ವಿಷಯಕ್ಕೆ ಹೋಗು

ಕ್ಯಾರೀಫೂರ್‌

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Groupe Carrefour
ಸಂಸ್ಥೆಯ ಪ್ರಕಾರSociété Anonyme (EuronextCA)
ಸ್ಥಾಪನೆ1957
ಮುಖ್ಯ ಕಾರ್ಯಾಲಯLevallois-Perret, ಫ್ರಾನ್ಸ್
ಪ್ರಮುಖ ವ್ಯಕ್ತಿ(ಗಳು)Lars Olofsson (CEO), Amaury de Sèze (Chairman)
ಉದ್ಯಮRetail
ಸೇವೆಗಳುDiscount, grocery and convenience stores, cash and carry, hypermarkets
ಆದಾಯ85.96 billion (2009)[]
ಆದಾಯ(ಕರ/ತೆರಿಗೆಗೆ ಮುನ್ನ)€1.705 billion (2009)[]
ನಿವ್ವಳ ಆದಾಯ€385 million (2009)[]
ಉದ್ಯೋಗಿಗಳುover 495,000 (2009)[]
ಉಪಸಂಸ್ಥೆಗಳುSee below
ಜಾಲತಾಣwww.carrefour.com

ಕ್ಯಾರೀಫೂರ್‌ ಎಸ್.ಎ. (EuronextCA) (French pronunciation: ​[kaʁfuʁ]) ಫ್ರೆಂಚ್‌ ಅಂತರರಾಷ್ಟ್ರೀಯ ವ್ಯಾಪಾರ ಮಹಾಮಳಿಗೆ ಸಮೂಹ. ಇದರ ಪ್ರಧಾನ ಕಾರ್ಯಸ್ಥಳವು ಫ್ರಾನ್ಸ್‌ [] ದೇಶದ ಲೆವಲೊಯಿ-ಪೆರೆಟ್‌‌ನಲ್ಲಿದೆ. ಗಾತ್ರದ ವಿಚಾರದಲ್ಲಿ ಕ್ಯಾರೀಫೂರ್‌ ವಿಶ್ವದ ಅತಿದೊಡ್ಡ ವ್ಯಾಪಾರ ಮಹಾಮಳಿಗೆಯಾಗಿದೆ. ಆದಾಯದ ವಿಚಾರದಲ್ಲಿ ಇದು ವಿಶ್ವದಲ್ಲಿ ಎರಡನೆಯ ಅತಿದೊಡ ವ್ಯಾಪಾರ ಉದ್ದಿಮೆಯಾಗಿದೆ. ವಾಲ್‌-ಮಾರ್ಟ್‌ ಮತ್ತು ಟೆಸ್ಕೊ ನಂತರ, ಕ್ಯಾರೀಫೂರ್‌ ಮೂರನೆಯ ಅತಿ ಹೆಚ್ಚು ಲಾಭ ಗಳಿಸುವ ಮಹಾಮಳಿಗೆಯಾಗಿದೆ. ಕ್ಯಾರೀಫೂರ್‌ ತನ್ನ ವ್ಯಾಪಾರ ಮಹಾಮಳಿಗೆಗಳನ್ನು ಮುಖ್ಯವಾಗಿ ಯುರೋಪ್‌, ಅರ್ಜೆಂಟೀನಾ, ಬ್ರೆಜಿಲ್‌, ಚೀನಾ, ಕೊಲೊಂಬಿಯಾ ಹಾಗೂ ಡೊಮಿನಿಕನ್‌ ಗಣರಾಜ್ಯಗಳಲ್ಲಿ ನಡೆಸುತ್ತದೆ. ಅಲ್ಲದೆ, ಅದರ ಕೆಲವು ಮಳಿಗೆಗಳು ಉತ್ತರ ಆಫ್ರಿಕಾ ಮತ್ತು ಏಷ್ಯಾದ ಕೆಲವು ಭಾಗಗಳಲ್ಲಿಯೂ ಇವೆ. ಫ್ರೆಂಚ್‌ ಭಾಷೆಯಲ್ಲಿ ಕ್ಯಾರೀಪೂರ್‌ ಎಂದರೆ 'ಅಡ್ಡದಾರಿಗಳು' ಎಂದರ್ಥ.

ಇತಿಹಾಸ

[ಬದಲಾಯಿಸಿ]
ಚಿತ್ರ:CareffourSibiu.jpg
ರೊಮಾನಿಯಾದ ಸಿಬಿಯುನಲ್ಲಿ ಕ್ಯಾರೀಫೂರ್‌ ಮಳಿಗೆ.

ಮೊಟ್ಟಮೊದಲ ಕ್ಯಾರೀಫೂರ್‌ ಅಂಗಡಿಯು 1957ರ ಜೂನ್‌ 3ರಂದು ಹೊರವಲಯದ ಆನೆಸಿಯಲ್ಲಿ ಅಡ್ಡದಾರಿಗಳ (ಫ್ರೆಂಚ್‌ ಭಾಷೆಯಲ್ಲಿ [carrefour] Error: {{Lang}}: text has italic markup (help)) ಹತ್ತಿರ ಸ್ಥಾಪಿತವಾಯಿತು. ಮಾರ್ಸೆಲ್‌ ಫೂರ್ನಿಯರ್‌, ಡೆನಿಸ್‌ ಡೆಫೊರೆ ಮತ್ತು ಜ್ಯಾಕ್ಸ್‌ ಡೆಫೊರೆ ಈ ಸಂಕೀರ್ಣವನ್ನು ಸ್ಥಾಪಿಸಿದರು. ಮೊಟ್ಟಮೊದಲು ಅಂಗಡಿಯಾಗಿದ್ದ ಇದು ಕ್ರಮೇಣ ಸರಪಳಿಯಾಗಿ ಬೆಳೆಯಿತು. ಫ್ರೆಂಚ್‌ ಮಾರುಕಟ್ಟೆಯಲ್ಲಿ ಅದರ ಪ್ರಮುಖ ಪ್ರತಿಸ್ಪರ್ಧಿಗಳಲ್ಲಿ ಒಂದಾದ ಪ್ರೊಮೊಡೆಸ್‌ (ಇದು ಕಾಂಟಿನೆಂಟ್‌ ಎಂದೂ ಪರಿಚಿತವಾಗಿದೆ) ಒಂದಿಗೆ ಕ್ಯಾರೀಫೂರ್‌ 1999ರಲ್ಲಿ ವಿಲೀನವಾಯಿತು.

ಮಾರ್ಸೆಲ್‌ ಫೂರ್ನಿಯರ್‌, ಡೆನಿಸ್‌ ಡಿಫೊರೆ ಮತ್ತು ಜ್ಯಾಕ್ಸ್‌ ಡೆಫೊರೆ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಹಲವು ವಿಚಾರಗೋಷ್ಠಿಗಳಲ್ಲಿ ಹಾಜರಾಗಿದ್ದರು. ಆಧುನಿಕ ವಿತರಣಾ ಕ್ಷೇತ್ರದ ಪಿತಾಮಹ ಎನ್ನಲಾದ ಬರ್ನಾರ್ಡೊ ಟ್ರುಜಿಲೊ ಈ ವಿಚಾರಗೋಷ್ಠಿಗಳಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. ಇತರೆ ಪ್ರಸಿದ್ಧ ಫ್ರೆಂಚ್‌ ಕಾರ್ಯನಿರ್ವಾಹಕರಾದ ಎಡ್ವರ್ಡ್‌ ಲೆಕ್ಲರ್ಕ್‌ (ಇ. ಲೆಕ್ಲರ್ಕ್‌), ಗೆರಾರ್ಡ್‌ ಮುಲಿಯೆಜ್‌ (ಆಚಾನ್‌), ಪಾಲ್‌ ಡುಬ್ರುಲ್‌ (ಅಕೋರ್‌‌) ಹಾಗೂ ಗೆರಾರ್ಡ್‌ ಪೆಲಿಸನ್‌ (ಅಕೋರ್‌) ಮೇಲೆ ಬರ್ನಾರ್ಡೊ ಟ್ರುಜಿಲೊ ಪ್ರಭಾವ ಬೀರಿದ್ದರು. 'No parking, no business'(ನೋ ಪಾರ್ಕಿಂಗ್,ನೋ ಬಿಸಿನೆಸ್) ಎಂಬುದು ಅವರ ಧ್ಯೇಯವಾಕ್ಯವಾಗಿತ್ತು.

