ಕುಸುಮೆ ಎಣ್ಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹೂವಿನ ವಿನ್ಯಾಸ
ಕುಸುಮೆ-ಹೂವು
ಕುಸುಂಬಿ ಹೂವು
ಕುಸುಂಬಿ ಬೀಜ

ಕುಸುಮೆ ಎಣ್ಣೆ ಯನ್ನು ಕುಸುಮೆ ಅಥವಾ ಕುಸುಂಬಿ ಅಥವಾ ಕುಸುಬಿ ಗಿಡಗಳ ಬೀಜಗಳಿಂದ ತೆಗೆಯುತ್ತಾರೆ. ಕುಸುಮೆ ಗಿಡ ಕಂಪೋಸಿಟೇ ಅಥವಾ ಅಸ್ಟರೇಸಿ ಕುಟುಂಬಕ್ಕೆ ಸೇರಿದ ಗಿಡ. ಇದರ ಸಸ್ಯ ಶಾಸ್ತ್ರೀಯ ಹೆಸರು ಕಾರ್ಥಮಸ್ ಕೋರಿಯಮ್ .[೧] ಕುಸುಮೆ ಎಣ್ಣೆಯನ್ನು ಅಡುಗೆ ಎಣ್ಣೆಯನ್ನಾಗಿ ಉಪಯೋಗಿಸುತ್ತಾರೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು (ಅನ್ಸ್ಯಾಚುರೇಟೆಡ್ ಫ್ಯಾಟಿ ಆಸಿಡ್)ಹೆಚ್ಚು ಪ್ರಮಾಣದಲ್ಲಿ ಇರುತ್ತವೆ.

ಇತಿಹಾಸ[ಬದಲಾಯಿಸಿ]

ಕುಸುಮೆ ಗಿಡದ ಜನ್ಮಸ್ಥಾನ ದಕ್ಷಿಣ ಏಷ್ಯಾವೆಂದು ತಿಳಿಯಲಾಗಿದೆ. ಇತಿಹಾಸ ಪೂರ್ವದ ಹಿಂದೆ ಇದನ್ನು ಚೀನಾ, ಇಂಡಿಯಾ, ಪರ್ಷಿಯಾ ಮತ್ತು ಈಜಿಪ್ಟ್ ದೇಶಗಳಲ್ಲಿ ಸಾಗುವಳಿ ಮಾಡಿದರೆಂದು ತಿಳಿದುಬಂದಿದೆ. ಮಧ್ಯಯುಗದ ಕಾಲಕ್ಕೆ ಇದು ಇಟಲಿ ಮತ್ತು ಉಳಿದ ಪ್ರಾಂತ್ಯಗಳಿಗೆ ವ್ಯಾಪಿಸಿದೆ. ೪ ಸಾವಿರ ಸಂವತ್ಸರ ಹಿಂದಿನ ಪುರಾತನ ಈಜಿಪ್ಟಿಯನ್ ಸಮಾಧಿಯಲ್ಲಿ ಕುಸುಮೆ ಹೂವಿನ ಅವಶೇಷಗಳನ್ನು ಪುರಾತತ್ವ ಇಲಾಖೆಯವರು ಕಂಡು ಹಿಡಿದಿದ್ದಾರೆ. ಕ್ರಿ.ಪೂ.೧೬೦೦ ಸಂವತ್ಸರ ಕಾಲದ ಈಜಿಪ್ಟಿಯನ್ ೧೮ ರ ರಾಜವಂಶಸ್ಥನ ಸಮಾಧಿಯಲ್ಲಿ ಮಮ್ಮಿ ಜೊತೆ ವೀಲೀ ಹೂವುಗಳು ಹಾಗೂ ಕುಸುಮೆ ಹೂವುಗಳ ಅವಶೇಷಗಳನ್ನು ಗಮನಿಸಲಾಗಿದೆ. ೧೨ ರ ರಾಜವಂಶಸ್ಥನ ಮಮ್ಮಿ ಜೊತೆಗೆ ಕುಸುಮೆ ಹೂವು ಬಣ್ಣದಿಂದ ಮಾಡಿದ ವಸ್ತುವನ್ನು ಕಂಡು ಹಿಡಿಯಲಾಗಿದೆ.[೨][೩] ಈಜಿಪ್ಟಿಯನ್ ಚಕ್ರವರ್ತಿ(ಫರೋ)'ತುತ್ಖ್ಹಾಮುನ್' ಸಮಾಧಿಯಲ್ಲಿ ಕುಸುಮ ಹೂಮಾಲೆಯ ಅವಶೇಷಗಳು ಸಿಕ್ಕಿವೆ.

