ಯೋಗಮಾಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಯೋಗಮಾಯ
ಭ್ರಮೆಯ ದೇವಿ[೧]
ಲೋನಾವಾಲದಲ್ಲಿರುವ ನಾರಾಯಣಿ ದೇಗುಲ
ಇತರ ಹೆಸರುಗಳುಮಹಾಮಾಯ, ದುರ್ಗಾ, ವಿಂಧ್ಯವಾಸಿನಿ, ನಾರಾಯಣಿ, ಭದ್ರಕಾಳಿ, ಅಂಬಿಕಾ, ಏಕಾನಂಶ
ಸಂಲಗ್ನತೆಶಕ್ತಿ ಪಂಥ, ವೈಷ್ಣವ ಪಂಥ
ನೆಲೆವೈಕುಂಠ, ವಿಂಧ್ಯ
ಗ್ರಂಥಗಳುಭಾಗವತ ಪುರಾಣ
ಹಬ್ಬಗಳುವೈಕುಂಠ ಏಕಾದಶಿ
ತಂದೆತಾಯಿಯರುನಂದ (ತಂದೆ), ಯಶೋದ (ತಾಯಿ)
ಜನ್ಮಸ್ಥಳಗೋಕುಲ

[೨] ವೈಷ್ಣವ ಸಂಪ್ರದಾಯದಲ್ಲಿ ಈಕೆಗೆ ನಾರಾಯಣಿ ಎಂದು ಕರೆಯಲಾಗುತ್ತದೆ [೩] [೪] ಮತ್ತು ವಿಷ್ಣು ವಿನ ಶಕ್ತಿಗಳ ಮೂರ್ತರೂಪವಾಗಿ ಪೂಜಿಸಲಾಗುತ್ತದೆ . ಈ ದೇವತೆಯನ್ನು ಭಾಗವತ ಪುರಾಣದಲ್ಲಿ ದುರ್ಗಾ ದೇವಿಯ ಅಂಶವೆಂದು ಪರಿಗಣಿಸಲಾಗಿದೆ. ಆಕೆಯನ್ನು ಶಾಕ್ತಾ ಸಂಪ್ರದಾಯದಲ್ಲಿ ಆದಿ ಶಕ್ತಿಯ ಒಂದು ರೂಪವೆಂದು ಪರಿಗಣಿಸುತ್ತಾರೆ. [೫] ಹಿಂದೂ ಸಾಹಿತ್ಯದಲ್ಲಿ ಆಕೆ ನಂದ ಮತ್ತು ಯಶೋದರ ಮಗಳಾಗಿ ಯಾದವ ಕುಟುಂಬದಲ್ಲಿ ಜನಿಸಿದರು ಎಂಬ ನಂಬಿಕೆಯಿದೆ.

ವ್ಯುತ್ಪತ್ತಿಶಾಸ್ತ್ರ[ಬದಲಾಯಿಸಿ]

ಹಿಂದೂ ಧರ್ಮದ
ಮೇಲಿನ ಒಂದು ಸರಣಿಯ ಭಾಗ
ಹಿಂದೂ ಧರ್ಮ

ಓಂಬ್ರಹ್ಮಈಶ್ವರ
ಹಿಂದೂಹಿಂದೂ ಧರ್ಮದ ಇತಿಹಾಸ


[೬] ಯೋಗಮಾಯ ಎಂದರೆ ಭಗವಾನ್ /ಭಗವಂತನ ಎಲ್ಲಾ ಕಾಲಕ್ಷೇಪಗಳನ್ನು ವ್ಯವಸ್ಥೆಗೊಳಿಸುವ ಮತ್ತು ಹೆಚ್ಚಿಸುವ ಆಂತರಿಕ ಶಕ್ತಿಯನ್ನು ಸೂಚಿಸುತ್ತದೆ.

[೭] ದೇವಿಯು ವಿಂಧ್ಯ ಪರ್ವತಶ್ರೇಣಿಯಿಂದ ತನ್ನ ಹೆಸರನ್ನು ಪಡೆದುಕೊಂಡಿದ್ದು ಇದರ ಅಕ್ಷರಶಃ ಅರ್ಥ "ವಿಂಧ್ಯದಲ್ಲಿ ವಾಸಿಸುವವಳು" ಎಂದಾಗಿದೆ.

