ಸದಸ್ಯರ ಚರ್ಚೆಪುಟ:Dr.K.Soubhagyavathi
--Dr.K.Soubhagyavathi (talk) ೧೨:೫೪, ೨೧ ಅಕ್ಟೋಬರ್ ೨೦೧೩ (UTC)
- ತಾಯಿ, ನೀವೇನಾ ಈ ಲೇಖನ ಬರೆದಿದ್ದು? ಮೂಲ ಸಂಸ್ಕೃತದಿಂದ ಅನುವಾದ ಮಾಡಿದ್ದು ನೀವೇನಾ? ಮನುಸ್ಮೃತಿಯಲ್ಲಿ ಇರುವುದು ಎಷ್ಟು ಶ್ಲೋಕಗಳು? ನೀವು ಎಷ್ಟು ಶ್ಲೋಕಗಳನ್ನು ಅನುವಾದ ಮಾಡಿದ್ದೀರಿ? ಇವೇ ಶ್ಲೋಕಗಳನ್ನು ನೀವು ಆಯ್ದುಕೊಂಡಿದ್ದು ಯಾವ ಮಾನದಂಡದ ಆಧಾರದಿಂದ? ಮೂಲ ಸಂಸ್ಕೃತದಿಂದ ಅನುವಾದ ಮಾಡುವಷ್ಟು ಸಂಸ್ಕೃತ ಭಾಷಾ ಪಾಟವ ತಮಗೆ ಇದೆ ಅಂತ ಯಾರು ಹೇಳಿದರು? ಈ ಲೇಖನವನ್ನು ಅನುಮೋದಿಸಿದ ಪ್ರಧಾನ ಸಂಪಾದಕರು ಯಾರು? ಈ ಘೋರ ಅನ್ಯಾಯವನ್ನು ಅದೂ ವಿದ್ಯಾ ಪ್ರಸಾರದ ಹೆಸರಿನಲ್ಲಿ ಮಾಡಿದವರು ಯಾರು? ಈ ಲೇಖನವನ್ನು ಬರೆದವರಿಗೆ ಸರಸ್ವತಿಯ ಶಾಪ ತಟ್ಟದೆ ಇರುವುದಿಲ್ಲ. ನೀವು ಬರೆದಿದ್ದಾದರೆ ಮೊದಲಿ ಇದನ್ನ ಡಿಲೀಟ್ ಮಾಡಿ. Srinirg (ಚರ್ಚೆ) ೧೧:೧೩, ೧ ಡಿಸೆಂಬರ್ ೨೦೨೧ (UTC)
ನಮಸ್ಕಾರ Dr.K.Soubhagyavathi,
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ :ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- Font help (read this if Kannada is not getting rendered on your system properly)
- ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ಆಂಗ್ಲ ವಿಕಿಪೀಡಿಯ ಟುಟೋರಿಯಲ್
- ಚಿತ್ರಗಳನ್ನು ಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ : ಕೋರಿಕೆಯ ಲೇಖನಗಳು
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯ ಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ:
~~~~
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ಪಾಲಗಿರಿ (talk) ೧೧:೧೮, ೬ ಆಗಸ್ಟ್ ೨೦೧೩ (UTC)
ಕೆ.ಗೋವಿಂದರಾಜು ಮತ್ತು ಇತರೆ ಲೇಖನಗಳ ಬಗ್ಗೆ
[ಬದಲಾಯಿಸಿ]ಕೆ.ಗೋವಿಂದರಾಜು ಲೇಖನವನ್ನು ಬದಲಿಸಿದ್ದೇನೆ. ನೀವು ಸೇರಿಸುತ್ತಿರುವ ಲೇಖನಗಳಲ್ಲಿ ಇರುವ ಅಂಶಗಳನ್ನು ಧೃಡೀಕರಿಸುವ ಮಾಹಿತಿ ಆಕರಗಳಿದ್ದಲ್ಲಿ ಅದನ್ನೂ ಸೇರಿಸಿ. ಜೊತೆಗೆ ಕೆ.ಗೋವಿಂದರಾಜು ಅವರ ಲೇಖನದಲ್ಲಿ ನೀವು ಹೇಗೆ ಬುಲೆಟ್ ಪಾಯಿಂಟ್ ಇತ್ಯಾದಿ ಉಪಯೋಗಿಸಬಹುದು ಎಂದು ತಿಳಿಸಲಾಗಿದೆ. ಇದೆಲ್ಲದರ ಜೊತೆಗೆ ಲೇಖನಗಳು ವಿಶ್ವಕೋಶದ ಶೈಲಿಯಲ್ಲಿದ್ದು, ನಿಮ್ಮ ಸ್ವಂತ ಅನಿಸಿಕೆಗಳನ್ನು ಸೇರಿಸದಿರಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೩:೪೯, ೧೭ ಸೆಪ್ಟೆಂಬರ್ ೨೦೧೩ (UTC)
ಪೂರ್ತಿ ಲೇಖನ ಸೇರಿಸಿ
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಲೇಖನ ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ದಯವಿಟ್ಟು ಒಂದು ಲೇಖನ ಪೂರ್ತಿ ಮಾಡಿ ನಂತರ ಇನ್ನೊಂದು ಲೇಖನ ಪ್ರಾರಂಭಿಸಿ. --Pavanaja (talk) ೧೦:೨೭, ೨೧ ಅಕ್ಟೋಬರ್ ೨೦೧೩ (UTC)
ಉಲ್ಲೇಖನಗಳು
[ಬದಲಾಯಿಸಿ]Dr.K.Soubhagyavathi ಯವರೆ,ನಮಸ್ಕಾರ,
ನೀವು ಒಮ್ಮೆ ಪಿ.ಡಾ.ಪಿ.ಕೆ.ರಾಜಶೇಖರ ಸಂಪಾದಿಸಿ ಪುಟಕ್ಕೆ ಹೋಗಿ ನೋಡಿದರೆ ಈಗ ನಾನು ಮಾಡಿದ್ದು ಗೊತ್ತಾಗುತ್ತದೆ.
ಉಲ್ಲೇಖನಬಗ್ಗೆ:
ಲೇಖನದಲ್ಲಿ ಉಲ್ಲೇಖನ ಸೇರಿಸುವುದು : <ref> internet link details </ref>
ಉಲ್ಲೇಖನ ಕೆಳಗಿನ ಪಟ್ಟಿಯಲ್ಲಿ ಕಾಣಿಸುವುದಕ್ಕೆ: ಉಲ್ಲೇಖನ ತಲೆಬರಹ ಕೆಳಗೆ:
ಉಲ್ಲೇಖನ
[ಬದಲಾಯಿಸಿ]{{reflist}} ಸೇರಿಸಿದರೆ ಸರಿ.ಪಾಲಗಿರಿ (talk) ೧೩:೨೦, ೨೧ ಅಕ್ಟೋಬರ್ ೨೦೧೩ (UTC)
ಬೆರಳಚ್ಚು ದೋಷಗಳು
[ಬದಲಾಯಿಸಿ]Dr.K.Soubhagyavathi ಯವರಿಗೆ,ನನ್ನ ಲೇಖನದಲ್ಲಿರುವ ಬೆರಳಚ್ಚು ದೋಷಗಳನ್ನು ಸರಿ ಮಾಡಿದಿರಿ.ತುಂಬಾ ಧನ್ಯವಾದಗಳು.ನಿಮಗೆ ಸಮಯ ಸಿಕ್ಕಿದರೆ ನನ್ನ ಉಳಿದ ಲೇಖನಗಳಲ್ಲಿರುವ ಬೆರಳಚ್ಚು ದೋಷಗಳನ್ನು ಸರಿ ಮಾಡಬೇಕಂತ ನನ್ನ ಬೇಡಿಕೆ. ಪಾಲಗಿರಿ (talk) ೦೨:೨೨, ೩೧ ಅಕ್ಟೋಬರ್ ೨೦೧೩ (UTC)
Thanks
[ಬದಲಾಯಿಸಿ]Madam,Namaste,
I am more thankful to you for sparing your most valuable time and rectifying spelling,grammatical and typing mistakes in the articles written by me.I have no words to express my gratitude to you,once again I thank youಪಾಲಗಿರಿ (talk) ೦೨:೪೫, ೭ ನವೆಂಬರ್ ೨೦೧೩ (UTC).
- (I wrote this in English fearing about my poor knowledge in Kannada,But I like Kannada,30 years back I worked in Karnataka for six years ,since I started to like Kannada,so this my attempt to write in Kannada,to reveal my affection about Kannada)
ಟೆಂಪ್ಲೇಟು/template
[ಬದಲಾಯಿಸಿ]Madam, I prepared new template as {{ವಿವಿಧ ತರಹದ ಎಣ್ಣೆಗಳು}}. so now you can make ವಿವಿಧತರಹ ಎಣ್ಣೆಗಳು as ವಿವಿಧ ತರಹದ ಎಣ್ಣೆಗಳು while editing the articles,as you did earlier. Thanking youಪಾಲಗಿರಿ (talk) ೦೨:೫೪, ೭ ನವೆಂಬರ್ ೨೦೧೩ (UTC)
ಲೇಖನ ತಯಾರಿಯಲ್ಲಿದ್ದಾಗ
[ಬದಲಾಯಿಸಿ]ನೀವು ಹಲವು ಲೇಖನಗಳನ್ನು ಮೊದಲು ಪ್ರಾರಂಭಿಸಿ, ನಂತರ ಮುಂದುವರಿಸುತ್ತಿದ್ದೀರಿ. ಇಂತಹ ಸಂದರ್ಭಗಳಲ್ಲಿ {{In creation}} ಎಂಬ ಟೆಂಪ್ಲೇಟು ಬಳಸಬಹುದು.--Pavanaja (talk) ೧೦:೦೫, ೧೩ ಡಿಸೆಂಬರ್ ೨೦೧೩ (UTC)
ಜಿ. ಎಸ್. ಶಿವರುದ್ರಪ್ಪ ಲೇಖನದ ಬಗ್ಗೆ
[ಬದಲಾಯಿಸಿ]ನಮಸ್ತೆ, ಜಿ. ಎಸ್. ಶಿವರುದ್ರಪ್ಪ ಲೇಖನವನ್ನು ಜಿ.ಎಸ್.ಶಿವರುದ್ರಪ್ಪದ ಜೊತೆಗೆ ವಿಲೀನಗೊಳಿಸಬೇಕಿದೆ. ಇನ್ಮುಂದೆ ಜಿ.ಎಸ್.ಶಿವರುದ್ರಪ್ಪ ಪುಟದಲ್ಲಿ ಮಾತ್ರ ಸಂಪಾದನೆ ಮುಂದುವರೆಸಿದರೆ ಒಳ್ಳೆಯದು. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೬:೦೫, ೨೫ ಡಿಸೆಂಬರ್ ೨೦೧೩ (UTC)
- ಬದಲಾವಣೆಗಳಿಗೆ ಧನ್ಯವಾದಗಳು. ಈ ಲೇಖನದಲ್ಲಿ ನೀವು ಶಿವವೊಗ್ಗ ಎಂದು ಶಿವಮೊಗ್ಗವನ್ನು ತಪ್ಪಾಗಿ ಬರೆಯುತ್ತಿರುವುದನ್ನು ನೋಡಿದೆ. ನಿಮ್ಮ ಕಂಪ್ಯೂಟರಿನಲ್ಲಿರುವ ಫಾಂಟಿನ ತೊಂದರೆ ಇರಬಹುದು. ಆದರೆ, ಸೇವ್ ಮಾಡಿದ ನಂತರ ಶಿವಮೊಗ್ಗದ ಕೊಂಡಿ ಕಡಿದಿರುವುದನ್ನು ನೀಡು ನೋಡಬಹುದು ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೦೮, ೨೭ ಡಿಸೆಂಬರ್ ೨೦೧೩ (UTC)
ಕಣ ಮತ್ತು ಕಣಜ
[ಬದಲಾಯಿಸಿ]ವಿಕಿಪೀಡಿಯದಲ್ಲಿ ಕಣಜ ಬಗ್ಗೆ ಈಗಾಗಲೆ ಲೇಖನ ಇದೆ. ನೀವು ಕಣಜ (ವ್ಯವಸಾಯ) ಲೇಖನ ಬರೆಯುತ್ತಿರುವುದು ಗಮನಿಸಿದೆ. ಎರಡಕ್ಕೆ ಇರುವ ವ್ಯತ್ಯಾಸವೇನು? --Pavanaja (talk) ೦೫:೪೩, ೨೯ ಡಿಸೆಂಬರ್ ೨೦೧೩ (UTC)
ಅಕ್ಕಮಹಾದೇವಿ-ಸಂದೇಹ
[ಬದಲಾಯಿಸಿ]- ಅಕ್ಕಮಹಾದೇವಿಯವರೇ ರಚಿಸುವ ವಚನಗಳೂ , ಅವರ ವ್ಯಕ್ತಿತ್ವವನ್ನು ಕಟ್ಟಿ ಕೊಡುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ .ಈ ಎಲ್ಲವನ್ನೂ ಗಮನಿಸಿದಾಗ ಅಕ್ಕಮಹಾದೇವಿಯವರ ಜೀವನ ಅಸಾಮಾನ್ಯವಾದ , ವೈಶಿಷ್ಟ್ಯತೆಯಿಂದ, ವೈಚಾರಿಕವಾದ, ಅನುಭಾವಪೂರ್ಣವಾದ , ನುಡಿ,ನಡೆಗಳೊಂದಾದ ಪರಿಯಲ್ಲಿರುವುದು ಕಂಡು ಬರುತ್ತದೆ .
