ಮಧ್ವಾಚಾರ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಶ್ರೀ ಮಧ್ವಾಚಾರ್ಯರು
ಹುಟ್ಟಿದ ದಿನಾಂಕ : ೧೨೩೮-೧೩೧೭
ಹುಟ್ಟಿದೂರು : ಪಾಜಕ, ಉಡುಪಿ
ತಂದೆ: ಮಧ್ಯಗೇಹ ಭಟ್ಟ
ತಾಯಿ: ವೇದವತಿ
ಗುರು: ಅಚ್ಯತ ಪ್ರೇಕ್ಷ (ಅಚ್ಯುತಪ್ರಜ್ಞ)
ಹೆಸರುಗಳು:

(೧) ವಾಸುದೇವ, ತಂದೆ ತಾಯಿ ಇಟ್ಟ ಹೆಸರು
(೨) ಶ್ರೀ ಮಧ್ವಾಚಾರ್ಯರು,
ಸನ್ಯಾಸ ಪಡೆದನಂತರದ ಹೆಸರು
(೩) ಪೂರ್ಣಪ್ರಜ್ಞ,
ಪರಿಪೂರ್ಣನಾದ ಬ್ರಹ್ಮನನ್ನು ತಿಳಿದವನು
(ಅಚ್ಯುತಪ್ರಜ್ಞರು ಸನ್ಯಾಸ ದೀಕ್ಷೆ ಕೊಟ್ಟ ನ೦ತರ ಇಟ್ಟ ಹೆಸರು)
(೪) ಆನಂದತೀರ್ಥ,
ಆನಂದವುಂಟಮಾಡುವ ಉಪದೇಶಗಳನ್ನು ಮಾಡುವವರು
(ಅಚ್ಯುತಪ್ರಜ್ಞರು ಪಟ್ಟಾಭಿಷೇಕದ ನಂತರ ಇಟ್ಟ ಹೆಸರು)

ಹಿಂದಿನ ಅವತಾರಗಳು
(ನಂಬಿಕೆಯಂತೆ):

(೧) ಹನುಮ
(೨) ಭೀಮ

ಶ್ರೀ ಮಧ್ವಾಚಾರ್ಯರು (೧೨೩೮-೧೩೧೭) ದ್ವೈತಮತದ ಸ್ಥಾಪಕರು ಮತ್ತು ತತ್ವಜ್ಙಾನಿಗಳು

ಪರಿವಿಡಿ

[ಬದಲಾಯಿಸಿ] ಬಾಲ್ಯ

ಸರ್ವೊತ್ತಮನಾದ ಶ್ರೀಪತಿ ಯಾದ ಪರಮಾತ್ಮನ ಅದೇಶವನ್ನು ಪಾಲಿಸಲು ಜೀವೊತ್ತಮ ನಾದ ಪವಮಾನನು ಶ್ರೀಮದಾನಂದತೀರ್ಥರಾಗಿ ಜನಿಸಿದರು. ಶ್ರೀ ಮಧ್ವಾಚಾರ್ಯರು ಉಡುಪಿಯ ಹತ್ತಿರದಲ್ಲಿರುವ ಪಾಜಕ ಗ್ರಾಮದಲ್ಲಿ ತಂದೆ ಮಧ್ಯಗೇಹ ಭಟ್ಟ ಮತ್ತು ತಾಯಿ ವೇದವತಿಗೆ ಜನಿಸಿದರು. ತಂದೆ ತಾಯಿ ವಾಸುದೇವನೆಂದು ಹೆಸರಿಟ್ಟಿದ್ದರು. ಬಾಲ್ಯದಲ್ಲೆ ಅಸಾಧಾರಣ ಪ್ರತಿಭೆ ತೋರಿದ ವಾಸುದೇವ, ತನ್ನ ಹನ್ನೆರಡೆನೆಯ ವಯಸ್ಸಿನಲ್ಲಿ ವಿಧ್ಯಾಭ್ಯಾಸ ಮತ್ತು ವೇದಾಭ್ಯಾಸಗಳನ್ನೆರಡನ್ನು ಮುಗಿಸಿ ಗುರು ಅಚ್ಯುತ ಪ್ರೇಕ್ಷಕರಿಂದ ಸನ್ಯಾಸವನ್ನು ಪಡೆದು ಶ್ರೀ ಅನಂದ ತೀರ್ಥ ರೆಂಬ ಹೆಸರು ಪಡೆದರು. ಶ್ರೀ ಅನಂದ ತೀರ್ಥರನ್ನು ಬಕ್ತರು "ಶ್ರೀ ಮಧ್ವಾಚಾರ್ಯ" ರೆಂದೆ ಕರೆಯುತ್ತಾರೆ. ಶ್ರೀಮದಾಚಾರ್ಯರಿಗೆ ಗುರುಗಳು ಪ್ರೀತಿ ಇಂದ ಇತ್ತ ನಾಮ "ಪುರ್ಣ ಪ್ರಘ್ನ"

[ಬದಲಾಯಿಸಿ] ಪ್ರಚಾರ

ಭಾರತದಲ್ಲೆಡೆ ದ್ವೈತಮತವನ್ನು ಪ್ರಚಾರಿಸಿದರು. ಎರಡು ಬಾರಿ ಬದರಿ ಯಾತ್ರೆ ಮಾಡಿ ವೇದವ್ಯಾಸ ರೂಪಿಯಾದ ಪರಮಾತ್ಮನನ್ನು ಕಂಡು,ಪರಮಾತ್ಮನಿಂದ ವೇದಗಳನ್ನು ಕಲಿತು ಉಡುಪಿಗೆ ಹಿಂದುರುಗಿದರು. ಮಧ್ವಾಚಾರ್ಯರು ಎಂಟು ಮಠಗಳನ್ನು ಮತ್ತು ಉಡುಪಿಯ ಕೃಷ್ಣ ಮಠದಲ್ಲಿ ಶ್ರೀ ಕೃಷ್ಣನ ವಿಗ್ರಹವನ್ನು ಸ್ಥಾಪಿಸಿದರು. ಶ್ರೀ ಕೃಷ್ಣನು ತನ್ನ ಮಾವನ ಮನೆಯಾದ ಸಮುದ್ರ ದಿಂದ ಅಚಾರ್ಯರಿಗಾಗಿ ಗೊಪಿಯ ಉಂಡೇಯೊಳಗೆ ಕೂತು ದೊರಕಿದನು

[ಬದಲಾಯಿಸಿ] ಕೃತಿಗಳು

ಶ್ರೀ ಮಧ್ವಾಚಾರ್ಯರು ಅನೇಕ ಕೃತಿಗಳನ್ನು ಸಂಸ್ಕೃತದಲ್ಲಿ ಬರೆದಿದ್ದಾರೆ. ಅವರ ಗ್ರಂಥಗಳನ್ನು ಸರ್ವಮೂಲಗ್ರಂಥಗಳು ಎಂದು ಕರೆಯಲಾಗುತ್ತದೆ. ಅವುಗಳಲ್ಲಿ ಇಂದು ಉಪಲಬ್ಧವಾದವುಗಳು ಹೀಗಿವೆ:

  • ಗೀತಾಭಾಷ್ಯ
  • ಗೀತಾತಾತ್ಪರ್ಯ
  • ಬ್ರಹ್ಮಸೂತ್ರ ಭಾಷ್ಯ
  • ಅನುವ್ಯಾಖ್ಯಾನ
  • ನ್ಯಾಯವಿವರಣ
  • ಅಣುಭಾಷ್ಯ
  • ದಶೋಪನಿಷದ್ಭಾಷ್ಯಗಳು
  • ಮಹಾಭಾರತತಾತ್ಪರ್ಯನಿರ್ಣಯ
  • ಯಮಕಭಾರತ
  • ದಶ ಪ್ರಕರಣಗಳು
  • ತಂತ್ರಸಾರ ಸಂಗ್ರಹ
  • ದ್ವಾದಶ ಸ್ತೋತ್ರ
  • ಕೃಷ್ಣಾಮೃತಮಹಾರ್ಣವ
  • ಸದಾಚಾರ ಸ್ಮೃತಿ
  • ಜಯಂತೀ ನಿರ್ಣಯ
  • ಪ್ರಣವ ಕಲ್ಪ
  • ನ್ಯಾಸಪದ್ಧತಿ
  • ತಿಥಿನಿರ್ಣಯ
  • ಕಂದುಕಸ್ತುತಿ

[ಬದಲಾಯಿಸಿ] ಶಿಷ್ಯರು

ಶ್ರೀ ಮಧ್ವಾಚಾರ್ಯರ ಶಿಷ್ಯವರ್ಗ ಅಪಾರವಾದುದಾಗಿತ್ತು. ಅವರಲ್ಲಿ ಪ್ರಮುಖರಾದ ಕೆಲವರನ್ನು ಹೀಗೆ ಗುರುತಿಸಬಹುದು

[ಬದಲಾಯಿಸಿ] ಈ ಲೇಖನಗಳನ್ನೂ ನೋಡಿ

[ಬದಲಾಯಿಸಿ] ಹೊರಗಿನ ಸಂಪರ್ಕಗಳು

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು