ಸೀಬೆ
Common guava | |
---|---|
![]() | |
Common guava (Psidium guajava) fruit | |
Conservation status | |
Scientific classification ![]() | |
Kingdom: | ಸಸ್ಯ |
Clade: | ಹೂಬಿಡುವ ಸಸ್ಯ |
Clade: | ಯೂಡೈಕಾಟ್‍ಗಳು |
Clade: | ರೋಸಿಡ್ಸ್ |
Order: | ಮಿರ್ಟೇಲ್ಸ್ |
Family: | ಮಿರ್ಟೇಸೀ |
Genus: | ಸಿಡಿಯಮ್ |
Species: | P. guajava
|
Binomial name | |
Psidium guajava |
ಸೀಬೆ (ಸೀಬೆಹಣ್ಣು - ಚೇಪೆ ಕಾಯಿ - ಪೇರಲ) ಉಷ್ಣವಲಯದ ಪೊದರುಗಳು ಮತ್ತು ಸಣ್ಣ ಮರಗಳ ಸುಮಾರು ೧೦೦ ಪ್ರಜಾತಿಗಳನ್ನು ಹೊಂದಿರುವ ಮರ್ಟಲ್ ಕುಟುಂಬ (ಮಿರ್ಟೇಸಿಯೀ) ಜಾತಿ ಸೈಡಿಯಮ್‍ನಲ್ಲಿನ ಒಂದು ಸಸ್ಯ. ಸಿಡಿಯಮ್ ಗ್ವಜಾವಾ ಎಂಬುದು ಇದರ ಸಸ್ಯಶಾಸ್ತ್ರೀಯ ಹೆಸರು. ಹಿಂದಿಯಲ್ಲಿ ಅಮರೂದ್, ಜಮ್‌ಫಲ್ ಎಂಬ ಹೆಸರುಗಳಿವೆ.ಇದು ಮೆಕ್ಸಿಕೊ, ಮಧ್ಯ ಅಮೇರಿಕಾ, ಮತ್ತು ದಕ್ಷಿಣ ಅಮೇರಿಕಾದ ಉತ್ತರ ಭಾಗಕ್ಕೆ ಸ್ಥಳೀಯವಾಗಿದೆ.[೨] ಸೀಬೆಯನ್ನು ಈಗ ಉಷ್ಣವಲಯಗಳು ಮತ್ತು ಉಪೋಷ್ಣವಲಯಗಳಾದ್ಯಂತ ಆಫ಼್ರಿಕಾ, ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ, ಕರಿಬಿಯನ್, ಉತ್ತರ ಅಮೇರಿಕಾ, ಹವಾಯಿ, ನ್ಯೂ ಜ಼ೀಲಂಡ್, ಆಸ್ಟ್ರೇಲಿಯಾ ಮತ್ತು ಸ್ಪೇನ್‍ನ ಉಪೋಷ್ಣವಲಯದ ಪ್ರದೇಶಗಳಲ್ಲಿ ಬೆಳೆಯಲಾಗುತ್ತದೆ ಹಾಗು ದೇಶೀಕರಿಸಲಾಗಿದೆ.
ಕೃಷಿ[ಬದಲಾಯಿಸಿ]
ಸಸ್ಯ ಸು. 4.5-7.5 ಮೀ ಎತ್ತರ ಬೆಳೆಯುತ್ತದೆ. ಇದನ್ನು ಭಾರತದಲ್ಲಿ ಹೆಚ್ಚಾಗಿ ಉತ್ತರ ಪ್ರದೇಶ, ಬಿಹಾರ್, ಪಂಜಾಬ್, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಬೆಳೆಸುತ್ತಾರೆ. ಇದು ಅತಿ ಬಿಸಿಲು ಮತ್ತು ಬರಗಾಲ ತಡೆದುಕೊಳ್ಳಬಲ್ಲದು. ಸಾಮಾನ್ಯವಾಗಿ ಎಲ್ಲ ತರಹದ ಮಣ್ಣಿನಲ್ಲೂ ಬೆಳೆಯುತ್ತದೆ.
ದಕ್ಷಿಣ ಭಾರತದಲ್ಲಿ ಇದು ಸ್ವಾಭಾವಿಕ ಬೆಳೆಯಾಗಿದೆ.
ಉಪಯೋಗಗಳು[ಬದಲಾಯಿಸಿ]
ಔಷಧೀಯ ಸಸ್ಯವಾಗಿಯೂ ಇದು ಬಳಕೆಯಲ್ಲಿದೆ. ಹಣ್ಣಿನ ತಿರುಳು ದಪ್ಪ, ಬಲು ರುಚಿಕರ. ಇದರಲ್ಲಿ ‘ಸಿ’ ಜೀವಸತ್ತ್ವ ಹೇರಳವಾಗಿದೆ.[೩] ಸ್ವಲ್ಪ ಕ್ಯಾಲ್ಶಿಯಮ್ ಕೂಡ ಇರುತ್ತದೆ. ಕಚ್ಚಾ ಹಣ್ಣನ್ನು ನೇರವಾಗಿ ಸೇವಿಸಬಹುದು. ಹಣ್ಣನ್ನು ಒಣಗಿಸಿ ಪುಡಿಮಾಡಿ ಜಾಮ್ ಮತ್ತು ಜೆಲ್ಲಿ ರೂಪದಲ್ಲಿ ಉಪಯೋಗಿಸಬಹುದು.[೪] ಒಣಗಿಸಿದರೂ ‘ಸಿ’ ಜೀವಸತ್ತ್ವ ನಷ್ಟವಾಗದು. ಇದಲ್ಲದೆ ಸೀಬೆಕಾಯಿ, ಸೀಬೆಎಲೆ ಹಾಗೂ ಚಕ್ಕೆಗಳನ್ನು ಬಾಯಿಹುಣ್ಣು, ವಸಡಿನ ರಕ್ತಸ್ರಾವ, ತುರಿಕಜ್ಜಿಗಳಿಗೆ ಔಷಧ ರೂಪದಲ್ಲಿ ಉಪಯೋಗಿಸಬಹುದು.
ಉಲ್ಲೇಖಗಳು[ಬದಲಾಯಿಸಿ]
- ↑ Canteiro, C.; Lucas, E. (2019). "Psidium guajava". IUCN Red List of Threatened Species. 2019: e.T49485755A49485759. doi:10.2305/IUCN.UK.2019-1.RLTS.T49485755A49485759.en. Retrieved 19 November 2021.
- ↑ "Psidium guajava". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved February 6, 2009.
- ↑ Nutritiondata.com. "Nutrition facts for common guava". Retrieved August 17, 2010.
- ↑ Morton JF (1987). "Guava". Fruits of Warm Climates. Purdue University. pp. 356–363. Retrieved 24 April 2015.