- ಮಾನ್ಯ -Dr.K.Soubhagyavathi ಯವರೇ ನೀವು "ಅನುಭಾವಪೂರ್ಣ"ವಾದ ಪದವನ್ನು ಬದಲಿಸಿ ಜೀವನಾನುಭವ ಹಾಕಿರುವುದು ನನಗೆ ಸರಿ ಕಾಣುವುದಿಲ್ಲ ; 'ಜೀವನಾನುಭವ ', ಪ್ರಾಪಂಚಿಕವಾದುದು, ಅಕ್ಕ ಅದನ್ನು ಮೀರಿದವಳೆಂದು ಅಲ್ಲಮರೇ ಹೇಳುತ್ತಿರುವಾಗ, ಅಲ್ಲದೆ ಅವಳ ಉತ್ತರದಲ್ಲಿ ತಾನು ಮಲ್ಲಿಕಾರ್ಜುನನಲ್ಲಿ ಒಂದಾಗಿರುವುದಾಗಿ ಹೇಳು ತ್ತಿರುವಾಗ - ಅವಳ ಜೀವನಾನುಭವದ ಬಗೆಗೆ ಒತ್ತುಕೊಡುವುದು ಎಷ್ಟು ಸರಿ? ಅದೇಅವಳ ಹಿಂದಿನ ಅನೇಕ ವಚನಗಳು ಜೀವನಾನುಭವದ ಬಗೆಗೆ ಸಾಕ್ಷಿಯಾಗಿವೆ ; ಆದರೆ ಇಲ್ಲಿ -ಎರಡೂ ಕಡೆ ಅನುಭಾವ (ಇಂದ್ರಿಯಾತೀತ ಆತ್ಮಾನುಭವ ) ಪದವೇ ಸರಿಕಾಣುವುದು. ಆಕೆ ಬತ್ತಲೆಯಾಗಿದ್ದೂ ಅದರ (ದೇಹದ) ಪರಿವೆಯೇಇಲ್ಲದಿರುವಾಗ ಜೀವನಅನುಭವದ ಪರಿ ಎಂತು -ಅದು ಇದ್ದರೆ ಬಟ್ಟೆ ಧರಿಸುತ್ತಿದ್ದಳು -ನನಗೆ ಮೊದಲಿದ್ದ ಪಾಠವೇ ಸರಿ ಎನಿಸುವುದು. ವಿಚಾರ ಮಾಡಿ/ವಿಚಾರಿಸಿ. ಲೇಖನ ನನ್ನದಲ್ಲ. ನನ್ನದು ಸಂಪಾದನೆ ಮಾತ್ರಾ.
```Bschandrasgr ೧೮:೨೦, ೩೦ ಡಿಸೆಂಬರ್ ೨೦೧೩ (UTC) -(ಸದಸ್ಯ:Bschandrasgr/ಪರಿಚಯ-ಬಿ.ಎಸ್ ಚಂದ್ರಶೇಖರ )
ಅಕ್ಕಮಹಾದೇವಿ
[ಬದಲಾಯಿಸಿ](talk)
ನಮಸ್ಕಾರ ;ಕ್ಷಮಿಸಿ ; ಮೊದಲಿನ ವಾಕ್ಯಗಳನ್ನು ಬದಲಿಸಿ , ಹೊಸ ವಾಕ್ಯಗಳನ್ನು ಯಾರು ಹಾಕಿದರೆಂದು ತಿಳಿಯುವುದಿಲ್ಲ. ಕೊನೆಯ ಸಂಪಾದನೆ ನಿಮದಿದ್ದುರಿಂದ ಹಾಗೆ ಭಾವಿಸಿದೆ. ಆದರೂ ನೀವೂ ವಚನಸಾಹಿತ್ಯದಲ್ಲಿ ಸಾಕಷ್ಟು ಅಧ್ಯಯನ ಮಾಡಿದ್ದೀರಿ ಎಂದು ಭಾವಿಸಿದ್ದೇನೆ; ಇಲ್ಲಿ 'ಅನುಭಾವ' ಪದದ ಬದಲಿಗೆ 'ಜೀವನಾನುಭವ' ಸೇರಿಸಿ ಹೊಸವಾಕ್ಯಗಳನ್ನೇ ಹಾಕಲಾಗಿದೆ. ನನಗೆ ಇಷ್ಟ ವಾಗಲಿಲ್ಲ. ಕಾರಣ, ಅಪ್ರಸ್ತುವಾದರೂ, ಹೇಳಲು ಬಯಸುತ್ತೇನೆ ; - "ಆಕ್ಕ ಒಬ್ಬ ಅನುಭಾವಿ ಶರಣೆ, ಆಕೆ ಚಕ್ಕಂದಿನಿಂದಲೂ ಗುರುಗಳಿಂದ ಸಾಹಿತ್ಯ,, ತತ್ವ (ಶಿವಾದ್ವೈತ) ಕಲಿತು, ಚನ್ನಮಲ್ಲಿಕಾರ್ಜು ನ ಹೆಸರಿನಲ್ಲಿ ಆತ್ಮ ಸಾದನೆಯಲ್ಲಿ ತೊಡಗಿ ೧೫-೧೬ (?) ವಯಸ್ಸಿಗೆಲ್ಲಾ ಆತ್ಮಾನುಭವ ಪಡೆದವಳು ; ಆತ್ಮಾನುಭವಕ್ಕೆ ವಚನಗಳಲ್ಲಿ 'ಅನುಭಾವ' ಎನ್ನುತ್ತಾರೆ ಎಂದು ನನ್ನ ನಂಬುಗೆ. ಅವಳು ಬಯಸಿ ಮದುವೆಯಾಗಲಿಲ್ಲ. ಪುರುಷ ಸುಖ ಕಾಣಳು, ಬಸುರಿಯಾಗಿ ಮಗುವನ್ನು ಹೆತ್ತು ಅದನ್ನು ನೋಡಿ ಆನಂದ ಪಡಲಿಲ್ಲ ; ಮಗುವಿಗೆ ಮೊಲೆಯುಣಿಸಿ ಎತ್ತಿ ಮುದ್ದಾಡಿ ಅನಂದ ಪಡಲಿಲ್ಲ. ಅಕ್ಕಪಕ್ಕದವರ, ನೆಂಟರಿಷ್ಟರ ಸುಖ ಕಷ್ಟಗಳಿಗೆ ಸ್ಪಂದಿಸಿ ಅನುಭವಿಸಲಿಲ್ಲ . ಇದು ಜೀವನಾನುಭವವೆಂದು ನನ್ನ ಭಾವನೆ; ಕೇವಲ ನೋಡಿದ್ದು ಅನುಭವವ ಅಗುವುದಿಲ್ಲ. ಅವಳ ವಚನಗಳಲ್ಲಿ ಜೀವನಾನುಭವದ ವಿಷಯ ಬಂದರೆ ಅದು ಅಂತರಂಗದ ಹುಟ್ಟುಕವಿಯ ಕಾವ್ಯದ ಕಾಣ್ಕೆ . ಅವಳು ಹುಟ್ಟು ಕವಯತ್ರಿ. ಆದರೆ ಅನುಭಾವಿ ಶಿವಶರಣೆ. ಚಿಕ್ಕ ವಯಸ್ಸಿನಲ್ಲೇ ಆತ್ಮಾನುಭೂತಿ ಪಡೆದು (೧೭-೧೮ ಪ್ರಾಯ ?) ಕಲ್ಯಾಣಕ್ಕೆ ಹೋಗಿ ಅಲ್ಲಿ ಸ್ವಲ್ಪ ದಿನವಿದ್ದು ಶ್ರೀಶೈಲಕ್ಕೆ ಹೋಗಿ ಅಲ್ಪ ಕಾಲದಲ್ಲೇ ಸಮಾಧಿಸ್ಥಿತಿ ತಲುಪಿ ಶಿವೈಕ್ಯಳಾದಳೆಂದು (ಪ್ರಾಯ ೨೦-೨೧?) ನನ್ನ ಅನಿಸಿಕೆ ; ಕಲ್ಯಾಣಕ್ಕೆ ಬರುವಾಗಲೇ ಅವಳು ದೇಹ ಭಾವನೆಯಿಂದ / ಪ್ರಾಪಂಚಕ ಭಾವನೆಯಿಂದ ಆಚೆ ಶಿವ ತತ್ವದಲ್ಲಿ (ಪರ ಬ್ರಹ್ಮ) ಮುಳುಗಿದ್ದಳೆಂದು ನನ್ನ ಅನಿಸಿಕೆ. ಆಕಾಲದಲ್ಲಿ ಅವಳನ್ನು ಅರಿಯಬಲ್ಲವರು -ಅಲ್ಲಮ, ಚನ್ನಬಸವಣ್ಣ, ಮಾತ್ರಾ ಎಂಬುದು. ಅವಳ-ಅವರ ಮಾತಿನಿಂದ ತಿಳಿಯುವುದು. ಬಸವಣ್ಣ ಇನ್ನೂ ಪ್ರಾಪಂಚಿಕ ಕಾರ್ಯವಿದ್ದುದರಿಂದ (ಅರಿತೂ) ಪ್ರಾಪಂಚಿಕನಾಗಿಯೆ ಇದ್ದನೆಂದು ನನ್ನ ಅನಿಸಿಕೆ .
- ಆ ಪಾಠ ಬದಲಿಸಿದವರು ದಯಮಾಡಿ ಇದನ್ನು ಓದಲಿ ಎಂದು ಇಲ್ಲಿ ದಾಖಲಿಸಿದ್ದೇನೆ.
