ಅಮಟೆ
ಅಮಟೆ | |
---|---|
Fruiting Spondias mombin | |
Scientific classification | |
ಸಾಮ್ರಾಜ್ಯ: | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
(ಶ್ರೇಣಿಯಿಲ್ಲದ್ದು): | |
ಗಣ: | |
ಕುಟುಂಬ: | |
ಉಪಕುಟುಂಬ: | |
ಪಂಗಡ: | |
ಕುಲ: | Spondias |
Type species | |
Spondias mombin | |
Species | |
17, see text | |
Synonyms | |
Allospondias (Pierre) Stapf |
ಅಮಟೆ (ಸ್ಪೊಂಡಿಯಾಸ್ ಮಾಂಬಿನ್) ಒಂದು ಮರ, ಆನಕಾರ್ಡಿಯೇಸಿಯಿ ಕುಟುಂಬದಲ್ಲಿನ ಹೂಬಿಡುವ ಸಸ್ಯದ ಒಂದು ಪ್ರಜಾತಿ. ಈ ಮರವನ್ನು ಆಫ್ರಿಕಾ, ಭಾರತ, ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಇಂಡೊನೇಷ್ಯಾದ ಭಾಗಗಳಲ್ಲಿ ದೇಶೀಕರಿಸಲಾಗಿದೆ. ಇದನ್ನು ಅಪರೂಪವಾಗಿ ಕೃಷಿ ಮಾಡಲಾಗುತ್ತದೆ. ಬಲಿತ ಹಣ್ಣು ದಪ್ಪ ತೊಗಲು ಮತ್ತು ತಿರುಳಿನ ತೆಳುವಾದ ಪದರವನ್ನು ಹೊಂದಿರುತ್ತದೆ.[೨]ಆಮ್ರಾತಕ ಸಾಮಾನ್ಯ ಹೆಸರು ಅಮಟೆ.ಇದು ಅನಾಕಾರ್ಡಿಯಾಸಿ ಕುಟುಂಬಕ್ಕೆ ಸೇರಿದ ಹೂ ಬಿಡುವ ಸಸ್ಯಗಳ ಒಂದುಜಾತಿಯಾಗಿದೆ.ಇದರ ವೈಜ್ಞಾನಿಕ ಹೆಸರು ಸ್ಪಾಂಡಿಯಾಸ್‍ಎಂದುಗುರುತಿಸಲಾಗಿದೆ. ಬಿಸಿ ಉಷ್ಣವಲಯದ ತಗ್ಗು ಪ್ರದೇಶಗಳಲ್ಲಿ ಬೆಳೆಯುವ ಈ ಗಿಡ, ಪೂರ್ಣ ಸೂರ್ಯ ಮತ್ತು ಆಂಶಿಕ ನೆರಳನ ವಾತಾವರಣದಲ್ಲಿ ಹೆಚ್ಚಾಗಿ ಕಂಡುಬರುತ್ತದೆ[೩][೪]
ಸಾಮಾನ್ಯ ಹೆಸರು
[ಬದಲಾಯಿಸಿ]- ಹಿಂದಿ : ಅಮ್ಬಾಬಾದಅಂಬಾರಾ, ಅಮ್ಬಾದಿ ಅಂಬಾರಿ, ಅಮ್ರಾ, ಭ್ರಾಂಗ್ಗಿಲ್ ಫಲ್ ಬ್ರಿಂಗಿ- ಫಾಲ್, ಮೆಟಲಾ ಮೆತುಲಾ, ಪಾಶ್ ಹರಿತ್ನಿ, ಪಶು ಹರತಿಕಿ, ಪೀತನ್ ಪಿಟಾನ್