ಕ್ಯಾರೀಫೂರ್‌ ಗ್ರೂಪ್ ಮೊಟ್ಟಮೊದಲ ಬಾರಿಗೆ 'ಒಂದೇ ಸೂರಿನಡಿ ವ್ಯಾಪಾರ ಮಹಾಮಳಿಗೆ'[dubious ], 'ದೊಡ್ಡ ಪ್ರಮಾಣದ ಮಹಾಮಾರುಕಟ್ಟೆ' ಮತ್ತು 'ವಿವಿಧ ಸರಕುಗಳ ಅಂಗಡಿ'ಯ ಪರಿಕಲ್ಪನೆಯನ್ನು ಪರಿಚಯಿಸಿತು. ಫ್ರಾನ್ಸ್‌ ದೇಶದ ರಾಜಧಾನಿ ಪ್ಯಾರಿಸ್‌ ಬಳಿ ಸೇಂಟ್‌-ಜೆನಿವಿಯೆವ್-ಡೆ-ಬೊಯಿಯಲ್ಲಿ ತನ್ನ ಮೊಟ್ಟಮೊದಲ ವ್ಯಾಪಾರ ಮಹಾಮಳಿಗೆಯನ್ನು 1963ರ ಜೂನ್‌ 15ರಂದು ಆರಂಭಿಸಿತು.[] thumb|250px|ಕ್ಯಾರೀಫೂರ್‌ನ ವಹಿವಾಟಿನ ಲಾಂಛನ

1976ರ ಏಪ್ರಿಲ್‌ ತಿಂಗಳಲ್ಲಿ, ಕ್ಯಾರೀಫೂರ್‌ Produits libres (ಪ್ರಾಡ್ಯುಟ್ಸ್‌ ಲಿಬ್ರ್‌) (ಅರ್ಥ: ಉಚಿತ ಉತ್ಪನ್ನಗಳು) ಎಂಬ ತಮ್ಮದೇ ಖಾಸಗಿ ಮುದ್ರೆಯಡಿ ಉತ್ಪನ್ನಗಳನ್ನು ಪರಿಚಯಿಸಿತು ('ಉಚಿತ‌ ಉತ್ಪನ್ನಗಳು' -- ಲಿಬ್ರ್ ‌ ಎಂದರೆ ಸ್ವಾತಂತ್ರ್ಯ ದ ದೃಷ್ಟಿಯಿಂದ 'ಉಚಿತ' ಎಂದರ್ಥ. ಇದು gratis (ಗ್ರ್ಯಾಟಿಸ್) ‌ ಎಂಬುದಕ್ಕೆ ತದ್ವಿರುದ್ಧವಾಗಿದೆ). ಪ್ರಾಡ್ಯೂಟ್‌ ಲಿಬ್ರ್‌ ಹೆಸರಿನಡಿ ಖಾದ್ಯ ತೈಲಗಳು, ಕ್ರ್ಯಾಕರ್‌ ಮತ್ತು ಕುಕೀ ಬಿಸ್ಕಟ್‌ಗಳು, ಹಾಲು ಹಾಗೂ ಪ್ಯಾಸ್ಟಾ ಸೇರಿದಂತೆ ಐವತ್ತು ಖಾದ್ಯಪದಾರ್ಥಗಳು ವ್ಯಾಪಾರಮುದ್ರೆಯಿಲ್ಲದ ಬಿಳಿ ಬಣ್ಣದ ಪೊಟ್ಟಣಗಳಲ್ಲಿ ಅಗ್ಗ ಬೆಲೆಯಲ್ಲಿ ಮಾರಾಟವಾಗುತ್ತಿದ್ದವು.

2009ರ ಸೆಪ್ಟೆಂಬರ್‌ ತಿಂಗಳಲ್ಲಿ ಕ್ಯಾರೀಫೂರ್‌ ತನ್ನ ಲಾಂಛನವನ್ನು ನವೀಕರಿಸಿತು.[]

ಧ್ಯೇಯವಾಕ್ಯಗಳು

[ಬದಲಾಯಿಸಿ]
ಚಿತ್ರ:Carrefour day time.jpg
ತಮನ್‌ ಫ್ಲೊರಾ ಉತಾಮಾದಲ್ಲಿರುವ ಕ್ಯಾರೀಫೂರ್‌ ಬತು ಪಹತ್‌
  • ವ್ಯಾಪಾರ ಮಹಾಮಳಿಗೆಗಳು: 'ಸರ್ವರಿಗೂ ಆಯ್ಕೆ ಮತ್ತು ಗುಣಮಟ್ಟ'
  • ವ್ಯಾಪಾರ ಮಹಾಮಳಿಗೆಗಳು: "Esta bueno para vos" (ಅರ್ಜೆಂಟೀನಾ) ('ಇದು ನಿಮಗೆ ಬಹಳ ಒಳ್ಳೆಯದು')
  • ವ್ಯಾಪಾರ ಮಹಾಮಳಿಗೆಗಳು: "Sempre o menor preço." (ಬ್ರೆಜಿಲ್‌), ('ಎಂದಿಗೂ ಅಗ್ಗದ ಬೆಲೆ')
  • ವ್ಯಾಪಾರ ಮಹಾಮಳಿಗೆಗಳು: 'ನನ್ನ ಜೀವನ, ನಾನು ಬಯಸಿದ ಹಾಗೆ' (ಸಿಂಗಪುರ)
  • ವ್ಯಾಪಾರ ಮಹಾಮಳಿಗೆಗಳು: "Untuk hidup yang lebih baik" (ಇಡೊನೇಷ್ಯಾ), ಅರ್ಥ: 'ಉತ್ತಮ ಜೀವನಕ್ಕಾಗಿ'
  • ವ್ಯಾಪಾರ ಮಹಾಮಳಿಗೆಗಳು: "Pentru o viaţă mai bună" (ರೊಮಾನಿಯಾ); ಅರ್ಥ: 'ಉತ್ತಮ ಜೀವನಕ್ಕಾಗಿ'
  • ದೊಡ್ಡ ಅಂಗಡಿಗಳು: 'ಜನರಿಗೆ ಅಗತ್ಯ ಬೆಲೆಗಳು, ಮನೆಯ ಸನಿಹಕ್ಕೆ'
  • ಹಾರ್ಡ್‌ ಡಿಸ್ಕೌಂಟ್‌: 'ಬಹಳಷ್ಟು ಅಗ್ಗ ಬೆಲೆಗಳಲ್ಲಿ ದಿನಸಿ ಪದಾರ್ಥಗಳು'
  • ಕನ್ವೀನಿಯೆನ್ಸ್‌ ಸ್ಟೋರ್ಸ್‌: 'ನಿಮಗೇನು ಬೇಕೋ, ಅದು ನೆರೆಯಲ್ಲೇ ಲಭ್ಯ'
  • ಕ್ಯಾಷ್‌ ಆಂಡ್ ಕ್ಯಾರಿ: 'ಅಡುಗೆ ಗುತ್ತಿಗೆದಾರರಿಗಾಗಿ ಸಾಮೀಪ್ಯ ಮತ್ತು ಸುಲಭ ಲಭ್ಯತೆ'
  • ವ್ಯಾಪಾರ ಮಹಾಮಳಿಗೆಗಳು, ಕ್ಯಾಷ್‌ & ಕ್ಯಾರಿ: "Καθε μέρα για σένα" (ಸೈಪ್ರಸ್‌) ಅರ್ಥ: 'ಪ್ರತಿದಿನವೂ, ನಿಮಗಾಗಿ'

2007ರ ಸೆಪ್ಟೆಂಬರ್‌ನಲ್ಲಿ ವಿಶ್ವದಾದ್ಯಂತ ಕ್ಯಾರೀಫೂರ್‌

[ಬದಲಾಯಿಸಿ]
ಕ್ಯಾರೀಫೂರ್‌ ಸಮೂಹವು ಮಳಿಗೆಗಳನ್ನು ಹೊಂದಿರುವ ದೇಶಗಳು.ಅಧಿಕೃತ ಗುತ್ತಿಗೆದಾರರಡಿ [10] ನೇರ ಸ್ವಾಮ್ಯದಲ್ಲಿ[11]