Bschandrasgr ೧೦:೩೨, ೩೧ ಡಿಸೆಂಬರ್ ೨೦೧೩ (UTC)
ಕೃಷ್ಣ
[ಬದಲಾಯಿಸಿ]ಕೃಷ್ಣ ಲೇಖನ ಈಗಾಗಲೆ ಇದೆ. ದಯವಿಟ್ಟು ಅದನ್ನೇ ವಿಸ್ತರಿಸಿ. ಹಾಗೆಯೇ ಯಾವುದೇ ಲೇಖನ ಪ್ರಾರಂಭಿಸುವ ಮೊದಲು ಅದೇ ವಿಷಯದ ಬಗ್ಗೆ ಈಗಾಗಲೇ ಲೇಖನ ಇದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ. ಕೆಲವೊಮ್ಮೆ ಹೆಸರಿನಲ್ಲಿ ಅಲ್ಪಸ್ವಲ್ಪ ವ್ಯತ್ಯಾಸ ಮಾಡಿ ಹುಡುಕಿದರೆ ಲೇಖನ ಸಿಗುತ್ತದೆ. --Pavanaja (talk) ೧೫:೦೮, ೫ ಜನವರಿ ೨೦೧೪ (UTC)
ಕನ್ನಡದಲ್ಲಿ ಬರೆಯುವುದು
[ಬದಲಾಯಿಸಿ]Madam,ಲಾಗಿನ್ ಆಗಿದ ಮೇಲೆ,ಮುಖಪುಟದ ಮೇಲಿರುವ ಪ್ರಾಶಸ್ತ್ಯಗಳು ಯನ್ನುವ ಪದವನ್ನು ಕ್ಲಿಕ್ ಮಾಡಿ,ಪುಟದಲ್ಲಿರುವ, Enable the Universal Language Selector ಬಾಕ್ಸುನಲ್ಲಿ ಕ್ಲಿಕ್(ರೈಟ್ ಟಿಕ್)ಮಾಡಿ,ಉಳಿಸಿರಿ.ಪಾಲಗಿರಿ (talk) ೦೨:೫೧, ೨೪ ಜನವರಿ ೨೦೧೪ (UTC)
ಗ್ರಾಮಗಳ ಇತಿಹಾಸ
[ಬದಲಾಯಿಸಿ]ಶ್ರೀ Dr.K.Soubhagyavathi ಯವರೆ, ನನಸ್ತೇ,ಅರಳಿ ಕಟ್ಟೆ ಪುಟದಲ್ಲಿ ಬಿಜಾಪುರ ಜಿಲ್ಲಿಯ ಗ್ರಾಮಗಳ ಇತಿಹಾಸ ಲೇಖನಗಳಲ್ಲಿ ಇದ್ದ ತಪ್ಪುಗಳ ಬಗ್ಗೆ ಒಂದು ಸಂದೇಶ ಇದ.ದಯವಿಟ್ಟು ಅದರೆ ಬಗ್ಗೆ ನಿಮ್ಮ ಅಭಿಪ್ರಾಯವನ್ನು ತಿಳಿಸಿರಿ.ಪಾಲಗಿರಿ (talk) ೦೨:೫೫, ೧೦ ಫೆಬ್ರುವರಿ ೨೦೧೪ (UTC)
ವಿಕೀಸೋರ್ಸು ನಲ್ಲಿ ಕನ್ನಡ
[ಬದಲಾಯಿಸಿ]Dr.K.Soubhagyavathiಮೇಡಮ್ ಯವರೆ,ಮತ್ತು ಇನ್ನೊಂದು ಬಾರಿ,ವಿಕೀಸೋರ್ಸು ಪುಟದಲ್ಲಿ ಇರುವ ಪ್ರಾಶಸ್ತ್ಯಗಲು ಪುಟದಲ್ಲಿ ಇರುವ Universal Language Selector ವನ್ನು ಕ್ಲಿಕ್ ಮಾಡಿ,ಉಳಿಸಿ,ctrl+M ವನ್ನು ಬಳಸಿ ನೋಡಿರಿ.ಇನ್ನೂ ಕನ್ನಡದಲ್ಲಿ ಬರೆಯುವುದು ಆಗದಿದ್ದರೆ,ವಿಕೀ ಸೋರ್ಸು ಪುಟದ ಏಡಭಾಗದಲ್ಲಿರುವ ಕಾಲಮ್(column)ನಲ್ಲಿ,ಭಾಷೆಗಳು ಎನ್ನುವ ಪದ ಎದುರುಕಡೆ ಒಂದು ಚಕ್ರ ಇರುತ್ತದೆ,ಅದರನ್ನು ಒತ್ತಿ,ಕನ್ನಡವನ್ನು ಆಯ್ಕೇ ಮಾಡುಕೊಳ್ಳಿರಿ.ಪೋಟೋ ಗಳು ವೀಕೀ ಕಾಮನ್ಸು ನಲ್ಲಿ ಸಿಗುತ್ತವೆ, ಕಾಮನ್ಸುಪುಟಕ್ಕೆ ಹೋಗಿ,ರೈಟ್ ಸೈಡ್ ನಲ್ಲಿರುವ search box ನಲ್ಲಿ ನಮಗೆ ಬೇಕಾದ ಪೋಟೋ ಹೆಸರನ್ನು ಟೈಪು ಮಾಡಿ,ಕ್ಲಿಕ್ ಮಾಡಿದರೆ,ಪೊಟೋಗಳು ಕಾಣೆಸಿಲಾಗುತ್ತವೆ.ನಾನೂ ಪ್ರಯತ್ನಮಾಡಿತಿನಿ.ಪಾಲಗಿರಿ (talk) ೧೫:೪೬, ೧೧ ಫೆಬ್ರುವರಿ ೨೦೧೪ (UTC)
ಮರಳಿಮಣ್ಣಿಗೆ
[ಬದಲಾಯಿಸಿ]Madam .namaste, one of my Telugu Wikipedia member requires some clarification about Karath's "ಮರಳಿಮಣ್ಣಿಗೆ".He read it's Telugu translation,and have some doubts
- was the story created from karanth's personal life or was it of any body,he knows,if so,can you narrate it kindly
- Is there any other ಕಾದಂಬರಿ(novel) with three generations involved in it. Palagiri (talk) ೦೪:೨೨, ೨೭ ಫೆಬ್ರುವರಿ ೨೦೧೪ (UTC)
ವಿಕಿ ವಿಶ್ವಕೋಶದ ಶೈಲಿಗೆ ಹೊಂದದ ಬರಹಗಳು ಮತ್ತು ಶೀರ್ಷಿಕೆಗಳು
[ಬದಲಾಯಿಸಿ]ನಮಸ್ತೆ,
ನೀವು ವಿಕಿಗೆ ಹಾಕಿರುವ ಹಲವಾರು ಪುಟಗಳನ್ನು ನೋಡಿದೆ. ಅವುಗಳಲ್ಲಿ ಅನೇಕ ಪುಟಗಳು ವಿಕಿಪಿಡಿಯದಲ್ಲಿ ಹಾಕುವಂತಹ ಶೈಲಿಯ ಪುಟಗಳಾಗಿರುವುದಿಲ್ಲ ಅನ್ನಿಸಿತು. ವಿಕಿಪಿಡಿಯದಲ್ಲಿ ಮಾಹಿತಿ ಬರಹಗಳನ್ನು ಮಾತ್ರ ಹಾಕಬೇಕು. ಇಲ್ಲಿ ಬ್ಲಾಗ್ ಮಾದರಿಯ ಬರಹಗಳು, ಪ್ರಬಂಧಗಳು, ಸೃಜನಾತ್ಮಕ ಬರವಣಿಗೆಗಳು, ಸಂಶೋಧನಾ ಬರಹಗಳು, ಅನುಭವ ಬರಹಗಳು, ವಿಮರ್ಶೆಗಳು ಮುಂತಾದ ರೀತಿಯ ಬರಹಗಳಿಗೆ ಅವಕಾಶವಿಲ್ಲ.
ವಿಕಿಶೈಲಿಗೆ ವಿರುದ್ಧವಾದವು ಎನ್ನಿಸಿದ ಕೆಲವು ಉದಾಹರಣೆ ಪುಟಗಳು ಇವು.
- ಜನಪದ ಕನಸುಗಳಲ್ಲಿ ಗಾದೆ ಮತ್ತು ನಂಬಿಕೆ
- ಸೀತೆ ಮತ್ತು ದ್ರೌಪದಿ
- ಜನಪದ ಗೀತೆಗಳಲ್ಲಿ ಭ್ರಾತೃತ್ವ
- ವಚನಗಳಲ್ಲಿ ಅಲ್ಲಮಪ್ರಭು-ಮುಕ್ತಾಯಕ್ಕನ ಸಂವಾದ
- ಅಗಮ್ಯ ಸಂಬಂಧಗಳು
ಮತ್ತೊಂದು ವಿಚಾರವೆಂದರೆ, ಪುಟದ ಶೀರ್ಷಿಕೆಗಳು ನೇರವಾಗಿರಬೇಕು. ಪತ್ರಿಕೆಗಳಲ್ಲಿನ ಲೇಖನಗಳ ತಲೆಬರಹದಂತೆ ಇರುವಹಾಗಿಲ್ಲ. ಉದಾಹರಣೆಗೆ ಅನ್ನ ಎಂಬ ಪ್ರಾಣದಾತೆ ಎನ್ನುವ ಪುಟವಿದೆ. ಇದು ವಿಕಿಶೈಲಿಗೆ ಹೊಂದದ ಶೀರ್ಷಿಕೆ. ಈ ಪುಟಕ್ಕೆ ಕೇವಲ 'ಅನ್ನ' ಎನ್ನುವುದು ಸರಿಯಾದ ಶೀರ್ಷಿಕೆ.
ಹಾಗಾಗಿ ನೀವು ಸೇರಿಸುವ ಪುಟಗಳ ಬಗ್ಗೆ ಮರುಚಿಂತನೆ ಮಾಡಿ ಮುಂದುವರೆಯಬೇಕಾಗಿ ವಿನಂತಿ.
ನಿಮ್ಮಲ್ಲಿ ಬಹಳಷ್ಟು ವಚನಗಳು, ಜನಪದ ಗೀತೆಗಳ ಸಂಗ್ರಹವಿರುವಂತೆ ಕಾಣುತ್ತದೆ. ಅವುಗಳನ್ನು ವಿಕಿಸೋರ್ಸ್ ಗೆ ಮತ್ತು ವಿಕಿಕೋಟ್ಸ್ ಗೆ ಹಾಕಬೇಕಾಗಿ ಕೋರಿಕೆ.
--Vikashegde (talk) ೧೧:೨೨, ೧೫ ಏಪ್ರಿಲ್ ೨೦೧೪ (UTC)
- ನಿಮ್ಮ ಉತ್ತರಕ್ಕೆ ಧನ್ಯವಾದಗಳು. ಸಮಯದ ಅಭಾವ, ಇತರ ಕೆಲಸಗಳ ಒತ್ತಡದ ನಡುವೆ ವಿಕಿ ನಿರ್ವಾಹಕರಿಗೆ ಪ್ರತಿಯೊಂದು ಪುಟವನ್ನೂ ಪರಿಶೀಲನೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ನನ್ನನಿಸಿಕೆ. ಹಾಗಾಗಿ ನಿಮ್ಮ ಪುಟಗಳು ಅಳಿಸಲ್ಪಟ್ಟಿಲ್ಲ/ಆಕ್ಷೇಪಿಸಲ್ಪಟ್ಟಿಲ್ಲ. ಅದೂ ಅಲ್ಲದೇ ವಿಕಿ ಸಂಪ್ರದಾಯದ ಪ್ರಕಾರ ನಿರ್ವಾಹಕರು ನೇರವಾಗಿ ಪುಟವನ್ನು ಅಳಿಸುವುದಿಲ್ಲ. ಬೇರೆ ಯಾರಾದರೂ ಅದನ್ನು 'ಅಳಿಸುವಿಕೆ'ಗೆ ಗುರುತು ಮಾಡಬೇಕು. ಅದನ್ನು ನೋಡಿದ ನಂತರ ಪರಿಶೀಲಿಸಿ ಅಳಿಸುವ ಅಥವಾ ಬಿಡುವ ತೀರ್ಮಾನ ಕೈಗೊಳ್ಳುತ್ತಾರೆ. ವೈವಿಧ್ಯಮಯ ಲೇಖನಗಳನ್ನು ಸೇರಿಸಿ ಎಂದರೆ ವೈವಿಧ್ಯಮಯ ವಿಷಯಗಳ ಬಗ್ಗೆ ಪುಟಗಳನ್ನು ಸೇರಿಸಿ ಎಂದು ಹೇಳಿರಬೇಕು. ನೀವು ಈಗ ಈ ಪುಟಗಳನ್ನು ಅಳಿಸಲು ಅಥವಾ ಶೀರ್ಷಿಕೆಗಳನ್ನು ಬದಲಿಸಲು ಸಾಧ್ಯವಿಲ್ಲ. ಅದನ್ಜು ನಿರ್ವಾಹಕರು ಮಾಡಬೇಕು. ನೀವು ಅನ್ಯಥಾ ಭಾವಿಸದಿದ್ದಲ್ಲಿ ನಾನು ಆ ಪುಟಗಳನ್ನು 'ಗುರುತು' ಮಾಡುತ್ತೇನೆ. ನಿರ್ವಾಹಕರು ಅದನ್ನು ನೋಡಿ ತೀರ್ಮಾನ ತೆಗೆದುಕೊಳ್ಳಲಿ. ಈ ಬಗ್ಗೆ ಅರಳಿಕಟ್ಟೆಯಲ್ಲೂ ಚರ್ಚೆ ಮಾಡಬಹುದು. ನೋಡೋಣ. ನನ್ನ ಅಭಿಪ್ರಾಯ ತಪ್ಪಿದ್ದರೂ ಇರಬಹುದು!
