ವಿಷಯಕ್ಕೆ ಹೋಗು

ಎಮ್.ಎ. ಚಿದಂಬರಂ ಕ್ರೀಡಾಂಗಣ

Coordinates: 13°03′46″N 80°16′46″E / 13.06278°N 80.27944°E / 13.06278; 80.27944
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಎಮ್.ಎ. ಚಿದಂಬರಂ ಕ್ರೀಡಾಂಗಣ
ಕ್ರೀಡಾಂಗಣ ಮಾಹಿತಿ
ಸ್ಥಳChepauk, Chennai
ಸ್ಥಾಪನೆ1916
ಸಾಮರ್ಥ್ಯ50,000
ಮಾಲೀಕತ್ವMadras Cricket Club
ವಾಸ್ತುಶಿಲ್ಪಿNatraj & Venkat Architects, Chennai / Hopkins Architects, England[೧]
ನಿರ್ವಹಣೆQuickcric8 Association
ಕೊನೆಗಳ ಹೆಸರು
Anna Pavilion End
V Pattabhiraman Gate End
ಅಂತರಾಷ್ತ್ರೀಯ ಮಾಹಿತಿ
ಮೊದಲ ಟೆಸ್ಟ್10 February 1934:  ಭಾರತ v  ಇಂಗ್ಲೆಂಡ್
ಕೊನೆಯ ಟೆಸ್ಟ್

11 December 2008:

 ಭಾರತ v  ಇಂಗ್ಲೆಂಡ್
ಮೊದಲ ಏಕದಿನ9 October 1987:  ಭಾರತ v  ಆಸ್ಟ್ರೇಲಿಯಾ
ಕೊನೆ ಏಕದಿನ

20 March 2011:

 ಭಾರತ v  ವೆಸ್ಟ್ ಇಂಡೀಸ್
Domestic team information
Tamil Nadu (1916-present)
Chennai Super Kings (IPL) (2008-present)