ಏಷ್ಯಾ

[ಬದಲಾಯಿಸಿ]
  • 1989ರಲ್ಲಿ ಕ್ಯಾರೀಫೂರ್‌ ಯೂನಿ ಪ್ರೆಸಿಡೆಂಟ್‌ ಎಂಟರ್ಪ್ರೈಸಸ್‌ ಕಾರ್ಪೊರೇಷನ್‌‌ನ ಸಹಯೋಗದ ಮೂಲಕ ತೈವಾನ್‌ ಪ್ರವೇಶಿಸುವುದರೊಂದಿಗೆ, ಏಷ್ಯಾದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಿದ ಮೊದಲ ಅಂತರರಾಷ್ಟ್ರೀಯ ಮಳಿಗೆಯಾಯಿತು. ತೈವಾನ್‌ನಲ್ಲಿ ಪಡೆದ ಅನುಭವವನ್ನು ಉದ್ದಿಮೆಯು ಏಷ್ಯಾದ ಇತರೆ ಮಾರುಕಟ್ಟೆಗಳತ್ತ ವಿಸ್ತರಿಸಲು ಬಳಸಿಕೊಂಡಿತು. ಕ್ಯಾರೀಫೂರ್‌ ಮಜೀದ್‌ ಅಲ್‌ ಫುತಯಿಮ್‌ [೨] Archived 2007-10-20 ವೇಬ್ಯಾಕ್ ಮೆಷಿನ್ ನಲ್ಲಿ. ಜೊತೆ ಜಂಟಿ ಸಹಯೋಗದೊಂದಿಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಜೋರ್ಡಾನ್‌ನಲ್ಲಿ ತನ್ನ ಮಳಿಗೆಗಳನ್ನು ಸ್ಥಾಪಿಸಿದೆ. 2007ರ ಮಾರ್ಚ್‌ ತಿಂಗಳಲ್ಲಿ, ಕ್ಯಾರೀಫೂರ್‌ ಕುವೈತ್‌ನ ಅವೆನ್ಯೂಸ್‌ ಮಾಲ್‌ನಲ್ಲಿ ಮಳಿಗೆಯೊಂದನ್ನು ಆರಂಭಿಸಿತು. 2003ರಲ್ಲಿ ಕ್ಯಾರೀಫೂರ್ ಒಮನ್‌ ದೇಶದ ರಾಜಧಾನಿ ಮಸ್ಕತ್‌ನ ಹೊರವಲಯದಲ್ಲಿ ಮಳಿಗೆಯೊಂದನ್ನು ಸ್ಥಾಪಿಸಿತು. ಸೌದಿ ಅರೇಬಿಯಾ ದೇಶದಲ್ಲಿ ಕ್ಯಾರೀಫೂರ್‌ನ 11 ಅಧಿಕೃತ ವಿತರಣೆದಾರರು(ಫ್ರಾಂಚೈಸಿ) ನಿರ್ವಹಿಸುವ ವ್ಯಾಪಾರ ಮಹಾಮಳಿಗೆಗಳಿವೆ. ಇದರಲ್ಲಿ ಐದು ಮಳಿಗೆಗಳು ರಾಜಧಾನಿ ರಿಯಾಧ್‌ನಲ್ಲಿವೆ. 2007ರಲ್ಲಿ, ಫ್ರಾನ್ಸ್‌ ದೇಶದ ಹೊರಗೆ ಕ್ಯಾರೀಫೂರ್‌ನ ವಿಸ್ತರಣೆಯು ಅದರಲ್ಲೂ ವಿಶಿಷ್ಟವಾಗಿ ಏಷ್ಯಾ ಖಂಡದಲ್ಲಿ ಹೆಚ್ಚಾಯಿತು. ಚೀನಾದಲ್ಲೇ 22 ಸೇರಿದಂತೆ, 36 ಹೊಸ ವ್ಯಾಪಾರ ಮಹಾಮಳಿಗೆಗಳು ಸ್ಥಾಪಿತವಾದವು, ಆ ಮೂಲಕ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚು ಮಳಿಗೆ ಸ್ಥಾಪಿಸಿದ ತನ್ನದೇ ದಾಖಲೆಯನ್ನು ಹಿಂದಿಕ್ಕಿತು. 2008ರಲ್ಲಿ ಕ್ಯಾರೀಫೂರ್ ಬಹರೇನ್‌ ಸಿಟಿ ಸೆಂಟರ್‌ನಲ್ಲಿ‌ ಅಧಿಕೃತ-ವಿತರಣೆದಾರ ಸ್ವಾಮ್ಯದ ಶಾಖೆಯನ್ನು ಸ್ಥಾಪಿಸಿತು.
ದೇಶ ಮೊದಲ ಅಂಗಡಿ ವ್ಯಾಪಾರ ಮಹಾಮಳಿಗೆಗಳು ದೊಡ್ಡ ಅಂಗಡಿಗಳು ಹಾರ್ಡ್‌ ಡಿಸ್ಕೌಂಟರ್ಸ್‌
ಚೀನಾ 1995 156 - -
ಇಂಡೋನೇಷಿಯಾ 1998 66 14 -
ಬಹರೇನ್ 2008 1 - -
ಜಪಾನ್‌ 2000 7 - -
ಜೋರ್ಡಾನ್ 2007 1 - -
ಕುವೈತ್ 2007 2 - -
ಮಲೆಷ್ಯಾ 1994 22 5 -
ಒಮನ್‌ 2000 2 - -
ಪಾಕಿಸ್ತಾನ 2009 1 - -
ಇರಾನ್‌ 2009 1 - -
ಕತರ್ 2000 3 - -
ಸೌದಿ ಅರೇಬಿಯಾ 2004 11 - -
ಸಿಂಗಪುರ 1997 2 - -
ಸಿರಿಯಾ 2009 1 - -
ತೈವಾನ್‌ 1989 64 - -
ಥೈಲೆಂಡ್‌‌ 1996 39 - -
ಸಂಯುಕ್ತ ಅರಬ್‌ ಎಮಿರೇಟ್ಸ್‌ [೩] Archived 2010-10-08 ವೇಬ್ಯಾಕ್ ಮೆಷಿನ್ ನಲ್ಲಿ. 1995 11 2 -

ಆಫ್ರಿಕಾ

[ಬದಲಾಯಿಸಿ]
ದೇಶ ಮೊದಲ ಅಂಗಡಿ ವ್ಯಾಪಾರ ಮಹಾಮಳಿಗೆಗಳು ದೊಡ್ಡ ಅಂಗಡಿಗಳು ಹಾರ್ಡ್‌ ಡಿಸ್ಕೌಂಟರ್ಸ್‌
ಟುನಿಷಿಯಾ 2001 1 2 -
ಮೊರಾಕೊ 2009 2 - -
ಅಲ್ಜೀರಿಯ 2005 ಮುಚ್ಚಲಾಯಿತು - -
ಈಜಿಪ್ಟ್ 2002 4 2 -

|- |}

2009ರಲ್ಲಿ ಕ್ಯಾರೀಫೂರ್‌ ಅಲ್ಜೀರಿಯಾದಲ್ಲಿದ್ದ ತನ್ನ ಮಳಿಗೆಯನ್ನು ಮುಚ್ಚಿ, ಮೊರಾಕೊದಲ್ಲಿ ತೆರೆಯಿತು.

ಯುರೋಪ್‌

[ಬದಲಾಯಿಸಿ]
ದೇಶ ಮೊದಲ ಅಂಗಡಿ ವ್ಯಾಪಾರ ಮಹಾಮಳಿಗೆಗಳು ದೊಡ್ಡ ಅಂಗಡಿಗಳು ಹಾರ್ಡ್‌ ಡಿಸ್ಕೌಂಟರ್ಸ್‌ ಕನ್ವೀನಿಯನ್ಸ್‌ ಸ್ಟೋರ್ಸ್‌ ಕ್ಯಾಷ್‌ & ಕ್ಯಾರಿ
ಅಜರ್ಬೈಜಾನ್ 2010 03 03 - - -
ಬೆಲ್ಜಿಯಂ 2000 56 280 - 257 -
ಬಲ್ಗೇರಿಯ 2009 4 - - - -
ಸೈಪ್ರಸ್‌ 2006 7 6 - - -
ಫ್ರಾನ್ಸ್‌‌ 1960 218 1,021 897 3,245 134
ಗ್ರೀಸ್‌ 1991 28 210 397 216 -
ಇಟಲಿ 1993 59 485 - 1,015 20
ಮೊನಾಕೊ - - 1 - - -
ಪೋಲೆಂಡ್ 1997 72 277 - 5 -
ಪೊರ್ಚುಗಲ್ 1991 - - 365 - -
ರೊಮಾನಿಯ 2001 22 23 - - -
ಸ್ಪೇನ್‌ 1973 161 87 2,912 3 -
ಸ್ಲೊವಾಕಿಯ 1998 4 - - - -
ತುರ್ಕಿ 1993 19 99 519 - -
ಯುನೈಟೆಡ್‌ ಕಿಂಗ್ಡಮ್‌/ಐರ್ಲೆಂಡ್‌ - - - - - -

2009ರ ಅಕ್ಟೋಬರ್‌ 15ರಂದು, ಕ್ಯಾರೀಫೂರ್‌ ರಷ್ಯಾದಲ್ಲಿರುವ ತನ್ನ ಉದ್ದಿಮೆಯನ್ನು ಮಾರಿಬಿಡುವ ಇಂಗಿತವನ್ನು ವ್ಯಕ್ತಪಡಿಸಿತು, ಇದಕ್ಕೆ 'ಸುವ್ಯವಸ್ಥಿತ ಬೆಳವಣಿಗೆಯ ಮತ್ತು ಇತರೆ ಉದ್ದಿಮೆಗಳನ್ನು ತನ್ನ ಸ್ವಾಮ್ಯಕ್ಕೆ ತೆಗೆದುಕೊಳ್ಳುವ ಅವಕಾಶಗಳ ಕೊರತೆ' ಎಂಬ ಕಾರಣಗಳನ್ನು ಮುಂದಿಟ್ಟಿತು.[]

ಅಮೆರಿಕಾ ಖಂಡಗಳು

[ಬದಲಾಯಿಸಿ]
  • ಅಮೆರಿಕಾದ ಒಟ್ಟು ನಾಲ್ಕು ದೇಶಗಳಲ್ಲಿ ಕ್ಯಾರೀಫೂರ್‌ನ ವ್ಯಾಪಾರ ಮಹಾಮಳಿಗೆಗಳಿವೆ: ಬ್ರೆಜಿಲ್‌, ಅರ್ಜೆಂಟೀನಾ, ಕೊಲೊಂಬಿಯಾ ಹಾಗೂ ಡಾಮಿನಿಕನ್ ಗಣರಾಜ್ಯ. ಚಿಲ್ಲರೆ ವಿತರಣೆಯ ಮೂರು ರೀತಿಗಳಲ್ಲಿ ಕ್ಯಾರೀಫೂರ್‌ ಸಕ್ರಿಯವಾಗಿದೆ: ವ್ಯಾಪಾರ ಮಹಾಮಳಿಗೆಗಳು, ದೊಡ್ಡ ಅಂಗಡಿಗಳು ಮತ್ತು ಹಾರ್ಡ್‌ ಡಿಸ್ಕೌಂಟರ್ಸ್‌. ಅಟಕೆಡಾವೊ ಮಳಿಗೆಯನ್ನು ಕೊಳ್ಳುವುದರೊಂದಿಗೆ ಕ್ಯಾರೀಫೂರ್‌ ಬ್ರೆಜಿಲ್‌ನ ಕ್ಯಾಷ್‌ ಆಂಡ್ ಕ್ಯಾರಿ ಮಾರುಕಟ್ಟೆಯನ್ನು ಪ್ರವೇಶಿಸಿತು.[] ಕ್ಯಾರೀಫೂರ್‌ ಮೆಕ್ಸಿಕೊ ದೇಶದಲ್ಲೂ 1995ರಿಂದ 2005ರವರೆಗೆ ಸಕ್ರಿಯವಾಗಿತ್ತು. 2005ರಲ್ಲಿ ತನ್ನ ಎಲ್ಲಾ 29 ವ್ಯಾಪಾರ ಮಹಾಮಳಿಗೆಗಳನ್ನು ಚೆಡ್ರಾವಿ ಉದ್ದಿಮೆಗೆ ಮಾರಿತು.
ದೇಶ ಮೊದಲ ಅಂಗಡಿ ವ್ಯಾಪಾರ ಮಹಾಮಳಿಗೆಗಳು ದೊಡ್ಡ ಅಂಗಡಿಗಳು ಹಾರ್ಡ್ ಡಿಸ್ಕೌಂಟರ್ಸ್‌ ಕನ್ವೀನಿಯನ್ಸ್‌ ಸ್ಟೋರ್ಸ್‌ ಕ್ಯಾಷ್‌ & ಕ್ಯಾರಿ
ಅರ್ಜೆಂಟೀನಾ 1982 59 103 395 - -
ಬ್ರೆಜಿಲ್‌ 1975 150 38 300 5 34
ಕೊಲಂಬಿಯಾ 1998 74 - - - -
ಡೊಮಿನಿಕನ್ ಗಣರಾಜ್ಯ 2000 5 10 - 20 85

ಸ್ಟೋರ್‌ ಬ್ರ್ಯಾಂಡ್‌ಗಳು

[ಬದಲಾಯಿಸಿ]
ಎಟ್ರಿಟಾಟ್‌ನಲ್ಲಿರುವ 8 ಎ ಹ್ಯುಯಿಟ್‌ ಮಳಿಗೆ
ವ್ಯಾಪಾರ ಮಹಾಮಳಿಗೆಗಳು

ಕ್ಯಾರೀಫೂರ್‌, ಅಟಕಡಾವೊ, ಹೈಪರ್ಸ್ಟಾರ್‌.

ದೊಡ್ಡ ಅಂಗಡಿಗಳು(ಸೂಪರ್‌ಮಾರ್ಕೆಟ್)

ಕ್ಯಾರೀಫೂರ್‌ ಬೇರೋ, ಕ್ಯಾರೀಫೂರ್‌ ಎಕ್ಸ್‌ಪ್ರೆಸ್‌, ಕ್ಯಾರೀಫೂರ್‌ ಮಾರ್ಕೆಟ್‌ (ಮುಂಚೆ 2008ರಲ್ಲಿ ಚಾಂಪಿಯನ್‌), ಚಾಂಪಿಯನ್‌ ಮ್ಯಾಪಿನೊಮೊವಾ, ಗ್ಲೊಬಿ, ಜಿಬಿ, ಜಿಎಸ್‌, ಕ್ಯಾರೀಫೂರ್‌ ಮಿನಿ, ಜಿಮಾ.

ಹಾರ್ಡ್‌ ಡಿಸ್ಕೌಂಟ್‌ ಸ್ಟೋರ್ಸ್

ಡಿಯಾ, ಎಡ್‌, ಮಿನಿಪ್ರೆಕೊ.

ಕನ್ವೀನಿಯನ್ಸ್‌‌ ಸ್ಟೋರ್ಸ್‌

ಕ್ಯಾರೀಫೂರ್‌ ಸಿಟಿ, 5 ಮಿನಿಟ್ಸ್‌, 8 ಎ ಹ್ಯೂಯಿಟ್‌, ಮಾರ್ಚ್‌ ಪ್ಲಸ್‌, ಪ್ರಾಕ್ಸಿ (ಸೂಪರ್ಮಾರ್ಕೆಟ್‌), ಷರ್ಪಾ, ಡಿಪರ್ಡಿ, ಸ್ಮೈಲ್‌ ಮಾರ್ಕೆಟ್‌, ಒಕೆ!, ಎಕ್ಸ್‌ಪ್ರೆಸ್‌, ಷೊಪಿ (ಸುಪರ್ಮಾರ್ಕೆಟ್‌).

ಕ್ಯಾಷ್‌ & ಕ್ಯಾರಿ

ಕ್ಯಾರೀಫೂರ್‌ ಕಾಂಟ್ಯಾಕ್ಟ್‌, ಪ್ರೊಮೊಕ್ಯಾಷ್‌, ಡಾಕ್ಸ್‌ ಮಾರ್ಕೆಟ್‌, ಗ್ರಾಸ್‌ ಐಪರ್‌.

ಟೀಕೆಗಳು ಮತ್ತು ವಿವಾದಗಳು

[ಬದಲಾಯಿಸಿ]
ಫ್ರೆಂಚ್‌ ಪಾಲಿನೇಷ್ಯಾ ದೇಶದ ಟಹಿಟಿ ನಗರದ ಫಾ'ಆ ದಲ್ಲಿರುವ ಕ್ಯಾರೀಫೂರ್‌ ದೊಡ್ಡ ಅಂಗಡಿ.

ಇಂದು ಮುಚ್ಚಿದ ಇಂಡೊನೇಷ್ಯಾದ ರಾಜಧಾನಿ ಜಕಾರ್ತಾದಲ್ಲಿರುವ ಕ್ಯಾರೀಪೂರ್‌ ರಾತು ಪ್ಲಾಜಾದಲ್ಲಿ 2007ರ ಮೇ 1ರಂದು CO2(ಇಂಗಾಲದ ಡಯಾಕ್ಸೈಡ್‌) ನಿಂದ ವಿಷಪೂರಿತರಾಗಿ ಅವರನ್ನು ಸೆಂಟ್ರಲ್‌ ಪರ್ಟಾಮಿನಾ ಆಸ್ಪತ್ರೆಗೆ (ರುಮಾ ಸಕಿತ್‌ ಪುಸತ್‌ ಪರ್ಟಾಮಿನಾ ) ಸೇರಿಸಲಾಯಿತು. ವ್ಯಾಪಾರ ಮಹಾಮಳಿಗೆಯು ಬೃಹತ್ ಅಂಗಡಿಗಳ ನೆಲದಡಿ-ಅಂತಸ್ತಿನಲ್ಲಿತ್ತು. ಇದರಿಂದಾಗಿ ಸಾಕಷ್ಟು ಗಾಳಿಬೆಳಕಿನ ಕೊರತೆಯಿತ್ತು.[]

2007ರ ಜೂನ್‌ 26ರಂದು, ಫ್ರೆಂಚ್‌ ನ್ಯಾಯಾಲಯದಲ್ಲಿ ಕ್ಯಾರೀಫೂರ್‌ ಸುಳ್ಳು ಜಾಹೀರಾತಿನ ಆರೋಪದ ಮೇಲೆ ದಂಡನೆಗೆ ಗುರಿಯಾಯಿತು. ಮಾರಾಟ ಮಾಡುವ ಜಾಹೀರಾತಿನ ಉತ್ಪನ್ನಗಳ ಪ್ರಮಾಣವನ್ನು ಕ್ಯಾರೀಫೂರ್‌ ಯಾವಾಗಲೂ ಅಗತ್ಯಕ್ಕಿಂತ ಕಡಿಮೆ ಪ್ರಮಾಣದಲ್ಲಿ ದಾಸ್ತಾನು ಮಾಡುತ್ತಿತ್ತು ಎಂದು ಮೊಕದ್ದಮೆಯಲ್ಲಿ ಆಪಾದಿಸಲಾಗಿತ್ತು. ಜೊತೆಗೆ, ಉತ್ಪನ್ನಗಳನ್ನು ತಮ್ಮ ಅಧಿಕೃತ ದರಗಳಿಗಿಂತಲೂ ಕಡಿಮೆ ವೆಚ್ಚದಲ್ಲಿ ಮಾರುತ್ತಿದ್ದಲ್ಲದೆ, ಸಗಟು ವ್ಯಾಪಾರಿಗಳಿಂದ ಲಂಚ ಪಡೆದ ಆರೋಪಕ್ಕೆ ಗುರಿಯಾಯಿತು. €2 ದಶಲಕ್ಷದಷ್ಟು ದಂಡ ಪಾವತಿಸಿ, ತನ್ನ ಎಲ್ಲಾ ಫ್ರೆಂಚ್‌ ಅಂಗಡಿಗಳಲ್ಲಿ ಈ ಸುಳ್ಳು ಜಾಹೀರಾತಿನ ಬಗ್ಗೆ ಬಹಿರಂಗ ಮಾಡಿ ನೋಟೀಸ್ ಪ್ರದರ್ಶಿಸತಕ್ಕದ್ದು ಎಂದು ನ್ಯಾಯಾಲಯವು ತೀರ್ಪು ನೀಡಿತು.[]

