ಗುಪ್ತಮಂಚಣ್ಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ಗುಪ್ತಮಂಚಣ್ಣ
ಜನನ೧೧೬೫
ಅಂಕಿತನಾಮನಾರಾಯಣಪ್ರಿಯ ರಾಮನಾಥ


ಗುಪ್ತಮಂಚಣ್ಣ ೧೨ನೇ ಶತಮಾನದ ಪೂರ್ವಾರ್ಧದಲ್ಲಿದ್ದ ಅಪ್ರಚಲಿತ ವಚನಕಾರ. ಬಸವಣ್ಣನ ಆಜ್ಞಾನುವರ್ತಿಯಾಗಿದ್ದರೂ ಎಲ್ಲಿಯೂ ತನ್ನನ್ನು ಬಹಿರಂಗವಾಗಿ ಗುರ್ತಿಸಿಕೊಂಡಿಲ್ಲ. ಈತನ ವೈಯಕ್ತಿಕ ವಿವರಗಳು ಅಷ್ಟಾಗಿ ಲಭ್ಯವಿಲ್ಲವಾದರೂ ನೇರ, ದಿಟ್ಟ ವಚನಕಾರನೆಂದು ಈತನ ವಚನಗಳಿಂದ ತಿಳಿಯಬಹುದು. ಅಂದಿನ ಸಮಾಜದ ಆಗುಹೋಗುಗಳ ಜ್ವಲಂತ ನಿದರ್ಶನ ಈತನ ವಚನಗಳಲ್ಲಿ ಕಾಣಸಿಗುತ್ತವೆ. ಈತನ ವಚನಗಳ ಅಂಕಿತ ನಾರಾಯಣಪ್ರಿಯ ರಾಮನಾಥ.

ಮಾಧವನ ಮನೆಯ ಬಾಗಿಲನಲ್ಲಿ, ಮಹಾಜನಂಗಳೆಲ್ಲ ಕೂಡಿ
ಹೋಮವನಿಕ್ಕಲಾಗಿ, ಎದ್ದಿತು ಉರಿ
ಮೂವರ ಮಸ್ತಕವ ಮುಟ್ಟಿ, ಆ ಹೋಮದ ಹೊಗೆ ತಾಗಿ
ನಾಲ್ವರ ಕಣ್ಣು ಕೆಟ್ಟಿತ್ತು
ಆ ಹೋಮದ ದಿಕ್ಕಿನ ಕುಂಭ ಉರುಗಿವೋಗಲಾಗಿ
ತೊರೆ ಹರಿಯಿತು
ಕಾಲ ಕಡಹು ಆರಿಗೂ ಆಗದು
ಎಲ್ಲಾ ಠಾವಿನಲ್ಲಿ ಮಡುಮಯವಾಯಿತ್ತು
ಮಡುವಿನ ಮೊಸಳೆ ತಡಿಯಲ್ಲಿ
ಆರನೂ ನಿಲಲೀಸದೆ ಕಡಿದು ನುಣಗಿಪಿದಿನ್ನೇವೆ
ಮೊಸಳೆ ಹಿಡಿವರ ಕಾಣೆ, ಮಡುವ ಒಡೆವರ ಕಾಣೆ
ಹೋಮವ ಕೆಡಿಸುವರ ಕಾಣೆ
ಮಾಧವನ ಬಾಗಿಲಲಿ ನಿಂದು ಹೋದರು ಹೊಲಬುದಪ್ಪಿ
ನಾರಾಯಣಪ್ರಿಯ ರಾಮನಾಥ