ವಿಷಯಕ್ಕೆ ಹೋಗು

ದೇವಗಂಧಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ
ಪರಿಕಲ್ಪನೆಗಳು
ಶೃತಿ · ಸ್ವರ · ಅಲಂಕಾರ · ರಾಗ
ತಾಳ · ಘರಾನಾ · ಥಾಟ್
ಸಂಗೀತೋಪಕರಣಗಳು
ಭಾರತೀಯ ಸಂಗೀತೋಪಕರಣಗಳು
ಶೈಲಿಗಳು
ದ್ರುಪದ್ · ಧಮಾರ್ · ಖಯಾಲ್ · ತರಾನ
ಠುಮ್ರಿ · ದಾದ್ರ · ಖವ್ವಾಲಿ · ಘಝಲ್
ವಿದಾನಗಳು (ಥಾಟ್‌ಗಳು)
ಬಿಲಾವಲ್ · ಖಮಾಜ್ · ಕಾಫಿ · ಅಸಾವರಿ · ಭೈರವ್
ಭೈರವಿ · ತೋಡಿ · ಪೂರ್ವಿ · ಮಾರ್ವ · ಕಲ್ಯಾಣಿ

ದೇವಗಂಧಾರಿ   ಭಾರತೀಯ ಶಾಸ್ತ್ರೀಯ ಸಂಗೀತದ ಒಂದು ರಾಗ. ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ, ದೇವಗಂಧಾರಿ ಒಂದು ಜನ್ಯ ರಾಗ.ಇದರ ಮೇಳಕರ್ತ ರಾಗ ಶಂಕರಾಭರಣ. ಇದು ೭೨ ಮೇಳಕರ್ತ ರಾಗಗಳಲ್ಲಿ ೨೯ನೆಯದು.

ಇದು ಉತ್ತರ ಭಾರತದ ಸಿಖ್ ಸಂಪ್ರದಾಯದಲ್ಲೂ ಬಳಕೆಯಲ್ಲಿದೆ ಮತ್ತು  ಗುರು ಗ್ರಂಥ ಸಾಹಿಬ್‍ನಲ್ಲಿ ಉಲ್ಲೇಖವಾಗಿದೆ.

ಕರ್ನಾಟಕ ಸಂಗೀತದಲ್ಲಿ

[ಬದಲಾಯಿಸಿ]

ರಚನೆ ಮತ್ತುಲಕ್ಷಣ

[ಬದಲಾಯಿಸಿ]
ಆರೋಹಣ 
ಅವರೋಹಣ 

ಅದರ ಆರೋಹಣ ಮತ್ತು ಅವರೋಹಣ ರಚನೆ ಕೆಳಗಿನಂತೆ :

  • ಆರೋಹಣ: ಸ ರಿ೨ ಮ೧ ಪ ಧ೨ ಸ
  • ಅವರೋಹಣ :ಸ ನಿ೩ ಧ೨ (ನಿ2,ಧ2) ಪ ಮ1 ಗ3 ರಿ2 ಸ

ದೇವಗಂಧಾರಿ ಒಂದು ಔಡವ-ವಕ್ರ-ಸಂಪೂರ್ಣ ರಾಗವಾಗಿದೆ. ಎಂದರೆ ಆರೋಹಣದಲ್ಲಿ ಐದು ಸ್ವರಗಳು (ಇದನ್ನು ಔಡವ ಎನ್ನುತ್ತಾರೆ) ಬಂದು ಅವರೋಹಣದಲ್ಲಿ ಎಲ್ಲಾ ಸ್ವರಗಳೂ ಬರುತ್ತದೆ.ಆದುದರಿಂದ ಇದು ಔಡವ ಸಂಪೂರ್ಣ ರಾಗ. ಅಂತೆಯೇ ಸ್ವರಗಳು ಅಂಕುಡೊಂಕು ಮಾದರಿಯಲ್ಲಿರುವುದರಿಂದ ಇದು ವಕ್ರ ರಾಗ.ಈ ರಾಗದಲ್ಲಿ ಉಪಯೋಗಿಸಲ್ಪಟ್ಟ  ಸ್ವರಗಳೆಂದರೆ ಷಡ್ಜ,ಚತುಶೃತಿ ರಿಷಭ,ಅಂತರ ಗಾಂಧಾರ,ಶುದ್ಧ ಮಧ್ಯಮ,ಪಂಚಮ,ಚತುಶೃತಿ ಧೈವತ ಮತ್ತು ಕಾಕಲಿ ನಿಷಾದ. ಈ ರಾಗ ಕೆಲವೊಮ್ಮೆ  ಕೈಷಿಕಿ ನಿಷಾದವನ್ನು ಒಳಗೊಳ್ಳುವುದಿದೆ. ಆಗ ಇದು ಭಾಷಾಂಗ ರಾಗವೆಂದು ಉಲ್ಲೇಖವಾಗುತ್ತದೆ.

