ಕ್ಯು ಕಂಟ್ರಿ, ಇಟಲಿಯ ಲೊಂಬಾರ್ಡಿ, ಬೆಲ್ಜಿಯಂ ನ ಫ್ಲ್ಯಾನ್ಡರ್ಸ್; ಹಾಗು ಯುರೋಪ್ ನ ಪೂರ್ವ ಭಾಗದಲ್ಲಿ, ಅಬ್ಖಾಜಿಯ, ಚೆಚೆನ್ಯಾ ಹಾಗು ಕುರ್ದಿಸ್ಥಾನ ನಲ್ಲಿ ಬಲವಾದ ಸ್ಥಳೀಯ ರಾಷ್ಟ್ರೀಯತೆಗಳು ಬೆಳಕಿಗೆ ಬಂದವು ಅಥವಾ ಬೆಳವಣಿಗೆ ಕಂಡವು.

ಕಾನೂನು ಅಂಶಗಳು[ಬದಲಾಯಿಸಿ]

ಹಲವು ಸಂಯುಕ್ತ ಸರ್ಕಾರಗಳು ಹಾಗು ಒಕ್ಕೂಟಗಳಲ್ಲಿ, ಪ್ರಾಂತ ಅಥವಾ ರಾಜ್ಯವು ರಾಷ್ಟ್ರೀಯ ಅಥವಾ ಕೇಂದ್ರ ಸರ್ಕಾರದ ಸ್ಪಷ್ಟ ಅಧೀನದಲ್ಲಿರುವುದಿಲ್ಲ. ಇದಕ್ಕಿಂತ ಹೆಚ್ಚಾಗಿ, ಒಂದು ನಿರ್ದಿಷ್ಟ ಸಾಂವಿಧಾನಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಇದನ್ನು ಪರಮಾಧಿಕಾರವೆಂದು ಪರಿಗಣಿಸಲಾಗುತ್ತದೆ. ಕೇಂದ್ರ ಹಾಗು ಪ್ರಾಂತೀಯ ಸರ್ಕಾರದ ಚಟುವಟಿಕೆಗಳು, ಅಥವಾ ನ್ಯಾಯವ್ಯಾಪ್ತಿಯ ಪ್ರದೇಶಗಳನ್ನು ಸಂವಿಧಾನದಲ್ಲಿ ಗುರುತಿಸಲಾಗುತ್ತದೆ. ನಿರ್ದಿಷ್ಟವಾಗಿ ಗುರುತಿಸಲ್ಪಡದಿರುವುದನ್ನು "ಶೇಷ ಭಾಗದಲ್ಲಿನ ಅಧಿಕಾರಗಳು" ಎಂದು ಕರೆಯಲಾಗುತ್ತದೆ. ಒಂದು ವಿಕೇಂದ್ರೀಕೃತ ಸಂಯುಕ್ತ ಸರ್ಕಾರ ವ್ಯವಸ್ಥೆಯಲ್ಲಿ(ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಆಸ್ಟ್ರೇಲಿಯದ ಮಾದರಿ) ಈ ಶೇಷ ಭಾಗದ ಅಧಿಕಾರಗಳು ಪ್ರಾಂತೀಯ ಅಥವಾ ರಾಜ್ಯ ಮಟ್ಟದಲ್ಲಿ ಉಳಿಯುತ್ತವೆ, ಆದರೆ ಕೇಂದ್ರೀಕೃತ ಸಂಯುಕ್ತ ಸರ್ಕಾರ ವ್ಯವಸ್ಥೆಯಲ್ಲಿ(ಉದಾಹರಣೆಗೆ ಕೆನಡಾ), ಇವುಗಳು ಸರ್ಕಾರದ ಮಟ್ಟದಲ್ಲೇ ಉಳಿಯುತ್ತವೆ. ಕೆಲವು ನಮೂದಿಸಿ ಪಟ್ಟಿ ಮಾಡಲಾದ ಅಧಿಕಾರಗಳು ಸ್ವಲ್ಪಮಟ್ಟಿಗೆ ಪ್ರಮುಖವೆನಿಸುತ್ತವೆ. ಉದಾಹರಣೆಗೆ, ಕೆನೆಡಿಯನ್ ಪ್ರಾಂತಗಳು, ಆಸ್ತಿ, ನಾಗರಿಕ ಹಕ್ಕುಗಳು, ಶಿಕ್ಷಣ, ಸಾಮಾಜಿಕ ಹಿತಾಸಕ್ತಿ ಹಾಗು ಆರೋಗ್ಯ ಸೇವೆಗಳಂತಹ ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಪರಮಾಧಿಕಾರ ಎನಿಸಿಕೊಂಡಿವೆ.

ಸಂಯುಕ್ತ ಸರ್ಕಾರಗಳ ಉದಯದಿಂದಾಗಿ ಫೆಡರಲ್ ಪಾರಮ್ಯ ಹಾಗು "ರಾಜ್ಯಗಳ ಹಕ್ಕಿನ" ಕಲ್ಪನೆಗಳ ನಡುವೆ ಅನಿವಾರ್ಯ ಸೆಣೆಸಾಟ ನಡೆಯುತ್ತಿದೆ. ಫೆಡರಲ್ ಸಂವಿಧಾನಗಳಲ್ಲಿ ಅಧಿಕಾರದ ಐತಿಹಾಸಿಕ ವಿಂಗಡನೆಯು, ಅನಿವಾರ್ಯವಾಗಿ ವಿವಿಧ ಅತಿಕ್ರಮಣಕ್ಕೆ ಗುರಿಯಾಗಿದೆ. ಉದಾಹರಣೆಗೆ, ವಿದೇಶಾಂಗ ವ್ಯವಹಾರಕ್ಕೆ ಜವಾಬ್ದಾರಿಯಾದ ಕೇಂದ್ರ ಸರ್ಕಾರಗಳು, ಪರಮಾಧಿಕಾಯುಳ್ಳ ರಾಜ್ಯ ಅಥವಾ ಪ್ರಾಂತ ಪ್ರದೇಶಗಳಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳುತ್ತವೆ, ಉದಾಹರಣೆಗೆ ಪರಿಸರದ ಬಗ್ಗೆ ಅಥವಾ ಅರೋಗ್ಯ ಮಟ್ಟಗಳು, ರಾಷ್ಟ್ರೀಯ ಮಟ್ಟದಲ್ಲಿ ಮಾಡಿಕೊಳ್ಳಲಾಗುವಂತಹ ಒಪ್ಪಂದಗಳು ನ್ಯಾಯವ್ಯಾಪ್ತಿಯ ಅತಿಕ್ರಮಣ ಹಾಗು ವಿರುದ್ಧವಾದ ಕಾನೂನುಗಳನ್ನು ಸೃಷ್ಟಿಸಬಹುದು. ಈ ಅತಿಕ್ರಮಣವು ಆಂತರಿಕ ಕಲಹಗಳನ್ನು ಉಂಟುಮಾಡುವ ಸಂಭವವಿರುತ್ತದೆ. ಇದು ಸಂವಿಧಾನ ತಿದ್ದುಪಡಿಗೆ ಹಾಗು ಕಾನೂನು ನಿರ್ಧಾರಕ್ಕೆ ಎಡೆ ಮಾಡಿಕೊಡುತ್ತದೆ, ನಂತರ ಇವು ಸಮತೋಲನದ ಅಧಿಕಾರಕ್ಕೆ ದಾರಿ ಮಾಡಬಹುದು.

ವಿದೇಶಾಂಗ ವ್ಯವಹಾರವು ಪ್ರಾಂತಗಳ ಅಥವಾ ಒಂದು ಫೆಡರಲ್ ಸರ್ಕಾರದ ವಿಚಾರಣಾಧಿಕಾರಕ್ಕೆ ಬರುವುದಿಲ್ಲ. ಕೆಲವು ರಾಜ್ಯಗಳು, ತಮ್ಮ ಸಾಂವಿಧಾನಿಕ ವಿಶೇಷಾಧಿಕಾರ ಹಾಗು ಅಗತ್ಯ ಆಸಕ್ತಿಗೆ ಅನುಗುಣವಾಗಿ ಅಂತಾರಾಷ್ಟ್ರೀಯ ಸಂಬಂಧಗಳನ್ನು ಕಾನೂನುಬದ್ಧವಾಗಿ ನಡೆಸಲು ಅವಕಾಶ ನೀಡುತ್ತವೆ. ಉಪ ರಾಷ್ಟ್ರೀಯ ಅಧಿಕಾರಗಳು ಸಹಾಯಕ ರಾಜತಾಂತ್ರಿಕತೆಯ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಿವೆ. ಇದು ಕಾನೂನು ಚೌಕಟ್ಟಿನೊಳಗೆ ನಡೆಯಬಹುದು ಅಥವಾ ಕೇಂದ್ರಾಧಿಕಾರದಿಂದ ನ್ಯಾಯ ಸಮ್ಮತವೆಂದು ಅಂಗೀಕಾರಗೊಂಡು ಅನಧಿಕೃತವಾಗಿಯೂ ನಡೆಯಬಹುದು.

ಫ್ರಾನ್ಸ್ ಹಾಗು ಚೀನಾದಂತಹ ಏಕೀಕೃತ ರಾಷ್ಟ್ರಗಳಲ್ಲಿ, ಪ್ರಾಂತಗಳು ರಾಷ್ಟ್ರೀಯ, ಕೇಂದ್ರ ಸರ್ಕಾರದ ಅಧೀನದಲ್ಲಿರುತ್ತವೆ. ಒಟ್ಟಾರೆ ಹೇಳುವುದಾದರೆ, ಕೇಂದ್ರ ಸರ್ಕಾರವು ತನ್ನ ನ್ಯಾಯಾಧಿಕರಣದ ವ್ಯಾಪ್ತಿಯೊಳಗೆ ಪ್ರಾಂತಗಳನ್ನು ಸೃಷ್ಟಿಸಬಹುದು ಅಥವಾ ರದ್ದು ಪಡಿಸಬಹುದು.

ಪ್ರಸಕ್ತ ಪ್ರಾಂತಗಳು[ಬದಲಾಯಿಸಿ]

ದ್ವಿತೀಯ-ಹಂತದ ರಾಜಕೀಯ ಅಸ್ತಿತ್ವಗಳಲ್ಲಿ ಎಲ್ಲವನ್ನು "ಪ್ರಾಂತ"ಗಳೆಂದು ಕರೆಯುವುದಿಲ್ಲ. ಅರಬ್ ರಾಷ್ಟ್ರಗಳಲ್ಲಿ, ಸರ್ಕಾರದ ದ್ವಿತೀಯಕ ಮಟ್ಟವನ್ನು ಮುಹ್ಫಜಹ್ ಎಂದು ಕರೆಯಲಾಗುತ್ತದೆ, ಇದನ್ನು ಸಾಮಾನ್ಯವಾಗಿ "ಗವರ್ನರನ ಪ್ರಾಂತ"ವೆಂದು ತರ್ಜುಮೆ ಮಾಡಬಹುದು.

ಪೋಲಂಡ್ ನಲ್ಲಿ, "ಪ್ರಾಂತ"ಕ್ಕಿರುವ ಸಮಾನಾಂತರ ಪದವೆಂದರೆ "województwo ," ಇದನ್ನು ಆಂಗ್ಲ ಭಾಷೆಯಲ್ಲಿ ಕೆಲವೊಂದು ಬಾರಿ "ವೋಯಿವೋಡೆಶಿಪ್" ಎಂದು ಕರೆಯಲಾಗುತ್ತದೆ.

ಪೆರು ನಲ್ಲಿ, ಪ್ರಾಂತಗಳು ಸರ್ಕಾರದ ತೃತೀಯ ಘಟಕಗಳಾಗಿವೆ, ಏಕೆಂದರೆ ರಾಷ್ಟ್ರವು ಇಪ್ಪತ್ತೈದು ಪ್ರದೇಶಗಳಾಗಿ, 194 ಪ್ರಾಂತಗಳಾಗಿ ಉಪವಿಭಾಗವಾಗಿದೆ. ಚಿಲಿ ರಾಷ್ಟ್ರವೂ ಸಹ ಇದೇ ರೀತಿಯಾದ ಮಾದರಿ ಹೊಂದಿದೆ, ಇದು 15 ಪ್ರದೇಶಗಳು, 53 ಪ್ರಾಂತಗಳಾಗಿ, ಉಪವಿಭಾಗಗಳಾಗಿ ವಿಂಗಡಣೆಯಾಗಿದೆ, ಪ್ರತಿ ಪ್ರಾಂತದ ಆಡಳಿತವನ್ನು ಅಧ್ಯಕ್ಷರು ನೇಮಕ ಮಾಡಿದ ರಾಜ್ಯಪಾಲರು ನಡೆಸುತ್ತಾರೆ.

ಐತಿಹಾಸಿಕವಾಗಿ, ನ್ಯೂಜಿಲೆಂಡ್ ಸಹ ಪ್ರಾಂತಗಳಾಗಿ ವಿಂಗಡಣೆಯಾಗಿತ್ತು, ಪ್ರತಿಯೊಂದು ಪ್ರಾಂತವು ತನ್ನದೇ ಆದ ಮೇಲ್ವಿಚಾರಕರು ಹಾಗು ಪ್ರಾಂತೀಯ ಮಂಡಳಿ ಹೊಂದಿದೆ, ಜೊತೆಗೆ ಇವರು ಗಮನಾರ್ಹ ಜವಾಬ್ದಾರಿಗಳನ್ನು ವಹಿಸಿಕೊಂಡಿರುತ್ತಾರೆ. ಆದಾಗ್ಯೂ, ವಸಾಹತು ನೆಲೆಯು(ಆ ಅವಧಿಯಲ್ಲಿದ್ದ) ಒಂದು ಸಂಯುಕ್ತ ಸರ್ಕಾರವಾಗಿ ಅಭಿವೃದ್ಧಿ ಹೊಂದಲೇ ಇಲ್ಲ; ಬದಲಿಗೆ, 1876ರಲ್ಲಿ ಪ್ರಾಂತಗಳನ್ನು ರದ್ದು ಪಡಿಸಲಾಯಿತು. ಹಳೆಯ ಪ್ರಾಂತೀಯ ಸೀಮೆಗಳು, ಕೆಲವು ನಿರ್ದಿಷ್ಟ ಸಾರ್ವಜನಿಕ ರಜಾದಿನಗಳನ್ನು ಅನ್ವಯ ಮಾಡಲು ಇದರ ಬಳಕೆಯನ್ನು ಮುಂದುವರೆಸಿದರು. ವರ್ಷಾಂತರಗಳಲ್ಲಿ, ಕೇಂದ್ರ ಸರ್ಕಾರವು ಉಪ-ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಉದ್ದೇಶಗಳ ಏಜನ್ಸಿಯನ್ನು ರೂಪಿಸಿದಾಗ, ಇವುಗಳು ಸಾಮಾನ್ಯವಾಗಿ ಹಳೆಯ ಪ್ರಾಂತೀಯ ಸೀಮೆಗಳನ್ನು ಅನುಸರಿಸುತ್ತಿದ್ದವು ಅಥವಾ ಬಹುಮಟ್ಟಿಗೆ ಹೋಲುತ್ತಿದ್ದವು. ಪ್ರಸಕ್ತ ಉದಾಹರಣೆಗಳಲ್ಲಿ 16 ಪ್ರದೇಶಗಳಾಗಿ ನ್ಯೂಜಿಲೆಂಡ್ ವಿಂಗಡಣೆಯಾಗಿರುವುದೂ ಸೇರಿದೆ, ಜೊತೆಗೆ 21 ಡಿಸ್ಟ್ರಿಕ್ಟ್ ಹೆಲ್ತ್ ಬೋರ್ಡ್ ಗಳಾಗಿಯೂ ಸಹ ವಿಂಗಡಣೆಯಾಗಿದೆ. ಕೆಲವೊಂದು ಬಾರಿ ದಿ ಪ್ರಾವಿನ್ಸ್ (ಪ್ರಾಂತಗಳು) ಎಂಬ ಪದವನ್ನು ನ್ಯೂಜಿಲೆಂಡ್ ನ ಹಳ್ಳಿಗಾಡು ಹಾಗು ಪ್ರಾದೇಶಿಕ ಭಾಗಗಳನ್ನು ಸೂಚಿಸಲು ಒಟ್ಟಾರೆಯಾಗಿ ಬಳಸಲಾಗುತ್ತದೆ, ಅದೆಂದರೆ, ರಾಷ್ಟ್ರದ ಹೊರಭಾಗದಲ್ಲಿರುವ ಕೆಲವೊಂದು ಪ್ರದೇಶಗಳು ಅಥವಾ "ಮುಖ್ಯ ಕೇಂದ್ರಗಳಲ್ಲಿ" ಎಲ್ಲವೂ - ಆಕ್ಲ್ಯಾಂಡ್, ವೆಲ್ಲಿಂಗ್ಟನ್, ಕ್ರೈಸ್ಟ್ ಚರ್ಚ್, ಹ್ಯಾಮಿಲ್ಟನ್ ಹಾಗು ಡುನೆಡಿನ್.

ಆಧುನಿಕ ಪ್ರಾಂತಗಳು[ಬದಲಾಯಿಸಿ]

ಹಲವು ರಾಷ್ಟ್ರಗಳಲ್ಲಿ, ಒಂದು ಪ್ರಾಂತವು ತುಲನಾತ್ಮಕವಾಗಿ ಉಪ-ರಾಷ್ಟ್ರೀಯ ಸರ್ಕಾರದ ಸಣ್ಣ ಅಸಂವಿಧಾನಿಕ ಮಟ್ಟವಾಗಿರುತ್ತದೆ, ಇದು UK ಪ್ರಾಂತ ದಿಂದ [[ಅಮೇರಿಕ ಸಂಯುಕ್ತ ಸಂಸ್ಥಾನದ ರಾಜ್ಯಗಳು|U.S.ರಾಜ್ಯಕ್ಕೆ ತನ್ನ ಗಾತ್ರದಲ್ಲಿ ವಿಭಿನ್ನತೆ ಪಡೆದಿದೆ.– ಸರ್ಕಾರದ ಒಂದು ಸ್ವಯಮಾಧಿಕಾರದ ಮಟ್ಟ ಹಾಗು ಒಂದು ಸಂಯುಕ್ತ ಸರ್ಕಾರದ ಸಾಂವಿಧಾನಿಕ ಅಂಗ ಅಥವಾ ಒಕ್ಕೂಟ]], ಸಾಮಾನ್ಯವಾಗಿ ಒಂದು ದೊಡ್ಡ ಭೂಪ್ರದೇಶ ಹೊಂದಿರುತ್ತದೆ. ಚೀನಾದಲ್ಲಿ, ಪ್ರಾಂತವು ಒಂದು ಏಕೀಕೃತ ರಾಜ್ಯದ ಒಂದು ಉಪ-ರಾಷ್ಟ್ರೀಯ ಪ್ರದೇಶವಾಗಿರುತ್ತದೆ; ಇದರರ್ಥ ಒಂದು ಪ್ರಾಂತವನ್ನು ಕೇಂದ್ರ ಸರ್ಕಾರವು ರಚಿಸಬಹುದು ಅಥವಾ ರದ್ದು ಪಡಿಸಬಹುದು.

