ಸಾಂಖ್ಯ
ಹಿಂದೂ ತತ್ತ್ವಶಾಸ್ತ್ರ ಸರಣಿಯ ಲೇಖನ | |
ಪಂಥಗಳು | |
---|---|
ಸಾಂಖ್ಯ · ನ್ಯಾಯ | |
ವೈಶೇಷಿಕ · ಯೋಗ | |
ಪೂರ್ವ ಮೀಮಾಂಸಾ · ವೇದಾಂತ | |
ವೇದಾಂತ ಪಂಥಗಳು | |
ಅದ್ವೈತ · ವಿಶಿಷ್ಟಾದ್ವೈತ | |
ದ್ವೈತ | |
ಪ್ರಮುಖ ವ್ಯಕ್ತಿಗಳು | |
ಕಪಿಲ · ಗೋತಮ | |
ಕಣಾದ · ಪತಂಜಲಿ | |
ಜೈಮಿನಿ · ವ್ಯಾಸ | |
ಮಧ್ಯಕಾಲೀನ | |
ಆದಿಶಂಕರ · ರಾಮಾನುಜ | |
ಮಧ್ವ · ಮಧುಸೂದನ | |
ವೇದಾಂತ ದೇಶಿಕ · ಜಯತೀರ್ಥ | |
ಆಧುನಿಕ | |
ರಾಮಕೃಷ್ಣ · ರಮಣ | |
ವಿವೇಕಾನಂದ · ನಾರಾಯಣ ಗುರು | |
ಅರವಿಂದ ·ಶಿವಾನಂದ | |
ಸಾಂಖ್ಯ -ಸಂಕ್ಷಿಪ್ತ ಪರಿಚಯ
[ಬದಲಾಯಿಸಿ]ಸಾಂಖ್ಯ (ಸಂಸ್ಕೃತದಲ್ಲಿ सांख्य) ಭಾರತೀಯ ಸಿದ್ಧಾಂತಗಳ ಒಂದು ಪಂಥ. ಹಿಂದೂ ಸಿದ್ಧಾಂತದ ಮೇಲೆ ವೈದಿಕ ಪ್ರಭಾವವನ್ನು ಮಾನ್ಯತೆ ಮಾಡುವ ಆರು ಆಸ್ತಿಕಗಳಲ್ಲಿ ಒಂದು. ಬೌದ್ಧ ಧರ್ಮ(ಕ್ರಿ.ಪೂ. ೫೦೦)ಕ್ಕೂ ಮುನ್ನ ಪ್ರತಿಪಾದಿತವಾದ ಇದನ್ನು ಹಿಂದೂ ಧರ್ಮದ ಅತಿ ಪ್ರಾಚೀನ ಮತ್ತು ಸಂಪ್ರದಾಯ ಬದ್ಧ ಸಿದ್ಧಾಂತವೆಂದು ಪರಿಗಣಿಸಲಾಗುತ್ತದೆ. ಇದರ ಪ್ರಕಾರ ವಿಶ್ವವು ಎರಡು ಬಗೆಯ ಶಾಶ್ವತ ಸತ್ಯಗಳಿಂದ ಕೂಡಿದೆ - ಅವುಗಳೆಂದರೆ ಪುರುಷ (ಪ್ರಜ್ಞೆಯ ಕೇಂದ್ರ) ಮತ್ತು "ಪ್ರಕೃತಿ" (ಪ್ರಾಪಂಚಿಕ ಅಸ್ತಿತ್ವದ ಮೂಲ)
ಸಾಂಖ್ಯ ಪಂಥವು ಯೋಗ ಪಂಥದಿಂದ ಪ್ರಭಾವಿತಗೊಂಡಿದೆ. ಅರುಂಧತಿಯ ಕಿರಿಯ ಸಹೋದರರಾದ ಕಪಿಲ ಮುನಿಯನ್ನು ಸಾಂಪ್ರದಾಯಿಕವಾಗಿ ಸಾಂಖ್ಯ ಪಂಥದ ಸ್ಥಾಪಕರೆಂದು ಪರಿಗಣಿಸಲಾಗುತ್ತದೆಯಾದರೂ ಇದಕ್ಕೆ ಚಾರಿತ್ರಿಕ ಉಲ್ಲೇಖಗಳು ಸಿಕ್ಕಿಲ್ಲ. ಶಾಸ್ತ್ರೀಯ ಸಾಂಖ್ಯದ ಕೃತಿ ಸಾಂಖ್ಯ ಕಾರಿಕವನ್ನು ಈಶ್ವರ ಕೃಷ್ಣ ಎಂಬ ಕವಿ ಕ್ರಿ.ಶ. ೨೦೦ ರ ಆಸುಪಾಸು ಬರೆದಿದ್ದಾನೆ.
ಸಾಂಖ್ಯ ತತ್ವದ ಮೂಲ
[ಬದಲಾಯಿಸಿ]ಸಾಂಖ್ಯ ಪಂಥದ ಪ್ರಕಾರ ಜ್ಞಾನವನ್ನು ಮೂರು ಪ್ರಮಾಣಗಳಿಂದ ಪಡೆಯಬಹುದಾಗಿದೆ:
- ಪ್ರತ್ಯಕ್ಷ - ಇಂದ್ರಿಯಗಳಿಂದ ಗ್ರಹಣ
- ಅನುಮಾನ - ತಾರ್ಕಿಕ ನಿಷ್ಪತ್ತಿ
- ಶಬ್ದ - ಕಂಠೋಕ್ತ ಆಧಾರ
ಸಾಂಖ್ಯದ ಅನುಭಾವ
[ಬದಲಾಯಿಸಿ]ಸಾಂಖ್ಯವು ಮೇಲೆ ತಿಳಿಸಿದಂತೆ ಪುರುಷ ಮತ್ತು ಪ್ರಕೃತಿಗಳ ದ್ವೈತವನ್ನು ಎತ್ತಿ ಹಿಡಿಯುತ್ತದೆ. ಎಲ್ಲ ಭೌತಿಕ ಆಗುಹೋಗುಗಳಿಗೆ ಪ್ರಕೃತಿಯೇ ಮೂಲ ಎಂದು ಪರಿಗಣಿಸಲಾಗುತ್ತದೆ. ಪ್ರತಿ ಚೇತನಯುಕ್ತ ಜೀವಿಯೇ ಪುರುಷ. ಪುರುಷಕ್ಕೆ ಶಾರೀರಿಕ ಗಡಿಗಳ ಬಂಧನವಿಲ್ಲ. ಪುರುಷಕ್ಕೆ ಸರಿಯಾದ ಜ್ಞಾನವಿಲ್ಲದಿದ್ದಾಗ ತಪ್ಪು ಕಲ್ಪನೆಯಿಂದ ಭೌತಿಕ ಶರೀರ(ಪ್ರಕೃತಿಯ ಒಂದು ಭಾಗ)ವನ್ನೇ ತಪ್ಪಾಗಿ ತನ್ನನ್ನಾಗಿ ಗುರುತಿಸಿಕೊಳ್ಳುತ್ತದೆ. ಇದರಿಂದ ಸಂಸಾರದ ಬಂಧನದಲ್ಲಿ ಸಿಲುಕುತ್ತದೆ. ಪ್ರಜ್ಞೆಗೆ ಸಿಲುಕುವ ಪುರುಷ ಮತ್ತು ಪ್ರಜ್ಞೆಗೆ ಸಿಲುಕದಿರುವ ಪ್ರಕೃತಿ - ಇವುಗಳ ವ್ಯತ್ಯಾಸ ತಿಳಿದಾಗಲೇ ಆತ್ಮಕ್ಕೆ ಸಂಸಾರದ ಬಂಧನದಿಂದ ಬಿಡುಗಡೆ ದೊರೆಯುವುದು.
ಸಾಂಖ್ಯದ ಒಂದು ಗಮನಾರ್ಹ ಅಂಶವೆಂದರೆ ವಿಶ್ವದ ಉಗಮವನ್ನು ತಿಳಿಸುತ್ತದೆ. ಇದರ ಪ್ರಕಾರ ಪ್ರಕೃತಿ ವಿಶ್ವಕ್ಕೆ ಮೂಲ. ಇದಕ್ಕೆ ೨೪ ತತ್ತ್ವ ಗಳಾಗುವ ಸಂಭಾವ್ಯತೆ ಇರುತ್ತದೆ. ಪ್ರಕೃತಿ ಯಾವಾಗಲೂ ತನ್ನ ಅಂಗಗಳಿಂದ ಕೂಡಿಕೊಂಡಿದೆ:
- ಸತ್ತ್ವ - ಸಮತೋಲನ
- ರಜಸ್ - ಚಟುವಟಿಕೆ
- ತಮಸ್ - ಜಡತ್ವ
ಪ್ರಕೃತಿ ಯಿಂದ ಉಗಮಿಸುವ ೨೪ ತತ್ತ್ವಗಳು:
- ಪ್ರಕೃತಿ - ಭೌತಿಕ ಪ್ರಪಂಚದಲ್ಲಿ ಏನಾದರೂ ಸೃಷ್ಟಿಯಾಗಲು ಕಾರಣವಾಗುವ ಸಂಭಾವ್ಯತೆ.
- ಮಹತ್ - ಪ್ರಕೃತಿಯಿಂದ ವಿಶ್ವ ಉಗಮವಾದಾಗ ಹುಟ್ಟುವ ಮೊದಲ ಉತ್ಪಾದನೆ. ಜೀವಿಗಳಲ್ಲಿ ಬುದ್ಧಿ ಹುಟ್ಟಲು ಇದೇ ಕಾರಣ.
- ಅಹಂಕಾರ - ಉಗಮದ ಎರಡನೇ ಉತ್ಪಾದನೆ. ಜೀವಿಗಳಲ್ಲಿ "ಸ್ವಯಂ"ನ ಅರಿಕೆಯ ಕಾರಣ.
- ಮನಸ್ - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುತ್ತದೆ.
- ಪಂಚ ಜ್ಞಾನೇಂದ್ರಿಯಗಳು - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುವ ಐದು ಇಂದ್ರಿಯಗಳು.
- ಪಂಚ ಕರ್ಮೇಂದ್ರಿಯಗಳು - ಅಹಂಕಾರದ ಸತ್ತ್ವ ಭಾಗದಿಂದ ಉಗಮಿಸುವ ಕೈಗಳು, ಕಾಲುಗಳು, ಕಂಠ, ಜನನೇಂದ್ರಿಯಗಳು, ಮತ್ತು ಗುದದ್ವಾರ.
- ಪಂಚ ತನ್ಮಾತ್ರಗಳು ಅಥವಾ ಐದು ಸೂಕ್ಷ್ಮ ಭೂತಗಳು - ಅಹಂಕಾರದ ತಮಸ್ ಭಾಗದಿಂದ ಉಗಮಿಸುವ ಶಬ್ದ, ಸ್ಪರ್ಶ , ದೃಶ್ಯ, ರುಚಿ, ಮತ್ತು ವಾಸನೆ.
- ಪಂಚ ಮಹಾಭೂತಗಳು - ಪೃಥ್ವಿ, ವಾಯು, ಜಲ, ಆಕಾಶ, ಮತ್ತು ಅಗ್ನಿ. ಅರಿವಿಗೆ ಬರುವ ಭೌತಿಕ ಪ್ರಪಂಚದ ಭಾಗಗಳು.
ಸಾಂಖ್ಯವು ಕಾರಣಾತ್ಮಕ ಸಂಬಂಧಗಳನ್ನು ಎತ್ತಿ ಹಿಡಿಯುತ್ತದೆ. ಕಾರಣ ಮತ್ತು ಪರಿಣಾಮಗಳ ವಾದವಾದ ಸತ್ಕಾರ್ಯ ವಾದ ದ ಪ್ರಕಾರ ಶೂನ್ಯದಿಂದ ಏನನ್ನೂ ಅಥವಾ ಏನನ್ನೂ ಶೂನ್ಯಕ್ಕೆ ಸೃಷ್ಟಿಸಲಾಗವುದಿಲ್ಲ. ಎಲ್ಲ ಸೃಷ್ಟಿಯೂ ಪ್ರಕೃತಿಯ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆ.
ಮೊದಲು ಹೇಳಿದಂತೆ ಸಾಂಖ್ಯ ಒಂದು ದ್ವೈತ ಸಿದ್ಧಾಂತ. ಆದರೆ ಇತರ ದ್ವೈತ ಸಿದ್ಧಾಂತಗಳಿಗೂ ಮತ್ತು ಸಾಂಖ್ಯಕ್ಕೂ ವ್ಯತ್ಯಾಸವಿದೆ.
ವೈಶಿಷ್ಟ್ಯ
[ಬದಲಾಯಿಸಿ]- ಸಾಂಖ್ಯವು ವಿಶ್ವದ ಉಗಮವನ್ನು ತಿಳಿಸುತ್ತದೆ.
- ಪುರುಷ ಮತ್ತು ಪ್ರಕೃತಿಗಳ ವ್ಯತ್ಯಾಸ ಪತಂಜಲಿಯ ಯೋಗ ಪದ್ಧತಿಗೆ ಅತಿ ಮುಖ್ಯವಾಗಿದೆ.
- ಸಾಂಖ್ಯವು ಮನಸ್ಸು, ಅಹಂಕಾರ, ಮತ್ತು ಬುದ್ಧಿಗಳನ್ನು ಬೇರೆಯಾಗಿಯೂ ಮತ್ತು ಪ್ರಕೃತಿಯ ಭಾಗವಾಗಿಯೂ ಪರಿಗಣಿಸುತ್ತದೆ.
- ಸಾಂಖ್ಯ ಸಿದ್ಧಾಂತದಲ್ಲಿ ಸೃಷ್ಟಿಕರ್ತನಾಗಿ ಭಗವಂತನನ್ನು ಒಳಗೊಂಡಿಲ್ಲ.
- ವೇದಾಂತ ಸಿದ್ಧಾಂತದ ಪ್ರಕಾರ ಬ್ರಹ್ಮನು ಎಲ್ಲ ಸೃಷ್ಟಿಗೆ ಮೂಲ. ಇದನ್ನು ವಿರೋಧಿಸುವ ಸಾಂಖ್ಯದ ಪ್ರಕಾರ ಅಚೇತನವಾದ ಭೌತಿಕ ಪ್ರಪಂಚವನ್ನು ಚೇತನವು ಹುಟ್ಟಿಹಾಕಲು ಸಾಧ್ಯವಿಲ್ಲ.
ಸಾಂಖ್ಯ ದರ್ಶನ
[ಬದಲಾಯಿಸಿ]- ಸಾಂಖ್ಯ ದರ್ಶನ ಹೆಚ್ಚಿನ ವಿವರ
- ಸಾಂಖ್ಯ ದರ್ಶನವು ಮೇಲೆ ತಿಳಿಸಿದಂತೆ ಅತ್ಯಂತ ಪ್ರಾಚೀನವದುದು. ಪ್ರಾಚೀನ ಉಪನಿಷತ್ (ಕಠ, ಶ್ವೇತಾಶ್ವೇತರ) ಪುರಾಣ, ಗೀತೆಗಳಲ್ಲಿ ಉಲ್ಲೇಖವಗಿದೆ. ಶ್ರೀ ಶಂಕರಾಚಾರ್ಯರು ಸಾಂಖ್ಯವನ್ನು ಪ್ರಧಾನ ಮಲ್ಲ, ಪ್ರಧಾನ ಪ್ರತಿಕಕ್ಷಿ ಎಂದಿದ್ದಾರೆ. ವೇದಾಂತ / ಭಾರತೀಯ ತತ್ವಶಾಸ್ತ್ರದ ದರ್ಶನಗಳೆಲ್ಲವೂ ಸಾಂಖ್ಯರ ಪ್ರಪಂಚ ವಿಕಾಸ ಕ್ರಮವನ್ನು ಒಪ್ಪುತ್ತಾರೆ.
- ಕಪಿಲ ಮುನಿಯು ಈ ಪಂಥದ/ದರ್ಶನದ ಪ್ರವರ್ತಕ. ಅವನು ಆದಿ ವಿದ್ವಾನ್ ಎಂದು ಹೆಸರು ಪಡೆದಿದ್ದಾನೆ. ಅವನ ಮೂಲ ಬರೆಹದ ಕೃತಿ ಸಿಕ್ಕಿಲ್ಲ . ಈಗ ಲಭ್ಯವಿರುವ ಕೃತಿಗಳಲ್ಲಿ ಈಶ್ವರ ಕೃಷ್ಣನ ಸಾಂಖ್ಯ ಕಾರಿಕಾ ಪ್ರಾಚೀನವಾದುದು. ಅದು ಸುಮಾರು ಕ್ರಿ. ಶ. ೫ ನೇ ಶತಮಾನದ್ದೆಂದು ಹೇಳಲಾಗಿದೆ. (ಕ್ರಿ.ಶ.೨ ನೇ ಶತಮಾನದ್ದಿರಬಹುದೆಂಬ ವಾದವೂ ಇದೆ.)
- ಸಾಂಖ್ಯ ಎಂಬುದಕ್ಕೆ ಸಂಖ್ಯಾ ಎಂಬುದು ಮೂಲ ಪದ. ಇದಕ್ಕೆ ಜ್ಞಾನ, ಪರಿಗಣನೆ ಎಂಬ ಅರ್ಥ ಇದೆ. ಈ ದರ್ಶನದ ಪ್ರವರ್ತಕರು ಒಟ್ಟು ೨೩+ ಪುರುಷ =೨೪( ಆತ್ಮ+ ಇಪ್ಪತ್ತೈದು ;ಆದರೆ ಆತ್ಮ ತ್ತ್ವವನ್ನು ಒಪ್ಪಿಲ್ಲ ) ತತ್ವಗಳು ಎಂದು ಮೊದಲು ಹೇಳಿದವರು . ಜ್ಞಾನ ಮೋಕ್ಷಕ್ಕೆ ಕಾರಣ ಎಂದು ಹೇಳಿದ ಕಾರಣ ,ಇದು ದರ್ಶನ - ಈಎರಡೂ ಕಾರಣದಿಂದ,ಸಾಂಖ್ಯ ದರ್ಶನ ಎಂಬ ಹೆಸರು ಪಡೆದಿದೆ.
- ಭೋಗ ಮತ್ತು ಅಪವರ್ಗ (ವೈರಾಗ್ಯ/ಮೋಕ್ಷ) ಗಳನ್ನು ಜೀವನದ ಮೌಲ್ಯಗಳೆಂದು ಸಾಂಖ್ಯವು ಗುರುತಿಸಿದೆ (ಕಪಲಮುನಿ ಮತ್ತು ಅಸುರಿಯ ಕಥೆ)ಭೋಗವನ್ನು ಪೂರ್ತಿ ಅನುಭವಿಸಿದ ಮೇಲೆ ವಿರಕ್ತಿ ಹುಟ್ಟುತ್ತದೆ ; ಆದ್ದರಿಂದ ಸಂಸಾರ ಸುಖ ಅನುಭವಿಸಿದ ನಂತರ ತತ್ವದ ಬೀಜ ಬಿತ್ತಬೇಕೆಂಬುದು ಇವರ ಮತ.
ಮೂರು ತತ್ವಗಳು
[ಬದಲಾಯಿಸಿ]- ವ್ಯಕ್ತ : ನಮ್ಮೆದುರು ಕಾಣುವ ಜಗತ್ತು \ ಪ್ರಪಂಚ ;
- ಪ್ರಕೃತಿ : ಈ ಪ್ರಪಂಚಕ್ಕೆ ಹಿನ್ನೆಲೆಯಾದ ತತ್ವ ;
- ಜ್ಞಾತೃ (ಪುರುಷ) : ಇವನ್ನು ಅರಿಯುವ ತತ್ವ.
- ಇವು ಮೂರರ ಸಂಬಂಧ ಬೇಧಗಳನ್ನು ಅರಿತರೆ , ದುಃಖ ತ್ರಯದಿಂದ ಬಿಡಯುಗಡೆಯಾಗಿ , ಮೋಕ್ಷ ದೊರೆಯುವುದು.
ಪ್ರಮಾಣಗಳು :
ಈ ದರ್ಶನ ಒಪ್ಪಿರುವ ಪ್ರಮಾಣಗಳು
[ಬದಲಾಯಿಸಿ]- (ಸತ್ಯವನ್ನು ತಿಳಿಯಲು ಬೇಕಾದ, ಅನುಸರಿಸಬೇಕಾದ ಮಾರ್ಗ -
- (Epistemology- valid sources of knowledge)
- ೧ ) ಪ್ರತ್ಯಕ್ಷ : ಇಂದ್ರಿಯಾನುಭವ ಅರ್ಥಾತ್ ಪ್ರತ್ಯಕ್ಷ ಪ್ರಮಾಣ ; ಪ್ರತ್ಯಕ್ಷವು ಪ್ರಮಾಣವಾದರೂ ಮಿತಿಯಿದೆ. ದೂರದ ಮತ್ತು ಸೂಕ್ಷ್ಮ ವಸ್ತುಗಳನ್ನು ಸರಿಯಾಗಿ ತಿಳಿಯಲಾರದು.
- ೨ ) ಅನುಮಾನ (inference) : ೧. ಕಾಣುವುದರ ನೆರವಿನಿಂದ ಕಾಣದ್ದನ್ನು ತಿಳಿಯುವುದು.
- ೨. ಕಾರಣವನ್ನು ನೋಡಿ ಕಾರ್ಯವನ್ನು ಊಹಿಸುವುದು. (ಉದಾ: ಗಣಿತದ ಲೆಕ್ಕಾಚಾರದಿಂದ )
- ೩ . ಹೋಲಿಕೆಯ ಆಧಾರದ ಮೇಲೆ ತಿಳಿಯುವುದು. ಇದರಲ್ಲಿ ಪೂರ್ವವತ್, ಶೇಷವತ್, ಸಾಮಾನ್ಯತೋದೃಷ್ಠ ವೆಂದು ಮೂರು ಬಗೆ.
- ೩ ) ಆಪ್ತಾಗಮ. : ಶಾಸ್ತ್ರಗಳು , ಆಪ್ತವಾಕ್ಯ, ಇವುಗಳನ್ನು ಔಪಚಾರಿಕವಾಗಿ ಒಪ್ಪಲಾಗಿದೆ.
ಕಾರ್ಯ-ಕಾರಣವಾದ :
[ಬದಲಾಯಿಸಿ]- ೧ . ಕಾರ್ಯ - ಕಾರಣಗಳು ಪರಸ್ಪರ ನೇರ ಸಂಬಂಧ ಹೊಂದಿವೆ. ಈನಿಯಮದ ಪ್ರಕಾರ ಕಾರಣವಿಲ್ಲದೆ ಕಾರ್ಯವಿಲ್ಲ. (ಮಣ್ಣಿಲದೆ ಮಡಿಕೆ ಯಾಗುವುದಿಲ್ಲ -ಮಣ್ಣು ಕಾರಣ -ಮಡಿಕೆ ಕಾರ್ಯ)
ಕಾಣುವ ಈ ಜಗತ್ತು ಕಾರ್ಯವಾದ್ದರಿಂದ ,ಇದಕ್ಕೆ ಕಾರಣವಿರಬೇಕು; ಸಾಂಖ್ಯರು ಆದ್ದರಿಂದ ಕಾರಣದ ಬಗೆಗೆ ಚರ್ಚಿಸುತ್ತಾರೆ.
- ೨. ಸತ್ಕಾರ್ಯ ವಾದ : ಕಾರ್ಯವು ಕಾರಣದಲ್ಲಿ ಮೊದಲಿಂದಲೂ ಇತ್ತು ಎಂಬುದು. ಮಡಕೆ (ಕಾರ್ಯ -ಮಣ್ಣೆಂಬ ಕಾರಣದಲ್ಲಿ ಸುಪ್ತವಾಗಿ ಇತ್ತು , ಎಂಬುದು.
- ೩.ಅಸತ್ ಕಾರ್ಯ : ಕಾರಣದಿಂದ ಕಾರ್ಯ ಹೊಸದಾಗಿ ಹುಟ್ಟದು ; ಏನೇಆಗಲೀ ಕಾರ್ಯವು ಕಾರಣದಿಂದ ಬೇರೆ ಅಲ್ಲ. ಕಾರ್ಯದಲ್ಲಿ ಕಾರಣ ಅವ್ಯಕ್ತವಾಗಿ ಇದೆ. ಕಾರಣದ ವ್ಯಕ್ತಾವಸ್ತೆಯೇ ಕಾರ್ಯ. ಮಣ್ಣು -ಮಡಕೆಗಳಂತೆ ; ನೀರಿ ಮತ್ತು ಗುಳ್ಳೆ ; ಬೇಧವು ವಿವರ್ತ .
- ಸಾಂಖ್ಯರ ಸತ್ಕಾರ್ಯ ವಾದವನ್ನು ಪರಿಣಾಮ ವಾದವೆನ್ನುತ್ತಾರೆ. ವೇದಾಂತಗಳು ಮತ್ತು ಮಾಧ್ಯಮಿಕರು ಇದನ್ನು ವಿವರ್ತವಾದವೆನ್ನುತ್ತಾರೆ.
- ಈಶ್ವರ ಕೃಷ್ಣರ ಸಾಂಖ್ಯ ಕಾರಿಕೆ
- ಅಸದಕರಣಾದುಪಾದಾನ, ಗೃಹಣಾತ್
- ಸರ್ವಸಂಭವ ಭಾವಾತ್ |
- ಶಕ್ತಸ್ಯಶಕ್ತ ಕರಣಾತ್ ಕಾರಣ ಭಾವಾ ಚ್ಚ
- ಸತ್ಕಾರ್ಯಮ್||
ಕಾರಣವಾದದ ನಿಯಮಗಳು :
[ಬದಲಾಯಿಸಿ]- ೧. ಇಲ್ಲದಿರುವ ವಸ್ತುವು ಹುಟ್ಟಲಾರದು. (ಅಸದ್ ಕಾರಣಾತ್) (ಉದಾ
- ನೀರಿಲ್ಲದೆ ಮಂಜುಗಡ್ಡೆ ಇಲ್ಲ)
- ೨. ವಸ್ತುವೊಂದರ ಉತ್ಪತ್ತಿಗೆ ವಿಶಿಷ್ಟ ದ್ರವ್ಯಗಳನ್ನು ಮಾತ್ರಾ ಬಳಸುತ್ತೇವೆ. (ಉಪಾದಾನ ಗ್ರಹಣಾತ್)(ಮಡಕೆಗೆ ಮಣ್ಣು ಬೇಕು.)
