ಮಧುರೈ
ಮಧುರೈ
ಮದುರೈ மதுரை | |
---|---|
city | |
Government | |
• ಮೇಯರ್ | ಥೆನ್ಮೋಳಿ ಗೋಪಿನಾಥನ್[೧] |
Population (೨೦೦೧) | |
• Total | ೧೧,೨೮,೮೬೯ |
Website | www.maduraicorporation.in |
ಭಾರತೀಯ ದ್ವೀಪಕಲ್ಪ[೩] ದ ಜನವಾಸ್ತವ್ಯವಿದ್ದ ಪ್ರಾಚೀನ ನಗರ ಮಧುರೈ (ತಮಿಳು:மதுரை). ಭಾರತದ ರಾಜ್ಯವಾದ ತಮಿಳುನಾಡಿನ ಮಧುರೈ ಜಿಲ್ಲೆಯಲ್ಲಿ ವೈಗೈ ನದಿತೀರದ ಪ್ರಾಚೀನ ಹಾಗೂ ಪ್ರತಿಷ್ಠಿತ ನಗರವಾಗಿದೆ.
ಈ ನಗರವನ್ನು ವ್ಯಾಪಕವಾಗಿ ದೇವಾಲಯಗಳ ನಗರ [೩], ಇದನ್ನು ಕೂದಲ್ ಮಾನಗರ್ ಎಂದೂ ಕರೆಯುತ್ತಾರೆ, ತಮಿಳುನಾಡಿನ ಸಾಂಸ್ಕೃತಿಕ ರಾಜಧಾನಿ (ಕಲಾಚಾರ ತಲೈನಗರ್) , ಮಲ್ಲಿಗೈ ಮಾನಗರ್(ಮಲ್ಲಿಗೆಯ ನಗರ), ಥೂಂಗ ನಗರಂ(ನಿದ್ದೆಮಾಡದ ನಗರ), ಪೂರ್ವದ ಅಥೆನ್ಸ್ ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. 2001ರ ಜನಗಣತಿ[೪] ಯ ಪ್ರಕಾರ 1,203,095ರಷ್ಟು ಜನಸಂಖ್ಯೆ ಇರುವ ಈ ನಗರ ತಮಿಳುನಾಡಿನಲ್ಲೇ ಮೂರನೇ ಅತಿ ದೊಡ್ಡ ಮಹಾನಗರವಾಗಿದೆ.
ಪ್ರಾಚೀನ ಕಾಲದ ದಕ್ಷಿಣ ನಾಗರೀಕತೆಯ ರಾಜಧಾನಿಯಾಗಿತ್ತು ಮಧುರೈ ಮಹಾನಗರ. ಮಧುರೈನ ಸಾಂಸ್ಕೃತಿಕ ಹಿನ್ನೆಲೆಯು 2,500 ವರ್ಷಗಳಷ್ಟು ಹಿಂದಿನದು ಹಾಗೂ ನಗರವು ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದುದಲ್ಲದೇ 550 B.C.E.[೩] ಗಳಷ್ಟು ಪ್ರಾಚೀನ ಕಾಲದಿಂದ ರೋಮ್ ಮತ್ತು ಗ್ರೀಸ್ ರಾಷ್ಟ್ರಗಳ ಜೊತೆಗೆ ವ್ಯವಹಾರ ನಡೆಸಲಾಗುತ್ತಿತ್ತು[೫].
ಇತಿಹಾಸ
[ಬದಲಾಯಿಸಿ]ಮಧುರೈನ ಇತಿಹಾಸವು ಕ್ರಿಸ್ತ-ಯುಗಕ್ಕೂ ಹಿಂದಿನ ಸಂಗಮ್ ಅವಧಿಯಷ್ಟು ಹಳೆಯದು. ಇದು ಪ್ರಾಚೀನ ಪಾಂಡ್ಯರ ತಮಿಳಾಕಮ್ ಸಾಮ್ರಾಜ್ಯದ ಅಧಿಕಾರ ಕೇಂದ್ರವಾಗಿತ್ತು. ಸಂಗಮ್ ಅವಧಿಯ ಕವಿ ನಕ್ಕೀರರ್‌ರನ್ನು ಸುಂದರೇಶ್ವರರ್‌ನ ತಿರುವಿಲಾಯದಲ್ ಉಪಕಥೆಗಳೊಡನೆ ಸಂಬಂಧಿಸಿ ಹೇಳಲಾಗುತ್ತದೆ. ಇವುಗಳನ್ನು ಈಗಲೂ ದೇಗುಲಗಳ ಸಾಂಪ್ರದಾಯಿಕ ಜಾತ್ರೆ/ಉತ್ಸವಗಳಲ್ಲಿ ಇಟ್ಟು ಪೂಜಿಸಲಾಗುತ್ತದೆ[೬]. 3ನೇ ಶತಮಾನ BCಯಷ್ಟು ಪ್ರಾಚೀನ ಕಾಲದಲ್ಲಿ ಮೆಗಾಸ್ತನೀಸ್ ಮಧುರೈ ನಗರಕ್ಕೆ ಭೇಟಿ ನೀಡಿದ್ದ. ನಂತರ ರೋಮ್ ಮತ್ತು ಗ್ರೀಸ್ ದೇಶಗಳಿಂದ ಅನೇಕರು ಮಧುರೈಗೆ ಭೇಟಿ ನೀಡಿದ್ದಲ್ಲದೇ ಪಾಂಡ್ಯ ಅರಸರೊಡನೆ ವಾಣಿಜ್ಯ ವ್ಯವಹಾರಗಳನ್ನು ಆರಂಭಿಸಿದ್ದರು.
ಪ್ರಾಚೀನ ಕುಮಾರಿ ಕಂದಂ ಎಂಬ ದಂತಕಥೆ/ಪುರಾಣದ ಪ್ರಕಾರ, ಲೋಕರೂಢಿಯಲ್ಲಿ ಥೆನ್‌ಮಧುರೈ ಅಥವಾ ದಕ್ಷಿಣ ಮಧುರೈ ಎಂದು ಕರೆಯಲಾಗುತ್ತಿದ್ದ ಮೂಲ ಮಧುರೈ ನಗರವನ್ನು ತ್ಸುನಾಮಿ/ಸುನಾಮಿ ಅಲೆಗಳು ದಾಳಿ ಮಾಡಿ ನಾಶವಾಯಿತು. ಹೊಸದಾಗಿ ಕಟ್ಟಿದ ನಗರವು ಕಡೆಯ ಶತಮಾನದ ಮೊದಲ ಭಾಗದಲ್ಲಿ ಕೊನೆಯ ತಮಿಳು ಸಂಗಂ ಸಾಮ್ಯಾಜ್ಯಕ್ಕೆ ನೆಲೆಯಾಗಿತ್ತು. ಪ್ರಸಿದ್ಧ ರಾಷ್ಟ್ರಕವಿ ಸುಬ್ರಮಣ್ಯ ಭಾರತಿಯವರು 20ನೇ ಶತಮಾನದ ಮೊದಲ ಭಾಗದಲ್ಲಿ ಸೇತುಪತಿ ಪ್ರೌಢಶಾಲೆಯ ತಮಿಳು ಭಾಷಾ ಪಂಡಿತರಾಗಿ/ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ನೆರೆಯ ದಿಂಡಿಗಲ್ ಜಿಲ್ಲೆಯಲ್ಲಿ ವಡಮಧುರೈ ಎಂಬ ಸಣ್ಣ ಪಟ್ಟಣವಿದೆ ಹಾಗೂ ಮತ್ತೊಂದು ನೆರೆಯ ಜಿಲ್ಲೆ ಸಿ/ಶಿವಗಂಗೈನಲ್ಲಿ ಮತ್ತೊಂದು ಮನಮಧುರೈ ಎಂಬ ಪಟ್ಟಣವಿದೆ.
Madurai | ||||||||||||||||||||||||||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
Climate chart (explanation) | ||||||||||||||||||||||||||||||||||||||||||||||||||||||||||||
| ||||||||||||||||||||||||||||||||||||||||||||||||||||||||||||
|
ಪಾಂಡ್ಯ[೬] ರ ಪ್ರಮುಖ ಶತೃಗಳಾದ ಚೋಳರು 10ನೇ ಶತಮಾನ ADಯಲ್ಲಿ ಮಧುರೈಯನ್ನು ವಶಪಡಿಸಿಕೊಳ್ಳುವವರೆಗೆ ನಗರವು ಉಚ್ಛ್ರಾಯ ಸ್ಥಿತಿಯಲ್ಲಿತ್ತು. ಇದೇ ಸಹಸ್ರಮಾನದ ಆರಂಭದಲ್ಲಿ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಗೆ ಒಳಪಟ್ಟುದದರಿಂದ ಮಧುರೈಯ ವೈಭವವು ತಗ್ಗಿದ ಪ್ರಮಾಣದಲ್ಲಾದರೂ ಮರಳಿತು ಹಾಗೂ ಮಧುರೈಯನ್ನು ನಾಯಕ್ ಚಕ್ರವರ್ತಿಗಳು ಆಳುತ್ತಿದ್ದರು, ಇವರಲ್ಲಿ ಪ್ರಥಮರು ತಿರುಮಲೈ ನಾಯಕರ್[೬].
ಭೌಗೋಳಿಕ ಮತ್ತು ಹವಾಮಾನ ವಿವರ
[ಬದಲಾಯಿಸಿ]ಮಧುರೈ ನಗರವು 52 km²ದಷ್ಟು ವಿಸ್ತೀರ್ಣ ಹೊಂದಿದ್ದು, ಪ್ರಸ್ತುತ 130 km²[೮] ನಷ್ಟು ನಗರಪ್ರದೇಶವನ್ನು ಒಳಪಡುವಷ್ಟು ವಿಸ್ತಾರವಾಗಿದ್ದು, 9°56′N 78°07′E / 9.93°N 78.12°Eಯಲ್ಲಿ ನೆಲೆಗೊಂಡಿದೆ.[೯] ಈ ನಗರವು ಸಮುದ್ರ ತಳ ಮಟ್ಟದಿಂದ 101 ಮೀಟರ್‌ಗಳಷ್ಟು ಎತ್ತರದಲ್ಲಿದೆ. ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಈಶಾನ್ಯ ಮುಂಗಾರಿನ ಮಳೆಯೊಂದಿಗೆ ಹವಾಗುಣವು ಒಣ ಹಾಗೂ ಬಿಸಿಯಾಗಿರುತ್ತದೆ. ಬೇಸಿಗೆ ಕಾಲದ ಉಷ್ಣತೆಯು ಗರಿಷ್ಠ 40 ಮತ್ತು ಕನಿಷ್ಠ 26.3 ಡಿಗ್ರಿ ಸೆಲ್ಷಿಯಸ್‌ನಷ್ಟಿದ್ದರೂ 43 ದಿಗ್ರಿಗಳ ಮೇಲಿನ ತಾಪಮಾನವೂ ಅಸಹಜವೇನಲ್ಲ. ಚಳಿಗಾಲ ತಾಪಮಾನವು 29.6ರಿಂದ 18 ಡಿಗ್ರಿ ಸೆಲ್ಷಿಯಸ್‌ವರೆಗೆ ಇರುತ್ತದೆ. ಸರಾಸರಿ ವಾರ್ಷಿಕ ಮಳೆಯ ಪ್ರಮಾಣ 85 cmನಷ್ಟಿರುತ್ತದೆ.
ಭಾಷೆ
[ಬದಲಾಯಿಸಿ]ಮಧುರೈನಲ್ಲಿ ಹಾಗೂ ಸುತ್ತಮುತ್ತದ ಪ್ರದೇಶಗಳಲ್ಲಿ ತಮಿಳು ಪ್ರಧಾನ ಭಾಷೆಯಾಗಿದೆ. ಮಧುರೈನ ತಮಿಳು ಪ್ರಭೇದವು ಇತರೆ ತಮಿಳು ಪ್ರಭೇದಗಳಾದ ಕೊಂಗು ತಮಿಳು ಮತ್ತು ನೆಲ್ಲೈ ತಮಿಳುಗಳಿಗಿಂತ ಅಲ್ಪ ವ್ಯತ್ಯಾಸ ಹೊಂದಿದೆ. ತಮಿಳಿನೊಂದಿಗೆ ಬಳಕೆಯಲ್ಲಿರುವ ಇತರೆ ಭಾಷೆಗಳೆಂದರೆ ಆಂಗ್ಲ, ತೆಲುಗು, ಸೌರಾಷ್ಟ್ರ ಹಾಗೂ ಉರ್ದು ಭಾಷೆಗಳು,. ಆದಾಗ್ಯೂ ಇವುಗಳಲ್ಲಿ ಕೆಲ ಭಾಷೆಗಳ ಪದಗಳು ತಮಿಳು ಪದಗಳನ್ನು ಸೇರಿಸಿಕೊಂಡಿವೆ.
ಜನಸಾಂದ್ರತೆ
[ಬದಲಾಯಿಸಿ]2001ರ ಭಾರತೀಯ ಜನಗಣತಿ[೨] ಯ ಪ್ರಕಾರ, ಮಧುರೈ ನಗರವು ಪೌರಸಂಸ್ಥೆಗಳ ವ್ಯಾಪ್ತಿಯ ಪ್ರದೇಶದಲ್ಲಿ 928,869ರಷ್ಟು ಜನಸಂಖ್ಯೆಯನ್ನು ಹೊಂದಿದ್ದು, ನಗರ ಪ್ರದೇಶದಲ್ಲಿನ ಜನಸಂಖ್ಯೆ 1,194,665ರಷ್ಟಿದೆ. ಒಟ್ಟು ಜನಸಂಖ್ಯೆಯಲ್ಲಿ 51% ಪುರುಷರೂ ಮತ್ತು 49% ಮಹಿಳೆಯರೂ ಇದ್ದಾರೆ. ಮಧುರೈ ನಗರವು ಸರಾಸರಿ ರಾಷ್ಟ್ರೀಯ ಸಾಕ್ಷರತೆಯ ಪ್ರಮಾಣವಾದ 59.5%ನ್ನೂ ಮೀರಿಸಿ ಸರಾಸರಿ 79%ರಷ್ಟು ಸಾಕ್ಷರತೆ ದರ ಹೊಂದಿದೆ: ಪುರುಷರ ಸಾಕ್ಷರತೆ 84%ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ 74%ರಷ್ಟಿದೆ. ಮಧುರೈನಲ್ಲಿ, ಜನಸಂಖ್ಯೆಯ 10%ರಷ್ಟು ಭಾಗ 6 ವರ್ಷದೊಳಗಿನವರಾಗಿದ್ದಾರೆ. ಪ್ರತಿ 1,000 ಪುರುಷರಿಗೆ 968 ಸ್ತ್ರೀಯರಿದ್ದಾರೆ.[೧೦]
ವಾಸ್ತು ಶಿಲ್ಪ
[ಬದಲಾಯಿಸಿ]ಮಧುರೈ ನಗರವನ್ನು ಮೀನಾಕ್ಷಿ ಸುಂದರೇಶ್ವರರ್ ದೇಗುಲವನ್ನು ಸುತ್ತುವರೆದು ಕಟ್ಟಲಾಗಿದೆ. ಬ್ರಹ್ಮಾಂಡದ ರಚನೆಯನ್ನು ಸಂಕೇತಿಸುವಂತೆ ಕೇಂದ್ರಿತ ಚತುಷ್ಕೋನಾಕೃತಿ ರಸ್ತೆಗಳು ದೇಗುಲವನ್ನು ಸುತ್ತುವರೆದಿವೆ. ಇಡೀ ನಗರವನ್ನು ಕಮಲದ[೬] ಹೂವಿನ ಆಕೃತಿಯಲ್ಲಿ ಕಟ್ಟಲಾಗಿದೆ. ಚೌಕಾಕಾರದ ರಸ್ತೆಗಳಲ್ಲಿ ಕೆಲವು ರಸ್ತೆಗಳಿಗೆ ತಮಿಳು ತಿಂಗಳುಗಳ ಹೆಸರನ್ನಿಡಲಾಗಿದೆ. ಮೀನಾಕ್ಷಿ ದೇಗುಲವನ್ನು ಸುತ್ತುವರೆದಿರುವ ಆರು ಪ್ರಮುಖ ಚೌಕಾಕಾರದ ರಸ್ತೆಗಳೆಂದರೆ ಆದಿ,ಚಿತಿರೈ,ಆವನಿ ಮೂಲಾ,ಮಾಸಿ,ಮಾರತ್ ಮತ್ತು ವೇಲಿ ರಸ್ತೆಗಳು.
ಪೌರಾಡಳಿತ
[ಬದಲಾಯಿಸಿ]ಇಡೀ ಮಧುರೈ ಜಿಲ್ಲೆಯು ಮಧುರೈ ಜಿಲ್ಲಾಧಿಕಾರಿಗಳ ಆಡಳಿತಕ್ಕೊಳಪಟ್ಟಿದೆ ಹಾಗೂ ನಗರಸಭೆಯ ಪರಿಧಿಯಲ್ಲಿನ ಪ್ರದೇಶಗಳು ಮಧುರೈ ನಗರಸಭೆಯ ಆಡಳಿತಕ್ಕೊಳಪಟ್ಟಿವೆ. 1971ರಲ್ಲಿ ಚೆನ್ನೈ [೧೧] ನಂತರ ರಚಿಸಲಾದ ಎರಡನೇ ನಗರಸಭೆಯಾಗಿತ್ತು. ಈ ನಗರಸಭೆಯು ಅಭಿವೃದ್ಧಿ ಕೆಲಸಗಳನ್ನು ಉತ್ತಮ ರೀತಿಯಲ್ಲಿ ಕೈಗೊಂಡಿದ್ದಕ್ಕಾಗಿ 2008ನೇ ಸಾಲಿನ ಅನೇಕ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದೆ [೧೨]. ಅಲ್ಲಿನ ಮೇಯರ್/ನಗರಸಭಾದ್ಯಕ್ಷರು ಪುರಸಭೆಯ ಶಾಲಾ ಮಂಡಳಿ, ನಗರ ಸಾರಿಗೆ ವ್ಯವಸ್ಥೆ, ಪುರಸಭೆಯ ಆಸ್ಪತ್ರೆ ಮತ್ತು ನಗರದ ಗ್ರಂಥಾಲಯಗಳ ದೈನಂದಿನ ಚಟುವಟಿಕೆಗಳಿಗೆ ಬಾಧ್ಯಸ್ಥರಾಗಿರುತ್ತಾರೆ. ನಗರವು ಮಧುರೈ ಜಿಲ್ಲಾ ಕೇಂದ್ರವಾಗಿ ಹಾಗೂ ಮದ್ರಾಸ್ ಉಚ್ಚನ್ಯಾಯಾಲಯದ ಮಧುರೈ ಪ್ರಾಂತ್ಯದ ಪೀಠವಾಗಿ ಕಾರ್ಯನಿರ್ವಹಿಸುತ್ತದೆ.
ಉಚ್ಚನ್ಯಾಯಾಲಯದ ಪೀಠವು 24-07-2004ರಿಂದ ಜಾರಿಗೆ ಬರುವಂತೆ ಕನ್ಯಾಕುಮಾರಿ, ತಿರುನಲ್ವೇಲಿ, ತೂತುಕುಡಿ, ಮಧುರೈ, ದಿಂಡಿಗಲ್, ರಾಮನಾಥಪುರಂ, ವಿರುಧುನಗರ್, ಶಿವಗಂಗೆ/ಶಿವಗಂಗಾ, ಪುದುಕ್ಕೊಟ್ಟೈ, ತಂಜಾವೂರು, ತಿರುಚಿರಾಪಳ್ಳಿ/ತಿರುಚಿನಾಪಳ್ಳಿ ಮತ್ತು ಕರೂರು[೧೩] ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದೆ.
ನಗರದಲ್ಲಿ ಪಾಸ್‌ಪೋರ್ಟ್ ಕಛೇರಿಯಿದೆ ಮತ್ತು ಮಧುರೈ, ಥೇಣಿ, ಶಿವಗಂಗೆ/ಶಿವಗಂಗಾ, ವಿರುಧುನಗರ್, ರಾಮನಾಥಪುರಂ, ತೂತುಕುಡಿ, ತಿರುನಲ್ವೇಲಿ, ಕನ್ಯಾಕುಮಾರಿ & ದಿಂಡಿಗಲ್/ದಿಂಡುಗಲ್ ಜಿಲ್ಲೆಗಳು ಇದರ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ [೧೪].
ನಗರವು ಉದ್ಯೋಗ ಮಾಹಿತಿ ಕಚೇರಿಯನ್ನು ಸಹಾ ಹೊಂದಿದ್ದು, ಮಧುರೈ ಜಿಲ್ಲೆಯ ಶಿಕ್ಷಿತ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳೊಂದಿಗೆ ತಮಿಳುನಾಡು ಸರ್ಕಾರದ ಉದ್ಯೋಗಾವಕಾಶಗಳಿಗಾಗಿ ನೋಂದಣಿ ಮಾಡಿಸುತ್ತಾರೆ. ಇದೇ ಕಚೇರಿಯು ತಮಿಳುನಾಡಿನ ಎಲ್ಲಾ ದಕ್ಷಿಣ ಜಿಲ್ಲೆಗಳ ಹಾಗೂ ಕೆಲ ಪಶ್ಚಿಮ ಜಿಲ್ಲೆಗಳ ದಕ್ಷಿಣ ಸ್ನಾತಕೋತ್ತರ ಪದವೀಧರರ ಮತ್ತು ವೃತ್ತಿಪರ ಪದವೀಧರರ ನೋಂದಣಿ ಕೇಂದ್ರವಾಗಿ ಸಹಾ ಕಾರ್ಯನಿರ್ವಹಿಸುತ್ತದೆ.
ಮಧುರೈನ ಧಾರ್ಮಿಕ ಮುಖ್ಯಸ್ಥರು
[ಬದಲಾಯಿಸಿ]ಅತ್ಯಂತ ಪ್ರಾಚೀನ ಜನವಸತಿಯ ನಗರವಾಗಿರುವ ಕಾರಣ, ಮಧುರೈ ನಗರವು ತನ್ನ ವೈವಿಧ್ಯಮಯ ಸಂಸ್ಕೃತಿ [೧೫] ಮತ್ತು ಧಾರ್ಮಿಕ ಸಾಮರಸ್ಯಕ್ಕೆ ಪ್ರಸಿದ್ಧವಾಗಿದೆ. ಮುಮ್ಮದ ತಲೈವರ್‌ಗಳ್ (ಮೂರು ಧರ್ಮಗಳ ಮುಖಂಡರು) ಎಂಬ ಪ್ರಸಿದ್ಧ ಹೆಸರಿನಿಂದ ಕರೆಯಲಾಗುವ ಮೂರು ಮಂದಿ ಧಾರ್ಮಿಕ ಮುಖಂಡರು ಮಧುರೈಯನ್ನು ಶಾಂತಿಯಿಂದಿರಿಸಲು ಪ್ರಯತ್ನಿಸುತ್ತಿರುತ್ತಾರೆ.
ಆಧೀನಮ್
[ಬದಲಾಯಿಸಿ]ತಿರುಜ್ಞಾನ ಸಂಬಾಂತರ್ ಅವಧಿಯಲ್ಲಿ ರಚಿಸಲಾದ ಭಾರತದಲ್ಲಿಯೇ ಅತ್ಯಂತ ಹಳೆಯದಾದ ಮಠಗಳಲ್ಲಿ ಒಂದಾಗಿದೆ. ಇದರ ಸ್ಥಾಪನೆಯ ಕಾಲದಿಂದಲೇ ಬಹಳ ಸ್ಥಿರಾಸ್ಥಿಗಳನ್ನು ದಾನವಾಗಿ ನೀಡಲಾಗಿದೆ. ಮಧುರೈ ಆಧೀನಮ್‌ನ ಐತಿಹ್ಯವು 1300 ವರ್ಷಗಳ ಷ್ಟು ಹಳೆಯದಾದುದು ಹಾಗೂ ತಿರುಜ್ಞಾನ ಸಂಬಾಂತರ್‌ರು ಮಧುರೈ ಆಧೀನಮ್‌ನ 1ನೇ ಮಗಾ/ಮಹಾ ಸನ್ನಿಧಾನಂ ಆಗಿದ್ದರು. ಮಧುರೈನ ಆಧೀನಮ್ ಮಠದ ಮುಖಂಡತ್ವವನ್ನು/ಮುಖ್ಯಸ್ಥ ಸ್ಥಾನವನ್ನು ಗುರು ಮಗಾ/ಮಹಾ ಸನ್ನಿಧಾನಮ್‌ರವರು ವಹಿಸಿರುತ್ತಾರೆ. ಶೈವ ಪಂಥಕ್ಕೆ ಸೇರಿದ್ದರೂ ಆಧೀನಮ್‌ರನ್ನು ಮಧುರೈನ ಎಲ್ಲಾ ಶೈವರು ಹಾಗೂ ವೈಷ್ಣವ ಹಿಂದೂಗಳ ಧಾರ್ಮಿಕ ಮುಖಂಡರನ್ನಾಗಿ ಪರಿಗಣಿಸಲಾಗುತ್ತದೆ. ಗುರು ಮಗಾ ಸನ್ನಿಧಾನಂರಾದ ಅರುಣಾಚಲಂ ಸ್ವಾಮಿ ಯವರು ಪ್ರಸ್ತುತ ಆಧೀನಂರಾಗಿರುವ ತಮ್ಮ ವಂಶಾವಳಿಯ 292ನೇ ಆಧೀನಂರಾಗಿದ್ದಾರೆ. ಪ್ರಸಕ್ತ ಆಧೀನಂರು ವೇದಗಳು, ಕುರಾನ್ ಮತ್ತು ಬೈಬಲ್‌ಗಳಲ್ಲಿ ಪಾರಂಗತರಾಗಿದ್ದಾರೆ. ಹಿಂದೂ ಧರ್ಮಕ್ಕೆ ಸೇರಿದ ಎಲ್ಲಾ ಪ್ರಮುಖ ಹಬ್ಬಗಳು/ಉತ್ಸವಗಳಲ್ಲಿ ಭಾಗವಹಿಸುವ ಆಧೀನಂರು ಧಾರ್ಮಿಕ ಸಾಮರಸ್ಯದ ಸಭೆಗಳಲ್ಲಿ ಕೂಡಾ ಭಾಗವಹಿಸುತ್ತಾರೆ. ನಗರದಲ್ಲಿ ನಡೆಯುವ ಕುಂಭಾಭಿಷೇಕಗಳು, ಮೀನಾಕ್ಷಿ-ಷೊಕ್ಕರ್ ವಿವಾಹಮಹೋತ್ಸವ, ವೈಗೈಗೆ ಅಜಗರ್‌ನ ಪ್ರವೇಶ ಹಾಗೂ ಇನ್ನಿತರ ಹಿಂದೂ ಮಹೋತ್ಸವಗಳಲ್ಲಿ ಆಧೀನಮ್‌ರ ಮುಖಂಡತ್ವದಲ್ಲಿ ನಡೆಯುತ್ತದೆ. ಪ್ರಸಕ್ತ ಆಧೀನಂರು ತಮ್ಮ ಜೀವಿತಾವಧಿಯಲ್ಲಿಯೇ ತಮ್ಮ ಉತ್ತರಾಧಿಕಾರಿಯನ್ನು ನೇಮಕ ಮಾಡುತ್ತಾರೆ, ಹಾಗೆ ನೇಮಕರಾದವರು ಅವರ ನಂತರ ಅಧಿಕಾರ ಪಡೆಯುತ್ತಾರೆ.
ಖಾಜಿ/ಖಾಝಿಯಾರ್
[ಬದಲಾಯಿಸಿ]ಮಧುರೈನಲ್ಲಿ ಖಾಝಿ ಎಂದರೆ ಮುಸ್ಲಿಮರ ಧಾರ್ಮಿಕ ಮುಖಂಡ ಹಾಗೂ ನ್ಯಾಯಾಧೀಶರನ್ನು ತಮಿಳುನಾಡು ಸರಕಾರವು ನೇಮಿಸುತ್ತದೆ. ಮಧುರೈನಲ್ಲಿನ ಖಾಜಿಗಳ ಐತಿಹ್ಯವು 750 ವರ್ಷಗಳಷ್ಟು ಹಳೆಯದು. ಸೈಯದ್ ತಜುದ್ದೀನ್‌ರು ಆಗಿನ ಸುಲ್ತಾನರ ಸರ್ಕಾರದ 1ನೇ ಖಾಝಿ/ಜಿಯಾಗಿದ್ದರು. ಮಧುರೈನಲ್ಲಿ ತಮಿಳುನಾಡು ಸರ್ಕಾರದ ಮೂಲಕ ಇಂದಿಗೂ ಆತನ ವಂಶಸ್ಥರನ್ನೇ ಖಾಜಿಯನ್ನಾಗಿ ನೇಮಿಸಲಾಗುತ್ತದೆ. ಹಝರತ್ ಮೌಲಾನಾ ಮೌಲ್ವಿ, ಮೀರ್ ಅಹಮದ್ ಇಬ್ರಾಹಿಂ ರಹಮುತುಲ್ಲಾಹಿ ಅಲೈಹಿ, (ಮಧುರೈನ ಮಕಬರಾ ಹಝರತ್‌ಗಳಲ್ಲಿ ಮೊದಲನೆಯವರು), ಮೌಲಾನಾ ಆಗಿದ್ದ ಸೈಯೆದ್ ಅಬ್ದುಲ್ ಖಾದಿರ್ ಇಬ್ರಾಹಿಂ, ಮೌಲ್ವಿಯವರಾದ ಸೈಯೆದ್ ಅಮ್ಜದ್ ಅಹಮದ್ ಇಬ್ರಾಹಿಂ ಮತ್ತು ಮೌಲ್ವಿಯವರಾದ ಸೈಯೆದ್ ಅಬ್ದುಸ್ ಸಲಾಂ ಇಬ್ರಾಹಿಂ ಸಾಹಿಬ್ ಹಝರತ್‌ರವರುಗಳು ತಮ್ಮ ಅವಧಿಯಲ್ಲಿ ಸರಕಾರದ ಪರವಾಗಿ ಗಣನೀಯ ಸೇವೆ ಸಲ್ಲಿಸಿದ್ದಾರೆ[೧೬]. ನಗರದ ಖಾಜಿಯಾರ್, ಖಾಜಿಸಾಬ್, ನಗರದ ಖಾಜಿಸಾಬ್ etc. ಎಂದೆಲ್ಲಾ ಜನರಿಂದ ಪ್ರೀತಿಪೂರ್ವಕವಾಗಿ ಕರೆಯಿಸಿಕೊಳ್ಳುತ್ತಿದ್ದ ಮಧುರೈ Archived 2018-12-16 ವೇಬ್ಯಾಕ್ ಮೆಷಿನ್ ನಲ್ಲಿ. ನ 19ನೇ ಖಾಜಿಯಾರ್ ಆದ ಸೈಯೆದ್ ಅಬ್ದುಸ್ ಸಲಾಂ ಇಬ್ರಾಹಿಂರವರು ತಮ್ಮ ಸರಳತೆ ಹಾಗೂ ನಗರದ ಮುಸ್ಲಿಮರ ಸಾರಸ್ವತ/ಸಾಹಿತ್ಯಿಕ/ಶೈಕ್ಷಣಿಕ ಮತ್ತು ಆರ್ಥಿಕ ಔನ್ನತ್ಯಕ್ಕಾಗಿ ಶ್ರಮಿಸಿದುದಕ್ಕಾಗಿ ಪ್ರಸಿದ್ಧರಾಗಿದ್ದಾರೆ. ಮಧುರೈನ ಪ್ರಸ್ತುತ ಖಾಜಿಯಾರ್ ಮೌಲ್ವಿ. A.ಸೈಯೆದ್ ಖಾಜಾ ಮೊಯಿ/ಮುಯಿನುದ್ದೀನ್ ರು ಮಧುರೈನ ಖಾಜಿಯಾರ್‌ಗಳ ವಂಶಾವಳಿಯಲ್ಲಿ 20ನೆಯವರು, ಇವರು ಆಧೀನಂರಾದ ಕುಂದ್ರಕ್ಕುಡಿ ಅಡಿಗಳಾರ್ ಮತ್ತು ಆರ್ಚ್ ಬಿಷಪ್‌ರೊಡನೆ ಮಧುರೈನಲ್ಲಿನ ಧಾರ್ಮಿಕ ಸಾಮರಸ್ಯಕ್ಕಾಗಿ ನಡೆಸುತ್ತಿರುವ ಚಟುವಟಿಕೆಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಧಾರ್ಮಿಕ ಸಾಮರಸ್ಯತೆಗಾಗಿ ಸೇವೆ ಸಲ್ಲಿಸುವುದಲ್ಲದೇ ಪ್ರಸಕ್ತ ಖಾಜಿಯಾರ್‌ರು ಬಡಾವಣೆಗಳಲ್ಲಿನ ಮುಸ್ಲಿಮರ ರಾಜಕೀಯ ಅಭ್ಯುದಯಕ್ಕಾಗಿ ಸಹಾ ಟೊಂಕಕಟ್ಟಿದ್ದಾರೆ. ಅರಸರದಿಯ ಈದ್ಗಾ ಮೈದಾನದಲ್ಲಿ ನಡೆಯುವ ಈದ್ ಉಲ್-ಫಿತರ್ ಮತ್ತುಈದ್ ಅಲ್-ಅದಾಗಳ ಸಾಮೂಹಿಕ ಪ್ರಾರ್ಥನೆಗಳ ಮುಂದಾಳತ್ವ ವಹಿಸುತ್ತಾರೆ. ಇಷ್ಟೇ ಅಲ್ಲದೇ, ಇಸ್ಲಾಮಿನ ಮುಹರ್ರಮ್ ತಿಂಗಳಲ್ಲಿ ನಡೆಸಲಾಗುವ ಸುನ್ನಿ ಮುಸ್ಲಿಮರ 23 ದಿನಗಳ ಆಷುರಾ ಧಾರ್ಮಿಕ ಕೂಟದ ಮುಂದಾಳತ್ವವನ್ನೂ ಅವರೇ ವಹಿಸುತ್ತಾರೆ. ಮಧುರೈನಲ್ಲಿ ಬಹುಪಾಲು ಮುಸ್ಲಿಮ್ ವಿವಾಹಗಳನ್ನು ವಿಧಿಪೂರ್ವಕವಾಗಿ ನಡೆಸಿಕೊಡುವುದಲ್ಲದೇ, ಆ ನಂತರ ಬರಬಹುದಾದ ಸಮಸ್ಯೆಗಳಿಗೆ ಪರಿಹಾರವನ್ನೂ ಅವರು ನೀಡುತ್ತಾರೆ. ಸೂಕ್ತ ದರ್ಗಾಗಳಲ್ಲಿ ನಡೆಸಲಾಗುವ ಬಹಳಷ್ಟು ಝಿಕ್ರ್ ಮಜ್ಲಿಗಳು ಮತ್ತು ಉರುಸ್ ಉತ್ಸವಗಳನ್ನು ಖಾಜಿಯಾರ್ ಅಥವಾ ಖಾಜಿಯಾರ್ ಕುಟುಂಬದ ಇತರೆ ಮೌಲ್ವಿಗಳ ಮುಂದಾಳತ್ವದಲ್ಲಿ ನಡೆಸಲಾಗುತ್ತದೆ.
ಆರ್ಚ್ ಬಿಷಪ್
[ಬದಲಾಯಿಸಿ]ಮಧುರಾದ ಆರ್ಚ್ ಬಿಷಪ್‌ರ ಆಡಳಿತದ ಐತಿಹ್ಯವು ಸುಮಾರು 70 ವರ್ಷಗಳಷ್ಟು ಹಳೆಯದು ಹಾಗೂ ಮಧುರೈನ ಆರ್ಚ್ ಬಿಷಪ್ಪರನ್ನು ಮಧುರೈನಲ್ಲಿರುವ ರೋಮನ್ ಕ್ಯಾಥೋಲಿಕ್ ಕ್ರೈಸ್ತರ ಮುಖಂಡರಾಗಿ ಪರಿಗಣಿಸಲಾಗುತ್ತದೆ. ಮಧುರಾದ ಆರ್ಚ್ ಬಿಷಪ್ಪರ ಪ್ರಾಂತ್ಯವನ್ನು 1938ರಲ್ಲಿ ಸ್ಥಾಪಿಸಲಾಯಿತು ಹಾಗೂ, 1950ರಲ್ಲಿ ಅದನ್ನು ಮಧುರೈನ ಆರ್ಚ್ ಬಿಷಪ್ಪರ ಪ್ರಾಂತ್ಯವೆಂದು ಮರುನಾಮಕರಣ ಮಾಡಲಾಯಿತು. ದಿಂಡಿಗಲ್, ಕೊಟ್ಟಾರ್, ಪಲಯಂಕೊಟ್ಟೈ, ಶಿವಗಂಗೆ/ಶಿವಗಂಗಾ, ತಿರುಚಿರಾಪಳ್ಳಿ/ತಿರುಚಿನಾಪಳ್ಳಿ ಮತ್ತು ತೂತುಕುಡಿ/ಟ್ಯೂಟಿಕಾರಿನ್‌ಗಳ ಸಹಾಯಕ ಬಿಷಪ್‌ರು ಮಧುರೈ ಬಿಷಪ್ಪರ ವ್ಯಾಪ್ತಿಗೊಳಪಡುತ್ತಾರೆ [೧೭]. ಮಧುರೈನ ಆರ್ಚ್ ಬಿಷಪ್ಪರ ಆಡಳಿತದ ವಂಶಾವಳಿಯು ಮಧುರೈನ 1ನೇ ಆರ್ಚ್‌ಬಿಷಪ್ ಜಾನ್ ಪೀಟರ್ ಲಿಯೋನಾರ್ಡ್‌ರಿಂದ ಆರಂಭವಾಗುತ್ತದೆ. ಮಧುರೈನ ನಾಲ್ಕನೇ ಆರ್ಚ್ ಬಿಷಪ್ ಆಗಿದ್ದ ಬಿಷಪ್ ಮಾರಿಯಾನಸ್ ಆರೋಕ್ಯ/ಗ್ಯಸ್ವಾಮಿಯವರು 1990ರ ದಶಕದ ಕೊನೆಯಲ್ಲಿ ದಕ್ಷಿಣ ತಮಿಳುನಾಡು ಕೋಮುಗಲಭೆಗಳ ಬೇಗುದಿಯಿಂದ ಹೊತ್ತಿ ಉರಿಯುತ್ತಿದ್ದಾಗ ಆಧೀನಂ ಹಾಗೂ ಖಾಜಿಯಾರ್‌ಗಳ ಜೊತೆಗೂಡಿ ಮಧುರೈನಲ್ಲಿನ ಶಾಂತತೆಯನ್ನು ಕಾಯ್ದುಕೊಳ್ಳಲು ಶ್ರಮಿಸಿದ್ದರು. ಬಿಷಪ್ ಪೀಟರ್ ಫರ್ನ್ಯಾಂಡೋರವರು ಮಧುರೈನ 5ನೇ ಆರ್ಚ್ ಬಿಷಪ್ ಆಗಿದ್ದಾರೆ. ಬಿಷಪ್ ಕ್ರಿಸ್ಟೋಫರ್ ಅಸಿರ್‌ರು, ಮಧುರೈನ C.S.I. ಕ್ರೈಸ್ತರ ಮುಖಂಡತ್ವ ಹೊಂದಿದ CSIನ ಮಧುರೈ-ರಾಮ್‌ನಾಡ್ ಬಿಷಪ್ ಆಡಳಿತ ಪ್ರಾಂತ್ಯದ ಆರ್ಚ್ ಬಿಷಪ್ ಆಗಿದ್ದಾರೆ.
ಸಾರಿಗೆ
[ಬದಲಾಯಿಸಿ]ರೈಲು ಸಾರಿಗೆ
[ಬದಲಾಯಿಸಿ]ಇಲ್ಲಿನ ರೈಲ್ವೇ ನಿಲ್ದಾಣ ರಾಷ್ಟ್ರದಲ್ಲಿನ ಅತ್ಯಂತ ಕಾರ್ಯನಿರತ ಜನನಿಬಿಡ ನಿಲ್ದಾಣವಾಗಿರುವುದಲ್ಲದೇ, ಗಣಕೀಕೃತ ಮುಂಗಡ ಕಾದಿರಿಸಿರುವಿಕೆಯ ಕೌಂಟರ್‌ಗಳನ್ನು ಹೊಂದಿದೆ. ದಕ್ಷಿಣ ರೈಲ್ವೇಯ ಅತ್ಯುತ್ತಮ ನಿರ್ವಹಣೆಯ ನಿಲ್ದಾಣವಾಗಿ ಅನೇಕ ಬಾರಿ ಮಧುರೈ ವಿಭಾಗವು ಪ್ರಶಸ್ತಿ ಗಳಿಸಿದೆ.[೧೮] ಮಧುರೈ ಜಂಕ್ಷನ್‌ನ ರೈಲು ನಿಲ್ದಾಣದ ಸಂಕೇತವು MDU . ಚೆನ್ನೈ, ನಾಗರ್‌ಕೋಯಿಲ್, ಕನ್ಯಾಕುಮಾರಿ, ತಿರುಚೆಂಡೂರ್, ವಿಲ್ಲುಪುರಂ, ಕೊಯಮತ್ತೂರು, ತೆಂಕಸಿ, ರಾಮೇಶ್ವರಂ, ತೂತುಕುಡಿ, ಬೆಂಗಳೂರು (ಮೈಸೂರು exp & ಮುಂಬಯಿ CST exp ಮೂಲಕ), ಮೈಸೂರು, ತಿರುವನಂತಪುರಂ, ಮುಂಬಯಿ (ಮುಂಬಯಿ CST exp ಮೂಲಕ), ಪುಣೆ (ಲೋಕಮಾನ್ಯ ತಿಲಕ್ exp ಮೂಲಕ), ಅಹಮದಾಬಾದ್, ತಿರುಪತಿ, ಹೈದರಾಬಾದ್(RMM OKHA EXPRES ಮೂಲಕ), ದೆಹಲಿ (ತಿರುಕ್ಕುರಳ್ ಮತ್ತು ತಮಿಳುನಾಡು ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ ಮೂಲಕ), ಮತ್ತು ಕೋಲ್ಕತಾ (ಕೇಪ್ ಹೌರಾ exp ಮೂಲಕ)ಗಳೂ ಸೇರಿದಂತೆ ಇದು ಅನೇಕ ಭಾರತೀಯ ನಗರಗಳು ಹಾಗೂ ಪಟ್ಟಣಗಳಿಗೆ ಸಂಪರ್ಕಿತವಾಗಿದೆ[೧೯], [೨೦].
ರಸ್ತೆ ಸಾರಿಗೆ
[ಬದಲಾಯಿಸಿ]ಮಧುರೈ ಅನೇಕ ಪ್ರಮುಖ ಬಸ್ ನಿಲ್ದಾಣಗಳನ್ನು ಹೊಂದಿದೆ: ಇದು ಮಾಟ್ಟುಥವನಿ (ಉತ್ತರ), ಪಾಲಂಗನಥಂ (ದಕ್ಷಿಣ), ಅರಪ್ಪಾಲಯಂ (ಪಶ್ಚಿಮ), ಪೆರಿಯಾರ್ (ಕೇಂದ್ರ) ಮತ್ತು ಅಣ್ಣಾ ಬಸ್ ನಿಲ್ದಾಣಗಳಲ್ಲಿನ (ಪೂರ್ವ) ಮಧುರೈ ಇಂಟೆಗ್ರೇಟೆಡ್ ಬಸ್ ಟರ್ಮಿನಸ್ (MIBT) ಸೇವೆಯಾಗಿ ಲಭ್ಯವಿದೆ. MIBTಯಿಂದ, ದಕ್ಷಿಣ ಭಾರತದ ಎಲ್ಲೆಡೆ ದಿನವಿಡೀ ಬಸ್ ಸಂಚಾರವಿರುತ್ತದೆ. ಅರಪ್ಪಾಲಯಂ ಬಸ್‌ನಿಲ್ದಾಣದಿಂದ, ದಕ್ಷಿಣ ತಮಿಳುನಾಡಿನ ಸ್ಥಳಗಳಾದ ಥೇಣಿ,ಕೊಯಮತ್ತೂರು, ತಿರುಪುರ್, ಈರೋಡ್, ಸೇಲಂಗಳಿಗೆ ಹೋಗುವ ಬಸ್‌ಗಳು ಲಭ್ಯವಿರುತ್ತದೆ ಹಾಗೂ ಪ್ರಮುಖ ಮಹಾನಗರಗಳಿಗೆ ಹೋಗುವ ಖಾಸಗಿ ಬಸ್‌ಗಳು ಹಾಗೂ ನಗರ ಸಾರಿಗೆ ಬಸ್‌ಗಳು ಮಾತ್ರವೇ ಪೆರಿಯಾರ್ ಬಸ್ ನಿಲ್ದಾಣದಿಂದ ಹೊರಡುತ್ತವೆ. ಅಣ್ಣಾ ಬಸ್‌ನಿಲ್ದಾಣ ಮತ್ತು ಪಾಲಂಗನಥಂ ನಿಲ್ದಾಣಗಳು ಸದ್ಯಕ್ಕೆ ಸೇವೆ ನೀಡುತ್ತಿಲ್ಲ.
ನಗರ ಸಾರಿಗೆ ಬಸ್‌ಗಳಲ್ಲದೇ, ತ್ರಿಚಕ್ರಗಳಿರುವ, ಕಪ್ಪು ಮತ್ತು ಹಳದಿ ಬಣ್ಣದ ಆಟೋಗಳು ಎಂದು ಕರೆಯಲ್ಪಡುವ ಆಟೋ-ರಿಕ್ಷಾಗಳು ನಗರದ ಒಳಗಿನ ಸಂಚಾರಕ್ಕೆ ಲಭ್ಯವಿರುತ್ತವೆ. MIBT ನಿಲ್ದಾಣದಲ್ಲಿ ಪೂರ್ವ-ಪಾವತಿ ಆಟೋ ಕೌಂಟರ್ ಇದ್ದು ಅಲ್ಲಿ ಪ್ರಯಾಣಿಕರು ಗಮ್ಯಸ್ಥಳದ ಮೇಲೆ ಆಧಾರಿತವಾಗಿ ನಿಶ್ಚಿತ ಬಾಡಿಗೆ ಮತ್ತು ಆಟೋ-ಶುಲ್ಕ ತೆತ್ತು ಪ್ರಯಾಣಿಸಬಹುದು.
ಮಧುರೈ ಕೆಳಕಂಡ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳಿಗೆ ಸಂಪರ್ಕ ಹೊಂದಿದೆ :
NH 7 : (ಉತ್ತರ-ದಕ್ಷಿಣ ಕಾರಿಡಾರ್ ಎಕ್ಸ್‌ಪ್ರೆಸ್‌ವೇ) ಬೆಂಗಳೂರು – ಸೇಲಂ – ದಿಂಡಿಗಲ್ – ಮಧುರೈ – ತಿರುನಲ್ವೇಲಿ – ಕನ್ಯಾಕುಮಾರಿ
NH 45B : ಟ್ರಿಚಿ/ತಿರುಚಿರಾಪಳ್ಳಿ/ತಿರುಚಿನಾಪಳ್ಳಿ – ಮಧುರೈ – ತೂತುಕುಡಿ
NH 49 : ಮಧುರೈ – ರಾಮೇಶ್ವರಂ
NH 49 Extn/ವಿಸ್ತೃತ : ಮಧುರೈ – ಥೇಣಿ – ಬೋದಿ/ಡಿ – ಕೊಚ್ಚಿ/ನ್
ಮಧುರೈ ನಗರಕ್ಕೆ ಅನೇಕ ಕಡೆಗಳಲ್ಲಿ ಸಂಪರ್ಕ ಹೊಂದಲು ವೈಗೈ ನದಿಯ ಮೇಲೆ ಸೇತುವೆಗಳನ್ನು ಕಟ್ಟಲಾಗಿದೆ. ನಗರದೊಳಗೆ ವಾಹನದಟ್ಟಣೆಯನ್ನು ಕಡಿಮೆ ಮಾಡಲು ಮೇಲುರಸ್ತೆಗಳನ್ನು ಕಟ್ಟಲಾಗುತ್ತಿದೆ. ಚೆನ್ನೈ ಮತ್ತು ಬೆಂಗಳೂರುಗಳಿಗೆ ನಾಲ್ಕು ಪಥದ ಎಕ್ಸ್‌ಪ್ರೆಸ್/ವಾಯುವೇಗದ ಹೆದ್ದಾರಿಗಳ ಲಭ್ಯತೆಯು ಮಧುರೈಗೆ ರಸ್ತೆ ಮೂಲಕ ಉತ್ತಮ ಸಂಪರ್ಕ ಕಲ್ಪಿಸಿದೆ.
ವಾಯುಯಾನ/ಸಾರಿಗೆ
[ಬದಲಾಯಿಸಿ]ಮಧುರೈ ವಿಮಾನನಿಲ್ದಾಣವು ಮಧುರೈ ರೈಲ್ವೆನಿಲ್ದಾಣದಿಂದ ಸರಿಸುಮಾರು 9 ಕಿಲೋಮೀಟರ್‌ಗಳಷ್ಟು ದೂರವಿರುವುದಲ್ಲದೇ, ಅಲ್ಲಿಂದ ಚೆನ್ನೈ, ಮುಂಬಯಿ ಮತ್ತು ಬೆಂಗಳೂರುಗಳಂತಹಾ ಪ್ರಮುಖ ಭಾರತೀಯ ನಗರಗಳಿಗೆ 11 ದೈನಂದಿನ ಹಾರಾಟಗಳು ಲಭ್ಯವಿವೆ. ಚೆನ್ನೈ ಮೂಲಕ ಹೈದರಾಬಾದ್, ಪುಣೆ, ಗೋವಾ ಮತ್ತು ಅಹಮದಾಬಾದ್‌ಗಳಿಗೆ ಸಹಾ ಹಾರಾಟ ಕಲ್ಪಿಸುತ್ತದೆ. ಮಧುರೈ ವಿಮಾನನಿಲ್ದಾಣArchived 2013-02-06 ವೇಬ್ಯಾಕ್ ಮೆಷಿನ್ ನಲ್ಲಿ. ದಲ್ಲಿ ಸೇವೆ ನೀಡುತ್ತಿರುವ ವಿಮಾನಸಂಸ್ಥೆಗಳೆಂದರೆ ಜೆಟ್ ಏರ್‌ವೇಸ್, ಏರ್ ಡೆಕ್ಕನ್, ಪ್ಯಾರಾಮೌಂಟ್ ಏರ್‌ವೇಸ್, ಸ್ಟಾರ್ ಏವಿಯೇಷನ್ (ಆರಂಭಿಸಲಿರುವ) ಮತ್ತು ಇಂಡಿಯನ್ ಏರ್‌ಲೈನ್ಸ್. ಮಧುರೈನಿಂದ ಕೊಲೊಂಬೋ, ಸಿಂಗಪೂರ್ ಮತ್ತು ಕೊಲ್ಲಿ ದೇಶಗಳಿಗೆ ಅಂತರರಾಷ್ಟ್ರೀಯ ಹಾರಾಟಗಳನ್ನು ಭವಿಷ್ಯದಲ್ಲಿ ಆರಂಭಿಸಲು ಪ್ರಸ್ತಾವ ಸಲ್ಲಿಸಲಾಗಿದೆ. ಅತ್ಯಂತ ಸಮೀಪವಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೆಂದರೆ ಮಧುರೈನಿಂದ 130 km ದೂರವಿರುವ ತಿರುಚಿರಾಪಳ್ಳಿ/ತಿರುಚಿನಾಪಳ್ಳಿಯ ಅಂತರರಾಷ್ಟ್ರೀಯ ವಿಮಾನನಿಲ್ದಾಣ. ಮಧುರೈನ ವಿಮಾನನಿಲ್ದಾಣದ ಸಂಕೇತವು IXM ಆಗಿದೆ.
