ಬಿ.ಆರ್.ಲಕ್ಷ್ಮಣರಾವ್

ವಿಕಿಪೀಡಿಯ ಇಂದ
Jump to navigation Jump to search
ಬಿ.ಆರ್.ಲಕ್ಷ್ಮಣರಾವ್

ಬಿ.ಆರ್.ಲಕ್ಷ್ಮಣರಾವ್,[೧] ನವೋದಯ, ನವ್ಯ, ಬಂಡಾಯ ಮೊದಲಾದ ಯಾವ ಗುಂಪಿಗೂ ಸೇರದ ಕವಿಗಳು. ಇವರ ಕವಿತೆಗಳು ಓದುಗನಿಗೆ ನವಿರಾದ ಭಾವನೆಗಳನ್ನು ಕೊಡುತ್ತವೆ. ಬಿ. ಆರ್. ಲಕ್ಷಣರಾಯರ ‘ಸುಬ್ಭಾಭಟ್ಟರ ಮಗಳೇ’,‘ನಾನು ಚಿಕ್ಕವನಿದ್ದಾಗ ಅಪ್ಪಾ ಹೇಳುತ್ತಿದ್ದರು', 'ನೀ ನಿಂಬೆಯ ಗಿಡದಿಂದೊಳ್ಳೆಯ ಪಾಠವ ಕಲೀ ಮಗು’ ಅಂತಹ ಅವರ ಕವನ ವಾಚನ ಎಲ್ಲರಿಗು ಮುದಕೊಡುತ್ತದೆ. ಈ ಪದ್ಯಗಳು, ಹಲವು ವೇಳೆ ಕೆ.ಎಸ್.ನ ಅವರ ‘ಶ್ಯಾನುಭೋಗರ ಮಗಳು’, ‘ರಾಯರು ಬಂದರು ಮಾವನ ಮನೆಗೆ’ ಪದ್ಯಗಳಿಗೆ ಸರಿಹೋಲಿಕೆಯಂತಿವೆ.

ಜನನ,ವಿದ್ಯಾಭ್ಯಾಸ[ಬದಲಾಯಿಸಿ]

'ಬಿ.ಆರ್.ರಾಜಾರಾವ್‌', ಮತ್ತು 'ವೆಂಕಟಲಕ್ಷ್ಮಮ್ಮ'ನವರ ಮುದ್ದಿನ ಮಗನಾಗಿ 'ಲಕ್ಷ್ಮಣ್,' ಚಿಕ್ಕಬಳ್ಳಾಪುರ ಜಿಲ್ಲೆಯ 'ಚೀಮಂಗಲ'ದಲ್ಲಿ ೧೯೪೬ ರ ಸೆಪ್ಟಂಬರ್ 9ರಂದು ಜನಿಸಿದರು. ತಂದೆ ಸಂಗೀತಾಸಕ್ತರು. ತಾಯಿ, ವಾದ್ಯಸಂಗೀತ ಹಾಗೂ ಹಾಡುಗಾರಿಕೆಯಲ್ಲಿ ಪರಿಶ್ರಮವಿದ್ದವರು. ಲಕ್ಷ್ಮಣರ ಪ್ರಾರಂಭಿಕ ಶಿಕ್ಷಣ ಚಿಂತಾಮಣಿಯಲ್ಲಿ ನೆರವೇರಿತು. ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ; ಮತ್ತು ಬಿ.ಎಡ್‌ ಪದವಿಗಳನ್ನೂ ಹಾಗೂ ಮೈಸೂರು ವಿಶ್ವವಿದ್ಯಾನಿಲಯದಿಂದ ಎಂ.ಎ; ಪದವಿಯನ್ನೂ ಗಳಿಸಿದರು.

ಬರವಣಿಗೆ ಚಿಕ್ಕವಯಸ್ಸಿನಲ್ಲೇ[ಬದಲಾಯಿಸಿ]

ಇನ್ನು ಕಾಲೇಜಿನಲ್ಲಿ ಓದುತ್ತಿರುವಾಗಲೇ, ಲಕ್ಷ್ಮಣರಾವ್, ಹಲವಾರು ಕವನಗಳನ್ನು ಬರೆದರು. ಅವೆಲ್ಲಾ 'ಲಹರಿ', 'ಗೋಕುಲ', 'ಸಂಕ್ರಮಣ' ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು. ನವ್ಯ ಸಾಹಿತ್ಯದ ಚಳವಳಿ ಮೊದಲುಗೊಂಡು, 'ಚುಟುಕು', 'ವಿಡಂಬನೆ', 'ಸ್ವಗತ', 'ಭಾವಗೀತೆ' ಮತ್ತು ಇತರ ಎಲ್ಲ ಪ್ರಕಾರಗಳಲ್ಲಿಯೂ ಕವಿತೆ ಬರೆಯುತ್ತಾ ಬಂದಿದ್ದಾರೆ. ಅವರ ಕವಿತೆಯ ಕೆಲವು ಸಾಲುಗಳು :

