ಬ್ರಹ್ಮಸೂತ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಗವಾನ್ ಬಾದರಾಯಣರು ಬ್ರಹ್ಮಸೂತ್ರಗಳನ್ನು ರಚಿಸಿದರು. ಇದನ್ನು ವೇದಾಂತ ಸೂತ್ರಗಳೆಂದೂ ಕರೆಯುತ್ತಾರೆ. ಮಹಾಭಾರತದ ಕರ್ತೃವಾದ ವೇದವ್ಯಾಸರೇ ಬ್ರಹ್ಮಸೂತ್ರಗಳನ್ನು ರಚಿಸಿದ ಬಾದರಾಯಣರೆಂದು ಪ್ರತೀತಿಯಿದೆ. ಈ ಸೂತ್ರವು ಉಪನಿಷತ್ಗಳ ತತ್ವಗಳು ಮತ್ತು ಅಧ್ಯಾತ್ಮದ ಕಲ್ಪನೆಗಳನ್ನು ಶಿಶ್ತುಬದ್ಧವಾಗಿ ಮತ್ತು ಸಂಕ್ಷಿಪ್ತವಾಗಿ ಒಗ್ಗೂಡಿಸುತ್ತದೆ.

ಬ್ರಹ್ಮಸೂತ್ರವು ೪ ಅಧ್ಯಾಯಗಳಲ್ಲಿ ೫೫೫ ಸೂತ್ರಗಳನ್ನು ಹೊಂದಿದೆ. ಈ ಸೂತ್ರಗಳಲ್ಲಿ ಮುಖ್ಯವಾಗಿ ಮಾನವನ ಅಸ್ತಿತ್ವ ಮತ್ತು ಬ್ರಹ್ಮಾಂಡದ ಗುಣಗಳ ಬಗ್ಗೆ, ಅಧ್ಯಾತ್ಮಿಕ ಪರಿಕಲ್ಪನೆಯಾದ ಬ್ರಾಹ್ಮಣನ ಬಗ್ಗೆ ಉಲ್ಲೇಖಿಸಲಾಗಿದೆ.

ಈ ಬ್ರಹ್ಮಸೂತ್ರಗಳಿಗೆ ಆದಿ ಶಂಕರರೂ, ರಾಮಾನುಜರೂ, ಮಧ್ವರೂ, ವಲ್ಲಭಾಚಾರ್ಯರು, ಭಾಸ್ಕರಾಚಾರ್ಯರು ತಮ್ಮ ತಮ್ಮ ಸಿದ್ಧಾಂತಗಳಿಗೆ ಅನುಗುಣವಾಗಿ ಭಾಷ್ಯಗಳನ್ನು ರಚಿಸಿದ್ದಾರೆ.

ಲೇಖಕ ಮತ್ತು ಕಾಲಗಣನೆ[ಬದಲಾಯಿಸಿ]

ಬ್ರಹ್ಮಸೂತ್ರವು ಬಾದರಾಯಣ ರಚಿಸಿದ್ದು ಎಂದು ಉಲ್ಲೇಖಿಸಲಾಗಿದೆ. ಕೆಲ ಪಠ್ಯಗಳಲ್ಲಿ ಬಾದರಾಯಣನಿಗೆ ವ್ಯಾಸವೆಂದೂ ಉಲ್ಲೇಖಿಸಲಾಗಿದೆ.

ಬಾದರಾಯಣ ಜೈಮಿನಿ ಮಹರ್ಷಿಗಳ ಗುರುವಾಗಿದ್ದರು. ಜೈಮಿನಿ ಮಹರ್ಷಿಗಳು ಮಿಮಾಂಸ ತತ್ವದ ಮಿಮಾಂಸ ಸೂತ್ರಗಳ ರಚನೆಕಾರರಾಗಿದ್ದಾರೆ.

ಬ್ರಹ್ಮಸೂತ್ರ ಬುದ್ಧ ಮಹಾವೀರರ ಶತಕಗಳ ನಂತರ ರಚನೆಗೊಂಡಿದೆ ಏಕೆಂದರೆ ಅದರ ಎರಡನೆಯ ಅಧ್ಯಾಯದಲ್ಲಿ ಬುದ್ಧ ಧರ್ಮದ ಬಗ್ಗೆ ಉಲ್ಲೇಖ ಮತ್ತು ಟೀಕೆಗಳು ಕಂಡುಬರುತ್ತವೆ. ನ್ಯಾಯ ತತ್ವವನ್ನು ಹೊರತುಪಡಿಸಿ ಉಳಿದೆಲ್ಲಾ ತತ್ವಗಳ ಬಗ್ಗೆ ಈ ಶಾಸ್ತ್ರದಲ್ಲಿ ಕಾಣಬಹುದು. ಇದರಿಂದ ಈ ಶಾಸ್ತ್ರದ ತುಲನಾ ಕಾಲಗಣನೆ ಅರ್ಥವಾಗುತ್ತದೆ.

ಈ ಪುಟಗಳನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]