ಮಧುರೈನಿಂದ ಹೊರಡುವ ವಿಮಾನಯಾನ | ಗಮ್ಯಸ್ಥಳ |
---|---|
ಇಂಡಿಯನ್ ಏರ್‌ಲೈನ್ಸ್ | ಚೆನ್ನೈ, ಮುಂಬಯಿ |
ಪ್ಯಾರಾಮೌಂಟ್ ಏರ್‌ವೇಸ್ | ಚೆನ್ನೈ, ಬೆಂಗಳೂರು, ಅಹಮದಾಬಾದ್, ಗೋವಾ, ಕೊಚ್ಚಿ/ನ್,ತಿರುವನಂತಪುರಂ, ಪುಣೆ, ಹೈದರಾಬಾದ್, ಕೊಲ್ಕೋತಾ, ದೆಹಲಿ |
ಜೆಟ್ ಏರ್‌ವೇಸ್ / ಜೆಟ್ ಕನೆಕ್ಟ್ | ಚೆನ್ನೈ |
ಏರ್ ಡೆಕ್ಕನ್ (ಕಿಂಗ್‌ಫಿಷರ್) | ಚೆನ್ನೈ , ಬೆಂಗಳೂರು |
ಸ್ಟಾರ್ ಏವಿಯೇಷನ್ (ಆರಂಭಿಸಲಿರುವ) | ಚೆನ್ನೈ |
ಶಿಕ್ಷಣ
[ಬದಲಾಯಿಸಿ]ಮಧುರೈ ನಗರವು ಸಾಕ್ಷರತೆ ಹಾಗೂ ಮಾನವ ಅಭಿವೃದ್ಧಿ ಸೂಚ್ಯಂಕಗಳಲ್ಲಿ ರಾಜ್ಯದ ಸರಾಸರಿಗಿಂತ ಹೆಚ್ಚಿನ ಸಾಮರ್ಥ್ಯ ತೋರಿದೆ. ಮಧುರೈ ಕಾಮರಾಜ್ ವಿಶ್ವವಿದ್ಯಾಲಯವು ಮಧುರೈನಲ್ಲಿದೆ. ಈ ವಿಶ್ವವಿದ್ಯಾಲಯವು ದೂರಶಿಕ್ಷಣ ವ್ಯವಸ್ಥೆಯ ಪರಿಕಲ್ಪನೆಯನ್ನು ಭಾರತದಾದ್ಯಂತ ಹರಡುವಲ್ಲಿ ಅಗ್ರಪ್ರವರ್ತಕವಾಗಿತ್ತು. ಈ ವಿಶ್ವವಿದ್ಯಾಲಯಕ್ಕೆ "ಉತ್ಕೃಷ್ಟ ಸಾಧನೆಯ ಸಾಮರ್ಥ್ಯವಿರುವ ವಿಶ್ವವಿದ್ಯಾಲಯ"ದ ಸ್ಥಾನಮಾನ ನೀಡಲಾಗಿದೆ [೨೧]. ನಗರವು (1954ರಲ್ಲಿ ಸ್ಥಾಪಿತವಾದ) ಮಧುರೈ ವೈದ್ಯಕೀಯ ಮಹಾವಿದ್ಯಾಲಯ ಎಂಬ ವೈದ್ಯಕೀಯ ಮಹಾವಿದ್ಯಾಲಯ, ಕೃಷಿ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ, ಕಾನೂನು ವಿದ್ಯಾಲಯ ಮತ್ತು ಅನೇಕ ತಾಂತ್ರಿಕ ಮತ್ತು ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯಗಳನ್ನು ಹೊಂದಿದೆ. ಅಲ್ಲಿನ ಅರವಿಂದ್ ನೇತ್ರ ಸಂಶೋಧನಾ ಸಂಸ್ಥೆ Archived 2009-12-28 ವೇಬ್ಯಾಕ್ ಮೆಷಿನ್ ನಲ್ಲಿ. ಯು ತಳಿಶಾಸ್ತ್ರ,ರೋಗರಕ್ಷಾಶಾಸ್ತ್ರ,ನೇತ್ರಶಾಸ್ತ್ರ, ಜೀವವಿಜ್ಞಾನ ಶಾಸ್ತ್ರಗಳು, ಮಾನವ ಸಂಸ್ಕೃತಿ ಮತ್ತು ಸಾಮಾಜಿಕ ವಿಜ್ಞಾನಗಳು ಹಾಗೂ ಜೈವಿಕ ತಂತ್ರಜ್ಞಾನಗಳಂತಹಾ ಕ್ಷೇತ್ರಗಳಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯ, Dr. MGR ವೈದ್ಯಕೀಯ ವಿಶ್ವವಿದ್ಯಾಲಯ ಮತ್ತು ಭಾರತೀಯ ತಂತ್ರಜ್ಞಾನ ಸಂಸ್ಥೆ ಮದ್ರಾಸ್‌ನಂತಹಾ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ Ph.D ಅಧ್ಯಯನಗಳನ್ನು ಆರಂಭಿಸಿದೆ. ಲಂಡನ್ ಮತ್ತು USAಗಳಲ್ಲಿರುವ ಸಂಶೋಧನಾ ಸಹಭಾಗಿಗಳನ್ನು ಈ ಅಧ್ಯಯನವು ಹೊಂದಿದೆ.
ಮಧುರೈನ (1957ರಲ್ಲಿ ಸ್ಥಾಪಿತವಾದ) ತಿಯಾಗರಾಜರ್/ತ್ಯಾಗರಾಜರ್ ತಾಂತ್ರಿಕ ಮಹಾವಿದ್ಯಾಲಯವು ತಮಿಳುನಾಡಿನ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿದೆ. ಮಧುರೈನಲ್ಲಿ ಅನೇಕ ಪ್ರತಿಷ್ಠಿತ ಶಾಲೆಗಳು, ತಾಂತ್ರಿಕ ವಿದ್ಯಾಲಯಗಳು/ಪಾಲಿಟೆಕ್ನಿಕ್‌ಗಳು ಹಾಗೂ ಔದ್ಯಮಿಕ ತರಬೇತಿ ಸಂಸ್ಥೆಗಳೂ (ITIಗಳು) ಇವೆ. 1856ರಲ್ಲಿ[೨೨] ಜಿಲ್ಲಾ ಶಾಲೆಯಾಗಿ ಸ್ಥಾಪಿತವಾಗಿದ್ದ ಮಧುರಾ ಮಹಾವಿದ್ಯಾಲಯವು 120 ವರ್ಷಗಳಷ್ಟು ಹಳೆಯದು. ಮಧುರೈನ ದ ಅಮೇರಿಕನ್ ಕಾಲೇಜ್ ಭಾರತದ ಹಳೆಯ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ. 1881ರಲ್ಲಿ ಇದನ್ನು ಅಮೇರಿಕದ ಕ್ರೈಸ್ತ ಮಿಷನರಿಗಳು ಸ್ಥಾಪಿಸಿದರು. ತಿಯಾಗರಾಜರ್/ತ್ಯಾಗರಾಜರ್ ಕಲೆ ಮತ್ತು ವಿಜ್ಞಾನ ಮಹಾವಿದ್ಯಾಲಯವೂ ಸಹಾ (1949ರಲ್ಲಿ ಸ್ಥಾಪಿತವಾದ) ಮತ್ತೊಂದು ಹಳೆಯ ಸಂಸ್ಥೆಯಾಗಿದೆ. ತಿಯಾಗರಾಜರ್/ತ್ಯಾಗರಾಜರ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್ (1962ರಲ್ಲಿ ಸ್ಥಾಪಿತವಾದ ಹಾಗೂ TSM ಎಂದು ದಕ್ಷಿಣಭಾರತದಲ್ಲಿ ಖ್ಯಾತವಾದ) ಎಂಬುದು ನಿರ್ವಹಣಾ ಅಧ್ಯಯನಕ್ಕೆ ಸಂಬಂಧಿಸಿದ ಅತ್ಯುತ್ತಮ ಸಂಸ್ಥೆಯಾಗಿದೆ. ಇತರ ಗಮನಾರ್ಹ ಮಹಾವಿದ್ಯಾಲಯಗಳೆಂದರೆ K.L.N. ತಾಂತ್ರಿಕ ಮಹಾವಿದ್ಯಾಲಯ, ರಾಜಾ ತಾಂತ್ರಿಕ ಮಹಾವಿದ್ಯಾಲಯ, ಸೇತು ತಾಂತ್ರಿಕ ಮಹಾವಿದ್ಯಾಲಯ, ವಿಕ್ರಮ್ ತಾಂತ್ರಿಕ ಮಹಾವಿದ್ಯಾಲಯ, SACS M.A.V.M.M ತಾಂತ್ರಿಕ ಮಹಾವಿದ್ಯಾಲಯ, ವೇಲಮ್ಮಾಳ್ ತಾಂತ್ರಿಕ ಮಹಾವಿದ್ಯಾಲಯ ಮತ್ತು P.T.R ತಾಂತ್ರಿಕ ಮಹಾವಿದ್ಯಾಲಯಗಳು. ಮಧುರೈನಲ್ಲಿನ 1965ರಿಂದ ಇರುವ K.K.ನಗರದ M.S.S.ವಕ್ಫ್ ಮಂಡಳಿ ಮಹಾವಿದ್ಯಾಲಯ, ಮತ್ತು ನಾಗಮಲೈನ S.V.N ಮಹಾವಿದ್ಯಾಲಯಗಳು ಖ್ಯಾತ ಸಂಸ್ಥೆಗಳಾಗಿವೆ. ನಗರದಲ್ಲಿ ಗಮನಾರ್ಹ ಸಂಖ್ಯೆಯ ಹೋಟೆಲ್ ನಿರ್ವಹಣೆ ಹಾಗೂ ಆಹಾರ ಪೂರೈಕೆಯ[೨೩] ಸಂಸ್ಥೆಗಳಿವೆ. ಮಧುರಾ ಮಹಾವಿದ್ಯಾಲಯ (ಸ್ವಾಯತ್ತ)ವು ಮಧುರೈನ ಪ್ರಾಚೀನ ಮಹಾವಿದ್ಯಾಲಯಗಳಲ್ಲಿ ಒಂದಾಗಿದೆ.
ತಿಯಾಗರಾಜರ್/ತ್ಯಾಗರಾಜರ್ ತಾಂತ್ರಿಕ ಮಹಾವಿದ್ಯಾಲಯ, ವಿಕ್ರಮ್ ತಾಂತ್ರಿಕ ಮಹಾವಿದ್ಯಾಲಯ ಮತ್ತು KLN ತಾಂತ್ರಿಕ ಮಹಾವಿದ್ಯಾಲಯಗಳು ಸಂಶೋಧನಾ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸುವಲ್ಲಿ ಮುಂಚೂಣಿಯಲ್ಲಿವೆಯಲ್ಲದೇ ಅಂತರರಾಷ್ಟ್ರೀಯ ತಾಂತ್ರಿಕ ಸಂಸ್ಥೆಗಳಾದ ನ್ಯಾಷನಲ್ ಇನ್‌ಸ್ಟ್ರುಮೆಂಟ್ಸ್[೨೪], Intel[೨೫], Oracle[೨೬] IBM[೨೭] ಮತ್ತು HCL[೨೮] ನಂತಹಾ ರಾಷ್ಟ್ರದ ಮುಂಚೂಣಿ ಔದ್ಯಮಿಕ ಸಂಸ್ಥೆಗಳೊಂದಿಗೆ ಸಂಘಟಿತವಾಗಿವೆ. ಇತ್ತೀಚಿನ ವರ್ಷಗಳಲ್ಲಿ, ವಿಶ್ವವಿದ್ಯಾಲಯಗಳಿಂದ ಏರ್ಪಾಡು ಮಾಡಲಾದ ಸಾಂಸ್ಥಿಕ ಸಂದರ್ಶನಗಳಲ್ಲಿ ಅಗ್ರಗಣ್ಯ ಉದ್ಯಮ ಸಂಸ್ಥೆಗಳು ಭಾಗವಹಿಸಿ ಯಶಸ್ವಿ ನೇಮಕಾತಿಗಳನ್ನು ನಡೆಸಲಾಗುತ್ತಿದೆ. ಔದ್ಯಮಿಕ ಅಂದಾಜುಗಳ ಪ್ರಕಾರ ಮೆಟ್ರೋ ನಗರಗಳಲ್ಲಿನ IT ಉದ್ಯಮದಲ್ಲಿರುವ ಸುಮಾರು 15ರಿಂದ 20 ಪ್ರತಿಶತ ಮಾನವ ಸಂಪನ್ಮೂಲವು ಮಧುರೈ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಶಿಕ್ಷಣ ಪಡೆದವರು [೨೯]. ಮಾ ಫೋಯ್ ಮತ್ತು VETAಗಳು ಇತರೆ ಪ್ರತಿಷ್ಠಿತ ಸಂಸ್ಥೆಗಳು.
ಮತ್ತೊಂದು ಹೊಸ ಆದರೆ ಮುಂದೆಬರುತ್ತಿರುವ/ಅಭ್ಯುದಯ ಹೊಂದುತ್ತಿರುವ ನಾವೀನ್ಯತೆಯುಳ್ಳ ಶಿಕ್ಷಣ ಕೇಂದ್ರವು ಪುಲ್ಲೋತು/ಥುನಲ್ಲಿದೆ. ಅದೆಂದರೆ ಎರಡು ವರ್ಷ ಕಾಲದ ಅದ್ವಿತೀಯ ಅಭಿವೃದ್ಧಿ ನಿರ್ವಹಣೆಯ ಅಧ್ಯಯನವನ್ನು ಆರಂಭಿಸಿರುವ ಟಾಟಾ-ಧನ್ ಅಕಾಡೆಮಿ[೩೦]. ಈ ಸಂಸ್ಥೆಯು ಈ ಕ್ಷೇತ್ರದ ಪ್ರವರ್ತಕ ಸಂಸ್ಥೆಯೆಂಬ ಹೆಗ್ಗಳಿಕೆ ಹೊಂದಿದ್ದು ಧನ್ ಪ್ರತಿಷ್ಠಾನ ಮತ್ತು ಸರ್ ರತನ್ ಟಾಟಾ ಟ್ರಸ್ಟ್‌ಗಳಿಂದ ಆರ್ಥಿಕ ಬೆಂಬಲ ಪಡೆದಿದೆ.[ಸೂಕ್ತ ಉಲ್ಲೇಖನ ಬೇಕು]
ಆರೋಗ್ಯರಕ್ಷಣೆ
[ಬದಲಾಯಿಸಿ]ಸರ್ಕಾರದ ರಾಜಾಜಿ ಆಸ್ಪತ್ರೆಯೊಂದಿಗೆ ಅನೇಕ ಖಾಸಗಿ ಆಸ್ಪತ್ರೆಗಳಾದ ಅರವಿಂದ ಕಣ್ಣಿನ ಆಸ್ಪತ್ರೆ, ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆ, ಮೀನಾಕ್ಷಿ ಮಿಷನ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ, ವಡಮಾಲಯನ್ ಆಸ್ಪತ್ರೆ ಮತ್ತು ಕ್ವಾಲಿಟಿ ಕೇರ್ ಆಸ್ಪತ್ರೆಗಳು ನಗರವನ್ನು ನಿರ್ವಹಿಸಬಹುದಾದಂತಹಾ ವೆಚ್ಚದಲ್ಲಿ ಹೆರಿಟೇಜ್ ಪ್ರವಾಸೋದ್ಯಮದೊಂದಿಗೆ ಆರೋಗ್ಯ ರಕ್ಷಣೆಯನ್ನು ನೀಡುವ ತಾಣವನ್ನಾಗಿಸಿವೆ [೩೧].
ಮಧುರೈ ನಗರವು 1976ರಲ್ಲಿ Dr.ಗೋವಿಂದಪ್ಪ ವೆಂಕಟಸ್ವಾಮಿಯವರಿಂದ ಸ್ಥಾಪಿತವಾದ ಅರವಿಂದ್ ಐಕೇರ್ ಸಿಸ್ಟಂ ಸಂಸ್ಥೆಯ ನೆಲೆಯಾಗಿದೆ. ಇಂದು ಇದು ವಿಶ್ವದಲ್ಲೇ ಅತ್ಯಂತ ಸುಸಜ್ಜಿತವಾದ ನೇತ್ರ ಚಿಕಿತ್ಸಾಲಯಗಳಲ್ಲಿ ಒಂದು [೩೨]. ಇಂದು ಮಧುರೈನಲ್ಲಿರುವ ಆಸ್ಪತ್ರೆಯಲ್ಲದೇ, ಥೇಣಿ, ತಿರುನಲ್ವೇಲಿ, ಕೊಯಮತ್ತೂರು, ಮತ್ತು ಪುದುಚೇರಿಗಳಲ್ಲಿ ಇರುವ ನಾಲ್ಕು ಅರವಿಂದ್ ನೇತ್ರ ಚಿಕಿತ್ಸಾಲಯಗಳಿಂದ ಒಟ್ಟು 3,590 ರೋಗಿಗಳಿಗೆ ಸೇವೆ ನೀಡಬಹುದಾಗಿದೆ. ಅರವಿಂದ್ ನೇತ್ರ ಚಿಕಿತ್ಸಾಲಯಗಳು ತಮ್ಮ ಸೇವಾ ಮನೋಭಾವನೆ,ಆಧುನಿಕ ನೇತ್ರ ತಂತ್ರಜ್ಞಾನಗಳ ಬಳಕೆ ಮತ್ತು ಹಳ್ಳಿಯ ಜನಗಳಿಗೆ ನೀಡುತ್ತಿರುವ ಉತ್ತಮ ಗುಣಮಟ್ಟದ ನೇತ್ರ ಚಿಕಿತ್ಸೆಗಳಿಗೆ, ಸಮುದಾಯ ಆಧಾರಿತ ವ್ಯಾಪಕ ಚಟುವಟಿಕೆಗಳಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಾಮುಖ್ಯತೆ ಗಳಿಸಿವೆ[೩೩]. ಅರವಿಂದ್ ನೇತ್ರ ಚಿಕಿತ್ಸಾಲಯಗಳಲ್ಲಿ 2006ನೇ ಇಸವಿಯ ಅವಧಿಯಲ್ಲಿ ಒಟ್ಟು 2,313,398 ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಯಿತಲ್ಲದೇ ಮತ್ತು 270,444 ಶಸ್ತ್ರಚಿಕಿತ್ಸೆಗಳನ್ನು ಮಾಡಲಾಗಿತ್ತು. ಹೊರರೋಗಿಗಳಲ್ಲಿ ಮೂರನೇ ಎರಡರಷ್ಟು ಮಂದಿ ಹಾಗೂ ಶಸ್ತ್ರಚಿಕಿತ್ಸೆಗಳಲ್ಲಿ ನಾಲ್ಕರಲ್ಲಿ ಮೂರರಷ್ಟು ಮಂದಿ ಬಡವರಾಗಿದ್ದರು ಅವರಿಗೆ ಉಚಿತ ಚಿಕಿತ್ಸೆ ನೀಡಲಾಗಿತ್ತು.
ಮಧುರೈನ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಗಳನ್ನು 1997ರಲ್ಲಿ ಸ್ಥಾಪಿಸಲಾಯಿತು. ಆಸ್ಪತ್ರೆಯು ವಾರ್ಷಿಕವಾಗಿ 15,000 ರೋಗಿಗಳಿಗೆ ಚಿಕಿತ್ಸೆ ನೀಡಿ ಒಟ್ಟಾರೆ 98%ದಷ್ಟು ಯಶಸ್ವಿ ಚಿಕಿತ್ಸೆಯ ದರವನ್ನು ಕಾಪಾಡಿಕೊಂಡಿದೆ. 24-ಗಂಟೆ ಸೇವಾ ತತ್ಪರರಾಗಿರುವ ವಿಶೇಷ ತಜ್ಞರ ತಂಡವು ಆಸ್ಪತ್ರೆಯಲ್ಲಿರುತ್ತದೆ. ಆಸ್ಪತ್ರೆಯು ದಕ್ಷಿಣಭಾರತದಲ್ಲೇ ಪ್ರಥಮ ಬಾರಿಗೆ ಮೂತ್ರಪಿಂಡಶಾಸ್ತ್ರದ ತುರ್ತು ನಿಗಾ ಘಟಕ ಮತ್ತು ಪ್ರಥಮ ಅಪಧಮನಿ ಹಾಗೂ ಮೂತ್ರಪಿಂಡಗಳಿಗೆ ಸಂಬಂಧಿಸಿದ ಆಂಜಿಯೋಪ್ಲಾಸ್ಟಿ ಚಿಕಿತ್ಸಾ ಘಟಕವನ್ನು ಹೊಂದಿತ್ತು. ಉದರದರ್ಶಕದ ಮೂಲಕ ಮೂತ್ರಪಿಂಡಜೋಡಣೆ ಮಾಡುವ ವಿಶ್ವದಲ್ಲೇ 5ನೇ ಹಾಗೂ ಭಾರತದಲ್ಲಿ No. 1 ಕೇಂದ್ರವಾಗಿದೆ(ದಾತರ ಮೂತ್ರಪಿಂಡಚ್ಛೇದನ)[೩೪]. ಅಪೋಲೋ ಸಮೂಹದ ಆಸ್ಪತ್ರೆಗಳು ಅನೇಕ ಭಾರತೀಯ ನಗರಗಳಲ್ಲಿ ಹರಡಿವೆಯಲ್ಲದೇ ಇಂದಿಗೆ ಅಪೋಲೋ ಆಸ್ಪತ್ರೆಗಳು ಜಾಗತಿಕ ಆರೋಗ್ಯ ರಕ್ಷಣೆಯಲ್ಲಿ ಭಾರತವು ಅತ್ಯುತ್ತಮ ವೈದ್ಯಕೀಯ ಸೇವೆಗಳು ಲಭ್ಯವಿರುವ ರಾಷ್ಟ್ರವೆಂಬ ಸ್ಥಾನ ಸಿಗಲು ಅಗ್ರ ಪ್ರವರ್ತಕ ಜವಾಬ್ದಾರಿಯನ್ನು ಹೊತ್ತಿವೆ.
ಆರ್ಥಿಕತೆ
[ಬದಲಾಯಿಸಿ]ಮಧುರೈ ಜಿಲ್ಲೆಯು ಖಾಸಗಿ ಕ್ಷೇತ್ರದಲ್ಲಿ ಟೈರ್‌ಗಳು, ಔದ್ಯಮಿಕ ರಬ್ಬರ್ ಉತ್ಪನ್ನಗಳು, ಯಂತ್ರಗಳು, ವಸ್ತ್ರೋದ್ಯಮ, ಕನ್ವೇಯರ್ ಬೆಲ್ಟ್‌ಗಳು, ರಾಸಾಯನಿಕ etc.ಗಳಂತಹಾ ಸಾಮಗ್ರಿಗಳ ಉತ್ಪಾದನೆಯಲ್ಲಿ ತೊಡಗಿಕೊಂಡಿರುವ ಪ್ರತಿಷ್ಠಿತ ಸಂಸ್ಥೆಗಳ ನೆಲೆಯಾಗಿದೆ. ಮಧುರೈ TVS ಸಮೂಹದ ನೆಲೆಯಾಗಿದೆ[೩೫].
ಸ್ವಯಂಚಾಲಿತ ವಾಹನ/ವಾಹನೋದ್ಯಮ
[ಬದಲಾಯಿಸಿ]ತಯಾರಿಕೆ ಮತ್ತು ವಾಹನೋದ್ಯಮ ಕ್ಷೇತ್ರದಲ್ಲಿ, ಟ್ರಾಕ್ಟರ್ಸ್ ಅಂಡ್ ಫಾರ್ಮ್ ಈಕ್ವಿಪ್‌ಮೆಂಟ್ ಲಿಮಿಟೆಡ್ (TAFE) (ವಿಶ್ವದ ಐದು ಪ್ರಖ್ಯಾತ ಟ್ರಾಕ್ಟರ್ ತಯಾರಕರಲ್ಲಿ ಒಬ್ಬರು), ಫೆನ್ನರ್ (ಭಾರತ) Ltd Archived 2010-01-03 ವೇಬ್ಯಾಕ್ ಮೆಷಿನ್ ನಲ್ಲಿ. (ಔದ್ಯಮಿಕ ಮತ್ತು ವಾಹನ ತಯಾರಿಕೆಯ V-ಬೆಲ್ಟ್‌ಗಳು, ಆಯಿಲ್‌ಸೀಲ್‌ಗಳು ಮತ್ತು ಶಕ್ತಿ ಸಂವಹನ ಪರಿಕರಗಳು), ಹೈ-ಟೆಕ್ ಅರೈ Ltd (ಆಯಿಲ್‌ಸೀಲ್‌ಗಳು ಮತ್ತು ವಾಹನ ಸಾಮಗ್ರಿಗಳು )[೩೬], ಜಾರ್ಜ್ ಓಕ್ಸ್ ltd, ZF ಎಲೆಕ್ಟ್ರಾನಿಕ್ಸ್ TVS (ಭಾರತ) ಪ್ರೈವೇಟ್ ಲಿಮಿಟೆಡ್(ಸ್ವಿಚ್‌ಗಳ ತಯಾರಿಕೆ , TVS ಸಮೂಹ, ಭಾರತ ಹಾಗೂ Zf ಎಲೆಕ್ಟ್ರಾನಿಕ್ಸ್ ಕಾರ್ಪೋರೇಷನ್, USAಗಳ ಸಹಭಾಗಿತ್ವ), ಸುಂದರಂ ಫಾಸನರ್ಸ್ Ltd (ಹೆಚ್ಚಿನ ಕರ್ಷಕ ಸಾಮರ್ಥ್ಯದ ಬಂಧಕ/ನಿಗಳ ತಯಾರಕರು ), ಫೈರ್‌ಸ್ಟೋನ್ TVS ಪ್ರೈವೇಟ್ Ltd Archived 2011-03-15 ವೇಬ್ಯಾಕ್ ಮೆಷಿನ್ ನಲ್ಲಿ.(ಏರ್ ಸ್ಪ್ರಿಂಗ್‌ಳ ತಯಾರಕರು), MADRAS SUSPENSIONS LIMITED, TVS ಸ್ಯೂಯಿಂಗ್ ನೀಡಲ್ಸ್ ಲಿಮಿಟೆಡ್, TV ಸುಂದರಂ ಅಯ್ಯಂಗಾರ್ & ಸನ್ಸ್ ಲಿಮಿಟೆಡ್ (ಹೆಚ್ಚಿನ ಕ್ಷಮತೆಯ ವಾಣಿಜ್ಯ ವಾಹನಗಳು, ಜೀಪ್‌ಗಳು,ಕಾರುಗಳ ವಿತರಕರು) ಮತ್ತು ಸುಸೀ ಸಮೂಹ (ತಮಿಳುನಾಡಿನಾದ್ಯಂತ ವಾಹನಗಳ ಮಾರಾಟ, ಸೇವೆ, ಪರಿಕರಗಳು, ಹಣಕಾಸು ವ್ಯವಸ್ಥೆ ನೀಡುವ ಸಂಸ್ಥೆ)ಗಳು ಗಮನಾರ್ಹ ಕಂಪೆನಿಗಳು. General Motors, Ford, Toyota ಮತ್ತು Hondaಗಳೂ ಸೇರಿದಂತೆ ವಾಹನ ತಯಾರಿಕಾ ಕ್ಷೇತ್ರದ ಎಲ್ಲಾ ಬೃಹತ್ ಕಂಪೆನಿಗಳೂ ನಗರದಲ್ಲಿ ಉತ್ಪಾದಿಸಿದ ವಾಹನ ಸಾಮಗ್ರಿಗಳ ನಿಯತ ಗ್ರಾಹಕರಾಗಿವೆ[೩೭]. 2,000 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ರಾಜ್ಯ ಸರ್ಕಾರವು ತಯಾರಿಕಾ ಉದ್ಯಮಕ್ಕೆ ಅದರಲ್ಲೂ ವಿಶೇಷವಾಗಿ ವಾಹನ ತಯಾರಿಕಾ ಪರಿಕರಗಳ ಉದ್ಯಮಕ್ಕೆ ಆದ್ಯತೆ ನೀಡಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಉದ್ದೇಶಿಸಿದೆ[೩೮].
ರಬ್ಬರು
[ಬದಲಾಯಿಸಿ]TVS ಶ್ರೀಚಕ್ರ (ಟೈರ್‌ಗಳ ತಯಾರಿಕೆ), ಸುಂದರಂ ಇಂಡಸ್ಟ್ರೀಸ್ ಲಿಮಿಟೆಡ್ (ರಬ್ಬರ್ ವಿಭಾಗ, ಕೋಚ್ ವಿಭಾಗ) ಮತ್ತು LANXESS ಇಂಡಿಯಾ ಪ್ರೈವೇಟ್ ಲಿಮಿಟೆಡ್‌ಗಳು ಇಲ್ಲಿನ ಕೆಲ ರಬ್ಬರ್ ಆಧಾರಿತ ಉದ್ಯಮಗಳು. ಭಾರತ್ ರಬ್ಬರ್ ಇಂಡಿಯಾ ಲಿಮಿಟೆಡ್ (BRIL) ಕಂಪೆನಿಯು ವಿ-ಬೆಲ್ಟ್‌ಗಳು, ಫ್ಯಾನ್ ಬೆಲ್ಟ್‌ಗಳ ಪ್ರಧಾನ ತಯಾರಕರಾಗಿದ್ದು VEEHOLD ಎಂಬ ಬ್ರಾಂಡ್‌ನಡಿಯಲ್ಲಿ ಭಾರತದಾದ್ಯಂತ ಮಾರಾಟ ಮಾಡುತ್ತದೆ. ರಬ್ಬರ್ ಉತ್ಪಾದನಾ ಕೇಂದ್ರಗಳಿಗೆ ಹತ್ತಿರವಿರುವ ಕಾರಣದಿಂದಾಗಿ, ರಬ್ಬರ್ ಇಲ್ಲಿನ ಸಾಂಪ್ರದಾಯಿಕ ಉದ್ಯಮವಾಗಿತ್ತು. ಕೈಚೀಲಗಳು, ಕ್ರೀಡಾ ಸಾಮಗ್ರಿಗಳು, ಮಂದಲಿಗೆ/ಚಾಪೆಗಳು ಮತ್ತಿತರ ಉಪಯುಕ್ತ ಸಾಮಗ್ರಿಗಳೊಂದಿಗೆ, ಮಧುರೈ ರಬ್ಬರ್‌ನಿಂದ ಮಾಡಿದ ವಾಹನ ಪರಿಕರಗಳ ಉತ್ಪಾದನೆಯಲ್ಲಿ ದೊಡ್ಡ ಹೆಸರು ಮಾಡಿದೆ. ವಾರ್ಷಿಕವಾಗಿ ಸುಮಾರು Rs.1,000 ಕೋಟಿಗಳಷ್ಟು ಮೊತ್ತದ ರಬ್ಬರ್ ಸರಕುಗಳನ್ನು ಇಲ್ಲಿ ಉತ್ಪಾದಿಸಲಾಗುತ್ತದೆ[೩೭]. ರಬ್ಬರ್ ಉದ್ಯಮ, ಉದ್ಯಮಿಗಳ ಅಭಿಪ್ರಾಯಗಳು ಮಧುರೈನ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಬಲ್ಲವು. ವಾಹನ ತಯಾರಿಕಾ ಕ್ಷೇತ್ರದಲ್ಲಿನ ಉಚ್ಛ್ರಾಯ ಸ್ಥಿತಿಯಿಂದಾಗಬಹುದಾದ ಈ ಉದ್ಯಮದಲ್ಲಿನ ಉದ್ದೇಶಿತ ಬೆಳವಣಿಗೆಯು ಸ್ಥಳೀಯ ಆರ್ಥಿಕತೆಯ ಇನ್ನಿತರ ಭಾಗಗಳಲ್ಲಿ ಸರಣಿಕ್ರಮದ ಪ್ರಭಾವ ಬೀರುವಷ್ಟಿರುತ್ತದೆ. ಈ ಉದ್ಯಮವು ಮಾಲಿನ್ಯಕಾರಕಗಳ ಉತ್ಪಾದನೆಯ ಸಾಧ್ಯತೆ ಹೆಚ್ಚಾಗಿರುವ ಉದ್ಯಮವಾದರೂ ಸಹಾ ಉತ್ಪಾದಕರು/ತಯಾರಕರು “ವಿಶೇಷ ಎಚ್ಚರ”ಗಳನ್ನು ವಹಿಸಿ ಪರಿಸರಸ್ನೇಹಿ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶೀಘ್ರದಲ್ಲೇ ನಗರದಲ್ಲಿ ರಬ್ಬರ್ ಉದ್ಯಮದ ಗುಚ್ಛಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ. ಮಧುರೈ ಜಿಲ್ಲೆಯ ಟೈನಿ ಅಂಡ್ ಸ್ಮಾಲ್ ಸ್ಕೇಲ್ ಇಂಡಸ್ಟ್ರೀಸ್ ಅಸೋಸಿಯೇಷನ್ (MADITSSIA) ಮತ್ತು ರಬ್ಬರ್ ಪಾರ್ಕ್ (ಮಧುರೈ) ಲಿಮಿಟೆಡ್‌ಗಳು [೩೯] ತಮ್ಮ ನಡುವಿನ ಒಪ್ಪಂದದ ಜ್ಞಾಪಕಪತ್ರ(MoU)ಕ್ಕೆ ಸಹಿ ಹಾಕಿದವು. ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಕೆಲ ಕೈಗಾರಿಕಾ ಯೋಜನೆಗಳೆಂದರೆ BHEL ಪೂರಕ ಘಟಕಗಳು [೪೦] ಮತ್ತು ಕ/ಕ್ಯಾಪರೋ ಎಂಜಿನಿಯರಿಂಗ್ ಇಂಡಿಯಾ Pvt Ltd [೪೧] ಉದ್ಯಮಗಳು.
IT ಮತ್ತು ITES
[ಬದಲಾಯಿಸಿ]ಇತ್ತೀಚಿನ ವರ್ಷಗಳಲ್ಲಿ IT ಉದ್ಯಮವು ಮಧುರೈನ ಆರ್ಥಿಕತೆಯಲ್ಲಿ ಪ್ರಭಾವ ಬೀರಲು ಆರಂಭಿಸಿದೆ. ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ, ಭಾರತ ಸರಕಾರದ ಒಂದು ನಿಯೋಗಿ ಸಂಸ್ಥೆಯಾಗಿದ್ದು ತನ್ನ ರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಯೋಜನೆಯಡಿ ಅನುಕೂಲತೆಗಳನ್ನು ಪಡೆಯಲು ಮಧುರೈನಲ್ಲಿನ ಅನೇಕ ಕಂಪೆನಿಗಳನ್ನು ಪ್ರಮಾಣೀಕರಿಸಿದೆ/ಗಳಿಗೆ ಮಂಜೂರಾತಿ ನೀಡಿದೆ. ಹನಿವೆಲ್ ಟೆಕ್ನಾಲಜೀಸ್ ಇಂಡಿಯಾದಂತಹ MNCಗಳಿಗೆ ನಗರವು ನೆಲೆಯಾಗಿದೆ.
ಉದ್ಯೋಗ/ಕೆಲಸದ ಸಂಸ್ಕೃತಿ, ಕನಿಷ್ಟ ಘರ್ಷಣೆಯ ದರ ಮತ್ತು ಶೈಕ್ಷಣಿಕ ಸಂಸ್ಥೆಗಳ ಲಭ್ಯತೆಗಳ ಕಾರಣದಿಂದಾಗಿ, HCL, Satyam, Oracle ಮತ್ತು ಸುದರ್‌ಲೆಂಡ್ ಗ್ಲೋಬಲ್ ಸರ್ವೀಸಸ್[೪೨][೪೩] ಗಳಂತಹಾ ಪ್ರಮುಖ IT ಕಂಪೆನಿಗಳನ್ನು ನಗರವು ಆಕರ್ಷಿಸುತ್ತಿದೆ. ತಮಿಳುನಾಡು ಸರಕಾರವು ಎರಡು IT- ವಿಶೇಷ ಆರ್ಥಿಕ ವಲಯ (SEZ)ಗಳನ್ನು ಮಧುರೈನಲ್ಲಿ ಸ್ಥಾಪಿಸಲು ಪ್ರಸ್ತಾವ ನೀಡಿದೆ ಮತ್ತು ಅವುಗಳನ್ನು ಈಗಾಗಲೇ ಪೂರ್ಣ ರೀತಿಯಲ್ಲಿ ಅನೇಕ IT ಕಂಪೆನಿಗಳು ತಮ್ಮ ಸುಪರ್ದಿಗೆ ತೆಗೆದುಕೊಂಡಿವೆ [೪೪].ಮಾಹಿತಿ ತಂತ್ರಜ್ಞಾನ/ಇನ್‌ಫರ್ಮೇಷನ್ ಟೆಕ್ನಾಲಜಿ ಪಾರ್ಕ್[೪೫] ಗಳಲ್ಲಿ ಆಧಾರರಚನೆ ವ್ಯವಸ್ಥೆಗಳನ್ನು ನೀಡುವ ಪ್ರಕ್ರಿಯೆಯು ಪ್ರಗತಿಯಲ್ಲಿದೆ. ಮಧುರೈನಲ್ಲಿ ಹಾಗೂ ಸುತ್ತಮುತ್ತ ಉತ್ತಮ ಗುಣಮಟ್ಟದ ಮಾನವ ಸಂಪನ್ಮೂಲದ ಹೆಚ್ಚಿದ ಅಭಿವೃದ್ಧಿಯಿಂದಾಗಿ ಭಾರತದ No.2 IT ಪ್ರಧಾನ ಸಂಸ್ಥೆಯಾದ ಇನ್‌ಫೋಸಿಸ್ ತನ್ನ ವಿಸ್ತರಣೆ ಹಾಗೂ ತನ್ನ ತಂತ್ರಾಂಶ ಅಭಿವೃದ್ಧಿ/ಡೆವಲಪ್‌ಮೆಂಟ್ ಕೇಂದ್ರವನ್ನು ತೆರೆಯಲು ಮಧುರೈನೆಡೆ ದೃಷ್ಟಿ ನೆಟ್ಟಿದೆ ಎಂದು ಹೇಳಲಾಗುತ್ತಿದೆ.[೪೬] . ಮಧುರೈನಲ್ಲಿ ಕಾರ್ಯಾಚರಿಸುತ್ತಿರುವ ಹಾಗೂ ಇಲ್ಲಿನ ಆದಾಯಕ್ಕೆ ಕೊಡುಗೆ ನೀಡುತ್ತಿರುವ ತಂತ್ರಾಂಶ/ಸಾಫ್ಟ್‌ವೇರ್ ಕಂಪೆನಿಗಳ ಪಟ್ಟಿಯನ್ನು ಇಲ್ಲಿ ನೋಡಬಹುದು ಮಧುರೈನ ತಂತ್ರಾಂಶ/ಸಾಫ್ಟ್‌ವೇರ್ ಕಂಪೆನಿಗಳು.
ಜವಳಿ/ವಸ್ತ್ರೋದ್ಯಮ
[ಬದಲಾಯಿಸಿ]ಪಸ್ತುತವಿರುವ ಕೆಲ ವಸ್ತ್ರೋದ್ಯಮ/ರಾಸಾಯನಿಕ ಕೈಗಾರಿಕೆಗಳೆಂದರೆ ತಿಯಾಗರಾಜರ್/ತ್ಯಾಗರಾಜರ್ ಮಿಲ್ಸ್ (P) ಲಿಮಿಟೆಡ್ (100% ಭಾರತೀಯ ಹತ್ತಿ ನೂಲಿನ ಅತಿ ದೊಡ್ಡ ತಯಾರಕರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು), ಕಾಸಿಂ ಟೆಕ್ಸ್‌ಟೈಲ್ಸ್ ಮಿಲ್ಸ್, ಸುಂದರಂ ಟೆಕ್ಸ್‌ಟೈಲ್ಸ್ ಲಿಮಿಟೆಡ್, ಮಧುರಾ ಕೋಟ್ಸ್ Pvt. Ltd, ಪ್ಯಾರಾಮೌಂಟ್ ಮಿಲ್ಸ್ (P) Ltd,ವೀವ್ಸ್ ಇಂಡಿಯಾ (P) Ltd, ಫಸ್ಟ್ ಗಾರ್ಮೆಂಟ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ (ಭಾರತ) Pvt Ltd, ವೈಗೈ ಸಮೂಹ (ರಾಸಾಯನಿಕಗಳು, ಖಾದ್ಯ ತೈಲಗಳು, ವಸ್ತ್ರೋದ್ಯಮ, ನಿರ್ಮಾಣ), ಅಲಯ ಧೋತೀಸ್, ಸಾರಥಿ ಧೋತೀಸ್ ಮತ್ತು SLM ಇಂಟರ್‌ನ್ಯಾಷನಲ್.
ಗ್ರಾನೈಟ್ ಉದ್ಯಮ
[ಬದಲಾಯಿಸಿ]ಈ ನಗರದಲ್ಲಿ ಕೆಲ ಗ್ರಾನೈಟ್ ಕೈಗಾರಿಕೆ ಕಂಪೆನಿಗಳಾದ PRP ಎಕ್ಸ್‌ಪೋರ್ಟ್ಸ್ (ಭಾರತದ ಅತಿದೊಡ್ಡ ಗ್ರಾನೈಟ್ ಸಂಸ್ಕರಣಕಾರರು ಹಾಗೂ ರಫ್ತುದಾರರುಗಳಲ್ಲಿ ಒಬ್ಬರು) ಮಧುರೈ ಆರ್ಕೆ ರಾಕ್, P.R.ಗ್ರಾನೈಟ್ಸ್, ಡ್ಯುನೈಟ್‌ರಾಕ್ಸ್ ಪ್ರೈವೇಟ್ ಲಿಮಿಟೆಡ್ (ಗ್ರಾನೈಟ್ ಗ್ಯಾಂಗ್‌ಸಾ ಚಪ್ಪಡಿಗಳು) ಮತ್ತು ಆರ್ಕೆ ಗ್ಲೆನ್‌ರಾಕ್‌ಗಳು ಕಾರ್ಯಾಚರಿಸುತ್ತಿವೆ. ಮೆಲೂರ್‌ನಲ್ಲಿ ಗ್ರಾನೈಟ್ ಕೈಗಾರಿಕೆಯನ್ನು ಹಾಗೂ ಮಧುರೈನಲ್ಲಿ ಹೊಳಪು/ಮೆರುಗುಕೊಡುವ/ಪಾಲಿಷಿಂಗ್ ಕಾರ್ಖಾನೆಗಳನ್ನು ಸ್ಥಾಪಿಸಲು ಪ್ರಸ್ತಾವಗಳನ್ನು ಸಲ್ಲಿಸಲಾಗಿದೆ.
ಎಲೆಕ್ಟ್ರಾನಿಕ್ಸ್ ಉದ್ಯಮ
[ಬದಲಾಯಿಸಿ]TVS ಇಂಟರ್‌ಕನೆಕ್ಟ್ ಸಿಸ್ಟಂಸ್ Ltd ಕಂಪೆನಿಯು ಕಡಿಮೆ ಸಾಮರ್ಥ್ಯದ/ಗಾತ್ರದ ಉಪಕರಣಗಳಾದ ಎಲೆಕ್ಟ್ರಾನಿಕ್ ಕನೆಕ್ಟರ್‌ಗಳು, RF (ರೇಡಿಯೋ ತರಂಗಾಂತರ) ಕನೆಕ್ಟರ್‌ಗಳು, ಕೇಬಲ್ ಅಸೆಂಬ್ಲಿಗಳು, ಫೈಬರ್ ಆಪ್ಟಿಕ್ ಉತ್ಪನ್ನಗಳು & ಮತ್ತಿತರ ದೂರಸಂಪರ್ಕ ಪರಿಕರಗಳು, ಗ್ರಾಹಕ ಎಲೆಕ್ಟ್ರಾನಿಕ್ಸ್ ಮತ್ತು ವಾಹನ ತಯಾರಿಕಾ ಕೈಗಾರಿಕೆಗಳಿಗೆ ಬೇಕಾದ ಬಿಡಿಭಾಗಗಳನ್ನು ತಯಾರಿಸುವ ಕಂಪೆನಿಯಾಗಿದೆ.
ಚಿಲ್ಲರೆ/ಬಿಡಿ ಮಾರಾಟ
[ಬದಲಾಯಿಸಿ]ಚಿಲ್ಲರೆ ಮಾರಾಟ ಉದ್ಯಮವು ನಗರದಲ್ಲಿ ಅಭಿವೃದ್ಧಿಗೊಳ್ಳುತ್ತಿದೆ.[ಸೂಕ್ತ ಉಲ್ಲೇಖನ ಬೇಕು] ಈ ಬೆಳವಣಿಗೆಯು ಪ್ರಸ್ತುತ ಸೂಪರ್ ಮಾರುಕಟ್ಟೆಗಳಾದ ರಿಲಯನ್ಸ್ ಸೂಪರ್, ಸ್ಪೆನ್ಸರ್ಸ್ ಡೈಲಿ, A.K. ಅಹಮದ್ Co., ಮತ್ತು ಮಿಲನ್-ಎಂ(ಮಿಲೇನಿಯಂ?) ಮಾಲ್[೪೭], Big Bazaar ಮತ್ತು ಮಧುರೈ ಸಿಟಿಸೆಂಟರ್‌ಗಳಂತಹಾ ನಿರ್ಮಾಣ ಹಂತದಲ್ಲಿರುವ ಮಾಲ್‌ಗಳನ್ನು ಗಮನಿಸಿದರೆ ಸ್ವಷ್ಟವಾಗುತ್ತದೆ. ನಗರದ ಪ್ರಾಚೀನ ರಚನೆಯೊಂದಿಗೆ ಹೊಂದಿಕೊಳ್ಳುವಂತೆ, ನಗರದಲ್ಲಿ ಸ್ಥಾಪಿಸಲಾಗಿರುವ ವಾಣಿಜ್ಯ ಸ್ಥಳಗಳು ಸಮೂಹವಾಗಿ ರೂಪಿತವಾಗಿವೆ, ಹಾಗೂ ಸಾಲಾದ ಅನೇಕ ಅಂಗಡಿಗಳು ಒಂದೇ ರೀತಿಯ ವಸ್ತುಗಳನ್ನು ಮಾರುತ್ತಿರುವುದನ್ನು ಮಧುರೈನಲ್ಲಿ ಮಾತ್ರ ಕಾಣಬಹುದು.ಈಸ್ಟ್ ಗೇಟ್/ಪೂರ್ವ ದ್ವಾರವು ಗೃಹಕೃತ್ಯದ ಸಾಮಾನುಗಳನ್ನು ಮಾರುವ ಅಂಗಡಿಗಳಾದ ಮಣಿಮಾರನ್ ಸ್ಟೋರ್ಸ್, P.S.ಗುಣಸೇ/ಶೇಖರನ್ ಮೆಟಲ್ಸ್ ಮತ್ತು ಅನಂತ ಅಂಗಡಿಯಂತಹಾ ಅಂಗಡಿಗಳಿಂದ ಸುತ್ತುವರೆದಿದೆ. ಪೂರ್ವ ಮಾಸಿ ಸ್ಟ್ರೀಟ್/ಬೀದಿಯು ಸಾವಿರಾರು ದಿನಸಿ ಅಂಗಡಿಗಳಿಂದ ತುಂಬಿದ್ದರೆ, ಪಶ್ಚಿಮ ಮಾಸಿ ಬೀದಿಯು ಎಲೆಕ್ಟ್ರಿಕಲ್ ಮತ್ತು ಕೊಳಾಯಿ/ನೀರು ಸರಬರಾಜು ಸಾಮಗ್ರಿಗಳ ಅಂಗಡಿಗಳಿದ್ದರೆ, ದಕ್ಷಿಣ ಮಾಸಿ ಬೀದಿಯಲ್ಲಿ ಉಡಿಗೆ-ತೊಡಿಗೆಗಳು ಮತ್ತು ವಸ್ತ್ರೋದ್ಯಮ ಉತ್ಪನ್ನಗಳಿರುತ್ತವೆ, ಸಾಮಾನು ಸಾಗಣೆ ಮತ್ತು ಹಣ್ಣುಹಂಪಲುಗಳ ಗೋದಾಮುಗಳು ಉತ್ತರ ಮಾಸಿ ಬೀದಿಯಲ್ಲಿವೆ, ಟೌನ್ ಹಾಲ್ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟವಾದರೆ, ವಾಹನಗಳ ಬಿಡಿಭಾಗಗಳೂ ಉತ್ತರ ವೇಲಿ ಬೀದಿಯಲ್ಲಿ ಸಿಗುತ್ತವೆ ಮತ್ತು ಮೊಬೈಲ್/ಸಂಚಾರಿ ದೂರವಾಣಿ ಮಳಿಗೆಗಳು ಕೃಷ್ಣ ರಾಯರ್ ಕರೆ ಕೆರೆ/ಕೊಳ/ಟ್ಯಾಂಕ್ ಬೀದಿಯಲ್ಲಿದ್ದರೆ, ನಾಯಕ್ಕಾರ್ ಹೊಸ ಬೀದಿಯಲ್ಲಿ ವೈದ್ಯಕೀಯ ಸಾಮಗ್ರಿಗಳು ದೊರಕುತ್ತವೆ, ಆಭರಣಗಳು ಗೋಲ್ಡ್/ಚಿನ್ನದ ಬಜಾರ್ ಬೀದಿಯಲ್ಲಿ ಲಭ್ಯವಿದ್ದರೆ, ಮುದ್ರಣ ಸಂಸ್ಥೆಗಳು ಮತ್ತು ಹೋಟೆಲ್‌ಗಳು ಪಶ್ಚಿಮ ಪೆರುಮಾಲ್ ಮೇಸ್ತ್ರಿ ಬೀದಿಯಲ್ಲಿರುತ್ತವೆ, ಪುಸ್ತಕಗಳು ಮತ್ತು ನೋಟ್ ಪುಸ್ತಕಗಳು ಹೊಸ ಮಂಡಪಂ ಬೀದಿಯಲ್ಲಿ ಸಿಗುತ್ತವೆ. ಅಲಂಕಾರಿಕ ವಸ್ತುಗಳು, ಬಳೆಗಳು, ಉಡುಗೊರೆ ವಸ್ತುಗಳು, ಚಿನ್ನ ಮತ್ತು ಆಭರಣಗಳು, ರಾಸಾಯನಿಕಗಳು ಮತ್ತು ವೈದ್ಯಕೀಯ ಸಾಮಗ್ರಿಗಳು etc. ಚಿಲ್ಲರೆ ಮಾರಾಟ ಮಾಡುವ ಪ್ರತ್ಯೇಕ ಅಗಲವಾದ ಬೀದಿಗಳೂ ಇವೆ. ಒಂದೇ ರಸ್ತೆಯಲ್ಲಿ ಒಂದೇ ರೀತಿಯ ವಸ್ತುಗಳನ್ನು ಮಾರಾಟ ಮಾಡುವಂತಹಾ ವ್ಯವಸ್ಥೆಯು ಇಡೀ ಭಾರತದಲ್ಲಿ ಕೇವಲ ಮಧುರೈನಲ್ಲಿ ಮಾತ್ರವೇ ಇದೆ.