19ನೇ ಶತಮಾನದ ಯೋಗಮಯದ ವರ್ಣಚಿತ್ರವು (ಮೇಲೆ ಕಂಸನನ್ನು ಎಚ್ಚರಿಸಿದೆ. ರಾಜಾ ರವಿವರ್ಮ.

ದಂತಕಥೆ[ಬದಲಾಯಿಸಿ]

ದೇವಕಿ ಮತ್ತು ವಾಸುದೇವ ಅವರ ಎಂಟನೇ ಮಗುವಾಗಿ ಕೃಷ್ಣನ ಜನನದ ಸಮಯದಲ್ಲಿ, ಯೋಗಮಯಳು ವಿಷ್ಣುವಿನ ಸೂಚನೆಯಂತೆ ನಂದ ಮತ್ತು ಯಶೋದನ ಮನೆಯಲ್ಲಿ ಅದೇ ಸಮಯದಲ್ಲಿ ಜನಿಸಿದ್ದಳು . ವಾಸುದೇವನು ಕೃಷ್ಣನ ಬದಲಿಗೆ ಯಶೋದನ ಈ ಮಗಳನ್ನು ಅಲ್ಲಿರಿಸಿದನು. ಕಂಸನು ತನ್ನ ಭವಿಷ್ಯವಾಣಿಯ ಹೇಳಿಕೆಯಂತೆ ತನ್ನ ಹಂತಕ ಎಂದು ನಂಬಿ ಈ ಶಿಶುವನ್ನು ಕೊಲ್ಲಲು ಪ್ರಯತ್ನಿಸಿದಾಗ ಅವಳು ಕಂಸದ ಹಿಡಿತದಿಂದ ತಪ್ಪಿಸಿಕೊಂಡು ತನ್ನ ದುರ್ಗೆಯ ರೂಪಕ್ಕೆ ಬಂದಳು. ನಿನ್ನ ಕೊಲೆಗಾರನು ಈಗಾಗಲೇ ಬೇರೆಡೆ ಜನಿಸಿದನೆಂದು ಮತ್ತು ತರುವಾಯ ಮಥುರಾ ಸೆರೆಮನೆಯಿಂದ ಕಣ್ಮರೆಯಾಗಿದ್ದಾನೆ ಎಂದು ಅವಳು ಆ ದುಷ್ಟ ರಾಜ ಕಂಸನಿಗೆ ತಿಳಿಸಿದಳು.

ಕಂಸನು ಯಶೋದನ ಮಗಳನ್ನು ಕೊಲ್ಲುವಾಗ ಯೋಗಮಯ ದೇವಿಯು ಹೊರಹೊಮ್ಮುತ್ತಾಳೆ
ಶ್ರೀಕೃಷ್ಣನ ತಂಗಿಯಾದ ಯೋಗ ಮಾಯಾ ದೇವಿ ಕಂಸನ ಕೈಗಳಿಂದ ಮೇಲೆ ಹಾರಿ ಆಕಾಶದಲ್ಲಿ ದೇವಿಯಾಗಿ ಕಾಣಿಸಿಕೊಂಡಳು. ಆಕೆ ಎಂಟು ಕೈಗಳಲ್ಲಿ ಆಯುಧ ಹಿಡಿದಿರುವ ದುರ್ಗಾದೇವಿಯಾಗಿ ಕಾಣಿಸಿಕೊಂಡಳು
ಓ ಕಂಸ. ಎಲವೋ ಮೂರ್ಖ. ನನ್ನನ್ನು ಕೊಂದೇನು ಪ್ರಯೋಜನ ? ನಿನ್ನನ್ನು ಕೊಲ್ಲುವ ವೈರಿ ಈಗಾಗಲೇ ಬೇರೆಡೆ ಜನ್ಮ ತಾಳಿ ಆಗಿದೆ. ಹಾಗಾಗಿ ಬೇರೆ ಮಕ್ಕಳನ್ನು ಕೊಲ್ಲುವ ಅಗತ್ಯವಿಲ್ಲ

[೮], ಆಕೆ ವಿಂಧ್ಯಾಚಲ ಪರ್ವತಗಳಲ್ಲಿ ವಾಸಿಸಲು ಆಯ್ಕೆ ಮಾಡಿಕೊಂಡಿದ್ದಾಳೆ ಎಂದು ಸ್ಥಳೀಯ ಸಿದ್ಧಾಂತಗಳು ನಂಬುತ್ತವೆ. ಅಲ್ಲಿ ಆಕೆಯ ದೇವಾಲಯವು ಇದೆ.

ಶಕ್ತಿವಾದ[ಬದಲಾಯಿಸಿ]

ಲೇಖಕರಾದ ಕಾನ್ಸ್ಟನ್ಸ್ ಜೋನ್ಸ್ ಮತ್ತು ಜೇಮ್ಸ್ ಡಿ. ರಯಾನ್, ವಿಂಧ್ಯವಾಸಿನಿಯ ಉಲ್ಲೇಖ ದೇವಿ ಮಹಾತ್ಮ್ಯ ದಲ್ಲಿ ಮೊದಲು ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದು ಶಕ್ತಿಯ ಸರ್ವೋಚ್ಚ ದೇವತೆಯ (ಮಹಾದೇವಿ) ವಿವಿಧ ಅವತಾರಗಳು ಅಥವಾ ರೂಪಗಳನ್ನು ಪ್ರಸ್ತುತಪಡಿಸುವ ಪ್ರಮುಖ ಪಠ್ಯವಾಗಿದೆ. 19ನೇ ಶತಮಾನದ ಆರಂಭದ ವಿಂಧ್ಯ ಮಹಾತ್ಮ್ಯ ಎಂಬ ಸ್ಥಳೀಯ ಪಠ್ಯದಲ್ಲೂ ಅವಳನ್ನು ಉಲ್ಲೇಖಿಸಲಾಗಿದೆ. ಎರಡರಲ್ಲೂ, ಆಕೆಯ ಈ ರೂಪವೇ ಅಂತಿಮ ವಾಸ್ತವವೆಂದು ಅರ್ಥೈಸಲಾಗುತ್ತದೆ. [೯] ಈಕೆಯನ್ನು ದೇವಿ ಪಾರ್ವತಿಯ ಸ್ವರೂಪ ಎಂದು ಪರಿಗಣಿಸಲಾಗಿದೆ.

ವೈಷ್ಣವ ಪಂಥ[ಬದಲಾಯಿಸಿ]

[೧೦] ಯೋಗಮಾಯಾಳನ್ನು ವಿಷ್ಣುವಿನ ಆಂತರಿಕ ಅಥವಾ ಬಾಹ್ಯ ಶಕ್ತಿಯ ಸಾಕಾರರೂಪವೆಂದು ವೈಷ್ಣವ ಪಂಥದಲ್ಲಿ ನಂಬಲಾಗಿದೆ. ಇಲ್ಲಿ ಅವಳನ್ನು ಕೃಷ್ಣನ ಅವತಾರವೆಂದು ಪರಿಗಣಿಸಲಾಗಿದೆ. [೧೧] ವಿಷ್ಣುಪುರಾಣದ ಪ್ರಕಾರ ವೈಷ್ಣವಿ ಮಹಾಮಾಯ ಎಂದೂ ಕರೆಯಲ್ಪಡುವ ಈ ದೇವಿಯು ದುರ್ಗಾ, ಅಂಬಿಕಾ, ಕ್ಷೇಮದಾ ಮತ್ತು ಭದ್ರಕಾಳಿ ಹಲವಾರು ಅಭಿವ್ಯಕ್ತಿಗಳನ್ನು ಹೊಂದಿದ್ದಾಳೆ.