ಈ ರಾಗದ ಸಮೀಪದ ರಾಗವೆಂದರೆ ಅರಭಿ. ಎರಡೂ ಒಂದೇ ಪ್ರಕಾರದ ಆರೋಹಣ ಅವರೋಹಣವನ್ನು ಹೊಂದಿದ್ದರೂ ಕೆಲವು ಸಂಗತಿಗಳು ಇವುಗಳನ್ನು ಬೇರ್ಪಡಿಸುತ್ತವೆ. ಅವೆಂದರೆ,

  • ದೇವಗಂಧಾರಿ ರಾಗವನ್ನು ಗಮಕಗಳೊಂದಿಗೆ ಹಾಡುತ್ತಾರೆ ಮತ್ತು ವಿಳಂಭಿತ ಕಾಲ ಪ್ರಯೋಗಗಳನ್ನು ಮಾಡುತ್ತಾರೆ []
  • ದೇವಗಂಧಾರಿಯನ್ನು ದೀರ್ಘ ಗಂಧಾರದೊಂದಿಗೆ ಹಾಡುತ್ತಾರೆ(ದೀರ್ಘ ಗ೩)[]
  • ದೇವಗಂಧಾರಿಯು ಒಂದು ಭಾಷಾಂಗ ರಾಗ, ಮತ್ತು ಕೆಲವು ಪ್ರಯೋಗಗಳು ಕೈಷಿಕಿ ನಿಷಾಧವನ್ನು ಬಳಸುತ್ತವೆ: ಸ ನ್೩ ದ ನಿ೨ , , ದ ಪ

ಜನಪ್ರಿಯ ಸಂಯೋಜನೆಗಳು

[ಬದಲಾಯಿಸಿ]

ದೇವಗಂಧಾರಿ ರಾಗದ ಕೆಲವು ಜನಪ್ರಿಯ ಸಂಯೋಜನೆಗಳು:

ವಿಧ
ಸಂಯೋಜನೆ ಸಂಯೋಜಕ ತಾಳ ಭಾಷೆ
ಕೃತಿ ಕ್ಷೀರಸಾಗರ ತ್ಯಾಗರಾಜ ಆದಿ ತೆಲುಗು
ಕೃತಿ ವೀಣಾರಾದನ ಮಾನವಿ ತ್ಯಾಗರಾಜ ಆದಿ ತೆಲುಗು
ಕೃತಿ ಕೊಲುವೈಯುನ್ನಡೆ ತ್ಯಾಗರಾಜ ಆದಿ ತೆಲುಗು
ಕೃತಿ ತುಳಸಮ್ಮ ತ್ಯಾಗರಾಜ ಆದಿ ತೆಲುಗು
ಕೃತಿ ಕ್ಷಿತಿಜ ರಮನಮ್ ಮುತ್ತುಸ್ವಾಮೀ ದೀಕ್ಷಿತರ್ ಆದಿ ಸಂಸ್ಕೃತ
ಕೃತಿ ಎನ್ನೇರಮಮ್ ಗೋಪಾಲಕೃಷ್ಣ ಭಾರತಿ ಆದಿ ತಮಿಳು

 ಸಿಖ್ ಸಂಪ್ರದಾಯದಲ್ಲಿ

[ಬದಲಾಯಿಸಿ]

