ಉಪ್ಪಿನಕಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಾವಿನಕಾಯಿ ಉಪ್ಪಿನಕಾಯಿ

ಉಪ್ಪಿನಕಾಯಿಯು ಎಣ್ಣೆ ಅಥವಾ ನಿಂಬೆರಸ ಮತ್ತು ವಿವಿಧ ಸಂಬಾರ ಪದಾರ್ಥಗಳು ಹಾಗು ಉಪ್ಪಿನಲ್ಲಿ ಊರಿಡಲಾದ ಹಣ್ಣುಗಳು ಮತ್ತು ತರಕಾರಿಗಳನ್ನು ಹೊಂದಿರುತ್ತದೆ. ಕೆಲವು ಪ್ರದೇಶಗಳು ಮಾಂಸ ಮತ್ತು ಮೀನನ್ನು ಊರಿಟ್ಟು ಉಪ್ಪಿನಕಾಯಿ ತಯಾರಿಸುತ್ತವೆ. ಕೆಲವೊಮ್ಮೆ ಉಪ್ಪಿನಕಾಯಿಯನ್ನು ಈರುಳ್ಳಿ, ಬೆಳ್ಳುಳ್ಳಿ, ಮೆಣಸಿನಕಾಯಿಗಳಂತಹ ಸಂಬಾರ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಉಪ್ಪಿನಕಾಯಿ ನಮ್ಮ ದಕ್ಷಿಣ ಭಾರತೀಯರ ಊಟದ ಅವಿಭಾಜ್ಯ ಅಂಗ ಎಂದಾರೆ ತಪ್ಪಾಗಲಾರದು,ಅಶ್ಟೇ ಏಕೆ ಉತ್ತರ ಭಾರತದಲ್ಲಿಯೂ "ಅಚಾರ್" ಎಂದು ಕರೆಯಲ್ ಪಡುವ ಈ ತಿನಿಸು ನಮ್ಮ ಭಾರತೀಯ ಭೋಜನದ ಒಂದು ಅವಿಭಾಜ್ಯ ಅಂಗ.