ಇಟ್ಯಾಲಿಯನ್ ಪಾಕಪದ್ಧತಿ
ಇಟ್ಯಾಲಿಯನ್ ಪಾಕಪದ್ಧತಿ ಯು ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಷ್ಟು ಹಿಂದಿನ ಮೂಲಗಳನ್ನು ಹೊಂದಿದೆ. ಇದು ಹಲವು ಶತಮಾನಗಳ ಸಾಮಾಜಿಕ ಮತ್ತು ರಾಜಕೀಯ ಬದಲಾವಣೆಗಳ ಕಾಲದಲ್ಲಿ ಅಭಿವೃದ್ಧಿ ಹೊಂದಿದೆ. ಇಟ್ಯಾಲಿಯನ್ ಪಾಕಪದ್ಧತಿ ಸ್ವತಃ ಎಟ್ರಸ್ಕನ್, ಪುರಾತನ ಗ್ರೀಕ್, ಪುರಾತನ ರೋಮನ್, ಬೈಝಾಂಟೀನ್, ಜರ್ಮನಿಕ್, ಗೇಲಿಕ್, ನಾರ್ಮನ್, ಯೆಹೂದಿ ಹಾಗೂ ಅರಬ್ ಪಾಕಪದ್ಧತಿಗಳಿಂದ ಪ್ರಭಾವಿತವಾಗಿದೆ.[೧] ನೂತನ ವಿಶ್ವ (New World) ಪರಿಶೋಧನೆಯೊಂದಿಗೆ ಗಮನಾರ್ಹ ಬದಲಾವಣೆಗಳು ಸಂಭವಿಸಿದವು. ಇಟ್ಯಾಲಿಯನ್ ಪಾಕಪದ್ಧತಿಗೆ ಇಂದು ಪ್ರಮುಖ ಅಂಶಗಳಾಗಿರುವ ಆಲೂಗಡ್ಡೆಗಳು, ಟೊಮೆಟೊಗಳು, ಮೆಣಸುಗಳು ಹಾಗೂ ಮೆಕ್ಕೆ-ಜೋಳ ಅಂಶಗಳನ್ನು ಪರಿಚಯಿಸಲಾಯಿತು. ಆದರೂ, 18ನೆಯ ಶತಮಾನದ ತನಕ ಇವನ್ನು ಈ ಪ್ರಮಾಣದಲ್ಲಿ ಪರಿಚಯಿಸಿರಲಿಲ್ಲ.[೨][೩] ಇಟ್ಯಾಲಿಯನ್ ಪಾಕಪದ್ಧತಿಯು ವಲಯವಾರು ವಿವಿಧತೆಗಾಗಿ ಹೆಸರುವಾಸಿಯಾಗಿದೆ.[೪][೫][೬] ವಿವಿಧ ಭಕ್ಷ್ಯಗಳ ರುಚಿಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇವು ವಿಶ್ವದ ಅತಿ ಜನಪ್ರಿಯ ಭಕ್ಷ್ಯಗಳಲ್ಲಿ ಒಂದು.[೭] ಇದು ವಿದೇಶೀ ಭಕ್ಷ್ಯಗಳ ಪ್ರಭಾವಗಳಿಗೂ ಒಳಗಾಗಿದೆ.[೮] ಭಕ್ಷ್ಯದ ಅಂಶಗಳು ಮತ್ತು ಭಕ್ಷ್ಯಗಳು ವಲಯವಾರು ವೈವಿಧ್ಯ ಹೊಂದಿರುತ್ತವೆ. ಆದರೂ, ಹಿಂದೊಮ್ಮೆ ನಿರ್ದಿಷ್ಟ ವಲಯದ ಭಕ್ಷ್ಯಗಳು ವಿಭಿನ್ನತೆಯೊಂದಿಗೆ ದೇಶದ ಇತರೆಡೆ ಹಬ್ಬಿವೆ. ಗಿಣ್ಣು ಹಾಗೂ ವೈನ್ ಪಾಕಪದ್ಧತಿಯ ಪ್ರಮುಖ ಅಂಶಗಳಾಗಿವೆ. ಹಲವು ವಿಭಿನ್ನತೆಗಳು ಹಾಗೂ Denominazione di origine controllata (DOC) (ನಿಯಂತ್ರಿತ ಮೇಲರ್ಜಿ ಸ್ವೀಕರಿಸಲಾದ) ಕಾನೂನಗಳು ಅನ್ವಯಿಸುವವು. ಕಾಫಿ, ಅದರಲ್ಲೂ ವಿಶಿಷ್ಟವಾಗಿ ಎಸ್ಪ್ರೆಸೊ, ಇಟ್ಯಾಲಿಯನ್ ಪಾಕಪದ್ಧತಿಯ ಪ್ರಮುಖ ಅಂಶವಾಗಿದೆ.
ಇತಿಹಾಸ
[ಬದಲಾಯಿಸಿ]ಇಟ್ಯಾಲಿಯನ್ ಪಾಕಪದ್ಧತಿಯು ಶತಮಾನಗಳಿಂದ ಅಭಿವೃದ್ಧಿ ಹೊಂದಿದೆ. ಇಟಲಿ ದೇಶವು 19ನೆಯ ಶತಮಾನದ ವರೆಗೂ ಏಕೀಕೃತಗೊಂಡಿರಲಿಲ್ಲವಾದರೂ, ಇಲ್ಲಿನ ಪಾಕಪದ್ಧತಿಯ ಮೂಲವು ಕ್ರಿಸ್ತಪೂರ್ವ ನಾಲ್ಕನೆಯ ಶತಮಾನದಷ್ಟು ಹಿಂದಿನದು. ಶತಮಾನಗಳಿಂದಲೂ, ನೆರೆ ವಲಯಗಳು, ಯುದ್ಧ ವಿಜೇತರು, ಅತಿ ಪ್ರಮುಖ ಅಡುಗೆಯವರು, ರಾಜಕೀಯ ವಿಪ್ಲವಗಳು ಹಾಗು ನೂತನ ಪ್ರಪಂಚದ ಪರಿಶೋಧನೆಯು, ವಿಶ್ವದ ಪ್ರಮುಖ ಪಾಕ ಪದ್ಧತಿಗಳಲ್ಲೊಂದಾದ ಇಟ್ಯಾಲಿಯನ್ ಪಾಕಪದ್ಧತಿಯ ಮೇಲೆ ಪ್ರಭಾವ ಬೀರಿದೆ.
ಪ್ರಾಚೀನ ಕಾಲ
[ಬದಲಾಯಿಸಿ]ಆರ್ಕೆಸ್ಟ್ರಟಸ್ ಎಂಬ ಸೈರಾಕ್ಯೂಸ್ ಮೂಲದ, ಗ್ರೀಕ್ ಸಿಸಿಲಿಯನ್ ವ್ಯಕ್ತಿ, ಮೊಟ್ಟಮೊದಲ ಇಟ್ಯಾಲಿಯನ್ ಪಾಕ ಶಾಸ್ತ್ರ ಬರಹಗಾರನಾಗಿದ್ದ. ಕ್ರಿಸ್ತ ಪೂರ್ವ ನಾಲ್ಕನೆಯ ಶತಮಾನದಲ್ಲಿ ಈತ ಉತ್ತಮ ಗುಣಮಟ್ಟದ ಹಾಗೂ ಋತುವಾರು ಆಂಶಗಳನ್ನು ಬಳಸಿ ಭಕ್ಷ್ಯ ತಯಾರಿಕೆ ಕುರಿತು ಕವನ ರಚಿಸಿದ್ದ. ಆತನ ಪ್ರಕಾರ, ಸ್ವಾದವನ್ನು ಮೆಣಸು, ಗಿಡಮೂಲಿಕೆಗಳು ಅಥವಾ ಇತರೆ ಹದಗೊಳಿಸಿಕೆಗಳಿಂದ ಮರೆಮಾಚುವುದು ಬೇಡ ಎಂದು ಅಭಿಪ್ರಾಯಪಟ್ಟಿದ್ದ. ಮೀನು ತಯಾರಿಕೆಯಂತಹ ಸರಳ ಅಡುಗೆಯ ಮೇಲೆ ಒತ್ತು ನೀಡುತ್ತಿದ್ದ. ಕ್ರಿಸ್ತ ಪೂರ್ವ ಮೊದಲನೆಯ ಶತಮಾನದಲ್ಲಿ, ಮೆಣಸು ಹಾಗೂ ಗಿಡಮೂಲಿಕೆಗಳನ್ನು ಹೇರಳವಾಗಿ ಬಳಸಿ ತಯಾರಿಸಲಾದ 470 ಪಾಕವಿಧಾನಗಳನ್ನು ಒಳಗೊಂಡ De re coquinaria ವನ್ನು ಪ್ರಕಟಿಸಿದಾಗ ಈ ಶೈಲಿಯನ್ನು ಮರೆತಂತಾಗಿತ್ತು. ರೋಮನ್ನರುಬ್ರೆಡ್ ತಯಾರಿಸಲು ಗ್ರೀಕ್ ಬೇಕರ್ಗಳನ್ನು ನೇಮಿಸಿಕೊಂಡರು. ಸಿಸಿಲಿಯನ್ನರು ಗಿಣ್ಣು ತಯಾರಿಸುವಲ್ಲಿ ನಿಪುಣರು ಎಂಬ ಕಾರಣಕ್ಕೆ, ಸಿಸಿಲಿಯಿಂದ ಗಿಣ್ಣನ್ನು ಆಮದು ಮಾಡಿಕೊಂಡರು. ರೋಮನ್ನರು ಕಸಾಯಿಗಾಗಿ ಮೇಕೆಗಳನ್ನು ಸಾಕಿದರು. ಪಲ್ಲೆಹೂ ಮತ್ತು ಈರುಳ್ಳಿ ಬಳಗದ ಲೀಕ್ ಗಿಡವನ್ನು ಬೆಳೆಸಿದರು.[೧೦]
ಮಧ್ಯ ಕಾಲೀನ ಯುಗ
[ಬದಲಾಯಿಸಿ]ರೋಮ್ ಮತ್ತು ಅಥೆನ್ಸ್ನಿಂದ ಬಂದ ಅಡುಗೆಯ ಸಂಪ್ರದಾಯಗಳನ್ನು ಒಳಗೊಂದು, ಸಿಸಿಲಿಯಲ್ಲಿ ಅಭಿವೃದ್ಧಿಗೊಳಿಸಲಾದ ಪಾಕಪದ್ಧತಿಯನ್ನು ಮೊಟ್ಟಮೊದಲ ನೈಜ ಇಟ್ಯಾಲಿಯನ್ ಪಾಕಪದ್ಧತಿ ಎನ್ನಲಾಯಿತು. [ಸೂಕ್ತ ಉಲ್ಲೇಖನ ಬೇಕು] ಒಂಬತ್ತನೆಯ ಶತಮಾನದಲ್ಲಿ ಮುಸ್ಲಿಮರು ಸಿಸಿಲಿಯ ಮೇಲೆ ಆಕ್ರಮಣ ನಡೆಸಿದರು. ಅರಬರು ಪಾಲಕ, ಬಾದಾಮಿ, ಅಕ್ಕಿ ಹಾಗೂ ಬಹುಶಃ ಶಾವಿಗೆಯನ್ನು ಪರಿಚಯಿಸಿದರು. [ಸೂಕ್ತ ಉಲ್ಲೇಖನ ಬೇಕು] 12ನೆಯ ಶತಮಾನದಲ್ಲಿ, ನಾರ್ಮನ್ ರಾಜನೊಬ್ಬನು ಸಿಸಿಲಿಯ ಸಮೀಕ್ಷೆ ನಡೆಸಿ, ಅಲ್ಲಿಯ ಜನರು ಹಿಟ್ಟು ಹಾಗು ನೀರಿನಿಂದ ಉದ್ದನೆಯ ದಾರಗಳನ್ನು ಮಾಡುತ್ತಿದ್ದನ್ನು (ಅಟ್ರಿಯಾ ) ಕಂಡನು. ಅಂತಿಮವಾಗಿ ಇದು ಟ್ರೀ ಆಯಿತು. ಇಂದಿಗೂ ಸಹ, ದಕ್ಷಿಣ ಇಟಲಿಯಲ್ಲಿ ಶಾವಿಗೆಗೆ ಟ್ರೀ ಎನ್ನಲಾಗುತ್ತದೆ. ನಾರ್ಮನ್ನರು ಕ್ಯಾಸೆರೊಲ್ಸ್, ಸಾಲ್ಟ್ ಕಾಡ್ (baccalà) ಮತ್ತು ಒಣಮೀನನ್ನು ಸಹ ಪರಿಚಯಿಸಿದರು. ಇವೆಲ್ಲವೂ ಸಹ ಇಂದಿಗೂ ಜನಪ್ರಿಯ.[೧೧] ಆಹಾರ ಸಂರಕ್ಷಣೆಯು ರಾಸಾಯನಿಕ ಅಥವಾ ಭೌತಿಕವಾಗಿ ನಡೆಸಲಾಗುತ್ತಿತ್ತು, ಏಕೆಂದರೆ ಆಗಿನ ಕಾಲದಲ್ಲಿ ಶೈತ್ಯಾಗಾರ ವ್ಯವಸ್ಥೆಯಿರಲಿಲ್ಲ. ಮಾಂಸಗಳು ಹಾಗೂ ಮೀನುಗಳನ್ನು ಹೊಗೆಯಾಡಿಸಿ ಒಣಗಿಸಲಾಗುತ್ತಿತು ಅಥವಾ ಇಬ್ಬನಿಯ ಮೇಲಿಡಲಾಗುತ್ತಿತ್ತು. ಉಪ್ಪಿನಕಾಯಿ, ಹೆರಿಂಗ್ ಮೀನುಗಳನ್ನು ಸಂರಕ್ಷಿಸಲು ಹಾಗೂ ಹಂದಿ ಮಾಂಸವನ್ನು ಶುದ್ಧಗೊಳಿಸಲು ಲವಣಜಲ ಮತ್ತು ಉಪ್ಪನ್ನು ಬಳಸಲಾಗುತ್ತಿತ್ತು. ಅರೆಬೇಯಿಸಲಾದ ನಂತರ, ಬೇರು ತರಕಾರಿಗಳನ್ನು ಲವಣಜಲದಲ್ಲಿ ಸಂರಕ್ಷಿಸಲಾಗುತ್ತಿತ್ತು. ತಂಪುಗೊಳಿಸಲಾದ, ಕರಗಿಸಲಾದ ಕೊಬ್ಬಿನಲ್ಲಿ ಅಥವಾ ತೈಲ, ಅಥವಾ ದ್ರಾಕ್ಷಿಯ ಹುಳಿರಸದಲ್ಲಿ ಮಾಂಸವನ್ನು ಅದ್ದಿ ಸಂರಕ್ಷಿಸಲಾಗುತ್ತಿತ್ತು. ಹಣ್ಣುಗಳನ್ನು ಸಂರಕ್ಷಿಸಲು, ಮದ್ಯ, ಜೇನು ಹಾಗು ಸಕ್ಕರೆಯನ್ನು ಬಳಸಲಾಗುತ್ತಿತ್ತು.[೧೨]
ಉತ್ತರ ಇಟ್ಯಾಲಿಯನ್ ವಲಯಗಳಲ್ಲಿ ಜರ್ಮನಿಕ್ ಹಾಗೂ ರೋಮನ್ ಸಂಸ್ಕೃತಿಗಳ ಮಿಶ್ರಣವನ್ನು ಕಾಣಬಹುದು. ದಕ್ಷಿಣ ವಲಯದಲ್ಲಿ ಅರಬ್ ಪ್ರಭಾವವುಂಟು. ಜೊತೆಗೆ ಅರಬ್ ವಾಣಿಜ್ಯ ಚಟುವಟಿಕೆಗಳಿಂದಾಗಿ ಮೆಡಿಟರೇನಿಯನ್ ಪಾಕಪದ್ಧತಿ ಸಹ ವ್ಯಾಪಕವಾಯಿತು.[೧೩] ಹದಿಮೂರನೆಯ ಶತಮಾನದಲ್ಲಿ, ನ್ಯಾಪಲ್ಸ್ನಲ್ಲಿ ರಚಿಸಲಾದ ಲಿಬರ್ ಡಿ ಕೊಕ್ವಿನಾ ಅತಿ ಹಳೆಯ ಇಟ್ಯಾಲಿಯನ್ ಪಾಕಪದ್ಧತಿಯ ಪುಸ್ತಕ. ಭಕ್ಷ್ಯಗಳಲ್ಲಿ ರೋಮನ್ ಶೈಲಿಯ ಎಲೆಕೋಸು (ಅಡ್ ಯುಸಮ್ ರೊಮನೊರಮ್ ), ಅಡ್ ಯುಸಮ್ ಕ್ಯಾಂಪನೀ (ಇವು ಕ್ಯಾಂಪಾನಿಯನ್ ರೀತ್ಯಾ ತಯಾರಿಸಲಾದ ಸಣ್ಣ ಎಲೆಗಳು), ಮಾರ್ಕಾ ಡಿ ಟ್ರೆವಿಸಿಯೊದ ಬೀಜ ಭಕ್ಷ್ಯ, ಒಂದೊ ಟೊರ್ಟಾ , ಕಾಂಪೊಸಿಟಮ್ ಲಾಂಡಾರ್ಡಿಯಮ್ ಸೇರಿವೆ. ಇವೆಲ್ಲವೂ ಸಹ ಇಂದು ತಯಾರಿಸಲಾದ ಭಕ್ಷ್ಯಗಳಿಗೆ ಸಮಾನರೂಪ ಹೊಂದಿವೆ. ಹದಿನಾಲ್ಕನೆಯ ಶತಮಾನದ ಇನ್ನೂ ಎರಡು ಗ್ರಂಥಗಳಲ್ಲಿ ರೋಮನ್ ಪ್ಯಾಸ್ಟೆಲೊ , ಲ್ಯಾವಾಗ್ನಾ ಹೂರಣ ಕಡಬಿಗಾಗಿ ಪಾಕವಿಧಾನಗಳು ಸೇರಿವೆ. ಜೊತೆಗೆ, ಸಾರ್ಡಿನಿಯಾ ಅಥವಾ ಚಿಯೊಗಿಯಾದಿಂದ ತರಿಸಲಾದ ಉಪ್ಪಿನ ಬಳಕೆ ಶಿಫಾರಸು ಮಾಡುತ್ತದೆ.[೧೪]
ಹದಿನೈದನೆಯ ಶತಮಾನದಲ್ಲಿ, ವ್ಯಾಟಿಕನ್ನಲ್ಲಿ ಅಕ್ವಿಲೇಯಾದ 'ಪೇಟ್ರಿಕಾರ್ಕ್' (ಪೋಪ್ನಿಗಿಂತ ಕೆಳದರ್ಜೆಯ ಬಿಷಪ್) ಮೇಷ್ಟ್ರೊ ಮಾರ್ಟಿನೊ ಬಾಣಸಿಗರಾಗಿದ್ದರು. ಅವರು ರಚಿಸಿದ ಲಿಬ್ರೊ ಡಿ ಆರ್ಟ್ ಕೊಕ್ವಿನೆರಿಯಾ ಇನ್ನಷ್ಟು ಪರಿಶುದ್ಧವಾದ, ಸೊಬಗುಳ್ಳ ಪಾಕಪದ್ಧತಿಯನ್ನು ವಿವರಿಸುತ್ತದೆ. ಸಣ್ಣ ಕಬ್ಬಿಣ ದಂಡದ ಸುತ್ತಲೂ ಹಿಟ್ಟನ್ನು ಮೆತ್ತಿ, ಬಿಸಿಲಲ್ಲಿ ಒಣಗಿಸಿ ತಯಾರಿಸಲಾದ ಮೆಕಾರೊನಿ ಸಿಸಿಲಿಯಾನಿ ಎಂಬ ಭಕ್ಷ್ಯದ ಪಾಕವಿಧಾನವು ಅವರ ಗ್ರಂಥದಲ್ಲಿದೆ. ಕೇಸರಿಯ ರುಚಿ ಹೊಂದಿದ್ದ ಕೇಪನ್ ಸ್ಟಾಕ್ನಲ್ಲಿ ಮೆಕಾರೊನಿಯನ್ನು ಪಾಕ ಮಾಡಲಾಗುತ್ತಿತ್ತು. ಇದು ಅರಬ್ ಪ್ರಭಾವವನ್ನು ಎತ್ತಿತೋರಿಸುತ್ತಿತ್ತು. ಇದರಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಚಾರವೇನೆಂದರೆ, ಮಾರ್ಟಿನೊ ಅಧಿಕ ಪ್ರಮಾಣದಲ್ಲಿ ಉಪ್ಪು-ಖಾರ ಹಾಕುವ ಬದಲಿಗೆ ತಾಜಾ ಗಿಡ ಮೂಲಿಕೆ ಬಳಸುವತ್ತ ಒಲವು ತೋರುತ್ತಿದ್ದರು.[೧೧] ರೋಮನ್ ಪಾಕವಿಧಾನಗಳಲ್ಲಿ ಕಾಪಿಯೆಟ್ ಹಾಗೂ ಎಲೆಕೋಸು ಭಕ್ಷ್ಯಗಳು ಸೇರಿವೆ. ಅವರ ಫ್ಲಾರೆಂಟೀನ್ ಭಕ್ಷ್ಯಗಳ ಪೈಕಿ, ಬೊಲೊಗ್ನೀಸ್ ಟೊರ್ಟಾ ದೊಂದಿಗಿನ ಮೊಟ್ಟೆಗಳು, ಸಿಯೆನೀಸ್ ಟೊರ್ಟಾ ಮತ್ತು ಪಿಪೆರಾಟಾ , ಮೆಕಾರೊನಿ, ಸ್ಕ್ವಾಷ್, ಅಣಬೆಗಳು; ಜೊತೆಗೆ, ಜಿನೊಯೀಸ್ ಪಾಕವಿಧಾನಗಳಾದ ಪಿಪೆರಾಟಾ , ಮೆಕಾರೊನಿ, ಸ್ಕ್ವಾಷ್, ಅಣಬೆಗಳು ಹಾಗೂ, ಈರುಳ್ಳಿಗಳನ್ನು ಸೇರಿಸಲಾದ ಪಾಲಕ ಕಡಬುಗಳು ಸೇರಿದ್ದವು.[೧೫] ಇಸವಿ 1475ರಲ್ಲಿ ಬಾರ್ಟೊಲೊಮಿಯೊ ಪ್ಲಾಟಿನಾ ವೆನಿಸ್ನಲ್ಲಿ ರಚಿಸಿ, ಪ್ರಕಟಿಸಿದ ಡಿ ಆನೆಸ್ಟಾ ವೊಲುಪ್ಟೇಟ್ ಎಟ್ ವ್ಯಾಲೆಟುಡಿನ್ ("On Honest Pleasure and Good Health") ಎಂಬ ಗ್ರಂಥದಲ್ಲಿ, ಮಾರ್ಟಿನೊ ಅವರ ಪಠ್ಯವನ್ನು ಉಲ್ಲೇಖಿಸಲಾಗಿತ್ತು. ಪ್ಲಾಟಿನಾ ಮಾರ್ಟಿನೊರ 'ಲಿಬ್ರೊ'ವನ್ನು ವಲಯವಾರು ಸಂದರ್ಭಗಳಿಗೆ ಹೊಂದಿಸಿ, ಈ ಭಕ್ಷ್ಯಾಂಶಗಳ ಬಗ್ಗೆ ಬರೆದರು: ಮ್ಯಾಗಿಯೊರ್ ಕೆರೆಯಿಂದ ಪರ್ಚ್ ಮೀನು, ಗರ್ಡಾ ಕೆರೆಯಿಂದ ಸಾರ್ಡೀನ್ ಮೀನುಗಳು, ಅಡ್ಡಾದಿಂದ ಗ್ರೇಯ್ಲಿಂಗ್ಗಳು, ಪಡುವಾದಿಂದ ಕೋಳಿಗಳು, ಬೊಲೊಗ್ನಾ ಮತ್ತು ಪಿಕೆನೊದಿಂದ ಆಲಿವ್ಗಳು, ರಾವೆನ್ನಾದಿಂದ ಟರ್ಬಟ್ ಮೀನು, ಟ್ರಸಿಮೆನೊ ಕೆರೆಯಿಂದ ರಡ್ ಮೀನು, ವಿಟರ್ಬೊದಿಂದ ಗಜ್ಜರಿ (carrot), ಟೈಬರ್ ನದಿಯಿಂದ ಬಾಸ್ (ಪರ್ಚ್) ಮೀನು, from ಅಲ್ಬಾನೊ ಕೆರೆಯಿಂದ ರೊವಿಗ್ಲಿಯೊನಿ ಮತ್ತು ಷಾಡ್ ಮೀನು, ರಿಯೆಟಿಯಿಂದ ಬಸವನಹುಳುಗಳು, ಟಸ್ಕೊಲೊದಿಂದ ಅಂಜೂರ ಹಣ್ಣುಗಳು, ನರ್ನಿಯಿಂದ ದ್ರಾಕ್ಷಿಗಳು, ಕ್ಯಾಸ್ಸಿನೊದಿಂದ ತೈಲ, ನ್ಯಾಪಲ್ಸ್ನಿಂದ ಕಿತ್ತಳೆ ಹಣ್ಣುಗಳು, ಹಾಗೂ, ಕ್ಯಾಂಪನಿಯಾದಿಂದ ಹಾವುಮೀನು. ಲೊಂಬಾರ್ಡಿ ಮತ್ತು ಕ್ಯಾಂಪನಿಯಾ ಮೂಲದ ಧಾನ್ಯಗಳು ಹಾಗೂ ಸಿಸಿಲಿ ಮತ್ತು ಟರಾಂಟೊ ಮೂಲದ ಜೇನನ್ನು ಸಹ ಉಲ್ಲೇಖಿಸಲಾಗಿದೆ. ಲೈಗುರಿಯನ್ ಕಡಲತೀರದಿಂದ ವೈನ್, ಟಸ್ಕನಿ ಮತ್ತು ಸ್ಯಾನ್ ಸೆವೆರಿನೊದಿಂದ ಗ್ರೆಕೊ, ಹಾಗೂ, ಟಸ್ಕನಿ ಮತ್ತು ಪಿಕೆನೊ ಟ್ರೆಬಿಯನೊ ಸಹ ಈ ಗ್ರಂಥದಲ್ಲಿ ಉಲ್ಲೇಖಿಸಲಾಗಿದೆ.[೧೬]
ಆರಂಭಿಕ ಆಧುನಿಕ ಯುಗ