--Vikashegde ([[ಸದಸ್ಯರ
ಚರ್ಚೆಪುಟ:Vikashegde|talk]]) ೦೬:೧೨, ೧೬ ಏಪ್ರಿಲ್ ೨೦೧೪ (UTC)
ನಾನು ನೋಡಿದ,ಶ್ರೀ ಕೇಶೀರಾಜರ ಶಬ್ದಮಣಿದರ್ಪಣಕ್ಕೆ ೯೮೫ ಪುಟದ ವಿಸ್ತೃತವಾದ ವ್ಯಾಖ್ಯಾನವನ್ನು, ಬೆಂಗಳೂರು ಸರ್ಕಾರಿ ವಾಣಿವಲಾಸ ಜೂನಿಯರ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿದ್ದ ಶ್ರೀ ಭುವನಹಳ್ಳಿ ಪದ್ಮನಾಭಶರ್ಮರು ೧೯೭೬/1975 ರಲ್ಲಿ ಬರೆದು ಪ್ರಕಟಿಸಿದ ವಿಷಯವನ್ನು ಬಾಕ್ಸಿನಲ್ಲಿ ಪ್ರತ್ಯೇಕವಾಗಿ ಹಾಕಿದ್ದೇನೆ. ಶ್ರೀ ಜಿ. ನಾರಾಯಣ ಅವರ ಅಭಿಪ್ರಯವನ್ನೂ ಹಾಕಿದ್ದೇನೆ. ಅಗತ್ಯ ಕಂಡರೆ ಉಳಿಸಿ.ಅದರ ಒಂದು ಪದ್ಯದ ವಿಸ್ತೃತ ವ್ಯಾಖ್ಯಾನ ಹಾಕಬಹುದಿತ್ತು -ನಿಯಮದಲ್ಲಿ ಅವಕಾಶವಿದೆಯೋ ಇಲ್ಲವೋ ಗೊತ್ತಿಲ್ಲ(ಕಾಪಿ ರೈಟ್ ಸಮಸ್ಯೆ).೧೬:೩೪, ೨೩ ಜೂನ್ ೨೦೧೪ (UTC)//ಸದಸ್ಯ:Bschandrasgr/ಪರಿಚಯ
- ಕೇಶಿರಾಜನ ವೈಯಕ್ತಿಕ ಪರಿಚಯ "ಶಬ್ದಮಣಿದರ್ಪಣದ ಭಾಗವಲ್ಲ. ಕೇಶಿರಾಜನ ಕುರಿತಾದ ಸ್ವತಂತ್ರ ಲೇಖನದಲ್ಲಿ ಆ ವಿವರಗಳನ್ನು ನೀಡಲಾಗಿದೆ. ಕೇಶಿರಾಜನ ಕುರಿತಾದ ಮುಖ್ಯ ಲೇಖನ ಎಂದು "ಶಬ್ದಮಣಿದರ್ಪಣ ಲೇಖನದಿಂದ ಕೊಂಡಿ ಕೊಡುವುದರಲ್ಲಿ ತಪ್ಪಿಲ್ಲ. Kpbolumbu (talk) ೦೬:೪೯, ೨೭ ಜೂನ್ ೨೦೧೪ (UTC)
ಕನ್ನಡದ ಅಂಕೆಗಳು
[ಬದಲಾಯಿಸಿ]ಮಾನ್ಯ ಸೌಭಾಗ್ಯವತಿಯವರೇ
- ಕನ್ನಡದ ಅಂಕೆಗಳು ತುಂಬಾ ಸಂಧಿಗ್ದವಾಗಿದ್ದು ಕೆಲವೊಮ್ಮೆ ತಪ್ಪು ಕಲ್ಪನೆಗೆ ಅವಕಾಶ ಮಾಡಿ ಕೊಡುತ್ತದೆ. ಅದಕ್ಕಾಗಿ ನಾನು ಈಗೀಗ ರೋಮನ್ ಅಂಕೆಗಳನ್ನೇ ಬಳಸುತ್ತಿದ್ದೇನೆ . ಈಗ ಶಾಲೆಗಳಲ್ಲಿ , ಸರ್ಕಾರಿ ದಾಖಲೆಗಳಲ್ಲಿ -ಎಲ್ಲಾಕಡೆ ರೋಮನ್ ಅಂಕೆಗಳನ್ನೇ ಬಳಸುತ್ತಿದ್ದಾರೆ. ಈಗಿನ ಹುಡುಗರಿಗೆ -ಉವಕರಿಗೆ ಅದರ ಪರಿಚಯ ಸರಿಯಾಗಿ ಇಲ್ಲ. ಅವರಿಗೆ ಕನ್ನಡ ಅಂಕೆ ಬಳಸುವುದರಿಂದ ತೊಂದರೆಯಾಗಿ 'ಇಂಗ್ಲಿಷ್ ವಿಕಿ'ಗೆ ಹೋಗುತ್ತಾರೆ. ವಿಜ್ಞಾನ ಲೇಖನಗಳಲ್ಲಂತೂ ತುಂಬಾ ತೊಂದರೆ -ಸಂದಿಗ್ಧತೆ. ಉದಾ-೧ ಸೊನ್ನೆ ಕಂಡಂತೆ ಕಾಣುತ್ತದೆ. ,೩,೬,೭,೯, ಇವು ಎರಡು . ಮ-ಒತ್ತು, ಎರಡು, ಅರ್ಕವತ್ತು ಗಳಿಗೆ ಹೋಲುತ್ತವೆ-೨೦೧೪( 2014) 2004 ರಂತೆ ಕಾಣುತ್ತದೆ ಹಾಗೆಯೇ ೧೧ ಎರಡು ಸೊನ್ನೆಯಂತೆ ಕಾಣುತ್ತೆ. ಆದ್ದರಿಂದ ನಾನು
ಇತ್ತೀಚೆಗೆ ರೋಮನ್ ಅಂಕೆಗಳನ್ನೇ ಬಳಸುತ್ತಿದ್ದೇನೆ. ನನ್ನ ಸೃಷ್ಟಿ ಮತ್ತು ವಿಜ್ಞಾನ ಇತರೆ ವಿಜ್ಞಾನ ಲೇಖನಗಳ ಅಂಕೆಗಳು ಅರ್ಥವಾಗುವುದೇ ಇಲ್ಲ. ಕೇವಲ ಅಭಿಮಾನದಿಂದ ಏನು ಪ್ರಯೋಜನ ? ಅರ್ಥವಾಗದಿದ್ದರೆ- ಪ್ರಯೋಜನವಾಗದಿದ್ದರೆ ?? ಆದ್ದರಿಂದ ರೋಮನ್ ಅಂಕೆಗಳನ್ನು ದಯವಿಟ್ಟು ಹಾಗೆಯೇ ಉಳಿಸಿ.
- ನಿಮ್ಮವ,Bschandrasgr ೧೨:೩೪, ೩ ನವೆಂಬರ್ ೨೦೧೪ (UTC) ಸದಸ್ಯ:Bschandrasgr/ಪರಿಚಯ
ಡಾ. ಭಾಲಚಂದ್ರ ನೆಮಾಡೆ ಪುಟದ ಬಗ್ಗೆ
[ಬದಲಾಯಿಸಿ]ಮರಾಠಿಯಲ್ಲಿ ಅವರ ಹೆಸರನ್ನು 'ಭಾಲಚಂದ್ರ' (ಮಹಾಪ್ರಾಣ ಭಾ) ಎಂದೇ ಬರೆಯಲಾಗುತ್ತದೆ. ಹಾಗಾಗಿ ಕನ್ನಡದಲ್ಲೂ ಹಾಗೇ ಬರೆಯಲಾಗಿದೆ. ನೀವು ಅಲ್ಪಪ್ರಾಣವನ್ನಾಗಿ ತಿದ್ದಿದ್ದೀರಿ. Vikas Hegde (talk) ೧೨:೪೫, ೯ ಫೆಬ್ರುವರಿ ೨೦೧೫ (UTC)
ಶ್ರೀಮತಿ ಕೆ.ಸೌಭಾಗ್ಯವತಿಯವರೇ, ನಮಸ್ತೆ , ಶುಭೋದಯ;
- (ನೀವು ಬರೆದಿರುವ ಲೇಖನ "ಸಿರಿಭೂವಲಯ" ಗ್ರಂಥ ನನ್ನ ಬಳಿಯು ಇದೆ. ಅದೊಂದು ಬಹಳ ವಿಶಿಷ್ಟ ಗ್ರಂಥ. ಅದು ಮಾಮೂಲಿಯಾಗಿಲ್ಲ. ಆದರೆ ಅದನ್ನು ಹೇಗೆ ಓದಬೇಕೆಂಬುದು ನನಗೆ ಈ ವರೆವಿಗೂ ಗೊತ್ತಾಗಿಲ್ಲ. ಅದನ್ನು ಓದಲು ಯಾವುದಾದರೂ ಟಿಪ್ಸ್ ಇದ್ದರೆ ದಯವಿಟ್ಟು ತಿಳಿಸಿ.)
- ಉತ್ತರ:ಹೌದೆ!!!(ಸಿರಿಭೂವಲಯಸಾಗರರತ್ನಮಂಜೂಷ-;ಅಸ್ತವ್ಯಸ್ತವಾಗಿದ್ದ ಲೇಖನವನ್ನು ಸರಿಪಡಿಸಿದ್ದೇನೆ.ಅಷ್ಟೆ) ಅದು ಅಷ್ಟು ಸುಲಭ ಗ್ರಂಥವಲ್ಲ.ನಾನು ತಿಳಿದಂತೆ ಸಂಕೀರ್ಣ ಗಣಿತ ಬಾಷೆ. ಸುಧಾರ್ಥಿ ಎನ್ನುವವರು ಅದರ ಬಗೆಗೆ ಸಂಶೋಧನೆ ನೆಡೆಸಿದ್ದಾರಂತೆ; ನೋಡಿ: ಸಿರಿಭೂವಲಯಸಾಗರರತ್ನಮಂಜೂಷ ಮತ್ತು ಸಿರಿಭೂವಲಯ ; ಈ ಎರಡೂ ಲೇಖನಗಳನ್ನು ಸೇರಿಸಲು ಗುರುತುಮಾಡಿದ್ದಾರೆ; ಬೇರೆಯೇ ಇದ್ದರೆ ಒಳ್ಳೆಯದು -ವಿಷಯದ-ವಸ್ತು ಬೇರೆ ಬೇರೆ.Bschandrasgr ೦೩:೦೦, ೨೭ ಫೆಬ್ರುವರಿ ೨೦೧೫ (UTC)ಸದಸ್ಯ:Bschandrasgrಚರ್ಚೆ
(suMkadavar ೧೫:೧೭, ೫ ಮಾರ್ಚ್ ೨೦೧೫ (UTC)) ನಮಸ್ತೆ. ಡಾ. ಸೌಭಾಗ್ಯವತಿಯವರೆ, ಡಾ. ಪಿ.ಕೆ.ರಾಜಶೇಖರ ಲೇಖನವನ್ನು ಸಂಪಾದಿಸುವ ಪ್ರಯತ್ನದಲ್ಲಿ ತಪ್ಪು ಮಾಡಿದ್ದೇನೆ. ದಯಮಾಡಿ ಸರಿಪಡಿಸಿ. ಧನ್ಯವಾದಗಳು.
