ವಿಷಯಕ್ಕೆ ಹೋಗು

ಆಹಾರ ಸಂರಕ್ಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಲವು ಸಂರಕ್ಷಿತ ಆಹಾರಗಳು
ಚಳಿಗಾಲಕ್ಕಾಗಿ ಆಹಾರವನ್ನು ಸಂರಕ್ಷಿಸಲು ಜನರನ್ನು ಉತ್ತೇಜಿಸುತ್ತಿರುವ ಕೆನಡಾದ ಮೊದಲನೆಯ ಮಹಾಯುದ್ಧದ ಕಾಲದ ಪ್ರಕಟಣಾ ಪತ್ರ.

ಅತಿಸೂಕ್ಷ್ಮಾಣುಗಳಿಂದ ತ್ವರಿತಗೊಳಿಸಲ್ಪಡುವ ಅಥವಾ ಕಾರಣವಾಗುವ ಹಾಳಾಗುವಿಕೆಯನ್ನು (ಗುಣಮಟ್ಟ, ಸೇವಿಸಲು ಯೋಗ್ಯವಾದ, ಅಥವಾ ಪೌಷ್ಟಿಕಾಂಶಗಳ ನಷ್ಟ) ಹೆಚ್ಚಾಗಿ ಕಡಿಮೆ ಮಾಡಲು ಇಲ್ಲವೆ ನಿಲ್ಲಿಸಲು ಆಹಾರವನ್ನು ಸಂಸ್ಕರಿಸುವ ಮತ್ತು ನಿರ್ವಹಣೆಯ ಕಾರ್ಯವಿಧಾನವೇ ಆಹಾರ ಸಂರಕ್ಷಣೆ . ಆದಾಗ್ಯೂ, ಕೆಲವು ಪದ್ಧತಿಗಳಲ್ಲಿ ಆಹಾರವನ್ನು ಕಾಪಾಡಲು ಮತ್ತು ನಿರ್ದಿಷ್ಟ ಗುಣಮಟ್ಟವನ್ನು ಸೇರಿಸಲು ಉಪಯೋಗಕಾರಿ ಬೂಷ್ಟು , ಈಸ್ಟ್ ಗಳು ಅಥವಾ ಮೃದು ಅಣುಜೀವಿಗಳನ್ನು ಉಪಯೋಗಿಸುತ್ತಾರೆ (ಉದಾ. ಚೀಸ್, ವೈನ್). ಪೌಷ್ಟಿಕತೆಯ ಮಹತ್ವ, ರಚನೆ, ಮತ್ತು ಸ್ವಾದಯುಕ್ತ ರುಚಿಯನ್ನು ಪೋಷಿಸಿ ಕಾಪಾಡುವುದು ಆಹಾರವಾಗಿ ಅದರ ಉಪಯುಕ್ತತೆಯನ್ನು ಸಂರಕ್ಷಿಸುವುದು ಮುಖ್ಯ. ಇದು ಸಾಂಸ್ಕೃತಿಕವಾಗಿ ಅವಲಂಬಿತವಾಗಿದೆ, ಏಕೆಂದರೆ ಒಂದು ಸಂಸ್ಕೃತಿಯಲ್ಲಿ ಮಾನವರಿಗೆ ಆಹಾರವಾಗಿ ಯೋಗ್ಯವಾಗಿದ್ದು ಮತ್ತೊಂದು ಸಂಸ್ಕೃತಿಯಲ್ಲಿ ಇಷ್ಟವಿಲ್ಲದಿರಬಹುದು. ಸಂರಕ್ಷಣೆಯು ಸಾಮಾನ್ಯವಾಗಿ ಅಣುಜೀವಿಗಳು, ಬೂಷ್ಟು ಹಾಗೂ ಇತರೆ ಅತಿ ಸೂಕ್ಷ್ಮಾಣುಗಳ ಬೆಳವಣಿಗೆಯನ್ನು ತಡೆಗಟ್ಟುವುದೂ ಅಲ್ಲದೆ ದುರ್ವಾಸನೆಯನ್ನುಂಟು ಮಾಡುವ ಕೊಬ್ಬುಗಳು ಆಮ್ಲಜನಕದೊಂದಿಗೆ ಸೇರಿಕೊಳ್ಳುವಿಕೆಯನ್ನು ನಿಧಾನಗೊಳಿಸುವುದನ್ನು ಸಹ ಒಳಗೊಂಡಿರುತ್ತದೆ. ಕತ್ತರಿಸಿದ ನಂತರ ಸೇಬಿನ ಹಣ್ಣುಗಳಲ್ಲಿ ಕಿಣ್ವದಿಂದ ಕಂದುಬಣ್ಣಕ್ಕೆ ತಿರುಗುವ ಪ್ರತಿಕ್ರಿಯೆಯಂತಹ ಆಹಾರ ತಯಾರಿಕೆಯ ಅವಧಿಯಲ್ಲಿ ಆಗುವಂತಹ ಬಣ್ಣಗೆಡುವ ಮತ್ತು ನೈಸರ್ಗಿಕ ವಯಸ್ಸಾಗುವಿಕೆಯನ್ನು ತಡೆಗಟ್ಟುವ ಕಾರ್ಯವಿಧಾನಗಳನ್ನೂ ಸಹ ಒಳಗೊಂಡಿರುತ್ತದೆ. ಕೆಲವು ಸಂರಕ್ಷಣೆಯ ಪದ್ಧತಿಗಳಲ್ಲಿ ಅತಿಸೂಕ್ಷ್ಮಾಣು ಜೀವಿಗಳಿಂದ ಉಂಟಾಗುವ ಪುನರ್ಸೋಂಕನ್ನು ತಡೆಗಟ್ಟಲು ಸಂಸ್ಕರಣೆಯ ನಂತರ ಆಹಾರವನ್ನು ಭದ್ರವಾಗಿ ಮೊಹರು ಮಾಡಿಡಬೇಕಾಗುತ್ತದೆ; ಒಣಗಿಸುವಿಕೆಯಂತಹ ಇತರ ಕೆಲವು ಪದ್ಧತಿಗಳು ಯಾವುದೇ ವಿಶೇಷವಾಗಿ ಭದ್ರವಾಗಿ ಮುಚ್ಚಿಡದೇ ಇದ್ದರೂ ಬಹಳ ಕಾಲದವರೆಗೆ ಆಹಾರವನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಒಣಗಿಸುವಿಕೆ, ಸ್ಪ್ರೇ ಮಾಡಿ ಒಣಗಿಸುವಿಕೆ, ಹೆಪ್ಪುಗಟ್ಟಿಸಿ ಒಣಗಿಸುವಿಕೆ, ಘನೀಕರಿಸುವಿಕೆ, ನಿರ್ವಾತ ಪ್ಯಾಕಿಂಗ್, ಡಬ್ಬಿಯಲ್ಲಿ ಭದ್ರತೆಯಿಂದ ಮುಚ್ಚುವುದು, ಪಾಕದಲ್ಲಿ ಸಂರಕ್ಷಣೆ, ಸಕ್ಕರೆ ಹರಳುಗಟ್ಟಿಸುವಿಕೆ, ಆಹಾರಕ್ಕೆ ವಿಕಿರಣವನ್ನು ಹಾಯಿಸುವಿಕೆ, ಮತ್ತು ಇಂಗಾಲದ ಡೈ ಆಕ್ಸೈಡ್ ನಂತಹ ಮಂದಾನಿಲಗಳು ಅಥವಾ ಸಂರಕ್ಷಕಗಳನ್ನು ಸೇರಿಸುವ ಕಾರ್ಯವಿಧಾನಗಳು ಅನ್ವಯಿಸುವ ಸಾಮಾನ್ಯ ಪದ್ಧತಿಗಳನ್ನು ಒಳಗೊಂಡಿರುತ್ತವೆ. ಆಹಾರವನ್ನು ಸಂರಕ್ಷಿಸಿಲು ಸಹಾಯಮಾಡುವುದೂ ಅಲ್ಲದೆ, ಸ್ವಾದಿಷ್ಟ ರುಚಿಯನ್ನು ಒದಗಿಸುವ ದ್ರಾವಣದಲ್ಲಿಡುವುದು, ಉಪ್ಪಿನಲ್ಲಿ ಸಂಗ್ರಹಣೆ, ಹೊಗೆ ಹಾಯಿಸುವಿಕೆ, ಸಕ್ಕರೆ ಪಾಕದಲ್ಲಿಡುವುದು ಅಥವಾ ಮದ್ಯಸಾರದಲ್ಲಿ ಸಂರಕ್ಷಿಸಿಡುವುದು, ಸಕ್ಕರೆ ಹರಳುಗಟ್ಟಿಸುವಿಕೆ ಮತ್ತು ಗಟ್ಟಿ ಮಾಡುವಿಕೆ ಯಂತಹ ಇತರೆ ಪದ್ಧತಿಗಳೂ ಒಳಗೊಂಡಿರುತ್ತವೆ.

ಸಂರಕ್ಷಣೆಯ ಕಾರ್ಯವಿಧಾನಗಳು

[ಬದಲಾಯಿಸಿ]
ಹೆಚ್ಚಿನ ಜಲಸಮಸ್ಥಿತಿ ಒತ್ತಡದ ಅನ್ವಯಿಸುವಿಕೆ (ಪಾಸ್ಕಲೈಜೇಶನ್) ತರಕಾರಿ ಮೂಲದ ಜೀವಾಣು, ಈಸ್ಟ್ ಗಳು ಮತ್ತು ಬೂಷ್ಟ್ ಗಳ ಒತ್ತಡದ ನಿಷ್ಕ್ರಿಯಗೊಳಿಸುವಿಕೆ
ವಿದ್ಯುತ್ ತರಂಗವನ್ನು ಹಾಯಿಸಿ ಸಂರಕ್ಷಣೆ (PEF ಉಪಚಾರ9) ಅತಿಸೂಕ್ಷ್ಮಾಣುಗಳ ನಿಷ್ಕ್ರಿಯೆಗೆ ವಿದ್ಯುತ್ತಿನ ಸಂಕ್ಷೇಪದ ಸಿಡಿಗಳು

ಸಂರಕ್ಷಣೆಯ ವಿಧಾನಗಳು ಇವುಗಳನ್ನೂ ಒಳಗೊಂಡಿರುತ್ತವೆ:

 • ಅತಿಸೂಕ್ಷ್ಮಾಣುಜೀವಿಗಳನ್ನು ಅಸ್ವಾಭಾವಿಕಗೊಳಿಸಲು ಇಲ್ಲವೆ ಕೊಲ್ಲಲು ಕಾಯಿಸುವುದು (ಉದಾ. ಕುದಿಸುವಿಕೆ)
 • ಆಮ್ಲಜನಕದೊಡನೆ ಸೇರಿಸುವಿಕೆ (ಉದಾ. ಗಂಧಕದ ಡೈ ಆಕ್ಸೈಡ್ ನ ಉಪಯೋಗ)
 • ವಿಷವನ್ನು ತಡೆಗಟ್ಟುವಿಕೆ (ಉದಾ. ಹೊಗೆ ಹಾಯಿಸುವಿಕೆ, ಇಂಗಾಲದ ಡೈ ಆಕ್ಸೈಡ್, ವಿನೆಗರ್, ಮದ್ಯಸಾರ ಮುಂತಾದವುಗಳ ಉಪಯೋಗ)
 • ನೀರಿನ ಅಂಶವನ್ನು ನಾಶಪಡಿಸುವಿಕೆ (ಒಣಗಿಸುವುದು)
 • ಆಸ್ಮಾಟಿಕ್ ನಿರೋಧಿಸುವಿಕೆ (ಉದಾ. ಸಕ್ಕರೆ ಪಾಕಗಳ ಉಪಯೋಗ)
 • ಅತಿ ಕಡಿಮೆ ಉಷ್ಣಾಂಶದಲ್ಲಿ ನಿಷ್ಕ್ರಿಯಗೊಳಿಸುವಿಕೆ (ಉದಾ. ಘನೀಕರಿಸುವಿಕೆ)
 • ಅತಿ ಹೆಚ್ಚಿನ ನೀರಿನ ಒತ್ತಡ (ಉದಾ. ತಾಜಾಗೊಳಿಸುವಿಕೆ, "ತಣ್ಣನೆಯ" ಪ್ಯಾಶ್ಚುರೈಸೇಷನ್ ನ ಒಂದು ಬಗೆ, ಆಹಾರದ ಹಾಳಾಗುವಿಕೆ ಮತ್ತು ಆಹಾರದ ಸುರಕ್ಷತೆಗೆ ಪ್ರಭಾವ ಬೀರುವಂತಹ ನೈಸರ್ಗಿಕವಾಗಿ ದೊರಕುವ ಪ್ಯಾಥಜನ್ ಗಳನ್ನು ಆ ಒತ್ತಡವು ಕೊಲ್ಲುತ್ತದೆ.)
 • ಈ ವಿಧಾನಗಳ ಅನೇಕ ಸಂಯುಕ್ತ ಕ್ರಿಯೆಗಳು
 • ಛೀಲಾಟಿ

ಒಣಗಿಸುವಿಕೆ

[ಬದಲಾಯಿಸಿ]

ಆಹಾರ ಸಂರಕ್ಷಣೆಯ ಅತ್ಯಂತ ಹಳೆಯ ವಿಧಾನಗಳಲ್ಲಿ ಒಣಗಿಸುವಿಕೆಯು ಒಂದಾಗಿದೆ, ಇದು ಜೀವಾಣುಗಳ ಬೆಳವಣಿಗೆಯನ್ನು ವಿಳಂಬಗೊಳಿಸಲು ಅಥವಾ ತಡೆಗಟ್ಟಲು ನೀರಿನ ಚಟುವಟಿಕೆಯನ್ನು ಸಾಕಷ್ಟು ಕಡಿಮೆಗೊಳಿಸುತ್ತದೆ.[ಸೂಕ್ತ ಉಲ್ಲೇಖನ ಬೇಕು] ಒಣಗಿಸುವಿಕೆಯು ತೂಕವನ್ನೂ ಸಹ ಇಳಿಸುತ್ತದೆ.

ಘನೀಕರಣ

[ಬದಲಾಯಿಸಿ]

ತಮ್ಮ ತಯಾರಿಸದೇ ಇರುವ ಸ್ಥಿತಿಯಲ್ಲಿ ಘನೀಕರಣವು ಬೇಕಾಗಿಲ್ಲದಂತಹ ತಯಾರಿಸಿದ ಆಹಾರ ಸಾಮಗ್ರಿಗಳನ್ನು ಒಳಗೊಂಡ ಆಹಾರದ ಒಂದು ಅತಿ ವಿಶಾಲ ವ್ಯಾಪ್ತಿಯಲ್ಲಿ ಸಂರಕ್ಷಿಸಲು ವಾಣಿಜ್ಯವಾಗಿ ಮತ್ತು ಗೃಹಕೃತ್ಯದಲ್ಲಿ ಅತ್ಯಂತ ಸಮಾನ್ಯವಾಗಿ ಉಪಯೋಗಿಸುವ ಕಾರ್ಯವಿಧಾನಗಳಲ್ಲಿ ಘನೀಕರಣವೂ ಸಹ ಒಂದಾಗಿದೆ. ಉದಾಹರಣೆಗೆ ಆಲೂಗಡ್ಡೆಯ ವೇಫಲ್ಸ್ ಗಳನ್ನು ಫ್ರೀಜರ್ ನಲ್ಲಿ ಶೇಖರಿಸುತ್ತಾರೆ, ಆದರೆ ಸ್ವತಃ ಆಲೂಗಡ್ಡೆಗಳನ್ನು ಅನೇಕ ತಿಂಗಳುಗಳ ಕಾಲ ಸಂಗ್ರಹಿಸಿ ಸುರಕ್ಷಿತಗೊಳಿಸಲು ಒಂದು ತಂಪಾದ ಕತ್ತಲ ಸ್ಥಳವು ಸಾಕಾಗುತ್ತದೆ. ಅನೇಕ ದೇಶಗಳಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯ ಸಂಧರ್ಭಗಳಲ್ಲಿ ಅಗತ್ಯವಾದ ಆಹಾರ ಸಾಮಗ್ರಿಗಳಿಗೆ ತಂಪಾದ ಸಂಗ್ರಹಾಲಯಗಳು ಹೆಚ್ಚಿನ ಪರಿಮಾಣದ ದೀರ್ಘಕಾಲೀನ ಶೇಖರಣೆಯನ್ನು ಒದಗಿಸುತ್ತವೆ.

ನಿರ್ವಾತ ಪ್ಯಾಕ್ ಮಾಡುವುದು

[ಬದಲಾಯಿಸಿ]

ಸಾಮಾನ್ಯವಾಗಿ ಗಾಳಿ ರಹಿತ ಚೀಲ ಅಥವಾ ಶೀಷೆಗಳಲ್ಲಿ, ನಿರ್ವಾತ ಪರಿಸರದಲ್ಲಿ ನಿರ್ವಾತ ಪ್ಯಾಕ್ ಮಾಡುವಿಕೆ ಆಹಾರವನ್ನು ಸಂಗ್ರಹಿಸುತ್ತದೆ. ಉಳಿಯುವಿಕೆಗೆ ಅಗತ್ಯವಾದ ಆಮ್ಲಜನಕವನ್ನು ಜೀವಾಣುಗಳಿಗೆ ಒದಗಿಸದೇ ನಿರ್ವಾತ ಪರಿಸರವು, ಹಾಳಾಗುವುದನ್ನು ನಿಧಾನಗೊಳಿಸುತ್ತದೆ. ಉತ್ಕರ್ಷಣೆಯಾಗುವುದರಿಂದ ಸ್ವಾದಯುಕ್ತ ರುಚಿಯ ನಷ್ಟವನ್ನು ತಗ್ಗಿಸಲು ಕಾಯಿ ಬೀಜಗಳ ಸಂಗ್ರಹಣೆಗೆ ನಿರ್ವಾತ ಪ್ಯಾಕ್ ಮಾಡುವಿಕೆಯನ್ನು ಸಾಮಾನ್ಯವಾಗಿ ಉಪಯೋಗಿಸುತ್ತಾರೆ.

| ಉಪ್ಪು

[ಬದಲಾಯಿಸಿ]

ಉಪ್ಪಿನಲ್ಲಿಟ್ಟಾಗ ಅಥವಾ ಕ್ಯೂರಿಂಗ್ ಪದ್ಧತಿಯು ಆಸ್ಮೊಸಿಸ್ ವಿಧಾನದ ಮೂಲಕ ಮಾಂಸದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ. ಉಪ್ಪು ಅಥವಾ ಸಕ್ಕರೆ ಇಲ್ಲವೆ ಎರಡನ್ನೂ ಸೇರಿಸಿ ಮಾಂಸವನ್ನು ಕ್ಯೂರ್ ಮಾಡಲಾಗುತ್ತದೆ. ನೈಟ್ರೇಟ್ಸ್ ಮತ್ತು ನೈಟ್ರೈಟ್ಸ್ ಗಳನ್ನು ಸಹ ಸಾಮಾನ್ಯವಾಗಿ ಮಾಂಸವನ್ನು ಕ್ಯೂರ್ ಮಾಡಲು ಉಪಯೋಗಿಸುತ್ತಾರೆ, ಮತ್ತು ವೈಶಿಷ್ಟ್ಯವಾದ ಗುಲಾಬಿ ಬಣ್ಣವನ್ನು ಉಳಿಸಿಕೊಳ್ಳುವುದೂ ಅಲ್ಲದೆ ಕ್ಲೊಸ್ಟ್ರಿಡಿಯಮ್ ಬೊಟುಲಿನಮ್ ಅನ್ನೂ ಸಹ ತಡೆಗಟ್ಟುತ್ತದೆ.

