ಕರ್ನಾಟಕ ವಿಧಾನಸಭೆ
{{{name}}} | |
|---|---|
| Type | |
| Type | ಕೆಳಮನೆ |
Term limits | 5 ವರ್ಷಗಳು |
| Leadership | |
ವಿರೋಧ ಪಕ್ಷದ ನಾಯಕ | |
| Structure | |
| Seats | 224 |
Political groups | ಆಡಳಿತ ಪಕ್ಷ (140)
ಅಧಿಕೃತ ವಿರೋಧ ಪಕ್ಷ (81)
ಖಾಲಿ (2)
|
| Elections | |
Last election | 2023 |
| Meeting place | |
| ಚಿತ್ರ:Vidhana Souda, Bangalore.jpg | |
| ವಿಧಾನಸೌಧ, ಬೆಂಗಳೂರು, ಕರ್ನಾಟಕ, ಭಾರತ | |
| Website | |
| Karnataka Legislative Assembly | |
ಕರ್ನಾಟಕ ವಿಧಾನಸಭೆಯು ಕರ್ನಾಟಕ ರಾಜ್ಯದ ದ್ವಿ ಶಾಸನ ಸಭೆಯ ಕೆಳಮನೆಯಾಗಿದೆ. ಭಾರತದ ಏಳು ರಾಜ್ಯಗಳ ರಾಜ್ಯ ಶಾಸಕಾಂಗಗಳು ಎರಡು ಮನೆಗಳನ್ನು ಒಳಗೊಂಡಿದೆ. ಅಂತಹ ರಾಜ್ಯಗಳ ಪೈಕಿ ಕರ್ನಾಟಕವೂ ಒಂದಾಗಿದೆ. ವಿಧಾನ ಸಭೆಯನ್ನು ಕೆಳಮನೆ ಎಂದೂ ಮತ್ತು ವಿಧಾನ ಪರಿಷತ್ತನ್ನು ಮೇಲ್ಮನೆ ಎಂದೂ ಕರೆಯಲಾಗುತ್ತದೆ.
ವಿಧಾನ ಸಭೆಯ ಸದಸ್ಯರು ನೇರವಾಗಿ ಮತದಾನದ ಮೂಲಕ ಜನರಿಂದ ಚುನಾಯಿತರಾಗುತ್ತಾರೆ.
ಕರ್ನಾಟಕ ವಿಧಾನಸಭೆಯಲ್ಲಿ ೨೨೫ ಸದಸ್ಯರಿದ್ದಾರೆ. ಒಬ್ಬ ಸದಸ್ಯನು ಕರ್ನಾಟಕ ರಾಜ್ಯಪಾಲರು ನಾಮಕರಣ ಮಾಡಿದ ಆಂಗ್ಲೋ-ಇಂಡಿಯನ್ ಸಮುದಾಯದ ಪ್ರತಿನಿಧಿಯಾಗಿರುತ್ತಾರೆ. ಶಾಸನಸಭಾ ಸದಸ್ಯರನ್ನು ಆಯ್ಕೆ ಮಾಡಲು ಕರ್ನಾಟಕ ರಾಜ್ಯವನ್ನು ೨೨೪ ಕ್ಷೇತ್ರಗಳನ್ನಾಗಿ ವಿಂಗಡಿಸಲಾಗಿದೆ.
ಪ್ರತಿಯೊಂದು ಕ್ಷೇತ್ರವು ಒಬ್ಬ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಸದಸ್ಯರನ್ನು ಜನಪ್ರಿಯವಾಗಿ ಎಮ್ಎಲ್ಎಗಳು ಎಂದು ಕರೆಯಲಾಗುತ್ತದೆ. ಸರಳ ಬಹುತ್ವ ಚುನಾವಣಾ ವ್ಯವಸ್ಥೆಯನ್ನು ಬಳಸಿ ವಿಧಾನ ಸಭೆಯನ್ನು ಚುನಾಯಿಸಲಾಗುತ್ತದೆ. ಚುನಾವಣೆಗಳನ್ನು ಭಾರತದ ಚುನಾವಣಾ ಆಯೋಗವು ನಡೆಸುತ್ತದೆ.
