ಕರ್ನಾಟಕದ ಜಾನಪದ ಕ್ರೀಡೆಗಳು
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ಮರಕೋತಿ ಅಟ
[ಬದಲಾಯಿಸಿ]ಮರಕೋತಿ ಒಂದು ಜಾನಪದ ಆಟ .ಅದಕ್ಕಾಗಿ ಒಬ್ಬ ಕಳ್ಳ ,ಮರಕೋತಿಗಳು,ಒಂದು ಕೋಲು ಮತ್ತು ಮರ ಬೇಕು. ಆ ಆಟದಲ್ಲಿ ಕಳ್ಳನಾದವ ಕೋಲನ್ನು ಕಾಯ ಬೇಕು. ಮರಕೋತಿಗಳು ಕಳ್ಳ ನೋಡದಂತೆ ಕೋಲನ್ನು ಎತ್ತಿಕೊಂಡು ಹೋಗಬೇಕು.
ಚೆನ್ನೆಮಣೆ ಆಟ
[ಬದಲಾಯಿಸಿ]ತುಳುನಾಡಿನಲ್ಲಿ ಕಾರ್ತಿ ಸಾಗುವಳಿ ಮುಗಿದ ನಂತರ ಆಟಿ ತಿಂಗಳಲ್ಲಿ ಚೆನ್ನೆಯ ಮಣೆಯನ್ನು ಅಟ್ಟದಿಂದ ಕೆಳಗೆ ತಂದು ಚೆನ್ನೆಯಾಟ ಪ್ರಾರಂಭಿಸಿಸುವ ಕ್ರಮ. ಚೆನ್ನೆಯಾಟಕ್ಕೆ ಕವಡೆಕಾಯಿ, ಮಂಜೊಟ್ಟಿ ಕಾಯಿ, ಹೊಂಗಾರಕನ ಕಾಯಿ ಉಪಯೋಗಿಸುತ್ತಾರೆ. ಹಿಂದಿನ ಕಾಲದಲ್ಲಿ ಮನೆಯ ಪ್ರತಿಯೊಬ್ಬರು ಮಳೆಗಾಲದ ಸಮಯ ಬೆರೆತು ಕಲೆತು ಆಡುವುದಿತ್ತು. ಆದರೆ ಈಗ ಅಂಥ ದಿನಗಳು ಮಾಯವಾಗಿದೆ. ಈಗ ಹಳೆಯ ಕಾಲದ ಮನೆಗಳಲ್ಲಿ ಮಾತ್ರ ಚೆನ್ನೆ ಮಣೆ ಕಾಣ ಸಿಗುತ್ತದೆ. ಚೆನ್ನೆಯ ಮಣೆಯೊಂದರಲ್ಲಿ ತಲಾ ಏಳರಂತೆ ಎರಡು ಸಾಲಿನಲ್ಲಿ ಒಟ್ಟು ೧೪ ಗುಳಿಗಳಿರುತ್ತವೆ. ಎಡ ಮತ್ತು ಬಲದಲ್ಲಿ ಸಂಗ್ರಹಕ್ಕಾಗಿ ಎರಡು ದೊಡ್ಡ ಗುಳಿಗಳಿರುತ್ತವೆ. ಚೆನ್ನೆಬೀಜ (ಚೆನ್ನೆಕಾಯಿ)ಗಳನ್ನು ಒಂದರ ಬಳಿಕ ಒಂದರಂತೆ ಗುಳಿಗಳನ್ನು ಸಂಖ್ಯಾಬಲದ ಹಿನ್ನಲೆಯಲ್ಲಿ ಆಡುವುದು ಮತ್ತು ಸಂಗ್ರಹ ಗುಳಿಗಳಲ್ಲಿ ಅಧಿಕ ಬೀಜಗಳಿದ್ದರೆ ಆಟಗಾರ ಗೆಲ್ಲುವುದು ಇದರ ವೈಶಿಷ್ಟವಾಗಿದೆ. ಇಬ್ಬರು ಅಥವಾ ಮೂವರು ಆಟವಾಡುವುದು ಇಲ್ಲಿನ ಸಾಮನ್ಯ ಕ್ರಮ. ಇದಕ್ಕೆ ರಾಜನ ಆಟ (ಮೂವರ ಆಟ) ಎಂದೂ ಹೆಸರಿದೆ. ರಾಜನ ಆಟದಲ್ಲಿ ರಾಜನಿಗೆ ಎರಡು ಸಾಲು ಸೇರಿದಂತೆ ನಡುವಿನ ಆರು ಗುಳಿಗಳು ಗುಲಾಮರಿಗೆ ಮತ್ತು ಆತನ ಎಡ ಬಲ ಬದಿಯ ತಲಾ ನಾಲ್ಕು ಗುಳಿಗಳಿರುತ್ತವೆ. ಕೆಲವು ಆಟಗಳಲ್ಲಿ ತಲಾ ಒಂದು ಕಾಯನ್ನು ಹಾಕುವ ಮೂಲಕ ಆಡುವುದು. ಕೆಲವು ಆಟದಲ್ಲಿ ನಿಗದಿತ ಗುಳಿಯಲ್ಲದೆ ವಿರುದ್ಧ ಗುಳಿಯ ಕಾಯಿಯ ಬಳಕೆಗೆ ಸಿಗುವುದುಂಟು. ಕಟ್ಟೆ ಎಂಬ ಆಟದಲ್ಲಿ ಸಂಗ್ರಹ ಗುಳಿ ಬದಲಿ ಆಟದ (ಆಟಗಾರರ ಸಾಲಿನ ಕೊನೆಯ ಗುಳಿ) ಗುಳಿಯೇ ಸಂಗ್ರಹಕ್ಕೆ ಯೋಗ್ಯವಾಗುತ್ತದೆ. ಇದಕ್ಕೆ ತುಳುವಿನಲ್ಲಿ ಪೆರ್ಗ ಎನ್ನುತ್ತಾರೆ. ಪುರಾತನ ಕಾಲದಲ್ಲಿ ಅಬ್ಬಗ ದಾರಗ ಎಂಬ ಅಕ್ಕ ತಂಗಿಯರು ಚೆನ್ನೆಯಾಟವಾಡಿ ಜಗಳವಾಗಿ ಕೊನೆಗೆ ಚೆನ್ನೆಮಣೆಯಿಂದ ಅಕ್ಕ ತಂಗಿಗೆ ಹೊಡೆದು ಪ್ರಾಣ ತೆಗೆಯುತ್ತಾಳೆ.ಆ ಮೇಲೆ ಪಶ್ಚಾತ್ತಾಪವಾಗಿ ಅಕ್ಕ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಮೆಲೆ ಅಬ್ಬಗ ದಾರಗ ದೈವಗಳಾಗುತ್ತರೆ. ಈ ಕಥೆ ಪಾಡ್ದನದಿಂದ ತಿಳಿಯುತ್ತದೆ. ಅವರ ಶಾಪದನುಸಾರ ಅಕ್ಕ ತಂಗಿಯರು ಚೆನ್ನೆಯಾಟ ಆಡಬಾರದೆಂಬ ನಂಬಿಕೆಯಿದೆ. ಈ ಆಟ ಸಾಗುವಳಿ ಮುಗಿದ ಆಟಿ ಸೋಣ ತಿಂಗಳಿನ ತೆನೆ ಕಟ್ಟಿದ ನಂತರ ಆಡಬಾರದೆಂಬ ನಿಯಮವಿದೆ. ಆ ಮೇಲೆ ಚೆನ್ನೆಮಣೆ ಆಟಕ್ಕೆ ಸೇರುತ್ತದೆ. ಈಗಿನ ಕಾಲದಲ್ಲಿ ಚೆನ್ನೆಮಣೆಯ ಜಾಗವನ್ನು ಕೇರಮ್ ಬೋರ್ಡ್ ಮತ್ತು ಚೆಸ್ ಬೋರ್ಡ್ ಅಕ್ರಮಿಸಿವೆ.[೧]
ಉಲ್ಲೇಖ
[ಬದಲಾಯಿಸಿ]- ↑ ತುಳುನಾಡಿನ ಕಟ್ಟು ಕಟ್ಟಳೆಗಳು ರಾಘು ಪಿ ಶೆಟ್ಟಿ ಪುಟ ೬೧ ಪ್ರಕಾಶಕರು ಲಕ್ಶ್ಮಿ ಛಾಯ ವಿಚಾರ ವೇದಿಕೆ ಮುಂಬಯಿ