ವಿಷಯಕ್ಕೆ ಹೋಗು

ಗಿನಿಯಿಲಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Domestic Guinea pig
Conservation status
Domesticated
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಗಣ:
ಉಪಗಣ:
ಕುಟುಂಬ:
ಉಪಕುಟುಂಬ:
ಕುಲ:
ಪ್ರಜಾತಿ:
C. porcellus
Binomial name
Cavia porcellus
Synonyms

Mus porcellus
Cavia cobaya
Cavia anolaimae
Cavia cutleri
Cavia leucopyga
Cavia longipilis

ಗಿನಿಯಿಲಿ (ಕೆವಿಯಾ ಪೊರ್ಸೆಲಸ್‌ (Cavia porcellus) ) ಕೇವೀಡೇ (Caviidae)ವಂಶ ಹಾಗೂ ಕೇವಿಯಾ (Cavia) ಕುಲಕ್ಕೆ ಸೇರಿದ ದಂಶಕ ಪ್ರಾಣಿ. ಇದನ್ನು ಕೇವಿ (Cavy) ಎಂದು ಸಹ ಕರೆಯಲಾಗಿದೆ. ಇಂಗ್ಲಿಷ್‌ ಭಾಷೆಯಲ್ಲಿ 'ಗಿನಿ ಪಿಗ್ (Guinea Pig)‌' ಎಂಬುದು ಇದರ ಸಾಮಾನ್ಯನಾಮವಾದರೂ, ಇದು ಹಂದಿಗಳ ಕುಟುಂಬಕ್ಕೆ ಸೇರಿಲ್ಲ. ಜೊತೆಗೆ ಇವು ಗಿನಿ ದೇಶದ ಮೂಲದ ಪ್ರಾಣಿಗಳೂ ಅಲ್ಲ. ಅವು ಆಂಡಿಸ್‌ ಪರ್ವತ ವಲಯದಲ್ಲಿ ಉಗಮಿಸಿದವು. ಜೀವರಸಾಯನಶಾಸ್ತ್ರ ಮತ್ತು ಸಂಕರೀಕರಣವನ್ನು ಆಧರಿಸಿದ ಅಧ್ಯಯನದ ಪ್ರಕಾರ, ಕೇವಿಗೆ ಬಹಳ ನಿಕಟ ಸಂಬಂಧ ಹೊಂದಿದ ಕೇವಿಯಾ ಅಪೆರೆರಾ , ಕೇವಿಯಾ ಫಲ್ಗಿಡಾ , ಅಥವಾ ಕೇವಿಯಾ ಷುಡೀ ಯಂತಹ ಜಾತಿಗಳ ಸಾಕುಪ್ರಾಣಿ ಸಂತತಿ ಎನ್ನಲಾಗಿದೆ. ಹಾಗಾಗಿ, ಇವು ಸಹಜವಾಗಿ ಅರಣ್ಯದಲ್ಲಿ ಕಾಣಸಿಗದು.[][] ದಕ್ಷಿಣ ಅಮೆರಿಕಾ ಸ್ಥಳೀಯ ಪಂಗಡಗಳ ಜಾನಪದ ಸಂಸ್ಕೃತಿಯಲ್ಲಿ ಗಿನಿಯಿಲಿಗೆ ಪ್ರಮುಖ ಸ್ಥಾನವಿದೆ. ಅದನ್ನು ವಿಶಿಷ್ಟವಾಗಿ ಆಹಾರ ಮೂಲವಲ್ಲದೆ, ಜಾನಪದ ಔಷಧ ಮತ್ತು ಸಮುದಾಯ ಧಾರ್ಮಿಕ ಸಮಾರಂಭಗಳಲ್ಲಿ ಬಳಸಲಾಗುತ್ತದೆ.[] 1960ರ ದಶಕದಿಂದಲೂ, ದಕ್ಷಿಣ ಅಮೆರಿಕಾ ಖಂಡದಾಚೆ ಈ ಪ್ರಾಣಿಯ ಬಳಕೆ ಹೆಚ್ಚಿಸುವ ಯತ್ನಗಳು ನಡೆಯುತ್ತಿವೆ.[]

16ನೆಯ ಶತಮಾನದಲ್ಲಿ ಯುರೋಪಿಯನ್‌ ವ್ಯಾಪಾರಿಗಳು ಗಿನಿಯಿಲಿಯನ್ನು ಪರಿಚಯಿಸಿದಾಗಿಂದಲೂ, ಅದು ಪಾಶ್ಚಾತ್ಯ ಸಮಾಜಗಳಲ್ಲಿ ಮನೆಗಳಲ್ಲಿ ಸಾಕುಪ್ರಾಣಿಯಾಗಿ ಅಪಾರ ಜನಪ್ರಿಯತೆ ಗಳಿಸಿದೆ. ಅವುಗಳ ನಮ್ರ ಗುಣಗಳು, ನಿರ್ವಹಣೆ ಮತ್ತು ಉಣಿಸುವ ಕ್ರಿಯೆಗಳಿಗೆ ಸಕಾರಾತ್ಮಕ ಪ್ರತಿಕ್ರಿಯೆ ಹಾಗೂ ಅವುಗಳನ್ನು ಸುಲಭವಾಗಿ ಸಾಕಬಹುದಾದ್ದರಿಂದ, ಗಿನಿಯಿಲಿಗಳು ಜನಪ್ರಿಯ ಸಾಕುಪ್ರಾಣಿಗಳಾಗಿವೆ. ಗಿನಿಯಿಲಿಗಳ ಸ್ಪರ್ಧಾತ್ಮಕ ಸಾಕಣೆಗೆ ಸಂಬಂಧಿತ ಸಂಘಟನೆಗಳು ವಿಶ್ವದಾದ್ಯಂತ ರಚನೆಯಾಗಿವೆ. ತುಪ್ಪಳಗಳ ವಿವಿಧ ಬಣ್ಣ ಮತ್ತು ರಚನೆ ಹೊಂದಿರುವ ಗಿನಿಯಿಲಿಗಳ ವಿಶಿಷ್ಟ ತಳಿಗಳನ್ನು ಸಾಕಣೆಗಾರರು ಬೆಳೆಸಿ ಸಾಕುತ್ತಿದ್ದರು.

17ನೆಯ ಶತಮಾನದಿಂದಲೂ ಗಿನಿಯಿಲಿಗಳ ಮೇಲೆ ಜೀವವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತಿದೆ. 19ನೆಯ ಹಾಗೂ 20ನೆಯ ಶತಮಾನಗಳಲ್ಲಿ ಗಿನಿಯಿಲಿಗಳನ್ನು ವೈಜ್ಞಾನಿಕ ಪ್ರಯೋಗಾಲಯಗಳಲ್ಲಿ ಆಗಾಗ್ಗೆ ಮಾದರಿ ಜೀವಿಯಾಗಿ ಬಳಸಲಾಗುತ್ತಿತ್ತು. ಇದರಿಂದಾಗಿ 'ಪ್ರಯೋಗದ ವಿಷಯಗಳಿಗೆ ಗಿನಿಯಿಲಿ (Guinea pig for a test subject)' ಎಂಬ ಆಡುಮಾತು ಬಳಕೆಯಾಗತೊಡಗಿತು. ಆದರೆ ಇಂದು ಗಿನಿಯಿಲಿಗಳ ಬದಲಿಗೆ ಹೆಗ್ಗಣಗಳು ಮತ್ತು ಇಲಿಗಳನ್ನು ಹೆಚ್ಚಾಗಿ ಬಳಸಲಾಗುತ್ತಿವೆ. ಇಂದಿಗೂ ಸಹ, ಕಿರಿ-ವಯಸ್ಸಿನ ಮಧುಮೇಹ, ಕ್ಷಯರೋಗ, ರಕ್ತಪಿತ್ತವ್ಯಾಧಿ ಹಾಗೂ ಬಸಿರಿನ ತೊಡಕುಗಳನ್ನು ಅಧ್ಯಯನ ಮಾಡಲು ಗಿನಿಯಿಲಿಗಳನ್ನು ಮಾದರಿಗಳನ್ನಾಗಿ ಬಳಸಲಾಗುತ್ತಿವೆ.

ಇತಿಹಾಸ

[ಬದಲಾಯಿಸಿ]

ದಕ್ಷಿಣ ಅಮೆರಿಕಾ ಖಂಡದ ಆಂಡಿಯನ್‌ ವಲಯ (ಇಂದಿನ ಕೊಲಂಬಿಯಾ ದೇಶದ ದಕ್ಷಿಣ ಭಾಗ, ಇಕ್ವೆಡಾರ್‌, ಪೆರು ಮತ್ತು ಬೊಲಿವಿಯಾ [] ದೇಶಗಳ ಬುಡಕಟ್ಟು ಪಂಗಡಗಳು ಸಾಮಾನ್ಯ ಗಿನಿಯಿಲಿಯನ್ನು ಸುಮಾರು ಕ್ರಿಸ್ತಪೂರ್ವ 5000ದ ಇಸವಿಯಿಂದಲೂ ಆಹಾರದ ಸಲುವಾಗಿ ಪಳಗಿಸಿದ ಸಾಕ್ಷ್ಯಗಳಿವೆ. ಇದಕ್ಕೂ ಒಂದು ಸಾವಿರ ವರ್ಷಗಳ ಮುಂಚೆ, ಈ ಪಂಗಡಗಳು ದಕ್ಷಿಣ ಅಮೆರಿಕಾದ ಒಂಟೆ ಕುಟುಂಬದ ಪ್ರಾಣಿ(ಕ್ಯಾಮೆಲಿಡ್)ಗಳನ್ನು ಪಳಗಿಸಿದ್ದುಂಟು.[] ಸುಮಾರು ಕ್ರಿ.ಪೂ. 500ರಿಂದ ಕ್ರಿ.ಶ. 500ರ ವರೆಗಿನ ಕಾಲದ ಪ್ರತಿಮೆಗಳು ಗಿನಿಯಿಲಿಗಳು ಪೆರು ಮತ್ತು ಇಕ್ವೆಡಾರ್‌ನಲ್ಲಿ ಪುರಾತತ್ತ್ವ ಇಲಾಖೆಯ ಅಗೆಯುವಿಕೆಯ ಕಾರ್ಯಗಳಲ್ಲಿ ಲಭ್ಯವಾಗಿವೆಯೆಂದು ಬಿಂಬಿಸಲಾಗಿದೆ [] ಪುರಾತನ ಪೆರು ದೇಶದ ಮೊಷೆ ಜನಾಂಗದವರು ಪ್ರಾಣಿಪೂಜೆ ಮಾಡುವವರಾಗಿದ್ದರು. ತಮ್ಮ ಕಲೆಯಲ್ಲಿ ಗಿನಿಯಿಲಿಯನ್ನು ಬಿಂಬಿಸುತ್ತಿದ್ದರು.[] ಸುಮಾರು ಕ್ರಿ.ಶ. 1200ರಿಂದ 1532ರ ಸ್ಪ್ಯಾನಿಷ್ ಪಡೆಗಳ‌ ದಂಡಯಾತ್ರೆಯ ತನಕ, ಆಯ್ದ ಗಿನಿಯಿಲಿ ತಳಿಗಳ ಸಾಕಣೆಯಿಂದಾಗಿ, ದೇಶೀಯ ಗಿನಿಯಿಲಿಗಳ ವಿವಿಧ ತಳಿಗಳು ಹುಟ್ಟಿಕೊಂಡವು. ಇವು ಇಂದಿನ ಸ್ಥಳೀಯ ತಳಿಗಳಿಗೆ ಆಧಾರವೆಂದೆನಿಸಿವೆ.[] ಈ ಪ್ರದೇಶದಲ್ಲಿ ಅವು ಇಂದಿಗೂ ಸಹ ಆಹಾರದ ಮೂಲವಾಗಿವೆ. ಆಂಡಿಯನ್‌ ಗುಡ್ಡಗಾಡು ಪ್ರದೇಶದಲ್ಲಿ ಹಲವು ಮನೆಗಳಲ್ಲಿ ಗಿನಿಯಿಲಿಗಳನ್ನು ಸಾಕಲಾಗಿದೆ. ಇದು ಕುಟುಂಬದ ಅಡುಗೆಯಲ್ಲಿ ಮಿಕ್ಕಿಹೋದ ತರಕಾರಿ ಚೂರುಗಳನ್ನು ತಿಂದು ಜೀವಿಸುತ್ತವೆ.[೧೦] ಹಲವು ಜಾನಪದ ಸಂಪ್ರದಾಯಗಳು ಗಿನಿಯಿಲಿಗಳನ್ನು ಒಳಗೊಂಡಿವೆ. ಅವನ್ನು ಉಡುಗೊರೆಯಾಗಿ ನೀಡಲಾಗಿದೆ; ಸಾಂಪ್ರದಾಯಿಕ ಸಾಮಾಜಿಕ ಮತ್ತು ಧಾರ್ಮಿಕ ಸಮಾರಂಭಗಳಲ್ಲಿ ಅವನ್ನು ಬಳಸಲಾಗಿದೆ, ಹಾಗೂ ಸ್ಥಳೀಯ ಭಾಷೆಯ ರೂಪಕೋಕ್ತಿಗಳಲ್ಲಿ ಆಗಾಗ್ಗೆ ಗಿನಿಯಿಲಿಗಳನ್ನು ಉಲ್ಲೇಖಿಸಲಾಗಿದೆ.[೧೧] ಕ್ಯೂರಾಂಡೆರೊಗಳು ಎನ್ನಲಾದ ಜಾನಪದ ವೈದ್ಯರು ನಡೆಸುವ ಸಾಂಪ್ರದಾಯಿಕ ಕಾಯಿಲೆ ಗುಣಪಡಿಸುವ ಕ್ರಿಯೆಗಳಲ್ಲಿ ಗಿನಿಯಿಲಿಗಳನ್ನು ಬಳಸಲಾಗುತ್ತದೆ. ಅರಿಶಿನಕಾಮಾಲೆ, ಸಂಧಿವಾತ, ಕೀಲುನೋವು ಮತ್ತು ಟೈಫಸ್‌ ಜ್ವರಗಳ ರೋಗನಿರ್ಣಯ ಮಾಡಲು ಈ ಪ್ರಾಣಿಗಳನ್ನು ಬಳಸುವರು.[೧೨] ರೋಗಿಗಳ ಶರೀರಗಳಿಗೆ ಈ ಪ್ರಾಣಿಯನ್ನು ಉಜ್ಜಲಾಗುತ್ತದೆ ಹಾಗೂ ಗಿನಿಯಿಲಿ ಒಂದು ಪ್ರಕೃತ್ಯತೀತ ಜೀವಿ ಎಂದು ಈ ಪಂಗಡಗಳಲ್ಲಿ ನಂಬಲಾಗಿದೆ.[೧೩] ರೋಗ ನಿರ್ಣಯ ಕಾರ್ಯಗಳಲ್ಲಿ ಕಪ್ಪುಬಣ್ಣದ ಗಿನಿಯಿಲಿಗಳು ಬಹಳ ಉಪಯುಕ್ತ ಎನ್ನಲಾಗಿದೆ.[೧೪] ಚಿಕಿತ್ಸೆಯ ರೀತಿಯು ಫಲಕಾರಿಯಾಗಿತ್ತೇ ಎಂಬುದನ್ನು ಪರಿಶೀಲಿಸಲು ಪ್ರಾಣಿಯನ್ನು ಕೊಯ್ದು ಅದರ ಮಿದು ಒಳಾಂಗಗಳನ್ನು ಪರೀಕ್ಷಿಸಲಾಗುವುದು.[೧೫] ಪಾಶ್ಚಾತ್ಯ ವೈದ್ಯಕೀಯ ಶಾಸ್ತ್ರವು ಅಲಭ್ಯ ಅಥವಾ ವಿಶ್ವಸನೀಯವಲ್ಲ ಎನ್ನುವ ಆಂಡೆಸ್‌ ಪರ್ವತ ವಲಯದ ಪಂಗಡಗಳಲ್ಲಿ ಈ ಪದ್ಧತಿಗಳು ವ್ಯಾಪಕವಾಗಿ ಸ್ವೀಕೃತವಾಗಿವೆ.[೧೬]

ಸ್ಪ್ಯಾನಿಷ್‌‌, ಡಚ್‌ ಮತ್ತು ಇಂಗ್ಲಿಷ್‌ ವ್ಯಾಪಾರಿಗಳು ಗಿನಿಯಿಲಿಗಳನ್ನು ಯುರೋಪ್‌ಗೆ ತಂದರು. ಕುಲೀನ ಜನವರ್ಗ ಹಾಗೂ ರಾಣಿ ಮೊದಲ ಎಲಿಜಬೆತ್‌ಸೇರಿದಂತೆ ರಾಜಮನೆತನಗಳಲ್ಲಿ ವಿಲಕ್ಷಣ ಸಾಕುಪ್ರಾಣಿಗಳಾಗಿ ಅವು ಬಹಳ ಬೇಗನೆ ಜನಪ್ರಿಯವಾದವು.[] ಗಿನಿಯಿಲಿಗಳ ಬಗ್ಗೆ ಅತ್ಯಾರಂಭ ಕಾಲಿಕ ಲಿಖಿತ ಮಾಹಿತಿಯು 1547ರ ಕಾಲದ್ದು. ಸ್ಯಾಂಟೊ ಡೊಮಿಂಗೊದಲ್ಲಿ ಈ ಪ್ರಾಣಿಯ ಬಗ್ಗೆ ಈ ಲಿಖಿತ ಮಾಹಿತಿ ದೊರಕಿತು. ಏಕೆಂದರೆ ಕೇವೀ ಕುಟುಂಬದ ಪ್ರಾಣಿಗಳು ಹಿಸ್ಪ್ಯಾನಿಯೊಲಾ ದೇಶಕ್ಕೆ ಸೇರಿರಲಿಲ್ಲ. ಸ್ಪ್ಯಾನಿಷ್‌ ಪ್ರಯಾಣಿಕರು ಈ ಪ್ರಾಣಿಯನ್ನು ಅಲ್ಲಿ ಪರಿಚಯಿಸಿರುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.[] ಪಶ್ಚಿಮ ಗೋಲಾರ್ಧದಲ್ಲಿ ಗಿನಿಯಿಲಿಯನ್ನು ಮೊದಲ ಬಾರಿಗೆ, ಅಂದರೆ 1554ರಲ್ಲಿ ವಿವರಿಸಲಾಯಿತು. ಸ್ವಿಸ್‌ ಪ್ರಕೃತಿ ತತ್ತ್ವವಾದಿ ಕಾನ್ರಾಡ್‌ ಗೆಸ್ನರ್‌ ಇದರ ವಿವರಣೆ ನೀಡಿದರು.[೧೭] 1777ರಲ್ಲಿ ಎರ್ಕ್ಸ್‌ಲೆಬೆನ್‌ ಗಿನಿಯಿಲಿಯ ವೈಜ್ಞಾನಿಕ ನಾಮದ್ವಯವನ್ನು ಮೊದಲ ಬಾರಿಗೆ ಬಳಸಿದರು. 1766ರಲ್ಲಿ ಪಲಾಸ್‌ ನೀಡಿದ ಕುಲದ ವಿವರಣೆ ಹಾಗೂ 1758ರಲ್ಲಿ ಲಿನೇಯಸ್‌ ಪ್ರದಾನ ಮಾಡಿದ ಜಾತಿನಾಮದಮಿಶ್ರಣವಾಗಿದೆ.[]

ಹೆಸರು

[ಬದಲಾಯಿಸಿ]

ಕೇವಿಯಾ ಪೊರ್ಸೆಲಸ್‌ ಎಂಬುದು ಗಿನಿಯಿಲಿಯ ಸಾಮಾನ್ಯ ಪ್ರಭೇದದ ವೈಜ್ಞಾನಿಕ ಹೆಸರು. ಲ್ಯಾಟೀನ್‌ ಭಾಷೆಯಲ್ಲಿ ಪೊರ್ಸೆಲಸ್ ‌ ಎಂದರೆ 'ಚಿಕ್ಕ ಹಂದಿ'. ಹಿಂದೊಮ್ಮೆ ಫ್ರೆಂಚ್‌ ಗಯಾನಾ ದೇಶದ ಗಲಿಬಿ ಬುಡಕಟ್ಟು ಜನಾಂಗದವರ ಭಾಷೆಯಲ್ಲಿ ಪ್ರಾಣಿಯನ್ನು ಕೇಬಿಯಾಯಿ ಎನ್ನಲಾಗುತ್ತಿದ್ದು, ಈ ಪದದಿಂದ ಪಡೆಯಲಾದ ಕೇವಿಯಾ ಎಂಬುದು ಹೊಸ ಲ್ಯಾಟೀನ್‌ ಪದವಾಗಿದೆ.[೧೮]

ಕೇಬಿಯಾಯಿ ಎಂಬುದು ಕೇವಿಯಾ (ಇಂದು ಸೇವಿಯಾ ) ಎಂಬ ಪೊರ್ಚುಗೀಸ್ ಪದದ ಮಾರ್ಪಾಡಾಗಿರಬಹುದು.‌ ಸೇವಿಯಾ ಎಂಬುದು ಸೌಜಾ (ಇಲಿ ಎಂದರ್ಥ) ಎಂಬ ಟುಪಿ ಪದದಿಂದ ವ್ಯುತ್ಪತ್ತಿಯಾಗಿದೆ.[೧೯] ಗಿನಿಯಿಲಿಗಳನ್ನು ಕ್ಯೂಚುವಾ ಭಾಷೆಯಲ್ಲಿ ಕ್ಯುವಿ ಅಥವಾ ಜಾಕಾ ಹಾಗೂ ಇಕ್ವೆಡಾರ್‌, ಪೆರು ಮತ್ತು ಬೊಲಿವಿಯಾ ದೇಶಗಳ ಸ್ಪ್ಯಾನಿಷ್‌ ಭಾಷೆಯಲ್ಲಿ ಕಯ್‌ ಅಥವಾ ಕಯೊ (ಬಹವಚನ ಕಯ್ಸ್‌, ಕಯೊಸ್‌ ) ಎನ್ನಲಾಗುವುದು.[೨೦] ವಿಪರ್ಯಾಸವೆಂಬಂತೆ, ಪ್ರಾಣಿಯನ್ನು ವಿವರಿಸಲು ಸಾಕಣೆಗಾರರು ಇನ್ನಷ್ಟು ವಿಧ್ಯುಕ್ತವಾದ 'ಕೇವಿ' ಎಂಬ ಪದವನ್ನು ಬಳಸುವರು. ವೈಜ್ಞಾನಿಕ ಮತ್ತು ಪ್ರಯೋಗಾಲಯಗಳಲ್ಲಿ ಈ ಪ್ರಾಣಿಯನ್ನು ಇನ್ನಷ್ಟು ಸಾಮಾನ್ಯ ಬಳಕೆಯ, ಆಡುಭಾಷೆಯ ಪದ Guinea Pig ('ಗಿನಿಯಿಲಿ')ಯೆಂದೇ ಕರೆಯಲಾಗುವುದು.[೨೧]

ಈ ಪ್ರಾಣಿಗಳನ್ನು 'ಹಂದಿಗಳು' ಎನ್ನಲು ಕಾರಣಗಳು ಅಸ್ಪಷ್ಟ. ಹಂದಿಗಳಂತೆಯೇ ಗಿನಿಯಿಲಿಗಳ ಆಕಾರವಿದ್ದು, ತಮ್ಮ ಶರೀರಕ್ಕೆ ಅನುಗುಣವಾಗಿ ದೊಡ್ಡ ತಲೆ, ದಪ್ಪ ಕುತ್ತಿಗೆಗಳು ಮತ್ತು ದುಂಡಗಿನ ಪಿರೆ ಹೊಂದಿದ್ದು, ಇದಕ್ಕೆ ಬಾಲವಿರದು. ಇವು ಮಾಡುವ ಕೆಲವು ಸದ್ದುಗಳು ಹಂದಿಯ ಸದ್ದಿನಂತಿವೆ. ಅವು ಆಹಾರ ಭಕ್ಷಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ.[೨೨] ಸಾಕುಹಂದಿಗಳಂತೆ, ಸಣ್ಣ ಆವರಣಗಳಲ್ಲಿ ಅವು ಬಹಳ ಅವಧಿಗಳವರೆಗೆ ಬದುಕುಳಿಯಬಹುದು. ಹೀಗಾಗಿ ಅವುಗಳನ್ನು ಹಡಗುಗಳಲ್ಲಿ ಸುಲಭವಾಗಿ ಯುರೋಪ್‌ಗೆ ರವಾನಿಸಲಾಯಿತು.[೨೩]

ಹಲವು ಯುರೋಪಿಯನ್‌ ಭಾಷೆಗಳಲ್ಲಿ ಗಿನಿಯಿಲಿಯ ಹೆಸರು ಹಂದಿಯಂತಹ ಅಧಿಕಾರ್ಥತೆಯನ್ನು ಸೂಚಿಸುತ್ತದೆ. ಗಿನಿಯಿಲಿಯ ಹೆಸರುಗಳು ಜರ್ಮನ್‌ ಭಾಷೆಯಲ್ಲಿ Meerschweinchen (ಸಣ್ಣ ಸಮುದ್ರ ಹಂದಿ), ಪೊಲಿಷ್‌ ಭಾಷೆಯಲ್ಲಿ świnka morska , ಹಂಗೇರಿಯನ್‌ ಭಾಷೆಯಲ್ಲಿ tengerimalac ಹಾಗೂ ರಷ್ಯನ್‌ ಭಾಷೆಯಲ್ಲಿ морская свинка (ಸಮುದ್ರ ಹಂದಿ) ಎಂದು ಕರೆಯಲಾಗಿದೆ. ನಾವಿಕ ಇತಿಹಾಸದಿಂದ ಪಡೆಯಲಾದ ಮಾಹಿತಿಯ ಪ್ರಕಾರ, ನೂತನ ಪ್ರಪಂಚ(ಅರ್ಥಾತ್‌ ಪಶ್ಚಿಮ ಗೋಲಾರ್ಧ)ದಲ್ಲಿ ಆಹಾರಪದಾರ್ಥಗಳ ಸರಬರಾಜಿಗೆ ನಿಲ್ಲುವ ಹಡಗುಗಳು, ಗಿನಿಯಿಲಿಗಳ ಸಂಗ್ರಹವನ್ನು ತುಂಬಿಸಿಕೊಳ್ಳುತ್ತಿದ್ದವು. ಇದು ಸುಲಭವಾಗಿ ಸಾಗಣೆ ಮಾಡುವ ತಾಜಾಮಾಂಸದ ಮೂಲವಾಗಿತ್ತು. ಫ್ರೆಂಚ್‌ ಭಾಷೆಯಲ್ಲಿ Cochon d'Inde (ಭಾರತದ ಹಂದಿ) ಆಥವಾ ಕೊಬಾಯೆ ಎನ್ನಲಾಗುವುದು. ಡಚ್ಚರು ಇದನ್ನು Guinees biggetje ಗಿನಿಯನ್‌ ಹಂದಿಮರಿ) ಅಥವಾ ಕೇವಿಯಾ ಎನ್ನುವರು. ಕೆಲವು ಡಚ್‌ ಭಾಷೆಗಳಲ್ಲಿ ಇದನ್ನು ಸ್ಪಾನ್ಸ್ ಇಲಿ ಎನ್ನಲಾಗುವುದು. ಪೋರ್ಚುಗೀಸ್‌ ಭಾಷೆಯಲ್ಲಿ ಗಿನಿಯಿಲಿಯನ್ನು ಕೋಬಾಯಿಯಾ ಎನ್ನಲಾಗುವುದು. ಲ್ಯಾಟೀನೀಕೃತ ಟುಪಿ ಭಾಷೆಯ ಪದ ಇದಕ್ಕೆ ಆಧಾರ. porquinho da Índia ಎಂದೂ ಹೇಳಲಾಗುವುದು (ಭಾರತದ ಸಣ್ಣ ಹಂದಿ) ಇದು ಸರ್ವವ್ಯಾಪಿಯಲ್ಲ. ಉದಾಹರಣೆಗೆ, ಸ್ಪ್ಯಾನಿಷ್‌ ಭಾಷೆಯಲ್ಲಿ ಗಿನಿಯಿಲಿಗೆ conejillo de Indias (ಭಾರತದ/ಇಂಡೀಸ್‌ ವಲಯದ ಸಣ್ಣ ಮೊಲ) ಎನ್ನಲಾಗುವುದು.[೨೦] ಇನ್ನಷ್ಟು ವಿಚಿತ್ರ ಎಂಬಂತೆ, ಚೀನೀಯರು ಹಾಲೆಂಡ್‌ ಹಂದಿಗಳು ಎನ್ನುವರು (荷蘭豬, hélánzhū).

