ಮೊದಲನೆಯ ಎಲಿಜಬೆಥ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೊದಲನೆಯ ಎಲಿಜಬೆಥ್

ಮೊದಲನೆಯ ಎಲಿಜಬೆಥ್ (ಸೆಪ್ಟೆಂಬರ್ ೭, ೧೫೩೩ಮಾರ್ಚ್ ೨೪, ೧೬೦೩) ೧೫೫೮ರಿಂದ ತನ್ನ ಮರಣದವರೆಗೆ ಇಂಗ್ಲೆಂಡ್ ಮತ್ತು ಐರ್ಲೆಂಡ್‍ಗಳ ರಾಣಿಯಾಗಿದ್ದವಳು. ಟ್ಯುಡರ್ ವಂಶದ ಐದನೇ ಹಾಗು ಕೊನೆಯ ಚಕ್ರಾಧಿಪತಿಯಾದ ಈಕೆ ಎಂಟನೆಯ ಹೆನ್ರಿಯ ರಾಜಕುಮಾರಿಯಾಗಿ ಹುಟ್ಟಿದ್ದಾದರೂ, ಇವಳು ಮೂರು ವರ್ಷವಾಗಿದ್ದಾಗ ಇವಳ ತಾಯಿ ಆನ್ ಬೊಲಿನ್ ಮರಣದಂಡನೆಗೆ ತುತ್ತಾಗಿ, ಈಕೆಯನ್ನು ವಿವಾಹೇತರ ಸಂಬಂಧದಿಂದ ಹುಟ್ಟಿದವಳೆಂದು ಘೋಷಿಸಲಾಯಿತು. ಆದರೆ ೧೫೫೮ರಲ್ಲಿ ಇವಳ ಅರೆ-ಸಹೋದರಿ ಮೊದಲನೆಯ ಮೇರಿಯ ಸಾವಿನ ನಂತರ ಈಕೆ ಪಟ್ಟಕ್ಕೆ ಬಂದಳು.

ಜೀವನಪರ್ಯಂತ ಅವಿವಾಹಿತಳಾಗಿ ಉಳಿದ ಈಕೆ ಸೌಮ್ಯವಾದಿಯಾಗಿದ್ದು, ತನ್ನ ೪೪ ವರ್ಷಗಳ ದೀರ್ಘ ಆಡಳಿತದಲ್ಲಿ ಇಂಗ್ಲೆಂಡ ಅನ್ನು ಪ್ರಬಲ ರಾಷ್ಟ್ರವನ್ನಾಗಿ ಮಾಡಿದಳು. ಈಕೆಯ ಆಳ್ವಿಕೆಯನ್ನು ಇಂಗ್ಲೆಂಡಿನ ಸುವರ್ಣ ಯುಗವೆಂದು ಪರಿಗಣಿಸಲಾಗುತ್ತದೆ.