ಸಂಪಾದನೆ
[ಬದಲಾಯಿಸಿ]Madam,can you spare some of your valuable time to edit the following articles ಲಾರಿಕ್ ಆಮ್ಲ ,ಮಿರಿಸ್ಟಿಕ್ ಆಮ್ಲ,andಪಾಮಿಟಿಕ್ ಆಮ್ಲ.thanking you.Palagiri (talk) ೧೩:೨೨, ೭ ಮಾರ್ಚ್ ೨೦೧೫ (UTC)
ಜ್ಯೋತಿಬಾ ಫುಲೆ ಅವರ ಕವಿತೆಯ ತುಣುಕುಗಳು - ಮತ್ತು ಆಕರ ಒದಗಿಸುವ ಬಗ್ಗೆ
[ಬದಲಾಯಿಸಿ]ನಮಸ್ತೆ, ಮಹಾತ್ಮ ಜ್ಯೋತಿಬಾ ಫುಲೆ ಲೇಖನದಲ್ಲಿ ಅವರ ಕವಿತೆ ತುಣುಕುಗಳನ್ನು ಸೇರಿಸಿದ್ದೀರಿ. ವಿಶ್ವಕೋಶದ ನಿಯಮಗಳ ಪ್ರಕಾರ ಯಾವುದೇ ಮೂಲದಲ್ಲಿರುವ ಮಾಹಿತಿಯನ್ನು ಯತಾವತ್ತಾಗಿ ಹಾಕುವಂತಿಲ್ಲ. ಅವುಗಳನ್ನು ವಿಕಿಯಲ್ಲಿ ಹಂಚಿಕೊಳ್ಳಲು , ಮೂಲ ಪುಸ್ತಕ ಅಥವ ಪ್ರಕಾಶನದ ಪರವಾನಗಿಯ ಬಗ್ಗೆ ಸ್ವಲ್ಪ ಓದಿಕೊಳ್ಳಬೇಕಾಗುತ್ತದೆ. ಜೊತೆಗೆ ನೀವು ಸೇರಿಸುವ ಮಾಹಿತಿಗಳಿಗೆ ಸೂಕ್ತ ಆಕರಗಳನ್ನು ಒದಗಿಸುವುದೂ ಅತ್ಯವಶ್ಯ. ಹೆಸರೂ ಕೂಡ ತಪ್ಪಿರುವಂತಿದೆ. Jyotirao_Phule ಇಲ್ಲಿ ಇಂಗ್ಲೀಷ್ ಲೇಖನವನ್ನೂ ಹಾಗೂ ಅಲ್ಲಿ ಪ್ರತಿ ಮುಖ್ಯ ವಿಷಯವನ್ನು ಪ್ರಸ್ತಾಪಿಸುವಾಗ ನೀಡಿರುವ ಆಕರಗಳನ್ನೂ ನೋಡಿ. ನಿಮ್ಮ ವಿಕಿ ಸಂಪಾದನೆಗೆ ಇದು ಸಹಾಯಕವಾಗಬಲ್ಲದು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೧೭:೫೭, ೧೨ ಮಾರ್ಚ್ ೨೦೧೫ (UTC)
ಉತ್ತಮ ಲೇಖನ ಬರೆಯುವುದು
[ಬದಲಾಯಿಸಿ]ನೀವು ಬಿಡುವಿಲ್ಲದೆ ಕನ್ನಡ ವಿಕಿಪೀಡಿಯ ಸಂಪಾದನೆ ಮಾಡುತ್ತಿರುವುದಕ್ಕೆ ಧನ್ಯವಾದಗಳು. ವಿಕಿಪೀಡಿಯ ಲೇಖನಗಳ ಗುಣಮಟ್ಟ ಹೇಗಿರಬೇಕು ಎನ್ನುವುದಕ್ಕೆ ಇಂಗ್ಲಿಶ್ ವಿಕಿಪೀಡಿಯದಲ್ಲಿ ಮಾಹಿತಿ ಪುಟ ಇದೆ. ದಯವಿಟ್ಟು ಓದಿ. ನಿಮಗೆ ಉಪಯುಕ್ತವಾಗಬಹುದು. ನಿಮ್ಮಿಂದ ಉತ್ತಮ ಗುಣಮಟ್ಟದ ಲೇಖನಗಳು ಕನ್ನಡ ವಿಕಿಪೀಡಿಯಕ್ಕೆ ಬರುವಂತಾಗಲಿ--Pavanaja (ಚರ್ಚೆ) ೦೫:೨೪, ೧೩ ಮಾರ್ಚ್ ೨೦೧೫ (UTC)
ಲೇಖನೆ -ಸಂಪಾದನೆ
[ಬದಲಾಯಿಸಿ]MadaM! will you please editಮಲ್ಲಿ ಮಸ್ತಾನ್ ಬಾಬು,thankU.Palagiri (ಚರ್ಚೆ) ೦೪:೩೯, ೭ ಏಪ್ರಿಲ್ ೨೦೧೫ (UTC)
ಬಿ.ಆರ್.ಅಂಬೇಡ್ಕರ್ ಲೇಖನದ ಬಗ್ಗೆ
[ಬದಲಾಯಿಸಿ]ನಮಸ್ತೆ, ಬಿ.ಆರ್.ಅಂಬೇಡ್ಕರ್ ಲೇಖನ ಉತ್ತಮಗಳಿಸುವಲ್ಲಿ ಕೈಜೋಡಿಸಿದ್ದಕ್ಕೆ ಧನ್ಯವಾದಗಳು. ಈ ಲೇಖನದ ಅನೇಕ ವಿಭಾಗಗಳಲ್ಲಿ ಇನ್ನೂ ಮಾಹಿತಿ ಸ್ಪಷ್ಟ ಮತ್ತು ನಂಬಲರ್ಹಗೊಳಿಸಬಲ್ಲ ಉಲ್ಲೇಖ ಇತ್ಯಾದಿಗಳಿಲ್ಲ. ಎಲ್ಲ ಮಾಹಿತಿಯನ್ನು ಬುಲೆಟ್ ಪಾಯಿಂಟ್‌ಗಳನ್ನಾಗಿ ಮಾಡಲಾಗಿದೆ. ಇದು ಯಾರದೋ ನೋಟ್ಸ್ ಓದಿದಂತೆ ಅನಿಸುತ್ತದೆ ಮತ್ತು ವಿಶ್ವಕೋಶಕ್ಕೆ ಅನುಗುಣವಾಗಿಲ್ಲ. en:B. R. Ambedkar ಇಂಗ್ಲೀಷ್ ವಿಕಿಯ ಈ ಲೇಖನ ನಿಮ್ಮ ಸಂಪಾದನೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಳ್ಳಲು ಸಹಾಯಕವಾಗಬಲ್ಲದು. ಕೆಂಪು ಕೊಂಡಿಗಳು, ಉಲ್ಲೇಖನಗಳು, ಮೇಲೆ ಹೇಳಿದ ವಿಶ್ವಕೋಶದ ಶೈಲಿ ಇತ್ಯಾದಿ ಸರಿಹೋಗುವವರೆಗೆ copyedit ಟೆಂಪ್ಲೇಟ್ ಪುಟದಿಂದ ತೆಗೆಯಬೇಡಿ. ಈ ಟೆಂಪ್ಲೇಟ್, ಲೇಖನವನ್ನು ಉತ್ತಮಗೊಳಿಸಲು ಬಳಸುವ ಅನೇಕ ವರ್ಗ ಇತ್ಯಾದಿಗಳನ್ನು ಪುಟಕ್ಕೆ ಸೇರಿಸುತ್ತದೆ ಹಾಗೂ ಆಯಾ ತಪ್ಪುಗಳನ್ನು ಅಥವಾ ತೊಂದರೆಗಳನ್ನು ಸರಿಪಡಿಸುವ ವಿಕಿಪೀಡಿಯನ್ನರಿಗೆ ಲೇಖನ ಹುಡುಕಲು ಸಹಾಯಕವಾಗುತ್ತದೆ. ನಿಮ್ಮ ಕೆಲಸ ಮುಗಿದ ನಂತರ ಲೇಖನದ ಚರ್ಚೆ ಪುಟದಲ್ಲಿ ಒಂದು ಸಂದೇಶ ಸೇರಿಸಿ, ಮುಂದಿನ ಕಾರ್ಯವನ್ನು ಇತರೆ ವಿಕಿಪೀಡಿಯನ್ನರು ಅದರ ಸೂಚನೆಯಂತೆ ಮುಂದುವರೆಸಬಹುದು. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೫:೪೩, ೧೫ ಏಪ್ರಿಲ್ ೨೦೧೫ (UTC)
ತಲಕಾಡು - ಲೇಖನದ ಶೈಲಿಯ ಬಗ್ಗೆ
[ಬದಲಾಯಿಸಿ]ತಲಕಾಡು ಲೇಖನದಲ್ಲಿ ಅನೇಕ ಬುಲೆಟ್ ಪಾಯಿಂಟ್‌ಗಳನ್ನು ಬಳಸುತ್ತಿದ್ದೀರಿ. ಇಂಗ್ಲೀಷ್‌ನ Talakad ಪುಟದಲ್ಲಿ ಮಾಹಿತಿ ಸೇರಿಸುವುದನ್ನು ನೋಡಿದಲ್ಲಿ, ವಿಕಿಗೆ ಬೇಕಿರುವ ಶೈಲಿಯ ಪರಿಚಯವಾಗುತ್ತದೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೦೭:೨೬, ೨೧ ಏಪ್ರಿಲ್ ೨೦೧೫ (UTC)
Translating the interface in your language, we need your help
[ಬದಲಾಯಿಸಿ]Please register on translatewiki.net if you didn't yet and then help complete priority translations (make sure to select your language in the language selector). With a couple hours' work or less, you can make sure that nearly all visitors see the wiki interface fully translated. Nemo ೧೪:೦೬, ೨೬ ಏಪ್ರಿಲ್ ೨೦೧೫ (UTC)
ಚಿತ್ರಗಳನ್ನು ಸೇರಿಸುವ ಬಗ್ಗೆ
[ಬದಲಾಯಿಸಿ]ಹಲಸಿನ_ಹಣ್ಣು ಪುಟದ ಮಾಹಿತಿ ಓದದಂತೆ ಅದರ ಮೇಲೆ ಚಿತ್ರಗಳನ್ನು ಸೇರಿಸಿದ್ದೀರಿ. ಅವಶ್ಯಕತೆ ಇದ್ದಿಲ್ಲ ಅಲ್ಲವೇ? ಜೊತೆಗೆ ಒಂದು ಪುಟಕ್ಕೆ ಎಷ್ಟು ಅವಶ್ಯವೋ ಅಷ್ಟು ಚಿತ್ರ ಸಾಕು. ಮೇಲಿನ ಪುಟದಲ್ಲಿ ಚಿತ್ರಗಳನ್ನು ಕೆಳಗೆ ಸರಿಸಿದ್ದೇನೆ. ಲೇಖನ ಮುಂದಿವರೆಸಿದಾಗ ಚಿತ್ರಗಳನ್ನು ಸರಿಯಾದ ಕಡೆ ಸೇರಿಸಿಕೊಳ್ಳಿ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೯:೧೧, ೨೬ ಏಪ್ರಿಲ್ ೨೦೧೫ (UTC)