Guinea Pig ಪದದಲ್ಲಿ Guinea (ಗಿನಿ) ಎಂಬ ಪದದ ಮೂಲವನ್ನು ವಿವರಿಸುವುದು ಬಹಳ ಕಷ್ಟ. ಒಂದು ಸಿದ್ಧಾಂತದ ಪ್ರಕಾರ, ಗಿನಿ ದೇಶದ ಮೂಲಕ ಈ ಪ್ರಾಣಿಗಳನ್ನು ಯುರೋಪ್‌ಗೆ ತರಲಾಯಿತು. ಇದರಿಂದ, ಈ ಪ್ರಾಣಿಯು ಗಿನಿ ದೇಶದಿಂದಲೇ ಮೂಡಿಬಂದಿತು ಎಂದು ಜನರು ಬಹುಶಃ ಭಾವಿಸಿರಬಹುದು.[೨೧] ಇಂಗ್ಲಿಷ್‌ ಭಾಷೆಯಲ್ಲಿ ಯಾವುದೇ ದೂರದ, ಅಜ್ಞಾತ ದೇಶವನ್ನು ಉಲ್ಲೇಖಿಸುವಾಗ, ಅದನ್ನು ಪದೇ-ಪದೇ 'ಗಿನಿ' ಎನ್ನಲಾಗುತ್ತಿತ್ತು. ಹಾಗಾಗಿ, ಈ ಹೆಸರು ಸುಮ್ಮನೆ ಈ ಪ್ರಾಣಿಯ ವಿದೇಶಿ ಮೂಲವನ್ನು ವರ್ಣರಂಜಿತವಾಗಿ ಉಲ್ಲೇಖಿಸಿರಬಹುದು.[೨೪][೨೫] 'ಗಿನಿ' ಎಂಬುದು ದಕ್ಷಿಣ ಅಮೆರಿಕಾ ಖಂಡದ ಗಯಾನಾ ದೇಶದ ಅಪಭ್ರಂಶ ಎಂದು ಸೂಚಿಸುತ್ತದೆ. ಆದರೂ ಆ ದೇಶವು ಈ ಪ್ರಾಣಿಯ ಮೂಲವಲ್ಲ.[೨೪][೨೬] ಈ ಪ್ರಾಣಿಗಳನ್ನು ಒಂದು ಗಿನಿ ನಾಣ್ಯದ ಬೆಲೆಗೆ ಮಾರಿದ್ದರಿಂದ ಅವುಗಳಿಗೆ ಹಾಗೆ ಹೆಸರಿಸಲಾಯಿತು ಎಂಬ ಸಾಮಾನ್ಯ ತಪ್ಪುಕಲ್ಪನೆಯಿದೆ. ಈ ಸಿದ್ಧಾಂತಕ್ಕೆ ದೃಢ ಆಧಾರವಿದ್ದಂತಿಲ್ಲ, ಏಕೆಂದರೆ, ಗಿನಿಯನ್ನು ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ, 1663ರಲ್ಲಿ ಠಂಕಿಸಲಾಗಿತ್ತು. ಖ್ಯಾತ ವೈದ್ಯ ವಿಲಿಯಮ್‌ ಹಾರ್ವಿ 1653ರಷ್ಟು ಆರಂಭಕಾಲದಲ್ಲಿ 'ಗಿನಿ ಪಿಗ್'‌ ಎಂಬ ಉಕ್ತಿಯನ್ನು ಬಳಸಿದ್ದರು.[೨೭] ಗಿನಿ ಎಂಬುದು ಕೊನೀ (ಮೊಲ) ಎಂಬ ಪದದ ಪರಿವರ್ತಿತ ರೂಪವಿರಬಹುದು ಎಂದು ಇನ್ನೂ ಕೆಲವರು ನಂಬಿದ್ದಾರೆ. 1607ರಲ್ಲಿ ಎಡ್ವರ್ಡ್‌ ಟಾಪ್ಸೆಲ್‌ ಚತುಷ್ಪದಿ ಪ್ರಾಣಿಗಳ ಬಗ್ಗೆ ರಚಿಸಿದ್ದ ಒಂದು ಪ್ರಬಂಧದಲ್ಲಿ ಗಿನಿಯಿಲಿಗಳನ್ನು 'ಹಂದಿ ಮೊಲಗಳು' ಎಂದು ಉಲ್ಲೇಖಿಸಿದ್ದರು.[೨೧]

ಗುಣಲಕ್ಷಣಗಳು ಮತ್ತು ಪರಿಸರ

[ಬದಲಾಯಿಸಿ]
ಅರೆಬರೆ ಬಣ್ಣದ ಎರಡು ಅಬಿಸಿನಿಯಾದ ಗಿನಿಯಿಲಿಗಳು

ಗಿನಿಯಿಲಿಗಳು ಇತರೆ ದಂಶಕಗಳಿಗಿಂತಲೂ ದೊಡ್ಡದಾಗಿವೆ. ಇವು ಸುಮಾರು 700ರಿಂದ 1200 ಗ್ರಾಮ್‌ಗಳಷ್ಟು (1.5–2.5 ಪೌಂಡ್‌ಗಳು) ತೂಕದ್ದಾಗಿವೆ ಹಾಗೂ 20ರಿಂದ 25 ಸೆಂಟಿಮೀಟರ್‌ಗಳಷ್ಟು (8–10 ಅಂಗುಲಗಳು) ಉದ್ದವಿವೆ.[೨೮] ಅವು ಸಾಮಾನ್ಯವಾಗಿ ನಾಲ್ಕರಿಂದ ಐದು ವರ್ಷಗಳ ಕಾಲ ಜೀವಿಸುತ್ತವೆ. ಕೆಲವು ಎಂಟು ವರ್ಷಗಳಷ್ಟು ದೀರ್ಘಕಾಲ ಜೀವಿಸುತ್ತವೆ.[೨೯] 2006ರ ಗಿನ್ನೆಸ್ ಬುಕ್‌ ಆಫ್‌ ರೆಕಾರ್ಡ್ಸ್‌ ಪ್ರಕಾರ, ಅತಿ ದೀರ್ಘಾವಧಿ ಬದುಕಿದ ಗಿನಿಇಲಿಯು 14 ವರ್ಷಗಳು 10.5 ತಿಂಗಳುಗಳ ಕಾಲ ಬದುಕುಳಿದಿತ್ತು.[೩೦]

1990ರ ದಶಕದಲ್ಲಿ, ಅಲ್ಪಸಂಖ್ಯಾತ ವೈಜ್ಞಾನಿಕ ಅಭಿಪ್ರಾಯವುಂದು ಮೂಡಿಬಂದಿತು. ಗಿನಿಯಿಲಿಗಳು, ಚಿಂಚಿಲಾಗಳು (ದಕ್ಷಿಣ ಅಮೆರಿಕಾ ಮೂಲದ ಸಣ್ಣ ದಂಶಕ) ಹಾಗೂ ಡೇಗುಗಳು ಸೇರಿದಂತೆ ಕೇವಿಯೊಮಾರ್ಫ್‌ಗಳು ದಂಶಕಗಳಲ್ಲ. ಅವನ್ನು (ಲ್ಯಾಗಮಾರ್ಫ್‌(ಮೊಲ)ಗಳಂತೆ) ಸಸ್ತನಿಗಳಲ್ಲಿ ಪ್ರತ್ಯೇಕ ಗಣವಾಗಿ ಪುನಃ ವರ್ಗೀಕರಿಸತಕ್ಕದ್ದು ಎಂಬ ವಾದಗಳೂ ಕೇಳಿಬಂದವು.[೩೧][೩೨] ಇನ್ನಷ್ಟು ಮಾದರಿಗಳನ್ನು ಬಳಸಿ ನಡೆಸಲಾದ ಆನಂತರದ ಸಂಶೋಧನೆಗಳು 'ದಂಶಕಗಳ ಸದ್ಯದ ವರ್ಗೀಕರಣವು ಒಂದೇ ಜೈವಿಕ ಕುಲದ್ದು ಎಂಬುದು ಸಮರ್ಥನೀಯ' ಎಂದು ಸಸ್ತನಿ ಜೀವವಿಜ್ಞಾನಿಗಳಲ್ಲಿ ಒಮ್ಮತ ಮೂಡಿತು.[೩೩][೩೪]

ಸ್ವಾಭಾವಿಕೆ ನೆಲೆ

[ಬದಲಾಯಿಸಿ]

ಕೇವಿಯಾ ಪೊರ್ಸೆಲಸ್ ಎಂಬುದು ಸ್ವಾಭಾವಿಕವಾಗಿ ಕಾಡುಪ್ರದೇಶಗಳಲ್ಲಿ ಲಭ್ಯವಾಗದು. ಕೇವೀಸ್‌ ಜಾತಿಗೆ ನಿಕಟ ಸಂಬಂಧ ಹೊಂದಿರುವ, ಸಾಮಾನ್ಯವಾಗಿ ದಕ್ಷಿಣ ಅಮೆರಿಕಾ ಖಂಡದ ವಿವಿಧ ಪ್ರದೇಶಗಳಲ್ಲಿ ವಾಸಿಸುವ ಕೇವಿಯಾ‌ ಅಪೆರಿಯಾ , ಕೇವಿಯಾ ಫಲ್ಜಿಡಾ ಮತ್ತು ಕೇವಿಯಾ ಷುಡೀ ಪ್ರಾಣಿಗಳ ಸಂತತಿ ಎನ್ನಲಾಗಿದೆ.[] ಕೇವಿಯಾ ಅನೊಲೇಮೇ ಮತ್ತು ಕೇವಿಯಾ ಗಯಾನೇ ಸೇರಿದಂತೆ, 20ನೆಯ ಶತಮಾನದಲ್ಲಿ ಪತ್ತೆಯಾದ ಕೇವಿಯ ಕೆಲವು ಗಿನಿಯಿಲಿಗಳು ಪಳಗಿದ ಸ್ಥಿತಿಯಲ್ಲಿದ್ದು, ಕಾಡಿನಲ್ಲಿ ಬಿಟ್ಟಾಗ ಪುನಃ ವನ್ಯಜೀವಿ ಲಕ್ಷಣಗಳನ್ನು ಹೊಂದಿದವು ಎನ್ನಲಾಗಿದೆ.[] ವನ್ಯ ಕೇವೀಗಳು ಹುಲ್ಲುಗಾಡು ಪ್ರದೇಶಗಳಲ್ಲಿ ವಾಸಿಸುತ್ತವೆ. ಅವು ಹಸುಗಳಂತೆ ಪರಿಸರೀಯ ನೆಲೆ ಹೊಂದಿವೆ. ಕಾಡುಗಳಲ್ಲಿ ಅವು ಸಣ್ಣ ಗುಂಪುಗಳಲ್ಲಿ ವಾಸಿಸುತ್ತವೆ. ಗುಂಪಿನಲ್ಲಿ ಹಲವು ಹೆಣ್ಣು ಗಿನಿಯಿಲಿಗಳು(ಸೌಸ್) ಒಂದು ಗಂಡು ಗಿನಿಯಿಲಿ(ಬೋರ್)ಹಾಗೂ ಮರಿಗಳನ್ನು( ಮುಂಚಿನ ಹಂದಿ ಗುಣಲಕ್ಷಣಗಳನ್ನು ಹೊಂದಿದ್ದರಿಂದ ಪಪ್ಸ್) ಹೊಂದಿರುತ್ತದೆ. ಅವು ಹುಲ್ಲು ಮತ್ತು ಇತರೆ ಸಸ್ಯಗಳನ್ನು ಭಕ್ಷಿಸಿ, ಗುಂಪಿನಲ್ಲಿ (ಹಿಂಡು) ಒಟ್ಟಿಗೆ ಸಂಚರಿಸುತ್ತವೆ. ಅವು ಆಹಾರವನ್ನು ಶೇಖರಿಸುವುದಿಲ್ಲ.[೩೫] ಅವು ಬಿಲ ತೋಡದಿರುವಾಗ ಅಥವಾ ಗೂಡು ಕಟ್ಟದಿರುವಾಗ, ಅವು ಆಗಾಗ್ಗೆ ಇತರೆ ಪ್ರಾಣಿಗಳ ಬಿಲಗಳಲ್ಲಿ ನೆಲೆಸುತ್ತವೆ, ಅಥವಾ ಸಸ್ಯವರ್ಗದಿಂದ ರಚಿತವಾದ ಗೂಡುಗಳು ಮತ್ತು ಸಂದುಗಳಲ್ಲಿ ಸೂರು ಮಾಡುತ್ತವೆ.[೩೫] ಅವು ಮಬ್ಬು ಬೆಳಕಿನಲ್ಲಿ ಕಾರ್ಯಪ್ರವೃತ್ತ ಪ್ರಾಣಿಗಳು. ಅವು ಮುಂಜಾನೆ ಅಥವಾ ಮುಸ್ಸಂಜೆಯಲ್ಲಿ ಸಕ್ರಿಯವಾಗಿದ್ದು, ಇದರಿಂದಾಗಿ ಪರಭಕ್ಷಕ ಪ್ರಾಣಿಗಳಿಗೆ ಅವನ್ನು ಗುರುತಿಸಿ ಹಿಡಿಯಲು ಸಾಧ್ಯವಾಗದು.[೩೬]

ಸಾಕುಪ್ರಾಣಿಯಾಗಿ ನೆಲೆ

[ಬದಲಾಯಿಸಿ]

ಪಳಗಿಸಲಾದ ಗಿನಿಯಿಲಿಗಳು ಎರಡು ಅಥವಾ ಹೆಚ್ಚಿನ ಸಂಖ್ಯೆಯಿರುವ ಗುಂಪುಗಳಲ್ಲಿ ವಾಸಿಸುತ್ತವೆ; ಬರೀ ಹೆಣ್ಣು ಗಿನಿಯಿಲಿಗಳ ಗುಂಪುಗಳು, ಅಥವಾ ಒಂದೆರಡು ಹೆಣ್ಣು ಗಿನಿಯಿಲಿಗಳು ಹಾಗೂ ಹಿಡಮಾಡಲಾದ ಒಂದು ಗಿನಿಯಿಲಿಯ ಗುಂಪೂ ಸಹ ಇರುತ್ತವೆ. ಗಿನಿಯಿಲಿಗಳು ಇತರೆ ಗಿನಿಯಿಲಿಗಳನ್ನು ಗುರುತಿಸಿ ಅವುಗಳೊಂದಿಗೆ ಜೀವಿಸಲು ಕಲಿಯುತ್ತವೆ. ಗಂಡು ಗಿನಿಯಿಲಿಗಳ ಮೇಲೆ ನಡೆಸಿದ ಪ್ರಯೋಗಗಳ ಪ್ರಕಾರ, ಪರಿಚಿತ ಹೆಣ್ಣು ಗಿನಿಯಿಲಿ ಜತೆಯಿದ್ದಲ್ಲಿ ಗಂಡು ಗಿನಿಯಿಲಿಗಳ ನರ-ನಿರ್ನಾಳ ಗ್ರಂಥಿ ಒತ್ತಡದ ಪ್ರತಿಕ್ರಿಯೆಯು ಕಡಿಮೆಯಿರುವುದು ಹಾಗೂ ಅಪರಿಚಿತ ಹೆಣ್ಣು ಗಿನಿಯಿಲಿ ಹತ್ತಿರವಿದ್ದಲ್ಲಿ ಈ ಒತ್ತಡದ ಪ್ರತಿಕ್ರಿಯೆಯು ಹೆಚ್ಚಾಗುವುದು.[೩೭] ಅವುಗಳ ಗೂಡಿನಲ್ಲಿ ಸಾಕಷ್ಟು ಜಾಗವಿದ್ದರೆ ಹಾಗೂ ಎಳೆಯ ಪ್ರಾಯದಲ್ಲೇ ಪರಿಚಯವಾಗಿದ್ದು,ಯಾವುದೇ ಹೆಣ್ಣುಇಲಿಗಳ ಉಪಸ್ಥಿತಿಯಿರದಿದ್ದರೆ ಗಂಡುಇಲಿಗಳ ಗುಂಪುಗಳು ಸಹಬಾಳ್ವೆ ಮಾಡಬಲ್ಲವು.[೩೮] ವನ್ಯ ಗಿನಿಯಿಲಿಗಳಿಗಿಂತಲೂ ಭಿನ್ನವಾಗಿ, ಸಾಕಿದ ಗಿನಿಯಿಲಿಗಳು ವಿಭಿನ್ನ ಜೈವಿಕ ಲಯ ಬೆಳೆಸಿಕೊಂಡಿವೆ. ದೀರ್ಘಕಾಲಿಕ ಸಕ್ರಿಯತೆ ಹಾಗೂ ಮಧ್ಯದಲ್ಲಿ ಅಲ್ಪಾವಧಿಗಳ ನಿದ್ರೆ ಮಾಡುವ ಅಭ್ಯಾಸ ಬೆಳೆಸಿಕೊಂಡವು.[೩೬] ದಿನದ 24 ತಾಸುಗಳಲ್ಲಿ ಗಿನಿಯಿಲಿಗಳ ಚಟುವಟಿಕೆ ಯದ್ವಾತದ್ವಾ ಹರಡಿರುತ್ತದೆ. ಪ್ರಖರ ಬೆಳಕನ್ನು ತಪ್ಪಿಸಿಕೊಳ್ಳುವುದಲ್ಲದೇ ಯಾವುದೇ ನಿಯಮಿತ ಜೈವಿಕ ಚಟುವಟಿಕೆಗಳು ಸ್ಪಷ್ಟವಾಗಿ ಕಾಣುವುದಿಲ್ಲ[೩೬]

ಈ ಬೆಕ್ಕು ಗಿನಿಯಿಲಿ ಜೋಡಿಯನ್ನು ಸ್ವೀಕರಿಸಿಕೊಂಡಿದೆ.ಈ ತರಹದ ಅಂತರ-ಜಾತೀಯ ಅಂತರಸಂಪರ್ಕವು ಸಂಬಂಧಿತ ಪ್ರಾಣಿಗಳನ್ನು ಅವಲಂಬಿಸುತ್ತದೆ.

ಪಳಗಿಸಲಾದ ಗಿನಿಯಿಲಿಗಳು ಸಾಮಾನ್ಯವಾಗಿ ಪಂಜರಗಳಲ್ಲಿ ವಾಸಿಸುವವು. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಗಿನಿಯಿಲಿಗಳನ್ನು ಸಾಕುವವರು ಇಡೀ ಕೋಣೆಯಲ್ಲೇ ಅವುಗಳ ಸಾಕಣೆಗಾಗಿ ಮೀಸಲಿಡುವರು. ಪಂಜರಗಳು ದೃಢ ಅಥವಾ ತಂತಿಯ ಜಾಲರಿಯಂತಹ ನೆಲ ಹೊಂದಿರುತ್ತವೆ. ಆದರೂ, ಜಾಲರಿಯ ನೆಲಗಳಿಂದ ಪ್ರಾಣಿಗಳಿಗೆ ಗಾಯಗಳಾಗುವ ಸಂಭವ ಹೆಚ್ಚು, ಜೊತೆಗೆ ಬಂಬಲ್‌ಫುಟ್‌ (ಅಲ್ಸರೆಟಿವ್‌ ಪೊಡೊಡರ್ಮಾಟಿಟಿಸ್‌) ಎಂದು ಸಾಮಾನ್ಯವಾಗಿ ಕರೆಯುವ ಸೋಂಕಿಗೆ ಇದು ಸಂಬಂಧಿಸಿರಬಹುದು [೩೯] ಈ ಕಾರಣಕ್ಕಾಗಿ, ಇಂದು 'ಕ್ಯೂಬ್ಸ್‌ ಅಂಡ್‌ ಕೊರೊಪ್ಲಾಸ್ಟ್‌' (ಸಿ&ಸಿ) ವಿನ್ಯಾಸದ ಪಂಜರಗಳನ್ನು ಬಳಸಲಾಗುತ್ತವೆ.[೪೦] ಕೆಲವು ಪಂಜರಗಳು ಮರದ ತುಣುಕುಗಳು ಅಥವಾ ಅಂತಹದ್ದೇ ವಸ್ತುಗಳ ಲೇಪನ ಹೊಂದಿರುತ್ತವೆ. ಹಿಂದೆ, ಕೆಂಪು ಸಿಡಾರ್‌ (ಪೂರ್ವ ಅಥವಾ ಪಶ್ಚಿಮ) ಮತ್ತು ಪೀತದಾರು (ಎರಡೂ ಮೃದು ಮರಗಳು)ಗಳನ್ನು ಪಂಜರದ ಹಾಸಿಗಾಗಿ ಬಳಸಲಾಗುತ್ತಿದ್ದವು. ಆದರೆ ಈ ವಸ್ತುಗಳು ಹಾನಿಕಾರಕವಾದಫೀನಾಲ್‌ಗಳು (ವಾಸನೆಯುಳ್ಳ ಹೈಡ್ರೊಕಾರ್ಬನ್‌ ಸಾವಯವ ರಾಸಾಯನಿಕಗಳು) ಮತ್ತು ತೈಲಗಳನ್ನು ಒಳಗೊಂಡಿವೆ ಎಂದು ನಂಬಲಾಗಿದೆ.[೪೧] ಅಸ್ಪೆನ್‌ನಂತಹ ದೃಢ ಮರಗಳು, ಕಾದದ ಉತ್ಪನ್ನಗಳು, ಕಾರ್ನ್‌ ಕಾಬ್‌ ವಸ್ತುಗಳಿಂದ ತಯಾರಿಸಲಾದ ಇನ್ನಷ್ಟು ಸುರಕ್ಷಿತ ಹಾಸುಗಳು ಇತರೆ ಪರ್ಯಾಯ ವ್ಯವಸ್ಥೆಗಳಾಗಿವೆ.[೪೧] ಗಿನಿಯಿಲಿಗಳು ತಮ್ಮ ಪಂಜರಗಳಲ್ಲಿ ಗಲೀಜು ಮಾಡುವ ಪ್ರವೃತ್ತಿಯುಳ್ಳವು. ಅವು ತಮ್ಮ ಆಹಾರ ಬಟ್ಟಲುಗಳಲ್ಲಿ ನೆಗೆದು, ಹಾಸುಗಳನ್ನು ಒದ್ದು, ಹಿಕ್ಕೆ ಹಾಕುವುದುಂಟು. ಗಿನಿಯಿಲಿಗಳ ಮೂತ್ರವು ಪಂಜರದಲ್ಲಿ ಹರಳಿನಂತಾಗಿ ಅವನ್ನು ಸ್ವಚ್ಛಮಾಡುವುದು ದುಸ್ತರವಾಗುತ್ತದೆ.[೪೨] ಇದರ ಪಂಜರವನ್ನು ಸ್ವಚ್ಛಗೊಳಿಸಿದ ನಂತರ, ಗಿನಿಯಿಲಿಯು ಸಾಮಾನ್ಯವಾಗಿ ಮೂತ್ರ ವಿಸರ್ಜಿಸಿ, ತನ್ನ ಕೆಳಮೈಯನ್ನು ನೆಲದ ಮೇಲೆ ತೆವಳಿಸಿ ತನ್ನ ಸರಹದ್ದನ್ನು ಗುರುತಿಸಿಕೊಳ್ಳುತ್ತದೆ.[೪೩] ಅವುಗಳನ್ನು ಪಂಜರದಿಂದ ಹೊರತೆಗೆಯುವಾಗ ಗಂಡು ಗಿನಿಯಿಲಿಗಳು ಇದೇ ರೀತಿ ತಮ್ಮ ಸರಹದ್ದನ್ನು ಗುರುತಿಸಿಕೊಳ್ಳುತ್ತವೆ.