[ಬದಲಾಯಿಸಿ]ಫ್ಲಾರೆನ್ಸ್, ರೋಮ್, ವೆನಿಸ್ ಮತ್ತು ಫೆರರಾದ ಆಸ್ಥಾನಗಳು ಈ ಪಾಕಪದ್ಧತಿಗೆ ಕೇಂದ್ರವಾಗಿತ್ತು. ಇಸವಿ 1549ರಲ್ಲಿ ಇಪೊಲಿಟೊ ಡಿ'ಎಸ್ಟ್ನ ಪಾರುಪತ್ಯಗಾರ ಕ್ರಿಸ್ಟೊಫೊರೊ ಮೆಸ್ಸಿಸ್ಬ್ಯುಗೊ ಬ್ಯಾಂಚೆಟಿ ಕೊಂಪೊಸಿಜಿಯೊನಿ ಡಿ ವಿವ್ಯಾಂಡ್ ಎಂಭ ಗ್ರಂಥ ಪ್ರಕಟಿಸಿದರು. ಮೆಸ್ಸಿಸ್ಬುಗೊ ಕಡಬು ಹಾಗೂ ಪಿಷ್ಟ ಭಕ್ಷ್ಯಗಳಿಗಾಗಿ ವಿಭಿನ್ನ ತುಂಬಿಸುವಿಕೆಗಳ ಸಹಿತ 124 ಪಾಕವಿಧಾನಗಳನ್ನು ಸೂಚಿಸಿದ್ದಾರೆ. ಈ ಕೃತಿಯಲ್ಲಿ ವಿಶ್ವದ ಪ್ರಾಚ್ಯ ವಲಯಗಳ ಮೆಣಸುಗಳು ಹಾಗೂ ಸಕ್ಕರೆಯ ಬಳಕೆಯ ಕುರಿತು ಒತ್ತು ನೀಡಿದೆ.[೧೭]
ಇಸವಿ 1570ರಲ್ಲಿ, ಐದನೆಯ ಪೋಪ್ ಪಯಸ್ರ ಆಪ್ತ ಬಾಣಸಿಗ ಬಾರ್ಟೊಲೊಮಿಯೊ ಸ್ಕಪ್ಪಿ, ತಮ್ಮ ಗೀತನಾಟಕಗಳನ್ನು ಐದು ಸಂಪುಟಗಳಲ್ಲಿ ಬರೆದರು. ಇದರಲ್ಲಿ ಆ ಯುಗದ ಇಟ್ಯಾಲಿಯನ್ ಅಡುಗೆಯ ಸಮಗ್ರ ನೋಟದ ಪರಿಚಯ ನೀಡಿದ್ದಾರೆ. ಇದರಲ್ಲಿ 1,000ಕ್ಕೂ ಹೆಚ್ಚು ಪಾಕವಿಧಾನಗಳು, ಜೊತೆಗೆ ಪ್ರದರ್ಶನಗಳು ಹಾಗೂ ಖಾದ್ಯ ವಿವರಗಳು ಹಾಗೂ ಅಡುಗೆಮನೆಯ ಮತ್ತು ಪಾತ್ರೆಗಳ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿತ್ತು. ಬೇಟೆಯಾಡಿದ ಪ್ರಾಣಿಗಳ ಬದಲಿಗೆ, ಸಾಕು ಪ್ರಾಣಿಗಳನ್ನು ಆಯ್ದುಕೊಂಡ ಕಾರಣ, ರಾಜಮನೆತನದ ಆಸ್ಥಾನಗಳಿಗಾಗಿ ಬರೆಯಲಾದ ಹಲವು ಪುಸ್ತಕಗಳಿಗಿಂತಲೂ ಇದು ಭಿನ್ನವಾಗಿದೆ. ಈ ಪಾಕವಿಧಾನಗಳಲ್ಲಿ ನಾಲಗೆ, ತಲೆ ಮತ್ತು ಭುಜದ ಮಾಂಸಗಳ ಸಣ್ಣ ಕೊಯ್ತಗಳಿವೆ. ಮೂರನೆಯ ಸಂಪುಟದಲ್ಲಿ ಲೆಂಟ್ ಕಾಲದ ಮೀನು ಅಡುಗೆಗಾಗಿ ಪಾಕವಿಧಾನಗಳನ್ನು ಸೂಚಿಸಲಾಗಿದೆ. ಈ ಮೀನಿನ ಪಾಕವಿಧಾನಗಳು ಬಹಳ ಸರಳ. ಇದರಲ್ಲಿ ಬೇಯಿಸುವಿಕೆ, ಸುಡುವಿಕೆ, ಕಬ್ಬಿಣ ಚೌಕಟ್ಟಿನಲ್ಲಿ ಬೇಯಿಸುವಿಕೆ ಹಾಗೂ ಮ್ಯಾರಿನೆಟ್ ದ್ರವದಲ್ಲಿ ನೆನೆ ಹಾಕಿದ ನಂತರ ಕರಿಯುವುದು. ಋತುಗಳು ಹಾಗೂ ಮೀನು ಹಿಡಿಯುವ ಸ್ಥಳಗಳಿಗೆ ವಿಶಿಷ್ಟ ಆದ್ಯತೆ ನೀಡಲಾಗಿದೆ. ಅಂತಿಮ ಸಂಫುಟದಲ್ಲಿ ಕಡಬುಗಳು, ಹಣ್ಣಿನ ಕಡಬುಗಳು, ಪನಿಯಾಣಗಳು ಹಾಗೂ ಸಿಹಿ ನಿಯಪೊಲಿಟನ್ ಪಿಜ್ಜಾದ ಪಾಕವಿಧಾನ (ಈಗ ಲಭ್ಯ ಪಿಜ್ಜಾಗಾಗಿ ಅಲ್ಲ), ಏಕೆಂದರೆ ಅಂದು ಇಟಲಿಯಲ್ಲಿ ಟೊಮೆಟೊವನ್ನು ಇನ್ನೂ ಪರಿಚಯಿಸಿರಲಿಲ್ಲ. ಆದರೂ, ಕಾಳು ಹಾಗು ಟರ್ಕಿ ಹಕ್ಕಿ ಮಾಂಸದಂತಹ ನೂತನ ಪ್ರಪಂಚ ಮೂಲದ ಖಾದ್ಯಗಳನ್ನು ಸಹ ಸೇರಿಸಲಾಗಿದೆ.[೧೮]
ಹದಿನೇಳನೆಯ ಶತಮಾನದ ಮೊದಲ ದಶಕದಲ್ಲಿ, ಗಿಯಾಂಗಿಯಾಕೊಮೊ ಕ್ಯಾಸ್ಟೆಲ್ವೆಟ್ರೊ Breve Racconto di Tutte le Radici di Tutte l'Herbe et di Tutti i Frutti (A Brief Account of All Vegetables, Herbs and Fruit ) ಎಂಬ ಗ್ರಂಥವನ್ನು ಬರೆದರು. ಗಿಲಿಯನ್ ರೈಲೆ ಇದನ್ನು ಇಂಗ್ಲಿಷ್ಗೆ ಅನುವಾದಿಸಿದರು. ಮೊಡೆನಾ ಮೂಲದ ಕ್ಯಾಸ್ಟೆಲ್ವೆಟ್ರೊ, ತಾವು ಪ್ರೊಟೆಸ್ಟಂಟ್ ಆಗಿದ್ದ ಕಾರಣಕ್ಕೆ ಇಂಗ್ಲೆಂಡ್ಗೆ ವಲಸೆ ಹೋದರು. ಈ ಗ್ರಂಥದಲ್ಲಿ ಇಟ್ಯಾಲಿಯನ್ ತರಕಾರಿಗಳು, ಹಣ್ಣುಗಳು ಹಾಗೂ ಅವುಗಳ ತಯಾರಿಕೆಗಳ ಕುರಿತು ಪಟ್ಟಿಯಿದೆ. ಅವರು ತರಕಾರಿಗಳನ್ನು ಆಹಾರದ ಕೇಂದ್ರ ಆಂಶವಾಗಿಸಿದರು, ಕೇವಲ ವ್ಯಂಜನ ರೂಪಗಳಲ್ಲಲ್ಲ. ತರಕಾರಿಗಳನ್ನು ಉಪ್ಪುನೀರಿನಲ್ಲಿ ಮೆಲುಗುದಿಸಿ, ಅವನ್ನು ಬೆಚ್ಚಗೆ ಅಥವಾ ತಣ್ಣಗೆ ಬಡಿಸಬಹುದಾಗಿದೆ. ಇದರೊಂದಿಗೆ ಆಲಿವ್ ತೈಲ, ಉಪ್ಪು, ತಾಜಾ ಮೆಣಸುಪುಡಿ, ನಿಂಬೆಹಣ್ಣು ರಸ ಅಥವಾ verjus ಅಥವಾ ಕಿತ್ತಳೆ ಹಣ್ಣಿನ ರಸವೂ ಸೇರಿಸಿರೆಂದು ಅವರು ಶಿಫಾರಸು ಮಾಡಿದರು. ತರಕಾರಿಗಳನ್ನು ಒದ್ದೆ ಕಾಗದದ ಹಾಳೆಯಲ್ಲಿ ಸುತ್ತಿ, ಆಲಿವ್ ತೈಲ ಚಿಮುಕಿಸಿ, ಇದ್ದಿಲಿನ ಮೇಲೆ ಹಾಯಿಸಿ ಸುಡುವುದನ್ನು ಸಹ ಶಿಫಾರಸು ಮಾಡಿದರು. ಕ್ಯಾಸ್ಟೆಲ್ವೆಟೊರರ ಪುಸ್ತಕವನ್ನು ಋತುಗಳಿಗೆ ಆನುಗುಣವಾಗಿ ಪ್ರತ್ಯೇಕಿಸಲಾಗಿದೆ. ಇದರಂತೆ, ವಸಂತ ಕಾಲದಲ್ಲಿ ಹಾಪ್ ಷೂಟ್ಸ್ ಹಾಗೂ ಚಳಿಗಾಲದಲ್ಲಿ ಗೆಡ್ಡೆ ಅಣಬೆಗಳು. ಗೆಡ್ಡೆ ಅಣಬೆಗಳನ್ನು ಹುಡುಕಲು ಹಂದಿಗಳನ್ನು ಬಳಸಿದ ಕುರಿತು ಉಲ್ಲೇಖಿಸಿದ್ದಾರೆ.[೧೮] ಇಸವಿ 1662ರಲ್ಲಿ, ಮಾಂಟುವಾದ ಡಚಿಗೆ ಆಪ್ತ ಬಾಣಸಿಗ ಬಾರ್ಟೊಲೊಮಿಯೊ ಸ್ಟೆಫಾನಿ ಲಾ'ಆರ್ಟ್ ಡಿ ಬೆನ್ ಕ್ಯುಸಿನೇರ್ ಗ್ರಂಥವನ್ನು ಪ್ರಕಟಿಸಿದರು. ವಿಟೊ ಆರ್ಡಿನರಿಯೊ (ಸಾಧಾರಣ ಆಹಾರ) ಕುರಿತು ವಿಶೇಷ ವಿಭಾಗ ಪ್ರಕಟಿಸುವಲ್ಲಿ ಮೊದಲಿಗರಾಗಿದ್ದರು. ಸ್ವೀಡೆನ್ನ ರಾಣಿ ಕ್ರಿಸ್ಟಿನಾಗಾಗಿ ಡ್ಯೂಕ್ ಚಾರ್ಲ್ಸ್ ಆಯೋಜಿಸಿದ ಭೋಜನಕೂಟದ ಬಗ್ಗೆ ವಿವರಣೆ ನೀಡಿತ್ತು. ಇದರಲ್ಲಿ ಪ್ರತಿಯೊಬ್ಬ ಅತಿಥಿಗೂ ಆಹಾರ ಮತ್ತು ಮೇಜಿನ ಸಂಯೋಜನೆಗಳು, ಅದರಲ್ಲಿ ಚಾಕು, ಕವಲುಚಮಚ (ಫೊರ್ಕ್), ಚಮಚ, ಗ್ಲ್ಯಾಸ್ ಲೋಟ, (ಹೆಚ್ಚಾಗಿ ಬಳಸಲಾಗುತ್ತಿದ್ದ ಬಟ್ಟಲುಗಳ ಬದಲಿಗೆ) ತಟ್ಟೆ, ಹಾಗೂ ಒಂದು ಕರವಸ್ತ್ರ - ಇವೆಲ್ಲವನ್ನೂ ಜೋಡಿಸಲಾಗಿತ್ತು. ಗಿಯೊವಾನಿ ಡೆಲಾ ಕ್ಯಾಸಾರ ಗೆಲಾಥಿಯೊ ದಂತಹ ಈ ಕಾಲದ ಇತರೆ ಗ್ರಂಥಗಳಲ್ಲಿ, ಸ್ಕಾಲ್ಸಿ ('ಮಾಣಿಗಳು') ಅತಿಥಿಗಳಿಗೆ ಯಾವ ರೀತಿಯಲ್ಲಿ ಉಪಚಾರ ಮಾಡಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗಿದೆ. ಊಟ ಮಾಡುವವರಿಗೆ ಬಡಿಸುವಾಗ ಮಾಣಿಗಳು ತಮ್ಮ ತಲೆ ಅಥವಾ ತಮ್ಮ ಅಂಗಗಳನ್ನು ಕೆರೆದುಕೊಳ್ಳುವುದಾಗಲಿ, ಅಥವಾ ಉಗುಳುವುದಾಗಲೀ, ಕೆಮ್ಮುವುದಾಗಲೀ, ಮೂಗು ಸೇದುವುದಾಗಲೀ, ಸೀನುವುದಾಗಲೀ ಮಾಡಬಾರದು. ಊಟ ಮಾಡುವವರು ತಮ್ಮ ಕೈಬೆರಳುಗಳಿಂದ ಆಹಾರವನ್ನು ಮುಟ್ಟದಿರಲು ಹಾಗೂ ತಟ್ಟೆಯ ಪಕ್ಕದಲ್ಲಿರುವ ಕರವಸ್ತ್ರದಲ್ಲಿ ತಮ್ಮ ಬೆವರು ಒರೆಸಿಕೊಳ್ಳಬಾರದು ಎಂದು ಸೂಚನೆ ನೀಡಲಾಗಿದೆ.[೧೯]
ಆಧುನಿಕ ಯುಗ
[ಬದಲಾಯಿಸಿ]ಹದಿನೆಂಟನೆಯ ಶತಮಾನದಲ್ಲಿ, ಇಟ್ಯಾಲಿಯನ್ ಅಡುಗೆ ಪುಸ್ತಕಗಳು ಫ್ರೆಂಚ್ ಪಾಕಪದ್ಧತಿಗಳ ಬದಲಿಗೆ, ಇಟ್ಯಾಲಿಯನ್ ಪಾಕಪದ್ಧತಿಗಳ ವಲಯವಾರು ವಿಂಗಡಣೆಯ ಮೇಲೆ ಒತ್ತು ನೀಡಲಾರಂಭಿಸಿದವು. ಅಂದು ಬರೆಯಲಾದ ಪುಸ್ತಕಗಳು ವೃತ್ತಿಪರ ಬಾಣಸಿಗರಿಗೆ ಉದ್ದೇಶಿತವಾಗಿರಲಿಲ್ಲ, ಆದರೆ ಮಧ್ಯಮವರ್ಗದ ಗೃಹಿಣಿಯರಿಗೆ ಉದ್ದೇಶಿತವಾಗಿತ್ತು.[೨೦] ಇಸವಿ 1794ರಲ್ಲಿ ಕಿರುಪುಸ್ತಕ ರೂಪದಲ್ಲಿ ಪ್ರಕಟಣೆಯಾದ ಲಾ ಕುವೊಕಾ ಕ್ರೆಮೊನಿಸ್ ("The Cook of Cremona") ಋತುಗಳಿಗೆ ಅನುಗುಣವಾಗಿ ಆಹಾರ ಪದಾರ್ಥಗಳ ಕ್ರಮಗಳು, ಜೊತೆಗೆ ಮಾಂಸ, ಮೀನು ಹಾಗೂ ತರಕಾರಿಗಳ ಕುರಿತು ಅಧ್ಯಾಯಗಳಿದ್ದವು. ಶತಮಾನವು ಮುಂದುವರೆದಾಗ, ಈ ಪುಸ್ತಕಗಳ ಪುಟಗಳು, ಜನಪ್ರಿಯತೆ ಹಾಗೂ ಆವರ್ತನಗಳು ಹೆಚ್ಚಾದವು.[೨೧]
'ಸಂಸ್ಕರಿಸಲಾದ ಆಹಾರವನ್ನು ಸೇವಿಸದಿರಿ, ಅವು ಸರಿಯಾಗಿ ಜೀರ್ಣವಾಗದು, ನಿಮ್ಮ ಶರೀರಗಳಿಗೆ ಹೆಚ್ಚು ಆಹಾರದ ಅಗತ್ಯವಿದೆ' ಎಂದು ಹದಿನೆಂಟನೆಯ ಶತಮಾನದಲ್ಲಿ ಪ್ರಕಟಿತವಾದ ವೈದ್ಯಕೀಯ ಪಠ್ಯಗಳು ಕೃಷಿಕವರ್ಗದವರನ್ನು ಎಚ್ಚರಿಸಿದವು. ಕೆಲವು ರೈತರು ಬಹಳ ಕಡಿಮೆ ಆಹಾರ ಸೇವಿಸುತ್ತಿದ್ದರು, ಏಕೆಂದರೆ ಕಡಿಮೆ ಆಹಾರ ಸೇವನೆಯತ್ತ ಅವರ ಒಲವಿತ್ತು. ಆದರೂ, ಅವರ ಕಡುಬಡತನದ ಕಾರಣ, ಹಲವು ರೈತರು ಕೊಳೆತ ಆಹಾರ ಹಾಗೂ ಬೂಜು ಹಿಡಿದಿದ್ದ ಬ್ರೆಡ್ ತಿನ್ನುತ್ತಿದ್ದರು.[೨೨] ಇಸವಿ 1779ರಲ್ಲಿ, ಮಾರ್ಚ್ ವಲಯದಲ್ಲಿದ್ದ ಮ್ಯಾಕೆರಟಾದ ಆಂಟೊನಿಯೊ ನೆಬಿಯಾ ಇಲ್ ಕುವೊಕೊ ಮ್ಯಾಕೆರಟೆಸ್ ('The Cook of Macerata') ಎಂಬ ಪಾಕ ಗ್ರಂಥವನ್ನು ಬರೆದರು. ನೆಬಿಯಾ ಸ್ಥಳೀಯ ತರಕಾರಿಗಳು, ಪಾಸ್ಟಾ, ಅಕ್ಕಿ ಹಾಗೂ ನಾಕಿಯ ಪ್ರಮುಖತೆಗೆ ಒತ್ತು ನೀಡಿದರು. ದಾಸ್ತಾನಿಗಾಗಿ, ಅವರು ಮಾಂಸದ ಬದಲಿಗೆ ತರಕಾರಿಗಳು ಹಾಗೂ ಕೋಳಿಗಳನ್ನು ಆಯ್ದುಕೊಂಡರು. ಇಸವಿ 1773ರಲ್ಲಿ, ನಿಯೊಪೊಲಿಟನ್ ವಿನ್ಸೆಂಜೊ ಕೊರೆಡೊ ಅವರ ಇಲ್ ಕುವೊಕೊ ಗೆಲಾಂಟ್ ('The Courteous Cook') ವಿಟೊ ಪಿಟಗೊರಿಕೊ (ಸಸ್ಯಾಹಾರಿ ಭಕ್ಷ್ಯ) ಕುರಿತು ಒತ್ತು ನೀಡಿದರು. 'ಪೈಟಾಗೊರಿಕ್ ಆಹಾರದಲ್ಲಿ ತಾಜಾ ಗಿಡಮೂಲಿಕೆಗಳು, ಬೇರುಗಳು, ಹೂಗಳು, ಹಣ್ಣುಗಳು, ಬೀಜಗಳು ಹಾಗೂ ನಮಗೆ ಪೌಷ್ಟಿಕಾಂಶ ನೀಡುವ, ಭೂಮಿಯಲ್ಲಿ ಬೆಳೆಯುವ ಗಿಡಗಳೆಲ್ಲವೂ ಸೇರಿವೆ. ಚಿರಪರಿಚಿತ ಗ್ರೀಕ್ ಗುರು ಪೈಥಾಗರಸ್ ಇಂತಹದ್ದೇ ಉತ್ಪನ್ನಗಳನ್ನು ಬಳಸುತ್ತಿದ್ದ ಕಾರಣ, ಇದನ್ನು 'ಪೈಟಾಗೊರಿಕ್' ಎನ್ನಲಾಗಿದೆ. ಈ ರೀತಿಯ ಆಹಾರವು ಮನುಷ್ಯನಿಗೆ ಹೆಚ್ಚು ನೈಸರ್ಗಿಕವೆನಿಸುತ್ತದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಮಾಂಸದ ಬಳಕೆಯು ಅನಾರೋಗ್ಯಕರ.' ಟೊಮೆಟೊವನ್ನು ಕೇಂದ್ರಬಿಂದುವಾಗಿಸಿಕೊಂಡು ಹದಿಮೂರು ಪಾಕವಿಧಾನಗಳನ್ನು ಪ್ರಕಟಿಸುವ ಇದು ಮೊದಲ ಗ್ರಂಥವಾಯಿತು. ಕೊರೆಡೊ ಅವರ ಪುಸ್ತಕದಲ್ಲಿ ಉಲ್ಲೇಖಿಸಲಾದ ಝಪಾ ಅಲಿ ಪೊಮಿಡೊರೊ ಇಂದಿನ ಟಸ್ಕನ್ ಪಪಾ ಅಲ್ ಪೊಮೊಡೊರೊ ತರಹವೇ ಇತ್ತು. ಕೊರೆಡೊ ಅವರ 1798 ಸಂಪುಟವು 'ಟ್ರೀಟೈಸ್ ಆನ್ ದಿ ಪೊಟೆಟೊ' ಎಂಬ ಪರಿಚಯ ಲೇಖನವನ್ನು ಒಳಗೊಂಡಿತ್ತು. ಆಗಷ್ಟೆ ಫ್ರೆಂಚ್ ಮೂಲದ ಅಂಟೊಯ್ನ್-ಆಗಸ್ಟಿನ್ ಪರ್ಮೆಂಟಿಯೆ ಅಲೂಗಡ್ಡೆಯನ್ನು ಪರಿಚಯಿಸುವಲ್ಲಿ ಯಶಸ್ವಿಯಾಗಿದ್ದರು.[೨೩]
ಹತ್ತೊಂಬತ್ತನೆಯ ಶತಮಾನದಲ್ಲಿ, ರಾಜ ವಿಕ್ಟರ್ ಇಮ್ಯಾನುಯಲ್ನ ಬಾಣಸಿಗ ಗಿಯೊವಾನಿ ವಿಯಲಾರ್ಡಿ ಎ ಟ್ರೈಟೈಸ್ ಆಫ್ ಮಾಡರ್ನ್ ಕುಕರಿ ಅಂಡ್ ಪ್ಯಾಟಿಸರಿ ಎಂಬ ಪಾಕ ಪುಸ್ತಕವನ್ನು ಬರೆದರು. ಇದು ಸಾಧಾರಣ ಮಟ್ಟದ ಮನೆಮಂದಿಗಳಿಗೆ ಹಿಡಿಸುವಂತಹ ಪಾಕ ಗ್ರಂಥ ಎನ್ನಲಾಗಿತ್ತು. ಅವರು ಬರೆದ ಪಾಕವಿಧಾನಗಳಲ್ಲಿ ಬಹಳಷ್ಟು ಟುರಿನ್ ಮೂಲದ ವಲಯವಾರು ಭಕ್ಷ್ಯಗಳಿಗಾಗಿ ಇವೆ. ಇವುಗಳಲ್ಲಿ ಹನ್ನೆರಡು ಪಾಕವಿಧಾನಗಳು ಜಿನೊಯೀಸ್ ಕ್ಯಾಪನ್ ಮ್ಯಾಗ್ರೊ ನಂತಹ ಆಲೂಗಡ್ಡೆಗಳಿಗಾಗಿ ಇವೆ. ಇಸವಿ 1829ರಲ್ಲಿ, ಗಿಯೊವಾನಿ ಫೆಲಿಸ್ ಲುರಾಷಿ ಬರೆದ ಇಲ್ ನುವೊವೊ ಕುವೊಕೊ ಮಿಲನೀಸ್ ಎಕನಾಮಿಕೊ ನಲ್ಲಿ ಆಂಚೊವಿ ಮೀನುಗಳೊಂದಿಗೆ ಸಣ್ಣ ಮೀನುಗಳ ಕಿಡ್ನಿ ಭಾಗ ಹಾಗೂ ನಿಂಬೆ ಮತ್ತು ಆಲೂಗಡ್ಡೆ ಅಥವಾ ಗೋದಿ ಕಣಕದ ನಾಚಿ ಅಲಾ ರೊಮಾನಾದಂತಹ (ಮಿಲನ ನಗರಕ್ಕೆ ಸೇರಿದ ತಿನಿಸು)ಮಿಲ್ಯಾನೀಸ್ ಭಕ್ಷ್ಯ ಸೇರಿವೆ. ಇಸವಿ 1871ರಲ್ಲಿ ಪ್ರಕಟಗೊಂಡ ಗಿಯಾನ್ ಬ್ಯಾಟಿಸ್ಟಾ ಮತ್ತು ಗಿಯೊವಾನಿ ರಾಟೊ ಅವರ ಲಾ ಕ್ಯುಕಿನಾ ಜಿನೊವೀಸ್ ಲೈಗುರಿಯಾ ಪಾಕಪದ್ಧತಿಯ ಬಗ್ಗೆ ಮಾಹಿತಿ ಹೊಂದಿತ್ತು. ಈ ಪುಸ್ತಕದಲ್ಲಿ ಪೆಸ್ಟೋಗಾಗಿ ಮೊದಲ ಪಾಕವಿಧಾನ ಹೊಂದಿತ್ತು. ಇಪೊಲಿಟೊ ಕ್ಯಾವಲ್ಕ್ಯಾಂಟಿ ಬರೆದ ಲಾ ಕ್ಯುಕಿನಾ ಟಿಯೊರಿಕೊ-ಪ್ರ್ಯಾಕ್ಟಿಕಾ ದಲ್ಲಿ ಟೊಮೆಟೊ ಸಹಿತ ಪಾಸ್ಟಾಗಾಗಿ ಮೊದಲ ಪಾಕವಿಧಾನವಿತ್ತು.[೨೪] ಪೆಲೆಗ್ರಿನೊ ಆರ್ಟುಸಿ ಮೊದಲು 1891ರಲ್ಲಿ ಪ್ರಕಟಿಸಿದ La scienza in cucina e l'arte di mangiare bene ("The Science of Cooking and the Art of Eating Well") ಆಧುನಿಕ ಶಾಸ್ತ್ರೀಯ ಇಟ್ಯಾಲಿಯನ್ ಪಾಕಪದ್ಧತಿಯ ಹರಿಕಾರ ಎನ್ನಲಾಗಿದೆ. ಈ ಪುಸ್ತಕವು ಇಂದಿಗೂ ಅಚ್ಚಿನಲ್ಲಿದೆ. ಇದರಲ್ಲಿರುವ ಪಾಕವಿಧಾನಗಳು ಮುಖ್ಯವಾಗಿ ರೊಮ್ಯಾಗ್ನಾ ಮತ್ತು ಅವರು ವಾಸಿಸಿದ ಟಸ್ಕನಿಯಿಂದ ಬಂದಿವೆ.
ಪದಾರ್ಥ ಅಂಶಗಳು
[ಬದಲಾಯಿಸಿ]ಇಟ್ಯಾಲಿಯನ್ ಪಾಕಪದ್ಧತಿಯಲ್ಲಿ ಹಣ್ಣುಗಳು, ತರಕಾರಿಗಳು, ದ್ರವರೂಪಿ ವ್ಯಂಜನಗಳು, ಮಾಂಸಗಳು ಇತ್ಯಾದಿ ಸೇರಿದಂತೆ ವಿಭಿನ್ನ ಪದಾರ್ಥ ಅಂಶಗಳಿವೆ. ಉತ್ತರ ಇಟಲಿಯಲ್ಲಿ ಕಾಡ್ ಅಥವಾ ಬಕ್ಯಾಲಾ ಸೇರಿದಂತೆ ಮೀನುಗಳು, ಅಕ್ಕಿ, ಮೆಕ್ಕೆ, ಕಾಳು, ಸಾಸೇಜ್ಗಳು, ಹಂದಿ ಮಾಂಸ ಮತ್ತು ವಿವಿಧ ರೀತಿಯ ಗಿಣ್ಣುಗಳು ಸರ್ವೇಸಾಮಾನ್ಯ ಪದಾರ್ಥ ಅಂಶಗಳು (ಉತ್ತರ ಇಟಲಿಯ ಹಲವು ಪಾಕಪದ್ಧತಿಗಳಲ್ಲಿ ಟೊಮೆಟೊ ಇಲ್ಲವೇ ಇಲ್ಲ). ಲೈಗುರಿಯನ್ ಪದಾರ್ಥ ಅಂಶಗಳು ಬಹಳಷ್ಟು ವಿಭಿನ್ನವಾಗಿವೆ. ಇವು ವಿವಿಧ ರೀತಿಯ ಮೀನು ಹಾಗೂ ಕಡಲ ಆಹಾರ ಭಕ್ಷ್ಯಗಳು, ತುಳಸಿ (ಪೆಸ್ಟೊ ಸಾಸ್ನಲ್ಲಿ ಲಭ್ಯ), ಬೀಜಗಳು ಹಾಗೂ ಆಲಿವ್ ತೈಲಗಳನ್ನು ಸರ್ವೇಸಾಮಾನ್ಯವಾಗಿ ಒಳಗೊಂಡಿವೆ. ಎಮಿಲಿಯಾ-ರೊಮ್ಯಾಗ್ನಾ ಸೇರಿದಂತೆ ಮಧ್ಯ ಇಟಲಿಯಲ್ಲಿ ಸಾಮಾನ್ಯ ಪದಾರ್ಥ ಅಂಶಗಳಲ್ಲಿ ಹಿಂತೊಡೆ ಮಾಂಸ (ಪರ್ಮಾ ಹ್ಯಾಮ್), ಸಾಸೇಜ್ (ಝಾಂಪೊನ್), ವಿವಿಧ ಸಲಾಮಿ ಗೆಡ್ಡೆ ಅಣಬೆಗಳು, ಲಸಾಂಜ, ಗ್ರ್ಯಾನಾ, ಪರ್ಮಿಜಿಯನೊ ರೆಜಿಯಾನೊ, ಟೊಮೆಟೊಗಳು (ಬೊಲೊಗ್ನೀಸ್ ಸಾಸ್ ಅಥವಾ ರಗು) ಹಾಗೂ ಟಾರ್ಟೆಲಿನಿ ಪ್ರಮುಖ ಅಂಶಗಳಾಗಿವೆ. ಅಂತಿಮವಾಗಿ, ದಕ್ಷಿಣ ಇಟಲಿಯಲ್ಲಿ, ಟಮೆಟೊಗಳು (ತಾಜಾ ಅಥವಾ ಟಮೆಟೊ ಸಾಸ್ನಲ್ಲಿ ಅಡುಗೆ ಮಾಡಿರುವುದು), ಮೆಣಸುಗಳು, ಆಲಿವ್ಗಳು ಹಾಗು ಆಲಿವ್ ತೈಲ, ಬೆಳ್ಳುಳ್ಳಿ, ಪಲ್ಲೆಹೂ, ಕಿತ್ತಳೆಹಣ್ಣುಗಳು, ರಿಕೊಟ್ಟಾ ಗಿಣ್ಣು, ಬದನೆಕಾಯಿಗಳು, ಕೂರ್ಷಟ್ಗಳು, ಕೆಲವು ವಿಶಿಷ್ಟ ಮೀನುಗಳು (ಆಂಚೊವಿಗಳು, ಸಾರ್ಡೀನ್ಗಳು ಮತ್ತು ಟ್ಯೂನಾ) ಹಾಗೂ ಮುಳ್ಳುಗಂಟಿಗಳು ಸ್ಥಳೀಯ ಪಾಕಪದ್ಧತಿಗಳ ಪ್ರಮುಖ ಅಂಶಗಳಾಗಿವೆ. ಇಟ್ಯಾಲಿಯನ್ ಪಾಕಪದ್ಧತಿಯು ವಿಭಿನ್ನ ಪಾಸ್ಟಾ ಬಳಕೆಗಾಗಿ ಚಿರಪರಿಚಿತವಾಗಿದೆ. ರವಿಯೊಲಿ ಹಾಗೂ ಟೊರ್ಟೆಲಿನಿಯಂತಹ ಪದಾರ್ಥಗಳುಳ್ಳ ವಿವಿಧ ಉದ್ದ, ಅಗಲ, ಆಕಾರಗಳು ಹಾಗೂ ವಿಭಿನ್ನತೆಗಳ ಶಾವಿಗೆಗಳು ಪಾಸ್ಟಾದಲ್ಲಿವೆ. ಪಾಸ್ಟಾ ಪ್ರಮುಖ ಅಂಶವಾಗಿರುವ ಇತರೆ ಭಕ್ಷ್ಯಗಳಿಗೂ ಸಹ ಪಾಸ್ಟಾ ಎನ್ನಲಾಗುತ್ತದೆ. ಇದನ್ನು ಸಾಸ್ನೊಂದಿಗೆ ಬಡಿಸಲಾಗುತ್ತದೆ. ಸ್ಥಳೀಯವಾಗಿ ಗುರುತಿಸಲಾದ ಹೆಸರುಗಳೊಂದಿಗೆ ಹಲವು ವಿವಿಧ ಆಕಾರಗಳ ನೂರಾರು ಪಾಸ್ಟಾಗಳಿವೆ. ಉದಾಹರಣೆಗೆ, ಸ್ಪಗೆಟಿ (ತೆಳುವಾದ ದಂಡಗಳು), ಮೆಕಾರೊನಿ (ಕೊಳವೆಯಾಕಾರ ಅಥವಾ ಸಿಲಿಂಡರ್ ರೂಪದಲ್ಲಿ), ಫ್ಯುಸಿಲಿ (ಸುರುಳಿ) ಹಾಗು ಲಸಾಂಜ (ಹಾಳೆಗಳು). ಇನ್ನೂ ಎರಡು ಶಾವಿಗೆಗಳಾದ ನಾಕಿ ಹಾಗೂ ಸ್ಪಾಟ್ಜ್ಲೆ ಕೆಲವೊಮ್ಮೆ ಪಾಸ್ಟಾ ಎನ್ನಲಾಗುತ್ತದೆ. ಇವರಡೂ ಸಹ ಇಟಲಿಯ ಕೆಲವೆಡೆ ಸಾಂಪ್ರದಾಯಿಕ ಆಹಾರವಾಗಿವೆ. ಪಾಸ್ಟಾವನ್ನು ಎರಡು ಮೂಲಭೂತ ಶೈಲಿಯಲ್ಲಿ ವಿಂಗಡಿಸಲಾಗಿದೆ: ಒಣ ಹಾಗೂ ತಾಜಾ. ಮೊಟ್ಟೆಗಳನ್ನು ಬಳಸದೆ ತಯಾರಿಸಲಾದ ಒಣ ಪಾಸ್ಟಾವನ್ನು ಸೂಕ್ತ ಪರಿಸರದಲ್ಲಿ ಸುಮಾರು ಎರಡು ವರ್ಷಗಳ ತನಕ ಶೇಖರಿಸಿಡಬಹುದು. ತಾಜಾ ಪಾಸ್ಟಾವನ್ನು ಎರಡು ದಿನಗಳ ವರೆಗೆ ಶೈತ್ಯಾಗಾರದಲ್ಲಿಡಬಹುದಾಗಿದೆ. ಪಾಸ್ಟಾವನ್ನು ಸಾಮಾನ್ಯವಾಗಿ ಕುದಿಸಿ ತಯಾರಿಸಲಾಗುತ್ತದೆ. ಇಟ್ಯಾಲಿಯನ್ ಕಾನೂನಿನಡಿ, ಒಣ ಪಾಸ್ಟಾ (ಪಾಸ್ಟಾ ಸೆಕಾ)ವನ್ನು ಕೇವಲ ಡ್ಯುರಮ್ ಗೋಧಿ ಹಿಟ್ಟು ಅಥವಾ ಡ್ಯುರಮ್ ಗೋಧಿ ರವೆ ಬಳಸಿ ಮಾಡಬಹುದು. ತಾಜಾ ಮೊಟ್ಟೆಯಿಂದ ತಯಾರಿಸಲಾದ ಪಾಸ್ಟಾವನ್ನು ಇಷ್ಟಪಡುವ ಉತ್ತರ ಇಟಲಿಗೆ ಹೋಲಿಸಿದರೆ, ಡ್ಯುರಮ್ ಪಾಸ್ಟಾ ಹೆಚ್ಚಾಗಿ ಸಾಮಾನ್ಯವಾಗಿ ದಕ್ಷಿಣ ಇಟಲಿಯಲ್ಲಿ ಬಳಸಲಾಗುತ್ತದೆ. ಡ್ಯುರಮ್ ಹಿಟ್ಟು ಹಾಗೂ ಡ್ಯುರಮ್ ರವೆ ಹಳದಿ ಬಣ್ಣ ಹೊಂದಿರುತ್ತದೆ. ಇಟ್ಯಾಲಿಯನ್ ಪಾಸ್ಟಾವನ್ನು ಸಾಂಪ್ರದಾಯಿಕವಾಗಿ al dente (ಇಟ್ಯಾಲಿಯನ್: ತೀರಾ ಮೆತ್ತಗಿರದೆ) ರೀತ್ಯಾ ತಯಾರಿಸಲಾಗುತ್ತದೆ. ಇಟಲಿಯ ಆಚೆ, ಒಣ ಪಾಸ್ಟಾವನ್ನು ಆಗಾಗ್ಗೆ ಇತರೆ ಹಿಟ್ಟುಗಳಿಂದ ತಯಾರಿಸಲಾಗುತ್ತದೆ (ಉದಾಹರಣೆಗೆ ಗೋಧಿ ಹಿಟ್ಟು) ಆದರೆ ಇದರಿಂದ ಇನ್ನೂ ಮೃದುವಾದ ಉತ್ಪನ್ನ ನೀಡುತ್ತದೆ. ಇದನ್ನು ಗಟ್ಟಿಯಾಗಿಸಲಾಗುವುದಿಲ್ಲ. ಬಳಸಲಾದ ಕಾಳಿನ ರೀತಿಯನ್ನು ಅವಲಂಬಿಸಿ, ವ್ಯತ್ಯಾಸವಾಗುವ ಹಿಟ್ಟಿನ ಅಂಟು ಹಾಗೂ ಪ್ರೊಟೀನ್ ಹೊಂದಿರುವ ಗೋಧಿ ಹಿಟ್ಟುಗಳಿವೆ. ಪಾಸ್ಟಾದ ಕೆಲವು ವಿಶಿಷ್ಟ ವಿಭಿನ್ನ ರೂಪಗಳು ಸಹ, ಕಾನೂನಿನಲ್ಲಿ ಸೂಚಿಸಿದಂತೆ ಇತರೆ ಕಾಳುಗಳು ಹಾಗೂ ಹಿಟ್ಟು ತಯಾರಿಸಲು ಗಿರಣಿಯ ರೀತಿಯನ್ನು ಅನುಸರಿಸುತ್ತವೆ. ಪಿಜೋಚ್ಚೆರಿಯಂತಹ ಕೆಲವು ಪಾಸ್ಟಾ ವಿಭಿನ್ನತೆಗಳನ್ನು ಕಾಡುಗೋಧಿ ಹಿಟ್ಟಿನಿಂದ ತಯಾರಿಸಲಾಗುತ್ತದೆ. ತಾಜಾ ಪಾಸ್ಟಾದಲ್ಲಿ ಮೊಟ್ಟೆಗಳೂ ಇರಬಹುದು. (ಪಾಸ್ಟಾ ಅಲ್'ಉಒವೊ 'ಮೊಟ್ಟೆ ಪಾಸ್ಟಾ'). ಆರೋಗ್ಯ ಅನುಕೂಲಗಳನ್ನು ನೀಡುವ ಕಾರಣ, ಸಮಗ್ರ ಗೋಧಿ (Whole wheat) ಪಾಸ್ಟಾದ ಜನಪ್ರಿಯತೆ ಹೆಚ್ಚಾಗುತ್ತಿದೆ. ಬಹಳಷ್ಟು ಸಮಗ್ರ ಗೋಧಿ ಪಾಸ್ಟಾಗಳಲ್ಲಿ ಸಮಗ್ರ ಕಾಳು ಹಾಗೂ ಸಾಧಾರಣ ಗೋಧಿ ಕಾಳಿನ ಪದಾರ್ಥ ಅಂಶಗಳಿವೆ.
ಪ್ರಾದೇಶಿಕ ಪಾಕಪದ್ಧತಿಗಳು
[ಬದಲಾಯಿಸಿ]ಪ್ರಾಥಮಿಕವಾಗಿ ವಲಯವಾರು ಮಟ್ಟದಲ್ಲಿ ಹಾಗೂ ಪ್ರಾಂತೀಯ ಮಟ್ಟದಲ್ಲಿಯೂ ಸಹ ಪ್ರತಿ ಪ್ರದೇಶವೂ ತನ್ನದೇ ಆದ ವಿಶೇಷತೆಗಳನ್ನು ಹೊಂದಿದೆ. ಗಡಿಯಲ್ಲಿರುವ ದೇಶಗಳಾದ ಫ್ರಾನ್ಸ್ ಅಥವಾ ಆಸ್ಟ್ರಿಯಾ ಈ ವಿಭಿನ್ನತೆಗಳಿಗೆ ಕಾರಣವಾಗಿರಬಹುದು. ಅಲ್ಲದೆ, ಅ ವಲಯವು ಸಾಗರ ಅಥವಾ ಪರ್ವತಗಳಿಗೆ ಸಮೀಪವಿರುವುದು ಹಾಗೂ ಆರ್ಥಿಕತೆಯೂ ಸಹ ಕಾರಣವಾಗಬಹುದು. ಇಟ್ಯಾಲಿಯನ್ ಪಾಕಪದ್ಧತಿಯು ಋತುವಾರು ಸಹ, ತಾಜಾ ಉತ್ಪನ್ನಗಳನ್ನು ಬಳಸಲು ಆದ್ಯತೆ ನೀಡಲಾಗಿದೆ.
ಫ್ರಿಯುಲಿ-ವೆನೆಝಿಯಾ ಗಿಯುಲಿಯಾ
[ಬದಲಾಯಿಸಿ]ಫ್ರಿಯುಲಿ-ವೆನೆಝಿಯಾ ಗಿಯುಲಿಯಾ ಸಂಪ್ರದಾಯವು ಸ್ಲೊವೆನಿಯಾ ಹಾಗೂ ಕ್ರೊಯೆಷಿಯಾದ ಸಂಪ್ರದಾಯಗಳಂತಿವೆ. ಸ್ಯಾಮ್ ಡೇನಿಯೆಲ್ ಡೆಲ್ ಫ್ರಿಯುಲಿ ತೊಡೆ ಮಾಂಸಗಳು ಇಲ್ಲಿಂದ ಬಂದವು. ಉತ್ತರ ವಲಯದ ಕಾರ್ನಿಯಾದ ಹಂದಿಯ ಬೆನ್ನಿನ ಮಾಂಸ ಹಾಗೂ ಮಾಂಟ್ಯಾಸಿಯೊ ಗಿಣ್ಣು ಬಹಳಷ್ಟು ಖ್ಯಾತ. ಕಾಲಿಯೊ, ಗ್ರೇವ್ ಡೆಲ್ ಫ್ರಿಯುಲಿ, ಕಾಲಿ ಒರಿಯೆಂಟಲಿ - ಇವೆಲ್ಲವೂ ಪ್ರಾದೇಶಿಕ ವೈನ್ಗಳು. ಈ ಭಕ್ಷ್ಯಗಳು ಆಸ್ಟ್ರಿಯನ್, ಹಂಗೇರಿಯನ್, ಸ್ಲೊವಿನ್ ಹಾಗೂ ಕ್ರೊಯೆಷಿಯನ್ ಭಕ್ಷ್ಯಗಳಿಂದ ಪ್ರಭಾವಿತವಾಗಿವೆ. ಬಿಯರ್ ಮಂದಿರಗಳಲ್ಲಿ ವಿಯೆನ್ನೀಸ್ ಸಾಸೇಜ್ಗಳು, ಗೂಲಾಷ್ ಮಾಂಸ ಹಾಗೂ ಬೊಹೆಮಿಯನ್ ಮೊಲ ಹಂದಿ ಮಾಂಸವೂ ಸಹ ಖಾರವಾಗಿರಬಹುದು,. ಇದನ್ನು ಫೊಗೊಲರ್ ಎಂಬ ತೆರೆದ ಒಲೆಯ ಮೇಲೆ ತಯಾರಿಸಲಾಗುತ್ತದೆ. ನುಣ್ಣಗೆ ಪುಡಿ ಮಾಡಲಾದ ಮೆಕ್ಕೆ-ಜೋಳದಿಂದ ತಯಾರಿಸಲಾದ ಪೊಲೆಂಟಾ ಹಿಂದೆ ಹಾಗೂ ಇಂದು ಸಹ ಉತ್ತರ ಇಟಲಿಯ ಬಹಳಷ್ಟು ಕಡೆ ಸಾಮಾನ್ಯ ಆಹಾರಪದ್ಧತಿಯಾಗಿದೆ. ಇದರಿಂದಾಗಿ ದಕ್ಷಿಣ ಇಟ್ಯಾಲಿಯನ್ನರು ಉತ್ತರದವರಿಗೆ ಪೊಲೆಂಟೊನ್ ಎಂದು ಅಡ್ಡಹೆಸರಿಟ್ಟು ಲೇವಡಿ ಮಾಡುತ್ತಿದ್ದರು. ಚೆನ್ನಾಗಿ ಕಲಕಿದ ಭಕ್ಷ್ಯಗಳು ಹಾಗೂ ಬೆಂಕಿಗೆ ತಗುಲಿಸದೇ ಸುಟ್ಟ ಭಕ್ಷ್ಯಗಳಲ್ಲಿ ಇದನ್ನು ಬಳಸಬಹುದು. ಜೊತೆಗೆ ಸಾಸೇಜ್, ಗಿಣ್ಣು, ಮೀನು ಅಥವಾ ಮಾಂಸದೊಂದಿಗೆ ಬಡಿಸಬಹುದಾಗಿದೆ. ಸ್ಟ್ರುಡೆಲ್ಗಳಂತಹ ಭೋಜನಾನಂತರದ ಭಕ್ಷ್ಯಗಳು ಹಿಟ್ಟನ್ನು ಆಧರಿಸಿವೆ.[೨೫]
ವೆನೆಟೊ
[ಬದಲಾಯಿಸಿ]ವೆನಿಸ್ ಹಾಗೂ ವೆನೆಡೊನ ಸುತ್ತಮುತ್ತಲ ಭಾಗಗಳು, ಸ್ಥಳಗಳಿಗೆ ಅನುಗುಣವಾಗಿ ಪದಾರ್ಥ ಅಂಶಗಳು ವ್ಯತ್ಯಾಸವಾಗುವ ರಿಸೊಟೊ; ಅರ್ಥಾತ್ ಕಡಲ ತೀರ ಪ್ರದೇಶಗಳಲ್ಲಿ ಮೀನು ಮತ್ತು ಕಡಲ ಆಹಾರಗಳನ್ನು ಸೇರಿಸಲಾಗುತ್ತದೆ. ಅಡ್ರಿಯಾಟಿಕ್ ತೀರದಿಂದ ಒಳನಾಡಿನತ್ತ ಸಾಗುತ್ತ, ಈ ಖಾದ್ಯದಲ್ಲಿ ಕುಂಬಳಕಾಯಿ, ಆಸಡಿ, ರೆಡಿಚಿಯೊ ಹಾಗೂ ಕಪ್ಪೆ ಕಾಲುಗಳು ಸೇರಿಸಲಾಗಿವೆ. ವೆನೆಟೊನ ಇನ್ನು ಕೆಲವು ಭಾಗಗಳಲ್ಲಿ ಪೊಲೆಂಟಾ ಎಂಬುದು ಪ್ರಾಥಮಿಕ ಪಿಷ್ಟವಾಗಿದೆ. ಪಾಸ್ಟಾ ಎ ಫ್ಯಾಗಿಯೊಲಿ (ಬೀಜಗಳು ಮತ್ತು ಪಾಸ್ಟಾ) ಹಾಗೂ ರೈಸಿ ಎ ಬಿಸಿ (ಅಕ್ಕಿ ಮತ್ತು ಕಾಳುಗಳು) ಜೊತೆಗೆ, ಬೀಜಗಳು, ಕಾಳುಗಳು ಹಾಗೂ ಇತರೆ ಕೋಡುಕಾಯಿಗಳು ಈ ಪ್ರದೇಶಗಳಲ್ಲಿ ಲಭ್ಯ. ವೆನೆಟೊದಲ್ಲಿ ಅಪರೂಪದ ಮೆಣಸುಗಳು ಹಾಗೂ ಸಾಸ್ಗಳುಳ್ಳ ಭಾರೀ ಭಕ್ಷ್ಯಗಳುಂಟು. ಒಣಮೀನು ಅಥವಾ ಸರಳ ಮ್ಯಾರಿನೇಡ್ ದ್ರವದಲ್ಲಿ ಅದ್ದಿಟ್ಟ ಆಂಚೊವಿಗಳಂತಹ ಭಕ್ಷ್ಯಗಳನ್ನು ಇಲ್ಲಿಯೂ ಸಹ ಕಾಣಬಹುದಾಗಿದೆ. ಕಡಲ ತೀರದ ಪ್ರದೇಶಗಳಿಂದ ಒಳನಾಡಿನತ್ತ ಸಾಗುತ್ತ, ಮೀನುಗಳನ್ನು ಕಡಿಮೆ ಪ್ರಮಾಣದಲ್ಲಿ ಹಾಗೂ ಮಾಂಸವನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಲಾಗುತ್ತದೆ. ಸೊಪ್ರೆಸಾಟಾದಂತಹ ಸಾಸೇಜ್ಗಳು ಹಾಗೂ ಬೆಳ್ಳುಳ್ಳಿ ಸಲಾಮಿ ಸರ್ವೇ ಸಾಮಾನ್ಯವಾಗಿವೆ. ಟ್ರೆವಿಸೊದಿಂದ ರೆಡಿಚಿಯೊ ಹಾಗು ಬಸಾನೊ ಡೆಲ್ ಗ್ರಪ್ಪಾದಿಂದ ಅಸ್ಪ್ಯಾರೆಗಸ್ನಂತಹ ಅತ್ಯುತ್ತಮ ಗುಣಮಟ್ಟದ ತರಕಾರಿಗಳು ಉತ್ಕಷ್ಠವಾಗಿವೆ. ಫೆಗಾಟೊ ಅಲ್ಲ, ವೆನೆಝಿಯಾನಾ ಎಂಬುದು ವೆನೆಟೊದ ಅತಿ ಖ್ಯಾತಿ ಭಕ್ಷ್ಯವಾಗಿದೆ. ಇದು ಸಣ್ಣದಾಗಿ ಹಚ್ಚಿದ ಪಿತ್ತಜನಕಾಂಗ ಈರುಳ್ಳಿಗಳೊಂದಿಗೆ ಸಾಟಿ ಮಾಡಲಾಗಿದೆ. ಸ್ಕ್ವಿಡ್ ಹಾಗೂ ಕಟ್ಲ್ಫಿಷ್ ಸಾಮಾನ್ಯ ಪದಾರ್ಥ ಅಂಶಗಳಾಗಿವೆ. ಜೊತೆಗೆ, ನೆರೊ ಡಿ ಸೆಪ್ಪಿಯಾ ಎಂಬ ಸ್ಕ್ವಿಡ್ ಶಾಯಿ ಸಹ ಸಾಮಾನ್ಯ ಪದಾರ್ಥ ಅಂಶವಾಗಿದೆ.[೨೬][೨೭]