ಸಕ್ಕರೆ

[ಬದಲಾಯಿಸಿ]

ಸೇಬಿನ ಹಣ್ಣುಗಳು, ಸೀಬೆ ಹಣ್ಣುಗಳು, ಮರಸೇಬುಗಳು, ಏಪ್ರಿಕಾಟ್ ಗಳು, ಒಣ ದ್ರಾಕ್ಷಿ ಗಳಂತಹ ಹಣ್ಣಿನ ಜೊತೆ ಸಕ್ಕರೆ ಪಾಕದಲ್ಲಾಗಲಿ ಅಥವಾ ಹರಳಿನ ರೂಪದಲ್ಲಾಗಲಿ ಸಕ್ಕರೆಯು ಹಣ್ಣುಗಳನ್ನು ಸಂರಕ್ಷಿಸಿಲು ಉಪಯೋಗಿಸಲ್ಪಡುತ್ತದೆ, ಅಲ್ಲಿ ಸಂರಕ್ಷಿಸಿದ ವಸ್ತುವನ್ನು ಹರಳೀಕರಣದ ಬಿಂದುವಿಗೆ ಸಕ್ಕರೆಯಲ್ಲಿ ಬೇಯಿಸಿದ ನಂತರ ಪರಿಣಾಮರೂಪದ ಉತ್ಪನ್ನವನ್ನು ಒಣದಾಗಿ ಶೇಖರಿಸಲಾಗುತ್ತದೆ. ಈ ಪದ್ಧತಿಯನ್ನು ಸಿಟ್ರಸ್ ಹಣ್ಣು (ಸಕ್ಕರೆ ಸವರಿದ ಸಿಪ್ಪೆ), ಏಂಜಲಿಕ ಮತ್ತು ಶುಂಠಿಯ ಸಿಪ್ಪೆಗಳಿಗೆ ಉಪಯೋಗಿಸಲಾಗುತ್ತದೆ. ಈ ಕಾರ್ಯವಿಧಾನದ ಮಾರ್ಪಾಡು ನುಣುಪಾದ ಚೆರ್ರಿಗಳಂತಹ ನುಣುಪಾದ ಹಣ್ಣನ್ನು ಉತ್ಪಾದಿಸುತ್ತದೆ, ಅಲ್ಲಿ ಹಣ್ಣನ್ನು ಸಕ್ಕರೆಯಲ್ಲಿ ಸಂರಕ್ಷಿಸಲಾಗುತ್ತದೆ ಆದರೆ ಪಾಕದಿಂದ ಹಿಂಡಿ ತೆಗೆದನಂತರ ಮಾರಾಟ ಮಾಡಲಾಗುತ್ತದೆ, ಪಾಕದ ಮೇಲಿನ ಪದರು ಮತ್ತು ಹಣ್ಣಿನ ಸಕ್ಕರೆಯ ಸಾರದಿಂದ ಸಂರಕ್ಷಿಸಿ ಕಾಪಾಡಲಾಗುತ್ತದೆ. ಇತರೆ ಮದ್ಯಗಳು ಅಥವಾ ಬ್ರಾಂದಿಯಲ್ಲಿ ಹಣ್ಣುಗಳಂತಹ ಭೋಗವಸ್ತಗಳ ಸಂರಕ್ಷಣೆಗಾಗಿ ಸಕ್ಕರೆಯನ್ನು ಸಾಮಾನ್ಯವಾಗಿ ಮದ್ಯಸಾರದ ಜೊತೆ ಸೇರಿಸಿ ಉಪಯೋಗಿಸಲಾಗುತ್ತದೆ. ಇವುಗಳನ್ನು ಸ್ಲೊಯ್ ಜಿನ್ ಅಥವಾ ಚೆರ್ರಿ ಬ್ರಾಂದಿಯಂತಹ ಹಣ್ಣಿನ ಸ್ವಾದವಿರುವ ಮದ್ಯದ ಜೊತೆ ಭ್ರಾಂತಿಗೊಳ್ಳಬಾರದು.

ಲವಣಶಾಖ

[ಬದಲಾಯಿಸಿ]

ಲವಣಶಾಖವು ತಿನ್ನಬಹುದಾದ ಅತಿಸೂಕ್ಷ್ಮಾಣು ವಿರುದ್ಧದ ದ್ರಾವಣದಲ್ಲಿ ಆಹಾರ ಸಂರಕ್ಷಿಸಿಡುವ ಒಂದು ಪದ್ಧತಿಯಾಗಿದೆ. ಲವಣಶಾಖವನ್ನು ರಾಸಾಯನಿಕ ಲವಣಶಾಖ (ಉದಾಹರಣೆಗೆ, ಬ್ರೈನ್ ದ್ರಾವಣದಲ್ಲಿ ಅದ್ದಿಡುವುದು) ಮತ್ತು ಹುಳಿಯುವಿಕೆಯ ಲವಣಶಾಖ (ಉದಾಹರಣೆಗೆ, ಸೌರ್ ಕ್ರೌಟ್ ಮಾಡುವುದು) ಎಂದು ವಿಶಾಲವಾಗಿ ವಿಭಾಗಿಸಬಹುದು. ರಾಸಾಯನಿಕ ಲವಣಶಾಖದಲ್ಲಿ ಜೀವಾಣುಗಳು ಮತ್ತು ಇತರೆ ಅತಿ ಸೂಕ್ಷ್ಮಾಣುಗಳನ್ನು ಕೊಲ್ಲುವ ಇಲ್ಲವೆ ವಿರೋಧಿಸುವಂತಹ ಆಹಾರ ಯೋಗ್ಯವಾದ ದ್ರಾವಣದಲ್ಲಿ ಆಹಾರವನ್ನು ಇಡಲಾಗುತ್ತದೆ. ಸಾಂಕೇತಿಕ ಲವಣಶಾಖದ ದ್ರಾವಣಗಳೆಂದರೆ, ಸೈಂಧ್ರಲವಣ (ಹೆಚ್ಚಿನ ಉಪ್ಪುವುಳ್ಳದ್ದು), ವಿನೆಗರ್, ಮದ್ಯಸಾರ, ಮತ್ತು ತರಕಾರಿ ಜನ್ಯ ಎಣ್ಣೆ, ವಿಶೇಷವಾಗಿ ಆಲಿವ್ ಎಣ್ಣೆ, ಹಾಗೂ ಇತರೆ ಅನೇಕ ಎಣ್ಣೆಗಳು. ಅನೇಕ ರಾಸಾಯನಿಕ ಲವಣಶಾಖ ವಿಧಾನಗಳಲ್ಲಿ ಕಾಯುಸುವಿಕೆ ಅಥವಾ ಕುದಿಸುವಿಕೆಯನ್ನೂ ಸಹ ಸೇರಿಕೊಂಡಿರುತ್ತದೆ, ಆಗ ಸಂರಕ್ಷಿಸಲ್ಪಟ್ಟ ಆಹಾರವು ಲವಣಶಾಖದ ಏಜೆಂಟ್ ನ ಜೊತೆ ಬೆರೆತು ಸಂತೃಪ್ತವಾಗುತ್ತದೆ. ಸೌತೆಕಾಯಿಗಳು, ಮೆಣಸಿನಕಾಳುಗಳು, ಉಪ್ಪುಹಾಕಿ ಸಂರಕ್ಷಿಸಿದ ದನದ ಮಾಂಸ, ಹೆರ್ರಿಂಗ್ ಮೀನಿನ ಮಾಂಸ, ಮತ್ತು ಮೊಟ್ಟೆಗಳು ಅಲ್ಲದೆ ಪಿಕಲಿಲ್ಲಿ, ಚೌ-ಚೌ, ಗರ್ಡಿನಿಯರ, ಮತ್ತು ಉಪ್ಪಿನಕಾಯಿ ಒಳಗೊಂಡಿರುವ ಸಾಮಾನ್ಯ ರಾಸಾಯನಿಕವಾಗಿ ಲವಣ ಶಾಖದ ಆಹಾರವಾಗಿರುತ್ತವೆ. ಹುಳಿಯುವಿಕೆಯ ಲವಣ ಶಾಖದಲ್ಲಿ, ಲ್ಯಾಕ್ಟಿಕ್ ಆಮ್ಲವನ್ನು ತಯಾರಿಸುವಂತಹ ಒಂದು ಪದ್ಧತಿಯಿಂದ ಆಹಾರವು ತಾನೇ ಸ್ವತಃ ಸಂರಕ್ಷಣೆಯ ಏಜೆಂಟ್ ಅನ್ನು ಉತ್ಪಾದಿಸುತ್ತದೆ. ಸೌರ್ ಕ್ರೌಟ್, ನುಕಜುಕೆ, ಕಿಂಚಿ, ಸುರ್ ಸ್ಟ್ರಾಮಿಂಗ್ , ಮತ್ತು ಕುರ್ಟಿಡೊ ಇವುಗಳು ಹುಳಿಯುವಿಕೆಯ ಉಪ್ಪಿನ ಕಾಯಿಗಳನ್ನು ಒಳಗೊಂಡಿರುತ್ತವೆ. ಕೆಲವು ರಾಸಾಯನಿಕವಾಗಿ ಲವಣಶಾಖಗೊಂಡ ಸೌತೆಕಾಯಿಗಳೂ ಸಹ ಹುಳಿಯುವಿಕೆಗೊಳಿಸಲ್ಪಡುತ್ತವೆ. ವಾಣಿಜ್ಯದ ಉಪ್ಪಿನಕಾಯಿಗಳಲ್ಲಿ, ತಮ್ಮ ಮಾರಾಟದ ಅವಧಿಯನ್ನು ಹೆಚ್ಚಿಸುವುದಕ್ಕೆಂದು EDTA ಅಥವಾ ಸೋಡಿಯಂ ಬೆಂಜೊಯೇಟ್ ನಂತಹ ಒಂದು ಸಂರಕ್ಷಕವನ್ನು ಸಹ ಸೇರಿಸಬಹುದು.

ರಾಸಾಯನಿಕ ಮಿಶ್ರಣ

[ಬದಲಾಯಿಸಿ]

ಸೋಡಿಯಂ ಹೈಡ್ರಾಕ್ಸೈಡ್ (ಲೈ) ಆಹಾರದಲ್ಲಿ ಜೀವಾಣುಗಳು ಬೆಳೆಯಲಾಗದಷ್ಟು ಕ್ಷಾರ ಗುಣವನ್ನು ಉಂಟುಮಾಡುತ್ತವೆ. ಅದರ ಸ್ವಾದಿಷ್ಟ ರುಚಿ ಮತ್ತು ರಚನೆಯನ್ನು ಬದಲಾಯಿಸಿ, ಆಹಾರದಲ್ಲಿ ಲೈ ಕೊಬ್ಬನ್ನು ಸಾಬೂನಾಗಿ ಮಾರ್ಪಡಿಸುತ್ತದೆ. ಕೆಲವು ಆಲಿವ್ ಆಹಾರ ಪದ್ಧತಿಗಳಲ್ಲಿ ಮಾಡುವಂತೆ, ಲ್ಯುಟೆಫಿಸ್ಕ್ ನ ತಯಾರಿಕೆಯಲ್ಲಿ ಲೈ ಅನ್ನು ಉಪಯೋಗಿಸಲಾಗುತ್ತದೆ. ಸೆಂಚುರಿ ಮೊಟ್ಟೆಗಳನ್ನು ಉಪಯೋಗಿಸಿ ಮಾಡುವ ನವೀನ ಆಹಾರ ಪದ್ಧತಿಗಳು ಲೈ ಅನ್ನು ಬಯಸುತ್ತವೆ. ಮಾಸಾ ಹರಿನ ಮತ್ತು ಮುಸುಕಿನ ಜೋಳದ ಅಂಬಲಿಯು ತಮ್ಮ ತಯಾರಿಕೆಯಲ್ಲಿ ಕೃಷಿ ಮೂಲದ ಸುಣ್ಣವನ್ನು ಉಪಯೋಗಿಸುತ್ತವೆ ಹಾಗೂ ಇದು ಆಗಾಗ್ಗೆ 'ಲೈ' ಅಂದು ತಪ್ಪಾಗಿ ಕೇಳಲ್ಪಡುತ್ತದೆ.