ಇತರೆ ಜಾತಿಗಳ ಪ್ರಾಣಿಗಳೊಂದಿಗೆ ಒಟ್ಟಿಗೆ ಸೇರಿಸಿದಲ್ಲಿ ಗಿನಿಯಿಲಿಗಳು ಸಾಮಾನ್ಯವಾಗಿ ಸರಾಗವಾಗಿ ಜೀವಿಸದು. ಜರ್ಬಿಲ್‌ಗಳು (ಉದ್ದ ಹಿಂಗಾಲುಳ್ಳ ಮರಳುಗಾಡಿನಲ್ಲಿ ವಾಸಿಸುವ ಇಲಿಯಂತಹ ದಂಶಕ) ಮತ್ತು ಹ್ಯಾಮ್ಸ್ಟರ್‌ (ಚಳಿಗಾಲಕ್ಕಾಗಿ ತನ್ನ ಉಗ್ರಾಣಕ್ಕೆ ಕಾಳುಗಳನ್ನು ದವಡೆಗಳಲ್ಲಿ ಸಾಗಿಸುವ ಹೆಗ್ಗಣದಂತಹ ದಂಶಕ) ನಂತಹ ಇತರೆ ದಂಶಕಗಳೊಂದಿಗೆ ಗಿನಿಯಿಲಿಗಳನ್ನು ಒಟ್ಟಿಗೆ ಸೇರಿಸಿದಲ್ಲಿ, ಶ್ವಾಸಕೋಶ ಮತ್ತಿತರ ಸೋಂಕು ತಗಲುವ ಸಂಭವವಿದೆ.[೪೪] ಅಂತಹ ದಂಶಕಗಳು ಗಿನಿಯಿಲಿಯತ್ತ ಅಕ್ರಮಣಕಾರಿ ಧೋರಣೆ ತೋರಬಹುದು.[೪೫] ದೊಡ್ಡ ಗಾತ್ರದ ಪ್ರಾಣಿಗಳು ಗಿನಿಯಿಲಿಗಳನ್ನು ಬೇಟೆಯೆಂದು ಪರಿಗಣಿಸಬಹುದು. ಆದರೆ, ಗಿನಿಯಿಲಿಗಳನ್ನು ತಮ್ಮ ಗುಂಪಿನಲ್ಲಿ ಸ್ವೀಕರಿಸಿ, ಅವುಗಳೊಡನೆ ಜೀವಿಸಲು ನಾಯಿಗಳಂತಹ ಪ್ರಾಣಿಗಳಿಗೆ ತರಬೇತಿ ನೀಡಬಹುದು.[೪೬] ಗಿನಿಯಿಲಿಗಳನ್ನು ಸಾಕಿದ ಮೊಲಗಳೊಂದಿಗೆ ಕೂಡಿಸುವ ಪ್ರಸ್ತಾಪದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಗಿನಿಯಿಲಿಗಳು ಮತ್ತು ಮೊಲಗಳು ಒಂದೇ ಪಂಜರವನ್ನು ಹಂಚಿಕೊಳ್ಳುವಾಗ ಹೊಂದಿಕೊಂಡು ಜೀವಿಸುತ್ತವೆ ಎಂದು ಕೆಲವು ಪ್ರಕಟಿತ ಮೂಲಗಳು ತಿಳಿಸಿವೆ.[೪೬][೪೭] ಆದರೆ, ಲ್ಯಾಗಮಾರ್ಫ್‌‌ಳಾಗಿ, ಮೊಲಗಳಿಗೆ ವಿಭಿನ್ನ ಪೌಷ್ಟಿಕಾಂಶಗಳ ಅಗತ್ಯಗಳಿರುತ್ತವೆ. ಆದ್ದರಿಂದ ಇವೆರಡೂ ಜಾತಿಗಳಿಗೆ ಒಂದೇ ಆಹಾರ ನೀಡಲು ಅಸಾಧ್ಯ.[೪೮] ಮೊಲಗಳು ಬೊರ್ಡೆಟೆಲ್ಲಾ ಹಾಗೂ ಪ್ಯಾಷ್ಚೂರೆಲ್ಲಾ ಸೋಂಕುಗಳು ಸೇರಿದಂತೆ ಶ್ವಾಸಕೋಶದ ಇತರೆ ಸೋಂಕುಗಳಿಗೆ ಆಶ್ರಯವಾಗಿರಬಹುದು. ಗಿನಿಯಿಲಿಗಳು ಈ ರೋಗಗಳಿಗೆ ಒಳಪಡುವ ಸಂಭವ ಹೆಚ್ಚಾಗಿದೆ.[೪೯] ಗಿನಿಯಿಲಿಗಿಂತಲೂ ಸಣ್ಣಗಾತ್ರದ ಗಿಡ್ಡ ಮೊಲವೂ ಸಹ ಗಿನಿಯಿಲಿಗಿಂತಲೂ ಬಲಶಾಲಿಯಾಗಿದ್ದು, ಉದ್ದೇಶಪೂರ್ವಕ ಅಥವಾ ಆಕಸ್ಮಿಕ ಗಾಯವುಂಟು ಮಾಡಬಹುದು.[೫೦]

ಸ್ವಭಾವ

[ಬದಲಾಯಿಸಿ]

ಗಿನಿಯಿಲಿಗಳು ಆಹಾರ ಹುಡುಕಿ ಸೇವಿಸಲು ಹಲವು ವಿವಿಧ ಮಾರ್ಗಗಳನ್ನು ಕಲಿಯಬಹುದು ಹಾಗೂ ಕಲಿತ ಮಾರ್ಗವನ್ನು ಹಲವು ತಿಂಗಳುಗಳ ಕಾಲ ನಿಖರವಾಗಿ ನೆನಪಿಸಿಕೊಂಡಿರಬಹುದು. ಅವು ಸಂಚರಿಸುವ ಮೂಲಕ ತಮ್ಮ ಸಮಸ್ಯೆಗಳನ್ನು ಎದುರಿಸಿ ಬಗೆಹರಿಸಿಕೊಳ್ಳಬಹುದು.[೫೧] ಗಿನಿಯಿಲಿಗಳು ಸಣ್ಣ ತಡೆಗಳ ಮೇಲೆ ಹಾರಿ ಪಾರಾಗಬಹುದು, ಆದರೆ ಅವು ಹತ್ತುವುದರಲ್ಲಿ ಕಳಪೆಯಾಗಿರುತ್ತವೆ ಜೊತೆಗೆ ಅವು ಚುರುಕಾಗಿಲ್ಲ. ಅವು ಸುಲಭವಾಗಿ ಬೆಚ್ಚಿಬೀಳುತ್ತವೆ. ಅವು ಒಂದೇ ಸ್ಥಳದಲ್ಲಿ ಬಹಳ ಹೊತ್ತು ತಟಸ್ಥವಾಗಿರುತ್ತವೆ ಅಥವಾ ಏನಾದರೂ ಅಪಾಯವನ್ನು ನಿರೀಕ್ಷಿಸಿದಲ್ಲಿ ಶೀಘ್ರ, ಥಟ್ಟನೆ ಚಲನೆಗಳ ಮೂಲಕ ರಕ್ಷಣೆಗಾಗಿ ಓಡುತ್ತವೆ.[೩೬] ಗಿನಿಯಿಲಿಗಳು ದೊಡ್ಡ ಗುಂಪುಗಳಲ್ಲಿ ಇದ್ದಲ್ಲಿ, ಅವು ದಿಕ್ಕಾಪಾಲಾಗಿ ಚದುರಿ ಓಡಿ, ತಮ್ಮ ಬೇಟೆಯಾಡುವ ಪ್ರಾಣಿಯನ್ನು ಗೊಂದಲಕ್ಕೆ ಸಿಲುಕಿಸಲು ಅಡ್ಡಾದಿಡ್ಡಿ ದಿಕ್ಕುಗಳಲ್ಲಿ ಚಲಿಸುತ್ತವೆ[೫೨] ಬಹಳ ಉದ್ರೇಕಗೊಂಡಲ್ಲಿ, ಗಿನಿಯಿಲಿಗಳು ಪದೇಪದೇ ಎಗರುತ್ತವೆ. ಇದಕ್ಕೆ ಪಾಪ್ಕಾರ್ನಿಂಗ್‌ ಎನ್ನಲಾಗುವುದು. ಇದು ಫೆರಟ್‌ ಜನಾಂಗದವರ ಯುದ್ಧ ನೃತ್ಯದಂತೆ ಕಾಣುತ್ತದೆ.[೫೩] ಅವು ಬಹಳಷ್ಟು ಉತ್ತಮವಾಗಿ ಈಜಬಲ್ಲವು.[೫೪]

ಗಿನಿಯಿಲಿಗಳ 'ಸಾಮಾಜಿಕ ಅಂದಗೊಳಿಸುವಿಕೆ'

ಹಲವು ದಂಶಕಗಳಂತೆ, ಗಿನಿಯಿಲಿಗಳು ಕೆಲವೊಮ್ಮೆ ಸಾಮಾಜಿಕ 'ಸಿಂಗಾರ (ಅಂದವಾಗುವಿಕೆ)'(ಪರಸ್ಪರ ಮೈ ಸ್ವಚ್ಛಗೊಳಿಸುವ ಕ್ರಿಯೆ) ಯಲ್ಲಿ ಪಾಲ್ಗೊಳ್ಳುತ್ತವೆ ಮತ್ತು ಸ್ವಯಂ ಸ್ವಚ್ಛಗೊಳಿಸಿಕೊಳ್ಳುತ್ತವೆ.[೫೫] ಕಣ್ಣಿನಿಂದ ಹಾಲಿನಂತಹ ದ್ರವವು ಸ್ರವಿಸಿ ಅಂದಗೊಳಿಸುವ ಪ್ರಕ್ರಿಯೆಯಲ್ಲಿ ಅದನ್ನು ಕೂದಲಿಗೆ ಉಜ್ಜಿಕೊಳ್ಳುತ್ತವೆ.[೫೬] ಗಂಡು ಗಿನಿಯಿಲಿಗಳು ಪರಸ್ಪರ ಕೂದಲುಗಳನ್ನು ಅಗಿಯುತ್ತವೆ. ಆದರೆ ಇದು ಸಾಮಾಜಿಕ ವರ್ತನೆಗಿಂತಲೂ ಹೆಚ್ಚಾಗಿ, ಆ ಗುಂಪಿನಲ್ಲಿ ವರ್ಗಶ್ರೇಣಿಯ ಸ್ಥಾಪನೆಯ ವಿಧಾನವಾಗಿದೆ.[೫೪] ಕಿವಿ ಕಚ್ಚುವುದು, ಚರ್ಮದ ಕೂದಲು ನಿಲ್ಲುವುದು, ಅಕ್ರಮಣಕಾರಿ ಸದ್ದುಗಳು, ತಲೆ ಮುಂದಕ್ಕೆ ಮಾಡುವುದು ಹಾಗೂ ಮೇಲೆರಗುವ ಮೂಲಕ ತಮ್ಮ ಪ್ರಾಬಲ್ಯದ ಪ್ರವೃತ್ತಿ ತೋರಿಸುತ್ತವೆ.[೫೭] ಒಂದೇ ಲಿಂಗದ ಗುಂಪುಗಳಲ್ಲಿ ಪ್ರಾಬಲ್ಯ ಮೆರೆಯಲು ಒಂದು ಗಿನಿಯಿಲಿಯು ಇನ್ನೊಂದರ ಮೈಮೇಲೆ ಹತ್ತುವಂತೆ ನಟನೆ ಮಾಡುವ ಲೈಂಗಿಕವಲ್ಲದ ಪ್ರವೃತ್ತಿ ಸಾಮಾನ್ಯವಾಗಿದೆ.ಗಿನಿಯಿಲಿಯ ದೃಷ್ಟಿಯು ಮಾನವನ ದೃಷ್ಟಿಯಷ್ಟು ಚುರುಕಾಗಿಲ್ಲ, ಆದರೆ ದೃಷ್ಟಿಯ ವ್ಯಾಪ್ತಿಯು ಮಾನವನ ದೃಷ್ಟಿಗಿಂತಲೂ ವಿಶಾಲವಾಗಿದೆ (ಸುಮಾರು 340°)[೫೮] ಹಾಗೂ ಆಂಶಿಕ ಬಣ್ಣದಲ್ಲಿ ಕಾಣುತ್ತವೆ (ದ್ವಿವರ್ಣ ಸಮಸ್ಯೆ (dichromacy)).

ಅವುಗಳ ಶ್ರಾವಣ, ವಾಸನಾ ಗ್ರಹಣ ಹಾಗೂ ಸ್ಪರ್ಶ ಶಕ್ತಿಗಳು ಬಹಳ ಚುರುಕಾಗಿವೆ.[೫೯] ಈ ಜಾತಿಯ ಪ್ರಾಣಿಗಳ ನಡುವೆ ಧ್ವನಿಯ ಮೂಲಕ ಸಂವಹನ ನಡೆಯುತ್ತದೆ.[೬೦] ಕೆಲವು ಶಬ್ದಗಳು ಕೆಳಂಡಂತಿವೆ:[೬೧][೬೨]

  • ವ್ಹೀಕ್‌ - ಜೋರು ಸದ್ದು, ಇದು ಅನುಕರಣ ಶಬ್ದ ಸೃಷ್ಟಿಯಾಗಿದ್ದು, ಇದನ್ನು ಸಿಳ್ಳೆ ಎಂದೂ ಹೇಳಲಾಗುತ್ತದೆ.

ಸಾಮಾನ್ಯ ಉದ್ವೇಗದ ಸಂವಹನವಾಗಿದ್ದು, ತನ್ನ ಮಾಲೀಕ ಅಥವಾ ಆಹಾರ ಉಣಿಸುವಿಕೆಗೆ ಪ್ರತಿಕ್ರಿಯೆಯಾಗಿ ಈ ಸದ್ದು ಸಂಭವಿಸಬಹುದು. ಇತರೆ ಗಿನಿಯಿಲಿಗಳು ಓಡುತ್ತಿದ್ದಲ್ಲಿ, ಅವನ್ನು ಪತ್ತೆ ಮಾಡಲು ಈ ಸದ್ದು ಹೊರಡಿಸುತ್ತದೆ. ಗಿನಿಯಿಲಿಯು ದಾರಿತಪ್ಪಿದ್ದಲ್ಲಿ ಅದು ಸಹಾಯ ಕೋರಲು ವ್ಹೀಕ್‌ ಸದ್ದು ಹೊರಡಿಸಬಹುದು. listen

  • ಬಬ್ಲಿಂಗ್‌ ಅಥವಾ ಪರ್ರಿಂಗ್‌(ಗುಳುಗುಳು ಶಬ್ಧ) - ಗಿನಿಯಿಲಿ ಬಹಳ ಖುಷಿಯಾಗಿದ್ದಲ್ಲಿ, ಅಥವಾ ಮುದ್ದಿಸಿಕೊಳ್ಳುವಾಗ ಅಥವಾ ಕೈಯಲ್ಲಿ ಹಿಡಿದಿರುವಾಗ ಈ ಸದ್ದು ಹೊರಡಿಸುತ್ತದೆ. ಅವು ಮೈಯನ್ನು ಸ್ವಚ್ಛಮಾಡಿಕೊಳ್ಳುವಾಗ ಅಥವಾ ಹೊಸ ಜಾಗವನ್ನು ಪರಿಶೀಲಿಸುವಾಗ ಅಥವಾ ಆಹಾರ ಸ್ವೀಕರಿಸುತ್ತಿರುವಾಗ ಸಹ ಈ ಸದ್ದು ಹೊರಡಿಸುತ್ತವೆ. listen
  • ಗುಡುಗುಟ್ಟುವುದು (ರಂಬ್ಲಿಂಗ್‌) - ಗುಂಪಿನೊಳಗೆ ಪ್ರಾಬಲ್ಯ ಮೆರೆಯಲು ಗಿನಿಯಿಲಿಯು ಈ ಸದ್ದು ಹೊರಡಿಸುತ್ತದೆ. ಆದರೂ, ಅದನ್ನು ಹೆದರಿಸಿದಾಗ ಅಥವಾ ರೇಗಿಸಿದಾಗ ಅದು ಈ ಸದ್ದು ಹೊರಡಿಸಬಹುದು. ಗುಡುಗುಟ್ಟುವ ಸದ್ದು ಕೆಲವೊಮ್ಮೆ ಜೋರಾಗಿದ್ದು, ಗಿನಿಯಿಲಿಯ ಶರೀರವು ಕಂಪಿಸುತ್ತದೆ. ಹೆಣ್ಣು ಗಿನಿಯಿಲಿಯೊಂದಿಗೆ ಪ್ರಣಯದಲ್ಲಿರುವಾಗ, ಗಂಡು ಗಿನಿಯಿಲಿಯು ಗುಳುಗುಳು ಶಬ್ದಮಾಡುತ್ತಾ , ಅತ್ತಿತ್ತ ವಾಲಾಡಿ, ಹೆಣ್ಣಿನ ಸುತ್ತಲೂ ಸುತ್ತುತ್ತದೆ.[೬೩] ಈ ರೀತಿಯ ನಡತೆಗೆ 'ರಂಬಲ್‌ಸ್ಟ್ರಟಿಂಗ್‌' ಎನ್ನಲಾಗುತ್ತದೆ. ಒಲ್ಲದ ಮನಸ್ಸಿಂದ ದೂರ ನಡೆಯುವಾಗ ಸಣ್ಣನೆ ಗುರುಗುಟ್ಟುವ ಸದ್ದು ಎಂದರೆ ಅದು ಅರೆಮನಸ್ಸಿನ ಪ್ರತಿರೋಧವನ್ನು ಸೂಚಿಸುತ್ತದೆ. listen
  • ಚಟ್ಟಿಂಗ್‌ ಮತ್ತು ವ್ಹೈನಿಂಗ್‌(ಕುಂಯಿಗುಟ್ಟುವುದು) - ಒಂದು ಗಿನಿಯಿಲಿಯು ಇನ್ನೊಂದನ್ನು ಬೆಂಬತ್ತಿದಾಗ, ಅಟ್ಟುವ ಗಿನಿಯಿಲಿಯ ಚಟ್ಟಿಂಗ್‌ ಹಾಗೂ ಮುಂದೆ ಓಡುತ್ತಿರುವ ಗಿನಿಯಿಲಿ ವ್ಹೈನಿಂಗ್‌(ಕುಂಯಿಗುಟ್ಟುವ) ಸದ್ದು ಹೊರಡಿಸುತ್ತದೆ.
listen
  • ಹಲ್ಲುಗಳ ಕಟಕಟಿಸುವಿಕೆ - ಗಿನಿಯಿಲಿಯು ತ್ವರಿತವಾಗಿ ಹಲ್ಲು ಮೆಸೆದು ಎಚ್ಚರಿಕೆಯ ಸಂಕೇತವನ್ನು ಹೊರಡಿಸುತ್ತದೆ.

ಈ ಸದ್ದು ಮಾಡುವಾಗ ಗಿನಿಯಿಲಿಗಳು ತಲೆಯೆತ್ತುತ್ತವೆ. ಹತ್ತಿರದಲ್ಲಿ ಏನೋ ಆಹಾರವಿದೆ, ಆದರೆ ಅದು ಎಟುಕುತ್ತಿಲ್ಲ ಎಂದು ಸೂಚಿಸಲು, ಗಿನಿಯಿಲಿಯು ಇನ್ನಷ್ಟು ತಗ್ಗಿದ ಸ್ಥಿತಿಯಲ್ಲಿ ಹಲ್ಲು ಮೆಸೆಯುತ್ತದೆ. [original research?]

  • ಅರಚುವಿಕೆ ಅಥವಾ ಕಿರುಚುವಿಕೆ - ನೋವು ಅಥವಾ ತೀವ್ರ ಅಪಾಯವುಂಟಾದಾಗ ಗಿನಿಯಿಲಿಯು ಅರಚುವ ಅಥವಾ ಕಿರುಚುವ ಸದ್ದು ಹೊರಡಿಸುತ್ತದೆ.

listen

  • ಚಿಲಿಪಿಲಿ - ಇದು ಅಪರೂಪದ ಸದ್ದು. ಗಿನಿಯಿಲಿಯು ಒತ್ತಡದ ಸ್ಥಿತಿಯಲ್ಲಿದ್ದಾಗ ಅಥವಾ ಮರಿ ಗಿನಿಯಿಲಿಗೆ ಆಹಾರ ಅಗತ್ಯವಿದ್ದಲ್ಲಿ, ಹಕ್ಕಿಯ ಚಿಲಿಪಿಲಿಯಂತೆ ಸದ್ದು ಹೊರಡಿಸುತ್ತದೆ. ಬಹಳ ಅಪರೂಪವಾಗಿ, ಈ ಚಿಲಿಪಿಲಿ ಸದ್ದು ಹಲವು ನಿಮಿಷಗಳ ಕಾಲ ಮುಂದುವರೆಯುವುದು. listen

ತಳಿ ಬೆಳೆಸುವಿಕೆ

[ಬದಲಾಯಿಸಿ]
ಮೂರು ಮರಿಗಳನ್ನು ಹಾಕುವ ಒಂದು ವಾರಕ್ಕೆ ಮುಂಚಿನ ಸ್ಥಿತಿಯಲ್ಲಿ ಗರ್ಭಧಾರಿ ಹೆಣ್ಣು ಗಿನಿಯಿಲಿ

ಗಿನಿಯಿಲಿಯು ಇಡೀ ವರ್ಷ ಈಯಬಹುದು. ವಸಂತ ಕಾಲದಲ್ಲಿ ಹೆಚ್ಚು ಮರಿಗಳಾಗುವವು; ಪ್ರತಿ ವರ್ಷ ಸುಮಾರು ಐದು ಸೂಳುಗಳನ್ನು ಈಯಬಹುದು.[] ಗಿನಿಯಿಲಿಯ ಗರ್ಭಾವಸ್ಥೆ ಅವಧಿ 59ರಿಂದ 72 ದಿನಗಳ ತನಕ ಇರುತ್ತದೆ; ಇದರ ಸರಾಸರಿ 53ರಿಂದ 68 ದಿನಗಳು.[೪೩] ದೀರ್ಘಾವದಿಯ ಗರ್ಭಾವಸ್ಥೆ ಹಾಗೂ ಮರಿಗಳ ದೊಡ್ಡ ಗಾತ್ರದ ಕಾರಣ, ಗರ್ಭಿಣಿ ಗಿನಿಯಿಲಿಗಳು ದೊಡ್ಡದಾಗಿ, ಬದನೆಯಾಕಾರದ್ದಾಗುತ್ತದೆ. ಆದರೂ, ಗಾತ್ರ ಮತ್ತು ರೂಪದಲ್ಲಿ ಬದಲಾವಣೆಗಳು ವ್ಯತ್ಯಾಸವಾಗುತ್ತವೆ. ಪೋಷಣೀಯ ಸ್ಥಿತಿಯಲ್ಲಿರುವ ಹಲವು ಇತರೆ ದಂಶಕ ಮರಿಗಳಿಗಿಂತಲೂ ಭಿನ್ನವಾಗಿ, ನವಜಾತ ಗಿನಿಯಿಲಿ ಮರಿಗಳು ಆಗಲೇ ಕೂದಲು, ಹಲ್ಲು, ಉಗುರುಗಳು ಹಾಗೂ ಆಂಶಿಕ ದೃಷ್ಟಿ ಹೊಂದಿರುತ್ತವೆ;[೫೪] ಇವು ಕೂಡಲೇ ಸಂಚರಿಸುವ ಕ್ಷಮತೆ ಹೊಂದಿರುತ್ತವೆ, ಘನ ಆಹಾರ ತಿನ್ನಬಲ್ಲವು. ಆದರೂ ಅವು ಮೊಲೆಯುಣ್ಣುವುದನ್ನು ಮುಂದುವರೆಸುತ್ತವೆ.[೫೪] ಸೂಳುಗಳಲ್ಲಿ ಒಂದರಿಂದ ಆರು ಮರಿಗಳು ಈಯಲಾಗುತ್ತವೆ,[೨೯] ಸರಾಸರಿ ಮೂರು ಮರಿಗಳು ಈಯಲಾಗುತ್ತವೆ. ಇದುವರೆಗೂ ದಾಖಲಾದಂತೆ, ಸೂಳೊಂದರಲ್ಲಿ ಅತಿ ಹೆಚ್ಚೆಂದರೆ 17 ಮರಿಗಳು.[೬೪]

ಸಣ್ಣ ಪ್ರಮಾಣದ ಸೂಳುಗಳಲ್ಲಿ, ಸಹಜಕ್ಕಿಂತಲೂ ದೊಡ್ಡ ಗಾತ್ರದ ಮರಿಗಳ ಕಾರಣ, ಪ್ರಸವ ಸ್ಥಿತಿಯಲ್ಲಿ ಕಷ್ಟಗಳಾಗಬಹುದು. ದೊಡ್ಡ ಸೂಳುಗಳು ಮೃತಮರಿಗಳ ಜನನದಲ್ಲಿ ಪರಿಣಾಮನೀಡುತ್ತದೆ. ಆದರೂ, ಮರಿಗಳನ್ನು ವಿಕಸನದ ಮುಂದುವರೆದ ಹಂತದಲ್ಲಿ ಈಯಲಾದ ಕಾರಣ ತಾಯಿಯ ಹಾಲಿನ ಕೊರತೆಯು ನವಜಾತ ಮರಿಗಳ ಸಾವಿನ ಪ್ರಮಾಣದಲ್ಲಿ ಬೀರುವ ಪರಿಣಾಮ ನಗಣ್ಯ.[೬೫] ಒಟ್ಟಿಗೆ ವಾಸಿಸುವ ಹೆಣ್ಣು ಗಿನಿಯಿಲಿಗಳು ಹಾಲು ಸ್ರವಿಸುತ್ತಿದ್ದಲ್ಲಿ, ತಾಯಿಯ ಜವಾಬ್ದಾರಿ ನಿರ್ವಹಿಸುವಲ್ಲಿ ನೆರವಾಗುತ್ತವೆ.[೬೬] ಗಂಡು ಮತ್ತು ಹೆಣ್ಣು ಗಿನಿಯಿಲಿಗಳು ಗಾತ್ರದ ಹೊರತಾಗಿ ಹೊರರೂಪದಲ್ಲಿ ವ್ಯತ್ಯಾಸ ತೋರುವುದಿಲ್ಲ. ಗಂಡು ಮತ್ತು ಹೆಣ್ಣು ಗಿನಿಯಿಲಿಗಳಲ್ಲಿ ಗುದನಾಳವು ಜನನಾಂಗಗಳಿಗೆ ಬಹಳ ಸನಿಹವಿದೆ. ಹೆಣ್ಣಿನ ಜನನಾಂಗವು ಜನನಾಂಗ ದ್ವಾರದಲ್ಲಿ Y-ಆಕಾರ ಹೊಂದಿದ್ದು, ಗಂಡು ಗಿನಿಯಿಲಿಯ ಜನನಾಂಗವು ಶಿಶ್ನ ಮತ್ತು ಗುದದ್ವಾರದ ವಿಶಿಷ್ಟ ರೂಪದಲ್ಲಿದೆ. ಸುತ್ತಮುತ್ತಲ ಕೂದಲಿಗೆ ಒತ್ತಡ ಹಾಕಿದಲ್ಲಿ ಶಿಶ್ನವು ಮುಂಚಾಚುವುದು.[೬೭] ಊದಿರುವ ವೃಷಣ ಚೀಲದ ಮೂಲಕ ಗಂಡಿನ ವೃಷಣವು ಬಾಹ್ಯ ನೋಟದಲ್ಲಿ ಕಾಣಬಹುದಾಗಿದೆ.