ಎಂ ಎ ಚಿದಂಬರಂ ಕ್ರೀಡಾಂಗಣ ಎಂಬುದು ಭಾರತದ ಚೆನ್ನೈನಲ್ಲಿರುವ (ಹಿಂದೆ ಮದ್ರಾಸ್‌ ಎಂದು ಹೆಸರಾಗಿತ್ತು) ಒಂದು ಕ್ರಿಕೆಟ್‌ ಕ್ರೀಡಾಂಗಣವಾಗಿದ್ದು, ಬಿಸಿಸಿಐ ಮತ್ತು ತಮಿಳುನಾಡು ಕ್ರಿಕೆಟ್‌ ಸಂಸ್ಥೆಯ ಹಿಂದಿನ ಅಧ್ಯಕ್ಷರಾದ M. A. ಚಿದಂಬರಂರವರ ಹೆಸರನ್ನು ಇದಕ್ಕೆ ಇಡಲಾಗಿದೆ. ಈ ಕ್ರೀಡಾಂಗಣವನ್ನು ಹಿಂದೆ ಮದ್ರಾಸ್‌ ಕ್ರಿಕೆಟ್‌ ಕ್ಲಬ್‌ ಮೈದಾನ ಅಥವಾ ಚೆಪಾಕ್‌ ಕ್ರೀಡಾಂಗಣ ಎಂದು ಕರೆಯಲಾಗುತ್ತಿತ್ತು. ಚೆಪಾಕ್‌ ಎಂದೇ ಸಾಮಾನ್ಯವಾಗಿ ಜನಜನಿತವಾಗಿದ್ದ ಈ ಮೈದಾನದಲ್ಲಿ ೧೯೩೪ರ ಫೆಬ್ರುವರಿ ೧೦ರಂದು ಮೊದಲ ಪಂದ್ಯವನ್ನು ಆಡಲಾಯಿತು. ಈಸ್ಟ್‌ ಕೋಸ್ಟ್‌ ಕನ್ಸ್‌ಟ್ರಕ್ಷನ್ಸ್ ಅಂಡ್‌ ಇಂಡಸ್ಟ್ರೀಸ್ ಸಂಸ್ಥೆಯ ವತಿಯಿಂದ ನಿರ್ಮಿಸಲ್ಪಟ್ಟ ಈ ಕ್ರೀಡಾಂಗಣದಲ್ಲಿ ಭಾರತದ ಕ್ರಿಕೆಟ್‌ ತಂಡವು ೧೯೫೨ರಲ್ಲಿ ಇಂಗ್ಲೆಂಡ್‌ ತಂಡದ ವಿರುದ್ಧ ತನ್ನ ಮೊಟ್ಟಮೊದಲ ಟೆಸ್ಟ್‌ ವಿಜಯವನ್ನು ದಾಖಲಿಸಿತು. ದಾಖಲೆ ಮುರಿಯುವಿಕೆಗೆ ಸಾಕ್ಷಿಯಾದ ತಮ್ಮ ೩೦ನೇ ಟೆಸ್ಟ್‌ ಶತಕವನ್ನು ಸುನಿಲ್‌ ಗಾವಸ್ಕರ್‌ ಈ ಮೈದಾನದಲ್ಲಿಯೇ ೧೯೮೩-೮೪ರ ಸಾಲಿನಲ್ಲಿ ಭದ್ರವಾಗಿ ಪೇರಿಸಿದರು ಎಂದು ಹೇಳಬಹುದು. ೧೯೮೬-೮೭ರ ಸಾಲಿನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ತಂಡಗಳ ನಡುವಣ ಮುಖಾಮುಖಿಯು ಒಂದು ಪರಸ್ಪರ ಸಮತೆಯ (ಟೈ) ಪಂದ್ಯದಲ್ಲಿ ಕೊನೆಗೊಂಡಿತು ಮತ್ತು ಇದು ಆಟದ ಸುದೀರ್ಘ ಇತಿಹಾಸದಲ್ಲಿನ ಇಂಥ ಎರಡನೇ ಏಕೈಕ ಪಂದ್ಯವೆನಿಸಿತು. ಮುಂದಿನ ಋತುವಿನಲ್ಲಿ, ಲೆಗ್‌ ಸ್ಪಿನ್ನರ್‌ ನರೇಂದ್ರ ಹಿರ್ವಾನಿ ಅತ್ಯುತ್ತಮ ಪಂದ್ಯ ವಿಶ್ಲೇಷಣೆಯನ್ನು ತಮ್ಮದಾಗಿಸಿಕೊಂಡರು. ೧೩೬ ಓಟಗಳಿಗೆ ೧೬ ವಿಕೆಟ್ಟುಗಳನ್ನು ಪಡೆದು ಪಂದ್ಯವನ್ನು ಪೂರ್ಣಗೊಳಿಸುವ ಮೂಲಕ ಟೆಸ್ಟ್‌ ಪಾದಾರ್ಪಣೆಯ ವೇಳೆಯಲ್ಲಿಯೇ ಓರ್ವ ಆಟಗಾರನಿಂದ ಬರೆಯಲ್ಪಟ್ಟ ದಾಖಲೆಗೆ ಸಾಕ್ಷಿಯಾದರು. ಚೆಪಾಕ್‌ ಕ್ರೀಡಾಂಗಣದಲ್ಲಿ ಸೇರುವ ಪ್ರೇಕ್ಷಕವರ್ಗವು ದೇಶದಲ್ಲಿನ ಕ್ರೀಡಾಭಿಮಾನಿಗಳ ಪೈಕಿಯ ಅತ್ಯಂತ ಗುಣಗ್ರಾಹಿ ಪ್ರೇಕ್ಷಕವರ್ಗ ಎನಿಸಿಕೊಂಡಿದೆ. ೧೯೯೭ರಲ್ಲಿ ನಡೆದ ಇಂಡಿಪೆಂಡೆನ್ಸ್‌ ಕಪ್‌ ಪಂದ್ಯದಲ್ಲಿ, ಭಾರತದ ವಿರುದ್ಧ ದಾಖಲೆ ಮುರಿತದ ತನ್ನ ೧೯೪ ಓಟಗಳನ್ನು ಪಾಕಿಸ್ತಾನದ ಸಯೀದ್‌ ಅನ್ವರ್‌ ದಾಖಲಿಸಿದ ನಂತರ ಇಲ್ಲಿನ ಪ್ರೇಕ್ಷಕರು ಎದ್ದುನಿಂತು ಜಯಘೋಷ ಮಾಡಿದ್ದು ಇದನ್ನು ಸಾಬೀತುಪಡಿಸಿತು. ಅಷ್ಟೇ ಅಲ್ಲ, ೧೯೯೯ರಲ್ಲಿ ಪಾಕಿಸ್ತಾನ ತಂಡವು ಒಂದು ಟೆಸ್ಟ್‌ ಪಂದ್ಯವನ್ನು ಗೆದ್ದಾಗಲೂ ಇಲ್ಲಿನ ಪ್ರೇಕ್ಷಕರು ಇದೇ ಬಗೆಯ ವರ್ತನೆಯನ್ನು ತೋರಿದ್ದರು. ಇದರಿಂದ ನಿಜವಾಗಿಯೂ ಮೂಕವಿಸ್ಮಿತಗೊಂಡ ಪಾಕಿಸ್ತಾನದ ತಂಡವು ಇಲ್ಲಿನ ಪ್ರೇಕ್ಷಕರ ಕ್ರೀಡಾ ಮನೋಭಾವದ ವರ್ತನೆಗೆ ಮೆಚ್ಚುಗೆಯಾಗಿ ಒಂದು ಗೌರವ ಸುತ್ತೋಟವನ್ನು (ಅಂದರೆ, ಎಲ್ಲಾ ಆಟಗಾರರೂ ಪ್ರೇಕ್ಷಕರನ್ನು ಅಭಿನಂದಿಸುವ ಸಲುವಾಗಿ ಕ್ರೀಡಾಂಗಣದ ಅಂಚಿನಲ್ಲಿ ಒಂದು ಸುತ್ತು ಓಡುತ್ತಾ ಗೌರವ ಸಲ್ಲಿಸುವ ಪರಿ) ಮಾಡಿತು. ಇದು ತಮಿಳುನಾಡು ಕ್ರಿಕೆಟ್‌ ತಂಡಕ್ಕೆ ಮಾತ್ರವೇ ಅಲ್ಲದೇ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪಂದ್ಯಾವಳಿಯಲ್ಲಿ ಭಾವಹಿಸುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೂ ತವರು-ನೆಲವಾಗಿದೆ.

ಮೈದಾನದ ಅಂಕಿ-ಅಂಶಗಳು[ಬದಲಾಯಿಸಿ]

 • ಮೊಟ್ಟಮೊದಲ ರಣಜಿ ಟ್ರೋಫಿ ಪಂದ್ಯವು ಇಲ್ಲಿ ಆಡಲ್ಪಟ್ಟಿತು. ಈ ಸಂದರ್ಭದಲ್ಲಿ, ಬೌಲ್‌ ಮಾಡುವುದಕ್ಕೆ ಒದ್ದೆಯಾಗಿದ್ದ ಇಲ್ಲಿನ ಪಿಚ್‌ನಲ್ಲಿ ಮದ್ರಾಸ್‌ ತಂಡದ ಪರವಾಗಿ AG ರಾಮ್‌ ಸಿಂಗ್‌ ೧೧ ವಿಕೆಟ್ಟುಗಳನ್ನು ಪಡೆದುಕೊಂಡು ಒಂದೇ ದಿನದೊಳಗೆ ಮೈಸೂರು ತಂಡದ ಮೇಲೆ ಜಯಸಾಧಿಸುವುದಕ್ಕೆ ಕಾರಣರಾದರು.
 • ೧೯೫೧-೫೨ರಲ್ಲಿ ಭಾರತವು ತನ್ನ ಮೊದಲ ಪಂದ್ಯ ಟೆಸ್ಟ್‌ ಪಂದ್ಯವನ್ನು ಇಲ್ಲಿ ದಾಖಲಿಸಿತು. ಈ ಪಂದ್ಯದಲ್ಲಿ ಭಾರತವು ಇಂಗ್ಲೆಂಡ್‌ ತಂಡವನ್ನು ಒಂದು ಇನ್ನಿಂಗ್ಸ್‌ ಮತ್ತು ಎಂಟು ಓಟಗಳಿಂದ ಸೋಲಿಸಿತು.
 • ಕ್ರಿಕೆಟ್‌ನ ಇತಿಹಾಸದಲ್ಲಿ ಸಮಮಾಡಿಕೊಂಡ ಎರಡನೇ ಟೆಸ್ಟ್‌ ಎನಿಸಿದ ಪಂದ್ಯವೂ ಸಹ ೧೯೮೬ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ಇಲ್ಲಿ ಆಡಲ್ಪಟ್ಟಿತು.[೨]
 • ದಕ್ಷಿಣ ಆಫ್ರಿಕಾ ತಂಡದ ವಿರುದ್ಧವಾಗಿ ವೀರೇಂದರ್‌ ಸೆಹ್ವಾಗ್‌ ದಾಖಲಿಸಿದ ೩೧೯ ಓಟಗಳು ಈ ಮೈದಾನದಲ್ಲಿನ ಅತಿಹೆಚ್ಚಿನ ಟೆಸ್ಟ್‌ ಸ್ಕೋರು ಎನಿಸಿಕೊಂಡಿದೆ.
 • ಟೆಸ್ಟ್‌ ಕ್ರಿಕೆಟ್‌ನ ಇತಿಹಾಸದಲ್ಲಿನ ಎರಡನೇ ಸಮಮಾಡಿಕೊಂಡ-ಟೆಸ್ಟ್‌ ಪಂದ್ಯಕ್ಕೆ ಈ ಕ್ರೀಡಾಂಗಣವು ಅತಿಥೇಯನ ಪಾತ್ರವನ್ನು ವಹಿಸಿತ್ತು.
 • ಭಾರತ ತಂಡದ ವಿರುದ್ಧ ಸಯೀದ್‌ ಅನ್ವರ್‌‌ ದಾಖಲಿಸಿದ ೧೯೪ ಓಟಗಳು ಈ ಮೈದಾನದಲ್ಲಿನ ಅತಿಹೆಚ್ಚಿನ ಸ್ಕೋರು ಎನಿಸಿಕೊಂಡಿದೆ. ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸಚಿನ್‌ ತೆಂಡೂಲ್ಕರ್‌ ತನ್ನ ೨೦೦ ಓಟಗಳ ಹೆಗ್ಗುರುತನ್ನು ತಲುಪುವವರೆಗೆ, ಇದು ಏಕದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿನ (ODI) ಅತಿಹೆಚ್ಚಿನ ಸ್ಕೋರು ಎನಿಸಿಕೊಂಡಿತ್ತು.
 • ಇದುವರೆಗೆ ಈ ಮೈದಾನದ ಮೇಲೆ ಅತಿಹೆಚ್ಚಿನ ಸ್ಕೋರನ್ನು ಪೇರಿಸಿದ ದಾಖಲೆಯನ್ನು ಇಂಗ್ಲೆಂಡ್‌ ಹೊಂದಿದೆ; ಭಾರತದ ವಿರುದ್ಧವಾಗಿ ಈ ತಂಡವು ೭ ವಿಕೆಟ್ಟುಗಳ ನಷ್ಟಕ್ಕೆ ೬೫೨ ಓಟಗಳನ್ನು ಗಳಿಸಿದ್ದೇ ಈ ದಾಖಲೆಯಾಗಿದೆ.ಪ್ರಾಸಂಗಿಕವಾಗಿ, ಇದು ಟೆಸ್ಟ್‌ ಪಂದ್ಯದ ಇತಿಹಾಸದಲ್ಲಿನ ನಾಲ್ಕನೇ ಅತಿಹೆಚ್ಚಿನ ಸ್ಕೋರು ಆಗಿದೆ.[೩] ಮುಂದಿನ ಅತಿಹೆಚ್ಚಿನ ಸ್ಕೋರಿನ ದಾಖಲೆಯು ಭಾರತದ ಹೆಸರಲ್ಲಿದೆ. ೨೦೦೮ರಲ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಎಲ್ಲ ವಿಕೆಟ್ಟುಗಳನ್ನು ಕಳೆದುಕೊಂಡು ೬೨೭ ಓಟಗಳನ್ನು ಗಳಿಸಿದ ಭಾರತ ತಂಡವು ಈ ಕೀರ್ತಿಗೆ ಪಾತ್ರವಾಯಿತು. ಮೂರನೇ ಅತಿಹೆಚ್ಚಿನ ಸ್ಕೋರನ್ನು ವೆಸ್ಟ್‌ ಇಂಡೀಸ್‌ ತಂಡವು ದಾಖಲಿಸಿದೆ. ೧೯೪೯ರಲ್ಲಿ ನಡೆದ ಭಾರತದ ವಿರುದ್ಧದ ಟೆಸ್ಟ್‌ ಪಂದ್ಯದಲ್ಲಿ ಎಲ್ಲಾ ವಿಕೆಟ್ಟುಗಳನ್ನು ಕಳೆದುಕೊಂಡು ಈ ತಂಡವು ೫೮೨ ಓಟಗಳನ್ನು ದಾಖಲಿಸಿತ್ತು.
 • ಈ ಮೈದಾನದಲ್ಲಿ ಅತಿಕಡಿಮೆ ಸ್ಕೋರನ್ನು ಪೇರಿಸಿದ ದಾಖಲೆಯನ್ನೂ ಭಾರತವು ಹೊಂದಿದೆ. ಇಂಗ್ಲೆಂಡ್‌ ತಂಡವು ಭಾರತವನ್ನು ಕೇವಲ ೮೩ ಓಟಗಳಿಗೆ ಸೀಮಿತಗೊಳಿಸಿದಾಗ ಈ ಸ್ಥಿತಿ ಪ್ರಾಪ್ತವಾಯಿತು.
 • ಪಂದ್ಯವೊಂದರಲ್ಲಿ ೧೩೬ ಓಟಗಳನ್ನು ನೀಡಿ ೧೬ ವಿಕೆಟ್ಟುಗಳನ್ನು ಗಳಿಸಿದ ನರೇಂದ್ರ ಹಿರ್ವಾನಿಯವರ ಬೌಲಿಂಗ್‌ ಅಂಕಿ-ಅಂಶಗಳು ಪ್ರಸಕ್ತವಾಗಿ ಈ ಮೈದಾನದಲ್ಲಿನ ಅತ್ಯುತ್ತಮ ಸಾಧನೆ ಎನಿಸಿಕೊಂಡಿವೆ.
 • ರಾಹುಲ್‌ ದ್ರಾವಿಡ್‌ ಈ ಮೈದಾನದಲ್ಲಿ ತಮ್ಮ ೧೦,೦೦೦ನೇ ಟೆಸ್ಟ್‌ ಓಟವನ್ನು ದಾಖಲಿಸಿದರು.
 • ೨೦೦೮ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಮೊದಲ ಪಂದ್ಯ ಟೆಸ್ಟ್‌ದ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಭಾರತವು ೪ ವಿಕೆಟ್ಟುಗಳ ನಷ್ಟಕ್ಕೆ ಗಳಿಸಿದ ೩೮೭ ಓಟಗಳು, ಭಾರತದಲ್ಲಿ ಅತಿಹೆಚ್ಚಿನ ಓಟದ ಗಳಿಕೆಯನ್ನು ಬೆನ್ನತ್ತುವಲ್ಲಿನ ಅತ್ಯಂತ ಯಶಸ್ವಿ ಪ್ರಯತ್ನ ಎನಿಸಿಕೊಂಡಿತು.
 • ಟೆಸ್ಟ್ ಪಂದ್ಯಗಳಲ್ಲಿ, ಸುನಿಲ್‌ ಗಾವಸ್ಕರ್‌‌ (೧೦೧೮ ಓಟಗಳು) ಈ ಕ್ರೀಡಾಂಗಣದಲ್ಲಿ ಅತಿಹೆಚ್ಚಿನ ಓಟಗಳನ್ನು ಗಳಿಸಿರುವ ಕೀರ್ತಿಗೆ ಪಾತ್ರರಾಗಿದ್ದರೆ, ನಂತರದ ಸ್ಥಾನಗಳನ್ನು ಸಚಿನ್‌ ತೆಂಡೂಲ್ಕರ್‌ (೮೭೬ ಓಟಗಳು) ಮತ್ತು ಗುಂಡಪ್ಪ ವಿಶ್ವನಾಥ್‌ (೭೮೫ ಓಟಗಳು) ಆಕ್ರಮಿಸಿಕೊಂಡಿದ್ದಾರೆ.
 • ಈ ಕ್ರೀಡಾಂಗಣದಲ್ಲಿನ ಟೆಸ್ಟ್ ಪಂದ್ಯಗಳಲ್ಲಿ ಅತಿಹೆಚ್ಚಿನ ವಿಕೆಟ್ಟುಗಳನ್ನು ತೆಗೆದ ಕೀರ್ತಿಗೆ ಅನಿಲ್‌ ಕುಂಬ್ಳೆ (೪೮ ವಿಕೆಟ್ಟುಗಳು) ಪಾತ್ರರಾಗಿದ್ದರೆ, ನಂತರದ ಸ್ಥಾನಗಳನ್ನು ಕಪಿಲ್‌ ದೇವ್‌ (೪೦ ವಿಕೆಟ್ಟುಗಳು) ಮತ್ತು ಹರ್‌ಭಜನ್‌ ಸಿಂಗ್‌ (೩೯ ವಿಕೆಟ್ಟುಗಳು) ಆಕ್ರಮಿಸಿಕೊಂಡಿದ್ದಾರೆ.
 • ಚೆಪಾಕ್ ಕ್ರೀಡಾಂಗಣದಲ್ಲಿಯೇ, ಸಚಿನ್‌ ತೆಂಡೂಲ್ಕರ್‌ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ತಮ್ಮ ಮೊದಲ ಶತಕವನ್ನು ದಾಖಲಿಸಿದರು; ಈ ಗಳಿಕೆಯು ಭಾರತ ತಂಡಕ್ಕೆ ವಿಜಯವನ್ನು ತಂದುಕೊಟ್ಟಿತು ಎಂಬುದು ಗಮನಾರ್ಹ ಸಂಗತಿ.[೪]
 • ಭಾರತದಲ್ಲಿನ ಬೇರಾವುದೇ ತಾಣಕ್ಕಿಂತ ಚೆಪಾಕ್‌ ಕ್ರೀಡಾಂಗಣದಲ್ಲಿ ಸಚಿನ್‌ ತೆಂಡೂಲ್ಕರ್‌ ಹೆಚ್ಚಿನ ಸ್ಕೋರನ್ನು ಗಳಿಸಿದ್ದಾರೆ; ಒಂಬತ್ತು ಟೆಸ್ಟ್ ಪಂದ್ಯಗಳಲ್ಲಿ ೮೭.೬೦ರಷ್ಟಿದ್ದ ಒಂದು ಸರಾಸರಿಯಲ್ಲಿ ಅವರು ಇಲ್ಲಿ ೮೭೬ ಓಟಗಳನ್ನು ಗಳಿಸಿರುವುದೇ ಇದಕ್ಕೆ ಸಾಕ್ಷಿ.[೫]
