ವಿಷಯಕ್ಕೆ ಹೋಗು

ಹೂ ಜಿಂಟಾವೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Hu Jintao
胡锦涛

ಹಾಲಿ
ಅಧಿಕಾರ ಸ್ವೀಕಾರ 
15 November 2002
ಪೂರ್ವಾಧಿಕಾರಿ Jiang Zemin

ಹಾಲಿ
ಅಧಿಕಾರ ಸ್ವೀಕಾರ 
15 March 2003
Premier Wen Jiabao
ಉಪ ರಾಷ್ಟ್ರಪತಿ Zeng Qinghong
Xi Jinping
ಪೂರ್ವಾಧಿಕಾರಿ Jiang Zemin

ಹಾಲಿ
ಅಧಿಕಾರ ಸ್ವೀಕಾರ 
19 September 2004
ಪ್ರತಿನಿಧಿ Guo Boxiong
Xu Caihou
ಪೂರ್ವಾಧಿಕಾರಿ Jiang Zemin

ಹಾಲಿ
ಅಧಿಕಾರ ಸ್ವೀಕಾರ 
13 March 2005
ಪ್ರತಿನಿಧಿ Guo Boxiong
Xu Caihou
ಪೂರ್ವಾಧಿಕಾರಿ Jiang Zemin

ಅಧಿಕಾರ ಅವಧಿ
15 March 1998 – 15 March 2003
ರಾಷ್ಟ್ರಪತಿ Jiang Zemin
ಪೂರ್ವಾಧಿಕಾರಿ Rong Yiren
ಉತ್ತರಾಧಿಕಾರಿ Zeng Qinghong
ವೈಯಕ್ತಿಕ ಮಾಹಿತಿ
ಜನನ (1942-12-21) ೨೧ ಡಿಸೆಂಬರ್ ೧೯೪೨ (ವಯಸ್ಸು ೮೧)
Jiangyan, Jiangsu Province China
ರಾಜಕೀಯ ಪಕ್ಷ Communist Party of China
ಸಂಗಾತಿ(ಗಳು) Liu Yongqing
ಮಕ್ಕಳು Hu Haifeng
Hu Haiqing
ವಾಸಸ್ಥಾನ Zhongnanhai
ಅಭ್ಯಸಿಸಿದ ವಿದ್ಯಾಪೀಠ Tsinghua University
ಉದ್ಯೋಗ Hydraulic engineer

ಟೆಂಪ್ಲೇಟು:Fix bunching

Hu Jintao
ಸರಳೀಕಸರಿಸಿದ ಚೀನೀ
ಸಾಂಪ್ರದಾಯಿಕ ಚೀನೀ

ಟೆಂಪ್ಲೇಟು:Fix bunching ಹೂ ಜಿಂಟಾವೊ (ಪಿನ್‌ಯಿನ್‌: Hú Jǐntáo, [xǔ tɕìntʰɑ́ʊ] ಎಂಬುದಾಗಿ ಉಚ್ಚರಿಸಲಾಗುತ್ತದೆ; 1942ರ ಡಿಸೆಂಬರ್‌ 21ರಂದು ಜಿಯಾಂಗ್ಸುವಿನ ತೈಝೊವು ಎಂಬಲ್ಲಿ ಜನನ) ಚೀನಿ ಜನರ ಗಣರಾಜ್ಯದ ಈಗಿನ ಸಾರ್ವಭೌಮಾಧಿಕಾರವುಳ್ಳ ನಾಯಕನಾಗಿದ್ದಾನೆ. ಹಲವು ಬಗೆಯ ಅಧಿಕಾರ-ಪಟ್ಟಗಳನ್ನು ಅವನು ನಿರ್ವಹಿದ್ದಾನೆ. 2002ರಿಂದ ಚೀನಾದ ಕಮ್ಯೂನಿಸ್ಟ್‌ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದುದು, 2003ರಿಂದ ಚೀನಿ ಜನರ ಗಣರಾಜ್ಯದ ಅಧ್ಯಕ್ಷನಾಗಿದ್ದುದು, ಮತ್ತು 2004ರಿಂದ ಕೇಂದ್ರೀಯ ಸೇನಾ ಆಯೋಗದ ಸಭಾಪತಿಯಾಗಿದ್ದುದು, ಚೀನಾದ ಕಮ್ಯೂನಿಸ್ಟ್‌ ಪಕ್ಷದ ನಾಲ್ಕನೇ ಪೀಳಿಗೆಯ ನಾಯಕತ್ವದ ಅಗ್ರಗಣ್ಯ ನಾಯಕನಾಗಿ ಜಿಯಾಂಗ್‌ ಝೆಮಿನ್‌‌‌ಗೆ ಉತ್ತರಾಧಿಕಾರಿಯಾದುದು ಇವೆಲ್ಲವೂ ಈ ಪಟ್ಟಿಯಲ್ಲಿ ಸೇರುತ್ತವೆ.

ಅತಿಗೆ-ಹೋಗದ ಮತ್ತು ಬಿಗುಮಾನದ (ಅಥವಾ ಮಿತಭಾಷಿಯಾದ) ಒಂದು ನಾಯಕತ್ವ ಶೈಲಿಯನ್ನು ಹೂ ಹೊಂದಿದ್ದಾನೆ.[] ವಯಸ್ಸಾದ, ಅಧಿಕಾರರೂಢವರ್ಗದ ಕಮ್ಯೂನಿಸ್ಟರಿಂದ ತರುಣರಾಗಿರುವ, ಹೆಚ್ಚು ಹಠವಾದಿಯಾಗಿರುವ ತಂತ್ರಜ್ಞ ಪ್ರಭುತ್ವವಾದಿಗಳಿಗೆ ಚೀನಾದ ನಾಯಕತ್ವದ ದಾಟುವಿಕೆಯನ್ನು ಅವನು ಅಧ್ಯಕ್ಷಗಿರಿಗೆ ಏರಿದ್ದು ಪ್ರತಿನಿಧಿಸುತ್ತದೆ. ಹಿಂದಿನ ಆಡಳಿತದಿಂದ ಸಡಿಲಗೊಳಿಸಲ್ಪಟ್ಟಿದ್ದ ಆರ್ಥಿಕತೆಯ ಮೇಲಿನ ನಿಶ್ಚಿತ ಹತೋಟಿಗಳನ್ನು ತನ್ನ ಅಧಿಕಾರ-ಪ್ರಾಬಲ್ಯದ ಕಾಲದಿಂದಲೂ ಹೂ ಪುನಃ ಸ್ಥಾಪಿಸಿದ್ದಾನೆ, ಮತ್ತು ರಾಜತಾಂತ್ರಿಕ ಸುಧಾರಣೆಗಳೆಡೆಗಿನ ತನ್ನ ವರ್ತನೆಯಲ್ಲಿ ಅವನು ಸಂಪ್ರದಾಯಪಾಲಕನಾಗಿದ್ದಾನೆ.[] ವಿದೇಶಾಂಗ ನೀತಿಗೆ ಸಂಬಂಧಿಸಿ ಹೇಳುವುದಾದರೆ, ಅಂತರರಾಷ್ಟ್ರೀಯ ಸಂಬಂಧಗಳಲ್ಲಿ ಮಧ್ಯಮ ಮಾರ್ಗಿಯಾದ ಅಧಿಕಾರವನ್ನು ಅನುಸರಿಸುವ ಮೂಲಕ, "ಚೀನಾದ ಶಾಂತಿಯುತ ಅಭಿವೃದ್ಧಿ" ಎಂದು ಕರೆಯಲ್ಪಡುವ ಮಾರ್ಗವೊಂದನ್ನು ಹೂ ಸಮರ್ಥಿಸುತ್ತಾನೆ. ತನ್ನ ಸಹೋದ್ಯೋಗಿಯಾದ ಪ್ರಧಾನಮಂತ್ರಿ ವೆನ್‌ ಜಿಯಾಬಾವೊ ಜೊತೆಗೆ, ಸುಸಂಗತವಾದ ಆರ್ಥಿಕ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಒಳಗೊಂಡಿದ್ದ ಸರಿಸುಮಾರಾಗಿ ಒಂದು ದಶಕದ ಅವಧಿಯ ಆಡಳಿತವನ್ನು ಹೂ ನಡೆಸಿದ ಪರಿಣಾಮವಾಗಿ ವಿಶ್ವದ ಒಂದು ಪ್ರಮುಖ ಶಕ್ತಿಯಾಗಿ ಚೀನಾ ಪ್ರತಿಷ್ಠಾಪಿಸಲ್ಪಡಲು ಸಾಧ್ಯವಾಯಿತು. ಹೂನ ಅಧಿಕಾರಾವಧಿಯ ಉದ್ದಕ್ಕೂ ಆಫ್ರಿಕಾ, ಲ್ಯಾಟಿನ್‌ ಅಮೆರಿಕಾ, ಮತ್ತು ಇತರ ಅಭಿವೃದ್ಧಿಶೀಲ ದೇಶಗಳಲ್ಲಿನ ಚೀನಾದ ಜಾಗತಿಕ ಪ್ರಭಾವವು ವರ್ಧಿಸಿತು.[]

ತನ್ನ ವಯಸ್ಕ ಜೀವನದ ಬಹುತೇಕ ಭಾಗವನ್ನು ಕಮ್ಯೂನಿಸ್ಟ್‌ ಪಕ್ಷದ ಪ್ರಭುತ್ವದಲ್ಲಿ ತೊಡಗಿಸಿಕೊಂಡಿದ್ದ ಹೂ, ಟಿಬೆಟ್‌ ಸ್ವಯಮಾಧಿಕಾರದ ವಲಯಕ್ಕೆ ಸಂಬಂಧಿಸಿದಂತೆ ಪಕ್ಷದ ಮುಖ್ಯಸ್ಥನಾಗಿ, ಹಾಗೂ ಕಾಲಾನಂತರದಲ್ಲಿ CPCಯ ಆಡಳಿತ ಕಚೇರಿಯ ಕಾರ್ಯದರ್ಶಿಯಾಗಿ ಮತ್ತು ಜಿಯಾಂಗ್‌ ಝೆಮಿನ್ ಅಡಿಯಲ್ಲಿ ಉಪಾಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದು ಗಮನಾರ್ಹವಾಗಿತ್ತು. ಸ್ವದೇಶದಲ್ಲಿ ಸಮರಸದ ಸಮಾಜಕ್ಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ[] ಶಾಂತಿಯುತ ಅಭಿವೃದ್ಧಿ ಗೆ ಸಂಬಂಧಿಸಿದ ಒಂದು ಮೂಲಾಧಾರವನ್ನು ಸ್ಥಾಪಿಸುವುದರೆಡೆಗೆ ಹೂನ ರಾಜತಾಂತ್ರಿಕ ತತ್ತ್ವವು ಗುರಿಯಿರಿಸಿಕೊಂಡಿದೆ ಎಂಬುದಾಗಿ ಸಂಕ್ಷೇಪವಾಗಿ ವಿವರಿಸಲಾಗುತ್ತದೆ; ಚೀನಾದ ಹಲವಾರು ಆರ್ಥಿಕ, ಪರಿಸರೀಯ ಮತ್ತು ಸಾಮಾಜಿಕ ಸಮಸ್ಯೆಗಳನ್ನು ನಿಭಾಯಿಸುವುದಕ್ಕಾಗಿ ಸಂಘಟಿತವಾದ ಪರಿಹಾರೋಪಾಯಗಳನ್ನು ಬಯಸುವ ವೈಜ್ಞಾನಿಕ ಅಭಿವೃದ್ಧಿಯ ಪರಿಕಲ್ಪನೆಯೊಂದರಿಂದ ಸಮರಸದ ಸಮಾಜದ ಪರಿಕಲ್ಪನೆಯು ಸೃಷ್ಟಿಸಲ್ಪಟ್ಟಿದೆ.[]

ಆರಂಭಿಕ ಜೀವನ

[ಬದಲಾಯಿಸಿ]

ಜಿಯಾಂಗ್ಸುವಿನ ತೈಝೊವು ಎಂಬಲ್ಲಿ 1942ರ ಡಿಸೆಂಬರ್‌ 21ರಂದು ಹೂ ಜಿಂಟಾವೊ ಜನಿಸಿದ. ಅವನ ಕುಟುಂಬದ ಶಾಖೆಯು ಅನ್‌ಹುಯಿ ಪ್ರಾಂತದ ಜಿಕ್ಸಿ ಜಿಲ್ಲೆಯಿಂದ ಜಿಯಾಂಗ್ಯಾನ್‌ಗೆ ಅವನ ತಾತನ ಪೀಳಿಗೆಯ ಅವಧಿಯಲ್ಲಿ ವಲಸೆ ಬಂದಿತು. ಆದ್ದರಿಂದ, ಲಭ್ಯವಿರುವ ಅಧಿಕೃತ ದಾಖಲೆಗಳು ಜಿಯಾಂಗ್ಸುವನ್ನು ಉಲ್ಲೇಖಿಸದೆಯೇ ಅವನನ್ನು ಜಿಕ್ಸಿಯ[] ಓರ್ವ ಸ್ಥಳೀಕ ಎಂಬುದಾಗಿ ವಿವರಿಸುತ್ತವೆ.

ಅವನ ತಂದೆಯು ತೈಝೊವುವಿನಲ್ಲಿ ಒಂದು ಚಿಕ್ಕದಾದ ಚಹಾ ಮಾರಾಟದ ವ್ಯವಹಾರವನ್ನು ಹೊಂದಿದ್ದನಾದರೂ, ಅವನ ಕುಟುಂಬವು ಸಾಕಷ್ಟು ಬಡತನದಿಂದ ಕೂಡಿತ್ತು. ಹೂ ಏಳು ವರ್ಷ ವಯಸ್ಸಿನವನಿದ್ದಾಗ ಅವನ ತಾಯಿ ಮರಣಿಸಿದಳು, ಹೀಗಾಗಿ ಅವನ ಓರ್ವ ಚಿಕ್ಕಮ್ಮ ಅವನನ್ನು ಸಾಕಿ-ಬೆಳೆಸಿದಳು. ನಂತರದ ಸಾಂಸ್ಕೃತಿಕ ಕ್ರಾಂತಿಯ ಅವಧಿಯಲ್ಲಿ ಹೂನ ತಂದೆಯ ಮೇಲೆ ಬಹಿರಂಗವಾಗಿ ಆರೋಪವನ್ನು ಹೊರಿಸಲಾಯಿತು; ಈ ಘಟನೆಯು (ಕೆಳವರ್ಗದಲ್ಲಿ ಹುಟ್ಟಿದವನು ಎಂಬ ಭಾವನೆಯ ಜೊತೆಗೆ) ಹೂನ ಮೇಲೆ ಸ್ಪಷ್ಟವಾಗಿ ಒಂದು ಆಳವಾದ ಪರಿಣಾಮವನ್ನು ಬೀರಿದ್ದವು. ತನ್ನ ತಂದೆಯ ಹೆಸರಿಗೆ ಅಂಟಿದ್ದ ಆರೋಪವನ್ನು ನಿವಾರಿಸಲು ಆತ ದೃಢವಾಗಿ ಪ್ರಯತ್ನಿಸಿದ್ದ.[]

ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗ ಓರ್ವ ಸಹಜ ಪ್ರತಿಭೆಯುಳ್ಳ ವಿದ್ಯಾರ್ಥಿಯಾಗಿದ್ದ ಹೂ, ಹಾಡುಗಾರಿಕೆ ಮತ್ತು ನರ್ತನದಂಥ ಚಟುವಟಿಕೆಗಳಲ್ಲಿ ಅತ್ಯುತ್ಕೃಷ್ಟವಾಗಿರುವ ಪ್ರತಿಭೆಯನ್ನು ದಾಖಲಿಸಿದ್ದ. 1964ರಲ್ಲಿ, ಅವನಿನ್ನೂ ಬೀಜಿಂಗ್‌ನ ತ್ಸಿಂಘುವಾ ವಿಶ್ವವಿದ್ಯಾಲಯದಲ್ಲಿ ಓರ್ವ ವಿದ್ಯಾರ್ಥಿಯಾಗಿದ್ದಾಗ, ಸಾಂಸ್ಕೃತಿಕ ಕ್ರಾಂತಿಗೆ ಮುಂಚಿತವಾಗಿ ಚೀನಾದ ಕಮ್ಯೂನಿಸ್ಟ್‌ ಪಕ್ಷವನ್ನು (ಕಮ್ಯೂನಿಸ್ಟ್‌ ಪಾರ್ಟಿ ಆಫ್‌ ಚೈನಾ-CPC) ಹೂ ಸೇರಿಕೊಂಡ. ಆ ಸಮಯದಲ್ಲಿ ಆತ ತ್ಸಿಂಘುವಾ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ. 1965ರಲ್ಲಿ ಆತ ಹೈಡ್ರಾಲಿಕ್‌ ಎಂಜಿನಿಯರಿಂಗ್‌‌ ವಿಷಯದಲ್ಲಿ ಪದವಿಯನ್ನು ಪಡೆದ. ತ್ಸಿಂಘುವಾದಲ್ಲಿ, ತನ್ನ ಸಹವರ್ತಿ ವಿದ್ಯಾರ್ಥಿನಿಯಾದ ಲಿಯು ಯಾಂಗ್‌ಕಿಂಗ್‌ ಎಂಬಾಕೆಯನ್ನು ಹೂ ಭೇಟಿಮಾಡಿದ; ಆಕೆಯೀಗ ಅವನ ಹೆಂಡತಿಯಾಗಿದ್ದಾಳೆ. ಅವರು ಓರ್ವ ಮಗ ಮತ್ತು ಮಗಳನ್ನು ಹೊಂದಿದ್ದು‌, ಅವರು ಕ್ರಮವಾಗಿ ಹೂ ಹೈಫೆಂಗ್‌‌ ಮತ್ತು ಹೂ ಹೈಕಿಂಗ್‌‌ ಎಂಬ ಹೆಸರನ್ನಿಟ್ಟುಕೊಂಡಿದ್ದಾರೆ.