ಕುಸುಮೆ ಗಿಡ[ಬದಲಾಯಿಸಿ]

ಕುಸುಮೆ ಗಿಡವು ಮೃದುವಾದ ಕಾಂಡ ಇರುವ, ಏಕವಾರ್ಷಿಕ ಗಿಡ. ಒತ್ತಾದ ಕವುಲುಗಳನ್ನು ಹೊಂದಿರುತ್ತದೆ. ಕಾಂಡ ಮತ್ತು ಪತ್ರಗಳ(ಎಲೆ) ಮೇಲೆ ಮುಳ್ಳಿನ ತರಹ ನಿರ್ಮಾಣವನ್ನು ಹೊಂದಿರುತ್ತದೆ. ಗಿಡದ ಎತ್ತರ ೧೩೫ - ೧೫೦ ಸೆಂ. ಮೀ. ಗೋಳಾಕಾರ ಹೂವಿನ ಗುಚ್ಛ ಹೊಂದಿರುತ್ತದೆ. ಒಂದು ಹೂವಿನ ಗುಚ್ಚದಲ್ಲಿ ೨-೫ ಹೂಗಳು ಇರುತ್ತವೆ. ಒಂದು ಗುಚ್ಚದಲ್ಲಿ ೧೫-೨೫ ಬೀಜಗಳು ಉತ್ಪನ್ನವಾಗುತ್ತವೆ.[೪] ಹೂವು ಕೇಸರಿ-ಅರುಣ ವರ್ಣದಲ್ಲಿ ಕಾಣಿಸುತ್ತವೆ. ಕುಸುಮೆ ಹೂಗಳನ್ನು , ಕುಂಕುಮೆ ಹೂಗಳಿಗೆ ಬದಲಾಗಿ ಉಪಯೋಗಿಸುತ್ತಾರೆ. ಕುಸುಮೆ ಹೂಗಳನ್ನು ಆಹಾರ ಪದಾರ್ಥಗಳಿಗೆ ಬಣ್ಣ ನೀಡುವುದಕ್ಕೆ ಉಪಯೋಗ ಮಾಡುತ್ತಾರೆ. ಕುಸುಮೆ ಹೂಗಳಿಂದ ತಯಾರು ಮಾಡಿದ ಬಣ್ಣವನ್ನು ಬಟ್ಟೆಗಳಿಗೆ ಹಚ್ಚುತ್ತಾರೆ. ಕುಸುಮೆ ತುಪ್ಪಳದಲ್ಲಿ ಮತ್ತು ಕವುಲಗಳ ಶಿಖರದ ಭಾಗದಲ್ಲಿ ವಿಟಮಿನ್ 'ಎ' ಇರುತ್ತದೆ.[೫]

ಕುಸುಮೆ ಬೀಜದಲ್ಲಿ ೩೦-೩೨% ಎಣ್ಣೆ ಇರುತ್ತದೆ. ಒಂದು ಹೆಕ್ಟೇರಿಗೆ ೬೦೦-೭೦೦ ಕೆ.ಜಿ. ಬೀಜ ಉತ್ಪತ್ತಿ ಆಗುತ್ತದೆ.

ಕುಸುಮೆ ಎಣ್ಣೆ[ಬದಲಾಯಿಸಿ]

ಕುಸುಮೆ ಎಣ್ಣೆ ಕಡಿಮೆ ಬಣ್ಣ ಹೊಂದಿರುತ್ತದೆ, ಕಡಿಮೆ ವಾಸನೆ ಇರುತ್ತದೆ. ಹಳದಿ ಬಣ್ಣದಲ್ಲಿ ಕಾಣಿಸುತ್ತದೆ. ಸ್ವಚ್ಛ ಮಾಡಿದ ಎಣ್ಣೆ ಪಾರದರ್ಶಕವಾಗಿರುತ್ತದೆ. ಕುಸುಮೆ ಎಣ್ಣೆಯಲ್ಲಿ ಅಸಂತೃಪ್ತ ಕೊಬ್ಬಿನ ಆಮ್ಲಗಳು ಹೆಚ್ಚಾಗಿರುತ್ತವೆ.[೬] ಕುಸುಮೆ ಎಣ್ಣೆಯಲ್ಲಿ ಲಿನೊಲಿಕ್ ಕೊಬ್ಬಿನ ಆಮ್ಲ ಮತ್ತು ಒಲಿಕ್ ಕೊಬ್ಬಿನ ಆಮ್ಲ ಅಧಿಕ ಪ್ರಮಾಣದಲ್ಲಿರುತ್ತದೆ.[೭]