ಎಂಟು ತಾಸು ವಯಸ್ಸಿನ ಸ್ಥಿತಿಯಲ್ಲಿ ಗಿನಿಯಿಲಿ

ಗಂಡು ಗಿನಿಯಿಲಿಗಳು ತಮ್ಮ ಮೂರನೆಯ ಅಥವಾ ಐದನೆಯ ವಾರದಲ್ಲಿ ಲೈಂಗಿಕ ಪಕ್ವತೆ ಪಡೆಯುತ್ತವೆ. ಹೆಣ್ಣು ಗಿನಿಲಿಯಿಗಳು ಸುಮಾರು ನಾಲ್ಕು ವಾರಗಳ ಆಯಸ್ಸಿಗೇ ಸಂತಾನಶಕ್ತತೆ ಹೊಂದಿ, ವಯಸ್ಕ ಸ್ಥಿತಿಗೆ ಮೊದಲೇ ಸೂಳುಗಳನ್ನು ಹೊರಬಹುದು.[೬೮] ಮರಿಹಾಕದಿರುವ ಹೆಣ್ಣು ಗಿನಿಯಿಲಿಗಳಲ್ಲಿ ತಮ್ಮ ಆರನೆಯ ತಿಂಗಳ ಆಯುಸ್ಸಿಗೆ, ಸಾಮಾನ್ಯವಾಗಿ ಶ್ರೋಣಿಕುಹರದ ಕೀಲು ಕೆಳ-ಉದರದ ಗುಂಜೆಲಬು (pubic symphysis) ಮಾರ್ಪಡಿಸಲಾಗದಂತೆ ಕೂಡಿಕೊಳ್ಳುತ್ತದೆ.[೪೩] ಇದು ಸಂಭವಿಸಿದ ನಂತರ ಅವು ಗರ್ಭ ಧರಿಸಿದಲ್ಲಿ, ಜನನ ನಾಳವು ಸೂಕ್ತ ಮಟ್ಟಕ್ಕೆ ಅಗಲವಾಗದೆ, ಮರಿಯ ಜನನಕ್ಕೆ ಯತ್ನಿಸಿದಲ್ಲಿ, ಡಿಸ್ಟೊಸಿಯಾ ಮತ್ತು ಸಾವು ಸಂಭವಿಸುವುದು.[೬೯] ಹೆಣ್ಣು ಗಿನಿಯಿಲಿಗಳು ಮರಿಹಾಕಿದ 6ರಿಂದ 48 ತಾಸುಗಳ ನಂತರವೂ ಪುನಃ ಗರ್ಭ ಧರಿಸಬಹುದು. ಆದರೆ ಸದಾ ಗರ್ಭಧರಿಸುವುದು ಆರೋಗ್ಯಕರವಲ್ಲ.[೭೦]

ಹೆಣ್ಣು ಗಿನಿಯಿಲಿಗಳಲ್ಲಿ ಗರ್ಭಾವಸ್ಥೆಯ ರಕ್ತವಿಷ(ನಂಜು) ಕಾಯಿಲೆಯು ಸರ್ವೇಸಾಮಾನ್ಯವಾಗಿದ್ದು, ಸಾವಿಗೂ ಕಾರಣವಾಗುವುದು. ರಕ್ತವಿಷದ ಕಾಯಿಲೆಯ ಲಕ್ಷಣಗಳು ಹಸಿವಿಲ್ಲದಿರುವಿಕೆ, ನಿಶ್ಶಕ್ತಿ, ವಿಪರೀತ ಜೊಲ್ಲು ಸುರಿಸುವುದು, ಕೀಟೋನ್ ರಾಸಾಯನಿಕ ಸಂಯುಕ್ತದ ಕಾರಣ ಸಿಹಿ ಅಥವಾ ಹಣ್ಣಿನಂತಹ ಉಸಿರಿನ ದುರ್ವಾಸನೆ, ಹಾಗೂ ಗಂಬೀರ ಪ್ರಕರಣಗಳಲ್ಲಿ ಹಠಾತ್‌ ಪಾರ್ಶ್ವವಾಯು ಸಂಭವಿಸಬಹುದು.[೭೧] ಹೆಚ್ಚು ಉಷ್ಣಾಂಶವುಳ್ಳ ಹವಾಗುಣಗಳಲ್ಲಿ ಗರ್ಭಾವಸ್ಥೆಯ ರಕ್ತವಿಷವು ಸಾಮಾನ್ಯವೆನಿಸಿದೆ.[೭೨] ಗರ್ಭಾವಸ್ಥೆಯ ಇನ್ನೂ ತೀವ್ರ ಉಲ್ಬಣಗಳಲ್ಲಿ ಭ್ರಂಶ ಗರ್ಭಕೋಶ, ಹೈಪೊಕ್ಯಾಲ್ಸೆಮಿಯಾ (hypocalcaemia) ಹಾಗೂ ಮೊಲೆಯೂತ ಸಂಭವಿಸಬಹುದು.[೭೩]

ಆಹಾರ ಕ್ರಮ

[ಬದಲಾಯಿಸಿ]
ಹುಲ್ಲು ಮೇಯುತ್ತಿರುವ ಬೆಳ್ಳಿಬಣ್ಣದ ಅಗೂಟಿ ಗಿನಿಯಿಲಿ

ಹುಲ್ಲು ಗಿನಿಯಿಲಿಯ ಸ್ವಾಭಾವಿಕ ಆಹಾರಪಥ್ಯವಾಗಿದೆ. ಅವುಗಳ ದವಡೆಹಲ್ಲುಗಳು ಗಿಡಜನಿತ ವಸ್ತುಗಳನ್ನು ಜಗಿಯಲು ಸೂಕ್ತವಾಗಿವೆ. ಗಿನಿಯಿಲಿ ಬದುಕಿನುದ್ದಕ್ಕೂ ಈ ದವಡೆ ಹಲ್ಲುಗಳು ಬೆಳೆಯುತ್ತಲಿರುತ್ತವೆ.[೭೪] ಹುಲ್ಲು ತಿನ್ನುವ ಹಲವು ಸಸ್ತನಿಗಳು ಬಹಳಷ್ಟು ದೊಡ್ಡದಾಗಿದ್ದು, ಅವುಗಳ ಜೀರ್ಣವ್ಯವಸ್ಥೆಯು ಬಹಳ ಉದ್ದನೆಯದಾಗಿರುತ್ತವೆ. ಹಲವು ಇತರೆ ದಂಶಕಗಳಿಗೆ ಹೋಲಿಸಿದರೆ, ಗಿನಿಯಿಲಿಗಳ ದೊಡ್ಡ ಕರುಳುಗಳು ಇನ್ನಷ್ಟು ಉದ್ದವಿರುತ್ತವೆ. ಗಿನಿಯಿಲಿಗಳು ತಮ್ಮ ಆಹಾರಪಥ್ಯಕ್ಕೆ ಪೂರಕವಾಗಿ ತಮ್ಮದೇ ಮಲಭಕ್ಷಣೆ ಮಾಡುವುದುಂಟು.[೭೫] ಆದರೂ, ಅವು ಬೇಕಾಬಿಟ್ಟಿಯಾಗಿ ಮಲಭಕ್ಷಣೆ ಮಾಡದೆ, ಸಿಕೊಟ್ರೊಪ್‌ ಎಂಬ ವಿಶೇಷ ಮೃದು ಗುಳಿಗೆಗಳನ್ನು ಉತ್ಪಾದಿಸುತ್ತವೆ. ಈ ಸಿಕೊಟ್ರೊಪ್‌ ಗುಳಿಗೆಗಳು ಆಹಾರದ ಸಮರ್ಪಕ ಜೀರ್ಣ ಕ್ರಿಯೆಗೆ ಬೇಕಾದ ಬಿ ಜೀವಸತ್ತ್ವಗಳು ನಾರುಳ್ಳ ಪದಾರ್ಥಗಳು ಮತ್ತು ಬ್ಯಾಕ್ಟಿರಿಯಾಗಳನ್ನು ಪುನರ್ಬಳಕೆ ಮಾಡುತ್ತವೆ.[೭೬] ಗಿನಿಯಿಲಿಗಳು ತಮ್ಮ ಗುದದ್ವಾರದಿಂದ ನೇರವಾಗಿ ಈ ಸಿಕೊಟ್ರೊಪ್‌ಗಳನ್ನು ತಿನ್ನುವವು. ಅವು ಗರ್ಭ ಧರಿಸಿದಲ್ಲಿ ಅಥವಾ ಅಸಹಜವಾಗಿ ದಪ್ಪವಾಗಿದ್ದಲ್ಲಿ ಇದು ಸಾಧ್ಯವಾಗದು.[೪೮] ಮೊಲಗಳೂ ಸಹ ಈ ರೀತಿ ಮಾಡುವುದುಂಟು. ಮುದಿಯಾದ ಗಂಡು ಅಥವಾ ಹೆಣ್ಣು ಗಿನಿಯಿಲಿಗಳಲ್ಲಿ ಗುದದ್ವಾರದಿಂದ ಈ ಗುಳಿಗೆಗಳನ್ನು ಹೊರದೂಡುವ ಸ್ನಾಯುಗಳು ದುರ್ಬಲವಾಗಬಲ್ಲವು. ಕಿರಿಯ ವಯಸ್ಸಿನ ಗಿನಿಯಿಲಿಗಳಲ್ಲಿ ಈ ಸಾಧ್ಯತೆ ಬಹಳ ಕಡಿಮೆ. ಈ ಸ್ಥಿತಿಗೆ 'ಗುದದ್ವಾರದ ಸಂಘಟ್ಟನ(ಒತ್ತುವಿಕೆ)' ಎನ್ನಲಾಗುತ್ತದೆ. ಇದರಿಂದ ಗಂಡು ಗಿನಿಯಿಲಿಯು ಸಿಕೊಟ್ರೊಪ್‌ಗಳನ್ನು ಪುನಃ ಜೀರ್ಣಿಸಿಕೊಳ್ಳುವ ಕ್ರಿಯೆಗೆ ಅಡಚಣೆಯೊಡ್ಡುತ್ತದೆ. ಆದರೂ, ಕೆಲವೊಮ್ಮೆ ಬಹಳ ಗಟ್ಟಿಯಾದ ಗುಳಿಗೆಗಳು ಈ ಒತ್ತಿದ ದ್ವಾರದ ಮೂಲಕ ಹೊರಬರುವುದುಂಟು.[೭೭] ಬಹಳ ಎಚ್ಚರಿಕೆಯಿಂದ ಒತ್ತಿದ ಮಲವನ್ನು ಹೊರತೆಗೆಯುವುದರ ಮೂಲಕ ತಾತ್ಕಾಲಿಕ ಶಮನ ನೀಡಬಹುದು.

ಟಿಮತಿ ಮೇವಿನ ಹುಲ್ಲು-ಆಧಾರಿತ ಆಹಾರ ಗುಳಿಗೆಗಳಲ್ಲದೆ, ಟಿಮತಿ ಹುಲ್ಲು ಸೇರಿದಂತೆ ತಾಜಾ ಹುಲ್ಲು ತಿನ್ನುವ ಮೂಲಕ ಗಿನಿಯಿಲಿಗಳ ಆರೋಗ್ಯಕ್ಕೆ ಅನುಕೂಲವಾಗುವುದು. ಆಲ್ಫಾಲ್ಫಾ ಜಾನುವಾರು ಮೇವು ಸಹ ಆಹಾರವಾಗಬಹುದು. ಉಣಿಸಿದಾಗ, ಗಿನಿಯಿಲಿಗಳು ಆಲ್ಫಾಲ್ಫಾವನ್ನು ಹೇರಳ ಪ್ರಮಾಣದಲ್ಲಿ ತಿನ್ನುತ್ತವೆ.[೭೮] ಆದರೂ ವಯಸ್ಕ ಗಿನಿಯಿಲಿಗಳಿಗೆ ಆಲ್ಫಾಲ್ಫಾ ಉಣಿಸುವ ಬಗ್ಗೆ ವಿವಾದಗಳುಂಟಾಗಿವೆ. 'ಗರ್ಭಿಣಿ ಹಾಗೂ ತೀರಾ ಚಿಕ್ಕವಯಸ್ಸಿನ ಗಿನಿಯಿಲಿಗಳನ್ನು ಹೊರತುಪಡಿಸಿ, ಇತರೆ ಎಲ್ಲಾ ತರಹದ ಗಿನಿಯಿಲಿಗಳಿಗೆ ಹುಲ್ಲಿನ ಬದಲು ದ್ವಿದಳಧಾನ್ಯ ರೂಪದಲ್ಲಿ ಆಲ್ಫಾಲ್ಫಾವನ್ನು ಭಾರಿ ಪ್ರಮಾಣದಲ್ಲಿ ಉಣಿಸಿದಲ್ಲಿ, ಸ್ಥೂಲಕಾಯತೆಯುಂಟಾಗುವುದು, ಜೊತೆಗೆ ಅಗತ್ಯಕ್ಕಿಂತಲೂ ಹೆಚ್ಚು ಕ್ಯಾಲ್ಸಿಯಮ್‌ ತುಂಬಿರುವ ಕಾರಣ ಮೂತ್ರಕೋಶದಲ್ಲಿ ಕಲ್ಲುಗಳುಂಟಾಗಬಹುದು' ಎಂದು ಕೆಲವು ಗಿನಿಯಿಲಿ ಸಾಕಣೆದಾರರು ಮತ್ತು ಪಶುವೈದ್ಯ ಸಮುದಾಯದವರು ಸಲಹೆ ನೀಡಿದ್ದಾರೆ.[೭೯][೮೦] ಆದರೂ, ಪ್ರಕಟಿಸಲಾದ ವೈಜ್ಞಾನಿಕ ಮೂಲಗಳ ಪ್ರಕಾರ, ಆಲ್ಫಾಲ್ಫಾ ಪ್ರೊಟೀನ್, ಅಮೈನೊ ಆಮ್ಲಗಳು ಮತ್ತು ನಾರುಗಳನ್ನು ಭರ್ತಿಮಾಡುವ ಮೂಲವಾಗಿದೆ.[೮೧][೮೨] ಮಾನವನಂತೆ, ಆದರೆ ಇತರೆ ಸಸ್ತನಿ ವರ್ಗದ ಪ್ರಾಣಿಗಳಿಗಿಂತಲೂ ಭಿನ್ನವಾಗಿ, ಗಿನಿಯಿಲಿಗಳು ತಮ್ಮದೇ 'ಸಿ' ಜೀವಸತ್ತ್ವವನ್ನು ಸಂಶ್ಲೇಷಿಸಲಾಗದು. ಆದ್ದರಿಂದ ಇವು ಆಹಾರದ ಮೂಲಕ ಈ ಬಹುಮುಖ್ಯ ಪೌಷ್ಟಿಕವನ್ನು ಪಡೆಯಬೇಕಾಗಿದೆ. ಗಿನಿಯಿಲಿಗಳು 'ಸಿ' ಜೀವಸತ್ತ್ವವನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸದಿದ್ದಲ್ಲಿ, ರಕ್ತಪಿತ್ತ ವ್ಯಾಧಿಯಂತಹ ಮಾರಕ ರೋಗಕ್ಕೆ ತುತ್ತಾಗಬಹುದು. ಗಿನಿಯಿಲಿಗಳು ಪ್ರತಿದಿನವೂ ಸುಮಾರು 10 mg (0.15 gr)ರಷ್ಟು (ಗರ್ಭಾವಸ್ಥೆಯಲ್ಲಿದ್ದಲ್ಲಿ 20 mg (0.31 gr)) 'ಸಿ' ಜೀವಸತ್ತ್ವ ಸೇವಿಸುವ ಅಗತ್ಯವಿದೆ. ಹೂಕೋಸು, ಸೇಬು, ಎಲೆಕೋಸು, ಗಜ್ಜರಿ (ಕ್ಯಾರೆಟ್), ಗುಡ್ಡ ಸೋಂಪು ಮತ್ತು ಪಾಲಕ ಸೊಪ್ಪು ಸೇರಿದಂತೆ ತಾಜಾ ಹಣ್ಣು ಮತ್ತು ತರಕಾರಿಗಳು, ಅಥವಾ ಆಹಾರಪಥ್ಯದ ಪೂರಕ ಖಾದ್ಯಗಳ ಮೂಲಕ 'ಸಿ' ಜೀವಸತ್ತ್ವಗಳು ಲಭ್ಯವಿವೆ.[೮೩] ಗಿನಿಯಿಲಿಗಳಿಗಾಗಿ ಆರೋಗ್ಯಕರ ಆಹಾರಗಳಲ್ಲಿ ಕ್ಯಾಲ್ಸಿಯಮ್‌, ಮೆಗ್ನಿಸಿಯಮ್‌, ರಂಜಕ, ಪೊಟ್ಯಾಷಿಯಮ್‌ ಹಾಗೂ ಜಲಜನಕ ಅಯಾನ್‌ಗಳ ಸಂಕೀರ್ಣ ಸಮತೋಲನ ಆಹಾರದ ಅಗತ್ಯವಿದೆ, ಜೊತೆಗೆ ಇ, ಎ ಮತ್ತು ಡಿ ಜೀವಸತ್ತ್ವಗಳು ಸಹ ಅತ್ಯಗತ್ಯ.[೮೪] ಸಮತೋಲನವಿಲ್ಲದ ಆಹಾರಪಥ್ಯಗಳಿಂದ ಗಿನಿಯಿಲಿಗಳಲ್ಲಿ ಸ್ನಾಯು ದೌರ್ಬಲ್ಯ, ಪರಿವರ್ತನೆಯ ಕ್ಯಾಲ್ಸಿಯಮ್ ಶೇಖರಣೆಯಿಂದಾಗುವ ಊತಕ (ಮೆಟಾಸ್ಟಾಟಿಕ್‌ ಕ್ಯಾಲ್ಸಿಫಿಕೇಷನ್‌), ಗರ್ಭಾವಸ್ಥೆಯ ತೊಂದರೆಗಳು, ಜೀವಸತ್ತ್ವಗಳ ಕೊರತೆ ಮತ್ತು ಹಲ್ಲುಗಳ ಸಮಸ್ಯೆಗಳುಂಟಾಗುವವು.[೮೫] ತಾಜಾ ಹಣ್ಣು ಮತ್ತು ತರಕಾರಿಗಳ ಸೇವೆನೆಗೆ ಸಂಬಂಧಿಸಿದಂತೆ, ಗಿನಿಯಿಲಿಗಳು ಚಂಚಲ ಪ್ರವೃತ್ತಿ ತೋರುತ್ತವೆ. ಏನನ್ನು ತಿನ್ನುವುದು ಒಳಿತು, ಏನನ್ನು ತಿನ್ನಬಾರದು ಎಂಬುದನ್ನು ತಮ್ಮ ಜೀವನದಲ್ಲಿ ಬಹಳ ಬೇಗನೆ ಕಲಿಯುವವು. ಅವು ಪಕ್ವತೆ ಹೊಂದಿದ ನಂತರ ಅವುಗಳ ಆಹಾರ ಪದ್ಧತಿಗಳನ್ನು ಬದಲಿಸುವಂತೆ ಮಾಡುವುದು ಬಹಳ ಕಷ್ಟ.[೮೬] ಆಹಾರಪಥ್ಯಗಳಲ್ಲಿ ಹಠಾತ್‌ ಬದಲಾವಣೆಗಳಿಗೆ ಸರಿಯಾಗಿ ಪ್ರತಿಕ್ರಿಯಿಸದು. ಹೊಸ ತರಹದ ಆಹಾರವನ್ನು ಸ್ವೀಕರಿಸುವ ಬದಲು ಅವು ಅಹಾರ ತ್ಯಜಿಸಿ, ಉಪವಾಸವಿರುತ್ತದೆಯೇ ಹೊರತು ಹೊಸ ಆಹಾರ ಸ್ವೀಕರಿಸುವುದಿಲ್ಲ.[೫೪] ಗಿನಿಯಿಲಿಗೆ ಹುಲ್ಲು ಅಥವಾ ಇತರೆ ಆಹಾರದ ನಿರಂತರ ಪೂರೈಕೆಯನ್ನು ಶಿಫಾರಸು ಮಾಡಲಾಗಿದೆ. ಇಲ್ಲದಿದ್ದಲ್ಲಿ, ಆಹಾರ ಕೊರತೆಯುಂಟಾದಲ್ಲಿ ಗಿನಿಯಿಲಿಗಳು ತಮ್ಮ ಕೂದಲನ್ನೇ ತಿನ್ನುವ ಪ್ರವೃತ್ತಿ ಬೆಳೆಸಿಕೊಳ್ಳುವವು.[೮೭] ಗಿನಿಯಿಲಿಗಳ ಹಲ್ಲು ಬೆಳೆಯುತ್ತಲೇ ಇರುವುದರಿಂದ, ಅವು ಆಗಾಗ್ಗೆ ತಮ್ಮ ಹಲ್ಲುಗಳನ್ನು ಮಸೆಯುತ್ತಿರುವವು. ಇಲ್ಲದಿದ್ದಲ್ಲಿ ಹಲ್ಲುಗಳು ತಮ್ಮ ಬಾಯಿಗೂ ಮೀರಿ ಬೆಳೆಯುತ್ತವೆ. ಇದು ದಂಶಕಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ.[೪೦] ಗಿನಿಯಿಲಿಗಳು ಬಟ್ಟೆ, ಕಾಗದ, ಪ್ಲ್ಯಾಸ್ಟಿಕ್‌ ಮತ್ತು ರಬ್ಬರ್‌ ವಸ್ತುಗಳನ್ನೂ ಕಡಿಯುತ್ತವೆ.

ಹಲವು ಗಿಡಗಳು ಗಿನಿಯಿಲಿಗಳ ಪಾಲಿಗೆ ಬಹಳ ವಿಷಕಾರಿ. ಇದರಲ್ಲಿ ಜರಿಗಿಡ, ಬ್ರಯನಿ, ಕಾಕಪಾದ, ಕಾಡುಸಾಸಿವೆ, ಬೆಲಡಾನಾ, ಫಾಕ್ಸ್‌‌ಗ್ಲಾವ್, ಕರಿಜೀರಿಗೆ ಗಿಡ, ಹೆಮ್ಲಾಕ್‌ ಗಿಡ, ಲಿಲಿ ಆಫ್‌ ದಿ ವ್ಯಾಲಿ, ಮೇವೀಡ್‌ ಗಿಡ [disambiguation needed], ಕುಲಾವಿ ಗಿಡ, ಪ್ರಿವಿಟ್‌ ಗಿಡ, ಕಾಡುಗೊಬ್ಲಿ ಗಿಡ, ರೇವಾಚಿನ್ನಿ, ಸ್ಪೀಡ್ವೆಲ್‌ ಸಸ್ಯ, ಟೋಡ್‌ಫ್ಲ್ಯಾಕ್ಸ್‌ ಗಿಡ [disambiguation needed] ಹಾಗೂ ವನ್ಯ ಅಜ್ಮೋದ ಸೇರಿವೆ.[೮೮] ಜೊತೆಗೆ, ಯಾವುದೇ ಗೆಡ್ಡೆಯಾಕಾರದಿಂದ ಬೆಳೆಯುವ ಗಿಡ (ಉದಾಹರಣೆಗೆ ಟ್ಯೂಲಿಪ್‌ ಮತ್ತು ಈರುಳ್ಳಿ ಗಿಡಗಳು) ಗಿನಿಯಿಲಿಗಳ ಪಾಲಿಗೆ ಸಾಮಾನ್ಯವಾಗಿ ವಿಷಕಾರಿ.[೮೮]