 • ೨೦೦೪ರ ಅಕ್ಟೋಬರ್‌ ೧೫ರಂದು, ಮುತ್ತಯ್ಯ ಮರಳೀಥರನ್‌‌ರವರ ೫೩೨ ಟೆಸ್ಟ್‌ ವಿಕೆಟ್ಟುಗಳ ದಾಖಲೆಯನ್ನು ಶೇನ್‌ ವಾರ್ನ್‌ ಮೀರಿಸಿದರು; ಇರ್ಫಾನ್‌ ಪಠಾಣ್‌ ವಿಕೆಟ್ಟನ್ನು ಕೆಡವಿದಾಗ ಅವರಿಗೆ ಈ ಕೀರ್ತಿ ಪ್ರಾಪ್ತವಾಯಿತು. ಇದು ತಮ್ಮ ೧೧೪ನೇ ಟೆಸ್ಟ್‌ ಪಂದ್ಯದಲ್ಲಿ ಅವರು ಪಡೆದ ೫೩೩ನೇ ಟೆಸ್ಟ್‌ ವಿಕೆಟ್‌ ಆಗಿತ್ತು.
 • ೨೦೦೧ರ ಮಾರ್ಚ್‌ ೨೨ರಂದು, ಬಾರ್ಡರ್‌-ಗಾವಸ್ಕರ್‌‌ ಟ್ರೋಫಿಯ ಸಮಾಪ್ತಿಯ ಹಂತದಲ್ಲಿ ಭಾರತವು ಆಸ್ಟ್ರೇಲಿಯಾವನ್ನು ೨ ವಿಕೆಟ್ಟುಗಳಿಂದ ಸೋಲಿಸಿತು. ಇದಕ್ಕೂ ಮುಂಚೆ ೧೯೯೯-೨೦೦೦ರ ಇದೇ ಟ್ರೋಫಿಯ ಸರಣಿಯಲ್ಲಿ ಭಾರತವು ಆಸ್ಟ್ರೇಲಿಯಾಕ್ಕೆ ಸೋತಿತ್ತು ಎಂಬುದು ಗಮನಾರ್ಹ ಸಂಗತಿ. ಪಂದ್ಯದಲ್ಲಿ ಜಯಗಳಿಸಲು ನೆರವಾದ ಸಚಿನ್‌ ತೆಂಡೂಲ್ಕರ್‌‌‌‌ರವರ ಒಂದು ಶತಕ ಮತ್ತು ಟೆಸ್ಟ್‌ ಸರಣಿಯಲ್ಲಿ ಹರ್‌ಭಜನ್‌ ಸಿಂಗ್‌ ಪಡೆದ ೩೨ ವಿಕೆಟ್ಟುಗಳಿಂದಾಗಿ ಭಾರತ ತಂಡವು ಆಸ್ಟ್ರೇಲಿಯಾ ತಂಡದ ಜಯಗಳಿಸುವ ಪರಂಪರೆಗೆ ಇತಿಶ್ರೀ ಹಾಡಿತು ಮತ್ತು ಇದನ್ನು ಅನುಸರಿಸಿಕೊಂಡು ಭವ್ಯವಾದ ಕೋಲ್ಕತಾ ಟೆಸ್ಟ್‌ ಬಂದಿತು. ಆಸ್ಟ್ರೇಲಿಯಾ ತಂಡವು ಅನುಕ್ರಮವಾಗಿ ೧೬ ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿತು.
 • ೧೯೯೭ರಲ್ಲಿ, ಈ ಮೈದಾನದಲ್ಲಿ ಪಾಕಿಸ್ತಾನ ತಂಡವು ಅತಿಹೆಚ್ಚಿನ ODI ಸ್ಕೋರನ್ನು ದಾಖಲಿಸಿತು ಹಾಗೂ ಈ ಪಂದ್ಯದಲ್ಲಿ ಸಯೀದ್‌ ಅನ್ವರ್‌‌ ೧೯೪ ಓಟಗಳನ್ನು ಗಳಿಸಿದರು. ಪಾಕಿಸ್ತಾನ ತಂಡವು ೫ ವಿಕೆಟ್‌ ನಷ್ಟಕ್ಕೆ ೩೨೭ ಓಟಗಳನ್ನು ಗಳಿಸಿದರೆ, ಎಲ್ಲ ವಿಕೆಟ್ಟುಗಳನ್ನು ಕಳೆದುಕೊಂಡು ೨೯೨ ಓಟಗಳ ಮಾರುತ್ತರವನ್ನು ಭಾರತವು ನೀಡಿತು. ಇದು ಇಲ್ಲಿ ದಾಖಲಾದ ಎರಡನೇ ಅತಿಹೆಚ್ಚಿನ ಸ್ಕೋರು ಎನಿಸಿಕೊಂಡಿದೆ. ನ್ಯೂಜಿಲೆಂಡ್‌ ತಂಡದ ವಿರುದ್ಧ ಆಸ್ಟ್ರೇಲಿಯಾ ತಂಡವು ೪ ವಿಕೆಟ್ಟುಗಳ ನಷ್ಟಕ್ಕೆ ದಾಖಲಿಸಿದ ೨೮೯ ಓಟಗಳು ಮೂರನೇ ಅತಿಹೆಚ್ಚಿನ ಸ್ಕೋರು ಎನಿಸಿಕೊಂಡಿದೆ.
 • ಇಲ್ಲಿನ ODI ಪಂದ್ಯಗಳಲ್ಲಿ ೨೫೫ ಓಟಗಳನ್ನು ದಾಖಲಿಸುವುದರೊಂದಿಗೆ ಯುವರಾಜ್‌ ಸಿಂಗ್‌ ಅತಿಹೆಚ್ಚು ಓಟಗಳನ್ನು ಗಳಿಸಿದ್ದರೆ, ನಂತರ ಸ್ಥಾನಗಳನ್ನು ಜೆಫ್‌ ಮಾರ್ಷ್‌ (೨೪೬ ಓಟಗಳು) ಮತ್ತು ಸಯೀದ್‌ ಅನ್ವರ್‌‌ (೧೯೪ ಓಟಗಳು) ಆಕ್ರಮಿಸಿಕೊಂಡಿದ್ದಾರೆ.
 • ಇಲ್ಲಿ ಮೊಹಮ್ಮದ್‌ ರಫೀಕ್‌ ಅತಿಹೆಚ್ಚಿನ ವಿಕೆಟ್ಟುಗಳನ್ನು (೧೪ ವಿಕೆಟ್ಟುಗಳು) ತೆಗೆದುಕೊಂಡಿದ್ದರೆ, ನಂತರದ ಸ್ಥಾನಗಳನ್ನು ಅಜಿತ್‌ ಅಗರ್ಕರ್‌ ಮತ್ತು ಮೋರ್ನೆ ಮೋರ್ಕೆಲ್‌(ತಲಾ ೭ ವಿಕೆಟ್ಟುಗಳು) ಆಕ್ರಮಿಸಿಕೊಂಡಿದ್ದಾರೆ.

