ಅಮಟೆ

ವಿಕಿಪೀಡಿಯ ಇಂದ
Jump to navigation Jump to search
Spondias mombin MS4005.JPG

ಅಮಟೆ (ಸ್ಪೊಂಡಿಯಾಸ್ ಮಾಂಬಿನ್) ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.[೧]

ಉಪಯೋಗಗಳು[ಬದಲಾಯಿಸಿ]

ಅಮಟೆ ಹಣ್ಣಿನ ರಸವನ್ನು ಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ತೊಗಟೆಯ ರಸವನ್ನು ಗನೋರಿಯಾ ವಾಸಿಮಾಡಲು ಬಳಸುತ್ತಾರೆ.[೨]

ಗೊಜ್ಜು[ಬದಲಾಯಿಸಿ]

ಕಾಯಿ ತೊಳೆದು ಬೇಯಿಸಿ, ಅರಿದ ನಂತರ ಮಸೆದು ಬೆಲ್ಲ, ಉಪ್ಪು, ಖಾರದಪುಡಿ ಅಥವಾ ಹಸಿಮೆಣಸಿನಕಾಯಿ ಅರೆದು ಸೇರಿಸಿ ಮೊಸರು ಹಾಕಿ ಕುದಿಸಿ, ಒಗ್ಗರಣೆ ಕೊಡುವುದು.

ಆರ್ಥಿಕ[ಬದಲಾಯಿಸಿ]

ಇದರ ಮರ ಮೃದು. ಪದರ ಹಲಿಗೆ ಮತ್ತು ಬೆಂಕಿಕಡ್ಡಿ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ. ಕಾಯಿಯನ್ನು ಉಪ್ಪಿನಕಾಯಿ ಹಾಕುತ್ತಾರೆ. ತೊಗಟೆಯನ್ನು ಚರ್ಮ ಹದಮಾಡಲು ಬಳಸುತ್ತಾರೆ.

ಉಲ್ಲೇಖಗಳು[ಬದಲಾಯಿಸಿ]

  1. "Characterization and viscosity parameters of seed oils from wild plants". Bioresource Technology. 86: 203–205. doi:10.1016/S0960-8524(02)00147-5. 
  2. Spanish Royal Academy Dictionary

<gallery> File:2013 Tam Lao.jpg File:Bai makok.jpg File:Jobo_(Spondias_mombin)_fruit.JPG File:Yellow_Mombin_(Spondias_mombin)_fruit.JPG

"https://kn.wikipedia.org/w/index.php?title=ಅಮಟೆ&oldid=714209" ಇಂದ ಪಡೆಯಲ್ಪಟ್ಟಿದೆ