ಆರೋಗ್ಯ

[ಬದಲಾಯಿಸಿ]
ಕುತ್ತಿಗೆಯ ಸ್ನಾಯುಗಳ ವಾತರೋಗದಿಂದ ಬಳಲುತ್ತಿರುವ ಅರೆಬರೆ-ಬಣ್ಣದ ಗಿನಿಯಿಲಿ

ಸಾಕಲಾದ ಗಿನಿಯಿಲಿಗಳಲ್ಲಿ ಸಾಮಾನ್ಯ ಕಾಯಿಲೆಗಳ ಪೈಕಿ ಶ್ವಾಸನಾಳದ ಸೋಂಕುಗಳು, ಅತಿಸಾರ, ರಕ್ತ ಪಿತ್ತ ವ್ಯಾಧಿ, 'ಸಿ' ಜೀವಸತ್ತ್ವದ ಕೊರತೆ (ಇದರ ಕೊರತೆಯಿಂದ ಪ್ರಾಣಿಯಲ್ಲಿ ಆಲಸ್ಯವುಂಟಾಗುವುದು), ಗಂಟಲಲ್ಲಿ ಹುಲ್ಲು ಸಿಕ್ಕಿಹಾಕಿಕೊಂಡು ಅಥವಾ ಬಾಹ್ಯ ಮೂಲಗಳಿಂದ ಕೆರೆತಗಳ ಕಾರಣ, ಕತ್ತಿನಲ್ಲಿ ಸೋಂಕುಂಟಾಗಿ ಕೀವು ತುಂಬಿದ ಗಾಯ, ಹಾಗೂ ಹೇನುಗಳು, ಮೈಟ್‌ ಹುಳಗಳು ಅಥವಾ ಶಿಲೀಂಧ್ರಗಳಿಂದ ಸೋಂಕು ತಗುಲಬಹುದು.[೮೯] ಅಡಪು ಮೈಟ್‌ ಹುಳಗಳು (ಟ್ರಿಕ್ಸಕರಸ್‌ ಕೇವಿಯೇ ) ಗಿನಿಯಿಲಿಗಳಲ್ಲಿ ಕೂದಲುದುರುವಿಕೆಗೆ ಸಾಮಾನ್ಯ ಕಾರಣ. ವಿಪರೀತ ಪರಚಿಕೊಳ್ಳುವಿಕೆ, ಮುಟ್ಟಿದಾಗ ನೋವುಂಟಾಗಿ ಅದು ಪ್ರದರ್ಶಿಸುವ ಅಸಾಮಾನ್ಯ ಅಕ್ರಮಣಕಾರಿ ನಡತೆ, ಕೆಲವೊಮ್ಮೆ ಪಾರ್ಶ್ವವಾಯು ಸಹ ಇತರೆ ರೋಗಲಕ್ಷಣಗಳಲ್ಲಿ ಸೇರಿವೆ.[೯೦] 'ಓಡಾಡುವ ಹೇನುಗಳ' (ಗ್ಲಿರಿಕೊಲಾ ಪೊರ್ಸೆಲಿ ) ರೋಗವೂ ಗಿನಿಯಿಲಿಗಳನ್ನು ಕಾಡಬಹುದು. ಗಿನಯಿಲಿಗಳ ಕೂದಲಿನಲ್ಲಿ ಓಡಾಡುವ ಸಣ್ಣ ಗಾತ್ರದ ಬಿಳಿ ಕೀಟವಿದು. ಇದರ ಮೊಟ್ಟೆಗಳು ಕೂದಲಿಗೆ ಅಂಟಿಕೊಳ್ಳುವ ಕಪ್ಪು ಅಥವಾ ಬಿಳಿಯ ಕಣಗಳಂತಿವೆ. ಇದನ್ನು ಕೆಲವೊಮ್ಮೆ 'ನಿಶ್ಚಲ ಹೇನುಗಳು' ಎನ್ನಲಾಗಿದೆ. ಅಂಡಾಶಯದಲ್ಲಿ ಉರಿಯೂತದ ಚೀಲಗಳು ಸೇರಿದಂತೆ ವೈದ್ಯಕೀಯ ಸ್ಥಿತಿಗಳಿಂದ ಉಂಟಾಗುವ ಅಂತಃಸ್ರಾವ (ಹಾರ್ಮೋನ್‌) ಉಲ್ಬಣಗಳ ಕಾರಣ ಕೂದಲುದುರಬಹುದು.[೯೧] ಬಾಹ್ಯ ಕಣಗಳು (ಸಾಮಾನ್ಯವಾಗಿ ಹುಲ್ಲುಕಡ್ಡಿಗಳು ಅಥವಾ ಇದೇ ರೀತಿಯ ಸಣ್ಣ ವಸ್ತುಗಳು ಗಿನಿಯಿಲಿಗಳ ಕಣ್ಣುಗಳಲ್ಲಿ ಸಿಕ್ಕಿಹಾಕಿಕೊಳ್ಳಬಹುದು. ಇದರಿಂದಾಗಿ ಪ್ರಾಣಿಯು ತನ್ನ ಕಣ್ಣನ್ನು ಮಿತಿಮೀರಿ ಮಿಟುಕಿಸುವುದು, ಹರಿದುಕೊಳ್ಳುವುದು, ಹಾಗೂ ಕೆಲವೊಮ್ಮೆ ಕಣ್ಣಿನ ಪಾರದರ್ಶಕ ಪಟಲ(ಕಾರ್ನಿಯಾ)ದ ವ್ರಣದಿಂದಾಗಿ ತನ್ನ ಕಣ್ಣಿನ ಮೇಲೆ ನಿಷ್ಪಾರದರ್ಶಕ ಪದರವುಂಟಾಗುವುದು.[೯೨] ಹುಲ್ಲುಕಡ್ಡಿ ಅಥವಾ ಒಣಹುಲ್ಲಿನ ಧೂಳಿನಿಂದ ಪ್ರಾಣಿಗೆ ಸೀನು ಉಂಟುಮಾಡುತ್ತದೆ. ಗಿನಿಯಿಲಿಗಳು ಕೆಲವೊಮ್ಮೆ ಸೀನು ಹಾಕುವುದು ಸಾಮಾನ್ಯವೆನಿಸಿದರೂ, ಹವಾಮಾನದಲ್ಲಿ ಬದಲಾವಣೆಗೆ ಪ್ರತ್ಯುತ್ತರವಾಗಿ ಪದೇ-ಪದೇ ಸೀನುವುದು ಶ್ವಾಸಕೋಶದ ಉರಿಯೂತದ ರೋಗಲಕ್ಷಣವಾಗಿರಬಹುದು. ಶ್ವಾಸಕೋಶದ ಉರಿಯೂತದೊಂದಿಗೆ ಕಂಠವಾತವೂ ಸಂಭವಿಸಿ, ಇದು ಮಾರಣಾಂತಿಕವಾಗಬಹುದು.[೯೩] ಗಿನಿಯಿಲಿಯು ದಪ್ಪ ಹಾಗೂ ಅಚ್ಚುಕಟ್ಟಾದ ಶರೀರ ಹೊಂದಿರುವ ಕಾರಣ, ಗಿನಿಯಿಲಿಯು ಅತಿಯಾದ ಶಾಖಕ್ಕಿಂತಲೂ ಅತಿಯಾದ ಶೈತ್ಯವನ್ನು ಬಹಳ ಸುಲಭವಾಗಿ ಸಹಿಸಬಲ್ಲದು.[೯೪] ಇದರ ಸಹಜ ದೈಹಿಕ ಉಷ್ಣಾಂಶವು 101–104 °F (38–40 °C),[೯೫] ಆದ್ದರಿಂದ ಇದರ ಸುತ್ತಲಿನ ಹವೆಯ ಉಷ್ಣಾಂಶವು ಮಾನವನದಷ್ಟೇ ಇದೆ (ಸುಮಾರು 65–75 °F (18–24 °C)).[೯೪] ಸುತ್ತಲಿನ ಉಷ್ಣಾಂಶವು ಒಂದೇ ಸಮನೆ 90 °F (32 °C) ಮೀರಿದ್ದಲ್ಲಿ, ವಿಶಿಷ್ಟವಾಗಿ ಗರ್ಭಿಣಿ ಗಿನಿಯಿಲಿಗಳಲ್ಲಿ ಅತ್ಯುಷ್ಣತೆ ಮತ್ತು ಸಾವಿಗೆ ಕಾರಣವಾಗಬಹುದು.[೯೪] ಬಹಳಷ್ಟು ಪ್ರಬಲ ಗಾಳಿ ಅಥವಾ ಪದೇ-ಪದೇ ಸಂಭವಿಸುವ ಗಾಳಿ ನುಗ್ಗುವಿಕೆಯ ಹವಾಗುಣಕ್ಕೆ ಗಿನಿಯಿಲಿಗಳು ಹೊಂದಿಕೊಳ್ಳಲಾರವು.[೯೬] ಆರ್ದ್ರತೆಯು 30%ರಿಂದ 70%ರ ಶ್ರೇಣಿಯಿಂದ ಆಚೀಚೆಗೆ ಹೋದಲ್ಲಿ ಗಿನಿಯಿಲಿಗಳಿಗೆ ಪ್ರತಿಕೂಲವಾಗುವುದು.[೯೭] ಗಿನಿಯಿಲಿಗಳು ಬೇಟೆ ಪ್ರಾಣಿಗಳಾಗಿದ್ದು, ನೋವು ಹಾಗೂ ಯಾವುದೇ ಅನಾರೋಗ್ಯದ ಲಕ್ಷಣಗಳನ್ನು ಮರೆಯಾಚುವ ಪ್ರವೃತ್ತಿ ತೋರಿ ಜೀವಿಸುತ್ತವೆ. ಹಲವು ಬಾರಿ, ಯಾವುದೇ ಅನಾರೋಗ್ಯ ಸ್ಥಿತಿಯು ಬಹಳ ತೀವ್ರ ಅಥವಾ ತುಂಬ ಮುಂದುವರೆದ ತನಕ ಆರೋಗ್ಯ ಸಮಸ್ಯೆಯು ಗೋಚರಿಸದಿರಬಹುದು. ಪೆನಿಸಿಲ್ಲಿನ್‌ ಸೇರಿದಂತೆ ಹಲವು ಪ್ರತಿಜೀವಕ ಔಷಧಗಳಿಗೆ ಗಿನಿಯಿಲಿಯು ಅತಿಸಂವೇದನೆಯಿಂದ ಪ್ರತಿಕ್ರಿಯಿಸುವ ಕಾರಣ ರೋಗದ ಚಿಕಿತ್ಸೆಯು ಕಷ್ಟಕರವೆನಿಸಿದೆ. ಏಕೆಂದದರೆ, ಪೆನಿಸಿಲ್ಲಿನ್‌ ಕರುಳಿನಲ್ಲಿರುವ ಸೂಕ್ಷ್ಮಜೀವಿಗಳನ್ನು ನಾಶಪಡಿಸುವುದಲ್ಲದೆ, ಅತಿಸಾರ ಹಾಗೂ ಕೆಲವೊಮ್ಮೆ ಸಾವೂ ಸಂಭವಿಸಬಹುದು.[೯೮] ನಾಯಿ ವಂಶದ ಪ್ರಾಣಿಗಳಲ್ಲಿ ಸೊಂಟದ ಅತಿವೃದ್ಧಿ ಸೇರಿದಂತೆ ಇತರೆ ಪ್ರಾಣಿಗಳಲ್ಲಿ ಸಂಭವಿಸುವ ತಳೀಯ ರೋಗಗಳಂತೆ, ಗಿನಿಯಿಲಿಗಳಲ್ಲೂ ತಳೀಯ ಅಪಸಾಮಾನ್ಯತೆಗಳು ವರದಿಯಾಗಿವೆ. ಸರ್ವೇಸಾಮಾನ್ಯವಾಗಿ ಅಬಿಸಿನಿಯಾ ಗಿನಿಯಿಲಿಗಳ ಮಿಶ್ರವರ್ಣವು ಜನ್ಮಜಾತ ಕಣ್ಣಿನ ಅಪಸಾಮಾನ್ಯತೆ ಹಾಗೂ ಜೀರ್ಣವ್ಯವಸ್ಥೆಯ ತೊಂದರೆಗಳಿಗೆ ಸಂಬಂಧ ಹೊಂದಿದೆ.[೯೯] ಇತರೆ ತಳೀಯ ಅಸ್ವಸ್ಥತೆಗಳಲ್ಲಿ 'ವಾಲ್‌ಟ್ಸ್ ನೃತ್ಯದ ರೀತಿ ಚಲಿಸುವುದು' (ಕಿವುಡುತನ, ಜೊತೆಗೆ ವೃತ್ತಾಕಾರದಲ್ಲಿ ಓಡುವ ಪ್ರವೃತ್ತಿ), ಲಕ್ವ ಮತ್ತು ನಡುಕ ಸ್ಥಿತಿಗಳೂ ಸೇರಿವೆ.[೧೦೦]

ಸಾಕುಪ್ರಾಣಿಗಳಾಗಿ ಗಿನಿಯಿಲಿ

[ಬದಲಾಯಿಸಿ]
ಕೈಗಳಲ್ಲಿ ಎತ್ತಿಹಿಡಿಯಲಾದ ಗಿನಿಯಿಲಿ

ತಮ್ಮ ಜೀವನದ ಆರಂಭಕಾಲದಲ್ಲಿ ಬಹಳ ಸಮರ್ಪಕವಾಗಿ ಹಿಡಿದುಕೊಂಡಲ್ಲಿ, ಅವು ಒಗ್ಗಿಕೊಳ್ಳುವವು; ಆಗ ಅವು ಕಚ್ಚುವುದು ಅಥವಾ ಪರಚುವುದು ಅಪರೂಪ.[೫೪] ಅವು ಪುಕ್ಕಲು ಸ್ವಭಾವದ ಪ್ರಾಣಿಗಳಾಗಿದ್ದು, ಅವಕಾಶ ಸಿಕ್ಕರೂ ಸಹ ಅವು ಪಂಜರದಿಂದ ಹೊರಗೆ ತಪ್ಪಿಸಿಕೊಂಡು ಓಡಲು ಹಿಂಜರಿಯುತ್ತವೆ.[೪೭] ಆದರೂ, ಗಿನಿಯಿಲಿಗಳನ್ನು ವಿಶಿಷ್ಟವಾಗಿ ಪರಿಚಯದ ಮತ್ತು ಸುರಕ್ಷಿತ ಪ್ರದೇಶದಲ್ಲಿ ಸ್ವತಂತ್ರವಾಗಿ ಓಡಾಡಲು ಬಿಟ್ಟಲ್ಲಿ, ಅವು ಬಹಳಷ್ಟು ಕುತೂಹಲ ವ್ಯಕ್ತಪಡಿಸುತ್ತವೆ. ತಮ್ಮ ಮಾಲೀಕರೊಂದಿಗೆ ಹೆಚ್ಚು ಪರಿಚಯವುಂಟಾದ ನಂತರ ಮಾಲೀಕರು ಹತ್ತಿರ ಬರುತ್ತಿದ್ದಂತೆಯೇ ಅವು ಸಿಳ್ಳೆ ಹೊಡೆಯುತ್ತವೆ. ಸಾಮಾನ್ಯವಾಗಿ ಆಹಾರವನ್ನು ಶೇಖರಿಸಲಾದ ಪ್ಲ್ಯಾಸ್ಟಿಕ್‌ ಚೀಲ ಮತ್ತು ಶೈತ್ಯಾಗಾರ (ಫ್ರಿಜ್‌) ಬಾಗಿಲು ತೆರೆದ ಶಬ್ದ ಕೇಳಿಸಿದೊಡನೆ ಗಿನಿಯಿಲಿಗಳು ಸಿಳ್ಳೆ ಹೊಡೆಯುತ್ತವೆ. ಗಿನಿಯಿಲಿಗಳನ್ನು ಜೋಡಿಯಾಗಿಯೇ, ಅಥವಾ ಗುಂಪುಗಳಲ್ಲಿ ಕೂಡಿಸಬೇಕು. ಗಿನಿಯಿಲಿಯೊಂದಕ್ಕೆ ಯಾವುದಾದರೂ ವೈದ್ಯಕೀಯ/ಆರೋಗ್ಯ ಸಮಸ್ಯೆಯಿದ್ದಲ್ಲಿ ಮಾತ್ರ ಅದನ್ನು ಪ್ರತ್ಯೇಕವಾಗಿರಿಸಬೇಕು. ಏಕಾಂಗಿಯಾಗಿರುವ ಗಿನಿಯಿಲಿಗಳು ಒತ್ತಡ ಮತ್ತು ಖಿನ್ನತೆಯಿಂದ ಬಳಲಬಹುದು.[೧೦೧] ಈ ಕಾರಣಕ್ಕಾಗಿ, ಸ್ವೀಡೆನ್‌ ದೇಶದಲ್ಲಿ ಯಾವುದೇ ಗಿನಿಯಿಲಿ ಹೊಂದಿರದ ಕೊಳ್ಳುಗರಿಗೆ ಒಂಟಿ ಗಿನಿಯಿಲಿಯನ್ನು ಮಾರುವುದನ್ನು ನಿಷೇಧಿಸಲಾಗಿದೆ.[೧೦೨] ಗಂಡು ಗಿನಿಯಿಲಿಗಳನ್ನು ಒಂದೇ ಗುಂಪಿನಲ್ಲಿ ಕೂಡಿಸಲಾಗದು ಎಂಬ ಊಹೆ ತಪ್ಪು. ಚಿಕ್ಕ ವಯಸ್ಸಿನಲ್ಲೇ ಪರಸ್ಪರ ಪರಿಚಯಿಸಿದಲ್ಲಿ, ಗಂಡು ಗಿನಿಯಿಲಿಗಳು ಪರಸ್ಪರ ಮಿತ್ರತ್ವ ಬೆಳೆಸಿಕೊಳ್ಳಬಹುದು. ಸಾಮಾನ್ಯವಾಗಿ, ಸ್ಥಳಾವಕಾಶ ಅಥವಾ ಸಂಪನ್ಮೂಲ ತೀರಾ ಕಡಿಮೆಯಾದಲ್ಲಿ ಅಥವಾ ಗಂಡು ಗಿನಿಯಿಲಿಗಳ ಸಂಖ್ಯೆಗೆ ಪ್ರತಿಯಾಗಿ ಹೆಣ್ಣು ಗಿನಿಯಿಲಿಗಳ ಸಂಖ್ಯೆ ತೀರಾ ಕಡಿಮೆಯಿದ್ದಲ್ಲಿ ಮಾತ್ರ ಗಂಡು ಗಿನಿಯಿಲಿಗಳಲ್ಲಿ ಅಕ್ರಮಣಕಾರಿ ಅಥವಾ ಪೈಪೋಟಿಯ ಪ್ರವೃತ್ತಿ ವ್ಯಕ್ತವಾಗುವುದು. ಗಿನಿಯಿಲಿಗಳ ನಡುವಿನ ಹೊಂದಾಣಿಕೆಯು ಅವುಗಳ ಲಿಂಗಕ್ಕಿಂತಲೂ ಹೆಚ್ಚಾಗಿ ವ್ಯಕ್ತಿತ್ವವನ್ನು ಅವಲಂಬಿಸುವುದು.[೧೦೩]

ಯುರೋಪ್‌ ಮತ್ತು ಉತ್ತರ ಅಮೆರಿಕಾದಲ್ಲಿ ಪರಿಚಯಿಸಿದಾಗಿಂದಲೂ, ಪಳಗಿಸಲಾದ ಗಿನಿಯಿಲಿಗಳ ಹಲವು ತಳಿಗಳಿವೆ. ಈ ವಿವಿಧ ತಳಿಗಳಲ್ಲಿ ತುಪ್ಪುಳಿನ ಬಣ್ಣ ಮತ್ತು ಅದರ ಕೂದಲ ರಚನೆಯ ಪ್ರಕಾರ ವಿಭಿನ್ನತೆಗಳಿವೆ. ಸಾಕುಪ್ರಾಣಿಗಳನ್ನು ಮಾರುವ ಅಂಗಡಿಗಳಲ್ಲಿ ಇಂಗ್ಲಿಷ್‌ ಷಾರ್ಟ್‌ಹೇರ್ (ಅಮೆರಿಕನ್‌ ಎಂದೂ ಹೇಳಲಾದ)‌ ತಳಿಯು ಸರ್ವೇಸಾಮಾನ್ಯ. ಇವುಗಳದ್ದು ಕಡಿಮೆ ಉದ್ದದ, ನುಣುಪಾದ ತುಪ್ಪುಳು, ಹಾಗೂ ಅಬಿಸಿನಿಯನ್‌ ತಳಿಯ ತುಪ್ಪುಳು ಕೌಲಿಕ್ಸ್‌ ಅಥವಾ ರೊಸೆಟ್ಸ್‌ ಒಂದಿಗೆ ಗರಿಗೆದರಿರುತ್ತವೆ. ಗಿನಿಯಿಲಿ ಸಾಕಣೆಗಾರರಲ್ಲಿ ಪೆರುವಿಯನ್‌ ಮತ್ತು ಷೆಲ್ಟೀ (ಅಥವಾ ಸಿಲ್ಕೀ) ತಳಿಗಳು ಬಹಳ ಜನಪ್ರಿಯವಾಗಿವೆ. ಎರಡೂ ತಳಿಗಳದ್ದು ಉದ್ದನೆಯ ಕೂದಲುಗಳಿವೆ. ಟೆಕ್ಸೆಲ್‌ ತಳಿಯು ಗುಂಗುರಿನ, ಉದ್ದನೆಯ ಕೂದಲು ಹೊಂದಿದೆ.

ಗಿನಿಯಿಲಿಗಳ ಪ್ರದರ್ಶನ ಮತ್ತು ಸಾಕಣೆಗಾಗಿ ಮುಡಿಪಾಗಿಟ್ಟ 'ಕೇವಿ ಕ್ಲಬ್ಸ್‌ ಅಂಡ್‌ ಅಸೊಸಿಯೇಷನ್ಸ್'‌ ವಿಶ್ವದೆಲ್ಲೆಡೆ ಸ್ಥಾಪಿಸಲಾಗಿವೆ. ಅಮೆರಿಕನ್‌ ಮೊಲ ಸಾಕಣೆಗಾರರ ಸಂಘದ ಅನುಷಂಗವಾದ ಅಮೆರಿಕನ್ ಕೇವಿ ಸಾಕಣೆಗಾರರ ಸಂಘವು, ಅಮೆರಿಕಾ ಸಂಯುಕ್ತ ಸಂಸ್ಥಾನ ಮತ್ತು ಕೆನಡಾ ದೇಶಗಳಲ್ಲಿ ಗಿನಿಯಿಲಿ ಸಾಕಣೆಗಾರರ ಆಡಳಿತ ವ್ಯವಸ್ಥೆಯಾಗಿದೆ.[೧೦೪] ಯುನೈಟೆಡ್‌ ಕಿಂಗ್ಡಮ್‌ನಲ್ಲಿ, ಬ್ರಿಟಿಷ್‌ ಕೇವಿ ಪರಿಷತ್‌ ಯುನೈಟೆಡ್ ಕಿಂಗ್ಡಮ್‌ನಲ್ಲಿನ ಎಲ್ಲಾ ಕೇವಿಗಳ ಆಡಳಿತ ನಿರ್ವಹಿಸುತ್ತದೆ. ಇದೇ ರೀತಿಯ ಸಂಘಗಳು ಆಸ್ಟ್ರೇಲಿಯಾ (ಆಸ್ಟ್ರೇಲಿಯನ್ ರಾಷ್ಟ್ರೀಯ ಕೇವಿ ಪರಿಷತ್‌) [೧೦೫] ಮತ್ತು ನ್ಯೂಜೀಲೆಂಡ್ (ನ್ಯೂಜೀಲೆಂಡ್‌ ಕೇವಿ ಕ್ಲಬ್) ದೇಶಗಳಲ್ಲಿವೆ.[೧೦೬] ಪ್ರತಿಯೊಂದು ಕ್ಲಬ್ ತನ್ನದೇ ಆದ ಪರಿಪೂರ್ಣತಾ ಪ್ರಮಾಣಿತವನ್ನು ಪ್ರಕಟಿಸಿ, ಯಾವ ತಳಿಗಳು ಪ್ರದರ್ಶನೀಯ ಎಂಬುದನ್ನು ನಿರ್ಣಯಿಸುತ್ತದೆ.

ಸಾಂಸ್ಕೃತಿಕ ಮತ್ತು ಮಾಧ್ಯಮ ಪ್ರಭಾವ

[ಬದಲಾಯಿಸಿ]
ನಸುಪಾಟಲ - ಊದಾ ಹಾಗೂ ಬಿಳಿಯ ಬಣ್ಣದ ಸ್ಯಾಟಿನ್‌ ಪೆರುವಿಯನ್‌ ಗಿನಿಯಿಲಿ (ಉದ್ದನೆಯ ತುಪ್ಪುಳು)

ಮಾನವನ ದೈನಿಕ ಜೀವನದಲ್ಲಿ ಗಿನಿಯಿಲಿಗಳ ವ್ಯಾಪಕ ಜನಪ್ರಿಯತೆಯಿಂದಾಗಿ, ಅದರಲ್ಲೂ ವಿಶಿಷ್ಟವಾಗಿ ಮಕ್ಕಳೊಂದಿಗಿನ ಜನಪ್ರಿಯತೆಯ ಫಲವಾಗಿ, ಗಿನಿಯಿಲಿಗಳು ಸಂಸ್ಕೃತಿ ಮತ್ತು ಮಾಧ್ಯಮದಲ್ಲಿ ತಮ್ಮ ಸ್ಥಾನಮಾನ ಕಲ್ಪಿಸಿಕೊಂಡಿವೆ. ಸಾಹಿತ್ಯದಲ್ಲಿ ಈ ಪ್ರಾಣಿಯ ಗಮನಾರ್ಹ ಪಾತ್ರಗಳೆಂದರೆ, ಬೀಟ್ರಿಕ್ಸ್‌ ಪೊಟರ್‌ರ ಕಾದಂಬರಿ ದಿ ಫೇಯ್ರಿ ಕ್ಯಾರವಾನ್‌ ,[೧೦೭] ಹಾಗೂ ಮಕ್ಕಳಿಗಾಗಿ ಮೈಕಲ್‌ ಬಾಂಡ್‌ರ ಸರಣಿ ಒಲ್ಗಾ ಡಾ ಪೊಲ್ಗಾ,[೧೦೮] ಇವೆರಡರಲ್ಲೂ ಗಿನಿಯಿಲಿಗಳದು ಕೇಂದ್ರೀಯ ಮುಖ್ಯಪಾತ್ರವಾಗಿವೆ. ಸಿ. ಎಸ್. ಲೂಯಿಸ್‌ರ ದಿ ಕ್ರಾನಿಕಲ್ಸ್‌ ಆಫ್‌ ನರ್ನಿಯಾ ಸರಣಿಯ ಮೊದಲ ಕಂತು ದಿ ಮೆಜಿಷಿಯನ್ಸ್‌ ನೆವ್ಯೂ ದಲ್ಲಿ ಗಿನಿಯಿಲಿಯು ವುಡ್ ಬಿಟ್ವೀನ್‌ ದಿ ವರ್ಲ್ಡ್ಸ್‌‌ಗೆ ಪಯಣಿಸುವ ಮೊದಲ ಜೀವಿಯಾಗಿದೆ.[೧೦೯] ಎಲ್ಲಿಸ್‌ ಪಾರ್ಕರ್‌ ಬಟ್ಲರ್‌ ರಚಿಸಿದ ಕಿರುಕಥೆ ಪಿಗ್ಸ್‌ ಇಸ್‌ ಪಿಗ್ಸ್ ‌ ಎಂಬುದು ಅಧಿಕಾರಿಶಾಹಿಯ ಅಸಮರ್ಥತೆಯ ಕಥೆಯಾಗಿದೆ. ಸರಕು ಸಾಗಣೆ ಶುಲ್ಕ ವಿಧಿಸುವ ಸಲುವಾಗಿ ಮನುಷ್ಯರು 'ಅವು ಹಂದಿಗಳೇ' ಎಂಬ ಪ್ರಶ್ನೆಯ ಬಗ್ಗೆ ವಾಗ್ವಾದ ಮಾಡುತ್ತಿದ್ದಾಗಲೇ, ರೈಲು ನಿಲ್ದಾಣದಲ್ಲಿ ಎರಡು ಗಿನಿಯಿಲಿಗಳು ಈಯುವುದು ಗಮನಕ್ಕೆ ಬರುವುದಿಲ್ಲ.[೧೧೦] ಸರದಿಯಲ್ಲಿ ಬಟ್ಲರ್‌ರ ಕಥೆಯು, ಡೇವಿಡ್‌ ಗೆರೊಲ್ಡ್‌ ರಚಿಸಿದ ದಿ ಟ್ರಬಲ್‌ ವಿತ್‌ ಟ್ರಿಬಲ್ಸ್‌ ಎಂಬ ಕಂತಿಗೆ Star Trek: The Original Series ಪ್ರೇರಣೆಯಾಯಿತು.[೧೧೧] ಗೊಲ್ಡನ್‌ ಹ್ಯಾಂಸ್ಟರ್‌ ಸಾಗಾ ಗ್ರಂಥಗಳಲ್ಲಿ, ಎನ್ರಿಕೊ ಮತ್ತು ಕರುಸೊ ಎಂಬ ಎರಡು ಗಿನಿಯಿಲಿಗಳಿವೆ. ಇವೆರಡೂ ಆಧುನಿಕ ಕಾಲದ ನಟ-ಪಾತ್ರಗಳು (ಇವು ಎನ್ರಿಕೊ ಕೆರುಸೊ ಎಂಬ ನಟನ ಹೆಸರನ್ನು ಹಂಚಿ ಪಡೆದಿವೆ) ಇವೆರಡು ಪಾತ್ರಗಳು ಆನುಷಂಗಿಕ ಪಾತ್ರಗಳಾಗಿದ್ದು, ಪ್ರಮುಖ ಪಾತ್ರ ಫ್ರೆಡಿ ಔರಟಸ್‌ನನ್ನು ಅಣಕವಾಡಿ ರೇಗಿಸುತ್ತವೆ. ಫ್ರೆಡ್ಡಿ ಅವುಗಳ ನಟನಾ ಅಣಕನ್ನು ಇಷ್ಟಪಟ್ಟಿರುವುದಿಲ್ಲ.

ಗಿನಿಯಿಲಿಗಳನ್ನು ಚಲನಚಿತ್ರಗಳು ಹಾಗೂ ಕಿರುತೆರೆಯ ಕಾರ್ಯಕ್ರಮಗಳಲ್ಲಿಯೂ ನಿರೂಪಿಸಲಾಗಿದೆ. ಷ್ರೆಡರ್ಮನ್‌ ರೂಲ್ಸ್‌ ಎಂಬ ಕಿರುತೆರೆಯ ಚಲನಚಿತ್ರದಲ್ಲಿ, ಮುಖ್ಯಪಾತ್ರ ಹಾಗೂ ಮುಖ್ಯಪಾತ್ರದ ವ್ಯಾಮೋಹ ವ್ಯಕ್ತಿ ಇವೆರಡೂ ಪಾತ್ರಗಳು ಗಿನಿಯಿಲಿಗಳನ್ನು ಹೊಂದಿರುತ್ತವೆ. ಈ ಚಲನಚಿತ್ರದಲ್ಲಿ ಗಿನಿಯಿಲಿಗಳದ್ದು ಚಿಕ್ಕ ಪಾತ್ರಗಳಾಗಿರುತ್ತವೆ. ಕ್ರಿಸ್‌ ರಾಕ್‌ ಎಂಬವರು ಧ್ವನಿದಾನ ಮಾಡಿದ್ದ ರೊಡ್ನಿ ಎಂಬ ಹೆಸರಿನ ಗಿನಿಯಿಲಿಯು, 1998ರಲ್ಲಿ ತೆರೆಕಂಡ ಡಾಕ್ಟರ್‌ ಡೂಲಿಟ್ಲ್ ‌ ಎಂಬ ಜನಪ್ರಿಯ ಚಲನಚಿತ್ರದಲ್ಲಿ ಪ್ರಮುಖ ಪಾತ್ರವಾಗಿತ್ತು. ಲಿನ್ನಿ ದಿ ಗಿನಿಪಿಗ್‌ (ಲಿನ್ನಿ ಗಿನಿಯಿಲಿ) ನಿಕ್‌ ಜೂನಿಯರ್‌ರ ವಂಡರ್ ಪೆಟ್ಸ್‌ ನಲ್ಲಿ ಸಹಪಾತ್ರವಾಗಿತ್ತು. 1990ರ ಹಾಗೂ 2000ದ ದಶಕಗಳಲ್ಲಿ ಕೆಲವು ಪ್ರಮುಖ ಜಾಹೀರಾತು ಪ್ರಚಾರಗಳಲ್ಲಿ ಗಿನಿಯಿಲಿಗಳನ್ನು ಬಳಸಲಾಯಿತು. ಇದರಲ್ಲಿ ವಿಶಿಷ್ಟವಾಗಿ ಎಗ್‌ ಬ್ಯಾಂಕಿಂಗ್‌ ಪಿಎಲ್‌ಸಿ,[೧೧೨] ಸ್ನ್ಯಾಪಲ್‌ ಹಾಗೂ ಬ್ಲಾಕ್ಬಸ್ಟರ್‌ ವೀಡಿಯೊಗಾಗಿ ಗಿನಿಯಿಲಿಗಳನ್ನು ಬಳಸಲಾಯಿತು.[೧೧೩] ಗಿನಿಯಿಲಿ ತಜ್ಞರ ಪ್ರಕಾರ, ಅವನ್ನು ಮೊಲಗಳೊಂದಿಗೆ ಒಟ್ಟಿಗೆ ಕೂಡಿಸುವುದರ ಹಿಂದೆ ಈ ಬ್ಲಾಕ್ಬಸ್ಟರ್‌ ಅಭಿಯಾನವೇ ಮುಖ್ಯ ಕಾರಣ.[೫೦] ಸೌತ್‌ ಪಾರ್ಕ್‌ ಸರಣಿಯ 12ನೆಯ ಋತುವಿನ 'Pandemic 2: The Startling' ಕಂತಿನಲ್ಲಿ, ವೇಷಭೂಷಣಧಾರಿ ದೈತ್ಯ ಗಿನಿಯಿಲಿಗಳು ಭೂಮಿಯಲ್ಲಿ ರಭಸದಿಂದ ಓಡಾಡುತ್ತವೆ.[೧೧೪] 2009ರಲ್ಲಿ ತೆರೆಕಂಡ, ವಾಲ್ಟ್‌ ಡಿಸ್ನಿ ಪಿಕ್ಚರ್ಸ್‌ ನಿರ್ಮಾಣದ ಚಲನಚಿತ್ರ ಜಿ-ಫೊರ್ಸ್‌ನಲ್ಲಿ, ಬಹಳಷ್ಟು ಬದ್ಧಿವಂತಿಕೆಯುಳ್ಳ ಗಿನಿಯಿಲಿಗಳ ಗುಂಪು ಅಮೆರಿಕಾ ಸಂಯುಕ್ತ ಸಂಸ್ಥಾನದ ಸರ್ಕಾರದ ಖಾಸಗಿ ಪತ್ತೆದಾರ ಪಾತ್ರಗಳನ್ನು ವಹಿಸುತ್ತವೆ. ಈ ಚಲನಚಿತ್ರವನ್ನು ಆಧರಿಸಿ, ವಿನ್ಯಾಸಿಸಲಾದ ವೀಡಿಯೊ ಆಟವನ್ನು ಬಿಡುಗಡೆಗೊಳಿಸಲಾಯಿತು. ಇದೂ ಸಹ ಬಹಳ ಜನಪ್ರಿಯವಾಯಿತು.

ವೈಜ್ಞಾನಿಕ ಸಂಶೋಧನೆ

[ಬದಲಾಯಿಸಿ]
ಪಶುವೈದ್ಯರು ಗಿನಿಯಿಲಿಯೊಂದರ ಒಟ್ಟಾರೆ ಆರೋಗ್ಯ ಮತ್ತು ಶ್ವಾಸಕೋಶ ತಪಾಸಣೆ ನಡೆಸುತ್ತಿರುವುದು.

ವೈಜ್ಞಾನಿಕ ಪ್ರಯೋಗಗಳಲ್ಲಿ ಗಿನಿಯಿಲಿಗಳ ಬಳಕೆಯು ಸುಮಾರು 17ನೆಯ ಶತಮಾನದಷ್ಟು ಹಿಂದಿನ ಕಾಲದಿಂದಲೂ ರೂಢಿಯಲ್ಲಿದೆ. ಅಂದು ಇಟ್ಯಾಲಿಯನ್‌ ಜೀವವಿಜ್ಞಾನಿಗಳಾದ ಮಾರ್ಸೆಲೊ ಮಾಲ್ಫಿಗಿ ಮತ್ತು ಕಾರ್ಲೊ ಫ್ರಾಕ್ಯಸಟಿ ಗಿನಿಯಿಲಿಗಳ ಸಜೀವಚ್ಛೇದನ ಮಾಡಿ ಅಂಗರಚನೆಗಳನ್ನು ವಿಶ್ಲೇಷಿಸಿದರು.[೧೧೫] 1780ರಲ್ಲಿ, ಅಂಟೊಯ್ನ್‌ ಲವಾಸಿಯೆ ಗಿನಿಯಿಲಿಯನ್ನು ಬಳಸಿ, ಶಾಖದ ಉತ್ಪನ್ನ ಮಾಪಿಸುವ ಕ್ಯಾಲರಿಮೀಟರ್‌ ಎಂಬ ಉಪಕರಣದೊಂದಿಗೆ ಪ್ರಯೋಗಗಳನ್ನು ನಡೆಸಿದರು. ಗಿನಿಯಿಲಿಯ ಉಸಿರಾಟದಿಂದ ಹೊರಬಂದ ಶಾಖವು ಕ್ಯಾಲರಿಮೀಟರ್‌ನ ಸುತ್ತಲಿದ್ದ ಇಬ್ಬನಿಯನ್ನು ಕರಗಿಸಿತು. ಇದರಿಂದಾಗಿ, ಮೇಣದ ಬತ್ತಿ ಉರಿಯುವಂತೆ, ಉಸಿರಾಟದ ಸಮಯ ಅನಿಲ ವಿನಿಮಯ ಪ್ರಕ್ರಿಯೆಯು ದಹನ ಕ್ರಿಯೆ ಎಂದು ತೋರಿಸುತ್ತದೆ.[೧೧೬] 19ನೆಯ ಶತಮಾನದ ಅಪರಾರ್ಧದಲ್ಲಿ, ಲೂಯಿ ಪ್ಯಾಶ್ಚರ್‌, ಎಮಿಲ್ ರೂ ಹಾಗೂ ರಾಬರ್ಟ್‌ ಕೋಚ್‌ ಗಿನಿಯಿಲಿಗಳನ್ನು ಪ್ರಯೋಗಗಳಲ್ಲಿ ಬಳಸುವ ಮೂಲಕ, ಸೂಕ್ಸ್ಮಜೀವಿ ಸಿದ್ಧಾಂತಕ್ಕೆ ದೃಢ ಆಧಾರ ನೀಡಿದರು.[೧೧೭] ಹಲವು ಬಾರಿ, ಗಿನಿಯಿಲಿಗಳನ್ನು ಕಕ್ಷೆಯ ಪಥದ ಬಾಹ್ಯಾಕಾಶ ಉಡ್ಡಯನಗಳಲ್ಲಿ ಕಳುಹಿಸಲಾಗಿದೆ. ಮೊದಲಿಗೆ 1961ರ ಮಾರ್ಚ್‌ 9ರಂದು, ಅಂದಿನ ಸೊವಿಯತ್‌ ಸಮಾಜವಾದಿ ಗಣರಾಜ್ಯ ಒಕ್ಕೂಟ (ಯುಎಸ್‌ಎಸ್‌ಆರ್‌) ದೇಶವು ಹಾರಿಸಿದ ಸ್ಪೂಟ್ನಿಕ್‌ 9 ಜೈವಿಕ ಉಪಗ್ರಹದಲ್ಲಿ ಗಿನಿಯಿಲಿಯನ್ನು ಕಳುಹಿಸಲಾಯಿತು. ವಾಪಸಾದ ನಂತರ ಗಿನಿಯಿಲಿ ಯಶಸ್ವಿಯಾಗಿ ಚೇತರಿಸಿಕೊಂಡಿವೆ.[೧೧೮] ಚೀನಾ ಸಹ 1990ರಲ್ಲಿ ಗಿನಿಯಿಲಿಗಳುಳ್ಳ ಜೈವಿಕ ಉಪಗ್ರಹವನ್ನು ಉಡ್ಡಯನ ಮಾಡಿ ಅದನ್ನು ಸಫಲವಾಗಿ ಭೂಮಿಗೆ ಹಿಂದಿರುಗಿಸಿಕೊಂಡದ್ದೂ ಉಂಟು.[೧೧೯]

ತನ್ನ ಅರ್ಬುದರೋಗ-ಕಾರಕ ಗುಣಲಕ್ಷಣಗಳನ್ನು ಪರೀಕ್ಷಿಸಲೆಂದು ರಾಸಾಯನಿಕ ವಸ್ತುವೊಂದನ್ನು ಗಿನಿಯಿಲಿಗೆ ಚುಚ್ಚುತ್ತಿರುವುದು.

ಇಂಗ್ಲಿಷ್‌ ಭಾಷೆಯಲ್ಲಿ, ಗಿನಿಯಿಲಿ ಎಂಬ ಉಕ್ತಿಯನ್ನು ಸಾಮಾನ್ಯವಾಗಿ ವೈಜ್ಞಾನಿಕ ಪ್ರಯೋಗಗಳ ವಿಷಯಕ್ಕೆ ರೂಪಕೋಕ್ತಿಯಾಗಿ ಬಳಸಲಾಗಿದೆ. ಇದು 20ನೆಯ ಶತಮಾನದ ಪೂರ್ವಾರ್ಧದಷ್ಟು ಹಿಂದಿನ ಕಾಲದ್ದಾಗಿದೆ; ಈ ರೀತಿ ಮೊದಲ ಬಾರಿಗೆ 1913ರಲ್ಲಿ ಬಳಸಲಾಯಿತು ಎಂದು ಅಕ್ಸ್‌ಫರ್ಡ್‌ ಇಂಗ್ಲಿಷ್‌ ಡಿಕ್ಷನರಿ ಶಬ್ದಕೋಶದಲ್ಲಿ ಉಲ್ಲೇಖಿಸಲಾಗಿದೆ.[೧೨೦] 1933ರಲ್ಲಿ, ಕನ್ಸೂಮರ್ಸ್‌ ರಿಸರ್ಚ್‌ ಸಂಸ್ಥಾಪಕರಾದ ಎಫ್‌. ಜೆ. ಷ್ಲಿಂಕ್‌ ಮತ್ತು ಆರ್ಥರ್‌ ಕ್ಯಾಲೆಟ್‌, 100,000,000 ಗಿನಿಪಿಗ್ಸ್‌ ಎಂಬ ಶಿರೋನಾಮೆಯ ಗ್ರಂಥವನ್ನು ಬರೆದರು. ಇದರ ರೂಪಕೋಕ್ತಿಯನ್ನು ಗ್ರಾಹಕ ಸಮುದಾಯಕ್ಕೆ ವಿಸ್ತರಿಸಿದರು.[೧೨೧] ಈ ಗ್ರಂಥವು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ರಾಷ್ಟ್ರಾದ್ಯಂತ ಅತಿಹೆಚ್ಚು ಮಾರಾಟವಾದ ಕೃತಿಯಾಯಿತು. ಇದರಿಂದಾಗಿ ಈ ಉಕ್ತಿಗೆ ಮತ್ತಷ್ಟು ಜನಪ್ರಿಯತೆ ದೊರಕಿ, ಗ್ರಾಹಕ ರಕ್ಷಣಾ ಚಳುವಳಿಯ ಬೆಳವಣಿಗೆಗೆ ಇನ್ನಷ್ಟು ಉತ್ತೇಜನ ಸಿಕ್ಕಿತು.[೧೨೨] ಸೊವಿಯತ್‌ ಸಂಘದ ಸರ್ವಾದಿಕಾರ ಪ್ರಭುತ್ವದ ಅನ್ಯೋಕ್ತಿಯಾಗಿ, ಚೆಕ್‌ ಲೇಖಕ ಲುಡ್ವಿಕ್‌ ವ್ಯಾಕುಲಿಕ್ರ‌ ದಿ ಗಿನಿಪಿಗ್ಸ್ ‌ ಎಂಬ ಗ್ರಂಥದಲ್ಲಿ ಈ ಉಕ್ತಿಯ ನಕಾರಾತ್ಮಕ ಅಧಿಕಾರ್ಥತೆಯನ್ನು ಬಳಸಲಾಯಿತು.[೧೨೩]

20ನೆಯ ಶತಮಾನದ ಅಪರಾರ್ಧದ ತನಕ, ಪ್ರಯೋಗಾಲಯ ಪ್ರಾಣಿಗಳನ್ನಾಗಿ ಗಿನಿಯಿಲಿಗಳನ್ನು ವ್ಯಾಪಕವಾಗಿ ಬಳಸಲಾಯಿತು. 1960ರ ದಶಕದಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಪ್ರತಿವರ್ಷ ಸುಮಾರು 2.5 ದಶಲಕ್ಷ ಗಿನಿಯಿಲಿಗಳನ್ನು ಬಳಸಲಾಗುತ್ತಿತ್ತು.[೧೨೪] ಆದರೆ, 1990ರ ದಶಕದ ಮಧ್ಯದಲ್ಲಿ ಈ ಸಂಖ್ಯೆಯು 375,000ದಷ್ಟಕ್ಕೆ ಇಳಿದಿತ್ತು.[೫೪] 2007ರಲ್ಲಿ, ಪ್ರಯೋಗಾಲಯಗಳಲ್ಲಿ ಬಳಸಲಾದ ಪ್ರಾಣಿಗಳ ಪೈಕಿ ಕೇವಲ 2%ರಷ್ಟು ಗಿನಿಯಿಲಿಗಳಾಗಿದ್ದವು.[೧೨೪] ಹಿಂದೆ, ಚುಚ್ಚುಮದ್ದುಗಳು ಮತ್ತು ವೈರಸ್‌-ರೋಧಕಗಳನ್ನು ಪ್ರಮಾಣಿತಗೊಳಿಸಲು ಗಿನಿಯಿಲಿಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿತ್ತು. ತೀವ್ರ ಅತಿಸೂಕ್ಷ್ಮ ಪ್ರತಿಕ್ರಿಯೆಗೆ ಪ್ರತ್ಯುತ್ತರವಾಗಿ ಪ್ರತಿಜೀವಕಗಳ ಉತ್ಪಾದನೆ, ಅಥವಾ ಅತಿಸಂವೇದನಶೀಲತೆಯ ಬಗ್ಗೆ ಅಧ್ಯಯನಗಳಲ್ಲಿ ಗಿನಿಯಿಲಿಗಳನ್ನು ಆಗಾಗ್ಗೆ ಬಳಸಲಾಗುತ್ತಿತ್ತು.[೧೨೫] ಔಷಧಶಾಸ್ತ್ರ ಮತ್ತು ವಿಕಿರಣಗಳಿಗೆ ಗುರಿಪಡಿಸುವಿಕೆಯ ಅಧ್ಯಯನ ಸೇರಿದಂತೆ, ಗಿನಿಯಿಲಿಗಳ ಇತರೆ ಅಪರೂಪದ ಬಳಕೆಗಳುಂಟು.[೧೨೫] 20ನೆಯ ಶತಮಾನದ ಮಧ್ಯದಿಂದಲೂ, ಪ್ರಯೋಗಾಲಯಗಳಲ್ಲಿ ಗಿನಿಯಿಲಿಗಳ ಬದಲಿಗೆ ಹೆಗ್ಗಣಗಳು ಮತ್ತು ಇಲಿಗಳನ್ನು ಬಳಸಲಾಗಿದೆ. ಇತರೆ ದಂಶಕಗಳಿಗೆ ಹೋಲಿಸಿದರೆ, ಗಿನಿಯಿಲಿಗಳ ತಳೀಯ ಸಂಶೋಧನೆಯ ನಿರೀಕ್ಷಿತ ಹಂತಕ್ಕೆ ಮುಂದುವರೆದಿಲ್ಲ ಎಂಬುದು ಇದಕ್ಕೆ ಭಾಗಶಃ ಕಾರಣವಾಗಿದೆ. ಆದರೂ, ತಳೀಯವಿಜ್ಞಾನಿಗಳಾದ ಡಬ್ಲ್ಯೂ. ಇ. ಕ್ಯಾಸ್ಲ್‌ ಮತ್ತು ಸೆವಾಲ್‌ ರೈಟ್‌ ಅಧ್ಯಯನದ ಈ ಕ್ಷೇತ್ರಕ್ಕೆ, ಅದರಲ್ಲೂ ವಿಶಿಷ್ಟವಾಗಿ ಗಿನಿಯಿಲಿಗಳ ತುಪ್ಪುಳು ಬಣ್ಣದ ಅಧ್ಯಯನಕ್ಕಾಗಿ ಬಹಳಷ್ಟು ಕೊಡುಗೆ ನೀಡಿದರು.[೧೦೦][೧೨೬] 2004ರಲ್ಲಿ, ಅಮೆರಿಕಾ ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಮಾನವ ಜಿನೊಮ್‌ ಅಧ್ಯಯನ ಸಂಸ್ಥೆಯು, ಸಾಕಲಾದ ಗಿನಿಯಿಲಿಯ ಜಿನೊಮ್‌ನ್ನು ಅನುಕ್ರಮ ಮಾಡುವ ಯೋಜನೆಯನ್ನು ಘೋಷಿಸಿತು.[೧೨೭]

ಸಾಂಕ್ರಾಮಿಕ ರೋಗಗಳ ರೋಗನಿರ್ಣಯ ಮತ್ತು ಸಂಶೋಧನೆಯಲ್ಲಿ ಗಿನಿಯಿಲಿಯನ್ನು ವಿಸ್ತಾರವಾಗಿ ಬಳಸಲಾಯಿತು.[೧೨೫] ಸಾಮಾನ್ಯ ಬಳಕೆಗಳಲ್ಲಿ ಬ್ರುಸೆಲಾ ಬೇನೆ, ಚಾಗಾಸ್‌ ರೋಗ, ಕಾಲರಾ, ಗಳಚರ್ಮ ರೋಗ, ಕಾಲು-ಬಾಯಿ ಜ್ವರ, ಕುದುರೆ ಸಿಂಬಳ ರೋಗ, ಕ್ಯೂ ಜ್ವರ, ರಾಕಿ ಪರ್ವತ ಚುಕ್ಕೆ ಜ್ವರ ಹಾಗೂ ಟೈಫಸ್‌‌ ರೋಗದ ವಿವಿಧ ತಳಿಗಳ ರೋನಿರ್ಣಯಗಳೂ ಸೇರಿದ್ದವು.[೧೨೫] ಮಾನವನ ಕ್ಷಯರೋಗದ ಬ್ಯಾಕ್ಟೀರಿಯಾ ಗಿನಿಯಿಲಿಗಳನ್ನು ಬಹಳ ಸುಲಭವಾಗಿ ಸೋಂಕಿಸುತ್ತದೆ. ಆದ್ದರಿಂದ ಕ್ಷಯರೋಗ ನಿರ್ಣಯಿಸಲು ಇಂದೂ ಸಹ ಆಗಾಗ್ಗೆ ಅವನ್ನು ಬಳಸಲಾಗುತ್ತಿದೆ.[೧೨೪] ಮಾನವನಂತೆಯೇ ಗಿನಿಯಿಲಿಗಳೂ ಸಹ 'ಸಿ' ಜೀವಸತ್ತ್ವವನ್ನು ಸಂಶ್ಲೇಷಿಸಲಾಗದೆ ಅವು ತಿನ್ನುವ ಆಹಾರದಿಂದ ಪಡೆಯಬೇಕಾದ ಅಗತ್ಯವಿದೆ. ಈ ಕಾರಣಕ್ಕಾಗಿ, ರಕ್ತ ಪಿತ್ತ ವ್ಯಾಧಿಯನ್ನು ಅಧ್ಯಯನ ಮಾಡಲು ಗಿನಿಯಿಲಿಯು ಸೂಕ್ತ ಪ್ರಾಣಿಯಾಗಿದೆ.[೧೨೪] ರಕ್ತ ಪಿತ್ತ ವ್ಯಾಧಿಯನ್ನು ಗಿನಿಯಿಲಿಗಳಿಗೆ ಸೋಂಕಿಸಬಹುದು ಎಂಬುದನ್ನು 1907ರಲ್ಲಿ ಅಕಸ್ಮಾತಾಗಿ ಪರಿಶೋಧಿಸಿದ್ದರಿಂದ ಹಿಡಿದು, 1932ರಲ್ಲಿ ಅಸ್ಕಾರ್ಬ್ಯುಟಿಕ್‌ ಅಂಶದ ರಾಸಾಯನಿಕ ರಚನೆಯನ್ನು ನಿರ್ಣಯಿಸಲು ಅವುಗಳ ಬಳಕೆಯ ವರೆಗೆ, ಸಿ ಜೀವಸತ್ತ್ವದ ಸಂಶೋಧನೆಯಲ್ಲಿ ಗಿನಿಯಿಲಿ ಮಾದರಿಯು ಮಹತ್ವ ಪಾತ್ರ ವಹಿಸಿದೆ.[೧೨೮][೧೨೯] ಸೀರಮ್‌ ಶಾಸ್ತ್ರದಲ್ಲಿ ಬಹಳ ಮುಖ್ಯ ಅಂಶವಾದ ಕಾಂಪ್ಲೆಮೆಂಟ್‌ನ್ನು ಗಿನಿಯಿಲಿಯ ರಕ್ತದಿಂದ ಪ್ರತ್ಯೇಕಿಸಲಾಯಿತು.[೧೨೪] ಗಿನಿಯಿಲಿಯಲ್ಲಿ ಅಸಾಮಾನ್ಯವಾದ ಇನ್ಸುಲಿನ್‌ ನವವಿಕೃತಿಯಿದೆ.[೧೩೦] ಇದರಿಂದಾಗಿ, ಇನ್ಸುಲಿನ್-ರೋಧಕ ಪ್ರತಿಜೀವಕಗಳನ್ನು ಉತ್ಪಾದಿಸಲು ಗಿನಿಯಿಲಿಯು ಸೂಕ್ತ ಪ್ರಾಣಿಯಾಗಿದೆ.[೧೩೧] ಇತರೆ ಪ್ರಾಣಿಗಳಿಗೆ ಹೋಲಿಸಿದರೆ, ಗಿನಿಯಿಲಿಗಳಲ್ಲಿ ಇನ್ಸುಲಿನ್‌ ಮಟ್ಟವು 10 ಪಟ್ಟು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಬೆಳವಣಿಗೆಯ ಹಾರ್ಮೊನ್‌ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಆದರೆ, ಗಿನಿಯಿಲಿಗಳಲ್ಲಿ ಬೆಳವಣಿಗೆ ನಿಯಂತ್ರಿಸುವಲ್ಲಿ ಇನ್ಸುಲಿನ್‌ ಬಹಳ ಮುಖ್ಯ ಪಾತ್ರವಹಿಸುತ್ತದೆ.[೧೩೨] ಇನ್ನೂ ಹೆಚ್ಚಿಗೆ, ಕಿರಿವಯಸ್ಕ ಮಧುಮೇಹದ ಅಧ್ಯಯನಕ್ಕಾಗಿ ಗಿನಿಯಿಲಿಗಳನ್ನು ಮಾದರಿ ಜೀವಿಗಳು ಎಂದು ಗುರುತಿಸಲಾಗಿದೆ. ಅಲ್ಲದೆ ಮಹಿಳೆಯಲ್ಲಿ ಬಸುರಿನ ನಂಜಿನ ಗರ್ಭ ನೆತ್ತರು ನಂಜಿನ ಸಾಧ್ಯತೆ ಹೆಚ್ಚಾಗಿರುವುದರಿಂದ ಗಿನಿಯಿಲಿಗಳನ್ನು ಅಧ್ಯಯನ ಮಾಡಿ ಈ ನಿರ್ಣಯಕ್ಕೆ ಬರಬಹುದಾಗಿದೆ.[೬೬]

ವೈಜ್ಞಾನಿಕ ಸಂಶೋಧನೆಯಲ್ಲಿ ಬಳಸಲಾದ ಗಿನಿಯಿಲಿ ತಳಿಗಳು ಪ್ರಾಥಮಿಕವಾಗಿ ಮಿಶ್ರಕುಲದಲ್ಲಿ ಹುಟ್ಟಿದ ತಳಿಗಳಾಗಿರುತ್ತವೆ. ಸಾಮಾನ್ಯವಾದ ಅಮೆರಿಕನ್‌ ಅಥವಾ ಇಂಗ್ಲಿಷ್‌ ತಳಿಗಳ ಹೊರತುಪಡಿಸಿ, ಪ್ರಯೋಗಾಲಯದಲ್ಲಿ ಬಳಕೆಯಾಗುವ ಮಿಶ್ರತಳಿಯ ಎರಡು ಮುಖ್ಯ ತಳಿಗಳೆಂದರೆ ಹಾರ್ಟ್ಲೆ ಮತ್ತು ಡಂಕಿನ್‌-ಹಾರ್ಟ್ಲೆ. ಈ ಇಂಗ್ಲಿಷ್‌ ತಳಿಗಳು ವರ್ಣದ್ರವ್ಯವಿಲ್ಲದೆ ಪೂರಾ ಬಿಳಿ ಬಣ್ಣದ್ದಾಗಿರುತ್ತವೆ. ಆದರೂ ವರ್ಣದ್ರವ್ಯವುಳ್ಳ ತಳಿಗಳೂ ಲಭ್ಯ.[೧೩೩] ಅದೇ ಕುಲದಲ್ಲಿ ಜನಿಸಿದ ತಳಿಗಳು ಬಹಳ ವಿರಳ, ಹಾಗೂ ಸಾಮಾನ್ಯವಾಗಿ, ಪ್ರತಿರೋಧನಾ ವ್ಯವಸ್ಥೆಯ ಆಣ್ವಿಕ ಜೀವವಿಜ್ಞಾನ ಸೇರಿದಂತೆ, ಬಹಳಷ್ಟು ವೈಜ್ಞಾನಿಕ ಸಂಶೋಧನೆಗಾಗಿ ಬಳಸಲಾಗುತ್ತದೆ. ಸೃಷ್ಟಿಸಲಾದ ಅದೇ ಕುಲದಲ್ಲಿ ಜನಿಸಿದ ತಳಿಗಳಲ್ಲಿ, ಇಂದಿಗೂ ಯಾವುದೇ ಪ್ರಮಾಣದಲ್ಲಿ ಬಳಸಲಾದ ಎರಡು ತಳಿಗಳೆಂದರೆ, ಸೆವಾಲ್‌ ರೈಟ್‌ರ ಹೆಸರುಗಳಾದ, 'ಸ್ಟ್ರೇನ್‌ 2' ಮತ್ತು 'ಸ್ಟ್ರೇನ್‌ 13'.[೧೦೦][೧೩೩] 1980ರ ದಶಕದಿಂದಲೂ, ಗಿನಿಯಿಲಿಗಳ ಕೂದಲುರಹಿತ ತಳಿಗಳನ್ನು ವೈಜ್ಞಾನಿಕ ಸಂಶೋಧನೆಗಳಲ್ಲಿ, ಇದರಲ್ಲೂ ವಿಶಿಷ್ಟವಾಗಿ ಚರ್ಮವೈದ್ಯಶಾಸ್ತ್ರೀಯ ಅಧ್ಯಯನಗಳಿಗಾಗಿ ಬಳಸಲಾಗುತ್ತಿವೆ. 1979ರಲ್ಲಿ ಈಸ್ಟ್ಮನ್‌ ಕೊಡಕ್‌ ಕಂಪೆನಿಯ ಪ್ರಯೋಗಾಲಯದಲ್ಲಿ, ಹಾರ್ಟ್ಲೆ ಗಿನಿಯಿಲಿ ತಳಿಸಮೂಹದಲ್ಲಿ, ಅದೇ ಕುಲದಲ್ಲಿ ಜನಿಸಿದ ತಳಿಗಳಲ್ಲಿ, ಸ್ವಯಂ-ತಳೀಯ ನವವಿಕೃತಿಯ ಪರಿಣಾಮವಾಗಿ, ಕೂದಲಿಲ್ಲದ ಹಾಗೂ ಪ್ರತಿರಕ್ಷಣಾ ಶಕ್ತಿಯಲ್ಲಿ ನ್ಯೂನತೆಯುಳ್ಳ ತಳಿಯು ಜನಿಸಿತು.[೧೩೪] 1978ರಲ್ಲಿ ಇಂಸ್ಟಿಟ್ಯೂಟ್‌ ಅರ್ಮಂಡ್‌ ಫ್ರಪಿಯರ್‌ ಪ್ರತಿರಕ್ಷಣಾ ವ್ಯವಸ್ಥೆಯುಳ್ಳ ಕೂದಲುರಹಿತ ತಳಿಯನ್ನೂ ಸಹ ಗುರುತಿಸಿತು. 1982ರಿಂದಲೂ ಚಾರ್ಲ್ಸ್‌ ರಿವರ್‌ ಲ್ಯಾಬೊರೆಟರಿಸ್‌ ಸಂಶೋಧನೆಗಾಗಿ ಈ ತಳಿಯನ್ನು ಪುನರುತ್ಪಾದಿಸುತ್ತಿದೆ.[೧೩೫] ಕೇವಿ ಪ್ರಿಯರು ಕೂದಲುರಹಿತ ತಳಿಗಳನ್ನು ಕೊಳ್ಳಲು ಮುಂದಾದರು. ಕೂದಲಿಲ್ಲದ ಸಾಕು ಗಿನಿಯಿಲಿಗಳನ್ನು 'ಸ್ಕಿನ್ನಿ ಪಿಗ್ಸ್‌' ಎನ್ನಲಾಗುತ್ತಿತ್ತು.

ಆಹಾರವಾಗಿ

[ಬದಲಾಯಿಸಿ]
ಗಿನಿಯಿಲಿಯ ಮಾಂಸ ಸೇರಿಸಿ ತಯಾರಿಸಲಾದ ಪೆರು ದೇಶದ ಎರಡು ಭಕ್ಷ್ಯಗಳು.

ಗಿನಿಯಿಲಿಗಳನ್ನು (ಕಯ್‌ , ಕುಯೆ , ಕುರಿ ಎಂದೂ ಹೇಳಲಾಗಿದೆ) ಮೂಲತಃ ಆಂಡೆಸ್‌ ವಲಯದಲ್ಲಿ ಮಾಂಸಕ್ಕಾಗಿ ಸಾಕಲಾಗುತ್ತಿತ್ತು. ಆಂಡಿಯನ್‌ ಎತ್ತರ ಪ್ರದೇಶಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರಲ್ಲಿ ಸಾಂಪ್ರದಾಯಿಕವಾಗಿ, ಈ ಪ್ರಾಣಿಯನ್ನು ಉತ್ಸವಾಚರಣೆಯ ಆಹಾರಕ್ಕೆ ಮೀಸಲಾಗಿರುತ್ತಿತ್ತು. ಆದರೆ ಇಂದು ಎಲ್ಲಾ ಜನರೂ ಇದರ ಮಾಂಸವನ್ನು ತಿನ್ನುವುದು ಸಾಮಾಜಿಕವಾಗಿ ಸ್ವೀಕೃತ ಅಭ್ಯಾಸವಾಗಿದೆ.[೧೩೬] ಗಿನಿಯಿಲಿಯ ಮಾಂಸವು ಪೆರು ಮತ್ತು ಬೊಲಿವಿಯಾ ದೇಶಗಳಲ್ಲಿ, ವಿಶಿಷ್ಟವಾಗಿ ಆಂಡೆಸ್‌ ಪರ್ವತಗಳ ಎತ್ತರದ ಭೂಪ್ರದೇಶಗಳಲ್ಲಿ ವಾಸಿಸುವವರ ಆಹಾರಪಥ್ಯದ ಪ್ರಮುಖ ಅಂಗವಾಗಿದೆ. ಇಕ್ವೆಡಾರ್‌ (ಮುಖ್ಯವಾಗಿ ಸಿಯೆರಾ) ಮತ್ತು ಕೊಲಂಬಿಯಾ ದೇಶಗಳಲ್ಲಿಯೂ ಸಹ ಗಿನಿಯಿಲಿ ಮಾಂಸಭಕ್ಷಣೆಯಾಗುವುದು.[೧೩೭] ಇತರೆ ಸಾಂಪ್ರದಾಯಿಕ ಪಶುಸಂಪತ್ತುಗಳಿಗೆ ಹೋಲಿಸಿದರೆ, ಗಿನಿಯಿಲಿಗಳಿಗೆ ಹೆಚ್ಚು ಸ್ಥಳಾವಕಾಶದ ಅಗತ್ಯವಿಲ್ಲದ ಹಾಗೂ, ಅವು ಬಹಳ ಬೇಗ ಪ್ರಸವಿಸುವ ಕಾರಣ, ಹಂದಿ ಮತ್ತು ಹಸುಗಳು ಸೇರಿದಂತೆ, ಹಲವು ಸಾಂಪ್ರದಾಯಿಕ ಪಶುಗಳಿಗಿಂತಲೂ ಗಿನಿಯಿಲಿಯು ಹೆಚ್ಚು ಲಾಭದಾಯಕ ಆಹಾರ ಮೂಲವಾಗಿದೆ.[೧೩೮] ಇನ್ನೂ ಹೆಚ್ಚಿಗೆ, ಅವುಗಳನ್ನು ನಗರ ಪರಿಸರದಲ್ಲೂ ಬೆಳೆಸಬಹುದು. ಗ್ರಾಮಾಂತರ ಹಾಗೂ ನಗರವಲಯಗಳಲ್ಲಿ ಕುಟುಂಬಗಳು ಹೆಚ್ಚುವರಿ ಆದಾಯಕ್ಕಾಗಿ ಗಿನಿಯಿಲಿಗಳನ್ನು ಸಾಕುತ್ತವೆ. ಸ್ಥಳೀಯ ಮಾರುಕಟ್ಟೆಗಳು ಹಾಗೂ ದೊಡ್ಡ ಪ್ರಮಾಣದ ಸ್ಥಳೀಯ ಜಾತ್ರೆಗಳಲ್ಲಿ ಈ ಪ್ರಾಣಿಗಳನ್ನು ಕೊಳ್ಳಲಾಗುತ್ತದೆ ಹಾಗೂ ಮಾರಲಾಗುತ್ತದೆ.[೧೩೯] ಗಿನಿಯಿಲಿಗಳ ಮಾಂಸದಲ್ಲಿ ಪ್ರೊಟೀನ್‌ ಅಂಶ ಹೆಚ್ಚು ಹಾಗೂ ಕೊಬ್ಬು ಮತ್ತು ಕೊಲೆಸ್ಟೆರಾಲ್‌ ಅಂಶ ಕಡಿಮೆ. ಮೊಲ ಮತ್ತು ಕೋಳಿಯ ಕಡುಬಣ್ಣದ ಮಾಂಸದಂತಿರುತ್ತದೆ ಎಂದು ವಿವರಿಸಲಾಗಿದೆ.[][೧೪೦] ಈ ಪ್ರಾಣಿಯ ಮಾಂಸವನ್ನು ಕರಿದು ಬಡಿಸಬಹುದು (ಚಕ್ಟಡೊ ಅಥವಾ ಫ್ರಿಟೊ ), ಬೇಯಿಸಿ ಬಡಿಸಬಹುದು (ಅಸಡೊ ), ಅಥವಾ ಸುಟ್ಟು ಬಡಿಸಬಹುದು (ಅಲ್‌ ಹೊರ್ನೊ ). ನಗರವಲಯದ ಭೋಜನಾ ಕೇಂದ್ರಗಳಲ್ಲಿ ಇದನ್ನು ಶಾಖರೋಧ ಪಾತ್ರೆ ಅಥವಾ ಚೂರುಚೂರಾಗಿ ಕತ್ತರಿಸಿದ ಮಾಂಸವಾಗಿ ಬಡಿಸಬಹುದು.[೧೪೧] ಇಕ್ವೆಡಾರ್‌ನ ಜನರು ಸಾಮಾನ್ಯವಾಗಿ ಸೊಪಾ ಅಥವಾ ಲೊಕ್ರೊ ಡಿ ಕಯ್ ‌ ಎನ್ನಲಾದ ಸೂಪ್‌ ಖಾದ್ಯವನ್ನು ಸೇವಿಸುವರು.[೧೪೧] ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ಹುರಿಯುವಂತೆಯೇ ಪಚಮಂಕಾ ಅಥವಾ ಹುವಾಟಿಯಾ ಸಹ ಜನಪ್ರಿಯವಾಗಿವೆ. ಇದನ್ನು ಕಾಳಿನ ಬಿಯರ್‌ (ಚಿಚಾ ) ಒಂದಿಗೆ ಬಡಿಸಲಾಗುವುದು.[೧೪೧]

ಸಾಂಪ್ರದಾಯಿಕ ಆಂಡಿಯನ್‌ ರೀತಿಯಲ್ಲಿ ಗೃಹವೊಂದರಲ್ಲಿ ಬೆಳೆಸಲಾದ ಗಿನಿಯಿಲಿ ಮಾಂಸ

ಪೆರು ದೇಶದ ಜನರು ಪ್ರತಿವರ್ಷ ಅಂದಾಜು 65 ದಶಲಕ್ಷ ಗಿನಿಯಿಲಿಗಳನ್ನು ತಿನ್ನುವರು. ಅವರ ಸಂಸ್ಕೃತಿಯಲ್ಲಿ ಈ ಪ್ರಾಣಿಯು ಅದೆಷ್ಟು ನಿಕಟವಾಗಿದೆಯೆಂದರೆ, ಕುಸ್ಕೋದ ಪ್ರಧಾನ ಇಗರ್ಜಿಯಲ್ಲಿರುವ ಲಾಸ್ಟ್‌ ಸಪ್ಪರ್‌ನ ಖ್ಯಾತ ಚಿತ್ರಕಲೆಯಲ್ಲಿ ಯೇಸು ಕ್ರಿಸ್ತ ಮತ್ತು ತನ್ನ ಹನ್ನೆರಡು ಶಿಷ್ಯರು ಗಿನಿಯಿಲಿ ತಿನ್ನುತ್ತಿರುವಂತೆ ನಿರೂಪಿಸಲಾಗಿದೆ.[] ಪೆರುವಿನ ನಗರ ಹಾಗೂ ಗ್ರಾಮಾಂತರ ವಲಯಗಳಲ್ಲಿ ಗಿನಿಯಿಲಿಯು ಕೆಲವು ನಿರ್ದಿಷ್ಟ ಧಾರ್ಮಿಕ ಸಮಾರಂಭಗಳ ಮುಖ್ಯ ಅಂಗವಾಗಿದೆ. ಪೆರು ದೇಶದ ಪೂರ್ವ ಭಾಗದಲ್ಲಿ ಅಂಟೊನಿಯೊ ರೈಮಂಡಿ ಪ್ರಾಂತ್ಯದ ಹಲವು ಗ್ರಾಮಗಳಲ್ಲಿ ಜಕಾ ಸಾರೀ (ಗಿನಿಯಿಲಿಗಳ ಸಂಗ್ರಹ) ಎಂಬುದು ಪ್ರಮುಖ ಧಾರ್ಮಿಕ ಉತ್ಸವ. ರಾಜಧಾನಿ ಲಿಮಾದಲ್ಲಿ ನಡೆಯುವ ಸಣ್ಣಪ್ರಮಾಣದ ಸಮಾರಂಭದಲ್ಲಿಯೂ ಸಹ ಆಚರಿಸಲಾಗುತ್ತದೆ.[೧೪೨] ಕ್ಯಾತೊಲಿಕ್‌ ಪಂಥ ಮತ್ತು ಕೊಲಂಬಿಯನ್‌-ಪೂರ್ವ ಧಾರ್ಮಿಕ ಪದ್ಧತಿಗಳ ಸಂಯುಕ್ತವಾದ ಇದು ಒಂದು ಸಮನ್ವಯದ ಸಮಾರಂಭವಾಗಿದೆ. ಸ್ಥಳೀಯ ಆಶ್ರಯದಾತ ಮುನಿವರ್ಯರನ್ನು ಆರಾಧಿಸುವ ವಿಧಾನವು ಇದಕ್ಕೆ ಕೇಂದ್ರಬಿಂದುವಾಗಿದೆ.[೧೪೨]

ಜಕಾ ಸಾರೀ ಯ ರೂಪವು ಪಟ್ಟಣದಿಂದ ಪಟ್ಟಣಕ್ಕೆ ವ್ಯತ್ಯಾಸವಾಗುವುದು. ಕೆಲವು ಸ್ಥಳಗಳಲ್ಲಿ, ಗಿನಿಯಿಲಿಗಳನ್ನು ದಾನ ಪಡೆದು ಸಂಗ್ರಹಿಸಲು ಒಬ್ಬ ಸರ್ವಿಂಟಿ  (ಸೇವಕ) ಮನೆಯಿಂದ ಮನೆಗೆ ಹೋಗುವನು; ಇನ್ನು ಕೆಲವೆಡೆ ಗಿನಿಯಿಲಿಗಳನ್ನು ಜನಸಾಮಾನ್ಯರ ಪ್ರದೇಶಕ್ಕೆ ಒಯ್ದು ತಂದು ಅಣಕು ಗೂಳಿಕಾಳಗಕ್ಕೆ ಬಿಡಲಾಗುತ್ತದೆ.[೧೪೨]  ಈ ಉತ್ಸವಗಳ ಅಂಗವಾಗಿ ಕಯ್‌ ಚಕ್ಟಡೊ ವನ್ನು ಯಾವಾಗಲೂ ಬಡಿಸಲಾಗುವುದು. ಕೆಲವು ಸಮುದಾಯಗಳಲ್ಲಿ, ಸ್ಥಳೀಯ ರಾಜಕಾರಣಿಗಳು ಮತ್ತು ಕುಖ್ಯಾತ ವ್ಯಕ್ತಿಗಳನ್ನು ಸಾಂಕೇತಿಕವಾಗಿ ವಿಡಂಬನೆ ಮಾಡಲು, ಗಿನಿಯಿಲಿಗಳನ್ನು ಕೊಂದು ಬಡಿಸುವ ಕ್ರಿಯೆ ಕೇವಲ ವಿನೋದಕ್ಕಾಗಿ ರೂಪಿಸಲಾಗುತ್ತದೆ.[೧೪೨]  ಇಕ್ವೆಡಾರ್‌ನ ಕೇಂದ್ರೀಯ ಭಾಗದಲ್ಲಿರುವ ಟುಂಗುರಹುವಾ ಮತ್ತು ಕೊಟೊಪಾಕ್ಸಿ ಪ್ರಾಂತ್ಯಗಳಲ್ಲಿ, ಸಮುದಾಯ ಭೋಜನ ಎನ್ಸಯೊ ದ ಅಂಗವಾಗಿ ನಡೆಯುವ ಕಾರ್ಪಸ್‌ ಕ್ರಿಸ್ಟಿ ಉತ್ಸವದಲ್ಲಿ ಗಿನಿಯಿಲಿಗಳನ್ನು ಬಳಸಲಾಗುತ್ತದೆ. ಜೊತೆಗೆ, ಆಕ್ಟೆವಾ  ಉತ್ಸವದಲ್ಲಿ ಕ್ಯಾಸ್ಟಿಲೊ ಗಳನ್ನು (ಕೊಬ್ಬು ಪದಾರ್ಥ ಲೇಪಿತ ಸ್ತಂಭಗಳು) ನಿಲ್ಲಿಸಿ, ಅಡ್ಡಗಂಬಗಳಲ್ಲಿ ಬಹುಮಾನಗಳೊಂದಿಗೆ ಗಿನಿಯಿಲಿಗಳನ್ನು ನೇತುಹಾಕಲಾಗಿರುತ್ತದೆ.[೧೪೩]  ಪೆರು ದೇಶದ ಚುರಿನ್‌ ಪಟ್ಟಣದಲ್ಲಿ ವಾರ್ಷಿಕ ಉತ್ಸವ ನಡೆಯುವುದು. ಇದರಲ್ಲಿ ಸ್ಪರ್ಧೆಯೊಂದಕ್ಕಾಗಿ ಗಿನಿಯಿಲಿಗಳಿಗೆ ಸೂಕ್ತ ವೇಷಭೂಷಣಗಳನ್ನು ತೊಡಿಸಲಾಗುತ್ತದೆ.[೧೪೪]

ನ್ಯೂಯಾರ್ಕ್‌ ನಗರದಲ್ಲಿ ಆಂಡಿಯನ್‌ ವಲಸೆಗಾರರು ಮಾಂಸಕ್ಕಾಗಿ ಗಿನಿಯಿಲಿಗಳನ್ನು ಸಾಕಣೆ ಮಾಡಿ ಮಾರುವರು. ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ನಗರಗಳಲ್ಲಿರುವ ಕೆಲವು ಜನಾಂಗೀಯ ಭೋಜನಾ ಕೇಂದ್ರಗಳಲ್ಲಿ ಕಯ್‌ನ್ನು ಖಾದ್ಯರೂಪದಲ್ಲಿ ಬಡಿಸಲಾಗುತ್ತದೆ.[೧೪೫] ಪೆರುವಿಯನ್‌ ಸಂಶೋಧನಾ ವಿಶ್ವವಿದ್ಯಾನಿಲಯಗಳು, ಅದರಲ್ಲೂ ವಿಶಿಷ್ಟವಾಗಿ ಲಾ ಮೊಲಿನಾ ರಾಷ್ಟ್ರೀಯ ಕೃಷಿ ವಿಶ್ವವಿದ್ಯಾನಿಲಯವು, ದೊಡ್ಡಗಾತ್ರದ ಗಿನಿಯಿಲಿಗಳನ್ನು ಸಾಕಣೆ ಮಾಡುವ ಉದ್ದೇಶದಿಂದ, 1960ರ ದಶಕದಲ್ಲಿ ಪ್ರಾಯೋಗಿಕ ಕಾರ್ಯಕ್ರಮಗಳನ್ನು ಆರಂಭಿಸಿತು.[೧೪೬] ಆನಂತರ, ಗಿನಿಯಲಿಗಳನ್ನು ಪಶುಸಂಪತ್ತಾಗಿಸುವುದನ್ನು ಆರ್ಥಿಕವಾಗಿ ಸುಲಭವಾಗಲೆಂದು ವಿಶ್ವವಿದ್ಯಾನಿಲಯವು ದಕ್ಷಿಣ ಅಮೆರಿಕಾದಲ್ಲಿ ಸಾಕಣೆ ಮತ್ತು ಸಂಗೋಪನೆ ವಿಧಾನಗಳನ್ನು ಬದಲಾಯಿಸಲು ಯತ್ನಿಸಿತು.[೧೪೭] ದಕ್ಷಿಣ ಅಮೆರಿಕಾ ಖಂಡದ ಉತ್ತರ ಭಾಗದಲ್ಲಿರುವ ದೇಶಗಳ ಹೊರಗೆ, ಗಿನಿಯಿಲಿಗಳ ಮಾಂಸವು ಹೆಚ್ಚು ಪ್ರಮಾಣದಲ್ಲಿ ಭಕ್ಷಣೆಯಾಗಲೆಂದು ಆಶಿಸಿದ ವಿಶ್ವವಿದ್ಯಾನಿಲಯವು 1990ರ ಹಾಗೂ 2000ದ ದಶಕದಲ್ಲಿ ದೊಡ್ಡ ಗಾತ್ರದ ತಳಿಯ ಗಿನಿಯಿಲಿಗಳನ್ನು ಯುರೋಪ್‌, ಜಪಾನ್‌ ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನ ದೇಶಗಳಿಗೆ ರಫ್ತು ಮಾಡಲಾರಂಭಿಸಿತು.[] ಪಶ್ಚಿಮ ಆಫ್ರಿಕಾ ಖಂಡದಲ್ಲಿರುವ ಅಭಿವೃದ್ಧಿಶೀಲ ದೇಶಗಳಲ್ಲಿ ಗಿನಿಯಿಲಿ ಸಂಗೋಪನೆಯನ್ನು ಪರಿಚಯಿಸುವ ಯತ್ನಗಳು ನಡೆಯುತ್ತಿವೆ.[೧೩೮] ಅದೇನೇ ಇರಲಿ, ಅಮೆರಿಕಾ ಹಾಗೂ ಯುರೋಪ್‌ ಖಂಡಗಳ ಇತರೆ ದೇಶಗಳಲ್ಲಿ ಗಿನಿಯಿಲಿ ಮಾಂಸವು ಒಟ್ಟಾರೆ ಇನ್ನೂ ಬಹಿಷ್ಕೃತವಾಗಿದೆ. ಯಥಾವತ್‌ ಕಿರುತೆರೆ ಕಾರ್ಯಕ್ರಮ (ರಿಯಲಿಟಿ ಷೊ)ವೊಂದರಲ್ಲಿ, ಖ್ಯಾತ ಪಾಶ್ಚಾತ್ಯ ಬಾಣಸಿಗ ಆಂಡ್ರ್ಯೂ ಝಿಮ್ಮರ್ನ್‌ (ಬಿಝಾರ್‌ ಫುಡ್ಸ್‌ ) ಮತ್ತು ಆಂಟನಿ ಬೊರ್ಡಿನ್‌ (ನೊ ರಿಸರ್ವೇಷನ್ಸ್ ‌) ಗಿನಿಯಿಲಿಯ ಮಾಂಸವನ್ನು ಅಪೂರ್ವ ಖಾದ್ಯ ಎಂದು ತಿಂದಿದ್ದುಂಟು.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಬ್ರಿಟಿಷ್‌ ಕೇವಿ ಕೌನ್ಸಿಲ್‌
  • ಪೀಟರ್‌ ಗರ್ನಿ
  • ನ್ಯೂಚರ್ಚ್‌ ಗಿನಿಯಿಲಿಗಳನ್ನು ಉಳಿಸಿ (ಸೇವ್‌ ದಿ ನ್ಯೂಚರ್ಚ್‌ ಗಿನಿ ಪಿಗ್ಸ್‌)