ಇಂಡೊನೇಷಿಯಾದ ರಾಜಧಾನಿ ಜಕಾರ್ತಾದ ಕ್ಯಾರೀಫೂರ್‌ ಮಾಂಗಾ ದುವಾ ಸ್ಕ್ವೇರ್‌ನಲ್ಲಿ ಐದು ಮೀಟರ್‌ ಎತ್ತರದ ಲೋಹದ ಪತ್ತಿಗೆಯು ಮೂರು ವರ್ಷದ ಬಾಲಕನೊಬ್ಬನ ಮೇಲೆ ಬಿದ್ದಿತು. ಆಂತರಿಕ ರಕ್ತ ಸೋರುವಿಕೆಯಾದ ಕಾರಣ, ಆ ಬಾಲಕನು ಸ್ಥಳದಲ್ಲೆ ಮೃತನಾದನು.[] ನಂತರ, ಈ ವಿಚಾರ ಇತ್ಯರ್ಥಗೊಳಿಸಬೇಕಾದ ಕ್ಯಾರೀಫೂರ್‌ ಅಧಿಕಾರಿಗಳು ತಮ್ಮನ್ನು ಭೇಟಿಯಾಗಲು ನಿರಾಕರಿಸಿದರು ಎಂದು ಮೃತನ ಕುಟುಂಬವು ಆರೋಪಿಸಿತು.[೧೦] ಆದರೂ, ಕ್ಯಾರೀಫೂರ್‌ ಸಾಂಸ್ಥಿಕ ವ್ಯವಹಾರಗಳ ಅಧಿಕಾರಿ ಈ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದರು.[೧೧]

ಅಪಾಯಕಾರಿ ದುಡಿಮೆ ಪರಿಸರದ ಪದ್ಧತಿಗಳನ್ನು ಅನುಸರಿಸಿದೆ ಎಂಬ ಟೀಕೆಗಳಿಗೂ ಕ್ಯಾರೀಫೂರ್‌ ಗುರಿಯಾಗಿದೆ..[೧೨]

ಕ್ಯಾರೀಫೂರ್‌ 2,500ಕ್ಕೂ ಹೆಚ್ಚು ಉಲ್ಲಂಘನೆಗಳನ್ನು ಎಸಗಿದ್ದಕ್ಕೆ 2009ರ ಮೇ 7ರಂದು, ಫ್ರೆಂಚ್‌ ಸರ್ಕಾರವು ಅದರ ವಿರುದ್ಧ ಸುಮಾರು €220,000 ದಂಡ ವಿಧಿಸಲು ನ್ಯಾಯಮಂಡಳಿಯೊಂದಕ್ಕೆ ಸೂಚನೆ ನೀಡಿತು. ಮಾಂಸ ಉತ್ಪನ್ನಗಳು ಸರಿಯಾದ ಮಾಹಿತಿ ಹೊಂದಿರಲಿಲ್ಲ (ಕೆಲವು ಮಳಿಗೆಗಳಲ್ಲಿ ತಪಶೀಲು ವಿವರಗಳಲ್ಲಿ 25%ಕ್ಕಿಂತಲೂ ಹೆಚ್ಚು ಕೊರತೆ), ಕೆಲವು ಉತ್ಪನ್ನಗಳಿಗೆ ಅಂಟಿಸಲಾದ ಲೇಬಲ್‌ ಪಟ್ಟಿಗಳಲ್ಲಿ ತಪ್ಪು ಮಾಹಿತಿಯಿತ್ತು - ಉದಾಹರಣೆಗೆ, ಲೇಬಲ್‌ ಪಟ್ಟಿಗಳನ್ನು ಸ್ವೀಕರಿಸಿದ ನಂತರ ಈ ಮಾಂಸ ಉತ್ಪನ್ನಗಳ ತೂಕವು 15%ರಷ್ಟು ಕುಗ್ಗಿದ್ದು ಕಂಡುಬಂದಿತ್ತು. ಕೆಲವು ಕ್ಯಾರಿಫೂರ್‌ ಮಳಿಗೆಗಳಲ್ಲಿ ಅವಧಿಯ ದಿನಾಂಕ ಮೀರಿಹೋಗಿದ್ದ ವಸ್ತುಗಳು ಮಾರಾಟವಾಗುತ್ತಿದ್ದವು. ಇವುಗಳ ಪೈಕಿ ಒಂದು ನಿದರ್ಶನದಲ್ಲಿ, ಶಿಶುಗಳಿಗಾಗಿ ತಯಾರಿಸಿ ಮಾರಾಟವಾದ ಆಹಾರ ಪದಾರ್ಥಗಳ ತಾಜಾತನದ ಅವಧಿ ಮುಗಿದು ಆರು ತಿಂಗಳುಗಳು ಸಂದುಹೋಗಿದ್ದವು. ಶೈತ್ಯ ವಾತಾವರಣದಲ್ಲಿ ಶೇಖರಿಸಲಾದ ಸುಮಾರು 1,625 ಉತ್ಪನ್ನಗಳ ತಪಾಸಣೆ ಮಾಡಿದಾಗ, ಅವುಗಳನ್ನು ಗೋದಾಮುಗಳಲ್ಲಿ ಸಹಜವಾಯು ಉಷ್ಣಾಂಶಗಳಲ್ಲಿ ಶೇಖರಿಸಿದ್ದು ಕಂಡುಬಂದಿತ್ತು.[೧೩]

ಚೀನಾದಲ್ಲಿ ಕ್ಯಾರೀಫೂರ್‌ ಸರಕು ಪೂರೈಕೆಯ ಬಹಿಷ್ಕರಣ

[ಬದಲಾಯಿಸಿ]

2008ರ ಏಪ್ರಿಲ್ ತಿಂಗಳಲ್ಲಿ 2008 ಒಲಿಂಪಿಕ್‌ ಪಂಜಿನ ಸರಣಿ ಓಟಕ್ಕೆ ಟಿಬೆಟ್‌ ಸ್ವಾತಂತ್ರ್ಯ ಪರ ವಾದಿಗಳು ಲಂಡನ್‌ ಹಾಗೂ ಪ್ಯಾರಿಸ್‌ನಲ್ಲಿ ಅಡ್ಡಿಪಡಿಸಿದರು. ಕೆಲವು ಪ್ರತಿಭಟನಾಕಾರರು ಪಂಜನ್ನು ಕಸಿದುಕೊಳ್ಳಲು ಯತ್ನಿಸಿದರು. ಚೀನೀ ಕಾರ್ಯಕರ್ತರು ಕ್ಯಾರೀಫೂರ್‌ನ ಫ್ರೆಂಚ್‌ ಮೂಲಗಳಿದ್ದದ್ದನ್ನು ಅರಿತು, ಅದರ ಬಹಿಷ್ಕರಣೆಯನ್ನು ಉತ್ತೇಜಿಸಿದರು.[೧೪] ಕ್ಯಾರೀಫೂರ್‌ನ ಪ್ರಮುಖ ಷೇರುದಾರರಾದ ಮೊಯೆಟ್‌ ಹೆನೆಸಿ - ಲೂಯಿಸ್‌ ವುಯಿಟನ್‌ ದಲೈ ಲಾಮಾಗೆ ಧನ ಸಹಾಯ ಮಾಡಿದ್ದರೆಂಬ ನಿರಾಧಾರ ವದಂತಿಗಳಿಂದಾಗಿ ಕ್ಯಾರೀಫೂರ್‌ ಬಹಿಷ್ಕರಣೆಯ ಬೆಂಕಿಗೆ ತುಪ್ಪ ಸುರಿದಂತಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಕ್ಯಾರೀಫೂರ್‌ ಚೀನಾ, ಬೀಜಿಂಗ್‌ ಒಲಿಂಪಿಕ್‌ ಕ್ರೀಡೆಗಳಿಗೆ ತನ್ನ ಸಂಪೂರ್ಣ ಬೆಂಬಲವಿದೆ, ಚೀನೀ ಜನತೆ ಭಾವನೆಗಳಿಗೆ ನೋವುಂಟು ಮಾಡುವ ಯಾವುದೇ ಕೃತ್ಯ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿತು.[೧೫] ಚೀನಾದಲ್ಲಿರುವ ಹಲವಾರು ಕ್ಯಾರೀಫೂರ್‌ ಅಂಗಡಿಗಳ ಒಳಗೆ ಹಾಗೂ ಸುತ್ತ ಮುತ್ತಲೂ ಪ್ರತಿಭಟನೆಗಳು ನಡೆದವು. ಚೀನಾದಲ್ಲಿ ಸಾರ್ವತ್ರಿಕ ರಜಾದಿನವಾದ ಕಾರ್ಮಿಕರ ದಿನದಂದು ಕ್ಯಾರೀಫೂರ್‌ನ್ನು ಬಹಿಷ್ಕರಿಸಲು ಕ್ಯಾರೀಫೂರ್‌-ವಿರೋಧಿ ವಾದಿಗಳು ಕರೆ ನೀಡಿದ್ದರು.

ಬಹಿಷ್ಕಾರದ ಪರಿಣಾಮವಾಗಿ, ಅಂತರಜಾಲ ಮಾಹಿತಿ-ಶೋಧ ತಾಣಗಳಾದ Baidu.com.cn ಮತ್ತು sina.com ಕ್ಯಾರೀಫೂರ್‌ನ ಚೀನಾ ಅಂತರಜಾಲತಾಣಕ್ಕೆ ಕೆಲಕಾಲ ಪ್ರವೇಶಾನುಮತಿ ನಿರಾಕರಿಸಿತು. ಬಳಕೆದಾರರು 家乐福 (ಚೀನೀ ಭಾಷೆಯಲ್ಲಿ 'ಕ್ಯಾರೀಫೂರ್'‌) ಎಂದು ನಮೂದಿಸಿ ಹುಡುಕಿದಲ್ಲಿ, ದೋಷ ಪುಟ ಪ್ರದರ್ಶಿತವಾಗುತ್ತಿತ್ತು. 'ಶೋಧದ ಫಲಿತಾಂಶದಲ್ಲಿ ನ್ಯಾಯಸಮ್ಮತವಲ್ಲದ ಅಂಶಗಳುಂಟು. ಆದ್ದರಿಂದ ನಾವು ಈ ಫಲಿತಾಂಶವನ್ನು ತೋರಿಸಲು ನಿರಾಕರಿಸುತ್ತೇವೆ' ಎಂದು ಚೀನೀ ಭಾಷೆಯಲ್ಲಿ ಸಂದೇಶ ಪ್ರದರ್ಶಿತವಾಗುತ್ತಿತ್ತು.[೧೬]

ಹಿಂದೆ ಕ್ಯಾರೀಫೂರ್‌ ಮಳಿಗೆಗಳಿದ್ದ ದೇಶಗಳು

[ಬದಲಾಯಿಸಿ]
ಜಪಾನ್‌ ದೇಶದ ಒಸಾಕಾ ಆಡಳಿತ ಪ್ರಾಂತದ ಮಿನೊಹ್‌ ನಗರದಲ್ಲಿರುವ ಅಂದಿನ ಕ್ಯಾರೀಫೂರ್‌ ಅಂಗಡಿ.
ಥೈಲೆಂಡ್‌ ದೇಶದ ಕ್ಯಾರೀಫೂರ್‌ ಬ್ಯಾಂಗ್ಕಾಕ್‌ ಅಂಗಡಿ.
  • ಚಿಲಿ - 2004ರಲ್ಲಿ, ಕ್ಯಾರೀಫೂರ್‌ ಚಿಲಿಯಲ್ಲಿದ್ದ ತನ್ನ ಎಂಟು ವ್ಯಾಪಾರ ಮಹಾಮಳಿಗೆಗಳನ್ನು ಡಿ&ಎಸ್‌ ಉದ್ದಿಮೆಗೆ ಮಾರಿತು;
  • ಜೆಕ್‌ ಗಣರಾಜ್ಯ - 2005ರ ಸೆಪ್ಟೆಂಬರ್‌ನಲ್ಲಿ ಕ್ಯಾರೀಫೂರ್ ಚೆಕ್‌ ಗಣರಾಜ್ಯದಲ್ಲಿರುವ 11 ಮಳಿಗೆಗಳನ್ನು ಟೆಸ್ಕೊ (ಯುನೈಟೆಡ್‌ ಕಿಂಗ್ಡಮ್‌ನ ಅತಿದೊಡ್ಡ ಚಿಲ್ಲರೆ ಮಾರಾಟ ಮಳಿಗೆ) ಉದ್ದಿಮೆಗೆ ಮಾರಿತು.‌ ಈ ಮಳಿಗೆಗಳು ಹಾಗೂ ತೈವಾನ್‌ನಲ್ಲಿರುವ ಮಳಿಗೆಗಳನ್ನು ಕೊಂಡ ಟೆಸ್ಕೊ, ಕ್ಯಾರೀಫೂರ್‌ಗೆ €57.4 ದಶಲಕ್ಷ ಹಣ ನೀಡಿತು. ಕ್ಯಾರೀಫೂರ್‌ ಚೆಕ್‌ ಗಣರಾಜ್ಯದಲ್ಲಿನ ತನ್ನ ಮೊಟ್ಟಮೊದಲ ಅಂಗಡಿಯನ್ನು 1998ರಲ್ಲಿ ತೆರೆದಿತ್ತು. ಈ ಅಂಗಡಿಗಳು ಇಂದು ಟೆಸ್ಕೊ ಹೆಸರು ಮತ್ತು ಮುದ್ರೆ-ಲಾಂಛನಗಳಡಿಯಲ್ಲಿ ವ್ಯವಹರಿಸುತ್ತವೆ;
  • ಹಾಂಕಾಂಗ್‌ - ಉತ್ಪನ್ನಗಳನ್ನು (ವಿಶೇಷವಾಗಿ ವಿದ್ಯುನ್ಮಾನ) ಪ್ರತಿಸ್ಪರ್ಧಿಗಳ ಉತ್ಪನ್ನಗಳಿಗಿಂತಲೂ ತೀರಾ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದೆ ಎಂದು ಉತ್ಪಾದಕರು ದೂರಿದ ಪರಿಣಾಮವಾಗಿ 2000ದ ಸೆಪ್ಟೆಂಬರ್‌ 18ರಂದು[೧೭][೧೮] ಕ್ಯಾರೀಫೂರ್‌ ಹಾಂಕಾಂಗ್‌ನಲ್ಲಿನ ತನ್ನ ಎಲ್ಲ ಅಂಗಡಿಗಳನ್ನು ಮುಚ್ಚಿತು.[೧೯][ಸೂಕ್ತ ಉಲ್ಲೇಖನ ಬೇಕು] 'ತನ್ನ ವ್ಯಾಪಾರ ಮಹಾಮಳಿಗೆಗಳ ಪರಿಕಲ್ಪನೆಯ ಅಬಿವೃದ್ಧಿಗೆ ಹೊಂದಿಕೊಳ್ಳುವಂತಹ ತಾಣಗಳನ್ನು ಕಂಡುಕೊಳ್ಳುವಲ್ಲಿನ ಕಷ್ಟಗಳು ಹಾಗೂ ಅಲ್ಪಕಾಲದಲ್ಲಿ ಮಾರುಕಟ್ಟೆಯ ಪಾಲು ಗಳಿಸಲು ವಿಫಲವಾಗಿರುವುದು ಇದಕ್ಕೆ ಕಾರಣ' ಎಂದು ಮಳಿಗೆಯ ವಕ್ತಾರರು ತಿಳಿಸಿದರು. 1996ರ ಡಿಸೆಂಬರ್‌ ತಿಂಗಳಲ್ಲಿ ಹೆಂಗ್‌ ಫಾ ಚ್ಯುಯೆನ್‌ನಲ್ಲಿ ಅಂಗಡಿ ಸ್ಥಾಪಿಸುವುದರೊಂದಿಗೆ ಕ್ಯಾರೀಫೂರ್‌ ಹಾಂಕಾಂಗ್‌ ಮಾರುಕಟ್ಟೆಯನ್ನು ಪ್ರವೇಶಿಸಿತು. ಇದಾದ ನಂತರ ಇದು ಟ್ಸುಯೆನ್‌ ವ್ಯಾನ್‌, ಟುಯೆನ್‌ ಮುನ್‌ ಮತ್ತು ಯುವೆನ್‌ ಲಾಂಗ್‌ನಲ್ಲಿ ಸ್ಥಾಪಿಸಿತು. ಮಾ ಆನ್‌ ಷಾನ್‌ ಮತ್ತು ಟ್ಸೆಯುಂಗ್‌ ಕ್ವಾನ್‌ ಓ ನಗರಗಳಲ್ಲಿ ಹೆಚ್ಚುವರಿ ಅಂಗಡಿಗಳ ಸ್ಥಾಪನೆ ಯೋಜನೆಯನ್ನು ರದ್ದುಗೊಳಿಸಲಾಗಿದೆ.[೧೮]
  • ಜಪಾನ್‌ - 2005ರಲ್ಲಿ ಕ್ಯಾರೀಫೂರ್‌ ತನ್ನ ಎಂಟು ವ್ಯಾಪಾರ ಮಹಾಮಳಿಗೆಗಳನ್ನು AEON ಗ್ರೂಪ್‌ಗೆ ಮಾರಿತು;
  • ಮೆಕ್ಸಿಕೊ - 2005ರ ಮಾರ್ಚ್‌ ತಿಂಗಳಲ್ಲಿ ಕ್ಯಾರೀಫೂರ್‌ ಮೆಕ್ಸಿಕೊದಲ್ಲಿರುವ ತನ್ನ 29 ವ್ಯಾಪಾರ ಮಹಾಮಳಿಗೆಗಳನ್ನು ಚೆಡ್ರಾವಿಗೆ ಮಾರಿತು. ಕ್ಯಾರೀಫೂರ್ ಮೆಕ್ಸಿಕೊದಲ್ಲಿನ ತನ್ನ ಮೊಟ್ಟಮೊದಲ ಅಂಗಡಿಯನ್ನು 1995ರಲ್ಲಿ ಸ್ಥಾಪಿಸಿತ್ತು;
  • ಪೊರ್ಚುಗಲ್‌ - ಪೊರ್ಚುಗಲ್ ದೇಶದ‌ ರಾಜಧಾನಿ ಲಿಸ್ಬನ್‌ನ ಟೆಲ್ಹೇರಾಸ್‌ನಲ್ಲಿರುವ ಎರಡು 'ಯುರೊಮ್ಯಾಚೆ' ಹಾಗೂ ಪೊರ್ಟೊ ಹೊರವಲಯದಲ್ಲಿ ವಿಲ ನೊವಾ ಡಿ ಗೆಯಾ ವ್ಯಾಪಾರ ಮಹಾಮಳಿಗೆಗಳನ್ನು 1991ರಲ್ಲಿ‌ ಕೊಂಡುಕೊಳ್ಳುವುದರೊಂದಿಗೆ ಕ್ಯಾರೀಫೂರ್ ಪೊರ್ಚುಗಲ್‌ ಪ್ರವೇಶಿಸಿತು. ಈ ಮಳಿಗೆಗಳ ಸಮೂಹದಲ್ಲಿ ಅತ್ಯುತ್ತಮ ಗುಣಮಟ್ಟದ ಉತ್ಪನ್ನಗಳು ಮಾರಾಟವಾಗುತ್ತಿದ್ದವು. ಇವುಗಳಲ್ಲಿ ಹಲವು ಫ್ರೆಂಚ್‌ ಮೂಲದ ಉತ್ಪನ್ನಗಳಾಗಿದ್ದವು. 2007ರ ಜುಲೈ ತಿಂಗಳಲ್ಲಿ ಕ್ಯಾರೀಫೂರ್‌ ತನ್ನ ಎಲ್ಲಾ 12 ವ್ಯಾಪಾರ ಮಹಾಮಳಿಗೆಗಳು ಮತ್ತು ಒಂಬತ್ತು ಇಂಧನ ಕೇಂದ್ರಗಳನ್ನು €662 ದಶಲಕ್ಷ ಬೆಲೆಗೆ ಸೋನೆಗೆ ಮಾರಿತು. ಇದರಲ್ಲಿ ಹೊಸ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿ ಆರಂಭಿಸಲು 11 ಹೊಸ ಪರವಾನಗಿಪತ್ರಗಳೂ ಇದ್ದವು. ಈ ನಡುವೆ ಈ ದೇಶದಲ್ಲಿ ಕೇವಲ 365 ಹಾರ್ಡ್‌-ಡಿಸ್ಕೌಂಟ್‌ ದೊಡ್ಡ ಅಂಗಡಿಗಳು (ಮಿನಿಪ್ರೆಕೊ) ಮಾತ್ರ ಕ್ಯಾರೀಫೂರ್‌ ಬೆಂಬಲಿತವಾಗಿವೆ. ಇವು ಅನ್ಯ ಉದ್ದಿಮೆಗಳ ಸ್ವಾಧೀನದಲ್ಲಿ ಸೇರ್ಪಡೆಯಾಗಿಲ್ಲ.
  • ರಷ್ಯಾ - ಕ್ಯಾರೀಫೂರ್‌ 2009ರ ಬೇಸಿಗೆಯಲ್ಲಿ ರಷ್ಯನ್‌ ಮಾರುಕಟ್ಟೆ ಪ್ರವೇಶಿಸಿತು. 2009ರ ಅಕ್ಟೋಬರ್‌ ತಿಂಗಳಲ್ಲಿ, ಅಂದರೆ ದೇಶದಲ್ಲಿ ಎರಡನೆಯ ವ್ಯಾಪಾರ ಮಹಾಮಳಿಗೆ ಸ್ಥಾಪಿಸಿ ಕೇವಲ ಒಂದು ತಿಂಗಳ ನಂತರ, ರಷ್ಯಾದಿಂದ ನಿರ್ಗಮಿಸುವುದಾಗಿ ಕ್ಯಾರೀಫೂರ್ ಹೇಳಿಕೆ ನೀಡಿತು.
  • ದಕ್ಷಿಣ ಕೊರಿಯಾ - 2006ರಲ್ಲಿ ಕ್ಯಾರೀಫೂರ್‌ ತನ್ನ ಎಲ್ಲಾ 32 ವ್ಯಾಪಾರ ಮಹಾಮಳಿಗೆಗಳನ್ನು ಇ-ಲೆಂಡ್‌ಗೆ ಮಾರಿಬಿಟ್ಟಿತು. ಈ ಮಳಿಗೆಗಳನ್ನು ಹೋಮ್‌ಎವರ್‌ ಎಂದು ಮರುನಾಮಕರಣ ಮಾಡಲಾಗಿದೆ.
  • ಸ್ವಿಟ್ಜರ್ಲೆಂಡ್‌ - 2007ರ ಆಗಸ್ಟ್‌ ತಿಂಗಳಲ್ಲಿ ಕ್ಯಾರೀಫೂರ್ ಸ್ವಿಟ್ಜರ್ಲೆಂಡ್‌ನಲ್ಲಿರುವ‌ ತನ್ನ ಎಲ್ಲಾ 12 ವ್ಯಾಪಾರ ಮಹಾಮಳಿಗೆಗಳನ್ನು $390 ದಶಲಕ್ಷ ಮೊತ್ತದಲ್ಲಿ ಸ್ವಿಸ್‌ ಚಿಲ್ಲರೆ ವ್ಯಾಪಾರ ಉದ್ದಿಮೆ ಕೂಪ್‌ಗೆ ಮಾರಿತು;[೨೦]
  • ಯುನೈಟೆಡ್‌ ಕಿಂಗ್ಡಮ್‌ - ಸುಮಾರು 1990ರ ತನಕ ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಕ್ಯಾರೀಫೂರ್‌ನದು ಹಲವು ವ್ಯಾಪಾರ ಮಹಾಮಳಿಗೆಗಳಿದ್ದವು. ಇವುಗಳಲ್ಲಿ ಮೊದಲನೆಯದು 1970ರ ದಶಕದಲ್ಲಿ ಸೌತ್‌ ವೇಲ್ಸ್‌ನ ಕೇರ್ಫಿಲಿಯಲ್ಲಿ ಆರಂಭವಾಯಿತು. ನಂತರ ಡಡ್ಲೆಯ ಮೆರ್ರಿ ಹಿಲ್‌; ಬರ್ಮಿಂಗ್ಹ್ಯಾಮ್‌ನ ಸಟನ್‌ ಕೋಲ್ಡ್‌ಫೀಲ್ಡ್‌; ಕ್ಯಾಸ್ಲ್‌ಫೊರ್ಡ್‌ ಬಳಿ ಗ್ಲ್ಯಾಸ್‌ಹಾಟನ್‌); ಹ್ಯಾಂಪ್ಷೈರ್‌ನ ಈಸ್ಟ್‌ಲೇ; ಮೆಟ್ರೊಸೆಂಟರ್‌ (ಗೇಟ್ಸ್‌ಹೆಡ್‌);

ಷ್ರಾಪ್ಷೈರ್‌ನ ಟೆಲ್ಫರ್ಡ್‌ ಷಾಪಿಂಗ್‌ ಸೆಂಟರ್‌; ಉತ್ತರ ಯಾರ್ಕ್ಷೈರ್‌ ಬರೊಬ್ರಿಡ್ಜ್‌; ಹಾಗೂ ಬ್ರಿಸ್ಟಲ್‌ನ ಸ್ವಿಂಡನ್‌ ಮತ್ತು ಕ್ರಿಬ್ಸ್‌ ಕಾಸ್ವೇ ಸ್ಥಳಗಳಲ್ಲಿ ಮಳಿಗೆಗಳು ಸ್ಥಾಪಿತವಾದವು. ಎಲ್ಲಾ ಮಳಿಗೆಗಳನ್ನು ಡೀ ಕಾರ್ಪೊರೇಷನ್‌ ಉದ್ದಿಮೆಯು ಕೊಂಡಿತು. ಕೆಲ ಸಮಯ ಕ್ಯಾರೀಫೂರ್‌ ಲಾಂಛನದಡಿಯೇ ವಹಿವಾಟು ನಡೆಸಿದ ನಂತರ ಗೇಟ್ವೇ ಸುಪರ್ಸ್ಟೋರ್ಸ್‌ ಆಗಿ ಮಾರ್ಪಾಡಾಯಿತು. ಈಗ ಯುನೈಟೆಡ್‌ ಕಿಂಗ್ಡಮ್‌ನಲ್ಲಿರುವ ಹಲವು ಹಳೆಯ ಕ್ಯಾರೀಫೂರ್‌ ಅಂಗಡಿಗಳು ಅಸ್ಡಾದ ಶಾಖೆಗಳಾಗಿವೆ. ಇವುಗಳಲ್ಲಿ ಗಮನಾರ್ಹವಾಗಿ, ಮೆರ್ರಿ ಹಿಲ್‌ ಅಂಗಡಿಯು ಹಿಂದಿನ ಎರಡು ವರ್ಷಗಳ ಕಾಲ ಗೇಟ್ವೇ ಶಾಖೆಯಾಗಿದ್ದದ್ದು, 1990ರಲ್ಲಿ ಅಸ್ಡಾ ಎಂದಾಯಿತು.

  • ಅಮೆರಿಕ ಸಂಯುಕ್ತ ಸಂಸ್ಥಾನ - 1988 ಮತ್ತು 1992ರಲ್ಲಿ ಕ್ಯಾರಿಫೂರ್‌ ಕ್ರಮವಾಗಿ ಫಿಲಾಡೆಲ್ಫಿಯಾ ಮತ್ತು ನ್ಯೂಜರ್ಸಿಯ ವೂರ್ಹೀಸ್‌ ಟೌನ್ಷಿಪ್‌ನಲ್ಲಿ ವ್ಯಾಪಾರ ಮಹಾಮಳಿಗೆಗಳನ್ನು ಸ್ಥಾಪಿಸಿತು. ಇವೆರಡೂ ಮಳಿಗೆಗಳು 1994ರಲ್ಲಿ ಮುಚ್ಚಿದವು. ಅಂಗಡಿಯ ದೊಡ್ಡ ಕಟ್ಟಡದೊಳಗೆ ಓಡಾಡಲು ಕೆಲವು ಸಹಾಯಕರು ರೊಲರ್‌ ಸ್ಕೇಟ್‌ಗಳನ್ನು(ಕಾಲಿನ ಚಕ್ರದಲ್ಲಿ ಜಾರುವುದು) ಧರಿಸಿದ್ದರು. ಇಂದು ಈ ವೂರ್ಹೀಸ್‌ ಸ್ಥಳದಲ್ಲಿ ಕೊಹ್ಲ್‌ಸ್‌ ವಿವಿಧ ಸರಕುಗಳ ಅಂಗಡಿ, ರೇಯ್ಮರ್‌ ಆಂಡ್ ಫ್ಲಾನಿಗನ್‌ ಪೀಠೋಪಕರಣ ಅಂಗಡಿ ಹಾಗೂ ಒಂದು ಮಾರ್ಷಲ್ಸ್‌ ರಿಯಾಯತಿ ಬೆಲೆಯ ಜವಳಿ ಅಂಗಡಿ ಮೊದಲಾದವು ನೆಲೆಯಾಗಿವೆ. ಫಿಲಾಡೆಲ್ಫಿಯ ಪ್ರದೇಶವು (ಫ್ರಾಂಕ್ಲಿನ್‌ ಮಿಲ್ಸ್‌ ಮಾಲ್‌ ಸಂಕೀರ್ಣದಲ್ಲಿ) ವಾಲ್-ಮಾರ್ಟ್‌ ಮತ್ತು ಇತರೆ ಕೆಲವು ಅಂಗಡಿಗಳನ್ನು ಹೊಂದಿದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಫ್ರಾನ್ಸ್ ಕಂಪನಿಗಳು
  • ಯುರೋಪಿಯನ್‌ ರೀಟೈಲ್‌ ರೌಂಡ್‌ ಟೇಬಲ್‌
  • ಫ್ರೆಂಚ್‌ ಉದ್ದಿಮೆಗಳ ಪಟ್ಟಿ
  • ಕ್ಯಾರೀಫೂರ್‌ ಮೆರಿನೊಪಾಲೊಸ್‌

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ "Annual Results 2009" (PDF). Carrefour Group. Archived from the original (PDF) on 2010-03-31. Retrieved 2010-03-13.
  2. "ಲೀಗಲ್‌ ಇನ್ಫೊಸ್‌." ಕ್ಯಾರೀಫೂರ್‌. 2009ರ ಸೆಪ್ಟೆಂಬರ್‌ 24ರಂದು ಪುನಃ ಪಡೆಯಲಾಯಿತು.
  3. (French) ಹ್ಯೂಸ್‌ ಜೊಬ್ಲಿನ್‌, L'aventure du premier hyper , L'Expansion, 06/05/1993
  4. http://www.underconsideration.com/brandnew/archives/carrefour_fades_to_color.php
  5. "Resilient sales in a persistently changing environment" (PDF). Carrefour. 2010, October 15. Archived from the original (PDF) on 2010-12-22. Retrieved 2010-10-15. {{cite web}}: Check date values in: |year= (help)CS1 maint: year (link)
  6. ಕ್ಯಾರೀಫೂರ್‌ ಪರ್ಚೇಸಸ್‌ ಅಟಾಕೆಡಾವೊ ಅಂಡ್‌ ಬಿಕಮ್ಸ್‌ ಲೀಡರ್‌ ಆಫ್‌ ದಿ ಸೆಗ್ಮೆಂಡ್‌ ಇನ್‌ ಬ್ರೆಜಿಲ್‌ - ಯುಒಎಲ್‌ (ಪೊರ್ಚುಗೀಸ್‌)
  7. [೧]
  8. "(ಫ್ರೆಂಚ್‌) Carrefour condamné pour publicité mensongère". Archived from the original on 2009-06-21. Retrieved 2010-09-24.
  9. ಉಕ್ಕಿನ ಗೂಡು ಬಿದ್ದು ಮೂರು ವರ್ಷ ವಯಸ್ಸಿನ ಬಾಲಕ ಸಾವು
  10. ಕ್ಯಾರೀಫೂರ್‌ ಅಧಿಕಾರಿಗಳ ಭೇಟಿ ನಿರಾಕರಿಸಲಾದ ಮೃತ ಬಾಲಕನ ಕುಟುಂಬ
  11. ಮೃತ ಬಾಲಕನ ಕುಟುಂಬ ಭೇಟಿ ನಿರಾಕರಣೆ ತಳ್ಳಿಹಾಕಿದ ಕ್ಯಾರೀಫೂರ್‌ ಅಧಿಕಾರಿಗಳು
  12. "ಬಾಂಗ್ಲಾದೇಶ್‌ - ಕ್ಯಾರೀಫೂರ್‌ ಹ್ಯಾಸ್‌ ಟು ಡೂ ಬೆಟರ್‌". Archived from the original on 2009-09-29. Retrieved 2010-09-24.
  13. (ಫ್ರೆಂಚ್‌) Carrefour‌ risque de payer 220.000€ d'amende
  14. ಕ್ಯಾರೀಫೂರ್ ಫೇಸಸ್‌ ಚೀನಾ ಬಾಯ್ಕಾಟ್ ಬಿಡ್‌
  15. "家乐福中国对近日出现的一些不实传闻的声明". Archived from the original on 2011-07-07. Retrieved 2010-09-24.
  16. Chinanews.com ಲೇಖನ; 2008ರ ಏಪ್ರಿಲ್‌ 30ರಂದು ಪುನಃ ಪಡೆಯಲಾಯಿತು.
  17. ""ಫ್ರಾನ್ಸ್‌ಸ್‌ ಕ್ಯಾರೀಫೂರ್‌ ಟು ಕ್ಲೋಸ್‌ ಡೌನ್‌ ಸ್ಟೋರ್ಸ್‌ ಇನ್‌ ಹೆಚ್‌.ಕೆ" ಏಷ್ಯನ್‌ ಎಕಾನಾಮಿಕ್‌ ನ್ಯೂಸ್‌ , 4 ಸೆಪ್ಟೆಂಬರ್‌ 2000". Archived from the original on 2012-07-08. Retrieved 2012-07-08.
  18. ೧೮.೦ ೧೮.೧ "500 ಟು ಲೂಸ್‌ ಜಾಬ್ಸ್‌ ಆಸ್‌ ಕ್ಯಾರೀಫೂರ್ ಕ್ವಿಟ್ಸ್‌ ಎಸ್‌ಎಆರ್‌", ದಿ ಸ್ಟ್ಯಾಂಡರ್ಡ್‌ , 30 ಆಗಸ್ಟ್‌ 2000
  19. "ಕನ್ಸೂಮರ್‌ ಕೌನ್ಸಿಲ್‌ - ದಿ ಪ್ರ್ಯಾಕ್ಟಿಸ್‌ ಆಫ್‌ ರಿಸೇಲ್‌ ಪ್ರೈಸ್‌ ಮೇನ್ಟೆನನ್ಸ್‌ ಇನ್‌ ಹಾಂಗ್‌ ಕಾಂಗ್‌ (2 ಸೆಪ್ಟೆಂಬರ್‌ 1997)". Archived from the original on 2011-10-08. Retrieved 2010-09-24.
  20. ಕ್ಯಾರೀಫೂರ್‌ sell its hypermarkets to Swiss retailer Coop for $390 million.


ಬಾಹ್ಯ ಕೊಂಡಿಗಳು

[ಬದಲಾಯಿಸಿ]