ಫಿಲಿಫೈನ್ಸ್, ಬೆಲ್ಜಿಯಂ, ಸ್ಪೇನ್ ಹಾಗು ಇಟಲಿಯಲ್ಲಿ ಒಂದು ಪ್ರಾಂತವು ಸರ್ಕಾರದ ಒಂದು ವಿಶಿಷ್ಟ ಘಟಕವಾಗಿದೆ; ಹಾಗು ಕೆನಡಾ, ಕಾಂಗೋ ಹಾಗು ಅರ್ಜೆಂಟೀನ ದಲ್ಲಿ ಒಂದು ಸಾಂವಿಧಾನಿಕ ಸ್ವಯಮಾಧಿಕಾರದ ಪ್ರದೇಶವಾಗಿದೆ.

ಇಟಲಿ ಹಾಗು ಚಿಲಿ ನಲ್ಲಿ, ಪ್ರಾಂತವು ಒಂದು ಪ್ರದೇಶದ ಆಡಳಿತಾತ್ಮಕ ಉಪವಿಭಾಗವಾಗಿದೆ, ಇದು ರಾಜ್ಯದ ಮೊದಲ ಆಡಳಿತಾತ್ಮಕ ಪ್ರದೇಶ ಉಪವಿಭಾಗವಾಗಿದೆ. ಇಟಾಲಿಯನ್ ಪ್ರಾಂತಗಳು ಕೋಮುನಿ (ಕಮ್ಯೂನ್ಸ್) ಎಂದು ಕರೆಯಲ್ಪಡುವ ಹಲವರು ಆಡಳಿತಾತ್ಮಕ ಉಪವಿಭಾಗಗಳನ್ನು ಒಳಗೊಂಡಿರುತ್ತದೆ. ಚಿಲಿಯಲ್ಲಿ, ಇವುಗಳನ್ನು ಕೋಮುನಗಳು ಎಂದು ಕರೆಯಲಾಗುತ್ತದೆ.

ಐದು ಕೆನೆಡಿಯನ್ ಪ್ರಾಂತಗಳಾದ– ಒಂಟಾರಿಯೋ, ಕ್ಯೂಬೆಕ್, ನ್ಯೂಬ್ರುನ್ಸ್ ವಿಕ್, ನೋವ ಸ್ಕಾಟಿಯ ಹಾಗು ಪ್ರಿನ್ಸ್ ಎಡ್ವರ್ಡ್ ಐಲ್ಯಾಂಡ್ ಗಳು–"ಕೌಂಟಿಗಳನ್ನು" ಆಡಳಿತಾತ್ಮಕ ಉಪವಿಭಾಗಗಳಾಗಿ ಹೊಂದಿವೆ. ಬ್ರಿಟಿಶ್ ಕೊಲಂಬಿಯದ ಕೆನೆಡಿಯನ್ ಪ್ರಾಂತವು "ಪ್ರಾದೇಶಿಕ ಜಿಲ್ಲೆಗಳನ್ನು" ಹೊಂದಿದೆ, ಇವುಗಳು ಮೇಲೆ ಹೇಳಲಾಗಿರುವ ಕೌಂಟಿಗಳಿಗೆ(ದ್ವೀಪ ಪ್ರದೇಶದ ಸಣ್ಣ ಭಾಗಗಳು) ಸಮಾನಾಂತರವಾಗಿ ಕಾರ್ಯ ನಿರ್ವಹಿಸುತ್ತವೆ.

ಐರ್ಲ್ಯಾಂಡ್ ನ್ನು ನಾಲ್ಕು ಐತಿಹಾಸಿಕ ಪ್ರಾಂತಗಳಾಗಿ ವಿಂಗಡಿಸಲಾಗಿದೆ.(ಐರ್ಲ್ಯಾಂಡ್ ನ ಪ್ರಾಂತಗಳು ವಿಭಾಗವನ್ನು ನೋಡಿ), ಇದರಲ್ಲಿ ಪ್ರತಿಯೊಂದು ಕೌಂಟಿಗಳಾಗಿ ಉಪವಿಭಾಗ ಮಾಡಲಾಗಿದೆ. ಈ ಪ್ರಾಂತಗಳೆಂದರೆ ಕಾನ್ನಚ್ಟ್ (ಪಶ್ಚಿಮಕ್ಕೆ), ಲೆಯಿನ್ಸ್ಟರ್(ಪೂರ್ವಕ್ಕೆ), ಮುನ್ಸ್ಟರ್(ದಕ್ಷಿಣಕ್ಕೆ) ಹಾಗು, ಬಹುಶಃ ಅತ್ಯಂತ ಜನಪ್ರಿಯವಾಗಿ (ದಿ ಟ್ರಬಲ್ಸ್ ಕಾರಣದಿಂದಾಗಿ, ಅಲ್ಸ್ಟರ್(ಉತ್ತರಕ್ಕೆ). ಇತ್ತೀಚಿಗೆ ಈ ಪ್ರಾಂತಗಳು ಸ್ವಲ್ಪಮಟ್ಟಿಗಿನ ಅಥವಾ ಯಾವುದೇ ಆಡಳಿತಾತ್ಮಕ ಚಟುವಟಿಕೆಯನ್ನು ಹೊಂದಿಲ್ಲ, ಆದಾಗ್ಯೂ ಕ್ರೀಡಾ ಮಹತ್ವವನ್ನು ಹೊಂದಿದೆ.