ಸದಸ್ಯರ ಸಾಮಾನ್ಯ ಅವಧಿಯು ಐದು ವರ್ಷಗಳವರೆಗೆ ಇರುತ್ತದೆ. ಮರಣದ ಸಂದರ್ಭದಲ್ಲಿ, ಸದಸ್ಯರ ರಾಜೀನಾಮೆ ಅಥವಾ ಅನರ್ಹತೆ, ಸದಸ್ಯರಿಂದ ನಿರೂಪಿಸಲ್ಪಟ್ಟ ಕ್ಷೇತ್ರಕ್ಕೆ ಉಪ-ಚುನಾವಣೆ ನಡೆಸಲಾಗುತ್ತದೆ. ಬಹುಮತ ಹೊಂದಿರುವ ಪಕ್ಷ ಅಥವಾ ಪಕ್ಷಗಳ ಕೂಟ ಆಡಳಿತ ಪಕ್ಷವು ಆಗುತ್ತದೆ.
ಶಾಸನ ಸಭೆಗಳ ಪಟ್ಟಿ
[ಬದಲಾಯಿಸಿ]| ಶಾಸನ ಸಭೆ | ಅವಧಿ | ಮುಖ್ಯಮಂತ್ರಿ (ಗಳು) |
| ಮೊದಲ ಶಾಸನ ಸಭೆ | 18 ಜೂನ್ 1952 - 31 ಮಾರ್ಚ್ 1957 | ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ, ಎಸ್.ನಿಜಲಿಂಗಪ್ಪ |
| ಎರಡನೇ ಶಾಸನ ಸಭೆ | 10 ಜೂನ್ 1957 - 1 ಮಾರ್ಚ್ 1962 | ಎಸ್. ನಿಜಲಿಂಗಪ್ಪ, ಬಿ.ಡಿ.ಜತ್ತಿ |
| ಮೂರನೇ ಶಾಸನ ಸಭೆ | 15 ಮಾರ್ಚ್ 1962 - 28 ಫೆಬ್ರವರಿ 1967 | ಎಸ್ ಆರ್ ಕಂಠಿ, ಎಸ್. ನಿಜಲಿಂಗಪ್ಪ |
| ನಾಲ್ಕನೇ ಶಾಸನ ಸಭೆ | 15 ಮಾರ್ಚ್ 1967 - 14 ಏಪ್ರಿಲ್ 1971 | ಎಸ್. ನಿಜಲಿಂಗಪ್ಪ, ವೀರೇಂದ್ರ ಪಾಟೀಲ್ |
| ಐದನೇ ಶಾಸನ ಸಭೆ | 24 ಮಾರ್ಚ್ 1972 - 31 ಡಿಸೆಂಬರ್ 1977 (ವಿಸರ್ಜನೆ) | ಡಿ. ದೇವರಾಜ ಅರಸ್ |
| ಆರನೇ ಶಾಸನ ಸಭೆ | 17 ಮಾರ್ಚ್ 1978 - 8 ಜೂನ್ 1983 (ವಿಸರ್ಜನೆ) | ಡಿ. ದೇವರಾಜ ಅರಸ್, ಆರ್. ಗುಂಡೂರಾವ್ |
| ಏಳನೇ ಶಾಸನ ಸಭೆ | 24 ಜುಲೈ 1983 - 2 ಜನವರಿ 1985 (ವಿಸರ್ಜನೆ) | ರಾಮಕೃಷ್ಣ ಹೆಗಡೆ |
| ಎಂಟನೇ ಶಾಸನ ಸಭೆ | 18 ಮಾರ್ಚ್ 1985 - 21 ಏಪ್ರಿಲ್ 1989 (ವಿಸರ್ಜನೆ) | ರಾಮಕೃಷ್ಣ ಹೆಗಡೆ, ಎಸ್. ಆರ್. ಬೊಮ್ಮಾಯಿ |
| ಒಂಬತ್ತನೇ ಶಾಸನ ಸಭೆ | 18 ಡಿಸೆಂಬರ್ 1989 - 20 ಸೆಪ್ಟೆಂಬರ್ 1994 (ವಿಸರ್ಜನೆ) | ವೀರೇಂದ್ರ ಪಾಟೀಲ್, ಬಂಗಾರಪ್ಪ, ಎಮ್. ವೀರಪ್ಪ ಮೊಯಿಲಿ |
| ಹತ್ತನೇ ಶಾಸನ ಸಭೆ | 25 ಡಿಸೆಂಬರ್ 1994 - 22 ಜುಲೈ 1999 (ವಿಸರ್ಜನೆ) | ಹೆಚ್.ಡಿ.ದೇವೇಗೌಡ, ಜೆ.ಎಚ್. ಪಟೇಲ್ |