- ೩.ಯಾವುದೋ ವಸ್ತುವಿನಿಂದ ಇನ್ನಾವುದೋ ವಸ್ತು ಹುಟ್ಟುವುದಿಲ್ಲ. (ಸರ್ವಸಂಭವಾಭಾವಾತ್)( ಉದಾ
- ಎಳ್ಳಿನಿಂದ ಎಣ್ನೆ -ಮರಳಿನಿಂದಲ್ಲ)
- ೪. ಶಕ್ತ ವಸ್ತುವಿನಿಂದ ಶಕ್ಯ ವಸ್ತು ಉತ್ಪತ್ತಿಯಾಗುವು. (ಶಕ್ತಸ್ಯ ಶಕ್ಯ ಕರಣಾತ್) ಶಕ್ತವಲ್ಲದಿದ್ದರೆ ಆಗುವುದಿಲ್ಲ (ಉದಾ
- ಕಬ್ಬಿಣದಿಂದ ಬಂಗಾರದ ವಡವೆ ಆಗುವುದಿಲ್ಲ)
- ೫. ಕಾರ್ಯ ಮತ್ತು ಕಾರಣದಲ್ಲಿ ಏಕತೆ ಇದೆ. (ಕಾರಣ ಭಾವಾಚ್ಚ) ಕಾರ್ಯ -ಕಾರಣಗಳು ಒಂದೇ
ವಸ್ತುವಿನ ವಿಭಿನ್ನ ಅವಸ್ಥೆಗಳು -ಕಾರ್ಯವು ಕಾರಣದಲ್ಲಿ ವಿದ್ಯಮಾನವಾಗಿದೆ. (ಸತ್ಕಾರ್ಯಮ್) (ಉದಾ: ಬಂಗಾರದ ಒಡವೆ ಬಂಗಾರವೆಂಬ ವಸ್ತುವಿನಲ್ಲಿ ಅಡಕವಾಗಿದೆ )
ತತ್ವಗಳು :
[ಬದಲಾಯಿಸಿ]- ೧. ಪ್ರಕೃತಿಯು ವಸ್ತು ಪ್ರಪಂಚಕ್ಕೆ ಮೂಲವಾದ ಕಾರಣ ,ಅದು ಪರಿಣಾಮ ಹೊಂದಿ ಪ್ರಪಂಚವಾಗಿದೆ. ಅದು ಉಪಾದಾನ ಕಾರಣ. ವ್ಯಕ್ತ ಪ್ರಪಂಚವೆಲ್ಲವೂ ಅದರಲ್ಲಿಅಡಗಿದೆ. ಇದು ಸತ್ಕಾರ್ಯವಾದ ಪ್ರಕೃತಿ ಎಂಬ ಮೂಲ ತತ್ವಕ್ಕಿಂತ ಹಿಂದಿನ ಯಾವ ತತ್ವವೂ ಇಲ್ಲ. ಮೂಲ ಪ್ರಕೃತಿ ತತ್ವ ವಿಕೃತಿ; ವಿಕೃತಿ ಇಲ್ಲದ್ದು ಅದು ಎಲ್ಲದಕ್ಕೂ ಮೂಲವಾದದ್ದು ; ಅದರಿಂದ ಅದು ಪ್ರಧಾನ ತತ್ವ ; ಅದು ಅತ್ಯಂತ ಸೂಕ್ಷ್ಮ -ಕಾಣದಿರುವುದು ; ಆದ್ದರಿಂದ ಅದು ಅವ್ಯಕ್ತ ; ಅದ್ದರಿಂದಲೇ ಅನುಮಾನ ಪ್ರಮಾಣದಿಂದ ಅರಿಯಬೇಕು.
- ಪ್ರಕೃತಿ ಜಡ - ಚೇತನ ರಹಿತ ; ಆದರೆ ಕ್ರಿಯಾಶೀಲ; ಶಕ್ತಿ ರೂಪ ಅದು ; ಅಕಾರಣ , ಸ್ವತಂತ್ರ , ಏಕ , ಶಾಶ್ವತ, ಅದಕ್ಕೆ ಉತ್ಪತ್ತಿ ನಾಶಗಳಿಲ್ಲ ; ಅವ್ಯಕ್ತ ವಾದ ಪ್ರಕೃತಿಗೂ - ವ್ಯಕ್ತ ಪ್ರಪಂಚಕ್ಕೂ ಸಾಮ್ಯಗಳೂ ವೈಷಮ್ಯಗಳೂ ಇವೆ.
ಮೂರುಗುಣಗಳು :
[ಬದಲಾಯಿಸಿ]ಸತ್ವ - ರಜಸ್ಸು - ತಮಸ್ಸು ;
- ಈ ಮೂ ರೂ ಗುಣಗಳ ಸಾಮ್ಯಾವಸ್ಥೆಗೆ (ಸಮಾನ ಪ್ರಮಾಣದಲ್ಲಿರುವುದು) ಪ್ರಕೃತಿ ಎಂದು ಹೆಸರು .
ಸೌಕರ್ಯಕ್ಕಾಗಿ ಅವುಗಳನ್ನು ಗುಣಗಳೆನ್ನಲಾಗಿದೆ. ಪ್ರಕೃತಿಯ ಸ್ವರೂಪವೇ ಇವು ಮೂರು ಗುಣಗಳು. ಇದು ಪುರುಷನನ್ನು ಬಾಧಿಸುವುದರಿಂದ ಗುಣಗಳೆಂದಿದೆ. ಜಗತ್ತಿನ ಯಾವತ್ತೂ ಪದಾರ್ಥಗಳು ಈ ಮೂರೂ ಗುಣಗಳಿಂದ ಕೂಡಿದೆ.
- ೧. ಸತ್ವ ಗುಣವು ಲಘು , ಪ್ರಕಾಶಕ, ಇಷ್ಟ (ಆನಂದ ರೂಪ) ವಾಗಿದೆ ;
- ೨ . ರಜೋಗುಣವು ಚಂಚಲ, ಕ್ರಿಯಾಶೀಲ, ದುಃಖ - ರೂಪಕವಾಗಿದೆ;
- ೩ . ತಮೋಗುಣ : ತಮೋಗುಣವು ಭಾರ, ತಡೆ ಸ್ವಭಾವ, ಜಡ , ಅಜ್ಞಾನವಾಗಿದೆ;
- ೧. ಸತ್ವ : ಬಿಳಿ ಬಣ್ಣ ; ರಜಸ್ಸು -ಕೆಂಪು ಬಣ್ಣ , ತಮಸ್ಸು - ಕಪ್ಪು ಬಣ್ಣ ;
- ಈ ಮೂರೂ ಒಟ್ಟಿಗಿದ್ದು ಒಂದನ್ನೋದು ಆಶ್ರಯಿಸಿಕೊಂಡಿದೆ. ಗುಣಗಳು ಸಾಮ್ಯಾವಸ್ಥೆಯಲ್ಲಿದ್ದರೆ ಸಮ ಪ್ರಮಾಣ) ಸೃಷ್ಟಿ ಯಿಲ್ಲ. ಪರಸ್ಪರ ಏರುಪೇರಾದರೆ ಸೃಷ್ಟಿಕ್ರಿಯೆ ; ಪ್ರಳಯದಲ್ಲಿ ಸಮ ರೂಪ ಏರುಪೇರಾಗವುದು ಸ್ವಭಾವ .
- ಪುರುಷ : ಮೂಲ ಸರ್ವ ವ್ಯಾಪಿ ತತ್ವ: ಸಾಂಖ್ಯವು ಪ್ರಕೃತಿ - ಪುರುಷ ಎಂಬ ಎರಡು ತತ್ವಗಳನ್ನು ಒಪ್ಪಿದೆ. ಅದು ಚೈತನ್ಯ -ಅದೇ :ಪುರುಷ ; ಸರ್ವವ್ಯಾಪಿ, ದೇಹ,ಇಂದ್ರಿಯ,ಮನಸ್ಸುಗಳಿಂದ ಬೇರೆ.