ಟ್ರೆಂಟಿನೊ-ಆಲ್ಟೊ ಆಡಿಗೆ/ಸುಡ್ತಿರೊಳ್
[ಬದಲಾಯಿಸಿ]ಹದಿನಾರನೆಯ ಶತಮಾನದ ಮಧ್ಯದಲ್ಲಿ ಕೌನ್ಸಿಲ್ ಆಫ್ ಟ್ರೆಂಟ್ಗೆ ಮುಂಚೆ, ಟ್ರೆಂಟಿನೊ-ಆಲ್ಟೊ ಆಡಿಗೆ/ಸುಡ್ತಿರೊಳ್ ತನ್ನ ಪಾಕಪದ್ಧತಿಯ ಸರಳತೆಗಾಗಿ ಖ್ಯಾತಿಯಾಗಿತ್ತು. ಕ್ಯಾತೊಲಿಕ್ ಇಗರ್ಜಿಯ ಪ್ರೆಲಟ್ಗಳು ಬಂದಾಗ, ಅವರು ತಮ್ಮೊಡನೆ ಲಲಿತ ಪಾಕ ಕಲೆಯನ್ನು ತಂದರು. ಸಿಹಿನೀರಿನ ಮೀನು ಇದರಲ್ಲಿ ಒಂದು ವಿಶೇಷತೆಯಾಗಿದೆ. ನಂತರ, ವೆನಿಸ್ ಹಾಗೂ ಹ್ಯಾಬ್ಸ್ಬರ್ಗ್ ಸಾಮ್ರಾಜ್ಯಗಳಿಂದ ಪ್ರಭಾವಗಳು ಬಂದವು. ಆಲ್ಟೊ ಅಡಿಗೆ ಆಲ್ಪೈನ್ನಲ್ಲಿ, ಸ್ಲಾವಿಕ್, ಆಸ್ಟ್ರಿಯನ್ ಮತ್ತು ಹಂಗೇರಿಯನ್ ಪ್ರಭಾವಗಳು ಮುಂದವರೆಯುತ್ತವೆ. ಗೂಲಾಷ್ ಎಂಬುದು(ಮಾಂಸ ಮತ್ತು ತರಕಾರಿಯೊಂದಿಗೆ ಬೇಯಿಸಿದ) ಎಂದಿನಂತಿಹ ಭಕ್ಷ್ಯವಾಗಿದೆ. ಆಲೂಗಡ್ಡೆಗಳು, ಮುದ್ದೆಗಳು ಹಾಗೂ ಮನೆಯಲ್ಲಿ ತಯಾರಿಸಲಾದ, ಕ್ರೌಟಿ ಎನ್ನಲಾದ ಸಾವರ್ಕ್ರಾಟ್ ಸೇರಿವೆ. ಪಾಸ್ಟಾ, ಟೊಮೆಟೊಗಳು ಹಾಗೂ ಆಲಿವ್ ತೈಲದೊಂದಿಗೆ ಹಂದಿ ಕೊಬ್ಬು ಸಹ ಜನಪ್ರಿಯವಾಗಿದೆ.[೨೮]
ಲೊಂಬಾರ್ಡಿ
[ಬದಲಾಯಿಸಿ]ಲೊಂಬಾರ್ಡಿಯಲ್ಲಿ ಅಕ್ಕಿ ಜನಪ್ರಿಯವಾಗಿದೆ. ಇದು ಸೂಪ್ಗಳು ಹಾಗು ರಿಸೊಟೊದಲ್ಲಿ ಬಳಸಲಾಗುತ್ತದೆ. ವಿವಿಧ ಮಿಲ್ಯಾನೀಸ್ ಮುಖ್ಯ ಆಹಾರಾಂಶಗಳಾದ ossobuco alla milanese ಹಾಗೂ cotoletta alla milanese ಒಂದಿಗೆ ಬಡಿಸಲಾದ,ಕೇಸರಿ ಮಿಶ್ರಿತ risotto alla milanese ಅತಿ ಪರಿಚಿತ ಖಾದ್ಯವಾಗಿದೆ. . ಪ್ರಾದೇಶಿಕ ಗಿಣ್ಣುಗಳಲ್ಲಿ robiola , crescenza , taleggio , gorgonzola ಹಾಗೂ grana padano (ಮಧ್ಯ ಹಾಗೂ ದಕ್ಷಿಣ ಲೊಂಬಾರ್ಡಿಯ ಬಯಲು ಸೀಮೆ ಪ್ರದೇಶಗಳಲ್ಲಿ ತೀವ್ರವಾದ ದನ ಸಂಗೋಪನೆ ನಡೆಯುತ್ತದೆ). ಬೆಣ್ಣೆ ಹಾಗೂ ಕೆನೆಯನ್ನೂ ಬಳಸಲಾಗುತ್ತದೆ. ಒಂದೇ ತಪ್ಪಲೆಯ ಭಕ್ಷ್ಯಗಳನ್ನು ತಯಾರಿಸಲು ಕಡಿಮೆ ಸಮಯದ ಅಗತ್ಯವಿದ್ದು, ಅವು ಜನಪ್ರಿಯವಾಗಿವೆ. ಈ ಪ್ರದೇಶದಲ್ಲಿ ಪೊಲೆಂಟಾ ಸರ್ವೇಸಾಮಾನ್ಯವಾಗಿದೆ. ಮಾಂಟುವಾ ಹಬ್ಬಗಳಲ್ಲಿ tortelli di zucca (ಮಧ್ಯದಲ್ಲಿ ಕುಂಬಳಕಾಯಿ ಭರ್ತಿ ಮಾಡಲಾದ ravioli) ಇದರೊಂದಿಗೆ ಕರಗಿಸಿದ ಬೆಣ್ಣೆ, ನಂತರ ಕೋಳಿ ಮಾಂಸ ತುಂಬಿಸಿದ ಟರ್ಕಿ ಕೋಳಿ ಅಥವಾ ಇತರೆ ಬೇಯಿಸಲಾದ ಮಾಂಸವನ್ನು ಬಳಸಲಾಗಿತ್ತು.[೨೯]
ವ್ಯಾಲ್ ಡಿ'ಆವೊಸ್ಟಾ
[ಬದಲಾಯಿಸಿ]ಬ್ರೆಡ್ ದಪ್ಪಗಾದ ಸೂಪ್ಗಳನ್ನು ತೆಗೆದುಕೊಳ್ಳುವುದು ಪದ್ಧತಿ, ಜೊತೆಗೆ, ಫಾಂಡುಟಾ ಎಂಬ ಗಿಣ್ಣು ಫಾಂಡ್ಯೂಗಳೂ ಸೇರಿವೆ. ಪೊಲೆಂಟಾ ಎಂಬುದು ರೈ ಬ್ರೆಡ್, ಹೊಗೆಯಾಡಿಸಿದ ಹಂದಿ ಮಾಂಸ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಬೇಟೆಯಾದ ಪ್ರಾಣಿಗಳ ಮಾಂಸವನ್ನು ಒಳಗೊಂಡಿರುತ್ತದೆ. ಬೇಯಿಸಿದ, ಸುಟ್ಟ ಅಥವಾ ಬೇಯಿಸಿದ, ಅಥವಾ ಎರಡೂ ಬದಿಯಲ್ಲಿ ಕೆಂಡ ಹಾಕಿ ಬೇಯಿಸಿದ ಮಾಂಸ ಭಕ್ಷ್ಯಗಳಿಗೆ ಬೆಣ್ಣೆ ಮತ್ತು ಕ್ರೀಮ್ ಬಹಳ ಮುಖ್ಯವಾಗಿವೆ.[೩೦]
ಪಿಯೆಡ್ಮಾಂಟ್
[ಬದಲಾಯಿಸಿ]ಪಿಯೆಡ್ಮಾಂಟ್ ಬೀಜಗಳು, ಶಿಲೀಂಧ್ರಗಳು ಹಾಗೂ ಕಾರ್ಡೂನ್ಗಳ ಸಂಗ್ರಹಣ, ಜೊತೆಗೆ ಬೇಟೆಯಾಡುವಿಕೆ ಮತ್ತು ಮೀನುಗಾರಿಕೆ ನಡೆಯುವ ಪ್ರದೇಶವಾಗಿದೆ. ಗೆಡ್ಡೆ ಅಣಬೆಗಳು, ಬೆಳ್ಳುಳ್ಳಿ, ಋತುವಾರು ತರಕಾರಿಗಳು, ಗಿಣ್ಣು ಹಾಗೂ ಅಕ್ಕಿಯನ್ನು ಬಳಸಲಾಗುತ್ತದೆ. ಬರೊಲೊ ಹಾಗೂ ಬಾರ್ಬರೇಸ್ಕೊ ಅಂತಹ ನೆಬಿಯೊಲೊ ದ್ರಾಕ್ಷಿಗಳನ್ನು ಉತ್ಪಾದಿಸಲಾಗುತ್ತದೆ. ಅದೇ ರೀತಿ ಬಾರ್ಬೆರಾ ಗ್ರೇಪ್, ಉತ್ಕೃಷ್ಠ ಹೊಳಪಿನ ವೈನ್ಗಳು ಹಾಗೂ ಸಿಹಿಯಾಗಿರುವ, ಅಲ್ಪಮಟ್ಟಿಗೆ ಹೊಳೆಯುವ ಮೊಸ್ಕಾಟೊ ಡಿ'ಅಸ್ತಿ ಸಹ ಉತ್ಪಾದಿಸಲಾಗುತ್ತದೆ. ಕ್ಯಾಸ್ಟೆಲ್ಮಾಗ್ನೊ ಈ ಪ್ರದೇಶದ ಉತ್ಕೃಷ್ಟ ಗಿಣ್ಣು. ಫಿಲೆಟೊ ಬಕಿಯಟೊ ಪ್ರೊಸ್ಕಿಯುಟ್ಟೊದ ಒಂದು ಶೈಲಿ. ಹಂದಿಯ ಕಟಿ ಮಾಂಸವನ್ನು ಬಿಳಿ ವೈನ್ನಲ್ಲಿ ಅದ್ದಿ, ನಂತರ ಸಲಾಮಿ ಹಿಟ್ಟಿನಲ್ಲಿ ಲೇಪಿಸಿ ಆನಂತರ ಆರು ತಿಂಗಳ ಕಾಲ ಶೇಖರಿಸಲಾಗುತ್ತದೆ.[೩೧]
ಲೈಗುರಿಯಾ
[ಬದಲಾಯಿಸಿ]ಆಲ್ಪ್ಸ್ ಪರ್ವತ ಶಿಖರಗಳು, ಅಪೆನಿನ್ಸ್ ಹಾಗೂ ಸಮುದ್ರಗಳ ನಡುವೆ ಒತ್ತಿಕೊಂಡಿರುವ ಲೈಗುರಿಯಾ, ಇಟಲಿಯ ವಿಭಿನ್ನತೆಯುಳ್ಳ ಪಾಕಪದ್ಧತಿಗಳನ್ನು ಹೊಂದಿದೆ. ಗಿಡಮೂಲಿಕೆಗಳು ಹಾಗೂ ತರಕಾರಿಗಳು, ಜೊತೆಗೆ ಕಡಲ ಆಹಾರವೂ ಸಹ ಪಾಕಪದ್ಧತಿಯಲ್ಲಿ ಸ್ಥಳ ಗಿಟ್ಟಿಸಿಕೊಂಡಿವೆ. ಗಿಣ್ಣು, ಹಾಲಿನ ಕೆನೆಗಳು ಹಾಗೂ ಮೊಟ್ಟೆಗಳೊಂದಿಗೆ ಸೊಪ್ಪಿನ ಪದಾರ್ಥಗಳು ಹಾಗೂ ಪಲ್ಲೆಹೂಗಳನ್ನು ಮಿಶ್ರಿಸಲಾದ ರುಚಿಕರವಾದ ಕಡಬುಗಳು ಜನಪ್ರಿಯವಾಗಿವೆ. ಈರುಳ್ಳಿಗಳು ಹಾಗೂ ಆಲಿವ್ ತೈಲಗಳನ್ನು ಬಳಸಲಾಗಿದೆ. ಗೋಧಿಗಾಗಿ ಸೂಕ್ತ ಜಮೀನು ದೊರೆಯದ ಕಾರಣ, ಲೈಗುರಿಯನ್ನರು ಫ್ಯಾರಿನೇಟಾ ಹಾಗೂ ಪೊಲೆಂಟಾದಂತಿರುವ ಪ್ಯಾನಿಸಾದಲ್ಲಿ ಕಡಲೆ-ಬೀಜಗಳನ್ನು ಬಳಸುತ್ತಾರೆ. ಮೊದಲಿನದನ್ನು ಸಾದಾ ರೂಪದಲ್ಲಿ ಅಥವಾ ಈರುಳ್ಳಿ, ಪಲ್ಲೆಹೂ, ಸಾಸೇಜ್, ಗಿಣ್ಣು ಅಥವಾ ಸಣ್ಣ ಆಂಚೊವಿಗಳನ್ನು ಮೇಲೆ ಕೂಡಿಸಿ ಬಡಿಸಲಾಗುತ್ತದೆ. ಗುಡ್ಡಗಾಡು ಜಿಲ್ಲೆಗಳಲ್ಲಿ ಕಾರ್ಬೊಹೈಡ್ರೇಟ್ಗಾಗಿ ಚೆಸ್ಟ್ನಟ್ ಮರಗಳನ್ನು ಬೆಳೆಸಿ ಅದರ ಹಣ್ಣು ಪಡೆಯುವರು. ಲೈಗುರಿಯನ್ ಪಾಸ್ಟಾಗಳೂ ಕೆಳಗಿನವುಗಳನ್ನು ಹೊಂದಿವೆ: ಪೊಲ್ಸೆವೆರಾ ಕಣಿವೆಯಿಂದ ಕಾರ್ಜೆಟಿ , ತರಕಾರಿ ತುಂಬಿಸಿದ ತ್ರಿಕೋನಾಕಾರದ ರವಿಯೊಲಿಯಾದ ಪ್ಯಾನ್ಸಟಿ , ಮೊಟ್ಟೆಗಳನ್ನು ಸಣ್ಣ ಪ್ರಮಾಣದಲ್ಲಿ ಬಳಸಿ ಪಲ್ಲೆಹೂ ಸಾಸ್ ಅಥವಾ ಪೆಸ್ಟೊದೊಂದಿಗೆ ಬಡಿಸಲಾದ ಪಿಕ್ಕಾಗ್ಗೆ , ಸಮಗ್ರ ಗೋಧಿಹಿಟ್ಟಿನಲ್ಲಿ ತಯಾರಿಸಿ, ಉದ್ದನೆಯ ಪಟ್ಟೆಯಾಕಾರದಲ್ಲಿ ಕತ್ತರಿಸಿ, ಪೆಸ್ಟೊ, ಬೇಯಿಸಿದ ಬೀಜಗಳೂ ಹಾಗೂ ಆಲೂಗಡ್ಡೆಗಳೊಂದಿಗೆ ಬಡಿಸಲಾದ ಟ್ರೆನೆಡ್ , ಸಮಗ್ರ ಕಾಳು ಹಿಟ್ಟು, ಕುದಿಸಲಾದ ಆಲೂಗಡ್ಡೆಯೊಂದಿಗೆ ಮಾಡಿ, ಸುರುಳಿಯಾಕಾರದಲ್ಲಿ ಮಾಡಿ, ಪೆಸ್ಟೊದಲ್ಲಿ ಹಾಕಲಾದ ಟ್ರೊಫಿ ಎಂಬ ಲೈಗುರಿಯನ್ ನಾಕಿ ಸಹ ಸೇರಿವೆ.[೩೨] ಹತ್ತೊಂಬತ್ತನೆಯ ಶತಮಾನದ ಅಪರಾರ್ಧ ಹಾಗೂ ಇಪ್ಪತ್ತನೆಯ ಶತಮಾನದ ಪೂರ್ವಾರ್ಧದಲ್ಲಿ ಹಲವು ಲೈಗುರಿಯನ್ನರು ಅರ್ಜೆಂಟೀನಾ ದೇಶಕ್ಕೆ ವಲಸೆ ಹೋದರು. ಇದರಿಂದಾಗಿ ಆ ದೇಶದ ಪಾಕಪದ್ದತಿಯನ್ನು ಪರಿವರ್ತಿಸುವಲ್ಲಿ ಸಫಲರಾದರು. ಅಲ್ಲಿಯ ತನಕ, ಅರ್ಜೆಂಟೀನಾದಲ್ಲಿ ಮಾಂಸ ಮತ್ತು ಹೈನು ಉತ್ಪನ್ನಗಳಿಗೆ ಖ್ಯಾತವಾಗಿತ್ತು. ಲೈಗುರಿಯನ್ ಹಿನ್ನಾಡು ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ.
Emilia-Romagna
[ಬದಲಾಯಿಸಿ]ಎಮಿಲಿಯಾ-ರೊಮೆಗ್ನಾ ಮೆದು ಗೋದ ಹಿಟ್ಟಿನಿಂದ ತಯಾರಿಸಲಾದ ಮೊಟ್ಟೆ ಪಾಸ್ಟಾಗೆ ಖ್ಯಾತವಾಗಿದೆ. ಬೊಲೊಗ್ನಾಲ್ಲಿ ಟೊರ್ಟೆಲಿನಿ, ಲಸಾಂಜ ವರ್ಡಿ, ಗ್ರ್ಯಾಮಿಗ್ನಾ ಹಾಗೂ ಟ್ಯಾಗ್ಲಿಯಟೆಲ್ ಖ್ಯಾತ ಭಕ್ಷ್ಯಗಳು. ಇವು ಈ ಪ್ರದೇಶದ ಇತರೆ ಪಟ್ಟಣಗಳಲ್ಲಿಯೂ ಲಭ್ಯ. ರೊಮ್ಯಾಗ್ನಾದಲ್ಲಿ ಕ್ಯಾಪೆಲೆಟಿ, ಗಾರ್ಗಾನೆಲ್ಲಿ, ಸ್ಟ್ರೊಜಾಪ್ರೆಟಿ, ಸ್ಪೊಗ್ಲಿಯಾ ಲಾರ್ಡಾ ಹಾಗೂ ಟೊರ್ಟೆಲ್ಲಿ ಅಲ್ಲ, ಲಾಸ್ಟ್ರಾ ಇವೆ. ಲೊಂಬಾರ್ಡಿ ಮತ್ತು ಲೈಗುರಿಯಾ ಪಾಕಪದ್ಧತಿಗಳಿಂದ ಪ್ರಭಾವಿತವಾಗಿರುವ ಪಿಯಾಸೆಂಜಾ ಹೊರತುಪಡಿಸಿ, ಎಮಿಲಿಯಾದಲ್ಲಿ ಅಕ್ಕಿಯ ಭಕ್ಷಣೆ ಕಡಿಮೆ. ಎಮಿಲಿಯಾ ಹಾಗೂ ರೋಮ್ಯಾಗ್ನಾಗಳಲ್ಲಿ ಪೊಲೆಂಟಾ ಸಾಮಾನ್ಯವಾಗಿದೆ. ಸಂಪ್ರದಾಯಿಕ್ ವಿಧಾನಗಳ ಕಟ್ಟುಪಾಡುಗಳಿಗೆ ಅನುಗುಣವಾಗಿ, ಅಸೆಟೊ ಬಾಲ್ಸಮಿಕೊ ಟ್ರೆಡಿಜಿಯೊನೆಲ್ (ಬಾಲ್ಸಮಿಕ್ ವೈನ್ಗರ್) ಕೇವಲ ಎಮಿಲಿಯಾ ನಗರಗಳಾದ ಮೊಡೆನಾ ಮತ್ತು ರೆಗಿಯೊ ಎಮಿಲಿಯಾದಲ್ಲಿ ಮಾತ್ರ ತಯಾರಿಸಲಾಗುತ್ತದೆ.[೩೩] ಪರ್ಮಿಜಿಯಾನೊ ರೆಗಿಯಾನೊವನ್ನು ರೆಗಿಯೊ ಎಮಿಲಿಯಾ, ಪಾರ್ಮಾ, ಮೊಡೆನಾ ಮತ್ತು ಬೊಲೊಗ್ನಾದಲ್ಲಿ ಉತ್ಪಾದನೆಯಾಗಿದೆ. ಇದನ್ನು ಅಡುಗೆಯಲ್ಲಿ ಬಳಸಲಾಗುತ್ತದೆ. ಗ್ರ್ಯಾನಾ ಪಡನೊವನ್ನು ಪ್ಲ್ಯಾಸೆಂಜಾದಲ್ಲಿ ತಯಾರಿಸಲಾಗುತ್ತದೆ. ಆಡ್ರಿಯಾಟಿಕ್ ಸಾಗರ ತೀರದಲ್ಲಿ ಬಹಳಷ್ಟು ಮೀನುಗಳ ಭಕ್ಷಣೆಯಾಗುತ್ತಿದೆ. ಆದರೆ ಇದು ಪ್ರಮುಖವಾಗಿ ಮಾಂಸ ಭಕ್ಷಣಾ ಪ್ರದೇಶವಾಗಿದೆ. ಇದರಲ್ಲಿ ರೊಮ್ಯಾಗ್ನಾ ಕುರಿ, ಮೊರ ರೊಮ್ಯಾಗ್ನೊಲಾ ಹಂದಿ ಮಾಂಸ ಹಾಗೂ ಬೇಟೆ ಪ್ರಾಣಿಗಳಿವೆ. ಈ ಪ್ರದೇಶದಲ್ಲಿ ಹಲವು ಶುದ್ಧಪಡಿಸಲಾದ ಹಂದಿ ಮಾಂಸ ಉತ್ಪನ್ನಗಳಿವೆ: ಬೊಲೊಗ್ನಾ, ಪಾರ್ಮಾ ಹಾಗೂ ಮೊಡೆನಾ ಹಂದಿ ತೊಡೆ ಮಾಂಸಗಳು (ಇದರಲ್ಲಿ ಕುಲಟೆಲೊ , ಸಲಾಮಿ ಫೆಲಿನೊ , ಪಿಯಾಸೆಂಜಾ ಪ್ಯಾಂಸೆಟಾ , ಕೊಪಾ ಹಾಗೂ ಸಲಾಮಿ ಸೇರಿವೆ. ಪಾಕ ಮಾಡಲಾದ ಹಂದಿ ಮಾಂಸ, ಉದಾಹರಣೆಗೆ, ಬೊಲೊಗ್ನಾದ ಮೊರ್ಟಡೆಲಾ ಮತ್ತು ಸಲಾಮಿ ರೊಸಾ, ಮೊಡೆನಾದ ಜಾಂಪೊನ್, ಕ್ಯಪೆಲೊ ಡಿ ಪ್ರೆಟ್ ಮತ್ತು ಕೊಟೆಚಿನೊ ಹಾಗೂ ಫೆರೆರಾದ ಸಲಾಮಾ ಡ ಸುಗೊ ಜನಪ್ರಿಯಾ ಹಂದಿ ಮಾಂಸಾಹಾರಗಳಾಗಿವೆ. ಪಿಯಾಸೆಂಜಾದಲ್ಲಿ ಕೆಲವು ಕುದುರೆ ಹಾಗೂ ಕತ್ತೆ ಮಾಂಸ ಬಳಸಿ ತಯಾರಿಸಲಾದ ಅಡುಗೆಗಳು ಜನಪ್ರಿಯ.