ಉಲ್ಲೇಖಗಳೇ ಇಲ್ಲದೆ ಲೇಖನಗಳನ್ನು ಸೃಷ್ಟಿಸುತ್ತಿದ್ದೀರಿ
[ಬದಲಾಯಿಸಿ]ನಮಸ್ತೆ, ಈ ಹಿಂದೆ ಕೂಡ ಉಲ್ಲೇಖಗಳ ಬಗ್ಗೆ ನಿಮಗೆ ಸಂದೇಶ ಕಳಿಸಿದ್ದೆ. ಅದಕ್ಕೆ ಉತ್ತರ ನೀಡಿಲ್ಲ. ಉಲ್ಲೇಖಗಳೇ ಇಲ್ಲದೆ ಮತ್ತೆ ಹೊಸ ಪುಟಗಳನ್ನು ಸೃಷ್ಟಿಸುತ್ತಲೇ ನೆಡೆದಿದ್ದೀರಿ. ವಿಷಯದ ಬಗ್ಗೆ ನಿಮಗೆ ಅರಿವಿದ್ದರೂ, ಅದರ ಬಗ್ಗೆ ಪಾಂಡಿತ್ಯವಿದ್ದರೂ, ವಿಷಯವನ್ನು ಮತ್ತೊಂದು ಆಕರದಿಂದ ಪರೀಕ್ಷೆಗೆ ಒಳಪಡಿಸಿ ಬೇರೆಯವರು ಖಚಿತ ಪಡಿಸಿಕೊಳ್ಳಲು ಆಗದಿದ್ದಲ್ಲಿ, ಅಂತಹ ಮಾಹಿತಿ ವಿಕಿಪೀಡಿಯ ಅಥವಾ ವಿಶ್ವಕೋಶಗಳಲ್ಲಿ ಇರಲು ಯೋಗ್ಯವಲ್ಲ. ನಿಮಗೆ ಉಲ್ಲೇಖನಗಳನ್ನು ಸೇರಿಸುವಲ್ಲಿ ತಾಂತ್ರಿಕ ಸಹಾಯ ಬೇಕಿದ್ದಲ್ಲಿ ಕೇಳಿ. ಇತ್ತೀಚೆಗೆ ನೀವು ಸೃಷ್ಟಿಸಿದ ಹೆಚ್. ಎಸ್. ವೆಂಕಟೇಶ್ ಮೂರ್ತಿ ಅವರ ಲೇಖನದಲ್ಲಿ ಒಂದೂ ಉಲ್ಲೇಖವಿಲ್ಲ. ಇದರತ್ತ ಗಮನ ಹರಿಸುತ್ತೀರೆಂದು ನಂಬಿರುತ್ತೇನೆ. ಧನ್ಯವಾದಗಳೊಂದಿಗೆ. ~ಓಂಶಿವಪ್ರಕಾಶ್/Omshivaprakash/ಚರ್ಚೆ/ಕಾಣಿಕೆಗಳು ೧೩:೨೧, ೨೪ ಮೇ ೨೦೧೫ (UTC)
- ಬಹುಶಃ ನೀವು ಉಲ್ಲೇಖ ಸೇರಿಸುವುದು ಹೇಗೆ ಎಂದು ನಾನು ತೋರಿಸಿಕೊಟ್ಟದ್ದನ್ನು ಮರೆತಂತೆ ಕಾಣುತ್ತದೆ. ನಾಡಿದ್ದು (೨೭ರಂದು) ಮೈಸೂರಿಗೆ ಬಂದಾಗ ನಿಮ್ಮ ಎಲ್ಲ ಅನುಮಾನಗಳಿಗೆ ಪರಿಹಾರ ನೀಡುತ್ತೇನೆ. ಉಲ್ಲೇಖ ಸೇರಿಸುವುದು ಹೇಗೆ ಎಂಬ ಬಗ್ಗೆ ಕನ್ನಡ ವಿಕಿಪೀಡಿಯ ಟ್ಯಟೋರಿಯಲ್ ವೀಡಿಯೋಗಳಲ್ಲಿ ೬ನೆಯ ವೀಡಿಯೋದಲ್ಲಿ ವಿವರ ಇದೆ. ಕನ್ನಡ ವಿಕಿಪೀಡಿಯದ ಎಡ ಭಾಗದಲ್ಲಿರುವ ಸಹಾಯ ಎಂಬ ಕೊಂಡಿಯ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ದೊರೆಯುವ ಸಹಾಯ ಪುಟದಲ್ಲಿ ಟ್ಯುಟೋರಿಯಲ್ ಫೈಲ್ ಮತ್ತು ವೀಡಿಯೋಗಳಿಗೆ ಕೊಂಡಿ ಇದೆ. ದಯವಿಟ್ಟು ಅವುಗಳನ್ನು ಬಳಸಿ ಪ್ರಯತ್ನಿಸಿ. ಇನ್ನೂ ಅನುಮಾನಗಳಿದ್ದಲ್ಲಿ ನಿಮ್ಮನ್ನು ಮುಖತಃ ಭೇಟಿ ಆದಾಗ ಮತ್ತೊಮ್ಮೆ ತಿಳಿಸಿಕೊಡುತ್ತೇನೆ.--Pavanaja (ಚರ್ಚೆ) ೧೬:೪೮, ೨೪ ಮೇ ೨೦೧೫ (UTC)
ನಮಸ್ಕಾರ,
[ಬದಲಾಯಿಸಿ]ಮಾನ್ಯ ಡಾ. ಸೌಭಗ್ಯವತಿಯವರೇ ನಮಸ್ಕಾರ, ಆರೋಗ್ಯವಾಗಿದ್ದೇನೆ. ವಿಚಾರಿಸಿದ್ದಕ್ಕೆ ಧನ್ಯವಾದಗಳು. • ಶ್ರೀಮತಿ ಜ್ಞಾನಾ ಅವರು ವಿಕಿತಾಣ ರಚಿಸಲು ಕಲಿಯಲು, ನನ್ನ ಹೆಸರಿನ ಒಂದು ತಾಣವನ್ನು ಇಲ್ಲಿನ ಒಂದು ಸ್ಮರಣ ಸಂಚಿಕೆಯಲ್ಲಿನ ವಿವರ ನೋಡಿ ಹಾಕಿದ್ದರು, ಅದು ಸರಿಯಾದ ಆಧಾರವಲ್ಲವೆಂದು ರದ್ದಿಗೆ ಹಾಕಿದರು . ಆ ನನ್ನ ಹೆಸರಿನ ತಾಣದಲ್ಲಿ ನನ್ನ ಹೆಸರನ್ನು ತಪ್ಪಾಗಿ ಬರೆದಿದ್ದರಿಂದ ಅದದನ್ನು ಸರಿಪಡಿಸಲು ನಾನು ನನ್ನ ಹೆಸರನ್ನು ಸರಿಯಾಗಿ ಬರೆದು ಪುನರ್ನಿದೇಶನ ಕೊಟ್ಟಿದ್ದೆ ಎಡಿಟರ್ ಮಾನ್ಯ ಪವನಜ ಅವರು ನನ್ನ ಹೆಸರಿನ ತಾಣವನ್ನು ರದ್ದು ಮಾಡಿ ಪುನರ್ನಿದೇಶನ ಕೊಟ್ಟ- ಬಿ.ಎಸ್.ಚಂದ್ರಶೇಖರ-ತಾಣವನ್ನು ಬೌಲರ್ “ಚಂದ್ರಶೇಖರ್” ತಾಣಕ್ಕೆ ಲಿಂಕ್ ಕೊಟ್ಟರು. ನಿಯಮದಂತೆ ನನ್ನ ಹೆಸರಿನ “ಬಿ.ಎಸ್.ಚಂದ್ರಶೇಖರ” ತಾಣವನ್ನು ರದ್ದು ಮಾಡಿ ಎಂದು ವಿನಂತಿಸಿಕೊಂಡೆ. ಆದರೆ ಅವರು ತಾವು ಮಾಡಿದ್ದೇ ಸರಿ ಎಂದು ಹಠಹಿಡಿದರು. ನಿಯಮದಂತೆ ಸೃಷ್ಟಿ ಮಾಡಿದವರು ಆ ತಾಣವನ್ನು ರದ್ದುಮಾಡಲು ಕೇಳಿದರೆ ರದ್ದುಮಾಡಬೇಕು. ನಾನು ಕನ್ನಡ ವಿಕಿಗೆ ಕೆಲಸ ಮಾಡುತ್ತಿದ್ದಂತೆಯೇ, ವಿನಾಕಾರಣ, ನನ್ನ ಹೆಸರನ್ನು ಬೇರೆಯವರಿಗೆ ಲಿಂಕ್ ಮಾಡಿದ್ದರಿಂದ, ಬೇಸರವಾಗಿ, ಈಗ ಮೂರು ತಿಂಗಳಿನಿಂದ ಕನ್ನಡ ವಿಕಿಪೀಡಿಯಾಕ್ಕೆ ಬರೆಯುತ್ತಿಲ್ಲ; ವಿಕಿಪೀಡಿಯಾ ತೆರೆಯುವುದಕ್ಕೇ ಬೇಸರವಾಗಿದೆ. ಈ ನಡುವೆ ಮುಖ್ಯವಾದ -ಕ್ರೀಡೆ, ವಿಜ್ಞಾನ, ರಾಜಕೀಯ, ಇತರೆ ಬೆಳವಣಿಗೆಗಳು ಸಕಾಲ ಅಭಿವೃದ್ಧಿಯಾಗುತ್ತಿಲ್ಲ (ಅಪ್`ಡೇಟ್ ಆಗುತ್ತಿಲ್ಲ). ಅವರೇ ಮಾಡಬಹುದು ಅಥವಾ ಬೇರೆಯವರಿಗೆ ಹೇಳಬಹುದು. ಅಪ್`ಡೇಟ್ ಆಗದಿದ್ದರೆ ಕೆಲವು ತಾಣಗಳು ವ್ಯರ್ಥ - ಇಂಗ್ಲಿಷ್ ತಾಣಕ್ಕೆ ಹೋಗಬೇಕಾಗವುದು. ನನ್ನನ್ನು ನೆನಪು ಮಾಡಿಕೊಂಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು. (ನನ್ನ ಚರ್ಚೆ ಪುಟದಲ್ಲಿ ಈ ವಿಷಯವಿದೆ) Bschandrasgr ೧೩:೦೧, ೧೬ ಜೂನ್ ೨೦೧೫ (UTC)ಸದಸ್ಯ:Bschandrasgrಚರ್ಚೆ
ವಿಷಾದ
[ಬದಲಾಯಿಸಿ]ಸೌಭಾಗ್ಯವತಿಯವರಿಗೆ ನಮಸ್ಕಾರಗಳು. ಸೂಳೆ ಸಂಕವ್ವ ಲೇಖನವನ್ನು ಅಳಿಸಲು ಹಾಕಿದ್ದಕ್ಕೆ ನನ್ನನ್ನು ಕ್ಷಮಿಸಿ. ನಾನು ಆ ಮಹಿಳೆಯ ಬಗ್ಗೆ ಸರಿಯಾಗಿಯಾಗಿ ತಿಳಿದುಕೊಂಡಿರಲಿಲ್ಲ.ಯಾರೋ ಕಿಡಿಗೇಡಿಗಳು ಹಾಗೆ ಬರೆದಿದ್ದಾರೆಂದು ತಿಳಿದುಕೊಂಡಿದ್ದ.
ನೀವು ನನ್ನ ಚರ್ಚೆಪುಟದಲ್ಲಿ ನನಗೆ ಬಯ್ದಿದ್ದಕ್ಕೆ ಬೇಸರವಿಲ್ಲ. ಆದರೆ ಅನಾಮಿಕವಾಗಿ ಹೆಸರು ಹಾಕದೇ ಬೈದಿದ್ದಕ್ಕೆ ನನಗೆ ಬೇಸರಾಗುತ್ತಿದೆ. ಸದಸ್ಯ:ಸುಮಂತ
ವಿಷಾದ
[ಬದಲಾಯಿಸಿ]ಸೌಭಾಗ್ಯವತಿಯವರಿಗೆ ನಮಸ್ಕಾರಗಳು. ಸೂಳೆ ಸಂಕವ್ವ ಲೇಖನವನ್ನು ಅಳಿಸಲು ಹಾಕಿದ್ದಕ್ಕೆ ನನ್ನನ್ನು ಕ್ಷಮಿಸಿ. ನಾನು ಆ ಮಹಿಳೆಯ ಬಗ್ಗೆ ಸರಿಯಾಗಿಯಾಗಿ ತಿಳಿದುಕೊಂಡಿರಲಿಲ್ಲ.ಯಾರೋ ಕಿಡಿಗೇಡಿಗಳು ಹಾಗೆ ಬರೆದಿದ್ದಾರೆಂದು ತಿಳಿದುಕೊಂಡಿದ್ದ.
