ವಿಷಯಕ್ಕೆ ಹೋಗು

ಕಳರಿ ಪಯಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಳರಿ ಪಯಟ್ಟು

ಕಲರಿಪಯಟ್ಟುನಲ್ಲಿ ಉರುಮಿ ಬಳಕೆಯನ್ನು ಕೋಝಿಕೋಡ್‌ನ ಪೆರಂಬ್ರಾದಲ್ಲಿ ಗಂಗಾಧರನ್ ಗುರುಕ್ಕಲ್ ಅವರು ಪ್ರದರ್ಶಿಸಿದರು

ಪೀಠಿಕೆ

[ಬದಲಾಯಿಸಿ]

ಶತಮಾನಗಳಿಂದ ಕೇರಳದಲ್ಲಿ ನೆಲೆಸಿದ ಒಂದು ಪ್ರತ್ಯೇಕ ಶಾರೀರಿಕ ಸಾಧನೆಯ ಕೊಡುಗೆಯೇ ಕಳರಿ ಪಯಟ್ಟು ಎಂಬ ಯುದ್ದ ಕಲೆ. ನಶಿಸುತ್ತಿರುವ ಈ ದೇಹಾಭ್ಯಾಸ ವಿಧಾನ. ಆರ್ಯ ದ್ರಾವಿಡ ಜನಾಂಗದಷ್ಟೆ ಪುರಾತನ, ವಿದೇಶಿಯರ ಆಕ್ರಮಣ ಸಡಿಲಗೊಂಡು ಕೇಂದ್ರಕೃತ ಆಡಳಿತ ಸಣ್ಣ ತುಂಡರಸರುಗಳ ಬೆಳವಣಿಗೆ ಇವು ಈ ಯುದ್ದ ಕಲೆಯನ್ನು ಪೋಷಿಸಿದ್ದಿರಬಹುದು.

ಇತಿಹಾಸ

[ಬದಲಾಯಿಸಿ]

ಕೇರಳದಲ್ಲಿ ನಲವತ್ತು ಚದರಡಿ ಸ್ಥಳಮಾಡಿ ಅದರಲ್ಲಿ ಕಳರಿ ದೇವತೆಗಳನ್ನು ಪ್ರತಿಷ್ಠಾಪಿಸಿದರು, ಮತ್ತು ಪೂಜೆ ದೀಪೋತ್ಸವಗಳನ್ನು ಏರ್ಪಡಿಸಿದರೆಂದು ಕೇರಳೋತ್ಪತಿ ಗ್ರಂಥದಲ್ಲಿ ಹೇಳಿದರು ಸಹ ಪುರಾತನವಾದ ಈ ಮಲ್ಲಯುದ್ಧ ವಿದ್ಯೆಯನ್ನು ಕುರಿತು ಹೆಚ್ಚಿನ ವಿವರಗಳಿಗಾಗಿ 'ವಡಕ್ಕನ್ ಪಾಟು 'ಗಳನ್ನು ಆಶ್ರಯಿಸಬೇಕಾಗಿದೆ. ಉತ್ತರ ಮಲಬಾರಿನ ವೀರಗಾಥೆಯಾದ ವಡಕ್ಕನ್ ಪಾಟುಗಳು ಮತ್ತು ಅನುಷ್ಠಾನ ಕಲೆಯಾದ 'ತೈಯ್ಯಂ'ಭೂತ ಕೊಲದ, 'ತೋಟ್ಟಂ'ಪಾಡ್ದನ ಕಳರಿಯ ಕುರಿತು ವಿವರಗಳು ಲಭಿಸಿತ್ತವೆ.ಹನ್ನೊಂದನೆ ಶತಮಾನದ ಚೇರ, ಚೋಳ, ಯದ್ಧಗಳಿಂದ ಕೇರಳದಲ್ಲಿ ಆಯುಧಾಭ್ಯಾಸ ಸಾರ್ವತ್ರಿಕವಾಗಿ ವ್ಯಾಪಿಸಿತು. ಅ ಕಾಲ ಘಟ್ಟದಲ್ಲಿ ಕಳರಿಗಳ ನಿರ್ಮಾಣವು ಆರಂಭವಾಯಿತು.