ಎಲ್ಲಾ ವರ್ಗದ ಜನರಿಗೂ ಆಗುವಂತಹಾ ಸಿನೆಮಾ/ಚಿತ್ರಮಂದಿರಗಳು ಅಥವಾ ಮಲ್ಟಿಪ್ಲೆಕ್ಸ್‌ಗಳು ನಗರದಲ್ಲಿವೆ. ತಮಿಳು ಚಿತ್ರಗಳಲ್ಲದೇ, ಕೆಲ ಹಿಂದಿ ಮತ್ತು ಆಂಗ್ಲ ಚಿತ್ರಗಳೂ ಸಹಾ ನಗರದಲ್ಲಿ ಪ್ರದರ್ಶಿಸಲ್ಪಡುತ್ತವೆ. ಬೈಪಾಸ್ ರಸ್ತೆಯಲ್ಲಿರುವ ಅಪರ್ಣಾ ಟವರ್ಸ್ ಮತ್ತು S.S.ಕಾಲೊನಿಯ ಖಾಜಿಯಾರ್ ಕಾಂಪ್ಲೆಕ್ಸ್‌ಗಳು ಚಿಲ್ಲರೆ ಮಾರಾಟ ವ್ಯವಹಾರದ ಮಧುರೈ ನಗರದಲ್ಲಿನ ಮಹತ್ವದ ಮಾರಾಟಕೇಂದ್ರಗಳಾಗಿವೆ. ನಾಯ್ಡು ಹಾಲ್ (ನೈಹಾ),
ಪೊಥಿಸ್, ಮೆಗಾಮಾರ್ಟ್,ಬ್ರಿಟಿಷ್ ಬೇಕರಿ, ಕೆಫೆ ಕಾಫಿಡೇ, etc.ಗಳಂತಹಾ ಇತರೆ ವ್ಯಾಪಾರಕೇಂದ್ರಗಳಿವೆ.
ಚಿನ್ನ, ವಜ್ರಗಳು, ಮತ್ತು ಪ್ಲಾಟಿನಂ ವ್ಯಾಪಾರಿಗಳಿಗೆ ಜ್ಯುವೆಲ್ಲರಿ ಬಜಾರ್‌ನಲ್ಲಿ ಚಿನ್ನಾಭರಣಗಳ ಅಂಗಡಿಗಳು ಹಾಗೂ ಥಂಗಾ ಮಾಲ್, ಅಲುಕ್ಕಾಸ್, ಜಾಯ್ ಅಲುಕ್ಕಾಸ್, ಭೀಮಾ ಅಂಡ್ ಲಲಿತಾ ಜ್ಯುವೆಲ್ಲರಿ ಮುಂತಾದ ಬೃಹತ್ ಪ್ರಮಾಣದ ವ್ಯವಹಾರ ನಡೆಸುವ ಮಳಿಗೆಗಳಿವೆ.
ಮಾಧ್ಯಮ
[ಬದಲಾಯಿಸಿ]ನಗರವು ಅನೇಕ ರೇಡಿಯೋ ಕೇಂದ್ರಗಳಾದ ರೇಡಿಯೋ ಮಿರ್ಚಿ, ಹೆಲೊ FM, ಸೂರ್ಯನ್ FMಗಳ ಸೇವೆ ನೀಡುತ್ತದೆ ಮತ್ತು ನಗರವು ಎರಡು ಪ್ರಮುಖ ಆಂಗ್ಲ ದೈನಿಕಗಳಾದ ದ ಹಿಂದು ಮತ್ತು ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗಳ ಸ್ಥಳೀಯ ಆವೃತ್ತಿ ಬಿಡುಗಡೆ ಮಾಡುತ್ತದೆ. ತಮಿಳು ಭಾಷೆಯ ಪ್ರಾತಃಕಾಲದ ದೈನಿಕಗಳೆಂದರೆ ದಿನಮಲಾರ್, ದಿನತಂತಿ, ದಿನಮಣಿ ಮತ್ತು ದಿನಕರನ್‌ಗಳನ್ನು ಸಹಾ ಹೊಂದಿದೆ. ಮಧುರೈನಲ್ಲಿ ಪ್ರಕಟಗೊಳ್ಳುವ ಸಂಜೆಯ ದೈನಿಕಗಳೆಂದರೆ ತಮಿಳ್ ಮುರಸು, ಮಲೈ ಮುರಸು ಮತ್ತು ಮಲೈ ಮಲಾರ್. ಅಷ್ಟೇ ಅಲ್ಲದೇ ತಮಿಳುನಾಡಿನ ಪ್ರಖ್ಯಾತ ಕಿರುತೆರೆ ಜಾಲವಾದ Sun TV ಜಾಲವು, SUN TV, K TV, Sun News etc., ವಾಹಿನಿಗಳೊಂದಿಗಿನ ತನ್ನ ಪ್ರಾಂತೀಯ ಕಛೇರಿಯನ್ನು, ಮಧುರೈನ ಉತ್ತಂಗುಡಿಯಲ್ಲಿ ಹೊಂದಿದೆ. ಅನೇಕ ಇತರೆ ವಾಹಿನಿಗಳಾದ, ವಿಜಯ್ TV, ರಾಜ್ TV, ಜಯಾ TV, SS ಮ್ಯೂಸಿಕ್ etc.ಗಳು ವಾರ್ತೆಗಳ ಮತ್ತು ಇತರ ಕಾರ್ಯಕ್ರಮಗಳ ವೇಗದ ಪ್ರಸಾರ ನೀಡಲು ಸಾಧ್ಯವಾಗುವಂತೆ, ಮಧುರೈನಲ್ಲಿಯೇ ತಮ್ಮ ಕಛೇರಿಗಳನ್ನು ಹೊಂದಿವೆ.
ಮನರಂಜನೆ
[ಬದಲಾಯಿಸಿ]ನಗರದಲ್ಲಿ ಕೆಳಕಂಡ ವಾರಾಂತ್ಯ ಮೋಜುತಾಣಗಳಿವೆ:
- ಅಥಿಸಾಯಂ ವಾಟರ್ ಥೀಮ್ ಪಾರ್ಕ್:
ಈ ಮನರಂಜನಾ ಜಲಕ್ರೀಡಾ ತಾಣವು ಮಧುರೈನ ಹೊರವಲಯದಲ್ಲಿರುವ (ನಗರದಿಂದ 20 km ದೂರದಲ್ಲಿದೆ) ಎಲ್ಲಾ ವಯೋಮಾನದ ಜನರನ್ನು ಆಕರ್ಷಿಸುತ್ತದೆ ಮತ್ತು ಮಧುರೈನಲ್ಲಿನ ಹಾಗೂ ಸುತ್ತಮುತ್ತಲಿನ ವಿವಿಧ ಪ್ರದೇಶಗಳ ಜನರು ಇಲ್ಲಿಗೆ ಬರುತ್ತಾರೆ. ಅನೇಕ ಉನ್ನತ ತಂತ್ರಜ್ಞಾನದ ಮನರಂಜನಾ ಆಟಗಳು ಪ್ರೇಕ್ಷಕರಿಗೆ/ಸಂದರ್ಶಕರಿಗೆ ಆಸಕ್ತಿದಾಯಕ ಅನುಭವಗಳನ್ನು ನೀಡುತ್ತವೆ. ಈ ತಾಣವನ್ನು ವೈಜ್ಞಾನಿಕವಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಬೇಸಿಗೆಯ ಬೇಗೆಯಲ್ಲಿ ಸೂಕ್ತವಾದ ತಾಣವಾಗಿರುತ್ತದೆ.
- ಇಕೋ ಪಾರ್ಕ್:
ನಗರದ ಪೌರ ಸಂಸ್ಥೆ ಕಚೇರಿ ಕಟ್ಟಡದ ಬಳಿಯಿರುವ ಈ ಮನರಂಜನಾ ತಾಣವ ಬೆಳಕಿನ ವ್ಯವಸ್ಥೆ ಮತ್ತು ಕಾರಂಜಿ ವ್ಯವಸ್ಥೆಗಳು ಆಕರ್ಷಕವಾಗಿವೆ ಮತ್ತು ಆಪ್ಟಿಕ್ ಫೈಬರ್ ಮರಗಳನ್ನು ಬೆಳಗಿಸಿ ದೇದೀಪ್ಯಮಾನವಾಗಿಸುವುದು ಕಣ್ಣಿಗೆ ಆಹ್ಲಾದವನ್ನುಂಟು ಮಾಡುತ್ತದೆ. ಈ ತಾಣದಲ್ಲಿನ ಅತ್ಯಂತ ಚಿತ್ತಾಕರ್ಷಕ ವ್ಯವಸ್ಥೆ ಎಂದರೆ ಸಂಗೀತಕ್ಕೆ ತಕ್ಕಂತೆ ನರ್ತಿಸುವ ಸಂಗೀತ ಕಾರಂಜಿ.
- ಹವಾ ವ್ಯಾಲಿ:
ಮಧುರೈನ ಹೊರವಲಯದಲ್ಲಿರುವ ನಾಥಂ ರಸ್ತೆಯಲ್ಲಿ ಈ ತಾಣವಿದೆ. ಪರ್ವತಗಳ/ಬೆಟ್ಟಗಳ ಹಿನ್ನೆಲೆಯೊಂದಿಗೆ ಇದು ನೈಸರ್ಗಿಕ ಸೌಂದರ್ಯದ ಅನುಭೂತಿ ನೀಡುತ್ತದೆ. ಇದರಲ್ಲಿ ಭೋಜನಾಲಯ/ರೆಸ್ಟೋರೆಂಟ್ ಹಾಗೂ ಕಿರು ರೇಸ್‌ಕಾರ್‌ಗಳ ಆಟದ ವ್ಯವಸ್ಥೆ ಸಹಾ ಇದೆ.
- ರಾಜಾಜಿ ಮಕ್ಕಳ ಪಾರ್ಕ್:
ಈ ತಾಣವು ಗಾಂಧಿ ವಸ್ತು ಸಂಗ್ರಹಾಲಯ ಮತ್ತು ತಮುಕ್ಕಮ್ ಮೈದಾನಗಳ ನಡುವೆ ಇದೆ. ಇದರಲ್ಲಿ ಮಕ್ಕಳು ಆಡುವಂತಹಾ ಅನೇಕ ಆಟಗಳಿವೆ ಹಾಗೂ ಕ್ರೀಡಾ ಸಾಧನಗಳಿವೆ, ಹಾಗೂ ಮೂಂಗಾ ಆರ್ಯ ಭವನ್ ಮತ್ತು ಇತರೆ ಇನ್ನಿತರ ಉಪಹಾರ ಗೃಹಗಳಿವೆ. ಇಷ್ಟೇ ಅಲ್ಲದೇ ಪಕ್ಷಿಗಳ ಸಂಗ್ರಹಾಲಯವೂ ಇದೆ ಮತ್ತು ಚಿತ್ತಾಕರ್ಷಕ ಬೆಳಕಿನ ಹಾಗೂ ಸಂಗೀತ ವ್ಯವಸ್ಥೆ ಸಹಾ ಇದೆ. ಈ ತಾಣವನ್ನು ಮಧುರೈ ಪೌರಸಂಸ್ಥೆಯು ತನ್ನ ವ್ಯಾಪ್ತಿಯಲ್ಲಿ ನಿರ್ವಹಿಸುತ್ತದೆ.
- MGR ರೇಸ್ ಕೋರ್ಸ್ ಕ್ರೀಡಾಂಗಣ:
ಇದೊಂದು ಅಥ್ಲೆಟಿಕ್ ಕ್ರೀಡಾಂಗಣವಾಗಿದ್ದು ಕೃತಕ ಪಥವೂ ಇದೆ. ಅನೇಕ ರಾಷ್ಟ್ರೀಯ ಕೂಟಗಳನ್ನು ಇಲ್ಲಿ ನಡೆಸಲಾಗುತ್ತದೆ ಹಾಗೂ ಅಂತರರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಷಿಪ್ ಪಂದ್ಯಗಳನ್ನು ಇಲ್ಲಿ ನಡೆಸಲಾಗಿತ್ತು.
- ಅರಸರಡಿ ಮೈದಾನ:
ಇದು ನಗರದಲ್ಲಿರುವ ಏಕೈಕ ಕ್ರಿಕೆಟ್ ಕ್ರೀಡಾಂಗಣ.
- ಥೆಪ್ಪಕುಲಂ:
ನಗರದಲ್ಲಿ ಥೆಪ್ಪಕುಲಂ ಎಂದು ಕರೆಯಲಾಗುವ ವಂಡಿಯೂರು ಮಾರಿಯಮ್ಮನ್ ದೇಗುಲಕ್ಕೆ ಸೇರಿದ ಪವಿತ್ರ ದೈವಿಕ ಕೊಳವಿದೆ. ಇತ್ತೀಚೆಗೆ ಇದೊಂದು ಪಿಕ್‌ನಿಕ್ ಸ್ಥಳವಾಗಿ ಮಾರ್ಪಟ್ಟಿದೆ. ಇದರ ಮಧ್ಯದಲ್ಲಿ ಕಲ್ಲಿನಿಂದ ಕೃತಕ ದ್ವೀಪವೊಂದನ್ನು ನಿರ್ಮಿಸಲಾಗಿದೆ. ಈ ಕೊಳವನ್ನು ಸರಿಸುಮಾರು 1500 A.Dದ ಸಮಯದಲ್ಲಿ ಕಟ್ಟಲಾಗಿತ್ತು.
ಆತಿಥ್ಯ/ಅತಿಥಿ ಸತ್ಕಾರ
[ಬದಲಾಯಿಸಿ]ಇತ್ತೀಚಿನ ವರ್ಷಗಳಲ್ಲಿ, ನಗರವು ಅತಿಥಿ ಸತ್ಕಾರ ಉದ್ಯಮದಲ್ಲಿ ಬೆಳವಣಿಗೆ ಕಾಣುತ್ತಲಿದೆ. ಐಷಾರಾಮಿ ಪಂಚತಾರಾ ಹೋಟೆಲ್ "ಹೆರಿಟೆನ್ಸ್ ಮಧುರೈ " [೪೮][೪೯] ಭಾರತದ ಅತ್ಯುತ್ತಮ ಶ್ರೇಣಿಯ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದು. ಇನ್ನಿತರ ಮೇಲ್‌ಮಟ್ಟದ ಹೋಟೆಲ್‌ಗಳೆಂದರೆ ರಾಯಲ್ ಕೋರ್ಟ್, ಹೋಟೆಲ್ GRT ರೀಜೆನ್ಸಿ Archived 2011-07-11 ವೇಬ್ಯಾಕ್ ಮೆಷಿನ್ ನಲ್ಲಿ., ಗೇಟ್‌ವೇ ಹೋಟೆಲ್ (ತಾಜ್ ಗಾರ್ಡನ್ ರಿಟ್ರೀಟ್), ಹೋಟೆಲ್ ಜರ್ಮೇನಸ್, ನಾರ್ತ್ ಗೇಟ್, ಮಧುರೈ ರೆಸಿಡೆನ್ಸಿ, ಹೋಟೆಲ್ ಸಂಗಂ ಮತ್ತು ಹೋಟೆಲ್ ಫಾರ್ಚ್ಯೂನ್ ಪಾಂಡಿಯನ್. ದಕ್ಷಿಣ ಭಾರತದ,ಪಂಜಾಬಿ, ಮೊಘಲಾಯಿ ಸೇರಿದಂತೆ ಬಹುಪಾಲು ಭಾರತೀಯ ವೈವಿಧ್ಯಗಳು ಮತ್ತು ಐರೋಪ್ಯ, ಚೀನೀ ಆಹಾರಗಳು/ಖಾದ್ಯಗಳು ನಗರದ ಹೋಟೆಲ್/ರೆಸ್ಟೋರೆಂಟ್‌ಗಳಲ್ಲಿ[೫೦][೫೧] ಲಭ್ಯವಿವೆ. ಮಧುರೈ ತನ್ನ ವೈವಿಧ್ಯತೆ ಹೊಂದಿರುವ ಚಟ್ನಿಗಳೊಂದಿಗೆ ಇಡ್ಲಿಗಳಿಗೆ ಪ್ರಸಿದ್ಧವಾಗಿದ್ದು, ಅವು ಬಹುತೇಕ ಎಲ್ಲಾ ರೆಸ್ಟೋರೆಂಟ್‌ಗಳಲ್ಲಿ ಲಭ್ಯವಿದೆ. ಪಶ್ಚಿಮ ಮಾಸಿ ಬೀದಿಯಲ್ಲಿರುವ ಮುರುಗನ್ ಇಂಡ್ಲಿ ಖಾನಾವಳಿ ಮತ್ತು ರೈಲು ನಿಲ್ದಾಣದ ಖಾನಾವಳಿಗಳು ತಮ್ಮ ಇಡ್ಲಿಗಳಿಗೆ ತಮಿಳುನಾಡಿನಾದ್ಯಂತ ಪ್ರಸಿದ್ಧವಾಗಿವೆ.
ಹಬ್ಬಗಳು/ಉತ್ಸವಗಳು/ಜಾತ್ರೆಗಳು
[ಬದಲಾಯಿಸಿ]ಮಧುರೈ ಜನರು ಅನೇಕ ಉತ್ಸವಗಳನ್ನು/ಹಬ್ಬಗಳನ್ನು ಆಚರಿಸುತ್ತಾರೆ. ಕೆಲ ಪ್ರಮುಖ ಹಬ್ಬಗಳೆಂದರೆ, ದೇವಿ ಮೀನಾಕ್ಷಿ ತಿರುಕಲ್ಯಾಣಂ, ಚಿತ್ತಿರೈ ಉತ್ಸವ, ದೀಪಾವಳಿ/ದಿವಾಲಿ, ಪೊಂಗಲ್, ತೆಪ್ಪೋರ್ಚವಂ, ರಥೋತ್ಸವಗಳು etc.[೫೨][೫೨][೫೩][೫೪][೫೫]
ಮೀನಾಕ್ಷಿ ತಿರುಕಲ್ಯಾಣಂ & ಚಿತ್ತಿರೈ ಉತ್ಸವ
[ಬದಲಾಯಿಸಿ]ಚಿತ್ತಿರೈ (ಮೇಷ) ತಿಂಗಳಲ್ಲಿ ಆಚರಿಸುವ ವಾರ್ಷಿಕ ಬ್ರಹ್ಮೋತ್ಸವ ಅತ್ಯಂತ ಪ್ರಮುಖವಾದುದಲ್ಲದೇ, ಇದು ಮಧುರೈ ದೇಗುಲಕ್ಕೆ ಸಂಬಂಧಿಸಿದ ದಂತಕಥೆಗಳಾದ ಮೀನಾಕ್ಷಿಯ ಪಟ್ಟಾಭಿಷೇಕ, ಅಲೌಕಿಕ ಮದುವೆ etcಗಳೊಂದಿಗೆ ಬೆಸೆದುಕೊಂಡಿದೆ. ಚಿತ್ತಿರೈ ಉತ್ಸವವು ತಿರುಮಾಲಿರುಂಚೋಳೈ ನ ವಾರ್ಷಿಕ ಉತ್ಸವದ ಸಮಯದಲ್ಲಿಯೇ ನಡೆಯುತ್ತದೆ. ಈ ದೈವಿಕ ಮದುವೆಯು ತಿರುಪ್ಪರಾಂಕುನ್‌ರಾಂ ನಿಂದ ಬರುವ ದೇವತೆಗಳ ಮೆರವಣಿಗೆಯನ್ನೂ ಒಳಗೊಂಡಿರುವುದರಿಂದ, ಆ ಸಮಯದಲ್ಲಿ ಮಧುರೈ ಹಾಗೂ ಸುತ್ತಮುತ್ತಲಿನ ಇಡೀ ಪ್ರದೇಶವು ವಿಶೇಷ ಆಚರಣೆಗಳ ಸ್ಥಳವಾಗಿ ಮಾರ್ಪಟ್ಟಿರುತ್ತದೆ.
ಚಿತ್ತಿರೈ ತಿಂಗಳಿನ ಉಜ್ವಲ ಕಾಲದ 5ನೇ ದಿನದಂದು ಚಿತ್ತಿರೈ ಉತ್ಸವವು ಆರಂಭಗೊಳ್ಳುತ್ತದೆ. ಉತ್ಸವದ 8, 9 ಮತ್ತು 10ನೇ ದಿನಗಳಲ್ಲಿ ಪ್ರಮುಖ ಆಚರಣೆಗಳು ನಡೆಯುತ್ತವೆ. ಚಿತ್ತಿರೈ ಉತ್ಸವದ ಎಂಟನೇ ದಿನವು ಮೀನಾಕ್ಷಿಯ ಪಟ್ಟಾಭಿಚೇಕ ಮತ್ತು ಬೆಳ್ಳೀ ಸಿಂಹಾಸನದ ಮೇಲೆ ಮೆರವಣಿಗೆ ಇತ್ಯಾದಿಗಳು ನಡೆದರೆ, 9ನೇ ದಿನ ದಿಗ್ವಿಜಯ ಉತ್ಸವವು ನಡೆಯುತ್ತದೆ. 10ನೇ ದಿನದಲ್ಲಿ (ಚಿತ್ರ ಪೂರ್ಣಿಮೆ/ಪೌರ್ಣಿಮೆ) ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ವಿವಾಹ ಮಹೋತ್ಸವವು ನಡೆಯುತ್ತದೆ.
ದಂತಕಥೆಗಳ ಪ್ರಕಾರ ವಿಷ್ಣು ತನ್ನ ಸೋದರಿಯನ್ನು ಶಿವನಿಗೆ ಮದುವೆ ಮಾಡಿಕೊಡುತ್ತಾನೆ. ಈ ದಂತಕಥೆಯ ನೆನಪಿಗಾಗಿ ತಿರುಪ್ಪರಾಂಕುನ್‌ರಾಂನಿಂದ ಮಧುರೈಗೆ ಮೆರವಣಿಗೆ ಮೂಲಕ ವಿಷ್ಣುವಿನ ಮೂರ್ತಿಯೊಂದನ್ನು ಕರೆತರಲಾಗುತ್ತದೆ. ಸುಬ್ರಮ್ಹಣ್ಯ/ಸುಬ್ರಮಣ್ಯ ತಿರುಪ್ಪರಾಂಕುನ್‌ರಾಂ ದೇಗುಲದ ಪ್ರಮುಖ/ಮೂಲ ದೇವರಾದುದದರಿಂದ, ಸುಬ್ರಮ್ಹಣ್ಯ/ಸುಬ್ರಮಣ್ಯ ಮೂರ್ತಿಯು ಮೆರವಣಿಗೆಯ ಮುಂಚೂಣಿಯಲ್ಲಿರುತ್ತದೆ. ವಿವಾಹ ಮಹೋತ್ಸವದ ನಂತರ ಮೀನಾಕ್ಷಿ ಮತ್ತು ಸುಂದರೇಶ್ವರರ್‌ರ ಮೂರ್ತಿಗಳನ್ನು ಪಲ್ಲಕ್ಕಿಯ ಮೇಲೆ ಹಾಗೂ ಬೆಳ್ಳಿಯ ಆನೆಯ ಮೇಲಿನ ಭವ್ಯ ಮೆರವಣಿಗೆಯಲ್ಲಿ ಅನುಕ್ರಮವಾಗಿ ಕರೆದೊಯ್ಯಲಾಗುತ್ತದೆ. (ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಚಿತ್ತಿರೈ ತಿಂಗಳಲ್ಲಿ ವಾರ್ಷಿಕ ಬ್ರಹ್ಮೋತ್ಸವಂ ಆಚರಿಸುವ ಎಲ್ಲಾ ಶಿವ ದೇಗುಲಗಳಲ್ಲಿ ತಿರುಕ್ಕಲ್ಯಾಣಂ ಉತ್ಸವವನ್ನು ಚಿತ್ರ ಪೌರ್ಣಮಿಯಂದು ಆಚರಿಸಲಾಗುತ್ತದೆ).