೨೦೧೦ರ ಪ್ರಮುಖ ನವೀಕರಣ[ಬದಲಾಯಿಸಿ]

2011ರ ICC ಕ್ರಿಕೆಟ್‌ ವಿಶ್ವಕಪ್‌ ಅವಧಿಯಲ್ಲಿ ಕಾಣುತ್ತಿದ್ದ MA ಚಿದಂಬರಂ ಕ್ರೀಡಾಂಗಣದ ದೃಶ್ಯಾವಳಿಯಂಥ ನೋಟ.

೨೦೦೯ರ ಜೂನ್‌ ೨೮ರಂದು, ಅತ್ಯಾಧುನಿಕ ಸೌಕರ್ಯಗಳನ್ನು ಸಜ್ಜುಗೊಳಿಸುವ ಮತ್ತು ಆಗಿದ್ದ ೩೬,೦೦೦ ಪ್ರೇಕ್ಷಕ ಸಾಮರ್ಥ್ಯವನ್ನು ೪೫,೦೦೦ಕ್ಕೆ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಮರುನಿರ್ಮಾಣ ಕಾರ್ಯವನ್ನು ಆರಂಭಿಸಲು ತೀರ್ಮಾನಿಸಲಾಯಿತು ಮತ್ತು ಇದಕ್ಕೆ ನಿಗದಿಯಾದ ವೆಚ್ಚವು ೧೭೫ ಕೋಟಿ ರೂಪಾಯಿಗಳಷ್ಟಿತ್ತು.[೬][೭] ೨೦೧೧ರ ICC ವಿಶ್ವಕಪ್‌ ಪಂದ್ಯಾವಳಿಗೆ ಮುಂಚಿತವಾಗಿ ಕ್ರೀಡಾಂಗಣವನ್ನು ಉನ್ನತೀಕರಿಸಲು ಹಾಗೂ ಉತ್ಸಾಹವನ್ನು ಮರಳಿ ತರಲು, ಚೆನ್ನೈನಲ್ಲಿನ ನಟರಾಜ್‌ & ವೆಂಕಟ್‌ ಆರ್ಕಿಟೆಕ್ಟ್ಸ್‌ ಹಾಗೂ ಇಂಗ್ಲೆಂಡ್‌ನಲ್ಲಿನ ಹಾಪ್ಕಿನ್ಸ್‌ ಆರ್ಕಿಟೆಕ್ಟ್ಸ್‌ ಸಂಸ್ಥೆಗಳಿಗೆ ತಮಿಳುನಾಡು ಕ್ರಿಕೆಟ್‌ ಸಂಸ್ಥೆಯು ಸದರಿ ನವೀಕರಣದ ಗುತ್ತಿಗೆಯನ್ನು ನೀಡಿತು.[೧] ಉದ್ದೇಶಿತ ಮಾರ್ಪಾಡುಗಳಲ್ಲಿ ಇವೆಲ್ಲವೂ ಸೇರಿದ್ದವು:

 • ೪೦,೦೦೦mಗಳಷ್ಟು ವಿಸ್ತೀರ್ಣದ ಪ್ರದೇಶವನ್ನು ಆವರಿಸುವಿಕೆ.
 • ಅಸ್ತಿತ್ವದಲ್ಲಿರುವ ಸಾಮರ್ಥ್ಯವನ್ನು ೫೦,೦೦೦ಕ್ಕೆ ಹೆಚ್ಚಿಸುವಿಕೆ.
 • ಪ್ರೇಕ್ಷಕಾಂಗಣದ ಮೇಲ್ಭಾಗದಲ್ಲಿ ನೆರಳಿಗಾಗಿ ಅರೆಪಾರದರ್ಶಕವಾದ ಚೌಕಟ್ಟಿನ ಮೇಲ್ಛಾವಣಿ ರಚನೆಗಳನ್ನು ವ್ಯವಸ್ಥೆಗೊಳಿಸುವಿಕೆ.
 • ಹೆಚ್ಚುವರಿ ಸಾಂಸ್ಥಿಕ ಆವರಣಗಳು ಮತ್ತು ಹವಾನಿಯಂತ್ರಿತ ವಸತಿಯನ್ನು ಒದಗಿಸುವಿಕೆ.
 • ಪೂರ್ವ ಭಾಗದಿಂದ ಸಮುದ್ರದ ಮಂದಮಾರುತವು ಕ್ರೀಡಾಂಗಣದೊಳಗೆ ಪ್ರವೇಶಿಸಲು ಅನುವಾಗುವಂತೆ, ಕೆಳಭಾಗದ ತಾರಸಿ ಮತ್ತು ಮೇಲ್ಭಾಗದ ಪ್ರೇಕ್ಷಕಾಂಗಣದ ನಡುವೆ ಸಮತಲವಾಗಿರುವ ಅಂತರವನ್ನು ವ್ಯವಸ್ಥೆಗೊಳಿಸುವಿಕೆ.