 ಉತ್ತರ ಭಾರತದ ಸಿಖ್ ಸಂಪ್ರದಾಯದಲ್ಲಿ ಇದು  ಗುರು ಗ್ರಂಥ ಸಾಹಿಬ್‍ನ ಭಾಗವಾಗಿದೆ. ಪ್ರತಿ ರಾಗವೂ ಒಂದು ಕಟ್ಟುನಿಟ್ಟಾದ  ನಿಯಮಗಳನ್ನು ಹೊಂದಿದ್ದು,ಯಾವ ಸ್ವರಗಳನ್ನು ಬಳಸಬಹುದು ಮತ್ತು ಯಾವ ಸ್ವರಗಳನ್ನು ಬಳಸಬಾರದು ಎಂಬುದನ್ನು ನಿರ್ದಿಷ್ಟ ಪಡಿಸಲಾಗಿದೆ. ಸಿಖ್ಖರ ಪವಿತ್ರ ಗ್ರಂಧ ಗುರು ಗ್ರಂಥ ಸಾಹಿಬ್‍ನಲ್ಲಿ ೩೧ ರಾಗಗಳಿದ್ದು ಈ ರಾಗವು ಆರನೆಯದಾಗಿದೆ.ಈ ರಾಗದ ಸಂಯೋಜನೆಗಳು ಗ್ರಂಥಸಾಹಿಬ್‍ನ ೫೨೭ ರಿಂದ ೫೩೭ನೆಯ ಪುಟಗಳಲ್ಲಿದೆ.ಈ ರಾಗವನ್ನು ಗುರು ಅರ್ಜುನ ಅವರು  ಹೆಚ್ಚಾಗಿ ಬಳಸಿದ್ದು, ೪೭ ಮಂತ್ರಗಳು(ಹಾಡುಗಳು)ಗಳಿದ್ದು ಮೂರನ್ನು ಗುರು ತೇಜ್ ಬಹಾದೂರ್ ಮತ್ತು ಆರನ್ನು ಗುರು ರಾಮದಾಸರು ರಚಿಸಿದ್ದಾರೆ.

ಹಿಂದೂಸ್ಥಾನಿ ಸಂಗೀತದಲ್ಲಿ

[ಬದಲಾಯಿಸಿ]

ಇಂದು ದೇವಗಂಧಾರಿಯು ಒಂದು ಅಪರೂಪದ,ಹೆಚ್ಚಾಗಿ ಬಳಕೆಯಲ್ಲಿಲ್ಲದ ಪ್ರಾಚೀನ ರಾಗ. ಇದು ಬೆಳಗಿನ ರಾಗವಾಗಿದೆ.ರಾಗ ಮಾಲಾದಲ್ಲಿ  ದೇವಗಂಧಾರಿ ರಾಗವು ಮಾಲ್‍ಕಂಸ್ ರಾಗದ ರಾಗಿಣಿಯಾಗಿದೆ.ಇದು ಅಸಾವರಿ ಥಾಟ್‍ಗೆ ಸೇರಿದ ರಾಗವಾಗಿದೆ.ಇದರ ಮನಸ್ಥಿತಿಯು ವೀರೋಚಿತ,ಪ್ರಾರ್ಥನಾಪೂರ್ವಕ ಸ್ಥಿತಿಯಾಗಿದೆ. ಈ ರಾಗದ ಪಠ್ಯಗಳು ದೇವರ ಕುರಿತು ವಿರೋಚಿತ ಹುಡುಕಾಟವನ್ನು ಚಿತ್ರಿಸುತ್ತವೆ.

  • ಆರೋಹ:ಸ ರಿ ಮ ಪ ಧ ಸ
  • ಅವರೋಹ: ಸ ನಿ ಧ ಪಾ, ಮ ಪ, ಧ ನಿ ಧ ಪ, ಮ ಗ ರಿ ಸ
  • ಪಕಾರ್: ಧ ನಿ ಧ ಪ, ಮ ಗ,ಸ ರಿ ಮ,ಗ ಸ ರಿ ಗ ಸ
  • ವಾದಿ:ಮ
  • ಸಂವಾದಿ: ಸ

ಇದನ್ನೂ ನೋಡಿ

[ಬದಲಾಯಿಸಿ]
  •  ಗುರು ಗ್ರಂಥ ಸಾಹಿಬ್ ನಲ್ಲಿ ರಾಗಗಳು
  • ಕೀರ್ತನೆ
  • ರಾಗ
  • ತಾಳ

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Ragas in Carnatic music by Dr. S. Bhagyalekshmy, Pub. 1990, CBH Publications

ಬಾಹ್ಯ ಕೊಂಡಿಗಳು

[ಬದಲಾಯಿಸಿ]