| ಹನ್ನೊಂದನೇ ಶಾಸನ ಸಭೆ | 25 ಅಕ್ಟೋಬರ್ 1999 - 28 ಮೇ 2004 | ಎಸ್.ಎಂ. ಕೃಷ್ಣ |
| ಹನ್ನೆರಡನೆಯ ಶಾಸನ ಸಭೆ | 28 ಮೇ 2004 - 19 ನವೆಂಬರ್ 2007 (ವಿಸರ್ಜನೆ) | ಧರಮ್ ಸಿಂಗ್, ಹೆಚ್.ಡಿ.ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ |
| ಹದಿಮೂರನೇ ಶಾಸನ ಸಭೆ | 30 ಮೇ 2008 - 5 ಮೇ 2013 | ಬಿ.ಎಸ್. ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ, ಜಗದೀಶ್ ಶೆಟ್ಟರ್ |
| ಹದಿನಾಲ್ಕನೆಯ ಶಾಸನ ಸಭೆ | 13 ಮೇ 2013 - 17 ಮೇ 2018 | ಸಿದ್ದರಾಮಯ್ಯ |
| ಹದಿನೈದನೇ ಶಾಸನ ಸಭೆ | 17 ಮೇ 2018 - ಪ್ರಸ್ತುತ | ಬಿಎಸ್ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ |
ರಾಜ್ಯದಲ್ಲಿ ಅಧ್ಯಕ್ಷರ ಆಡಳಿತ
| ಅವಧಿ | ಶಾಸನ ಸಭೆ |
| 19.03.1971 ರಿಂದ 20.03.1972 | ನಾಲ್ಕನೇ ಅಸೆಂಬ್ಲಿ |
| 31.12.1977 ರಿಂದ 28.02.1978 | ಐದನೇ ಅಸೆಂಬ್ಲಿ |
| 21.04.1989 ರಿಂದ 30.11.1989 | ಎಂಟನೇ ವಿಧಾನಸಭೆ |
| 09.10.2007 ರಿಂದ 11.11.2007 ವರೆಗೆ | ಹನ್ನೆರಡನೆಯ ಅಸೆಂಬ್ಲಿ |
| 20.11.2007 ರಿಂದ 29.05.2008 ವರೆಗೆ | ಹನ್ನೆರಡನೆಯ ಅಸೆಂಬ್ಲಿ |
ಬುಧವಾರ, ೧೮ ಜೂನ್ ೧೯೫೨ ರಂದು ಬೆಳಿಗ್ಗೆ ೧೧ ಗಂಟೆಗೆ ಬೆಂಗಳೂರಿನ ಹಳೆಯ ಸಾರ್ವಜನಿಕ ಕಛೇರಿ ಕಟ್ಟಡ ಕಾನ್ಫರೆನ್ಸ್ ಸಭಾಂಗಣದಲ್ಲಿ (ಪ್ರಸ್ತುತ ಹೈಕೋರ್ಟ್ ಕಟ್ಟಡ) ಶಾಸನ ಸಭೆಯ ಮೊದಲ ಅಧಿವೇಶನ ನಡೆಯಿತು.
ಡಿಸೆಂಬರ್ ೧೬, ೧೯೪೯ ರಂದು ಮೈಸೂರು ಮಹಾರಾಜರು ಪ್ರತಿನಿಧಿ ಸಭೆ ಮತ್ತು ಶಾಸನಸಭೆಯನ್ನು ವಿಸರ್ಜಿಸಿದರು. ೧೯೪೭ರಲ್ಲಿ ರಚನೆಯಾದ ಸಂಸತ್ ಸಭೆಯು ೧೯೫೨ರಲ್ಲಿ ಚುನಾವಣೆ ನಡೆಯುವವರೆಗೂ ತಾತ್ಕಾಲಿಕವಾಗಿ ಮೈಸೂರಿನ ಸಭೆಯಾಗಿತು.
