ಪಾಮ್ ಕೆರ್ನಲ್ ಎಣ್ಣೆ
ಪಾಮ್ ಕೆರ್ನಲ್ ಎಣ್ಣೆ ಒಳ್ಳೆಣ್ಣೆ. ಈ ಎಣ್ಣೆಯನ್ನು ಆಯಿಲ್ ಪಾಮ್(Oil palm)ಇಲ್ಲವೆ ಪಾಮಾಯಿಲ್ ಮರ ಎನ್ನುವ ಮರದ ಬೀಜದಿಂದ ತೆಗೆಯಲಾಗುತ್ತದೆ. ಈ ಮರದ ಸಸ್ಯ ಶಾಸ್ತ್ರ ಹೆಸರುElaeis guineensis[೧]. ಆಯಿಲ್ ಪಾಮ್ ಮರ ಪಾಮೆಸಸ್ಯ ಕುಟುಂಬಕ್ಕೆ ಸೇರಿದ ಮರ. ಆಯಿಲ್ ಪಾಮ್ ಹಣ್ಣಿನ ಕುಸುರಿ ರಸದಿಂದ ಪಾಮಾಯಿಲ್ ಉತ್ಪಾದಿಸಲಾಗುತ್ತದೆ. ಪಾಮಾಯಿಲ್ ನಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲವಾಗಿದ್ದ ಪಾಮಿಟಿಕ್ ಆಮ್ಲ ಹೆಚ್ಚಿನ ಶೇಕಡದಲ್ಲಿ ಇರುತ್ತದೆ. ಪಾಮ್ ಕೆರ್ನಲ್ ಎಣ್ಣೆಯನ್ನು , ಆಯಿಲ್ ಪಾಮ್ ಮರ ಬೀಜದಿಂದ ಉತ್ಪನ್ನ ಮಾಡಲಾಗುತ್ತದೆ. [೨]
ಪಾಮ್ ಕೆರ್ನಲ್ ಎಣ್ಣೆಯ ವಿಶೇಷತೆ
[ಬದಲಾಯಿಸಿ]- ಕೊಬ್ಬರಿ ಎಣ್ಣೆ, ಪಾಮಾಯಿಲ್, ಮತ್ತು ಪಾಮ್ ಕೆರ್ನಲ್ ಎಣ್ಣೆ , ಈ ಮೂರು ಎಣ್ಣೆಗಳಲ್ಲಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ಹೆಚ್ಚಿನ ಅಂಶದಲ್ಲಿ ಇರುತ್ತವೆ. ಹಣ್ಣಿನ ಕುಸುರಿಯಿಂದ ತೆಗೆದ ಪಾಮಾಯಿಲ್ ನಲ್ಲಿ ಪಾಮಿಟಿಕ್ ಆಮ್ಲ ಹೆಚ್ಚಿನ ಶೇಕಡದಲ್ಲಿ ಇದ್ದರೆ, ಬೀಜಗಳಿಂದ ಉತ್ಪನ್ನ ಮಾಡಲಾದ ಕೊಬ್ಬರಿ, ಪಾಮ್ ಕೆರ್ನಲ್ ಎಣ್ಣೆಗಳಲ್ಲಿ ಲಾರಿಕ್ ಆಮ್ಲ ಹೆಚ್ಚಾಗಿರುತ್ತದೆ. ಕೊಬ್ಬರಿ ಮರ ಪಾಮೇಸಸ್ಯಕುಟುಂಬಕ್ಕೆ ಸೇರಿದ ಮರ.
- ಪಾಮಿಟಿಕ್ ಕೊಬ್ಬಿನ ಆಮ್ಲ ಮತ್ತು ಲಾರಿಕ್ ಕೊಬ್ಬಿನ ಆಮ್ಲ ಎರಡೂ ಸಂತೃಪ್ತ ಕೊಬ್ಬಿನ ಆಮ್ಲಗಳಾಗಿದ್ದರೂ, ಪಾಮಿಟಿಕ್ ಆಮ್ಲದಲ್ಲಿ ೧೬ ಕಾರ್ಬನುಗಳು ಇದ್ದರೆ, ಲಾರಿಕ್ ಕೊಬ್ಬಿನ ಆಮ್ಲದಲ್ಲಿ ಕೇವಲ ೧೨ ಕಾರ್ಬನುಗಳು ಇರುತ್ತವೆ. ಕೊಬ್ಬರಿ ಎಣ್ಣೆಯಲ್ಲಿ ಲಾರಿಕ್ ಕೊಬ್ಬಿನ ಆಮ್ಲ ೮೦% ತನಕ ಇರುತ್ತದೆ. ಆದ್ದರಿಂದ ಪಾಮ್ ಕೆರ್ನಲ್ ಎಣ್ಣೆ ಮತ್ತು ಕೊಬ್ಬರಿ ಎಣ್ಣೆಗಳಿಗೆ ಹತ್ತಿರ ವೈದೃಶ್ಯವಿದೆ.
