ಸಿ ಅಶ್ವತ್ಥ್
ಸಿ. ಅಶ್ವತ್ಥ | |
---|---|
ಹಿನ್ನೆಲೆ ಮಾಹಿತಿ | |
ಸಂಗೀತ ಶೈಲಿ | ಭಾವಗೀತೆ, ಜಾನಪದ ಗೀತೆ |
ವೃತ್ತಿ | ಗಾಯಕ, ರಚನೆಕಾರ |
ಅಧೀಕೃತ ಜಾಲತಾಣ | http://caswath.com/ |
ಸಿ ಅಶ್ವತ್ಥ್ - (೧೯೩೯) ಹೆಸರಾಂತ ಸಂಗೀತ ನಿರ್ದೇಶಕರು, ಕಲಾವಿದರು. ಕನ್ನಡ ರಂಗಭೂಮಿ, ಸಿನೆಮಾ ಹಾಗೂ ಸುಗಮ ಸಂಗೀತ ಕ್ಷೇತ್ರಗಳಲ್ಲಿ ಹೆಸರುವಾಸಿಯಾಗಿರುವ ಇವರು ಜನಿಸಿದ್ದು ಡಿಸೆಂಬರ್ ೨೯, ೧೯೩೯ರಲ್ಲಿ. ಇವರು ವ್ಯಾಸಂಗ ಮಾಡಿದ್ದು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ. ಐ ಟಿ ಐ ನಲ್ಲಿ ೨೭ ವರ್ಷಗಳ ಕಾಲ ಸೇವೆ ಸಲ್ಲಿಸಿ ಕೊನೆಗೆ ೧೯೯೨ರಲ್ಲಿ ನಿವೃತ್ತಿ ಪಡೆದರು.
ಚಿಕ್ಕವರಿದ್ದಾಗಲೇ ಸಂಗೀತದಲ್ಲಿ ಆಸಕ್ತಿ ಹೊಂದಿದ ಇವರು ಹಿಂದೂಸ್ಥಾನೀ ಸಂಗೀತವನ್ನು ದೇವಗಿರಿ ಶಂಕರರಾವ್ ಅವರ ಬಳಿ ಕಲಿತು, ನಂತರ ನಾಟಕಗಳಿಗೆ ಸಂಗೀತ ನೀಡಿದರು. ಕಾಕನಕೋಟೆ ಚಿತ್ರದ ಮೂಲಕ ಚಿತ್ರ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟರು
ಮೂತ್ರಪಿಂಡ ಹಾಗೂ ಪಿತ್ತಕೋಶದ ತೊಂದರೆಯಿಂದ ಬಳಲುತ್ತಿದ್ದ ಇವರು ಡಿಸೆಂಬರ್ ೨೯, ೨೦೦೯ ರಂದು, ತಮ್ಮ ೭೧ನೇ ಜನ್ಮದಿನದಂದೇ ಕೊನೆಯುಸಿರೆಳೆದರು.
ಇವರ ಕೆಲವು ಪ್ರಖ್ಯಾತ ಧ್ವನಿಸುರುಳಿಗಳು
[ಬದಲಾಯಿಸಿ]- ಮೈಸೂರು ಮಲ್ಲಿಗೆ ( ಕವಿ - ಕೆ.ಎಸ್.ನರಸಿಂಹಸ್ವಾಮಿ)
- ಶ್ರಾವಣ (ಕವಿ - ದ.ರಾ.ಬೇಂದ್ರೆ)
- ಶಿಶಿನಾಳ ಶರೀಫ್ ಸಾಹೇಬರ ಗೀತೆಗಳು (ಕವಿ - ಶರೀಫ)
- ದೀಪಿಕಾ(ಕವಿ - ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ)
- ಸುಬ್ಬಾ ಭಟ್ಟರ ಮಗಳೇ (ಕವಿ - ಬಿ.ಆರ್.ಲಕ್ಷ್ಮಣರಾವ್)
- ಕೆಂಗುಲಾಬಿ (ವಿವಿಧ ಕವಿಗಳು)
- ಕೈಲಾಸಂ ಗೀತೆಗಳು (ಕವಿ - ಟಿ.ಪಿ.ಕೈಲಾಸಂ)
- ತೂಗುಮಂಚ (ಕವಿ - ಎಚ್.ಎಸ್.ವೆಂಕಟೇಶಮೂರ್ತಿ)
- ನನ್ನವಳು (ಕವಿ - ಬಿ.ಆರ್.ಲಕ್ಷ್ಮಣರಾವ್)
- ಡಾ. ರಾಜ್ ಕುಮಾರ್ ಹಾಡಿರುವ 'ಎಲ್ಲಾದರೂ ಇರು, ಎಂತಾದರೂ ಇರು' (ಕವಿ - ಕುವೆಂಪು)
- ನೇಸರ ನೋಡು (ಹವ್ಯಾಸಿ ರಂಗಭೂಮಿಯ ರಂಗಗೀತೆಗಳು)
- ಮಾವು ಬೇವು (ಡಾ||ದೊಡ್ಡರಂಗೇಗೌಡ)
ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಸಿ ಅಶ್ವಥ್ರವರ ಅಂತರಜಾಲ ಪುಟ Archived 2005-03-11 ವೇಬ್ಯಾಕ್ ಮೆಷಿನ್ ನಲ್ಲಿ.
