ನೆಲ್ಲಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಫಿಲಾಂಥಸ್ ಎಂಬ್ಲಿಕಾ
ನೆಲ್ಲಿ
  • ಹಣ್ಣು
  • ವೈಜ್ಞಾನಿಕ ವರ್ಗೀಕರಣ
  • ಕಿಂಗ್ಡಮ್: ಸಸ್ಯಗಳು
  • (ಶ್ರೇಣೀಕರಿಸದ): ಆವೃತಬೀಜಿಗಳು
  • (ಶ್ರೇಣೀಕರಿಸದ): Eudicots
  • (ಶ್ರೇಣೀಕರಿಸದ): Rosids
  • ಆರ್ಡರ್: Malpighiales (ಗೋಲಪುಷ್ಪ)
  • ಕುಟುಂಬ: Phyllanthaceae(ಪುಷ್ಪಪ್ರದಸಸಸ್ಯ
  • ಪಂಗಡ: Phyllantheae(ಧೃಡಕಾಂಢದವು)
  • Subtribe: Flueggeinae ಚಿಕ್ಕ ಎಲೆಯವು
  • ಪ್ರಕಾರ: ಫಿಲ್ಲಾಂತಸ್ ಮೊನಚು ಎಲೆಯವು
  • ತಳಿಗಳು: ಪಿ ಎಂಬ್ಲಿಕ
  • ವೈಜ್ಞಾನಿಕ ಹೆಸರು:ಫಿಲಾಂಥಸ್ ಎಂಬ್ಲಿಕಾ

.

ಲಕ್ಷಣ[ಬದಲಾಯಿಸಿ]

ನೆಲ್ಲಿ
Phyllanthus officinalis.jpg
Plant
Phyllanthus emblica BNC.jpg
Fruit
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: Plantae
(unranked): Angiosperms
(unranked): Eudicots
(unranked): Rosids
ಗಣ: Malpighiales
ಕುಟುಂಬ: Phyllanthaceae
ಬುಡಕಟ್ಟು: Phyllantheae
ಉಪಬುಡಕಟ್ಟು: Flueggeinae
ಕುಲ: Phyllanthus
ಪ್ರಭೇದ: P. emblica
ದ್ವಿಪದ ಹೆಸರು
Phyllanthus emblica
L.[೧]
ಸಮಾನಾರ್ಥಕಗಳು[೨]
  • Cicca emblica (L.) Kurz
  • Diasperus emblica (L.) Kuntze
  • Dichelactina nodicaulis Hance
  • Emblica arborea Raf.
  • Emblica officinalis Gaertn.
  • Phyllanthus glomeratus Roxb. ex Wall. nom. inval.
  • Phyllanthus mairei H.Lév.
  • Phyllanthus mimosifolius Salisb.
  • Phyllanthus taxifolius D.Don


ಮಧ್ಯಮ ಗಾತ್ರದ, ಚಳಿಗಾಲದಲ್ಲಿ ಎಲೆಗಳು ಉದುರುವ ಚಿಕ್ಕ ಚಿಕ್ಕ ಎಲೆಗಳುಳ್ಳ ಮರ. ತೊಗಟೆಯು ಬಿಳಿ ಮಾಸು ಹಸಿರು ಹಳದಿ ಬಣ್ಣದ ಸಣ್ಣ ಸಣ್ಣ ಹೂಗಳು. ಕಾಯಿಗಳು ಗುಂಡಗೆ ಹಸಿರಾಗಿರುವುದು. ಬಲಿತ ಹಣ್ಣು ಹೊಳಪಿನಿಂದ ಕೂಡಿರುತ್ತದೆ. ಹಣ್ಣಿನ ಮೆಲೆ ಸ್ಪಷ್ಟವಾದ ಕಾಣುವ ಆರು ರೇಖೆಗಳಿರುತ್ತದೆ.ಒಣಗಿದ ಕಾಯಿ ಕಪ್ಪಾಗಿದ್ದು, ಒಗರು ಹುಳಿಯಾಗಿರುತ್ತದೆ. ಇದನ್ನು ನೆಲ್ಲಿಚೆಟ್ಟು ಎನ್ನುತ್ತಾರೆ.. ಇದರಲ್ಲಿ ವಿಟಮಿನ್ 'ಸಿ' ಹೇರಳವಾಗಿ ಸಿಗುತ್ತದೆ.