ಸಂವಿಧಾನದ ಅಡಿಯಲ್ಲಿ ರಚಿಸಲಾದ ಮೊದಲ ಸಭೆಯಲ್ಲಿ 99 ಚುನಾಯಿತರು ಮತ್ತು ಒಬ್ಬ ನಾಮನಿರ್ದೇಶನಗೊಂಡ ಸದಸ್ಯರಿದ್ದರು. ಸಭೆಯ ಮೊದಲ ಸಭೆಯಲ್ಲಿ, ವಿ. ವೆಂಕಟಪ್ಪ ಅವರು ಗೌರವಾನ್ವಿತ ಸಭಾಧ್ಯಕ್ಷರಾಗಿದ್ದರು, ನಂತರ ಅವರು ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಸೇರಿದಂತೆ ಇತರೆ ಸದಸ್ಯರಿಗೆ ಪ್ರಮಾಣ ವಚನ ನೀಡಿದರು. ಸಮಾಜವಾದಿ ನಾಯಕ ಶಾಂತವೇರಿ ಗೋಪಾಲಗೌಡರು ಹಾಗು ಎಚ್. ಸಿದ್ದಯ್ಯ ಸಭಾಧ್ಯಕ್ಷ ಹುದ್ದೆಯ ಚುನಾವಣೆಗೆ ಸ್ಪರ್ಧಿಸಿದ್ದರು, ಆ ಚುನಾವಣೆಯಲ್ಲಿ ಸಿದ್ದಯ್ಯ ಅವರು 74 ಮತಗಳನ್ನು ಪಡೆದು ವಿಜಯಶಾಲಿಯಾಗಿದ್ದರು ಮತ್ತು ಕರ್ನಾಟಕದ ಮೊದಲ ಮುಖ್ಯಮಂತ್ರಿ ಕೆಂಗಲ್ ಹನುಮಂತಯ್ಯ ಅವರು ಭಾಷಣ ಮಾಡಿದರು.
1953 ರಲ್ಲಿ ಆಂಧ್ರ ರಾಜ್ಯದ ರಚನೆಯೊಂದಿಗೆ, ಮದ್ರಾಸ್ ರಾಜ್ಯದಿಂದ ಬಳ್ಳಾರಿ ಜಿಲ್ಲೆಯ ಭಾಗಗಳು ಮೈಸೂರು ರಾಜ್ಯಕ್ಕೆ ಸೇರಿಸಲ್ಪಟ್ಟವು ಮತ್ತು ಶಾಸನ ಸಭೆಯ ಬಲವು ಐದು ಸದಸ್ಯರಿಂದ ಹೆಚ್ಚಿಸಲ್ಪಟ್ಟಿತು. ಮೈಸೂರು ರಾಜ್ಯದ ಮರು-ಸಂಘಟನೆಯು ೧ ನವೆಂಬರ್ ೧೯೫೬ ರಂದು ಹಿಂದಿನ ಬಾಂಬೆ ರಾಜ್ಯದ ನಾಲ್ಕು ಜಿಲ್ಲೆಗಳು, ಹೈದರಾಬಾದ್ ರಾಜ್ಯದ ಮೂರು ಜಿಲ್ಲೆಗಳು, ಹಳೆಯ ಮದ್ರಾಸ್ ರಾಜ್ಯದ ಕೊಡಗು ಮತ್ತು ಮೈಸೂರು ಸಂಸ್ಥಾನದ ಒಂದು ಜಿಲ್ಲೆ ಮತ್ತು ಒಂದು ತಾಲ್ಲೂಕನ್ನು ಸೇರಿಸಲಾಯಿತು. ರಾಜ್ಯವನ್ನು ೧೯೭೩ ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಹೊಸ ವಿಧಾನಸಭೆಯ ಮೊದಲ ಅಧಿವೇಶನ ೧೯೫೬ರ ಡಿಸೆಂಬರ್ ೧೯ ರಂದು ಹೊಸದಾಗಿ ನಿರ್ಮಾಣವಾದ ವಿಧಾನ ಸೌಧದಲ್ಲಿ ನಡೆಯಿತು. ೧೯೫೭ರಲ್ಲಿ ಇದ್ದ ೨೦೮ ಶಾಸಕರ ಸಂಖ್ಯೆಯು ೧೯೬೭ರಲ್ಲಿ ೨೧೬ ಕ್ಕೆ ಏರಿತು ಮತ್ತು ೧೯೭೮ರಲ್ಲಿ ೨೨೪ ಏರಿತು ಹಾಗು ಒರ್ವ ನಾಮ ನಿರ್ದೇಶಿತರನ್ನು ಸೇರಿಸಲಾಯಿತು.