ಪಾಮ್ ಕೆರ್ನಲ್/ ಬೀಜ
[ಬದಲಾಯಿಸಿ]- ಪಾಮ್ ಬೀಜದಲ್ಲಿ ೨೫-೩೦% ವರೆಗೆ ಎಣ್ಣೆ ಇರುತ್ತದೆ. ಬೀಜದ ಮೇಲೆ ಮಂದವಾದ ಕಂದುಬಣ್ಣ ಸಿಪ್ಪೆ(shell)ಇರುತ್ತದೆ. ಇದರ ಒಳಗೆ ಮೃದುವಾದ ತಿರುಳು/ಕಾಳು ಇರುತ್ತದೆ. ಒಟ್ಟಿಗೆ ಗೊರಟೆ (ಸಿಪ್ಪೆ)ಸಮೇತ ವಿತ್ತನದಲ್ಲಿ ಎಣ್ಣೆ ೩೦%ವರೆಗೆ , ಕೇವಲ ತಿರುಳಿ(kernel)ನಲ್ಲಿ ೪೦% ವರೆಗೆ ಎಣ್ಣೆ ಸಿಗುತ್ತದೆ. ವಿತ್ತನ ಗೋಲಾಕಾರವಾಗಿರುತ್ತದೆ. ಪಾಮ್ ಬೀಜದಲ್ಲಿರುವ ತೇವ ೧೦-೧೧% ವರೆಗೆ ಕಡಿಮೆ ಆಗುವುದಕ್ಕೆ ಗೊರಟೆಯನ್ನು ಮೊದಲು ಚೆನ್ನಾಗಿ ಒಣಗಿಸಬೇಕು.
- ಬೀಜದಲ್ಲಿ ತೇವ ಹೆಚ್ಚು ಇದ್ದರೆ, ಎಣ್ಣೆಯಲ್ಲಿ ಫ್ರೀ ಫ್ಯಾಟಿ ಆಮ್ಲಗಳ ಪ್ರಮಾಣ ಹೆಚ್ಚಾಗುತ್ತದೆ. ಎಣ್ಣೆಯಲ್ಲಿ ಫ್ರಿ ಫ್ಯಾಟಿ ಆಮ್ಲಗಳು (F.F.A)ಹೆಚ್ಚು. ಆದರೆ ಎಣ್ಣೆಯನ್ನು ರಿಫೈನರಿ ಮಾಡುವಾಗ ತೆಗೆಯುವ ಕೊಬ್ಬಿನ ಆಮ್ಲಗಳ ಪ್ರಮಾಣ ಅಧಿಕವಾಗುತ್ತದೆ. ಅದರಿಂದ ಕಡಿಮೆ ಅಂಶದಲ್ಲಿ ಫ್ರಿ ಫ್ಯಾಟಿ ಆಮ್ಲಗಳು ಇರುವ ಎಣ್ಣೆಯನ್ನು ಬೀಜಗಳಿಂದ ಉತ್ಪನ್ನ ಮಾಡಬೇಕು.
ಎಣ್ಣೆಯನ್ನು ಉತ್ಪನ್ನ ಮಾಡುವ ಪದ್ಧತಿ
[ಬದಲಾಯಿಸಿ]- ಬೀಜದಿಂದ ಸಾಧಾರಣವಾಗಿ ಎಣ್ಣೆಯನ್ನು ಎಕ್ಸುಪೆಲ್ಲರು ಯಂತ್ರಗಳಿಂದ ಅಥವಾ ಗಾಣದಲ್ಲಿ ನಡೆಸಿ ಉತ್ಪನ್ನ ಮಾಡಲಾಗುತ್ತದೆ. ಮೊದಲು ಪಾಮಾಯಿಲ್ ಮಿಲ್ಲುನಿಂದ ಶೇಖರಣೆ ಮಾಡಿದ ಬೀಜಗಳನ್ನು ಶುಭ್ರಮಾಡಲಾಗುತ್ತದೆ. ಆಮೇಲೆ ಬೀಜಗಳನ್ನು ರೋಸ್ಟರು(Roaster=ಹುರಿಯುವ ಸಾಧನ)ನಲ್ಲಿ ಹುರಿಯಿಸಿ, ನಂತರ ಡಿಕಾರ್ಡರೇಟರು ಎನ್ನುವ ಯಂತ್ರದ ಸಹಾಯದಿಂದ ಬೀಜಗಳ ಮೇಲಿನ ಸಿಪ್ಪೆಯನ್ನು ತೆಗೆಯುತ್ತಾರೆ. ನಂತರ ಬೀಜಗಳನ್ನು ಹೆಮರು ಮಿಲ್ಲುನಲ್ಲಿ ಸಣ್ಣ ತುಂಡುಗಳಾಗಿ ಮಾಡಲಾಗುತ್ತದೆ.