ನೀವು ನನ್ನ ಚರ್ಚೆಪುಟದಲ್ಲಿ ನನಗೆ ಬಯ್ದಿದ್ದಕ್ಕೆ ಬೇಸರವಿಲ್ಲ. ಆದರೆ ಅನಾಮಿಕವಾಗಿ ಹೆಸರು ಹಾಕದೇ ಬೈದಿದ್ದಕ್ಕೆ ನನಗೆ ಬೇಸರಾಗುತ್ತಿದೆ. ಸದಸ್ಯ:ಸುಮಂತ
ಚರ್ಚೆ
[ಬದಲಾಯಿಸಿ]ದಯವಿಟ್ಟು ಕ್ಷಮೆಯಿರಲಿ, ಧನ್ಯವಾದಗಳು. ಸದಸ್ಯ:ಸುಮಂತ
ಲೇಖನಗಳ ಪರಿಷ್ಕರಣೆ
[ಬದಲಾಯಿಸಿ]ನಮಸ್ತೆ. ತಾವು ನಾನು ಸೇರಿಸುತ್ತಿರುವ ಲೇಖನಗಳನ್ನು ಓದಿ ಪರಿಷ್ಕರಿಸುತ್ತಿರುವುದಕ್ಕೆ ಧನ್ಯವಾದಗಳು. ಆದರೆ ಎಲ್ಲಾ ಪ್ಯಾರಾಗ್ರಾಫ್‍ಗಳಿಗೆ ಬುಲೆಟ್ ಕೊಟ್ಟು ಒಡೆಯುವುದು ಅಷ್ಟು ಸರಿಕಾಣುತ್ತಿಲ್ಲ.ಇದು ವಿಕಿಯ ಫಾರ್ಮಾಟ್ಟಿಂಗ್‍ಗೆ ಕೂಡಾ ಸರಿಯಾಗಿಲ್ಲ.(ಆಂಗ್ಲ ವಿಕಿಯ ಲೇಖನಗಳನ್ನು ನೋಡಿ) ನಾನು ಈಗ ಮೈಸೂರು ವಿಶ್ವವಿದ್ಯಾಲಯ ವಿಶ್ವಕೋಶ ಲೇಖನಗಳನ್ನು ಸೇರಿಸುತ್ತಿದ್ದು, ಅದರಲ್ಲಿ ಸಾದ್ಯವಿದ್ದಲ್ಲಿ ವಿಭಾಗಗನ್ನಾಗಿಸಿ (ವಿಕಿಯ ಫಾರ್ಮಾಟ್ಟಿಂಗ್‍ಗೆ ಸರಿಯಾಗಿ) ಸೇರಿಸುತ್ತಿದ್ದೇನೆ.ದಯವಿಟ್ಟು ಅನ್ಯಥಾ ಬಾವಿಸದಿರಿ.--VASANTH S.N. (ಚರ್ಚೆ) ೦೭:೩೦, ೧೮ ಅಕ್ಟೋಬರ್ ೨೦೧೫ (UTC)
ವಚನಕಾರರ/ಜಾನಪದಕಾರರ ಪುಟಗಳು
[ಬದಲಾಯಿಸಿ]ನಮಸ್ತೆ, ನೀವು ಇತ್ತೀಚೆಗೆ ಕೆಲವು ವಚನಕಾರರ ಪುಟಗಳನ್ನು ಸೇರಿಸಿದ್ದೀರಿ. ಉದಾ: ಗುಪ್ತಮಂಚಣ್ಣ, ಗಜೇಶ ಮಸಣಯ್ಯ, ಅವಸರದ ರೇಕಣ್ಣ. ಆದರೆ ಅದರಲ್ಲಿ ಏನೂ ಮಾಹಿತಿಯಿಲ್ಲದೇ ಕೇವಲ ವಚನದ ಸಾಲುಗಳಿವೆ. ಇದನ್ನು ನೀವು ವಿಸ್ತರಣೆ ಮಾಡುವವರಿದ್ದೀರಾ? ಹಾಗಿದ್ದರೆ under construction ಎನ್ನುವ ಟೆಂಪ್ಲೇಟ್ ಹಾಕಿ. ಇಲ್ಲದಿದ್ದಲ್ಲಿ ಅವು ವಿಕಿಗೆ ಹೊಂದದ ಪುಟಗಳಾಗಿ ಅಳಿಸುವಿಕೆಗೆ ಹಾಕಲ್ಪಡುತ್ತದೆ. --Vikas Hegde (ಚರ್ಚೆ) ೧೪:೩೩, ೨೨ ಅಕ್ಟೋಬರ್ ೨೦೧೫ (UTC)
ಅನಾಮಧೇಯರಿಗೆ ಸಂದೇಶ ಕಳುಹಿಸಿ ಪ್ರಯೋಜನವಿಲ್ಲ
[ಬದಲಾಯಿಸಿ]ಲೇಖನವೊಂದನ್ನು ಲಾಗಿನ್ ಆಗದೆ ಸಂಪಾದನೆ ಮಾಡಿದರೆ ಅವರ ಐ.ಪಿ. ವಿಳಾಸ ಮಾತ್ರ ದಾಖಲಾಗುತ್ತದೆ. ನೀವು ಆ ಐ.ಪಿ. ವಿಳಾಸಕ್ಕೆ ಸಂದೇಶ ಕಳುಹಿಸಿದರೆ ಅದು ಯಾರಿಗೂ ತಲುಪುವುದಿಲ್ಲ.--Pavanaja (ಚರ್ಚೆ) ೧೪:೫೪, ೧೨ ನವೆಂಬರ್ ೨೦೧೫ (UTC)
ಮೈಸೂರು ಸಂಪಾದನೋತ್ಸವ
[ಬದಲಾಯಿಸಿ]ಮೈಸೂರಿನ ಸಿ.ಪಿ.ಡಿ.ಪಿ.ಎಸ್., ಮಾನಸಗಂಗೋತ್ರಿ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ೩ ದಿನಗಳ ಕಾರ್ಯಾಗಾರವನ್ನು ದಿನಾಂಕ ೧೧, ೧೨ ಮತ್ತು ೧೩ನೇ ಜನವರಿ ೨೦೧೬ರಂದು ನಡೆಸುವುದೆಂದು ಆಯೋಜಕರು ದಿನ ನಿಗದಿ ಮಾಡಿದ್ದಾರೆ. ಅದರಂತೆ ಈಗಾಗಲೇ ಅರಳಿಕಟ್ಟೆಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ. ಈ ಕಾರ್ಯಾಗಾರವು ಕನ್ನಡ ನಾಡು, ಕನ್ನಡ ಸಾಹಿತ್ಯ ಚರಿತ್ರೆ, ಭಾಷೆ, ವ್ಯಾಕರಣ, ಛಂದಸ್ಸು, ಶಾಸನ, ವಿಮರ್ಶೆ, ಜಾನಪದ ಇತ್ಯಾದಿ ಕ್ಷೇತ್ರಗಳ ಬಗ್ಗೆ ಲೇಖನಗಳನ್ನು ತಯಾರಿಸುವ ಬಹು ಮುಖ್ಯವಾದ ಸಂಪಾದನೋತ್ಸವ ಆಗಬಹುದು. ಈ ಸಂಪಾದನೋತ್ಸವದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆಯ ೨೦ ಜನ ಕನ್ನಡ ಸಂಶೋಧನಾ ವಿದ್ಯಾರ್ಥಿಗಳು ಭಾಗವಹಿಸುತ್ತಾರೆ. ಈ ಸಂಪಾದನೋತ್ಸದ ಬಗ್ಗೆ ವಿವರಗಳು ಇಲ್ಲಿವೆ. ನಾನೂ ಈ ಸಂಪಾದನೋತ್ಸವದಲ್ಲಿ ಭಾಗವಹಿಸುತ್ತೇನೆ. ನೀವು ಸಂಪನ್ಮೂಲರಾಗಿ ಸಂಪಾದನೋತ್ಸವದಲ್ಲಿ ಸಂಪನ್ಮೂಲರಾಗಿ ಭಾಗವಹಿಸಬೇಕೆಂದು ಪ್ರೀತಿಯಿಂದ ಕೋರುತ್ತಿದ್ದೇನೆ.--Vishwanatha Badikana (ಚರ್ಚೆ) ೧೭:೪೭, ೩೧ ಡಿಸೆಂಬರ್ ೨೦೧೫ (UTC) ಸಂಪಾದನೋತ್ಸವ ಎಂಬುದು ಹೊಸಬರಿಗೆ ಮಾಡುವ ಕಾರ್ಯಾಗಾರ. ಈಗಾಗಲೇ ಲೇಖನ ಮಾಡಿರುವವರು ಹೊಸಬರಿಗೆ ಹೇಳಿಕೊಡುವವರು. ಈ ಇಡೀ ಕಾರ್ಯಾಗಾರದ ಆಯೋಜಕರು ನೀವು. ಹಾಗಾಗಿ ಕಾರ್ಯಾಗಾರಕ್ಕಿಂತ ಮೊದಲು ಕನ್ನಡ ಸಂಶೋಧನ ವಿದ್ಯಾರ್ಥಿಗಳಿಗೆ ಲೇಖನ ಬರೆಯುವ ವ್ಯವಸ್ಥೆಯನ್ನು ನೀವೇ ಮಾಡುತ್ತೀರಿ.--Vishwanatha Badikana (ಚರ್ಚೆ) ೦೬:೧೮, ೧ ಜನವರಿ ೨೦೧೬ (UTC)
- ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ಅಭಿನಂದನೆಗಳು. ಈ ಸಂಪಾದನೋತ್ಸವದಲ್ಲಿ ಮಾಡಬೇಕಾಗಿರುವ ಕೆಲಸದ ಬಗೆಗೆ ಸ್ವಲ್ಪ ಮಾಹಿತಿ ಈ ಪುಟದಲ್ಲಿ ಸೇರ್ಪಡೆಯಾಗಿದೆ. ಇನ್ನಷ್ಟು ಶೀರ್ಷಿಕೆಗಳನ್ನು ತಯಾರಿಸುತ್ತೇನೆ. ಸಂಪಾದನೋತ್ಸವದಲ್ಲಿ ಪಾಲ್ಗೊಳ್ಳುವವರು ಕನ್ನಡ ವಿಕಿಪೀಡಿಯಕ್ಕೆ ಲಾಗಿನ್ ಆದರೆ ಉತ್ತಮ. ಜೊತೆಗೆ ಕನ್ನಡ ಟೈಪಿಂಗ್ ಮಾಡಲು ಆರಂಭಿಸಬಹುದು. ಈಗಾಗಲೇ ಕಲಿತವರಿಗೆ ನುಡಿ/ಬರಹ ಗೊತ್ತಿದ್ದರೆ ಸಾಕು. --Vishwanatha Badikana (ಚರ್ಚೆ) ೧೬:೦೪, ೩ ಜನವರಿ ೨೦೧೬ (UTC)
- ಸೌಭಾಗ್ಯವತಿಯವರೇ, ಆಹ್ವಾನಕ್ಕೆ ಧನ್ಯವಾದಗಳು. ಸಂಪಾದನೋತ್ಸವದ ದಿನಗಳು ನನಗೆ ಕಛೇರಿಯ ಕೆಲಸದ ದಿನಗಳಾದ್ದರಿಂದ ಮತ್ತು ರಜೆ ಹಾಕುವುದೂ ಸಾಧ್ಯವಿಲ್ಲದಿರುವುದರಿಂದ ನಾನು ಮೈಸೂರು ಸಂಪಾದನೋತ್ಸವದಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ನಿಮ್ಮ ಮಾರ್ಗದರ್ಶನದಲ್ಲಿ ಸಂಪಾದನೋತ್ಸವ ಯಶಸ್ವಿಯಾಗುತ್ತದೆಂದು ಆಶಿಸುತ್ತೇನೆ. --Vikas Hegde (ಚರ್ಚೆ) ೦೪:೫೪, ೬ ಜನವರಿ ೨೦೧೬ (UTC)
- ತುಂಬ ಒಳ್ಳೆಯ ಕೆಲಸ ಮಾಡಿದ್ದೀರಿ. ಅಭಿನಂದನೆಗಳು. ಈ ಸಂಪಾದನೋತ್ಸವದಲ್ಲಿ ಮಾಡಬೇಕಾಗಿರುವ ಕೆಲಸದ ಬಗೆಗೆ ಸ್ವಲ್ಪ ಮಾಹಿತಿ ಈ ಪುಟದಲ್ಲಿ ಸೇರ್ಪಡೆಯಾಗಿದೆ. ಇನ್ನಷ್ಟು ಶೀರ್ಷಿಕೆಗಳನ್ನು ತಯಾರಿಸುತ್ತೇನೆ. ಸಂಪಾದನೋತ್ಸವದಲ್ಲಿ ಪಾಲ್ಗೊಳ್ಳುವವರು ಕನ್ನಡ ವಿಕಿಪೀಡಿಯಕ್ಕೆ ಲಾಗಿನ್ ಆದರೆ ಉತ್ತಮ. ಜೊತೆಗೆ ಕನ್ನಡ ಟೈಪಿಂಗ್ ಮಾಡಲು ಆರಂಭಿಸಬಹುದು. ಈಗಾಗಲೇ ಕಲಿತವರಿಗೆ ನುಡಿ/ಬರಹ ಗೊತ್ತಿದ್ದರೆ ಸಾಕು. --Vishwanatha Badikana (ಚರ್ಚೆ) ೧೬:೦೪, ೩ ಜನವರಿ ೨೦೧೬ (UTC)
ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ
[ಬದಲಾಯಿಸಿ]ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು | ||
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ. --Vishwanatha Badikana (ಚರ್ಚೆ) ೧೩:೧೦, ೧೭ ಜನವರಿ ೨೦೧೬ (UTC) |
ಧನ್ಯವಾದಗಳು
[ಬದಲಾಯಿಸಿ]೧೪ ಫೆ. ೨೦೧೬ ಭಾನುವಾರ. ೧೩ರಂದು ರಾತ್ರಿ ಬಂದು ೧೪ರಂದು ರಾತ್ರಿ ಹೋಗಬಹುದಲ್ವಾ. ನೀವು ಬಂದರೆ ಚೆನ್ನಾಗಿತ್ತು. ಮೈಸೂರಿನ ಸಂಪಾದನೋತ್ಸವವನ್ನು ಮುಂದುವರಿಸಿಕೊಂಡು ಹೋಗುವುದಕ್ಕೆ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿ. ೧೪ರಂದು ಕೆಲವರನ್ನು ಮಂಗಳೂರಿಗೆ ಹೋಗುವಂತೆ ಹೇಳಿ ಮೇಡಂ.