ಟಸ್ಕನಿ
[ಬದಲಾಯಿಸಿ]ಸರಳತೆಯು ಟಸ್ಕನ್ ಪಾಕಪದ್ಧತಿಯ ಕೇಂದ್ರಬಿಂದುವಾಗಿದೆ. ದ್ವಿದಳಧಾನ್ಯ ತರಕಾರಿ, ಬ್ರೆಡ್, ಗಿಣ್ಣು, ತರಕಾರಿಗಳು, ಅಣಬೆಗಳು ಹಾಗು ತಾಜಾ ಹಣ್ಣುಗಳನ್ನು ಇಲ್ಲಿ ಬಳಸಲಾಗಿದೆ. ರಿಬೊಲಿಟಾ (ಅರ್ಥ - 'ಮತ್ತೆ ಕುದಿಸಲಾದ') ಎಂಬ ಚಿರಪರಿಚಿತ ಟಸ್ಕನ್ ಸೂಪ್ ಇದಕ್ಕೆ ಅತ್ಯುತ್ತಮ ಉದಾಹರಣೆ. ಬಹಳಷ್ಟು ಟಸ್ಕನ್ ಪಾಕಪದ್ಧತಿಗಳಂತೆ, ಈ ಸೂಪ್ದೂ ರೈತರ ಮೂಲ. ಹಿಂದಿನ ದಿನ ಮಿಕ್ಕಿದ್ದ ತರಕಾರಿ ಹುಳಿ ಅಥವಾ ಸೂಪ್ನ್ನು ಪುನಃ ಬಿಸಿ ಮಾಡಿ ತಯಾರಿಸಲಾಗುತ್ತಿತ್ತು. ಇವುಗಳಲ್ಲಿ ಬಹಳಷ್ಟು ವಿಭಿನ್ನತೆಗಳಿವೆ, ಆದರೆ ಮುಖ್ಯ ಪದಾರ್ಥಗಳು ಎಂದಿಗೂ ಮಿಕ್ಕಿ ಹೋದ ಬ್ರೆಡ್, ಕೆನೆಲಿನಿ ಬೀಜಗಳು ಹಾಗೂ ಅಗ್ಗ ತರಕಾರಿಗಳಾದ ಕ್ಯಾರೆಟ್, ಎಲೆಕೋಸು, ಬೀಜಗಳು, ಸಿಲ್ವರ್ಬೀಟ್, ಕೆವೊಲೊ ನೆರೊ (ಟಸ್ಕನ್ ಕೇಲ್) ಹಾಗೂ ಈರುಳ್ಳಿಗಳನ್ನು ಹೊಂದುತ್ತಿದ್ದವು. ಆಲಿವ್ ತೈಲವನ್ನು ಮೊರೆಯೊಲೊ, ಲೆಕಿನೊ, ಫ್ರೆಂಟೊಯೊ ಹಾಗೂ ಪೆಂಡೊಲಿನೊ ಆಲಿವ್ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಸ್ಯಾನ್ ಮಿನಿಯೆಟೊದ ಬಿಳಿಯ ಗೆಡ್ಡೆ ಅಣಬೆಗಳು ಅಕ್ಟೊಬರ್ ಮತ್ತು ನವೆಂಬರ್ ತಿಂಗಳಲ್ಲಿ ಕಾಣಿಸಿಕೊಳ್ಳುತ್ತವೆ. ಫ್ಲೊರೆಂಟೀನ್ ಸ್ಟೀಕ್ಗಾಗಿ ಬಳಸಲಾದ ಅತ್ಯುತ್ತಮ ಗುಣಮಟ್ಟದ ಗೋಮಾಂಸ ಚಿಯಾನಾ ಕಣಿವೆಯ ಚಿಯಾನಿನಾ ಗೋ ತಳಿ ಹಾಗೂ ಮಾರೆಮ್ಮ ಕಣಿವೆಯ ಮಾರೆಮ್ಮನನಿಂದ ಬರುತ್ತದೆ. ಹಂದಿ ಮಾಂಸವನ್ನು ಸಹ ತಯಾರಿಸಲಾಗುತ್ತದೆ.[೩೪]
ಉಂಬ್ರಿಯಾ
[ಬದಲಾಯಿಸಿ]ಸ್ಥಳೀಯ ಆಲಿವ್ ತೈಲ ಮತ್ತು ಗಿಡಮೂಲಿಕೆಗಳೊಂದಿಗೆ ಕುದಿಸಿ ಹಲವು ಉಂಬ್ರಿಯನ್ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ತರಕಾರಿ ಭಕ್ಷ್ಯಗಳು ವಸಂತ ಮತ್ತು ಬೇಸಿಗೆ ಕಾಲಗಳಲ್ಲಿ ಜನಪ್ರಿಯ, ಶರತ್ಕಾಲ ಹಾಗೂ ಚಳಿಗಾಲಗಳಲ್ಲಿ ಬೇಟೆಯಾಡುವಿಕೆಯಿಂದ ಮಾಂಸ ವಹಿವಾಟು ಹಾಗೂ ನಾರ್ಸಿಯಾದಿಂದ ಕಪ್ಪು ಗೆಡ್ಡೆ ಅಣಬೆಗಳು ದೊರೆಯುತ್ತವೆ. ನಾರ್ಸಿನಿ ಸಾಸೇಜ್ಗಳು ಬಹಳಷ್ಟು ಬೇಡಿಕೆಯಲ್ಲಿವೆ. Lenticchie di Castelluccio ಎಂಬುದು Castelluccio ಇಂದ ಸೊಪ್ಪುಗಳು. ಸ್ಪೋಲೆಟೊ ಮತ್ತು ಮೊಂಟೆಲಿಯೊನ್ ಸ್ಪೆಲ್ಟ್ ಗೋಧಿಗೆ ಖ್ಯಾತ. ಸಿಹಿನೀರಿನ ಮೀನುಗಳಲ್ಲಿ ಲಾಸ್ಕಾ, ಟ್ರೌಟ್, ಸಿಹಿನೀರಿನ ಪರ್ಚ್, ಗ್ರೇಲಿಂಗ್, ಹಾವುಮೀನು, ಬಾರ್ಬೆಲ್, ಬಿಳಿ ಮೀನು ಹಾಗೂ ಟೆಂಚ್ ಮೀನುಗಳು ಸೇರಿವೆ.[೩೫]
ಮಾರ್ಚ್
[ಬದಲಾಯಿಸಿ]ಮಾರ್ಚ್ ಪ್ರದೇಶದ ಕಡಲತೀರದಲ್ಲಿ ಮೀನು ಮತ್ತು ಕಡಲ ಆಹಾರ ತಯಾರಿಸಲಾಗುತ್ತದೆ. ದೇಶೀಯ, ಕಾಡು ಹಾಗೂ ಸಾಕಲಾದ ಹಂದಿ ಮಾಂಸವನ್ನು ಸಾಸೇಜ್ ಹಾಗೂ ತೊಡೆ ಮಾಂಸಕ್ಕಾಗಿ ಬಳಸಲಾಗುತ್ತದೆ. ಈ ತೊಡೆ ಮಾಂಸಗಳನ್ನು ಸಣ್ಣದಾಗಿ ಹೆಚ್ಚುವ ಬದಲಿಗೆ ಕಚ್ಚಬಹುದಾದ ಸಣ್ಣ ತುಂಡುಗಳಾಗಿ ಕತ್ತರಿಸಲಾಗುತ್ತದೆ. ಮರಿ ಹಂದಿ, ಕೋಳಿ ಮತ್ತು ಮೀನುಗಳನ್ನು ತುಂಬಿಸಿ, ಸುಡಲಾಗುತ್ತಿತ್ತು.[೩೬]
ಲ್ಯಾಜಿಯೊ
[ಬದಲಾಯಿಸಿ]guanciale ಬಳಕೆಯನ್ನು ಆಧರಿಸಿದ ಪಾಸ್ಟಾ ಅಡುಗೆಗಳು ಲ್ಯಾಜಿಯೊದಲ್ಲಿ ಲಭ್ಯ. ಉದಾಹರಣೆಗೆ ಪಾಸ್ಟಾ alla carbonara ಹಾಗೂ ಪಾಸ್ಟಾ all'amatriciana . ಇನ್ನಷ್ಟು ಸಣ್ಣದಾಗಿ ಕತ್ತರಿಸಲಾದ ಹಂದಿ ಹಾಗೂ ಗೋ ಮಾಂಸಗಳನ್ನು ಇದರಲ್ಲಿ ಬಳಸಲಾಗಿದೆ. ಎಂಟ್ರೇಲ್ ಆಧಾರಿತ ಪಜಾಟಾ ಮತ್ತು coda alla vaccinara ಇದಕ್ಕೆ ಉದಾಹರಣೆಗಳು. ರೋಮನ್ ಅಡುಗೆ ಪದ್ಧತಿಯಲ್ಲಿ ಯೆಹೂದಿ ಪ್ರಭಾವವೂ ಉಂಟು. ಏಕೆಂದರೆ ಯೆಹೂದ್ಯರು ಕ್ರಿಸ್ತಪೂರ್ವ ಒಂದನೆಯ ಶತಮಾನದಿಂದಲೂ ರೋಮ್ನಲ್ಲಿ ವಾಸಿಸುತ್ತಿದ್ದಾರೆ. ದುಂಡಾಕಾರದ ಪಲ್ಲೆಹೂಗಳು ಸರ್ವೇಸಾಮಾನ್ಯ.[೩೭]
ಅಬ್ರುಜ್ಜೋ ಮತ್ತು ಮೊಲಿಸ್
[ಬದಲಾಯಿಸಿ]ಹಸಿ ಮೆಣಸಿನಕಾಯಿಗಳು (peperoncini ) ಅಬ್ರುಜ್ಜೋದಲ್ಲಿ ಕಾಣಸಿಗುತ್ತದೆ. ವಿಪರೀತ ಖಾರವಿರುವ ಕಾರಣ, ಇವನ್ನು ಡಯೊವಾಲೆಟ್ಟಿ ('ಸಣ್ಣ ದೆವ್ವಗಳು') ಎನ್ನಲಾಗಿದೆ. ಸೆಂಟರ್ಬ್ ಎಂಬುದು, ಸ್ಥಳೀಯರು ಕುಡಿಯುವ, ('ನೂರು ಗಿಡಮೂಲಿಕೆಗಳು') ಬಹಳ ತೀಕ್ಷ್ಣವಾದ (72% ಆಲ್ಕೊಹಾಲ್ ಹೊಂದಿರುವ) ಖಾರವುಳ್ಳ ಗಿಡಮೂಲಿಕೆಯ ಮದ್ಯ. ಪಾಸ್ಟಾ, ಮಾಂಸ ಮತ್ತು ತರಕಾರಿಗಳು ಅಬ್ರುಜ್ಜೋ ಮತ್ತೊ ಮೊಲಿಸ್ ಪಾಕಪದ್ಧತಿಗಳ ಪ್ರಮುಖ ಅಂಶವಾಗಿದೆ. ಪಾಸ್ಟಾ ಹಾಗೂ ಅರೊಸ್ಟಿಸಿನಿ (ಸ್ಥಳೀಯ ಆಡುಭಾಷೆಯಲ್ಲಿ 'ರಸ್ಟೆಲ್' ಅಥವಾ 'ಅರಸ್ಟೆಲ್') ಸಾಂಪ್ರದಾಯಿಕ ಭಕ್ಷ್ಯ ದೊಂದಿಗೆ ಕುರಿ ಮಾಂಸವನ್ನು ಬಳಸಲಾಗುತ್ತದೆ. ಇದನ್ನು ವೀರ್ಯಗುಂದಿಸಲಾದ ಕುರಿಯ ಮಾಂಸದಿಂದ ತಯಾರಿಸಿ, ತುಂಡುಗಳಾಗಿ ಕತ್ತರಿಸಿ, ಕಂಬಿಗೆ ಪೋಣಿಸಲಾಗುತ್ತದೆ. ನಂತರ ಅವನ್ನು 'ಕೆನಾಲಾ' ಎಂಬ ಉದ್ದನೆಯ ಕೆಂಡದ ತಟ್ಟೆಯಲ್ಲಿಟ್ಟು ಸುಡಲಾಗುತ್ತದೆ, ಏಕೆಂದರೆ ಇದು ರಸ್ತೆ ಪಕ್ಕದ ಮೋರಿಯನ್ನು ಹೋಲುತ್ತದೆ. ಚಿಟಾರಾ (ಗೂಢಾರ್ಥವಾಗಿ ಗಿಟಾರ್) ಇದು ಸಣ್ಣ ತಂತಿಗಳುಳ್ಳ ಸಲಕರಣೆ. ಇದನ್ನು ಬಳಸಿ ಪಾಸ್ಟಾ ಹಿಟ್ಟನ್ನು ಕತ್ತರಿಸಲು ಒತ್ತಲಾಗುತ್ತದೆ. ಅರೊಸ್ಟಿಸಿನಿ ಎಂಬುದು ಪೆಸ್ಕಾರಾದಿಂದ ಬಂದ ಭಕ್ಷ್ಯವಾಗಿದೆ. ವೀರ್ಯಗುಂದಿಸಲಾದ ಕುರಿಯ ಮಾಂಸ ತುಂಡುಗಳನ್ನು ಕತ್ತರಿಸಿ, ಮರದ ದಂಡದ ಮೇಲಿಟ್ಟು, ಇದ್ದಿಲಲ್ಲಿ ಅಡುಗೆ ಮಾಡಲಾಗುತ್ತದೆ. ಲ'ಅಕ್ವಿಲಾ ಪ್ರಾಂತ್ಯದಲ್ಲಿ ಬೆಳೆಸಲಾದ ಕೇಸರಿಯ ಜನಪ್ರಿಯತೆಯು ಇತ್ತೀಚಿನ ವರ್ಷಗಳಲ್ಲಿ ಕಡಿಮೆಯಾಗುತ್ತಿದೆ.[೩೮]
ಕ್ಯಾಂಪನಿಯಾ
[ಬದಲಾಯಿಸಿ]ಕ್ಯಾಂಪಾನಿಯಾದಲ್ಲಿ ಟೊಮೆಟೊಗಳು, ಮೆಣಸುಗಳು, ವಸಂತ ಕಾಲದ ಈರುಳ್ಳಿಗಳು, ಆಲೂಗಡ್ಡೆಗಳು, ಪಲ್ಲೆಹೂಗಳು, ಸೊಂಪಿನ ಗಿಡ, ನಿಂಬೆಹಣ್ಣುಗಳು ಹಾಗೂ ಕಿತ್ತಳೆಹಣ್ಣುಗಳನ್ನು ಬೆಳೆಸಲಾಗುತ್ತದೆ. ಇವೆಲ್ಲವೂ ಸಹ ಜ್ವಾಲಾಮುಖಿ ಪರ್ವತದ ಮಣ್ಣಿನ ಸ್ವಾದವನ್ನು ಅನುಸರಿಸುತ್ತವೆ. ನ್ಯಾಪಲ್ಸ್ ಕೊಲ್ಲಿಯಲ್ಲಿ ಮೀನು ಮತ್ತು ಕಡಲ ಆಹಾರ ಲಭ್ಯವಿವೆ. ಪ್ಯಾಸ್ಟಾದಲ್ಲಿ ಡ್ಯೂರಮ್ ಗೋಧಿ ಬಳಸಲಾಗುತ್ತದೆ. ನೀರೆಮ್ಮೆಯ ಹಾಲಿನ ಉತ್ಪನ್ನವಾದ ಮೊಜ್ಜಾರೆಲಾಬಹಳ ಉತ್ಕೃಷ್ಟವಾಗಿದೆ. ಪ್ರದೇಶದ ಸಾಂಪ್ರದಾಯಿಕ ಪಿಜ್ಜಾಗಳಲ್ಲಿ ತಾಜಾ ತರಕಾರಿಗಳು ಮತ್ತು ಗಿಣ್ಣನ್ನು ಬಳಸಲಾಗುತ್ತದೆ. ಭೋಜನಾನಂತರದ ಭಕ್ಷ್ಯಗಳಲ್ಲಿ ಪ್ಯಾಸ್ಟಿಯೆರಾ sfogliatelle ಹಾಗೂ ರಮ್ನಲ್ಲಿ ಅದ್ದಿರುವ babà ಸಹ ಸೇರಿವೆ.[೪೦] ನ್ಯಾಪಲ್ಸ್ ನ್ಯಾಪಲ್ಸ್ ಸಾಮ್ರಾಜ್ಯದ ರಾಜಧಾನಿಯಾಗಿದ್ದರಿಂದ, ನ್ಯಾಪಲ್ಸ್ ಪಾಕಪದ್ಧತಿಯು ಇಡೀ ಕ್ಯಾಂಪಾನಿಯಾ ಪ್ರದೇಶದ ಅಡುಗೆಯ ಸಾಂಪ್ರದಾಯಿಕ ಪದ್ಧತಿಗಳನ್ನು ಅನುಸರಿಸಿತು. ಇದರಿಂದಾಗಿ, ಗ್ರಾಮಾಂತರ ಪ್ರದೇಶದ ಪದಾರ್ಥಗಳಾದ ಪಾಸ್ಟಾ, ತರಕಾರಿಗಳು, ಗಿಣ್ಣು, ಹಾಗೂ ಮೀನು, ಕಠಿಣಚರ್ಮಿಗಳು ಹಾಗೂ ಮೃದ್ವಂಗಿಗಳಂತಹ ಕಡಲ ಆಹಾರ ಭಕ್ಷ್ಯಗಳು ಸೇರಿವೆ. ಪಾಕವಿಧಾನಗಳಲ್ಲಿ ಬಹಳಷ್ಟು ವಿಭಿನ್ನತೆಗಳು ಸ್ಥಳೀಯ ಕುಲೀನಸತ್ತೆಯ ಪಾಕಪದ್ಧತಿಯಿಂದ ಪ್ರಭಾವಿತವಾಗಿವೆ. ಉದಾಹರಣೆಗೆ ಟಿಂಬಲ್ಲಿ ಹಾಗೂ sartù di riso, ಬಹಳಷ್ಟು ವಿಸ್ತಾರವಾಗಿ ತಯಾರಿಸಲಾಗಿವೆ. ಜನಪ್ರಿಯ ಸಂಪ್ರದಾಯಗಳಿಂದ ಬರುವ ಭಕ್ಷ್ಯಗಳು ಬಡವಾಗಿದ್ದರೂ, ಬೀಜಗಳೊಂದಿಗಿನ ಪಾಸ್ಟಾ ಹಾಗೂ ತರಕಾರಿಗಳೊಂದಿಗಿನ ಇತರೆ ಪಾಸ್ಟಾ ಖಾದ್ಯಗಳಲ್ಲಿ ಆರೋಗ್ಯಕರ ಪೌಷ್ಟಿಕಾಂಶಗಳಿವೆ.
ಅಪುಲಿಯಾ
[ಬದಲಾಯಿಸಿ]ಅಪುಲಿಯಾ ಅಥವಾ ಪಗ್ಲಿಯಾ ದ ಉತ್ತರ ಭಾಗದಲ್ಲಿ ಬಹಳಷ್ಟು ಬೆಳ್ಳುಳ್ಳಿ ಹಾಗೂ ಈರುಳ್ಳಿ ಬಳಸಲಾಗುತ್ತದೆ. ಡ್ಯೂರಮ್ ಗೋಧಿಯಿಂದ ತಯಾರಿಸಲಾದ ಪಾಸ್ಟಾಗಾಗಿ ಈ ಪ್ರದೇಶವು ಖ್ಯಾತ. ಕೃಷಿ ಉತ್ಪನ್ನಗಳ ಪೈಕಿ ಟೊಮೆಟೊಗಳು, ಝುಚ್ಚಿನಿ, ಹೂಕೋಸುಗಳು, ಮೆಣಸುಗಳು, ಆಲೂಗಡ್ಡೆಗಳು, ಮೊಟ್ಟೆಗಿಡಗಳು, ಹೂಕೋಸು ಕಿವಿಗಳು, ಸೊಂಪಿನ ಗಿಡ, ಚಿಕೋರಿ ಗಿಡ, ಸಣ್ಣ ಬೀಜಗಳು, ಸೊಪ್ಪುಗಳು ಹಾಗೂ ಬೀಜಗಳು ಲಭ್ಯವಿವೆ. ಅಪುಲಿಯಾ ಇಡೀ ಇಟಲಿಯಲ್ಲೇ ಅತಿ ದೊಡ್ಡ ಆಲಿವ್ ತೈಲದ ಉತ್ಪಾದನೆಯ ತಾಣವಾಗಿದೆ. ಸಾಗರದಲ್ಲಿ ಮೀನು ಹಾಗೂ ಕಡಲ ಆಹಾರ, ಅದರಲ್ಲೂ ವಿಶಿಷ್ಟವಾಗಿ ಸಿಂಪಿಗಳು ಹಾಗೂ ಕಪ್ಪೆಚಿಪ್ಪು ಪ್ರಾಣಿಗಳಂತಹ ಮಾಂಸಾಹಾರಗಳು ಲಭ್ಯ. ಕೆಲವೊಮ್ಮೆ ಮೇಕೆ ಮತ್ತು ಕುರಿ ಮಾಂಸಗಳನ್ನೂ ಸಹ ಭಕ್ಷಿಸಲಾಗುತ್ತದೆ.[೪೧]
ಬೆಸಿಲಿಕೇಟಾ
[ಬದಲಾಯಿಸಿ]ಹಂದಿ ಮಾಂಸವು ಬೆಸಿಲಿಕೇಟಾದ ಪಾಕಪದ್ಧತಿಯ ಅವಿಭಾಜ್ಯ ಅಂಗವಾಗಿದೆ. ಇದರಿಂದ ಸಾಸೇಜ್ಗಳನ್ನು ತಯಾರಿಸಲಾಗುತ್ತದೆ ಅಥವಾ ಅಡುಗಂಬಿಯಲ್ಲಿ ಸುಡಲಾಗುತ್ತದೆ. ಮಾಂಸ ಹಾಗೂ ಕುರಿ ಮಾಂಸವೂ ಸಹ ಇಲ್ಲಿ ಜನಪ್ರಿಯ. ಪಾಸ್ಟಾ ಸಾಸ್ಗಳು ಸಾಮಾನ್ಯವಾಗಿ ಮಾಂಸ ಹಾಗೂ ತರಕಾರಿಗಳನ್ನು ಅವಲಂಬಿಸಿವೆ. ಖಾರವುಳ್ಳ ಪೆಪೆರೊನ್ಸಿನಿಯನ್ನು ಸಹ ಬಹಳಷ್ಟು ಬಳಸಲಾಗಿದೆ. ಕಹಿಯಾದ digestif Amaro Lucano ಸಹ ಇಲ್ಲಿ ತಯಾರಿಸಲಾಗಿದೆ.[೪೨]
ಕ್ಯಾಲಬ್ರಿಯಾ
[ಬದಲಾಯಿಸಿ]ಅ ಪ್ರದೇಶವನ್ನು ಜಯಿಸಿದವರು ಹಾಗೂ ಭೇಟಿಗಾರರು ಕೆಲಬ್ರಿಯಾದ ಈ ಪಾಕಪದ್ಧತಿಯ ಮೇಲೆ ಪ್ರಭಾವ ಬೀರಿದ್ದಾರೆ. ಅರಬರು ಕಿತ್ತಳೆ, ನಿಂಬೆ, ಒಣದ್ರಾಕ್ಷಿ, ಪಲ್ಲೆಹೂ ಮತ್ತು ಮೊಟ್ಟೆಗಿಡಗಳನ್ನು(ಅಣಬೆ) ತಮ್ಮೊಂದಿಗೆ ತಂದರು. ಸಿಸ್ಟರ್ಸಿಯನ್ ಬೈರಾಗಿಗಳು ಈ ಪ್ರದೇಶಕ್ಕೆ ಹೈನು ಉತ್ಪನ್ನಗಳೊಂದಿಗೆ ಹೊಸ ಕೃಷಿ ವಿಧಾನಗಳನ್ನು ಪರಿಚಯಿಸಿದರು. ಹೌಸ್ ಆಫ್ ಅಂಜೂ ಹಾಗೂ ನೆಪೊಲಿಯನ್ ನೇತೃತ್ವದಲ್ಲಿ ಪ್ರೆಂಚ್ ಆಳ್ವಿಕೆ, ಹಾಗೂ ಸ್ಪ್ಯಾನಿಷ್ ಪ್ರಭಾವದೊಂದಿಗೆ, ಭಾಷೆ ಹಾಗೂ ಅಡುಗೆ ಶೈಲಿಯ ಮೇಲೆ ಪ್ರಭಾವ ಬೀರಿತು. ಉದಾಹರಣೆಗೆ, ಕೇಕ್ಗೆ ಫ್ರೆಂಚ್ gateau ಎಂಬುದನ್ನು ಆಧರಿಸಿ, 'gatò ' ಎನ್ನಲಾಯಿತು. ಕಡಲ ಆಹಾರದಲ್ಲಿ ಕತ್ತಿಮೀನು, ಸೀಗಡಿ, ಕಡಲೇಡಿ, ಕಡಲ ಚಿಳ್ಳೆ ಹಾಗೂ ಸ್ಕ್ವಿಡ್ಗಳು ಸೇರಿವೆ. ಕಲ್ಲಂಗಡಿ ಹಣ್ಣು, ಚಾರ್ಲ್ಸ್ಟನ್ ಗ್ರೇ, ಕ್ರಿಮ್ಸನ್ ಸ್ವೀಟ್, ಕ್ಯಾಂಟೆಲೋಪ್, ಟೆಂಡ್ರೇಲ್ ವರ್ಡ್ , piel de sapo ಹಾಗೂ invernale giallo ಇಂತಹ ಹಣ್ಣುಗಳನ್ನು ಮೆಸಿಡೊನಿಯಾ ಡಿ ಫ್ರುಟಾ (ಹಣ್ಣು ರಸಾಯನ)ದಲ್ಲಿ ಬಡಿಸಲಾಗಿದೆ ಅಥವಾ ಪ್ರೊಸಿಯುಟೊದಲ್ಲಿ ಸುತ್ತಿಡಲಾಗಿದೆ.[೪೩]
ಸಿಸಿಲಿ
[ಬದಲಾಯಿಸಿ]ಸಿಸಿಲಿಯಲ್ಲಿ ಎರಡು ಸಹಸ್ರಮಾನ ವರ್ಷಗಳಿಂದ ನೆಲೆಯೂರಿದ ಎಲ್ಲಾ ಸಂಸ್ಕೃತಿಗಳ ತುಣುಕುಗಳೂ ಉಂಟು. ಯಾವುದೇ ಸಂಶಯವಿಲ್ಲದೆ, ಇದರ ಪಾಕಪದ್ಧತಿಯು ಇಟ್ಯಾಲಿಯನ್ ಆಧಾರ ಹೊಂದಿದ್ದರೂ, ಸಿಸಿಲಿಯನ್ ಆಹಾರದಲ್ಲಿ ಸ್ಪ್ಯಾನಿಷ್, ಗ್ರೀಕ್ ಮತ್ತು ಅರಬ್ ಪ್ರಭಾವವಿದೆ. ಡಯೊನ್ಸಿಯಸ್ ಈ ಪ್ರದೇಶಕ್ಕೆ ವೈನ್ ಪರಿಚಯಿಸಿದನು ಎನ್ನಲಾಗಿದೆ. ಇದು ಪುರಾತನ ಗ್ರೀಸ್ನಿಂದ ಐತಿಹಾಸಿಕ ಪ್ರಭಾವದ ತುಣುಕು ಹೊಂದಿದೆ. ಪುರಾತನ ರೋಮನರು ಹೆಬ್ಬಾತು ಮಾಂಸದ ಅದ್ದೂರಿ ಭಕ್ಷ್ಯವನ್ನು ಪರಿಚಯಿಸಿದರು. ಬೈಝಾಂಟೀನರು ಸಿಹಿ ಮತ್ತು ಹುಳಿ ಸ್ವಾದಗಳತ್ತ ಒಲವು ತೋರಿಸಿದರು. ಅರಬರು ತಮ್ಮೊಂದಿಗೆ ಜಲ್ದರು ಹಣ್ಣು, ಸಕ್ಕರೆ,, ನಿಂಬೆ ಕುಲದ ಹಣ್ಣು, ಸಿಹಿ ಕಲ್ಲಂಗಡಿಗಳು, ಅಕ್ಕಿ, ಕೇಸರಿ, ಒಣ ದ್ರಾಕ್ಷಿಗಳು, ಜಾಕಾಯಿ, ಲವಂಗ, ಕರಿ ಮೆಣಸು ಹಾಗೂ ದಾಲ್ಚಿನ್ನಿ ಚಕ್ಕೆ ತಂದರು. ನಾರ್ಮನ್ನರು ಮತ್ತು ಹೊಹೆನ್ಸ್ಟಾಫೆನ್ ಜನರು ಮಾಂಸದ ಆಹಾರದತ್ತ ಒಲವು ತೋರಿಸಿದರು. ಸ್ಪ್ಯಾನಿಷ್ ಜನರು ನೂತನ ಪ್ರಪಂಚದಿಂದ ಖಾದ್ಯಗಳನ್ನು ಪರಿಚಯಿಸಿದರು. ಇದರಲ್ಲಿ ಚಾಕಲೇಟ್, ಮೆಕ್ಕೆ-ಜೋಳ, ಟರ್ಕಿ ಹಕ್ಕಿ ಮತ್ತು ಟೊಮೆಟೋಗಳು ಸೇರಿದ್ದವು.[೪೪] ದ್ವೀಪದ ಪಾಕಪದ್ಧತಿಯಲ್ಲಿ ಬಹಳಷ್ಟು ತಾಜಾ ತರಕಾರಿಗಳಾದ ಎಗ್ಪ್ಲ್ಯಾಂಟ್, ಮೆಣಸುಗಳು ಹಾಗೂ ಟಮೆಟೊಗಳು ಹಾಗೂ ಟ್ಯೂನಾ, ಸೀ ಬ್ರೀಮ್, ಸೀ ಬಾಸ್, ಕಟ್ಲ್ಫಿಷ್ ಹಾಗೂ ಕತ್ತಿಮೀನುಗಳ ಬಳಕೆಯನ್ನು ಪ್ರೋತ್ಸಾಹಿಸುತ್ತಿದ್ದರು. ದ್ವೀಪದ ಪಶ್ಚಿಮ ಬದಿಯಲ್ಲಿರುವ ಟ್ರಪನಿಯಲ್ಲಿ, ಮೀನಿನೊಂದಿಗೆ ಕೂಸ್ಕೂಸ್ ಬಳಕೆಯ ಮೂಲಕ ಉತ್ತರ ಆಫ್ರಿಕಾದ ಪ್ರಭಾವಗಳು ಎದ್ದುಕಾಣುತ್ತವೆ. ಸಿಸಿಲಿಯ ವಿಶೇಷ ಖಾದ್ಯಗಳ ಪೈಕಿ ಅರಾನ್ಸಿನಿ (ಕರಿಯಲಾದ ಅಕ್ಕಿಯ ಕ್ರೊಕೆಟ್ಗಳು), ಪಾಸ್ಟಾ ಅಲ್ಲ, ನಾರ್ಮಾ (ಕ್ಯಾಟನಿಯಾದ ಒಂದು ವಿಶೇಷ ಖಾದ್ಯ), ಕೆಪೊನೆಟಾ, ಪಾನಿ ಕಾ ಮೂಸಾ (ಪಾಲರ್ಮೊ) ಹಾಗೂ ಕ್ಯಾನೊಲೊ ಸಿಸಿಲಿಯೆನೊ, ಗ್ರ್ಯಾನಿಟಾ ಮತ್ತು ಕ್ಯಾಸೆಟಾ ಸಿಸಿಲಿಯಾನಾ ಸೇರಿದಂತೆ ಭೋಜನಾನಂತರದ ಖಾದ್ಯಗಳು ಹಾಗೂ ಸಿಹಿತಿನಿಸುಗಳು).