- ಆಮೇಲೆ ಎಕ್ಸುಪೆಲ್ಲರು ಯಂತ್ರಗಳನ್ನು ಬಳಸಿ ಎಣ್ಣೆಯನ್ನು ತೆಗೆಯುತ್ತಾರೆ. ಹಿಂಡಿಯಲ್ಲಿ ಇನ್ನು ೬-೧೦% ವರೆಗೆ ಎಣ್ಣೆ ಉಳಿದಿರುತ್ತದೆ. ಹಿಂಡಿಯಲ್ಲಿ ಇರುವ ಎಣ್ಣೆಯನ್ನು ಸಾಲ್ವೆಂಟ್ ಪ್ಲಾಂಟ್ ಯಲ್ಲಿ ನಡೆಸಿ ತೆಗೆಯಲಾಗುತ್ತದೆ. ಎಣ್ಣೆ ತೆಗೆದಿದ್ದ ಹಿಂಡಿಯನ್ನು ಹಸು/ಆಕಳಗಳ ತಿಂಡಿ/ಮೇವನ್ನು (cattle feed)ತಯಾರು ಮಾಡುವುದರಲ್ಲಿ ಬಳಸುತ್ತಾರೆ. ಪಾಮ್ ಬೀಜ ಹಿಂಡಿಯಲ್ಲಿ ಪ್ರೋಟೀನ್ ೧೫-೨೦% ತನಕ ಇರುತ್ತದೆ. ಕೆಲವು ಕಡೆ ಇನ್ನೂ ಗಾಣವನ್ನು ಬಳಸಿ ಎಣ್ಣೆಯನ್ನು(ಆಫ್ರಿಕಾಗ್ರಾಮಗಳಲ್ಲಿ}ತೆಗೆಯುವ ಪದ್ದತಿ ಅಸ್ಥಿತ್ವದಲ್ಲಿ ಇದೆ. [೩].
ಪಾಮ್ ಕೆರ್ನಲ್/ಬೀಜ ಎಣ್ಣೆ
[ಬದಲಾಯಿಸಿ]ಪಾಮ್ ಬೀಜ ಎಣ್ಣೆ ಮಸುಕಾದ ಮಂಜಲು/ಅರಿಶನ ವರ್ಣದಲ್ಲಿ ಅಥವಾ ವರ್ಣರಹಿತವಾಗಿರುತ್ತದೆ. ಈ ಎಣ್ಣೆಯಲ್ಲಿ ಕೊಬ್ಬರಿ ಎಣ್ಣೆಯಲ್ಲಿದ್ದ ಹಾಗೆ ಲಾರಿಕ್ ಆಮ್ಲ ಎಂದು ಕರೆಯಲಾಗುವ ಕೊಬ್ಬಿನ ಆಮ್ಲ ಹೆಚ್ಚಾಗಿ ಪ್ರತಿಶತದಲ್ಲಿ ಇರುತ್ತದೆ. ಪಾಮ್ ಕೆರ್ನಲ್ ಎಣ್ಣೆಯಲ್ಲಿ ಒಟ್ಟಾಗಿ ಪರ್ಯಾಪ್ತ ಕೊಬ್ಬಿನ ಆಮ್ಲಗಳು ೮೦% ವರೆಗೆ ಇದ್ದರೆ, ಅದರಲ್ಲಿ ಲಾರಿಕ್ ಕೊಬ್ಬಿನ ಆಮ್ಲ ೫೦%ವರೆಗೆ, ಮಿರಿಸ್ಟಿಕ್ ಆಮ್ಲ ೧೬% ತನಕ, ಪಾಮಿಟಿಕ್ ಆಮ್ಲ ೧೦%ವರೆಗೆ ಇರುತ್ತವೆ, ಕಾಪ್ರೋಯಿಕ್, ಕಾಫ್ರಿಕ್ ಮತ್ತು ಕಾಪ್ರೋಲಿಕ್ ಕೊಬ್ಬಿನ ಆಮ್ಲಗಳು ಮೂರು ಸೇರಿ ೧೦% ವರೆಗೆ ಇರುತ್ತವೆ. ಎಣ್ಣೆ-ಭೌತಿಕ ಧರ್ಮ ಮತ್ತು ಗುಣಗಳು[೪]