ಕರ್ನಾಟಕ ವಿಧಾನ ಸಭೆಯ ಏಕೈಕ ಮಹಿಳಾ ಸಭಾಧ್ಯಕ್ಷರಾಗಿ ಕೆ.ಎಸ್. ನಾಗರತ್ನಮ್ಮನವರು ೨೪ ಮಾರ್ಚ್ ೧೯೭೨ ರಿಂದ ೩ ಮಾರ್ಚ್ ೧೯೭೮ ರವರೆಗೆ ಕಾರ್ಯ ನಿರ್ವಹಿಸಿದ್ದಾರೆ.
ಬಜೆಟ್ ಅಧಿವೇಶನ ಮತ್ತು ಶಾಸನಸಭೆಯ ಮುಂಗಾರು ಅಧಿವೇಶನವನ್ನು ಬೆಂಗಳೂರಿನ ವಿಧಾನ ಸೌಧದಲ್ಲಿ ನಡೆಸಲಾಗುತ್ತದೆ. ಶಾಸನಸಭೆಯ ಚಳಿಗಾಲದ ಅಧಿವೇಶನವು ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತದೆ.
ಸಭಾಧ್ಯಕ್ಷರ ಪಟ್ಟಿ
[ಬದಲಾಯಿಸಿ]| ಕ್ರಮ ಸಂಖ್ಯೆ | ಸಭಾಧ್ಯಕ್ಷರು | ಪಕ್ಷ | ಅಧಿಕಾರಾವಧಿ |
|---|---|---|---|
| 1 | ವಿ. ವೆಂಕಟಪ್ಪ | INC | 17.06.1952 ಗೆ 26.01.1952 |
| 2 | ಎಚ್. ಸಿದ್ದಯ್ಯ | INC | 18.06.1952 ರಿಂದ 14.05.1954 ಗೆ |
| 3 | ಎಚ್.ಎಸ್ ರುದ್ರಪ್ಪ | INC | 13.10.1954 ರಿಂದ 01.11.1956 ವರೆಗೆ |
| 4 | ಎಸ್ ಆರ್ ಕಂಠಿ | INC | 19.12.1956 ರಿಂದ 09.03.1962 |
| 5 | ಬಿ. ವೈಕುಂಟಾ ಬಾಳಿಗ | INC | 15.03.1962 ರಿಂದ 06.06.1968 |
| 6 | ಎಸ್.ಡಿ. ಕೋಟಾವಲೆ | INC | 05.09.1968 ರಿಂದ 24.03.1972 |
| 7 | ಕೆ.ಎಸ್. ನಾಗರತ್ನಮ್ಮ | INC | 24.03.1972 ಗೆ 17.03.1978 |
| 8 | ಪಿ. ವೆಂಕಟರಮಣ | INC | 17.03.1978 ರಿಂದ 03.10.1980 ಗೆ |
| 9 | ಕೆ.ಎಚ್ ರಂಗನಾಥ್ | INC | 30.01.1981 ರಿಂದ 24.01.1983 ವರೆಗೆ |
| 10 | ಡಿ.ಬಿ ಚಂದ್ರೆ ಗೌಡ | ಜೆಪಿ | 24.01.1983 ರಿಂದ 17.03.1985 ಗೆ |
| 11 | ಬಿ.ಜಿ ಬಣಕಾರ್ | ಜೆಪಿ | 18.03.1985 ರಿಂದ 17.12.1989 |
| 12 | ಎಸ್.ಎಂ ಕೃಷ್ಣ | INC | 18.12.1989 ರಿಂದ 20.01.1993 ಗೆ |
| 13 | ವಿ.ಎಸ್. ಕೌಜಲಗಿ | INC | 15.02.1993 ರಿಂದ 26.12.1994 ಗೆ |
| 14 | ಕೆ.ಆರ್ ರಮೇಶ್ ಕುಮಾರ್ | ಜೆಡಿ | 27.12.1994 ಗೆ 24.10.1999 |
| 15 | ಎಂ.ವಿ. ವೆಂಕಟಪ್ಪ | INC | 26.10.1999 ರಿಂದ 07.06.2004 ವರೆಗೆ |
| 16 | ಎಸ್ ಎಂ ಕೃಷ್ಣ | ಜೆಡಿ (ಎಸ್) | 10.06.2004 ರಿಂದ 04.06.2008 |
| 17 | ಜಗದೀಶ್ ಶೆಟ್ಟರ್ | ಬಿಜೆಪಿ | 05.06.2008 ರಿಂದ 16.11.2009 ವರೆಗೆ |