ಸಾರ್ಡಿನಿಯಾ
[ಬದಲಾಯಿಸಿ]ರಾಕ್ ಲಾಬ್ಸ್ಟರ್ಗಳು, ಸ್ಕ್ಯಾಂಪಿ, ಸ್ಕ್ವಿಡ್, ಟ್ಯೂನಾ, ಸಾರ್ಡೀನ್ಗಳು ಮತ್ತು ಇತರೆ ಕಡಲ ಆಹಾರಗಳು ಪ್ರಮುಖಾಂಶದಲ್ಲಿವೆ. ಮರಿ ಹಂದಿ ಹಾಗೂ ಕಾಡು ಹಂದಿಯನ್ನು ಸ್ಪಿಟ್ನಲ್ಲಿ ಸುಡಲಾಗುತ್ತದೆ, ಅಥವಾ, ಬ್ರೆಡ್ನೊಂದಿಗೆ ದಪ್ಪಗೊಳಿಸಲಾದ ಬೀಜಗಳು ಮತ್ತು ತರ್ಕಾರಿಗಳೊಂದಿಗೆ ಬೇಯಿಸಬಹುದಾಗಿದೆ. ಪುದಿನ ಮತ್ತು ಮರ್ಟ್ಲ್ಗಿಡವನ್ನು ಸಹ ಬಳಸಲಾಗಿದೆ. ಸಾರ್ಡಿನಿಯಾದ ಬ್ರೆಡ್ನಲ್ಲಿ ಬಹಳಷ್ಟನ್ನು ಒಣಗಿಸಲಾಗಿದೆ. ಇದು ಹೆಚ್ಚಾಗಿ ತೇವವಾದ ಬ್ರೆಡ್ಗಳಿ್ಇಂತಲೂ ಹೆಚ್ಚು ಕಾಲ ತಾಜಾ ಇರಬಹುದು. civraxiu , coccoi pinatus ಎಂಬ ಅತಿ ಉತ್ಕೃಷ್ಟ ಬ್ರೆಡ್, ಜೊತೆಗೆ ಕೇವಲ ಹಿಟ್ಟು ಹಾಗೂ ನೀರಿನೊಂದಿಗೆ ತಯಾರಿಸಲಾದ pistoccu ಸೇರಿದಂತೆ ಇವನ್ನು ಬೆಂಕಿಗೆ ತಗುಲಿಸದೇ ಸುಡಬಹುದಾಗಿದೆ. ಇದನ್ನು ಮೂಲತಃ ದನಗಾಹಿಗಳಿಗೆ ನೀಡಲಾಗುತ್ತಿತ್ತು, ಆದರೆ ಇದನ್ನು ಆಗಾಗ್ಗೆ ಟೊಮೆಟೊಗಳು, ತುಳಸಿ, ಆರಿಗಾನೊ, ಬೆಳ್ಳುಳ್ಳಿ ಹಾಗು ಕಡಕ್ ಗಿಣ್ಣಿನೊಂದಿಗೆ ಇದನ್ನು ಗೃಹಗಳಲ್ಲಿ ಬಡಿಸಲಾಗಿದೆ.[೪೫]
ಊಟದ ಸಿದ್ದಪಡಿಸುವಿಕೆಯ ರಚನಾ ವಿಧಾನ
[ಬದಲಾಯಿಸಿ]ಸಾಂಪ್ರದಾಯಿಕವಾಗಿ, ಇಟಲಿಯ ಭೋಜನಗಳಲ್ಲಿ ಮೂರು ಅಥವಾ ನಾಲ್ಕು ಕೋರ್ಸ್ಗಳಿವೆ. ಹಸಿವಿನ ತ್ವರಿತ ಶಮನಕ್ಕಿಂತ ಹೆಚ್ಚಾಗಿ, ಭೋಜನಾ ಸಮಯವನ್ನು ಸಾಮಾನ್ಯವಾಗಿ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸಮಯ ಕಳೆಯಲು ಒಂದು ಅವಕಾಶ ಎನ್ನಲಾಗಿದೆ. ಇದರಿಂದಾಗಿ, ದೈನಿಕ ಭೋಜನೆಗಳು ಇತರೆ ಸಂಸ್ಕೃತಿಗಳಲ್ಲಿ ಬಹಳ ಹೊತ್ತಿನ ಸಮಯ ತೆಗೆದುಕೊಳ್ಳಬಹುದು. ರಜಾದಿನಗಳಂದು ಕೌಟುಂಬಿಕ ಭೋಜನಗಳು ಕೆಲವು ತಾಸುಗಳ ಕಾಲ ನಡೆಯಬಹುದು. ಇಂದು, ಸಾಂಪ್ರದಾಯಿಕ ಇಟ್ಯಾಲಿಯನ್ ಮೆನುವನ್ನು ಮುಖ್ಯವಾಗಿ ವಿಶೇಷ ಸಮಾರಂಭಗಳಿಗೆ (ಉದಾಹರಣೆಗೆ ಮದುವೆಗಳು) ಮೀಸಲಾಗಿರಿಸಿದೆ. ಪ್ರತಿದಿನ ಮೆನುವಿನಲ್ಲಿ ಕೇವಲ ಮೊದಲ ಹಾಗೂ ಎರಡನೆಯ ಕೋರ್ಸು, ಪಕ್ಕದ ಖಾದ್ಯಗಳು ಹಾಗೂ ಕಾಫಿಯನ್ನು ಸೇರಿಸಿಕೊಳ್ಳಲಾಗಿದೆ. ಇಟ್ಯಾಲಿಯನ್ ಭೋಜನಗಳ ಗಮನಾರ್ಹ ವಿಚಾರವೇನೆಂದರೆ ಪ್ರೈಮೊ ಅಥವಾ ಮೊದಲ ಕೋರ್ಸು ಸಾಮಾನ್ಯವಾಗಿ ರಿಸೊಟೊ ಅಥವಾ ಪಾಸ್ಟಾದಂತಹ ಭಕ್ಷ್ಯಗಳುಂಟು. ಆಧುನಿಕ ಇಟ್ಯಾಲಿಯನ್ ಪಾಕಪದ್ಧತಿಯೂ ಸಹ ಒಂದೇ ಕೋರ್ಸ್ನ್ನು ಹೊಂದಿರುತ್ತದೆ (ಒಂದರಲ್ಲೆ ಎಲ್ಲವೂ) ಇದರಿಂದಲೇ ಕಾರ್ಬೊಹೈಡ್ರೇಟ್ಗಳು ಹಾಗೂ ಪ್ರೊಟೀನ್ ಪೌಷ್ಟಿಕಾಂಶಗಳು ಲಭಿಸುವವು (ಉದಾಹರಣೆಗೆ ಪಾಸ್ಟ ಮತ್ತು ಲೆಗ್ಯೂಮ್ಗಳು)
ಭೋಜನಾ ಹಂತಗಳು | ಸಂಯೋಜನೆ |
---|---|
ಅಪೆರಿಟಿವೊ | apéritif ಭಾರಿ ಭೋಜನದ ಮುಂಚೆ ಹಸಿವನ್ನು ಪ್ರಚೋದಿಸುವಂತಹ ಖಾದ್ಯ ಎನ್ನಬಹುದು. |
ಆಂಟಿಪ್ಯಾಸ್ಟೊ | ಇದರ ಅರ್ಥ 'ಭೋಜನಕ್ಕೆ ಮುಂಚೆ' ಬಿಸಿಯಾದ ಅಥವಾ ತಣ್ಣನೆಯ ಹಸಿವು ಪ್ರಜೋದಕಗಳು |
ಪ್ರೈಮೊ | 'ಮೊದಲ ಕೋರ್ಸು' ಸಾಮಾನ್ಯವಾಗಿ ಬಿಸಿಬಿಸಿಯಾದ ಪಾಸ್ಟಾ, ರಿಸೊಟೊ, ನಾಕಿ, ಪೊಲೆಂಟಾ ಅಥವಾ ಸೂಪು ಹೊಂದಿರುತ್ತದೆ. |
ಸೆಕೆಂಡೊ | 'ಎರಡನೆಯ ಕೋರ್ಸ್' ಮುಖ್ಯ ಭಕ್ಷ್ಯಗಳಾದ ಮೀನು ಅಥವಾ ಮಾಂಸ ಭಕ್ಷ್ಯಗಳಿರುತ್ತವೆ. ಸಾಂಪ್ರದಾಯಿಕವಾಗಿ, ಕನಿಷ್ಠ ಪಕ್ಷ ಉತ್ತರ ಇಟಲಿಯಲ್ಲಿ ಕರು ಮಾಂಸ, ಹಂದಿ ಮಾಂಸ ಮತ್ತು ಕೋಳಿ ಮಾಂಸವನ್ನು ಬಳಸಲಾಗುತ್ತದೆ. ಎರಡನೆಯ ಮಹಾಯುದ್ಧನ ನಂತರ ಗೋಮಾಂಸವು ಜನಪ್ರಿಯವಾಗಿದೆ. ಟಸ್ಕನಿಯಂತಹ ಪ್ರದೇಶಗಳಲ್ಲಿ ಬೇಟೆ ಪ್ರಾಣಿಗಳ ಮಾಂಸವೂ ಉಂಟು. ಸಾಮಾನ್ಯವಾಗಿ, ಮೀನುಗಳನ್ನು ಸ್ಥಳೀಯವಾಗಿ ಹಿಡಿಯಲಾಗುತ್ತದೆ. |
ಕಾಂಟೊರ್ನೊ | ಪಕ್ಕದ ಖಾದ್ಯಗಳು - ಇದು ಸಾಮಾನ್ಯವಾಗಿ ಪಚ್ಚಡಿ ಅಥವಾ ಅಡುಗೆ ಮಾಡಲಾದ ತರಕಾರಿಗಳಾಗಿರಬಹುದು.
ಸಾಂಪ್ರದಾಯಿಕ ಮೆನುವಿನಲ್ಲಿ ಮುಖ್ಯ ಕೋರ್ಸ್ನೊಂದಿಗೆ ಪಚ್ಚಡಿ ಸಹ ಉಂಟು. |
ಫಾರ್ಮ್ಯಾಜಿಯೊ ಎ ಫ್ರೂಟಾ | 'ಗಿಣ್ಣು ಮತ್ತು ಹಣ್ಣುಗಳು' ಭೋಜನಾನಂತರದ ಮೊದಲ ಭಕ್ಷ್ಯ. ಸ್ಥಳೀಯ ಗಿಣ್ಣುಗಳು 'ಆಂಟಿಪಾಸ್ಟೊ ಅಥವಾ ಕಾಂಟರ್ನೊ ದ ಭಾಗವಾಗಿರಬಹುದು. |
ಡೊಲ್ಸ್ | ಕೇಕ್, ಕುಕೀಗಳಂತಹ ಸಿಹಿ ತಿನಿಸುಗಳು |
ಕೆಫೆ | ಕಾಫೀ |
ಡೈಜೆಸ್ಟಿವೊ | 'ಜೀರ್ಣಗೊಳಿಸುವ ಪದಾರ್ಥಗಳು' (ಮದ್ಯಗಳು (ಗ್ರಪ್ಪಾ, ಅಮರೊ, ಲಿಮೊನ್ಸೆಲೊ, ಸಂಬುಕಾ, ನೊಸಿನೊ (ಕೆಲವೊಮ್ಮೆ ಅಮಜಾಕೆಫೆ (ಕಾಫಿ ಕಿಲ್ಲರ್) ಎನ್ನಲಾಗುತ್ತದೆ). |
ಗಮನಿಸಿ: ಭೋಜನಾಮಂದಿರದ ಮೆನುಗಳಲ್ಲಿ, ಈ ಉಕ್ತಿಗಳನ್ನು ಪ್ರೈಮಿ, ಸೆಕೆಂಡಿ, ಕಾಂಟೊರ್ನಿ ಮತ್ತು ಡೈಜಸ್ಟಿವಿ ಎನ್ನಲಾಗಿದೆ.
ಆಹಾರ ಕೇಂದ್ರಗಳು
[ಬದಲಾಯಿಸಿ]ಸ್ಥಾಪಿಸಲಾದ ಆಹಾರ ಕೇಂದ್ರಗಳಲ್ಲಿ ಪ್ರತಿಯೊಂದು ರೀತಿಯದೂ ಒಂದು ಪಾತ್ರ ಗೊತ್ತುಪಡಿಸಿ, ಸಾಂಪ್ರದಾಯಿಕವಾಗಿ ಅದರೊಂದಿಗೇ ಹೊಂದಿಕೊಂಡು ಹೋಗುತ್ತದೆ.[೪೬]
ಕೇಂದ್ರದ ವರ್ಗ | ವಿವರಣೆ |
---|---|
ಅಗ್ರೊಟುರಿಸ್ಮೊ | ಕೆಲಸದ ಹೊಲಗಳು, ಇಲ್ಲಿ ವಾಸಿಸಲು ಸ್ಥಳ ಹಾಗೂ ಭೋಜನಾ ವ್ಯವಸ್ಥೆ ಏರ್ಪಡಿಸಲಾಗಿರುತ್ತದೆ. ಆಗಾಗ್ಗೆ ಅತಿಥಿಗಳಿಗೆ ಮಾತ್ರ ಭೋಜನ ಬಡಿಸುವುದುಂಟು. ಇಂತಹ ಭೋಜನಾ ಕೇಂದ್ರಗಳನ್ನು ಹಸಿರು-ಸ್ವರ್ಣ ವರ್ಣ, ಜೊತೆಗೆ ಕತ್ತಿ ಮತ್ತು ಕವಲುಚಮಚ ಸಂಕೇತದ ಮೂಲಕ ಗುರುತಿಸಬಹುದು.[೪೭] |
ಬಾರ್/ಕೆಫೆ | ಈ ಕೇಂದ್ರಗಳಲ್ಲಿ ಕಾಫಿ, ಪಾನೀಯಗಳು, ಹಣ್ಣಿನ ರಸಗಳು ಹಾಗೂ ಮದ್ಯ ಲಭ್ಯವಿವೆ. ಇವು ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯ ತನಕ ತೆರೆದಿರುತ್ತವೆ. ಆಹಾರಗಳಲ್ಲಿ ಬ್ರಿಯೊಚ್, ಪಾಣಿನಿ, ಟ್ರಾಮೆಜಿನಿ (ಸ್ಯಾಂಡ್ವಿಚ್ಗಳು) ಮತ್ತು ಸ್ಪುಂಟಿನಿ (ಆಲಿವ್ಗಳು, ಆಲೂಗಡ್ಡೆ ಚಿಪ್ಸ್ಗಳು ಹಾಗೂ ಫ್ರಿಟಾಟಾ ಸಣ್ಣ ತುಂಡುಗಳು) ಸೇರಿವೆ.[೪೭] |
ಬಿರೆರಿಯಾ | ಇಟಲಿಯ ಮದ್ಯ ಹಾಗೂ ಉತ್ತರ ಭಾಗಗಳಲ್ಲಿರುವ, ಬಿಯರ್ ಲಭ್ಯವಿರುವ ಕೇಂದ್ರಗಳಿವು.[೪೭] |
ಫ್ರಾಸ್ಕಾ/ಲೊಕಾಂಡಾ | ಫ್ರಿಯುಲಿಯನ್ ವೈನ್ ತಯಾರಿ ಕೇಂದ್ರಗಳು. ಇವು ಸಂಜೆಯ ವೇಳೆ ತೆರೆದು, ವೈನ್ಗಳೊಂದಿಗೆ ಇತರೆ ಆಹಾರವೂ ಇಲ್ಲಿ ಲಭ್ಯ.[೪೭] |
ಆಸ್ಟರಿಯಾ | ಪ್ರದೇಶದ ಸರಳ ಆಹಾರ ಇಲ್ಲಿ ಲಭ್ಯ; ಮೆನು ಕೇವಲ ಮೌಖಿಕವಾಗಿ ಮಾತ್ರ ಲಭ್ಯ. ಇವುಗಳಲ್ಲಿ ಹಲವು ಕೇವಲ ರಾತ್ರಿಯ ವೇಳೆ ತೆರೆದಿರುತ್ತವೆ. ಆದರೆ ಕೆಲವು ಮಧ್ಯಾಹ್ನದ ಭೋಜನದ ವೇಳೆಯಲ್ಲೂ ತೆರೆದಿರುತ್ತವೆ.[೪೮] |
ಪಾನಿನೊಟೆಸಿಯಾ | ಹಗಲಿನ ಹೊತ್ತು ತೆರೆದಿರುವ ಸ್ಯಾಂಡ್ವಿಚ್ ಅಂಗಡಿ.[೪೮] |
ಪಿಜ್ಜೇರಿಯಾ | ಪಿಜ್ಜಾ ಪರಿಣತರು.
ಮರ-ಸುಟ್ಟು ಸುಡಲಾದ ಪಿಜ್ಜಾಗಳು ಇಟಲಿಯಲ್ಲಿ ವಿಶೇಷ.[೪೯] |
ಪೊಲೆಂಟಾರಿಯಾ | ಎಮಿಲಿಯಾ ರೊಮ್ಯಾಗ್ನಾದ ಉತ್ತರದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಪ್ರಾದೇಶಿಕ ಕೇಂದ್ರ.[೫೦] |
ರಿಸ್ಟೊರೆಂಟ್ | ಹೆಚ್ಚು ಉತ್ಕೃಷ್ಟ ಪಾಕಪದ್ಧತಿ ಮತ್ತು ಅಚ್ಚಾಗಿರುವ ಮೆನು ಪುಸ್ತಕ ಇಲ್ಲಿ ಲಭ್ಯ.[೪೯] |
ಸ್ಪಗೆಟೇರಿಯಾ | ನಾಪೊಲಿ ಮೂಲದ ಈ ಕೇಂದ್ರದಲ್ಲಿ ಪಾಸ್ಟಾ ಹಾಗೂ ಇತರೆ ಮುಖ್ಯ ಕೋರ್ಸ್ಗಳು ಲಭ್ಯ.[೫೧] |
ಟವೊಲಾ ಕ್ಯಾಲ್ಡಾ | ಇದರ ಅರ್ಥ 'ಬಿಸಿ ಬಿಸಿ ಖಾದ್ಯಗಳ ಮೇಜು'. ಇಲ್ಲಿ ಮೊದಲೇ ತಯಾರಿಸಲಾದ ಪ್ರಾದೇಶಿಕ ತಿನಿಸುಗಳು ಲಭ್ಯ. ಹಲವು ಬೆಳಿಗ್ಗೆ 11ಕ್ಕೆ ತೆರೆದು ರಾತ್ರಿ ಬಹಳ ತಡವಾಗಿ ಮುಚ್ಚುತ್ತವೆ.[೫೨] |
ಟ್ರಟೊರಿಯಾ | ಪರಿವಾರ-ಚಾಲಿತ ಉಪಾಹಾರ ಕೇಂದ್ರವಿದು. ಕಡಿಮೆ ಬೆಲೆ ಹಾಗೂ ಅನೌಪಚಾರಿಕ ವಾತಾವರಣ ಇಲ್ಲಿನ ವಿಶೇಷ.[೫೩] |
ಪಾನೀಯಗಳು
[ಬದಲಾಯಿಸಿ]ಕಾಫೀ
[ಬದಲಾಯಿಸಿ]ಇಟ್ಯಾಲಿಯನ್ ಶೈಲಿಯಾ ಕೆಫೆ ಎಂಬ ಕಾಫಿಯನ್ನು ಎಸ್ಪ್ರೆಸೊ ಎನ್ನಲಾಗಿದೆ. ಆಗಾಗ್ಗೆ ಬ್ರೆಜಿಲ್ನಿಂದ ತರಿಸಲಾದ ಕಾಫೀ ಬೀಜಗಳನ್ನು ಮಿಶ್ರಿಸಿ ತಯಾರಿಸಲಾಗುತ್ತದೆ. ಉತ್ತರ ಇಟಲಿಯಲ್ಲಿ ಎಸ್ಪ್ರೆಸೊ ಬೀಜಗಳನ್ನು ಮಧ್ಯಮದಿಂದ ಇನ್ನೂ ಕಪ್ಪಗೆ ಸುಡಲಾಗುತ್ತದೆ. ದಕ್ಷಿಣ ಇಟಲಿಯಲ್ಲಿ ಬೀಜಗಳನ್ನು ಇನ್ನೂ ಕಪ್ಪಗೆ ಸುಡಲಾಗುತ್ತದೆ. ಎಲ್ಲಾ ರೀತಿಯ ಕಾಫೀಗಳಿಗಿಂತಲೂ ಎಸ್ಪ್ರೆಸೊದಲ್ಲಿ ಹೆಚ್ಚು ಕೆಫೀನ್ ಇರುತ್ತದೆ ಎಂಬ ಅಭಿಪ್ರಾಯ ತಪ್ಪು. ಇದರ ತದ್ವಿರುದ್ಧ ಹೇಳಿಕೆಯು ಸರಿ. ಬೀಜಗಳನ್ನು ತುಂಬ ಹೊತ್ತು ಸುಟ್ಟಷ್ಟು ಹೆಚ್ಚು ಕೆಫೀನ್ ಲಭ್ಯವಾಗುತ್ತದೆ. ಅಚಿಲ್ ಗಗಿಯಾ ಆಧುನಿಕ ಎಸ್ಪ್ರೆಸೊ ಯಂತ್ರವನ್ನು 1937ರಲ್ಲಿ ಆವಿಷ್ಕರಿಸಿದರು. ಇದರಲ್ಲಿ ಪಂಪ್ ಮತ್ತು ಒತ್ತಡದ ವ್ಯವಸ್ಥೆಯಿದೆ. ಇದರಲ್ಲಿ ನೀರು ಸುಮಾರು 90-95 °C (194-203 °F) ತನಕ ತಪ್ತಗೊಳಿಸಿ, 25-30 ಸೆಕೆಂಡ್ಗಳಲ್ಲಿ ಅತಿ ಹೆಚ್ಚು ಒತ್ತಡದಲ್ಲಿ ಆ ನೀರನ್ನು ಕೆಲವು ಗ್ರ್ಯಾಂಗಳಷ್ಟು ನುಣ್ಣನೆಯ ಕಾಫಿಪುಡಿಯ ಮೂಲಕ ಹಾಯಿಸಲಾಗುತ್ತದೆ. ಇದರ ಫಲವಾಗಿ ಸುಮಾರು 25 ಮಿಲಿಲೀಟರ್ಗಳಷ್ಟು ಕಾಫಿ ಡಿಕಾಕ್ಷನ್ ಲಭ್ಯವಾಗುತ್ತದೆ.[೫೪] ಮನೆಯಲ್ಲಿಯೂ ಸಹ ಇದೇ ರೀತಿ, ಆದರೆ ಇನ್ನೂ ಸರಳ ರೀತಿಯಲ್ಲಿ ಎಸ್ಪ್ರೆಸೊ ತಯಾರಿಸಲಾಗುತ್ತದೆ. ಲಾ ನೆಪೊಲಿಟಾನಾ ಎಂಬುದು ನಾಲ್ಕು ಭಾಗಗಳ ಸ್ಟವ್-ಟಾಪ್ ಘಟಕವಾಗಿದೆ. ಇದರಲ್ಲಿ ಪುಡಿ ಮಾಡಲಾದ ಬೀಜಗಳನ್ನು ಶೋಧಕದೊಳಗೆ ಸಡಿಲವಾಗಿ ಇಡಲಾಗಿದೆ. ಕೆಟ್ಲ್ನಲ್ಲಿ ನೀರು ತುಂಬಿಸಿ ಕುದಿಸಿದ ಕೂಡಲೆ ಈ ಘಟಕವನ್ನು ತಲೆಕೆಳಗು ಮಾಡಲಾಗುತ್ತದೆ. ಆಗ ಆ ನೀರು ಪುಡಿಯ ಮೂಲಕ ತೊಟ್ಟಿಕ್ಕಿ ಡಿಕಾಕ್ಷನ್ ಆಗುವುದು. ಮೊಕಾ ಪರ್ ಇಲ್ ಕೆಫೆ ಎಂಬುದು ಮೂರು ಭಾಗಗಳುಳ್ಳ ಸ್ಟವ್-ಟಾಪ್ ಘಟಕ. ಇದರಲ್ಲಿ ಸಡಿಲವಾಗಿ ಸೇರಿಸಿದ ಕಾಫಿಪುಡಿಯನ್ನು ಶೋಧಕದಲ್ಲಿ ಕೂಡಿಸಲಾಗುತ್ತದೆ. ಅದರ ಕೆಳಭಾಗದಲ್ಲಿ ನೀರು ತುಂಬಿಸಲಾಗುತ್ತದೆ. ಈ ಘಟಕವನ್ನು ಒಲೆಯ ಮೇಲಿಟ್ಟು ಕುದಿಸಿದಾಗ, ಹಬೆಯ ಒತ್ತಡ ಹೆಚ್ಚಾಗಿ, ಕೆಳಭಾಗದಿಂದ ನೀರು ಏರಿ, ಕಾಫಿಪುಡಿಯ ಮೂಲಕ ಹಾದು, ಡಿಕಾಕ್ಷನ್ ರೂಪದಲ್ಲಿ ಮೇಲ್ಭಾಗದಲ್ಲಿ ತುಂಬಿಕೊಳ್ಳುತ್ತದೆ. ಪರ್ಕ್ಯುಲೇಟರ್ಗಿಂತಲೂ ಭಿನ್ನವಾಗಿ ಇದರಲ್ಲಿ ಕಾಫಿ ಪುನಃ ಸಂಚರಿಸುವುದಿಲ್ಲ.[೫೫] ಎಸ್ಪ್ರೆಸೊವನ್ನು ಸಾಮಾನ್ಯವಾಗಿ ಡೆಮಿಟಾಸ್ ಲೋಟದಲ್ಲಿ ನೀಡಲಾಗುತ್ತದೆ. ಕೆಫೆ ಮಚಿಯಾಟೊ ಮೇಲ್ಮೈಯಲ್ಲಿ ಹಬೆಯಾಡಿಸಿದ ಹಾಲನ್ನು ಸುರಿಯಲಾಗುತ್ತದೆ, ಕಡಿಮೆ ನೀರು ಹಾಕಿ ರಿಸ್ಟ್ರೆಟೊ ತಯಾರಿಸಲಾಗುತ್ತದೆ, ಇನ್ನೂ ಕಡಕ್ ಆಗಿರುತ್ತದೆ; ಕ್ಯಾಪುಚಿನೊ ಹಾಲಿನ ಮಿಶ್ರಣ ಹೊಂದಿರುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಗಿನ ಕಾಫಿ ಎನ್ನಲಾಗುತ್ತದೆ. ಕೆಫೆಲ್ಯಾಟೆ ಎಂಬುದು ಎಸ್ಪ್ರೆಸೊ ಹಾಗೂ ಕುದಿಸಿದ ಹಾಲು ಒಂದೇ ಮಟ್ಟದಲ್ಲಿರುತ್ತದೆ. ಇದು ಕೆಫೆ ಆವ್ ಲೇಯ್ಟ್ನ ತರಹವಿರುತ್ತದೆ. ಇದನ್ನು ದೊಡ್ಡ ಲೋಟದಲ್ಲಿ ನೀಡಲಾಗುತ್ತದೆ. ಲ್ಯಾಟೆ ಮಚಯಾಟೊ (ಸ್ಪಾಟೆಡ್ ಮಿಲ್ಕ್) ಎಂಬುದು ಒಂದು ಲೋಟ ಬಿಸಿ ಹಾಲು, ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಕಾಫಿ ಬೆರೆಸಲಾಗುತ್ತದೆ. The Bicerin is also an ಇಟ್ಯಾಲಿಯನ್ coffee, from Turin. It is a mixture of cappucino and traditional hot chocolate, as it consisits of a mix of coffee and drinking chocolate, and with a small addition of milk. It is quite thick, and often whipped cream/foam with chocolate powder and sugar is added on top.
