ವಿಷಯಕ್ಕೆ ಹೋಗು

ವಿಂಧ್ಯಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಂಧ್ಯಾವಳಿ
ವಿಂಧ್ಯಾವಳಿ (ಬಾಲಿಕಾ, ಚಾರುತಿ)
ಮಹಾಬಲಿ ಮತ್ತು ವಿಂಧ್ಯಾವಳಿಯು ವಿಷ್ಣುವನ್ನು ಆತನ ಕುಬ್ಜ ರೂಪದ ವಾಮನನಿಗೆ ಸೇವೆಸಲ್ಲಿಸುತ್ತಿರುವಾಗ, ಅನುಮಾನಾಸ್ಪದ ಶುಕ್ರನು ಅವನನ್ನು ತಡೆಯಲು ಪ್ರಯತ್ನಿಸುತ್ತಾನೆ.
ಒಡಹುಟ್ಟಿದವರುಪಾರ್ವತಿ, ಗಂಗಾ
ಮಕ್ಕಳುಬಾಣಾಸುರ, ನಮಸ್ಸು (ಹಿಂದೂ ಧರ್ಮ), ರತ್ನಮಾಲಾ
ತಂದೆತಾಯಿಯರು
  • Himavan (ತಂದೆ)

ವಿಂಧ್ಯಾವಳಿ , [೧] ಹಿಂದೂ ಗ್ರಂಥಗಳ ಪ್ರಕಾರ ಅಸುರ ರಾಜ ಮಹಾಬಲಿಯ ಪತ್ನಿ. ಈಕೆಯನ್ನು ಬಾಲಿಕಾ ಅಥವಾ ಚಾರುತಿ ಎಂದು ಸಹ ಕರೆಯುತ್ತಾರೆ. [೨] ಬಾಣಾಸುರ ಮತ್ತು ನಮಸ್ಸು ಎಂಬ ಇಬ್ಬರು ಗಂಡು ಮಕ್ಕಳು ಹಾಗೂ ರತ್ನಮಾಲಾ ಎಂಬ ಹೆಸರಿನ ಮಗಳು ಸೇರಿದಂತೆ ನೂರು ಮಕ್ಕಳ ಸಂತತಿಯನ್ನು ಮಹಾಬಲಿ ಮತ್ತು ವಿಂಧ್ಯಾವಳಿ ದಂಪತಿ ಹೊಂದಿದ್ದರು.

ದಂತಕಥೆ[ಬದಲಾಯಿಸಿ]

ಹಿಂದೂ ಪುರಾಣಗಳ ಪ್ರಕಾರ, ಅಸುರ ರಾಜನಾಗಿದ್ದ ಮಹಾಬಲಿಯು ವಿರೋಚನನ ಮಗ ಮತ್ತು ಪ್ರಹ್ಲಾದನ ಮೊಮ್ಮಗ. ಮಹಾಬಲಿಯ ಪತ್ನಿ ವಿಂಧ್ಯಾವಳಿಯನ್ನು ಹಿಮವನ್‌ನ ಮಗಳು ಎಂದು ಗುರುತಿಸಲಾಗಿದೆ. ವಿಂಧ್ಯಾವಳಿಯನ್ನು ಸದ್ಗುಣಶೀಲೆ ಮತ್ತು ಕುಟುಂಬಕ್ಕೆ ಬೆಂಬಲ ನೀಡುತ್ತಿದ್ದ ಮಹಿಳೆ ಎಂಬುದಾಗಿ ಉದಾಹರಿಸಿರುವುದನ್ನು ಕೆಲವು ಉಲ್ಲೇಖಗಳಲ್ಲಿ ಗಮನಿಸಬಹುದಾಗಿದೆ.

ಹಿಂದೂ ಧರ್ಮಗ್ರಂಥಗಳಲ್ಲಿ ವಿಂಧ್ಯಾವಳಿಯ ಉಲ್ಲೇಖವಿರುವುದು ಸ್ವಲ್ಪ ಕಡಿಮೆ. ವಿಂಧ್ಯಾವಳಿಯನ್ನು ಸುಂದರ ಮತ್ತು ಸಹಾನುಭೂತಿಯುಳ್ಳವಳು ಎಂದು ವರ್ಣಿಸಲಾಗಿದೆ. ಇದು, ಅವಳಿಗೆ ಎಲ್ಲಾ ಜೀವಿಗಳ ಬಗ್ಗೆ ಇದ್ದ ಕಾಳಜಿಯ ಮನೋಭಾವವನ್ನು ಪ್ರದರ್ಶಿಸುತ್ತದೆ. ಕೆಲವು ಕಥನಗಳು ಮಹಾಬಲಿ-ವಿಂಧ್ಯಾವಳಿ ದಂಪತಿಗಳು ಪ್ರಸಿದ್ಧ ಬಾಣಾಸುರ ಮತ್ತು ನಮಸ್ಸು ಸೇರಿದಂತೆ ನೂರು ಪುತ್ರರ ಜನನಕ್ಕೆ ಕಾರಣರಾದರು ಎಂದು ಹೇಳುತ್ತವೆ. ಮಹಾಬಲಿಗೆ ಆದರ್ಶಪ್ರಾಯ ಪತ್ನಿಯಾಗಿದ್ದ ವಿಂಧ್ಯಾವಳಿಯು ತನ್ನ ನೂರು ಜನ ಗಂಡು ಮಕ್ಕಳಿಗೂ ಸಮಾನ ಪ್ರೀತಿಯನ್ನು ತೋರುತ್ತಿದ್ದಳೆಂದು ಹೇಳಲಾಗುತ್ತದೆ. ಪುರಾಣಗಳ ಪ್ರಕಾರ, ವಿಂಧ್ಯಾವಳಿ ಮಹಾಬಲಿಯ ಅಜ್ಜ ಪ್ರಹ್ಲಾದನ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದಳು. ವಿಂಧ್ಯಾವಳಿ ಒಮ್ಮೆ ಕೃಷ್ಣನ ಕೋಪದಿಂದ ಬಾಣಾಸುರನನ್ನು ರಕ್ಷಿಸಿದಳು ಎಂದೂ ನಂಬಲಾಗಿದೆ.[೩]

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. Dowson, John (2013-11-05). A Classical Dictionary of Hindu Mythology and Religion, Geography, History and Literature (in ಇಂಗ್ಲಿಷ್). Routledge. p. 42. ISBN 978-1-136-39029-6.
  2. Walker, Benjamin (2019-04-09). Hindu World: An Encyclopedic Survey of Hinduism. In Two Volumes. Volume I A-L (in ಇಂಗ್ಲಿಷ್). Routledge. p. 452. ISBN 978-0-429-62465-0.
  3. Dalal, Roshen (2010). Hinduism: An Alphabetical Guide (in ಇಂಗ್ಲಿಷ್). Penguin Books India. ISBN 978-0-14-341421-6.