ಬ್ರಿಟಿಶ್ ಸಾಮ್ರಾಜ್ಯದ ಕೆಲವು ಕಡಲಾಚೆಯ ಭಾಗಗಳು "ಪ್ರಾಂತ"ವೆಂಬ ವಸಾಹತು ಹೆಸರನ್ನು ಪಡೆದಿವೆ.) (ಹೆಚ್ಚು ರೋಮನ್ ಅರ್ಥದಲ್ಲಿ), ಉದಾಹರಣೆಗೆ ಪ್ರಾವಿನ್ಸ್ ಆಫ್ ಕೆನಡಾ (ಕೆನಡಾದ ಪ್ರಾಂತ) ಹಾಗು ಪ್ರಾವಿನ್ಸ್ ಆಫ್ ಸೌತ್ ಆಸ್ಟ್ರೇಲಿಯ(ದಕ್ಷಿಣ ಆಸ್ಟ್ರೇಲಿಯದ ಪ್ರಾಂತ)(ನಂತರದನ್ನು, ಆಸ್ಟ್ರೇಲಿಯದ ಬೇರೆ ಭಾಗಗಳಲ್ಲಿರುವ ಶಿಕ್ಷೆಗೊಳಗಾದವರು ವಾಸಿಸುವ "ವಸಾಹತು ನೆಲೆ"ಗಳಿಂದ ವಿಂಗಡಿಸಲು ಈ ಹೆಸರನ್ನು ಬಳಸಲಾಗುತ್ತದೆ). ಇದೆ ರೀತಿಯಾಗಿ, ಪೋರ್ಚುಗೀಸ್ ವಸಾಹತು ನೆಲೆಯಲ್ಲಿ ಮೊಜಾಂಬಿಕ್ ಒಂದು "ಪ್ರಾಂತ"ವಾಗಿತ್ತು.

ರಷ್ಯಾ[ಬದಲಾಯಿಸಿ]

"ಪ್ರಾಂತ" ಎಂಬ ಪದವನ್ನು ಕೆಲವೊಂದು ಬಾರಿ ರಷ್ಯಾದ ಐತಿಹಾಸಿಕ ಗವರ್ನರ್ ಅಧಿಕಾರ ವ್ಯಾಪ್ತಿಗೆ (ಗುಬರ್ನಿಯ ಗಳಿಗೆ ) ಸೂಚಿಸಲಾಗುತ್ತದೆ. ಈ ಪದವು ಪ್ರಾಂತಗಳಿಗೂ ಸಹ ಸೂಚಿತವಾಗಿದೆ (провинции), ಇವುಗಳನ್ನು ಗುಬರ್ನಿಯಗಳ ಉಪವಿಭಾಗಗಳಾಗಿ 1719ರಲ್ಲಿ ಪರಿಚಯಿಸಲಾಯಿತು. ಜೊತೆಗೆ ಇದು 1775ರವರೆಗೂ ಅಧಿಕಾರದಲ್ಲಿತ್ತು. ಆಧುನಿಕ ಬಳಕೆಯಲ್ಲಿ, "ಪ್ರಾಂತ" ಎಂಬ ಪದವನ್ನು ರಷ್ಯಾದ ಒಬ್ಲಾಸ್ಟ್ ಗಳು ಹಾಗು ಕ್ರೈಗಳಿಗೆ ಸೂಚಿತವಾಗಿದೆ.

ಅತೀ ದೊಡ್ಡ ಪ್ರಾಂತ[ಬದಲಾಯಿಸಿ]

ವಿಶ್ವದ ಅತಿ ದೊಡ್ಡ ಜನಸಂಖ್ಯೆಯನ್ನು ಹೊಂದಿರುವ ಪ್ರಾಂತವೆಂದರೆ ಹೆನಾನ್, ಚೀನಾ, ಜನಸಂಖ್ಯೆ 93,000,911.

ಪ್ರದೇಶಾನುಸಾರವಾಗಿ ವಿಶ್ವದ ಅತ್ಯಂತ ದೊಡ್ಡ ಪ್ರಾಂತವೆಂದರೆ ಕ್ಯೂಬೆಕ್, ಕೆನಡಾ (1,500,000 km²).

"ಪ್ರಾಂತ"ಗಳೆಂದು ಬದಲಾಗಿರುವ ರಾಜ್ಯಾಡಳಿತಗಳು[ಬದಲಾಯಿಸಿ]