ಆಲ್ಕೊಹಾಲಿಕ್ (ಮದ್ಯಸಾರಿಯ) ಪಾನೀಯಗಳು
[ಬದಲಾಯಿಸಿ]ವೈನ್
[ಬದಲಾಯಿಸಿ]ವಿಶ್ವದಲ್ಲಿಯೇ ಅತಿ ಹೆಚ್ಚು ವೈನ್ ತಯಾರಿಕೆಯು ಇಟಲಿಯಲ್ಲಿ ನಡೆಯುತ್ತದೆ. ವೈನ್ ಈ ದೇಶದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಸೇವಿಸಲಾಗುವುದು ಹಾಗೂ ಈ ದೇಶದಿಂದಲೇ ಅತಿ ಹೆಚ್ಚ ಪ್ರಮಾಣದಲ್ಲಿ ರಫ್ತಾಗುವುದು. ಈ ವೈನ್ ಪೈಕಿ ಕೇವಲ ನಾಲ್ಕನೆಯ ಒಂದು ಭಾಗವನ್ನು ಮಾತ್ರ ಬಾಟಲಿಗಳಲ್ಲಿ ತುಂಬಿ ಚಿಲ್ಲರೆ ಮಾರಾಟ ಮಾಡಲಾಗುತ್ತದೆ. ಮೂರರಲ್ಲಿ ಎರಡು ಭಾಗದಷ್ಟು ವೈನ್ನ್ನು ಮಿಶ್ರಣಕ್ಕಾಗಿ ಫ್ರಾನ್ಸ್ ಹಾಗೂ ಜರ್ಮನಿ ದೇಶಗಳಿಗೆ ಸಗಟು ರಫ್ತು ನಡೆಯುತ್ತದೆ. ಇಟಲಿಯಲ್ಲಿ ಅಸವನ(ಸಂಸ್ಕರಣ) ಮಾಡಲಾದ ವೈನ್ನ ಪ್ರಮಾಣವು ಇಡೀ ನೂತನ ಪ್ರಪಂಚದಲ್ಲಿ ವೈನ್ ಉತ್ಪಾದನಾ ಪ್ರಮಾಣವನ್ನು ಮೀರಿಸುತ್ತದೆ.[೫೬] ಇಲ್ಲಿ ಇಪ್ಪತ್ತು ಪ್ರತ್ಯೇಕ ವೈನ್ ಪ್ರದೇಶಗಳಿವೆ.[೫೭] ಉತ್ಕೃಷ್ಟ ವೈನ್ಗಳನ್ನು ತಯಾರಿಸುವ ಇಟಲಿಯ ಈ ದ್ರಾಕ್ಷಿತೋಟಗಳು, ಇಟ್ಯಾಲಿಯನ್ ವೈನ್ ಎಂದರೆ 'ಹೂಜಿತುಂಬ ವೈನ್' ಎಂಬ ಹಳೆಯ ಕಾಲದ ಧೋರಣೆಯನ್ನು ಬದಲಿಸಲು ಯತ್ನಿಸುತ್ತಿವೆ. ದ್ರಾಕ್ಷಿಯ ಮೂಲ, ಗುಣಮಟ್ಟ, ಬೆಳೆಸುವಿಕೆಯ ವಿಧಾನ ಮತ್ತು ದ್ರಾಕ್ಷಿಯ ಮಾದರಿಯನ್ನು ನಿಯಂತ್ರಿಸಿ, ಉತ್ತೇಜಿಸಲು, ಇಟ್ಯಾಲಿಯನ್ ಸರ್ಕಾರವು 1963ರಲ್ಲಿ Denominazione di origine controllata (DOC) ಕಾನೂನನ್ನು ಹೊರಡಿಸಿತು. ವೈನ್ ತಯಾರಕರು DOC ದರ್ಜೆಗೆ ಬಡ್ತಿ ಪಡೆಯುವಂತೆ ನೆರವಾಗಲು, Indicazione Geografica Tipica (IGT) ಎಂಬುದು ಕಡಿಮೆ ನಿರ್ಬಂಧಗಳುಳ್ಳ 'ಹುದ್ದೆ'ಯಾಗಿದೆ. ಇಸವಿ 1980ರಲ್ಲಿ ಸರ್ಕಾರವು, ಕೇವಲ ಅತ್ಯುತ್ತಮ, ಶ್ರೇಷ್ಠ ವೈನ್ಗಳಿಗಾಗಿ ಮೀಸಲಾದ ದರ್ಜೆ Denominazione di origine controllata e garantita (DOCG) ಅನ್ನು ಸೃಷ್ಟಿಸಿತು.[೫೮]
ಬಿಯರ್
[ಬದಲಾಯಿಸಿ]ಇಟಲಿಯಲ್ಲಿ ವಿವಿಧ ರೀತಿಯ ಬಿಯರ್ಗಳು ಲಭ್ಯ. ಇವು ಸಾಮಾನ್ಯವಾಗಿ ತಿಳಿ ಲಾಗರ್ ಆಗಿರುತ್ತವೆ. ಬಿಯರ್ ವೈನ್ನಷ್ಟು ವ್ಯಾಪಕ ಜನಪ್ರಿಯತೆ ಗಳಿಸಿಲ್ಲ. ಇತ್ತೀಚೆಗಿನ ದಿನಗಳಲ್ಲಿ ಬಿಯರ್ನ ಜನಪ್ರಿಯತೆ ಹೆಚ್ಚಾಗುತ್ತಿದೆ. ಆದರೂ, ಯುನೈಟೆಡ್ ಕಿಂಗ್ಡಮ್, ಜರ್ಮನಿ ಹಾಗೂ ಆಸ್ಟ್ರಿಯಾ ಸೇರಿದಂತೆ ಇತರೆ ಯುರೋಪಿಯನ್ ರಾಷ್ಟ್ರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಬಿಯರ್ನ ಸರಾಸರಿ ಸೇವನೆ ಕಡಿಮೆ. ಪೆರೊನಿ ಮತ್ತು ಮೊರೆಟ್ಟಿ ಅತಿ ಪ್ರಸಿದ್ಧ ಇಟ್ಯಾಲಿಯನ್ ಬಟ್ಟಿ-ಕೇಂದ್ರಗಳಾಗಿವೆ. ಇವನ್ನು ಹೊರತುಪಡಿಸಿ ಇನ್ನಷ್ಟು ಜನಪ್ರಿಯ ಬಟ್ಟಿ-ಮನೆಗಳಿವೆ. ಇಟಲಿಯಲ್ಲಿ ಬಿಯರ್ನ್ನು ಪಿಜ್ಜೇರಿಯಾಗಳು ಹಾಗೂ ಆಲ್ಟೊ ಅಡಿಗ್/ದಕ್ಷಿಣ ಟಿರೊಲ್ (ಇದು ಮುಂಚೆ ಆಸ್ಟ್ರಿಯಾದ ಭಾಗವಾಗಿತ್ತು. ಆ ದೇಶದ ಟಿರೊಲ್ನಲ್ಲೇ ಬಿಯರ್ ಅತಿ ಹೆಚ್ಚು ಪ್ರಮಾಣದಲ್ಲಿ ಸೇವನೆಯಾಗುವುದು).
ಮಿಸ್ಕಲೆನಿಯಾ
[ಬದಲಾಯಿಸಿ]ಇಟಲಿಯಲ್ಲಿ ಇನ್ನು ಹಲವು ಜನಪ್ರಿಯ ಮದ್ಯಗಳಿವೆ. ಲಿಮೊನ್ಸೆಲೊ ಎಂಬುದು ಸಾಂಪ್ರದಾಯಿಕ ನಿಂಬೆಹಣ್ಣು ರಸದ ತೀಕ್ಷ್ಣ-ಸಿಹಿ ಮದ್ಯ. ಇದು ಸಿಸಿಲಿ ಮತ್ತು ದಕ್ಷಿಣ ಇಟಲಿಯ (ಸೊರೆಂಟೊ, ಅಮಾಲ್ಫಿ ಹಾಗೂ ನ್ಯಾಪಲ್ಸ್ ಕೊಲ್ಲಿಯಲ್ಲಿ ತಯಾರಾಗುವ ಮದ್ಯ. ಇದು ಸರ್ವೇಸಾಮಾನ್ಯ ಮಾದರಿಯ ಮದ್ಯ. ನಿಂಬೆಹಣ್ಣಿನಿಂದ ಮಾಡಲಾದ ಈ ಮದ್ಯವು ಅತಿ ಕಡುವಾಗಿದ್ದು, ಬಹಳ ಕಡಿಮೆ ಪ್ರಮಾಣಗಳಲ್ಲಿ, ಸಣ್ಣ ಲೋಟಗಳಲ್ಲಿ ಸೇವಿಸಲಾಗುತ್ತದೆ. ಅಮಾರೊ ಸಿಸಿಲಿಯನೊಗಳು ಎಂಬುದು, ಗಿಡಮೂಲಿಕೆಗಳಿಂದ ತಯಾರಿಸಲಾಗುವ ಸಾಮಾನ್ಯ ಸಿಸಿಲಿಯನ್ ಜೀರ್ಣಗೊಳಿಸುವ ದ್ರವ. ಭಾರೀ ಭೋಜನಗಳ ನಂತರ ಇದನ್ನು ಸೇವಿಸಲಾಗುತ್ತದೆ. Grappa ಉತ್ತರ ಇಟಲಿಯ ಮಾದರಿ ಮದ್ಯ. ಇದು ಆಲ್ಪ್ಸ್ ಮತ್ತು ಪೊ ಕಣಿವೆಯ ಸಂಸ್ಕೃತಿಗಳೊಂದಿಗೆ ಹೊಂದಿಕೊಳ್ಳುವಂತಹ ಮದ್ಯವಾಗಿದೆ. ಖ್ಯಾತ ಗ್ರಪ್ಪಾಗಳನ್ನು ವೆನೆಟೊ, ಪಿಯೆಡ್ಮಾಂಟ್ ಹಾಗೂ ಟ್ರೆಂಟಿನೊದಲ್ಲಿ ಆಸವನ ಮಾಡಲಾಗುತ್ತದೆ. ಮಾರ್ಟಿನಿ, ವರ್ಮೌತ್ ಮತ್ತು ಕ್ಯಾಂಪಾರಿ ಮೂರು ಪ್ರಸಿದ್ಧ ಇಟ್ಯಾಲಿಯನ್ ಹಸಿವುಕಾರಿ ಮದ್ಯಗಳು. ಫ್ರೆಂಚ್ ಷ್ಯಾಂಪೇನ್ನ ಬದಲಿಯಾಗಿ ಸೇವಿಸಲಾದ, ಅಂತರರಾಷ್ಟ್ರೀಯ ಜನಪ್ರಿಯತೆ ಗಳಿಸಿರುವ ಪ್ರೊಸೆಕೊ ಎಂಬುದು ವೆನೆಟೊ ಪ್ರದೇಶದ ಹೊಳಪಿನ ಮದ್ಯ.[೫೯][೬೦]
ರಜಾದಿನಗಳ ಪಾಕಪದ್ಧತಿ
[ಬದಲಾಯಿಸಿ]ಪ್ರತಿಯೊಂದು ಪ್ರದೇಶವೂ ತನ್ನದೇ ಆದ ರಜಾದಿನದ ಪಾಕವಿಧಾನಗಳಿವೆ. ಮಧ್ಯ ಯುಗದಲ್ಲಿ ಸಿಸಿಲಿಯಲ್ಲಿ ಕ್ಷಾಮವನ್ನು ತಡೆದುದಕ್ಕೆ, ಸಿಸಿಲಿಯನ್ನರು ಪ್ರತಿ 19 ಮಾರ್ಚ್ರಂದು La Festa di San Giuseppe (ಸಂತ ಜೋಸೆಫರ ದಿನಾಚರಣೆ) ಸಂತ ಜೋಸೆಫ್ರಿಗೆ ವಂದನೆ ಸಲ್ಲಿಸುವರು. ಫಾವಾ ಬೀಜವು ಜನತೆಯನ್ನು ಮಹಾಕ್ಷಾಮದಿಂದ ಕಾಪಾಡಿದ್ದಕ್ಕೆ, ಸಂತ ಜೋಸೆಫ್ರ ದಿನಾಚರಣೆಯ ಪೂಜಾವೇದಿಕೆ ಮತ್ತು ಸಂಪ್ರದಾಯಗಳ ಅವಿಭಾಜ್ಯ ಅಂಗವಾಗಿದೆ. ಈ ಹಬ್ಬಕ್ಕೆ ಸಂಬಂಧಿತ ಇತರೆ ಪದ್ಧತಿಗಳ ಪೈಕಿ ಕೆಂಪುವಸ್ತ್ರ ಧಾರಣೆ, ಝೆಪೊಲೆ ಎಂಬ ಸಿಸಿಲಿಯನ್ ಪ್ಯಾಸ್ಟ್ರಿ ಸೇವನೆ ಹಾಗೂ ಬಡವರಿಗೆ ಆಹಾರ ದಾನವು ಅತಿ ಪ್ರಮುಖ. ಈಸ್ಟರ್ ರವಿವಾರದಂದು ವೀರ್ಯಗುಂದಿಸಿದ ಕುರಿಯ ಮಾಂಸವನ್ನು ಇಟಲಿಯಾದ್ಯಂತ ಸೇವಿಸಲಾಗುತ್ತದೆ. ಉಂಬ್ರಿಯಾ ಮತ್ತು ಟಸ್ಕನಿಯಲ್ಲಿ ಮಾದರಿಯ ಈಸ್ಟರ್ ತಿಂಡಿಯಲ್ಲಿ ಸಲಾಮಿ, ಕುದಿಸಲಾದ ಮೊಟ್ಟೆಗಳು, ವೈನ್, ಈಸ್ಟರ್ ಕೇಕ್ಗಳು ಮತ್ತು ಪಿಜ್ಜಾ ಸೇರಿವೆ. ಕೊಲಂಬಾ ಪಾಸ್ಕ್ವೆಲ್ ಎಂಬುದು ಈಸ್ಟರ್ ದಿನಕ್ಕಾಗಿ ತಯಾರಿಸಲಾದ ಸಾಮಾನ್ಯ ಕೇಕ್. ಇದಕ್ಕೆ ಅಕ್ಷರಶಃ ಈಸ್ಟರ್ ಡವ್ ಎನ್ನಲಾಗಿದೆ. ವಿದೇಶದಲ್ಲಿ ಇದನ್ನು 'ಇಟ್ಯಾಲಿಯನ್ ಈಸ್ಟರ್ ಕೇಕ್' ಎನ್ನಲಾಗಿದೆ. ಇದು ಪಾರಿವಾಳವೊಂದನ್ನು ನಿರೂಪಿಸುವುದಾಗಿದೆ. ಇದರ ಮೇಲೆ ಬಾದಾಮ್ ಮತ್ತು ಮುತ್ತಿನ ಸಕ್ಕರೆ ಸೇರಿಸಲಾಗಿದೆ. ಕ್ರಿಸ್ಮಸ್ ಪೂರ್ವದಿನ ಸಾಂಕೇತಿಕ ಉಪವಾಸ ಕೈಗೊಳ್ಳಲಾಗಿದೆ. ಆ ರಾತ್ರಿ, ಸೆನಾ ಡಿ ಮ್ಯಾಗ್ರೊ ಎಂಬ ಮಾಂಸರಹಿತ ರಾತ್ರಿಯ ಲಘು ಭೋಜನ ಸೇವಿಸಲಾಗುವುದು. ಕ್ರಿಸ್ಮಸ್ ದಿನದಂದು, ಇಟ್ಯಾಲಿಯನ್ನರು ಆಗಾಗ್ಗೆ ಟೊರ್ಟೆಲಿನಿ ಮೊದಲ ಕೋರ್ಸ್ ರೂಪದಲ್ಲಿ ಬಡಿಸುವುದುಂಟು. ಪ್ಯಾನೆಟೊನ್ ಮತ್ತು ಪ್ಯಾಂಡೊರೊ ಕ್ರಿಸ್ಮಸ್ ಕಾಲದ ಮಾದರಿ ಕೇಕ್ಗಳಾಗಿವೆ.
ಭೋಜನದ ಅಂಶಗಳು
[ಬದಲಾಯಿಸಿ]ಬೆಳಗಿನ ಉಪಾಹಾರ (ತಿಂಡಿ)
[ಬದಲಾಯಿಸಿ]ಬೆಳಗಿನ ತಿಂಡಿ ಅಥವಾ colazione ಮೊದಲ ಇಟ್ಯಾಲಿಯನ್ ಭೋಜನವಾಗಿದೆ. ಸಾಂಪ್ರದಾಯಿಕ ಇಟ್ಯಾಲಿಯನ್ ಉಪಾಹಾರಗಳು ಲಘು-ಉಪಾಹಾರ ಶೈಲಿಯದ್ದಾವಿಬೆ.ಇವು ಫ್ರಾನ್ಸ್, ಗ್ರೀಸ್ ಅಥವಾ ಸ್ಪೇಯ್ನ್ ದೇಶಗಳ ಶೈಲಿಗಳನ್ನು ಹೋಲುತ್ತವೆ. ಸರಳವಾಗಿ ಹೇಳುವುದಾದರೆ, ಇಟಲಿಯ ಸಾಂಪ್ರದಾಯಿಕ ಬೆಳಗಿನ ತಿಂಡಿಯು ಕೆಫೆ ಎ ಲ್ಯಾಟೆ (ಹಾಲಿನೊಂದಿಗಿನ ಬಿಸಿ ಕಾಫಿ) ಅಥವಾ ಬ್ರೆಡ್ ಅಥವಾ ರೊಲ್ಸ್, ಬೆಣ್ಣೆ ಹಾಗೂ ಜ್ಯಾಮ್ನೊಂದಿಗೆ ಸೇವಿಸಲಾಗುತ್ತದೆ. ಇದಕ್ಕೆ ಪ್ರೈಮಾ ಕೊಲಾಜಿಯೊನ್ ಅಥವಾ ಸರಳವಾಗಿ ಕೊಲಾಜಿಯೊನ್ ಎನ್ನಲಾಗುತ್ತದೆ. ಸಾಮಾನ್ಯವಾಗಿ, Fette biscottate (ಕುಕಿಯಂತಹ ಗಟ್ಟಿಯಾದ ಬ್ರೆಡ್ - ಆಗಾಗ್ಗೆ ಬೆಣ್ಣೆ ಮತ್ತು ಜ್ಯಾಮ್ನೊಂದಿಗೆ) ಹಾಗೂ ಬಿಸ್ಕೊಟಿಗಳನ್ನು (ಕುಕೀಗಳು) ತಿನ್ನಲಾಗುತ್ತದೆ. ಮಕ್ಕಳು ಚಾಕಲೇಟ್ ಪಾನೀಯಗಳು, ಸಾದಾ ಹಾಲು, ಅಥವಾ ಅತ್ಯಲ್ಪ ಪ್ರಮಾಣದ ಪಾಫಿ ಬೆರೆಸಿದ ಹಾಲನ್ನು ಕುಡಿಯುವರು. ಕಾಫಿ ಕೇಂದ್ರದಲ್ಲಿ (ಬಾರ್ ) ತಿಂಡಿ ತಿನ್ನಲಾದಲ್ಲಿ, ಇದರಲ್ಲಿ ಕ್ಯಾಪುಚಿನೊ ಎ ಕಾರ್ನೆಟೊ (ನೊರೆಯುಳ್ಳ ಹಾಲಿನೊಂದಿಗೆ ಕಾಫಿ ಮತ್ತು ಪ್ಯಾಸ್ಟ್ರಿ) ಅಥವಾ ಎಸ್ಪ್ರೆಸೊ ಮತ್ತು ಪ್ಯಾಸ್ಟ್ರಿ) ಒಳಗೊಂಡಿರುತ್ತದೆ. ಇತರೆ ಉತ್ಪನ್ನಗಳ ಪೈಕಿ ತಿಂಡಿಯ ಎಕದಳ-ಧಾನ್ಯ-ಅಧಾರಿತ ಆಹಾರಗಳು, ಹಣ್ಣುಮರಬ್ಬ (ಸಕ್ಕರೆ ಪಾಕದಲ್ಲಿ ಊರಿಟ್ಟ ಹಣ್ಣು (ಮ್ಯಾಸಿಡೊನಿಯಾ ), [[ಮ್ಯೂಸ್ಲಿ (ತಿರುವಿದ ಬೇಳೆಗಳು, ಒಣಹಣ್ಣು, ಗೋಡಂಬಿ, ಜೇನುತುಪ್ಪ, ಮೊದಲಾದವುಗಳನ್ನು ಹಾಕಿ ಮಾಡಿದ, ಬೆಳಗಿನ ತಿಂಡಿಯ ಒಂದು ಖಾದ್ಯ)]] ಹಾಗೂ ಮೊಸರು ಈ ಭೋಜನದ ಸಾಮಾನ್ಯ ಅಂಶವಾಗುತ್ತಿದೆ. ಸಾಮಾನ್ಯವಾಗಿ ಮಧ್ಯ ಅಥವಾ ದಕ್ಷಿಣ ಇಟ್ಯಾಲಿಯನ್ನರು ಬೆಳಗಿನ ಹೊತ್ತು ಲಘು ಉಪಾಹಾರ (ಮಾದರಿಯಾಗಿ ಪಾನಿನೊ ಅಥವಾ ಸುತ್ತಿದ ಬ್ರೆಡ್) ಸೇವಿಸುವುದು ಬಹಳ ಸಾಮಾನ್ಯವಾಗಿದೆ. ಸಿಸಿಲಿಯಲ್ಲಿ, ಆಗೊಮ್ಮೆ-ಈಗೊಮ್ಮೆ, ಹಬ್ಬದ ದಿನಗಳು ಅಥವಾ ರವಿವಾರಗಳಂದು, ಜನರು ಇಬ್ಬನಿಯಷ್ಟು ತಣ್ಣನೆಯ ಬ್ರಿಯೊಚ್ನೊಂದಿಗಿನ ಗ್ರ್ಯಾನಿಟಾ ಅಥವಾ ಪ್ಯಾಸ್ಟ್ರಿ ಸೇವಿಸುವರು.
ಮಧ್ಯಾಹ್ನದ ಭೋಜನೆ
[ಬದಲಾಯಿಸಿ]ಪ್ರ್ಯಾಂಜೊ ಅಥವಾ ಮಧ್ಯಾಹ್ನದ ಭೋಜನವು ಸಮೃದ್ಧ ಮತ್ತು ಅತಿ ಮುಖ್ಯ ಇಟ್ಯಾಲಿಯನ್ ಭೋಜನವಾಗಿದೆ. ಇಟಲಿಯಲ್ಲಿ ಮಧ್ಯಾಹ್ನದ ಭೋಜನದ ಸಮಯವು 12 ಗಂಟೆಯಿಂದ 2 ಗಂಟೆಯ ಅವಧಿಯಲ್ಲಿ ಎಂದಾದರೂ ಸೇವಿಸಬಹುದು. ದಕ್ಷಿಣ ಇಟ್ಯಾಲಿಯನ್ ಜನರು ಸಾಮಾನ್ಯವಾಗಿ ಭೋಜನವನ್ನು ತಡವಾಗಿ, ಅಂದರೆ ಮಧ್ಯಾಹ್ನ 1.15ರಿಂದ 2.15ರ ತನಕ ಸೇವಿಸುವರು. ದೀರ್ಘಾವಧಿಯ ಭೋಜನಗಳು ಸಾಂಪ್ರದಾಯಿಕ ಮಧ್ಯಾಹ್ನದ ಭೋಜನಗಳಾಗಿವೆ. ಇದರಲ್ಲಿ ಸಾಮಾನ್ಯವಾಗಿ ಹಸಿವುಕಾರಿ ಪದಾರ್ಥಗಳೂ (ಆಂಟಿಪ್ಯಾಸ್ಟೊ - ಭೋಜನಗಳಿಗೆ ಮುಂಚೆ) ಸೇರಿರುತ್ತವೆ. ಇದು ಸಾಮಾನ್ಯವಾಗಿ ತಣ್ಣನೆಯ ಮಾಂಸಗಳು (affettati ) ಮತ್ತು ಹಂದಿ ತೊಡೆ ಮಾಂಸಗಳು, ಗಿಣ್ಣು, ಬ್ರಷೆಟ್ ಮತ್ತು ಸಣ್ಣ ಸ್ಯಾಂಡ್ವಿಚ್ಗಳು, ಆಲಿವ್ಗಳು ಅಥವಾ ಸಾಸ್ನಲ್ಲಿ ಅದ್ದಬಹುದಾದ ಪದಾರ್ಥಗಳನ್ನು ಹೊಂದಿವೆ. ಇದಲ್ಲದೆ, ಪ್ರೈಮೊ [೬೧] ಅಥವಾ ಮೊದಲ ಕೋರ್ಸ್ ಭಕ್ಷ್ಯವುಂಟು. ಇದರಲ್ಲಿ ಸಾಮಾನ್ಯವಾಗಿ ಪಾಸ್ಟಾ ಅಥವಾ ಶಾವಿಗೆ, ಸೂಪ್, ಕ್ರಿಪ್, ರವಿಯೊಲಿ, ರಿಸೊಟ್ಟೊ ಮುಂತಾದ ಮಾಂಸವಿಲ್ಲದ ಬಿಸಿ ಭಕ್ಷ್ಯಗಳುಂಟು. ನಂತರ ಎರಡನೆಯ ಕೋರ್ಸ್ ಅಥವಾ ಸೆಕೆಂಡೊ ದಲ್ಲಿ ಮಾಂಸ ಅಥವಾ ಮೀನು ಬಡಿಸಲಾಗುತ್ತದೆ. ಇದಾದ ನಂತರ ಭೋಜನಾನಂತರದ ಭಕ್ಷ್ಯಗಳು (ಡಾಲ್ಸ್ ) [೬೧] ಮತ್ತು ಹಣ್ಣುಗಳು - ಇವನ್ನು ಕೆಲವೊಮ್ಮೆ ಬೀಜಗಳು ಮತ್ತು ಪಿಸ್ಟಾ ಬೀಜದ ಬಣ್ಣ. ಇಂದು, ಸಮಯದ ಅಭಾವವಿರುವುದರಿಂದ, ಇಟ್ಯಾಲಿಯನ್ ಭೋಜನಗಳು ಅಲ್ಪಾವಧಿಯದ್ದಾಗಿವೆ. ಆದರೂ, ಇಟ್ಯಾಲಿಯನ್ನರು ಸಮೃದ್ಧ ಭೋಜನವನ್ನು ಆನಂದಿಸುವರು ಹಾಗೂ ಕುಟುಂಬಗಳು ರವಿವಾರಗಳಂದು ಭಾರೀ ಭೋಜನ ಮಾಡುವುದುಂಟು. ಮದ್ಯಾಹ್ನದ ಭೋಜನಾ ವಿರಾಮದಲ್ಲಿ ಶಾಲಾ ಮಕ್ಕಳು ಮನೆಗೆ ಹೋಗಿ ಊಟ ಮಾಡಿ ಬರಲು ಅವಕಾಶವಿದೆ; ಅಥವಾ ಕೆಫೆಟೆರಿಯಾ/ಕ್ಯಾನ್ಟೀನ್ನಲ್ಲಿ ಊಟ ಮಾಡಬಹುದು. ಭೋಜನಾ ವಿರಾಮದ ವೇಳೆ (12.00ರಿಂದ 14.00 ಗಂಟೆಯ ವರೆಗೆ) ಹಲವು ಅಂಗಡಿಗಳು pausa ಗಾಗಿ ಬಾಗಿಲು ಮುಚ್ಚುತ್ತವೆ.
