ದೇಯಿ ಬೈದ್ಯೆತಿ

ವಿಕಿಪೀಡಿಯ ಇಂದ
Jump to navigation Jump to search

ತುಳುನಾಡಿನ ಐತಿಹಾಸಿಕ ಅವಳಿ ವೀರರಾದ ಕೋಟಿ ಚೆನ್ನಯರ ತಾಯಿ ದೇಯಿಬೈದ್ಯೆತಿಯು ಬಿಲ್ಲವರ ಕುಲ ಕಸುಬಾದ ನಾಟಿವೈದ್ಯ ಪದ್ಧತಿಯ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದ್ದಾಳೆ. ಪಡುಮಲೆ ಬಲ್ಲಾಳರಿಗೆ ಮೃಗವನ್ನು ಬೇಟೆಯಾಡುವ ಸಮಯದಲ್ಲಿ ಕಾಲಿಗೆ ಕಾಸರಕದ ಮುಳ‍್ಳುತಾಗಿ ಗಾಯ ಉಲ್ಬಣಿಸಿ, ಪ‍್ರಾಣಾಂತಿಕ ಸ್ಥಿತಿಯಲ್ಲಿ ನೋವಿನಿಂದ ಅವರು ಒದ್ದಾಡುತ್ತಾರೆ. ಯಾವ ವೈದ್ಯರ ಚಿಕಿತ್ಸೆಯೂ ‌‌ಫಲಕಾರಿಯಾಗುವುದಿಲ್ಲ. ಆಗ ಬಲ್ಲಾಳರು ದೇಯಿಯನ್ನು ಕರೆತರಲು ಓಲೆಮಾನಿಯನ್ನು ಕಳುಹಿಸುವರು. ಏಳು ತಿಂಗಳು ತುಂಬಿತ್ತು. ಆ ಸಮಯದಲ್ಲಿ ಅವಳು ತನ್ನ ವೃತ್ತಿಗೆ ಅನುಗುಣವಾಗಿ ಅರಸರ ಕರೆಯನ್ನು ತಿರಸ್ಕರಿಸಲಾಗದೆ ಬಲ್ಲಾಳರ ಚಿಕಿತ್ಸೆಗಾಗಿ ಗಿಡಮೂಲಿಕೆಗಳನ್ನು ಸಂಗ್ರಹಿಸಿ ಬಲ್ಲಾಳರು ಕಳುಹಿಸಿದ್ದ ಪಲ್ಲಕಿಯನ್ನು ಬಳಸದೆ ಅದಕ್ಕೆ ಗೌರವ ಸೂಚಕವಾಗಿ ಬಾಳೆ ಎಲೆಯಲ್ಲಿ ಅಕ್ಕಿ, ತೆಂಗಿನಕಾಯಿ , ವೀಳ್ಯದೆಲೆ, ಅಡಿಕೆ ಇಟ್ಟು ಕಾಲ್ನಡಿಗೆಯಲ್ಲಿ ಹೊರಡುತ್ತಾಳೆ. ಪಾಡ್ದನದಲ್ಲಿ ಹೇಳುವಂತೆ ಮುಂದಿನಿಂದ ಗಂಡ ಕಾಂತಣ‍ಬೈದ್ಯ ‌‍ ಹಿಂದಿನಿಂದ ಅಣ್ಣ ಸಾಯನ ಬೈದ್ಯನ ಜೊತೆಯಲ್ಲಿ ಪಡುಮಲೆಗೆ ಪ್ರಯಾಣ ಬೆಳೆಸುತ್ತಾಳೆ.