1968ರಲ್ಲಿ, ಗನ್ಸುವಿನಲ್ಲಿನ ತನ್ನ ಸೇವೆಗೆ ಸಂಬಂಧಿಸಿದಂತೆ ಹೂ ಸ್ವಯಂಸೇವಕನ ಪಾತ್ರವನ್ನು ವಹಿಸಿದ ಮತ್ತು ಲಿಯುಜಿಯಾಕ್ಸಿಯಾ ಜಲವಿದ್ಯುತ್‌ ಕೇಂದ್ರದ[] ನಿರ್ಮಾಣದ ಕುರಿತಾಗಿ ಕಾರ್ಯನಿರ್ವಹಿಸಿದ; ಅಷ್ಟೇ ಅಲ್ಲ, ಅದೇ ವೇಳೆಗೆ ಜಲ ಸಂಪನ್ಮೂಲಗಳು ಮತ್ತು ವಿದ್ಯುಚ್ಛಕ್ತಿ ಖಾತೆಯ ಸ್ಥಳೀಯ ಶಾಖೆಗೆ ಸಂಬಂಧಿಸಿದ ಪಕ್ಷ ವ್ಯವಹಾರಗಳನ್ನೂ ಅವನು ನಿರ್ವಹಿಸಿದ. 1969ರಿಂದ 1974ರವರೆಗೆ, ಸೈನೋಹೈಡ್ರೋ ಎಂಜಿನಿಯರಿಂಗ್‌‌ ಬ್ಯೂರೋಗಾಗಿ ಓರ್ವ ಎಂಜಿನಿಯರ್ ಆಗಿ ಹೂ ಕಾರ್ಯನಿರ್ವಹಿಸಿದ.[]

ಆರಂಭಿಕ ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

1974ರಲ್ಲಿ, ಗನ್ಸುವಿನ ನಿರ್ಮಾಣ ಇಲಾಖೆಗೆ ಓರ್ವ ಕಾರ್ಯದರ್ಶಿಯಾಗಿ ಹೂ ವರ್ಗಾಯಿಸಲ್ಪಟ್ಟ. ಅದರ ಮುಂದಿನ ವರ್ಷದಲ್ಲಿ ಉಪ ಹಿರಿಯ ಮುಖ್ಯಸ್ಥನಾಗಿ ಅವನು ಬಡತಿ ಪಡೆದ. 1980ರಲ್ಲಿ, "ನಾಲ್ಕು ಪರಿವರ್ತನೆಗಳು" ಎಂಬ ಕಾರ್ಯಕ್ರಮವನ್ನು ಡೆಂಗ್‌‌ ಕ್ಸಿಯೋಪಿಂಗ್‌‌ ಅನುಷ್ಠಾನಗೊಳಿಸಿದ; "ಹೆಚ್ಚು ಕ್ರಾಂತಿಕಾರಿಗಳಾಗಿರುವ, ತರುಣರಾಗಿರುವ, ಸಾಕಷ್ಟು ಚೆನ್ನಾಗಿ ತಿಳಿದುಕೊಂಡಿರುವ, ಮತ್ತು ಹೆಚ್ಚಿನ ವಿಶೇಷಜ್ಞತೆಯನ್ನು ಪಡೆದುಕೊಂಡಿರುವ" ಕಮ್ಯೂನಿಸ್ಟ್‌ ನಾಯಕರನ್ನು ರೂಪಿಸುವುದರ ಕಡೆಗೆ ಸದರಿ ಕಾರ್ಯಕ್ರಮವು ಗುರಿಯಿರಿಸಿಕೊಂಡಿತ್ತು. CPC ಗನ್ಸು ಸಮಿತಿಯ ಮೊದಲ ಕಾರ್ಯದರ್ಶಿಯಾದ (ಗನ್ಸುವಿನ ಗೌರ್ನರ್‌) ಸಾಂಗ್‌ ಪಿಂಗ್‌ ಎಂಬಾತ, ಪಕ್ಷದ ತರುಣ ಸದಸ್ಯರಿಗಾಗಿ ನಡೆಸಿದ ಈ ರಾಷ್ಟ್ರ-ವ್ಯಾಪಿ ಶೋಧಕ್ಕೆ ಪ್ರತಿಕ್ರಿಯೆಯೆಂಬಂತೆ ಹೂ ಜಿಂಟಾವೊವನ್ನು ಬೆಳಕಿಗೆ ತಂದ ಮತ್ತು ಹಲವಾರು ಶ್ರೇಣಿಗಳಲ್ಲಿ ಅವನಿಗೆ ಬಡತಿ ನೀಡಿ ಆಯೋಗದ ಉಪಮುಖ್ಯಸ್ಥನ ಸ್ಥಾನಕ್ಕೆ ಏರಿಸಿದ.[] ಸಾಂಗ್‌‌ನ ಮತ್ತೋರ್ವ ಆಶ್ರಿತನಾದ ವೆನ್‌ ಜಿಯಾಬಾವೊ ಎಂಬಾತ ಸಹ ಇದೇ ಸಮಯದಲ್ಲಿ ಪ್ರಸಿದ್ಧನಾದ.

1982ರಲ್ಲಿ, ಕಮ್ಯೂನಿಸ್ಟ್‌ ಯೂತ್‌ ಲೀಗ್‌ನ ಗನ್ಸು ಶಾಖಾ ಕಾರ್ಯದರ್ಶಿಯ ಸ್ಥಾನಕ್ಕೆ ಹೂ ಬಡತಿ ಪಡೆದ ಮತ್ತು ಆಲ್‌-ಚೈನಾ ಯೂತ್‌ ಫೆಡರೇಷನ್‌‌‌ನ ನಿರ್ದೇಶಕನಾಗಿ ನೇಮಿಸಲ್ಪಟ್ಟ.[೧೦][೧೧] ಅವನ ಮಾರ್ಗದರ್ಶಿಯಾದ ಸಾಂಗ್‌ ಪಿಂಗ್‌ನನ್ನು ಚೀನಾದ ಕಮ್ಯೂನಿಸ್ಟ್‌ ಪಕ್ಷದ ಸಂಘಟನೆಯ ನಿರ್ವಾಹಕನಾಗಿ ಬೀಜಿಂಗ್‌ಗೆ ವರ್ಗಾಯಿಸಲಾಯಿತು, ಮತ್ತು ಹಿರಿಯ ಮೂಲಪಡೆಗಳ ಶಿಫಾರಸು, ಉಮೇದುವಾರಿಕೆ ಮತ್ತು ಬಡತಿಯ ಉಸ್ತುವಾರಿಯನ್ನೂ ಅವನಿಗೆ ಹೊರಿಸಲಾಯಿತು. ಹೂ ಯಾವೋಬ್ಯಾಂಗ್‌ ಮತ್ತು ಡೆಂಗ್‌‌ ಕ್ಸಿಯೋಪಿಂಗ್‌ರವರ ಬೆಂಬಲದಿಂದಾಗಿ ಪಕ್ಷದಲ್ಲಿ ಹೂಗೆ ಒಂದು ಉಜ್ವಲ ಭವಿಷ್ಯದ ಭರವಸೆಯು ದೊರಕಿತು. ಸಾಂಗ್‌ ಪಿಂಗ್‌ನ ಸಲಹೆಯ ಮೇರೆಗೆ, ಪಕ್ಷದ ಕೇಂದ್ರೀಯ ಪ್ರಾಧಿಕಾರಗಳು 1982ರಲ್ಲಿ ಪಕ್ಷದ ಕೇಂದ್ರೀಯ ಶಾಲೆಯಲ್ಲಿ ಅಧ್ಯಯನ ನಡೆಸುವುದಕ್ಕಾಗಿ ಹೂನನ್ನು ಬೀಜಿಂಗ್‌ಗೆ ಆಹ್ವಾನಿಸಿದವು.[೧೨] ಇದಾದ ಕೆಲವೇ ದಿನಗಳಲ್ಲಿ, ಅವನು ಬೀಜಿಂಗ್‌ಗೆ ವರ್ಗಾಯಿಸಲ್ಪಟ್ಟ ಮತ್ತು ಕಮ್ಯೂನಿಸ್ಟ್‌ ಯೂತ್‌ ಲೀಗ್‌ ಕೇಂದ್ರ ಸಮಿತಿಯ ("CY ಸೆಂಟ್ರಲ್‌") ಆಡಳಿತಾಧಿಕಾರಿಯಾಗಿ ನೇಮಿಸಲ್ಪಟ್ಟ. ಎರಡು ವರ್ಷಗಳ ನಂತರ, CY ಸೆಂಟ್ರಲ್‌ನ ಮೊದಲ ಕಾರ್ಯದರ್ಶಿಯಾಗಿ ಹೂ ಬಡತಿ ಪಡೆದ, ಹಾಗೂ ಈ ರೀತಿಯಲ್ಲಿ ಅದರ ವಾಸ್ತವಿಕ ನಾಯಕನೆನಿಸಿಕೊಂಡ. ಯೂತ್‌ ಲೀಗ್‌ನಲ್ಲಿನ ತನ್ನ ಅಧಿಕಾರಾವಧಿಯ ಸಂದರ್ಭದಲ್ಲಿ, ಹೂ ಯಾವೋಬ್ಯಾಂಗ್‌ಗೆ ಹೂ ಬೆಂಗಾವಲಾಗಿ ನಿಂತ; ಹೂ ಯಾವೋಬ್ಯಾಂಗ್ ಆಗ CPCಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ದೇಶದ ಉದ್ದಗಲಗಳನ್ನೆಲ್ಲ ಸಂದರ್ಶಿಸುತ್ತಿದ್ದ. ಯೂತ್‌ ಲೀಗ್ ವತಿಯಿಂದ ಬಂದಿದ್ದು ಸ್ವತಃ ಓರ್ವ ನುರಿತವನಾಗಿದ್ದ ಹೂ ಯಾವೋಬ್ಯಾಂಗ್, ಹೂನ ಒಡನಾಟದಾದ್ಯಂತ ತನ್ನ ತಾರುಣ್ಯವು ಸಾಗಿದ್ದನ್ನು ಸ್ಮರಣೆಮಾಡುತ್ತಾನೆ.

ಗ್ಯುಝೋವುವಿನ ಪಕ್ಷದ ಸಮಿತಿಯ ಕಾರ್ಯದರ್ಶಿ

[ಬದಲಾಯಿಸಿ]

ಹೂ ಜಿಂಟಾವೊ ಚೀನಾದ ಕಮ್ಯೂನಿಸ್ಟ್‌ ಪಕ್ಷದ ಪ್ರಾಂತೀಯ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲೆಂದು, 1985ರಲ್ಲಿ ಅವನನ್ನು ಸ್ವಲ್ಪ ಕಾಲದವರೆಗೆ ಗ್ಯುಝೋವುವಿಗೆ ಹೂ ಯಾವೋಬ್ಯಾಂಗ್‌ ವರ್ಗಾಯಿಸಿದ.[೧೩] ಹಿನ್ನೀರು ಪ್ರಾಂತದ ಆರ್ಥಿಕತೆಯನ್ನು ಸುಧಾರಿಸಲು ಹೂ ಪ್ರಯತ್ನಿಸಿದ, ಮತ್ತು ಜನಜನಿತವಾಗುವ ರೀತಿಯಲ್ಲಿ ಅದರ ಎಂಬತ್ತಾರು ಜಿಲ್ಲೆಗಳಿಗೆ ಭೇಟಿ ನೀಡಿದ.[೧೪] ಗ್ಯುಝೋವುವಿನಲ್ಲಿ ಇರುವಾಗ, ಬೀಜಿಂಗ್‌ನ ಮಾರ್ಗದರ್ಶಕ ಸೂಚನೆಗಳನ್ನು ಅನುಸರಿಸುವುದಕ್ಕೆ ಸಂಬಂಧಿಸಿ ಹೂ ಜಾಗರೂಕನಾಗಿದ್ದ ಮತ್ತು "ಬಿಗುಮಾನದವನಾಗಿ" ಇರುತ್ತಾನೆ ಎಂಬಂಥ ಒಂದು ಹೆಸರನ್ನು ಪಡೆದಿದ್ದ; ಕಾರ್ಯನೀತಿಯ ವಿಷಯಗಳ ಕುರಿತಾಗಿ ತನ್ನ ಅಭಿಪ್ರಾಯಗಳನ್ನು ಸಾರ್ವಜನಿಕವಾಗಿ ಅವನು ವ್ಯಕ್ತಪಡಿಸುತ್ತಿದ್ದುದೇ ಅಪರೂಪ ಎನ್ನಬೇಕು.[೧೪] ಸಮಗ್ರತೆ ಮತ್ತು ಪ್ರಾಮಾಣಿಕತೆಯನ್ನು ಒಳಗೊಂಡಿರುವ ಓರ್ವ ಅಧಿಕಾರಿಯಾಗಿ ಹೂ ಸಾಮಾನ್ಯವಾಗಿ ಪರಿಗಣಿಸಲ್ಪಡುತ್ತಿದ್ದನಾದರೂ, ಅವನ ಪೂರ್ವವರ್ತಿಯಾದ ಝು ಹೌಜ್‌‌‌ಗೆ ಕೆಲವೊಂದು ಸ್ಥಳೀಯರು ಆದ್ಯತೆ ನೀಡಿದರು. ಪ್ರಜಾಪ್ರಭುತ್ವದ ಗೋಡೆಗೆ (ಡೆಮಾಕ್ರಸಿ ವಾಲ್‌ಗೆ) ಸಮಾನಾಂತರವಾಗಿದ್ದ ಸ್ಥಳೀಯ ವಿದ್ಯಾರ್ಥಿಗಳ ಪ್ರತಿಭಟನೆಯನ್ನು 1987ರಲ್ಲಿ ಹೂ ಜಿಂಟಾವೊ ಎಚ್ಚರಿಕೆಯಿಂದ ನಿಭಾಯಿಸಿದ; ಆದರೆ ಇದೇ ವೇಳೆಗೆ, ಬೀಜಿಂಗ್‌ನಲ್ಲಿ ನಡೆದ ಇದೇರೀತಿಯ ಪ್ರತಿಭಟನೆಗಳಿಂದಾಗಿ ಹೂ ಯಾವೋಬ್ಯಾಂಗ್‌ ಬಲವಂತವಾಗಿ ರಾಜೀನಾಮೆಯನ್ನು ನೀಡಬೇಕಾಗಿ ಬಂತು.

ಟಿಬೆಟ್‌ನಲ್ಲಿನ ಅಧಿಕಾರಾವಧಿ

[ಬದಲಾಯಿಸಿ]

ಅವನ ಆಶ್ರಯದಾತನಾದ ಹೂ ಯಾವೋಬ್ಯಾಂಗ್‌ ರಾಜತಾಂತ್ರಿಕ ರಂಗಸ್ಥಲದಿಂದ ನಿರ್ಗಮಿಸಿದ್ದು ಹೂ ಜಿಂಟಾವೊಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ ಎಂದು ಆರಂಭಿಕವಾಗಿ ಪರಿಗಣಿಸಲಾಗಿತ್ತು. ಪದಚ್ಯುತಿಗೊಳಿಸಲ್ಪಟ್ಟ ಸುಧಾರಕನನ್ನು ಟೀಕಿಸುವುದಕ್ಕೆ ವಿಫಲಗೊಂಡಿದ್ದಕ್ಕಾಗಿ ಪಕ್ಷದ ಹಿರಿಯರಿಂದ ಅವನು ಟೀಕೆಗಳನ್ನು ಎದುರಿಸಬೇಕಾಯಿತು.[೧೫] ಟಿಬೆಟಿಯನ್‌ ಸ್ವಯಮಾಧಿಕಾರದ ಪ್ರದೇಶಕ್ಕೆ ಸಂಬಂಧಿಸಿದ ಪಕ್ಷದ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲೆಂದು 1988ರಲ್ಲಿ ಹೂ ವರ್ಗಾಯಿಸಲ್ಪಟ್ಟ; ಇದು ಸದರಿ ಅಶಾಂತ ಪ್ರದೇಶದ ಅಗ್ರಪಂಕ್ತಿಯ ಸ್ಥಾನಮಾನವಾಗಿತ್ತು. ಇದರ ಜೊತೆಗೆ ಪೀಪಲ್‌'ಸ್‌ ಲಿಬರೇಷನ್‌ ಆರ್ಮಿಯ ಸ್ಥಳೀಯ ಘಟಕಗಳ ರಾಜತಾಂತ್ರಿಕ ಮುಖ್ಯಾಧಿಕಾರಿಯ ಪಾತ್ರವನ್ನೂ ಅವನು ವಹಿಸಿಕೊಂಡ. ಈ ಪ್ರದೇಶದಲ್ಲಿನ ಸರ್ಕಾರದ ಕಾರ್ಯನೀತಿಯನ್ನು ಬಹಳಷ್ಟು ಮಂದಿ ಟಿಬೆಟಿಯನ್ನರು ಬಹಳ ಕಾಲದಿಂದಲೂ ವಿರೋಧಿಸಿಕೊಂಡು ಬಂದಿದ್ದರು ಮತ್ತು ಕ್ಷೋಭೆ ಹಾಗೂ ಜನಾಂಗೀಯ ತಿಕ್ಕಾಟಗಳು, ಅದರಲ್ಲೂ ನಿರ್ದಿಷ್ಟವಾಗಿ ಹಾನ್‌ ಚೀನಿಯರ-ವಿರೋಧಿ ಭಾವನೆಗಳು ಸ್ಥಳೀಯ ಟಿಬೆಟಿಯನ್ನರ ನಡುವಲ್ಲಿ ಕುದಿಯುತ್ತಿದ್ದವು. 1987ರಿಂದಲೂ ಸಣ್ಣ ಪ್ರಮಾಣದ ಘರ್ಷಣೆಗಳು ಸಂಭವಿಸುತ್ತಿದ್ದವು. ಕ್ಷೋಭೆಯ ಪ್ರಮಾಣವು ಬೆಳೆದಾಗ, ಮತ್ತಷ್ಟು ಶಾಂತಿಭಂಗವನ್ನು ಮಾಡುವುದರ ವಿರುದ್ಧ ಎಚ್ಚರಿಸುವುದರ ಒಂದು ಪ್ರಯತ್ನವಾಗಿ 1989ರ ಫೆಬ್ರುವರಿಯಲ್ಲಿ ಸುಮಾರು 1,700ರಷ್ಟು ಸಂಖ್ಯೆಯ ಚೀನಾದ ಸಶಸ್ತ್ರ ಆರಕ್ಷಕರನ್ನು ಲಾಸಾದೊಳಗೆ ನಿಯೋಜಿಸುವ ಮೂಲಕ ಅದಕ್ಕೆ ಹೂ ಪ್ರತಿಕ್ರಿಯಿಸಿದ.[೧೬] 1959ರ ಟಿಬೆಟಿಯನ್‌ ಬಂಡಾಯದ 30ನೇ ವಾರ್ಷಿಕೋತ್ಸವಕ್ಕೆ ಐದು ದಿನಗಳು ಮುಂಚಿತವಾಗಿ 1989ರ ಮಾರ್ಚ್‌ 5ರಂದು, ಹೆಚ್ಚಳಗೊಂಡ ಘರ್ಷಣೆಗಳು ಲಾಸಾದ ಮುಖ್ಯಭಾಗದಲ್ಲಿ ಗಂಭೀರ ಸ್ವರೂಪದ ದೊಂಬಿಗಳಾಗಿ ಬೆಳೆದವು.[೧೭] ಅದಾದ ನಂತರ ಸಂಭವಿಸಿದ್ದೇ ಒಂದು ವಿವಾದದ ವಿಷಯವೆನಿಸಿಕೊಂಡಿದೆ: ಆರಕ್ಷಕರು ತಮ್ಮೆಡೆಗೆ ಮನಸೋ ಇಚ್ಛೆಯಿಂದ ಗುಂಡು ಹಾರಿಸಿದರು ಎಂಬುದಾಗಿ ದೊಂಬಿಗಾರರು ಆರೋಪಿಸಿದರೆ, ತಮ್ಮ ಆತ್ಮರಕ್ಷಣೆಗಾಗಿ ತಾವು ಆ ರೀತಿ ವರ್ತಿಸಬೇಕಾಗಿ ಬಂತು ಎಂಬುದು ಆರಕ್ಷಕರು ಸಮರ್ಥನೆಯಾಗಿತ್ತು. ಇದರ ಜೊತೆಗೆ, ಸಾಯಂಕಾಲದ ತಡವೇಳೆಯವರೆಗೂ ಪ್ರತಿಭಟನಾಕಾರರ ಮೇಲೆ ನಿರ್ಬಂಧಗಳನ್ನು ವಿಧಿಸುವುದಕ್ಕೆ ಸಂಬಂಧಿಸಿದ ತನ್ನ ಆದೇಶಗಳನ್ನು ಹೂ ವಿಳಂಬ ಮಾಡಿದ ಎಂಬ ಊಹನವೂ ಅಲ್ಲಿ ಕೇಳಿಬಂದಿತ್ತು; ಪರಿಸ್ಥಿತಿಯು ಹತೋಟಿಯನ್ನು ಮೀರಿ ಹಠಾತ್ತನೆ ಹೆಚ್ಚಾಗುತ್ತಿದ್ದ ಕಾರಣದಿಂದಾಗಿ, ಸಾಯಂಕಾಲದ ತಡವೇಳೆಯ ಹೊತ್ತಿಗೆ ಆರಕ್ಷಕರ ಮುಖ್ಯಸ್ಥನು ಬಲವಂತವಾಗಿ ಈ ಕ್ರಮವನ್ನು ಕೈಗೊಳ್ಳಬೇಕಾಗಿ ಬಂತು. ಮರುದಿನದ ಆರಂಭಿಕ ಅವಧಿಯವರೆಗೂ ಪ್ರತಿಭಟನಾಕಾರರನ್ನು ನಿಗ್ರಹಿಸಿಡಲಾಯಿತು, ಮತ್ತು ಮಾರ್ಚ್ 8ರಂದು ಸೈನಿಕ ಶಾಸನವನ್ನು ಘೋಷಿಸುವಂತೆ ಬೀಜಿಂಗ್‌ನ್ನು ಹೂ ಕೇಳಿಕೊಂಡ.[೧೮]