| 18 | ಕೆ.ಜಿ ಬೋಪಯ್ಯ | ಬಿಜೆಪಿ | 17.11.2009 ರಿಂದ ಮೇ 2013 ವರೆಗೆ |
| 19 | ಕಾಗೋಡು ತಿಮ್ಮಪ್ಪ | INC | 31.05.2013 ರಿಂದ 19.06.2016 |
| 20 | ಕೆ.ಬಿ ಕೊಲಿವಾಡ್ | INC | 05.07.2016 ರಿಂದ 18.05.2018 |
| 21 | ಕೆ.ಆರ್ ರಮೇಶ್ ಕುಮಾರ್ | INC | 25.05.2018 ರಿಂದ 29.07.2019 |
| 22 | ವಿಶ್ವೇಶ್ವರ ಹೆಗಡೆ ಕಾಗೇರಿ | ಬಿಜೆಪಿ | 31 July 2019 ರಿಂದ ಪ್ರಸ್ತುತ |
ಸಭಾಧ್ಯಕ್ಷರ ಅಧಿಕಾರಗಳು,
[ಬದಲಾಯಿಸಿ]ಹೆಚ್ಚಿನ ಮಾಹಿತಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ಕರ್ನಾಟಕ ಲೋಕಸಭಾ ಚುನಾವಣೆ 2019 ಫಲಿತಾಂಶ ವೆಬ್ಸೈಟ್ Archived 2019-04-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Darshan Puttannaiah and Puttaswamy Gowda Extend Support To Congress | Public TV. Public TV. 2023-05-13. Retrieved 2024-08-22 – via YouTube.
- ↑ Former BJP MLA ST Somashekhar meets DK Shivakumar, says all 139 Congress MLAs to stay united #Super6 | Akshita Nandagopal | India Today (in ಇಂಗ್ಲಿಷ್). Retrieved 2025-12-09 – via www.facebook.com.
- ↑ "BJP MLA Somashekar cross-votes for Congress in Rajya Sabha polls". mint (in ಇಂಗ್ಲಿಷ್). 2024-02-27. Retrieved 2025-12-09.
- ↑ "Estranged BJP MLA Somashekar holds meeting with Congress". ThePrint (in ಅಮೆರಿಕನ್ ಇಂಗ್ಲಿಷ್). PTI. 2024-04-05. Retrieved 2025-12-09.
- ↑ "Karnataka BJP expels two MLAs for 6 years over 'repeated violations'". Hindustan Times (in ಇಂಗ್ಲಿಷ್). 2025-05-27. Retrieved 2025-12-09.
- ↑ "BJP expels Karnataka MLA for 6 years over remarks against party, BS Yediyurappa". India Today (in ಇಂಗ್ಲಿಷ್). 2025-03-26. Retrieved 2025-12-09.