- ಮಣಿಪುರಿ : ಹೀನಿಂಗ್
- ಮರಾಠಿ : ಅಮ್ಮಾಡಾಆಂಪಾಮಿಮಿಡಿ, ಅಧ್ವಮ್‍ಆಧ್ವಮು, ಅಂಬಾಲಮು
- ಬಂಗಾಳಿ : ಅಂಬಾದಾ
- ಓರಿಯಾ ; ಅಂಬಾದಾ
- ಕೊಂಕಣಿ : ಮಮತಾ, ಅಮ್ಮಾಡಾಅಮದಾ, ಅಂಬಾದಾ ಅಮಂಬಾ, ಲ್ವಾಂಬಾ, ದೋಲಾಂಬಾ, ಖಹಾಂಬಾ, ಅಂಬಾದ್‍ಅಂಬೇಡ್, ಅಂಬಾಡೋ
- ಅಸ್ಸಾಂ : ಐಮೇರಿಯಾಆಮ್ರಾಟಾ
- ಗುಜರಾತಿ : ಅಂಬಾಡಾ
- ಖಾಸಿ : ಡೈಂಗ್ - ಸೊಹೈಯರ್
- ಮಿಜೋ : ತಾವಿಟಾವ್
- ಸಂಸ್ಕೃತ : ಅಮರಾಟಾ*ತಮಿಳು : ಗಿಂಚಮ್‍ಕಿನ್ಸಾಮ್, ಪುಲಿಮಾ, ಪುಲಿಚಾ ಕಾಯೈ
- ನೇಪಾಳ: ಅಮರೋ
- ತಾಂಗ್ಖುಲ್ : ಖುರ್ಸೊಂಗ್ತಿ
- ಕನ್ನಡ : ಅಮಟೆ, ಆಮ್ರತಕ
- ತುಳು : ಅಂಬಂಡೆ[೫]
ದೇಶೀಯ ಪದಗಳು
[ಬದಲಾಯಿಸಿ]- ಭಾರತ: ಆಮ್ರಾತಕ, ಅಮ್ರಾ, ಆಮ್ನಾ, ಅಂಬ್ರ
- ಇಂಡೋನೇಷ್ಯಾ: ಕೆಡಾಂಗ್ಡಾಂಗ್
- ಮಲೇಷಿಯಾ :ಎಮ್ಬ್ರಹ್, ಕೆಡಾಂಗ್ಡಾಂಗ್
- ಫಿಲಿಪ್ಪೀನ್ಸ್ : ಲಿಬಸ್*ಬರ್ಮಾ (ಮ್ಯಾನ್ಮರ್) :ಜಿವೆ, ಪಿವೆ - ಬಾಂಗ್*ಕಾಂಬೋಡಿಯಾ : ಮೋಕ[೬]
ಬೆಳಯುವ ಪ್ರದೇಶ
[ಬದಲಾಯಿಸಿ]ಭಾರತ, ಬರ್ಮಾ (ಮ್ಯಾನ್ಮರ್), ಇಂಡೋಚೀನಾ, ದಕ್ಷಿಣ ಚೀನಾ, ಥೈಲ್ಯಾಂಡ್, ಮಲೇಷಿಯಾ, ಶ್ರೀಲಂಕಾ. [೭]
ಆಯ್ದ ಜಾತಿಗಳು
[ಬದಲಾಯಿಸಿ]- ಸ್ಪೊಂಡಿಯಾಸ್ ಸೈಟೇರಿಯಾ ಸೋನ್
- ಸ್ಪೊಂಡಿಯಾಸ್‍ಡಲ್ಸಿಸ್- ಟಹೀಟಿಯನ್ ಸೇಬು, ಪೊಮೆಸಿಥೆರೆ (ಟ್ರಿನಿಡಾಡ್ ಮತ್ತುಟೊಬಗೋ)
- ಸ್ಪೊಂಡಿಯಾಸ್ ಹ್ಯಾಪ್ಲೊಫಿಲ್ಲಾ
- ಸ್ಪಾಂಡಿಯಾಸ್‍ಇಂಡಿಕಾ
- ಸ್ಪೊಂಡಿಯಾಸ್ ಲಕೋನೆನ್ಸಿಸ್
- ಸ್ಪೊಂಡಿಯಾಸ್ ಮೊಂಬಿನ್-ಹಳದಿ ಮೊಂಬಿನ್, ಗುಲ್ಲಿ, ಪ್ಲಮ್, ಅಶಾಂತಿ ಪ್ಮಮ್ಸ್, ಜಾವಾ ಪ್ಲಮ್