ಬೀಡಿನಲ್ಲಿ ದೇಯಿಯು ಬಲ್ಲಾಳರ ಕಾಲಿನ ಗಾಯಕ್ಕೆ ಚಿಕಿತ್ಸೆ ಪ್ರಾರಂಭಿಸುತ್ತಾಳೆ. ಆ ಕಾಲದ ವೈದ್ಯ ಪದ್ಧತಿಯಂತೆ ಮೊದಲು ಕುಲ ದೈವಕ್ಕೆ ವಂದಿಸಿ ಬಲ್ಲಾಳರ ಕಾಲಿಗೆ ರಕ್ಷೆಯ ನೂಲು ಕಟ್ಟುತ್ತಾಳೆ. ಅನಂತರ ಚಿಕಿತ್ಸೆ ಪ್ರಾರಂಭಿಸುತ್ತಾಳೆ.ಚಿಕಿತ್ಸೆ ಬಗ್ಗೆ ಪಾಡ್ದಾನದಲ್ಲಿ ಈ ರೀತಿ ಹೇಳಿದೆ "ದೇಯಿಯು ಒಂದು ವರ್ಷದಲ್ಲಿ ನೀಡಬೇಕಾದ ಚಿಕಿತ್ಸೆಯನ್ನು ಮೂವತ್ತು ಅರುವತ್ತು ದಿನಗಳಲ್ಲಿ ಮಾಡುವಳು " ಎಂದು ಹೇಳಿದೆ. ಬಲ್ಲಾಳರ ಕಾಲಿನ ಗಾಯ ಗುಣವಾಗುತ್ತಾದೆ. ಅವರು ಸಂತೋಷದಿಂದ ಆಕೆಗೆ ಆಭರಣ , ಸೀರೆ, ಕಾಣಿಕೆಗಳನ್ನು ನೀಡಿ ಗೌರವಿಸುತ್ತಾರೆ. ಅಲ್ಲದೆ ಮುಂದೆ ಭವಿಷ್ಯತ್ತಿನಲ್ಲಿ ಆಕೆ ಗಂಡುಮಗು ಹೆತ್ತರೆ ಅವರಿಗೆ ವ್ಯವಸಾಯ ಮಾಡಲು ಗದ್ದೆಯನ್ನು ನೀಡುವುದಾಗಿಯು ಮಾತು ನೀಡುತ್ತಾರೆ.

ದೇಯಿಬೈದ್ಯೆತಿಯ ಹುಟ್ಟಿನ ಬಗ್ಗೆ ಜನಪದರು ಅತಿಮಾನುಷ ಕಥೆ ಹೆಣೆದಿದ್ದಾರೆ. ದೇವರ ಅನುಗ್ರಹದಿಂದ ಕೇಂಜವ ಹಕ್ಕಿಗಳ ಮೊಟ್ಟೆಯಿಂದ ಈಕೆ ಹುಟ್ಟಿಕೊಂಡವಳಂದು ಪಾಡ್ದಾನದಲ್ಲಿ ಹೇಳಿದೆ ಸಂತಾನ ಭಾಗ್ಯವಿಲ್ಲದೆ ಕೊರಗುತ್ತಿದ್ದ ಪೆಜನಾರ್ ಬ್ರಾಹ್ಮಣ ದಂಪತಿಗಳು ಈಮಗುವನ್ನು ಕಂಡು ತಮಗೆ ದೇವರು ಕರುಣಿಸಿದ ವರವೆಂದು ಭಾವಿಸಿ ಆಕೆ ಸ್ವರ್ಣಕೇದಗೆ ಎಂದು ನಾಮಕಅಣ ಮಾಡಿ ಪ್ರೀತಿತಿಂದ ಸಾಕಿ ಸಲಹುತ್ತಾರೆ ಮದುವೆಗೆ ಮೊದಲೆ ಋತುಮತಿಯಾಗುವ ಕಾರಣ ಕೇದಗೆಯ ಕಣ್ಣಿಗೆ ಬಟ್ಟೆ ಕಟ್ಟಿ ಸಂಕಮಲೆ ಕಾಡಿನಲ್ಲಿ ಬಿಟ್ಟು ಬರುತ್ತಾನೆ. ಅಲ್ಲಿ ಮೂರ್ತೆದಾರಿಕೆ ನಡೆಸುತ್ತಿದ್ದ ಸಾಯನ ಬೈದ್ಯನು ಅವಳನ್ನು ಕಂಡು ಮನೆಗೆ ಕರೆದುಕೊಂಡು ಬಂದು ಸಹೋದರಿಯಂತ ಸಾಕಿ ತನ್ನ ಭಾವ ಕಾಂತಣ್ಣ ಬೈದ್ಯನಿಗೆ ಮದುವೆ ಮಾಡಿ ಕೊಡುವನು

ಉಲ್ಲೇಖ[ಬದಲಾಯಿಸಿ]