ಎನ್ ಟಿ ಎಸ್ ಸಿ
ರಾಷ್ಟ್ರೀಯ ಟೆಲಿವಿಷನ್ ವ್ಯವಸ್ಥಾ ಸಮಿತಿ ಅಥವಾ NTSC ಯು ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಜಪಾನ್, ದಕ್ಷಿಣ ಕೊರಿಯಾ, ತೈವಾನ್, ಬರ್ಮಾ ಮತ್ತು ಕೆಲವು ಶಾಂತಿಸಾಗರದ ದ್ವೀಪರಾಜ್ಯಗಳಲ್ಲಿ ಮತ್ತು ಪ್ರಾಂತ್ಯಗಳಲ್ಲಿ (ಭೂಪಟ ನೋಡಿ) ಚಾಲ್ತಿಯಲ್ಲಿರುವ ಕ್ರಮಾವಳಿ ಟೆಲಿವಿಷನ್ ವ್ಯವಸ್ಥೆ. NTSC ಎಂಬುದು ಪ್ರಸರಣದ ಗುಣಮಟ್ಟವನ್ನು ವೃದ್ಧಿಗೊಳಿಸಿದ ಯು.ಎಸ್.ನ ಮಾನದಂಡ ನಿರ್ಧರಿಸುವ ಸಂಸ್ಥೆಯ ಹೆಸರೂ ಹೌದು.[೧] ಮೊದಲ ಎನ್ ಟಿ ಎಸ್ ಸಿ ನೆಲೆಗಟ್ಟು 1941ರಲ್ಲಿ ಅಭಿವೃದ್ಧಿಗೊಳಿಸಲಾಗಿದ್ದು, ಆಗ ಬಣ್ಣದ ಟಿವಿಗೆ ಯಾವುದೇ ಏರ್ಪಾಡು ಇರಲಿಲ್ಲ. 1953ರಲ್ಲಿ ಎರಡನೆಯ ಸುಧಾರಿತ ಎನ್ ಟಿ ಎಸ್ ಸಿಯ ಸ್ತರಗಳು ಅಳವಡಿಸಲ್ಪಟ್ಟು, ತನ್ಮೂಲಕ ಅಂದು ಚಾಲ್ತಿಯಲ್ಲಿದ್ದ ಕಪ್ಪು-ಬಿಳುಪಿನ ಪ್ರಸಾರದ ಜೊತೆಜೊತೆಗೇ ವರ್ಣಮಯ ಪ್ರಸರಣಕಾರ್ಯವನ್ನೂ ಹಮ್ಮಿಕೊಳ್ಳುವುದು ಸಾಧ್ಯವಾಯಿತು. ಎನ್ ಟಿ ಎಸ್ ಸಿ ಮೊಟ್ಟಮೊದಲ ಬಹುವ್ಯಾಪಿಯಾಗಿ ಅಳವಡಿಸಿಕೊಂಡ ವರ್ಣ ಪ್ರಸರಣ ವ್ಯವಸ್ಥೆಯಾಗಿತ್ತು. ಅರ್ಧ ಶತಮಾನಕ್ಕೂ ಮೀರಿದ ಅವಧಿಯ ನಂತರ ವಾಯು-ಸವಾರಿಯ ಮೂಲಕ ರವಾಮೆಯಾಗುತ್ತಿದ್ದ ಯುನೈಟೆಡ್ ಸ್ಟೇಟ್ಸ್ ನ ಬಹುಪಾಲು ಎನ್ ಟಿ ಎಸ್ ಸಿ ಗಳನ್ನು ಜೂನ್ 12, 2009ರಂದು ಎಟಿಎಸ್ ಸಿಗೆ ಬದಲಾಯಿಸಲಾಯಿತು ಮತ್ತು ಕೆನಡಾದಲ್ಲಿ ಸಹ ಆಗಸ್ಟ್ 31, 2011ರ ವೇಳೆಗೆ ಬದಲಾಯಿಸಲಾಗುವುದು.
ಇತಿಹಾಸ
[ಬದಲಾಯಿಸಿ]1940ರಲ್ಲಿ ಯುನೈಟೆಡ್ ಸ್ಟೇಟ್ಸ್ ಎಲ್ಲೆಡೆಯೂ ಕ್ರಮಾವಳಿ ಟೆಲಿವಿಷನ್ ವ್ಯವಸ್ಥೆಯನ್ನು ಪರಿಚಯಿಸಿದುದುರ ಕಾರಣ ಕಂಪನಿಗಳ ಮಧ್ಯೆ ವಿರಸವುಂಟಾದುದನ್ನು ಬಗೆಹರಿಸುವ ಸಲುವಾಗಿ ಯುನೈಟೆಡ್ ಸ್ಟೇಟ್ಸ್ ಫೆಡೆರಲ್ ಕಮ್ಯುನಿಕೇಷನ್ಸ್ ಆಯೋಗ(FCC)ದವರು ರಾಷ್ಟ್ರೀಯ ಟೆಲಿವಿಷನ್ ವ್ಯವಸ್ಥಾ ಸಮಿತಿಯನ್ನು ಸ್ಥಾಪಿಸಿದರು. 1936ರಲ್ಲಿ ರೇಡಿಯೋ ತಯಾರಕರ ಸಂಘ(ರೇಡಿಯೋ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್)(RMA)ದವರು ನೀಡಿದ ಸಲಹೆಗಳನ್ನು ಆಧಾರವಾಗಿರಿಸಿಕೊಂಡು 1941ರ ಮಾರ್ಚ್ ನಲ್ಲಿ ಈ ಸಮಿತಿಯು ಕಪ್ಪು-ಬಿಳುಪು ಟೆಲಿವಿಷನ್ ಗಳ ತಾಂತ್ರಿಕ ಮಟ್ಟವು ಇಂತಿರಬೇಕಂದು ಸುತ್ತೋಲೆ ಕಳಿಸಿತು. ವೆಸ್ಟೀಜಿಯಲ್ ಸೈಡ್ ಬ್ಯಾಂಡ್(ಕುರುಹಿನ ಪಾರ್ಶ್ವಪಟ್ಟಿ)ಯ ತಂತ್ರದಲ್ಲಿ ತಾಂತ್ರಿಕ ಬೆಳವಣಿಗೆಗಳು ಉಂಟಾದುದರ ಪರಿಣಾಮವಾಗಿ ಬಿಂಬಿತ ಚಿತ್ರದ ಸ್ಪಷ್ಟತೆ ತೀವ್ರಗೊಳ್ಳುವಂತಾಯಿತು. ಎನ್ ಟಿ ಎಸ್ ಸಿ ಯು 525 ಸೂಕ್ಷ್ಮಶೋಧಕ ಸಾಲುಗಳನ್ನು ಆರಿಸಿಕೊಂಡಿತು; ಇದು ಆರ್ ಸಿ ಎ ದವರ 441-ಸೂಕ್ಷ್ಮಶೋಧಕ ಸಾಲುಗಳ ಹಂತ(ಆರ್ ಸಿ ಎ ನವರು ಆಗಲೇ ಎನ್ ಬಿ ಸಿ ನೆಟ್ ವರ್ಕ್ ನಲ್ಲಿ ಈ ಸ್ತರವು ಆಗಲೇ ಉಪಯೋಗಿಸಲ್ಪಟಡುತ್ತಿತ್ತು) ಮತ್ತು ಫಿಲ್ಕೋರವರ ಮತ್ತು ಡ್ಯುಮಾಂಟ್ ರ ಸೂಕ್ಷ್ಮಶೋಧಕ ಸಾಲುಗಳನ್ನು ಕ್ರಮವಾಗಿ 605 ಮತ್ತು 800ಕ್ಕೆ ಏರಿಸುವ ಇಚ್ಛೆಯ ಮಧ್ಯೆ ರಾಜಿಯಾಗುವ ಹಂತದ ಸಾಲುಗಳ ಸಂಖ್ಯೆಯಾಗಿತ್ತು. ಈ ಮಟ್ಟದಲ್ಲಿ ಪ್ರತಿ ಸೆಕೆಂಡಿಗೆ 30 ಚೌಕಟ್ಟುಗಳು(ಚಿತ್ರಗಳು/ಬಿಂಬಗಳು)ಬಿಂಬಿತವಾಗುವಂತಹ ಚೌಕಟ್ಟಿನ ವೇಗವು ಸೂಕ್ತವೆಂದು ಸೂಚಿತವಾಗಿದ್ದು, ಆ ಬಿಂಬಗಳು ಪರಸ್ಪರ ತೆಕ್ಕೆಹಾಕಲ್ಪಟ್ಟ ಎರಡು ವಿಸ್ತಾರಗಳನ್ನು ಹೊಂದಿರುವಂಹವಾಗಿದ್ದು, ಪ್ರತಿ ವಿಸ್ತಾರದಲ್ಲಿ 262.5 ಸಾಲುಗಳು ಮತ್ತು ಪ್ರತಿ ಸೆಕೆಂಡಿಗೆ ಅಂತಹ 60 ವಿಸ್ತಾರಗಳು ಇರಬೇಕೆಂದು ಸಲಹೆ ನೀಡಲಾಗಿತ್ತು. ಕಡೆಯ ಶಿಫಾರಸ್ಸಿನಲ್ಲಿದ್ದ ಇತರ ನಿರ್ದೇಶಗಳು ಸ್ವರೂಪ ಪರಿಮಾಣ 4:3 ರಷ್ಟಿರಬೇಕು ಮತ್ತು ಶಬ್ದ ಸೂಚಕಕ್ಕೆ ಆವರ್ತನ ಉಪಘಟಕ(FM)ಗಳನ್ನು ಒದಗಿಸುವಿಕೆ(ಆಗ ಅದು ನವೀನವಾದುದಾಗಿತ್ತು) ಜನವರಿ 1950ರಲ್ಲಿ ಈ ಸಮಿತಿಯು ಪುನಾರಚನೆಯಾಗಿ ಬಣ್ಣದ ಟೆಲಿವಿಷನ್ ಗಳನ್ನು ಸಮಶ್ರೇಣಿಯಾಗಿಸಲಾಯಿತು. 1953ರಲ್ಲಿ ಈ ಸಮಿತಿಯು ಈಗ ಎನ್ ಟಿ ಎಸ್ ಸಿ ಬಣ್ಣದ ಟೆಲಿವಿಷನ್ ನ ಸ್ತರವೆಂದು ಕರೆಸಿಕೊಳ್ಳಲಾಗುವ ಅಂಶವನ್ನು ಸರ್ವಾನುಮತದಿಂದ ಅಂಗೀಕರಿಸಿತು(ನಂತರ ಇದನ್ನು RS-170a ಎಂದು ಕರೆಯಲಾಯಿತು). ಈ "ಹೊಂದಾಣಿಕೆಯಾಗುವಂತಹ ವರ್ಣ"ದ ಮಟ್ಟವು ಅಂದಿನ ಕಪ್ಪು-ಬಿಳುಪಿನ ಟೆಲಿವಿಷನ್ ಸೆಟ್ ಗಳಿಗೂ ಹಿಂಭಾಗದ ಹೊಂದಾಣಿಕೆಯನ್ನು ಸಮಗ್ರವಾಗಿ ಉಳಿಸಿತು. ವಿಡಿಯೋ ಸಿಗ್ನಲ್ ಗಳಿಗೆ 4.5 × 455/572 ಮೆಗಾಹರ್ಟ್ಝ್ (ಸುಮಾರು 3.58 ಮೆಗಾಹರ್ಟ್ಝ್)ಗಳ ಸಹವಾಹಕಗಳನ್ನು ಕೂಡಿಸುವುದರ ಮೂಲಕ ಕಪ್ಪು-ಬಿಳುಪು ಬಿಂಬಗಳಿಗೆ ವರ್ಣ ಮಾಹಿತಿಯನ್ನು ಅಳವಡಿಸಲಾಯಿತು. ಕ್ರೋಮಿನೆನ್ಸ್ ಸಿಗ್ನಲ್ ಮತ್ತು FM ಧ್ವನಿವಾಹಕಗಳ ನಡುವಣ ಗೋಚರತೆಯ ತೊಡಕುಗಳನ್ನು ಕಡಿಮೆ ಮಾಡಲು ಚೌಕಟ್ಟಿನ ವೇಗವನ್ನು ಕೊಂಚ ತಗ್ಗಿಸಬೇಕಾಗಿದ್ದು, ಸೆಕೆಂಡಿಗೆ 30 ಚೌಕಟ್ಟಗಳನ್ನು ಬಿಂಬಿಸುವ ಬದಲು 29.97 ಚೌಕಟ್ಟುಗಳಿಗೂ ಮತ್ತು ಸಾಲುಗಳ ತರಂಗಾಂತರವನ್ನು 15,750 ಹರ್ಟ್ಝ್ ನಿಂದ 15,734.26 ಹರ್ಟ್ಝ್ಗೂ ಇಳಿಸಲಾಯಿತು. ಅಕ್ಟೋಬರ್ 1950ರಿಂದ ಆರಂಭವಾಗಿ, ಕೊಂಚ ಕಾಲ, CBSನವರು ಅಭಿವೃದ್ಧಿಗೊಳಿಸಿದಂತಹ ಬೇರೆಯದೇ ಆದ ಬಣ್ಣದ ಟೆಲಿವಿಷನ್ ಮಾದರಿಯನ್ನು FCCಯು ಅಂಗೀಕರಿಸಿತ್ತು.[೨] ಆದರೆ ಈ ಮಾದರಿಯು ಕಪ್ಪು-ಬಿಳುಪಿನ ಪ್ರಸರಣದೊಂದಿಗೆ ಹೊಂದಾಣಿಕೆಯಾಗಲಿಲ್ಲ. ಅದು ಒಂದು ತಿರುಗುವ ಬಣ್ಣದ ಚಕ್ರವನ್ನುಪಯೋಗಿಸಿ, ಸೂಕ್ಷ್ಮಶೋಧಕ ಸಾಲುಗಳನ್ನು 525ರಿಂದ 405ಕ್ಕೆ ಇಳಿಸಿತು ಮತ್ತು ವಿಸ್ತೃತಿಯ ವೇಗವನ್ನು 60ರಿಂದ 144ಕ್ಕೆ ಏರಿಸಿತು(ಆದರೆ ಪರಿಣಾಮಕಾರಿ ಚೌಕಟ್ಟಿನ ವೇಗವಾದ ಸೆಕೆಂಡಿಗೆ 24 ಚೌಕಟ್ಟುಗಳನ್ನು ಮಾತ್ರ ಹೊಂದಿತ್ತು). ಪ್ರತಿಸ್ಪರ್ಧಿ RCA ತೆಗೆದುಕೊಂಡ ಕಾನೂನು ಕ್ರಮವು ವ್ಯವಸ್ಥೆಯ ವಾಣಿಜ್ಯಪರ ಬಳಕೆಯನ್ನು ಪ್ರಸಾರದಿಂದಜೂನ್ 1951ರವರೆಗೂ ಹೊರದಬ್ಬಿತ್ತು ಮತ್ತು ನಿಯತವಾದ ಪ್ರಸಾರಗಳು ಕೆಲವೇ ತಿಂಗಳುಗಳು ನಡೆಯುವಷ್ಟರಲ್ಲಿ ಎಲ್ಲಾ ಬಣ್ಣದ ಟೆಲಿವಿಷನ್ ಗಳ ತಯಾರಿಕೆಯನ್ನು ಅಫೀಸ್ ಆಫ್ ಡಿಫೆನ್ಸ್ ಮೊಬಿಲೈಝೇಷನ್ (ODM) ನಿಂದ ಅಕ್ಟೋಬರ್ ನಲ್ಲಿ, ತಿಳಿದಂತೆಯೇ, ಕೊರಿಯಾ ಯುದ್ಧದ ಕಾರಣ, ನಿಷೇಧಿಸಲಾಯಿತು.[೩] CBS ತನ್ನ ವ್ಯವಸ್ಥೆಯನ್ನು 1953ರಲ್ಲಿ[೪] ರದ್ದುಗೊಳಿಸಿತು ಮತ್ತು FCC ಆ ಸ್ಥಾನವನ್ನು ಡಿಸೆಂಬರ್ 17, 1953ರಂದು, ಹಲವಾರು ಕಂಪನಿಗಳ ಸಹಕಾರದಿಂದ(RCA ಮತ್ತು ಫಿಲ್ಕೋ ಸಹ ಒಳಗೊಂಡಂತೆ) ಅಭಿವೃದ್ಧಿಗೊಂಡ ಎನ್ ಟಿ ಎಸ್ ಸಿ ಬಣ್ಣ ಶ್ರೇಣಿಯ ಮೂಲಕ ತುಂಬಿತು.[೫] ಕೇವಲ ನೆಟ್ ವರ್ಕ್ ನ ಕೇಂದ್ರಕಚೇರಿಯಲ್ಲಿ ಮಾತ್ರ ವರ್ಣದಲ್ಲಿ ನೋಡಬಹುದಾದಂತಿದ್ದರೂ, NBC ಯವರು ಆಗಸ್ಟ್ 30, 1953ರಂದು ಪ್ರಸಾರ ಮಾಡಿದ ಕುಕ್ಲಾ, ಫ್ರಾನ್ ಎಂಡ್ ಓಲೀ ಯ ಸಂಚಿಕೆಯೇ NTSC "ವರ್ಣ ಸಹವರ್ತಿಗುಣ" ವ್ಯವಸ್ಥೆಯನ್ನು ಬಳಸಿದ ಮೊದಲ ಸಾರ್ವಜನಿಕವಾಗಿ ಘೋಷಿಸಲ್ಪಟ್ಟ ನೆಟ್ ವರ್ಕ್ ಟಿವಿ ಪ್ರಸಾರಿತ ಕಾರ್ಯಕ್ರಮವಾಗಿದೆ.[೬] ರಾಷ್ಟ್ರಾದ್ಯಂತ ಮೊದಲ ಎನ್ ಟಿ ಎಸ್ ಸಿ ವರ್ಣ ದರ್ಶನವು ನಂತರದ ಜನವರಿ ಒಂದರಂದು ಟೂರ್ನಮೆಂಟ್ ಆಫ್ ರೋಸಸ್ ಪೆರೇಡ್ ನ ತೀರದಿಂದ ತೀರದವರೆಗಿನ ಪ್ರಸಾರದ ಮೂಲಕ ದೊರೆತಿತು, ಇದನ್ನು ಮಾದರಿ ವರ್ಣಗ್ರಾಹಕಗಳ ಮೇಲೆ ದೇಶದ ಉದ್ದಗಲಕ್ಕೆ ವಿಶೇಷ ಪ್ರಸ್ತುತಿಗಳಲ್ಲಿ ದರ್ಶಿಸಬಹುದಾಗಿತ್ತು. ಮೊದಲ ವರ್ಣ ಎನ್ ಟಿ ಎಸ್ ಸಿ ಟೆಲಿವಿಷನ್ ಕ್ಯಾಮರಾ RCA TK-40 ಆಗಿದ್ದು, ಪ್ರಾಯೋಗಿಕ ಪ್ರಸಾರಗಳಿಗಾಗಿ 1953ರಲ್ಲಿ ಬಳಸಲಾಗುತ್ತಿತ್ತು; ಇದರ ಉತ್ತಮಗೊಂಡ ಆವೃತ್ತಿಯಾದ, 1954ರಲ್ಲಿ ಪರಿಚಯಿಸಲ್ಪಟ್ಟ, TK-40A, ಮೊಟ್ಟಮೊದಲ ವಾಣಿಜ್ಯಪರ ಕಾರ್ಯಗಳಿಗೆ ದೊರೆತ ಕಲರ್ ಟಿವಿ ಕ್ಯಾಮರಾ ಆಗಿತ್ತು. ಆ ವರ್ಷ, ನಂತರದ ದಿನಗಳಲ್ಲಿ, ಉತ್ತಮಿತ TK-41 1960ರ ದಶಕದಲ್ಲಿ ಬಳಸಲ್ಪಟ್ಟ ಮಾದರಿ ಕ್ಯಾಮರಾ ಆಯಿತು. ಎನ್ ಟಿ ಎಸ್ ಸಿ ಮಟ್ಟವನ್ನು, ಅಮೆರಿಕದ ಬಹಳ ಕಡೆಗಳಲ್ಲಿ ಮತ್ತು ಜಪಾನ್ ಒಳಗೊಂಡಂತೆ, ಇತರ ದೇಶಗಳೂ ಹಮ್ಮಿಕೊಂಡವು. ಅಂಕೀಯ ಟೆಲಿವಿಷನ್ ಜನಪ್ರಿಯವಾಗುತ್ತಿದ್ದಂತೆಯೇ, ಸಾದೃಶ್ಯಕ ಪ್ರಸಾರಗಳು ಹೊರಹಾಕಲ್ಪಡುತ್ತಿವೆ. ಯು.ಎಸ್.ನ ಬಹುಪಾಲು ಎನ್ ಟಿ ಎಸ್ ಸಿ ಪ್ರಸಾರಕರು ಎಫ್ ಸಿ ಸಿ ಯ ಆದೇಶದ ಮೇರೆಗೆ ತಮ್ಮ ಸಾದೃಶ್ಯಕ ಪ್ರೇಷಕಗಳನ್ನು 2009ರಲ್ಲಿ ಸ್ಥಗಿತಗೊಳಿಸಬೇಕಿತ್ತು. ಕಡಿಮೆ-ಶಕ್ತಿಯ ಕೇಂದ್ರಗಳು, ಶ್ರೇಣಿ A ಕೇಂದ್ರಗಳು ಮತ್ತು ಅನುವಾದಕಗಳು ತಕ್ಷಣ ಪ್ರಭಾವಿತಗೊಳ್ಳುವುದಿಲ್ಲ. ಒಂದು ಸಾದೃಶ್ಯಕ ಕಡಿತದ ಅಂತಿಮ ದಿನಾಂಕವನ್ನು ಆ ಕೇಂದ್ರಗಳಿಗೆ ಇನ್ನೂ ನೀಡಿಲ್ಲ.
