ಕೊಡದ ಕುಣಿತ

ವಿಕಿಪೀಡಿಯ ಇಂದ
Jump to navigation Jump to search

ಕೊಡದ ಕುಣಿತ[ಬದಲಾಯಿಸಿ]

ಮುನ್ನುಡಿ[ಬದಲಾಯಿಸಿ]

ಕೊಡದ ಕುಣಿತ ಬೆಳಗಾವಿ ಜಿಲ್ಲೆಯಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ಕುಣಿತ. ಬೆಳಗಾವಿ ಜಿಲ್ಲೆಯ ಮರಾಠಿಗರಲ್ಲಿ ಪ್ರಚಲಿತವಿರುವ ಈ ಕಲೆಯ ಮೂಲ ಮಹಾರಾಷ್ಟ್ರ. ಹಬ್ಬ ಹರಿದಿನ ಜಾತ್ರೆ ತೇರು, ಪರಿಸೆಗಳಲ್ಲಿ ಹಾಗು ಸಂತೋಷದ ಸಂದರ್ಭಗಳಲ್ಲಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ ಕೂಡ ಅಥವಾ ಬಿಂದಿಗೆಯನ್ನು ಊದುತ್ತಾ ಕುಣಿಯುವುದರಿಂದ ಕೊಡದ ಕುಣಿತ ಎನಿಸಿಕೊಂಡಿದೆ.

ಕಲೆಯ ವೈಶಿಷ್ಟ್ಯ[ಬದಲಾಯಿಸಿ]

ಇಪ್ಪತ್ತರಿಂದ ಮುವತ್ತೂ ಜನರಿರುವ ಈ ಕುಣಿತದಲ್ಲಿ ಒಂದೇ ಬಣ್ಣದ ನಿಕ್ಕರ್ ಮತ್ತು ಬನಿನು, ತಲೆಗೊಂದು ಬಣ್ಣದ ವಸ್ತ್ರ ಕಾಲಿಗೆ ಗೆಜ್ಜೆ, ಕೈಯಲ್ಲಿ ತಾಮ್ರ ಅಥವ ಹಿತ್ತಾಳೆಯ ಕೊಡ ಅಥವ ಬಿಂದಿಗೆ ಇವಿಷ್ಟು ಅವರ ವೇಷಭೂಷಣ. ಕೊಡವನ್ನು ಬಾಯಿ ಹತ್ತಿರ ಹಿಡಿದು ಭೊಂಭೊಂ ಎಂದು ಊದುತ್ತಾ ತಾಳಕ್ಕೆ ಕುಣಿಯುತ್ತಾರೆ. ಪ್ರಧಾನ ಕಲಾವಿದನೊಬ್ಬ ಮಧ್ಯೆ ನಿಂತು ಕೊಳಲನುದುತ್ತಾನೆ, ಕೊಳಲಿನ ನಾದ ಬದಲಾದಂತೆ ಕುಣಿತದ ರೂಪವು ಬದಲಾಗುತ್ತದೆ, ಕುಣಿತದಲ್ಲಿ ಕೃಷ್ಣಲೀಲೆಗೆ ಸಂಭಂದಿಸಿದ ಆಟಗಳು ಇವೆ, ಮಧ್ಯೆನಿಂತು ಕೊಳಲು ಊದುವ ಪ್ರಧಾನ ಗಾಯಕ ಕೃಷ್ಣನೆಂದು ಆತನ ಸುತ್ತಾ ತಿರುಗುತ್ತಾ ಬಿಂದಿಗೆ ಹಿಡಿದು ಕುಣಿಯುವವರೆಲ್ಲಾ ಗೋಪಿಕಾಸ್ತ್ರಿಯರೆಂಬ ಕಲ್ಪನೆಯಿದೆ. ಕಲಾವಿದರು ವೃತ್ತಾಕಾರವಾಗಿ ನಿಂತು ಸುತ್ತುತ್ತಾ ಕುಣಿಯುವುದರ ಜೊತೆಗೆ, ಎರಡು ಗುಂಪುಗಳಾಗಿ ಎದುರುಬದುರಾಗಿ ನಿಂತು ಕುಣಿಯುವ ಮತ್ತು ಕುಂತು ಕುಣಿಯುವ ವೈವಿಧ್ಯಗಳಿವೆ, ಹಾಗೆ ಕುಣಿಯುವಾಗ ಮೊದಲು ಎಡಗಾಲು ಹೆಜ್ಜೆಯನ್ನು ಊರಿ, ಬಲಗಾಲು ಹೆಜ್ಜೆಯನ್ನು ಸ್ವಲ್ಪಮೇಲಕ್ಕೆತ್ತಿ ಬೆನ್ನನ್ನು ಸ್ವಲ್ಪಬಾಗಿಸಿ ಬಿಂದಿಗೆಯನ್ನು ಊದುವುದು ಆಮೇಲೆ ಬಲಗಾಲನ್ನು ಊರಿ ಎಡಗಾಲನ್ನು ಮೇಲಕ್ಕೆತ್ತಿ ಊದುವುದು ಹೀಗೆ ನಾನಾ ರೀತಿಯಲ್ಲಿ ಕುಣಿತ ನಡೆಯುತ್ತದೆ. ಕೊಡ ಹಿಡಿದು ಜಡೆ ಆಟ ಆಡುವುದು ಉಂಟು, ಗೆಜ್ಜೆಯ ನಾದದ ಜೊತೆಗೆ ಬಿಂದಿಗೆ ಊದುವಿಕೆಯಿಂದ ಬರುವ ಭೋಂಭೋಂ ಸದ್ದು ಕುಣಿತಕ್ಕೆ ಮೆರಗನ್ನು ತಂದುಕೊಡುತ್ತದೆ.

ಉಲ್ಲೇಖ[ಬದಲಾಯಿಸಿ]

  1. ಹಿ.ಚಿ. ಬೋರಲಿಂಗಯ್ಯ, ಕರ್ನಾಟಕ ಜನಪದ ಕಲೆಗಳ ಕೋಶ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ, ೧೯೬೬.