ಈ ಅವಧಿಯಲ್ಲಿ ಅಜ್ಹಘರ್ ಕೋಯಿಲ್ (ತಿರುಮಾಲಿರುಂಚೋಳೈ)ನಿಂದ ಕಲ್ಲಜ್ಹಘರ್ ಮಧುರೈನ ಪೂರ್ವ ಹೊರವಲಯದ ವೈಗೈ ನದಿ ಸಮೀಪದ ವಂಡಿಯೂರಿಗೆ ಭೇಟಿ ನೀಡುತ್ತಾರೆ. ನಂಬಿಕೆಯ ಪ್ರಕಾರ ಕಲ್ಲಜ್ಹಘರ್ ತನ್ನ ಸಹೋದರಿಯ ಮದುವೆಗೆ ತುಂಬ ತಡವಾಗಿ ಬಂದೆನೆಂದು ಅರಿವಾಗಿ ನಿರಾಶೆಯಿಂದ ನದಿ ದಾಟಲು ನಿರಾಕರಿಸಿ ಅಜ್ಹಘರ್ ಕೋಯಿಲ್‌ಗೆ ಮರಳುತ್ತಾರೆ.
ಐತಿಹಾಸಿಕವಾಗಿ, ಚಿತ್ತಿರೈ ಉತ್ಸವವನ್ನು ಮಾಸ್ಸಿಯಲ್ಲಿ ನಡೆಸಲಾಗುತ್ತಿತ್ತು, ಹಾಗಾಗಿಯೇ ಉತ್ಸವದ ಮೆರವಣಿಗೆಗಳು ಮಾಸಿ ಬೀದಿಗಳಲ್ಲೇ ನಡೆಯುತ್ತವೆ. ನಾಯಕ್ ರಾಜರುಗಳ ಕಾಲದಲ್ಲಿ ಉತ್ಸವವನ್ನು ಅಜ್ಹಘರ್ ಕೋಯಿಲ್‌ನ ಆಚರಣೆಯ ಕಾಲಕ್ಕೆ ಸರಿಹೊಂದುವಂತೆ ಮಾಡಲು ಎದ್ದುಕಾಣುವಂತೆ ಚಿತ್ತಿರೈ ತಿಂಗಳಿಗೆ ಬದಲಾಯಿಸಲಾಯಿತು.
ತೇರು (ರಥ) ಉತ್ಸವವನ್ನು ವಾರ್ಷಿಕೋತ್ಸವದ 11ನೇ ದಿನ ಆಚರಿಸಲಾಗುತ್ತದೆ.
ಸಂತನಕೂಡು ಉತ್ಸವಗಳು
[ಬದಲಾಯಿಸಿ]ಆಯಾ ದರ್ಗಗಳ ಸಂತರ ನೆನಪಿಗಾಗಿ ಸಂತನಕೂಡು ಉತ್ಸವಗಳನ್ನು ದರ್ಗಾಗಳಲ್ಲಿ ಆಚರಿಸಲಾಗುತ್ತದೆ. ಸುತ್ತಮುತ್ತಲಿನ ದರ್ಗಾಗಳು ಹಾಗೂ ಅಲ್ಲಿನ ಸಂತನಕೂಡು ಉತ್ಸವದ ದಿನಾಂಕಗಳು.
ದರ್ಗಾ | ಸಂತರ ಹೆಸರು | ಸ್ಥಳ | ಸಂತನಕೂಡು ಉತ್ಸವದ ದಿನಾಂಕ (ಹಿಜರಿ ಪಂಚಾಂಗ)) |
---|---|---|---|
ಸಿಕಂದರ್ ಮಲೈ | ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಷಹೀದ್ ರಾಜಿ.. | ತಿರುಪಾರಾಂಕುಂದ್ರಂ | ರಜಾಬ್-15 |
ಕಣವೈ | ಜರತ್ ಸೈಯದ್ ಇಬ್ರಾಹಿಂ ವಲೈಯುಲ್ಲಾಹ್ ರಾಜಿ.. | ಮೇಲಕ್ಕಳ್ | ರಬಿ' ಅಲ್-ಥಾಣಿ/0}-2 |
ತಿರುವೇದಗಂ | ಹಜರತ್ ಷಾ ಹುಸೇನ್ ಪರ್ಹೇಜ್ ರಾಜಿ... | ಷೋ/ಶೋಲಾವಂದನ್ | ಮು/ಮೊಹರ್ರಂ-26 |
ತೆಪ್ಪೋರ್ಚವಂ/ತೆಪ್ಪೋತ್ಸವ
[ಬದಲಾಯಿಸಿ]ಈ ಉತ್ಸವವನ್ನು ಜನವರಿ ತಿಂಗಳಲ್ಲಿ, ಥಾ/ಥಯ್ ತಮಿಳು ತಿಂಗಳಿನ ಹುಣ್ಣಿಮೆಯ ದಿನದಂದು ಆಚರಿಸಲಾಗುತ್ತದೆ . ಅಲಂಕೃತವಾದ ದೇವತೆ ಮೀನಾಕ್ಷಿ ಹಾಗೂ ಆಕೆಯ ಪತಿಯ ಪ್ರತಿಮೆಗಳನ್ನು ವರ್ಣಮಯ ಮೆರವಣಿಗೆಯಲ್ಲಿ ಮೀನಾಕ್ಷಿ ದೇವಸ್ಥಾನದಿಂದ ದೊಡ್ಡದಾದ ಮಾರಿಯಮ್ಮನ್ ತೆಪ್ಪಕುಲಂಗೆ ಕರೆದೊಯ್ಯಲಾಗುತ್ತದೆ. ಈ ಪ್ರತಿಮೆಗಳನ್ನು ಮಿನುಗುತ್ತಿರುವ ದೀಪಗಳು ಹಾಗೂ ಹೂವಿಗಳಿಂದ ಅಲಂಕೃತವಾದ ತೆಪ್ಪದ ಮೇಲಿಟ್ಟು ಕೆರೆಯ ಮೇಲೆ ತೇಲಿ ಬಿಡಲಾಗುತ್ತದೆ. ಇಲ್ಲಿ ನೋಡಿ
ಮತ್ತು ಪೊಂಗಲ್ & ಪ್ರಸಿದ್ಧ ಅಲಂಗನಲ್ಲೂರ್ ಜಲ್ಲಿಕಟ್ಟು
[ಬದಲಾಯಿಸಿ]ಪ್ರವಾಸೋದ್ಯಮ ಮತ್ತು ಹೆಗ್ಗುರುತುಗಳು
[ಬದಲಾಯಿಸಿ]ಭಾರತದ ಅತಿ ಪ್ರಮುಖ ಹಿಂದು ತೀರ್ಥಯಾತ್ರಾ ಸ್ಥಳಗಳಲ್ಲಿ ಮಧುರೈ ಒಂದಾಗಿದೆ. ನಗರವು ಹಾಗೂ ಬಹು ಸಂಖ್ಯೆಯ ದೇಶದೊಳಗಿನ ಯಾತ್ರಾರ್ಥಿಗಳನ್ನು ಮತ್ತು ವಿದೇಶಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. 2007ರಲ್ಲಿ ಸರಿಸುಮಾರು 4,100,000 ಪ್ರವಾಸಿಗರು ಮಧುರೈಗೆ ಭೇಟಿ ನೀಡಿದ್ದರು, ಅವರಲ್ಲಿ 224,000[೫೬] ಮಂದಿ ವಿದೇಶಿಗರಿದ್ದರು.
ಮೀನಾಕ್ಷಿ -ಸುಂದರೇಶ್ವರರ್ ದೇಗುಲ
[ಬದಲಾಯಿಸಿ]ಇಂದಿಗೂ ಭಾರತದ ಅತಿ ಪ್ರಮುಖ ಸಾಂಸ್ಕೃತಿಕ ಮತ್ತು ವಾಸ್ತುವೈಭವದ ಹೆಗ್ಗುರುತುಗಳಲ್ಲಿ ಒಂದಾಗಿರುವ ಮಧುರೈನ ಮೀನಾಕ್ಷಿ-ಸುಂದರೇಶ್ವರರ್ ದೇಗುಲವನ್ನು ಮೂಲತಃ ಪ್ರಾಚೀನ ಪಾಂಡ್ಯರ ಅರಸ ಕುಲಶೇ/ಸೇಖರನು ಕಟ್ಟಿಸಿದ್ದು ಎನ್ನಲಾಗುತ್ತದೆ. ತಮಿಳುನಾಡಿನ ಪ್ರಧಾನ ಶಿವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಚಕ್ರವ್ಯೂಹದಂತಹ ಸುತ್ತುಬಳಸಿನ ಜಟಿಲ ರಚನೆಯ ಮೀನಾಕ್ಷಿ ದೇಗುಲವು ದೇವತೆ ಮೀನಾಕ್ಷಿ ಮತ್ತು ಆಕೆಯ ಪತಿ ಸುಂದರೇಶ್ವರರ್ (ಸ್ಫುರದ್ರೂಪಿ ದೇವ )ರ ಪ್ರೇಮವನ್ನು ಆಚರಿಸುವ ವಿಶ್ವಪ್ರಸಿದ್ಧವಾಗಿದೆ[೩]. ಪ್ರಾಚೀನ ಮಧುರೈ ನಗರವನ್ನು ಕಮಲದ ಆಕೃತಿಯಲ್ಲಿ ನಿರ್ಮಿಸಲಾಗಿದ್ದು, ದೇಗುಲವು ಕೇಂದ್ರಭಾಗದಲ್ಲಿದ್ದು ರಸ್ತೆಗಳು ಹಾಗೂ ರಾಜಮಾರ್ಗಗಳು ಒಂದರ ನಂತರ ಒಂದರಂತೆ ಏಕಕೇಂದ್ರಿತವಾಗಿ ಕೇಂದ್ರದಿಂದ ಹೊರಕ್ಕೆ ಬರುವಂತೆ ಇದೆ. ದಂತಕಥೆಯೊಂದರ ಪ್ರಕಾರ ನಗರಕ್ಕೆ ಹೆಸರಿಡಬೇಕಾದ ದಿನದಂದು, ಮಹಾಶಿವನು ನಗರ ಹಾಗೂ ನಗರದ ಜನರ ಮೇಲೆ ತನ್ನ ಜಟೆಯಿಂದ ಅಮೃತವನ್ನು ಪ್ರೋಕ್ಷಿಸಿ ಆಶೀರ್ವದಿಸಿದನು. ಹಾಗಾಗಿ ನಗರವು ಮಧುರಾಪುರಿ ಎಂದರೆ ಪವಿತ್ರ ಅಮೃತ ನಗರಿ ಎಂಬರ್ಥ ಬರುವ ಹೆಸರನ್ನು ಹೊಂದಿತು. ಈ ದಂತಕಥೆಯು ಉಳಿದಂತೆ ದ್ರಾವಿಡ ನಗರವಾಗಿದ್ದ ಮಧುರೈನ ವ್ಯುತ್ಪನ್ನವನ್ನು ಸಂಸ್ಕೃತೀಕರಿಸಲು/ಆರ್ಯವ್ಯುತ್ಪನ್ನಕ್ಕೆ ಬದಲಿಸಲು ತಡವಾಗಿ ಹೆಣೆದಿರಬಹುದಾಗಿದ್ದ ಕಥೆಯಾಗಿರಬಹುದು. ಇದೇ ಸ್ಥಳದಲ್ಲಿ ನಟರಾಜರ್ ದೇವನು ತನ್ನ ಬಲಗಾಲೆತ್ತಿ ನೃತ್ಯ ಮಾಡಿದ್ದು. (ಕಾಲ್ ಮಾರಿಯ ಆದಿಯಾ ನಟರಾಜರ್). ಮಹಾಶಿವನಿಗೆ ನಿರ್ಮಾಣವಾದ ದೇಗುಲವನ್ನು ಕಂಡು ಆನಂದವಾಗಿ ವಿಭಿನ್ನರೀತಿಯ ನೃತ್ಯವನ್ನು ಮಾಡಿದನು. ಕನ್ನಗಿ ಇಡೀ ನಗರವನ್ನು ದಹಿಸಿದ ಮೇಲೂ ಉಳಿದುಕೊಂಡ ದೇವಸ್ಥಾನವಿದು. ಪ್ರಸಕ್ತ ಕನಿಷ್ಟ 2009ರ ಕೊನೆಯವರೆಗೆ ಎಲ್ಲಾ ಗೋಪುರಗಳನ್ನು ಅದರ ಮೇಲಿನ ಶೀಲ್ಪಕಲೆಗಳು ಕಾಣದಂತೆ ಮರೆಮಾಚಿ ಅಪಾರದರ್ಶಕ ಮುಸುಕುಗಳು ಹಾಗೂ ಚೌಕಟ್ಟುಗಳನ್ನು ಇಳಿಬಿಡಲಾಗಿದೆ.
ತಿರುಮಲೈ ನಾಯಕರ್ ಮಹಲ್
[ಬದಲಾಯಿಸಿ]ಈ ಅರಮನೆ ಕಟ್ಟಡವನ್ನು 1636ರಲ್ಲಿ ಇಂಡೋ-ಸಾರಸ್ಯನ್ /ಭಾರತೀಯ ಇಸ್ಲಾಂ ಶೈಲಿಯಲ್ಲಿ ತಿರುಮಲೈ ನಾಯಕರ್ ರಾಜನು ಕಟ್ಟಿಸಿದ. ಈ ಕಟ್ಟಡವು ಈಗ ರಾಷ್ಟ್ರೀಯ ಸ್ಮಾರಕವಾಗಿದ್ದು ತಮಿಳುನಾಡಿನ ಪುರಾತತ್ವ ಇಲಾಖೆಯ ಆಶ್ರಯದಲ್ಲಿದೆ.
ಮೂಲ ಅರಮನೆ ಕಟ್ಟಡವು ಪ್ರಸ್ತುತ ಕಟ್ಟಡದ ನಾಲ್ಕರಷ್ಟು ದೊಡ್ಡದಾಗಿತ್ತು. ಅದನ್ನು, ಸ್ವರ್ಗ-ವಿಲಾಸ ಮತ್ತು ರಂಗ-ವಿಲಾಸ ಎಂದು ಎರಡು ಭಾಗಗಳನ್ನಾಗಿ ವಿಭಜಿಸಲಾಗಿತ್ತು. ಈ ಪ್ರತಿಯೊಂದು ವಿಭಾಗದಲ್ಲಿಯೂ ರಾಜವಂಶ ನಿವಾಸಗಳು, ರಂಗಮಂದಿರ, ದೇಗುಲಗಳು, ಮಹಡಿ/ವಠಾರಗಳು, ಶಸ್ತ್ರಾಗಾರ, ಪಲ್ಲಕ್ಕಿ ಸ್ಥಳ, ವಾದ್ಯಕೂಟ, ವಸತಿ ಸಮುಚ್ಛಯ, ಕೊಳಗಳು, ಮತ್ತು ಉದ್ಯಾನಗಳಿದ್ದವು. ಕಟ್ಟಡದ ಮೇಲ್ಛಾವಣಿಯಲ್ಲಿ ಶೈವ ಹಾಗೂ ವೈಷ್ಣವ ಪಂಥದ ವಿಸ್ತಾರವಾದ ಚಿತ್ರಗಳಿಂದ ಅಲಂಕೃತವಾಗಿದ್ದವು.
ಸ್ವರ್ಗವಿಲಾಸಂ ಎಂದು ಹೆಸರಾದ ಯಾವುದೇ ತೊಲೆ ಇಲ್ಲವೇ ಜಂತಿಗಳಿಂದ ಆಧಾರ ಹೊಂದಿಲ್ಲದ ಪೂರ್ಣವಾಗಿ ಗಾರೆ ಹಾಗೂ ಇಟ್ಟಿಗೆಗಳಿಂದ ನಿರ್ಮಿತವಾದ ಕಮಾನುಗಳಿಂದ ಅಲಂಕೃತವಾದ ಅಷ್ಟಭುಜಾಕೃತಿಯ ಮೊಗಸಾಲೆಯನ್ನು ಹೊಂದಿದೆ. ಅದರ ಗುಮ್ಮಟಗಳ ಮೇಲೆ ಹಾಗೂ ಕಮಾನುಗಳ ಮೇಲೆ ಮಾಡಿರುವ ನಯವಾದ ಗಾರೆ ಕಲೆ ಅತ್ಯದ್ಭುತವಾಗಿದೆ. ದೊಡ್ಡ ಗಾತ್ರದ ಸ್ತಂಭಗಳು ಮತ್ತು ಕಟ್ಟೋಣಗಳು ವಾಸ್ತುಶಿಲೆಯ ಮೇಲಿನ ಪ್ರೌಢಿಮೆಯನ್ನು ತೋರಿಸುತ್ತವೆ. ಒಳಾಂಗಣ/ದರ್ಬಾರು/ರಾಜಾಸ್ಥಾನ ಹಾಗೂ ನೃತ್ಯ ಅಂಗಳಗಳು ಸಂದರ್ಶಕರಿಗೆ ಪ್ರಮುಖ ಆಕರ್ಷಣೆಗಳಾಗಿವೆ. ಪ್ರತಿಯೊಂದು 58 ಅಡಿ ಎತ್ತರ ಹಾಗೂ 5 ಅಡಿ ಸುತ್ತಳತೆ ಹೊಂದಿರುವ ಒಟ್ಟು 248 ಸ್ತಂಭಗಳಿವೆ. ರಾಜರುಗಳು ಬಳಸುತ್ತಿದ್ದ ಪೀಠೋಪಕರಣಗಳು ಮತ್ತು ಗೃಹಸಾಮಗ್ರಿಗಳನ್ನು ಅರಮನೆಯಲ್ಲಿ ಪ್ರದರ್ಶನಕ್ಕಿಡಲಾಗಿದೆ. ತಮಿಳು ಹಾಗೂ ಆಂಗ್ಲ ಭಾಷೆಗಳಲ್ಲಿ "ಸಿಲಾಪ್ಪಥಿಕಾರಂ"ನ ಕಥನ ಚಿತ್ರಿಸುವ "ಬೆಳಕು ಹಾಗೂ ಸಂಗೀತದ" ಪ್ರದರ್ಶನಗಳನ್ನು ಅರಮನೆಯಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಈ ಅರಮನೆಯು ಬಾಂಬೆ , ಇರುವರ್ , ಗುರು ಮತ್ತು ಜೋಡಿ ಮುಂತಾದ ಭಾರತೀಯ ಚಿತ್ರಗಳಲ್ಲಿ ಕಾಣಿಸಿಕೊಂಡಿದೆ.
ಖಾಜಿಮರ್ ದೊಡ್ಡ ಮಸೀದಿ (ಪೆರಿಯಾ ಪಲ್ಲಿವಾಸಲ್) ಮತ್ತು ಮಕ್‌ಬರಾ
[ಬದಲಾಯಿಸಿ]ಮಧುರೈ ನಗರದ ಹೃದಯಭಾಗದಲ್ಲಿ ಪ್ರಸಿದ್ಧ ಮಸೀದಿ (ಮಸ್ಜಿದ್) ಇದೆ, ಪೆರಿಯರ್ (ಕೇಂದ್ರ) ಬಸ್ ನಿಲ್ದಾಣದಿಂದ ಕೇವಲ 500 ಮೀಟರ್‌ಗಳಷ್ಟು ಹಾಗೂ ಮಧುರೈ ರೈಲ್ವೆ ಜಂಕ್ಷನ್‌ನ ಆಗ್ನೇಯ ದಿಕ್ಕಿನಲ್ಲಿ 1 ಕಿಲೋಮೀಟರ್‌ಗಳಷ್ಟು ದೂರದಲ್ಲಿದೆ. ಮಧುರೈನಲ್ಲಿನ ಪ್ರಪ್ರಥಮ ಮುಸ್ಲಿಮರ ಪೂಜಾಸ್ಥಳವಾದ ಈ ಮಸೀದಿಯನ್ನು 13ನೇ ಶತಮಾನದಲ್ಲಿ ಓಮನ್‌ನಿಂದ ಬಂದ ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ ಹಜರತ್ ಖಾಜಿ ಸೈಯದ್ ತಜುದ್ದೀನ್‌ರು ಆಗಿನ ಪಾಣಿದಿಯಾ/ಪಾಂಡ್ಯ ರಾಜ, ಕೂ(ನ್) ಪಾಂಡಿಯನ್‌ರಿಂದ ಈ ಸ್ಥಳವನ್ನು ಪಡೆದು ಕಟ್ಟಿಸಿದರು. ಮಧುರೈನ ಪ್ರಸಿದ್ಧ ಹಜರತ್‌ಗಳ ದರ್ಗಾ ಆಗಿರುವ ಮಧುರೈ ಮಕ್‌ಬರಾ ಸಹಾ(ಪ್ರವಾದಿ ಮುಹಮ್ಮದ್‌ರ ವಂಶಸ್ಥರಾದ - ಹಜರತ್ ಮೀರ್ ಅಹಮದ್ ಇಬ್ರಾಹಿಂ, ಹಜರತ್ ಮೀರ್ ಅಮ್ಜದ್ ಇಬ್ರಾಹಿಂ ಮತ್ತು ಹಜರತ್ ಸೈಯದ್ ಅಬ್ದುಸ್ ಸಲಾಂ ಇಬ್ರಾಹಿಂ ರಹಮತುಲ್ಲಾಹಿ ಅಲೈಹಿಂ) ಈ ಮಸೀದಿಯ ಆವರಣದಲ್ಲಿಯೇ ಇದೆ. ಖಾಜಿ ಸೈಯದ್ ತಜುದ್ದೀನರ ಎಲ್ಲಾ ವಂಶಸ್ಥರು (ಹಕ್‌ದಾರ್‌ಗಳು - ಈ ಮಸೀದಿಯ ಷೇರುದಾರರುಗಳನ್ನು ಸೈಯದ್‌ಗಳೆಂದು ಕರೆಯುತ್ತಾರೆ) ಇದೇ ಪ್ರದೇಶದಲ್ಲಿಯೇ (ಖಾಜಿ ಮಾರ್ ಬೀದಿ) ಸುಮಾರು 700 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ವಾಸವಾಗಿದ್ದು ಆಗಿನಿಂದ ಈ ಮಸೀದಿಯನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಸೈಯದ್ ತಜುದ್ದೀನರನ್ನು ಸುಲ್ತಾನರ ಕಾಲದಲ್ಲಿ ಖಾಜಿಯೆಂದು ನೇಮಕ ಮಾಡಲಾಗಿತ್ತು, ಹಾಗೂ ಈಗಲೂ ಮಧುರೈನ ಖಾಜಿ ಮಾರ್ ಬೀದಿಯಲ್ಲಿ ವಾಸವಾಗಿರುವ ಅವರ ವಂಶಸ್ಥರನ್ನೇ ತಮಿಳುನಾಡು ಸರ್ಕಾರ ದ ವತಿಯಿಂದ ಖಾಜಿಯನ್ನಾಗಿ ನೇಮಕ ಮಾಡಲಾಗುತ್ತಿದೆ. ಎಲ್ಲಾ ಸೈಯದ್‌ಗಳು ಇಸ್ಲಾಂನ ಹನಫಿ ಪಂಥದ ಸುನ್ನಿ ಪಂಗಡಕ್ಕೆ ಸೇರಿದವರಾಗಿದ್ದಾರೆ. ಖಾಜಿ ಸೈಯದ್ ತಜುದ್ದೀನರ ವಂಶಸ್ಥರುಗಳಲ್ಲಿ ಬಹುತೇಕ ಮಂದಿ ಷಾದಿಲಿಗಳು (ಷಾಜುಲಿ) ಸೂಫಿ ಪಂಥದ ಫಸ್ಸಿಯತುಷ್ ಷಾದಿಲಿಯಾ Archived 2020-01-14 ವೇಬ್ಯಾಕ್ ಮೆಷಿನ್ ನಲ್ಲಿ. ವನ್ನು ಪಾಲಿಸುತ್ತಾರೆ.
ಗಾಂಧಿ ವಸ್ತುಸಂಗ್ರಹಾಲಯ
[ಬದಲಾಯಿಸಿ]ಈ ವಸ್ತುಸಂಗ್ರಹಾಲಯವು ಮಹಾತ್ಮಾ ಗಾಂಧಿಯವರ ಬಗ್ಗೆ ಮಾಹಿತಿ ನೀಡುವುದಲ್ಲದೇ, ಪ್ರಮುಖವಾಗಿ ನಾಥೂರಾಮ್ ಗೋಡ್ಸೆಯಿಂದ ಹತ್ಯೆಯಾದಾಗ ಅವರು ಧರಿಸಿದ್ದ ರಕ್ತಸಿಕ್ತ ಮೂಲ ವಸ್ತ್ರದ ಭಾಗವನ್ನು ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಆ ವಸ್ತ್ರದ ಉಳಿದ ಭಾಗವನ್ನು ದೆಹಲಿಯ ಗಾಂಧಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ. ಗಾಂಧಿ ಸಂಗ್ರಹಾಲಯಗಳೆಂದು ಹೆಸರಾದ ಭಾರತದಲ್ಲಿನ 5 ವಸ್ತುಸಂಗ್ರಹಾಲಯಗಳಲ್ಲಿ (ಉಳಿದವು ಮುಂಬಯಿ, ಬರಖ್‌ಪುರ್, ಸಾಬರ್‌ಮತಿ/ಸಬರ್‌ಮತಿ ಮತ್ತು ಪಾಟ್ನಾ) ಈ ವಸ್ತುಸಂಗ್ರಹಾಲಯವೂ ಒಂದು.[೫೭] ಗಾಂಧಿಯವರ ಜೀವಿತ ಕಾಲದಲ್ಲಿನ ಅವರು ವಿಶ್ವದಾದ್ಯಂತದ ಅನೇಕ ಮುಖಂಡರೊಡನೆ ಕಾಣಿಸಿಕೊಂಡಿರುವ ಹಾಗೂ ಸ್ವಾತಂತ್ರ್ಯ ಸಂಗ್ರಾಮದ ಅನೇಕ ಸಂದರ್ಭಗಳ ಬಹಳಷ್ಟು ಛಾಯಾಚಿತ್ರಗಳನ್ನು ಕೂಡಾ ಇಲ್ಲಿ ಪ್ರದರ್ಶನಕ್ಕಿಡಲಾಗಿದೆ. ಮಾರ್ಟಿನ್ ಲೂಥರ್ ಕಿಂಗ್ Jr.ರು 1959ರಲ್ಲಿ ತಾವು ಕೈಗೊಂಡಿದ್ದ ಭಾರತ ಪ್ರವಾಸದಲ್ಲಿ ಈ ವಸ್ತುಸಂಗ್ರಹಾಲಯಕ್ಕೆ ಸಹಾ ಭೇಟಿ ನೀಡಿದರು ಹಾಗೂ ಇದರಿಂದ ಪ್ರಭಾವಿತರಾಗಿಯೇ ಮುಂದೆ ತಾವು ಜನಾಂಗೀಯ ತಾರತಮ್ಯಗಳ ವಿರುದ್ಧ ಶಾಂತಿಯುತ ಪ್ರತಿಭಟನೆ ಕೈಗೊಂಡರು ಎನ್ನಲಾಗುತ್ತದೆ [೫೮].ವಸ್ತುಸಂಗ್ರಹಾಲಯದ ಸಂದರ್ಶಕರಿಗೆ ಯಾವುದೇ ಪ್ರವೇಶ ಶುಲ್ಕವಿಲ್ಲ.