ತಾಂತ್ರಿಕ ವಿವರಗಳು
[ಬದಲಾಯಿಸಿ]ರೇಖೆಗಳು ಮತ್ತು ಮರುಸ್ಥಾಪನ ವೇಗ
[ಬದಲಾಯಿಸಿ]ಎನ್ ಟಿ ಎಸ್ ಸಿ ವರ್ಣ ಸಂಕೇತಕಾರಕವನ್ನು ವ್ಯವಸ್ಥೆ M ಟೆಲಿವಿಷನ್ ಸೂಚಕ(ಸಿಗ್ನಲ್)ನೊಡನೆ ಬಳಸಲಾಗುವುದು; ಈ ಸಿಗ್ನಲ್ ನಲ್ಲಿ ಪರಸ್ಪರ ಹೆಣೆಯಲ್ಪಟ್ಟ ವಿಡಿಯೋದ ಚೌಕಟ್ಟುಗಳು ಪ್ರತಿ ಸೆಕೆಂಡ್ ಗೆ 29.97 ಇರುತ್ತದೆ ಅಥವಾ ಸರಿಸುಮಾರು ಜಪಾನ್ ನ ವ್ಯವಸ್ಥೆJ ಯಷ್ಟಿರುತ್ತದೆ. ಪ್ರತಿ ಚೌಕಟ್ಟಿನಲ್ಲೂ 525 ಪರಿಶೀಲನರೇಖೆಗಳಿರುತ್ತವೆ, ಇವುಗಳಲ್ಲಿ 486 ಗೋಚರಿಸುವ ರಾಸ್ಟರ್ ಗಳಾಗಿರುತ್ತವೆ. ಮಿಕ್ಕ ಲಂಬ ತೆರವಾಗಿಸುವ ಅಂತರಗಳನ್ನು ಸಮಕಾಲಿಕಗೊಳಿಸಲು ಮತ್ತು ಲಂಬ ಮರುಪತ್ತೆಗಾಗಿ ಬಳಸಲಾಗುತ್ತದೆ. ಈ ತೆರವಾಗಿಸುವ ಅಂತರವನ್ನು ಮೂಲತಃ ಸರಳವಾಗಿ ಗ್ರಾಹಕದ CRT ತೆರವಾಗಿಸಿ, ಸರಳ ಸಾದೃಶ್ಯಕ ಸರ್ಕ್ಯೂಟ್ ಗಳು ಮತ್ತು ಮೊದಮೊದಲ ಟಿವಿ ಗ್ರಾಹಕಗಳ ಮಂದ ಲಂಬ ಮರುಪತ್ತೆಗೆ ಅನುವಾಗಿಸುತ್ತದೆ. ಆದಾಗ್ಯೂ ಈ ರೇಖೆಗಳಲ್ಲಿ ಕೆಲವು ಬೇರೆಯ ಮಾಹಿತಿಗಳಾದ ಆವೃತವಾದ ಶಿರೋನಾಮೆ-ಕರಣ(ಕ್ಯಾಪ್ಷನಿಂಗ್) ಮತ್ತು ಲಂಬ ಅಂತರ ಸಮಯಸಂಕೇತ (VITC) ಗಳನ್ನು ಹೊಂದಿರಬಹುದು. ಸಂಪೂರ್ಣ ರಾಸ್ಟರ್ ನಲ್ಲಿ(ಅರ್ಧ-ರೇಖೆಗಳನ್ನು ಅವಗಣಿಸಿ) ಸಮ-ಸಂಖ್ಯೆಯ ಅಥವಾ 'ಕೆಳಗಿನ' ಪರಿಶೀಲನರೇಖೆಗಳು(ವಿಡಿಯೋ ಸಿಗ್ನಲ್ ನಲ್ಲಿ ಎಣಿಸಿದಾಗ ಪ್ರತಿ ಇತರ ರೇಖೆಯೂ ಸಮಸಂಖ್ಯೆಯದಾಗಿರುತ್ತದೆ, ಉದಾಹರಣೆಗೆ (2,4,6,...,524))ಮೊದಲ ವರ್ಗದಲ್ಲಿ ಎಳೆಯಲಾಗುತ್ತದೆ, ಮತ್ತು ಬೆಸ-ಸಂಖ್ಯೆಯ ಅಥವಾ "ಮೇಲಿನ" (ವಿಡಿಯೋ ಸಿಗ್ನಲ್ ನಲ್ಲಿ ಗಣನೆ ಮಾಡಿದರೆ ಪ್ರತಿ ಇತರ ರೇಖೆಯೂ ಬೆಸವೇ, ಉದಾಹರಣೆಗೆ (1,3,5,...,525)) ಎರಡನೆಯ ವರ್ಗದಲ್ಲಿ ಎಳೆಯಲ್ಪಡುತ್ತವೆ, ಹೀಗೆ ಮಿಣುಕು-ರಹಿತ ಬಿಂಬವನ್ನು ವರ್ಗ ಪುನಶ್ಚೇತನ ಆವರ್ತನೆಯಾದ ಸುಮಾರು 9.94 ಹರ್ಟ್ಝ್ (ವಾಸ್ತವವಾಗಿ 60 ಹರ್ಟ್ಝ್/1.001)ನಲ್ಲಿ ನೀಡುತ್ತದೆ. ಹೋಲಿಕೆಗಾಗಿ, 576i ವ್ಯವಸ್ಥೆಗಳಾದ PAL-B/G ಮತ್ತು SECAMಗಳಂತಹವು 625 ರೇಖೆಗಳನ್ನು ಬಳಸುತ್ತವೆ (576 ಗೋಚರವಾಗುವಂತಹವು) ಮತ್ತು ಹೀಗಾಗಿ ಹೆಚ್ಚಿನ ಲಂಬ ನಿಖರತೆ ಹೊಂದಿವೆ, ಆದರೆ ತಗ್ಗಿದ ತಾತ್ಕಾಲಿಕ ನಿಖರತೆಯಾದ ಸೆಕೆಂಡ್ ಗೆ 25 ಚೌಕಟ್ಟುಗಳು ಅಥವಾ 50 ವರ್ಗಗಳನ್ನು ಹೊಂದಿವೆ. ಎನ್ ಟಿ ಎಸ್ ಸಿ ವರ್ಗ ಪುಶ್ಚೇತನ ಅವರ್ತನೆಯು ಕಪ್ಪು-ಬಿಳುಪು ವ್ಯವಸ್ಥೆಯಲ್ಲಿ ಮೂಲತಃ ಯುನೈಟೆಡ್ ಸ್ಟೇಟ್ಸ್ ನ ಆಲ್ಟರ್ನೇಟಿಂಗ್ ವಿದ್ಯುತ್ ಶಕ್ತಿಯ ಸಾಮಾನ್ಯವಾದ 60 ಹರ್ಟ್ಝ್ ಆವರ್ತನೆಗೆ ಸಂಪೂರ್ಣ ಸರಿಸಮನಾಗಿತ್ತು. ವರ್ಗದ ಪುಶ್ಚೇತನ ವೇಗವನ್ನು ವಿದ್ಯುನ್ಮೂಲಕ್ಕೆ ಸರಿಹೊಂದಿಸಿದರೆ ಆಂತರಿಕಹದಗೊಳಿಸುವಿಕೆ(ಇದನ್ನು ಬೀಟಿಂಗ್ ಎಂದೂ ಕರೆಯಲಾಗುತ್ತದೆ)ಯನ್ನು ತಪ್ಪಿಸಿತು ಮತ್ತು ತನ್ಮೂಲಕ ಇದರಿಂದ ಉಂಟಾಗುತ್ತಿದ್ದ ತೆರೆಯ ಮೇಲಿನ ಉರುಳುರುಳುವ ಪಟ್ಟಿಗಳು ಹೊಮ್ಮುವುದು ನಿಂತಿತು. ವರ್ಣವನ್ನು ನಂತರ ವ್ಯವಸ್ಥೆಗೆ ಅಳವಡಿಸಿದಾಗ, ಶಬ್ದದ ಮತ್ತು ವರ್ಣದ ವಾಹಕಗಳ ಅವರ್ತನೆಗಳ ವ್ಯತ್ಯಾಸದಿಂದಾಗುವ ಸ್ಥಿರವಾದ ಚುಕ್ಕೆಯ ಮಾದರಿಗಳನ್ನು ಹೋಗಲಾಡಿಸಲು ಪುನಶ್ಚೇತನದ ಆವರ್ತನೆಯನ್ನು ಕೊಂಚ ಕೆಳಕ್ಕಿಳಿಸಿ 59.94 ಹರ್ಟ್ಝ್ ತಲುಪಿಸಲಾಯಿತು, ಇದರ ವಿವರಣೆಯು ಕೆಳಗಿನ "ವರ್ಣ ಸಂಕೇತಕರಣ"ದಲ್ಲಿ ನೀಡಲಾಗಿದೆ. ಪುನಶ್ಚೇತನದ ವೇಗವನ್ನು ವಿದ್ಯುತ್ ವೇಗಕ್ಕೆ ಸಮಸಾಮಯಿಕವಾಗಿಸಿದಾಗ ಮೊದಲಿಗೆ, ಅದು ಕೈನೆಸ್ಕೋಪ್ ಕ್ಯಾಮರಾಗಳು ಮೊದಮೊದಲ ಟೆಲಿವಿಷನ್ ನೇರಪ್ರಸಾರಗಳನ್ನು ರೆಕಾರ್ಡ್ ಮಾಡಲು ಸಹಾಯಕವಾಯಿತು; ಸಮಸಾಮಯಿಕ AC ಮೋಟಾರ್-ಚಾಲಿತ ಕ್ಯಾಮರಾದ ವೇಗವನ್ನು ಆಲ್ಟರ್ನೇಟಿಂಗ್ ವಿದ್ಯುತ್ ಆವರ್ತನೆಯನ್ನು ಬಳಸಿ ಪ್ರತಿ ಚಲನಚಿತ್ರ ಚೌಕಟ್ಟಿನಲ್ಲಿ ಒಂದು ವಿಡಿಯೋದ ಚೌಕಟ್ಟು ಬರುವ ರೀತಿಯಲ್ಲಿ ಚಲನಚಿತ್ರ ಕ್ಯಾಮರಾವನ್ನು ಸಮಸಾಮಯಿಕಗೊಳಿಸುವುದು ಬಹಳ ಸರಳವಾದುದರಿಂದ ಈ ಕಾರ್ಯ ಸಾಧ್ಯವಾಯಿತು.
ವರ್ಣಕ್ಕೆಂದು ಚೌಕಟ್ಟಿನ ವೇಗವು 29.97 ಹರ್ಟ್ಝ್ ಗೆ ಬದಲಾಗುವಷ್ಟರಲ್ಲಿ ವಿಡಿಯೋ ಸಿಗ್ನಲ್ ನಿಂದಲೇ ಕ್ಯಾಮರಾ ಶಟರ್ ಕಾರ್ಯಗತಗೊಳಿಸುವಷ್ಟೇ ಸುಲಭವಾಯಿತು.
625 ಎಂಬ ರೇಖೆಗಳ ಸಂಖ್ಯೆಯು ಶೂನ್ಯ-ಕೊಳವೆ-ಆಧಾರಿತ ತಾಂತ್ರಿಕ ಸೀಮಿತತೆಯ ಕಾರಣವಾಗಿ ಅಯ್ಕೆ ಮಾಡಿದ ಸಂಖ್ಯೆಯಾಗಿತ್ತು. ಮೊದಲಿನ ಟಿವಿ ವ್ಯವಸ್ಥೆಗಳಲ್ಲಿ. ಒಂದು ಮಾಸ್ಟರರ ವೋಲ್ಟೇಜ್-ನಿಯಂತ್ರಿತ ಹೊಯ್ದಾಡುವ ವಸ್ತುವನ್ನು ಸಮರೇಖೆಯ ದುಪ್ಪಟ್ಟು ಆವರ್ತನೆಯಲ್ಲಿ ಚಲಾಯಿಸಲಾಗುತ್ತಿತ್ತು ಮತ್ತು ಈ ಆವರ್ತನೆಯನ್ನು ಬಳಸಲ್ಪಟ್ಟ ರೇಖೆಗಳ ಸಂಖ್ಯೆಯಿಂದ ಭಾಗಿಸಲಾಗುತ್ತಿತ್ತು(ಈ ವಿಷಯದಲ್ಲಿ 60 ಹರ್ಟ್ಝ್) ಈ ಆವರ್ತನೆಯನ್ನು ನಂತರ 60 ಹರ್ಟ್ಝ್ ಗಳ ವಿದ್ಯುತ್ ತಂತಿಗಳ ಆವರ್ತನೆಗೆ ಹೋಲಿಸಲಾಗುತ್ತಿತ್ತು ಮತ್ತು ಯಾವುದೇ ವ್ಯತ್ಯಯಗಳನ್ನು ಮಾಸ್ಟರ್ ಹೊಯ್ದಾಡಕದ ಆವರ್ತನೆಯನ್ನು ಹೊಂದಾಣಿಕೆಯಾಗಿಸಿ ಸರಿಪಡಿಸಲಾಗುತ್ತಿತ್ತು. ಪರಸ್ಪರ ಹೆಣೆದ ಪರಿಶೀಲನೆಗೆ, ಅದರಿಂದ ಬೆಸ ಮತ್ತು ಸಮ ವರ್ಗಗಳಿಗೆ ಲಂಬ ಮರುಪತ್ತೆ ದೂರವನ್ನು ಒಂದೇ ರೀತಿಯಾಗಿಸಲು ಪ್ರತಿ ಚೌಕಟ್ಟಿಗೆ ಬೆಸ ಸಂಖ್ಯೆಯ ರೇಖೆಗಳು ಬೇಕಾಗಿತ್ತು;ಒಂದು ರೇಖೆಯನ್ನು ಜೋಡಿಸಿದರೆ, ಕೊನೆಯ ಬೆಸ ರೇಖೆಯಿಂದ ಮೊದಲ ಸರಿ ರೇಖೆಗೂ ಹಾಗೂ ಕೊನೆಯ ಸರಿರೇಖೆಯಿಂದ ಮೊದಲ ಬೆಸ ರೇಖೆಗೂ ಒಂದೇ ಮರುಜಾಡಿನ ದೂರವಿದ್ದು, ಮರುಜಾಡಿನ ವರ್ತುಲತೆಯನ್ನು ಸರಳೀಕೃತಗೊಳಿಸುತ್ತದೆ. 500ಕ್ಕೆ ಬಹಳ ಹತ್ತಿರವಾದ ಕ್ರಮಾನುಗತಿಯು 3 × 5 × 5 × 7 = 525 ಆಗಿತ್ತು. ಅಂತೆಯೇ, 625-ರೇಖೆಗಳ PAL-B/G ಮತ್ತು SECAM ಬಳಸುವುದು 5 × 5 × 5 × 5. ಬ್ರಟಿಷ್ 405-ರೇಖೆಗಳ ವ್ಯವಸ್ಥೆಯು ಬಳಸಿದ್ದು 3 × 3 × 3 × 3 × 5, ಫ್ರೆಂಚ್ 819-line ವ್ಯವಸ್ಥೆಯು ಬಳಸಿದ್ದು 3 × 3 × 7 × 13.
ವರ್ಣಮಾಪನವಿಧ
[ಬದಲಾಯಿಸಿ]1953ರ ಮೂಲ ವರ್ಣ ಎನ್ ಟಿ ಎಸ್ ಸಿ ಸೂಚಕಗಳು, ಇಂದಿಗೂ ಯುನೈಟೆಡ್ ಸ್ಟೇಟ್ಸ್ ನ ಕೋಡ್ ಆಫ್ ಫೆಡೆರಲ್ ರೆಗ್ಯುಲೇಷನ್ಸ್ ನ ಅಂಗವಾಗಿದ್ದು, ವರ್ಣಮಾಪನವಿಧದ ಮೌಲ್ಯಗಳ ವ್ಯವಸ್ಥೆಯನ್ನು ಹೀಗೆ ಪಟ್ಟಿ ಮಾಡಿವೆ:[೭]
ಮೂಲ ಎನ್ ಟಿ ಎಸ್ ಸಿ ವರ್ಣಮಾಪನ
(1953) |
ಸಿಐಇ 1931 x | ಸಿಐಇ 1931 y | |
---|---|---|---|
ಪ್ರಧಾನ ಕೆಂಪು | 0.67 | 0.33 | |
ಪ್ರಧಾನ ಹಸಿರು | 0.21 | 0.71 | |
ಪ್ರಧಾನ ನೀಲಿ | 0.14 | 0.08 | |
ಶ್ವೇತ ಬಿಂದು ಸಿಐಇ ಪ್ರಕಾಶಕಾರಕ C) | 0.310 | 0.316 |
ಮೊದಲ ಟೆಲಿವಿಷನ್ ಗ್ರಾಹಕಗಳಾದ RCA CT-100ನಂತಹವು ಈ ನಮೂದನೆಗಳಿಗೆ ವಿಧೇಯವಾಗಿದ್ದವು, ಮತ್ತು ಇಂದಿನ ಬಹುಪಾಲು ಮಾನೀಟರ್ ಗಳಿಗಿಂತಲೂ ನೆಚ್ಚು ಪೂರ್ಣವಿಸ್ತಾರವನ್ನು ಹೊಂದಿದ್ದವು. ಆದರೆ ಅವುಗಳ ಕೆಳಮಟ್ಟದ-ಕ್ಷಮತೆಯ ರಂಜಕಗಳು ಕಪ್ಪಗೆ, ದೀರ್ಘಕಾಲದವರೆಗೆ ಇರುತ್ತಿದ್ದು, ಸರಿದಾಡುವ ವಸ್ತುಗಳ ಹಿಂದೆ ಛಾಯೆಯನ್ನು ಬಿಂಬಿಸುತ್ತಿದ್ದವು. 1950ರಲ್ಲಿ ಪ್ರಾರಂಭವಾಗಿ, ಚಿತ್ರಕೊಳವೆ ರಂಜಕಗಳು ಸಾಂದ್ರತೆಯನ್ನು ಹೆಚ್ಚಿನ ಪ್ರಕಾಶಕ್ಕೆಂದು ಬಲಿಗೊಟ್ಟವು; ಗ್ರಾಹಕತುದಿ ಮತ್ತು ಪ್ರೇಷಕತುದಿಗಳ ಈ ಮೂಲಸ್ತರದಿಂದ ವಿಕರ್ಷಿತವಾಗುವಿಕೆಯಿಂದೆ ಸಾಕಷ್ಟು ವರ್ಣವ್ಯತ್ಯಯವಾಗುತ್ತಿತ್ತು.[೮]
ಸ್ಟುಡಿಯೋ ಮಾನೀಟರ್ ಮತ್ತು ಗೃಹ ಗ್ರಾಹಕಗಳಲ್ಲಿ ವರ್ಣ ನೇರ್ಪಾಟು
[ಬದಲಾಯಿಸಿ]ಹೆಚ್ಚಿನ ಸಮವಿಧದ ವರ್ಣೋತ್ಪಾದನೆಯನ್ನು ಖಚಿತಪಡಿಸಲು, ಗ್ರಾಹಕ(ರಿಸೀವರ್)ಗಳಲ್ಲಿ ವರ್ಣ ನೇರ್ಪಾಡು ವರ್ತುಲಗಳನ್ನು ಅಳವಡಿಸಿಕೊಳ್ಳಲಾರಂಭಿಸಿದರು; ಇವು ಗ್ರಹಿತ ಸಿಗ್ನಲ್ --- ಮೇಲ್ಕಂಡ ವರ್ಣಮಾಪನವಿಧಿಗೆ ಸಂಕೇತಗೊಳಿಸಿದಂತಹವನ್ನು --- ಗ್ರಾಹಕಗಳಲ್ಲಿ ವಾಸ್ತವವಾಗಿ ಉಪಯೋಗಿಸಿದ ರಂಜಕಗಳಿಗೆ ಸಂಕೇತಗೊಳಿಸಿದ್ದ ಸಿಗ್ನಲ್ ಗಳಾಗಿ ಪರಿವರ್ತಿಸಿದವು.[೮] ಇಂತಹ ವರ್ಣನೇರ್ಪಾಡುಗಳು ವಿರೇಖಿತ(ಗಾಮಾ-ನೇರ್ಪಾಡಾದ) ಪ್ರಸರಣ ಸಿಗ್ನಲ್ ಗಳ ಮೇಲೆ ಕರಾರುವಾಕ್ಕಾಗಿ ಕಾರ್ಯವೆಸಗಲಾರದು, ಹೊಂದಿಕೆಯು ಕೇವಲ ಅಂದಾಜಿಸಬಹುದಷ್ಟೆ,[೯] ಬಹಳ ಸಾಂದ್ರವಾದ ವರ್ಣಗಳ ದೋಷಗಳಿಗೆ ಪ್ರಕಾಶತೆ ಮತ್ತು ವರ್ಣವನ್ನು ಪರಿಚಯಿಸಬಹುದು. ಅಂತೆಯೇ, ಪ್ರಸರಣಾ ಹಂತದಲ್ಲಿ, 1968-69ರಲ್ಲಿ ಕೊನ್ರಾಕ್ ಕಾರ್ಪ್, RCAಯೊಡನೆ ಕಾರ್ಯವೆಸಗುತ್ತಾ, ಪ್ರಸರಣ ವರ್ಣ ಚಿತ್ರ ಮಾನೀಟರ್ ನಲ್ಲಿ ಬಳಸಲು ಒಂದು ಜೊತೆ ನಿಯಂತ್ರಿತ ರಂಜಕಗಳನ್ನು ನಿರೂಪಿಸಿತು.[೮] ಈ ನಮೂದನೆಯು ಇಂದು SMPTE "C" ರಂಜಕ ನಮೂದನೆ ಎಂಬ ಹೆಸರಿನಲ್ಲಿ ಸ್ಥಿರಗೊಂಡಿದೆ:
SMPTE "C" ವರ್ಣಮಾಪನ | ಸಿಐಇ 1931 x | ಸಿಐಇ 1931 y | |
---|---|---|---|
ಪ್ರಧಾನ ಕೆಂಪು | 0.630 | 0.340 | |
ಪ್ರಧಾನ ಹಸಿರು | 0.310 | 0.595 | |
ಪ್ರಧಾನ ನೀಲಿ | 0.155 | 0.070 | |
ಶ್ವೇತ ಬಿಂದು ಸಿಐಇ ಪ್ರಕಾಶಕಾರಕ D65 | 0.3127 | 0.3290 |
ಗೃಹ ಗ್ರಾಹಕಗಳಂತೆಯೇ, ಸ್ಟುಡಿಯೋ ಮಾನೀಟರ್ ಗಳೂ ಸಹ ಇದೇ ರೀತಿಯ ವರ್ಣ ನೇರ್ಪಾಡಿನ ವರ್ತುಲಗಳನ್ನು ಅಳವಡಿಸಿಕೊಳ್ಳಬೇಕೆಂದು ಶಿಫಾರಸು[೧೦] ಮಾಡಲಾಯಿತು; ತನ್ಮೂಲಕ ಪ್ರಸರಣಕಾರರು1953ರ ಮೂಲ ವರ್ಣಮಾಪನ ಮೌಲ್ಯಗಳಿಗೆ ಸಂಕೇತಗೊಳಿಸಿದಂತಹ, ಎಫ್ ಸಿಸಿ ಸೂಚಿತ ಗುಣಮಟ್ಟಗಳಿಗೆ ಹೊಂದುವಂತಹ ಚಿತ್ರಗಳನ್ನು ಪ್ರಸಾರ ಮಾಡುವುದೆಂದಾಯಿತು.