ಕೆಂಪು ಸಾಗರವೀಜಿ, ಕಾಡುಮೇಡು ದಾಟಿ
ದಣಿದು ಕುಸಿಯದೆ ಮುಂದೆ ಸಾಗಿ ಬರಬೇಕು,
ಸುಲಭವಲ್ಲ!
“ಕೊನೆಗೆ
ಮಾರನೆ ಸಂಜೆ,
ಅವರವರ ಫೋಟೋಗಳನ್ನು ಅವರವರಿಗೆ
ಒಪ್ಪಿಸಿ,
ಮೆಚ್ಚಿಗೆಯ ಕಣ್ಣಾಡಿ ಪರಸ್ಪರ,
ಬಿಕ್ಕಿ, ನಕ್ಕು,
ಅವರವರ ಊರುಗಳಿಗೆ ಅವರೆಲ್ಲಾ ಹೊರಟು
ಬಿಟ್ಟಮೇಲೆ,
ನನ್ನ ಬಳಿ ಉಳಿಯುವುದು
ಅದರೆಲ್ಲರ ಮಾಸುವ ನೆನಪು
ನೆಗೆಟಿವ್ ಗಳು
ಮಾತ್ರ”.

ಕೃತಿಗಳು[ಬದಲಾಯಿಸಿ]

ಕವನ[ಬದಲಾಯಿಸಿ]

 • ಗೋಪಿ ಮತ್ತು ಗಾಂಡಲೀನ (ಅಬ್ಸರ್ಡ್ ಮಾದರಿ).
 • ಟುವಟಾರ
 • ಲಿಲ್ಲಿಪುಟ್ಟಿಯ ಹಂಬಲ
 • ಕೋಲಂಬಸ್
 • ಶಾಂಗ್ರಿಲಾ
 • ಹನಿಗವಿತೆಗಳು
 • ಕೆಂಗುಲಾಬಿ
 • ಅಪರಾಧಂಗಳ ಮನ್ನಿಸೊ
 • ಕ್ಯಾಮೆರಾ ಕಣ್ಣು (ಸಮಗ್ರ ಕಾವ್ಯ)

ಕಥೆ[ಬದಲಾಯಿಸಿ]

 • ಜೆಸ್ಟರ್.
 • ಕಬ್ಬೆಕ್ಕು.

ಕಾದಂಬರಿ[ಬದಲಾಯಿಸಿ]

 • ಹೀಗೊಂದು ಪ್ರೇಮಕಥೆ

ಪ್ರಶಸ್ತಿ,ಬಹುಮಾನಗಳು[ಬದಲಾಯಿಸಿ]

 • ಕರ್ನಾಟಕ ಸಾಹಿತ್ಯ ಅಕಾಡಮಿ ಬಹುಮಾನ,
 • ಗೊರೂರು ಸಾಹಿತ್ಯ ಪ್ರಶಸ್ತಿ,
 • ಚುಟುಕು ರತ್ನ ಪ್ರಶಸ್ತಿ,
 • ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ,
 • ಡಾ.ಪು.ತಿ.ನ. ಕಾವ್ಯ ಪುರಸ್ಕಾರ,
 • ಆರ್ಯಭಟ ಪ್ರಶಸ್ತಿ,
 • ರಾಜ್ಯೋತ್ಸವ ಪ್ರಶಸ್ತಿ ಮುಂತಾದವುಗಳು.

ಅಭಿನಂದನ ಗ್ರಂಥ[ಬದಲಾಯಿಸಿ]

೨೦೦೬ರಲ್ಲಿ. ಅಭಿಮಾನಿಗಳು, ಗೆಳೆಯರು, ಅರ್ಪಿಸಿದ ಅಭಿನಂದನ ಗ್ರಂಥ ‘ಚಿಂತಾಮಣಿ’ ಯಲ್ಲಿ ಬಿ.ಆರ್.ಲಕ್ಷ್ಮಣರಾವ್ ರವರ ಕೆಲವು ಕವನಗಳು.* (ಜಾಲಿ ಬಾರಿನಲ್ಲಿ ಕುಳಿತು , ಬಾರೆ ರಾಜಕುಮಾರಿ) ಚಲನಚಿತ್ರಗಳಲ್ಲಿಯೂ ಬಳಕೆಯಾಗಿದೆ.

ಕಿರುತೆರೆಯ ಧಾರಾವಾಹಿಗಳಿಗೆ ಶೀರ್ಷಿಕೆ ಗೀತರಚನೆ[ಬದಲಾಯಿಸಿ]

 • ಎದೆ ತುಂಬಿ ಹಾಡುವೆನು,
 • ಮಂಥನ ,
 • ನಮ್ಮಮ್ಮ ಶಾರದೆ,
 • ಬೃಂದಾವನ,
 • ಅಪ್ಪ,
 • ಅನಾವರಣ

ಕವಿ,ಡಾ.ಎಚ್ಚೆಸ್ವಿಯರ ಜೊತೆ[ಬದಲಾಯಿಸಿ]

[೨]

ಬಾಹ್ಯ ಸಂಪರ್ಕ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]