ಅಡಿ ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ Weir, Barbara J. (1974). "Notes on the Origin of the Domestic Guinea-Pig". In Rowlands, I. W.; Weir, Barbara J. (eds.). The Biology of Hystricomorph Rodents. Academic Press. pp. 437–446. ISBN 0-12-6133334-4. {{cite book}}: Check |isbn= value: length (help)
  2. Nowak, Ronald M. (1999). Walker's Mammals of the World, 6th edition. Johns Hopkins University Press. ISBN 0801857899.
  3. Morales, Edmundo (1995). The Guinea Pig: Healing, Food, and Ritual in the Andes. University of Arizona Press. ISBN 0-8165-1558-1.
  4. ೪.೦ ೪.೧ ೪.೨ ೪.೩ Vecchio, Rick (2004-10-19). "Peru Pushes Guinea Pigs as Food". CBS News. Archived from the original on 2013-11-13. Retrieved 2007-03-12.
  5. ೫.೦ ೫.೧ ಮೊರೆಲ್ಸ್‌, ಪು. 3.
  6. ಚಝನ್‌, ಪು. 272
  7. ಮೊರೆಲ್ಸ್‌, ಪಿಪಿ. 3–4.
  8. ಬೆರಿನ್‌, ಕ್ಯಾತೆರೀನ್‌ & ಲಾರ್ಕೊ ಮ್ಯೂಸಿಯಮ್‌. ದಿ ಸ್ಪಿರಿಟ್ ಆಫ್ ಏನ್ಷಿಯೆಂಟ್‌ ಪೆರು: ಟ್ರೆಸರ್ಸ್ ಫ್ರಮ್ ದಿ ಮ್ಯೂಸಿಯೊ ಆರ್ಕಿಯೊಲಾಜಿಕೊ ರಫೆಲ್ ಲಾರ್ಕೊ ಹೆರೆರಾ. ನ್ಯೂಯಾರ್ಕ್‌: ಥೇಮ್ಸ್‌ & ಹಡ್ಸನ್‌, 1997.
  9. ೯.೦ ೯.೧ ೯.೨ Nowak, Ronald M. (1999). Walker's Mammals of the World (6th ed.). Baltimore, Md.: Johns Hopkins University Press. pp. 1667–1669. ISBN 0-8018-5789-9.
  10. ಮೊರೆಲ್ಸ್‌, ಪು. 8.
  11. ಮೊರೆಲ್ಸ್‌, ಪಿಪಿ. 10–16, 45–74.
  12. ಮೊರೆಲ್ಸ್‌, ಪು. 96.
  13. ಮೊರೆಲ್ಸ್‌, ಪು. 78.
  14. ಮೊರೆಲ್ಸ್‌, ಪು. 87-88.
  15. ಮೊರೆಲ್ಸ್‌, ಪು. 83.
  16. ಮೊರೆಲ್ಸ್‌, ಪಿಪಿ. 75–78.
  17. Gmelig-Nijboer, C. A. (1977). Conrad Gessner's "Historia Animalum": An Inventory of Renaissance Zoology. Krips Repro B.V. pp. 69–70.
  18. "Cavy". Oxford English Dictionary online (subscription access required). Archived from the original on 2006-06-25. Retrieved 2007-04-25.
  19. "Definition of cavy". Merriam-Webster Online. Archived from the original on 2008-01-21. Retrieved 2007-03-12.
  20. ೨೦.೦ ೨೦.೧ "Diccionario de la Lengua Española" (in Spanish). Real Academia Española. Retrieved 2007-03-12.{{cite web}}: CS1 maint: unrecognized language (link)
  21. ೨೧.೦ ೨೧.೧ ೨೧.೨ Wagner, Joseph E.; Manning, Patrick J (1976). The Biology of the Guinea Pig. Academic Press. p. 2. ISBN 0-12-730050-3.
  22. ವ್ಯಾಗ್ನರ್‌, ಪು. 2; ಟೆರಿಲ್‌, ಪು. 2.
  23. ವ್ಯಾಗ್ನರ್‌, ಪು. 2.
  24. ೨೪.೦ ೨೪.೧ "Results for "Guinea pig"". Dictionary.com. Retrieved 2006-08-29.
  25. Wikisource Chisholm, Hugh, ed. (1911). "Cavy" . Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help)
  26. ವ್ಯಾಗ್ನರ್‌, ಪಿಪಿ. 2–3.
  27. Harvey, William (1653). Anatomical exercitations concerning the generation of living creatures to which are added particular discourses of births and of conceptions, &c. p. 527.
  28. Vanderlip, Sharon (2003). The Guinea Pig Handbook. Barron's. p. 13. ISBN 0-7641-2288-6.
  29. ೨೯.೦ ೨೯.೧ Richardson, V.C.G. (2000). Diseases of Domestic Guinea Pigs (2nd ed.). Blackwell. pp. 132–133. ISBN 0-632-05209-0.
  30. editor, Craig Glenday (2006). Guinness Book of World Records. Guinness World Records Ltd. p. 60. ISBN 1-904994-02-4. {{cite book}}: |author= has generic name (help)
  31. Graur, D.; Hide, Winston A.; Li, Wen-Hsiung; et al. (1991). "Is the Guinea-Pig a Rodent?". Nature. 351 (6328): 649–652. doi:10.1038/351649a0. PMID 2052090. {{cite journal}}: Explicit use of et al. in: |first= (help)
  32. D'Erchia, A.; Gissi, Carmela; Pesole, Graziano; Saccone, Cecilia; Arnason, Ulfur; et al. (1996). "The Guinea Pig is Not a Rodent". Nature. 381 (6583): 597–600. doi:10.1038/381597a0. PMID 8637593. {{cite journal}}: Explicit use of et al. in: |first= (help)
  33. Carleton, Michael D.; Musser, Guy G. (2005). "Order Rodentia". In Wilson, Don E.; Reeder, DeeAnn M. (eds.). Mammal Species of the World. Vol. 2 (3rd ed.). Johns Hopkins University Press. p. 745. ISBN 0-8018-8221-4. {{cite book}}: Missing |editor2= (help)
  34. Huchon, D.; Chevret, P; Jordan, U; Kilpatrick, CW; Ranwez, V; Jenkins, PD; Brosius, J; Schmitz, J; et al. (2007). "Multiple molecular evidences for a living mammalian fossil". PNAS. 104 (18): 7495–7499. doi:10.1073/pnas.0701289104. PMC 1863447. PMID 17452635. Archived from the original on 2008-06-18. Retrieved 2010-11-24. {{cite journal}}: Explicit use of et al. in: |first= (help)
  35. ೩೫.೦ ೩೫.೧ ವ್ಯಾಗ್ನರ್‌, ಪಿಪಿ. 31–32.
  36. ೩೬.೦ ೩೬.೧ ೩೬.೨ ೩೬.೩ Terril, Lizabeth A.; Clemons, Donna J. (1998). The Laboratory Guinea Pig. CRC Press. p. 6. ISBN 0-8493-2564-1.
  37. Cohn, D.W.H.; Tokumaru, RS; Ades, C; et al. (2004). "Female Novelty and the Courtship Behavior of Male Guinea Pigs" (PDF). Brazilian Journal of Medical and Biological Research. 37 (6): 847–851. doi:10.1590/S0100-879X2004000600010. PMID 15264028. {{cite journal}}: Explicit use of et al. in: |first= (help)
  38. ವ್ಯಾಂಡರ್ಲಿಪ್‌, ಪಿಪಿ. 33–34.
  39. ರಿಚರ್ಡ್ಸನ್‌, ಪಿಪಿ. 63–64.
  40. ೪೦.೦ ೪೦.೧ "Your Guinea Pigs' Home". Guinea Pig Cages. Retrieved 2006-08-29.
  41. ೪೧.೦ ೪೧.೧ ಟೆರಿಲ್‌, ಪು. 34.
  42. ವ್ಯಾಂಡರ್ಲಿಪ್‌, ಪಿಪಿ. 44, 49.
  43. ೪೩.೦ ೪೩.೧ ೪೩.೨ National Resource Council (1996). Laboratory Animal Management: Rodents. National Academy Press. pp. 72–73. ISBN 0-309-04936-9.
  44. ವ್ಯಾಗ್ನರ್‌, ಪು. 122.
  45. ವ್ಯಾಂಡರ್ಲಿಪ್‌, ಪು. 19.
  46. ೪೬.೦ ೪೬.೧ Behrend, Katrin (1998). Guinea Pigs: A Complete Pet Owner's Manual. Barron's. pp. 22–23. ISBN 0-7641-0670-8.
  47. ೪೭.೦ ೪೭.೧ ವ್ಯಾಂಡರ್ಲಿಪ್‌, ಪು. 20.
  48. ೪೮.೦ ೪೮.೧ ಟೆರಿಲ್‌, ಪು. 41.
  49. ವ್ಯಾಗ್ನರ್‌, ಪಿಪಿ. 126–128.
  50. ೫೦.೦ ೫೦.೧ "Rabbits & Other Pets". Guinea Pig Cages. Archived from the original on 2007-03-04. Retrieved 2007-04-03.
  51. Charters, Jessie Blount Allen (1904). "The associative processes of the guinea pig: A study of the psychical development of an animal with a nervous system well medullated at birth". Journal of comparative neurology and psychology. XIV (4). University of Chicago: 300–337. Retrieved 2006-12-27. {{cite journal}}: Unknown parameter |month= ignored (help)
  52. ವ್ಯಾಗ್ನರ್‌, ಪು. 34.
  53. "Guinea Pigs". Canadian Federation of Humane Societies. Archived from the original on 2007-04-02. Retrieved 2007-03-21.
  54. ೫೪.೦ ೫೪.೧ ೫೪.೨ ೫೪.೩ ೫೪.೪ ೫೪.೫ ೫೪.೬ Harkness, John E.; Wagner, Joseph E. (1995). The Biology and Medicine of Rabbits and Rodents. Williams & Wilkins. pp. 30–39. ISBN 0-683-03919-9.
  55. ವ್ಯಾಂಡರ್ಲಿಪ್‌, ಪು. 79.
  56. ರಿಚರ್ಡ್ಸನ್‌, ಪು. 72.
  57. ವ್ಯಾಗ್ನರ್‌, ಪು. 38.
  58. "ಆರ್ಕೈವ್ ನಕಲು". Archived from the original on 2010-01-20. Retrieved 2021-08-10.
  59. ವ್ಯಾಗ್ನರ್‌, ಪಿಪಿ. 32–33; ವ್ಯಾಂಡರ್ಲಿಪ್‌, ಪು. 14.
  60. ಟೆರಿಲ್‌, ಪು. 7.
  61. ಟೆರಿಲ್‌, ಪಿಪಿ. 7–8.
  62. "Guinea Pig Sounds". Jackie's Guinea Piggies. Archived from the original on 2007-03-15. Retrieved 2007-03-14. Includes sound files.
  63. ವ್ಯಾಗ್ನರ್‌, ಪು. 39.
  64. Guinness Book of World Records. Guinness World Records Ltd. 2007. p. 127. ISBN 9781904994121.
  65. ವ್ಯಾಗ್ನರ್‌, ಪು. 88.
  66. ೬೬.೦ ೬೬.೧ Percy, Dean H.; Barthold, Stephen W. (2001). Pathology of Laboratory Rodents and Rabbits (2nd ed.). Iowa State University Press. pp. 209–247. ISBN 0-8138-2551-2.
  67. ರಿಚರ್ಡ್ಸನ್‌, ಪಿಪಿ. 14, 17.
  68. ರಿಚರ್ಡ್ಸನ್‌, ಪಿಪಿ. 15–16.
  69. ರಿಚರ್ಡ್ಸನ್‌, ಪಿಪಿ. 25–26.
  70. ರಿಚರ್ಡ್ಸನ್‌, ಪಿಪಿ. 17–18.
  71. ರಿಚರ್ಡ್ಸನ್‌, ಪಿಪಿ. 20–21.
  72. ರಿಚರ್ಡ್ಸನ್‌, ಪು. 20.
  73. ರಿಚರ್ಡ್ಸನ್‌, ಪಿಪಿ. 25–29.
  74. ವ್ಯಾಗ್ನರ್‌, ಪು. 228.
  75. ರಿಚರ್ಡ್ಸನ್‌, ಪಿಪಿ. 50–51.
  76. ಟೆರಿಲ್‌, ಪು. 41; ವ್ಯಾಗ್ನರ್‌, ಪು. 236.
  77. ರಿಚರ್ಡ್ಸನ್‌, ಪು. 52.
  78. ಮೊರೆಲ್ಸ್‌, ಪು. 8; ವ್ಯಾಗ್ನರ್‌, ಪು. 32.
  79. "Health, Care, and Diet for a Guinea pig". Lake Howell Animal Clinic. Archived from the original on 2007-07-03. Retrieved 2007-02-16.
  80. "Guinea Pigs Care Sheet". Canyon Lake Veterinary Hospital. Archived from the original on 2007-09-28. Retrieved 2007-04-02.
  81. Institute for Laboratory Animal Research (1995). Nutrient Requirements of Laboratory Animals (4th ed.). National Academies Press. p. 106. ISBN 0309051266.
  82. ವ್ಯಾಗ್ನರ್‌, ಪು. 236; ಟೆರಿಲ್‌, ಪು. 39.
  83. ರಿಚರ್ಡ್ಸನ್‌, ಪು. 92.
  84. ಟೆರಿಲ್‌, ಪು. 40.
  85. ವ್ಯಾಗ್ನರ್‌, ಪಿಪಿ. 237–257; ರಿಚರ್ಡ್ಸನ್‌, ಪಿಪಿ. 89–91.
  86. ವ್ಯಾಗ್ನರ್‌, ಪು. 236; ರಿಚರ್ಡ್ಸನ್‌, ಪಿಪಿ. 88–89.
  87. ರಿಚರ್ಡ್ಸನ್‌, ಪು. 89.
  88. ೮೮.೦ ೮೮.೧ ರಿಚರ್ಡ್ಸನ್‌, ಪು. 93.
  89. ರಿಚರ್ಡ್ಸನ್‌, ch. 1, 4, 5, 9.
  90. ರಿಚರ್ಡ್ಸನ್‌, ಪಿಪಿ. 3–4.
  91. ರಿಚರ್ಡ್ಸನ್‌, ಪು. 55.
  92. ರಿಚರ್ಡ್ಸನ್‌, ಪಿಪಿ. 69–70.
  93. ರಿಚರ್ಡ್ಸನ್‌, ಪಿಪಿ. 45–48.
  94. ೯೪.೦ ೯೪.೧ ೯೪.೨ ವ್ಯಾಗ್ನರ್‌, ಪು. 6.
  95. ಟೆರಿಲ್‌, ಪು. 19.
  96. ಟೆರಿಲ್‌, ಪು. 37.
  97. ಟೆರಿಲ್‌, ಪು. 36.
  98. ವ್ಯಾಗ್ನರ್‌, ಪು. 229; ರಿಚರ್ಡ್ಸನ್‌, ಪಿಪಿ. 105–106.
  99. ರಿಚರ್ಡ್ಸನ್‌, ಪು. 69.
  100. ೧೦೦.೦ ೧೦೦.೧ ೧೦೦.೨ Robinson, Roy (1974). "The Guinea Pig, Cavia Porcellus". In King, Robert C (ed.). Handbook of Genetics. Vol. 4. Plenum. pp. 275–307. ISBN 0-306-37614-8.
  101. ಸಷರ್‌ ಎನ್‌., ಲಿಕ್‌ ಸಿ 1991. "ಸೊಷಿಯಲ್‌ ಎಕ್ಸ್‌ಪಿರಿಯೆನ್ಸ್‌, ಬಿಹೆವಿಯರ್‌ ಅಂಡ್‌ ಸ್ಟ್ರೆಸ್ ಇನ ಗಿನಿ ಪಿಗ್ಸ್‌", "ಫಿಷ್ಯಾಲಜಿ ಅಂಡ್‌ ಬಿಹೆವಿಯರ್‌" 50, 83-90
  102. http://www.guinealynx.info/companionship.html
  103. "ಆರ್ಕೈವ್ ನಕಲು". Archived from the original on 2010-08-19. Retrieved 2010-11-24.
  104. "Constitution". American Cavy Breeders Association. 2006-09-29. Archived from the original on 2007-04-05. Retrieved 2007-03-22.
  105. "Official Website". Australian National Cavy Council. Retrieved 2007-04-03.
  106. "Official Website". New Zealand Cavy Club. Archived from the original on 2007-04-28. Retrieved 2007-04-03.
  107. Potter, Beatrix (1929). The Fairy Caravan. David McKay Co.
  108. Bond, Michael (2001). The Tales of Olga da Polga. Macmillan. ISBN 0-19-275130-1.
  109. Lewis, C.S. (1955). The Magician's Nephew. Macmillan.
  110. Butler, Ellis Parker (1906). Pigs is Pigs. McClure, Phillips & Co.
  111. ಸ್ಟಾರ್‌ ಟ್ರೆಕ್‌: ದಿ ಒರಿಜಿನಲ್‌ ಸೀರೀಸ್‌, ಬ್ಲೂ-ರೇ ಎಡಿಷನ್‌, ಸೀಸನ್‌ 2, ಡಿಸ್ಕ್‌ 4: ಡಿ ಟ್ರಬಲ್‌ ವಿತ್‌ ಟ್ರಿಬಲ್ಸ್‌ , ಸಿಬಿಎಸ್‌ ಹೊಮ್‌ ವೀಡಿಯೊ: ಕ್ಯಾಟಲಾಗ್‌ ನಂಬರ್‌. 07176
  112. "Advertisements". Egg Banking plc. Archived from the original on 2011-08-02. Retrieved 2007-07-18.
  113. LaMonica, Paul (2007-02-04). "Super Bowl Ads, Like the Game, Disappoint". AOL Money & Finance. Archived from the original on 2007-02-07. Retrieved 2007-07-19.
  114. ಕಂತಿನ 'ಕಾಮೆಂಟರಿ ಮಿನಿ' ಪ್ರಕಾರ, ಗಿನಿಯಿಲಿಗಳ 'ವೇಷಭೂಷಣ'ಗಳನ್ನು ವಿನ್ಯಾಸಿಸಿದ್ದು ಸೌತ್ ಪಾರ್ಕ್‌ ಸ್ಟೂಡಿಯೊ ಅಲ್ಲ, ಬದಲಿಗೆ ಅದನ್ನು ತಯಾರಿಸುವ ಮಹಿಳೆಯೊಬ್ಬರಿಂದ ಆನ್ಲೈನ್‌ ಮೂಲಕ ಕೊಂಡು ತರಿಸಲಾದವು. ಕಂತು 11, ಋತು 12ರ 'ಕಾಮೆಂಟರಿ ಮಿನಿ': ಪ್ಯಾಂಡೆಮಿಕ್‌ 2: ದಿ ಸ್ಟಾರ್ಟ್ಲಿಂಗ್‌
  115. Guerrini, Anita (2003). Experimenting with Humans and Animals. Johns Hopkins. p. 42. ISBN 0-8018-7196-4.
  116. Buchholz, Andrea C; Schoeller, Dale A. (2004). "Is a Calorie a Calorie?". American Journal of Clinical Nutrition. 79 (5): 899S–906S. doi:10.1186/1475-2891-3-9. PMID 15113737. Retrieved 2007-03-12.{{cite journal}}: CS1 maint: unflagged free DOI (link)
  117. ಗ್ವೆರಿನಿ, ಪಿಪಿ. 98–104.
  118. Gray, Tara (1998). "A Brief History of Animals in Space". National Aeronautics and Space Administration. Archived from the original on 2015-02-24. Retrieved 2007-05-03.
  119. "Timeline: China's Space Quest". CNN.com. 2004-01-05. Retrieved 2007-05-03.
  120. "Guinea-pig". Oxford English Dictionary online (subscription access required). Archived from the original on 2006-06-25. Retrieved 2007-02-22.
  121. Kallet, Arthur; Schlink, F. J. (1933). 100,000,000 Guinea Pigs: Dangers in Everyday Foods, Drugs, and Cosmetics. Vanguard Press. ISBN 978-0405080258.
  122. McGovern, Charles (2004). "Consumption". In Whitfield, Stephen J. (ed.). A Companion to 20th-Century America. Blackwell. p. 346. ISBN 0-631-21100-4.
  123. Vaculík, Ludvík (1973). The Guinea Pigs. Third Press. ISBN 978-0893880606.
  124. ೧೨೪.೦ ೧೨೪.೧ ೧೨೪.೨ ೧೨೪.೩ ೧೨೪.೪ Gad, Shayne C. (2007). Animal Models in Toxicology (2nd ed.). Taylor & Francis. pp. 334–402. ISBN 0-8247-5407-7.
  125. ೧೨೫.೦ ೧೨೫.೧ ೧೨೫.೨ ೧೨೫.೩ Reid, Mary Elizabeth (1958). The Guinea Pig in Research. Human Factors Research Bureau. pp. 62–70.
  126. ವ್ಯಾಗ್ನರ್‌, ಪು. 100.
  127. "NHGRI Adds 18 Organisms to Sequencing Pipeline". National Institutes of Health. 2004-08-04. Archived from the original on 2007-07-14. Retrieved 2007-04-25.
  128. PMID 12555613 Tidsskr Nor Laegeforen. 2002ರ ಜೂನ್‌ 30;122(17):1686-7. [ಅಕ್ಸೆಲ್‌ ಹೊಲ್ಸ್ಟ್‌ ಅಂಡ್‌ ಥಿಯೊಡೊರ್‌ ಫ್ರೊಲಿಕ್‌--ಪಯೊನಿಯರ್ಸ್‌ ಇನ್‌ ದಿ ಕಂಬ್ಯಾಟ್‌ ಆಫ್‌ ಸ್ಕರ್ವಿ][ನಾರ್ವೆಜಿಯನ್ ಭಾಷೆಯಲ್ಲಿ ಲೇಖನ] ನೊರಮ್‌ ಕೆಆರ್‌, ಗ್ರ್ಯಾವ್‌ ಎಚ್‌ಜೆ.
  129. 'ಸಿ' ಜೀವಸತ್ತ್ವದ ರಾಸಾಯನಿಕ ಪರಿಶೋಧನದ ಕಥೆ. 2010ರ ಜನವರಿ 21ರಂದು ವೀಕ್ಷಿಸಲಾಯಿತು.
  130. Chan, Shu Jin; Episkopou, V; Zeitlin, S; Karathanasis, SK; MacKrell, A; Steiner, DF; Efstratiadis, A; et al. (1984). "Guinea Pig Preproinsulin Gene: An Evolutionary Compromise?". Proceedings of the National Academy of Sciences USA. 81 (16): 5046–5050. doi:10.1073/pnas.81.16.5046. PMC 391634. PMID 6591179. {{cite journal}}: Explicit use of et al. in: |first= (help)
  131. Bowsher, Ronald; L; B; S; L; W; C; et al. (1 January 1999). "Sensitive RIA for the Specific Determination of Insulin Lispro". Clinical Chemistry. 45 (1): 104–110. PMID 9895345. Retrieved 2007-03-15. {{cite journal}}: Explicit use of et al. in: |first= (help)
  132. Adkins, Ronald; G; R; H; et al. (1 May 2001). "Molecular Phylogeny and Divergence Time Estimates for Major Rodent Groups: Evidence from Multiple Genes". Molecular Biology and Evolution. 18 (5): 777–791. PMID 11319262. Retrieved 2007-04-25. {{cite journal}}: Explicit use of et al. in: |first= (help)
  133. ೧೩೩.೦ ೧೩೩.೧ ಟೆರಿಲ್‌, ಪಿಪಿ. 2–3.
  134. Banks, Ron (1989-02-17). "The Guinea Pig: Biology, Care, Identification, Nomenclature, Breeding, and Genetics". USAMRIID Seminar Series. Retrieved 2007-05-23.
  135. ಐಎಡಫ್‌ ಕೂದಲಿಲ್ಲದ ಗಿನಿಯಿಲಿಗಳು. ಚಾರ್ಲ್ಸ್‌ ರಿವರ್‌ ಲ್ಯಾಬೊರೆಟರಿಸ್‌. 2008ರ ಅಕ್ಟೊಬರ್‌ 30ರಂದು ವೀಕ್ಷಿಸಲಾಯಿತು.
  136. ಮೊರೆಲ್ಸ್‌, ಪು. 47.
  137. ಮೊರೆಲ್ಸ್‌, ಪಿಪಿ. xxvi, 4, 32.
  138. ೧೩೮.೦ ೧೩೮.೧ Nuwanyakpa, M.; et al. (1997). "The current stage and future prospects of guinea pig production under smallholder conditions in West Africa". Livestock Research for Rural Development. 9 (5). Retrieved 2007-04-16. {{cite journal}}: Explicit use of et al. in: |first= (help); Unknown parameter |month= ignored (help)
  139. ಮೊರೆಲ್ಸ್‌, ಪಿಪಿ. 32–43.
  140. Mitchell, Chip (2006-11-01). "Guinea Pig: It's What's for Dinner". The Christian Science Monitor. Retrieved 2007-03-12.
  141. ೧೪೧.೦ ೧೪೧.೧ ೧೪೧.೨ ಮೊರೆಲ್ಸ್‌, ಪಿಪಿ. 48–67.
  142. ೧೪೨.೦ ೧೪೨.೧ ೧೪೨.೨ ೧೪೨.೩ ಮೊರೆಲ್ಸ್‌, ಪಿಪಿ. 101–112.
  143. ಮೊರೆಲ್ಸ್‌, ಪಿಪಿ. 119–126.
  144. "Peruvians Pig-Out". ITN. 2007-07-26. Archived from the original on 2007-09-27. Retrieved 2007-07-29.
  145. ಮೊರೆಲ್ಸ್‌, ಪಿಪಿ. xvii, 133–134.
  146. ಮೊರೆಲ್ಸ್‌, ಪು. 16.
  147. ಮೊರೆಲ್ಸ್‌, ಪಿಪಿ. 16–17.


ಉಲ್ಲೇಖಗಳು

[ಬದಲಾಯಿಸಿ]
  • Archetti, Eduardo (1997). Guinea-Pigs: Food, Symbol and Conflict of Knowledge in Ecuador. Berg. ISBN 1-85973-114-7.
  • Chazan, Michael (2008). World Prehistory and Archaeology: Pathways through Time. Pearson Education, Inc. ISBN 0-205-40621-1.
  • Morales, Edmundo (1995). The Guinea Pig: Healing, Food, and Ritual in the Andes. University of Arizona Press. ISBN 0-8165-1558-1.
  • Richardson, V.C.G. (2000). Diseases of Domestic Guinea Pigs (2nd ed.). Blackwell. ISBN 0-632-05209-0.
  • Terril, Lizabeth A.; Clemons, Donna J. (1998). The Laboratory Guinea Pig. CRC Press. ISBN 0-8493-2564-1.
  • Vanderlip, Sharon (2003). The Guinea Pig Handbook. Barron's. ISBN 0-7641-2288-6.
  • Wagner, Joseph E.; Manning, Patrick J (1976). The Biology of the Guinea Pig. Academic Press. ISBN 0-12-730050-3.

ಬಾಹ್ಯ ಕೊಂಡಿಗಳು

[ಬದಲಾಯಿಸಿ]