ಮಧ್ಯಾಹ್ನದ ಲಘು ಉಪಾಹಾರ
[ಬದಲಾಯಿಸಿ]ಹಲವು ಇಟ್ಯಾಲಿನ್ನರು, ಮುಖ್ಯವಾಗಿ ಮಕ್ಕಳು, ದಿನದ ತರಗತಿಗಳು ಮುಗಿದ ನಂತರ ಮಧ್ಯಾಹ್ನದ ಲಘು ಉಪಾಹಾರ ಅಥವಾ ಮಿರಿಂಡಾ ಸೇವಿಸುವರು. ಇದರ ಸಮಯ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆಯ ವರೆಗೆ. ಈ ಸಮಯದಲ್ಲಿ ಏನು ಬೇಕಾದರೂ ತಿನ್ನಬಹುದು-ಹಣ್ಣು, ಮೊಸರು, ಐಸ್ ಕ್ರೀಮ್, ಬೀಜಗಳು, ಬ್ರಿಯಾಷ್, ಕುಕ್ಕಿಗಳು, ಬಿಸ್ಕಟ್ಗಳು, ಕೇಕ್, ಒಣ ದ್ರಾಕ್ಷಿಗಳು ಅಥವಾ ಮೂಸ್.
ರಾತ್ರಿಯ ಭೋಜನ
[ಬದಲಾಯಿಸಿ]ಇಟ್ಯಾಲಿಯನ್ ರಾತ್ರಿಯ ಭೋಜನೆಯ ವ್ಯಂಜನಗಳು ಮಧ್ಯಾಹ್ನದ ಭೋಜನೆಯ ಅಂಶಗಳಂತೆಯೇ ಇವೆ. ಆದರೆ ಇಟ್ಯಾಲಿಯನ್ನರು ರಾತ್ರಿಯ ಹೊತ್ತು ಸ್ವಲ್ಪ ಹಗುರ ಭೋಜನೆ ಸೇವಿಸುವರು. ಇದು ಸಾಮಾನ್ಯವಾಗಿ ಹಣ್ಣು ಅಥವಾ ತರಕಾರಿ ಪಚಡಿ, ಸೂಪ್, ರಿಸೊಟೊ ಅಥವಾ ಮಧ್ಯಾಹ್ನದ ಭೋಜನಾ ಸಮಯದಲ್ಲಿ ಉಳಿದುಹೋದ ಭಕ್ಷ್ಯಗಳನ್ನೆ ಸೇವಿಸುವಂತಹದಾಗಿದೆ. ರಾತ್ರಿಯ ಭೋಜನಕ್ಕೆ ಇಟ್ಯಾಲಿಯನ್ನಲ್ಲಿ ಸೆನಾ ಎನ್ನಲಾಗಿದೆ. ಬ್ರಿಟಿಷ್ ದ್ವೀಪಗಳಿಗಿಂಗಲೂ ತಡವಾಗಿ ರಾತ್ರಿಯ ಭೋಜನ ಮಾಡುವರು. ಫ್ರಾನ್ಸ್ ಅಥವಾ ಸ್ಪೇನ್ನಲ್ಲಿ ಹೆಚ್ಚು ಕಡಿಮೆ ಅದೇ ವೇಳೆಯಲ್ಲಿ ಭೋಜನ ಸೇವಿಸುವರು. ಇದರ ಸಾಮಾನ್ಯ ಸಮಯ 7.30ರಿಂದ 9.30ರ ತನಕ.
ವಿದೇಶಗಳಲ್ಲಿ ಇಟ್ಯಾಲಿಯನ್ ಪಾಕಪದ್ಧತಿ
[ಬದಲಾಯಿಸಿ]ಯುರೋಪ್
[ಬದಲಾಯಿಸಿ]ಗ್ರೇಟ್ ಬ್ರಿಟನ್
[ಬದಲಾಯಿಸಿ]ಬ್ರಿಟಿಷ್, ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್ ಪಾಕಪದ್ದತಿಯಲ್ಲಿ, ಶಾವಿಗೆ ಬೊಲೊಗ್ನೀಸ್ನಂತಹ ಪಿಜ್ಜಾ ಮತ್ತು ಪಾಸ್ಟಾ ಭಕ್ಷ್ಯಗಳು ಹಾಗೂ ಬೊಲೊಗ್ನೀಸ್ ರಾಗು ಒಂದಿಗೆ ಲಸಾಂಜ, ಬೆಚಮೆಲ್ ಸಾಸ್, ಅತಿ ಜನಪ್ರಿಯ ಇಟ್ಯಾಲಿಯನ್ ಆಹಾರಗಳಾಗಿವೆ.
USA ಮತ್ತು ಕೆನಡಾ
[ಬದಲಾಯಿಸಿ]ಇಟ್ಯಾಲಿಯನ್-ಅಮೆರಿಕನ್ ಪಾಕಪದ್ಧತಿಯಲ್ಲಿ ಬಹಳಷ್ಟು ಕ್ಯಾಂಪನಿಯಾ ಮತ್ತು ಸಿಸಿಲಿಯ ಶೈಲಿಯನ್ನು ಆಧರಿಸಿದೆ. ಆಹಾರ ತಯಾರಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಲಭ್ಯವಿರುವ ಪದಾರ್ಥಗಳು ಹಾಗೂ ಹವಾಗುಣಗಳಿಗೆ ಅನುಗುಣವಾಗಿ ಬಹಳಷ್ಟು ಮಟ್ಟಿಗೆ ಅಮೆರಿಕೀಕರಣಗೊಳಿಸಲಾಗಿದೆ. ವಿಶ್ವಾದ್ಯಂತ ತಿನ್ನಲಾದ ಪಿಜ್ಜಾಗಳಲ್ಲಿ ಬಹಳಷ್ಟು ನಿಯಪೊಲಿಟನ್ ಶೈಲಿಯನ್ನು ಆಧರಿಸಿದೆ. ಆದರೂ ಪ್ರಮಾಣದ ವಿಚಾರದಲ್ಲಿ ಇನ್ನಷ್ಟು ದಪ್ಪವಿದ್ದು, ಅದಕ್ಕೆ ವಿವಿಧ ತರಕಾರಿ-ಗಿಣ್ಣುಗಳನ್ನು ಸೇರಿಸಲಾಗಿತ್ತದೆ. ಇಟ್ಯಾಲಿಯನ್ ಆಧಾರದ ಅಮೆರಿಕನ್ ಅಥವಾ ಕೆನಡಿಯನ್ ಭಕ್ಷ್ಯಗಳಲ್ಲಿ ಶಿಕಾಗೊ-ಶೈಲಿಯ ಪಿಜ್ಜಾಗಳು ಅಥವಾ Fettuccine alfredo ಸೇರಿವೆ.
ದಕ್ಷಿಣ ಅಮೆರಿಕಾ
[ಬದಲಾಯಿಸಿ]ಬ್ರೆಜಿಲ್
[ಬದಲಾಯಿಸಿ]1900ರ ದಶಕದ ಮೊದಲಾರ್ಧದಲ್ಲಿ ಬಹಳಷ್ಟು ಇಟ್ಯಾಲಿಯನ್ನರು ಬ್ರೆಜಿಲ್ ದೇಶಕ್ಕೆ ವಲಸೆ ಹೋಗಿದ್ದ ಕಾರಣ, ಬ್ರೆಜಿಲ್ನಲ್ಲಿ ಇಟ್ಯಾಲಿಯನ್ ಪಾಕಪದ್ಧತಿಯು ಬಹಳ ಜನಪ್ರಿಯ. ಬ್ರೆಜಿಲ್ನ ಪ್ರಮುಖ ನಗರಗಳಾದ ಸಾವೊ ಪಾಲೊ ಮತ್ತು ರಿಯೊ ಡಿ ಜನೇರೋದಲ್ಲಿ ಪಿಜ್ಜಾ ಹಾಗೂ ಅದೇ ರೀತಿಯ ಭಕ್ಷ್ಯಗಳು ಜನಪ್ರಿಯವಾಗಿವೆ.
ಅರ್ಜೆಂಟೀನಾ
[ಬದಲಾಯಿಸಿ]ಬಹಳಷ್ಟು ಇಟ್ಯಾಲಿಯನ್ನರು ಅರ್ಜೆಂಟೀನಾಗೆ ವಲಸೆ ಹೋದ ಕಾರಣ, ಇಟ್ಯಾಲಿಯನ್ ಅಹಾರ ಮತ್ತು ಪಾನೀಯಗಳು ಅರ್ಜೆಂಟೀನ್ ಪಾಕಪದ್ಧತಿಯಲ್ಲಿ ಗಮನಾರ್ಹವಾಗಿ ಕಾಣಿಸಿಕೊಂಡಿವೆ. ಇದಕ್ಕೆ ಸೂಕ್ತ ಉದಾಹರಣೆ ಮಿಲ್ಯಾನೆಸಾಗಳು ಅಥವಾ ಬ್ರೆಡ್ ಆಕಾರಕ್ಕೆ ಹೊಂದಿಸಲಾದ ಮಾಂಸಗಳೂ (ಈ ಹೆಸರು ಮೂಲತಃ ಇಟಲಿಯ ಮಿಲ್ಯಾನ್ ನಗರದ cotoletta alla milanese ಆಧರಿಸಿದೆ. ಸ್ಥಳೀಯವಾಗಿ ಪಿಸಾ ಅಥವಾ ಪಿಟ್ಸಾ ಎನ್ನಲಾದ ಪಿಜ್ಜಾವನ್ನು ಇಡಿಯಾಗಿ ತನ್ನ ಅರ್ಜೆಂಟೀನ್ ರೂಪಕ್ಕೆ ಅಂತರ್ಗತಗೊಳಿಸಲಾಗಿದೆ. ಇದು ತನ್ನ ಇಟ್ಯಾಲಿಯನ್ ಪೂರ್ವವರ್ತಿ ಪಿಜ್ಜಾ ಬದಲಿಗೆ ಇಟ್ಯಾಲಿಯನ್ ಕ್ಯಾಲ್ಜೋನ್ನ್ನು ಹೋಲುತ್ತದೆ. ಇನ್ನು ಹಲವು ಇಟ್ಯಾಲಿಯನ್-ಅರ್ಜೆಂಟೀನ್ ಭಕ್ಷ್ಯಗಳಿವೆ, ಉದಾಹರಣೆಗೆ ಸೊರೆಂಟಿನೊಗಳು ಮತ್ತು ಅರ್ಜೆಂಟೀನ್ ನಾಕಿ.
ವೆನಿಜುಯೆಲಾ
[ಬದಲಾಯಿಸಿ]ವೆನಿಜುಯೆಲಾ ಪಾಕಪದ್ಧತಿಯಲ್ಲಿ ಇಟ್ಯಾಲಿಯನ್ ಪ್ರಭಾವವು ಗಮನಾರ್ಹ ಪ್ರಮಾಣದಲ್ಲಿದೆ. ಪಾನ್ ಚಬಾತಾ ಅಥವಾ ವೆನಿಜುಯೆಲನ್ ಚಿಯಾಬಟಾ, ಪಾನ್ ಸಿಸಿಲಿಯೆನೊ , ಸಿಸಿಲಿಯನ್ ಬ್ರೆಡ್, ಕೆನೊಲಿ ಸಿಸಿಲಿಯೆನೊ , ಸಿಸಿಲಿಯನ್ ಕೆನೊಲಿ ಹಾಗೂ ಚಿನೊಟೊ ಎಂಬ ಪಾನೀಯವು ವೆನಿಜೂಯೆಲಾ ಆಹಾರ ಮತ್ತು ಪಾನೀಯಗಳ ಮೇಲೆ ಇಟ್ಯಾಲಿಯನ್ ಪ್ರಭಾವದ ಉದಾಹರಣೆಗಳು.
ಆಫ್ರಿಕಾ
[ಬದಲಾಯಿಸಿ]ಆಫ್ರಿಕಾ ಖಂಡದಲ್ಲಿ, ಮುಖ್ಯವಾಗಿ ಎಥಿಯೊಪಿಯಾ, ಲಿಬ್ಯಾ ಹಾಗೂ ಸೊಮಾಲಿಯಾದ ಕೆಲವು ಭಾಗಗಳಲ್ಲಿ ಹಲವು ಇಟ್ಯಾಲಿಯನ್ ವಸಾಹತುಗಳು ಸ್ಥಾಪನೆಯಾದ ಕಾರಣ, ಈ ದೇಶಗಳ ಪಾಕಪದ್ಧತಿಗಳಲ್ಲಿ ಗಮನಾರ್ಹ ಇಟ್ಯಾಲಿಯನ್ ಪ್ರಭಾವವಿದೆ.
ಲಿಬಿಯಾ
[ಬದಲಾಯಿಸಿ]ಲಿಬಿಯಾ ಇಟಲಿಯ ವಸಾಹತು ಆಗಿದ್ದ ಕಾಲದಿಂದಲೂ ಇಟಲಿಯ ಪರಂಪರೆಯು ಅಲ್ಲಿ ಸ್ಥಾಯಿಯಾಗಿದೆ. ಲಿಬಿಯಾದಲ್ಲಿ ಪಾಸ್ಟಾ ಹಾಗೂ ಬಹಳಷ್ಟು ಖಾರವಿರುವ ಲಿಬಿಯನ್ ಸೂಪ್ ಷರ್ಬಾ ಬಹಳ ಜನಪ್ರಿಯ. ಬಝಿನ್ ಎಂಬುದು ಬಾರ್ಲಿ, ಉಪ್ಪು ಮತ್ತು ನೀರಿನಿಂದ ತಯಾರಿಸಲಾದ ಗಟ್ಟಿ ಹಿಟ್ಟು. ಇದಲ್ಲದೆ ಬಟಾಟಾ ಮುಬಾಟಾನಾ (ತುಂಬಿಸಿದ ಆಲೂಗಡ್ಡೆ) ಸಹ ಲಿಬಿಯನ್ ಪಾಕಪದ್ಧತಿಯಲ್ಲಿ ಇನ್ನೊಂದು ಜನಪ್ರಿಯ ಭಕ್ಷ್ಯ. ಕರಿದ ಆಲೂಗಡ್ಡೆ ತುಂಡುಗಳಿಗೆ ಖಾರವಾದ ಮಾಂಸ ತುಂಡು ಮಿಶ್ರಿಸಿ, ಮೊಟ್ಟೆ ಹಾಗೂ ಬ್ರೆಡ್ ತುಂಡುಗಳಿಂದ ಮುಚ್ಚಿ ಬಟಾಟಾವನ್ನು ತಯಾರಿಸಲಾಗುತ್ತದೆ.
ದಕ್ಷಿಣ ಆಫ್ರಿಕಾ
[ಬದಲಾಯಿಸಿ]ದಕ್ಷಿಣ ಆಫ್ರಿಕಾದ ಎಲ್ಲಾ ಪ್ರಮುಖ ನಗರಗಳು ಮತ್ತು ಪಟ್ಟಣಗಳಲ್ಲಿ ಇಟ್ಯಾಲಿಯನ್ನರು ಗಮನಾರ್ಹ ಜನಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಎಲ್ಲಾ ಪ್ರಮುಖ ನಗರಗಳಲ್ಲಿ ಇಟ್ಯಾಲಿಯನ್ ಕ್ಲಬ್ಗಳಿವೆ. ಇವು ಈ ದೇಶದ ಪಾಕಪದ್ಧತಿಯ ಮೇಲೆ ಗಮನಾರ್ಹ ಪ್ರಭಾವ ಹೊಂದಿವೆ. ಹಂದಿ ತೊಡೆ ಮಾಂಸ ಮತ್ತು ಗಿಣ್ಣುಗಳಂತಹ ಇಟ್ಯಾಲಿಯನ್ ಆಹಾರಗಳನ್ನು ಆಮುದು ಮಾಡಲಾಗಿದೆ. ಕೆಲವನ್ನು ಸ್ಥಳೀಯವಾಗಿ ತಯಾರಿಸಲಾಗುತ್ತದೆ. ಪ್ರತಿಯೊಂದು ನಗರದಲ್ಲಿಯೂ ಒಂದಲ್ಲ ಎರಡು ಜನಪ್ರಿಯ ಇಟ್ಯಾಲಿಯನ್ ಭೋಜನಾಕೇಂದ್ರಗಳು ಹಾಗೂ ಪಿಜ್ಜೇರಿಯಾಗಳಿವೆ. ಪಾಸ್ಟಾಗಳು ಜನಪ್ರಿಯವಾಗಿದ್ದು ಇದನ್ನು ತಿನ್ನುವ ದಕ್ಷಿಣ ಆಫ್ರಿಕನ್ನರ ಸಂಖ್ಯೆಯು ಹೆಚ್ಚುತ್ತಿದೆ. ದಕ್ಷಿಣ ಆಫ್ರಿಕಾದಲ್ಲಿ, ಅದರಲ್ಲೂ ವಿಶಿಷ್ಟವಾಗಿ, ಮೆಡಿಟರೇನಿಯನ್ ಮಾದರಿಯ ಮಳೆಯ ಹವಾಗುಣ ಹೊಂದಿದ ಒಣ ನೈಋತ್ಯ ಭಾಗಗಳಲ್ಲಿ ಉತ್ತಮ ಗುಣಮಟ್ಟದ ಆಲಿವ್ ತೈಲದ ಉತ್ಪಾದನೆ ಹೆಚ್ಚುತ್ತಿದೆ. ಕೆಲವು ತೈಲಗಳ ಉತ್ಪಾದನೆಗೆ ಪ್ರಮುಖ ಅಂತರರಾಷ್ಟ್ರೀಯ ಪ್ರಶಸ್ತಿಗಳೂ ದಕ್ಕಿವೆ.
ಟಿಪ್ಪಣಿಗಳು
[ಬದಲಾಯಿಸಿ]- ↑ "Italian Cooking: History of Food and Cooking in Rome and Lazio Region, Papal Influence, Jewish Influence, The Essence of Roman Italian Cooking". Inmamaskitchen.com. Archived from the original on 2013-03-26. Retrieved 2010-04-24.
- ↑ "The Making of Italian Food...From the Beginning". Epicurean.com. Retrieved 2010-04-24.
- ↑ ಡೆಲ್ ಕಾಂಟ್, 11-21.
- ↑ Related Articles (2009-01-02). "Italian cuisine - Britannica Online Encyclopedia". Britannica.com. Retrieved 2010-04-24.
- ↑ "Italian Food - Italy's Regional Dishes & Cuisine". Indigoguide.com. Retrieved 2010-04-24.
- ↑ "Regional Italian Cuisine". Rusticocooking.com. Archived from the original on 2010-04-10. Retrieved 2010-04-24.
- ↑ "Cooking World » The most popular cuisines of the world (Part 1)". Cooking-advices.com. 2007-06-25. Archived from the original on 2009-07-26. Retrieved 2010-04-24.
- ↑ Freeman, Nancy (2007-03-02). "American Food, Cuisine". Sallybernstein.com. Retrieved 2010-04-24.
- ↑ [16]
- ↑ ಡೆಲ್ ಕಾಂಟ್, 11.
- ↑ ೧೧.೦ ೧೧.೧ ಡೆಲ್ ಕಾಂಟ್, 12.
- ↑ ಕೆಪ್ಯಾಟಿ, 253-254.
- ↑ ಕೆಪ್ಯಾಟಿ, 2-4.
- ↑ ಕೆಪ್ಯಾಟಿ, 6.
- ↑ ಕೆಪ್ಯಾಟಿ, 9-10.
- ↑ ಕೆಪ್ಯಾಟಿ, 10.
- ↑ ಡೆಲ್ ಕಾಂಟ್, 13.
- ↑ ೧೮.೦ ೧೮.೧ ಡೆಲ್ ಕಾಂಟ್, 14,15.
- ↑ ಡೆಲ್ ಕಾಂಟ್, 15.
- ↑ ಡಿ ಕಾಂಟ್, 16
- ↑ ಕೆಪ್ಯಾಟಿ, 158-159.
- ↑ ಕೆಪ್ಯಾಟಿ, 282-284.
- ↑ ಡಿ ಕಾಂಟ್, 17
- ↑ ಡಿ ಕಾಂಟ್, 18-19
- ↑ ಪಿರೆಸ್, 13.
- ↑ ಪಿರೆಸ್, 33.
- ↑ "Venice Cuisine - by food author Howard Hillman". Hillmanwonders.com. Archived from the original on 2008-06-11. Retrieved 2010-04-04.
- ↑ ಪಿರೆಸ್, 67.
- ↑ ಪಿರೆಸ್, 87.
- ↑ ಪಿರೆಸ್, 123, 124, 128, 133.
- ↑ ಪಿರೆಸ್, 139, 149, 159.
- ↑ ಪಿರೆಸ್, 167, 177.
- ↑ ಪಿರೆಸ್, 187.
- ↑ ಪಿರೆಸ್, 221-239.
- ↑ ಪಿರೆಸ್, 255, 256, 260, 261.
- ↑ ಪಿರೆಸ್, 273
- ↑ ಪಿರೆಸ್, 291.
- ↑ ಪಿರೆಸ್, 319.
- ↑ [56]
- ↑ ಪಿರೆಸ್, 337.
- ↑ ಪಿರೆಸ್, 361.
- ↑ ಪಿರೆಸ್, 383.
- ↑ ಪಿರೆಸ್, 401.
- ↑ ಪಿರೆಸ್, 423.
- ↑ ಪಿರೆಸ್, 457, 460.
- ↑ ಇವಾನ್ಸ್, 198-200.
- ↑ ೪೭.೦ ೪೭.೧ ೪೭.೨ ೪೭.೩ ಇವಾನ್ಸ್, 200.
- ↑ ೪೮.೦ ೪೮.೧ ಇವಾನ್ಸ್, 201.
- ↑ ೪೯.೦ ೪೯.೧ ಇವಾನ್ಸ್, 203
- ↑ ಇವಾನ್ಸ್, 203.
- ↑ ಇವಾನ್ಸ್, 204.
- ↑ ಇವಾನ್ಸ್, 205
- ↑ ಇವಾನ್ಸ್, 205.
- ↑ ಪಿರೆಸ್, 300.
- ↑ ಪಿರೆಸ್, 301.
- ↑ ಕೊಪ್ಲಾನ್, 301.
- ↑ ಕೊಪ್ಲಾನ್, 311.
- ↑ ಕೊಪ್ಲಾನ್, 307-308.
- ↑ Atkin, Tim, The Observer (November 11, 2007). "The fizz that's the bizz". Retrieved 2008-12-29.
{{cite news}}
: CS1 maint: multiple names: authors list (link) - ↑ Dane, Ana, TheStreet.com (July 3, 2006). "Pop the Cork on Prosecco". Archived from the original on 2015-09-13. Retrieved 2008-12-29.
{{cite web}}
: CS1 maint: multiple names: authors list (link) - ↑ ೬೧.೦ ೬೧.೧ USA. "How to structure Italian meals - by Ron James - Page 2". Helium. Retrieved 2010-04-04.[ಶಾಶ್ವತವಾಗಿ ಮಡಿದ ಕೊಂಡಿ]
ಉಲ್ಲೇಖಗಳು
[ಬದಲಾಯಿಸಿ]- ಕೆಪ್ಯಾಟಿ, ಆಲ್ಬರ್ಟೊ ಮತ್ತು ಮೊಂಟಾನಾರಿ, ಮೆಸಿಮೊ. ಇಟ್ಯಾಲಿಯನ್ ಪಾಕಪದ್ಧತಿ: ಎ ಕಲ್ಚರಲ್ ಹಿಸ್ಟರಿ . ನ್ಯೂಯಾರ್ಕ್: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್, 2006. ISBN 0-8247-9755-8.
- ಡೆಲ್ ಕಾಂಟ್, ಆನಾ. ದಿ ಕಾನ್ಸೈಸ್ ಗ್ಯಾಸ್ಟ್ರೊನೊಮಿ ಆಫ್ ಇಟಲಿ . USA: ಬಾರ್ನ್ಸ್ ಅಂಡ್ ನೊಬ್ಲ್ಸ್ ಬುಕ್ಸ್, 2004. ISBN 1-59474-023-2
- ಡಿಕೀ, ಜಾನ್, ಡೆಲಿಝಿಯಾ ! ದಿ ಎಪಿಕ್ ಹಿಸ್ಟರಿ ಆಫ್ ಇಟ್ಯಾಲಿಯನ್ಸ್ ಅಂಡ್ ದೇಯ್ರ್ ಫುಡ್ (ನ್ಯೂಯಾರ್ಕ್, 2008)
- ಇವಾನ್ಸ್, ಮ್ಯಾಥ್ಹೂ; ಕಾಸಿ, ಗೇಬ್ರಿಯೆಲಾ; ಡಿ'ಒನಹಿಯಾ, ಪೀಟರ್, ವರ್ಲ್ಡ್ ಫುಡ್ ಇಟಲಿ . CA: ಲೋನ್ಲಿ ಪ್ಲ್ಯಾನೆಟ್ ಪಬ್ಲಿಕೇಷನ್ಸ್ ಪಿಟಿವೈ ಲಿಮಿಟೆಡ್, 2000. ISBN 1-85210-958-0.
- ಕೊಪ್ಲ್ಯಾನ್, ಸ್ಟೀವೆನ್; ಸ್ಮಿತ್, ಬ್ರಯಾನ್ ಹೆಚ್.; ವೇಸ್, ಮೈಕಲ್ ಎ.; ಎಕ್ಸ್ಪ್ಲೋರಿಂಗ್ ವೈನ್ , ನ್ಯೂಯಾರ್ಕ್: ವಾನ್ ನಾಸ್ಟ್ರಾಂಡ್ ರೇನ್ಹೋಲ್ಡ್, 1996. ISBN 0-8247-9755-8.
- ಪಿರಾಸ್, ಕ್ಲಾಡಿಯಾ ಮತ್ತು ಮೆಡಾಗ್ಲಿಯಾನಿ, ಯುಜೆನಿಯೊ. ಕ್ಯುಲಿನರಿಯಾ ಇಟಲಿ . ಕೊಲ್ನ್: Könemann Verlagsgesellschaft mbh, 2000. ISBN 1-59474-023-2
ಹೆಚ್ಚಿನ ಮಾಹಿತಿಗಾಗಿ
[ಬದಲಾಯಿಸಿ]- ರೈಲಿ, ಗಿಲಿಯನ್ (2007) ದಿ ಆಕ್ಸ್ಫರ್ಡ್ ಕಂಪ್ಯಾನಿಯನ್ ಟು ಇಟ್ಯಾಲಿಯನ್ ಫುಡ್ . ಆಕ್ಸ್ಫರ್ಡ್ ಯುನಿವರ್ಸಿಟಿ ಪ್ರೆಸ್ ISBN 978-0-19-860617-8
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Trentino-Alto Adige ಪಾಕಪದ್ಧತಿ Archived 2010-08-19 ವೇಬ್ಯಾಕ್ ಮೆಷಿನ್ ನಲ್ಲಿ.
- CS1 maint: multiple names: authors list
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- Articles with unsourced statements from March 2010
- Articles with invalid date parameter in template
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with hatnote templates targeting a nonexistent page
- Commons link is locally defined
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಇಟ್ಯಾಲಿಯನ್ ಪಾಕಪದ್ಧತಿ
- Pages using ISBN magic links