- C. Ashwath resigns from shishunala shariff award committee Archived 2005-05-01 ವೇಬ್ಯಾಕ್ ಮೆಷಿನ್ ನಲ್ಲಿ.
- 'Kannadave Satya' - a program for a cause by C. Ashwath
- Story on Hindu with C Ashwath's photo Archived 2005-04-20 ವೇಬ್ಯಾಕ್ ಮೆಷಿನ್ ನಲ್ಲಿ.
- ಸಿ. ಅಶ್ವಥ್ ಪರಿಚಯ ಮತ್ತು ಸಂದರ್ಶನ (೧೯೯೭) Archived 2006-10-17 ವೇಬ್ಯಾಕ್ ಮೆಷಿನ್ ನಲ್ಲಿ.
- ಸಿ.ಅಶ್ವಥ್ ಅಭಿಮಾನಿ ಬಳಗ
ಪಿ.ಶ್ಯಾಮಣ್ಣ | ಪಿ.ಕಾಳಿಂಗರಾಯ | ಜಿ.ಕೆ.ವೆಂಕಟೇಶ್ | ವಿಜಯಭಾಸ್ಕರ್ | ಟಿ.ಜಿ.ಲಿಂಗಪ್ಪ | ಘಂಟಸಾಲ | ರಾಜನ್-ನಾಗೇಂದ್ರ | ಎಂ.ರಂಗರಾವ್ | ಸತ್ಯಂ | ಸಿಂಗೀತಂ ಶ್ರೀನಿವಾಸರಾವ್ | ಉಪೇಂದ್ರಕುಮಾರ್ | ಇಳಯರಾಜ ಮದನ್ ಮಲ್ಲು| ಅಶ್ವಥ್-ವೈದಿ | ಸಿ.ಅಶ್ವಥ್ | ಎಸ್.ಪಿ.ಬಾಲಸುಬ್ರಹ್ಮಣ್ಯಂ | ಎಲ್.ವೈದ್ಯನಾಧನ್ | ಶಂಕರ್ ಗಣೇಶ್ | ಹಂಸಲೇಖ | ವಿ. ಮನೋಹರ್ | ಎಂ. ಎಂ. ಕೀರವಾಣಿ | ಮಹೇಶ್ ಪಟೇಲ್| ರಾಜ್-ಕೋಟಿ | ಸಾಧು ಕೋಕಿಲ | ರಾಜೇಶ್ ರಾಮನಾಥ್ | ವಿ.ಹರಿಕೃಷ್ಣ | ಕೆ. ಕಲ್ಯಾಣ್ | ಎಲ್.ಎನ್.ಶಾಸ್ತ್ರಿ | ಗುರುಕಿರಣ್ | ದೇವಾ | ರವಿಚಂದ್ರನ್ | ಎಸ್.ಎ.ರಾಜಕುಮಾರ್ | ಕಾರ್ತಿಕ್ ರಾಜ | ವೆಂಕಟ್-ನಾರಾಯಣ್ | ಮಣಿ ಶರ್ಮ | ಆರ್. ಪಿ. ಪಟ್ನಾಯಕ್ | ಆಲ್ವಿನ್ | ಅರ್ಜುನ್ ಜನ್ಯ | ಎಂ.ಎನ್.ಕೃಪಾಕರ್ | ಭವತಾರಿಣಿ | ಮನೋ ಮೂರ್ತಿ | ರವಿ ದತ್ತಾತ್ರೇಯ | ಎಂ.ವೆಂಕಟರಾಜು|ಉಪಾಸನ ಮೊಹನ |ಯೋಗೀಶ್ ಕುಮಾರ್ ಸಿ