1987ರಲ್ಲಿ, ದ ಸೊಸೈಟಿ ಆಫ್ ಮೋಷನ್ ಪಿಕ್ಚರ್ಸ್ ಎಂಡ್ ಟೆಲಿವಿಷನ್ ಎಂಜಿನಿಯರ್ಸ್ (SMPTE) ಕಮಿಟಿ ಆನ್ ಟೆಲಿವಿಷನ್ ಟೆಕ್ನಾಲಜಿ ಎಂಬ ಸ್ಟುಡಿಯೋ ಮಾನೀಟರ್ ವರ್ಣಮಾಪನನಿರತ ತಂಡ ವು SMPTE C (ಕಾನ್ರಾಕ್) ರಂಜಕಗಳನ್ನು ಸಾಮಾನ್ಯ ಪದ್ಧತಿ 145[೧೧] ರಲ್ಲಿ ಸೂಚಿಸಿರುವಂತೆ ಆಳವಡಿಸಿಕೊಂಡುದರ ಪರಿಣಾಮವಾಗಿ ಹಲವಾರು ತಯಾರಕರು ತಮ್ಮ ಕ್ಯಾಮರಾಗಳ ವಿನ್ಯಾಸಗಳನ್ನು ನೇರವಾಗಿ SMPTE "C" ಗೆ ಸಂಕೇತಕರಣಗೊಳಿಸಿಕೊಂಡು ವರ್ಣನೇರ್ಪಾಡುರಹಿತ[೧೨] ವರ್ಣಮಾಪನ ಮೌಲ್ಯಗಳಿಗೆ ಹೊಂದುವಂತೆ ಬದಲಾಯಿಸಿಕೊಳ್ಳುವಂತಾಗಿಸಿತು; ಈ ಮಾರ್ಪಾಡುಗಳು SMPTE ಸ್ಟ್ಯಾಂಡರ್ಡ್ 170M, "ಸಮ್ಮಿಳಿತ ಕ್ರಮಾವಳಿ ವಿಡಿಯೋ ಸಿಗ್ನಲ್ --- ಸ್ಟುಡಿಯೋ ಅನ್ವಯಿಕಗಳಿಗಾಗಿ " ಎನ್ ಟಿ ಎಸ್ ಸಿ (1994) ಸ್ವೀಕೃತ ಮಾದರಿಗೆ ಹೊಂದುವಂತಿತ್ತು. ಹೀಗಾಗಿ, 480i ಸಿಗ್ನಲ್ ಗಳಿಗೆ ವರ್ಣಮಾಪನ ಮೌಲ್ಯಗಳ ಮಾಹಿತಿ ನೀಡಿರದ ಎಲ್ಲಾ ರವಾನೆಯ ವ್ಯವಸ್ಥೆಗಳಿಗೂ SMPTE "C" ವರ್ಣಮಾಪನ ಮೌಲ್ಯಗಳನ್ನೇ ಅನುಮೋದಿಸಬೇಕೆಂದು ಎ ಟಿ ಎಸ್ ಸಿ ಡಿಜಿಟಲ್ ಟೆಲಿವಿಷನ್ ಸ್ಟ್ಯಾಂಡರ್ಡ್ ಆದೇಶಿಸುತ್ತದೆ.[೧೩]
ವ್ಯತ್ಯಯನಗಳು
[ಬದಲಾಯಿಸಿ]ಜಪಾನ್ ನ ಎನ್ ಟಿ ಎಸ್ ಸಿ ಯು ಕೆಂಪು, ನೀಲಿ ಮತ್ತು ಹಸಿರುಗಳಿಗೆ ಇದೇ ವರ್ಣಮಾಪನಮೌಲ್ಯಗಳನ್ನು ಬಳಸುತ್ತದೆ ಆದರೆ CIE ಪ್ರಕಾಶಕದ ಶ್ವೇತ ಬಿಂದುವಿಗೆ ವಿಭಿನ್ನವಾದ D93 (x=0.285, y=0.293)ಬಳಸುತ್ತದೆ.[೧೦] PAL ಮತ್ತು SECAM ವ್ಯವಸ್ಥೆಗಳೆರಡೂ 1070ರವರೆಗೂ ಎನ್ ಟಿ ಎಸ್ ಸಿ ಯ 1953ರ ವರ್ಣಮಾಪನಮೌಲ್ಯಗಳ ಮೂಲರೂಪವನ್ನೇ ಬಳಸುತ್ತಿದ್ದವು;[೧೦] ಆದರೆ, 1970ರಲ್ಲಿ, ಎನ್ ಟಿ ಎಸ್ ಸಿ ಗಳಂತಲ್ಲದೆ, ಯೂರೋಪಿಯನ್ ಬ್ರಾಡ್ ಕ್ಯಾಸ್ಟ್ ಯೂನಿಯನ್ "EBU" ಗ್ರಾಹಕಗಳಲ್ಲಿ ಮತ್ತು ಸ್ಟುಡಿಯೋ ಮಾನೀಟರ್ ಗಳಲ್ಲಿ ವರ್ಣನೇರ್ಪಾಡನ್ನು ರದ್ದುಗೊಳಿಸಿ, ಬದಲಿಗೆ ಎಲ್ಲಾ ಸಲಕರಣೆಗಳನ್ನೂ "EBU" ವರ್ಣಮಾಪನ ಮೌಲ್ಯ[೧೪] ಗಳಿಗೇ ಸಂಕೇತಕರಣಗೊಳಿಸಲು ಸ್ಪಷ್ಟವಾಗಿ ಹೇಳಿಬಿಟ್ಟಿತ್ತು ಹಾಗೂ ತನ್ಮೂಲಕ ಆ ವ್ಯವಸ್ಥೆಗಳ ವರ್ಣನಿಷ್ಠೆಉನ್ನು ಮತ್ತಷ್ಟು ಉತ್ತಮಗೊಳಿಸಿತು.
ವರ್ಣ ಸಂಕೇತಕರಣ
[ಬದಲಾಯಿಸಿ]ಕಪ್ಪು-ಬಿಲುಪು ಟೆಲಿವಿಸನ್ ಗಳ ಹಿನ್ನೆಲ್ ಹೊಂದಾಣಿಕೆಗೆ ಎನ್ ಟಿ ಎಸ್ ಸಿ ಯು 1938ರಲ್ಲಿ ಜಾರ್ಜೆಸ್ ವೇಲೆನ್ಸಿಯವರು ಆವಿಷ್ಕರಿಸಿದ ಉಜ್ವಲಕರಣ-ವರ್ಣಕರಣ ಸಂಕೇತಗೊಳಿಸುವ ವ್ಯವಸ್ಥೆಯನ್ನು ಬಳಸುತ್ತದೆ. ಉಜ್ವಲಕರಣವು (ಮಿಶ್ರ ವರ್ಣ ಸೂಚಕಗಳಿಂದ ಗಣಿತದ ರೀತ್ಯಾ ಹೊಂದಿದುದು) ಮೂಲ ಮಾನೋಕ್ರೋಮ್ ಸೂಚಕದ ಸ್ಥಾನವನ್ನು ತೆಗೆದುಕೊಳ್ಳುತ್ತದೆ. ವರ್ಣಕರಣವು ವರ್ಣಗಳ ಬಗ್ಗೆ ಮಾಹಿತಿಯನ್ನು ಹೊಂದಿರುತ್ತದೆ. ಈ ರೀತಿಯಲ್ಲಿ ಕಪ್ಪು-ಬಿಳುಪು ಗ್ರಾಹಕಗಳು, ಸರಳವಾಗಿ ವರ್ಣಕರಣವನ್ನು ತಿರಸ್ಕರಿಸುವ ಮೂಲಕ, ಎನ್ ಟಿ ಎಸ್ ಸಿ ಸಿಗ್ನಲ್ ಗಳನ್ನು ಸೂಚಿಸಲು ಸಮರ್ಥವಾಗುತ್ತವೆ ಎನ್ ಟಿ ಎಸ್ ಸಿ ಯಲ್ಲಿ ವರ್ಣಕರಣವನ್ನು ಎರಡು 90 ಡಿಗ್ರಿಗಳಷ್ಟು ಘಟ್ಟದಿಂದ ವಾಲಿರುವ 3.579545 ಮೆಗಾಹರ್ಟ್ಝ್ ಸಿಗ್ನಲ್ ಗಳನ್ನು ಬಳಸಿ ಸಂಕೇತಕ್ಕೊಳಪಡಿಸಲಾಗುತ್ತದೆ; ಈ ಸಿಗ್ನಲ್ ಗಳನ್ನು ಮೊದಲ ಹಂತದಲ್ಲಿ I ಎಂದೂ, ಎರಡನೆಯ ಹಂತದಲ್ಲಿ Q (ಕ್ವಾಡ್ರೇಚರ್) QAM ಎಂದೂ ಕರೆಯುತ್ತಾರೆ. ಈ ಎರಡೂ ಸಿಗ್ನಲ್ ಗಳನ್ನು ಮೊದಲು ವರ್ಣವರ್ಧಕಗಳಲ್ಲಿ ಹದಗೊಳಿಸಿ ನಂತರ ಜೋಡಿಸಲಾಗುತ್ತದೆ. ವಾಹಕವನ್ನು ಪ್ರಕ್ಷುಬ್ಧಗೊಳಿಸಲಾಗುತ್ತದೆ. ಗಣಿತರೀತ್ಯಾ, ಒಂದು ಆಕರ ಮತ್ತು ಚರವಾದ ವರ್ಧಕಗಳಿಗೆ ಸಂಬಂಧಿತವಾಗಿ ಸೈನ್ ತರಂಗವು ಬದಲಾಗುವಂತಹ ವಿಧಿಯಂತೆ ಈ ಫಲಿತಾಂಶವನ್ನು ಕಾಣಬಹುದು. ಈ ಹಂತವು ಟಿವಿ ಕ್ಯಾಮರಾವು ತಕ್ಷಣ ಸೆರೆಹಿಡಿಯುವ ವರ್ಣದ ಛಾಯೆಯನ್ನು ಪ್ರತಿನಿಧಿಸುತ್ತದೆ ಮತ್ತು ವರ್ಣವರ್ಧಕವು ಹಠಾತ್ ವರ್ಣಸಾಂದ್ರತೆಯನ್ನು ಪ್ರತಿನಿಧಿಸುತ್ತದೆ. I/Q ಹಂತದಿಂದ ಒಂದು ಟಿವಿಗೆ ವರ್ಣಛಾಯೆಯ ಮಾಹಿತಿಯನ್ನು ಮತ್ತೆ ಪಡೆಯಲು ಅದರಲ್ಲಿ ಶೂನ್ಯ ಹಂತವೆಂಬ ಮೂಲ ಹಂತವಿದ್ದರೆ ಮಾತ್ರ ಪ್ರಕ್ಷುಬ್ಧ ವಾಹಕವನ್ನು ಬದಲಾಯಿಸಬಹುದು. ಸಾಂದ್ರ ಮಾಹಿತಿಗಳನ್ನು ಮತ್ತೆ ಪಡೆಯಲು ವರ್ಣವರ್ಧಕಕ್ಕೂ ಒಂದು ಆಧಾರಬಿಂದುವಿನ ಅವಶ್ಯಕತೆಯಿದೆ. ಆದ್ದರಿಂದ ಎನ್ ಟಿ ಎಸ್ ಸಿ ಸಿಗ್ನಲ್ ಈ ಆಧಾರ ಸಿಗ್ನಲ್ ನ ಒಂದು ಸಣ್ಣ ಅಂಶವನ್ನು ಹೊಂದಿದ್ದು, ಕಲರ್ ಬರ್ಸ್ಟ್ ಎಂದು ಕರೆಸಿಕೊಳ್ಳುವ ಇದು ಪ್ರತಿ ಸಮರೇಖೆಯ 'ಹಿಂದಿನ ಕೈಸಾಲೆ'ಯಲ್ಲಿ ಇರಿಸಲಾಗುತ್ತದೆ(ಸಮರೇಖೆಯ ಸಮಸಾಮಯಿಕ ಸ್ಪಂದನದ ವೇಳೆಯಿಂದ ಶೂನ್ಯಕಾರಕ ಸ್ಪಂದನದ ವರೆಗಿನ ಕಾಲಘಟ್ಟ.) ಈ ಕಲರ್ ಬರ್ಸ್ಟ್ (ವರ್ಣಸ್ಫೋಟ)ವು ಕನಿಷ್ಠ ಎಂಟು ಹದಗೊಳಿಸಲ್ಪಡದ ವರ್ಣ ಉಪವಾಹಕಗಳ (ನಿಗದಿತ ಹಂತ ಮತ್ತು ವರ್ಧನೆ)ಆವರ್ತನೆಗಳನ್ನು ಹೊಂದಿರುತ್ತದೆ. ಟಿವಿ ಗ್ರಾಹಕವು ಒಂದು "ಸ್ಥಾನಿಕ ಹೊಯ್ಡಾಡಕ"ವನ್ನು ಹೊಂದಿದ್ದು, ಅದು ವರ್ಣಸ್ಫೋಟಗಳನ್ನು ಸೂಕ್ತವಾಗಿ ಮೇಳಯಸುತ್ತದೆ ಮತ್ತು ನಂತರ ಅದನ್ನು ಆಧಾರವಾಗಿರಿಸಿಕೊಂಡು ವರ್ಣಕರಣ ವಿಸಂಕೇತಗೊಳಿಸುತ್ತದೆ. ವರ್ಣಸ್ಫೋಟದಿಂದ ದೊರೆತ ಆಧಾರ ಸಿಗ್ನಲ್ ವರ್ಣಕರಣ ಸಿಗ್ನಲ್ ಗೆನ ವರ್ಧನೆಗೆ ಮತ್ತು ಹಂತಕ್ಕೆ ರಾಸ್ಟರ್ ಸ್ಕ್ಯಾನ್ ನ ಒಂದು ನಿರ್ದಿಷ್ಟ ಬಿಂದುವಿನಲ್ಲಿ ಹೋಲಿಸಿದರೆ, ಆ ಬಿಂದುವಿನಲ್ಲಿ (ಸ್ಥಳದಲ್ಲಿ) ಯಾವ ವರ್ಣಕರಣ ಪ್ರದರ್ಶನವು ಅಗತ್ಯವೆಂದು ಆ ಉಪಕರಣವು ನಿರ್ಧರಿಸುತ್ತದೆ. ಅದನ್ನು ಉಜ್ವಲಕರಣ ಸಿಗ್ನಲ್ ನ ವರ್ಧಕದೊಂದಿಗೆ ಸೇರಿಸಿದರೆ, ಗ್ರಾಹಕವು ಆ ಸ್ಥಳವನ್ನು ಯಾವ ವರ್ಣಕ್ಕೆ ತಿರುಗಿಸಬೇಕೆಂದು ಗಣಿಸುತ್ತದೆ; ಎಂದರೆ, ನಿರಂತರವಾಗಿ ವೀಕ್ಷಿತವಾಗುವ ಕಿರಣಪುಂಜದ ಆ ತತ್ ಕ್ಷಣದ ಸ್ಥಾನದಲ್ಲಿ. ಕ್ರಮಾವಳಿ ಟಿವಿಯಲ್ಲಿ ಲಂಬ ಆಯಾಮಗಳು ಪ್ರತ್ಯೇಕವಾಗಿರುತ್ತವೆ(ಸ್ಪಷ್ಟವಾದ ಗೆರೆಗಳು ಗೋಚರಿಸುತ್ತವೆ) ಆದರೆ ಸಮ ಆಯಾಮದಲ್ಲಿ ನಿರಂತರತೆ ಇರುತ್ತದೆ(ಪ್ರತಿ ಬಿಂದುವೂ ಮುಂದಿನ ಬಿಂದುವಿನೊಡನೆ ಸೀಮಾತೀತವಾಗಿ ಹೊಂದಿಕೊಳ್ಳುತ್ತದೆ), ಆದ್ದರಿಂದ ಕ್ರಮಾವಳಿ ಟಿವಿಯಲ್ಲಿ ಯಾವುದೇ ಪಿಕ್ಸೆಲ್ ಗಳು ಗೋಚರವಾಗುವುದಿಲ್ಲ ಎಂಬುದನ್ನು ಗಮನಿಸಿ. (ಡಿಜಿಟಲ್(ಆಂಕಿತ) ಟಿವಿ ಸೆಟ್ ಗಳು ಸಂದ ಕ್ರಮಾವಳಿ ಸಿಗ್ನಲ್ ಗಳನ್ನು ನಿರಂತರ ಸಮವೀಕ್ಷಣರೇಖೆಗಳನ್ನು ಪ್ರತ್ಯೇಕ ಪಿಕ್ಸೆಲ್ ಗಳಾಗಿ ಪರಿವರ್ತಿಸಿ ನಂತರ ಪ್ರದರ್ಶಿಸುತ್ತವೆ. ಈ ಪ್ರತ್ಯೇಕಗೊಳಿಸುವಿಕೆಯ ಕಾರ್ಯವು ಚಿತ್ರಮಾಹಿತಿಯನ್ನು ಕೊಂಚ ಮಟ್ಟಿಗೆ ಕೆಳತಗ್ಗಿಸುತ್ತದೆ, ಆದರೆ ಚಿಕ್ಕ ಚಿಕ್ಕ ಪಿಕ್ಸೆಲ್ ಗಳಿದ್ದರೆ ಅದರ ಪರಿಣಾಮವು ಕಂಡೂ ಕಾಣದಂತಿರುತ್ತದೆ. ಡಿಜಿಟಲ್ ಸೆಟ್ ಗಳು ಎಂದರೆ ಪ್ರದರ್ಶನ ಉಪಕರಣದ ಒಳಗೇ ಎಲ್ ಸಿ ಡಿ, ಪ್ಲಾಸ್ಮಾ, ಮತ್ತು ಡಿ ಎಲ್ ಪಿಸ್ಕ್ರೀನ್ ಗಳಂತಹ, ಪ್ರತ್ಯೇಕ ಪಿಕ್ಸೆಲ್ ಗಳ ಮ್ಯಾಟ್ರಿಕ್ಸ್ ಅನ್ನು ಅಳವಡಿಸಿದಂತಹ, ಎಲ್ಲಾ ಸೆಟ್ ಗಳನ್ನೂ ಒಳಗೊಳ್ಳುತ್ತದೆ ಅದರೆ ಸಾಂಪ್ರದಾಯಿಕ ಸಿ ಆರ್ ಟಿ ಗಳನ್ನು ಒಳಗೊಳ್ಳುವುದಿಲ್ಲ. ಪ್ಲಾಸ್ಮಾ ಅಥವಾ ಡಿ ಎಲ್ ಪಿ ಪ್ರದರ್ಶನ ತೆರೆಯಿಂದ ಹೊಮ್ಮುವ ಶ್ರೇಷ್ಠಮಟ್ಟದ ಬಿಂಬಗಳು ಪ್ರತ್ಯೇಕಿಸುವಿಕೆಯಿಂದ ಉಂಟಾಗಿರಬಹುದಾದ ಬಿಂಬದ ಗುಣಮಟ್ಟವನ್ನು ಸರಿದೂಗಿಸಬಹುದು.) ಎನ್ ಟಿ ಎಸ್ ಸಿ ಸಿಗ್ನಲ್ ಅನ್ನು ಪ್ರೇಷಕವು ಪ್ರಸಾರ ಮಾಡಿದಾಗ ಅದು ಈಗತಾನೇ ವಿವರಿಸಿದ ಎನ್ ಟಿ ಎಸ್ ಸಿ ಸಿಗ್ನಲ್ ನ ಒಂದು ರೇಡಿಯೋ-ಆವರ್ತನ ವಾಹಕವನ್ನು ವೃದ್ಧಿಸಿ-ಮೇಳೈಸುತ್ತದೆ; ತತ್ಸಮಯದಲ್ಲಿ ಆ ಸಿಗ್ನಲ್ 4.5 ಹರ್ಟ್ಝ್ ಗಳಿಗಿಂತಲೂ ಹೆಚ್ಚಿನ ಶ್ರಾವ್ಯ ಸಿಗ್ನಲ್ ಅನ್ನು ಆವರ್ತನೆ-ಮೇಳೈಸುತ್ತದೆ. ಸರಳರೇಖೆಯಲ್ಲದಂತಹ ವಿರೂಪವು ಪ್ರಸರಣಾ ಸಿಗ್ನಲ್ ನಲ್ಲಿ ಉಂಟಾದಲ್ಲಿ, 3.579545 ಹರ್ಟ್ಝ್ ವರ್ಣವಾಹಕವು ಶಬ್ದ ವಾಹಕದೊಂದಿಗೆ ಸ್ಪಂದಿಸಿ ತೆರೆಯ ಮೇಲೆ ಚುಕ್ಕೆಗಳನ್ನು ಮೂಡಿಸುತ್ತದೆ. ಫಲಿತ ಮಾದರಿಯು ಕಡಿಮೆ ಗಮನಸೆಳೆಯುವಂತಾಗಿಸಲು ವಿನ್ಯಾಸಕರು ಮೂಲ 60 ಹರ್ಟ್ಝ್ ಕ್ಷೇತ್ರವೇಗವನ್ನು 1.001 (0.1%)ಪಟ್ಟು ತಗ್ಗಿಸಿ ಸುಮಾಗು ೫೯.೯೪ ಕ್ರೇತ್ರಗಳು ಪ್ರತಿ ಸೆಕೆಂಡ್ ನಂತೆ ಮಾಡಿದರು. ಈ ಹೊಂದಾವಣೆಯು ಶಬ್ದವಾಹಕದ, ವರ್ಣ ಉಪವಾಹಕಗಳ ಮೊತ್ತಗಳು ಮತ್ತು ವ್ಯತ್ಯಯಗಳು ಮತ್ತು ಅವುಗಳ ಗುಣಲಬ್ಧಗಳು (ಎಂದರೆ ಎರಡು ವಾಹಕಳ ಅಂತರ್ಧೃವೀಕರಣ ಗುಣಲಬ್ಧಗಳು) ನಿಖರವಾಗಿ ಚೌಕಟ್ಟಿನ ವೇಗದ ಗುಣಾಂಶಗಳಲ್ಲವೆಂದಾಗುತ್ತದೆ ಮತ್ತು ಈ ಅಂಶವೇ ಚುಕ್ಕಿಗಳು ತೆರೆಯ ಮೇಲೆ ಸ್ಥಿರವಾಗಿ ಉಳಿಯಲು ಬೇಕಾದವು; ಈ ವಿಧದಲ್ಲಿ ಅವು ಬಹಳವೇ ಗಮನಾರ್ಹವಾಗಿರುತ್ತವೆ. 