ರಾಷ್ಟ್ರ ಸ್ಥಳೀಯ ಹೆಸರು(ಗಳು) ಭಾಷೆ ಅಸ್ತಿತ್ವದಲ್ಲಿರುವ ಸಂಖ್ಯೆ
ಅಫ್ಘಾನಿಸ್ತಾನ್ ನ ಪ್ರಾಂತಗಳು ವಿಲಾಯ ಅರೇಬಿಕ್ ನಿಂದ 34
ಆಲ್ಜೀರಿಯದ ಪ್ರಾಂತಗಳು ವಿಲಾಯ ಅರೇಬಿಕ್ 48
ಅಂಗೋಲದ ಪ್ರಾಂತಗಳು ಪ್ರಾವಿನ್ಸಿಯ ಪೊರ್ಚುಗೀಸರು 18
ಅರ್ಜೆಂಟೀನದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 23
ಅರ್ಮೇನಿಯದ ಪ್ರಾಂತಗಳು ಮಾರ್ಜ್ ಅರ್ಮೆನಿಯನ್ 11
ಬೆಲಾರಸ್ ನ ಪ್ರಾಂತಗಳು ವೋಬ್ಲಾಸ್ಟ್ ಬೆಲರೂಶಿಯನ್ 7
ಬೆಲ್ಜಿಯಂನ ಪ್ರಾಂತಗಳು (ಫ್ಲೆಮಿಶ್ ಪ್ರದೇಶ) ಪ್ರಾವಿನ್ಸಿಯೇ ಡಚ್‌ 5
ಬೆಲ್ಜಿಯಂನ ಪ್ರಾಂತಗಳು (ವಲ್ಲೂನ್ ಪ್ರದೇಶ) ಪ್ರಾವಿನ್ಸ್ ಫ್ರೆಂಚ್ 5
ಬೊಲಿವಿಯದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 100
ಬಲ್ಗೇರಿಯದ ಪ್ರಾಂತಗಳು ಒಬ್ಲಾಸ್ಟ್ ಬಲ್ಗೇರಿಯನ್ 28
ಬುರ್ಕಿನ ಫಾಸೋದ ಪ್ರಾಂತಗಳು ಪ್ರಾವಿನ್ಸ್ ಫ್ರೆಂಚ್ 45
ಬುರುಂಡಿಯ ಪ್ರಾಂತಗಳು ಪ್ರಾವಿನ್ಸ್ ಫ್ರೆಂಚ್ 17
ಕಾಂಬೋಡಿಯದ ಪ್ರಾಂತಗಳು ಖಯೆತ್ 20
ಕೆನಡಾದ ಪ್ರಾಂತಗಳು ಪ್ರಾವಿನ್ಸ್ ಇಂಗ್ಲಿಷ್, ಫ್ರೆಂಚ್ 10
ಚಿಲಿಯ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 53
ಚೀನಾದ ಪ್ರಾಂತ ಷೆಂಗ್ (省) ಮ್ಯಾಂಡರಿನ್‌ ಚೈನೀಸ್ 22 + 1[೨]
ಕೋಸ್ಟ ರಿಕಾದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 7
ಕೊಲೊಂಬಿಯದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌
ಕ್ಯೂಬಾದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 15
ಡೆಮೊಕ್ರಾಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಪ್ರಾಂತಗಳು ಪ್ರಾಂತ ಫ್ರೆಂಚ್ 26
ಡಾಮಿನಿಕನ್ ರಿಪಬ್ಲಿಕ್ ನ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 33
ಈಕ್ವೆಡಾರ್ ನ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 24
ಈಕ್ವಿಟೋರಿಯಲ್ ಗಿನ್ನಿಯ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 7
ಫಿಜಿಯ ಪ್ರಾಂತಗಳು ಯಸನ ಫಿಜಿಯನ್ನರು 14
ಫಿನ್ಲ್ಯಾಂಡ್ ನ ಪ್ರಾಂತಗಳು ಲ್ಲಾನಿತ್ ಅಥವಾ ಲಾನ್ ಫಿನ್ನಿಶ್, ಸ್ವೀಡಿಶ್ 6
ಗಬೋನ್ ನ ಪ್ರಾಂತಗಳು ಪ್ರಾವಿನ್ಸ್ ಫ್ರೆಂಚ್ 9
ಗ್ರೀಸ್ ನ ಪ್ರಾಂತಗಳು επαρχία (ಎಪರ್ಚಿಯ) ಗ್ರೀಕ್ 73
ಇಂಡೋನೇಷಿಯದ ಪ್ರಾಂತಗಳು ಪ್ರಾವಿನ್ಸಿ ಅಥವಾ ಪ್ರಾಪಿನ್ಸಿ ಇಂಡೋನೆಷಿಯನ್‌ 33
ಇರಾನ್ ನ ಪ್ರಾಂತಗಳು ಓಸ್ಟನ್ ಪರ್ಷಿಯನ್‌ 30
ಐರ್ಲ್ಯಾಂಡ್ ನ ಪ್ರಾಂತಗಳು ಕುಯಿಗೆ ಗೇಲಿಕ್ 4
ಇಟಲಿಯ ಪ್ರಾಂತಗಳು ಪ್ರಾವಿನ್ಸಿಯ ಇಟಾಲಿಯನ್‌ 110
ಕಜಕ್ ಸ್ತಾನ್ ನ ಪ್ರಾಂತಗಳು ಒಬ್ಲಾಸಿ ಕಝಕ್‌ 14
ಕೀನ್ಯದ ಪ್ರಾಂತಗಳು ಪ್ರಾಂತ ಇಂಗ್ಲಿಷ್ 8
ಕಿರ್ಗಿಸ್ತಾನ್ ನ ಪ್ರಾಂತಗಳು ಒಬ್ಲಾಸ್ಟಿ ಕಿರ್ಗಿಜಿಯನ್ 7
ಲಾವೋಸ್‌‌ ನ ಪ್ರಾಂತಗಳು ಕ್ಹೌಯೆಂಗ್ ಲಾವೋ 16
ಮಾಡಗಾಸ್ಕಾರ್ ನ ಪ್ರಾಂತಗಳು ಫಾರಿಟನಿ 6
ಮಂಗೋಲಿಯದ ಪ್ರಾಂತಗಳು ಐಮಗ್ ಅಥವಾ ಅಯ್ಮಗ್ (Аймаг) ಮಂಗೋಲಿಯನ್‌ 6
ಮೊಜಾಂಬಿಕ್ ನ ಪ್ರಾಂತಗಳು ಪ್ರಾವಿನ್ಸಿಯ ಪೊರ್ಚುಗೀಸರು 10
ನೆದರ್ಲೆಂಡ್ ನ ಪ್ರಾಂತಗಳು ಪ್ರಾವಿನ್ಸಿಯೇ ಡಚ್‌ 12
ಉತ್ತರ ಕೊರಿಯದ ಪ್ರಾಂತಗಳು ಡು ಅಥವಾ ಟು (도) ಕೊರಿಯನ್‌ 10
ಒಮಾನ್ ನ ಪ್ರಾಂತಗಳು ವಿಲಾಯ ಅರೇಬಿಕ್ ಸರಿಸುಮಾರು 60
ಪಾಕಿಸ್ತಾನ್ ನ ಪ್ರಾಂತಗಳು ಸುಬ ; ಬಹುವಚನ: ಸುಬೈ ಉರ್ದು 5
ಪನಾಮದ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 9
ಪಪುವ ನ್ಯೂ ಗಿನ್ನಿಯ ಪ್ರಾಂತಗಳು ಪ್ರಾವಿನ್ಸ್ ಇಂಗ್ಲೀಷರು 19
ಪೆರುನ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 195
ಫಿಲಿಫೈನ್ಸ್ ನ ಪ್ರಾಂತಗಳು ಲಲಾವಿಗನ್ ಅಥವಾ ಪ್ರಾಬಿನ್ಸ್ಯ ಫಿಲಿಪಿನೊ 80
ರವಾಂಡದ ಪ್ರಾಂತಗಳು ಇಂಟರ ಫ್ರೆಂಚ್ 5
ಸಾವೋ ಟೋಮೆ ಹಾಗು ಪ್ರಿನ್ಸಿಪಿಯ ಪ್ರಾಂತಗಳು ಪ್ರಾವಿನ್ಸಿಯ ಪೊರ್ಚುಗೀಸರು 2
ಸೌದಿ ಅರೇಬಿಯಾದ ಪ್ರಾಂತಗಳು ಮಿಂಟಕಹ್ ಅರೇಬಿಕ್ 13
ಸಿಯೆರ್ರ ಲೆಯೋನೆಯ ಪ್ರಾಂತಗಳು ಪ್ರಾಂತ ಇಂಗ್ಲೀಷ್ 3
ಸಾಲೊಮನ್ ದ್ವೀಪಗಳ ಪ್ರಾಂತಗಳು 9
ದಕ್ಷಿಣ ಆಫ್ರಿಕಾದ ಪ್ರಾಂತಗಳು ಪ್ರಾಂತ ಇಂಗ್ಲೀಷ್ 9
ದಕ್ಷಿಣ ಕೊರಿಯದ ಪ್ರಾಂತಗಳು ಡು ಅಥವಾ ಟು (도/道) ಕೊರಿಯನ್‌ 10
ಸ್ಪೇನ್ ನ ಪ್ರಾಂತಗಳು ಪ್ರಾವಿನ್ಸಿಯ ಸ್ಪ್ಯಾನಿಷ್‌ 50
ಶ್ರೀಲಂಕಾದ ಪ್ರಾಂತಗಳು 9
ತಜಿಕಿಸ್ತಾನ್ ನ ಪ್ರಾಂತಗಳು ವೆಲೋಯತಿ , ಅರೇಬಿಕ್ ನಿಂದ ವಿಲಾಯ ತಜಿಕ್ 3
ಥೈಲ್ಯಾಂಡ್ ನ ಪ್ರಾಂತಗಳು ಚಂಗ್ವಾತ್ (จังหวัด) ಥಾಯ್ 76
ಟರ್ಕಿಯ ಪ್ರಾಂತಗಳು ಇಲ್ ಟರ್ಕಿಷ್ 81
ತುರ್ಕಮೆನಿಸ್ತಾನದ ಪ್ರಾಂತ್ಯಗಳು ವೆಲಯತ್ (ಬಹುವಚನ: ವೆಲಾಯತ್ಲರ್ ) ವಿಲಾಯ ದಿಂದ ಟರ್ಕ್ಮೆನಿ 5
ಉಕ್ರೈನ್ ನ ಪ್ರಾಂತಗಳು ಒಬ್ಲಾಸ್ಟ್ ಉಕ್ರೇನಿಯನ್ 24
ಉಜ್ಬೇಕಿಸ್ತಾನ್ ನ ಪ್ರಾಂತಗಳು ವಿಲೋಯತ್ (ಬಹುವಚನ: ವಿಲೋಯತ್ಲರ್ ) ಅರೇಬಿಕ್ ನಿಂದ ವಿಲಾಯ 12
ವನುವಾಟುದ ಪ್ರಾಂತಗಳು 6
ವಿಯೆಟ್ನಾಂನ ಪ್ರಾಂತಗಳು ಟಿನ್ಹ್ ವಿಯೆಟ್ನಾಮೀಸ್ 58
ಜಾಂಬಿಯದ ಪ್ರಾಂತಗಳು ಪ್ರಾವಿನ್ಸ್ ಇಂಗ್ಲೀಷ್ 9
ಜಿಂಬಾಬ್ವೆಯ ಪ್ರಾಂತಗಳು ಪ್ರಾವಿನ್ಸ್ ಇಂಗ್ಲೀಷ್ 8