ಕಳರಿಗಳು ಮೂರು ವಿಧ

[ಬದಲಾಯಿಸಿ]
  1. ಧರ್ಮದೈವ ದೇವತೆಗಳನ್ನು ಆರಾಧಿಸಲು ಮತ್ತು ವಿದ್ಯಾಭ್ಯಾಸಕ್ಕೆ ಇದನ್ನು ಮಾಡಿತ್ತಿದ್ದರು.
  2. ಸುತ್ತಲೂ ಕಲ್ಲಿನ ಗೋಡೆಗಳಿದ್ದು ಮಾಡಿಲ್ಲದೇ ನಲವತ್ತು ಅಡಿ ಉದ್ದಗಲದ ಜಾಗ, ಇಲ್ಲಿ ಕಳರಿ ಪಯಟ್ಟಿನ ಬಾಲಪಾಠಗಳು ಬೋಧನೆಯಾಗುತ್ತವೆ.
  3. ಹತ್ತರಿಂದ ಹದಿನೆಂಟರ ವರೆಗಿನ ಅಡವುಗಳನ್ನು ಕಲಿಸುವ ಜಾಗ ಇಲ್ಲಿ ಖಡ್ಗಗಳ, ಕಠಾರಿಗಳ ಪ್ರಯೋಗಗಳ ವಿಧಾನ ಮತ್ತು ಜ್ಯೋತಿಷ್ಯ, ಸಾಮಾನ್ಯ ವಿಜ್ಞಾನ, ಔಷದ ಪ್ರಯೋಗ ಮತ್ತು ಮಂತ್ರ ತಂತ್ರಗಳ ಪಠನವು ನಡೆಯುತ್ತದೆ.

ವರಸೆಗಳು

[ಬದಲಾಯಿಸಿ]

ಕಳರಿ ಪಯಟ್ಟಿನಲ್ಲಿ ಓತಿರಂ, ಕಟಕಂ, ಚಟುಲಂ ಮಂಡಲಂ, ವೃತ್ತಚಕ್ರಂ, ಸುಂಕಂಗಾಳಂ, ವಿಜಯಂ, ಸೌಭದ್ರಂ, ಪಟಲಂ ಮುಂತಾಗಿ ಹದಿನೆಂಟು ವರಸೆಗಳಿವೆ. ಇಲ್ಲಿ ಕೊನೆಯ 'ಪೊಯಿಕಟಕಂ' ಅನ್ನು ಕಲಿಯುವ ಸಲುವಾಗಿ ಅನೇಕ ಧೀರ ಯೋಧರು ತುಳುನಾಡಿಗೆ ಪ್ರಯಾಣ ಬೆಳೆಸುತ್ತಿದ್ದುದಾಗಿ ಜಾನಪದ ಗೀತೆಗಳಿಂದ ಹೇಳಲ್ಪಟ್ಟಿವೆ. ಕೋಟಿ, ಚೆನ್ನಯರು, ಮುಂತಾದವರು ಕಳರಿ ಕ್ರಮವನ್ನು ಅಭ್ಯಾಸಿಸಿದ್ದರು. ಉತ್ತರ ಕೇರಳದಲ್ಲಿ ಪ್ರಚಾರದಲ್ಲಿರುವ 'ವದಕ್ಕನ್ ಪಾಟ್' ಎಂಬ ಜಾನಪದಗೀತೆಗಳಲ್ಲಿ ಕೆಲವು ವೀರಾಗ್ರಣಿಗಳ ಬಗೆಗೆ ನಿದರ್ಶನಗಳಿವೆ. ಅಂದಿನ ಕೆಲವು ಸ್ತ್ರೀಯರು ಕೂಡ ಈ ರೀತಿಯ ವಿದ್ಯೆಯನ್ನು ಅಭ್ಯಾಸಿಸುತ್ತಿದ್ದರು.

ಕಳರಿಯ ಅಭ್ಯಾಸದ ನಾಲ್ಕು ಹಂತಗಳು

[ಬದಲಾಯಿಸಿ]
  1. ಪ್ರಾರಂಭದ ಶಾರೀರಿಕ ವ್ಯಾಯಾಮ
  2. ಹಲವು ವಿವಿಧ ಕೋಲುಗಳಿಂದ ಮಾಡುವ ಅಭ್ಯಾಸ
  3. ಹರಿತವಾದ ಆಯುಧಗಳನ್ನು ಉಪಯೋಗಿಸಿ ಕಲಿಯಬೇಕಾದ 'ಅಂಕತಾರಿ'
  4. ಆಯುಧಗಳ ಸಹಾಯವಿಲ್ಲದೇ ಶತ್ರುಗಲನ್ನು ಬೀಳಿಸುವ ಬರಿಗೈ ಆಟಗಳು.

ವಡಕ್ಕನ್ ಪಾಟುಗಳಲ್ಲಿ ಹೇಳುವ ಕೆಳಗಿನ ಸಾಲುಗಳನ್ನು ಕೇಳಿ "ಪೀಟವನ್ನು ಮಧ್ಯದಲ್ಲಿಟ್ಟುಅದನ್ನು ರೆಶ್ಮೇವಸ್ತ್ರದಿಂದ ಅಲಂಕರಿಸುವನು. ಅದರ ಮೇಲೋಂದು ಹರಿವಾಣವನ್ನಿಟ್ಟು ಅದರ ತುಂಬ ಸೌತೆಕಾಯಿಗಳನ್ನು ಇಡುವನು.ಸೌತೆಯ ಮೇಲೊಂದು ತೆಂಗಿನ ಕಾಯಿ ಇಟ್ಟು ಅದರ ಮೇಲೆ ಕೆಂಪಗಿನ ಹಣ್ಣಡಿಕೆಯನ್ನು ಇಡುವನು. ಅಡಿಕೆಯ ಮೇಲೊಂದು ಮೊಟ್ಟೆಯನ್ನು ಇಟ್ಟು, ಅದರ ಮೇಲೊಂದು ಸೂಜಿಯನ್ನು ನಿಲ್ಲಿಸುವನು. ಕಳರಿಯು ತನ್ನ ಕತ್ತಿಯ ಮೊನೆಯನ್ನು ನೆಲಕ್ಕೆ ಊರಿ ಹಾರಿ ಸೂಜಿಯ ಮೇಲೆ ನರ್ತನ ಮಾಡುವನು'- ಈ ವರ್ಣನೆ ಅತಿಶಯೋಕ್ತಿಯಿಂದ ಕೂಡಿದರೂ ಈ ಕಲೆಯನ್ನು ಕಲಿಯಲು ಬೇಕಾದ ಶ್ರದ್ಧೆ ಮತ್ತು ವಿಶೇಷ ಸಾಮೆರ್ಥ್ಯವನ್ನು ಕುರಿತು ವಿವರಗಳನ್ನು ತಿಳಿಸುತ್ತದೆ.

ಅಭ್ಯಾಸ ಕ್ರಮ

[ಬದಲಾಯಿಸಿ]

ಶರೀರವನ್ನು ಕಾಲು-ಕೈ ಮುಂತಾದವುಗಳ ನಿರ್ದಿಷ್ಟ ಚಲನೆಗಳ ಮೂಲಕ ಹೇಗೆ ಸಮರ್ಪಕಗೊಳಿಸಬೇಕು, ಆಯುಧಗಳನ್ನು ಯಅವ ಯಾವ ರೀತಿಯಲ್ಲಿ ಬಳಸಬೇಕು ಎಂಬುದನ್ನೇಲ್ಲಾ ನುಡಿಗಟ್ಟುಗಳ ಮೂಲಕ ಕಲಿಸಲಾಗುವುದು. ಪ್ರತಿಯೊಂದು ಪಯಟ್ಟಿಗೂ ಆದರದ್ದೇ ಆದ ನಿರ್ದಿಷ್ಟ ನುಡಿಗಟ್ಟುಗಳಿರುತ್ತವೆ. ಅಲ್ಲದೆ ತೆಂಕಣ ಸಂಪ್ರದಾಯ, ಬಡಗಣ ಸಂಪ್ರದಾಯ ಎಂಬ ಪ್ರಭೇದಗಳು ಇವೆ. ಗುರಾಣಿಗಳನ್ನು ಬಳಸಿ ನಡೆಸುವ ಪಯಚ್ಚಿದ ನುಡಿಗಟ್ಟು ಹೀಗಿದೆ. ಗಧೆ ಮತ್ತು ಗುರಾಣಿಗಳನ್ನು ಎತ್ತಿ ಮೂಡು ಭಾಗದಲ್ಲಿ ಪಡುದೆಸೆಗೆ ತಿರುಗಿ ನಿಂತು ಕಾಲು ಎಡದ್ದೂ ಬಲದ್ದೂ ಮುಂದಿರಿಸಿ ಎಡಗಾಲನ್ನು ಜೋಡಿಸಿ ಮೂರು ಸಲ ನೆಲಕ್ಕೆಕೈ ಮುಗಿದು ಗುರಾಣಿಯನ್ನು ತೊಡಗೆ ತಾಗಿಸಿ ಎಡಗಾಲು ಹಿಂತೆಗೆದು ತೂಗು ನೆಪದಿಂದ ಏತಿರದ ಕೆಳಗೆ ಮೊನೆ ಬಿಗಿದು ಬಲದ್ದೂ ಹಿಂತೆಗೆದು ಗುರಾಣಿ ಹಣೆಗಿಟ್ಟು ಬಲದ್ದೂ ಎತ್ತಿ ಅಮುರೆ ಅಮುರೆ ಅದೇ ಹೆಜ್ಜೆಯ ಹೆಜ್ಜೆಯಿರಿಸಿ ಓತಿರದ ಕೆಳಗೆ ಮೊನೆ ನಿರ್ಮಿಸಿ ಎಡದ್ದೂ ಬಲದ್ದೂ ನೆಲಕ್ಕೆ ಅಂಟಿಸಿ ಇರಿಸು ಎಂದಿದೆ.

ಕೇರಳದಲ್ಲಿ ಹರಡಿಕೊಂಡಿರುವ ಹಲವು ಕಳರಿ ಸಂಘಗಳು ಇವುಗಳನ್ನು ರಕ್ಷಿಸುತ್ತಿವೆ.[]

ಉಲ್ಲೇಖ

[ಬದಲಾಯಿಸಿ]
  1. ಮನೀಷಾ ವಾರ್ಷಿಕ ಸಂಚಿಕೆ