ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಗಿನ್ನೆಸ್ ದಾಖಲೆಗಳ ಪುಸ್ತಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗಿನ್ನಿಸ್ ದಾಖಲೆಗಳಲ್ಲಿ ಮುದ್ರಿತ ಚಿಹ್ನೆ

ಗಿನ್ನಿಸ್ ದಾಖಲೆಗಳ ಪುಸ್ತಕ (ಗಿನ್ನಿಸ್ ದಾಖಲೆಗಳು ಅಥವಾ ಗಿನ್ನಿಸ್ ವಿಶ್ವ ದಾಖಲೆಗಳ ಪುಸ್ತಕ) ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ವಿಶ್ವ ದಾಖಲೆಗಳ ಸಂಗ್ರಹವಿರುವ ಪುಸ್ತಕ. ಪ್ರತಿ ವರ್ಷ ಪ್ರಕಟವಾಗುವ ಈ ಪುಸ್ತಕದಲ್ಲಿ ಮನುಷ್ಯ ಸಾಧನೆಗಳಲ್ಲದೆ (ಉದಾ. ಅತ್ಯಂತ ಹೆಚ್ಚು ಕಾಲ ಜೀವಿತ ವ್ಯಕ್ತಿ), ಪ್ರಾಕೃತಿಕ ವಿಸ್ಮಯಗಳೂ, ಅತಿರೇಕಗಳೂ (ಉದಾ. ಅತ್ಯಂತ ಎತ್ತರದ ಜಲಪಾತ) ಕೂಡ ದಾಖಲಾಗತ್ತದೆ.

ಇತಿಹಾಸ

[ಬದಲಾಯಿಸಿ]

ಗಿನ್ನಿಸ್ ಬ್ರೂವರಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹ್ಯು ಬೀವರ್ ಮತ್ತು ಅವರ ಬೇಟೆಯಾಟದ ಸಹಚರಿಗಳಲ್ಲಿ ಅತ್ಯಂತ ವೇಗವಾಗಿ ಹಾರುವ ಬೇಟೆಯ ಪಕ್ಷಿ ಯಾವುದೆಂದು ಚರ್ಚೆ ನೆಡೆಯಿತು. ಯಾವ ಪುಸ್ತಕದಲ್ಲಿಯೂ ಇದರ ಬಗ್ಗೆ ವಿವರಗಳು ಮತ್ತು ದಾಖಲೆಗಳು ಸಿಗದ ಕಾರಣ, ಗಿನ್ನಿಸ್ ಬ್ರೂವರಿಯು ೧೯೫೫ರಲ್ಲಿ ಈ ತರಹದ ದಾಖಲೆಗಳ ಸಂಗ್ರಹವಿರುವ ಈ ಪುಸ್ತಕ ಹೊರತಂದಿತು. ರಾಸ್ಸ್ ಮತ್ತು ನೊರಿಸ್ಸ್ ಮೆಕ್‌ವಿರ್ಟರ್ ಅವಳಿಗಳು ಮತ್ತು ಆಗಿನ ಕಾಲದ ಕೆಲವು ಬ್ರಿಟೀಷ್ ಪತ್ರಕರ್ತರನ್ನೊಳಗೊಂಡ ಒಂದು ಸತ್ಯಶೋಧನಾ ಸಂಸ್ಥೆ ಈ ಪುಸ್ತಕಕ್ಕಾಗಿ ಸಂಶೋಧನೆ ನೆಡಸಿತು. ಪುಸ್ತಕ ಅನಿರೀಕ್ಷಿತವಾಗಿ ಜನಪ್ರಿಯವಾಗಿ, ತನ್ನ ಹೊಸ ಆವೃತ್ತಿಗಳು ಮತ್ತು ಮರು ಮುದ್ರಣಗಳಿಗೆ ನಾಂದಿ ಹಾಡಿತು. ಸ್ವಲ್ಪಕಾಲದ ನಂತರ ಪ್ರತಿವರ್ಷ ಅಕ್ಟೋಬರ್ ತಿಂಗಳಲ್ಲಿ ಕ್ರಿಸ್ಮಸ್ ಹಬ್ಬದ ಮಾರಟಕ್ಕೆ ಸರಿಹೊಂದುವಂತೆ ಹೊಸ ಆವೃತ್ತಿಗಳು ಬಿಡುಗಡೆಯಾಗ ತೊಡಗಿದವು. ಗಿನ್ನಿಸ್ ದಾಖಲೆಗಳ ಪುಸ್ತಕ ಜಗತ್ತಿನ ಅತಿ ಹೆಚ್ಚು ಮಾರಟವಾದ ಕೃತಿಸಾಮ್ಯತೆ ಪಡೆದ ಪುಸ್ತಕವೆಂದು ತನ್ನ ಪುಟಗಳಲ್ಲಿ ತನ್ನ ಹೆಸರನ್ನು ಸೇರಿಸಿಕೊಂದಿದೆ. ಗಿನ್ನಿಸ್ ದಾಖಲೆಗಳ ಪುಸ್ತಕವನ್ನಾಧಾರಿಸಿ ಹಲವಾರು ಪುಸ್ತಕಗಳು ಹಾಗು ದೂರದರ್ಶನ (ಟಿವಿ) ಕಾರ್ಯಕ್ರಮಗಳು ಹೊಮ್ಮಿವೆ. ಪ್ರಸ್ತುತವಾಗಿ ಈ ಪುಸ್ತಕದ ಮಾಲಿಕತ್ವವನ್ನು ಎಚ್‌ಐಟಿ ಎಂಟರ್ಟೈನಮೆಂಟ್ ಸಂಸ್ಥೆ ಹೊಂದಿದೆ.

