ಜ್ಞಾನ-ಕರ್ಮ ವಿವಾದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜ್ಞಾನ-ಕರ್ಮವಾದ[ಬದಲಾಯಿಸಿ]

ಪೀಠಿಕೆ

ಅಧ್ಯಾತ್ಮ ಸಿದ್ಧಿಗೆ ಜ್ಞಾನ ಮುಖ್ಯವೋ ,ಕರ್ಮ ಮುಖ್ಯವೋ ? ಆಥವಾ ಜ್ಞಾನ ಕರ್ಮಗಳೆರಡೂ ಅಗತ್ಯವೋ ? ಎಂಬುದು ಜಿಜ್ಞಾಸೆ -ಚರ್ಚೆಯ ವಿಷಯವಾಗಿದೆ .ಕರ್ಮವೆಂದರೆ ಯಜ್ಞ ಯಾಗಾದಿಗಳು, ಉಪಾಸನೆ, ಅನುಷ್ಠಾನ , ಪೂಜೆ, ಭಕ್ತಿ, ಪೂಜೆ, ಭಜನೆ , ಯಾತ್ರೆ, ದಾನ, ಮತ್ತು ನಿತ್ಯನೈ ಮಿತ್ತಿಕ ಕರ್ಮಗಳು -ಪುಣ್ಯ ಸಂಪಾದನೆಯ ಕರ್ಮಗಳು ; ಇದರಲ್ಲಿ -ಈ ಚರ್ಚೆಯಲ್ಲಿ ಜೀವನೋಪಾಯದ ಕರ್ಮಗಳು ಸೇರಿಲ್ಲ.. ಜ್ಷಾನವೆಂದರೆ ತತ್ವದ ಅರಿವು ;ಅನುಭವದಿಂದ ಪಡೆದಿದ್ದು. ಉಪನಿಷತ್ತುಗಳು ಹೇಳಿದ ತತ್ವಾರ್ಥವನ್ನು ತಿಳಿರು ಮನನ ಮಾಡಿ ಸಾಕ್ಷಾತ್ಕರಿಸಿಕೊಳ್ಳವುದು ಅಥವಾ ಅದರ ಅನುಭವ ಪಡೆಯುವುದು. ಕರ್ಮವಾದಿಗಳ ಪ್ರಕಾರ ಕರ್ಮವೇ ಮುಖ್ಯ . ಅದಿಲ್ಲದೆ ತತ್ವಾರ್ಥ, ತತ್ವಾನುಭವ, ಆಗದು . ಅದು-ಆದರೂ ಬರಿಯ ಜ್ಞಾನದಿಂದ, ಪ್ರಯೋಜನವಿಲ್ಲ. ಜ್ಞಾನವಾದಿಗಳು ಕರ್ಮ ಗೌಣವೆಂದೂ, ಜ್ಞಾನವೇ ಪ್ರಧಾನವೆಂದು ಹೇಳುವರು. .ಆಧುನಿಕ ಚಿಂತಕರು , ಮೊದಲು ಎಲ್ಲರೂ ಶ್ರಮಿಕರೇ ಆಗಿದ್ದು ನಂತರ ಶ್ರಮವು ಕೀಳೆಂಬ ಭಾವನೆ ಬಂದು, ಜ್ಞಾನವೇ ಶ್ರೇಷ್ಠವೆಂದಾಯಿತೆಂದು ಹೇಳುತ್ತಾರೆ. ಇದಕ್ಕೆ ಆಲಸ್ಯ ಭಾವವೇ ಕರ್ಮವು ಗೌಣವೆಂದು ಹೇಳಲು ಕಾರಣವಿರಬಹುದೆನ್ನುತ್ತಾರೆ.ಆದರೆ ಇಲ್ಲಿ ಹೇಳಿರುವ ಕರ್ಮಕ್ಕೂ ಶ್ರಮದ ಜೀವನೋಪಾಯದ ಕರ್ಮಕ್ಕೂ ಹೋಲಿಸಲು ಬರದು/ಅಥವಾ ಅದು ಸರಿಯಲ್ಲ.

ಕರ್ಮ ಕಾಂಡಗಳು[ಬದಲಾಯಿಸಿ]

ಕರ್ಮ ಕಾಂಡಗಳು-ಕರ್ಮಪ್ರಧಾನನವೆನ್ನುವ ಶಾಸ್ತ್ರ ಗ್ರಂಥಗಳು :>ವೇದಗಳು, ಬ್ರಾಹ್ಮಣಗಳು,ಅರಣ್ಯಕಗಳು ಕರ್ಮಕಾಂಡಕ್ಕೆ ಸಂಬಂಧಿಸಿವೆ.ಆದರೆ ಶಾಸ್ತ್ರ ರೀತಿ-ಯಜ್ಞ ಯಾಗಾದಿಗಳು ಮಾತ್ರಾ ಸ್ವರ್ಗಕ್ಕೆ ಅಥವಾ ಮೋಕ್ಷ ಕ್ಕೆ ಕಾರಣವೆಂದಿದೆ.
ವೇದ,ಬ್ರಾಹ್ಮಣಗಳು ಕರ್ಮಕಾಂಡಕ್ಕೆ ಸಂಬಂಧಿಸಿದ್ದು , ಐಹಿಕ ಭೋಗ ಭಾಗ್ಯಕ್ಕೆ ಸಂಬಂಧಿಸಿದ್ದು . ಸ್ವರ್ಗ ಸುಖಗಳಿಗೆ ಪ್ರಾಧಾನ್ಯತೆ ಕೊಡುತ್ತವೆ. ಉಪನಿಷತ್ತುಗಳು ಅದನ್ನು ಹೆಚ್ಚಾಗಿ ವಿರೋಧಿಸಿ, ಜ್ಞಾನ ಮೋಕ್ಞಕ್ಕೆ ಪ್ರಾಧಾನ್ಯತೆ ನೀಡುತ್ತವೆ. ಆದರೆ ಮಧ್ಯ ಮಾರ್ಗದ ಧರ್ಮಸೂತ್ರಗಳು ಬ್ರಹ್ಮಚರ್ಯ ಗ್ರಾಹಸ್ತ್ಯದ ನಂತರ ಮೋಕ್ಷದ ವಿಚಾರಕ್ಕೆ ಒತ್ತು ಕೊದುತ್ತವೆ. ಅದರಂತೆ ಜೈಮಿನಿಯ ಮೀಮಾಂಸ ಸೂತ್ರಗಳು (ಧರ್ಮಸೂತ್ರಗಳು) ,ಬ್ರಹ್ಮಸೂತ್ರಗಳಿಗೆ ಪೂರಕವೆಂದೂ, ಜ್ಞಾನಮಾರ್ಗವು ಸ್ವತಂತ್ರ ಮಾರ್ಗವೆಂಬುದನ್ನು ಅಲ್ಲಗಳೆಯಿತು.
ಜ್ಞಾನ ಮಾರ್ಗಕ್ಕೆ ಪ್ರಾಮುಖ್ಯತೆ ಮತ್ತು ಶಂಕರರು.
ಬಹುಶಃ ಜಾನ ಮಾರ್ಗಕ್ಕೆ ವಿಶೇಷ ಪ್ರತಿಷ್ಠೆಯನ್ನು ತಂದುಕೊಟ್ಟವರು ಶ್ರೀ ಶಂಕರರು. ಅವರು ತಮ್ಮ ಅಸಾಧಾರಣ ಪಾಂಡಿತ್ಯ ತರ್ಕಗಳಿಂದ ಕರ್ಮ-ಜ್ಞಾನಗಳು ಪರಸ್ಪರ ವಿರುದ್ಧವೆಂದು ಸಿದ್ಧಾಂತ ಮಾಡಿದರು.
ಕರ್ಮ ಮತ್ತು ಕರ್ಮಫಲ
೧.ಕರ್ಮ ಮತ್ತು ಕರ್ಮಫಲಕ್ಕೆ ಅನುಭವಿಸಲು ದೇಹ ಬೇಕು .
೨.ಕರ್ಮವು ತಾರತಮ್ಯವನ್ನು ಅನುಸರಿಸಿದೆ. ಮನುಷ್ಯನಿಂಧ ಮೊದಲ್ಗೊಂಡು , ಬ್ರಹ್ಮನ ವರೆಗೂ , ಸುಖ ಒಂದೇ ತೆರನಾಗಿಲ್ಲ.
೩.ಸಾಮರ್ಥ್ಯದ ಯಾರತಮ್ಯವಿದೆ.
೪.ಅಧಿಕಾರದ ತಾರತಮ್ಯವಿದೆ.ಶರಈರ ಪ್ರಾಪ್ತಿಯಲ್ಲೂ ತಾರತಮ್ಯ ವುಂಟು.
೫. ಕೋರಿಕೆಯ ಫಲದ ವ್ಯತ್ಯಾವಿದೆ.
೬. ಶರೀರ ಪ್ರಾಪ್ತಿಯಲ್ಲೂ ತಾರಯಮ್ಯ ಉಂಟು.
  • ಈ ತಾರತಮ್ಯವೇ ಕರ್ಮಸಿದ್ಧಾಂತದ ಮೂಲಾಧಾರವಾಗಿದೆ. ಅದನ್ನೊಪ್ಪದಿದರೆ ಕರ್ಮಸಿದ್ದಾಂತ ಕುಸಿದು ಬೀಳುತ್ತದೆ. ಜ್ಞಾನ ಪ್ರಪ್ತಿಯು ಈ ಎಲ್ಲದಕ್ಕೆ ವಿರೋಧವಾಗಿದೆ.
ಮೋಕ್ಷ -ವ್ಯಾಖ್ಯಾನ

ಮೋಕ್ಷವೆಂದರೆ ಸುಖ-ದುಃಖಗಳಿಂದ ಬಿಡುಗಡೆ. ಅಲ್ಲಿ ಶರೀರ ಮನಸ್ಸಿನ ಸಂಬಂಧವಿಲ್ಲ. ಇಂಥ ಸ್ಥ್ಭಿತಿಯನ್ನು ಶರೀರದಿಂದ ,ಕರ್ಮದಿಂದಲೇ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ -ಆನಂದದ ಸ್ಥಿತಿಯನ್ನು ಶರೀರದಿಂದ, ಕರ್ಮದಿಂದ ಪಡೆಯಲು ಸಾಧ್ಯವಿಲ್ಲ. ಅಶರೀರತ್ವ ,ಆನಂದವನ್ನು ಕರ್ಮದಿಂದಲೇ ಪಡೆಯಬಹುದಲ್ಲವೇ ? ಎಂದರೆ ; ಆತ್ಮನಿಗೆ ಮುಕ್ತಾವಸ್ಥೆ ಸ್ವಾಭಾವಿಕವಾದುದು. (ಬ್ರ,ಸೂ. ತಸ್ಯ ಸ್ವಭಾವಿPತ್ವತ್) ಮತ್ತು ಜೀವನಿಗೆ (ಆತ್ಮಕ್ಕೆ) ಮೋಕ್ಷವು ಕೂಟಸ್ಥ ನಿತ್ಯವಾಗಿದೆ. ಅದಕ್ಕೆ ಕ್ರಿಯಾ ಸಂಭಂಧವಿಲ್ಲ .

ಕರ್ಮ-ಕರ್ಮಫಲ-ಜ್ಞಾನ[ಬದಲಾಯಿಸಿ]

ಕರ್ಮ ಮತ್ತು ಕರ್ಮ ಫಲ ನಾಲ್ಕು ವಿಧ:> ಉತ್ಪಾದ್ಯ, ವಿಕಾರ್ಯ, ಸಂಸ್ಕಾರ್ಯ , ಆಪ್ಯ , ಗಡಿಗೆ ಉತ್ಪಾದ್ಯ ; ಮೊಸರು ವಿಕಾರ್ಯ ; ಗುಣವನ್ನು ಹೆಚ್ಚಿಸುವುದು ಇತ್ಯಾದಿ ಸಂಸ್ಕಾರ್ಯ ; ಹೋಗಿ ಪಡೆಯುವುದು -ಆಪ್ಯ. ಮೋಕ್ಷವು ಈ ನಾಲ್ಕು ವಿಧ ಕಾರ್ಯದಲ್ಲಿ ಸಂಭಂಧವನ್ನು ಹೊಂದಿಲ್ಲ. ಅದು ನಿಯ್ಯ ಸಿದ್ಧ ;ಸರ್ವ ವ್ಯಾಪಿ ; ಆದ್ದರಿಂದ ಜ್ಞಾನದಿಂದ ಮಾತ್ರಾ ಮೋಕ್ಷ .
ಕರ್ಮವು ಬೇಧವನ್ನು ಆಶ್ರಯಿಸಿದೆ. ಉಪಾಸನೆಗೂ ಬೇಧವು ಬೇಕು. ಇದು ಅಜ್ಞಾನವನ್ನು (ಅವಿದ್ಯೆ) ಆಶ್ರಯಿಸಿದ್ದು .ಸರ್ವವೂ ಬ್ರಹ್ಮವೇ ಆಗಿರುವಾಗ ಬೇಧವನ್ನು ಒಪ್ಪುವುದು ಹೇಗೆ. ?
ಕರ್ಮವಾದಿಗಳು ಇದನ್ನೊಪ್ಪುವುದಿಲ್ಲ. ಸಂಸಾರಕ್ಕೆ ಕಾರಣ ಕರ್ಮವೆನ್ನುತ್ತಾರೆ. ಕರ್ಮಚಕ್ರ ಅನಾದಿ ಎನ್ನುತ್ತಾರೆ. ಆದರೆ ಶಂಕರರು ಕರ್ಮದ ಅನಾದಿತ್ವ ಕಲ್ಪನೆಯ ಅಂಧಶ್ರದ್ಧೆ ಎಂದು ತಲ್ಲಿ ಹಾಕಿದ್ದಾರೆ.

ಧರ್ಮಾಧರ್ಮಗಳಿಗೂ ಆತ್ಮನಿಗೂ ಸಂಬಂಧವಿದೆಯೆಂದು ಸಿದ್ಧಪಡಿಸಲು ಸಾಧ್ಯವಿಲ್ಲವೆಂಬುದು ಆವರ ಮತ. ಮಿಥ್ಯಾಜ್ಞಾನವನ್ನು ಹೊರತುಪಡಿಸಿ ಇನ್ನಾವ ರೀತಿಯಿಂದಲೂ, ಆತ್ಮನಿಗೂ ಶರೀರಕ್ಕೂ, ಸಂಬಂಧವನ್ನು ಹೇಳಲು ಆಗುವುದಿಲ್ಲ. ಆದ್ದರಿಂದ ಕರ್ಮಗಳಿಂದ ಬಿಡುಗಡೆಗೆ ಮಾರ್ಗವೆಂದರೆ -ಜ್ಞಾನ . ತಾನು ಬ್ರಹ್ಮ ಸ್ವರೂಪಿಯೆಂದು ಸಾಕ್ಷಾತ್ಕಾರವಾದಾಗ ಮಾತ್ರಾ ಕರ್ಮಚಕ್ರವು ನಿಂತು ಹೋಗುತ್ತದೆ. ಅದಿಲ್ಲವಾದರೆ, ಎಷ್ಟೇ ಸತ್ಕರ್ಮ ಮಾಡಿದರೂ ಭವ ಬಂಧನದಿಂದ ಬಿಡುಗಡೆಯಾಗದು.

ಆದರೆ ಶಂಕರರು ಕರ್ಮಗಳನ್ನು ಪೂರ್ತಿಯಾಗಿ ತಿರಸ್ಕರಿಸಿಲ್ಲ. ಕಾಮ್ಯ -ನಿಷಿದ್ಧ ಕರ್ಮಗಳು ಮಾತ್ರಾ ಮೋಕ್ಷಕ್ಕೆ ಬಾಧಕ , ನಿತ್ಯ ನೈಮಿತ್ತಿಕ ಕರ್ಮಗಳ ಹಾಗಲ್ಲ . ಅವು ಚಿತ್ತ ಶುದ್ಧಿಗೆ ಸಾಧಕಗಳು. ಫಲಾಪೇಕ್ಷೆ ಇಲ್ಲದೆ ಅವುಗಳನ್ನು ಚಿತ್ತ ಶುದ್ಧಿಗಾಗಿ ಅವಶ್ಯ ಮಾಡಬೇಕು. ಕಾರಣ ಚಿತ್ತ ಶುದ್ಧಿಯಿಲ್ಲದವನಿಗೆ ಬ್ರಹ್ಮಾನುಭವ ಸಾಧ್ಯವಿಲ್ಲ. ಅನುಭವ ರಹಿತ ಜ್ಞಾನ , ಪರೋಕ್ಷ ಜ್ಞಾನ ;ಅದು ಮುಕ್ತಿಯಲ್ಲ. ಅಪರೋಕ್ಷಾನುಭೂತಿಗೆ ( ಬ್ರಹ್ಮ ಜ್ಞಾನಕ್ಕೆ) ಕರ್ಮಗಳು ಭೂಮಿಕೆಯನ್ನು ಸಿದ್ಧಗೊಳಿಸುತ್ತವೆ.
ಆದರೆ ನಂತರದ ಅದ್ವೈತಿಗಳು ಜ್ಞಾಕ್ಕೆ ಕರ್ಮ ಅವಶ್ಯ ವೆನ್ನುತ್ತಾರೆ. ಉಪಾಸನೆ ,ಯೋಗಾಭ್ಯಾಸ, ಇವು ಜ್ಞಾನ ಮತ್ತು ಮುಕ್ತಿಗೆ ಅವಶ್ಯವೆನ್ನುತ್ತಾರೆ. ಹೀಗೆ ಜ್ಞಾನ ಕರ್ಮ ಸಮುಚ್ಚಯ ವಾದವೇ ಸರಿ ಎನ್ನುತ್ತಾರೆ.
ರಾಮಾನುಜ ದರ್ಶನದಲ್ಲಿ ,ಕರ್ಮಕ್ಕೆ ಪ್ರಧಾನ್ಯವಿದೆ. ಕರ್ಮವನ್ನು ಮಾಡುತ್ತಾ ಇದ್ದರೆ ಈಶ್ವರಾನುಗ್ರಹದಿಂದ, ಮೋಕ್ಷವನ್ನು ಪಡೆಯಬಹುದೆನ್ನುತ್ತಾರೆ. ಏಕೆಂದರೆ ಗೃಹಸ್ತರಿಗೂ ಮೋಕ್ಷ ಪ್ರಾಪ್ತಿಯ ಅವಕಾಶವಿದೆ.
ಮಧ್ವರೂ ಅದೇ ಅಭಿಪ್ರಾಯ ಪಡುತ್ತಾರೆ . ಕರ್ಮಕಾಂಡ ಜ್ಞಾನ ಕಾಂಡಗಳೆಂಬ ಬೇಧವನ್ನು ಒಪ್ಪದೆ,ಅಖಂಡ ವೇದಗಳನ್ನು ಒಪ್ಪುವುದರಿಂದ ಈ ಬಗ್ಗೆ ಅವರ ವಾದವೇ ಇಲ್ಲ.
ಮುಖ್ಯವಾಗಿ ಅವರು (ರಮಾನುಜರು-ಮಧ್ವರು) ಆತ್ಮನು ಅಥವಾ ಜೀವನು ಜ್ಞಾನಪಡೆದು ಪರಬ್ರಹ್ಮದಲ್ಲಿ ಒಂದಾಗುವುದನ್ನು ಅಥವಾ ಲೀನವಾಗುವುದನ್ನು ಒಪ್ಪುವುದುದಿಲ್ಲ ;ಅದರೀಂದ ಒಂದು ಹೆಜ್ಜೆ ಹಿಂದೆಇರುವ ದೇವನ ಹತ್ತಿರವಿದ್ದು ಅನಂದ ಪಡುವ ಮೋಕ್ಷಕ್ಕೇ ಅಂತಿಮ ಹಂತವೆನ್ನುತ್ತಾರೆ. ಆದರೆ ಅದನ್ನು ದಾಟಿದ ಪರಬ್ರಹ್ಮದಲ್ಲಿ ಲೀನವಾಗುವ ಕೊನೆಯ ಹಂತವೇ ನಿಜವಾದ ಮೋಕ್ಷವೆಂದು ಶಂಕರರ ಮತ.
ಓಂತತ್ಸತ್

ನೋಡಿ[ಬದಲಾಯಿಸಿ]

ಭಾರತೀಯ ದರ್ಶನಶಾಸ್ತ್ರ ಅಥವಾ ಭಾರತೀಯ ತತ್ತ್ವಶಾಸ್ತ್ರ
ಚಾರ್ವಾಕ ದರ್ಶನ ಜೈನ ದರ್ಶನ ಬೌದ್ಧ ದರ್ಶನ ಸಾಂಖ್ಯ ದರ್ಶನ
ರಾಜಯೋಗ ನ್ಯಾಯ ವೈಶೇಷಿಕ ದರ್ಶನ ಮೀಮಾಂಸ ದರ್ಶನ
ಆದಿ ಶಂಕರರು ಮತ್ತು ಅದ್ವೈತ ಅದ್ವೈತ- ಜ್ಞಾನ-ಕರ್ಮ ವಿವಾದ ವಿಶಿಷ್ಟಾದ್ವೈತ ದರ್ಶನ ದ್ವೈತ ದರ್ಶನ
ಮಾಧ್ವ ಸಿದ್ಧಾಂತ ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ಭಾರತೀಯ ತತ್ವಶಾಸ್ತ್ರ ಸಮೀಕ್ಷೆ ಭಗವದ್ಗೀತಾ ತಾತ್ಪರ್ಯ
ಕರ್ಮ ಸಿದ್ಧಾಂತ ವೀರಶೈವ ತತ್ತ್ವ ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರು - ಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು
ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ ಮೋಕ್ಷ ಗೀತೆ ಬ್ರಹ್ಮಸೂತ್ರ

ಚಾರ್ವಾಕ ದರ್ಶನ ;ಜೈನ ಧರ್ಮ- ಜೈನ ದರ್ಶನ ;ಬೌದ್ಧ ಧರ್ಮ ;ಸಾಂಖ್ಯ-ಸಾಂಖ್ಯ ದರ್ಶನ ;(ಯೋಗ)->ರಾಜಯೋಗ ;ನ್ಯಾಯ ದರ್ಶನ ;ವೈಶೇಷಿಕ ದರ್ಶನ;;ಮೀಮಾಂಸ ದರ್ಶನ - ;ವೇದಾಂತ ದರ್ಶನ / ಉತ್ತರ ಮೀಮಾಂಸಾ ;ಅದ್ವೈತ ;ಆದಿ ಶಂಕರರು ಮತ್ತು ಅದ್ವೈತ ;ವಿಶಿಷ್ಟಾದ್ವೈತ ದರ್ಶನ ;ದ್ವೈತ ದರ್ಶನ - ಮಾಧ್ವ ಸಿದ್ಧಾಂತ ;ಪಂಚ ಕೋಶ--ಶ್ರೀಮನ್ಮಹಾಭಾರತಮ್ ಮತ್ತು ದ್ವೈತ ದರ್ಶನ ;ವೀರಶೈವ;ಬಸವಣ್ಣ;ಭಾರತೀಯ ತತ್ವಶಾಸ್ತ್ರ ಸಮೀಕ್ಷೆ;ಭಗವದ್ಗೀತಾ ತಾತ್ಪರ್ಯ ;ಕರ್ಮ ಸಿದ್ಧಾಂತ ;.ಭಾರತೀಯ ತತ್ವಶಾಸ್ತ್ರ ಸಮೀಕ್ಷೆವೇದಗಳು--ಕರ್ಮ ಸಿದ್ಧಾಂತ--ಭಾರತೀಯ ತತ್ತ್ವಶಾಸ್ತ್ರದಲ್ಲಿ ದೇವರುಭಾರತೀಯ ತತ್ತ್ವಶಾಸ್ತ್ರದಲ್ಲಿ ಜಗತ್ತು-ಅಸ್ತಿತ್ವ-ಸತ್ಯವೇ-ಮಿಥ್ಯವೇ -ಭಾರತೀಯ ತತ್ತ್ವಶಾಸ್ತ್ರದಲ್ಲಿ ಜೀವಾತ್ಮ-ಮೋಕ್ಷ-ಜ್ಞಾನ-ಕರ್ಮ ವಿವಾದ

ಆಧಾರ[ಬದಲಾಯಿಸಿ]

  • ಭಾರತೀಯ ತತ್ತ್ವಶಾಸ್ತ್ರ ಪರಿಚಯ :- ಎಂ. ಪ್ರಭಾಕರ ಜೋಷಿ & ಪ್ರೊ.ಎಂ.ಎ.ಹೆಗಡೆ ಎಚ್.ಒ.ಡಿ ಸಂಸ್ಕೃತ -ಎಂ.ಜಿ.ಸಿ. ಕಾಲೇಜು ಸಿದ್ದಾಪುರ ಕಾರವಾರ ಜಿಲ್ಲೆ. ಪ್ರಕಾಶಕರು :ದಿಗಂತ ಸಾಹಿತ್ಯ ಯೆಯ್ಯಾಡಿ ಮಂಗಳೂರು.