ಲಕ್ಷಣ/ಗುಣ | ಮಿತಿ |
ಸಾಂದ್ರತ | 0.899-0.901 |
వక్రీభవనసూచిక(250C) | 1.4೪೮-1.45೨ |
ಅಯೋಡಿನ್ ಮೌಲ್ಯ | 14.0-19.0 |
ಸಪೋನಿಫಿಕೆಸನ್ ಸಂಖ್ಯ/ಮೌಲ್ಯ | 230-254 |
ಅನ್ ಸಪೋನೊಫಿಯಬುಲ್ ಪದಾರ್ಥ | 1.2% |
ಪೆರಾಕೈಡ್ ಸಂಖ್ಯೆ/ಮೌಲ್ಯ(mg/KOH/g) | 2.90-2.96 |
ಜಾರು ದ್ರವೀಭವ ಉಷ್ಣೋಗ್ರತೆ | ೨೬-೩೦೦C |
ಎಣ್ಣೆಯಲ್ಲಿರುವ ಕೊಬ್ಬಿನ ಆಮ್ಲಗಳು-ಪ್ರತಿಶತ[೪]
ಕೊಬ್ಬಿನ ಆಮ್ಲ | ಕಾರ್ಬನು ಸಂಖ್ಯೆ:ಬಂಧಗಳು | ಶೇಕಡ |
ಸಂತೃಪ್ತ ಕೊಬ್ಬು ಆಮ್ಲಗಳು | ||
ಕಾಪ್ರೋಯಿಕ್ ಆಮ್ಲ | <0.8 | |
ಕಾಪ್ರಿಲಿಕ್ ಆಮ್ಲ | C8:0 | 2.4-6.2 |
ಕಾಪ್ರಿಕ್ ಆಮ್ಲ | C10:0 | 2.6-5.0 |
ಲಾರಿಕ್ ಆಮ್ಲ] | C12:0 | 48±7 |
ಮಿರಿಸ್ಟಿಕ್ ಆಮ್ಲ | C14:0 | 16±2 |
ಪಾಮಿಟಿಕ್ ಆಮ್ಲ | C16:0 | 6.5-10.0 |
ಸ್ಟಿಯರಿಕ್ ಆಮ್ಲ | C18:0 | 1.3-3.0 |
ಅಸಂತೃಪ್ತ ಕೊಬ್ಬುಆಮ್ಲಗಳು | ||
ಒಲಿಕ್ ಆಮ್ಲ | C18:1 | 12-19 |
ಲಿನೊಲಿಕ್ ಆಮ್ಲ | C18:2 | 2.0-3.5 |
ಕೊಬ್ಬರಿ ಎಣ್ಣೆಯಲ್ಲಿ ಇರುವ ಕೊಬ್ಬಿನ ಆಮ್ಲಗಳು ಪಾಮ್ ಕೆರ್ನಲ್ ಎಣ್ಣೆಯಲ್ಲಿರುವ ಆಮ್ಲಗಳು ಪ್ರತಿಶತ ಹತ್ತಿರತ್ತಿರ ಒಂದೇ ತರಹ ಇರುತ್ತವೆ. ಕೆಳಗೆ ಎರಡು ಎಣ್ಣೆಗಳಲ್ಲಿ ಇರುವ ಕೊಬ್ಬಿನ ಆಮ್ಲಗಳ ತುಲನಾ ಪಟ್ಟಿ ಕೊಡಲಾಗಿದೆ.