ದಾಖಲೆಗಳ ವಿಂಗಡನೆ

[ಬದಲಾಯಿಸಿ]

ದಾಖಲೆಗಳ ಸಂಗ್ರಹಗಳನ್ನು ಹಲವು ವರ್ಗಗಳಲ್ಲಿ ವಿಂಗಡಿಸಲಾಗಿದೆ ಮತ್ತು ಪ್ರತಿ ವರ್ಷ ಹೊಸ ವರ್ಗಗಳ ಮತ್ತು ಉಪವರ್ಗಗಳ ಸೇರ್ಪಡೆಯಾಗುತ್ತಿವೆ. ಕೆಲವು ಮುಖ್ಯ ವರ್ಗಗಳು ಹೀಗಿವೆ.

  • ಮನುಷ್ಯನ ದೇಹ (ಉದಾ. ಜಗತ್ತಿನ ಅತ್ಯಂತ ಕುಳ್ಳ ಮನುಷ್ಯ: ೫೭ ಸೆಂಟಿಮೀಟರ್ ಎತ್ತರದ ಭಾರತದ ಗುಲ್ ಮೊಹಮ್ಮದ್)
  • ಅದ್ಭುತ ಸಾಧನೆಗಳು (ಉದಾ. ಅತಿ ಶೀಘ್ರ ಮೌಂಟ್ ಎವರೆಸ್ಟ್ ಆರೋಹಣ: ೮ ಗಂಟೆ ೧೦ನ ನಿಮಿಷದಲ್ಲಿ ಹತ್ತಿದ ನೇಪಾಳದ ಪೆಂಬ ದೊರ್ಜೀ ಶೇರ್ಪಾ)
  • ಪ್ರಾಕೃತಿಕ ಅದ್ಭುತಗಳು (ಉದಾ. ಪ್ರಪಂಚದ ಅತಿ ದೊಡ್ಡ ಪರ್ವತ ಶ್ರೇಣಿ: ಹಿಮಾಲಯ ಪರ್ವತ ಶ್ರೇಣಿ)
  • ವಿಜ್ಞಾನ ಮತ್ತು ತಂತ್ರಜ್ಞಾನ (ಉದಾ. ಚಂದ್ರನ ಮೇಲೆ ಮೊದಲು ಕಾಲಿಟ್ಟ ಮನುಷ್ಯ: ನೀಲ್ ಆರ್ಮ್‌ಸ್ಟ್ರಾಂಗ್)
  • ಕಲೆ ಮತ್ತು ಮಾಧ್ಯಮಗಳು ಉದಾ. ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಗೆದ್ದ ಅಭಿನೇತ್ರಿ: ೪ ಪ್ರಶಸ್ತಿಗಳನ್ನು ಗೆದ್ದ ಕ್ಯಾಥರೀನ್ ಹೆಪ್‌ಬರ್ನ್)
  • ಆಧುನಿಕ ಪ್ರಪಂಚ (ಉದಾ. ಪ್ರಪಂಚದ ಅತಿ ದೊಡ್ಡ ಮೊಬೈಲ್ ಫೋನ್ ಸಂಸ್ಥೆ: ವೊಡಾಫೋನ್)
  • ಪ್ರವಾಸ ಮತ್ತು ಸಾಗಣೆ (ಉದಾ. ಅತಿ ಹೆಚ್ಚು ಮಾರಾಟವಾಗಿರುವ ವಾಹನ: ಟಯೋಟ ಸಂಸ್ಥೆಯ ಕರೋಲ ಕಾರು)
  • ಕ್ರೀಡೆ ಮತ್ತು ಆಟೋಟಗಳು (ಉದಾ. ಕ್ರಿಕೆಟ್ ಟೆಸ್ಟ್ ಇನಿಂಗ್ಸ್ ನಲ್ಲಿ ಅತಿ ಹೆಚ್ಚು ವಯ್ಯಕ್ತಿಕ ಮೊತ್ತ: ಇಂಗ್ಲಾಂಡ್ ವಿರುದ್ಧ ವೆಸ್ಟ್ ಇಂಡೀಸ್‌ನ ಬ್ರಯಾನ್ ಲಾರ ಅವರ ಅಜೇಯ ೪೦೦)