ಅವನೇ ಜ್ಞಾತೃ -ತಿಳಿಯುವವನು, ಅವನನ್ನು ತಿಳಯಲಾಗವುದಿಲ್ಲ. ( ಎಂದರೆ ಜ್ಞಾತೃವಿಗೆ ಜ್ಞಾತೃವಾಗಲಾರ); ಆದರೆ ಇವನು -ಪುರುಷ -ನಿಷ್ಕ್ರಿಯ. ಉದಾಸೀನ ; ಅವನು ಕೇವಲ ಸಾಕ್ಷಿ ರೂಪ ; ಕೂಟಸ್ಥ ; ನಿತ್ಯ (ನಾಶವಿಲ್ಲದವನು, ನಿರ್ಗುಣ , ಸದಾ ಮುಕ್ತ, ಅಸಂಗ , ಅವಿಕಾರಿ (ಬದಲಾವಣೆ ಹೊಂದದವನು) ; ಆತ್ಮ ದಂತೆ ಆನಂದ ರೂಪನಲ್ಲ ;
- ಪ್ರಕೃತಿ -ಜಡ - ಆದರೂ ಕ್ರಿಯಾ ಶೀಲ ; ಪುರುಷ ಚೈತನ್ಯ ಆದರೆ- ನಿಷ್ಕ್ರಿಯ , ಉದಾಸೀನ .
- ಸಾಂಖ್ಯರು ಈ ತತ್ವವನ್ನು ಯುಕ್ತಿಯಿಂದ (ತರ್ಕದಿಂದ ) ಸಾಧಿಸುತ್ತಾರೆ.
- ೧ . ಸಂಘಾತ ಪರಾರ್ಥತ್ವಾತ್ ; ಮನೆ ಇರುವುದು ಮತ್ತೊಬ್ಬನಿಗೆ ಹಾಗೆ ಪ್ರಕೃತಿ ಪುರುಷ,
- ೨ . ತ್ರಿಗುಣಾದಿವಿಪರ್ಯಾತ್ : ಮೂರೂ ಗುಣಗಳಿಲ್ಲದ ಒಂದು ಸಾಕ್ಷಿ ಇರಲೇಬೇಕು ;
- ೩ . ಅಧಿಷ್ಠಾನಾತ್ : ಜಡ ಪ್ರಕೃತಿಗೆ ಅಧಿಷ್ಠಾನವಾಗಿ ಪ್ರಕೃತಿಬೇಕು ;
- ೪ ಭೋಕ್ತೃ ಭಾವಾತ್ : ಪ್ರಕೃತಿಯ ಸುಖ ದುಃಖ ಅನುಭವಿಸುವ ಚೇತನ ಬೇಕು .-ಆದ್ದರಿಂದ ಅದು ಇದೆ.
- ೫ . ಕೈವಲ್ಯಾರ್ಥಂ ಪ್ರವೃತ್ತೇಶ್ಚ : ಮುಕ್ತಿಯನ್ನು ಬಯಸುವ ಅಪೇಕ್ಷೆ - ಚೈತನ್ಯ ವಿದೆಯೆಂದು ಹೇಳುತ್ತೆ. (ಚೈತನ್ಯ ವೊಂದು ಇದೆ ಎಂಬುದಕ್ಕೆ ಅದೇ ಆಧಾರ)
ಅನೇಕತ್ವ :
[ಬದಲಾಯಿಸಿ]- ಪುರುಷ ತತ್ವ ಒಂದೇ ಆದರೂ ಪುರುಷರು ಅನೇಕ ; ಉದಾಹರಣೆ : ಪ್ರಕೃತಿ ಕುರುಡನಂತೆ - ನೆಡೆಯುವ ಶಕ್ತಿ ಇದೆ; ಪುರುಷ ಕುಂಟನಂತೆ ಕಾನುವ ಶಕ್ತಿ ಇದೆ ; ಕುರುಡನ ಮೇಲೆ ಕುಳಿತ ಕುಂಟ ಗುರಿ ತಲುಪಿದ ಮೇಲೆ ಬೇರೆ ಆಗುತ್ತಾನೆ . ಹೀಗೆ ಪುರುಷ ಮುಕ್ತಿ ಪಡೆಯುತ್ತಾನೆ .
ಸೃಷ್ಟಿ :
[ಬದಲಾಯಿಸಿ]- ಪ್ರಕೃತಿಯ ಗುಣಗಳಲ್ಲಿ ಮೇಲಾಟ ; ಆಗ ಅದರಲ್ಲಿ ಅಡಗಿದವುಗಳು ಕಾಣಿಸಿಕೊಳ್ಳುತ್ತವೆ. (ವ್ಯಕ್ತ ಪ್ರಪಂಚ)
ಮೊದಲು ಮಹತ್ತು ಸೃಷ್ಟಿಯಾಗಿ, ಅದರಿಂದ ಅಹಂಕಾರ ಅದರಿಂದ ಪಂಚ ತನ್ಮಾತ್ರೆಗಳು , .ಏಕಾದಶ ಇಂದ್ರಿಯಗಳು, ಪಂಚ ತನ್ಮಾತ್ರೆಗಳಿಂದ ಪಂಚ ಭೂತಗಳು ಸೃಷ್ಟಿಯಾಗುವುವು.
- ೧ . ಮಹತ್ : ಪ್ರಕೃತಿ ಯ ಸೃಷ್ಟಿಯಲ್ಲಿ ಮೊದಲ ತತ್ವ ಮಹತ್ ; ಇದು ಜಗತ್ತಿನ ಉತ್ಪತ್ತಿಗೆ ಬೀಜ. ಸಮಷ್ಟಿ (ಜಗತ್ತು) ರೂಪದಲ್ಲಿ - ಮಹತ್; ವ್ಯsಷ್ಟಿ (ಒಂದು ವ್ಯಕ್ತಿ) ರೂಪದಲ್ಲಿ - ಬುದ್ಧಿ (ಸಮಷ್ಟಿ ವ್ಯಾಪಕವದದ್ದು ಬುದ್ದಿ -ಒಬ್ಬನಿಗೆ ಅನ್ವಯ)
- ೨. ಅಹಂಕಾರ : ಮಹತ್ತಿನಿಂದ ಅಹಂಕಾರ ತತ್ವ ಹುಟ್ಟುತ್ತದೆ ; ಅಹಂಕಾರಕ್ಕೆ ಕತೃತ್ವ, ಭೋಕ್ತೃತ್ವ ಸ್ವಮಿತ್ವ ,ಇವು ಗುಣಗಳು.ಅಹಂಕಾರ ಪ್ರಕೃತಿಯಲ್ಲಿರುವ ವ್ಯಾಪಕ ತತ್ವ. ಮನುಷ್ಯನಲ್ಲಿ ನಾನು ಎಂಬ ಭಾವನೆ (ಜಂಬವಲ್ಲ)
ಸತ್ವಗುಣದ ಪ್ರಾಧಾನ್ಯದಿಂದ (ವೈಕೃತ) ಪಂಚ ಜ್ಞಾನೇಂದ್ರಿಯ; ಪಂಚ ಕರ್ಮೇಂದ್ರಿಯ, ಮನಸ್ಸುಗಳ ಉತ್ಪತ್ತಿ ರಜೋಗುಣ ಪ್ರಧಾನ ದಿಂದ (ತೈಜಸ ) ಅಹಂಕಾರ, ತನ್ಮಾತ್ರೆಗಳು ಹುಟ್ಟುತ್ತವೆ.
- ತಮೋಗುಣ ಪ್ರಧಾನ - (ವೈಶ್ಶ್ವಾನರ ) ಅದರಿಂದ ಪಂಚ ಭೂತಾದಿಗಳು
- ೩. ಮನಸ್ಸು : ಮನಸ್ಸು ಹನ್ನೊಂದನೆಯ ಇಂದ್ರಿಯ. ಇದು ಜ್ಞಾನೇಂದ್ರಿಯವೂ ಹೌದು ; ಕರ್ಮೇಂದ್ರಿಯವೂ ಹೌದು . ಮಹಸ್ಸಿನ ಮುಖ್ಯ ಕಾರ್ಯ ಸಂಕಲ್ಪ; (ಕಲ್ಪನೆ -ಪೂರ್ಣತೆಯ ಕಲ್ಪನೆ) ,ಇಂದ್ರಿಯಗಳ ಜ್ಞಾನ ಅಪೂರ್ಣವಾಗಿದ್ದು , ಅದಕ್ಕೆ ಪೂರ್ಣತೆಯ ವಿಶಿಷ್ಠ ಜ್ಞಾನವನ್ನು ಮನಸ್ಸು ಕೊಡುವುದು.
ಇಂದ್ರಿಯಗಳು ವರ್ತಮಾನಕ್ಕೆ ಸಂಬಂಧಪಟ್ಟ ಜ್ಞಾನವನ್ನು ಕೊಡುವುದು. ಅಂತಃಕರಣವು (ಮನೋಬುದ್ಧಿಅಹಂಕಾರ) ಭೂತ ಭವಿಷ್ಯತ್ ವರ್ತಮಾನ , ಮೂರೂ ಕಾಲಕ್ಕೆ ಸಂಬಂಧಿಸಿದ್ದು.