ಡಬ್ಬಿ ಮತ್ತು ಶೀಷೆಗಳಲ್ಲಿ ಹಾಕಿಡುವುದು

[ಬದಲಾಯಿಸಿ]
ಸಂರಕ್ಷಿತ ಆಹಾರ

ಆಹಾರವನ್ನು ಬೇಯಿಸಿ, ತೊಳೆದು ಒಣಗಿಸಿದ ಭದ್ರವಾದ ಡಬ್ಬಿ ಅಥವಾ ಗಾಜಿನ ಜಾರ್ ಗಳಲ್ಲಿ ಅದನ್ನು ಬಿಗಿಯಾಗಿ ಮುಚ್ಚಿಟ್ಟು, ಮತ್ತು ಅತಿಸೂಕ್ಷ್ಮಾಣುಜೀವಿಗಳಿಂದ ಸಂರಕ್ಷಿಸುವ ವಿಧಾನದಂತೆ ಯಾವುದಾದರೂ ಉಳಿದಿರುವ ಜೀವಾಣುಗಳನ್ನು ಬಲಹೀನಗೊಳಿಸಲು ಅಥವಾ ಕೊಲ್ಲಲು ವಸ್ತಗಳನ್ನು ಡಬ್ಬಿಗಳಲ್ಲಿ ಹಾಕಿ ಇಡುವ ಪಾತ್ರೆಗಳನ್ನು ಸ್ಟರಿಲೈಜ್ ಮಾಡಲು ಕುದಿಸುವಿಕೆಯನ್ನು ಒಳಗೊಂಡಿರುತ್ತದೆ. ನಿಕೊಲಾಸ್ ಅಪ್ಪೆರ್ಟ್ ಅವರು ಇದನ್ನು ಕಂಡುಹಿಡಿದರು [೧]. ಆಹಾರಗಳು ಹಾಳಾಗುವಿಕೆಯ ವಿರುದ್ಧ ನೈಸರ್ಗಿಕ ರಕ್ಷಣೆಯ ಬದಲಾಗುವ ಶ್ರೇಣಿಗಳನ್ನು ಹೊಂದಿರುತ್ತವೆ ಮತ್ತು ಒತ್ತಡದ ಅಡುಗೆ ಪಾತ್ರೆಯಲ್ಲಿ ಕೊನೆಯ ಹಂತವು ಆಗುವುದು ಅವಶ್ಯವಾಗಿರುತ್ತದೆ. ಸ್ಟ್ರಾಬೆರ್ರಿಗಳಂತಹ ಹೆಚ್ಚಿನ ಆಮ್ಲದ ಹಣ್ಣುಗಳನ್ನು ಡಬ್ಬಿಯಲ್ಲಿ ಹಾಕಿಡಲು ಸಂರಕ್ಷಕಗಳಿಲ್ಲದೆ ಕಡಿಮೆ ಅವಧಿಯ ಕುದಿಸುವಿಕೆಯ ಆವೃತ್ತಿಯನ್ನು ಅಪೇಕ್ಷಿಸುತ್ತದೆ, ಆದರೆ ಟೊಮಾಟೊ ನಂತಹ ಬೇರೆ ಹಣ್ಣುಗಳು ದೀರ್ಘಾವಧಿ ಕುದಿಸುವಿಕೆ ಮತ್ತು ಹೆಚ್ಚುವರಿಯಾದ ಇತರ ಆಮ್ಲೀಯ ಮೂಲವಸ್ತುಗಳನ್ನು ಸೇರಿಸು ವುದು ಅವಶ್ಯವಾಗಿರುತ್ತದೆ. ಕಡಿಮೆ ಆಮ್ಲದ ಆಹಾರವಾದ ತರಕಾರಿಗಳು ಮತ್ತು ಮಾಂಸಗಳನ್ನು ಹೆಚ್ಚು ಒತ್ತಡದಿಂದ ಡಬ್ಬಿಯೊಳಗೆ ಹಾಕಿಡಬೇಕಾಗುತ್ತದೆ. ಡಬ್ಬಿ ಅಥವಾ ಶೀಷೆಯೊಳಗೆ ಸಂರಕ್ಷಿಸಿದ ಆಹಾರವು ಒಮ್ಮೆ ಡಬ್ಬಿ ಅಥವಾ ಶೀಷೆಯನ್ನು ತೆರೆದ ತಕ್ಷಣದಿಂದ ಹಾಳಾಗುವಿಕೆಯ ಅಪಾಯವಿರುತ್ತದೆ. ಡಬ್ಬಿಯಲ್ಲಿ ಹಾಕಿಡುವ ವಿಧಾನದಲ್ಲಿ ಗುಣಮಟ್ಟ ಹತೋಟಿಯ ಕೊರತೆಯು ಅತಿಸೂಕ್ಷ್ಮಾಣು ಜೀವಿಗಳು ಅಥವಾ ನೀರಿನ ಪ್ರವೇಶಕ್ಕೆ ಅನುವು ಮಾಡಿಕೊಡಬಹುದು. ಅಂತಹ ಅತಿಹೆಚ್ಚು ವಿಫಲತೆಗಳು ವೇಗವಾಗಿ ಪತ್ತೆಹಚ್ಚಲ್ಪಡುತ್ತವೆ ಏಕೆಂದರೆ ಡಬ್ಬಿಯ ಒಳಗಡೆ ಕೊಳೆಯುವಿಕೆಯು ಅನಿಲ ಉತ್ಪಾದನೆಗೆ ಕಾರಣವಾಗಿ ಡಬ್ಬಿಯು ಉಬ್ಬುತ್ತದೆ ಅಥವಾ ಸಿಡಿಯುತ್ತದೆ. ಆದಾಗ್ಯೂ ಅನೇಕ ಉದಾಹರಣೆಗಳಲ್ಲಿ ಕಳಪೆ ತಯಾರಿಕೆ (ಕೆಟ್ಟ ಪದ್ಧತಿಗಳು) ಮತ್ತು ಕಳಪೆ ಆರೋಗ್ಯ ಶುಚಿತ್ವವು ಡಬ್ಬಿಯಲ್ಲಿ ಹಾಕಿಟ್ಟ ಆಹಾರದ ಸೋಂಕಿಗೆ ದಾರಿಯಾಗಿ, ಆ ವಾತಾವರಣದಲ್ಲಿ ಬೆಳೆಯುವ ಬ್ಯಾಕ್ಟೀರಿಯಾವಾದ ಕ್ಲೊಸ್ಟ್ರಿಡಿಯಂ ಬೊಟುಲಿನುಮ್ ನಿಂದ ಆಹಾರದೊಳಗೆ ತೀಕ್ಷ್ಣ ನಂಜನ್ನು ಉತ್ಪಾದಿಸಿ ತೀವ್ರ ಕಾಯಿಲೆಗೆ ಇಲ್ಲವೇ ಸಾವಿಗೆ ಕಾರಣವಾಗುತ್ತದೆ. ಈ ಜೀವಿಯು ಅನಿಲವನ್ನಾಗಲಿ ಅಥವಾ ಸ್ಪಷ್ಟವಾದ ರುಚಿಯನ್ನಾಗಲಿ ಉತ್ಪಾದಿಸದೆ, ರುಚಿ ಇಲ್ಲವೆ ವಾಸನೆಯಿಂದ ಪತ್ತೆಹಚ್ಚಲಾಗದೆ ಉಳಿಯುತ್ತದೆ. ಆದಾಗ್ಯೂ, ಅದರ ವಿಷವನ್ನು ಬೇಯಿಸುವುದರಿಂದ ಬದಲಾವಣೆಗೊಳಿಸಬಹುದು. ಕಳಪೆ ವಿಧಾನದಿಂದ ತಯಾರಿಸಿ, ನಂತರ ಡಬ್ಬಿಯೊಳಗೆ ಹಾಕಿಟ್ಟ ಬೇಯಿಸಿದ ಅಣಬೆಗಳು ಸ್ಟಫೈಲೊಕೊಕುಸ್ ಔರಿಸ್ ನ ಬೆಳೆಯುವಿಕೆಯನ್ನು ಬೆಂಬಲಿಸಬಹುದು, ಇದು ಡಬ್ಬಿಯಲ್ಲಿ ಹಾಕಿಡುವುದರಿಂದಾಗಲಿ ಇಲ್ಲವೆ ಆನಂತರದ ಪುನರ್ಬಿಸಿ ಮಾಡುವುದರಿಂದಾಗಲಿ ನಾಶಪಡಿಸಲಾಗದಂತಹ ಒಂದು ನಂಜನ್ನು ಉತ್ಪಾದಿಸುತ್ತದೆ.

ಮೊರಬ್ಬದಲ್ಲಿಡುವುದು

[ಬದಲಾಯಿಸಿ]

ಆಹಾರವನ್ನು ಒಂದು ವಸ್ತುವಿನಲ್ಲಿಟ್ಟು ಬೇಯಿಸುವುದರಿಂದ ಮೊರಬ್ಬದಂತೆ ಗಟ್ಟಿಯಾಗುವಿಕೆಯಿಂದ ಸಂರಕ್ಷಿಸಬಹುದು. ಜಿಲೆಟಿನ್, ಅಗರ್, ಮುಸುಕಿನ ಜೋಳದ ಹಿಟ್ಟು ಮತ್ತು ಆರ್ರೊರೂಟ್ ಹಿಟ್ಟು ಇಂತಹ ಪದಾರ್ಥಗಳನ್ನು ಒಳಗೊಂಡಿದೆ. ಚೀನಾ ಗಣರಾಜ್ಯದ ಫುಜಿಯಾನ್ ಪ್ರಾಂತ್ಯದ ಜಿಯಮೆನ್ ಪಟ್ಟಣದಲ್ಲಿ ಒಂದು ರಸ ಭಕ್ಷ್ಯವಾಗಿರುವ ಸಿಪುನ್ಕುಲಿಡ್ ಹುಳಗಳು, ಎಲ್ವರ್ ಗಳು ಹಾಗೂ ಹಾವು ಮೀನುಗಳಂತಹ ಕೆಲವು ಆಹಾರಗಳು ಬೇಯಿಸಿದಾಗ ಸ್ವಾಭಾವಿಕವಾಗಿಯೇ ಪ್ರೋಟಿನ್ ಜೆಲ್ ಅನ್ನು ತಯಾರಿಸುತ್ತವೆ. ಲಂಡನ್ನಿನ ಪೂರ್ವ ತುದಿಯಲ್ಲಿ ಒಂದು ಸವಿಯಾದ ಆಹಾರವಾಗಿರುವ ಮೊರಬ್ಬದಲ್ಲಿಟ್ಟಿರುವ ಹಾವು ಮೀನುಗಳು ಹಿಸುಕಿದ ಆಲೂಗಡ್ಡೆ ಜೊತೆ ತಿನ್ನಲ್ಪಡುತ್ತವೆ. ಪಾಟ್ ಮಾಡಿದ ಮಾಂಸಗಳನ್ನು ಆಸ್ಪಿಕ್ ನಲ್ಲಿಟ್ಟು (ಜಿಲೆಟಿನ್ ನಿಂದ ಮಾಡಿದ ಒಂದು ಜೆಲ್ ಹಾಗೂ ಸವಿಯಾದ ಮಾಂಸದ ಸಾರು) ೧೯೫೦ ರ ವರೆಗೂ ಇಂಗ್ಲೆಂಡಿನಲ್ಲಿ ಮಾಂಸಭಕ್ಷ್ಯವನ್ನು ಆಫ್-ಕಟ್ ಮಾಡಿ ಬಡಿಸುವುದು ಒಂದು ಸಾಮಾನ್ಯ ಪದ್ಧತಿಯಾಗಿತ್ತು. ಅನೇಕ ಜಗ್ ಮಾಡಿದ ಮಾಂಸಗಳನ್ನೂ ಸಹ ಮೊರಬ್ಬದಲ್ಲಿಡಲಾಗುತ್ತದೆ. ಹಣ್ಣಿನ ಪಾಕದಲ್ಲಿ ಸಂರಕ್ಷಿಸಿದ ಹಣ್ಣುಗಳನ್ನು ಮೊರಬ್ಬ, ಕಿತ್ತಲೆ ಹಣ್ಣಿನ ಫಲಪಾಕ ಅಥವಾ ಹಣ್ಣಿನ ಸಂರಕ್ಷಕಗಳೆಂದು ಕರೆಯುತ್ತಾರೆ. ಈ ಸಂಗತಿಯಲ್ಲಿ, ಹಣ್ಣಿನಿಂದ ನೈಸರ್ಗಿಕವಾಗಿ ಉತ್ಪಾದಿಸಲ್ಪಡುವ ಇಲ್ಲವೆ ಬೇಯಿಸುವಾಗ ಸೇರಿಸುವ ಪೆಕ್ಟಿನ್ ಸಾಮಾನ್ಯವಾಗಿ ಮುರಬ್ಬಾದ ಏಜೆಂಟ್ ಆಗಿರುತ್ತದೆ. ಸಾಮಾನ್ಯವಾಗಿ ಸಂರಕ್ಷಿಸಲ್ಪಟ್ಟ ಹಣ್ಣುಗಳನ್ನು ಜಾರ್ ಗಳಲ್ಲಿ ಸಕ್ಕರೆ ಹಾಕಿಡಲಾಗುತ್ತದೆ. ಕಾಯಿಸುವಿಕೆ, ಪ್ಯಾಕ್ ಮಾಡುವುದು ಮತ್ತು ಆಮ್ಲ ಹಾಗೂ ಸಕ್ಕರೆಯು ಸಂರಕ್ಷಣೆಯನ್ನು ಒದಗಿಸುತ್ತವೆ.

ಮಡಕೆಯಲ್ಲಿಡುವುದು

[ಬದಲಾಯಿಸಿ]

ಮಡಕೆಯಲ್ಲಿ ಜೋಡಿಸಿ, ಕೊಬ್ಬಿನ ಒಂದು ಪದರಿನ ಜೊತೆ ಹಾಕಿ ಮೊಹರು ಮಾಡುವುದು ಮಾಂಸವನ್ನು (ವಿಶೇಷವಾಗಿ ಶ್ರಿಂಪ್ ಗಳು) ಸಂರಕ್ಷಿಸುವ ಒಂದು ಪಾರಂಪರಿಕ ಬ್ರಿಟಿಷ್ ಪದ್ಧತಿಯಾಗಿದೆ. ಹಾಗೂ ಕೋಳೀಮರಿಯ ಯಕೃತ್ತು; ಚೆನ್ನಾಗಿ ಚೋಪ್ ಮಾಡಿದ ಮಾಂಸವನ್ನು ಇಡಲು ಒಂದು ಸಾಮಾನ್ಯ ಮಾರ್ಗವಾಗಿದೆ.

ಜಗ್ ನಲ್ಲಿ ಹಾಕಿಡುವುದು

[ಬದಲಾಯಿಸಿ]

ಮುಚ್ಚಿದ ಕ್ಯಾಸೊರಾಲ್ ಅಥವಾ ಮಣ್ಣಿನಿಂದ ಮಾಡಿದ ಜಗ್ಗಿನಲ್ಲಿ ಭದ್ರವಾಗಿ ಮಚ್ಚಿ ಮಾಂಸವನ್ನು (ಸಾಮಾನ್ಯವಾಗಿ ಗೇಮ್ಅಥವಾ ಮೀನು) ಚೆನ್ನಾಗಿ ಕುದಿಸುವ ಪದ್ಧತಿಯಿಂದ ಮಾಂಸವನ್ನು ಸಂರಕ್ಷಿಸಬಹುದು. ಜಗ್ ನಲ್ಲಿ ಹಾಕಿಡಬೇಕಾದ ಪ್ರಾಣಿಯನ್ನು ಸಾಮಾನ್ಯವಾಗಿ ತುಂಡು ತುಂಡಾಗಿ ಕತ್ತರಿಸಿ, ಬೇಯಿಸಿದ ಮಾಂಸದ ಸಾರು ಅಥವಾ ಸೈಂಧ್ರ ಲವಣದ ಸಹಿತ ಬಿಗಿಯಾಗಿ ಮೊಹರು ಮಾಡಿದ ಜಗ್ ನಲ್ಲಿಟ್ಟು ಚೆನ್ನಾಗಿ ಕುದಿಸಲಾಗುತ್ತದೆ. ಕೆಂಪು ವೈನ್ ಮತ್ತು/ಅಥವಾ ಪ್ರಾಣಿಯ ಸ್ವತಃ ರಕ್ತವನ್ನು ಬೇಯಿಸುವ ದ್ರವಕ್ಕೆ ಕೆಲವು ವೇಳೆ ಸೇರಿಸಲಾಗುತ್ತದೆ. ೨೦ ನೇ ಶತಮಾನದ ಮಧ್ಯಭಾಗದವರೆಗೂ ಬಿಗಿ ಯಾಗಿ ಮೊಹರು ಮಾಡಿದ ಜಗ್ ನಲ್ಲಿಡುವ ಪದ್ದತಿಯು ಮಾಂಸವನ್ನು ಸಂರಕ್ಷಿಸುವ ಜನಪ್ರಿಯ ವಿಧಾನವಾಗಿತ್ತು.

ವಿಕಿರಣ ಕ್ರಿಯೆಗೆ ಒಳಪಡಿಸುವಿಕೆ

[ಬದಲಾಯಿಸಿ]