ಭಾಗವತ ಪುರಾಣದಲ್ಲಿ, ಅಸುರ ಹಿರಣ್ಯಾಕ್ಶನು ವಿಷ್ಣುವಿನ ವರಾಹ ಅವತಾರವನ್ನು ಅಪಹಾಸ್ಯ ಮಾಡುತ್ತಾನೆ ಮತ್ತು ವಿಷ್ಣುವಿನ ಯೋಗಮಯ ಳನ್ನು ಉಲ್ಲೇಖಿಸುತ್ತಾನೆ. [೧೨]   [೧೩]ಮುಕುಂದವಿಲಾಸ ಎಂಬ 17ನೇ ಶತಮಾನದ ಸಾಹಿತ್ಯಿಕ ಕವಿತೆಯ ಪ್ರಕಾರ, ಭೂದೇವಿ ಮತ್ತು ಬ್ರಹ್ಮ. ಕಂಸ ಮತ್ತು ಶಿಶುಪಾಲರ ದಬ್ಬಾಳಿಕೆಯಿಂದ ಭೂವಾಸಿಗಳನ್ನು ರಕ್ಷಿಸಲು ಭೂಮಿಗೆ ಬರುವಂತೆ ವಿಷ್ಣುವಿಗೆ ಮನವಿ ಮಾಡಿದಾಗ ಆತ ತನ್ನ ಕೃಷ್ಣ ಅವತಾರದಲ್ಲಿ ಸಹಾಯ ಮಾಡಲು ಹಲವಾರು ದೇವತೆಗಳನ್ನು ನೇಮಿಸಿಕೊಳ್ಳುತ್ತಾನೆ. ಲಕ್ಷ್ಮಿ ರುಕ್ಮಿಣಿಯಾಗಿ ಜನಿಸಬೇಕು, ಭೂದೇವಿ ಸತ್ಯಭಾಮನಾಗಿ ಪ್ರಕಟಗೊಳ್ಳಬೇಕು, ಆದಿ ಶೇಷನು ಬಲರಾಮ ಅವತಾರಗೊಳ್ಳಬೇಕು, ಮತ್ತು ಯೋಗಮಯಳು ಯಶೋದೆಯ ಮಗಳಾಗಿ ಜನಿಸಬೇಕು ಎಂದು ನಿರ್ಧಾರವಾಗುತ್ತದೆ.

ಕೃಷ್ಣನ ಕತೆಗಳಲ್ಲಿ ಗೋಪಿಯರೊಂದಿಗೆ ಸಮಯ ಕಳೆಯಲು ಯೋಗಮಾಯ ಎಂಬ ವಿದ್ಯಮಾನವನ್ನು ಬಳಸುತ್ತಾರೆ. [೧೪] ಅವನ ಆನಂದಮಯ ವೈಭವದ ಸಮಯದಲ್ಲಿ ಯೋಗಮಯಳು ಪ್ರತಿ ಗೋಪಿಯ ಆಧ್ಯಾತ್ಮಿಕ ಪ್ರತಿರೂಪಗಳನ್ನು ಅವರ ಮನೆಗಳಲ್ಲಿ ಸೃಷ್ಟಿಸುತ್ತಾಳೆ. ಇದರಿಂದಾಗಿ ಅವರು ತಮ್ಮ ಗಂಡಂದಿರಿಗೆ ಪರಿಶುದ್ಧ ಪತ್ನಿಯರಾಗಿ ವರ್ತಿಸಬಹುದು ಮತ್ತು ಕೃಷ್ಣನ ಜೊತೆಯೂ ಇರಬಹುದು.

[೧೫]ಭಗವದ್ಗೀತೆಯಲ್ಲಿ ಕೃಷ್ಣನ ಕಾಲಕ್ಷೇಪಗಳು ಮತ್ತು ನಿಜವಾದ ರೂಪವು ಮನುಷ್ಯರಿಗೆ ಏಕೆ ಕಾಣಿಸುವುದಿಲ್ಲ ಎಂದು ಅರ್ಜುನ ಆಶ್ಚರ್ಯಪಡುತ್ತಾನೆ. ಆಗ ಶ್ರೀಕೃಷ್ಣನು ತನ್ನ ಅಭಿವ್ಯಕ್ತಿಗಳು ಎಲ್ಲಾ ಮನುಷ್ಯರಿಗೆ ಗೋಚರಿಸುವುದಿಲ್ಲ ಮತ್ತು ಭಗವಂತ ಸೃಷ್ಟಿಸಿದ ಭ್ರಮೆಯ ಶಕ್ತಿಯಿಂದ ಅವನು ಮುಚ್ಚಿಹೋಗಿದ್ದಾನೆ ಎಂದು ಹೇಳುತ್ತಾನೆ.

ಅಸುರ ಜಲಂಧರನು ಪಾರ್ವತಿಯನ್ನು ಅಪಹರಿಸಲಕಿಕ್ಕಾಗಿ ಶಿವನ ವಿರುದ್ಢ ಯುದ್ಧ ಮಾಡುತ್ತಾನೆ. ಆಗ ವಿಷ್ಣುವು ಅಸುರನ ಪತ್ನಿ ವೃಂದಾಳ ಪವಿವ್ರತಾ ಧರ್ಮವನ್ನು ಮುರಿಯಲು ಯೋಗಮಾಯಾಳನ್ನು ಒಂದು ಭ್ರಮೆಯ ರೂಪವಾಗಿ ಬಳಸುತ್ತಾನೆ. [೧೬] ಇದರಿಂದ ಶಿವನಿಗೆ ತನ್ನ ಯುದ್ಧದಲ್ಲಿ ಮೇಲುಗೈ ಸಾಧಿಸಲು ಸಾಧ್ಯವಾಗುತ್ತದೆ

[೧೭] ಯೋಗಮಾಯಾಳು ವಿಷ್ಣುವಿಗೆ ಮಾಡುವ ಸೇವೆಯಿಂದಾಗಿ ಸಂಪ್ರೀತಗೊಳ್ಳುವ ಆತನು ದೇವಿಯು ಆಕೆಯ ಗೌರವಾರ್ಥವಾಗಿ ಪೂಜಿಸಲು ಏಕಾದಶಿ (ಪ್ರತಿ ತಿಂಗಳ ಹನ್ನೊಂದನೇ ದಿನ) ಸಂದರ್ಭವನ್ನು ಅರ್ಪಿಸುತ್ತಾನೆ.

ದೇವಾಲಯಗಳು[ಬದಲಾಯಿಸಿ]

ಮಿರ್ಜಾಪುರದ ಬಳಿಯ ವಿಂಧ್ಯವಾಸಿನಿಯ ದೇವಾಲಯ

[೧೮] ಯೋಗಮಾಯಾ ದೇವಾಲಯವು ಉತ್ತರ ಪ್ರದೇಶದ ಮಿರ್ಜಾಪುರ ದಿಂದ 8 ಕಿ. ಮೀ. ದೂರದಲ್ಲಿರುವ ಗಂಗಾ ನದಿಯ ದಡದಲ್ಲಿರುವ ವಿಂಧ್ಯಾಚಲದಲ್ಲಿದೆ. ಹಿಮಾಚಲ ಪ್ರದೇಶದ ಬಂಡ್ಲಾದಲ್ಲಿ ಬಂಡ್ಲಾ ಮಾತಾ ದೇವಾಲಯ ಎಂದೂ ಕರೆಯಲಾಗುವ ಮತ್ತೊಂದು ದೇವಾಲಯವಿದೆ. [೧೯] [೨೦] [೨೧] ವಿಶೇಷವಾಗಿ ಚೈತ್ರ ಮತ್ತು ಆಶ್ವಿನ ಮಾಸಗಳಲ್ಲಿ ಬರುವ ನವರಾತ್ರಿ ಸಮಯದಲ್ಲಿ ಅಪಾರ ಜನಸಮೂಹವು ದೇವಾಲಯಕ್ಕೆ ಭೇಟಿ ನೀಡುತ್ತದೆ. ಜೈಷ್ಠ ಮಾಸದಲ್ಲಿ ಇಲ್ಲಿ ಕಜಲಿ ಸ್ಪರ್ಧೆಯನ್ನು ನಡೆಸಲಾಗುತ್ತದೆ. [೨೦] [೨೧] ಈ ದೇವಾಲಯವು ಭಾರತದ ಅತ್ಯಂತ ಪೂಜ್ಯ ಶಕ್ತಿಪೀಠಗಳಲ್ಲಿ ಒಂದಾಗಿದೆ. ವಿಂಧ್ಯವಾಸಿನಿ ದೇವಿಯನ್ನು ಕಜಲ ದೇವಿ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಕಾಳಿ ದೇವಿಯನ್ನು ವಿಂಧ್ಯವಾಸಿನಿ ದೇವಿಯ ರೂಪದಲ್ಲಿ ಅಲಂಕರಿಸಲಾಗಿದೆ. [೨೦] [೨೧]

ಇಲ್ಲಿ ಅಷ್ಟಭುಜ ದೇವಾಲಯ ಎಂಬ ಹೆಸರಿನ ಸರಸ್ವತಿ ದೇವಾಲಯವಿದೆ ಮತ್ತು ಅಲ್ಲಿಂದ ಮೂರು ಕಿ.ಮೀ ದೂರದಲ್ಲಿ ಕಾಳಿ ಖೋಹ್ ದೇವಾಲಯ ಎಂಬ ಗುಹೆಯಲ್ಲಿ ಕಾಳಿ ದೇವಿಯ ದೇವಾಲಯವಿದೆ. ಯಾತ್ರಿಕರು ತ್ರಿಲೋಕನ ಪರಿಕ್ರಮ ಎಂಬ ವಿಧಿಯ ಭಾಗವಾಗಿರುವ ಈ ಮೂರು ದೇವಾಲಯಗಳಿಗೆ ಭೇಟಿ ನೀಡಲು ಬಯಸುತ್ತಾರೆ. [೨೦] [೨೧]

ನವದೆಹಲಿಯ ಮೆಹ್ರೌಲಿಯಲ್ಲಿರುವ ಯೋಗಮಾಯ ಅಥವಾ ಜೋಗಮಾಯ ದೇವಾಲಯವನ್ನು ಮಹಾಭಾರತ ಯುದ್ಧದ ಕೊನೆಯಲ್ಲಿ ಪಾಂಡವರು ನಿರ್ಮಿಸಿದರು ಎಂದು ಹೇಳಲಾಗುತ್ತದೆ. ಹನ್ನೆರಡನೇ ಶತಮಾನದ ಜೈನ ಧರ್ಮಗ್ರಂಥಗಳು ಪ್ರಾಚೀನ ನಗರವಾದ ಮೆಹ್ರೌಲಿಯನ್ನು ಹಿಂದೆ ದೇವಾಲಯವಿದ್ದ ಕಾರಣದಿಂದ ಯೋಗಿನಿಪುರ ಎಂದು ಕರೆಯಲಾಗುತ್ತಿತ್ತು ಎಂದು ಹೇಳುತ್ತವೆ.

ಕೇರಳದಲ್ಲಿ ದುರ್ಗಾ ದೇವಿಯನ್ನು ಯೋಗ-ನಿದ್ರಾ ಅಥವಾ ಯೋಗಮಾಯ ಅವತಾರಗಳಲ್ಲಿ ಪೂಜಿಸಲಾಗುತ್ತದೆ. ಎರ್ನಾಕುಲಂ ಜಿಲ್ಲೆಯಲ್ಲಿರುವ ಪವಿತ್ರ ಅರಣ್ಯ ದೇವಾಲಯವಾದ ಇರಿಂಗೋಲ್ ಕಾವು ದೇವಿಯ ಪ್ರಮುಖ ದೇಗುಲ . ಈ ದೇವಾಲಯವು ಕೇರಳದ ಪ್ರಸಿದ್ಧ ಕಾವು ಅಥವಾ ಪವಿತ್ರ ತೋಟಗಳಲ್ಲಿ ಒಂದಾಗಿದೆ. ಸ್ವತಃ ಪರಶುರಾಮ ಪ್ರತಿಷ್ಠಾಪಿಸಿದ ರಾಜ್ಯದ 108 ದುರ್ಗಾ ದೇವಾಲಯಗಳಲ್ಲಿ ಇದೂ ಒಂದು ಎಂದು ಪರಿಗಣಿಸಲಾಗಿದೆ.

ಈ ದೇವಿಯನ್ನು ಮಧ್ಯ ಭಾರತದಲ್ಲಿ "ಬಿಜಸಾನಿ ದೇವಿ" ಎಂದು ಕರೆಯಲಾಗುತ್ತದೆ ಮತ್ತು ಬಿಜಸಾನಿ ಮಾತಾ ದೇವಾಲಯವು ಮಹಾರಾಷ್ಟ್ರ-ಮಧ್ಯಪ್ರದೇಶದ ಗಡಿಯಲ್ಲಿದೆ.

[೨೨]ನೇಪಾಳಪೊಖಾರಾದಲ್ಲಿ ಈ ದೇವತೆಗೆ ಸಮರ್ಪಿತವಾದ ಬಿಂದ್ಯಾಬಾಸಿನಿ ದೇವಾಲಯ ಎಂಬ ಹೆಸರಿನ ದೇವಾಲಯವೂ ಇದೆ.

ಇದನ್ನೂ ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. The Goddess in India: The Five Faces of the Eternal Feminine. Simon and Schuster. September 2000. ISBN 9781594775376.
  2. Beck, Guy L. (2012-02-01). Alternative Krishnas: Regional and Vernacular Variations on a Hindu Deity (in ಇಂಗ್ಲಿಷ್). State University of New York Press. p. 170. ISBN 978-0-7914-8341-1.
  3. Sinha, Purnendu Narayana (1901). A Study of the Bhagavata Purana: Or, Esoteric Hinduism (in ಇಂಗ್ಲಿಷ್). Freeman & Company, Limited. p. 247.
  4. Parthasarathy, V. R.; Parthasarathy, Indu (2009). Devi: Goddesses in Indian Art and Literature (in ಇಂಗ್ಲಿಷ್). Bharatiya Kala Prakashan. p. 133. ISBN 978-81-8090-203-1.
  5. Knapp, Stephen (2012). Hindu Gods & Goddesses (in ಇಂಗ್ಲಿಷ್). Jaico Publishing House. p. 32. ISBN 978-81-8495-366-4.
  6. www.wisdomlib.org (2017-04-30). "Yogamaya, Yogamāyā, Yoga-maya: 13 definitions". www.wisdomlib.org (in ಇಂಗ್ಲಿಷ್). Retrieved 2022-09-12.
  7. Hawley, John Stratton; Wulff, Donna Marie (1998). Devī: Goddesses of India. Motilal Banarsidass Publ. p. 49. ISBN 978-81-208-1491-2.
  8. Krishnan, S. A. (2017-05-20). Abhimanyu: The Warrior Prince (in ಇಂಗ್ಲಿಷ್). SA Krishnan.
  9. Jones & Ryan 2006, p. 489.
  10. Knapp, Stephen (2012). Hindu Gods & Goddesses (in ಇಂಗ್ಲಿಷ್). Jaico Publishing House. ISBN 978-81-8495-366-4.
  11. Varadpande, Manohar Laxman (2009). Mythology of Vishnu and His Incarnations (in ಇಂಗ್ಲಿಷ್). Gyan Publishing House. p. 15. ISBN 978-81-212-1016-4.
  12. www.wisdomlib.org (2022-07-24). "Hiraṇyākṣa's Fight with Varāha [Chapter 18]". www.wisdomlib.org (in ಇಂಗ್ಲಿಷ್). Retrieved 2022-09-12.
  13. Unni, N. P. (1995). Nilakantha Diksita (in ಇಂಗ್ಲಿಷ್). Sahitya Akademi. p. 25. ISBN 978-81-7201-803-0.
  14. Schweig, Graham M. (2018-06-26). Dance of Divine Love: India's Classic Sacred Love Story: The Rasa Lila of Krishna (in ಇಂಗ್ಲಿಷ್). Princeton University Press. p. 136. ISBN 978-0-691-19017-4.
  15. www.wisdomlib.org (2020-05-08). "Verse 7.25 [Bhagavad-gita]". www.wisdomlib.org (in ಇಂಗ್ಲಿಷ್). Retrieved 2022-09-28.
  16. Pintchman, Tracy (2005-08-25). Guests at God's Wedding: Celebrating Kartik among the Women of Benares (in ಇಂಗ್ಲಿಷ್). SUNY Press. p. 81. ISBN 978-0-7914-6595-0.
  17. Rinehart, Robin (2004). Contemporary Hinduism: Ritual, Culture, and Practice (in ಇಂಗ್ಲಿಷ್). ABC-CLIO. p. 142. ISBN 978-1-57607-905-8.
  18. "Vindhyachal Dham". District Mirzapur, Government of Uttar Pradesh. Retrieved 3 July 2020.
  19. "Welcome To Official Website Of Maa Vindhyavasini Devi". Vindhyachal Mandir. 19 March 2023. Retrieved 13 June 2023.
  20. ೨೦.೦ ೨೦.೧ ೨೦.೨ ೨೦.೩ "Vindhyachal Temple | Vindhyachal Mandir | Download | Website". vindhyachaltemple.com. ಉಲ್ಲೇಖ ದೋಷ: Invalid <ref> tag; name "b" defined multiple times with different content
  21. ೨೧.೦ ೨೧.೧ ೨೧.೨ ೨೧.೩ "Complete Information on Vindhyachal Temple, Distance, Hotels & Tourist Attraction". www.vindhyachalmandir.com. 19 March 2023. Retrieved 13 June 2023. ಉಲ್ಲೇಖ ದೋಷ: Invalid <ref> tag; name "c" defined multiple times with different content
  22. Galen Rowell; John Everingham; Jim Goodman (1997). Pokhara in the shadow of the Annapurnas. Book Faith India. p. 29. ISBN 978-974-89765-4-9.

ಗ್ರಂಥಸೂಚಿ[ಬದಲಾಯಿಸಿ]

"https://kn.wikipedia.org/w/index.php?title=ಯೋಗಮಾಯ&oldid=1214796" ಇಂದ ಪಡೆಯಲ್ಪಟ್ಟಿದೆ