- ಸ್ಪೊಂಡಿಯಾಸ್ ಪರ್ಪುರಿಯ–ಜೋಕೆಟ್, ಪರ್ಪಲ್ ಮೊಂಬಿನ್, ಕೆಂಪು ಮೊಂಬಿನ್, ಸಿರುಲಾ, ಸೈಗಿಗ್ಯುಲಾ, ಸಿರಿಗ್ವೆಲಾ
- ಸ್ಪೊಂಡಿಯಾಸ್‍ರಾಡ್ಕೊಪೋರಿ
- ಸ್ಪೊಂಡಿಯಾಸ್‍ಟ್ಯುಬೆರೋಸಾ-ಉಂಬು, ಇಂಬು, ಬ್ರೆಜಿಲ್ ಪ್ಲಮ್
- ಸ್ಪೊಂಡಿಯಾಸ್ ವೆನುಲೋಸಾ
ಉಪಯೋಗಗಳು
[ಬದಲಾಯಿಸಿ]- ಅಮಟೆ ಹಣ್ಣಿನ ರಸವನ್ನು ಕಿವಿನೋವಿಗೆ ಹಾಗೂ ಕ್ಷಯರೋಗ ನಿವಾರಣೆಗೆ ಉಪಯೋಗಿಸುತ್ತಾರೆ. ತೊಗಟೆಯನ್ನು ಬಂಧಕದಂತೆ ಭೇದಿಗೆ, ಆಮಶಂಕೆಗೆ, ವಾಂತಿ ತಡೆಯಲು ಹಾಗೂ ಸಂಧುನೋವಿಗೆ ಬಳಸುತ್ತಾರೆ. ತೊಗಟೆಯ ರಸವನ್ನು ಗನೋರಿಯಾ ವಾಸಿಮಾಡಲು ಬಳಸುತ್ತಾರೆ.[೮]
- ಎಲೆಗಳನ್ನು ಸುವಾಸನೆಗಾಗಿ ಬಳಸುತ್ತಾರೆ.
- ಹಣ್ಣನ್ನು ಹಸಿರು ಮತ್ತು ಹಣ್ಣು ಹಣ್ಣಿನಂತಾಗುವಾಗ ಪದಾರ್ಥಕ್ಕೆಉಪಯೋಗಿಸುತ್ತಾರೆ.
- ಚಟ್ನಿ, ಭಕ್ಷ್ಯ, ಉಪ್ಪಿನಕಾಯಿ, ಜಾಮೂನುಗಳನ್ನು ತಯಾರಿಸುತ್ತಾರೆ.
- ಮರವನ್ನುಅಲಂಕಾರಿಕ ಪ್ಲೈವುಡ್‍ಗಳಾಗಿ ಹಾಗೂ ಪ್ಯಾಕಿಂಗ್ ಮಾಡಲು ಬಳಸುತ್ತಾರೆ.
- ಇಂಧನವಾಗಿಯೂ ಬಳಸುತ್ತಾರೆ.[೯]
ಆಕಾರ
[ಬದಲಾಯಿಸಿ]ಸುಮಾರು 27ಮೀ ಎತ್ತರ ಮತ್ತು ಕಾಂಡದ ವ್ಯಾಸದಿಂದ 50 ಸೆಂ.ಮೀ ವರೆಗೆ ಈ ಮರ ಬೆಳೆಯುತ್ತವೆ. ಸಾಮಾನ್ಯವಾಗಿ ಚಿಕ್ಕದಾಗಿರುತ್ತದೆ. ಎಲೆಗಳ ಗಾತ್ರ 5-11 ಸೆಂ.ಮೀ. ವಿಶಾಲವಾದ ಅಂಡ ವೃತ್ತಾಕಾರದಲ್ಲಿರುತ್ತವೆ. 6-10ಸೆಂ.ಮೀ ಉದ್ದ ಹೊಂದಿದ್ದು, ಬುಡ ದುಂಡಾಗಿರುತ್ತವೆ. ತುದಿ ಚೂಪಾಗಿದ್ದು, 20-25 ಜೋಡಿಗಳಷ್ಟು ಹತ್ತಿರವಾದ ಸಮಾನಾಂತರ ರಕ್ತನಾಳಗಳೊಂದಿಗೆ ಎಲ್ಲಾ ಒಳ ಅಂಡಾಕಾರದ ಅಭಿಧಮಿ ಸೇರಿರುತ್ತದೆ.ಅಮಟೆ ಗಿಡದಲ್ಲಿ ಬೆಳೆಯುವ ಹೂವನ್ನು ಪುಪ್ಪಮಂಜರಿ ಎಂದು ಕರೆಯುತ್ತಾರೆ. ಇದರಲ್ಲಿ ಉದ್ದವಾದ ಅಂಡಾವೃತ್ತಾಕಾರದ ಬೀಜಇರುತ್ತವೆ.