ಗಾಮಾ ಕಿರಣಗಳಿಂದಾಗಲಿ (ಕೋಬಾಲ್ಟ್ -೬೦ ಅಥವಾ ಕೇಸಿಯಮ್೧೩೭ ನಂತಹ ರೇಡಿಯೋ ವಿಕಿರಣ ಮೂಲಗಳಿಂದ ಬಿಡುಗಡೆಗೊಳಿಸಲ್ಪಟ್ಟ) ಅಥವಾ ವೇಗವರ್ಧಕಗಳಿಂದ ಕ್ಷ-ಕಿರಣಗಳು ಇಲ್ಲವೆ ಹೆಚ್ಚಿನ ಶಕ್ತಿಯ ಎಲೆಕ್ಟ್ರಾನ್ ಗಳಿಂದಾಗಲಿ ವಿಕಿರಣ ವಿದ್ಯುದ್ವಾಹಿ ಕಣಗೊಳಿಸುವಿಕೆಗೆ ಆಹಾರ ವನ್ನು ತೆರೆದಿಡುವುದಕ್ಕೆ ಆಹಾರದ ವಿಕಿರಣಕ್ರಿಯೆ ಮಾಡಿದಂತಹ ಸ್ಥಿತಿಎನ್ನುತ್ತಾರೆ[೨]. ಈ ಉಪಚಾರವು ಜೀವಾಣುಗಳು, ಬೂಷ್ಟುಗಳು ಮತ್ತು ಕ್ರಿಮಿಗಳು ಹಾಗೂ ಮಾರಣಾಂತಿಕ ಕೀಟಾಣುಗಳ ಕೊಲ್ಲುವಿಕೆ, ಹಣ್ಣಾಗುವಿಕೆಯನ್ನು ನಿಧಾನಗೊಳಿಸುವಿಕೆ ಮತ್ತು ಹಣ್ಣುಗಳ ಹಾಳಾಗುವಿಕೆ, ಮತ್ತು ಹೆಚ್ಚಿನ ಪ್ರಮಾಣದಲ್ಲಿ ವೈರಾಣು ಮುಕ್ತವನ್ನಾಗಿಸಲು ಪ್ರೇರೇಪಿಸುವುದನ್ನು ಒಳಗೊಂಡಂತಹ ಪ್ರಭಾವಗಳ ಹೆಚ್ಚಿನ ವ್ಯಾಪ್ತಿಯನ್ನು ಹೊಂದಿದೆ. ಈ ತಂತ್ರಜ್ಞಾನವನ್ನು ಪಾಶ್ಚುರೀಕರಣ ಕ್ಕೆ ಹೋಲಿಸಬಹುದು; ಉತ್ಪನ್ನವನ್ನು ಬಿಸಿಮಾಡದ ಕಾರಣ ಅದನ್ನು ಕೆಲವು ವೇಳೆ 'ತಂಪಾದ ಪಾಶ್ಚುರೀಕರಣವೆಂದು' ಕರೆಯುತ್ತಾರೆ. ಈ ವಿಕಿರಣಕ್ರಿಯೆಯು ಪ್ರಿಯಾನ್ಸ್ ಅಥವಾ ವೈರಾಣುಗಳ ವಿರುದ್ಧ ಅಷ್ಟು ಪರಿಣಾಮಕಾರಿಯಲ್ಲ,ಅದು ಆಗಲೇ ಅತಿ ಸೂಕ್ಷ್ಮಾಣು ಜೀವಿ ಗಳಿಂದ ತಯಾರಿಸಲ್ಪಟ್ಟ ವಿಷವನ್ನು ತೆಗೆದು ಹಾಕಲಾರದು, ಹಾಗೂ ಹೆಚ್ಚಿನ ಆರಂಭದ ಗುಣಮಟ್ಟದ ಆಹಾರಕ್ಕೆ ಮಾತ್ರ ಉಪಯೋಗಕರವಾಗಿರುತ್ತದೆ. ವಿಕಿರಣ ಕಾರ್ಯವಿಧಾನವು ಅಣುಶಕ್ತಿಗೆ ಸಂಬಂಧಿಸಿಲ್ಲ, ಆದರೆ ಅದು ಅಣು ಸಮೂಹ ರಿಯಾಕ್ಟರ್ ಗಳಲ್ಲಿ ಉತ್ಪಾದಿಸಲ್ಪಟ್ಟ ರೇಡಿಯೋ ವಿಕಿರಣ ನ್ಯೂಕ್ಲೈಡ್ ಗಳಿಂದ ಬಿಡುಗಡೆಯಾದ ವಿಕಿರಣವನ್ನು ಉಪಯೋಗಿಸಿಕೊಳ್ಳಬಹುದು. ವಿದ್ವುದ್ವಾಹಿ ಕಣದ ವಿಕಿರಣವು ಜೀವಕ್ಕೆ ಅಪಾಯಕರವಾದದ್ದು (ಆದ್ದರಿಂದ ವೈರಾಣು ಮುಕ್ತವನ್ನಾಗಿಸಲು ಅದರ ಉಪಯೋಗತನ ಹೆಚ್ಚು); ಈ ಕಾರಣಕ್ಕಾಗಿ ಈ ಕಾರ್ಯವಿಧಾನಗಳು ನಡೆಯುವಲ್ಲಿ ಒಂದು ಅತ್ಯಂತ ಹೆಚ್ಚಿನ ರಕ್ಷಣೆಯಲ್ಲಿ ವಿಕಿರಣಕ್ರಿಯೆ ಬಿಡುವ ಕೊಠಡಿಯನ್ನು ಶೀಲ್ಡ್ ಮಾಡಿರುತ್ತಾರೆ. ಅಂತಹ ಅನುಕೂಲತೆಗಳಲ್ಲಿ ಕೆಲಸಗಾರರಾಗಲಿ ಅಥವಾ ಪರಿಸರವಾಗಲಿ ಈ ಸೌಲಭ್ಯದಿಂದ ಯಾವುದೇ ವಿಕಿರಣ ಪ್ರಮಾಣವನ್ನು ಹೊಂದಬಾರದೆಂದು ವಿಕಿರಣ ಸುರಕ್ಷತೆಯ ಕಾರ್ಯವಿಧಾನಗಳನ್ನ ರೂಪಿಸಿರುತ್ತಾರೆ. ವಿಕಿರಣ ಕ್ರಿಯೆಗೆ ಒಳಪಡಿಸಿದ ಆಹಾರವು ರೇಡಿಯೋ ವಿಕಿರಣವಾಗುವುದಿಲ್ಲ, ಹಾಗೂ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತಜ್ಞ ಸಂಸ್ಥೆಗಳು ಆಹಾರ ವಿಕಿರಣ ಕ್ರಿಯೆ ಆರೋಗ್ಯಕರವಾದದ್ದೆಂದು ಘೋಷಿಸಿದ್ದಾರೆ. ಆದಾಗ್ಯೂ, ಅಂತಹ ಆಹಾರವನ್ನು ಸೇವಿಸುವ ಗುಣಮಟ್ಟದ ಬಗ್ಗೆ ಎದುರಾಳಿಗಳು[೩] ಮತ್ತು ಗ್ರಾಹಕರ ಸಂಸ್ಥೆಗಳಿಂದ [೪] ವಿರೋಧಿಸಲ್ಪಟ್ಟದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತಜ್ಞ ಸಂಸ್ಥೆಗಳು ಆಹಾರ ವಿಕಿರಣ ಕ್ರಿಯೆ 'ಆರೋಗ್ಯಕರವಾದದ್ದೆಂದು' ಘೋಷಿಸಿದ್ದಾರೆ; ವಿಶ್ವ ಸಂಸ್ಥೆಯ ಅಂಗ ಸಂಸ್ಥೆಗಳಾದ WHO ಮತ್ತು FAO ಗಳು ಆಹಾರದ ವಿಕಿರಣ ಕ್ರಿಯೆಯನ್ನು ಉಪಯೋಗಿಸಲು ಅನುಮತಿ ಕೊಟ್ಟಿದ್ದಾರೆ. ಆಹಾರವನ್ನು ವಿಕಿರಣಕ್ರಿಯೆಗೆ ಒಳಪಡಿಸ ಬೇಕೆ ಬೇಡವೇ ಎಂದು ಅಂತರಾಷ್ಟ್ರೀಯ ಕಾನೂನು 'ನಿಯಂತ್ರಣ ಬೇಡ' ಎನ್ನುವುದರಿಂದ ಸಂಪೂರ್ಣ ನಿಷೇಧದ ವರೆಗೆ ವಿಶ್ವವ್ಯಾಪಿಯಾಗಿ ಮಾರ್ಪಾಡಾಗುತ್ತದೆ.[೫] ಸುಮಾರು ೪೦ ಕ್ಕೂ ಹೆಚ್ಚು ದೇಶಗಳಲ್ಲಿ ಪ್ರತಿ ವರುಷವೂ ವಿಶ್ವವ್ಯಾಪಿಯಾಗಿ ೫೦0,000 ಟನ್ನುಗಳಷ್ಟು ಆಹಾರ ವಸ್ತುಗಳು ವಿಕಿರಣಕ್ರಿಯೆಗೆ ಒಳಪಡುತ್ತಿವೆಯೆಂದು ಅಂದಾಜು ಮಾಡಲಾಗಿದೆ. ಹಣ್ಣಿನ ನೊಣದ ದಿಗ್ಭಂಧನಕ್ಕಾಗಿ ತಾಜಾ ಹಣ್ಣನ್ನು ವಿಕಿರಣಕ್ರಿಯೆಗೆ ಒಳಪಡಿಸುವ ಹೆಚ್ಚುತ್ತಿರುವ ಭಾಗಗಳ ಸಹಿತ, ಇವುಗಳಲ್ಲಿ ಮಸಾಲೆಗಳು ಮತ್ತು ಕಾಂಡಿಮೆಂಟ್ಸ್ ಗಳು ಮುಖ್ಯವಾಗಿವೆ[೬][೭].

ವಿದ್ಯುತ್ ಕ್ಷೇತ್ರದ ತರಂಗಗಳಿಂದ ಸಂರಕ್ಷಣೆ

[ಬದಲಾಯಿಸಿ]

ಒಂದು ಶಕ್ತಶಾಲಿ ವಿದ್ಯುತ್ ಕ್ಷೇತ್ರದ ಸಂಕ್ಷಿಪ್ತ ತರಂಗಗಳ ಸಹಾಯದಿಂದ ಜೀವಕೋಶಗಳನ್ನು ಪ್ರತಿಕ್ರಿಯಸಲು ತರಂಗಗಳ ವಿದ್ಯುತ್ ಕ್ಷೇತ್ರ (PEF) ಸಂರಕ್ಷಣೆಯು ಒಂದು ಪದ್ಧತಿಯಾಗಿದೆ. ಆಹಾರ ಉತ್ಪನ್ನಗಳನ್ನು ವೈರಾಣು ಮುಕ್ತವನ್ನಾಗಿ ಮಾಡಲು PEF ಸಂಸ್ಕರಣೆಯು ಕಡಿಮೆ ಉಷ್ಣಾಂಶದ ಪರ್ಯಾಯ ಪಾಶ್ಚುರೀಕರಣದ ಪದ್ಧತಿಯ ಒಂದು ಮಾದರಿ ಶಕ್ತಿಯಾಗುತ್ತಿದೆ. PEF ಸಂಸ್ಕರಣೆಯಲ್ಲಿ ಒಂದು ವಸ್ತುವನ್ನು ಎರಡು ವಿದ್ಯುತ್ ವಾಹಕಗಳ ನಡುವೆ ಇಡಲಾಗುತ್ತದೆ, ನಂತರ ತರಂಗಗಳ ವಿದ್ಯುತ್ ಕ್ಷೇತ್ರವನ್ನು ಹಾಯಿಸಲಾಗುತ್ತದೆ. ಜೀವಕೋಶಗಳನ್ನು ಕೊಲ್ಲುವಂತಹ ಜೀವಕೋಶದ ಪುರೆಗಳ ತೂತುಗಳನ್ನು ವಿದ್ಯುತ್ ಕ್ಷೇತ್ರವು ವಿಸ್ತರಿಸಿ ಅವುಗಳ ಸಾರವನ್ನು ಬಿಡುಗಡೆಗೊಳಿಸುತ್ತದೆ. ಆಹಾರ ಸಂಸ್ಕರಣೆಗಾಗಿ PEF ಇನ್ನೂ ಸಂಶೋಧನೆಗೊಳಗಾಗಿರುವ ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನ. ಹಣ್ಣಿನ ರಸಗಳ ಪಾಶ್ಚುರೀಕರಣಕ್ಕೆ ಪೆಫ್ ಸಂಸ್ಕರಣೆಯು ಮಿತಿಯುಳ್ಳ ಕೈಗಾರಿಕಾ ಉಪಯೋಗಗಳಿವೆ.