ತಿರುಪರಾಕುಂದ್ರಂ
[ಬದಲಾಯಿಸಿ]ತಿರುಪರಾಕುಂದ್ರಂ ಮಧುರೈ ನಗರ ಕೇಂದ್ರದಿಂದ 8 km ಅಥವಾ 5 ಮೈಲುಗಳಷ್ಟು ದೂರದಲ್ಲಿದೆ. ತಿರುಪರಾಕುಂದ್ರಂ ದೇವಾಲಯವು ಮಧುರೈನ ಜನರಂತೆಯೇ ಧಾರ್ಮಿಕ ಸಾಮರಸ್ಯಕ್ಕೆ ಸಂಕೇತವಾಗಿದೆ.
13ನೇ ಶತಮಾನದ ಮೊದಲಭಾಗದಲ್ಲಿ ಮದೀನಾದ ಹಜರತ್ ಸುಲ್ತಾನ್ ಸೈಯದ್ ಇಬ್ರಾಹಿಂ ಷಹೀದ್ ಬಾದುಷಾರೊಡನೆ ಜೆಡ್ಡಾದಿಂದ ಇಲ್ಲಿಗೆ ಬಂದಿದ್ದ (ಈಗ ರಾಮನಾಥಪುರಂ ಜಿಲ್ಲೆಯ ಇರವಾಡಿಯಲ್ಲಿರುವ) ಮಹಮ್ಮದೀಯ ಸಂತ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಷಹೀದ್ ರಡಿಯಲ್ಲಾಹ್ ತಾ'ಅಲ್ ಅನ್ಹುರ ಸಮಾಧಿಯಿರುವ, ಮಹಮ್ಮದೀಯ ದರ್ಗಾ(ದೇಗುಲ)ವೊಂದು ಬೆಟ್ಟದ ಮೇಲಿದೆ. ತಮಿಳುನಾಡು ಮತ್ತು ಕೇರಳದ ಎಲ್ಲಾ ಭಾಗಗಳ ಜನರು ಧರ್ಮದ ಹಂಗಿಲ್ಲದೇ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ರಾಮನಾಥಪುರಂ ಜಿಲ್ಲೆಯ ಇರವಾಡಿ ದರ್ಗಾ ಕ್ಕೆ ಭೇಟಿ ನೀಡಿದವರು ಈ ದರ್ಗಾಕ್ಕೆ ಭೇಟಿ ನೀಡಲೇಬೇಕು ಎಂಬ ನಿಯಮವಿದೆ. ಮಧುರೈ ಹಜರತ್‌ಗಳ ಲ್ಲಿ ಮೂರನೆಯವರಾದ ಸೈಯದ್ ಅಬ್ದುಸ್ಸಲಾಂ ಇಬ್ರಾಹಿಂ ಸಾಲಿಂ ಹಜರತ್ ಹಾಗೂ ಅವರ ಮಾತೃ ಮೂಲದ ಮೊಮ್ಮಗ ಸೈಯದ್ ಅಬ್ದುಸ್ ಸಲಾಂ ಇಬ್ರಾಹಿಂ ಸಾಹಿಬ್ ಹಜರತ್‌ರು ಹಜರತ್ ಸುಲ್ತಾನ್ ಸಿಕಂದರ್ ಬಾದುಷಾರನ್ನು ಸ್ತುತಿಸಿ ಅನೇಕ ಕವಿತೆಗಳನ್ನು ರಚಿಸಿದ್ದಾರೆ. ಇಲ್ಲಿಗೆ ಬೇಡಿಕೆಯ ಹರಕೆಯೊಡನೆ ಬರುವವರ ಬೇಡಿಕೆಗಳು ಬಹಳ ಬೇಗನೇ ಕೈಗೂಡುವುದೆಂಬ ನಂಬಿಕೆ ಇರುವ ಕಾರಣ ಅವರನ್ನು ಮುಸ್ತಜಬ್ ಅದ್ ದು'ಆ ಸಿಕಂದರ್ ಬಾದುಷಾ ಎಂದು ಕರೆಯುತ್ತಾರೆ. ಅರೇಬಿಕ್ ಭಾಷೆಯಲ್ಲಿ ಮುಸ್ತಜಬ್ ಅದ್ ದು'ಆ ಎಂದರೆ ಅಲ್ಲಾಹನಿಂದ ತನ್ನ ಬಿನ್ನಹಗಳನ್ನು ತಕ್ಷಣವೇ ಈಡೇರಿಸಿಕೊಳ್ಳಬಲ್ಲ ಸಂತ ಎಂದರ್ಥ. ಪ್ರತಿ ಹಿಜ್ರಿ ವರ್ಷದ ರಜಬ್ ಮಹಮ್ಮದೀಯ ತಿಂಗಳಿನ 17ನೇ ರಾತ್ರಿ ಹಜರತ್ ಸುಲ್ತಾನ್ ಸಿಕಂದರ್ ಬಾದುಷಾ ಷಹೀದ್‌ರ ಸ್ಮಾರಕ ವಾರ್ಷಿಕ ಉರುಸ್ ಉತ್ಸವವನ್ನು ನಡೆಸಲಾಗುತ್ತದೆ.
ಸಾಂಪ್ರದಾಯಿಕ ದಂತಕಥೆಯ ಪ್ರಕಾರ ಮುರುಗನ್ ದೇವಾನೈ/ದೇವಯಾನಿ/ದೇವೈನೈಳನ್ನು ಮುರುಗನ್‌ನ ಆರು ಪವಿತ್ರ ನಿವಾಸಗಳಲ್ಲಿ (ಅರುಪಾದೈ ವೀಡು, ಎಂದರೆ "ಆರು ಯುದ್ಧ ಶಿಬಿರಗಳು") ಮೊದಲನೆಯದಾದ [೫೯][೬೦] ತಿರುಪರಾಕುಂದ್ರಂ ಮುರುಗನ್ ದೇವಾಲಯದಲ್ಲಿ ಮದುವೆಯಾದನೆಂದು ಪ್ರತೀತಿ ಇದೆ
ಈ ಆಹ್ವಾನವೀಯುವ ಗುಹಾಲಯವು ಮೀನಾಕ್ಷಿ ದೇಗುಲಕ್ಕಿಂತ ಹಳೆಯದಾಗಿರುವುದಲ್ಲದೇ, ವಿಶೇಷವಾಗಿ ಮಹಿಳೆಯರು ಮೊಂಬತ್ತಿ/ಕಂದೀಲು/ದೀಪಗಳನ್ನು ಹಚ್ಚಿಡುವ ಅಥವಾ ದೇಗುಲದ ನೆಲದ ಸುತ್ತಲೂ ಕುಳಿತು ಬಣ್ಣಬಣ್ಣದ ಪುಡಿಗಳನ್ನು, ಬೂದಿ ಮತ್ತು ಹೂವುಗಳನ್ನು ಬಳಸಿ ಕೋಲಂ ಅಥವಾ ರಂಗೋಲಿ ವಿನ್ಯಾಸಗಳನ್ನು ದುರ್ಗಾದೇವಿಗೆ ಕಾಣಿಕೆಯಾಗಿ ಪ್ರದರ್ಶಿಸುವ ಶುಕ್ರವಾರಗಳಂದು ಮೀನಾಕ್ಷಿ ದೇಗುಲಕ್ಕಿಂತ ಪವಿತ್ರ ವಾತಾವರಣ ನಿರ್ಮಾಣವಾಗಿರುತ್ತದೆ[೩].
ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ
[ಬದಲಾಯಿಸಿ]ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂಬ ಹೆಸರು ಸಮಾಧಿ ಎಂಬರ್ಥ ಬರುವ ಪರ್ಷಿಯನ್ ಪದ ಗೊರ್ ನಿಂದ ವ್ಯುತ್ಪನ್ನಗೊಂಡಿದೆ. ಇಬ್ಬರು ಪ್ರಖ್ಯಾತ ಮಹಮ್ಮದೀಯ ಸಂತರು ಮತ್ತು ಮಧುರೈನ ರಾಜರುಗಳಾಗಿದ್ದ ಹಜರತ್ ಸುಲ್ತಾನ್ ಅಲಾವುದ್ದೀನ್ ಬಾದುಷಾ (ರಡಿಯಲ್ಲಾಹ್) ಮತ್ತು ಹಜರತ್ ಸುಲ್ತಾನ್ ಷಂಸುದ್ದೀನ್ ಬಾದುಷಾ (ರಡಿಯಲ್ಲಾಹ್)ರ ಸಮಾಧಿಗಳು ಇಲ್ಲಿರುವುದರಿಂದ ಈ ಪ್ರದೇಶವನ್ನು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ಎಂದು ಕರೆಯುತ್ತಾರೆ. ಮಧುರೈನ A.V.ಸೇತುವೆಯಿಂದ ಸುಂದರವಾದ ಹಸಿರು ಬಣ್ಣದ ಸಮಾಧಿಯನ್ನು ನೋಡಬಹುದಾಗಿದ್ದು, ಅದು ವೈಗೈ ನದಿಯ ಉತ್ತರದ ದಂಡೆಯ ಮೇಲಿರುವ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾ ಆಗಿದೆ. ಇಲ್ಲಿ ವಿಸ್ಮಯಗೊಳಿಸುವ ವಿಚಾರವೆಂದರೆ 20 ಅಡಿ ಎತ್ತರದ ಹಾಗೂ 70 ಅಡಿ ವ್ಯಾಸದ ಸಮಾಧಿಯು ಅಜ್ಹಗಾ ಬೆಟ್ಟದಿಂದ ತಂದಿದ್ದ ಏಕಶೀಲೆಯಲ್ಲಿ ನಿರ್ಮಿತವಾದುದಾಗಿದೆ. ತಮಿಳುನಾಡಿನ ಎಲ್ಲಾ ಭಾಗಗಳಿಂದಲೂ ಜನರು ಇಲ್ಲಿಗೆ ಬಂದು ಆಶೀರ್ವಾದಗಳನ್ನು ಪಡೆದು ತೃಪ್ತರಾಗಿ ಹಿಂತಿರುಗುತ್ತಾರೆ. ಇಬ್ಬರು ಮುಸ್ಲಿಂ ರಾಜರುಗಳು ಸಹೋದರರಾಗಿದ್ದು 13ನೇ ಶತಮಾನದಲ್ಲಿ ಓಮನ್‌ನಿಂದ ಇಲ್ಲಿಂದ ಇಸ್ಲಾಂ ಧರ್ಮವನ್ನು ಹರಡಲು ಬಂದು ಮಧುರೈನ ಉತ್ತರ ಭಾಗವನ್ನು ಆಳಿದ್ದರು. ಖಾಜಿ ಮಾರ್ ಬೀದಿಯ ಹಜರತ್ ಖಾಜಿ ಸೈಯದ್ ತಜುದ್ದೀನ್ ರಡಿಯಲ್ಲಾಹ್‌ರು ಅವರಿಗೆ Govt. ಖಾಜಿ(ಮಹಮ್ಮದೀಯ ಕಾನೂನು ಸಲಹೆಗಾರ ಮತ್ತು ನ್ಯಾಯಾಧೀಶ )ಯಾಗಿದ್ದರು. ದರ್ಗಾದಲ್ಲಿರುವ ಮಕ್‌ಬರಾದ ಆವರಣದ ಹೊರಭಾಗದಲ್ಲಿ ಒಂದು ಪ್ರಾಚೀನ ತಮಿಳು ಶಾಸನ/ಶಿಲಾಲೇಖವನ್ನು ನೋಡಬಹುದು. ಈ ಶಾಸನದ ಮೇಲಿನ ಮಾಹಿತಿಯ ಅರ್ಥವೇನೆಂದರೆ,
"ಸುಲ್ತಾನ್ ಅಲಾವುದ್ದೀನ್ ಬಾದುಷಾ, ಮತ್ತು ಸುಲ್ತಾನ್ ಷಂಸುದ್ದೀನ್ ಬಾದುಷಾ (ದೆಹಲಿಯ ಸುಲ್ತಾನ್‌ರುಗಳೆಂದು ಕರೆಯಲ್ಪಡುವ)ರ ವಂಶಸ್ಥರು ಆಗಿನ ರಾಜ ಕೂ(ನ್) ಪಾಂಡಿಯನ್‌ರಿಂದ ಒಂದು ಅಡಿ ಉದ್ದದ ಚಿನ್ನವನ್ನು ಕೊಟ್ಟು ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ಗೋರಿಪ್ಪಾಳಯಂ ದರ್ಗಾದ ಸ್ಥಳವನ್ನು ಹಾಗೂ ಇತರ ಆರು ಹಳ್ಳಿಗಳನ್ನು (ಅರ್ಥಾತ್ ಬೀಬಿಕುಲಂ, ಚೊಕ್ಕಿಕುಲಂ, ಚೋಲಿಕುಡಿ, ಚಿರುದೂರ್, ಕನ್ನನೆಂಡಲ್, ತಿರುಪ್ಪಾಲೈ ) 14,000 ಚಿನ್ನದ ನಾಣ್ಯಗಳ ಬೆಲೆಗೆ ಗೋರಿಪಾಲಯಂ/ಗೋರಿಪಾಳಯಂ/ಗೋರಿಪ್ಪಾಲಯಂ/ ಗೋರಿಪ್ಪಾಳಯಂ ದರ್ಗಾದ ನಿರ್ವಹಣೆಗಾಗಿ ಕೊಂಡುಕೊಂಡಿದ್ದಾರೆ". ವೀರಪ್ಪ ನಾಯಕ್ಕರ್‌ರ ಆಳ್ವಿಕೆಯ ಕಾಲದಲ್ಲಿ ದರ್ಗಾದ ಹಕ್‌ದಾರ್‌ರಿಗೂ ಹಾಗೂ ನಾಯಕ್ಕರ್ ಸರ್ಕಾರದ ನೌಕರರಿಗೂ ಆರು ಹಳ್ಳಿಗಳ ಕುರಿತಂತೆ ವಾಗ್ವಾದ ಆರಂಭವಾಯಿತು. ಈ ಮೊಕದ್ದಮೆಯನ್ನು ರಾಜ ವೀರಪ್ಪ ನಾಯಕ್ಕರ್‌ರ ಮುಂದೆ ಬಿನ್ನವಿಸಿದಾಗ, ವಿಚಾರಣೆ ನಡೆಸಿದ ರಾಜನು ಕೂ(ನ್) ಪಾಂಡಿಯನ್‌ರಿಂದ ಬರೆಸಲ್ಪಟ್ಟ ದಾಖಲೆಗಳನ್ನು ಪರಿಶೀಲಿಸಿ 1573 A.D.ಯಲ್ಲಿ ಆರು ಹಳ್ಳಿಗಳು ಹಾಗೂ ದರ್ಗಾದ ಪ್ರದೇಶವು ಸುಲ್ತಾನ್‌ರ ವಂಶಸ್ಥರಿಗೆ ಸೇರಿದ್ದು ಹಾಗೂ ಇದು ಸೂರ್ಯ ಚಂದ್ರರಿರುವವರೆಗೆ ಅವರ ಉಪಭೋಗದಲ್ಲೇ ಉಳಿಯತಕ್ಕದ್ದು, ಹಾಗೂ ಇದನ್ನು ಉಲ್ಲಂಘಿಸಿದವನು ಗಂಗಾನದಿಯ ದಂಡೆಯ ಮೇಲೆ ಗೋವಿನ ವಧೆ ಮಾಡಿದ ಪಾಪಕ್ಕೆ ಗುರಿಯಾಗುತ್ತಾನೆ ಎಂದು ತನ್ನ ತೀರ್ಪನ್ನು ನೀಡಿದನು"
ಈ ಶಾಸನವನ್ನು 13ನೇ ಶತಮಾನದಿಂದಲೂ ದರ್ಗಾ ಅಸ್ತಿತ್ವದಲ್ಲಿದೆಯೆಂಬುದನ್ನು ರುಜುವಾತುಪಡಿಸುವ ಪ್ರಮಾಣವಾಗಿ ಗಣಿಸಲಾಗಿದೆ. ಪ್ರತಿ ಹಿಜ್ರಿ ವರ್ಷದ ರಬಿ ಅಲ್-ಅವ್ವಲ್ ಮಹಮ್ಮದೀಯ ತಿಂಗಳಿನ 15ನೇ ರಾತ್ರಿ ಈ ದರ್ಗಾದ ವಾರ್ಷಿಕ ಉರುಸ್ ಉತ್ಸವವನ್ನು ನಡೆಸಲಾಗುತ್ತದೆ.
ಕೂದಲ್ ಅಜ್ಹಗರ್ ಕೋಯಿಲ್
[ಬದಲಾಯಿಸಿ]ಇಲ್ಲಿ ನವಗ್ರಹಗಳನ್ನೂ ಹೊಂದಿರುವ ಸುಂದರವಾದ ವಿಷ್ಣು ದೇವಾಲಯವಿದೆ (ಸಾಮಾನ್ಯವಾಗಿ ನವಗ್ರಹಗಳು ಶಿವ ದೇವಾಲಯಗಳಲ್ಲಿ ಮಾತ್ರವೇ ಇರುತ್ತವೆ). ಈ ದೇವಾಲಯಕ್ಕೆ ಸಮೀಪದಲ್ಲಿಯೇ ಹಯಗ್ರೀವರ್ (ಕುದುರೆ/"ಹಯ"ಗ್ರೀವ ಅವತಾರವಿದು) ಪ್ರಮುಖ ದೇವರಾಗಿರುವ ಹಯಗ್ರೀವರ್ ದೇವಾಲಯವಿದೆ. ನೀರಿನಲ್ಲಿ ಮುಳುಗಿದ್ದ ಮಹಾಕಾವ್ಯವನ್ನು ಮತ್ತೆ ಭೂಮಿಗೆ ಹಯಗ್ರೀವರ್ ದೇವರೇ ತಂದ ಕಾರಣ ಬಹಳಷ್ಟು ಜನ ವಿದ್ಯಾರ್ಥಿಗಳು ತಮ್ಮ ದೈನಂದಿನ ಪ್ರಾರ್ಥನೆಯನ್ನು ಇಲ್ಲಿಯೇ ಮಾಡುತ್ತಾರೆ. ನಗರದ ಮಧ್ಯಭಾಗದಲ್ಲಿರುವ ದೇವಾಲಯಗಳಲ್ಲಿ ಇದೂ ಒಂದಾಗಿದೆ. ಇದು ಖಾಜಿ ಮಾರ್ ಬೃಹತ್ ಮಸೀದಿ (ಪೆರಿಯಾ ಪಲ್ಲಿವಾಸಲ್)ಯ ಉತ್ತರಕ್ಕೆ 100 mtrsಗಳಷ್ಟು ದೂರದಲ್ಲಿದ್ದರೆ, ಸುನ್ನಂಬುಕರ ಬೀದಿಯ ದಕ್ಷಿಣಕ್ಕಿದೆ. ಈ ದೇವಾಲಯವು ಮೀನಾಕ್ಷಿ ದೇವಾಲಯಕ್ಕಿಂತ ಹಳೆಯದೆಂದು ಹೇಳಲಾಗುತ್ತದೆ.
ಈ ದೇವಾಲಯದ ಬಳಿಯಲ್ಲೇ ಮತ್ತೊಂದು ಶಿವ ದೇವಾಲಯವಿದೆ ಹಾಗೂ ಆ ದೇವಾಲಯವನ್ನು ನನ್ಮೈ ತರುವರ್ ದೇವಾಲಯವೆಂದು ಕರೆಯುತ್ತಾರೆ. ದಂತಕಥೆಯ ಪ್ರಕಾರ ತಾನು ಮಧುರೈನ ಚಕ್ರವರ್ತಿ/ರಾಜನಾಗಿದ್ದಾಗ ಸ್ವತಃ ಶಿವನೇ ಕಟ್ಟಿಸಿದ್ದ ದೇವಾಲಯವಾಗಿದೆ. ಈಗಲೂ ಸಹಾ ದೇವಾಲಯದ ಕರುವರಿಯಲ್ಲಿ ಮೀನಾಕ್ಷಿ ಲಿಂಗವನ್ನು ಪೂಜಿಸುತ್ತಿರುವ ಹಾಗೂ ಪೂರ್ಣರೂಪದ ಶಿವನ ಭವ್ಯ ಮೂರ್ತಿಯನ್ನು ಕಾಣಬಹುದು. ಮತ್ತೊಂದು ಗಮನಾರ್ಹ ವೈಷ್ಣವ/ವಿಷ್ಣು ದೇವಾಲಯವೆಂದರೆ ಕೋಡಲ್ ಅಜ್ಹಗರ್ ದೇವಾಲಯದ ಬಳಿಯಿರುವ ಕೃಷ್ಣ ದೇವರಿಗೆ ಮೀಸಲಾಗಿರುವ ಮದನ ಗೋಪಾಲನ್ ದೇವಾಲಯವಾಗಿದೆ.
St. ಮೇರಿಯ ಕ್ಯಾಥೆಡ್ರಲ್ ಚರ್ಚ್/ಇಗರ್ಜಿ
[ಬದಲಾಯಿಸಿ]ಮಧುರೈನ St. ಮೇರಿಯ ಕ್ಯಾಥೆಡ್ರಲ್ ಮಧುರೈ ಬಿಷಪ್ಪರ ಪ್ರಾಂತ್ಯದ ರೋಮನ್ ಕ್ಯಾಥೊಲಿಕ್ ಪೀಠವಾಗಿದೆ. ಇದು ಭಾರತದಲ್ಲಿರುವ ಪ್ರಾಚೀನ ರೋಮನ್ ಕ್ಯಾಥೊಲಿಕ್ ಇಗರ್ಜಿಗಳಲ್ಲಿ ಒಂದಾಗಿದ್ದು ಮಧುರೈ ರೈಲು ನಿಲ್ದಾಣದ ಆಗ್ನೇಯ ದಿಕ್ಕಿನಲ್ಲಿ 2 km ದೂರದಲ್ಲಿ ಹಾಗೂ ತಿರುಮಲೈ ನಾಯಕ್ ಮಹಲ್‌ನಿಂದ 200 ಮೀಟರ್‌ಗಳಷ್ಟು ದೂರದಲ್ಲಿದೆ.
ರಾಜಕೀಯ
[ಬದಲಾಯಿಸಿ]ರಾಜ್ಯ ಶಾಸನಸಭೆ
[ಬದಲಾಯಿಸಿ]ಮಧುರೈ ನಗರವನ್ನು ರಾಜ್ಯ ಶಾಸನಸಭೆಯ ಮೂರು ಕ್ಷೇತ್ರಗಳನ್ನಾಗಿ ವಿಭಜಿಸಲಾಗಿದೆ. ಅವುಗಳೆಂದರೆ ಪೂರ್ವ ಮಧುರೈ, ಕೇಂದ್ರ ಮಧುರೈ ಮತ್ತು ಪಶ್ಚಿಮ ಮಧುರೈ. 2009ರ ಗಡಿನಿರ್ಣಯದ ನಂತರ, ಉತ್ತರ ಮಧುರೈ ಮತ್ತು ದಕ್ಷಿಣ ಮಧುರೈ ಕ್ಷೇತ್ರಗಳನ್ನು ರಚಿಸಲಾಗಿದೆ. CPI ಮತ್ತು CPMಗಳಂತಹಾ ಎಡ ಪಕ್ಷಗಳಿಗೆ ಗಮನಾರ್ಹ ಬೆಂಬಲವಿದೆ, ಇದು ವಿಶೇಷವಾಗಿ ಪೂರ್ವ ಮಧುರೈನಲ್ಲಿ ಹೆಚ್ಚು. ಸಾಮಾನ್ಯವಾಗಿ ಎಡ ಪಕ್ಷಗಳು ಇತ್ತೀಚೆಗೆ DMK ಅಥವಾ ADMKಗಳೊಂದಿಗೆ ಮೈತ್ರಿ ಮಾಡಿಕೊಂಡಿದ್ದು, ಪರಿಣಾಮವಾಗಿ ಮಧುರೈ CPM MLAಗಳನ್ನು ಹೊಂದಿದೆ. ಆದರೆ 1977ರಿಂದ, 1996 ಮತ್ತು 2001ರಲ್ಲಿ ತಮಿಳು ಮಾನಿಲಾ ಕಾಂಗ್ರೆಸ್‌ನವರು DMK ಮತ್ತು ADMKಗಳೊಂದಿಗೆ ಮೈತ್ರಿ ಮಾಡಿಕೊಂಡಾಗ ಮೇಲುಗೈ ಸಾಧಿಸಿದ್ದನ್ನು ಹೊರತುಪಡಿಸಿದರೆ ADMK ಮತ್ತು DMK ಪಕ್ಷಗಳು ಈ ಪ್ರದೇಶದಲ್ಲಿ ಪ್ರಭಾವಶಾಲಿಯಾಗಿವೆ. ಹಾಗೆಯೇ 1984 ಮತ್ತು 1991ರಲ್ಲಿ ಕಾಂಗ್ರೆಸ್ ಕೂಡಾ ADMKನೊಂದಿಗೆ ಮೈತ್ರಿ ಮಾಡಿಕೊಂಡಾಗ ಗೆಲುವು ಕಂಡಿತ್ತು. ರಾಜಕಾರಣಿಯಾದ ಬದಲಾದ ನಟ M.G. ರಾಮಚಂದ್ರನ್‌ರು ಗೆಲುವು ಪಡೆದ ಅನೇಕ ಕ್ಷೇತ್ರಗಳಲ್ಲಿ ಪಶ್ಚಿಮ ಮಧುರೈ ಕ್ಷೇತ್ರವು ಸಹಾ ಒಂದು. 1980ರ ತಮಿಳುನಾಡು ಶಾಸನಸಭೆಯ ಮರುಚುನಾವಣೆಯಲ್ಲಿ ಈ ಕ್ಷೇತ್ರದಿಂದ ಗೆದ್ದಿದ್ದರು.