ಮಾರ್ಚ್‌ 5ರಂದು ನಡೆದ ಪ್ರತಿಭಟನೆಗಳು ಮತ್ತು ದೊಂಬಿಗಳಲ್ಲಿನ ಹೂನ ಪಾತ್ರವು ಎಂದಿಗೂ ಸ್ಪಷ್ಟಪಡಿಸಲ್ಪಡಲಿಲ್ಲ. ಪ್ರತಿಭಟನಾಕಾರರ ವಿರುದ್ಧದ ಆರಕ್ಷಕ ಪಡೆಗಳ ಬಳಕೆಯನ್ನು ಹೂ ಕನಿಷ್ಟಪಕ್ಷ ಸೂಚ್ಯವಾಗಿ ಅನುಮೋದಿಸಬೇಕಿತ್ತು ಎಂಬುದು ಸಾಮಾನ್ಯ ಶಿಷ್ಟಾಚಾರವಾಗಿದೆಯಾದರೂ, ಮಾರ್ಚ್‌ 5ರಾದ್ಯಂತ ಅವನು ವಾಸ್ತವವಾಗಿ ಆದೇಶಗಳನ್ನು ನೀಡಿದನೇ ಎಂಬುದು ಒಂದು ಚರ್ಚಾವಿಷಯವಾಗಿದೆ.[೧೯] ಇದರ ಜೊತೆಗೆ, ಪರಿಸ್ಥಿತಿಯು ಹೀಗೆಯೇ ಮುಂದುವರಿದಲ್ಲಿ ಪಡೆಗಳು ಸಂಪೂರ್ಣ ಸಿದ್ಧವಾಗಿರಬೇಕಾಗುತ್ತದೆ ಎಂಬುದಕ್ಕಾಗಿ ಚೆಂಗ್ಡು ಸೇನಾ ಪ್ರದೇಶದೊಂದಿಗೆ ಹೂ ಸಮನ್ವಯ ಸಾಧಿಸುತ್ತಿದ್ದ ಎಂದು ಜಾನ್‌ ತ್ಕಾಸಿಕ್‌ ಉಲ್ಲೇಖಿಸುತ್ತಾನೆ.[೧೬] ಕೇವಲ ಮೂರು ತಿಂಗಳುಗಳ ನಂತರ ಟಿಯಾನನ್‌ಮೆನ್‌ ಚೌಕದಲ್ಲಿ ನಡೆದ ತೀವ್ರವಾದಿಗಳು ಮತ್ತು ವಿದ್ಯಾರ್ಥಿಗಳ ನಿಗ್ರಹಕ್ಕೆಂದು ಆರಕ್ಷಕ ಪಡೆಯನ್ನು ಬಳಸಿದ್ದನ್ನು ಕಂಡ ಕೆಲವೊಂದು ರಾಜತಾಂತ್ರಿಕ ವಿಶ್ಲೇಷಕರು ಇದನ್ನು ಹೂನ ನಿರ್ದಯ ಕ್ರಮ ಎಂಬುದಾಗಿ ವಿಶ್ಲೇಷಿಸಿದ್ದಾರೆ. ಜೂನ್‌ 4ರಂದು PLAಗೆ ಸಂಬಂಧಿಸಿದಂತೆ "ಪ್ರೇರಣೆ"ಯನ್ನು ಹೂ ಒದಗಿಸಿದನೇ ಇಲ್ಲವೇ ಎಂಬುದು ಒಂದು ಚರ್ಚಾವಿಷಯವಾಗಿದೆಯಾದರೂ, ಲಾಸಾದಲ್ಲಿ ಹೂ ಕೈಗೊಂಡ ಕ್ರಮಗಳು ಪಕ್ಷಾಧಿಕಾರದ ಮೇಲ್ದರ್ಜೆಯ ಅಧಿಕಾರ ವರ್ಗಗಳಲ್ಲಿ ಅವನೆಡೆಗೆ ಅಭೂತಪೂರ್ವ ಗಮನವನ್ನು ದೊರಕಿಸಿದವು, ಹಾಗೂ ಸಾರ್ವಭೌಮಾಧಿಕಾರವುಳ್ಳ ನಾಯಕನಾದ ಡೆಂಗ್‌‌ ಕ್ಸಿಯೋಪಿಂಗ್‌‌ ಈ ವರ್ಗದಲ್ಲಿ ಸೇರಿದ್ದ ಎಂಬುದು ಸ್ಪಷ್ಟವಾಗಿತ್ತು. ಟ್ಯಾಂಕುಗಳು ಟಿಯಾನನ್‌ಮೆನ್‌ ಚೌಕದೊಳಗೆ ಸಾಗಿದಾಗ, ಕೇಂದ್ರದ ಅಧಿಕಾರಿ ವರ್ಗಗಳಿಗೆ ತಮ್ಮ ಬೆಂಬಲವನ್ನು ಘೋಷಿಸಿದ ಮೊದಲ ಪ್ರಾದೇಶಿಕ ನಾಯಕರ ಪೈಕಿ ಹೂ ಒಬ್ಬನಾಗಿದ್ದ.[೧೬] 1990ರ ಜೂನ್‌ನಲ್ಲಿ ತೀವ್ರ-ಮಟ್ಟದ ಕಾಯಿಲೆಯನ್ನು ಅನುಭವಿಸಿದ ಹೂ ಬೀಜಿಂಗ್‌ಗೆ ಹಿಂದಿರುಗಿದನಾದರೂ, ಮತ್ತೆ ಎರಡು ವರ್ಷಗಳವರೆಗೆ ತನ್ನ ಸ್ಥಾನದಲ್ಲಿ ಉಳಿದುಕೊಂಡ. ಈ ಅವಧಿಯಲ್ಲಿ ಅವನು ಅಲ್ಪಮಟ್ಟದ ಸಾಧನೆಯನ್ನು ಮೆರೆದ. ಆದರೆ ಬೀಜಿಂಗ್‌ಗೆ ಅವನು ನಿರ್ಗಮಿಸಿದ್ದನ್ನು ಚೀನಾದ ರಾಜಕೀಯದ ನಡುಮಡಿಕೆಗೆ ಅಥವಾ ಕೇಂದ್ರಭಾಗಕ್ಕೆ ಹಿಂದಿರುಗುವುದರ ಒಂದು ಉಪಾಯ ಅಥವಾ ಸಾಧನವಾಗಿ ನೋಡಲಾಯಿತು; ಹೀಗಾಗಿ ಅವನು ಸಮರ್ಥಿಸಿಕೊಂಡಂತೆ ಅವನು ನಿಜವಾಗಿಯೂ ಅಸ್ವಸ್ಥನಾಗಿದ್ದನೇ ಅಥವಾ ಇಲ್ಲವೇ ಎಂಬುದರ ಕುರಿತಾಗಿ ಒಂದಷ್ಟು ಸಂದೇಹಗಳು ಹುಟ್ಟಿಕೊಳ್ಳಲು ಅದು ಕಾರಣವಾಯಿತು.[೧೬]

ಉಮೇದುವಾರಿಕೆ

[ಬದಲಾಯಿಸಿ]

1992ರಲ್ಲಿ CPCಯ 14ನೇ ರಾಷ್ಟ್ರೀಯ ಸಮಾವೇಶವು ಪ್ರಾರಂಭವಾಗುವುದಕ್ಕೆ ಮುಂಚಿತವಾಗಿ, ಡೆಂಗ್‌‌ ಮತ್ತು ಚೆನ್‌ ಯುನ್‌‌‌ರನ್ನು ಒಳಗೊಂಡಂತೆ ಪಕ್ಷದ ಹಿರಿಯ ನಾಯಕರು ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಗಾಗಿ ಉಮೇದುವಾರರನ್ನು ಆರಿಸುವ ಪ್ರಕ್ರಿಯೆಯಿತ್ತು; ಚೀನಾದ ಕಮ್ಯೂನಿಸ್ಟ್‌ ಪಕ್ಷದ ಎರಡನೇ-ಪೀಳಿಗೆ ನಾಯಕರು (ಡೆಂಗ್‌‌, ಚೆನ್‌, ಲೀ ಕ್ಸಿಯಾನ್ನಿಯನ್‌, ವಾಂಗ್‌ ಝೆನ್‌, ಇತ್ಯಾದಿ) ಎಂಬುದಾಗಿ ಕರೆಯಲ್ಪಟ್ಟವರಿಂದ ಮೂರನೇ-ಪೀಳಿಗೆಯ ನಾಯಕರಿಗೆ (ಜಿಯಾಂಗ್‌ ಝೆಮಿನ್‌, ಲೀ ಪೆಂಗ್‌, ಕ್ವಿಯೋ ಷಿ ಇತ್ಯಾದಿ) ಅಧಿಕಾರದ ಒಂದು ಸರಾಗವಾದ ಬದಲಾವಣೆಯು ನಡೆಯುವುದನ್ನು ಖಾತ್ರಿಪಡಿಸಲು ಅವರು ಈ ಕ್ರಮಕ್ಕೆ ಮುಂದಾಗಬೇಕಿತ್ತು. ಮುಂದಿನ ಭವಿಷ್ಯದ ಬದಲಾವಣೆಯೊಂದಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಉಮೇದುವಾರನನ್ನು ತಾವು ಪರಿಗಣಿಸಬೇಕಾಗಿದ್ದು, ಹೀಗೆ ಆರಿಸಲು ತಕ್ಕುದಾಗಿರುವಂಥವರು ನಾಯಕರ ಮುಂದಿನ ಪೀಳಿಗೆಯನ್ನು ಪ್ರತಿನಿಧಿಸಲು ಅನುವಾಗುವಂತೆ ಐವತ್ತು ವರ್ಷಕ್ಕಿಂತ ಕೆಳಗಿನವರಾಗಿರಬೇಕು ಎಂಬುದಾಗಿಯೂ ಡೆಂಗ್‌‌ ಪ್ರಸ್ತಾವಿಸಿದ.[೨೦] ಸಂಘಟನೆಯ ಮುಖ್ಯಸ್ಥನಾಗಿ ಸಾಂಗ್‌‌, ಭವಿಷ್ಯ ನಾಯಕನೊಬ್ಬನ ನಿರೀಕ್ಷೆಗೆ ಸಂಬಂಧಿಸಿದಂತೆ ಹೂನನ್ನು ಓರ್ವ ಮಾದರಿ ಉಮೇದುವಾರನನ್ನಾಗಿ ಶಿಫಾರಸು ಮಾಡಿದ. ಇದರ ಪರಿಣಾಮವಾಗಿ, ತನ್ನ 50ನೇ ಹುಟ್ಟುಹಬ್ಬಕ್ಕೆ ಕೆಲವೇ ಅವಧಿಗೆ ಮುಂಚಿತವಾಗಿ ಹೂ ಜಿಂಟಾವೊ ಏಳು-ಸದಸ್ಯರ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಅತಿಕಿರಿಯ ಸದಸ್ಯ ಎನಿಸಿಕೊಂಡ, ಮತ್ತು 1949ರಲ್ಲಿ CPCಯು ಅಧಿಕಾರಕ್ಕೆ ಬಂದಾಗಿನಿಂದ ಇರುವ ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಎರಡನೇ ಅತಿಕಿರಿಯ ಸದಸ್ಯ ಎನಿಸಿಕೊಂಡ.

1993ರಲ್ಲಿ, CPC ಕೇಂದ್ರ ಸಮಿತಿಯ ಆಡಳಿತ ಕಚೇರಿಯ ಅಧಿಕಾರವನ್ನು ಹೂ ವಹಿಸಿಕೊಂಡ, ಇದು ಕೇಂದ್ರ ಸಮಿತಿಯ ದೈನಂದಿನ ಕಾರ್ಯಾಚರಣೆಗಳ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಿತ್ತು; ಇದರ ಜೊತೆಗೆ ಪಕ್ಷದ ಕೇಂದ್ರೀಯ ಶಾಲೆಯ ಉಸ್ತುವಾರಿಯನ್ನೂ ಅವನು ವಹಿಸಿಕೊಂಡ, ಇದು CPCಯ ಹಿರಿಯ ಮೂಲಪಡೆಗಳ ಮಧ್ಯದಿಂದ ತನ್ನದೇ ಸ್ವಂತದ ಬೆಂಬಲಿಗರನ್ನು ಬೆಳೆಸಲು ಅವನಿಗೆ ಅನುಕೂಲಕರವಾಗಿ ಪರಿಣಮಿಸಿತು. CPCಯ ಸೈದ್ಧಾಂತಿಕ ಕಾರ್ಯದ ಉಸ್ತುವಾರಿಯನ್ನೂ ಹೂಗೆ ವಹಿಸಲಾಯಿತು. ಜಿಯಾಂಗ್‌ನ ಅಗ್ರ ಪಟ್ಟಾಧಿಕಾರಿ ಎಂಬುದಾಗಿ ಹೂ ಪರಿಗಣಿಸಲ್ಪಟ್ಟಿದ್ದನಾದರೂ, ಕೇಂದ್ರೀಕರಿಸಲ್ಪಟ್ಟ ಗಮನ ಅಥವಾ ವ್ಯಾಪಕ ಪ್ರಚಾರವು ಜಿಯಾಂಗ್‌ ಕುರಿತಾಗಿ ಇರುವಂತೆ ಖಾತ್ರಿಪಡಿಸುವಲ್ಲಿ ಅವನು ಯಾವಾಗಲೂ ಮಹತ್ತರವಾದ ಎಚ್ಚರಿಕೆಯನ್ನು ತೆಗೆದುಕೊಂಡಿದ್ದ. 1998ರ ಅಂತ್ಯಭಾಗದಲ್ಲಿ, "ಮೂರು ಒತ್ತಡಗಳು"– (ಥ್ರೀ ಸ್ಟ್ರೆಸಸ್‌) ಎಂಬ ಹೆಸರಿನ, ಜಿಯಾಂಗ್‌ನ ಜನಪ್ರಿಯವಲ್ಲದ ಆಂದೋಲನಕ್ಕೆ ಹೂ ಪ್ರಚಾರ ನೀಡಿದ; "ಒತ್ತಡದ ಅಧ್ಯಯನ, ಒತ್ತಡದ ರಾಜಕೀಯ, ಮತ್ತು ಒತ್ತಡದ ಆರೋಗ್ಯಕರ ಪ್ರವೃತ್ತಿಗಳು"– ಎಂಬ ಅಂಶಗಳು ಈ ಆಂದೋಲನದಲ್ಲಿ ಸೇರಿದ್ದು, ಅವನ್ನು ಉತ್ತೇಜಿಸಿ ಪ್ರಚಾರ ನೀಡಲೆಂದು ಹೂ ಭಾಷಣಗಳನ್ನು ನೀಡಿದ. 2001ರಲ್ಲಿ, ಜಿಯಾಂಗ್‌ನ ಮೂರು ಪ್ರತಿನಿಧಿತ್ವಗಳ ಸಿದ್ಧಾಂತವನ್ನು ಅವನು ಜಾಹೀರುಮಾಡಿದ; ಈ ಸಿದ್ಧಾಂತವು ಇತರ ಮಾರ್ಕ್ಸ್‌ವಾದಿ ಸಿದ್ಧಾಂತಿಗಳ ರೀತಿಯಲ್ಲಿಯ ಅದೇ ಮಟ್ಟದಲ್ಲಿ ಅವನಿಗೂ ಸ್ಥಾನ ಕಲ್ಪಿಸುತ್ತದೆ ಎಂದು ಆಶಿಸಿದ್ದ.[೨೧] ಇದರ ಪರಿಣಾಮವಾಗಿ, ಅತಿಗೆ-ಹೋಗದ, ವಿನಯಶೀಲನಾಗಿರುವ, ಮತ್ತು ಒಕ್ಕೂಟಗಳ ರೂಪುಗೊಳ್ಳುವಿಕೆಯಲ್ಲಿ ನಿಪುಣನಾಗಿರುವಂಥ ಒಂದು ಅನಿಸಿಕೆಯನ್ನು ಅವನು ಸಾರ್ವಜನಿಕರಲ್ಲಿ ಉಳಿಸಿದ.[ಸೂಕ್ತ ಉಲ್ಲೇಖನ ಬೇಕು] 1998ರಲ್ಲಿ, ಹೂ ಚೀನಾದ ಉಪಾಧ್ಯಕ್ಷನಾದ, ಮತ್ತು ವಿದೇಶಾಂಗ ವ್ಯವಹಾರಗಳಲ್ಲಿ ಒಂದು ಹೆಚ್ಚು ಸಕ್ರಿಯವಾದ ಪಾತ್ರವನ್ನು ಹೂ ವಹಿಸಬೇಕು ಎಂಬುದಾಗಿ ಜಿಯಾಂಗ್‌ ಬಯಸಿದ. 1999ರಲ್ಲಿ, ಬೆಲ್‌ಗ್ರೇಡ್‌ನಲ್ಲಿರುವ ಚೀನಾದ ರಾಯಭಾರಿ ನಿವಾಸದ ಮೇಲೆ NATO ಬಾಂಬ್‌ ದಾಳಿಯಾದ ಸಂದರ್ಭದಲ್ಲಿ ಹೂ ಚೀನಾದ ಪ್ರಧಾನ ಧ್ವನಿಯಾಗಿ ಹೊರಹೊಮ್ಮಿದ.

2002ರಲ್ಲಿ ನಡೆದ CPCಯ 16ನೇ ರಾಷ್ಟ್ರೀಯ ಸಮಾವೇಶದಲ್ಲಿ ಬದಲಾವಣೆಯು ಅಂತಿಮವಾಗಿ ಕೈಗೂಡಿದಾಗ, ಅಧಿಕಾರ-ಕೇಂದ್ರವನ್ನು ಬಿಡಲು ಜಿಯಾಂಗ್‌ಗೆ ಇಷ್ಟವಿರಲಿಲ್ಲ. ವೂ ಬಂಗುವೊ, ಜಿಯಾ ಕ್ವಿಂಗ್ಲಿನ್‌, ಝೆಂಗ್‌ ಕ್ವಿಂಗ್‌ಹಾಂಗ್‌, ಹುವಾಂಗ್‌ ಜು ಮತ್ತು ಲೀ ಚಾಂಗ್‌ಚುನ್‌ ಮೊದಲಾದವರನ್ನು ಒಳಗೊಂಡಂತೆ "ಶಾಂಘೈ ಕೂಟ" ಎಂದು ಕರೆಯಲ್ಪಡುವ ಕೂಟದ ಅನೇಕ ಸದಸ್ಯರನ್ನು ಅವನು ಪಾಲಿಟ್‌ಬ್ಯೂರೋದ ಸಿಬ್ಬಂದಿಯನ್ನಾಗಿಸಿದ್ದಾನೆ ಎಂದು ವ್ಯಾಪಕವಾಗಿ ನಂಬಲಾಗಿತ್ತು[ಸೂಕ್ತ ಉಲ್ಲೇಖನ ಬೇಕು], ಮತ್ತು ಜಿಯಾಂಗ್‌ ನೇಪಥ್ಯದಲ್ಲಿ ಹತೋಟಿಯನ್ನು ಹೊಂದಿದ್ದಾನೆ ಎಂಬುದನ್ನು ಇದು ಖಾತ್ರಿಪಡಿಸುವಂತಿತ್ತು. ಕೇಂದ್ರೀಯ ಸೇನಾ ಆಯೋಗದ ಸಭಾಪತಿಯ ಸ್ಥಾನವನ್ನು ಜಿಯಾಂಗ್‌ ಬಿಡದೆ ಹಿಡಿದುಕೊಂಡೇ ಇದ್ದ.

ಕಾರ್ಯದರ್ಶಿಗಿರಿ ಮತ್ತು ಅಧ್ಯಕ್ಷಗಿರಿ

[ಬದಲಾಯಿಸಿ]
BRIC ದೇಶಗಳ ನಾಯಕರೊಂದಿಗೆ ಹೂ ಜಿಂಟಾವೊ, ಎಡದಿಂದ, ಸಿಂಗ್‌, ಮೆಡ್‌ವೆದೇವ್‌, ಲೂಲಾ

ಚೀನಾದ ಕಮ್ಯೂನಿಸ್ಟ್‌ ಪಕ್ಷದ ಹದಿನಾರನೇ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಹೂ ಮತ್ತು ಅವನ ಪ್ರಧಾನಮಂತ್ರಿ ವೆನ್‌ ಜಿಯಾಬಾವೊ, ಸಮರಸದ ಸಮಾಜವೊಂದನ್ನು ಸ್ಥಾಪಿಸುವುದರ ಕುರಿತು ಪ್ರಸ್ತಾವಿಸಿದರು; ಅಸಮಾನತೆಯನ್ನು ತಗ್ಗಿಸುವ ಮತ್ತು "GDP ಮೊದಲು, ಯೋಗಕ್ಷೇಮ ನಂತರ" ಎಂಬಂಥ ಕಾರ್ಯನೀತಿಗಳ ಶೈಲಿಯನ್ನು ಬದಲಾಯಿಸುವ ಕಡೆಗೆ ಸಮರಸದ ಸಮಾಜದ ಪರಿಕಲ್ಪನೆಯು ಗುರಿಯಿಟ್ಟುಕೊಂಡಿತ್ತು. ಆರ್ಥಿಕ ಸುಧಾರಣೆಯ ವತಿಯಿಂದ ಕೈಬಿಡಲ್ಪಟ್ಟಿದ್ದ ಚೀನಾದ ಜನಸಂಖ್ಯೆಯ ವಲಯಗಳ ಮೇಲೆ ಅವರು ಗಮನಹರಿಸಿದರು, ಮತ್ತು ಈ ವಲಯಗಳನ್ನು ಉತ್ತಮವಾಗಿ ಅರ್ಥೈಸಿಕೊಳ್ಳುವ ನಿರ್ಧರಿತ ಗುರಿಯೊಂದಿಗೆ, ಬಡತನವು ತಾಂಡವವಾಡುತ್ತಿರುವ ಚೀನಾದ ಪ್ರದೇಶಗಳಿಗೆ ಗಮನ ಸೆಳೆಯುವ ಹಲವಾರು ಪರ್ಯಟನೆಗಳನ್ನು ಅವರು ಕೈಗೊಂಡಿದ್ದಾರೆ. ಆದದ್ದಾಗಲಿ ಆರ್ಥಿಕ ಬೆಳವಣಿಗೆಗೆ ಪರವಾಗಿರಬೇಕು ಎಂಬ ಕಾರ್ಯನೀತಿಯೊಂದರಿಂದ ಚೀನಾವನ್ನು ವಿಮುಖಗೊಳಿಸಲೂ ಸಹ ಹೂ ಮತ್ತು ವೆನ್‌ ಜಿಯಾಬಾವೊ ಪ್ರಯತ್ನಿಸಿದ್ದಾರೆ. ಅಷ್ಟೇ ಅಲ್ಲ, ಸಿಬ್ಬಂದಿಯ ತೀರ್ಮಾನಗಳಲ್ಲಿ ಹಸಿರು ನಿವ್ವಳ ದೇಶೀಯ ಉತ್ಪನ್ನದ ಬಳಕೆಯೂ ಸೇರಿದಂತೆ, ಸಾಮಾಜಿಕ ಅಸಮಾನತೆ ಮತ್ತು ಪರಿಸರೀಯ ಹಾನಿಯಲ್ಲಿನ ಅಂಶಗಳನ್ನು ಒಳಗೊಂಡಿರುವ ಬೆಳವಣಿಗೆಯ ಒಂದು ಹೆಚ್ಚು ಸಮತೋಲಿತ ದೃಷ್ಟಿಕೋನ ಅಥವಾ ಅಭಿಪ್ರಾಯದೆಡೆಗೆ ಚೀನಾ ದೇಶವನ್ನು ಒಯ್ಯುವ ಪ್ರಯತ್ನವನ್ನೂ ಅವರು ಮಾಡಿದ್ದಾರೆ. ಆದಾಗ್ಯೂ, ಜಿಯಾಂಗ್‌ನ ಕೂಟವು ಬಹುತೇಕ ಅಭಿವೃದ್ಧಿಶೀಲ ಪ್ರದೇಶಗಳಲ್ಲಿ ಹತೋಟಿಯನ್ನು ಕಾಯ್ದುಕೊಂಡಿತು; ಆದ್ದರಿಂದಲೇ ಬೃಹದಾರ್ಥಿಕ ನಿಯಂತ್ರಣದ ಕುರಿತಾದ ಹೂ ಮತ್ತು ವೆನ್‌ರವರ ಕ್ರಮಗಳು ಮಹತ್ತರವಾದ ಪ್ರತಿರೋಧವನ್ನು ಎದುರಿಸಿದವು.

SARS ಬಿಕ್ಕಟ್ಟು

[ಬದಲಾಯಿಸಿ]

2003ರಲ್ಲಿ SARSನ ಏಕಾಏಕಿ ಆರಂಭವಾದ ಸಂದರ್ಭದಲ್ಲಿ ಹೂನ ನಾಯಕತ್ವದ ಮೊದಲ ಬಿಕ್ಕಟ್ಟು ಸಂಭವಿಸಿತು. ಚೀನಾ ಬಿಕ್ಕಟ್ಟನ್ನು ಆರಂಭದಲ್ಲಿ ಮಚ್ಚಿಹಾಕುತ್ತದೆ ಮತ್ತು ನಿಧಾನವಾಗಿ ಪ್ರತಿಕ್ರಿಯಿಸುತ್ತದೆ ಎಂಬ ಬಲವಾದ ಟೀಕೆಯನ್ನು ಅನುಸರಿಸಿ, ಪಕ್ಷದ ಮತ್ತು ಸರ್ಕಾರದ ಹಲವಾರು ಅಧಿಕಾರಿಗಳನ್ನು ಅವನು ವಜಾಮಾಡಿದ; ಜಿಯಾಂಗ್‌ನನ್ನು ಬೆಂಬಲಿಸಿದ್ದ ಆರೋಗ್ಯ ಮಂತ್ರಿ, ಹಾಗೂ ಹೂನ ಆಶ್ರಿತ ಎಂಬುದಾಗಿ ವ್ಯಾಪಕವಾಗಿ ಗ್ರಹಿಸಲ್ಪಟ್ಟಿದ್ದ ಬೀಜಿಂಗ್‌ನ ಮೇಯರ್‌‌ ಮೆಂಗ್‌ ಕ್ಸುಯೆನಾಂಗ್‌ ಹೀಗೆ ವಜಾಗೊಂಡವರಲ್ಲಿ ಸೇರಿದ್ದರು. ಪಕ್ಷದಲ್ಲಿನ ಜಿಯಾಂಗ್‌ನ ಬೆಂಬಲವನ್ನು ಸವೆಸಿಹಾಕುವುದಕ್ಕಾಗಿದ್ದ ಒಂದು ಮಣಿಯುವ ರಾಜಿಯಾಗಿ ಮೆಂಗ್‌ನ ವಜಾಗೊಳಿಸುವಿಕೆಯು ಕೆಲವೊಮ್ಮೆ ಪರಿಗಣಿಸಲ್ಪಟ್ಟಿತು.[ಸೂಕ್ತ ಉಲ್ಲೇಖನ ಬೇಕು] ಅಂತರರಾಷ್ಟ್ರೀಯ ಆರೋಗ್ಯ ಸಂಘಟನೆಗಳಿಗೆ ಚೀನಾವು ಮಾಡುವ ವರದಿಗಾರಿಕೆಯಲ್ಲಿನ ಪಾರದರ್ಶಕತೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹೂ ಮತ್ತು ವೆನ್‌ ಕ್ರಮಗಳನ್ನು ಕೈಗೊಂಡರು; ಸದ್ಯದಲ್ಲೇ ಜರುಗಲಿದ್ದ ವಿವಾದಾಂಶದ ಕುರಿತಾಗಿ ಜಿಯಾಂಗ್‌ ಹೊಂದಿದ್ದ ದೃಷ್ಟಿಕೋನಕ್ಕೆ ಇದು ಒಂದು ಪರೋಕ್ಷ ಹೊಡೆತವಾಗಿತ್ತು.[ಸೂಕ್ತ ಉಲ್ಲೇಖನ ಬೇಕು]

ಜಿಯಾಂಗ್‌ ಝೆಮಿನ್‌ನ ಉತ್ತರಾಧಿಕಾರಿಗಳು

[ಬದಲಾಯಿಸಿ]
ಪಿಟ್ಸ್‌ಬರ್ಗ್‌ನ G-20 ಶೃಂಗಸಭೆಯಲ್ಲಿ U.S. ಅಧ್ಯಕ್ಷ ಬರಾಕ್‌ ಒಬಾಮಾನೊಂದಿಗೆ ಅಧ್ಯಕ್ಷ ಹೂ ಮಾತನಾಡುತ್ತಿರುವುದು

2002ರ ನವೆಂಬರ್‌ 15ರಂದು, ಹೂ ಜಿಂಟಾವೊ-ನೇತೃತ್ವದ ಹೊಸ ಪಾಲಿಟ್‌ಬ್ಯೂರೋ ಒಂದು ಜಿಯಾಂಗ್ ನಂತರ ನಾಮಮಾತ್ರವಾಗಿ ಅಸ್ತಿತ್ವಕ್ಕೆ ಬಂದಿತು. ಅಷ್ಟು ಹೊತ್ತಿಗೆ 76 ವರ್ಷ ವಯಸ್ಸಿನವನಾಗಿದ್ದ ಜಿಯಾಂಗ್, ತರುಣರಿಂದ ಕೂಡಿದ ನಾಯಕತ್ವದ ನಾಲ್ಕನೇ ಪೀಳಿಗೆ ಯೊಂದಕ್ಕೆ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಶಕ್ತಿಯುತವಾದ ಪ್ರಧಾನ ಕಾರ್ಯದರ್ಶಿ ಹುದ್ದೆ ಮತ್ತು ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯಿಂದ ಕೆಳಗಿಳಿದನಾದರೂ, ಜಿಯಾಂಗ್‌ ಗಮನಾರ್ಹ ಪ್ರಭಾವವನ್ನು ಉಳಿಸಿಕೊಳ್ಳುತ್ತಾನೆ ಎಂಬ ಊಹನವು ಅಸ್ತಿತ್ವದಲ್ಲಿತ್ತು; ಏಕೆಂದರೆ, ಜಿಯಾಂಗ್‌ನ ಪ್ರಭಾವಶಾಲಿ ಶಾಂಘೈ ಕೂಟ ದೊಂದಿಗೆ ಹೂ ಸಂಬಂಧವನ್ನು ಹೊಂದಿರಲಿಲ್ಲ ಮತ್ತು ಎಲ್ಲ ರೀತಿಯಿಂದಲೂ-ಶಕ್ತಿಯುತವಾಗಿದ್ದ ಸ್ಥಾಯಿ ಸಮಿತಿಯ ಒಂಬತ್ತು ಸದಸ್ಯರ ಪೈಕಿ ಆರು ಮಂದಿ ಶಾಂಘೈ ಕೂಟದೊಂದಿಗೆ ಸಂಬಂಧವನ್ನು ಹೊಂದಿದ್ದಾರೆ ಎಂದು ಭಾವಿಸಲಾಗಿತ್ತು. ಆದಾಗ್ಯೂ, ನಂತರದ ಬೆಳವಣಿಗೆಗಳು ತೋರಿಸುವ ಪ್ರಕಾರ, ಅದರ ಅನೇಕ ಸದಸ್ಯರು ತಮ್ಮ ನಿಲುವನ್ನು ಬದಲಾಯಿಸಿದರು ಎಂಬುದು ಅರಿವಾಗುತ್ತದೆ. ಉದಾಹರಣೆಗೆ, ಜಿಯಾಂಗ್‌ನ ಓರ್ವ ಅನುಯಾಯಿಯಾಗಿದ್ದ ಝೆಂಗ್‌ ಕ್ವಿಂಗ್‌ಹಾಂಗ್‌ ತನ್ನ ಪಾತ್ರವನ್ನು ಬದಲಿಸಿ ಎರಡು ಗುಂಪುಗಳ ನಡುವಿನ ಓರ್ವ ಮಧ್ಯಸ್ಥಗಾರನ ಪಾತ್ರವನ್ನು ವಹಿಸಲು ಶುರುಮಾಡಿದ.[೨೨] 2003ರಲ್ಲಿ, CPCಯ ಕೇಂದ್ರೀಯ ಸೇನಾ ಆಯೋಗದ ಸಭಾಪತಿಯ ಹುದ್ದೆಗೆ ಜಿಯಾಂಗ್‌ ಸಹ ಮರು-ಚುನಾಯಿಸಲ್ಪಟ್ಟ ಮತ್ತು ತನ್ಮೂಲಕ ಸೇನಾ ಅಧಿಕಾರವನ್ನು ಉಳಿಸಿಕೊಂಡ; ಸದರಿ ಹುದ್ದೆಯ ನೆರವಿನಿಂದಲೇ ಡೆಂಗ್‌‌ ಕ್ಸಿಯೋಪಿಂಗ್‌‌ ನೇಪಥ್ಯದಲ್ಲಿದ್ದುಕೊಂಡೇ 'ಸಾರ್ವಭೌಮಾಧಿಕಾರವುಳ್ಳ ನಾಯಕ'ನಾಗಿ ಅಧಿಕಾರವನ್ನು ನಿರ್ವಹಿಸುವಷ್ಟು ಸಮರ್ಥನಾಗಿದ್ದ.

ಚೀನಾದ ಕೆಳಗಿಬಿದ್ದ ಉತ್ತರಾಧಿಕಾರಿಗಳ ಇತ್ತೀಚಿನ ಇತಿಹಾಸವನ್ನು ಉಲ್ಲೇಖಿಸುವಾಗ, ಹೂ ಹೊಂದಿದ್ದ ಸಿದ್ಧಾಂತಗಳಿಗೆ ಅವನಲ್ಲಿದ್ದ ಎಚ್ಚರಿಕೆಯ ಒಂದು ಪ್ರಜ್ಞೆಯೇ ಕಾರಣ ಎಂದು ಪಾಶ್ಚಾತ್ಯ ವೀಕ್ಷಕರು ಅಭಿಪ್ರಾಯಪಡುತ್ತಾರೆ. ಮೂವರನ್ನು ಪಕ್ಷದ ಪ್ರಧಾನ ಕಾರ್ಯದರ್ಶಿಗಳಾಗಿ ಡೆಂಗ್‌‌ ಕ್ಸಿಯೋಪಿಂಗ್‌‌ ನೇಮಿಸಿದ, ಈ ಎಲ್ಲರನ್ನೂ ಉತ್ತರಾಧಿಕಾರಿಗಳಾಗಿಸುವ ಉದ್ದೇಶ ಇದರ ಹಿಂದೆ ಅಡಗಿತ್ತು; ಮತ್ತು ಅವರ ಪೈಕಿ ಹೂ ಯಾವೋಬ್ಯಾಂಗ್‌ ಮತ್ತು ಝಾವೋ ಝಿಯಾಂಗ್‌ ಎಂಬಿಬ್ಬರನ್ನು ಪದಚ್ಯುತಿಗೊಳಿಸುವಲ್ಲಿಯೂ ಅವನು ಕಾರಣೀಭೂತನಾಗಿದ್ದ. ಅವನ ಮೂರನೇ ಮತ್ತು ಅಂತಿಮ ಆಯ್ಕೆಯಾದ ಜಿಯಾಂಗ್‌ ಝೆಮಿನ್‌, ಡೆಂಗ್‌‌ನ ಮುಂದುವರಿದ ಆದರೂ ಇಬ್ಬಗೆಯ ಬೆಂಬಲವನ್ನು ಗೆದ್ದುಕೊಂಡ ಮತ್ತು ತನ್ನ ಅಧಿಕಾರಾವಧಿಯು ಅಂತ್ಯಗೊಂಡಾಗ ತನ್ನ ಹುದ್ದೆಯನ್ನು ಸ್ವಯಂಪ್ರೇರಣೆಯಿಂದ ಬಿಡುವ ವಿಷಯದಲ್ಲಿ ಕಮ್ಯೂನಿಸ್ಟ್‌ ಚೀನಾದ ಇತಿಹಾಸದಲ್ಲಿಯೇ ಏಕೈಕ ಪ್ರಧಾನ ಕಾರ್ಯದರ್ಶಿ ಎನಿಸಿಕೊಂಡ.

ಚೀನಾದ ಅಗ್ರಗಣ್ಯ ನಾಯಕತ್ವದ ಅತಿಕಿರಿಯ ಸದಸ್ಯನಾಗಿ ಮತ್ತು ಜಿಯಾಂಗ್‌ಗೆ ಉತ್ತರಾಧಿಕಾರಿಯಾಗುವಲ್ಲಿನ ಓರ್ವ ಅಗ್ರಗಣ್ಯ ಉಮೇದುವಾರನಾಗಿ ಹೂ ಮೂಲತಃವಾಗಿ ಡೆಂಗ್‌‌ನಿಂದ ಹುಡುಕಿ-ಆರಿಸಲ್ಪಟ್ಟಿದ್ದ ಎಂಬುದಾಗಿ ಹಲವರು ನಂಬುತ್ತಾರಾದರೂ, ತನ್ನ ಸ್ಥಾನವನ್ನು ಬಲಪಡಿಸಿಕೊಳ್ಳುವುದಕ್ಕಾಗಿ 1992 ಮತ್ತು 2002ರ ನಡುವೆ ಅವನು ಹೆಚ್ಚಿನ ರೀತಿಯಲ್ಲಿ ರಾಜತಾಂತ್ರಿಕ ಕುಶಲತೆಗಳನ್ನು ಚಲಾಯಿಸಿದ್ದ ಹಾಗೂ ತನ್ನ ಸ್ವಂತ ಹಕ್ಕಿನಿಂದಲೇ ಅವನು ಜಿಯಾಂಗ್‌ನ ಅಗ್ರ ಪಟ್ಟಾಧಿಕಾರಿಯಾಗಿ ಅಂತಿಮವಾಗಿ ಹೊರಹೊಮ್ಮಿದ. ಪಕ್ಷದೊಳಗೇ ಇದ್ದ ನಿಧಾನವಾಗಿದ್ದರೂ ಪ್ರಗತಿಶೀಲವಾಗಿದ್ದ ಅಧಿಕಾರದ ಅನುಕ್ರಮ ಉತ್ತರಾಧಿಕಾರದ ಸಂಸ್ಥೀಕರಿಸುವಿಕೆಯಿಂದಲೂ ಹೂ ಪ್ರಯೋಜನಪಡೆದ; ಇದು ಅವನ ಪೂರ್ವವರ್ತಿಗಳಿಗೆ ಸಂಪೂರ್ಣವಾಗಿ ದೊರೆಯಲಿಲ್ಲ ಎನ್ನಬಹುದು. 1980ರ ದಶಕದ ಆರಂಭದಿಂದಲೂ, ಚೀನಿ ಜನರ ಗಣರಾಜ್ಯವು ಪ್ರಗತಿಶೀಲ ಸಂಸ್ಥೀಕರಿಸುವಿಕೆಯಿಂದ ಗುರುತಿಸಲ್ಪಟ್ಟಿದೆ ಮತ್ತು ಅದರ ಆಡಳಿತವು ಬಹುಮತಾಭಿಪ್ರಾಯದಿಂದ ಗುರುತಿಸಲ್ಪಟ್ಟಿದೆ, ಹಾಗೂ ಅದು ಮಾವೋವಾದಿ ಸರ್ವಾಧಿಕಾರದ ಮಾದರಿಯಿಂದ ವಿಮುಖವಾಗಿದೆ. ಪಾಶ್ಚಾತ್ಯ-ಶೈಲಿಯ ಒಂದು ಶಾಸನಬದ್ಧ ಪ್ರತಿಷ್ಠಾಪನೆಯಾಗಿದ್ದರೂ ಮತ್ತು ಕಾನೂನಿನ ಆಡಳಿತವು ಯುಕ್ತ ಸ್ಥಳದಲ್ಲಿ ಇರಿಸಲ್ಪಟ್ಟಿದ್ದರೂ ಸಹ, ಒಂದು ನ್ಯಾಯೋಚಿತವಾಗಿ ಕ್ರಮಬದ್ಧವಾದ ಮತ್ತು ನಾಗರಿಕ ವಿಧಾನವೊಂದರಲ್ಲಿ ಹೂನ ಅಧಿಕಾರದ ಅನುಕ್ರಮ ಉತ್ತರಾಧಿಕಾರವು ನಿರ್ವಹಿಸಲ್ಪಟ್ಟಿತು. ಇದು ಕಮ್ಯೂನಿಸ್ಟ್‌ ಚೀನಾದ ಇತಿಹಾಸದಲ್ಲಿ ಅಭೂತಪೂರ್ವವಾದುದು ಎನಿಸಿಕೊಂಡಿದೆ. ಈ ಪ್ರವೃತ್ತಿಯು ಮುಂದುವರಿಯುವುದೆಂದು ನಿರೀಕ್ಷಿಸಲ್ಪಟ್ಟಿದೆ ಮತ್ತು ಅಧಿಕಾರ ಬದಲಾವಣೆಯ ಒಂದು ಸಂಸ್ಥೀಕರಿಲ್ಪಟ್ಟ ಕಾರ್ಯವಿಧಾನವು ಹೊರಹೊಮ್ಮುವುದೆಂದು ನಿರೀಕ್ಷಿಸಲಾಗಿದ್ದು, ಪ್ರಾಯಶಃ ಪಕ್ಷದೊಳಗಡೆ ಈ ಪ್ರವೃತ್ತಿಯು ಮೊದಲಿಗೆ ಕಂಡುಬರಲಿದೆ. ವಾಸ್ತವವಾಗಿ ಹೇಳಬೇಕೆಂದರೆ, ಅನೌಪಚಾರಿಕ ಆಡಳಿತ ಮತ್ತು ವ್ಯಕ್ತಿಪೂಜೆಯೊಂದನ್ನು ತಡೆಗಟ್ಟುವ ಸಲುವಾಗಿ, ಅನುಕ್ರಮದ ಉತ್ತರಾಧಿಕಾರದ ಒಂದು ಕ್ರಮಬದ್ಧವಾದ ವ್ಯವಸ್ಥೆ ಹಾಗೂ ಕಾರ್ಯವಿಧಾನವನ್ನು ಸೃಷ್ಟಿಸುವುದು ಪಕ್ಷದ ನಿರ್ಧರಿತ ಪ್ರಮುಖ ಗುರಿಗಳಲ್ಲಿ ಒಂದೆನಿಸಿಕೊಂಡಿದೆ.

ಜಿಯಾಂಗ್‌ ತನ್ನ ಹುದ್ದೆಗಳಿಂದ ಕೆಳಗಿಳಿದ ನಂತರದಲ್ಲಿ ಜಿಯಾಂಗ್‌ ಮತ್ತು ಹೂ ನಡುವೆ ಕಂಡುಬಂದ ಪೈಪೋಟಿಯು ವಾದಯೋಗ್ಯವಾಗಿ ಚೀನಾದ ಅನುಕ್ರಮದ ಉತ್ತರಾಧಿಕಾರದ ಸಂಪ್ರದಾಯದ ಒಂದು ಅನಿವಾರ್ಯ ಉತ್ಪನ್ನವಾಗಿತ್ತು. ಜಿಯಾಂಗ್‌ ತಾನು ನಿವೃತ್ತಗೊಳ್ಳುವ ಹೊತ್ತಿಗೆ ಅಧಿಕಾರವನ್ನು ಬಲಪಡಿಸಿದ್ದನಾದರೂ, ಕಮ್ಯೂನಿಸ್ಟ್‌ ಪಕ್ಷದೊಳಗಿನ ಅವನ ಸೈದ್ಧಾಂತಿಕ ಉನ್ನತಿಯು ಬಹುತೇಕವಾಗಿ ಅಸ್ಥಿರವಾಗಿತ್ತು ಎಂಬುದಾಗಿ ಕೆಲವೊಂದು ವಿಶ್ಲೇಷಕರು ವಾದಿಸುತ್ತಾರೆ; ಹೀಗಾಗಿ ಮೂರು ಪ್ರತಿನಿಧಿತ್ವಗಳ ಸಿದ್ಧಾಂತದಂಥ ತನ್ನ ಸೈದ್ಧಾಂತಿಕ ಪರಂಪರೆಯು ಚೀನಾದ ಸಮಾಜವಾದಿ ಸಿದ್ಧಾಂತದಲ್ಲಿ ಪ್ರತಿಷ್ಠಾಪಿಸಲ್ಪಡುವುದನ್ನು ಖಾತ್ರಿಪಡಿಸಲು ಜಿಯಾಂಗ್‌ ಸಾಕಷ್ಟು ಸಮಯವನ್ನು ತೆಗೆದುಕೊಳ್ಳಬೇಕಾಗಿ ಬಂತು. ತನ್ನ ಕೊನೆಯ ಅಧಿಕೃತ ಹುದ್ದೆಯಾದ ಕೇಂದ್ರೀಯ ಸೇನಾ ಆಯೋಗದ ಸಭಾಪತಿಯ ಸ್ಥಾನಕ್ಕೆ 2004ರ ಸೆಪ್ಟೆಂಬರ್‌ನಲ್ಲಿ ಜಿಯಾಂಗ್‌ ರಾಜೀನಾಮೆ ನೀಡಿದ. ಇದು ಹೂ ವತಿಯಿಂದ ಬಂದ ಒತ್ತಡದ ಫಲಿತಾಂಶವೋ ಅಥವಾ ಒಂದು ವೈಯಕ್ತಿಕ ತೀರ್ಮಾನವೋ ಎಂಬುದು ಊಹೆಗೆ ಬಿಟ್ಟ ಸಂಗತಿ. ಅಲ್ಲಿಂದೀಚೆಗೆ ಅಧಿಕಾರವು ನೆಲೆಗೊಂಡಿರುವ ಚೀನಿ ಜನರ ಗಣರಾಜ್ಯದಲ್ಲಿನ ಮೂರು ಸಂಸ್ಥೆ ಅಥವಾ ಪ್ರತಿಷ್ಠಾಪನೆಗಳನ್ನು ಹೂ ಅಧಿಕೃತವಾಗಿ ವಹಿಸಿಕೊಂಡಿದ್ದು, ಪಕ್ಷ, ನಾಗರಿಕ ಸರ್ಕಾರ ಹಾಗೂ ಸೇನೆ ಇವು ಅವುಗಳಲ್ಲಿ ಸೇರಿವೆ; ಈ ರೀತಿಯಾಗಿ ಅವನು ಅನೌಪಚಾರಿಕವಾಗಿ ಸಾರ್ವಭೌಮಾಧಿಕಾರವುಳ್ಳ ನಾಯಕನಾಗಿ ಮಾರ್ಪಟ್ಟಿದ್ದಾನೆ.

ಆಂತರಿಕವಾಗಿರುವ ಸಾಮಾಜಿಕ, ರಾಜತಾಂತ್ರಿಕ ಮತ್ತು ಪರಿಸರೀಯ ಸಮಸ್ಯೆಗಳಿಂದ ಆಕಾರ ಪಡೆದ ಒಂದು ಚೀನಾವನ್ನು ಪ್ರಧಾನ ಕಾರ್ಯದರ್ಶಿ ಹೂ ಮತ್ತು ಪ್ರಧಾನಮಂತ್ರಿ ವೆನ್‌ ಜಿಯಾಬಾವೊ ಉತ್ತರಾಧಿಕಾರವಾಗಿ ಪಡೆದರು. ಚೀನಾದ ಶ್ರೀಮಂತರು ಮತ್ತು ಬಡವರ ನಡುವಿನ ಸಂಪತ್ತಿನ ಬೃಹತ್‌ ಅಸಮಾನತೆಯು ಹೂ ಎದುರಿಸುತ್ತಿರುವ ಅತಿದೊಡ್ಡ ಸವಾಲುಗಳ ಪೈಕಿ ಒಂದಾಗಿದ್ದು, ಈ ಕಾರಣದಿಂದಾಗಿಯೇ ಜನರಲ್ಲಿನ ಅತೃಪ್ತಿ ಮತ್ತು ಕೋಪವು ಮಿತಿಮೀರಿದ ಮಟ್ಟವನ್ನು ಮುಟ್ಟಿ ಅದು ಕಮ್ಯೂನಿಸ್ಟ್‌ ಆಡಳಿತದಲ್ಲಿ ಭಾರೀ ಅವ್ಯವಸ್ಥೆಯನ್ನು ಉಂಟುಮಾಡಿತು. ಮೇಲಾಗಿ, ಚೀನಾದ ನಾಗರಿಕ ಸೇವಾ ವ್ಯವಸ್ಥೆ, ಸೇನಾ ವ್ಯವಸ್ಥೆ, ಶೈಕ್ಷಣಿಕ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಮತ್ತು ವೈದ್ಯಕೀಯ ವ್ಯವಸ್ಥೆಗಳಿಗೆ ಕಿರುಕುಳ ಕೊಡುತ್ತಿರುವ ಸ್ವಜನ ಪಕ್ಷಪಾತ ಮತ್ತು ಭ್ರಷ್ಟಾಚಾರಗಳು ದೇಶವನ್ನು ಇಂಚಿಂಚಾಗಿ ನಾಶಮಾಡಲು ಪ್ರಯತ್ನಿಸಿದವು. ಆದಾಗ್ಯೂ, ಜನಸಮುದಾಯದ ನಡುವೆ ಒಂದು ಹೆಚ್ಚಿನ ನಿಸ್ವಾರ್ಥ ಮತ್ತು ನೈತಿಕ ದೃಷ್ಟಿಕೋನವನ್ನು ಉತ್ತೇಜಿಸುವ ಒಂದು ಕ್ರಮವಾಗಿ, 2006ರ ಆರಂಭದಲ್ಲಿ "8 ಗೌರವಗಳು ಮತ್ತು 8 ಅಪಕೀರ್ತಿಗಳು" (8 ಆನರ್ಸ್‌ ಅಂಡ್‌ 8 ಡಿಸ್‌ಗ್ರೇಸಸ್‌) ಎಂಬ ಆಂದೋಲನಕ್ಕೆ ಹೂ ಚಾಲನೆ ನೀಡಿದ. ದಿನೇ ದಿನೇ ನಾಜೂಕಾಗುತ್ತಲೇ ಇರುವ ಚೀನಾದ ಪರಿಸರವು ಬೃಹತ್‌‌ ಪ್ರಮಾಣದ ನಗರ ಪ್ರದೇಶದ ಮಾಲಿನ್ಯ, ಮರಳ ಬಿರುಗಾಳಿಗಳನ್ನು ಹಾಗೂ ವಾಸಯೋಗ್ಯ ಭೂಮಿಯ ವಿಶಾಲ ಪ್ರದೇಶಗಳ ನಾಶನವನ್ನು ಉಂಟುಮಾಡಿದೆ. ಸಾಮಾನ್ಯವಾಗಿ ಎಚ್ಚರಿಕೆಯ ಸ್ವಭಾವದವನು ಎನಿಸಿಕೊಂಡಿರುವ ಹೂ, ಅಂತರರಾಷ್ಟ್ರೀಯ ಸಂಘರ್ಷಗಳನ್ನು ತಪ್ಪಿಸುವ ಸಂದರ್ಭದಲ್ಲಿಯೇ ಚೀನಾದ ಮುಂದುವರಿದ ಶಾಂತಿಯುತ ಅಭಿವೃದ್ಧಿಯನ್ನು ನಿರ್ವಹಿಸುವಲ್ಲಿ ಸಮರ್ಥನಾಗಿದ್ದಾನೆಯೇ, ಅದೇ ವೇಳೆಗೆ ಚೀನಾದ ರಾಷ್ಟ್ರೀಯತಾವಾದಿ ಭಾವನೆಯಲ್ಲಿನ ಒಂದು ಅಭೂತಪೂರ್ವ ಹೆಚ್ಚಳದ ಮೇಲೆ ಅಧಿಪತ್ಯ ನಡೆಸುವಷ್ಟು ಸಮರ್ಥನಾಗಿದ್ದಾನೆಯೇ ಎಂಬುದನ್ನು ನೋಡುವುದಷ್ಟೇ ಈಗ ಉಳಿದುಕೊಂಡಿದೆ.

2008ರ ಮಾರ್ಚ್‌15ರಂದು ನಡೆದ ಜನಪ್ರತಿನಿಧಿಗಳ 11ನೇ ರಾಷ್ಟ್ರೀಯ ಸಮಾವೇಶದಲ್ಲಿ ಹೂ ಅಧ್ಯಕ್ಷನಾಗಿ ಮರು-ಚುನಾಯಿಸಲ್ಪಟ್ಟ. ಕೇಂದ್ರೀಯ ಸೇನಾ ಆಯೋಗದ ಸಭಾಪತಿಯಾಗಿಯೂ ಅವನು ಮರು-ಚುನಾಯಿಸಲ್ಪಟ್ಟ.[೨೩]

ನ್ಯೂಸ್‌ವೀಕ್ ಪತ್ರಿಕೆಯು ಹೂನನ್ನು "ಮಿತಿಮೀರಿ ಶಕ್ತಿ ತುಂಬಲ್ಪಟ್ಟ ವಿಶ್ವದ ಆರ್ಥಿಕತೆಯ ಚಕ್ರದ ಹಿಂದಿರುವ ಮನುಷ್ಯ" ಎಂಬುದಾಗಿ ಉಲ್ಲೇಖಿಸುವ ಮೂಲಕ ಅವನನ್ನು ವಿಶ್ವದಲ್ಲಿನ ಎರಡನೇ ಅತ್ಯಂತ ಶಕ್ತಿಯುತ ವ್ಯಕ್ತಿ ಎಂದು ಹೆಸರಿಸಿದೆ.[೨೪] ಫೋರ್ಬ್ಸ್‌ ಪತ್ರಿಕೆಯೂ ಸಹ ಅವನನ್ನು ವಿಶ್ವದಲ್ಲಿನ ಎರಡನೇ ಅತ್ಯಂತ ಶಕ್ತಿಯುತ ವ್ಯಕ್ತಿ ಎಂದು ಹೆಸರಿಸಿದೆ.[೨೫] ಫೋರ್ಬ್ಸ್‌ ನಿಯತಕಾಲಿಕದ ವತಿಯಿಂದ 2010ರ ವಿಶ್ವದ ಅತ್ಯಂತ ಶಕ್ತಿಯುತ ವ್ಯಕ್ತಿ ಎಂಬುದಾಗಿ ಹೂ ಹೆಸರಿಸಲ್ಪಟ್ಟ.[೨೬] ಅತ್ಯಂತ ಪ್ರಭಾವಶಾಲಿ ಜನರಿಗೆ ಸಂಬಂಧಿಸಿದ ಟೈಮ್‌ 100 ವಾರ್ಷಿಕ ಪಟ್ಟಿಯಲ್ಲಿ ಹೂ ನಾಲ್ಕು ಬಾರಿ (2008, 2007, 2005 ಮತ್ತು 2004) ಪಟ್ಟೀಕರಣಕ್ಕೊಳಗಾಗಿದ್ದಾನೆ.

ರಾಜಕೀಯ ಸ್ಥಾನಮಾನಗಳು

[ಬದಲಾಯಿಸಿ]

ವೈಜ್ಞಾನಿಕ ದೃಷ್ಟಿಕೋನ ಮತ್ತು ಸಮರಸದ ಸಮಾಜ

[ಬದಲಾಯಿಸಿ]
ಹೂ ಜಿಂಟಾವೊ ಜೊತೆಯಲ್ಲಿ U.S. ಅಧ್ಯಕ್ಷ ಜಾರ್ಜ್‌ W. ಬುಷ್‌

ಸ್ವದೇಶೀ ನೀತಿ ಮತ್ತು ವಿದೇಶಾಂಗ ನೀತಿಗಳೆರಡಕ್ಕೆ ಸಂಬಂಧಿಸಿದಂತೆಯೂ ತನ್ನ ಪೂರ್ವವರ್ತಿಗಳಿಗಿಂತ ತಾನು ಬೇರೆ ಎಂದು ಹೂ ಸ್ವತಃ ಪ್ರಾಶಸ್ತ್ಯಪಡೆದ ಎಂಬುದಾಗಿ ರಾಜತಾಂತ್ರಿಕ ವೀಕ್ಷಕರು ಸೂಚಿಸುತ್ತಾರೆ. ಹೂನ ಅಧ್ಯಕ್ಷಗಿರಿಯ ಅವಧಿಯಲ್ಲಿ ಅವನ ರಾಜತಾಂತ್ರಿಕ ತತ್ತ್ವವು ಮೂರು ಘೋಷಣಾ ವಾಕ್ಯಗಳಿಂದ ಸಂಕ್ಷೇಪಿಸಲ್ಪಟ್ಟಿದೆ: ಸ್ವದೇಶದಲ್ಲಿ ಒಂದು "ಸಮರಸದ ಸಮಾಜ" ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ "ಶಾಂತಿಯುತ ಅಭಿವೃದ್ಧಿ"; ಸಮರಸದ ಸಮಾಜವು ವೈಜ್ಞಾನಿಕ ಅಭಿವೃದ್ಧಿಯ ಪರಿಕಲ್ಪನೆಯಿಂದ ನೆರವು ಪಡೆದಿದ್ದು, ಸದರಿ ಪರಿಕಲ್ಪನೆಯು ಆರ್ಥಿಕ, ಪರಿಸರೀಯ ಮತ್ತು ಸಾಮಾಜಿಕ ಸಮಸ್ಯೆಗಳ ಶ್ರೇಣಿಗಳ ನಿವಾರಣೆಗೆ ಪರಿಹಾರೋಪಾಯಗಳ ಸಂಘಟಿತವಾದ ಸಜ್ಜಿಕೆಗಳಿರಬೇಕು ಎಂದು ಬಯಸುತ್ತದೆ, ಮತ್ತು ಆಂತರಿಕ ವಲಯಗಳಲ್ಲಿ ಜಾಗರೂಕವಾದ ಮತ್ತು ಹಂತಹಂತವಾದ ರಾಜತಾಂತ್ರಿಕ ಸುಧಾರಣೆಗಳು ಆಗಬೇಕಿರುವುದರ ಒಂದು ಅಗತ್ಯವನ್ನು ಗುರುತಿಸುತ್ತದೆ.[] ವೈಜ್ಞಾನಿಕ ಅಭಿವೃದ್ಧಿಯ ಸಿದ್ಧಾಂತವು, ಕಮ್ಯೂನಿಸ್ಟ್‌ ಪಕ್ಷ ಮತ್ತು ನಾಗರಿಕ ಸರ್ಕಾರದ ಸಂವಿಧಾನಗಳೊಳಗೆ ಕ್ರಮವಾಗಿ 2007 ಮತ್ತು 2008ರಲ್ಲಿ ಬರೆಯಲ್ಪಟ್ಟಿದೆ. ಡೆಂಗ್‌‌ ಕ್ಸಿಯೋಪಿಂಗ್‌ನಿಂದ ಸೂತ್ರೀಕರಿಸಲ್ಪಟ್ಟು, ಜಿಯಾಂಗ್‌ ಝೆಮಿನ್‌‌ನಿಂದ ಅನುಷ್ಠಾನಗೊಳಿಸಲ್ಪಟ್ಟ ಪಕ್ಷದ ಪಾತ್ರವು ಒಂದು ಕ್ರಾಂತಿಕಾರಿ ಪಕ್ಷದಿಂದ ಒಂದು ಆಡಳಿತ ಪಕ್ಷಕ್ಕೆ ಬದಲಾಗಿದೆ. ಪಕ್ಷದ "ಪ್ರಗತಿ" ಮತ್ತು ಆಡಳಿತದಲ್ಲಿನ ಅದರ ಹೆಚ್ಚಿನ ಪಾರದರ್ಶಕತೆ ಈ ಎರಡರದ್ದೂ ಅವಶ್ಯಕತೆಯಿದೆ ಎಂಬುದನ್ನು ಒತ್ತಿಹೇಳುವ ಮೂಲಕ ಪಕ್ಷದ ಆಧುನಿಕೀಕರಣವನ್ನು ಹೂ ಮುಂದುವರಿಸುತ್ತಿದ್ದಾನೆ.