ಐತಿಹಾಸಿಕ ಪ್ರಾಂತಗಳು[ಬದಲಾಯಿಸಿ]

ಪ್ರಾಚೀನ, ಮಧ್ಯಕಾಲೀನ ಹಾಗು ಊಳಿಗಮಾನ್ಯ[ಬದಲಾಯಿಸಿ]

  • ಕಲೀಫ್ಹನ ಅಧಿಕಾರ ಹಾಗು ತರುವಾಯ ಸುಲ್ತಾನ್ ಗಳು: ನೋಡಿ ಎಮಿರೇಟ್
  • ಖಾನೆತ್, ಪ್ರಾಂತ ಹಾಗು ಸ್ವತಂತ್ರ ರಾಜ್ಯ ಎಂಬ ಎರಡೂ ಅರ್ಥವನ್ನು ನೀಡುತ್ತದೆ, ಪ್ರತಿಯೊಂದಕ್ಕೂ ಒಬ್ಬ ಖಾನ್ ಮುಖ್ಯಸ್ಥರಾಗಿರುತ್ತಾರೆ.
  • ಬೈಜಾನ್ಟಿನ್ ಸಾಮ್ರಾಜ್ಯ: ನೋಡಿ ಗವರ್ನರನ ಪ್ರಾಂತ, ಥೇಮ
  • ಫ್ಯಾರೋನಿಕ್ ಈಜಿಪ್ಟ್: ನೋಡಿ ನೋಮೆ (ಈಜಿಪ್ಟ್)
  • ಫ್ರ್ಯಾಂಕಿಶ್ (ಕ್ಯಾರೊಲಿನ್ಗಿಯನ್) 'ಮರುಸ್ಥಾಪಿತವಾದುದು' ಪವಿತ್ರ ರೋಮನ್ ಸಾಮ್ರಾಜ್ಯ: ನೋಡಿ ಗೂ ಹಾಗು ಕೌಂಟಿ
  • ಹಬ್ಸ್ಬರ್ಗ್ ಭೂಪ್ರದೇಶಗಳಲ್ಲಿ, ಸಾಂಪ್ರದಾಯಿಕ ಪ್ರಾಂತಗಳನ್ನೂ ಭಾಗಶಃ 19ನೇ ಶತಮಾನದ ಆಸ್ಟ್ರಿಯ-ಹಂಗೇರಿಯ ಲಾನ್ಡರ್ ಎಂದು ವಿವರಿಸಲಾಗುತ್ತದೆ.
  • ಮುಘಲ್ ಸಾಮ್ರಾಜ್ಯ: ಸುಬಃ
  • ಒಟ್ಟೋಮನ್ ಸಾಮ್ರಾಜ್ಯದ ಪ್ರಾಂತಗಳು ವಿವಿಧ ಮಾದರಿಯ ಗವರ್ನರ್ ಗಳನ್ನು ಹೊಂದಿದ್ದವು.(ಸಾಧಾರಣವಾಗಿ ಒಬ್ಬ ಪಾಷ), ಆದರೆ ಬಹುತೇಕವಾಗಿ ವಲಿ ನಾಮಾಂಕಿತಗೊಂಡಿರುತ್ತಿದ್ದರು, ಈ ರೀತಿಯಾಗಿ ಮುಖ್ಯ ಪದ ವಿಲಯೆತ್ ಸಾಧಾರವಾಗಿ ಉಪವಿಭಾಗವಾಗುತ್ತಿತ್ತು.(ಸಾಮಾನ್ಯವಾಗಿ ಬೇಯ್ಲಿಕ್ ಗಳು ಅಥವಾ ಸಂಜಕ್ ಗಳು), ಕೆಲವೊಂದು ಬಾರಿ ಗವರ್ನರ್ ನ ಅಧಿಕಾರದಲ್ಲಿರುತ್ತಿದ್ದವು. (ಬೇಯ್ಲರ್ಬೆಯ್ ಎಂದು ನಾಮಾಂಕಿತಗೊಂಡಿರುತ್ತಿದ್ದರು).
  • ಆಚಯೇಮೇನಿಡ್ ಪರ್ಷಿಯಾ (ಹಾಗು ಬಹುಶಃ ಮೀಡಿಯಕ್ಕೆ ಮುಂಚಿತವಾಗಿ, ಆಕ್ರಮಣದ ನಂತರ ಹಾಗು ಅಲೆಕ್ಸಾಂಡರ್ ದಿ ಗ್ರೇಟ್ ನಿಂದ ಮತ್ತಷ್ಟು ವಿಸ್ತಾರಗೊಂಡ ನಂತರ, ಹಾಗು ದೊಡ್ಡ ಹೆಲ್ಲೆನಿಸ್ಟಿಕ್ ಉತ್ತರಾಧಿಕಾರ ರಾಜ್ಯಗಳು: ನೋಡಿ ಕ್ಷತ್ರಪನ ಪ್ರಾಂತ
  • ರೋಮನ್ ಸಾಮ್ರಾಜ್ಯವು ಪ್ರಾಂತಗಳಾಗಿ ವಿಭಾಗಗಳಾಗಿದ್ದವು)(ಪ್ರಾವಿನ್ಸಿಯೇ ).
  • ಟಾರ್ಟರ್ ಖನೆಟ್ ಆಫ್ ಕಜನ್: ಐದು ದರುಗ('ದಿಕ್ಕು').

