ಜನಪದ ಹಾಡು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಜನಪದ ಹಾಡು ಎಂದರೆ ಹಳ್ಳಿಯ ಜನರ ಸಂಗೀತ. ಹಳ್ಳಿಯ ಜನರು ತಮ್ಮ ದಿನ ನಿತ್ಯ ಕೆಲಸಗಳನ್ನು ಮಾಡುವಾಗ ಹಾಗೂ ತಮ್ಮ ಬಿಡುವಿನ ಸಂದರ್ಭದಲ್ಲಿ ತಮ್ಮದೇ ಪದಗಳಲ್ಲಿ ಹಾಡುಗಳನ್ನು ಕಟ್ಟಿ ಹಾಡುತ್ತಿದ್ದರು. ಒಬ್ಬ ಮನುಷ್ಯ ಹೀಗೆ ಕಟ್ಟಿ ಹೇಳಿದ ಹಾಡು ಮತ್ತೊಬ್ಬರು ಹೇಳಿಕೊಳ್ಳುತ್ತ ಹೀಗೆ ಎಲ್ಲ ಜನಪದರ ಬಾಯಿಂದ ಬಾಯಿಗೆ ಹಾಡುಗಳನ್ನು ಹಾಡುತ್ತಿದ್ದರು.

ಉದಾಹರಣೆಗೆ : ಒಬ್ಬ ತಾಯಿ ತನ್ನ ಮಗು ಮನೆಯಲ್ಲಿ ಓಡಾಡುತ್ತಿದ್ದರೆ ಆಗುವ ಖುಷಿಯನ್ನು ಹಾಡಿನಲ್ಲಿ ಬಣ್ಣಿಸುವ ರೀತಿಯ ಜನಪದ ಹಾಡಿನ ನಾಲ್ಕು ಸಾಲುಗಳನ್ನು ನೋಡಬಹುದು.

ಕೂಸು ಇದ್ದ ಮನೆಗೆ ಬೀಸಣಿಕೆ ಯಾತಕ...

ಕೂಸು ಕಂದಯ್ಯ ಒಳ ಹೊರಗ.. ಕೂಸು ಕಂದಯ್ಯ

ಒಳಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ..

ಹೀಗೆ ಜನಪದ ಹಾಡು ತನ್ನತನವನ್ನು ಹಿಂದಿನಿಂದಲೂ ಉಳಿಸಿಕೊಳ್ಳುತ್ತಾ ಬಂದಿದೆ. ಹೀಗೆ ಜನಪದ ಹಾಡಿಗೆ ವಿಶೇಷ ಸ್ಥಾನವನ್ನು ಕೊಡಲಾಗಿದೆ. ಈ ಜನಪದ ಹಾಡುಗಳಿಂದಾಗಿ ಹಳ್ಳಿಯಿಂದ ಹಳ್ಳಿಗೆ, ನಗರದಿಂದ ನಗರಕ್ಕೆ, ಪಟ್ಟಣದಿಂದ ಪಟ್ಟಣಕ್ಕೆ ಜನಪದ ಹಾಡಿನ ಮಹತ್ವವನ್ನು ಜನಪದರು ಪರಿಚಯಿಸಿದ್ದಾರೆ. ಹೀಗೆ ಜನಪದ ಹಾಡುಗಳು ಎಲ್ಲಾ ಕಡೆ ಪರಿಚಯವಾಗಿಬಿಟ್ಟಿದೆ.