ಸದರಿ ಕಾರ್ಯವು ಪೂರ್ತಿಯಾಗಿ ಸಂಪೂರ್ಣಗೊಳ್ಳುವ ವೇಳೆಗೆ ಕ್ರೀಡಾಂಗಣದ ವೆಚ್ಚವು ಸರಿಸುಮಾರು ೧೯೨ ಕೋಟಿ ರೂ.ಗಳನ್ನು ಮುಟ್ಟಲಿದೆ. ಹಳೆಯ ಕ್ರೀಡಾಂಗಣದಲ್ಲಿ ನೋಟಕ್ಕೆ ಕೆಲವೊಮ್ಮೆ ತಡೆಯೊಡ್ಡುತ್ತಿದ್ದ ಬೃಹತ್‌ ಆಧಾರಸ್ತಂಭಗಳನ್ನು 'ಕ್ವಾಡ್‌ ಕಾನಿಕಲ್‌ ಜಿಯಮೆಟ್ರಿಕ್‌ ಫಾರ್ಮ್‌' ಎಂದು ಕರೆಯಲ್ಪಡುವ ಹಗುರವಾದ ಅತ್ಯಾಧುನಿಕ ಮೇಲ್ಛಾವಣಿಯಿಂದ ಬದಲಾಯಿಸಲಾಗಿದೆ. ಚೀನಾದಿಂದ ಆಮದುಮಾಡಿಕೊಳ್ಳಲಾದ ಕೇಬಲ್‌ಗಳು ಈ ಛಾವಣಿಯನ್ನು ಭದ್ರವಾಗಿ ಹಿಡಿದಿಟ್ಟಿವೆ. ಬರ್ಡ್‌ ಏರ್ ಎಂಬ ಹೆಸರಿನ ಅಮೆರಿಕಾದ ಒಂದು ಸಂಸ್ಥೆಯು ಇದರ ವಿನ್ಯಾಸಕಾರನೆನಿಸಿಕೊಂಡಿದ್ದರೆ, ಆಸ್ಟ್ರೇಲಿಯಾದಿಂದ (ಟೈಯೊ ಮೆಂಬ್ರೇನ್‌ನಿಂದ) ಬಂದ ಎಂಜಿನಿಯರುಗಳು ಅಳವಡಿಕೆ ಕಾರ್ಯವನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಈ ಕ್ರೀಡಾಂಗಣವು ೩೮,೦೦೦ ಪ್ರೇಕ್ಷಕರಿಗೆ ಸ್ಥಳಾವಕಾಶ ಮಾಡಿಕೊಡಬಲ್ಲದು. TNCA ಪೆವಿಲಿಯನ್‌ ಮತ್ತು MCC ಪ್ರೇಕ್ಷಕಾಂಗಣದಲ್ಲಿನ ಕಾರ್ಯವು ಸಂಪೂರ್ಣವಾಗುತ್ತಿದ್ದಂತೆ ಈ ಸಾಮರ್ಥ್ಯವು ೪೨,೦೦೦ಕ್ಕೆ ಹೆಚ್ಚಲಿದೆ. ಈ ಕ್ರೀಡಾಂಗಣವು ಒಂಬತ್ತು ಹೊಸ ಪ್ರೇಕ್ಷಕಾಂಗಣಗಳನ್ನು ಒಳಗೊಂಡಿದೆ. ಇವು ಮೂರು ಅಂತಸ್ತುಗಳನ್ನು ಒಳಗೊಂಡಿದ್ದು, ಮಧ್ಯದ ಅಂತಸ್ತು ಸಂಪೂರ್ಣವಾಗಿ ಹವಾ-ನಿಯಂತ್ರಿತವಾಗಿದೆ ಮತ್ತು ಇದು ಅತಿಥಿ ಸತ್ಕಾರದ ಆವರಣವಾಗಿದೆ. ಮಾಧ್ಯಮಗಳಿಗೆ ಮೀಸಲಾದ ಆವರಣದಲ್ಲಿ ೨೦೦ ಮಂದಿ ಪತ್ರಿಕಾ ಪ್ರತಿನಿಧಿಗಳು ಕುಳಿತುಕೊಳ್ಳಬಹುದು. ಮಾಧ್ಯಮಗಳ ಸಮಾವೇಶ ಭವನವು ಸರಿಸುಮಾರು ೩೦೦ ವ್ಯಕ್ತಿಗಳಿಗೆ ಸ್ಥಳಾವಕಾಶ ಮಾಡಿಕೊಡಬಲ್ಲದು. ಪ್ರೇಕ್ಷಕಾಂಗಣಗಳು ೩೬ ಡಿಗ್ರಿಗಳಷ್ಟು ಪ್ರಮಾಣದ ಒಂದು ಇಳುಕಲಿನಲ್ಲಿವೆ ಮತ್ತು ಅಂತರರಾಷ್ಟ್ರೀಯ ಪ್ರಮಾಣಕಗಳ ಅನುಸಾರ ಇದು ಅಷ್ಟೇನೂ ಕಡಿದಾಗಿಲ್ಲ.[೮] ಮೈದಾನದ ಸಾಂಪ್ರದಾಯಿಕ ಉತ್ಸಾಹವನ್ನು ಮರಳಿ ಪಡೆಯುವುದಕ್ಕೆಂದು ಈ ನವೀಕರಣವು ಸಮುದ್ರ ಮಂದಮಾರುತಕ್ಕೆ ಅವಕಾಶ ಮಾಡಿಕೊಟ್ಟಿರುವುದರ ಜೊತೆಗೇ, ವಿನ್ಯಾಸದಲ್ಲಿ ವಾಸ್ತುವಿನ ತತ್ತ್ವಗಳು ಹಾಗೂ ಫೆಂಗ್‌ ಷುಯಿಯ ಭಾರತೀಯ ಸ್ವರೂಪಗಳೂ ತಳುಕುಹಾಕಿಕೊಂಡಿವೆ. ತಾರಸಿ ವ್ಯವಸ್ಥೆಯ ಒಂದು ಕೆಳಭಾಗದ ವರ್ತುಲರಂಗದ ತುದಿಯಲ್ಲಿ ೧೨ ಪ್ರೇಕ್ಷಕಾಂಗಣಗಳ ಒಂದು ಸರಣಿಯನ್ನು ಸೃಷ್ಟಿಸುವುದು ಮತ್ತು ತನ್ಮೂಲಕ ತಾರಸಿ ಮತ್ತು ಪ್ರೇಕ್ಷಕಾಂಗಣಗಳ ನಡುವಿನ ಸಮತಲವಾಗಿರುವ ಅಂತರದ ಮೂಲಕ ಸಮುದ್ರದ ಮಂದಮಾರುತವು ಬೀಸುವುದಕ್ಕೆ ಅವಕಾಶ ಮಾಡಿಕೊಡುವುದು ಇಲ್ಲಿನ ಯೋಜನೆಯಾಗಿದೆ.