59.94 ರ ವೇಗವನ್ನು ಈ ಕೆಳಕಂಡ ಲೆಕ್ಕಾಚಾರದ ಮೂಲಕ ಪಡೆಯಲಾಗಿದೆ: ವಿನ್ಯಾಸಕರು ವರ್ಣಕರಣ ಉಪವಾಹಕಗಳ ಆವರ್ತನೆಯನ್ನು ರೇಖಾ ಆವರ್ತನೆಯ n + 0.5 ಗುಣಾಂಶವಾಗಿ ಮಾಡುವುದರ ಮೂಲಕ ಉಜ್ವಲಕರಣ ಸೂಚಕ ಮತ್ತು ವರ್ಣಕರಣ ಸೂಚಕಗಳ ನಡುವಣ ಅಡ್ಡಿಯನ್ನು ತಗ್ಗಿಸಬಯಸಿದರು. (ಇದನ್ನು ಇನ್ನೊಂದು ವಿಧದಲ್ಲಿ ಹೇಳಬೇಕೆಂದರೆ ವರ್ಣ ಉಪವಾಹಕ ಆವರ್ತನೆಯು ರೇಖಾ ಆವರ್ತನೆಯ ಅರ್ಧವನ್ನು ಬೆಸ ಗುಣಾಂಕದಿಂದ ಗುಣಿಸಿದಾಗ ಬರುವ ಗುಣಲಬ್ಧ.) ನಂತರ ಅವರು ಶ್ರಾವ್ಯ ಉಪವಾಹಕದ ಆವರ್ತನೆಯನ್ನು ರೇಖಾ ಆವರ್ತನವನ್ನು ಒಂದು ಸರಿ ಅಂಕಿಯಿಂದ ಗುಣಿಸಿ ಶ್ರಾವ್ಯ ಸಿಗ್ನಲ್ ಮತ್ತು ವರ್ಣಕರಣ ಸಿಗ್ನಲ್ ಗಳ ಗೋಚರವಾದ ಅಡ್ಡಿಯನ್ನು (ಅಂತರ್ಧೃವೀಕರಣ) ಕನಿಷ್ಠವಾಗಿಸಲು ಯತ್ನಿಸಿದರು. ಮೂಲ ಕಪ್ಪು-ಬಿಳುಪು ಗುಣಮಟ್ಟಗಳು, ತಮ್ಮ 15750 ಹರ್ಟ್ಝ್ ಆವರ್ತನೆ ಮತ್ತು 4.5 ಮೆಗಾಹರ್ಟ್ಝ್ ಶ್ರಾವ್ಯ ಉಪವಾಹಕಗಳನ್ನು ಹೊಂದಿದ್ದು, ಈ ಅವಶ್ಯಕತೆಗಳನ್ನು ಪೂರೈಸದ ಕಾರಣ ವಿನ್ಯಾಸಕರು ಶ್ರಾವ್ಯ ಉಪವಾಹಕಗಳ ಆವರ್ತನೆಯನ್ನು ಏರಿಸಬೇಕಿತ್ತು ಅಥವಾ ರೇಖಾ ಆವರ್ತನೆಯನ್ನು ತಗ್ಗಿಸಬೇಕಿತ್ತು. ಶ್ರಾವ್ಯ ಉಪವಾಹಕಗಳ ಆವರ್ತನೆಯನ್ನು ಏರಿಸಿದರೆ ಪ್ರಸ್ತುತ ಕಪ್ಪು-ಬಿಳುಪು ಗ್ರಾಹಕಗಳು ಶಬ್ದ ಸಿಗ್ನಲ್ ಗೆ ಸರಿಯಾಗಿ ಮೇಳಯಿಸುವುದು ಆಗುತ್ತಿರಲಿಲ್ಲ. ರೇಖಾ ಆವರ್ತನೆಯನ್ನು ತಗ್ಗಿಸಿದರೆ ಹೆಚ್ಚು ವ್ಯತ್ಯಾಸವಾಗಲಾರದು, ಏಕೆಂದರೆ ಎನ್ ಟಿ ಎಸ್ ಸಿ ಯ ಸಿಗ್ನಲ್ ನಲ್ಲಿನ ಸಮ ಹಾಗೂ ಲಂಬ ರೇಖೆಗಳ ಸಮಸಾಮಯಿಕ ಮಾಹಿತಿಯು ಗ್ರಾಹಕವು ಸಾಕಷ್ಟು ಪ್ರಮಾಣದ ವ್ಯತ್ಯಯಗಳನ್ನು ರೇಖಾ ಆವರ್ತನೆಯಲ್ಲಿ ತಡೆಯಲು ಅನುವಾಗಿಸುತ್ತದೆ. ಆದ್ದರಿಂದ ಎಂಜಿನಿಯರ್ ಗಳು ರೇಖಾ ಆವರ್ತನೆಯನ್ನೇ ವರ್ಣ ಮಟ್ಟಕ್ಕಾಗಿ ಬದಲಾಯಿಸಲು ನಿರ್ಧರಿಸಿದರು. ಕಪ್ಪು-ಬಿಳುಪು ಮಾದರಿಯಲ್ಲಿ, ಶ್ರಾವ್ಯ ಉಪವಾಹಕ ಮತ್ತು ರೇಖಾ ಆವರ್ತನೆಗಳ ಪರಿಮಾಣವು 4.5 ಮೆಗಾಹರ್ಟ್ಝ್ / 15,750 = 285.71 ಆಗಿರುತ್ತದೆ. ವರ್ಣ ಮಾದರಿಯಲ್ಲಿ, ಇದು 286 ರ ಸಂಖ್ಯೆಗೆ ಪೂರ್ಣಗೊಳಿಸಲಾಗುತ್ತದೆ; ಎಂದರೆ, ವರ್ಣ ಮಾದರಿಯ ರೇಖಾ ವೇಗವು 4.5 ಮೆಗಾಹರ್ಟ್ಝ್ / 286 = ಅಂದಾಜು 15,734 ರೇಖೆಗಳು ಪ್ರತಿr ಸೆಕೆಂಡ್ ಗೆ ಇರುತ್ತವೆ. ಕ್ಷೇತ್ರಕ್ಕೆ (ಮತ್ತು ಚೌಕಟ್ಟಿಗೆ) ಇಂತಿಷ್ಟು ವೀಕ್ಷಣ ರೇಖೆಗಳನ್ನು ಇರಿಸಿಕೊಂಡೇ ಬರಬೇಕಿದ್ದು, ರೇಖೆಗಳ ವೇಗವು ಕಡಿಮೆಯಾದಲ್ಲಿ ಕಡಿಮೆ ಕ್ಷೇತ್ರ ವೇಗವನ್ನು ಉಂಟುಮಾಡುತ್ತಿತ್ತು. (4,500,000 / 286) ಅನ್ನು 262.5 ರೇಖೆಗಳು ಪ್ರತಿ ಕ್ಷೇತ್ರಕ್ಕೆ ಯಿಂದ ಭಾಗಿಸಿದರೆ ಸುಮಾರು ಸೆಕೆಂಡಿಗೆ 59.94 ಕ್ಷೇತ್ರಗಳಾಗುತ್ತದೆ.
ಪ್ರಸರಣ ಹದಗೊಳಿಸುವ ಯೋಜನೆ
[ಬದಲಾಯಿಸಿ]ಎನ್ ಟಿ ಎಸ್ ಸಿ ಟೆಲಿವಿಷನ್ ಚಾನಲ್ ಪ್ರಸರಣಗೊಳ್ಳಲು ಒಟ್ಟು 6 ಮೆಗಾಹರ್ಟ್ಝ್ ಗಳ ಬ್ಯಾಂಡ್ ವಿಸ್ತಾರವನ್ನು ಆಕ್ರಮಿಸುತ್ತದೆ. ವರ್ಧಿತ-ಹದಗೊಳಿಸಿದ ಮೂಲ ವಿಡಿಯೋ ಸಿಗ್ನಲ್ 500 ಕಿಲೋಹರ್ಟ್ಝ್ ಮತ್ತು 5.45 ಮೆಗಾಹರ್ಟ್ಝ್ ಗಳ ತರಂಗಾಂತರದಲ್ಲಿ, ಚಾನಲ್ ನ ಕೆಳ ಮೇರೆಗಿಂತಲೂ ಎತ್ತರದ ಮಟ್ಟದಲ್ಲಿ ಪ್ರಸಾರವಾಗುತ್ತದೆ. ವಿಡಿಯೋ ವಾಹಕವು ಕೆಳ ಮೇರೆಗಿಂತಲೂ 1.25 ಮೆಗಾಹರ್ಟ್ಝ್ ಗಳಷ್ಟು ಮೇಲಿರುತ್ತದೆ. ಸುಮಾರು AM ಸಿಗ್ನಲ್ ಗಳಂತೆ, ವಿಡಿಯೋ ವಾಹಕವು ಎರಡು ಸೈಡ್ ಬ್ಯಾಂಡ್ ಗಳನ್ನು, ಒಂದು ವಾಹಕದ ಮೇಲೆ ಮತ್ತು ಒಂದು ಕೆಳಗೆ, ನಿರ್ಮಿಸುತ್ತದೆ. ಎರಡು ಸೈಡ್ ಬ್ಯಾಂಡ್ ಗಳೂ 4.2 ಮೆಗಾಹರ್ಟ್ಝ್ ವಿಸ್ತಾರ ಹೊಂದಿರುತ್ತವೆ. ಇಡೀ ಮೇಲಿನ ಸೈಡ್ ಬ್ಯಾಂಡ್ ಪ್ರಸರಿತವಾಗುತ್ತದೆ, ಆದರೆ ಕೆಳಗಿನ ಸೈಡ್ ಬ್ಯಾಂಡ್ ನ, ವೆಸ್ಟೀಜಿಯಲ್ ಸೈಡ್ ಬ್ಯಾಂಡ್ ಎಂದು ಕರೆಸಿಕೊಳ್ಳುವ, ಕೇವಲ 1.25 ಮೆಗಾಹರ್ಟ್ಝ್ ಗಳು ಮಾತ್ರ ಪ್ರಸಾರವಾಗುತ್ತವೆ. ಮೇಲೆ ಕಾಣಿಸಿದಂತೆ, ವರ್ಣ ಉಪವಾಹಕವು ವಿಡಿಯೋ ವಾಹಕಕ್ಕಿಂತಲೂ 3.579545 ಮೆಗಾಹರ್ಟ್ಝ್ ಮೇಲಿರುತ್ತದೆ ಮತ್ತು ಕ್ವಾಡ್ರಾಪ್ಚರ್-ವರ್ಧಕ-ಹದಗೊಳಿತವಾಗಿದ್ದು ಪ್ರಕ್ಷುಬ್ಧ ವಾಹಕವನ್ನು ಹೊಂದಿರುತ್ತದೆ. ಶಬ್ದ ಸೂಚಕವು ಆವರ್ತನ-ಹದಗೊಳಿತವಾಗಿದ್ದು, FM ರೇಡಿಯೋ ಕೇಂದ್ರಗಳು 88–108 ಮೆಗಾಹರ್ಟ್ಝ್ ಗಳ ಬ್ಯಾಂಡ್ ನಲ್ಲಿ ಪ್ರಸಾರ ಮಾಡುವ ಶಬ್ದ ಸೂಚಕಗಳಂತೆಯೇ ಇದ್ದು, +/- 25 ಕಿಲೋಹರ್ಟ್ಝ್ ಗಳ ಗರಿಷ್ಠ ಆವರ್ತನ ವ್ಯತ್ಯಾಸ ಹೊಂದಿರುತ್ತದೆ; FM ಬ್ಯಾಡ್ ನಲ್ಲಿ ಈ ವ್ಯತ್ಯಾಸವು 75 ಕಿಲೋಹರ್ಟ್ಝ್ ಗಳಷ್ಟಿರುತ್ತದೆ.
ವಿಡಿಯೋ ವಾಹಕದ ಮೇಲೆ 4.5 ಮೆಗಾಹರ್ಟ್ಝ್ ಇರುವ ಪ್ರಮುಖ ಶ್ರಾವ್ಯ ವಾಹಕವು making it ವಾನಲ್ ನ ಮೇಲುಸ್ತರಕ್ಕಿಮತಲೂ 250ಕಿಲೋಹರ್ಟ್ಝ್ ಕೆಳಗಿರುತ್ತದೆ. ಕೆಲವೊಮ್ಮೆ ಚಾನಲ್ MTS ಸಿಗ್ನಲ್ ಗಳನ್ನು ಹೊಂದಿದ್ದು,
ಶ್ರಾವ್ಯ ಸಿಗ್ನಲ್ ಗಳಿಗೆ ಒಂದು ಅಥವಾ ಎರಡು ಉಪವಾಹಕಗಳನ್ನು ಜೋಡಿಸುವುದರ ಮೂಲಕ, ಒಂದಕ್ಕಿಂತಲೂ ಹೆಚ್ಚು ಶ್ರಾವ್ಯ ಸಿಗ್ನಲ್ ನೀಡುವುದು ಮತ್ತು ಪ್ರತಿ ಸಿಗ್ನಲಗ ರೇಖಾ ಆವರ್ತನೆಯ ಹಲವಾರು ಪಟ್ಟುಗಳಷ್ಟಕ್ಕೆ ಸಮಸಾಮಯಿಕವಾಗುತ್ತದೆ. ಸ್ಟೀರಿಯೋ ಶ್ರವಣ ಮತ್ತು/ಅಥವಾ ಎರಡನೆಯ ಶ್ರಾವ್ಯ ಕಾರ್ಯಕ್ರಮದಲ್ಲಿ ಈ ವಿಧವು ಸರ್ವೇಸಾಮಾನ್ಯವಾಗಿರುತ್ತದೆ. ಇದೇ ವಿಸ್ತರಣೆಗಳನ್ನು ಎ ಟಿ ಎಸ್ ಸಿ ಯಲ್ಲೂ ಬಳಸಲಾಗುತ್ತದೆ, ಇಲ್ಲಿ ಎ ಟಿ ಎಸ್ ಸಿ ಡಿಜಿಟಲ್ ವಾಹಕವು ಚಾನಲ್ ನ ಕೆಳಸ್ತರಕ್ಕಿಮತಲೂ 1.31 ಮೆಗಾಹರ್ಟ್ಝ್ ಮೇಲೆ ಪ್ರಸಾರವಾಗುತ್ತದೆ. Cvbs (ಕಾಂಪೊಸೈಟ್ ವರ್ಟಿಕಲ್ ಬ್ಲ್ಯಾಂಕಿಂಗ್ ಸಿಗ್ನಲ್) (ಕೆಲವೊಮ್ಮೆ "ಸೆಟಪ್" ಎಂದು ಕರೆಯಲಾಗುತ್ತದೆ) ಒಂದು "ಬ್ಲ್ಯಾಕ್" ಮತ್ತು "ಬ್ಲ್ಯಾಂಕಿಂಗ್" ಮಟ್ಟಗಳ ನಡುವಿನ ವೋಲ್ಟೇಜ್ ಪರಿಹಾರವಾಗಿದೆ. Cvbs ಎನ್ ಟಿ ಎಸ್ ಸಿ ಗೆ ವಿಶಿಷ್ಟವಾದುದಾಗಿದೆ. ಎನ್ ಟಿ ಎಸ್ ಸಿ ವಿಡಿಯೋಗಳನ್ನು ಹೆಚ್ಚು ಸುಲಭವಾಗಿ ತನ್ನ ಮೂಲ ಸಮಸಾಮಯಿಕ ಸಿಗ್ನಲ್ ಗಳಿಂದ ಬೇರ್ಪಡಿಸುವಂತಹ ಸೌಲಭ್ಯವು Cvbsಗೆ ಇದೆ.
ಚೌಕಟ್ಟುವೇಗದ ಪರಿವರ್ತನೆ
[ಬದಲಾಯಿಸಿ]ಚಲನಚಿತ್ರದ ಸೆಕೆಂಡಿಗೆ 24.0 ಚೌಕಟ್ಟುಗಳಂತೆ ಚಲಿಸುವ ಚಲನಚಿತ್ರದ ವೇಗಕ್ಕೂ, ಎನ್ ಟಿ ಎಸ್ ಸಿ ಮಟ್ಟವಾದ ಸುಮಾರು 29.97 ಚೌಕಟ್ಟುಗಳು ಪ್ರತಿ ಸೆಕೆಂಡ್ ಗೂ ಚೌಕಟ್ಟುವೇಗದಲ್ಲಿ ಬಹಳವೇ ವ್ಯತ್ಯಾಸವಿದೆ. 576i ವಿಡಿಯೋ ಕ್ರಮದಂತಲ್ಲದೆ, ಈ ವ್ಯತ್ಯಾಸವನ್ನು ಸರಳವಾದ ಸ್ಪೀಡ್-ಅಪ್ (ವೇಗಗೊಳಿಸು)ನಿಂದ ಬಗೆಹರಿಸಲಾಗುವುದಿಲ್ಲ 3:2 ಪುಲ್ ಡೌನ್ ಎಂಬ ಒಂದು ಸಂಕೀರ್ಣ ವಿಧಿಯನ್ನು ಬಳಸಲಾಗುತ್ತದೆ. ಮೂರು ವಿಡಿಯೋ ವರ್ಗಗಳಿಗೆ ಒಂದು ಚಿತ್ರದ ಚೌಕಟ್ಟು ರವಾನೆಯಾಗುತ್ತದೆ(1½ ವಿಡಿಯೋ ಚೌಕಟ್ಟು ಕಾಲಗಳು)ಮತ್ತು ಮುಂದಿನ ಚೌಕಟ್ಟು ಎರಡು ವಿಡಿಯೋ ವರ್ಗಗಳಿಗೆ ರವಾನೆಯಾಗುತ್ತದೆ(ಒಂದು ವಿಡಿಯೋ ಚೌಕಟ್ಟು ಕಾಲ). ಎರಡು 24 ಚೌಕಟ್ಟು/ಗಳು ಚಿತ್ರ ಚೌಕಟ್ಟುಗಳು ಹೀಗಾಗಿ ಐದು 60 ಹರ್ಟ್ಝ್ ವರ್ಗಗಳಲ್ಲಿ ರವಾನೆಯಾಗುತ್ತವೆ, ಅಲ್ಲಿಗೆ ಒಂದು ಚಿತ್ರ ಚೌಕಟ್ಟಿಗೆ ಸರಾಸರಿ 2½ ವಿಡಿಯೋ ವರ್ಗಗಳು. ಹೀಗೆ ಸರಾಸರಿ ಚೌಕಟ್ಟಿನ ವೇಗವು 60 / 2.5 = 24 ಚೌಕಟ್ಟು/ಗಳು ಆದ್ದರಿಂದ ಸರಾಸರಿ ಚಿತ್ರದ ವೇಗವು ಸರಿಯಾಗಿ ಎಷ್ಟಿರಬೇಕೋ ಅಷ್ಟೇ ಇದೆ. ಆದರೆ, ಕೆಲವು ಅಡಚಣೆಗಳಿವೆ. ಸ್ಥಬ್ಧ-ಚೌಕಟ್ಟನ್ನು ಹಿನ್ನೆಲೆಯಲ್ಲಿ ಪ್ರದರ್ಶಿಸಿದಾಗ ಎರಡು ವಿಭಿನ್ನ ಚಿತ್ರ ಚೌಕಟ್ಟುಗಳ ಕ್ಷೇತ್ರಗಳನ್ನು ಹೊಂದಿದ ಒಂದು ವಿಡಿಯೋ ಚೌಕಟ್ಟು ಮೂಡುತ್ತದೆ, ಆದ್ದರಿಂದ ಚೌಕಟ್ಟುಗಳನಡುವಣ ಯಾವುದೇ ಚಲನೆಯೂ ತೀವ್ರವಾದ ಹಿಂದು-ಮುಂದು ಚಲಿಸುವ ಮಿಣುಕಿನಂತೆ ಭಾಸವಾಗುತ್ತದೆ. ಮಂದವಾದ ಕ್ಯಾಮರಾ ಚಲನೆಗಳಲ್ಲಿ ಗಮನಾರ್ಹವಾದ ಅಸ್ಥಿರತೆ/"ಉಗ್ಗು" ಸಹ ಕಾಣಬಹುದು(ಟೆಲಿಸೈನ್ ಜಡರ್) 3:2 ಜಗ್ಗುವಿಕೆಯನ್ನು ಇಲ್ಲವಾಗಿಸಲು, ಎನ್ ಟಿ ಎಸ್ ಸಿ ಟೆಲಿವಿಷನ್ ಗೆಂದೇ ವಿಶೇಷವಾಗಿ ತೆಗೆದಂತಹ ಚಿತ್ರಗಳು 30 ಚೌಕಟ್ಟುಗಳು ಪ್ರತಿ ಸೆಕೆಂಡ್ ನ ವೇಗದಲ್ಲಿ ತೆಗೆದವಾಗಿರುತ್ತವೆ.[ಸೂಕ್ತ ಉಲ್ಲೇಖನ ಬೇಕು] 576i ವಸ್ತುಗಳನ್ನು ಎನ್ ಟಿ ಎಸ್ ಸಿ ಉಪಕರಣಗಳಲ್ಲಿ ವೀಕ್ಷಿಸಲು(ಯೂರೋಪಿಯನ್ ಟೆಲಿವಿಷನ್ ಧಾರವಾಹಿಗಳು ಮತ್ತು ಕೆಲವು ಯೂರೋಪಿಯನ್ ಚಲನಚಿತ್ರಗಳಂತಹವನ್ನು) ಒಂದು ಮಾದರಿ ಬದಲಾವಣೆಯು ಜರುಗಬೇಕಾಗುತ್ತದೆ. ಇದನ್ನು ಸಾಧಿಸಲು ಎರಡು ಮೂಲ ವಿಧಿಗಳಿವೆ:
- ಚೌಕಟ್ಟಿನ ವೇಗವನ್ನು 25ರಿಂದ 23.976 ಚೌಕಟ್ಟುಗಳು ಪ್ರತಿ ಸೆಕೆಂಡ್ ಗೆ ಇಳಿಸಬಹುದು(ಸುಮಾರು 4% ಮಂದಗೊಳಿಸುವಿಕೆ), ನಂತರ 3:2 ಜಗ್ಗುವಿಕೆಗೆ ಅನ್ವಯಿಸಬಹುದು.
