ತರಿಮಲೆಯಲ್ಲಿ ಚೌಡೇಶ್ವರಿ

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ನೂರು, ಇನ್ನೂರು ವರ್ಷಗಳ ಹಿಂದೆ ಮಲೆಕಾಡು ಎಂಬ ಪ್ರದೇಶದಲ್ಲಿ ಆದಿವಾಸಿಗಳು ವಾಸಿಸುತ್ತಿದ್ದರು. ಅಲ್ಲಿ ಚೌಡೇಶ್ವರಿ ಮೂರ್ತಿಯನ್ನು ಪೂಜಿಸುತ್ತಿದ್ದರು. ಕೆಲವು ವರ್ಷಗಳ ನಂತರ ಅವರು ಊರ ಕಡೆಗೆ ವಲಸೆ ಬಂದರು.ಕೆಲವು ವರ್ಷಗಳು ಸಾಗಿದ ಬಳಿಕ ಅವರು ಕಾಡಲ್ಲಿ ಪೂಜಿಸುತ್ತಿದ್ದ ಚೌಡೇಶ್ವರಿ ತಾಯಿಯ ವಿಗ್ರಹದ ಬಗ್ಗೆ ಊರಿನ ಪ್ರಮುಖರಿಗೆ ತಿಳಿಸಿದರು. ನಂತರ ಇವರೆಲ್ಲರೂ ಸೇರಿ ಮಲೆಕಾಡಿನ ಚೌಡೇಶ್ವರಿ ವಿಗ್ರಹವನ್ನು ತರುವೆ ಎಂಬ ಗ್ರಾಮದಲ್ಲಿ ಪೂಜಿಸಲಾಯಿತು. ನಂತರ ಚೌಡೇಶ್ವರಿ ಅಮ್ಮಮನವ ಮೂಲ ಸ್ಥಾನದಲ್ಲಿ ಅಂದರೆ ತರಿಮಲೆಯಲ್ಲಿ ಗುಡಿಯನ್ನು ಕಟ್ಟಿ ಅಲ್ಲಿ ಪೂಜಿಸಲಾಯಿತು. ಅಲ್ಲಿಂದ 3ಕಿ.ಮೀ ದೂರದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಬನವಿದ್ದು, 101 ದೈವಗಳನ್ನು ಹೊಂದಿದೆ.ಅಲ್ಲಿ ವಾರ್ಷಿಕ ಕಾಲಾವಳಿಯಲ್ಲಿ ಕೋಳಿ-ಕುರಿಯನ್ನು ಬಲಿ ಕೊಡಲಾಗುವುದು. 600 ರಿಂದ 800 ಜನ ಭಕ್ತಾದಿಗಳು ಕೂಡ[ದೇವರ ದರ್ಶನಕ್ಕೆ ಆಗಮಿಸುವರು.

ಅದೇ ರೀತಿ ತರುವೆ ಗ್ರಾಮದಲ್ಲಿ ವಾರ್ಷಿಕ ಪೂಜೆ ಹಾಗೂ ಅನ್ನದಾನ ನಡೆಸಲಾಗುತ್ತದೆ. ಈ ದೇವತೆಗೆ ಪ್ರತಿ ಮಂಗಳವಾರ ವಿಶೇಷವಾಗಿ ಪೂಜೆ ನಡೆಯುತ್ತದೆ. ಈ ದೇವಿಯನ್ನು ಬೇಡಿದರೆ ಕಷ್ಟಗಳು ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ.