ಹಗಣ
ಪರಿಚಯ
[ಬದಲಾಯಿಸಿ]ಹಗಣ ಒಂದು ಜನಪದ ಆರಾಧನಾ ರಂಗ ಪ್ರಕಾರ. ಹಗರಣ ಎಂದೂ ಕೆಲವಡೆ ಇದನ್ನು ಕರೆಯಲಾಗುತ್ತದೆ. ಹಬ್ಬ ಜಾತ್ರೆಗಳ ಆಚರಣೆಗಳಲ್ಲಿ ಅಥವಾ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಸಾಮಾನ್ಯ ಜನರು ಹಾಕುವ ವೇಷ ಎನ್ನುವ ಅರ್ಥದಲ್ಲಿ ಇಲ್ಲಿ ವಿವೇಚಿಸಲಾಗಿದೆ. ಪ್ರಾಚೀನ ಕನ್ನಡ ಕಾವ್ಯಗಳಲ್ಲಿ ಈ ಪದ ಬಳಕೆಗೊಂಡಿರುವ ಬಗ್ಗೆ ವಿವೇಚಿಸಿ ಇದು ಆರಾಧನಾ ರಂಗಕಲೆಗಳ ರೂಪದಲ್ಲಿ ಭಿನ್ನ ಭಿನ್ನ ರೂಪಗಳಲ್ಲಿ ಉಸಿರಾಡಿಕೊಂಡಿವೆ ಎಂದು ಮೊದಲಿಗೆ ಹೇಳಿದವರು ಡಾ.ಚಿದಾನಂದ ಮೂರ್ತಿಯವರು.
ಹಗಣಗಳ ಬಗೆ
[ಬದಲಾಯಿಸಿ]- ಜಾತ್ರೆ ಹಗಣ
- ಸುಗ್ಗಿ ಹಗಣ
- ಹಗಣ
ವಿಶೇಷತೆಗಳು
[ಬದಲಾಯಿಸಿ]ಊರಿನ ಜಾತ್ರೆಗಳ ಅಂಗವಾಗಿ ಹಗಣಗಳನ್ನು ನಡೆಸಲಾಗುತ್ತದೆ. ಕುಮುಟಾ ತಾಲೂಕಿನ ಹಳದೀಪುರದ ದೇವಿಕಾನ ಹುಣ್ಣಿಮೆಯ ಹಬ್ಬದ ಹಿಂದಿನ ರಾತ್ರಿ ನಡೆಯುವ ಹಗಣ ಬಹಳ ಪ್ರಸಿದ್ಧವಾದುದು. ಊರ ಹೊರಗಡೆ ದುರ್ಗಾದೇವಿಯ ಗುಡಿಯ ಪಕ್ಕದಲ್ಲಿ ಬೀರರ ಗುಡಿಯೂ ಮಾಸ್ತಿಯ ಗುಡಿಯೂ ಇರುತ್ತದೆ. ರಾತ್ರಿ ಹೊತ್ತು ದೇವಿಯನ್ನು ಅಲಂಕರಿಸಿ ಮಿರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ವಿವಿಧ ವೇಷಗಳನ್ನು ತೊಟ್ಟು ಜನಮಂದಿ ಒರುತ್ತಾರೆ. ಹಗಣವೆನ್ನುವುದು ಬಹುಬಗೆಯ ವೇಷಗಳ ಒಂದು ಗುಂಪು.ಎತ್ತರವಾದ ಮರದ ಕಾಲುಗಳನ್ನು ಕಟ್ಟಿಕೊಂಡು ನಡೆಯುವ ವೇಷಗಳಿರುತ್ತವೆ. ಸಿಂಹದ ವೇಷ, ರಾಮ, ಲಕ್ಷ್ಮಣ, ಸೀತೆ ಹಿರಣ್ಯಕಷಿಪು, ಪ್ರಹಲ್ಲಾದ, ನರಸಿಂಹ, ಭೀಷ್ಮ, ಕರ್ಣ ಮುಂತಾದ ಪೈರಾಣಿಕ ವೇಷಗಳನ್ನು ಧರಿಸಿದವರು ಇರುತ್ತಾರೆ. ಈ ವೇಷಗಳು ಏನೇನೋ ಶಾಬ್ಧಿಕ, ಆಂಗಿಕ, ಅಭಿನಯ ಮಾಡುತ್ತಿರುತ್ತಾರೆ. ಕುಡುಕ, ಪೋಲೀಸ್, ಅರಣ್ಯ ಚಾಲಕ ವೇಷಗಳು ಇರುತ್ತವೆ. ಯಾವುದಕ್ಕೂ ಒಂದು ಶಿಸ್ತು ಬ್ಧವಾದ ರಚನೆ ಮಾತಿಗೆ ಕ್ರಮ ಬದ್ಧತೆ ಇರುವುದಿಲ್ಲ. ಯಾವುದಕ್ಕೂ ಒಂದು ಶಿಸ್ತು ಬದ್ಧವಾದ ರಚನೆ ಇರುವಿದಿಲ್ಲ ಒಂದು ಬಗೆಯ ಅಸ್ತ ವ್ಯಸ್ತ ವೇಷಧಾರಿಗಳ ಚಲನವಲನಕ್ಕೆ, ಮಾತಿಗೆ, ಕ್ರಮ ಬದ್ಧತೆ ಇರುವುದಿಲ್ಲ. ಇದುವೇನಿಜವಾದ ಹಗಣ