- ಪಕ್ಕದ ಚೌಕಟ್ಟಿನಲ್ಲಿರುವುವನ್ನು ಅಂತರ್ಧೃವೀಕರಣಗೊಳಿಸಿ ಹೊಸ ಅಂತರಿತ (ಮಧ್ಯಮ) ಚೌಕಟ್ಟುಗಳನ್ನು ಪಡೆಯುವುದು;ಹೆಚ್ಚು ಆಧುನಿಕವಾದ ಚಚಿತ್ರ-ಗ್ರಹಿಸುವ ಗಣಕ ಕ್ರಮಾವಳಿಗಳನ್ನು ಬಳಸದಿದ್ದಲ್ಲಿ, ಇದು ಮಾನವನಿರ್ಮಿತ ಕೃತಿಗಳನ್ನು ಪರಿಚಯಿಸುತ್ತದೆ ಮತ್ತು ಬಹಳ ಕಡಿಮೆ ತರಬೇತಿ ಪಡೆದ ಕಣ್ಣುಗಳು ಸಹ ಕ್ರಮಗಳ ನಡುವೆ ಬದಲಾಯಿಮಲ್ಪಟ್ಟಂತಹ ವಿಡಿಯೋಗಳನ್ನು ಕಂಡುಹಿಡಿದುಬಿಡುತ್ತವೆ.
ಕ್ರಮಾವಳಿ ಉಪಗ್ರಹ ಪ್ರಸರಣಕ್ಕೆ ರೂಪುಗೊಳಿಸುವಿಕೆ
[ಬದಲಾಯಿಸಿ]ಉಪಗ್ರಹ ಶಕ್ತಿಯು ಬಹಳ ಕುಂಠಿತವಾದುದರಿಂದ, ಉಪತ್ರಹಗಳ ಮೂಲಕ ಕ್ರಮಾವಳಿ ವಿಡಿಯೋ ಪ್ರಸರಣವು ಭೂವಲಯದ ಟಿವಿ ಪ್ರಸರಣಕ್ಕಿಂತಲೂ ಭಿನ್ನವಾಗಿರುತ್ತದೆ. AM ಒಂದು ಸರಳರೇಖೆಯಲ್ಲಿರುವ, ಹದಗೊಳಿಸುವ ಕ್ರಮವಾಗಿದ್ದು, ದತ್ತ ಹದಗೆಡಿಸಿದಂತಹ ಸಿಗ್ನಲ್-ಹಾಗೂ-ಶಬ್ದ ಪರಿಮಾಣವು (SNR) ಅಷ್ಟೇ ಹಿರಿಯ ಪ್ರಮಾಣದ ಗ್ರಹಿತ RF SNR ಅಪೇಕ್ಷಿಸುತ್ತದೆ. ಸ್ಟುಡಿಯೋ ಗುಣಮಟ್ಟದ SNR ವಿಡಿಯೋ 50 dBಗಳಿಗಿಂತಲೂ ಹೆಚ್ಚಿನದಾಗಿರುತ್ತದೆ, ಆದ್ದರಿಂದ ಅಂ ಬಹಳ ದುಬಾರಿ ಮಟ್ಟದ ಶಕ್ತಿಯನ್ನ ಮತ್ತು/ಅಥವಾ ಬೃಹತ್ ಆಂಟೆನಾಗಳನ್ನು ಹೊಂದಬೇಕಾಗುತ್ತದೆ. ಬದಲಿಗೆ, ವೈಡ್ ಬ್ಯಾಂಡ್ FM ಅನ್ನು RF ಬ್ಯಾಂಡ್ ವಿಸ್ತಾರದ ಬದಲಾಗಿ ಬಳಸುವುದರ ಮೂಲಕ ಕಡಿಮೆ ಶಕ್ತಿಯನ್ನು ತೆಗೆದುಕೊಳ್ಳಲಾಗುತ್ತದೆ. ಚಾನೆಲ್ ನ ಬ್ಯಾಂಡ್ ವಿಸ್ತಾರವನ್ನು 6ರಿಂದ 36 ಮೆಗಾಹರ್ಟ್ಝ್ ಗೆ ಹೆಚ್ಚಿಸಿದರೆ 10 dBಯ ಅಥವಾ ಅದಕ್ಕಿಂತಲೂ ಕಡಿಮೆ dBಯ ಒಂದು RF SNR ಅನ್ನು ಅನುಮತಿಸುತ್ತದೆ.
ಹೆಚ್ಚು ವಿಸ್ತಾರಗೊಂಡ ಶಬ್ದ ಬ್ಯಾಂಡ್ ವಿಸ್ತಾರವು ಈ 40 dB ಶಕ್ತಿ ಉಳಿತಾಯವನ್ನು
36 ಮೆಗಾಹರ್ಟ್ಝ್ / 6 ಮೆಗಾಹರ್ಟ್ಝ್ = 8 dB ಗೆ ಇಳಿಸಿ ನಿವ್ವಳ 32 dBಯಷ್ಟು ತಗ್ಗಿಸುತ್ತದೆ. ಶಬ್ದವು ಭೂವಲಯದ ಪ್ರಸರಣಾಗಿಧದಲ್ಲಿ ಒಂದು FM ಉಪವಾಹಕವಾಗಿದೆ, ಆದರೆ 4.5 ಮೆಗಾಹರ್ಟ್ಝ್ ಗಿಂತಲೂ ಹೆಚ್ಚಿನ ಆವರ್ತನೆಯು ಶ್ಯಾವ್ಯ/ದೃಶ್ಯ ವ್ಯತಿಕರಣ ಇಳಿಸಲು ಬಳಸಲಾಗುತ್ತದೆ. 6.8, 5.8 ಮತ್ತು 6.2 ಮೆಗಾಹರ್ಟ್ಝ್ ಸಾಮಾನ್ಯವಾಗಿ ಬಳಸಲ್ಪಡುತ್ತವೆ. ಸ್ಟೀರಿಯೋ ಸಂಕೀರ್ಣ ಅಥವಾ ಪ್ರತ್ಯೇಕವಿರಬಹುದು, ಮತ್ತು ಸಂಬಂಧಿಸದ ಶ್ರಾವ್ಯ ಮತ್ತು ಮಾಹಿತಿ ಸಿಗ್ನಲ್ ಗಳನ್ನು ಹೆಚ್ಚುವರಿ ಉಪವಾಹಕಗಳ ಮೇಲೆ ಇರಿಸಬಹುದು. ಒಂದು ತ್ರಿಕೋಣಾಕಾರದ 60 ಹರ್ಟ್ಝ್ ಶಕ್ತಿ ವಿಕೀರ್ಣಕ ತರಂಗರೂಪಗಳನ್ನು ಕಾಂಪೊಸೈಟ್ ಬೇಸ್ ಬ್ಯಾಂಡ್ ಸಿಗ್ನಲ್ ಗೆ ಹದಗೊಳಿಸುವ ಮುನ್ನವೇ ಸೇರಿಸಲಾಗುವುದು(ದೃಶ್ಯ ಮತ್ತು ಶ್ರಾವ್ಯ ಹಾಗೂ ಮಾಹಿತಿ ಉಪವಾಹಕಗಳು). ಇದು ಉಪಗ್ರಹದ ಇಳಿಸುವಿಕೆಯಾದ ಪವರ್ ಸ್ಪೆಕ್ಟ್ರಲ್ ಡೆನ್ಸಿಟಿಯನ್ನು, ವಿಡಿಯೋ ಸಿಗ್ನಲ್ ಕಳೆದುಹೋದ ಸಂದರ್ಭದಲ್ಲಿ, ಸೀಮಿತಗೊಳಿಸುತ್ತದೆ. ಇಲ್ಲದಿದ್ದರೆ ಉಪಗ್ರಹವು ತನ್ನೆಲ್ಲಾ ಶಕ್ತಿಯನ್ನು ಬಳಸಿ ಒಂದೇ ಆವರ್ತನೆಯನ್ನು ಪ್ರಸರಿಸಬಹುದು, ಇದು ಭೂವಲಯದ ಮೈಕ್ರೋವೇವ್ ಕೊಂಡಿಗಳೊಡನೆ ಇದೇ ಆವರ್ತನೆಯ ಬ್ಯಾಂಡ್ ನಲ್ಲಿ ವ್ಯತಿತವಾಗುತ್ತದೆ. ಅರ್ಧ ಟ್ರಾನ್ಸ್ ಪಾಂಡರ್ ವಿಧದಲ್ಲಿ, ಕಾಂಪೊಸೈಟ್ ಬ್ಯಾಂಡ್ ಸಿಗ್ನಲ್ ನಲ್ಲಿ ಆವರ್ತನ ವ್ಯತಿತತೆಯು 18 ಮೆಗಾಹರ್ಟ್ಝ್ ಗೆ ಇಳಿಸಲಾಗುವುದು; ತನ್ಮೂಲಕ ಇನ್ನೊಂದು ಭಾಗದಲ್ಲಿರುವ 36 ಮೆಗಾಹರ್ಟ್ಝ್ ಟ್ರಾನ್ಸ್ ಪಾಂಡರ್ ಗೆ ಅನುಕೂಲವಾಗುವುದು. ಇದು FM ಉಪಯುಕ್ತತೆಯನ್ನು ಕೊಂಚ ತಗ್ಗಿಸುತ್ತದೆ ಮತ್ತು ಮರು ಗಳಿಸಿದ SNRಗಳು ಸಮ್ಮಿಳಿತ ಸಿಗ್ನಲ್ ಶಕ್ತಿಯು "ಬ್ಯಾಕ್ಡ್ ಆಫ್' (ಹಿಂತೆಗೆದುಕೊಳ್ಳಬೇಕು) ಆಗಿಸುವುದರ ಮೂಲಕ ಅಂತರ್ಧೃಕರಣವು ಉಪಗ್ರಹ ಟ್ರಾನ್ಸ್ ಪಾಂಡರ್ ನಿಂದ ವಿರೂಪಗೊಳ್ಳದಿರಲು ಇದನ್ನು ಮತ್ತಷ್ಟು ಕಡಿಮೆಯಾಗಿಸಬೇಕಾಗುತ್ತದೆ. ಒಂಟಿ FM ಸಿಗ್ನಲ್ ಸ್ಥಿರ ವೃದ್ಧಿಯುಳ್ಳದ್ದಾಗಿರುವುದು, ಆದ್ದರಿಂದ ಟ್ರಾನ್ಸ್ ಪಾಂಡರ್ ಅನ್ನು ವಿರೂಪಗೊಳಿಸದೆಯೇ ಸಾಂದ್ರಗೊಳಿಸಬಲ್ಲದು.
ಕ್ಷೇತ್ರ ವಿಧಿ
[ಬದಲಾಯಿಸಿ][೧೫] ಎನ್ ಟಿ ಎಸ್ ಸಿ ಚೌಕಟ್ಟು ಒಂದು 'ಸಮ' ಕ್ಷೇತ್ರ, ಅದನ್ನು ಹಿಂಬಾಲಿಸಿ ಒಂದು 'ಬೆಸ' ಕ್ಷೇತ್ರವನ್ನು ಹೊಂದಿರುತ್ತದೆ. ಕ್ರಮಾವಳಿಯ ಸಿಗ್ನಲ್ ಗಳನ್ನು ಸ್ವೀಕರಿಸುವ ವಿಚಾರದಲ್ಲಿ, ಅದು ಸಂಪೂರ್ಣ ಸಾಂಪ್ರದಾಯಿಕ ವಿಷಯವಾಗಿದ್ದು, ಅದರಿಂದ ಯಾವುದೇ ವ್ಯತ್ಯಾಸಗಳಿಲ್ಲ. ಅದು ರಸ್ತೆಯ ಮಧ್ಯಭಾಗದಲ್ಲಿ ಗೋಚರಿಸುವಂತಹ ಮುರಿದ ರೇಖೆಗಳಂತೆಯೇ ಹೊರತು, ಅದು ರೇಖೆ/ಸ್ಥಳ ಅಥವಾ ಸ್ಥಳ/ರೇಖೆ ಜೋಡಿಯೇ ಎಂಬುದು ಅಪ್ರಸ್ತುತವಾಗುತ್ತದೆ, ಚಾಲಕನಿಗೆ ಎರಡೂ ಒಂದೇ ರೀತಿ ಪರಿಣಾಮ ನೀಡುತ್ತವೆ. ಡಿಜಿಟಲ್ ಟೆಲಿವಿಷನ್ ಮಾದರಿಗಳನ್ನು ಪರಿಚಯಿಸಿದ ನಂತರ ಪರಿಸ್ಥಿತಿಯು ಸ್ವಲ್ಪ ಬದಲಾಗಿದೆ. ಸುಮಾರು ಡಿಜಿಟಲ್ ಟಿವಿ ಮಾದರಿಗಳು, ಜನಪ್ರಿಯ ಡಿವಿಡಿ ಮಾದರಿಗಳನ್ನೂ ಒಳಗೊಂಡಂತೆ, ಎನ್ ಟಿ ಎಸ್ ಸಿ ಮೂಲದ ವಿಡಿಯೋಗಳನ್ನು ಮೊದಲು ಸಮ ಕ್ಷೇತ್ರದಲ್ಲಿ ರೆಕಾರ್ಡ್ ಆಗಿರುವ ಚೌಕಟ್ಟಿನಲ್ಲಿ ರೆಕಾರ್ಡ್ ಮಾಡಲಾಗುತ್ತದೆ(ಡಿವಿಡಿಯ ಅಭಿವೃದ್ಧಿಯು ಸಾಂಪ್ರದಾಯಿಕವಾಗಿ ಎನ್ ಟಿ ಎಸ್ ಸಿ ಬಳಸುವ ಪ್ರದೇಶಗಳಲ್ಲಿಯೇ ಜರುಗಿತು). ಆದರೆ ಈ ಚೌಕಟ್ಟು ಕ್ರಮಾನುಗತವು PAL ಮಾದರಿಯ ಮೂಲಕ ವಲಸೆ ಬಂದಿರುವ (ವಾಸ್ತವಿಕವಾಗಿ ತಾಂತ್ರಿಕವಾಗಿ ದೋಷಯುಕ್ತ ವಿವರಣೆ) ಡಿಜಿಟಲ್ ವಿಡಿಯೋ ಆಗಿದ್ದು,ಪರಿಣಾಮವಾಗಿ ಸರಿ ಕ್ಷೇತ್ರಗಳು ಆಗಾಗ್ಗೆ ಚೌಕಟ್ಟಿನಲ್ಲಿ ಮೊದಲು ಬರೆಯಲ್ಪಡುತ್ತವೆ(ಯೂರೋಪಿಯನ್ 625 ಸಾಲುಗಳ ವ್ಯವಸ್ಥೆಯನ್ನು ಬೆಸ ಚೌಕಟ್ಟು ಮೊದಲು ಎಂದೇ ನಿರ್ದೇಶಿಸಲಾಗಿದೆ. ಇದು ಈಗೇನೂ ಸಾಂಪ್ರದಾಯಿಕವಾಗಿ ಉಳಿದಿಲ್ಲವೇಕೆಂದರೆ ಡಿಜಿಟಲ್ ವಿಡಿಯೋದ ಚೌಕಟ್ಟು ದಾಖಲಿತ ಮಾಧ್ಯಮದಲ್ಲಿ ಒಂದು ವಿಶಿಷ್ಟ ಅಸ್ತಿತ್ವವುಳ್ಳದ್ದಾಗಿದೆ. ಹೀಗಾಗಿ ಹಲವಾರು ಎನ್ ಟಿ ಎಸ್ ಸಿ ಯೇತರ ಮೂಲದ ಡಿಜಿಟಲ್ ಮಾದರಿಗಳನ್ನು ಉತ್ಪಾದಿಸುವಾಗ (ಡಿವಿಡಿ ಒಳಗೊಂಡಂತೆ)ಕ್ರೇತ್ರಕ್ರಮವನ್ನು ವಿರುದ್ಧವಾಗಿಸುವುದು ಅಗತ್ಯ; ಇಲ್ಲವಾದರೆ ಚಲಿಸುವ ಬಿಂಬಗಳನ್ನು ಕ್ಷೇತ್ರಗಳಿಗಿಂತಲೂ ಮೊದಲೇ ಎಂಬಂತೆ ತೋರುವುದರಿಂದ ಮತ್ತು ಮುಂದಿನದಕ್ಕೆ ಮತ್ತೆ ಹಾರುವುದರಿಂದ, ಚಲಿಸುವ ಬಿಂಬಗಳ ಮೇಲೆ ಸ್ವೀಕರಿಸಲಾಗದ ಅಲುಗಾಡುವ 'ಕೂಂಬ್' ಪರಿಣಾಮವು ಉಂಟಾಗಿಬಿಡುತ್ತದೆ. ಎನ್ ಟಿ ಎಸ್ ಸಿ ಯೇತರ ಕ್ರಮಗತ ವಿಡಿಯೋವು ಪರಸ್ಪರಹೆಣೆತಕ್ಕೆ ವರಗಿತಸಂಕೇತವಾಗುವುದರಿಂದಲೂ ಮತ್ತು ಇದರ ವೈಪರೀತ್ಯವೂ ನಿಜವಾದುದರಿಂದಲೂ ಇಂತಹ ಪ್ರಸಂಗಗಳು ಅಪಾಯಕರವಾಗುತ್ತವೆ. ಮುಂದುವರೆದ ಚೌಕಟ್ಟುಗಳನ್ನು ಅಥವಾ ಟ್ರಾನ್ಸ್ ಕೋಡ್ ವಿಡಿಯೋಗಳನ್ನು ಮರುಹೊಂದುವ ವ್ಯವಸ್ಥೆಗಳು 'ಕ್ಷೇತ್ರ ಕ್ರಮ'ವು ಪಾಲಿಸಲ್ಪಡುವುದನ್ನು ಖಾತ್ರಿ ಮಾಡಿಕೊಳ್ಳಬೇಕು, ಇಲ್ಲವಾದರೆ ಪಡೆದಂತಹ ಚೌಕಟ್ಟು ಅಕ್ಕಪಕ್ಕದ ಕ್ಷೇತ್ರಗಳ ಚೌಕಟ್ಟುಗಳು ಸೇರಿಕೊಳ್ಳುವುದರಿಂದ ಪರಸ್ಪರಹೆಣೆತ ನಿರ್ಮಾಣವಾದ 'ಕೂಂಬ್' ದೋಷಕ್ಕೆ ಒಳಗಾಗುತ್ತದೆ. ಸೂಕ್ತವಲ್ಲದ ಪರಸ್ಪರಹೆಣೆತ-ತಪ್ಪಿಸುವ ಕ್ರಮಾವಳಯನ್ನು ಉಪಯೋಗಿಸಿದ ಪಕ್ಷದಲ್ಲಿ, ಪಿಸಿ ಆಧಾರಿತ ಕ್ರೀಡಾ ಉಪಕರಣಗಳ ವಿಡಿಯೋಗಳಲ್ಲಿ ಇದ ಪದೇ ಪದೇ ಗೋಚರವಾಗುತ್ತದೆ.
ಸಾದೃಶ ಗುಣಮಟ್ಟ
[ಬದಲಾಯಿಸಿ]ಗ್ರಹಣದ ಸಮಸ್ಯೆಗಳು ವರ್ಣ ಸಂಕೇತದ ಹಂತವನ್ನು ಬದಲಿಸುವ ಮೂಲಕ (ಕಾರ್ಯರೂಪದಲ್ಲಿ ವ್ಯತ್ಯಾಸಗಳೊಂದಿಗಿನ ಹಂತ ಕಲಕುವಿಕೆ) ಎನ್ ಟಿಎಸ್ ಸಿ ಚಿತ್ರವೊಂದರ ಗುಣಮಟ್ಟವನ್ನು ಕಡಿಮೆಮಾಡಬಹುದು. ಹಾಗಾಗಿ ಗ್ರಾಹಕದಲ್ಲಿ ಇದಕ್ಕೊಂದು ಪರಿಹಾರವನ್ನು ಮಾಡದ ಹೊರತು ಚಿತ್ರದ ವರ್ಣ ಸಮತೋಲನವು ವ್ಯತ್ಯಾಸವಾಗುತ್ತದೆ. ಇದು ಎನ್ ಟಿಎಸ್ ಸಿ ಸೆಟ್ ಗಳ ಮೇಲೆ ಒಂದು ವರ್ಣೊ್ರಬೇಧ ನಿಯಂತ್ರಣದ ಸೇರ್ಪಡೆಯನ್ನು ಅವಶ್ಯಕಗೊಳಿಸುತ್ತದೆ. ಅದೇ ಇದು PAL ಅಥವಾ SECAM ವ್ಯವಸ್ಥೆಗಳಲ್ಲಿ ಅಗತ್ಯವಿರುವುದಿಲ್ಲ. ನಿರ್ದಿಷ್ಟವಾಗಿ PALಗೆ ಹೋಲಿಸಿದಾಗ, ಎನ್ ಟಿಎಸ್ ಸಿಯ ವರ್ಣ ನಿಖರತೆ ಮತ್ತು ಸಮತ್ವವು ಪರಿಗಣನಾತ್ಮಕವಾಗಿ ಕೆಳಮಟ್ಟದ್ದಾಗಿದ್ದು, ದೃಶ್ಯ ಮಾಧ್ಯಮದ ವೃತ್ತಿಶೀಲರು ಮತ್ತು ಟಿವಿ ಅಭಿಯಂತರರು ತಮಾಷೆಯಾಗಿ ಎನ್ ಟಿಎಸ್ ಸಿಯನ್ನು Never The Same Color , Never Twice the Same Color ಅಥವಾ No True Skin Colors ಎಂದೆಲ್ಲ ಕರೆಯುವುದಕ್ಕೆ ಕಾರಣವಾಗಿದೆ.[೧೬] ಈ ವರ್ಣ ಹಂತ, ವರ್ಣಪ್ರಬೇಧ ಅಥವಾ "ವರ್ಣಛಾಯೆ" ನಿಯಂತ್ರಣವು ಕಲೆಯಲ್ಲಿ ನುರಿತ ಯಾರೇ ಒಬ್ಬರು ಸುಲಭವಾಗಿ ಒಂದು ಮಾನಿಟರ್ ಅನ್ನು SMPTE ವರ್ಣ ಕಂಬಿಗಳೊಂದಿಗೆ ಸುಲಭವಾಗಿ ಮೇಳೈಸುವಂತೆ ಮಾಡಲು ಅವಕಾಶ ಒದಗಿಸುತ್ತದೆ, ತನ್ನ ವರ್ಣ ಪ್ರಾತಿನಿಧ್ಯದಲ್ಲಿ ದೋಷಪೂರಿತಗೊಂಡಿರುವ ಒಂದು ಸೆಟ್ ನೊಂದಿಗೆ ಕೂಡ, ತನ್ಮೂಲಕ ಸೂಕ್ತ ವರ್ಣಗಳು ಪ್ರದರ್ಶಿತಗೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಎಸ್-ವೀಡಿಯೋ ವ್ಯವಸ್ಥೆಗಳಲ್ಲಿ ಎನ್ ಟಿಎಸ್ ಸಿ ಸಂಕೇತವುಳ್ಳ ವರ್ಣದ ಬಳಕೆಯು ಹಂತ ಕಲಕುವಿಕೆಗಳನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ. ಪರಿಣಾಮವಾಗಿ, ಎನ್ ಟಿಎಸ್ ಸಿ ವರ್ಣ ಸಂಕೇತಕರಣದ ಬಳಕೆಯು ಅತ್ಯಧಿಕ ಸಾಂದ್ರತೆಯುಳ್ಳ ಚಿತ್ರ ಗುಣಮಟ್ಟವನ್ನು ನೀಡುತ್ತದೆ (ಸಮ ಅಕ್ಷ ಮತ್ತು ಚೌಕಟ್ಟವೇಗದ ಮೇಲೆ) (ಉದ್ದದ ಲಂಬ ಅಕ್ಷದಲ್ಲಿ ಎನ್ ಟಿಎಸ್ ಸಿಯ ಸಾಂದ್ರತೆಯು ಯುರೋಪೀಯ ಗುಣಮಟ್ಟಗಳಿಗಿಂತ ಕಡಿಮೆಯಾಗಿದೆ, 625 ರೇಖೆಗಳ ಜಾಗದಲ್ಲಿ 525 ರೇಖೆಗಳು) ಎನ್ ಟಿಎಸ್ ಸಿಯ ಸೆಕೆಂಡಿಗೆ 30 ಚೌಕಟ್ಟುಗಳ ಮತ್ತು ಚಲನಚಿತ್ರದ 24 ಚೌಕಟ್ಟುಗಳ ಅಪಹೊಂದಿಕೆಯು ಮಧ್ಯೆ ಹೆಣೆದ ಎನ್ ಟಿಎಸ್ ಸಿ ಸಂಕೇತದ ವಲಯ ವೇಗದ ಮೇಲೆ ಆಧರಿಸುವ ಒಂದು ಪ್ರಕ್ರಿಯೆಯಿಂದ ಸರಿದೂಗಲ್ಪಡುತ್ತದೆ, ಹೀಗೇ 576ಐ ವ್ಯವಸ್ಥೆಗಳಿಗೆ ಸೆಕೆಂಡಿಗೆ 25 ಚೌಕಟ್ಟುಗಳಂತೆ ಬಳಸಲ್ಪಡುವ ಚಲನಚಿತ್ರದ ಹಿನ್ನೆಲೆ ವೇಗವರ್ಧಕವನ್ನು ತಡೆಗಟ್ಟುತ್ತದೆ.(ಇದು ಜೊತೆಯಾದ ಶ್ರಾವ್ಯದ ಶೃತಿಯು ಸ್ವಲ್ಪ ಹೆಚ್ಚುವುದಕ್ಕೆ ಕಾರಣವಾಗುತ್ತದೆ, ಕೆಲವೊಮ್ಮೆ ಈ ಸಮಸ್ಯೆಯು ಲಯ ಬದಲಾಯಿಸುವನ ಬಳಕೆಯಿಂದ ಸರಿಹೋಗುತ್ತದೆ). ಆದರೆ, ದೃಶ್ಯದಲ್ಲಿ ಕೊಂಚ ಅಲುಗಾಡಿಕೆಯನ್ನು ಇದಕ್ಕೆ ಬೆಲೆಯಾಗಿ ತೆರಬೇಕಾಗುತ್ತದೆ. ಮೇಲೆ ನೀಡಿರುವ ಚೌಕಟ್ಟುವೇಗ ಪರಿವರ್ತನಾ ಪಟ್ಟಿ ನೋಡಿರಿ.
ಮಾರ್ಪಾಟುಗಳು
[ಬದಲಾಯಿಸಿ]ಎನ್ ಟಿ ಎಸ್ ಸಿ - ಎಂ
[ಬದಲಾಯಿಸಿ]ಪಾಲ್ ಗಿಂತಲೂ ಭಿನ್ನವಾಗಿ, ತನ್ನ ಹಲವು ವಿಧದ ಅಂತಸ್ತವಾದ ಪ್ರಸರಣ ಟೆಲಿವಿಷನ್ ವ್ಯವಸ್ಥೆಗಳನ್ನು ಜಗದಾದ್ಯಂತ ಉಪಯೋಗಿಸುತ್ತಿರುವ ಎನ್ ಟಿ ಎಸ್ ಸಿ ವರ್ಣ ಸಂಕೇತರೂಪಕಗಳನ್ನು ಪ್ರಸರಣ ವ್ಯವಸ್ಥೆ M ನೊಡನೆ ತಪ್ಪದೆ ಉಪಯೋಗಿಸುವುದರ ಮೂಲಕ ಎನ್ ಟಿ ಎಸ್ ಸಿ -M ದತ್ತವಾಯಿತು.
ಎನ್ ಟಿ ಎಸ್ ಸಿ - ಜೆ
[ಬದಲಾಯಿಸಿ]ಕೇವಲ ಜಪಾನಿನ ಮಾರ್ಪಾಟು "ಎನ್ ಟಿಎಸ್ ಸಿ-ಜೆ"ಯು ಸ್ವಲ್ಪ ಭಿನ್ನವಾಗಿದೆ: ಜಪಾನಿನಲ್ಲಿ, ಸಂಕೇತದ ಕಪ್ಪು ಹಂತ ಮತ್ತು ಖಾಲಿಮಾಡುವ ಹಂತ ಒಂದೇ ತೆರನಾಗಿವೆ(PAL ನಲ್ಲಿರುವಂತೆ 0 ಐಆರ್ಈನಲ್ಲಿ. ಅದೇ ಅಮೇರಿಕದ ಎನ್ ಟಿಎಸ್ ಸಿಯಲ್ಲಿ ಕಪ್ಪು ಮಟ್ಟವು(7.5 IRE) ಖಾಲಿಮಾಡುವ ಮಟ್ಟಕ್ಕಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ವ್ಯತ್ಯಾಸವು ಚಿಕ್ಕದಾಗಿರುವುದರಿಂದ, ಎನ್ ಟಿಎಸ್ ಸಿಯ "ಇತರ" ಮಾರ್ಪಾಟನ್ನು ಅದು ಇರಬೇಕಾದಂತೆ ಸರಿಯಾಗಿ ತೋರಿಸಲು ಪ್ರಕಾಶದ ಕೀಲಿಯನ್ನು ಸ್ವಲ್ಪ ತಿರುಗಿಸಿದರೆ ಸಾಕು; ಮೊದಲನೆಯದಾಗಿ ಬಹುತೇಕ ವೀಕ್ಷಕರು ಈ ವ್ಯತ್ಯಾಸವನ್ನು ಗಮನಿಸದೆಯೂ ಇರಬಹುದು.
ಪಾಲ್-ಎಂ
[ಬದಲಾಯಿಸಿ]ಪಾಲ್-ಎಂ ವ್ಯವಸ್ಥೆಯು ಎನ್ ಟಿಎಸ್ ಸಿ ಬಳಸುವ ಪ್ರಸಾರ ಬ್ಯಾಂಡ್ ವಿಡ್ತ್, ಚೌಕಟ್ಟು ವೇಗ, ಮತ್ತು ರೇಖೆಗಳ ಸಂಖ್ಯೆಯನ್ನು ಬಳಸುತ್ತದೆ, ಆದರೆ PAL ನ ವರ್ಣ ಸಂಕೇತಕರಣವನ್ನು ಬಳಸಿಕೊಡು. ಆದ್ದರಿಂದ ಅದು ಕೊಂಚ ಪ್ರಮಾಣದಲ್ಲಿ ಎನ್ ಟಿ ಎಸ್ ಸಿ ಗೆ ಹೊಂದುವಂಥದ್ದಾಗಿದೆ. ಎನ್ ಟಿ ಎಸ್ ಸಿ-ಎಂ ಟಿವಿ ಸೆಟ್ಟುಗಳು ಭೂಮಿಯ ಪಾಲ್-ಎಂ ಪ್ರಸಾರಗಳನ್ನು ಗ್ರಹಿಸುತ್ತವೆ, ಎನ್ ಟಿ ಎಸ್ ಸಿ ವಿಸಿಆರ್ ಗಳು ಪಾಲ್-ಎಂನಲ್ಲಿ ದಾಖಲಾದ ದೃಶ್ಯಪಟ್ಟಿಗಳನ್ನುಪ್ರದರ್ಶಿಸಬಲ್ಲವು ಮತ್ತು ಅದೇ ಉಲ್ಟ ಕೂಡ ಸಾಧ್ಯ. ಆದರೆ ವರ್ಣ ಮಾಹಿತಿಯನ್ನು ನಡೀಕೋಡ್ ಮಾಡಲು ಸಾಧ್ಯವಿಲ್ಲದ ಕಾರಣದಿಂದಾಗಿ ಇದು ಕಪ್ಪು ಮತ್ತು ಬಿಳುಪುನಲ್ಲಿ ಮಾತ್ರ ಸಾಧ್ಯ.
ಪಾಲ್ - ಎನ್
[ಬದಲಾಯಿಸಿ]ಇದನ್ನು ಪೆರಗ್ವೆ ಮತ್ತು ಉರುಗ್ವೆ ಗಳಲ್ಲಿ ಉಪಯೋಗಿಸುತ್ತಾರೆ. ಇದು ಸರಿಸುಮಾರು ಪಾಲ್-ಎಂ ಅನ್ನು ಹೋಲುತ್ತದೆ(ಬ್ರೆಝಿಲ್ ನಲ್ಲಿ ಉಪಯೋಗಿಸಲ್ಪಡುತ್ತದೆ). ಪಾಲ್-ಎನ್ ಸಿ ಗೂ ಸಹ ಇದು ನಿಕಟವಾದ ಸಂಬಂಧ(ಹೋಲಿಕೆ) ಹೊಂದಿರುತ್ತದೆ(ಅರ್ಜೈಂಟೈನಾದಲ್ಲಿ ಉಪಯೋಗಿಸುತ್ತಾರೆ). ಎನ್ ಟಿ ಎಸ್ ಸಿ - ಎಂ ಮತ್ತು ಎನ್ ಟಿ ಎಸ್ ಸಿ - ಎನ್ ಗಳಲ್ಲಿನ ಹೋಲಿಕೆಯನ್ನು ಈ ಕೆಳಕಂಡ ITU ಐಡೆಂಟಿಫಿಕೇಷನ್ ಸ್ಕೀಮ್ ನಲ್ಲಿ ಕಾಣಬಹುದು:
ವ್ಯವಸ್ಥೆ | ಸಾಲುಗಳು | ಚೌಕಟ್ಟಿನ ವೇಗ | ವಾಹಿನಿ ಕಪ್ಪು/ಬಿಳುಪು | ದೃಶ್ಯ ಕಪ್ಪು/ಬಿಳುಪು | ಶಬ್ದ ವ್ಯತ್ಯಯಪೂರೈಕೆ | ಕುರುಹಿನ ಪಾರ್ಶ್ವಪಟ್ಟಿ | ದೃಶ್ಯ ಅಳತೆಯ ಪ್ರಮಾಣ | ಶಬ್ದ ಅಳತೆಯ ಪ್ರಮಾಣ. | ಟಿಪ್ಪಣಿಗಳು |
---|---|---|---|---|---|---|---|---|---|
M | 525 | 29.97 | 6 | 4.2 | +4.5 | 0.75 | Neg. | FM | ಅಮೆರಿಕದ ಮತ್ತು ಕೆರಿಬಿಯನ್ ನ ಬಹುಪಾಲು ಪ್ರದೇಶಗಳು, ದಕ್ಷಿಣ ಕೊರಿಯಾ, ತೈವಾನ್,(ಇಲ್ಲೆಲ್ಲಾ ಎನ್ ಟಿ ಎಸ್ ಸಿ - ಎಂ) ಮತ್ತು ಬ್ರೆಝಿಲ್, ಫಿಲಿಫೈನ್ಸ್ (ಪಾಲ್-ಎಂ) |
ಎನ್ | 625 | 25 | 6 | 4.2 | +4.5 | 0.75 | Neg. | FM | ಅರ್ಜೈಂಟೈನಾ, ಪೆರಗ್ವೆ, ಉರುಗ್ವೆ (ಎಲ್ಲೆಡೆ ಪಾಲ್-ಎನ್) ಸಾಲುಗಳು ಹೆಚ್ಚಿದಷ್ಟೂ ಗುಣಮಟ್ಟವೂ ಹೆಚ್ಚುತ್ತದೆ. |
ವ್ಯಕ್ತಪಡಿಸಿದಂತೆಯೇ, ಸಾಲುಗಳ ಸಂಖ್ಯೆ ಮತ್ತು ಪ್ರತಿ ಸೆಕೆಂಡಿಗೆ ಚೌಕಟ್ಟುಗಳ ಸಂಖ್ಯೆಯ ಹೊರತಾಗಿ ಈ ಎರಡೂ ವ್ಯವಸ್ಥೆಗಳು ಒಂದೇ ತರಹದ್ದಾಗಿವೆ. ಎನ್ ಟಿ ಎಸ್ ಸಿ -N/PAL-N/PAL-Nc ಗಳು ಆಕರಗಳಾದ ಗೇಮ್ ಕನ್ಸೋಲ್ ಗಳು,ವಿ ಹೆಚ್ ಎಸ್, ಬೀಟಾಮ್ಯಾಕ್ಸ್,ವಿಸಿಆರ್ ಗಳು, ಮತ್ತು ಡಿವಿಡಿ ಪ್ಲೇಯರ್ ಗಳೊಸನೆ ಹೊಂದಿಕೆಯಾಗುತ್ತವೆ.. ಆದರೆ ಬೇಸ್ ಬ್ಯಾಂಡ್ ಪ್ರಸರಣ(ಆಂಟೆನಾ ಮೂಲಕ ತೆಗೆದುಕೊಳ್ಳುವಂತಹವು)ಗಳೊಡನೆ ಇವು ಹೊಂದುವುದಿಲ್ಲ, ಆದಾಗ್ಯೂ ಕೆಲವು ಹೊಸ ಸೆಟ್ ಗಳು ಬೇಸ್ ಬ್ಯಾಂಡ್ ಎನ್ ಟಿ ಎಸ್ ಸಿ 3.58 ಬೆಂಬಲದೊಂದಿಗೆ ಹೊರಬರುತ್ತಿವೆ(ಎನ್ ಟಿ ಎಸ್ ಸಿ 3.58 ಎನ್ ಟಿ ಎಸ್ ಸಿಯಲ್ಲಿ ವರ್ಣ ಹದಗೊಳಿಸುವಿಕೆಗೆ ಬೇಕಾದ ಆವರ್ತನೆ: 3.58 ಮೆಗಾಹರ್ಟ್ಝ್)
NTSC 4.43
[ಬದಲಾಯಿಸಿ]PAL-60ಗೆ ವಿರುದ್ಧವಾದುದೆಂದು ಪರಿಗಣಿಸಬಹುದಾದ ಎನ್ ಟಿ ಎಸ್ ಸಿ 4.43 ಒಂದು ಅಪ್ರಾಕೃತ ವರ್ಣ ವ್ಯವಸ್ಥೆಯಾಗಿದ್ದು ಎನ್ ಟಿ ಎಸ್ ಸಿ ಸಂಕೇತಕರಣವನ್ನು 3.58 ಮೆಗಾಹರ್ಟ್ಝ್ ಬದಲು 4.43 ಮೆಗಾಹರ್ಟ್ಝ್ ನ ವರ್ಣ ಉಪವಾಹಕದ ಮೂಲಕ ಎನ್ ಟಿ ಎಸ್ ಸಿ ಸಂಕೇತಕರಣ (525/29.97)ವನ್ನು ಪ್ರಸಾರ ಮಾಡುತ್ತದೆ. ಇದರಿಂದ ಉಂಟಾದ ಫಲಿತವನ್ನು ಅಪ್ರಾಕೃತ ವರ್ಣ ವ್ಯವಸ್ಥೆಯಿರುವ ಟಿವಿಗಳಲ್ಲಿ ಮಾತ್ರ ಕಾಣಬಹುದು(ಸಾಮಾನ್ಯವಾಗಿ ವಿವಿಧ-ಸ್ತರವಿರುವ ಟಿವಿಗಳಲ್ಲಿ) ಸ್ಥಳೀಯ ಎನ್ ಟಿ ಎಸ್ ಸಿ ಟಿವಿ ಸಂಕೇತಭಿನ್ನಕವನ್ನು ಬಳಸಿದರೆ ಯಾವ ಬಣ್ಣವೂ ಮೂಡದು, PAL ಟಿವಿಯನ್ನು ಬಳಸಿ ಸಂಕೇತಭಿನ್ನವಾಗಿಸಿದರೆ ಕ್ರಮರಹಿತ ವರ್ಣಗಳು ಮೂಡುತ್ತವೆ(ಕೆಂಬಣ್ಣರಹಿತವಾಗಿದ್ದು ಮಿಣಕುಮಯವಾಗಿರುತ್ತದೆಂದು ಗಮನಿಸಲಾಗಿದೆ). ಈ ಮಾದರಿಯು ಕಂಡಂತೆಯೇ ಮೊದಲ ಲೇಸರ್ ಡಿಸ್ಕ್ ಗಳಿಗೆ ಸೀಮಿತವಾಗಿತ್ತು ಮತ್ತು ಮಾರುಕಟ್ಟೆಯಲ್ಲಿ ವಿಕ್ರಿಯವಾಗುವ PAL ವ್ಯವಸ್ಥೆಯನ್ನು ಬಳಸುವ ಕೆಲವು ಕ್ರೀಡಾ ಕನ್ಸೋಲ್ ಗಳಿಗೆ ಸೀಮಿತವಾಗಿತ್ತು. ಎನ್ ಟಿ ಎಸ್ ಸಿ 4.43 ವ್ಯವಸ್ಥೆಯು, ಪ್ರಸರಣ ಮಾದರಿಯಲ್ಲದಿದ್ದಾಗ್ಯೂ, PAL ಕ್ಯಾಸೆಟ್ ಗೆ ಸೂಕ್ತವಾದ ವಿಸಿಆರ್ ಗಳಿಗೆ ಹಿನ್ನೆಲೆ ಕಾರ್ಯಭಾರಿಯಾಗಿ ಆಗಾಗ್ಗೆ ಬಳಸಲ್ಪಡುತ್ತದೆ; ಸೋನಿ 3/4" ಯು-ಮ್ಯಾಟಿಕ್ ಮಾದರಿಯಿಂದ ಆರಂಭವಾದ ಇದು ನಂತರ ಬೀಟಾಮ್ಯಾಕ್ಸ್ ಮತ್ತು ವಿ ಹೆಚ್ ಎಸ್ ಮಾದರಿ ಯಂತ್ರಗಳಿಗೂ ವಿಸ್ತರಿತವಾಯಿತು. ಜಗದ ವೀಕ್ಷಕರಿಗೆಲ್ಲಾ ವಿಸಿಆರ್ ಗಳಲ್ಲಿ ಬಳಸಲು ಅತಿ ಹೆಚ್ಚು ಕ್ಯಾಸೆಟ್ ತಂತ್ರಾಂಶಗಳನ್ನು (ಚಲನಚಿತ್ರ ಮತ್ತು ಟಿವಿ ಧಾರವಾಹಿಗಳು) ನೀಡಿರುವ ಹೆಗ್ಗಳಿಕೆ ಹಾಲಿವುಡ್ ಗೆ ಇರುವುದರಿಂದಲೂ ಮತ್ತು ಆ ಎಲ್ಲಾ ಕ್ಯಾಸೆಟ್ ಬಿಡುಗಡೆಗಳು PAL ಮಾದರಿಯಲ್ಲಿ ದೊರಕಲಿಲ್ಲವಾದ್ದರಿಂದ, ಎನ್ ಟಿ ಎಸ್ ಸಿ ಮಾದರಿಯಲ್ಲಿ ಕ್ಯಾಸೆಟ್ ಗಳನ್ನು ನಡೆಸಲು ಒಂದು ಸಾಧನವು ಬಹಳ ಅಗತ್ಯವಾಗಿತ್ತು. ವಿವಿಧ-ಸ್ತರವುಳ್ಳ ವಿಡಿಯೋ ಮಾನೀಟರ್ ಗಳು ಯೂರೋಪ್ ನಲ್ಲಿ ಆಗಲೇ ಬಳಕೆಯಲ್ಲಿದ್ದು PAL, SECAM, ಮತ್ತು ಎನ್ ಟಿ ಎಸ್ ಸಿ ವಿಡಿಯೋ ಮಾದರಿಗಳ ಮೂಲಗಳನ್ನು ಪ್ರಸಾರ ಮಾಡಲು ಅವಕಾಶ ಕಲ್ಪಿತವಾಗಿತ್ತು. ಹೆಟೆರೋಡೈನ್ಯು-ಮ್ಯಾಟಿಕ್ ನ ವರ್ಣ-ಕೆಳಸ್ತರ ಸಂಸ್ಕರಣವು, ಬೀಟಾಮ್ಯಾಕ್ಸ್ ಮತ್ತು ವಿ ಹೆಚ್ ಎಸ್ ಸಂಸ್ಕರಣದಲ್ಲಿದ್ದು, ಎನ್ ಟಿ ಎಸ್ ಸಿ ಮಾದರಿ ಕ್ಯಾಸೆಟ್ ಗಳಿಗೆ ಹೊಂದುವಂತೆ ಸಣ್ಣ ನೇರ್ಪಾಡುಗಳಿಗೆ ಒಳಗಾಯಿತು. ವಿ ಹೆಚ್ ಎಸ್ ನ ವರ್ಣ-ಕೆಳಸ್ತರ ಮಾದರಿಯು ೬೨೯ ಕಿಲೋಹರ್ಟ್ಝ್ ನ ಉಪವಾಹಕವನ್ನು ಉಪಯೋಗಿಸಿದರೆ, ಯು-ಮ್ಯಾಟಿಕ್ ಮತ್ತು ಬೀಟಾಮ್ಯಾಕ್ಸ್ 688 ಕಿಲೋಹರ್ಟ್ಝ್ ಗಳ ಉಪವಾಹಕವನ್ನು ವರ್ಧಕ ಹದಗೊಳಿಸಿದ ವರ್ಣದ ಸೂಚಕಗಳನ್ನು ಎನ್ ಟಿ ಎಸ್ ಸಿ ಹಾಗೂ PAL ಮಾದರಿಗಳೆರಡಕ್ಕೂ ಒಯ್ಯಲು ಉಪಯೋಗಿಸುತ್ತವೆ. ವಿಸಿಆರ್ PAL ವರ್ಣ ಕ್ರಮವನ್ನು ಅನುಸರಿಸಿ ಎನ್ ಟಿ ಎಸ್ ಸಿ ರೆಕಾರ್ಡಿಂಗ್ ಅನ್ನು ಬಳಸಲು ಸಿದ್ಧವಿದ್ದುದರಿಂದ, PAL ಸೂಕ್ಷ್ಮವೀಕ್ಷಕ ಮತ್ತು ಕ್ಯಾಪ್ಸ್ ಟನ್ ಗಳ ವೇಗವನ್ನು PALನ ೫೦ ಹರ್ಟ್ಝ್ ವೇಗದಿಂದ ಎನ್ ಟಿ ಎಸ್ ಸಿ ಯ 59.94ರ ಕ್ಷೇತ್ರವೇಗಕ್ಕೆ ಹೊಂದಿಸಬೇಕಾಯಿತು ಮತ್ತು ಹೆಚ್ಚಿನ ಸರಳರೇಖಾ ಟೇಪ್ ವೇಗವನ್ನೂ ಅಳವಡಿಸಬೇಕಾಯಿತು. ಪ್ರಸ್ತುತ VCR ರೆಕಾರ್ಡಿಂಗ್ ಮಾದರಿಯ ಕಾರಣ PAL VCR ಗಳಿಗೆ ಮಾರ್ಪಾಡುಗಳು ಕನಿಷ್ಠ. ಎನ್ ಟಿ ಎಸ್ ಸಿ ಕ್ಯಾಸೆಟ್ಟನ್ನು ಎನ್ ಟಿ ಎಸ್ ಸಿ 4.43 ಕ್ರಮದಲ್ಲಿ ಆಡಿದಾಗ ವಿಸಿಆರ್ ನ ಉತ್ಪಾದನೆಯು ೫೨೫ ಸಾಲುಗಳು ಅಥವಾ 29.97 ಚೌಕಟ್ಟುಗಳು ಪ್ರತಿ ಸೆಕೆಂಡ್ ಗೆ ಇದ್ದು, PAL ಗೆ ಹೊಂದುವಂತಹ ಹೆಟೆತೋಡೈನ್ಡ್ ಬಣ್ಣವನ್ನು ಹೊಂದಿರುತ್ತದೆ. ವಿವಿಧ-ಸ್ತರ ಗ್ರಾಹಕವು ಎನ್ ಟಿ ಎಸ್ ಸಿ ಹೆಚ್ ಮತ್ತು ವಿ ಆವರ್ತನೆಗಳನ್ನು ಬೆಂಬಲಿಸಲು ಪೂರ್ವನಿಯೋಜಿತವಾಗಿರುತ್ತದೆ; PAL ವರ್ಣವನ್ನು ಪಡೆದಾಗ ಅದು ಹಾಗೆಯೇ ವರ್ತಿಸಬೇಕಷ್ಟೆ. ಆ ವಿವಿಧ-ಮಾದರಿ ಗ್ರಾಹಕಳ ಅಸ್ತಿತ್ವವು ಡಿವಿಡಿಗಳ ಪ್ರಾಂತೀಯ ಸಂಕೇತಕರಣಕ್ಕೆ ತೊಡಗುವಿಕೆಯ ಒಂದು ಅಂಗವಾಗಲು ಪ್ರಾಯಶಃ ಕಾರಣವಾಗಿರಬಹುದು. ವರ್ಣ ಸಿಗ್ನಲ್ ಗಳು ಎಲ್ಲಾ ಡಿಸ್ಕ್ ಗಳ ಪ್ರದರ್ಶಿತ ಮಾದರಿಗಳಲ್ಲೂ ಅಡಕವಾಗಿರುವುದರಿಂದ, ಪ್ರದರ್ಶನವು ಚೌಕಟ್ಟು-ವೇಗಕ್ಕೆ ಹೊಂದುವಂತಿದ್ದರೆ, ಎನ್ ಟಿ ಎಸ್ ಸಿ (525/29.97) ಡಿಸ್ಕ್ ಗಳನ್ನು ಬಳಸಲು PAL ಡಿವಿಡಿ ಪ್ಲೇಯರ್ ಗಳಿಗೆ ಯಾವುದೇ ಬದಲಾವಣೆಯನ್ನು ಮಾಡಬೇಕಾಗಿಲ್ಲ.