ಕನ್ನಡ ಸಾಹಿತ್ಯ ಚರಿತ್ರೆ ಯೋಜನೆ ಪದಕ | ||
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಅಂಗವಾಗಿ ಮೈಸೂರು ಸಂಪಾದನೋತ್ಸವದಲ್ಲಿಕನ್ನಡ ಸಾಹಿತ್ಯ ಚರಿತ್ರೆ ಯೋಜನೆಯಲ್ಲಿ ತೊಡಗಿ ಸಂಶೋಧನಾ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಿರುವುದಕ್ಕೆ ನಿಮಗೆ ತುಂಬ ಧನ್ಯವಾದಗಳು. --Vishwanatha Badikana (ಚರ್ಚೆ) ೦೪:೫೨, ೧೮ ಜನವರಿ ೨೦೧೬ (UTC) |
ನಿಮ್ಮ ಕರೆಗೆ ಅನಂತ ಧನ್ಯವಾದಗಳು. ಬರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ನಮ್ಮ ನಿರೀಕ್ಷೆಯ ಮಟ್ಟದಲ್ಲಿ ಸಂಶೋಧನಾ ವಿದ್ಯಾರ್ಥಿಗಳು ಬರದಿದ್ದದರ ಬಗ್ಗೆ ತುಂಬಾ ಬೇಸರವಿದೆ.--ಕೆ.ಸೌಭಾಗ್ಯವತಿ (ಚರ್ಚೆ) ೦೫:೦೧, ೧೮ ಜನವರಿ ೨೦೧೬ (UTC)
ನಮಸ್ತೆ, ನೀವು ರಚಿಸಿದ ಮಹಿಳೆ ಎಂಬ ಪುಟವು ಪ್ರಬಂಧ ಮಾದರಿಯ ಬರಹವಾಗಿದೆ. ಈ ರೀತಿ ಲೇಖನಗಳು ವಿಕಿಪೀಡಿಯಾಗೆ ತಕ್ಕುದಲ್ಲ. ಮಹಿಳೆಯ ಜಾಯಮಾನ ಪುರುಷನ ಜಾಯಮಾನಕ್ಕಿಂತ ಭಿನ್ನವಾದದ್ದು. ಗಂಡಿನ ದೇಹ ಸೌಂದರ್ಯ ಅಲಂಕಾರಕ್ಕೆ ಪೂರಕವಾದರೆ, ಹೆಣ್ಣಿನ ದೇಹ ಭೋಗರೂಪವಾಗಿ ಬರುತ್ತದೆ. ದೇಹವೆನ್ನುವುದು ಅನುಭವಗಳ ನೆಲೆ, ಒಂದು ಜೀವವನ್ನು ಸೃಷ್ಟಿಮಾಡುವ ಶಕ್ತಿ ಮಹಿಳೆಗೆ ಇದೆ ಎಂದಾದರೆ, ಖಂಡಿತವಾಗಿ ಅವಳಲ್ಲಿ ಅನಂತವಾದ ಶಕ್ತಿ ಇದೆ ಎಂದರ್ಥ........... ಇಂತಹ ವಾಕ್ಯಗಳೂ ಸೇರಿದಂತೆ ಲೇಖನ ಶೈಲಿ ಸಂಪೂರ್ಣ ಪ್ರಬಂಧ ಮಾದರಿಯಾಗಿದ್ದು ವಿಶ್ವಕೋಶ ಶೈಲಿಯಲ್ಲ. ನೀವು ಮಹಿಳೆ ಎನ್ನುವುದನ್ನು ಇಂಗ್ಲೀಷಿನ lady, dame, female ಅರ್ಥದಲ್ಲಿ ಬರೆಯುತ್ತಿದ್ದೀರಿ ಎಂಬುದಾದರೆ ಅದರಲ್ಲಿ lady ಪುಟದ ರಚನೆ, ಮಾಹಿತಿ ಹೇಗಿದೆ ನೋಡಿ. ಇದು ನಿಮ್ಮ ಸೇವೆಗೆ discouragement ಆಗಲೀ, ಟೀಕೆಯಾಗಲೀ ಅಲ್ಲ. ಮುಂದೊಂದು ದಿನ ಯಾರೋ ಇದನ್ನು ಅಳಿಸುವಿಕೆಗೆ ಹಾಕಬಹುದು. ಅಳಿಸಲೂಬಹುದು. ಆಗ ನಿಮ್ಮ ಶ್ರಮ , ಸಮಯ ಎಲ್ಲಾ ವ್ಯರ್ಥವಾಗುತ್ತದೆ. ಹಾಗಾಗಿ ಈ ಮಾಹಿತಿ ನೀಡುತ್ತಿದ್ದೇನೆ. ಅನ್ಯಥಾ ಭಾವಿಸಬೇಡಿ.--Vikas Hegde (ಚರ್ಚೆ) ೦೭:೧೦, ೨೧ ಜನವರಿ ೨೦೧೬ (UTC)
ಪ್ರಯಾಣ ಮತ್ತು ವಸತಿ ಸಹಾಯ
[ಬದಲಾಯಿಸಿ]ಪ್ರಯಾಣ ಮತ್ತು ವಸತಿ ಸಹಾಯ ಭಾಗವನ್ನು ಸ್ವಲ್ಪ ತಿದ್ದುಪಡಿ ಮಾಡಲಾಗಿದೆ. ಸಂಪನ್ಮೂಲ ವ್ಯಕ್ತಿಗಳು ಪ್ರತ್ಯೇಕ ಪ್ರಯಾಣ ಮತ್ತು ವಸತಿಗೆ ಅರ್ಹರಾಗಿದ್ದಾರೆ. ಹಾಗಾಗಿ ತಮ್ಮ ಹೆಸರನ್ನು ತೆಗೆದಿದ್ದೇನೆ. ತಪ್ಪು ಭಾವಿಸದಿರಿ. --Vishwanatha Badikana (ಚರ್ಚೆ) ೧೮:೨೮, ೩ ಫೆಬ್ರುವರಿ ೨೦೧೬ (UTC)
ಸೂಳೆ ಸಂಕವ್ವ ನೀವು "ಸೂಳೆ ಸಂಕವ್ವ' ಲೇಖನವನ್ನು ಅಳಿಸುವಿಕೆಗೆ ಹಾಕಿರುವುದನ್ನು ನಾನು ವಿರೋಧಿಸುತ್ತೇನೆ. ಇದು ನಾನು ಸ್ವಂತಕ್ಕೆ ಸೃಷ್ಟಿ ಮಾಡಿರುವ ಲೇಖನ ಅಲ್ಲ. ಯಾರೋ ಹೇಳಿದ ಮಾತಿಗೆ ನೀವು ಬದ್ಧತೆ ತೋರುವುದಾದರೆ, ವಚನ ಸಾಹಿತ್ಯಕ್ಕೆ ಮಾಡುವ ಅಪಮಾನವಾಗುತ್ತದೆ. ದಯವಿಟ್ಟು ಮತ್ತೊಮ್ಮೆ ಪರಿಶೀಲಿಸಿ.--ಕೆ.ಸೌಭಾಗ್ಯವತಿ (ಚರ್ಚೆ) ೧೭:೪೧, ೧೨ ಡಿಸೆಂಬರ್ ೨೦೧೬ (UTC)
ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆ
[ಬದಲಾಯಿಸಿ]Dr.K.Soubhagyavathi (talk · contribs) ಮೇಡಂ ಅವರೇ ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆ ಕೆಲಸ ಮಾಡುತ್ತಿದೆ.
ನೀವು ಪ್ರಾಜೆಕ್ಟ್ ಟೈಗರ್ ಸಂಪಾದನಾ ಸ್ಪರ್ಧೆಯ ಬಗ್ಗೆ ನೀವು ಸಂದೇಶವನ್ನು ಗಮನಿಸಿದ್ದೀರಿ ಎಂದು ಭಾವಿಸುತ್ತೇನೆ. ಈ ಸ್ಪರ್ಧೆಯಲ್ಲಿ ನೀವು ಭಾಗವಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇನೆ. ಪಟ್ಟಿಯಲ್ಲಿ ಸೂಚಿಸಿದ ಲೇಖನಗಳಲ್ಲಿ ಯಾವುದಾದರೂ ಒಂದು ವಿಷಯವನ್ನು ತೆಗೆದುಕೊಂಡು ಲೇಖನವನ್ನು ಪ್ರಾರಂಭಿಸಬೇಕಾಗಿ ವಿನಂತಿ. ಅದಲ್ಲದೇ ಈಗ ಕನ್ನಡ ವಿಕಿಪೀಡಿಯದಲ್ಲಿ ನಿಮ್ಮ ದೃಷ್ಠಿಯಿಂದ ಇರಲೇಬೇಕಾದ ಲೇಖನಗಳು ಅಂದರೆ ಸ್ಥಳೀಯ ವಿಷಯಗಳನ್ನು ನಮಗೇ ನಮ್ಮಲ್ಲಿಯೇ ಚರ್ಚಿಸಿ ಪಟ್ಟಿಗೆ ಸೇರಿಸಬಹುದು. ಇದಕ್ಕಾಗಿ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಕೇಳಿಕೊಳ್ಳುತ್ತೇನೆ. ಅದಲ್ಲದೇ ಸಂಪಾದನೆಯಲ್ಲಿ ಇತರ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopalacis-india.org. --ಗೋಪಾಲಕೃಷ್ಣ (ಚರ್ಚೆ) ೧೦:೩೬, ೧೦ ಮೇ ೨೦೧೮ (UTC)
ಬೆಂಬಲಕ್ಕಾಗಿ ವಿನಂತಿ
[ಬದಲಾಯಿಸಿ]ಕಳೆದ 6 ವರ್ಷಗಳಿಂದ ವಿಕಿಪೀಡಿಯದಲ್ಲಿ ಸಂಪಾದಕನಾಗಿದ್ದೇನೆ. ಪ್ರಾಜೆಕ್ಟ್ ಟೈಗರ್ ಬೆಂಬಲಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ. ದಯಮಾಡಿ ನನ್ನ ಅರ್ಜಿಯನ್ನು ಬೆಂಬಲಿಸಬೇಕೆಂದು ಕೇಳಿಕೊಳ್ಳುತ್ತೇನೆ. https://meta.wikimedia.org/wiki/Growing_Local_Language_Content_on_Wikipedia_(Project_Tiger_2.0)/Support/Manjappabg Manjappabg (ಚರ್ಚೆ) ೧೮:೨೦, ೧೪ ಸೆಪ್ಟೆಂಬರ್ ೨೦೧೯ (UTC)
ಶುಭಾಶಯಗಳು!
[ಬದಲಾಯಿಸಿ]ಗುರುಗಳಾದ ಶ್ರೀಮತಿ ಸೌಭಾಗ್ಯವತಿ ಮೇಡಂ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ನಡೆ ನುಡಿ ಸದಾ ಅನುಕರಣೀಯ. ನಿಮ್ಮ ಮಾರ್ಗದರ್ಶನ ಸದಾ ನಮ್ಮಂಥ ಕಿರಿಯರಿಗೆ ಇರಲಿ. ನೂರುಕಾಲ ಬಾಳಿ ಮೇಡಂ..🙏🙏🙏💐 NinadMysuru (ಚರ್ಚೆ) ೧೪:೧೩, ೨೫ ಸೆಪ್ಟೆಂಬರ್ ೨೦೨೦ (UTC)
2021 Wikimedia Foundation Board elections: Eligibility requirements for voters
[ಬದಲಾಯಿಸಿ]Greetings,
The eligibility requirements for voters to participate in the 2021 Board of Trustees elections have been published. You can check the requirements on this page.
You can also verify your eligibility using the AccountEligiblity tool.
MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)
Note: You are receiving this message as part of outreach efforts to create awareness among the voters.