- ಉದಾ : ಕಣ್ಣು ಮರದ ನಿರ್ವಿಕಲ್ಪ ಚಿತ್ರವನ್ನು ನಮಗೆ ಕೊಡುವುದು. ಮನಸ್ಸು ಅಹಂಕಾರಕ್ಕೆ ತಲುಪಿಸುತ್ತದೆ. ಅದು ತನ್ನದು ಎಂಬ ಭಾವವನ್ನು ಬುದ್ಧಿಗೆ ತಲುಪಿಸುತ್ತದೆ. ಬುದ್ಧಿಯು ಮರವೆಂಬ ನಿಶ್ಚಯವನ್ನು ಪುರುಷನಿಗೆ ಸಮರ್ಪಿಸುತ್ತದೆ.
- ಮನ, ಬುದ್ಧಿ , ಅಹಂಕಾರಗಳು ಪ್ರಕೃತಿಯ ತತ್ವ - ; ಪುರುಷ- ಚೈತನ್ಯ ರೂಪ; ಆದರೆ ತಟಸ್ಥ - ಎರಡೂ ಸೇರಿದಾಗ ವಿಚಾರ -ಜ್ಞಾನ. - ಇದು ಸಾಂಖ್ಯರ ಮತ.
ಪಂಚೀಕರಣ
[ಬದಲಾಯಿಸಿ]- ತನ್ಮಾತ್ರಗಳು : ಶಬ್ದ , ಸ್ಪರ್ಶ, ರೂಪ , ರಸ , ಗಂಧ , -ಇವು ಸೂಕ್ಷ್ಮವಾದ (Subtle)ತತ್ವಗಳು. ಇವು ಅಹಂಕಾರ ತತ್ವದಿಂದ ಉಂತಾಗುತ್ತವೆ . ತನ್ಮಾತ್ರಗಳು ಪಂಚ ಭೂತಗಳಿಗೆ ಕಾರಣ (ಸಾಂಖ್ಯರ ಪ್ರಕಾರ). ಪಂಚೀಕರಣ -ಅಂಕಣ
ಸೃಷ್ಟಿಯಲ್ಲಿ ತನ್ಮಾತ್ರ ಸರ್ಗ/ ಭೌತಿಕ ಸರ್ಗ/ ಲಿಂಗ ಸರ್ಗ :-
- ಪಂಚ ಭೂತಗಳ ಸೃಷ್ಟಿ
- ಶಬ್ದ ದಿಂದ -ಆಕಾಶ ; ಶಬ್ದ + ಸ್ಪರ್ಶ(ಕ್ಕೆ ಸೇರಿ) ದಿಂದ -ವಾಯು ಅವುಗಳ ಗುಣಗಳು , ಶಬ್ದ, +ಸ್ಪರ್ಶ, + ರೂಪ ಗಳಿಂದ ತೇಜಸ್ಸು ; (ಅಗ್ನಿ) ,ಅವುಗಳ ಗುಣಗಳು ; ರಸಕ್ಕೆ + ; ಶಬ್ದ, +ಸ್ಪರ್ಶ, + ರೂಪ ಸೇರಿ - ಜಲ ಅದರ ಗುಣಗಳು ; ಗಂಧಕ್ಕೆ + ರಸ+ ಶಬ್ದ, +ಸ್ಪರ್ಶ, + ರೂಪ ಸೇರಿ ಭೂಮಿ -ಅವುಗಳ ಗುಣಗಳು. ಅವುಗಳಿಂದ ಹುಟ್ಟಿದ ಭೂತಗಳುಶಂತ , ಘೋರ (ದುಃಖ), ಮೂಢ, ಎಂಬ ಹೆಸರು ಪಡೆದಿವೆ.. ಪಂಚ ಭೂತಗಳಲ್ಲಿ ಮುಖ್ಯ ತನ್ಮಾತ್ರೆ ಯ್ ಅಂಶ ಹೆಚ್ಚು ಇದ್ದು ಉಳಿದವು ಕಡಿಮೆ ಪ್ರಮಾಣದಲ್ಲಿ ಇರುತ್ತವೆ
- ವಿಶ್ವ -> ಸಮಷ್ಠಿ
- ಮನುಷ್ಯ -> ವ್ಯಷ್ಠಿ
- ೧ನೇ ಸರ್ಗ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
- ೨ ನೇ ,, ಪಂಚ ಮಹಾ ಭೂತಗಳು - ೫ ಆಕಾಶ ವಾಯು ತೇಜಸ್ಸು ಜಲ ಭೂಮಿ
- ೩ ,, ಪಂಚ ಪ್ರಾಣಗಳು - ೫ ವ್ಯಾನ ಪ್ರಾಣ ಸಮಾನ ಉದಾನ ಅಪಾನ
- ೪ ,, ಪಂಚ ಜ್ಞಾನೇಂದ್ರಿಯಗಳು - ೫ ಕಿವಿ ಚರ್ಮ ಕಣ್ಣು ನಾಲಗೆ ಮೂಗು
- ೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
- ೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ (೫ , ೬, ನೇ ಸರ್ಗ ಗಳು ಸಾಂಖ್ಯರ ತತ್ಫ಼್ವಗಳಲ್ಲಿ ಸೇರಿಲ್ಲ)
- ಮನಸ್ಸು + ಬುದ್ಧಿ + ಅಹಂಕಾರ (+ಪುರುಷ ) -- ೩ ( ೪ )
- ಸಾಂಖ್ಯರ ದೃಷ್ಟಿ:
- ಬಂಧ ಮತ್ತು ಮೋಕ್ಷ : ಮನುಷ್ಯ ರ ಬದುಕು ಮೂರು ತಾಪಗಳಿಂದ ಕೂಡಿದೆ. ೧. ಮನಸ್ಸಿಗೆ ಸಂಬಂಧಿಸಿದುದು; - ಅಧ್ಯಾತ್ಮಿಕ, ೨. ಪಶು,ಪಕ್ಷಿ ಗಳಿಗೆ ಸಂಬಂಧಿಸಿದುದು, ಅಧಿಭೌತಿಕ, ೩. ದೇವ, ದಾನವ, ಗ್ರಹಗಳಿಗೆ ಸಂಬಂಧಿಸಿದುದು, -ಆಧಿಭೌತಿಕ .
- ಪುರುಷನು ವಾಸ್ತವಾಗಿ ಮುಕ್ತ,; ಶುದ್ಧ ಚೈತನ್ಯ ರೂಪಿ ; ಮನೋಬುದ್ಧ ಅಹಂಕಾರಗಳನ್ನು ತನ್ನದೆಂದು ತಿಳಿದಾಗ ಬಂಧನವಾಗುತ್ತದೆ. ಪುರುಷನು ತನ್ನ ನಿಜವನ್ನು ತಿಳಿದಗ ಮುಕ್ತನಾಗುತ್ತಾನೆ.
- ಆತ್ಮ - ಅನಾತ್ಮ ಗಳ ಬೇಧವನ್ನು ತಿಳಿಯದಯದಿರುವುದೇ ಅಜ್ಞಾನ , ಬಂಧ ಕ್ಕೆ ಅಜ್ಞಾನವೇ ಕಾರಣ.
- ಈ ಅಜ್ಞಾನವನ್ನು ತೊಲಗಿಸಿಕೊಂಡರೆ -ಜ್ಞಾನ ಪ್ರಾಪ್ತಿಯಾಗುವುದು. ಅದೇ ಮೋಕ್ಷ.
- ಕರ್ಮವು ಒಳ್ಳೆಯದಾಗಲಿ, ಕೆಟ್ಟದ್ದಾಗಲಿ ಬಂಧನಕಾರಿ.
ಮೋಕ್ಷ
- ಜೀವನು ತಾನು ಶುದ್ಧನೆಂದೂ ಪ್ರಕೃತಿಯಿಂದ ಬೇರೆಯೆಂದೂ ತಿಳಿಯುವುದೇ ವಿವೇಕ; ಈವಿವೇಕವಾದೊಡನೆ ಪ್ರಕೃತಿಯ ಲೀಲೆ ನಿಲ್ಲುತ್ತದೆ. ತತ್ವಾಭ್ಯಾಸದ ಕಾರಣದಿಂದ ಕೈವಲ್ಯ (ಮೋಕ್ಷ) ಪ್ರಾಪ್ತಿಯಾಗುತ್ತದೆ. ಶರೀರವಿದ್ದಂತೆಯೇ ಕೈವಲ್ಯ ಪ್ರಾಪ್ತಿಯಾಗಬಹುದು. ಕರ್ಮಫಲ ತೀರುವವರೆಗೆ ದೇಹವಿರುವುದು. ಮೋಕ್ಷದಲ್ಲಿ ಆನಂದವೂ ಇಲ್ಲ, ದುಃಖವೂ ಇಲ್ಲ. ಸುಖ-ದುಃಖಗಳು ಸಾಪೇಕ್ಷವಾದವು.
ಈಶ್ವರ (ದೇವರು) : ಸಾಂಖ್ಯರನ್ನು ಆಸ್ತಿಕರೆನ್ನುತ್ತಾರೆ, ಕಾರಣ ಅವರು (ಈಶ್ವರ-ಸೃಷ್ಟಿಕರ್ತ) ದೇವರನ್ನು ಒಪ್ಪದಿದದರೂ ವೆದವನ್ನು ಒಪ್ಪುತ್ತಾರೆ . ಸಾಂಕ್ಯರಲ್ಲಿ ದೇವರ ಬಗ್ಗೆ ಒಮ್ಮ,ತವಿಲ್ಲ. ಕೆಲವರು ಈಶ್ವರನನ್ನು ಒಪ್ಪುತ್ತಾರೆ. ಕೆಲವರು ಒಪ್ಪುವುದಿಲ್ಲ. ಸಾಂಖ್ಯರಲ್ಲಿ, ಸೇಶ್ವರ ಸಾಂಖ್ಯರು, ನಿರೀಶ್ವರ ಸಾಂಖ್ಯರು. ಎಂದು ಎರಡುವಿಧ . ವೇದವನ್ನು ಒಪ್ಪುವುದರಿಂದ ಆಸ್ತಿಕ ದರ್ಶನ . ಸಾಂಖ್ಯರ ನಿರೀಶ್ವರ ವಾದ :
- ಈ ಪ್ರಪಂಚಕ್ಕೆ ಈಶ್ವರನು ಕಾರಣ ನೆಂಬುದು ಅರ್ಥವಿಲ್ಲದ್ದು, ಅವಿಕಾರಿಯು ಆದವನು (ಬದಲಾವಣೆ ಇಲ್ಲದವನು ) ಜಗತ್ತಿಗೆ ಕಾರಣನಾಗಲಾರ. ಏಕೆಂದರೆ :
ಕಾರಣ :
- ದೇವರನ್ನು ಒಪ್ಪಿಕೊಂಡರೆ, ದೇವರು ಈ ಜಗತ್ತನ್ನು ಸ್ವಾರ್ಥಕ್ಕಾಗಿ ಮಾಡಿದನೋ, ಪರೋಪಕಾರಕ್ಕಾಗಿ ಮಾಡಿದನೋ? ಎಂಬ ಪ್ರಶ್ನೆ ಏಳುವುದು. ದೇವರು ಎಂದ ಮೇಲೆ ಸ್ವಾರ್ಥವಿಲ್ಲ. ಪರೋಪಕಾರಕ್ಕಾಗಿ ಮಾಡಿದನು ಎಂದರೆ, ದುಃಖಮಯವಾದ ಜಗತ್ತನ್ನು, ಸೃಷ್ಟಿಸಿ ಜೀವರುಗಳಿಗೆ ನರಳಿಸುವ ಕೆಲಸವನ್ನು ಮಾಡಲು ಸಾಧ್ಯವೇ? ಎಂದರೆ ಸಾದ್ಯವಿಲ್ಲ ಎಂದು ನಿರ್ಣಯ . ದೇವರು ಕರುಣಾಲುವಾದರೆ ಸೃಷ್ಟಿ ಸಾಧ್ಯವಿಲ್ಲ, - ಎಲ್ಲರೂ ಸುಖಿಗಳಗುವಂತೆ ಸೃಷ್ಟಿಸುತ್ತಿದ್ದನು. ಕರ್ಮವೇ ದುಃಖಕ್ಕೆ ಕಾರಣವೆಂದರೆ ಸೃಷ್ಟಿಗೆ ಕರ್ಮವೇ ಕಾರಣವೆನ್ನಬೇಕು ; ಈಶ್ವರನ ಅವಶ್ಯಕತೆ ಇಲ್ಲ. ಹಾಗಾಗಿ ಪ್ರಪಂಚವನ್ನು ವಿವರಿಸಲು, ಪುರುಷ-ಪ್ರಕೃತಿ ತತ್ವಗಳೇ ಸಾಕು . ಅವಿವೇಕಿಯಾದ ಪ್ರಕೃತಿಯು ಕರುವಿನ ಸಲುವಾಗಿ ಹಸುವಿನ ಕೆಚ್ಚಲಲ್ಲಿ ಹಾಲನ್ನು ಸೃಷ್ಟಿಸುತ್ತದೆ.- ಅದನ್ನು ಮಾನವರು ಉಪಯೋಗಿಸುತ್ತಾರೆ !!
- ವೇದಗಳಲ್ಲಿಯೂ ಕರ್ಮವೇ ದೃಷ್ಟಿಗೆ ಕಾರಣವೆಂದು ಹೇಳಿದೆ.
ಸೇಶ್ವರ ವಾದ : (ಸ+ಈಶ್ವರ ವಾದ) : ನಿತ್ಯನೂ , ಪೂರ್ಣ ಚೈತನ್ಯನೂ ಆದ ಈಶ್ವರನನ್ನು ನಂಬುವುದು ಅವಶ್ಯ. ಅವನುಕೇವಲ ಸಾಕ್ಷಿಯಾಗಿದ್ದರೂ, ಅವನ ಸನ್ನಿಧಿಯಿಂದ ಮಾತ್ರಾ ಪ್ರಕೃತಿಯಲ್ಲಿ ಸ್ಪಂದನವಾಗುತ್ತದೆ. ಉದಾ: ಸೂಜಿಗಲ್ಲು ಸುಮ್ಮನಿದ್ದರೂ, ಕಬ್ಬಿಣವನ್ನು ಚಲಿಸುವಂತೆ ಮಾಡುತ್ತದೆ. ಹಾಗೆ ಈಶ್ವರನ ಸನ್ನಿದಿ: ಈಶ್ವರನ ಅಸ್ತಿತ್ವವು ವೇದ ಸಮ್ಮತವೂ ಆಗಿದೆ . (ವಿಜ್ಞಾನ ಭಿಕ್ಷುವಿನ ವಾದ)
ಸಮೀಕ್ಷೆ :
[ಬದಲಾಯಿಸಿ]- ಸಾಂಖ್ಯರ ಪ್ರಕಾರ ಪ್ರಕೃತಿಯೇ ಜಗತ್ತಿಗೆ ಕಾರಣ. ಅದು ಅವಿವೇಕಿಯಾಗಿದೆ. ಇಂಥ ತತ್ವದಿಂದ ವ್ಯವಸ್ಥಿತವಾದ ವಿಶ್ವದ ವಿಕಾಸ ಹೇಗೆ ಸಾದ್ಯ? ಸಾಮ್ಯಾವಸ್ಥೆ (ಶಾಂತ ಸ್ಥಿತಿ) ಕಲಕುವುದಕ್ಕೆ ಕಾರಣವೇನು? ಇದಕ್ಕೆ ಪರಿಹಾರವಾಗಿ ಪುರುಷ ತತ್ವವನ್ನು ಅಂಗೀಕರಿಸಲಾಗಿದೆ.
- ಪುರುಷನು ನಿಷ್ಕ್ರಿಯ (ಶಾಂತ) ಪ್ರಕೃತಿಯ ಸಂಯೋಗದಿಂದ ಸೃಷ್ಟಿ..
- ಪುರುಷ ತತ್ವದ ವಿಷಯದಲ್ಲಿಯೂ ಸಾಂಖ್ಯದರ್ಶನದಲ್ಲಿ ಗೊಂದಲವಿದೆ. ಪುರಷ ತತ್ವ ಒಂದೇ ಚೈತನ್ಯ ಎಂದೂ ಹೇಳಿದರೂ, ಜೀವ ಜೀವ ಬೇಧಗಳನ್ನು ಹೇಳುತ್ತಲೂ, ಅಸಂಗತವಾಗಿದೆ.
- ಸಾಂಖ್ಯರ ಮೋಕ್ಷ ಕಲ್ಪನೆಯಲ್ಲಿ ಮೋಕ್ಷವು ಆನಂದ ಮಯವಲ್ಲ ಎಂಬ ತೀರ್ಮಾನ ಟೀಕೆಗೆ ಒಳಗಾಗಿದೆ.
- ಆದರೆ ಸಾಂಖ್ಯರ ತರ್ಕಮೂಲ ವಿವೇಚನಾ ಪದ್ದತಿ ಮುಂದೆ ಬೆಳೆದ ವೇದಾಂತ ದರ್ಶನಕ್ಕೂ . ಇತರೆ ದರ್ಶನಗಳಿಗೂ ತಳಹದಿಯಾಯಿತು.
ಸಾಂಖ್ಯ ದರ್ಶನವು ಮೂಲತಃ ಸ್ವಭಾವ ವಾದಿ ದರ್ಶನ ( naturalist). ಸ್ವಭಾವ ವಾದೀನಾಂ ಸಾಂಖ್ಯಾನಾಂ ಎಂದು ವೇದಾಂತಿಗಳು ಹೇಳುತ್ತಾರೆ. ಸಾಂಕ್ಯವು ಬಹು ಪ್ರಾಚೀನವಾಗಿದ್ದು , ಅವರ ಪ್ರಕ್ರಿಯೆ, ಪರಿಭಾಷೆ , (ಮಹತ್, ತನ್ಮಾತ್ರೆ ಇತ್ಯಾದಿ ) ಅದರ ಪ್ರಬಲ ವಕ್ತಾರರಿಲ್ಲದೆ ಮುಂದೆ ಅದು ವೇದಾಂತದಲ್ಲಿ ಲೀನವಾಯಿತು.