ಎನ್ ಟಿ ಎಸ್ ಸಿ-ಚಿತ್ರ
[ಬದಲಾಯಿಸಿ]23.976 ಚೌಕಟ್ಟು/ಗಳ ಚೌಕಟ್ಟುವೇಗವುಳ್ಳ ಎನ್ ಟಿ ಎಸ್ ಸಿ ಯನ್ನು ಎನ್ ಟಿ ಎಸ್ ಸಿ-ಚಿತ್ರ ಮಾದರಿಯೆಂದು ವರ್ಣಿಸಲಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು]
This section needs expansion. You can help by adding to it. (June 2008) |
ಕೆನಡಾ/ಯು.ಎಸ್. ವಿಡಿಯೋ ಕ್ರೀಡಾ ಪ್ರದೇಶ
[ಬದಲಾಯಿಸಿ]ಕೆಲವು ಬಾರಿ ಎನ್ ಟಿ ಎಸ್ ಸಿ-ಯುಎಸ್ ಅಥವಾ ಎನ್ ಟಿ ಎಸ್ ಸಿ-ಯು/ಸಿ ಗಳನ್ನು ಉತ್ತರ ಅಮೆರಿಕದ ವಿಡಿಯೋ ಕ್ರೀಡಾ ಪ್ರದೇಶಗಳನ್ನು ವರ್ಣಿಸಲು ಬಳಸಲಾಗುತ್ತದೆ(ಯು/ಸಿ ಎಂದರೆ ಯು.ಎಸ್.+ಕೆನಡಾ); ಪ್ರಾಂತೀಯ ಬಂಧಿಸುವಿಕೆಯು ಒಂದು ಪ್ರಾಂತ್ಯದಲ್ಲಿ ಬಿಡುಗಡೆಯಾದ ಕ್ರೀಡೆಯನ್ನು ಅದೇ ಪ್ರಾಂತ್ಯಕ್ಕೆ ಸೀಮಿತಗೊಳಿಸುವ ಕಾರಣದಿಂದ ಈ ಪರಿಯು ಅನುಸರಿಸಲಾಗಿದೆ.
ಲಂಬ ಅಂತರ ಅನ್ವಯ
[ಬದಲಾಯಿಸಿ]ಮಾದರಿ ಎನ್ ಟಿ ಎಸ್ ಸಿ ವಿಡಿಯೋ ಬಿಂಬವು ಕೆಲವು ಅಗೋಚರ ಸಾಲುಗಳನ್ನು (ಪ್ರತಿ ವಿಸ್ತಾರದಲ್ಲಿನ 1ರಿಂದ 21ರವರೆಗಿನ ಸಾಲುಗಳು) ಹೊಂದಿರುತ್ತದೆ (ಆ ಸಾಲುಗಳನ್ನು ಲಂಬ ತೆರವುಕಾರಕ ಅಂತರಗಳು ಅಥವಾ VBI ಎನ್ನುತ್ತಾರೆ); ಇವೆಲ್ಲವೂ ಗೋಚರಗವಾಗುವ ಬಿಂಬಕ್ಕಿಂತಲೂ ಹೊರಭಾಗದಲ್ಲಿರುತ್ತವೆ, ಆದರೆ 1ರಿಂದ 9ರ ವರೆಗಿನ ಸಾಲುಗಳನ್ನು ಮಾತ್ರ ಲಂಬ-ಹೊಂದಿಸುವಿಕೆ ಮತ್ತು ಸರಿಸಮಗೊಳಿಸುವ ಸ್ಪಂದನಗಳಿಗಾಗಿ ಉಪಯೋಗಿಸಲಾಗುತ್ತದೆ. ಉಳಿದ ಸಾಲುಗಳನ್ನು ಮೂಲ ಎನ್ ಟಿ ಎಸ್ ಸಿ ಸೂಚಿಯಲ್ಲಿ ಯಲ್ಲಿ ಉದ್ದೇಶಪೂರ್ವಕವಾಗಿಯೇ ಖಾಲಿ(ತೆರವು)ಗೊಳಿಸಲಾಗಿತ್ತು; CRT-ಆಧಾರಿತ ಸ್ಕ್ರೀನ್(ಪರದೆ)ಗಳಲ್ಲಿನ ಎಲೆಕ್ಟ್ರಾನ್ ಕಿರಣಪುಂಜ(ಬೀಮ್)ಗಳಿಗೆ ಪ್ರದರ್ಶನದ(ಪ್ರದರ್ಶನ ಪರದೆಯ) ಮೇಲು ಸ್ತರಕ್ಕೆ ಹಿಂತಿರುಗಲು ಸಮಯ ಒದಗಿಸಲು ಈ ವಿಧವನ್ನು ಅನುಸರಿಸಾಗಿತ್ತು. 19ನೆಯ ರೇಖೆಯಲ್ಲಿನ ಲ್ಯೂಮಿನೆನ್ಸ್ ಮತ್ತು ಕ್ರೋಮಿನೆನ್ಸ್ ಮಟ್ಟಗಳಿಗೆ ಸ್ಟುಡಿಯೋ-ಗಿಡುಕಿದಂತಹ ಅನ್ವಯ ಮಾಹಿತಿಗಳನ್ನು ಜೋಡಿಸುವುದರ ಮೂಲಕ ಎನ್ ಟಿ ಎಸ್ ಸಿ ವಿಡಿಯೋದ ಕೆಲವು ವರ್ಣ ತೊಂದರೆಗಳನ್ನು ಸರಿಪಡಿಸಲು ಯತ್ನಿಸುವ ಸಲುವಾಗಿ,VIR (ಅಥವಾ ಲಂಬ ಅಂತರ ಅನ್ವಯ)ಅನ್ನು 1980ರಲ್ಲಿ ವ್ಯಾಪಕವಾಗಿ ಅಳವಡಿಸುತ್ತಿದ್ದರು.[೧೭] ಸೂಕ್ತವಾಗಿ ಅಳವಡಿಸಲ್ಪಟ್ಟ ಟೆಲಿವಿಷನ್ ಸೆಟ್ ಗಳು ಆಗ ಈ ಮಾಹಿತಿಗಳನ್ನು ಮೂಲ ಸ್ಟುಡಿಯೋದ ಬಿಂಬವನ್ನು ಬಹಳ ಹೋಲುವಂತೆ ಪ್ರದರ್ಶನವನ್ನು ಹೊಂದುವುದಕ್ಕಾಗಿ ಬಳಸಬಹುದು. ವಾಸ್ತವವಾಗಿ VIR ಸಿಗ್ನಲ್ ಮೂರು ಭಾಗಗಳನ್ನು ಹೊಂದಿರುತ್ತದೆ, ಮೊದಲನೆಯುದು ೭೦ ಪ್ರತಿಶತ ುಜ್ವಲತೆ ವರ್ಣಸ್ಫೋಟ ಸಿಗ್ನಲ್ ನಷ್ಟೇ ವರ್ಣಕರಣದ ಪ್ರತಿಶತವನ್ನು ಹೊಂದಿರುತ್ತದೆ ಮತ್ತು ಇತರ ಎರಡು 50 ಪ್ರತಿಶತ ಮತ್ತು 7.5 ಉಜ್ವಲತೆಯನ್ನು ಹೊಂದಿರುತ್ತವೆ.[೧೮] VIRನ ನಂತರ ಬಂದ ಕಡಿಮೆ ಬಳಕೆಯಲ್ಲಿರುವ GCRಗಳು ಬೂತ (ಅನೇಕಪಥ ತೊಡರು) ಬಿಡಿಸುವ ಸಾಮರ್ಥ್ಯ ಹೊಂದಿರುತ್ತದೆ. ಉಳಿದ ಲಂಬ ಶೂನ್ಯಕಾರಕ ಅಂತರ ರೇಖೆಗಳನ್ನು ಮಾಹಿತಿ ಸಂಚಯನಕ್ಕೆ ಅಥವಾ ವಿಡಿಯೋ ಸಂಪಾದಕ ಟೈಮ್ ಸ್ಟ್ಯಾಂಪ್ ಗಳಂತಹವುಗಳ ಸಂಬಂಧಿತ ಮಾಹಿತಿಗಾಗಿ (ಲಂಬ ಅಂತರ ಕಾಲಸಂಕೇತ ಅಥವಾ SMPTE ಕಾಲಸಂಕೇತಗಳು 12-14 ಸಾಲುಗಳ ಮೇಲೆ), 17–18 ಸಾಲುಗಳ ಮೇಲೆ ಪರೀಕ್ಷಾ ಮಾಹಿತಿಗಾಗಿ, ಸಾಲು 20ರಲ್ಲಿ ಒಂದು ಜಾಲಸಂಕೇತ ಮತ್ತು ಮುಚ್ಚಿದಂತಹ ತಲೆಬರಹಗಳು, ಎಕ್ಸ್ ಡಿ ಎಸ್ , ಮತ್ತು ವಿ-ಚಿಪ್ ಮಾಹಿತಿಗಳು ಸಾಲು 21ರಲ್ಲಿ ಅಂಕಿತಗೊಳಿಸಲಾಗುತ್ತವೆ.[೧೯][೨೦] ಮೊದಮೊದಲ ಟೆಲಿಪ್ರಸರಣ ಅನ್ವಯಿಕಗಳು ಲಂಬ ಶೂನ್ಯಕಾರಕ ಅಂತರಗಳನ್ನು ಸಾಲುಗಳು 14-18 ಮತ್ತು 20ಗಳನ್ನು ಬಳಸುತ್ತಿದ್ದವು, ಆದರೆ ಎನ್ ಟಿ ಎಸ್ ಸಿ ಮೂಲಕ ಟೆಲಿಪ್ರಸರಣವನ್ನು ವೀಕ್ಷಕರು ಎಂದಿಗೂ ವಿಸ್ತಾರವಾಗಿ ಅಳವಡಿಸಿಕೊಳ್ಳಲಿಲ್ಲ.[೨೧] ಬಹಳಷ್ಟು ಕೇಂದ್ರಗಳು VBI ಸಾಲುಗಳ ಮೇಲೆ ವಿದ್ಯುನ್ಮಾನ ಕಾರ್ಯಕ್ರಮ ಮಾರ್ಗದರ್ಶನಕ್ಕೆ ಬೇಕಾದ TVGOS ಮಾಹಿತಿಗಳನ್ನೊಳಗೊಂಡ ಟಿವಿ ಸೂಚಿಯನ್ನು ತೆರೆಯ ಮೇಲೆ ಪ್ರಸಾರ ಮಾಡುತ್ತವೆ. ಮಾರುಕಟ್ಟೆಯಲ್ಲಿ ಪ್ರಧಾನ ಕೇಂದ್ರವು ೪ ಸಾಲುಗಳ ಮಾಹಿತಿಯನ್ನು ಪ್ರಸಾರ ಮಾಡುತ್ತವೆ ಮತ್ತು ಅದನ್ನು ಬೆಂಬಲಿಸುವ ಕೇಂದ್ರಗಳು ಒಂದು ಸಾಲನ್ನು ಪ್ರಸರಿಸುತ್ತವೆ. ಬಹಳಷ್ಟು ಮಾರ್ಕೆಟ್ ಗಳಲ್ಲಿ ಪಬ್ಸ್ ಕೇಂದ್ರವೇ ಪ್ರಧಾನ ಕೇಂದ್ರ. TVGOS 10-25ರಲ್ಲಿ ಯಾವುದೇ ಸಾಲನ್ನು ಆಕ್ರಮಿಸಬಹುದು, ಆದರೆ ರೂಡಿಗತವಾಗಿ ಅದು ಸಾಲಗಳು 11-18, 20 ಮತ್ತು ಸಾಲು 22ಕ್ಕೆ ಸೀಮಿತವಾಗಿದೆ. ಸಾಲು 22 ಕೇವಲ 2 ಪ್ರಸರಣಕ್ಕೆ, ಡೈರೆಕ್ಟ್TV ಮತ್ತು CFPL-TVಗೆ ಬಳಸಲಾಗುತ್ತದೆ. ತಿವೋ ಮಾಹಿತಿ ಸಹ ಕೆಲವು ಜಾಹಿರಾತುಗಳು ಮತ್ತು ಕಾರ್ಯಕ್ರಮ ಪ್ರಚಾರಗಳಲ್ಲಿಯೂ ಪ್ರಸಾರಗೊಳ್ಳುವುದು; ಇದರಿಂದ ಪ್ರಚಾರಗೊಳಿಸುತ್ತಿರುವ ಕಾರ್ಯಕ್ರಮಗಳನ್ನು ಗ್ರಾಹಕರು ಸ್ವಯಂ ರೆಕಾರ್ಡ್ ಮಾಡಿಕೊಳ್ಳಬಹುದು.
ಎನ್ ಟಿ ಎಸ್ ಸಿ ಯನ್ನು ಉಪಯೋಗಿಸುತ್ತಿರುವ ದೇಶಗಳು ಮತ್ತು ಪ್ರದೇಶಗಳು
[ಬದಲಾಯಿಸಿ]ಉತ್ತರ ಅಮೆರಿಕ
[ಬದಲಾಯಿಸಿ]- ಕೆನಡಾವಾಯು-ಮಾರ್ಗದ ಎನ್ ಟಿ ಎಸ್ ಸಿ ಪ್ರಸರಣವನ್ನು ಆಗಸ್ಟ್ 2011ರ ವೇಳೆಗೆ ಕೈ ಬಿಡಲಾಗುವುದು, ಏಕಕಾಲಕ್ಕೆ ಎನ್ ಟಿ ಎಸ್ ಸಿ ಯಲ್ಲಿ ಪ್ರಸರಣ[೨೨]
- ಮೆಕ್ಸಿಕೋವಾಯು-ಮಾರ್ಗದ ಎನ್ ಟಿ ಎಸ್ ಸಿ ಪ್ರಸರಣವನ್ನು ಡಿಸೆಂಬರ್ ೩೧, 2021ರ ವೇಳೆಗೆ ಕೈ ಬಿಡಲಾಗುವುದು, ಏಕಕಾಲಕ್ಕೆ ಎನ್ ಟಿ ಎಸ್ ಸಿ ಯಲ್ಲಿ ಪ್ರಸರಣ[೨೩]
- ಅಮೇರಿಕ ಸಂಯುಕ್ತ ಸಂಸ್ಥಾನಹೆಚ್ಚಿನ ಶಕ್ತಿಯ ಗಾಳಿಯ ಮೇಲಿನ ಎನ್ ಟಿ ಎಸ್ ಸಿ ಪ್ರಸರಣವನ್ನು ಜೂನ್ 12, 2009[೨೪][೨೫] ರಂದು ಎ ಎಸ್ ಟಿ ಸಿ ಯ ಸಲುವಾಗಿ ತೆಗೆದುಹಾಕಲಾಯಿತು. ಕಡಿಮೆ-ಶಕ್ತಿಯ ಕೇಂದ್ರಗಳು, ಶ್ರೇಣಿ A ಕೇಂದ್ರಗಳು ಮತ್ತು ಅನುವಾದಕಗಳು ತಕ್ಷಣ ಪ್ರಭಾವಿತವಾಗುವುದಿಲ್ಲ, ಅಂತೆಯೇ ಮಿಕ್ಕ ಕ್ರಮಾವಳಿ ಕೇಬಲ್ ಟೆಲಿವಿಷನ್ ವ್ಯವಸ್ಥೆಗಳೂ ಸಹ. ಎನ್ ಟಿ ಎಸ್ ಸಿ ಯು A/V ಉಪಕರಣಗಳಾದ ಟೆಲಿವಿಷನ್ ಮತ್ತು ಡಿವಿಡಿ ಪ್ಲೇಯರ್ ಗಳಿಗೆ ಅಂತರ್ಸಂಪರ್ಕ ಮಾದರಿಯಾಗಿ ಉಳಿದಿದೆ.