ಸುಧಾರಿಸಿದ ವಾತಾವರಣ

[ಬದಲಾಯಿಸಿ]

ತನ್ನ ಸುತ್ತಲಿನ ವಾತಾವರಣವನ್ನು ಬದಲಾವಣೆ ಮಾಡುತ್ತಾ ಆಹಾರ ಸಂರಕ್ಷಿಸಲು ಸುಧಾರಿಸಿದ ವಾತಾವರಣವು ಒಂದು ಮಾರ್ಗವಾಗಿದೆ ಇಂಗಾಲದ ಡೈ ಆಕ್ಸೈಡ್ (CO2) ಸಾರವನ್ನು ಹೆಚ್ಚಿಸಿ ಹಾಗೂ ಆಮ್ಲಜನಕದ (O2) ಸತ್ವವನ್ನು ಕಡಿಮೆಗೊಳಿಸಲು ಬದಲಾಯಿಸಿದ ವಾಯು ಮಂಡಲದ ಸಹಿತ ಸಂರಕ್ಷಿಸಲು ಅತ್ಯಧಿಕವಾಗಿ ಕಷ್ಟವಾದಂತಹ ಹಸಿ ತರಕಾರಿ ಬೆಳೆಗಳನ್ನು ಈಗ ಭದ್ರವಾಗಿ ಮೊಹರು ಮಾಡಿ ಚೀಲಗಳಲ್ಲಿ ತುಂಬಲಾಗುತ್ತದೆ ಅಂತಹ ಪರಿಸ್ಥಿತಿಗಳಲ್ಲಿ ಹಸಿ ತರಕಾರಿಗಳು ತಮ್ಮ ತೋರಿಕೆ ಹಾಗೂ ರಚನೆಯನ್ನು ಉಳಿಸಿಕೊಂಡರೂ, ಸಂರಕ್ಷಣೆಯ ಈ ಪದ್ಧತಿಯಲ್ಲಿ ನ್ಯೂಟ್ರಿಯಂಟ್ಸ್, ವಿಶೇಷವಾಗಿ ಜೀವಸ್ವತ್ವಗಳನ್ನು ಉಳಿಸಿಕೊಳ್ಳಲಾಗದೆಂಬ ಯೋಚನೆಯಿದೆ. - - ಧಾನ್ಯಗಳನ್ನು ಇಂಗಾಲದ ಡೈ ಆಕ್ಸೈಡ್ ಉಪಯೋಗಿಸಿ ಸಂರಕ್ಷಿಸಬಹುದು. ತಳದಲ್ಲಿ ಘನೀಕರಿಸಿದ ಮಂಜುಗಡ್ಡೆಯ ಗಟ್ಟಿಯನ್ನಿರಿಸಿ ಹಾಗೂ ಡಬ್ಬವನ್ನು ದಾನ್ಯದಿಂದ ತುಂಬುತ್ತಾರೆ. ನಂತರ ಆ ಡಬ್ಬದಿಂದ ಹೆಚ್ಚಿನ ಅನಿಲವನ್ನು "ಹೊರತೆಗೆಯುತ್ತಾರೆ". ಘನೀಕರಿಸಿದ ಮಂಜುಗಡ್ಡೆ ಗಟ್ಟಿಗಳಿಂದ ಇಂಗಾಲದ ಡೈ ಆಕ್ಸೈಡ್ ಆವಿಯಾಗಿ ಹರಡಿ ಕ್ರಿಮಿ ಕೀಟಗಳು, ಬೂಷ್ಟು, ಹಾಗೂ ಆಮ್ಲಜನಕದೊಡನೆ ಸೇರಿ ಧಾನ್ಯ ಹಾಳಾಗುವುದನ್ನು ತಡೆಯುತ್ತದೆ. ಈ ರೀತಿಯಾಗಿ ಸಂಗ್ರಹಿಸಿದ ಧಾನ್ಯ ಐದು ವರುಷಗಳವರೆಗೆ ಆಹಾರ ಯೋಗ್ಯವಾಗಿ ಉಳಿಯುತ್ತದೆ. - ಹೈಪಾಕ್ಸಿಯ ಮುಖಾಂತರ ಧಾನ್ಯದಲ್ಲಿ ಕ್ರಿಮಿ ಕೀಟಗಳನ್ನು ಕೊಲ್ಲಲು ಶೇಕಡಾ 98 ಅಥವಾ ಅದಕ್ಕಿಂತ ಹೆಚ್ಚಿನ ಸತ್ವದಲ್ಲಿ ಸಾರಜನಕ (N2) ಅನಿಲವನ್ನೂ ಸಹ ಪರಿಣಾಮಕಾರಿಯಾಗಿ ಉಪಯೋಗಿಸಲಾಗುತ್ತದೆ. ಆದಾಗ್ಯೂ ಕೇವಲ ಶೇಕಡಾ 80 ಅಥವಾ ಅಷ್ಟೆ ಸತ್ವವನ್ನು ಅಪೇಕ್ಷಿಸುತ್ತಾ, ಹೈಪರ್ ಕಾರ್ಬಿಯ ಮತ್ತು ಹೈಪಾಕ್ಸಿಯ ಗಳೆರಡರ ಮುಖಾಂತರ ಅಣುಜೀವಿಗಳನ್ನು ಅದು ಕೊಲ್ಲುವುದರಿಂದೆ ಈ ವಿಚಾರದಲ್ಲಿ ಇಂಗಾಲ ಡೈ ಆಕ್ಸೈಡ್ ಒಂದು ಅನುಕೂಲತೆಯನ್ನು ಹೊಂದಿದೆ. ಇದು ಗಾಳಿ ಸೇರದಂತೆ ಮಾಡಿದ ಮೊಹರು ಕಾಪಾಡಲಾಗದಂತಹ ಸಂಧರ್ಭಗಳಲ್ಲಿ ಹೊಗೆ ಹಾಯಿಸುವಿಕೆಗೆ ಇಂಗಾಲದ ಡೈ ಆಕ್ಸೈಡ್ ಅನ್ನು ಆಯ್ಕೆಗೆ ಯೋಗ್ಯವಾಗುವಂತೆ ಮಾಡುತ್ತದೆ.

ಭೂಮಿಯಲ್ಲಿ ಹೂತಿಡುವಿಕೆ

[ಬದಲಾಯಿಸಿ]

ಭೂಮಿಯಲ್ಲಿ ಆಹಾರವನ್ನು ಹೂತಿಡುವ ಪದ್ಧತಿಯು ಅನೇಕ ಕಾರಣಗಳಿಂದ ಅದನ್ನು ಸಂರಕ್ಷಿಸುತ್ತದೆ: ಬೆಳಕಿನ ಕೊರತೆ, ಆಮ್ಲಜನಕದ ಕೊರತೆ, ತಂಪಾದ ಉಷ್ಣಾಂಶಗಳು, pH ಮಟ್ಟ, ಅಥವಾ ಮಣ್ಣಿನಲ್ಲಿನ ತೇವಾಂಶ ಶೋಷಕ. ಉಪ್ಪು ಹಾಕುವಿಕೆ ಅಥವಾ ಹುಳಿಯುವಿಕೆಯಂತಹ ಇತರೆ ಪದ್ಧತಿಗಳ ಜೊತೆಯೂ ಹೂತಿಡುವುದನ್ನು ಒಟ್ಟುಗೂಡಿಸಬಹುದು. ಹಲವಾರು ಬೇರು ತರಕಾರಿಗಳು (ಕಂದಮೂಲಗಳು) ಸುಲಭವಾಗಿ ಹಾಳಾಗುವುದಿಲ್ಲ ಹಾಗೂ ಇಂತಹವುಗಳಿಗೆ ಹೆಚ್ಚಿನ ಸಂರಕ್ಷಣೆಯ ಅಗತ್ಯವೂ ಇರುವುದಿಲ್ಲ, ಕೇವಲ ಬೆಳಕಿಲ್ಲದ ಹಾಗೂ ತಂಪಾದ ಸ್ಥಳದಲ್ಲಿರಿಸಿದರೆ ಸಾಕು; ಉದಾಹರಣೆಗೆ ಶೇಖರಣಾ ಉಗ್ರಾಣ ಗಳಂತೆ, ಭೂಮಿಯಲ್ಲಿ ಹೂಳಬಹುದು. ಸೆಂಚುರಿ ಮೊಟ್ಟೆಗಳನ್ನು ಕ್ಷಾರಭರಿತ ಮಣ್ಣು (ಆಥವಾ ಇನ್ನಾವುದೇ ಕ್ಷಾರಭರಿತ ವಸ್ತುವಿನಲ್ಲಿ) ಹುದುಗಿಸುವುದರ ಮೂಲಕ ತಯಾರಿಸುವುದರ ಪರಿಣಾಮವಾಗಿ ಅವುಗಳಲ್ಲಿನ "ಅಜೈವಿಕ" ಹುಳಿಯಾಗುವಿಕೆಯು pH ಏರುವುದರ ಮೂಲಕ ಶೇಖರಯೋಗ್ಯವಾಗುವುದೇ ವಿನಹ ಹಾಳಾಗುವುದು ತಪ್ಪುತ್ತದೆ. ಈ ಹುಳಿಯುವಿಕೆಯು ಆಹಾರವನ್ನು ಸಂರಕ್ಷಿಸುತ್ತದೆ ಮತ್ತು ಹೆಚ್ಚು ಸಂಕೀರ್ಣ ಹಾಗೂ ಸಾರ ಕಡಿಮೆಯಿರುವ ಪ್ರೋಟೀನ್ ಗಳನ್ನು ಮತ್ತು ಕೊಬ್ಬಗಳನ್ನು ವಿಚ್ಛಿನ್ನಗೊಳಿಸಿ ಸರಳ ಹಾಗೂ ಸಾರಭರಿತವಾಗಿಸುತ್ತದೆ. ಸಾಮಾನ್ಯವಾಗಿ ಎಲ್ಲಾ ಆಹಾರಗಳನ್ನೂ ಒಣಗಿರುವ ಹಾಗೂ ಲವಣಭರಿತ ಮಣ್ಣಿನಲ್ಲಿ (ಹೀಗಾಗಿ ಒಣಗಿಸುವ ಗುಣವುಳ್ಳ) ಅಥವಾಾ ಗಡ್ಡೆಗಟ್ಟಿದ ಮಣ್ಣಿನಲ್ಲಿ ಹೂಳಲಾಗುತ್ತದೆ. ಕೋಸು ಸಾಮಾನ್ಯವಾಗಿ ಯುಎಸ್ಎಯ ಉತ್ತರದಲ್ಲಿನ ತೋಟಗಳಲ್ಲಿ ಶಿಶಿರದಲ್ಲಿ ಸಂರಕ್ಷಣೆಗಾಗಿ ಹೂಳಲ್ಪಡುತ್ತದೆ. ಕೆಲವು ವಿಧಾನಗಳು ಅದನ್ನು ಗರಿಗರಿಯಾಗಿರಿಸುತ್ತದೆ ಮತ್ತು ಕೆಲವು ಸವರ್ ಕ್ರಾಟ್ ಅನ್ನು ಉತ್ಪಾದಿಸುತ್ತವೆ. ಇಂತಹುದೇ ವಿಧಾನದ ಮೂಲಕ ಖಿಂಕಿಯನ್ನೂ ಉತ್ಪಾದಿಸಲಾಗುತ್ತದೆ. ಕೆಲವೊಮ್ಮೆ ಮಾಂಸವು ಸಂರಕ್ಷಣೆಯನ್ನು ಉಂಟುಮಾಡುವ ಸ್ಥಿತಿಗಳಲ್ಲಿ ಹೂಳಲ್ಪಡುತ್ತದೆ. ಕೆಂಡ ಅಥವಾಾ ಬೂದಿಯಲ್ಲಿ ಹೂತಾಗ, ಬಿಸಿಯು ಪ್ಯಾಥೋಜೆನ್ ಗಳನ್ನು ಕೊಲ್ಲುತ್ತದೆ, ಬೂದಿಯು ಒಣಗಿಸುತ್ತದೆ ಮತ್ತು ಭೂಮಿಯು ಆಮ್ಲಜನಕವನ್ನು ತಡೆಯೊಡ್ಡುವುದರ ಮೂಲಕ ಕಲುಷತೆಯನ್ನು ದೂರಗೊಳಿಸುತ್ತದೆ. ಭೂಮಿಯು ಬಹಳವೇ ತಂಪಾಗಿರುವ ಜಾಗದಲ್ಲಿ ಹೂತರೆ, ಭೂಮಿಯು ಶೈತ್ಯಪೆಟ್ಟಿಗೆಯಂತೆ ಕಾರ್ಯವೆಸಗುತ್ತದೆ.