ಕೊಬ್ಬರಿ ಎಣ್ಣೆ | ಪಾಮ್ ಕೆರ್ನಲ್ ಎಣ್ಣೆ | |
ಸಾಂದ್ರತೆ | 0.915-0.920 | 0.899-0.901 |
ಅಯೋಡಿನ್ ಮೌಲ್ಯ | 6-11 | 14-19 |
ಸಪೋನಿಫಿಕೆಸನ್ ಮೌಲ್ಯ | 250 | 245-247 |
ದ್ರವೀಭವನ ಉಷ್ಣೋಗ್ರತ | 250C | 250C |
ಸ್ಮೋಕ್ ಪಾಯಿಂಟ್ | 2300C | 230)C |
ಅನ್ ಸಪೋನೊಫಿಯಬುಲ್ ಪದಾರ್ಥ | <1.0 | 1.2 |
ಕೊಬ್ಬಿನ ಆಮ್ಲಗಳು | ||
---|---|---|
ಕಾಪ್ರೋಯಿಕ್ ಆಮ್ಲ | <1.0 | |
ಕಾಪ್ರಿಲಿಕ್ ಆಮ್ಲ | 7-8 | 3.0-4.0 |
ಕಾಪ್ರಿಕ್ ಆಮ್ಲ | 6-7 | 3.0-4.0 |
ಲಾರಿಕ್ ಆಮ್ಲ | 45-50 | 48-50 |
ಮಿರಿಸ್ಟಿಕ್ ಆಮ್ಲ | 18-20 | 14-16 |
ಪಾಮಿಟಿಕ್ ಆಮ್ಲ | 8-9 | 8-10 |
ಸ್ಟಿಯರಿಕ್ ಆಮ್ಲ | 2.0-3.0 | 2.5-3.0 |
ಒಲಿಕ್ ಆಮ್ಲ | 6-7 | 14-16 |
ಲಿನೊಲಿಕ್ ಆಮ್ಲ | 1.5-2.0 | 2.0-2.5 |
ಎಣ್ಣೆ-ಉಪಯೋಗಗಳು
[ಬದಲಾಯಿಸಿ]- ಬೇಕರಿ ಪದಾರ್ಥ{ಬ್ರೆಡ್, ಬಿಸ್ಕತ್ತ್ತ್, ಚಾಕೊಲೆಟ್} ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.[೫]
- ಜೈವಿಕ ಇಂಧನ ಮತ್ತು ಮಾರ್ಗರಿನ್ ತಯಾರಿಸುವುದಕ್ಕೆ ಉಪಯೋಗಿಸುತ್ತಾರೆ[೫]
- ಸಾಬೂನ್(soap)ಗಳನ್ನು,ಹೆಚ್ಚು ಮದ್ದು(ointment)ಗಳನ್ನು ತಯಾರಿಸುವುದರಲ್ಲಿ ಉಪಯೋಗಿಸುತ್ತಾರೆ[೬].
- ಆಫ್ರಿಕಾ ದೇಶಗಳಲ್ಲಿ ಒಳ್ಳೆಣ್ಣೆ/ಅಡುಗೆ ಎಣ್ಣೆಯಾಗಿ ಬಳಸುತ್ತಾರೆ.
- ಕೆಳಗಡೆ ಕೊಬ್ಬರಿ ಎಣ್ಣೆಗೆ ಬದಲಾಗಿ ಉಪಯೋಗಿಸುತ್ತಾರೆ.
- ಮಾರ್ಗರಿನ್(margarine)ತಯಾರು ಮಾಡುವುದಕ್ಕೆ ಉಪಯೋಗಿಸುತ್ತಾರೆ.
ಉಲ್ಲೇಖನ
[ಬದಲಾಯಿಸಿ]- ↑ Poku, Kwasi (2002). "Origin of oil palm". Small-Scale Palm Oil Processing in Africa. FAO Agricultural Services Bulletin 148. Food and Agriculture Organization. p. 3. ISBN 92-5-104859-2.
{{cite book}}
: Unknown parameter|chapterurl=
ignored (help) - ↑ Reeves, James B.; Weihrauch, John L.; Consumer and Food Economics Institute (1979). Composition of foods: fats and oils. Agriculture handbook 8-4. Washington, D.C.: U.S. Dept. of Agriculture, Science and Education Administration. p. 4. OCLC 5301713.
- ↑ http://www.lrrd.org/lrrd20/7/boat20099.htm
- ↑ ೪.೦ ೪.೧ http://www.cibaria-intl.com/Spec%20Sheets/Organic%20Palm%20Kernel%20Oil%20Refined.pdf[permanent dead link]
- ↑ ೫.೦ ೫.೧ http:// jamesagbogun. hubpages. com/hub/ Uses-of-Palm-Kernel-Oil-and-Application-to-Biodiesel-Production
- ↑ http://medical-dictionary[permanent dead link]. thefreedictionary. com/Palm+kernel+oil