ಸಸ್ಯ ರೂಪವಿಜ್ಞಾನ ಮತ್ತು ಕೊಯ್ಲು[ಬದಲಾಯಿಸಿ]

ಗಿಡದ ಲಕ್ಷಣ ಮತ್ತು ಫಲ ಸಂಗ್ರಹ

ಸರಳ ಚಿಕಿತ್ಸೆಗಳು[ಬದಲಾಯಿಸಿ]

ತಲೆ ಸುತ್ತು ನಿವಾರಣೆಗೆ[ಬದಲಾಯಿಸಿ]

ನೆಲ್ಲಿಕಾಯಿ ಚೂರ್ಣ ಮತ್ತು ಕೊತ್ತಂಬರಿ ಸಮ ತೂಕ ರಾತ್ರಿ ನೀರಿನಲ್ಲಿ ನೆನೆ ಹಾಕುವುದು. ಬೆಳಗ್ಗೆ ಚೆನ್ನಾಗಿ ಕಿವುಚಿ ಶೋಧಿಸಿ, ಕಲ್ಲು ಸಕ್ಕರೆ ಪುಡಿ ಸೇರಿಸಿ ಸೇವಿಸುವುದು.[೩]

ನಿದ್ರೆ ಬಾರದಿರುವಿಕೆಗೆ[ಬದಲಾಯಿಸಿ]

ಅಜೀರ್ಣವಾಗಿದ್ದರೆ ತಕ್ಕ ಉಪಚಾರ ಮಾಡುವುದು. ಒಂದು ಟೀ ಚಮಚ ನೆಲ್ಲಿಕಾಯಿ ರಸ ಅರ್ಧ ನೆಲ್ಲಿಚೆಟ್ಟಿನ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಸೇವಿಸುವುದು ಮತ್ತು ಕೆಂಪು ಕಲ್ಲು ಸಕ್ಕರೆ ಪುಡಿ ಸೇರಿಸಿದ ಹಸುವಿನ ಹಾಲನ್ನು ಕುಡಿಯುವುದು.

ಮೂತ್ರದಲ್ಲಿ ಉರಿ ಮತ್ತು ಮೂತ್ರದ ತಡೆಯ ನಿವಾರಣೆಗೆ[ಬದಲಾಯಿಸಿ]

ದಪ್ಪವಾಗಿರುವ ೫-೬ ಹಸೀ ನೆಲ್ಲಿಕಾಯಿಗಳನ್ನು ತಂದು ಬೀಜಗಳನ್ನು ಬೇರ್ಪಡಿಸಿ ಸ್ವಲ್ಪ ಬೆಚ್ಚಗೆ ಮಾಡಿ, ರಸವನ್ನು ಹಿಂಡಿಕೊಳ್ಳುವುದು. ನಂತರ ರಸವನ್ನು ಬಟ್ಟೆಯಲ್ಲಿ ಸೋಸಿ, ಕಬ್ಬಿನ ಹಾಲಿನಲ್ಲಿ ಹಾಕಿ ಕುಡಿಯುವುದು.

ಅಸಾಧ್ಯ ಹೊಟ್ಟೆನೋವು ನಿವಾರಣೆಗೆ[ಬದಲಾಯಿಸಿ]

ಬೀಜಗಳನ್ನು ಬೇರ್ಪಡಿಸಿದ ಹಸಿ ನೆಲ್ಲಿಕಾಯಿಗಳನ್ನು ನೀರಿನೊಂದಿಗೆ ನುಣ್ಣಗೆ ಅರೆದು ಕಿಬ್ಬೊಟ್ಟೆ ಮತ್ತು ಹೊಕ್ಕಳ ಸುತ್ತ ಲೇಪಿಸುವುದು. ನೆಲ್ಲಿಕಾಯಿ ರಸವನ್ನು ಸಕ್ಕರೆ ಸೇರಿಸಿ ಕುಡಿಯುವುದು.

ಮಧುಮೇಹದ ನಿವಾರಣೆಗೆ[ಬದಲಾಯಿಸಿ]

ನೆಲ್ಲಿ ಚೆಟ್ಟು ಮತ್ತು ನೇರಳೆ ಬೀಜಗಳನ್ನು ಸಮವಾಗಿ ಸೇರಿಸಿ ಕುಟ್ಟಿ ನುಣುಪಾದ ಚೂರ್ಣ ಮಾಡುವುದು. ಅರ್ಧ ಟೀ ಚಮಚ ಚೂರ್ಣವನ್ನು ಮಜ್ಜಿಗೆಯಲ್ಲಿ ಕದಡಿ ಕುಡಿಯುವುದು. ದಿವಸಕ್ಕೆ ಎರಡು ವೇಳೆ.

ಉಲ್ಲೇಖ[ಬದಲಾಯಿಸಿ]

  1. "Phyllanthus emblica information from NPGS/GRIN". US Department of Agriculture. Retrieved 2008-03-06.  Check date values in: |access-date= (help)
  2. "The Plant List: A Working List of All Plant Species". Retrieved 14 July 2014.  Check date values in: |access-date= (help)
  3. ಅಪೂರ್ವ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು, ವೈದ್ಯಎ.ಆರ್.ಎಂ.ಸಾಹೇಬ್, ಪ್ರಕಾಶಕರು ದಿವ್ಯಚಂದ್ರ ಪ್ರಕಾಶನ, ಮುದ್ರಣ ೨೦೦೨,ಪುಟ ಸಂಖ್ಯೆ೧೩೩
"https://kn.wikipedia.org/w/index.php?title=ನೆಲ್ಲಿ&oldid=736988" ಇಂದ ಪಡೆಯಲ್ಪಟ್ಟಿದೆ