ವಸಾಹತು ಹಾಗು ಪೂರ್ವ ಆಧುನೀಕತೆ[ಬದಲಾಯಿಸಿ]

  • ಸ್ಪಾನಿಶ್ ಸಾಮ್ರಾಜ್ಯ, ಹಲವಾರು ಅಧಿಕಾರವರ್ಗಗಳಲ್ಲಿ:
    • ವೈಸರಾಯ್ ನ ಅಧಿಕಾರ ಮೇಲೆ
    • ಇಂಟೆನ್ಡೆನ್ಸಿಯ
  • ಬ್ರಿಟಿಶ್ ವಸಾಹತು ನೆಲೆಗಳು:
    • ಕೆನಡಾದ ಪ್ರಾಂತ (1840-1867)
    • ಭಾರತದ ಪ್ರಾಂತಗಳು
    • ನ್ಯೂಜಿಲೆಂಡ್ ನ ಪ್ರಾಂತಗಳು (1841-1876)
    • ನೈಜೀರಿಯದ ಪ್ರಾಂತಗಳು
    • ದಕ್ಷಿಣ ಆಸ್ಟ್ರೇಲಿಯದ ಪ್ರಾಂತ (ಇದೀಗ ಒಂದು ಆಸ್ಟ್ರೇಲಿಯನ್ ರಾಜ್ಯ)
  • ಹಿಂದಿನ ಬ್ರೆಜಿಲ್ ಪ್ರಾಂತಗಳು
  • ಹಿಂದಿನ ಫ್ರಾನ್ಸ್ ಪ್ರಾಂತಗಳು
  • ಹಿಂದಿನ ಐರ್ಲ್ಯಾಂಡ್ ನ ಪ್ರಾಂತಗಳು
  • ಹಿಂದಿನ ಜಪಾನ್ ಪ್ರಾಂತಗಳು
  • ಪ್ರುಷ್ಯದ ಪ್ರಾಂತಗಳು, ಒಂದು ಹಿಂದಿನ ಜರ್ಮನ್ ಸಾಮ್ರಾಜ್ಯ/ಗಣರಾಜ್ಯ
  • ಹಿಂದಿನ ಸ್ವೀಡನ್ ಪ್ರಾಂತಗಳು
  • ಹಿಂದಿನ ರಿಪಬ್ಲಿಕ್ ಆಫ್ ದಿ ಸೆವೆನ್ ಯುನೈಟೆಡ್ ಪ್ರಾವಿನ್ಸಸ್ (ದಿ ನೆದರ್ಲೆಂಡ್ಸ್)
  • ಹಿಂದಿನ ಯುನೈಟೆಡ್ ಪ್ರಾವಿನ್ಸಸ್ ಆಫ್ ಸೆಂಟ್ರಲ್ ಅಮೆರಿಕ
  • ಹಿಂದಿನ ಯುನೈಟೆಡ್ ಪ್ರಾವಿನ್ಸಸ್ ಆಫ್ ದಿ ರಿಯೋ ಡೆ ಲಾ ಪ್ಲಾಟ

ಇವನ್ನೂ ಗಮನಿಸಿ[ಬದಲಾಯಿಸಿ]

  • ಪ್ರಾಂತಾಧಿಪತಿ
  • ಪ್ರದೇಶ(ಪ್ರಾಂತ)
  • ಪ್ರಾಂತೀಯತೆ
  • ಪ್ರಾದೇಶಿಕತೆ(ರಾಜಕೀಯ)
  • Rise: The Vieneo Province

ಟಿಪ್ಪಣಿಗಳು[ಬದಲಾಯಿಸಿ]

  1. ದಿ ಪರ್ಸ್ಪೆಕ್ಟೀವ್ ಆಫ್ ದಿ ವರ್ಲ್ಡ್ , 1984, ಪುಟ. 284.
  2. ದಿ ಪೀಪಲ್'ಸ್ ರಿಪಬ್ಲಿಕ್ ಆಫ್ ಚೈನಾ(PRC)ಯು ತಾನು 23 ಪ್ರಾಂತಗಳನ್ನು ಹೊಂದಿರುವುದಾಗಿ ಸಮರ್ಥಿಸಿಕೊಳ್ಳುತ್ತದೆ, ಇದರಲ್ಲಿ ಒಂದು ಪ್ರಾಂತ ತೈವಾನ್, ಇದರ ಮೇಲೆ PRC ಯಾವುದೇ ನಿಯಂತ್ರಣವನ್ನು ಹೊಂದಿಲ್ಲ. ದಿ ರಿಪಬ್ಲಿಕ್ ಆಫ್ ಚೈನಾ(ಸಾಧಾರಣವಾಗಿ ತೈವಾನ್ ಎಂದು ಸೂಚಿತವಾಗುತ್ತದೆ.) ತೈವಾನ್ ಪ್ರಾಂತ ಹಾಗು ಫ್ಯುಜಿಯನ್ ಪ್ರಾಂತದ ಹಲವಾರು ಸಣ್ಣ ದ್ವೀಪಗಳ ನಿಯಂತ್ರಣವನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. REDIRECT Template:Terms for types of country subdivisions
"https://kn.wikipedia.org/w/index.php?title=ಪ್ರಾಂತ&oldid=1056540" ಇಂದ ಪಡೆಯಲ್ಪಟ್ಟಿದೆ