ವಿಷಯಕ್ಕೆ ಹೋಗು

ಯಕ್ಷಗಾನ ಕೇಂದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1970ರ ದಶಕದಲ್ಲಿ ಡಾ. ಟಿ.ಎಂ.ಎ. ಪೈಗಳ ನೇತೃತ್ವದಲ್ಲಿ ಉಡುಪಿಎಂ.ಜಿ.ಎಂ ಕಾಲೇಜಿನಲ್ಲಿ ಯಕ್ಷಗಾನ ಕಲೆಯ ಸರ್ವತೋಮುಖವಾದ ರಕ್ಷಣೆ , ಪೋಷಣೆ ಹಾಗೂ ಪ್ರಚಾರಕ್ಕಾಗಿ ಯಕ್ಷಗಾನ ಕೇಂದ್ರವು ಉದ್ಯುಕ್ತವಾಯಿತು. 1971ರ ಜೂನ್ ತಿಂಗಳಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಗುರು ಯೋಜನೆಯನ್ವಯ ಹಿರಿಯ ಕಲಾವಿದ ಸವ್ಯಸಾಚಿ ವೀರಭದ್ರ ನಾಯಕರನ್ನು ನೃತ್ಯಗುರುವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ನಿಯೋಜಿಸಿತು. ಆರಂಭ ಕಾಲದಲ್ಲಿ ಉಡುಪಿಯ ಅದಮಾರು ಮಠದ ಯತಿಗಳಾದ ಶ್ರೀ ಶ್ರೀ ವಿಬುಧೇಶತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದಲ್ಲಿ ಕೇಂದ್ರದ ವಿದ್ಯಾರ್ಥಿಗಳಿಗೆ ಧರ್ಮಾರ್ಥ ಊಟದ ವ್ಯವಸ್ಥೆ ಕಲ್ಪಿಸಿಕೊಟ್ಟರು. 'ಗುರುಕುಲ ಮಾದರಿಯ ಶಿಕ್ಷಣ ಕೇಂದ್ರ'ದಲ್ಲಿ ಯಕ್ಷಗಾನ ಪಾಠ್ಯ ಸಿದ್ಧಗೊಂಡು ಪ್ರಥಮ ವರುಷದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ತಾಳ, ಹೆಜ್ಜೆಗಳು, ರಾಗಗಳು, ಮಟ್ಟುಗಳು, ಕುಣಿತ, ಅಭಿನಯ, ಮುಖವರ್ಣಿಕೆ ಇತ್ಯಾದಿಗಳನ್ನೊಳಗೊಂಡ ಸಾಮಾನ್ಯ ಶಿಕ್ಷಣ ನೀಡುವುದರೊಂದಿಗೆ ಕನಿಷ್ಟ ನಾಲ್ಕು ಸಾಂಪ್ರದಾಯಿಕ ಪ್ರಸಂಗಗಳ ಅಭ್ಯಾಸ, ಪ್ರದರ್ಶನಗಳಿಗೆ ವ್ಯವಸ್ಥೆ ಮಾಡಲಾಯಿತು. ಎರಡನೆಯ ವರುಷದಲ್ಲಿ ಆಯ್ದ ಐದು ಮಂದಿ ವಿದ್ಯಾರ್ಥಿಗಳಿಗೆ ಕುಣಿತ, ಅಭಿನಯ, ಸಂಗೀತ, ಭಾಗವತಿಕೆ, ಚೆಂಡೆ ಮದ್ದಳೆಗLಳಲ್ಲಿ ಯಾವುದಾದರೂ ಒಂದು ಭಾಗದಲ್ಲಿ ವಿಶೇಷ ತರಬೇತಿಯನ್ನು ನೀಡುವ ವ್ಯವಸ್ಥೆ ಮಾಡಲಾಯಿತು. ಇದು ಕಳೆದ ಮೂರು ದಶಕಗಳಿಗೂ ಮೀರಿ ಅನೂಚಾನವಾಗಿ ನಡೆಯುತ್ತ ಬಂದಿದೆ. ಯಕ್ಷಗಾನ ಕೇಂದ್ರದ ನೂತನ ಕಲಾಸಮುಚ್ಚಯ - ಶಿವಪ್ರಭಾ- ದ ಆರಂಭದೊಂದಿಗೆ ಶಿಕ್ಷಣ ವ್ಯವಸ್ಥೆ ಇನ್ನೂ ಬಲಗೊಂಡು ಸಾಮಾನ್ಯ ಜನರಿಗೂ ವಾರಾಂತ್ಯಗಳಲ್ಲಿ ಯಕ್ಷಗಾನ ಶಿಕ್ಷಣ ನೀಡುವ ಯೋಜನೆ ಪರಂಪರೆಯಾಗಿ ಇಂದಿಗೂ ಬೆಳೆದು ಬಂದಿದೆ.

'ಯಕ್ಷಗಾನ ಕೇಂದ್ರ

RegionalResouceCenterUdupi

ಯಕ್ಷಗಾನ ಚಿತ್ರಗಳು

Yakshagana
Jatayu
Jatayu-1
Jatayu
Yakshagana Team