ಹೂ ವ್ಯಕ್ತಪಡಿಸಿರುವ ಅಭಿಪ್ರಾಯದಂತೆ, ಈ ಸಿದ್ಧಾಂತಗಳಿಂದ ಏನೆಲ್ಲಾ ಹೊರಹೊಮ್ಮುತ್ತದೆ ಎಂಬುದು ಗಮನಾರ್ಹ ಸಂಗತಿಯಾಗಿದೆ. ರಾಷ್ಟ್ರೀಯ ಸ್ವರೂಪ ಮತ್ತು ಅಭಿವೃದ್ಧಿಯೆಡೆಗಿನ ವ್ಯವಸ್ಥಿತವಾದ ಮಾರ್ಗವನ್ನು ಹೊಂದಿರುವ ದೇಶವೊಂದು ಇದರ ಫಲಿತವಾಗಿರುತ್ತದೆ; ಕ್ರಿಯಾತ್ಮಕ ಆರ್ಥಿಕ ಬೆಳವಣಿಗೆ, ಹುರುಪಿನಿಂದ ಕೂಡಿದ "ಸಾರ್ವಜನಿಕವಲ್ಲದ" ವಲಯವೊಂದರಿಂದ (ಅಂದರೆ, ಖಾಸಗಿ ವಲಯದಿಂದ) ಶಕ್ತಿ ತುಂಬಲ್ಪಟ್ಟ ಒಂದು ಮುಕ್ತ ಮಾರುಕಟ್ಟೆ, ದಮನಕಾರಿಯಾದ ರಾಜತಾಂತ್ರಿಕ ಮತ್ತು ಮಾಧ್ಯಮಗಳ ಹತೋಟಿ, ವೈಯಕ್ತಿಕವಾದ ಆದರೆ ರಾಜತಾಂತ್ರಿಕವಲ್ಲದ ಸ್ವಾತಂತ್ರ್ಯಗಳು, ಎಲ್ಲಾ ನಾಗರಿಕರ ಯೋಗಕ್ಷೇಮಕ್ಕೆ ಸಂಬಂಧಿಸಿದ ಕಾಳಜಿ, ಸಾಂಸ್ಕೃತಿಕ ಜ್ಞಾನೋದಯ ಇವೆಲ್ಲವನ್ನೂ ಸದರಿ ವ್ಯವಸ್ಥಿತವಾದ ಮಾರ್ಗವು ಸಂಯೋಜಿಸುತ್ತದೆ; ಅಷ್ಟೇ ಅಲ್ಲ, ಹೂನ ದೃಷ್ಟಿಕೋನದಲ್ಲಿ ಒಂದು "ಸಮರಸದ ಸಮಾಜ"ಕ್ಕೆ ಕಾರಣವಾಗುವ, ವೈವಿಧ್ಯಮಯವಾದ ಸಾಮಾಜಿಕ ವಿವಾದಾಂಶಗಳೆಡೆಗಿನ (ವೈಜ್ಞಾನಿಕ ಅಭಿವೃದ್ಧಿ ದೃಷ್ಟಿಕೋನ) ಒಂದು ಸಮಷ್ಟಿ ಪರಿಣಾಮದ ಅಥವಾ ಸಹಕ್ರಿಯೆಯ ಮಾರ್ಗವನ್ನೂ ಸದರಿ ವ್ಯವಸ್ಥಿತವಾದ ಮಾರ್ಗವು ಸಂಯೋಜಿಸುತ್ತದೆ. ಚೀನಾದ ಸರ್ಕಾರದ ಅಭಿಪ್ರಾಯದಲ್ಲಿ, "ಚೀನಾ ಮಾದರಿ"ಯ ಒಂದು ಹೊಸ ಆಡಳಿತವನ್ನು ಸೃಷ್ಟಿಸಿರುವ ಈ ಸಿದ್ಧಾಂತಗಳು, ನಿರ್ದಿಷ್ಟವಾಗಿ ಅಭಿವೃದ್ಧಿಶೀಲ ದೇಶಗಳಿಗೆ ಸಂಬಂಧಿಸಿದಂತೆ ಪಶ್ಚಿಮದ "ಪ್ರಜಾಪ್ರಭುತ್ವ ಮಾದರಿ"ಗೆ ಒಂದು ನ್ಯಾಯವಾದ ಹಕ್ಕುಳ್ಳ ಪರ್ಯಾಯವಾಗಿ ಕಾರ್ಯನಿರ್ವಹಿಸುತ್ತವೆ. ಹೂನ ಮಾತುಗಳಲ್ಲೇ ಹೇಳುವುದಾದರೆ, "ಪ್ರಜಾಪ್ರಭುತ್ವ, ಕಾನೂನಿನ ಆಡಳಿತ, ಧರ್ಮಸಮ್ಮತ ಹಕ್ಕು, ನ್ಯಾಯ, ಋಜುತ್ವ, ಅನ್ಯೋನ್ಯತೆ ಮತ್ತು ಜೀವಶಕ್ತಿ" ಇವುಗಳನ್ನು ಸಮರಸದ ಸಮಾಜವೊಂದು ಒಳಗೊಂಡಿರಬೇಕು.[] ಅವನು ಹೇಳುವ ಪ್ರಕಾರ, ಇಂಥದೊಂದು ಸಮಾಜವು ಜನರ ಪ್ರತಿಭೆ ಮತ್ತು ಸೃಜನಶೀಲತೆಗೆ ಸಂಪೂರ್ಣ ಅವಕಾಶವನ್ನು ನೀಡುತ್ತದೆ, ಸುಧಾರಣೆ ಮತ್ತು ಅಭಿವೃದ್ಧಿಯಿಂದ ತರಲ್ಪಟ್ಟ ಸಾಮಾಜಿಕ ಸಂಪತ್ತನ್ನು ಹಂಚಿಕೊಳ್ಳಲು ಎಲ್ಲಾ ಜನರನ್ನು ಸಮರ್ಥರನ್ನಾಗಿಸುತ್ತದೆ, ಮತ್ತು ಜನರು ಹಾಗೂ ಸರ್ಕಾರದ ನಡುವಿನ ಎಂದೆಂದೂ ನಿಕಟವಾಗಿರುವ ಬಾಂಧವ್ಯಕ್ಕೆ ಆಕಾರ ನೀಡುತ್ತದೆ.

ನಿರ್ದಿಷ್ಟವಾಗಿ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಹೂನ ಕುರಿತಾದ ಪಾಶ್ಚಾತ್ಯರ ಟೀಕೆಯು ಸಾಮಾಜಿಕ ಸ್ಥಿರತೆಯೆಡೆಗಿನ ಅವನ ಅತಿ ಸೂಕ್ಷ್ಮ ಪ್ರತಿಕ್ರಿಯೆಯನ್ನು ಹೊರಗೆಡಹುತ್ತದೆಯಾದರೂ, ಚೀನಾದ ಬಹುಮುಖಿಯಾಗಿರುವ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವೆಡೆಗಿನ ಅವನ ಹೊಸ ಬದ್ಧತೆಯ ಮೇಲೆ ಅಷ್ಟೇ ಹೆಚ್ಚಿನ ಪ್ರಾಮುಖ್ಯತೆಯನ್ನು ಇರಿಸುವುದಿಲ್ಲ.[] ಹೂನ ಹಠವಾದಿಯಾಗಿರುವ, ಸೈದ್ಧಾಂತಿಕವಲ್ಲದ ಕಾರ್ಯಸೂಚಿಯು ಎರಡು ಮುಖ್ಯವಾದ ಮೌಲ್ಯಗಳನ್ನು ಹೊಂದಿದೆ- ಆರ್ಥಿಕ ಅಭಿವೃದ್ಧಿಯನ್ನು ಮುಂದುವರಿಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾಜಿಕ ಸ್ಥಿರತೆಯನ್ನು ಕಾಯ್ದುಕೊಂಡುಹೋಗುವುದು ಹಾಗೂ ರಾಷ್ಟ್ರೀಯ ಸಾರ್ವಭೌಮತ್ವವನ್ನು ಸಮೃದ್ಧಗೊಳಿಸುವ ದೃಷ್ಟಿಯಿಂದ ಚೀನಾದ ಸಂಸ್ಕೃತಿಯನ್ನು ಉತ್ತೇಜಿಸುವುದು. ಸ್ವದೇಶಿ ಕಾರ್ಯನೀತಿಗೆ ಸಂಬಂಧಿಸಿ ಹೇಳುವುದಾದರೆ, ಸರ್ಕಾರದ ಸಮಾರಂಭಗಳು ಮತ್ತು ಸಭೆಗಳ ಕುರಿತಾಗಿ ಸಾರ್ವಜನಿಕರಿಗೆ ಹೆಚ್ಚು ಮುಕ್ತವಾಗಿರುವುದನ್ನು ಅವನು ಬಯಸುವಂತೆ ತೋರುತ್ತದೆ. ಪಾಲಿಟ್‌ಬ್ಯೂರೋ ಸ್ಥಾಯಿ ಸಮಿತಿಯ ಸಭೆಯ ಅನೇಕ ವಿವರಗಳನ್ನು ಚೀನಾದ ಸುದ್ದಿ ಸಂಸ್ಥೆಯು ಇತ್ತೀಚೆಗಷ್ಟೇ ಪ್ರಕಟಿಸಿತು. ವಿದೇಶಿ ನೆಲಗಳಿಗೆ ಭೇಟಿನೀಡುವಾಗ ಚೀನಾದ ನಾಯಕರನ್ನು ಅದ್ದೂರಿಯಾಗಿ ಬೀಳ್ಕೊಡುವ ಮತ್ತು ಮರಳಿ-ಸ್ವಾಗತಿಸುವ ಶಿಷ್ಟಾಚಾರಗಳಂಥ, ಕಮ್ಯೂನಿಸ್ಟ್‌ ದುಂದುಗಾರಿಕೆಗಳಾಗಿ ಸಾಂಪ್ರದಾಯಿಕವಾಗಿ ಕಾಣಲಾಗುವ ಅನೇಕ ಸಂದರ್ಭಗಳನ್ನೂ ಸಹ ಅವನು ರದ್ದುಗೊಳಿಸಿದ. ಮೇಲಾಗಿ, ಶ್ರೀಮಂತರು ಮತ್ತು ಬಡವರ ನಡುವಿನ ಅಂತರ, ಹಾಗೂ ಒಳನಾಡಿನ ಪ್ರದೇಶಗಳು ಮತ್ತು ಕಡಲತೀರದ ಪ್ರದೇಶಗಳ ನಡುವಿನ ಸಮತೆಯಿಲ್ಲದ ಅಭಿವೃದ್ಧಿಯಂಥ ಸಮಸ್ಯೆಗಳ ಮೇಲೆಯೂ ಹೂ ಅಡಿಯಲ್ಲಿನ ಚೀನಾದ ನಾಯಕತ್ವವು ಗಮನ ಹರಿಸಿತು. ಪಕ್ಷ ಮತ್ತು ನಾಗರಿಕ ಸರ್ಕಾರಗಳೆರಡೂ GDP ಬೆಳವಣಿಗೆ ಮೇಲೆ ಏಕಮಾತ್ರವಾಗಿ ಗಮನ ಹರಿಸುವ ವ್ಯಾಖ್ಯೆಯೊಂದರಿಂದ ವಿಮುಖವಾದಂತೆ ಕಾಣುತ್ತವೆ ಮತ್ತು ಸಾಮಾಜಿಕ ಸಮಾನತೆ ಹಾಗೂ ಪರಿಸರದ ಪರಿಣಾಮಗಳನ್ನು ಒಳಗೊಂಡಿರುವ ಒಂದು ಹೆಚ್ಚು ಸಮತೋಲಿತ ವ್ಯಾಖ್ಯೆಯ ಕಡೆಗೆ ಸಾಗಿದಂತೆ ಕಾಣುತ್ತವೆ.

2004ರಲ್ಲಿ ಅಭೂತಪೂರ್ವ ಮಂಡನೆಯೊಂದನ್ನು ನೀಡಿದ ಹೂ, ಸೈನ್ಯಬಲದ ಐದು ಪ್ರಮುಖ ಕಾರ್ಯಾಚರಣೆಗಳಿಗೆ ಸೇರಿದ ಎಲ್ಲಾ ಮೂಲಪಡೆಗಳು ತಮ್ಮ ವಾರ್ಷಿಕ ಬೇಸಿಗೆಯ ಸಭೆಗಾಗಿ ಬೀದೈಹೆ ಕಡಲತಡಿಯ ಆಶ್ರಯಧಾಮಕ್ಕೆ ಹೋಗುವುದರ ಸಂಪ್ರದಾಯವನ್ನು ನಿಲ್ಲಿಸುವಂತೆ ಆದೇಶಿಸಿದ; ಇದಕ್ಕೂ ಮುಂಚೆ, ಚೀನಾದ ಹಣೆಬರಹವನ್ನು ನಿರ್ಧರಿಸುವುದಕ್ಕಾಗಿ ಈಗಿನ ಮತ್ತು ಹಿರಿಯ ಮೂಲಪಡೆಗಳೆರಡಕ್ಕೂ ಸೇರಿದ ಆಡಳಿತ ನಡೆಸುವ ಗಣ್ಯ ವ್ಯಕ್ತಿಗಳ ಒಂದು ಕೂಟವಾಗಿ, ಮತ್ತು ಸಾರ್ವಜನಿಕರ ನಿಧಿಗಳನ್ನು ಅನವಶ್ಯಕ ಪೋಲುಮಾಡುವ ಒಂದು ಬಾಬತ್ತಾಗಿ ಸದರಿ ಸಭೆಯನ್ನು ಸಾಮಾನ್ಯವಾಗಿ ಕಾಣಲಾಗುತ್ತಿತ್ತು. ಸದರಿ ಕ್ರಮವನ್ನು ಭ್ರಷ್ಟಾಚಾರದೆಡೆಗೆ ಹೂ ತೋರಿಸಿದ ವರ್ತನೆಯ ಸಂಕೇತವಾಗಿ ಚೀನಾದ ಸಾರ್ವಜನಿಕರು ಪರಿಗಣಿಸಿದ್ದರು.

ತನ್ನ ಅಧಿಕಾರದ ಸ್ಥಾನದ ಹಾಗೂ ತನ್ನ ಮಾರ್ಗದರ್ಶಿ ಸಿದ್ಧಾಂತಗಳ ಸೂಚಕವಾಗಿದ್ದ ಒಂದು ಪ್ರಮುಖ ಭಾಷಣವನ್ನು 2007ರ ಜೂನ್‌ನಲ್ಲಿ ಪಕ್ಷದ ಕೇಂದ್ರೀಯ ಶಾಲೆಯಲ್ಲಿ ಹೂ ನೀಡಿದ. ಚೀನಾದ ಜನಸಾಮಾನ್ಯರನ್ನು ಆಕರ್ಷಿಸಲು ತನ್ನ ಭಾಷಣದಲ್ಲಿ ಒಂದು ಅತೀವವಾದ ಶ್ರೀಸಾಮಾನ್ಯ ಪಕ್ಷದ ಧ್ವನಿಯನ್ನು ಹೂ ಬಳಸಿದ ಹಾಗೂ ಚೀನಾ ಎದುರಿಸುತ್ತಿರುವ ಇತ್ತೀಚಿನ ಸವಾಲುಗಳ ಕುರಿತಾಗಿ, ಅದರಲ್ಲೂ ವಿಶೇಷವಾಗಿ ಆದಾಯದ ಅಸಮಾನತೆಗೆ ಸಂಬಂಧಿಸಿದ ಸವಾಲುಗಳ ಕುರಿತಾಗಿ ಗಂಭೀರ ಸ್ವರೂಪದ ಟಿಪ್ಪಣಿಗಳನ್ನು ಅವನು ತನ್ನ ಭಾಷಣದಲ್ಲಿ ಸೇರಿಸಿದ. ಇದರ ಜೊತೆಗೆ, ದೇಶದಲ್ಲಿನ "ವರ್ಧಿಸಿದ ಪ್ರಜಾಪ್ರಭುತ್ವ"ಕ್ಕೆ ಸಂಬಂಧಿಸಿದ ಅಗತ್ಯವಿರುವುದರ ಕುರಿತೂ ಹೂ ಸೂಚಿಸಿದ. ಸದರಿ ಪರಿಭಾಷೆಯು ಸಾರ್ವತ್ರಿಕವಾದ ಪಾಶ್ಚಾತ್ಯ ಪ್ರಜ್ಞೆಯಲ್ಲಿ ಹೊಂದಿರುವುದಕ್ಕಿಂತ ಪಕ್ಷದಲ್ಲಿ ವಿಭಿನ್ನ ಅರ್ಥಗಳನ್ನು ಹೊಂದಿದೆಯಾದರೂ, ಮುಂಬರುವ ದಿನಗಳಲ್ಲಿ ರಾಜತಾಂತ್ರಿಕ ಸುಧಾರಣೆಯನ್ನು ಕಾರ್ಯಸೂಚಿಯ ಒಂದು ಪ್ರಮುಖ ಭಾಗವಾಗಿ ಹೂನ ಆಡಳಿತವು ಇರಿಸಿದೆ ಎಂಬುದನ್ನು ಇದು ತೋರಿಸುತ್ತದೆ; ಈ ತೆರನಾದ ಧ್ವನಿಯು ಜಿಯಾಂಗ್‌ ಯುಗದ ಅವಧಿಯಲ್ಲಿ ಅಸ್ತಿತ್ವದಲ್ಲಿರಲಿಲ್ಲ.[ಸೂಕ್ತ ಉಲ್ಲೇಖನ ಬೇಕು]

ಮಾಧ್ಯಮಗಳ ಹತೋಟಿ

[ಬದಲಾಯಿಸಿ]

ಹೂ ಓರ್ವ "ಸೈದ್ಧಾಂತಿಕ ಉದಾರವಾದಿ"ಯಾಗಿದ್ದ ಎಂಬಂಥ ಆರಂಭಿಕ ನಿರೀಕ್ಷೆಗಳು ಇದ್ದಾಗ್ಯೂ, ಮಾಧ್ಯಮಗಳ ಉದಾರೀಕರಣಕ್ಕಿರುವ ಒಂದು ನ್ಯಾಯೋಚಿತವಾದ ಬಿಗಿ-ಪಟ್ಟಿನ ಮಾರ್ಗವನ್ನು ಹೂ ತೋರಿಸಿಕೊಟ್ಟಿದ್ದಾನೆ.

ಜನಪ್ರಿಯ ಕಾಳಜಿಯ ಅನೇಕ ವಿಷಯಗಳ ವರದಿಗಾರಿಕೆಯಲ್ಲಿ ಮಾಧ್ಯಮಗಳಿಗೆ ಮಹತ್ತರವಾದ ಮುಕ್ತ ಅವಕಾಶವನ್ನು ನೀಡುತ್ತಾ ಬರಲಾಗಿದ್ದು, 2008 ಸಿಚುವಾನ್‌ ಭೂಕಂಪದಂಥ ವಿಷಯಗಳೇ ಅಲ್ಲದೇ, ಸ್ಥಳೀಯ ಮಟ್ಟದಲ್ಲಿನ ದುಷ್ಕೃತ್ಯಗಳ ಕುರಿತಾಗಿಯೂ ಅವುಗಳಿಗೆ ಈ ತೆರನಾದ ಅವಕಾಶ ದೊರೆತಿದೆ. ಸರ್ಕಾರವು ಮಾಧ್ಯಮಗಳಿಗೆ ಸಂಬಂಧಿಸಿದ ತನ್ನ ಕಾರ್ಯನೀತಿಯ ಕುರಿತಾದ ಟೀಕೆಗೂ ಉತ್ತರ ಕೊಡುತ್ತಾ ಬಂದಿದೆ; SARS ಸಾಂಕ್ರಾಮಿಕ ರೋಗಕ್ಕೆ ನೀಡಿದ ಪ್ರತಿಕ್ರಿಯೆ, ಮತ್ತು ಜನಪ್ರಿಯನಾಗಿದ್ದ ಆದರೆ ಪದಚ್ಯುತಗೊಳಿಸಲ್ಪಟ್ಟ ಹಿಂದಿನ ನಾಯಕ ಝಾವೋ ಝಿಯಾಂಗ್‌‌ನ ಸಾರ್ವಜನಿಕ ಸ್ಮಾರಕೋತ್ಸವಗಳಿಗೆ ಸಂಬಂಧಿಸಿದಂತೆ ಇರುವ ನಿದರ್ಶನಗಳು ಇದಕ್ಕೆ ಉದಾಹರಣೆಯಾಗಬಲ್ಲವು.