ಕ್ರಿಕೆಟ್ ವಿಶ್ವ ಕಪ್‌[ಬದಲಾಯಿಸಿ]

ಭಾರತವು ಕ್ರಿಕೆಟ್‌ ವಿಶ್ವಕಪ್‌ ಪಂದ್ಯಾವಳಿಗಳನ್ನು ಪ್ರತಿಬಾರಿ ಆಯೋಜಿಸಿದಾಗಲೂ ಈ ಕ್ರೀಡಾಂಗಣವು ಏಕ ದಿನದ ಅಂತರರಾಷ್ಟ್ರೀಯ (ODI) ಪಂದ್ಯಗಳನ್ನು ಆಯೋಜಿಸಿದೆ. ಈ ಕ್ರೀಡಾಂಗಣದಲ್ಲಿ ಆಯೋಜಿಸಲ್ಪಟ್ಟಿರುವ ವಿಶ್ವಕಪ್‌ ಪಂದ್ಯಾವಳಿಗಳೆಂದರೆ,

೧೯೮೭ರ ಕ್ರಿಕೆಟ್‌ ವಿಶ್ವಕಪ್‌[ಬದಲಾಯಿಸಿ]

9 October 1987
scorecard
v
 ಭಾರತ
269 (49.5 overs)
Geoff Marsh 110 (141)
Manoj Prabhakar 2/47 (10 overs)
NS Sidhu 73 (79)
Craig McDermott 4/56 (10 overs)
Australia won by 1 run
Umpires: David Archer (WI) and Dickie Bird (ENG)
Player of the match: Geoff Marsh
13 October 1987
scorecard
v
 ಜಿಂಬಾಬ್ವೆ
139 (42.4 overs)
Allan Border 67(88)
Kevin Curran 2/29 (8 overs)
Kevin Curran 30 (38)
Simon O'Donnell 4/39 (9.4 overs)
Australia won by 96 runs
Umpires: Khizer Hayat (PAK) and David Shepherd (ENG)
Player of the match: Steve Waugh

1996ರ ಕ್ರಿಕೆಟ್‌ ವಿಶ್ವಕಪ್‌[ಬದಲಾಯಿಸಿ]

11 March 1996
[೧]
v
Chris Harris 130 (124)
Glenn McGrath 2/50 (9 overs)
Mark Waugh 110 (112)
Nathan Astle 1/21 (3 overs)
Australia won by 6 wickets
Umpires: Cyril Mitchley(SA) and Srinivasa Venkataraghavan
Player of the match: Mark Waugh

2011ರ ಕ್ರಿಕೆಟ್‌ ವಿಶ್ವಕಪ್‌[ಬದಲಾಯಿಸಿ]

20 February 2011
09:30
ಕೀನ್ಯಾ 
69 (23.5 overs)
v
Rakep Patel 16* (23)
Hamish Bennett 4/16 (5 overs)
Martin Guptill 39* (32)
Nehemiah Odhiambo 0/5 (1 over)
New Zealand won by 10 wickets
MA Chidambaram Stadium, Chepauk, Chennai
Umpires: Marais Erasmus (SA) and Rod Tucker (Aus)
Player of the match: Hamish Bennett (NZ)
 • Kenya won the toss and elected to bat.
6 March 2011
09:30
ಇಂಗ್ಲೆಂಡ್ 
171 (45.4 overs)
v
Ravi Bopara 60 (98)
Imran Tahir 4/38 (8.4 overs)
Hashim Amla 42 (51)
Stuart Broad 4/15 (6.4 overs)
England won by 6 runs
MA Chidambaram Stadium, Chepauk, Chennai
Umpires: Amiesh Saheba (Ind) and Simon Taufel (Aus)
Player of the match: Ravi Bopara (Eng)
 • England won the toss and elected to bat.
17 March 2011
14:30 (D/N)
ಇಂಗ್ಲೆಂಡ್ 
243 (48.4 overs)
v
Jonathan Trott 47 (38)
Andre Russell 4/49 (8 overs)
Andre Russell 49 (46)
James Tredwell 4/48 (10 overs)
England won by 18 runs
MA Chidambaram Stadium, Chepauk, Chennai
Umpires: Steve Davis (Aus) and Bruce Oxenford (Aus)
Player of the match: James Tredwell (Eng)
 • England won the toss and elected to bat.
20 March 2011
14:30 (D/N)
ಭಾರತ 
268 (49.1 overs)
v
Yuvraj Singh 113 (123)
Ravi Rampaul 5/51 (10 overs)
Devon Smith 81 (97)
Zaheer Khan 3/26 (6 overs)
India won by 80 runs
MA Chidambaram Stadium, Chepauk, Chennai
Umpires: Steve Davis (Aus) and Simon Taufel (Aus)
Player of the match: Yuvraj Singh (Ind)
 • India won the toss and elected to bat

ಚಿತ್ರಸಂಪುಟ[ಬದಲಾಯಿಸಿ]

ಇವನ್ನೂ ಗಮನಿಸಿ‌[ಬದಲಾಯಿಸಿ]

 • ಟೆಸ್ಟ್‌ ಕ್ರಿಕೆಟ್‌ ಮೈದಾನಗಳ ಪಟ್ಟಿ
 • M.A. ಚಿದಂಬರಂ ಕ್ರೀಡಾಂಗಣದಲ್ಲಿ ದಾಖಲಾದ ಅಂತರರಾಷ್ಟ್ರೀಯ ಕ್ರಿಕೆಟ್‌ ಶತಕಗಳ ಪಟ್ಟಿ
 • M.A ಚಿದಂಬರಂ ಕ್ರೀಡಾಂಗಣದಲ್ಲಿ ಆಡಲ್ಪಟ್ಟ IPL ಪಂದ್ಯಗಳ ಪಟ್ಟಿ

ಬಾಹ್ಯ ಕೊಂಡಿಗಳು‌‌[ಬದಲಾಯಿಸಿ]

13°03′46″N 80°16′46″E / 13.06278°N 80.27944°E / 13.06278; 80.27944

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ "ಆರ್ಕೈವ್ ನಕಲು". Archived from the original on 2011-07-21. Retrieved 2011-05-14.
 2. ವೇರ್‌ ಹಿಸ್ಟರಿ ಈಸ್‌ ಮೇಡ್‌
 3. "Scorecard India v/s England 1st Test". Cricinfo.com.
 4. "Sachin's finest hour". Cricinfo.com.
 5. "India v England, 1st Test, Chennai, 5th day: A fourth-innings special". Cricinfo.com. 2008-12-15. Retrieved 2009-01-25.
 6. "Reconstruction Work at MAC". Bureau Report.
 7. "Reconstruction Work at MAC". Bureau Report. Archived from the original on 2011-10-19. Retrieved 2011-05-14.
 8. ಚೆಪಾಕ್‌'ಸ್‌ ನ್ಯೂ ಇನ್ನಿಂಗ್ಸ್‌

ಟೆಂಪ್ಲೇಟು:Chennai Topics