ಔಷಧೀಯ ಗುಣಗಳು
[ಬದಲಾಯಿಸಿ]ಇದರ ಹಣ್ಣುನ್ನು ರಕ್ತದೊತ್ತಡ ಮತ್ತು ಮೂಲವ್ಯಾಧಿ ರೋಗ ನಿವಾರಣೆಗೆ ಬಳಸುತ್ತಾರೆ. ಹಣ್ಣಿನ ರಸವನ್ನು ಕಿವಿಯ ಸಮಸ್ಯೆಗೆ ಉಪಯೋಗಿಸುತ್ತಾರೆ. ಇದರ ತೊಗಟೆಯನ್ನು ಹೊಟ್ಟೆ ನೋವು ಮತ್ತು ಉರಿಯೂತದ ಚಿಕಿತ್ಸೆಗೆ ಬಳಸುತ್ತಾರೆ. ಸಂಧಿವಾತ ಮತ್ತು ಊದಿಕೊಂಡ ಕೀಲುಗಳ ಚಿಕಿತ್ಸೆಯಲ್ಲಿ ತೊಗಟೆಯ ಪೇಸ್ಟನ್ನು ಬಳಸುತ್ತಾರೆ.ಬೇರನ್ನು ಉಪಯೋಗಿಸುವುದರಿಂದ ಮುಟ್ಟಿನ ನಿಯಂತ್ರಣವನ್ನು ನಿಯಂತ್ರಿಸುವಲ್ಲಿ ಉಪಯುಕ್ತವಾಗಿದೆ.[೧೦][೧೧]
ಉಲ್ಲೇಖಗಳು
[ಬದಲಾಯಿಸಿ]- ↑ "Spondias L." Germplasm Resources Information Network. United States Department of Agriculture. 2009-11-23. Retrieved 2010-02-12.
- ↑ "Characterization and viscosity parameters of seed oils from wild plants". Bioresource Technology. 86: 203–205. doi:10.1016/S0960-8524(02)00147-5.
- ↑ https://www.banglajol.info/index.php/JESNR/article/view/14598.
- ↑ https://recipeofchoice.wordpress.com/category/%E0%B2%A4%E0%B2%B0%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3%E0%B3%81vegetables/%E0%B2%85%E0%B2%AE%E0%B2%9F%E0%B3%86-%E0%B2%95%E0%B2%BE%E0%B2%AF%E0%B2%BF-bimbal/
- ↑ http://eol.org/pages/582279/names/common_names[permanent dead link]
- ↑ http://www.flowersofindia.net/catalog/slides/Wild%20Mango.html
- ↑ http://www.growables.org/information/TropicalFruit/spondias.htm
- ↑ Spanish Royal Academy Dictionary
- ↑ "ಆರ್ಕೈವ್ ನಕಲು". Archived from the original on 2019-12-26. Retrieved 2018-09-30.
- ↑ "ಆರ್ಕೈವ್ ನಕಲು". Archived from the original on 2012-10-30. Retrieved 2018-09-30.
- ↑ https://www.kannadigaworld.com/kannada/karavali-kn/346998.html
- Pages using the JsonConfig extension
- All articles with dead external links
- Articles with dead external links from ಆಗಸ್ಟ್ 2021
- Articles with invalid date parameter in template
- Articles with permanently dead external links
- Articles with 'species' microformats
- Taxobox articles missing a taxonbar
- ಸಸ್ಯಗಳು
- ಔಷಧೀಯ ಸಸ್ಯಗಳು
- ಕರ್ನಾಟಕದ ಸಸ್ಯಗಳು