ನಿಖರತೆ ಮತ್ತು ವಿವಾದಗಳು

[ಬದಲಾಯಿಸಿ]

ಈ ಪುಸ್ತಕದಲ್ಲಿ ಪ್ರಕಟಗೊಂಡಿರುವ ಸುಮಾರು ದಾಖಲೆಗಳು ನಿಖರವಾದ್ದದು, ಆದರೂ ಈ ಪುಸ್ತಕ ವಿವಾದಗಳಿಂದ ಹೊರತಾಗಿಲ್ಲ. ಕೆಲವು ದಾಖಲೆಗಳು ಸತ್ಯಕ್ಕೆ ದೂರವಾದವು ಎಂಬ ಆಪಾದನೆಗಳಿವೆ. ಜಪಾನಿನ ಶಿಗೆಚಿಯೊ ಇಜುಮಿ ಅತಿ ಹೆಚ್ಚು ವರ್ಷಗಳು ಜೀವಿಸಿದ ಪುರುಷ ಎಂದು ಗಿನ್ನಿಸ್ ದಾಖಲೆಗಳ ಪುಸ್ತಕ ಹೇಳುತ್ತದ ಆದರೆ ಕೆಲವರು ಇದು ಸುಳ್ಳು ದಾಖಲೆಗಳು ಸೃಷ್ಟಿಸಿ ಸಿದ್ಧಪಡಿಸಿರುವುದೆಂದು ವಾದಿಸುತ್ತಾರೆ. ಇತರ ಕೆಲವು ವಿವಾದಾತ್ಮಕ ದಾಖಲೆಗಳು ಹೀಗಿವೆ

ನೈತಿಕ ವಿಷಯಗಳು

[ಬದಲಾಯಿಸಿ]

ಮೊದಲು ಪ್ರಕಟವಾಗಿದ್ದ ಕೆಲವು ದಾಖಲೆಗಳನ್ನು ನಂತರ ನೈತಿಕ ಕಾರಣಗಳಿಂದ ಕೈ ಬಿಡಲಾಗಿವೆ. ತಮ್ಮ ಮತ್ತು ಇತರರ ಆರೋಗ್ಯ ಮತ್ತು ಸುರಕ್ಷತೆಯನ್ನು ಲೆಕ್ಕಿಸದೆ ಜನರು ಪುಸ್ತಕದಲ್ಲಿ ಪ್ರಸ್ತಾಪವಾಗಿರುವ ಅಪಾಯಕಾರಿ ದಾಖಲೆಗಳನ್ನು ಮುರಿಯುವ ಪ್ರಯತ್ನ ಮಾಡಬಹುದೆಂಬ ಕಾರಣದಿಂದ ಕೆಲವು ದಾಖಲೆಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ. ಉದಾ.

  • ಅತಿ ಹೆಚ್ಚು ಭಾರವಾದ ಬೆಕ್ಕಿನ ದಾಖಲೆ ಮುರಿಯಲು ಜನರು ತಮ್ಮ ಬೆಕ್ಕುಗಳಿಗೆ ಅತಿಯಾಗಿ ತಿನ್ನಿಸಿ ಅದರ ಆರೋಗ್ಯ ಹಾಳು ಮಾಡಬಹುದು.
  • ಅತ್ತಿ ಉದ್ದದ ಕತ್ತಿಯನ್ನು ಬಾಯಲ್ಲಿ ಇಳಿಸುವ ದಾಖಲೆ ಮುರಿಯಲು ಹೋಗಿ ಮಾರಣಾಂತಿಕ ಗಾಯ ಮಾಡಿಕೊಳ್ಳಬಹುದು.

ಇತ್ತೀಚೆಗೆ ಜೀವಕ್ಕೆ ಹಾನಿಕರವಾಗಬಲ್ಲ ಕುಡಿತಕ್ಕೆ ಸಂಬಂಧಪಟ್ಟ ದಾಖಲೆಗಳ ಮತ್ತು ಮುಳ್ಳಿನ ಹಾಸಿನ ಮೇಲೆ ಮಲಗಿ ಭಾರ ಹೊರುವ ದಾಖಲೆಗಳನ್ನು ಕೈಬಿಡಲಾಗಿದೆ.

ಬಾಹ್ಯ ಸಂಪರ್ಕ ಕೊಂಡಿಗಳು

[ಬದಲಾಯಿಸಿ]