ಪೂರ್ವ ಮಧುರೈ ಮತಗಳು ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು |
||
ವರ್ಷ | AIADMK+ | DMK+ |
---|---|---|
2006 | 43.7% 57,208 | 41.0% 53,741 |
2001 | 48.1% 48,465 | 47.4% 47,757 |
1996 | 17.7% 17,465 | 62.4% 61,723 |
1991 | 63.4% 59,586 | 34.7% 32,664 |
1989* | 20.3% 20,871 | 44.3% 45,579 |
1984 | 47.9% 45,131 | 51.2% 48,247 |
1980 | 59.6% 57,019 | 37.6% 35,953 |
1977 | 43.1% 32,342 | 21.6% 16,211 |
ಕೇಂದ್ರ ಮಧುರೈ ಶಾಸನಸಭೆ ಚುನಾವಣೆಗಳ ಮೈತ್ರಿಯಿಂದ ದೊರಕಿದ ಮತಗಳು |
||
ವರ್ಷ | AIADMK+ | DMK+ |
---|---|---|
2006 | 38.2% 35,992 | 45.8% 43,185 |
2001 | 46.5% 34,393 | 46.3% 34,246 |
1996 | 14.6% 11,841 | 46.7% 38,010 |
1991 | 62.3% 47,325 | 35.2% 26,717 |
1989* | 13.3% 11,243 | 46.0% 33,484 |
1984 | 50.8% 41,272 | 48.0% 39,012 |
1980 | 58.1% 45,700 | 40.2% 31,566 |
1977 | 39.9% 29,399 | 19.9% 14,676 |
- ಸೂಚನೆ: 1989ರಲ್ಲಿ, ಜಾನಕಿ ಬಣ ಮತ್ತು ಜಯಲಲಿತಾ ಬಣವೆಂದು ADMK ಎರಡು ಬಣಗಳಾಗಿ ವಿಭಜಿತವಾಯಿತು. ಜಾನಕಿ ಬಣ ಮಾತ್ರವೇ ಪೂರ್ವ ಮಧುರೈ ಮತ್ತು ಕೇಂದ್ರ ಮಧುರೈ ಕ್ಷೇತ್ರಗಳಲ್ಲಿ ಸ್ಪರ್ಧಿಸಿತು.
ಲೋಕಸಭೆ
[ಬದಲಾಯಿಸಿ]ಮಧುರೈನ ಎಲ್ಲಾ ಐದು ಕ್ಷೇತ್ರಗಳೂ ಮಧುರೈ (ಲೋಕಸಭಾ ಕ್ಷೇತ್ರ )ದ ಭಾಗವಾಗಿದೆ[೬೧]
ಮಧುರೈನ ಸುತ್ತಮುತ್ತಲಿರುವ ಪ್ರವಾಸೀ ತಾಣಗಳು
[ಬದಲಾಯಿಸಿ]ಮಧುರೈ ನಗರವು ಆಯಕಟ್ಟಿನ ಸ್ಥಳದಲ್ಲಿರುವುದರಿಂದ ದಕ್ಷಿಣ ತಮಿಳುನಾಡಿನ ಪ್ರವಾಸೋದ್ಯಮ ಕೇಂದ್ರವಾಗಿ ರೂಪುಗೊಂಡಿದೆ. ಮಧುರೈನ ಸುತ್ತಮುತ್ತಾ ಸಂದರ್ಶಕರು ನೋಡಬಯಸುವ ಪ್ರವಾಸೀ ಸ್ಥಳಗಳು Archived 2009-12-02 ವೇಬ್ಯಾಕ್ ಮೆಷಿನ್ ನಲ್ಲಿ. ಅನೇಕವಿವೆ.
ನಗರದಿಂದ ಸುಮಾರು 25 km ದೂರವಿರುವ ಇದೊಂದು ವಿಷ್ಣು ದೇವಾಲಯ. ಈ ಸ್ಥಳವನ್ನು ಬೆಟ್ಟಗಳು ಸುತ್ತುವರೆದಿವೆ. ಈ ದೇವಾಲಯದ ಪ್ರಧಾನ ದೇವತೆಯೆಂದರೆ ಕಲ್ಲಜ್ಹಗರ್. ಚಿತ್ತಿರೈ ತಿರುವಿಜ್ಹಾ ಎಂಬ ತಮಿಳು ಹೊಸ ವರ್ಷದ ಉತ್ಸವವನ್ನು ಅನೇಕ ಶತಮಾನಗಳಿಂದ ಇದೇ ದೇವಾಲಯದಲ್ಲಿ ಆಚರಿಸಿಕೊಂಡು ಬರಲಾಗುತ್ತಿದೆ. ಅಜ್ಹಗರ್ ಕೋವಿಲ್‌ನ ಪ್ರವೇಶ ದ್ವಾರದಲ್ಲಿ ಬದರಿ ನಾರಾಯಣ ದೇವಾಲಯವನ್ನು ಸಹಾ ನೋಡಬಹುದು, ಇದನ್ನು ಉತ್ತರ ಭಾರತದ ಕೈಲಾಸ ಪರ್ವತದಲ್ಲಿರುವ ಬದ್ರೀನಾಥ್‌ನಂತೆಯೇ ನಿರ್ಮಿಸಲಾಗಿದೆ: ಇಲ್ಲಿನ ಪ್ರಮುಖ ಮೂರ್ತಿಯು, ನರ ನಾರಾಯಣರಿಂದ ಸುತ್ತುವರೆಯಲ್ಪಟ್ಟು ಧ್ಯಾನಮಗ್ನ ಭಂಗಿಯಲ್ಲಿರುವ ವಿಷ್ಣುವನ್ನು ಬಿಂಬಿಸುತ್ತದೆ.
ಕಲ್ಲಲಾಗರ್ ತಮಿಳುನಾಡಿನ ಪ್ರಸಿದ್ಧ ಹಬ್ಬವಾದ/ಉತ್ಸವವಾದ ಚಿತ್ತಿರೈ ಉತ್ಸವದ ಹಿಂದಿನ ದಿನ ದೇವಾಲಯಕ್ಕೆ ಭೇಟಿ ನೀಡುತ್ತಾನೆಂದು ನಂಬಿಕೆ ಇದೆ. ಆತ ತನ್ನ ಪ್ರಯಾಣವನ್ನು ಬದರಿ ನಾರಾಯಣ ದೇವಾಲಯವನ್ನು ಹಾದು ಅಲಗರ್ ಕೋಯಿಲ್‌ನಿಂದ ಆರಂಭಿಸುತ್ತಾನೆ. ಇದೇ ಸಮಯದಲ್ಲಿ ಆತ ವೈಗೈ ನದಿ ಸಮೀಪದ ಮಧುರೈನ ಪೂರ್ವ ಹೊರವಲಯದಲ್ಲಿರುವ ವಂಡಿಯೂರಿಗೆ ಭೇಟಿ ನೀಡುತ್ತಾನೆ. ನಂಬಿಕೆಯ ಪ್ರಕಾರ ಆತ ತನ್ನ ಸಹೋದರಿಯ ಮದುವೆಗೆ ತಾನು ತಡವಾದೆ ಎಂಬುದನ್ನು ಅರಿತು ನದಿಯನ್ನು ದಾಟಲು ನಿರಾಕರಿಸಿ/ದಾಟದೇ ನಿರಾಶೆಯಿಂದ ಅಲಗರ್ ಕೋಯಿಲ್‌ಗೆ ಮರಳುತ್ತಾನೆ ಎಂಬ ನಂಬಿಕೆ ಇದೆ. ಇಲ್ಲಿಯ ಬೆಟ್ಟಗಳ ಮೇಲೆ ಪಜಮುಡಿರ್‌ಚೋಳೈ ಎಂಬ ಹೆಸರಿನಿಂದ ಪ್ರಸಿದ್ಧವಾದ ಮುರುಗನ್ ದೇವರ ದೇವಾಲಯವಿದೆ. ಈ ದೇವಾಲಯವು ಮುರುಗನ್‌ನ ಅರುಪಾದೈ ವೀಡುಗಳಲ್ಲಿ ಕೊನೆಯದಾಗಿದ್ದು ಇಲ್ಲಿ ಆತನನ್ನು ಪತ್ನಿಯರಾದ ದೇವನೈ ಮತ್ತು ವಲ್ಲಿಯರ ಜೊತೆಗೆ ನೋಡಬಹುದು.
ಮಧುರೈನಿಂದ ಸುಮಾರು 120 kmಗಳಷ್ಟು ದೂರದಲ್ಲಿ ಭಾರತದಲ್ಲಿನ ಅತ್ಯಂತ ಸುಂದರ ಗಿರಿಧಾಮಗಳಲ್ಲಿ ಒಂದಾದ ಕೊಡೈಕೆನಾಲ್/ಕೊಡೈಕನಾಲ್ ನಗರವಿದೆ. ಇದನ್ನು ಬೆಟ್ಟಗಳ ರಾಜಕುಮಾರಿ/ರಾಣಿ ಎಂದೂ ಕರೆಯುತ್ತಾರೆ. ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಸಮುದ್ರ ಮಟ್ಟದಿಂದ 2,130 mಗಳಷ್ಟು ಎತ್ತರದಲ್ಲಿ ಕೊಡೈ ನಗರವಿದೆ.
ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 70 km ದೂರದಲ್ಲಿ ವೈಗೈ ಅಣೆಕಟ್ಟು ಇದೆ. ವಾರಾಂತ್ಯದಲ್ಲಿ ದೀಪಗಳ ಅಲಂಕಾರದಲ್ಲಿ ಈ ಅಣೆಕಟ್ಟು ಬೆರಗು ಹುಟ್ಟಿದುವಂತಹಾ ದೃಶ್ಯ ವೈಭವ ಹೊಂದಿರುತ್ತದೆ.
ಪವಿತ್ರ ನಗರವಾದ ರಾಮೇಶ್ವರಂ ದೇವಾಲಯಗಳ ನಗರವಾದ ಮಧುರೈನಿಂದ ಸುಮಾರು 164 ಕಿಲೋಮಿಟರ್‌ಗಳಷ್ಟು ದೂರದಲ್ಲಿದೆ.
- ಸುರುಳಿ ಜಲಪಾತ
ಶ್ರೀಮಂತ ಸಸ್ಯರಾಶಿ ಮತ್ತು ಪುಷ್ಪರಾಶಿಗಳ ಮಧ್ಯವಿರುವ ಸುರುಳಿ ಜಲಪಾತವು ಸೂಕ್ತ ಪಿಕ್‌ನಿಕ್ ಸ್ಥಳವಾಗಿದೆ. ಇದು ಮಧುರೈನಿಂದ ಟೇಕ್ಕಡಿಗೆ ಹೋಗುವ ದಾರಿಯಲ್ಲಿ ಸುಮಾರು 123 kmಗಳಷ್ಟು ದೂರದಲ್ಲಿದೆ.
- ಟೇಕ್ಕಡಿ / ಕುಮಿಲಿ
ಟೇಕ್ಕಡಿಯು ಕೇರಳದ ಇಡುಕ್ಕಿ ಜಿಲ್ಲೆಯ ಪೆರಿಯಾರ್ ವನ್ಯಜೀವಿಧಾಮವು ವಿಶ್ವದ ಅತ್ಯಾಕರ್ಷಕ ನೈಸರ್ಗಿಕ ವನ್ಯಜೀವಿ ಸಂರಕ್ಷಣಾಲಯವಾಗಿದೆ. 360;km²ದಷ್ಟು ದಟ್ಟ ಹಸಿರು ಕಾನನವನ್ನು ಒಳಗೊಂಡಿರುವ 777 km²ದಷ್ಟು ವಿಸ್ತಾರವಾದ ಪ್ರದೇಶದಲ್ಲಿ ಹರಡಿರುವ ಪೆರಿಯಾರ್ ವನ್ಯಜೀವಿಧಾಮವನ್ನು ಹುಲಿಗಳ ಅಭಯತಾಣವೆಂದು 1978ರಲ್ಲಿ ಘೋಷಿಸಲಾಗಿದೆ. ಇದು ಮಧುರೈನಿಂದ 155 kmಗಳಷ್ಟು ದೂರದಲ್ಲಿದೆ ಹಾಗೂ ಅನೇಕ ಪ್ರಾಣಿ ಪಕ್ಷಿಗಳಿಗೆ ನೆಲೆಯಾಗಿದೆ.
- ಕೌಟ್ರಲ್ಲಂ (ತಿರುನಲ್ವೇಲಿಯ ಬಳಿ)
ಜಲಪಾತಗಳಿಗೆ ಹೆಸರುವಾಸಿಯಾದ ಇದು ಮಧುರೈನಿಂದ 160 kmಗಳಷ್ಟು ದೂರದಲ್ಲಿದೆ. 'ದಕ್ಷಿಣದ ಖನಿಜಜಲ ಚಿಲುಮೆ' ಎಂದು ಹೆಸರಾಗಿರುವ ಈ ಪ್ರದೇಶದಲ್ಲಿ ಅಪಾರವಾದ ನೈಸರ್ಗಿಕ ಸೌಂದರ್ಯವಿದೆ.
ಇದನ್ನೂ ನೋಡಿರಿ
[ಬದಲಾಯಿಸಿ]- ಮಧುರೈನ ಮೀನಾಕ್ಷಿ ಅಮ್ಮನ್ ದೇವಾಲಯ ದ 360 ಡಿಗ್ರಿ ಪರಸ್ಪರ ವರ್ತನೆಯ/ಇಂಟರ್ಯಾಕ್ಟೀವ್ ಅವಾಸ್ತವಿಕ ನೋಟ Archived 2009-10-24 ವೇಬ್ಯಾಕ್ ಮೆಷಿನ್ ನಲ್ಲಿ.
- ಮಧುರೈನ ಸಾಫ್ಟ್‌ವೇರ್/ತಂತ್ರಾಂಶ ಕಂಪೆನಿಗಳು
- ಮಧುರೈ (ಲೋಕಸಭಾ ಕ್ಷೇತ್ರ )
- ಮಧುರೈ ಜಿಲ್ಲೆ
- ಮಧುರೈ ಉಪಭಾಷೆ
- ಮಧುರೈ ಜಿಲ್ಲೆಯಲ್ಲಿರುವ ಮಹಾವಿದ್ಯಾಲಯಗಳು ಹಾಗೂ ಸಂಸ್ಥೆಗಳ ಪಟ್ಟಿ
- ಭಾರತೀಯ ರೈಲ್ವೆಯ ಪ್ರಯಾಣಿಕರ ವಿಚಾರಣಾ ಸೇವೆ ಭಾರತ್ರೈಲ್ Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖಗಳು
[ಬದಲಾಯಿಸಿ]- ↑ "First woman Mayor for Madurai". The Hindu. Archived from the original on ಅಕ್ಟೋಬರ್ 1, 2007. Retrieved October 29, 2006.
{{cite web}}
: Unknown parameter|dateformat=
ignored (help) - ↑ ೨.೦ ೨.೧ "TN(India)Census within Corporation limit". Tamil Nadu Census. Archived from the original on 2009-06-07. Retrieved 2009-09-24.
- ↑ ೩.೦ ೩.೧ ೩.೨ ೩.೩ ೩.೪ ಫ್ರಾ/ಫ್ರಮ್ಮರ್ಸ್ ಇಂಡಿಯಾ ಲೇ: ಪಿಪ್ಪ ಡೆಬ್ರೂನ್, ಕೀತ್ ಬೇನ್, ನೀಲೋಫರ್ ವೆಂಕಟರಾಮನ್, ಷೋನಾರ್ ಜೋಷಿ
- ↑ "Tamil Nādu - City Population - Cities, Towns & Provinces - Statistics & Map". Citypopulation.de. Retrieved 2009-09-23.
- ↑ "Madurai, Temple Town of South India. Cultural capital of Tamilnadu". Madurai.com. Archived from the original on 2009-07-07. Retrieved 2009-09-23.
- ↑ ೬.೦ ೬.೧ ೬.೨ ೬.೩ "History of Madurai". www.madurai.com. Archived from the original on 2009-07-08. Retrieved 2009-09-23.
- ↑ "Temperature and Rainfall chart". Nirvana Tour. Archived from the original on 2008-12-29. Retrieved 2008-05-25.
- ↑ "Madurai General Information". Archived from the original on 2009-07-08. Retrieved 2008-06-15.
- ↑ "Maps, Weather, and Airports for Madurai, India". Falling Rain Genomics, Inc. Retrieved 2008-06-15.
- ↑ "Women Development" (PDF). Archived from the original (PDF) on 2009-03-04. Retrieved 2009-12-22.
- ↑ "Welcome to Madurai Corporation - All About Madurai Corporation". 203.101.40.168. Archived from the original on 2009-02-13. Retrieved 2009-09-23.
- ↑ "Madurai Corporation bags three national awards". The Hindu. 2008-12-09. Archived from the original on 2008-12-12. Retrieved 2009-09-24.
- ↑ "Madras High Court". Hcmadras.tn.nic.in. 2004-07-24. Archived from the original on 2009-08-23. Retrieved 2009-09-23.
- ↑ ":: Welcome to Passport Office Madurai ::". Indian Passports. Retrieved 2009-09-24.
- ↑ "ಆರ್ಕೈವ್ ನಕಲು". Archived from the original on 2008-04-16. Retrieved 2010-08-08.
- ↑ "Fassiyathush Shazuliya | tariqathush Shazuliya | Tariqa Shazuliya | Sufi Path | Sufism | Zikrs | Avradhs | Daily Wirdh | Thareeqush shukr |Kaleefa's of the tariqa | Sheikh Fassy | Ya Fassy | Sijl | Humaisara | Muridheens | Prostitute Entering Paradise". Shazuli.com. 2007-04-02. Archived from the original on 2009-10-05. Retrieved 2009-09-23.
- ↑ David M. Cheney. "Madurai (Archdiocese)". [Catholic-Hierarchy]. Retrieved 2009-09-23.
- ↑ "Elegant ambience". The Hindu. October 16, 2004. Archived from the original on 2007-10-17. Retrieved 2007-03-09.
- ↑ "Indian Railways Time Tables, PNR, Route, Fares, Arrivals/Departures, Running Status - eRail.in (Better Way To Search Trains)". eRail.in. Retrieved 2009-09-23.
- ↑ "Indian Train - Indian Railway Enquiry, PNR Status, Live Train Status, Seat Availability". indiantrain.in. Retrieved 11 July 2021.
- ↑ "Madurai Kamaraj University official website". Archived from the original on 2008-12-20. Retrieved 2008-12-25.
- ↑ "Welcome to The Madura College - Over 120 Years". Maduracollege.org. Archived from the original on 2009-11-03. Retrieved 2009-09-23.
- ↑ "Madurai directory". Retrieved 2009-03-22.
- ↑ "National Instruments opens its first training academy in the world in Madurai". Archived from the original on 2009-01-22. Retrieved 2008-12-24.
- ↑ "Intel to aid engineering curriculum development". Archived from the original on 2008-11-05. Retrieved 2008-12-31.
- ↑ "INstitutions with Oracle Tie Up". Archived from the original on 2009-03-16. Retrieved 2009-04-18.
- ↑ "IBM Rational Center of Excellence at KLN". Retrieved 2008-12-24.
- ↑ "HCL chooses Madurai for radio frequency project". Archived from the original on 2008-12-26. Retrieved 2008-12-24.
- ↑ "Madurai- gateway to prosperity". Retrieved 2008-12-24.
- ↑ http://www.dhan.org/tda
- ↑ "Madurai — a gateway to prosperity". Retrieved 2008-12-24.
- ↑ "Aravind Eye Care System -official website". Archived from the original on 2008-12-21. Retrieved 2008-12-24.
- ↑ "Bangladesh, Indonesia seek Madurai eye hospital's expertise". Archived from the original on 2009-01-25. Retrieved 2008-12-24.
- ↑ "Apollo Hospitals - official website". Archived from the original on 2008-12-26. Retrieved 2008-12-24.
- ↑ "TVS Group". Archived from the original on 2009-01-27. Retrieved 2009-01-24.
- ↑ "Hi-Tech Arai to set up Rs 25 cr plant in Madurai". Retrieved 2009-01-24.
- ↑ ೩೭.೦ ೩೭.೧ "An industry that can bolster the economy of Madurai". Archived from the original on 2007-10-26. Retrieved 2009-01-24.
- ↑ "Industrial estate planned in Madurai". Retrieved 2009-01-24.
- ↑ "Rubber cluster to be established in Madurai". Archived from the original on 2009-06-04. Retrieved 2009-01-24.
- ↑ "BHEL ancillary units' estate planned". Retrieved 2009-01-24.
- ↑ "Caparo to be No 1 in metal sector". Retrieved 2009-01-24.
- ↑ "Madurai is next BPO hub in the making". Retrieved 2008-12-23.
- ↑ "Oracle plans to open a new centre in Madurai". Archived from the original on 2008-12-08. Retrieved 2008-12-23.
- ↑ "ELCOT website". Archived from the original on 2008-12-19. Retrieved 2008-12-24.
- ↑ "Work on provision of infrastructure begins in Information Technology parks". Archived from the original on 2008-12-10. Retrieved 2008-12-24.
- ↑ "Infosys eyeing Tier-II cities for expansion- Software-Infotech-The Economic Times". Economictimes.indiatimes.com. 2009-07-28. Retrieved 2009-09-23.
- ↑ "Rock, shop and drop through the year". Archived from the original on 2008-12-26. Retrieved 2008-12-23.
- ↑ "Heritance Hotels = 2009-01-11".
- ↑ "Aitken Spence launches Heritance Madurai in India = 2008-12-28". Archived from the original on 2008-12-26. Retrieved 2009-12-22.
- ↑ "Hotels in Madurai= 2009-01-09".
- ↑ "Where to Eat in madurai = 2009-01-09". Archived from the original on 2009-08-10. Retrieved 2009-12-22.
- ↑ ೫೨.೦ ೫೨.೧ "ಆರ್ಕೈವ್ ನಕಲು". Archived from the original on 2011-07-21. Retrieved 2009-12-22.
- ↑ http://www.templenet.com/Tamilnadu/Madurai/festival1.html
- ↑ http://www.madurai.org.uk/culture/float-festival.html
- ↑ "ಆರ್ಕೈವ್ ನಕಲು". Archived from the original on 2009-10-03. Retrieved 2009-12-22.
- ↑ "Tourism works around temple to be over by March". Archived from the original on 2007-11-07. Retrieved 2009-01-24.
- ↑ "Gandhi relics should be a medium to spread the message: Gandhi Museum director". Archived from the original on 2012-03-15. Retrieved 2009-03-08.
- ↑ "Madurai soil for Cleveland". Archived from the original on 2007-10-17. Retrieved 2009-01-24.
- ↑ "Tirupparankundram". Retrieved 2007-05-26.
- ↑ "The first Aru Padai Veedu". Retrieved 2007-05-25.
- ↑ "List of Parliamentary and Assembly Constituencies" (PDF). Tamil Nadu. Election Commission of India. Archived from the original (PDF) on 2008-10-31. Retrieved 2008-10-08.
- Pages using the JsonConfig extension
- CS1 errors: unsupported parameter
- Short description is different from Wikidata
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- Pages using gadget WikiMiniAtlas
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from August 2009
- Commons category link from Wikidata
- ಭಾರತದ ಪಟ್ಟಣಗಳು
- ಮಧುರೈ
- ಹಿಂದೂ ಪವಿತ್ರ ನಗರಗಳು
- ತಮಿಳುನಾಡಿನ ನಗರಗಳು ಮತ್ತು ಪಟ್ಟಣಗಳು
- ಮಧುರೈ ರೈಲ್ವೇ ವಿಭಾಗ
- ಭಾರತೀಯ ರೈಲ್ವೆಯ ವಿಭಾಗಗಳು
- ದಕ್ಷಿಣ ರೈಲ್ವೆ (ಭಾರತ ) ವಲಯ
- ತಮಿಳುನಾಡಿನ ನಗರಗಳು