ಮಧ್ಯ ಅಮೆರಿಕ ಮತ್ತು ದ ಕೆರಿಬಿಯನ್
[ಬದಲಾಯಿಸಿ]
|
|
ದಕ್ಷಿಣ ಅಮೆರಿಕ
[ಬದಲಾಯಿಸಿ]
|
ಏಷ್ಯಾ
[ಬದಲಾಯಿಸಿ]
|
% ಇತರೆ
|
ಪೆಸಿಫಿಕ್
[ಬದಲಾಯಿಸಿ]ಯು.ಎಸ್. ಪ್ರಾಂತ್ಯಗಳು
[ಬದಲಾಯಿಸಿ]- American Samoa
- Guam
- ಉತ್ತರ ಮಾರಿಯಾನಾ ದ್ವೀಪಗಳು
- ಮಿಡ್ ವೇ ಅಟಾಲ್ (ಒಂದು ಯು.ಎಸ್.ಸೇನಾ
ಶಿಬಿರ)
ಚಿಲಿಯ ಪ್ರಾಂತ್ಯಗಳು
[ಬದಲಾಯಿಸಿ]- Easter Island,ಎನ್ ಟಿ ಎಸ್ ಸಿ ಪ್ರಸರಣವನ್ನು Easter Islandಡಿಸೆಂಬರ್ 31, 2017ರಿಂದ ಕೈಬಿಡಲಾಗುವುದು, ಸಮಸಾಮಯಿಕಪ್ರಸರಣ ISDB-T/b
ಇತರ ಪೆಸಿಫಿಕ್ ದ್ವೀಪದ ದೇಶಗಳು
[ಬದಲಾಯಿಸಿ]- ಮಾರ್ಶಲ್ ದ್ವೀಪಗಳು(ಯು.ಎಸ್.ನೊಂದಿಗೆ ಕಾಂಪಾಕ್ಟ್ ಆಫ್ ಫ್ರೀ ಅಸೋಸಿಯೇಷನ್ (ಸ್ವತಂತ್ರ ಕೂಡುವಳಿ ಒಪ್ಪಂದ); ಯು.ಎಸ್. ಧನಸಹಾಯದಿಂದ ಅಳವಡಿಸಲಾದ ಎನ್ ಟಿ ಎಸ್ ಸಿ)
- ಮೈಕ್ರೋನೇಷಿಯಾ (ಯು.ಎಸ್.ನೊಂದಿಗೆ ಕಾಂಪಾಕ್ಟ್ ಆಫ್ ಫ್ರೀ ಅಸೋಸಿಯೇಷನ್ (ಸ್ವತಂತ್ರ ಕೂಡುವಳಿ ಒಪ್ಪಂದ)
- ಪಲಾವುಯು.ಎಸ್.ನೊಂದಿಗೆ ಕಾಂಪಾಕ್ಟ್ ಆಫ್ ಫ್ರೀ ಅಸೋಸಿಯೇಷನ್ (ಸ್ವತಂತ್ರ ಕೂಡುವಳಿ ಒಪ್ಪಂದ); ಸ್ವಾತಂತ್ರ್ಯಕ್ಕೆ ಮೊದಲೇ ಎನ್ ಟಿ ಎಸ್ ಸಿ ಯನ್ನು ಅಳವಡಿಸಿಕೊಂಡಿತು.
ಸಮೋಅ(ಅಮೆರಿಕದ ಸಮೋವಾಗೆ ನಿಕಟವರ್ತಿ; ಯು.ಎಸ್. ಧನಸಹಾಯದಿಂದ ಅಳವಡಿಸಲಾದ ಎನ್ ಟಿ ಎಸ್ ಸಿ)
- ಟೋಂಗಾ(ಯು.ಎಸ್. ಧನಸಹಾಯದಿಂದ ಅಳವಡಿಸಲಾದ ಎನ್ ಟಿ ಎಸ್ ಸಿ)
ಚರಿತ್ರಾರ್ಹ;(PAL ಅನ್ನು ಅಳವಡಿಸಿಕೊಳ್ಳುವ ಮುನ್ನವೇ ಎನ್ ಟಿ ಎಸ್ ಸಿ ಯನ್ನು ಪ್ರಾಯೋಗಿಕವಾಗಿ ಉಪಯೋಗಿಸಿತು)
[ಬದಲಾಯಿಸಿ]- ಫಿಜಿ(ಚರಿತ್ರಾರ್ಹ; 1989ಕ್ಕೆ ಮೊದಲೇ ಬಳಸಿತು; ಫಿಜಿಯು ಪಾಲ್ ಅನ್ನು 1990ರಿಂದಲೂ ಬಳಸುತ್ತಿದೆ)
- ಆಸ್ಟ್ರೇಲಿಯಾ(ಚರಿತ್ರಾರ್ಹ; ಇಡೀ ಆಸ್ಟ್ರೇಲಿಯ PAL ಅನ್ನು ಬಳಸುತ್ತದೆ)
ಹಿಂದೂ ಮಹಾ ಸಾಗರ
[ಬದಲಾಯಿಸಿ]ಮಧ್ಯ ಪೌರಾತ್ಯ
[ಬದಲಾಯಿಸಿ]- South Yemen(ಚರಿತ್ರಾರ್ಹ; ಇಡೀ ಯೆಮನ್ ಈಗ PAL ಉಪಯೋಗಿಸುತ್ತದೆ)
ಯುರೋಪ್
[ಬದಲಾಯಿಸಿ]- ಯುನೈಟೆಡ್ ಕಿಂಗ್ಡಂ1960ರ ದಶಕದಲ್ಲಿ 625/50 ಹರ್ಟ್ಝ್ ಮತ್ತು PAL ವರ್ಣವನ್ನು ಪರಿಚಯಿಸುವವರೆಗೆ ಯುಕೆ ಟಿವಿಯು 405-ರೇಖೆಗಳು 50 ಹರ್ಟ್ಝ್ ಗಳಿಂದ ಕೂಡಿದ ಪದ್ಧತಿಯದಾಗಿತ್ತು.
ಇವನ್ನೂ ನೋಡಿ
[ಬದಲಾಯಿಸಿ]- ಪ್ರಸರಣ ಟೆಲಿವಿಷನ್ ವ್ಯವಸ್ಥೆಗಳು
- ವಿಡಿಯೋ ಸಂಪರ್ಕಗಳ ಪಟ್ಟಿ
- ಚಲಿತ ಬಿಂಬ ಕ್ರಮಗಳು
- ಅತಿ ಹಳೆಯ ಟೆಲಿವಿಷನ್ ಕೇಂದ್ರ
- ಟೆಲಿವಿಷನ್ ಚಾನಲ್ ಆವರ್ತನೆಗಳು
- ಬ್ರಾಡ್ ಕಾಸ್ಟ್ ಸೇಫ್
- ಯುನೈಟೆಡ್ ಸ್ಟೇಟ್ಸ್ ನಲ್ಲಿ ಡಿಟಿವಿ ಪರಿವರ್ತನೆ
ಟಿಪ್ಪಣಿಗಳು
[ಬದಲಾಯಿಸಿ]- ↑ ನ್ಯಾಷನಲ್ ಟೆಲಿವಿಷನ್ ವ್ಯವಸ್ಥಾ ಸಮಿತಿ (1951–1953), [ವರದಿ ಮತ್ತು ಮಂಡಳಿಯ ವರದಿಗಳು No. 11, 11-A, 12-19, ವರದಿಗಳಲ್ಲಿ ಉಲ್ಲೇಖಿಸಿದ ಕೆಲವು ಉಪ ಆಕರಗಳ ಬಗ್ಗೆ, ಮತ್ತು ಫೆಡರಲ್ ಕಮ್ಯುನಿಕೇಷನ್ಸ್ ಆಯೋಗದ ಮುಂದಿರಿಸಿದ ವರ್ಣ ಟೆಲಿವಿಷನ್ ಗೆ ಪ್ರಸರಣಾ ಗುಣಮಟ್ಟವನ್ನು ಅಳವಡಿಸಲು ಹೂಡಿದ ದಾವೆ n.p., 1953], 17 v. ಇಲ್ಲಸ್., ಡಯಾಗ್ರ್ಸ್., ಕೋಷ್ಠಕಗಳು. 28 cm. LC ನಿಯಂತ್ರಣ No.:54021386 ಲೈಬ್ರರಿ ಆಫ್ ಕಾಗ್ರೆಸ್ ಆನ್ ಲೈನ್ ಕ್ಯಾಟಲಾಗ್
- ↑ ಮೂರನೆಯ "ರೇಖಾ ಕ್ರಮಾನುಗತ" ಪದ್ಧತಿಯು ವರ್ಣ ಟೆಲಿವಿಷನ್ ಇಂಕ್ ರವರದು. (CTI) ಅನ್ನು ಸಹ ಪರಿಗಣಿಸಲಾಯಿತು. CBS ಮತ್ತು ಕಡೆಯ NTSC ವ್ಯವಸ್ಥೆಗಳನ್ನು "ಕ್ಷೇತ್ರ ಕ್ರಮಾನುಗತ" ಮತ್ತು "ಬಿಂದು ಕ್ರಮಾನುಗತ" ವ್ಯವಸ್ಥೆಗಳನ್ನು, ಅನ್ವಯಿಕವಾಗಿ, ಕರೆಯಲಾಯಿತು.
- ↑ "ಭದ್ರತಾ ವಿಧಿಯ ಅಂಗವಾಗಿ ವರ್ಣ ಟಿವಿ ನಿಷೇಧಿಸಲಾಯಿತು", ದ ನ್ಯೂಯಾರ್ಕ್ ಟೈಮ್ಸ್ , ಅಕ್ಟೋಬರ್ 20, 1951, ಪುಟ 1. "ಭದ್ರತಾ ಚಾಲನೆಗೈಯುವವರ ವರ್ಣ ಟಿವಿ ಮುಂದೂಡಿಕೆ ಕ್ರಮವು ಉದ್ಯಮದಲ್ಲಿ ಹಲವಾರು ಪ್ರಶ್ನೆಗಳನ್ನು ಮುಂದೊಡ್ಡಿದೆ", ದ ನ್ಯೂ ಯಾರ್ಕ್ ಟೈಮ್ಸ್ , ಅಕ್ಟೋಬರ್ 22, 1951, ಪುಟ 23. "TV ಸಂಶೋಧನೆಯ ವರ್ಣದ ತಡೆಯೊಡ್ಡಿಕೆ ನಿವಾರಿಸಲಾಯಿತು", ದ ನ್ಯೂ ಯಾರ್ಕ್ ಟೈಮ್ಸ್ , ಅಕ್ಟೋಬರ್ 26, 1951. ಎಡ್ ರೀಟನ್, ಸಿಬಿಎಸ್ ಕ್ಷೇತ್ರ ಕ್ರಮಾನುಗತ ವರ್ಣ ವ್ಯವಸ್ಥೆ Archived 2010-01-05 ವೇಬ್ಯಾಕ್ ಮೆಷಿನ್ ನಲ್ಲಿ., 1997. CBS ಕ್ರಮದ ಮತ್ತೊಂದು ರೂಪವನ್ನು ನಂತರ ನಾಸಾದವರು ಬಾಹ್ಯಾಕಾಶ ವಿಜ್ಞಾನಿಗಳ ಚಿತ್ರಗಳನ್ನು ಬಾಹ್ಯಾಂತರದಿಂದ ಪ್ರಸಾರ ಮಾಡಲು ಬಳಸಿದರು.
- ↑ "ಬಣ್ಣದ ಟಿವಿ ಈಗ ಅನಿಶ್ಚಿತತೆಯ ಕಾರಣ ನಿಷೇಧಿಸಲ್ಪಟ್ಟಿದೆ ಎನ್ನುತ್ತದೆ CBS" ವಾಷಿಂಗ್ಟನ್ ಪೋಸ್ಟ್ , ಮಾರ್ಚ್ 26, 1953, ಪುಟ 39.
- ↑ "ಕಲರ್ ಟಿವಿ ಕೂಡಲೆ ಪ್ರಸಾರ ಪ್ರಾರಂಭಿಸಬಹುದು ಎನ್ನುತ್ತದೆ ಎಫ್.ಸಿ.ಸಿ." ದ ನ್ಯೂ ಯಾರ್ಕ್ ಟೈಮ್ಸ್ , ಡಿಸೆಂಬರ್ 19, 1953. ಪುಟ 1.
- ↑ "NBC ಮೊದಲ ಸಾರ್ವಜನಿಕವಾಗಿ-ಘೋಷಿತವಾದ ಬಣ್ಣದ ಟೆಲಿವಿಷನ್ ಪ್ರದರ್ಶನವನ್ನು ಪ್ರಾರಂಭಿಸಿತು", ವಾಲ್ ಸ್ಟ್ರೀಟ್ ಜರ್ನಲ್ ,ಆಗಸ್ಟ್ 31, 1953, ಪುಟ 4.
- ↑ 47 CFR § 73.682 (20) (iv)
- ↑ ೮.೦ ೮.೧ ೮.೨ ಡೆಮಾರ್ಷ್ ಲೆರಾಯ್ (1993): ಟಿವಿ ಪ್ರದರ್ಶಕ ರಂಜಕಗಳು/ಪ್ರಧಾನವಾದವು — ಕೊಂಚ ಇತಿಹಾಸ. SMPTE ಜರ್ನಲ್, ಡಿಸೆಂಬರ್ 1993: 1095–1098.
- ↑ ಪಾರ್ಕರ್, N.W. (1966): ಎನ್ ಅನಾಲಿಸಿಸ್ ಆಫ್ ದ ಕರೆಕ್ಷನ್ಸ್ ಫಾರ್ ಕಲರ್ ರಿಸೀವರ್ ಆಪರೇಷನ್ ವಿತ್ ನಾನ್-ಸ್ಟ್ಯಾಂಡರ್ಡ್ ಪ್ರೈಮರೀಸ್. IEEE ಟ್ರ್ಯಾನ್ಸಾಕ್ಷನ್ಸ್ ಆನ್ ಬ್ರಾಡ್ ಕ್ಯಾಸ್ಟ್ ಎಂಡ್ ಟೆಲಿವಿಷನ್ ರಿಸೀವರ್ಸ್, ಸಂಪುಟ. BTR-12, ಸಂಖ್ಯೆ. 1, ಪುಟಗಳು 23—32.
- ↑ ೧೦.೦ ೧೦.೧ ೧೦.೨ ಅಂತರರಾಷ್ಟ್ರೀಯ ಟೆಲಿಸಂಪರ್ಕ ಸಂಘಟನೆಯ ಶಿಫಾರಸುಗಳು ITU-R 470-6 (1970-1998): ಸಾಂಪ್ರದಾಯಿಕ ಟೆಲಿವಿಷನ್ ವಿಧಿಗಳು, ಸೇರ್ಪಡೆ 2.
- ↑ ಚಲನಚಿತ್ರ ಮತ್ತು ಟೆಲಿವಿಷನ್ ಎಂಜಿನಿಯರ್ ಗಳ ಸೊಸೈಟಿ (1987-2004): ಸೂಚಿಸಲ್ಪಟ್ಟ ಕ್ರಮ RP 145-2004. ಬಣ್ಣದ ಮಾನೀಟರ್ ವರ್ಣಮಾಪನವಿಧಿ.
- ↑ ಚಲನಚಿತ್ರ ಮತ್ತು ಟೆಲಿವಿಷನ್ ಎಂಜಿನಿಯರ್ ಗಳ ಸೊಸೈಟಿ (1994, 2004): ಎಂಜಿನಿಯರಿಂಗ್ ಮಾರ್ಗದರ್ಶಿ EG 27-2004. SMPTE 170M ಗಾಗಿ ಪೂರೈಕೆಗೊಳಿಸುವ ಮಾಹಿತಿ ಮತ್ತು ಎನ್ ಟಿ ಎಸ್ ಸಿ ವರ್ಣ ಗುಣಮಟ್ಟಗಳ ಹಿನ್ನೆಲೆ, ಪುಟ 9.
- ↑ ಅಡ್ವಾನ್ಸ್ಡ್ ಟೆಲಿವಿಷನ್ ಸಿಸ್ಟಮ್ಸ್ ಕಮಿಟಿ (2003):ಎಟಿಎಸ್ ಸಿ ನೇರ-ದಿಂದ-ಮನೆಗೆ ಉಪಗ್ರಹ ಪ್ರಸರಣ ಗುಣಮಟ್ಟ ದಸ್ತಾವೇಜು. A/81, ಪುಟ 18
- ↑ ಯೂರೋಪಿಯನ್ ಪ್ರಸರಣಾ ಸಂಘಟನೆ (1975) Tech. 3213-E.: E.B.U. ಸ್ಟ್ಯಾಂಡರ್ಡ್ ಫಾರ್ ಕ್ರೋಮಾಟಿಸಿಟಿ ಟಾಲರೆನ್ಸಸ್ ಫಾರ್ ಸ್ಟುಡಿಯೋ ಮಾನೀಟರ್ಸ್.
- ↑ CCIR ವರದಿ 308-2 ಭಾಗ 2 ಅಧ್ಯಾಯ XII — ಕ್ಯಾರೆಕ್ಟರಿಸ್ಟಿಕ್ಸ್ ಆಫ್ ಮಾನೋಕ್ರೋಮ್ ಟೆಲಿವಿಷನ್ ಸಿಸ್ಟಮ್ಸ್ (1970ರ ಆವೃತ್ತಿ).
- ↑ ಜೇಯ್ನ್, ಅನಲ್ ಕೆ., ಫಂಡಮೆಂಟಲ್ಸ್ ಆಫ್ ಡಿಜಿಟಲ್ ಇಮೇಜ್ ಪ್ರೋಸೆಸಿಂಗ್ , ಅಪ್ಪರ್ ಸ್ಯಾಡಲ್ ರಿವರ್ NJ: ಪ್ರೆಂಟಿಸ್ ಸಭಾಂಗಣ, 1989, ಪುಟ 82.
- ↑ "ಆರ್ಕೈವ್ ನಕಲು" (PDF). Archived from the original (PDF) on 2006-03-13. Retrieved 2010-05-13.
- ↑ http://danalee.ca/ttt/waveform_monitors_and_vectorscopes.htm
- ↑ http://www.philrees.co.uk/articles/timecode.htm
- ↑ "ಆರ್ಕೈವ್ ನಕಲು". Archived from the original on 2007-07-10. Retrieved 2010-05-13.
- ↑ http://experimentaltvcenter.org/history/tools/ttext.php3?id=16
- ↑ ಕೆನಡಿಯನ್ ರೇಡಿಯೋ-ಟೆಲಿವಷನ್ ಮತ್ತು ಟೆಲಿಸಂಪರ್ಕ ನಿಗಮ (CRTC) ಮಾಧ್ಯಮದಲ್ಲಿ ಪ್ರಕಟಣೆ ಮೇ 2007 Archived 2007-05-19 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಟ್ರಾನ್ಸಿಷನ್ ಅ TDT (DTಗೆ ಪರಿವರ್ತನೆ) Archived 2009-02-25 ವೇಬ್ಯಾಕ್ ಮೆಷಿನ್ ನಲ್ಲಿ. (ಸ್ಪ್ಯಾನಿಷ್)
- ↑ http://commerce.senate.gov/public/index.cfm?FuseAction=PressReleases.Detail&PressRelease_Id=84452e41-ca68-4aef-b15f-bbca7bab2973
- ↑ "ATSC SALUTES THE 'PASSING' OF NTSC". NTSC. Archived from the original on 2009-06-20. Retrieved 2009-06-13.
ಆಕರಗಳು
[ಬದಲಾಯಿಸಿ]- ಒಂದು ಮಾದರಿ ಎನ್ ಟಿ ಎಸ್ ಸಿ ವ್ಯವಸ್ಥೆಯ ನಿರೂಪಣೆಯು "ಶಿಫಾರಸು ITU-R BT.470-7 , ಸಾಂಪ್ರದಾಯಿಕ ಕ್ರಮಾವಳಿ ಟೆಲಿವಿಷನ್ ವ್ಯವಸ್ಥೆಗಳು" ಎಂಬ ತಲೆಬರಹದ ಅಡಿಯಲ್ಲಿ ಇಂಟರ್ನ್ಯಾಷನಲ್ ಟೆಲಿಕಮ್ಯುನಿಕೇಷನ್ ಯೂನಿಯನ್ ನಿಂದ 1998ರಲ್ಲಿ ಪ್ರಕಟವಾಯಿತು. ಅದು ಅಂತರಜಾಲದಲ್ಲಿ ಸಾರ್ವಜನಿಕವಾತಿ ಲಭ್ಯವಿಲ್ಲ, ಆದರೆ ITU ಯಿಂದ ಅದನ್ನು ಕೊಳ್ಳಬಹುದು.
- ಎಡ್ ರೀಟಾನ್ (1997). CBS ಫೀಲ್ಡ್ ಸೀಕ್ವೆಂಷಿಯಲ್ ಕಲರ್ ಸಿಸ್ಟಮ್. Archived 2005-02-05 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಯು.ಎಸ್. ಕೇಬಲ್ ಟೆಲಿವಿಷನ್ ಚಾನಲ್ ತರಂಗಾಂತರಗಳು
- TVTower.com - ವಾಣಿಜ್ಯಪರ ಟೆಲಿವಿಷನ್ ತರಂಗಾಂತರಗಳು.
- ಟೆಲಿವಿಷನ್ ಮತ್ತು ಡಿವಿಡಿಗಳಲ್ಲಿ ಎನ್ ಟಿ ಎಸ್ ಸಿ ಪುನಶ್ಚೇತನ ವೇಗದ ಪ್ರಾತಿನಿಧಿಕತೆ [permanent dead link]
ಅಂಡರ್ಸ್ಟ್ಯಾಂಡಿಂಗ್ ಎಂಡ್ ಮೆಷರಿಂಗ್ ವಿಡಿಯೋ ಟಿವಿ-ಆರ್ ಎಫ್ ಸಿಗ್ನಲ್ಸ್ ಬರೆದವರು ಬ್ಲೆನ್ ಕ್ರೊಪುಯೆನ್ಸ್ಕೆ, CET, ಸೆಂಕೋರ್ ಅನ್ವಯಿಕ ಇಂಜಿನಿಯರ್
- Pages using the JsonConfig extension
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Articles with hatnote templates targeting a nonexistent page
- Articles with unsourced statements from September 2008
- Articles with invalid date parameter in template
- Articles with unsourced statements from May 2009
- Articles to be expanded from June 2008
- All articles to be expanded
- All articles with dead external links
- Articles with dead external links from ಡಿಸೆಂಬರ್ 2023
- Articles with permanently dead external links
- Color space
- ವೀಡಿಯೋ ಪ್ರಕಾರಗಳು
- ಟೆಲಿವಿಷನ್ ತಾಂತ್ರಿಕತೆ
- ITU-R ಬೆಂಬಲಗಳು