ಸೂಕ್ಷ್ಮಾಣುಗಳ ನಿಯಂತ್ರಿತ ಬಳಕೆ

[ಬದಲಾಯಿಸಿ]

ಚೀಸ್ ಗಳು, ವೈನ್ ಗಳು ಮತ್ತು ಬೀರ್ ಗಳಂತಹ ಆಹಾರಗಳು ಬಹಳ ಕಾಲ ಹಾಳಾಗದಿರಲು ಕಾರಣವೆಂದರೆ ಅವುಗಳ ತಯಾರಿಕೆಯಲ್ಲಿ ಉಪಯೋಗಿಸುವ ನಿರ್ದಿಷ್ಟವಾದ ಸೂಕ್ಷ್ಮಾಣುಗಳು ಅವುಗಳಿಗಿಂತಲೂ ಕೆಡುಕಾದ ಜೀವಿಗಳಿಂದ ಆಹಾರವು ಕೆಡದಂತೆ ಕಾಪಾಡುತ್ತವೆ. ಈ ಸೂಕ್ಷ್ಮಾಣುಗಳು ತಮಗೂ, ಇತರ ಸೂಕ್ಷ್ಮಾಣುಗಳಿಗೂ ಮಾರಕವಾಗುವಂತಹ ಆಮ್ಲ ಅಥವಾಾ ಆಲ್ಕೋಹಾಲ್ ಅನ್ನು ಉತ್ಪಾದಿಸಿ ಪ್ಯಾಥೋಜೆನ್ ಗಳನ್ನು ತಡೆಗಟ್ಟುತ್ತವೆ. ಸ್ಟಾರ್ಟರ್ ಸೂಕ್ಷ್ಮಾಣುಗಳು, ಲವಣ, ಹಾಪ್ ಗಳು, ನಿಯಂತ್ರಿತ (ಸಾಮಾನ್ಯವಾಗಿ ತಂಪಾದ) ತಾಪಮಾನಗಳು, ನಿಯಂತ್ರಿತ (ಸಾಮಾನ್ಯವಾಗಿ ಕಡಿಮೆ) ಮಟ್ಟದ ಆಮ್ಲಜನಕ ಮತ್ತು/ಅಥವಾಾ ಇತರ ವಿಧಾನಗಳನ್ನು ಬಳಸುವುದರ ಮೂಲಕ ನಿರ್ದಿಷ್ಟವಾದ ನಿಯಂತ್ರಿತ ಸ್ಥಿತಿಗಳನ್ನು ನಿರ್ಮಿಸಿ ಮನುಜನು ಸೇವಿಸಲು ಯಾಗ್ಯವಾದ ಆಹಾರ ಉತ್ಪಾದಿಸುವ ಜೀವಿಗಳನ್ನು ಬೆಂಬಲಿಸಲಾಗುತ್ತದ.

ತೀವ್ರ ಒತ್ತಡದ ಮೂಲಕ ಆಹಾರ ಸಂರಕ್ಷಣೆ

[ಬದಲಾಯಿಸಿ]

ತೀವ್ರ ಒತ್ತಡದ ಆಹಾರ ಸಂರಕ್ಷಣೆ ಎಂದರೆ ಆಹಾರಗಳನ್ನು ಸಂರಕ್ಷಿಸಲಾಗಿ ಉಪಯೋಗಿಸುವ ಹೆಚ್ಚಿನ ಒತ್ತಡ. ಪ್ರತಿ ಚದರ ಆಂಗುಲಕ್ಕೆ ೭೦,000 ಪೌಂಡ್ ಗಳಿಗಿಂತಲೂ ಹೆಚ್ಚಿನ ಒತ್ತಡವನ್ನು ಹೇರುವ ಪಾತ್ರದಲ್ಲಿ ಒತ್ತುವುದರ ಮೂಲಕ, ಆಹಾರವು ನೋಡಲು ತಾಜಾ, ಸಾರಯುಕ್ತ, ಒಳ್ಳೆಯ ಆಕಾರವುಳ್ಳ ಮತ್ತು ಪೌಷ್ಟಿಕವಾದ ರೀತಿಯಲ್ಲಿರುವಂತೆ ಸಂಸ್ಕರಿಸಬಹುದು ಹಾಗೂ ಮಾರಕ ಸೂಕ್ಷ್ಮಾಣುಗಳನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಹಾಳಾಗುವಿಕೆಯನ್ನು ತಡ ಮಾಡಬಹುದು. " ೨೦೦೧ ರ ಹೊತ್ತಿಗೆ, ಸಾಕಷ್ಟು ವಾಣಿಜ್ಯಪರ ಉಪಕರಣಗಳನ್ನು ವೃದ್ಧಿಗೊಳಿಸಲಾದುದರಿಂದ 2005ರ ವೇಳೆಗೆ ಕಿತ್ತಳೆಯ ರಸದಿಂದ ಹಿಡಿದು ಗಾಕಾಮೋಲ್, ಡೆಲಿ ಮಾಂಸಗಳವರೆಗೂ ಈ ವಿಧಾನವನ್ನು ಅಳವಡಿಸಲಾಗುತ್ತಿತ್ತು ಮತ್ತು ವ್ಯಾಪಕವಾಗಿ ಮಾರಲಾಗುತ್ತಿತ್ತು.[೮]

ಈ ಕೆಳಗಿನವುಗಳನ್ನೂ ನೋಡಬಹುದು

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]

thumb|right|ಸಂರಕ್ಷಿತ ಆಹಾರಗಳು.

 1. ನಿಕೋಲಸ್ ಅಪ್ಪರ್ಟ್ ಇಂವೆಂಟಿಯರ್ ಎಟ್ ಹ್ಯೂಮನಿಸ್ತೆ ಲೇಖಕ ಜೀನ್-ಪಾಲ್ ಬಾರ್ಬಿಯರ್, ಪ್ಯಾರಿಸ್, 1994 ಮತ್ತು http://www.appert-aina.com
 2. ಅನಾನ್., ಆಹಾರ ಇರ್ರೇಡಿಯೇಷನ್ - ಆಹಾರದ ಸುರಕ್ಷತೆಯನ್ನು ಸಂರಕ್ಷಿಸುವ ಮತ್ತು ವೃದ್ಧಿಗೊಳಿಸುವ ಒಂದು ವಿಧಿವಿಧಾನ, WHO, ಜಿನೇವಾ, ೧೯೯೧1
 3. ಹಾಥರ್,W. & ವರ್ಥ್, M., ಝ್ಯಾಪ್ಡ್! ಇರ್ರೇಡಿಯೇಷನ್ ಮತ್ತು ಆಹಾರದ ಸಾವು, ಆಹಾರ ಮತ್ತು ನೀರು ವಾಚ್ ಪ್ರೆಸ್, ವಾಷಿಂಗ್ಟನ್ ಡಿಸಿ, 2008
 4. "ಕಂಸ್ಯೂಮರ್ಸ್ ಇಂಟರ್ನ್ಯಾಷಲನ್ - ಹೋಂ". Archived from the original on 2010-08-18. Retrieved 2010-06-17.
 5. Clearances.jsp?module=cif NUCLEUS - ಆಹಾರ ರೇಡಿಯೇಷನ್ ಕರಣ ತೆರವುಗಳು[ಶಾಶ್ವತವಾಗಿ ಮಡಿದ ಕೊಂಡಿ]
 6. "ಆಹಾರ ರೇಡಿಯೇಷನ್-ಕರಣ - ADA J Am ಮಿತಾಹಾರ ಸಂಘದವರ ಅಭಿಮತ. 2000;100:246-253". Archived from the original on 2016-02-16. Retrieved 2010-06-17.
 7. C.M. ಡೀಲೇ, M. ಗಾವೋ, R. ಹಂಟರ್, D.A.E. ಎಹ್ಲೆರ್ಮ್ಯಾನ್, ಏಷ್ಯಾ ಪೆಸಿಫಿಕ್, ಅಮೆರಿಕಗಳು ಮತ್ತು ಯೂರೋಪ್ ನಲ್ಲಿ ಆಹಾರ ರೇಡಿಯೇಷನ್-ಕರಣದ ಅಭಿವೃದ್ಧಿ; ರೇಡಿಯೇಷನ್ ಸಂಸ್ಕರಣದ ಬಗ್ಗೆ ಅಂತರರಾಷ್ಟರೀಯ ಸಮಾವೇಶಕ್ಕೆ ನೀಡಿದ ಉಪನ್ಯಾಸ, ಕೌಲ ಲುಂಪುರ್, 2006. http://www.doubleia.org/index.php?sectionid=43&parentid=13&contentid=494 Archived 2017-02-18 ವೇಬ್ಯಾಕ್ ಮೆಷಿನ್ ನಲ್ಲಿ.
 8. "High-Pressure Processing Keeps Food Safe". Military.com. Archived from the original on 2008-02-02. Retrieved 2008-12-16. Pressed inside a vessel exerting 70,000 pounds per square inch or more, food can be processed so that it retains its fresh appearance, flavor, texture and nutrients while disabling harmful microorganisms and slowing spoilage. {{cite news}}: Cite has empty unknown parameter: |coauthors= (help)CS1 maint: bot: original URL status unknown (link)

ಆಕರಗಳು

[ಬದಲಾಯಿಸಿ]

ಬಾಹ್ಯ ಕೊಂಡಿಗಳು

[ಬದಲಾಯಿಸಿ]