ಪಂಚೀಕರಣ -ಅಂಕಣ
[ಬದಲಾಯಿಸಿ]- ಸಾಂಖ್ಯ
- ೧ನೇ ಸರ್ಗ ಪಂಚ ತನ್ಮಾತ್ರೆಗಳು - ೫ ಶಬ್ದ ಸ್ಪರ್ಶ + ರೂಪ ರಸ ಗಂಧ +ರಸ
- ೨ ನೇ ,, ಪಂಚ ಮಹಾ ಭೂತಗಳು - ೫ ಆಕಾಶ ವಾಯು ತೇಜಸ್ಸು ಜಲ ಭೂಮಿ
- ೩ ,, ಪಂಚ ಪ್ರಾಣಗಳು - ೫ ವ್ಯಾನ ಪ್ರಾಣ ಸಮಾನ ಉದಾನ ಅಪಾನ
- ೪ ,, ಪಂಚ ಜ್ಞಾನೇಂದ್ರಿಯಗಳು - ೫ ಕಿವಿ ಚರ್ಮ ಕಣ್ಣು ನಾಲಗೆ ಮೂಗು
- ೫ ,, (೫) ಪಂಚ ಕರ್ಮೇಂದ್ರಿಯಗಳು - ಕೈಗಳು ಗುದ ಬಾಯಿ (ಮುಖ) ಜನನೇಂ ದ್ರಿಯ ಕಾಲು
- ೬ ,, (೫) ಕ್ರಿಯೆಗಳು ಗ್ರಹಣ ವಿಸರ್ಜನ ಮಾತು ಸಂತಾನ ವಿಹರಣ
- ಮನಸ್ಸು, ,ಬುದ್ಧಿ, ,ಅಹಂಕಾರ, ೩ (+ ಪುರುಷ - ೪ ಅಂತಃಕರಣ ಚತುಷ್ಟಯ -ವೇದಾಂತದಲ್ಲಿ)
ಮೂಲ ತತ್ತ್ವ | ಮೂಲ ತತ್ತ್ವ -ಸೃಷ್ಟಿಯ ಬೀಜ | ಒಂದನೇ ಸೃಷ್ಟಿ | ಎರಡನೇ ಸೃಷ್ಟಿ | ೨೩+೧=೨೪ ತತ್ವ |
---|---|---|---|---|
(ಸಾಂಖ್ಯ) ಪುರುಷ (ಚೇತನ)
|
+ ಪ್ರಕೃತಿ ನಿತ್ಯ,
|
೧-ಮಹತ್ ( ಸಮಷ್ಠಿ ತತ್ವ )
|
೨-ಅಹಂಕಾರ ಕರ್ತೃತ್ವ,
|
೩-ಮನಸ್ಸು (ವ್ಯಷ್ಠಿ:ಮನುಷ್ಯನಲ್ಲಿ
|
:ಪರುಷ ಮತ್ತು ಪ್ರಕೃತಿ ಮೂಲ ತತ್ವ ಗಳು | :ಸೃಷ್ಠಿಗೆ ಮೊದಲು ಪ್ರಕೃತಿಯ ಅಂಗಗಳಾದ:
|
:ಪು ರುಷ(ಚೈತನ್ಯ) ಮತ್ತು ಪ್ರಕೃತಿ ಮೂಲ ತತ್ವ ಗಳು | :ಪ್ರಕೃತಿ: ಜಗತ್ತಿಗೆ ಮೂಲ ಕಾರಣ, | ಪ್ರಕೃತಿ-ಜಡ ತತ್ವ,, |
ಪುರುಷ (ಚೇತನ)+ ಪ್ರಕೃತಿ
|
೧ ನೇ ತತ್ವ | : ಮಹತ್ ( ಸಮಷ್ಠಿ ತತ್ವ ) ↓
|
:ವಿಶ್ವದ ಬುದ್ಧಿ-ಚಿತ್ತ: | :ಜಗತ್ತಿನ ಉತ್ಪತ್ತಿಗೆ ಬೀಜ. |
ಅಹಂಕಾರದೊಡನೆ ಸೇರಿ
|
:ವ್ಯಷ್ಠಿ:ಮನುಷ್ಯನಲ್ಲಿ ನಾನು
|
:ಅಹಂಕಾರ ಕರ್ತೃತ್ವ, ಭೋಕ್ತೃತ್ವ,
|
ವ್ಯಷ್ಟಿ (ಮನುಷ್ಯ) ಅನೇಕತ್ವ ಭಾವ | + ಸತ್ವ- ರಜ -ತಮ.ಏರು-ಪೇರು
|
ಪಂಚ ತನ್ಮಾತ್ರೆಗಳಾದ
|
ಸ್ಪರ್ಶ↓ + | ರೂಪ +↓ | ರಸ +↓ | ಗಂಧ -↓ |
+ ↓ ದಿಂದ | +ಶಬ್ದ + ↓ | ಶಬ್ದ + ↓ | ಶಬ್ದ + ↓ | ಶಬ್ದ + ↓ |
↓ | ↓ಇವುಗಳಿಂದ | +ಸ್ಪರ್ಶ + ↓ | +ಸ್ಪರ್ಶ ↓ | +ಸ್ಪರ್ಶ ↓ |
↓ | ↓ | ↓ | +ರೂಪ + ↓ | +ರೂಪ ↓ |
↓ | ↓ | ↓ | ↓ | + ರಸ ↓ |
ಪಂಚ ಮಹಾ ಭೂತಗಳು -೫
|
ವಾಯು (ಶಬ್ದ+ಸ್ಪರ್ಶದಿಂದ
|
ತೇಜಸ್ಸು (ಅಗ್ನಿ) | ಜಲ | ಭೂಮಿ |
ಪಂಚ ಪ್ರಾಣಗಳು -೫
ವ್ಯಾನ- ↓- |
ಪ್ರಾಣ- ↓- | ಸಮಾನ- ↓- | ಸಮಾನ- '↓ | ಅಪಾನ - ↓- |
ಪಂಚ ಜ್ಞಾನೇಂದ್ರಿಯಗಳು -೫
|
ಚರ್ಮ | ಕಣ್ಣು | ನಾಲಗೆ | ಮೂಗು |
ಪಂಚ ಕರ್ಮೇಂದ್ರಿಯಗಳು -
|
ಕ್ರಿಯೆಗಳು:- ೧.ಗ್ರಹಣ
೨.ವಿಸರ್ಜನ,೩.ಮಾತು
|
ಕರ್ಮೇಂದ್ರಿಯಗಳು ತತ್ವಗಳಲ್ಲಿ ಸೇರಿಲ್ಲ | -- | -- |
ಮನಸ್ಸು + ಬುದ್ಧಿ + ಅಹಂಕಾರ -೩
|
ಒಟ್ಟು ಸೃಷ್ಟಿ ೨೩ತತ್ವ | ಪ್ರಕೃತಿ ಸೇರಿ -೨೪ ತತ್ವ | ಪುರುಷನೂ ಸೇರಿದರೆ ೨೫ ತತ್ವ | ಪ್ರಕೃತಿ- ಪುರುಷರು ಆದಿತತ್ವಗಳು
|
:ಮನಸ್ಸು,ಬುದ್ಧಿ,ಅಹಂಕಾರ, ೩
|
೫ನೇ ಸರ್ಗ(ಪಂಚ ಕರ್ಮೇಂದ್ರಿಯಗಳು | :೬ನೇ ಸರ್ಗ (೫) ಕ್ರಿಯೆಗಳು | -೦- | -೦ |
- (ಓಂ
ಇವುಗಳನ್ನೂ ನೋಡಿ
[ಬದಲಾಯಿಸಿ]- ಹಿಂದೂ ಧರ್ಮ. ೨.ಯೋಗ. ೩.ಹಿಂದೂ ಸಿದ್ಧಾಂತ
ಹೆಚ್ಚಿನ ವಿವರಗಳಿಗೆ
[ಬದಲಾಯಿಸಿ]- ಚರ್ಚೆಪುಟ:ಸಾಂಖ್ಯ-ಮೋಕ್ಷ
- ಸಾಂಖ್ಯ ಸಿದ್ಧಾಂತ
- ಮಹರ್ಷಿ ವ್ಯಾಸ ಮತ್ತು ಸಾಂಖ್ಯ ಶಾಸ್ತ್ರ
- (https://en.wikipedia.org/wiki/Samkhya#Evolution)
ಉಲ್ಲೇಖ
[ಬದಲಾಯಿಸಿ]