ಕುಸುಮೆ ಎಣ್ಣೆಯಲ್ಲಿರುವ ಕೊಬ್ಬಿನ/ಫ್ಯಾಟಿ ಆಮ್ಲಗಳು[ಬದಲಾಯಿಸಿ]

ಸಂತೃಪ್ತ ಕೊಬ್ಬಿನ ಆಮ್ಲಗಳು %
ಮಿರಿಸ್ಟಿಕ್ ಆಸಿಡ್ 1.0%
ಪಾಮಿಟಿಕ್ ಆಸಿಡ್ 2-10%
ಸ್ಟಿಯರಿಕ್ ಆಸಿಡ್ -10%
ಅಸಂತೃಪ್ತ ಕೊಬ್ಬಿನ ಆಮ್ಲಗಳು
ಪಾಮಿಟೊಲಿಕ್ ಆಸಿಡ್ 0.5-1.0%
ಒಲಿಕ್ ಆಸಿಡ್ 10-40%
ಲಿನೊಲಿಕ್ ಆಸಿಡ್ 55-80%
ಲಿನೊಲೆನಿಕ್ ಆಸಿಡ್ 1.0%

ಕುಸುಮೆ ಎಣ್ಣೆಯ ಭೌತಿಕ ಲಕ್ಷಣಗಳು[ಬದಲಾಯಿಸಿ]

ಸಾಂದ್ರತೆ[೮] ೦.೯೧೫.೦೯೨೦ ಕೆ.ಜಿ/ಲೀಟರ್
ಸಪೋನಿಫಿಕೇಶನ್ ಬೆಲೆ ೧೮೬-೧೯೬
ಐಯೋಡಿನ್ ಬೆಲೆ ೧೩೫-೧೪೮
ಅನ್ ಸಪೋನಿಫಿಯೇಬಲ್ ಮ್ಯಾಟರ್ ೧.೦%

ಉಪಯೋಗಗಳು[ಬದಲಾಯಿಸಿ]

  • ಕುಸುಮೆ ಎಣ್ಣೆ ಶ್ರೇಷ್ಠವಾದ ಅಡುಗೆ ಎಣ್ಣೆ[೯]
  • ಕುಸುಮೆ ಎಣ್ಣೆಯನ್ನು ಸಾಲಡ್ ಮತ್ತು ಮಾರ್ಗರೈನ್‌ಗಳನ್ನು ತಯಾರು ಮಾಡುವುದರಲ್ಲಿ ಉಪಯೋಗಿಸುತ್ತಾರೆ.[೧೦]
  • ಕುಸುಮೆ ಹೂಗಳಿಂದ ಹರ್ಬಲ್ ಟೀ ತಯಾರಿಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Health Cooking: Safflower Oil". healthline.com. Archived from the original on 2014-11-05. Retrieved 2015-03-15.
  2. Sun Flower By Joseph.R.smith,page no.2
  3. "Safflower". books.google.co.in. Retrieved 2015-03-15.
  4. "Safflower". britannica.com. Retrieved 2015-03-15.
  5. SEAHandBook-2009BySolvenyExtractorsAssociation ofIndia
  6. "Oil Content and Fatty Acid Composition of Some Safflower (Carthamus tinctorius L.) Varieties Sown in Spring and Winter" (PDF). nobel.gen.tr. Archived from the original (PDF) on 2016-03-04. Retrieved 2015-03-15.
  7. "Fatty acids found in safflower oil". essentialoils.co.za. Archived from the original on 2015-03-26. Retrieved 2015-03-15.
  8. "Safflower oil". chemicalbook.com. Retrieved 2015-03-15.
  9. "FATTY ACID COMPOSITION (PERCENTAGE)". chempro.in. Retrieved 2015-03-15.
  10. "margarine". yourdictionary.com. Retrieved 2015-03-15.