ಅಂತರ್ಜಾಲದ ವಿಷಯಗಳಿಗೆ ಸಂಬಂಧಿಸಿದಂತೆ ಹೂ ಅತ್ಯಂತ ಜಾಗರೂಕತೆಯನ್ನು ತೋರಿಸಿಕೊಂಡು ಬಂದಿದ್ದಾನೆ; ರಾಜತಾಂತ್ರಿಕವಾಗಿ ಅತಿ ಸೂಕ್ಷ್ಮವಾದ ಸಾಮಗ್ರಿಕ್ಕೆ ಕತ್ತರಿಪ್ರಯೋಗ ಮಾಡುವ ವಿಷಯದಲ್ಲಿ ಅವನು ಜಿಯಾಂಗ್‌ ಯುಗಕ್ಕಿಂತಲೂ ಹೆಚ್ಚು ಕಟ್ಟುನಿಟ್ಟಾಗಿರುವುದು ಇದಕ್ಕೆ ನಿದರ್ಶನವಾಗಿದೆ.[ಸೂಕ್ತ ಉಲ್ಲೇಖನ ಬೇಕು] 2007ರ ಫೆಬ್ರುವರಿಯಲ್ಲಿ, ಪರಮಾವಧಿ ಕಾಲದ TV ಸರಣಿಗಳಲ್ಲಿ "ನೈತಿಕವಾಗಿ ಸರಿಯಾದ" ಹೂರಣವು ಇರಬೇಕೆಂದು ಚೀನಾದ ಎಲ್ಲಾ TV ಕೇಂದ್ರಗಳ ಮೇಲೆ ನಿರ್ಬಂಧವನ್ನು ಹೇರುವ ಮೂಲಕ ಸ್ವದೇಶಿ ಮಾಧ್ಯಮಗಳ ಮೇಲಿನ ಹತೋಟಿ ಕ್ರಮಗಳಲ್ಲಿ ಹೂ ತೊಡಗಿಸಿಕೊಂಡ- ಕೆಲವೊಂದು ಯಥಾವತ್ತಾದ ಪ್ರದರ್ಶನ ಕಾರ್ಯಕ್ರಮಗಳನ್ನು (ರಿಯಾಲಿಟಿ ಷೋಸ್‌) ಒಳಗೊಂಡಂತೆ ಸುಸಂಸ್ಕೃತವಲ್ಲದ ಕಾರ್ಯಕ್ರಮವನ್ನು ಸಿದ್ಧಪಡಿಸುವುದರ ಕುರಿತು ಅವನು ಆಕ್ಷೇಪಿಸಿದ್ದೂ ವಾಹಿನಿಗಳ ಮೇಲಿನ ನಿರ್ಬಂಧದಲ್ಲಿ ಸೇರಿತ್ತು; ಅಷ್ಟೇ ಅಲ್ಲ, ಸುದ್ದಿಯ ವರದಿಗಾರಿಕೆಯ ಮೇಲಿನ ಪ್ರಸಾರವ್ಯಾಪ್ತಿಯ "20 ನಿಷಿದ್ಧ ಪ್ರದೇಶಗಳನ್ನು" ಅವನು ಪಟ್ಟಿಮಾಡಿದ.

ತೈವಾನ್‌

[ಬದಲಾಯಿಸಿ]

ತನ್ನ ಅಧ್ಯಕ್ಷಗಿರಿಯ ಆರಂಭದಲ್ಲಿ, ಚೀನಾದ ಗಣರಾಜ್ಯದ ಅಂದಿನ ಅಧ್ಯಕ್ಷನಾದ ಚೆನ್‌ ಷುಯಿ-ಬಿಯಾನ್‌ ರೂಪದಲ್ಲಿನ, ಸ್ವಾತಂತ್ರ್ಯ-ಬೆಂಬಲಿಸುವ ಓರ್ವ ಪೂರಕ ವ್ಯಕ್ತಿಗೆ ಹೂ ಮುಖಾಮುಖಿಯಾದ. 1992ರ ಬಹುಮತಾಭಿಪ್ರಾಯಕ್ಕೆ ಮನ್ನಣೆ ಕೊಡದೆಯೇ, ಯಾವುದೇ ಪೂರ್ವಷರತ್ತುಗಳಿಲ್ಲದೆಯೇ ಮಾತುಕತೆಗಳಿಗಾಗಿ ಚೆನ್‌ ಕರೆನೀಡಿದ. ತೈವಾನಿಯರ ಸ್ವಾತಂತ್ರ್ಯದ ಅಂತಿಮ ಗುರಿಯೊಂದನ್ನು ವ್ಯಕ್ತಪಡಿಸುವ, ಹಾಗೂ PRCಯ ವತಿಯಿಂದ ಪ್ರಚೋದನಕಾರಿ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದ ತೈವಾನ್‌ನ ರಾಜತಾಂತ್ರಿಕ ಸ್ಥಾನಮಾನದ ಕುರಿತಾದ ಹೇಳಿಕೆಗಳನ್ನು ನೀಡುವ ಪರಿಪಾಠಗಳು ಚೆನ್‌ ಷುಯಿ-ಬಿಯಾನ್‌ ಮತ್ತು ಅವನ ಪಕ್ಷದ ವತಿಯಿಂದ ಮುಂದುವರಿದಿದ್ದವು. ಹೂನ ಆರಂಭಿಕ ಪ್ರತಿಕ್ರಿಯೆಯಲ್ಲಿ "ಮೃದುವಾದ" ಮತ್ತು "ಗಡುಸಾದ" ವಿಧಾನಗಳ ಒಂದು ಸಂಯೋಜನೆಯು ಸೇರಿಕೊಂಡಿತ್ತು. ಒಂದೆಡೆ, ಕಳವಳಕ್ಕೆ ಸಂಬಂಧಿಸಿದ ಅನೇಕ ವಿವಾದಾಂಶಗಳ ಕುರಿತಾಗಿ ಸಂಧಾನದ ಮೂಲಕ ತೀರ್ಮಾನಿಸುವುದರೆಡೆಗೆ ಬಗ್ಗುವ ಒಂದು ವರ್ತನೆಯನ್ನು ತೈವಾನ್‌ನೆಡೆಗೆ ಹೂ ವ್ಯಕ್ತಪಡಿಸಿದ. ಮತ್ತೊಂದೆಡೆ, ಪೂರ್ವಷರತ್ತುಗಳು ಇಲ್ಲದೆಯೇ ಮಾತುಕತೆಗಳನ್ನು ನಡೆಸುವುದಕ್ಕೆ ಅವನು ನಿರಾಕರಿಸುತ್ತಲೇ ಹೋದ ಮತ್ತು ಚೀನಾದ ಪುನರೇಕೀಕರಣವೇ ಒಂದು ಅಂತಿಮವಾದ ಗುರಿ ಎಂಬ ಧ್ಯೇಯಕ್ಕೆ ಬದ್ಧನಾಗಿ ಉಳಿದುಕೊಂಡ. ತೈವಾನ್‌ಗೆ ಸಂಬಂಧಿಸಿದಂತೆ "ಅಂತರರಾಷ್ಟ್ರೀಯ ಬದುಕುನಾಡಿನ" ವಿವಾದಾಂಶವನ್ನು ಪರಿಹರಿಸುವುದರ ಕುರಿತು ತಾನು ಪ್ರಸ್ತಾವಿಸಿದ್ದ ಮೇ ತಿಂಗಳ 17ರ ಹೇಳಿಕೆಯಲ್ಲಿ ಇರುವಂತೆ, ತೈವಾನ್‌ ಜೊತೆಗಿನ ರಾಜತಾಂತ್ರಿಕ ಬಾಂಧವ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚು ಬಗ್ಗಿರುವುದರ ಒಂದಷ್ಟು ಸೂಚನೆಗಳನ್ನು ಹೂ ಜಿಂಟಾವೊ ನೀಡಿದ ವೇಳೆಯಲ್ಲಿಯೇ, ಚೀನಾದ ವತಿಯಿಂದ ಕಾನೂನು ರೀತ್ಯಾ ಸ್ವಾತಂತ್ರ್ಯವು ಘೋಷಿಸಲ್ಪಡಬೇಕು ಎಂಬುದಕ್ಕೆ ತೈವಾನಿನ ಸರ್ಕಾರದಿಂದ ಮಾಡಲ್ಪಡುವ ಯಾವುದೇ ಪ್ರಯತ್ನವನ್ನು ಪ್ರಧಾನ ಭೂಭಾಗವು ಸಹಿಸುವುದಿಲ್ಲ ಎಂಬ ತನ್ನ ನಿಲುವಿಗೆ ಹೂನ ಸರ್ಕಾರವು ಪಟ್ಟಾಗಿ ಅಂಟಿಕೊಂಡಿತು.

2004ರಲ್ಲಿ ಚೆನ್‌ ಷುಯಿ-ಬಿಯಾನ್‌ನ ಮರು-ಚುನಾವಣೆಯಾದ ನಂತರ, ಹೂನ ಸರ್ಕಾರವು ತನ್ನ ಕಾರ್ಯತಂತ್ರವನ್ನು ಬದಲಾಯಿಸಿತು. ಚೆನ್‌ ಷುಯಿ-ಬಿಯಾನ್‌ ಮತ್ತು DPPಯ ಸ್ವಾತಂತ್ರ್ಯ ಪ್ರವೃತ್ತಿಗಳ ಕಾರಣದಿಂದಾಗಿ ಹಾಗೂ 1992ರ ಬಹುಮತಾಭಿಪ್ರಾಯಕ್ಕೆ ಮನ್ನಣೆ ಕೊಡದಿರುವಿಕೆಯಿಂದಾಗಿ, ಆಗಿನ ತೈಪೀ ಆಡಳಿತದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದದಿರುವ ಕಾರ್ಯನೀತಿಯೊಂದನ್ನು ಹೂನ ಸರ್ಕಾರವು ನಿರ್ವಹಿಸಿತು. ತೈವಾನ್‌ ವಿರುದ್ಧವಾಗಿ ತನ್ನ ಸೇನಾ ಜಮಾವಣೆಯನ್ನು ಸರ್ಕಾರವು ಕಾಯ್ದುಕೊಂಡಿತು, ಮತ್ತು ತೈವಾನ್‌ನ್ನು ರಾಜತಾಂತ್ರಿಕವಾಗಿ ಪ್ರತ್ಯೇಕವಾಗಿಸುವ ಹುರುಪಿನ ಕಾರ್ಯನೀತಿಯೊಂದನ್ನು ಅನುಸರಿಸಿತು. ತೈವಾನ್‌ನಲ್ಲಿನ ಸ್ವಾತಂತ್ರ್ಯದ ಘೋಷಣೆಯೊಂದಕ್ಕೆ ನೀಡಿದ ಒಂದು ಪ್ರತಿಕ್ರಿಯೆಯ ಆಯ್ಕೆಯಾಗಿ, "ಶಾಂತಿಯುತವಲ್ಲದ ಮಾರ್ಗಗಳನ್ನು" ವಿಧ್ಯುಕ್ತಗೊಳಿಸುವ ಅಥವಾ ಕಾನೂನುಬದ್ಧ ರೂಪವನ್ನು ಕೊಡುವ ಪ್ರತ್ಯೇಕತಾ-ವಿರೋಧಿ ಕಾನೂನನ್ನು 2005ರ ಮಾರ್ಚ್‌ನಲ್ಲಿ ಜನಪ್ರತಿನಿಧಿಗಳ ರಾಷ್ಟ್ರೀಯ ಸಮಾವೇಶವು‌ ಅಂಗೀಕರಿಸಿತು.

1920ರ ದಶಕದಲ್ಲಿ ಕಮ್ಯೂನಿಸ್ಟ್‌ ಕ್ರಾಂತಿಯು ಆರಂಭವಾದಾಗಿನಿಂದಲೂ ತನ್ನ ಮೂಲಭೂತ ಶತ್ರುವಾಗಿರುವ, ಮತ್ತು ತೈವಾನ್‌ನಲ್ಲಿ ಈಗಲೂ ಒಂದು ಪ್ರಮುಖ ಪಕ್ಷವಾಗಿರುವ ಕ್ಯುವೋಮಿಂಟಾಂಗ್‌ (KMT) ಜೊತೆಯಲ್ಲಿ ಹೂನ ಸರ್ಕಾರವು ಸಂಪರ್ಕಗಳನ್ನು ಹೆಚ್ಚಿಸಿಕೊಂಡಿತು. ಚೀನಾದ ಕಮ್ಯೂನಿಸ್ಟ್‌ ಪಕ್ಷ (CPC) ಮತ್ತು ಚಿಯಾಂಗ್‌ ಕೈ-ಶೇಕ್‌ನ ಕ್ಯುವೋಮಿಂಟಾಂಗ್‌ ಪಕ್ಷಗಳೆರಡೂ ಉತ್ತರದ ವಿಶೇಷ ಕಾರ್ಯಯಾತ್ರೆಯಲ್ಲಿ ಎರಡು ಸಲ ಸಹಕಾರ ನೀಡಿದ್ದರ ನಿದರ್ಶನಕ್ಕೆ ಅವೆರಡರ ನಡುವಿನ ಬಾಂಧವ್ಯವು ಕರೆದೊಯ್ಯುತ್ತದೆ. ಚೀನಾದ ನಾಗರಿಕ ಯುದ್ಧದ ಸಂದರ್ಭದಲ್ಲಷ್ಟೇ ಅವು ನಿರ್ದಯಿ ಶತ್ರುಗಳಾಗಿದ್ದವು; ಆದರೂ, 1945ರ ನಂತರ ಹಾಗೂ 1949ರಲ್ಲಿ ಚಿಯಾಂಗ್‌ ಕೈ-ಶೇಕ್‌ ತೈವಾನ್‌ಗೆ ಪಲಾಯನ ಮಾಡಿದ ನಂತರ ಅವುಗಳ ನಡುವೆ ಹಗೆತನಗಳು ಪುನರಾರಂಭಗೊಳ್ಳುವುದಕ್ಕೆ ಮುಂಚಿತವಾಗಿ ಜಪಾನ್‌ ವಿರುದ್ಧದ ಯುದ್ಧದ ಸಂದರ್ಭದಲ್ಲಿ ಅವು ನಾಮಮಾತ್ರವಾಗಿ ಮಿತ್ರಪಕ್ಷಗಳಾಗಿ ಉಳಿದುಕೊಂಡವು. ವರ್ಧಿಸಿದ ಸಂಪರ್ಕಗಳು ಚೀನಾ ಪ್ರಧಾನ ಭೂಭಾಗಕ್ಕೆ 2005ರ ಪ್ಯಾನ್‌-ಬ್ಲೂ ಭೇಟಿಗಳು ನಡೆಯುವಲ್ಲಿ ಮುಂದುವರಿದವು; 2005ರಲ್ಲಿ ಅಂದಿನ KMT ಸಭಾಪತಿ ಲಿಯೆನ್ ಚಾನ್‌ ಹಾಗೂ ಹೂ ನಡುವೆ ನಡೆದ ಒಂದು ಐತಿಹಾಸಿಕ ಸಭೆಯೂ ಇದರಲ್ಲಿ ಸೇರಿತ್ತು.[೨೭][೨೮]

2008ರ ಮಾರ್ಚ್‌ 20ರಂದು, ತೈವಾನ್‌ನಲ್ಲಿನ ಅಧ್ಯಕ್ಷಗಿರಿಯನ್ನು ಕ್ಯುವೋಮಿಂಟಾಂಗ್ ಗೆದ್ದುಕೊಂಡಿತು. ಇದು ಶಾಸನ ರಚನೆಯ ಯುವಾನ್‌‌ನಲ್ಲಿಯೂ ಒಂದು ಬಹುಮತವನ್ನು ಹೊಂದಿದೆ. ತೈವಾನ್‌ಗೆ ಷರತ್ತುಗಳನ್ನು ಅನೇಕವೇಳೆ ಆದೇಶಿಸಿದ ತನ್ನ ಪೂರ್ವವರ್ತಿಗಳಿಗೆ ಹೋಲಿಸಿದಾಗ, ತೈವಾನ್‌ ಜೊತೆಗಿನ ಸಂಬಂಧಗಳನ್ನು ಬಯಸುವಲ್ಲಿ ಹೂ ಪೂರ್ವ ನಿಯಾಮಕತೆಯನ್ನು ಮೆರೆದಿದ್ದಾನೆ; ಅದರಲ್ಲೂ ವಿಶೇಷವಾಗಿ ಏಕೀಕರಣ-ಪರವಾದ ಕ್ಯುವೋಮಿಂಟಾಂಗ್‌ ಪಕ್ಷದೊಂದಿಗಿನ ಬಾಂಧವ್ಯದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತದೆ.[೨೯]

CPC ಮತ್ತು KMTಗಳ ನಡುವೆ ಐತಿಹಾಸಿಕ ಸಭೆಗಳ ಒಂದು ಸರಣಿಯೇ ನಡೆಯಿತು. ಬೊವಾವೊ ಫೋರಮ್‌ ಫಾರ್‌ ಏಷ್ಯಾದ ಸಂದರ್ಭದಲ್ಲಿ ಕ್ರಾಸ್‌-ಸ್ಟ್ರೈಟ್‌ ಕಾಮನ್‌ ಮಾರ್ಕೆಟ್‌ ಫೌಂಡೇಷನ್‌ನ ಸಭಾಪತಿಯಾಗಿದ್ದು, ಆಗ ROCಯ ಉಪಾಧ್ಯಕ್ಷ ಪದವಿಗೆ ಚುನಾಯಿಸಲ್ಪಟ್ಟಿದ್ದ ವಿನ್ಸೆಂಟ್‌ ಸ್ಯೂ ಜೊತೆಗೆ 2008ರ ಏಪ್ರಿಲ್‌ 12ರಂದು ಹೂ ಜಿಂಟಾವೊ ಒಂದು ಐತಿಹಾಸಿಕ ಸಭೆಯನ್ನು ನಡೆಸಿದ. 2008ರ ಮೇ ತಿಂಗಳ 28ರಂದು, KMT ಸಭಾಪತಿ ವೂ ಪೊಹ್‌-ಹ್ಸಿಯುಂಗ್‌ ಜೊತೆಯಲ್ಲಿ ಹೂ ಸಭೆ ಸೇರಿದ. ಇದು ಆಡಳಿತ ಪಕ್ಷಗಳಾಗಿ CPC ಮತ್ತು KMTಗಳ ಮುಖ್ಯಸ್ಥರ ನಡುವೆ ನಡೆದ ಮೊದಲ ಸಭೆಯಾಗಿತ್ತು. 1992ರ ಬಹುಮತಾಭಿಪ್ರಾಯದ ಅಡಿಯಲ್ಲಿ ಎರಡೂ ಪಕ್ಷಸ್ಥರು ಅಧಿಕೃತ ಮಾತುಕತೆಗಳನ್ನು ಮತ್ತೆ-ಪ್ರಾರಂಭಿಸಬೇಕು ಎಂಬ ಅಭಿಪ್ರಾಯಕ್ಕೆ ಈ ಸಭೆಯ ಸಂದರ್ಭದಲ್ಲಿ ಹೂ ಮತ್ತು ವೂ ಸಮ್ಮತಿಸಿದರು. ವಿಶ್ವ ಆರೋಗ್ಯ ಸಂಘಟನೆಯಲ್ಲಿ ತೈವಾನಿಯರ ಭಾಗವಹಿಸುವಿಕೆಗೆ ಅವಕಾಶ ನೀಡುವ ಒಂದು ಆದ್ಯತೆಯೊಂದಿಗೆ, ಭದ್ರತೆ, ಘನತೆ, ಮತ್ತು "ಅಂತರರಾಷ್ಟ್ರೀಯ ಬದುಕುನಾಡು" ಇವೇ ಮೊದಲಾದ ವಿಷಯಗಳಿಗೆ ಸಂಬಂಧಿಸಿದ ತೈವಾನಿನ ಜನರ ಕಳವಳಗಳನ್ನು ಪರಿಹರಿಸುವುದರ ಕಡೆಗೆ ಹೂ ತನ್ನ ಸರ್ಕಾರವನ್ನು ಬದ್ಧವಾಗಿಸಿದ್ದ ತೈವಾನಿಯರ ಸ್ವಾತಂತ್ರ್ಯದ ವಿರುದ್ಧ, ವೂ ತೈವಾನ್‌ನಲ್ಲಿ ಹೊಸ ಸರ್ಕಾರವನ್ನು ಬದ್ಧವಾಗಿಸಿದ.

ಪಕ್ಷದಿಂದ ಪಕ್ಷಕ್ಕಿರುವ ಸಂಪರ್ಕದ ರೀತಿಯಲ್ಲಿಯೇ, ಸ್ಟ್ರೈಟ್ಸ್‌ ಎಕ್ಸ್‌ಚೇಂಜ್‌ ಫೌಂಡೇಷನ್‌ ಮತ್ತು ಅಸೋಸಿಯೇಷನ್‌ ಫಾರ್‌ ರಿಲೇಷನ್ಸ್‌ ಅಕ್ರಾಸ್‌ ದಿ ತೈವಾನ್‌ ಸ್ಟ್ರೈಟ್ಸ್‌ ಮೂಲಕದ ಅರೆ-ಸರ್ಕಾರೀ ಮಾತುಕತೆಯ ಸಂಪರ್ಕವು 2008ರ ಜೂನ್‌ನಲ್ಲಿ ಮತ್ತೆ-ಪ್ರಾರಂಭವಾಗುವುದರ ಕುರಿತು ನಿಗದಿಪಡಿಸಲಾಗಿದ್ದು, ಇದು 1992ರ ಬಹುಮತಾಭಿಪ್ರಾಯವನ್ನು ಆಧರಿಸಲಿದೆ. ಮೊದಲ ಸಭೆಯು ಬೀಜಿಂಗ್‌ನಲ್ಲಿ ನಡೆದಿತ್ತು ಎಂಬುದು ಇಲ್ಲಿ ಸ್ಮರಣೀಯ ಅಂಶವಾಗಿದೆ. ತೈವಾನ್‌ ಬಿಕ್ಕಟ್ಟನ್ನು ಕುರಿತಾದ ಎರಡು ಪಕ್ಷಸ್ಥರ ನಡುವಿನ ಸಂಧಾನ ಸಭೆಗಳಿಗೆ ಸಂಬಂಧಿಸಿದಂತೆ 1992ರ ಬಹುಮತಾಭಿಪ್ರಾಯವೇ ಮೂಲಾಧಾರ ಎಂಬುದಕ್ಕೆ ಹೂ ಮತ್ತು ಅವನ ಹೊಸ ಪೂರಕ ವ್ಯಕ್ತಿಯಾದ ಮಾ ಯಿಂಗ್‌-ಜಿಯು ಇಬ್ಬರೂ ಸಮ್ಮತಿಸುತ್ತಾರೆ. 2008ರ ಮಾರ್ಚ್‌ 26ರಂದು, US ಅಧ್ಯಕ್ಷ ಜಾರ್ಜ್‌ W. ಬುಷ್‌ ಜೊತೆಯಲ್ಲಿ ಹೂ ಜಿಂಟಾವೊ ದೂರವಾಣಿ ಮಾತುಕತೆಯೊಂದನ್ನು ನಡೆಸಿದ. ಈ ಅವಧಿಯಲ್ಲಿ ಆತ CPCಯ ನಾಯಕನಾಗಿ, '1992 ಬಹುಮತಾಭಿಪ್ರಾಯ'ವು "ಕೇವಲ ಒಂದೇ ಒಂದು ಚೀನಾ ಇದೆ ಎಂದು ಎರಡೂ ಪಕ್ಷಸ್ಥರು ಗುರುತಿಸುವುದನ್ನು, ಆದರೆ ಅದರ ವ್ಯಾಖ್ಯೆಯ ಕುರಿತಾಗಿ ಭಿನ್ನವಾಗಿರಲು ಸಮ್ಮತಿಸುವುದನ್ನು" ನೋಡುತ್ತದೆ ಎಂಬುದನ್ನು ಮೊದಲ ಬಾರಿಗೆ ಒಪ್ಪಿಕೊಂಡ.[೩೦] ಮೂರು ಕೊಂಡಿಗಳ ತೆರೆಯುವಿಕೆಯು SEF-ARATS ಸಭೆಗೆ ಸಂಬಂಧಿಸಿದಂತಿರುವ ಮೊದಲ ಆದ್ಯತೆಯಾಗಿದೆ. ಅದರಲ್ಲೂ ವಿಶೇಷವಾಗಿ, ಚೀನಾದ ಪ್ರಧಾನ ಭೂಭಾಗ ಹಾಗೂ ತೈವಾನ್‌ ನಡುವಿನ ನೇರ ವಿಮಾನಗಳ ಆಯೋಜನೆಯು ಇದರಲ್ಲಿ ಸೇರಿಕೊಂಡಿದೆ.

ನೈತಿಕ ಮಾರ್ಗದರ್ಶನ

[ಬದಲಾಯಿಸಿ]

ಚೀನಾದಲ್ಲಿರುವ ಮಹತ್ತರ ಪ್ರಮಾಣದ ಸಾಮಾಜಿಕ ಸಮಸ್ಯೆಗಳಿಗೆ ನೀಡಿದ ಪ್ರತಿಕ್ರಿಯೆಯಾಗಿ, 2006ರ ಮಾರ್ಚ್‌ನಲ್ಲಿ "ಎಯ್ಟ್‌ ಆನರ್ಸ್‌ ಅಂಡ್ ಎಯ್ಟ್‌ ಷೇಮ್ಸ್‌" ಎಂಬ ಶೀರ್ಷಿಕೆಯನ್ನು ಹೊಂದಿದ್ದ, ಚೀನಾದ ಜನರು ಅನುಸರಿಸಬೇಕಾಗಿದ್ದ ನೈತಿಕ ನಿಯಮಾವಳಿಗಳ ಒಂದು ಸಂಗ್ರಹವನ್ನು ಹೂ ಜಿಂಟಾವೊ ಬಿಡುಗಡೆಮಾಡಿದ, ಹಾಗೂ ತರುಣ ಜನಾಂಗಕ್ಕೆ ಇದರ ಸಂದೇಶವನ್ನು ಹರಡಬೇಕಾಗಿರುವುದರ ಅಗತ್ಯಕ್ಕೆ ಒತ್ತು ನೀಡಿದ.[೩೧] ಪರ್ಯಾಯವಾಗಿ "ಎಯ್ಟ್‌ ಆನರ್ಸ್‌ ಅಂಡ್‌ ಡಿಗ್ರೇಸಸ್‌" ಎಂಬ ಹೆಸರಿನಿಂದ ಪರಿಚಿತವಾಗಿರುವ ಈ ನಿಯಮಾವಳಿಗಳ ಸಂಗ್ರಹವು ಎಂಟು ಕಾವ್ಯಾತ್ಮಕ ಸಾಲುಗಳನ್ನು ಒಳಗೊಂಡಿದ್ದು, ಓರ್ವ ಒಳ್ಳೆಯ ನಾಗರಿಕನು ಯಾವುದನ್ನು ಒಂದು ಗೌರವ ಎಂಬುದಾಗಿ ಪರಿಗಣಿಸಬೇಕು, ಮತ್ತು ಯಾವುದನ್ನು ಒಂದು ಅವಮಾನ ಎಂಬುದಾಗಿ ಪರಿಗಣಿಸಬೇಕು ಎಂಬ ಅಂಶಗಳು ಇದರಲ್ಲಿ ಸಂಕ್ಷೇಪಿಸಲ್ಪಟ್ಟಿವೆ. ದಿನೇ ದಿನೇ ನಾಜೂಕಾಗುತ್ತಾ ಹೋಗುತ್ತಿರುವ ಸಾಮಾಜಿಕ ಚೌಕಟ್ಟೊಂದರಲ್ಲಿ ಹಣಗಳಿಕೆ ಮತ್ತು ಅಧಿಕಾರ ಗಳಿಕೆಯ ಅಂಶಗಳಿಗೆ ಪ್ರಧಾನವಾಗಿ ಗಮನಹರಿಸುತ್ತಿರುವ ಚೀನಿಯರ ಪೀಳಿಗೆಯೊಂದನ್ನು ಚೀನಾದ ಆರ್ಥಿಕ ಸುಧಾರಣೆಗಳು ಅಸ್ತಿತ್ವಕ್ಕೆ ತಂದ ನಂತರ, ಚೀನಾದಲ್ಲಿ ಹೆಚ್ಚುತ್ತಲೇ ಇದೆ ಎಂಬುದಾಗಿ ಗ್ರಹಿಸಲ್ಪಟ್ಟಿರುವ ನೈತಿಕತೆಯ ಕೊರತೆಗೆ ಹೂ ಜಿಂಟಾವೊ ನೀಡಿರುವ ಸೈದ್ಧಾಂತಿಕ ಪರಿಹಾರೋಪಾಯಗಳ ಪೈಕಿ ಇದು ಒಂದಾಗಿದೆ ಎಂಬುದಾಗಿ ವ್ಯಾಪಕವಾಗಿ ಪಡಿಗಣಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು]

ಮಾರ್ಕ್ಸ್‌ವಾದಿ ಸಿದ್ಧಾಂತಕ್ಕೆ ತಮ್ಮದೇ ಆದ ಕೊಡುಗೆಗಳನ್ನು ನೀಡುವುದು ಚೀನಾದ ಕಮ್ಯೂನಿಸ್ಟ್‌ ನಾಯಕರಿಗೆ ಒಂದು ಸಂಪ್ರದಾಯವಾಗಿಬಿಟ್ಟಿದೆ. [ಸೂಕ್ತ ಉಲ್ಲೇಖನ ಬೇಕು] ಇದು ಮಾರ್ಕ್ಸ್‌ವಾದಿ ಸಿದ್ಧಾಂತಕ್ಕೆ ಹೂ ನೀಡಿರುವ ಕೊಡುಗೆಯೇ ಎಂಬುದು ಚರ್ಚಾಯೋಗ್ಯ ವಿಷಯವಾಗಿದೆಯಾದರೂ, ಇದರ ಕುರಿತು ಚೀನಾದ ಸಾರ್ವಜನಿಕರು ಹೊಂದಿರುವ ಸಾಮಾನ್ಯ ಗ್ರಹಿಕೆಯು ಮಧ್ಯಸ್ಥವಾದ ಮಟ್ಟದಲ್ಲಿದೆ ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು] ಆದಾಗ್ಯೂ, ಇದರ ಪ್ರಚಾರ-ಪ್ರವರ್ತನೆಯು ಹೆಚ್ಚೂಕಮ್ಮಿ ಎಲ್ಲೆಡೆ ಗೋಚರಿಸುತ್ತದೆ: ತರಗತಿಯ ಭಿತ್ತಿಪತ್ರಗಳಲ್ಲಿ, ಬೀದಿಗಳಲ್ಲಿನ ಪ್ರದರ್ಶನ ಪತಾಕೆಗಳಲ್ಲಿ ಹಾಗೂ 2008ರ ಒಲಿಂಪಿಕ್ಸ್‌ನ ಸಿದ್ಧತೆಗೆ ಸಂಬಂಧಿಸಿದಂತಿರುವ ವಿದ್ಯುನ್ಮಾನ ಪ್ರದರ್ಶಿಕೆಯ ಫಲಕಗಳಲ್ಲಿ, ಮತ್ತು ಶಾಂಘೈಯಲ್ಲಿನ 2010ರ ವಿಶ್ವ ಎಕ್ಸ್‌ಪೊನಲ್ಲಿ ಇದು ಗೋಚರಿಸುತ್ತದೆ. ಅವನ ಪೂರ್ವವರ್ತಿಗಳ ಸಿದ್ಧಾಂತಗಳಾದ, ಜಿಯಾಂಗ್‌ನ ಮೂರು ಪ್ರತಿನಿಧಿತ್ವಗಳ ಸಿದ್ಧಾಂತ, ಡೆಂಗ್‌‌ ಕ್ಸಿಯೋಪಿಂಗ್‌‌ ಸಿದ್ಧಾಂತ, ಮತ್ತು ಮಾವೊ ಝೆಡಾಂಗ್‌ ಚಿಂತನೆ ಇವೇ ಮೊದಲಾದವುಗಳಿಂದ ಸದರಿ ನಿಯಮಾವಳಿಗಳು ಭಿನ್ನವಾಗಿ ನಿಲ್ಲುತ್ತವೆ; ಇಲ್ಲಿ ವ್ಯಕ್ತವಾಗಿರುವ ಗಮನವು, ಸಾಮಾಜಿಕ ಅಥವಾ ಆರ್ಥಿಕ ಗುರಿಗಳನ್ನು ನಿಗದಿಪಡಿಸುವುದಕ್ಕೆ ಪ್ರತಿಯಾಗಿ, ನೈತಿಕ ಮಾನದಂಡಗಳನ್ನು ಸಂಕೇತಿಸುವುದರ ಕಡೆಗೆ ಮೊತ್ತಮೊದಲ ಬಾರಿಗೆ ವರ್ಗಾಯಿಸಲ್ಪಟ್ಟಿದೆ.

ವೈಯಕ್ತಿಕ ಜೀವನ

[ಬದಲಾಯಿಸಿ]

ತ್ಸಿಂಘುವಾ ವಿಶ್ವವಿದ್ಯಾಲಯದಲ್ಲಿ ಭೇಟಿಯಾದ ಲಿಯು ಯಾಂಗ್‌ಕಿಂಗ್‌‌ಳನ್ನು ಹೂ ಮದುವೆಯಾಗಿದ್ದಾನೆ. ಅವರಿಗೆ ಹೂ ಹೈಫೆಂಗ್‌‌ ಮತ್ತು ಹೂ ಹೈಕಿಂಗ್‌‌ ಎಂಬ ಇಬ್ಬರು ಮಕ್ಕಳಿದ್ದಾರೆ. ಗಾಢವಾಗಿರುವ ಪ್ರಾದೇಶಿಕ ಗುಣಲಕ್ಷಣಗಳಿಲ್ಲದ, ತುಲನಾತ್ಮಕವಾಗಿ ಒತ್ತುಹಾಕದ ಶಿಷ್ಟ ಮ್ಯಾಂಡರಿನ್‌ ಭಾಷೆಯನ್ನು ಮಾತನಾಡುವಲ್ಲಿ ಹೂ ಸಾರ್ವಭೌಮಾಧಿಕಾರದ ಮೊದಲ PRC ನಾಯಕ ಎನಿಸಿಕೊಂಡಿದ್ದಾನೆ.[ಸೂಕ್ತ ಉಲ್ಲೇಖನ ಬೇಕು] ಒಂದು ಜಾಗರೂಕ ವರ್ತನೆ ಮತ್ತು ಸ್ವಯಂ-ಅಸಮ್ಮತಿ ಸೂಚಿಸುವ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯಾಗಿ ಅವನು ಸುಪರಿಚಿತನಾಗಿದ್ದಾನೆ.[ಸೂಕ್ತ ಉಲ್ಲೇಖನ ಬೇಕು] ಪ್ರಧಾನಮಂತ್ರಿ ವೆನ್‌ ಜಿಯಾಬಾವೊಗಿಂತ ಭಿನ್ನವಾಗಿರುವ ಅವನು ಒಂದಾದ ಮೇಲೊಂದರಂತೆ ಸಾರ್ವಜನಿಕ ಸಂದರ್ಶನವೊಂದನ್ನು ಎಂದಿಗೂ ನೀಡಿಲ್ಲ.[೩೨] ಟೇಬಲ್‌ ಟೆನಿಸ್‌ ಮತ್ತು ನೃತ್ಯಮಂದಿರದಲ್ಲಿನ ನರ್ತನಕ್ಕೆ ಸಂಬಂಧಿಸಿದ ತನ್ನ ಅಭಿರುಚಿಯಿಂದಾಗಿ ಅವನು ಗಮನ ಸೆಳೆದಿದ್ದಾನೆ. ಅವನ ಪ್ರೌಢಶಾಲೆ ದಿನಗಳಲ್ಲಿ ಸ್ಪಷ್ಟವಾಗಿ ಕಂಡುಬಂದಿದ್ದ ಛಾಯಾಚಿತ್ರದಂತೆ ಸ್ಫುಟವಾದ ಜ್ಞಾಪಕಶಕ್ತಿಯೊಂದನ್ನೂ ಸಹ ಹೂ ಹೊಂದಿದ್ದಾನೆ ಎಂದು ಹೇಳಲಾಗುತ್ತದೆ.[೩೩][೩೪]

ಟಿಪ್ಪಣಿಗಳು

[ಬದಲಾಯಿಸಿ]
  1. Elegant, Simon (4 ಅಕ್ಟೋಬರ್ 2007). "In China, Hu is the Man to See". TIME. Archived from the original on 19 ಜೂನ್ 2010. Retrieved 13 ಮಾರ್ಚ್ 2010. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  2. Luard, Tim (11 ಜನವರಿ 2005). "BBC:China's Leader shows his stripes. 11 January 2005". BBC News. Retrieved 13 ಮಾರ್ಚ್ 2010.
  3. World Savvy Monitor: China and the World - A foreign policy overview[ಶಾಶ್ವತವಾಗಿ ಮಡಿದ ಕೊಂಡಿ]
  4. ೪.೦ ೪.೧ ೪.೨ ೪.೩ ೪.೪ "Kuhn, Robert Lawrence: Hu's Political Philosophies" (PDF). Esnips.com. Archived from the original (PDF) on 25 ಮಾರ್ಚ್ 2009. Retrieved 13 ಮಾರ್ಚ್ 2010. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  5. "President of the People's Republic". GOV.cn. Archived from the original on 1 ಡಿಸೆಂಬರ್ 2008. Retrieved 7 ಫೆಬ್ರವರಿ 2011.
  6. Havely, Joe (19 ಅಕ್ಟೋಬರ್ 2007). "Getting to know Hu". Al Jazeera. Retrieved 7 ಏಪ್ರಿಲ್ 2009.
  7. "临夏旅游" (ಲಿಂಕ್ಸಿಯಾ ಟೂರಿಸಂ), ಲಿಂಕ್ಸಿಯಾ ಹುಯಿ ಆಟೊನಮಸ್‌ ಪ್ರಿಫೆಕ್ಚರ್‌ ಟೂರಿಸ್ಟ್‌ ಬೋರ್ಡ್‌ನಿಂದ ಪ್ರಕಟಿಸಲ್ಪಟ್ಟಿತು, 2003. 146 ಪುಟಗಳು. ISBN ಇಲ್ಲ. ಪುಟಗಳು 26-27.
  8. Nathan, Andrew J. (ಮಾರ್ಚ್ 2003). China's new rulers: the secret files. New York: The New York Review of Books. p. 79. ISBN I-59017-072-5. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  9. ನಾಥನ್‌ & ಗಿಲ್ಲೆ, ಪುಟ 40
  10. "Hu Jintao". People's Daily. Retrieved 16 ಏಪ್ರಿಲ್ 2010.
  11. Ewing, Richard Daniel (20 ಮಾರ್ಚ್ 2003). "Hu Jintao: The Making of a Chinese General Secretary". The China Quarterly. Cambridge University Press. 173: 17–34. Retrieved 16 ಏಪ್ರಿಲ್ 2010.ಸಂಪೂರ್ಣ ಲೇಖನ Archived 18 July 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
  12. ನಾಥನ್‌ & ಗಿಲ್ಲೆ, ಪುಟ 42
  13. Sisci, Francesco (9 ನವೆಂಬರ್ 2005). "Democracy with Chinese characteristics". Asia Times Online. Archived from the original on 17 ಮೇ 2008. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  14. ೧೪.೦ ೧೪.೧ Lam, Willy Wo-Lap (2006). Chinese Politics in the Hu Jintao Era. ME Sharpe. p. 7. ISBN 0765617730.
  15. ‌ಲ್ಯಾಮ್, 8
  16. ೧೬.೦ ೧೬.೧ ೧೬.೨ ೧೬.೩ Tkacik, John (29 ಏಪ್ರಿಲ್ 2002). "Who's Hu? Assessing China's Heir Apparent: Hu Jintao". The Heritage Foundation. Retrieved 2 ಜೂನ್ 2010.
  17. ಲ್ಯಾಮ್‌, 9
  18. ಲ್ಯಾಮ್‌, ಪುಟ 9
  19. ಮಾರ್ಚ್‌ 5ರ ಮೇಲಿನ ಹೂನ ಕ್ರಮಗಳಿಗೆ ಸಂಬಂಧಿಸಿದಂತೆ ವಿವರಣೆ ನೀಡುವ ವಿಲ್ಲಿ ಲ್ಯಾಮ್‌, ಇದು ಅವನ ಉನ್ನತ-ಮಟ್ಟದ ರಾಜತಾಂತ್ರಿಕ ಜಾಣ್ಮೆ ಮತ್ತು ಬುದ್ಧಿಸೂಕ್ಷ್ಮತೆಯ ಒಂದು ಸಮರ್ಥ ನಿದರ್ಶನ ಎನ್ನುತ್ತಾನೆ, ನೋಡಿ: ಲ್ಯಾಮ್‌, ಪುಟ 9.
  20. ನಾಥನ್‌ & ಗಿಲ್ಲೆ, ಪುಟಗಳು 42-43
  21. ನಾಥನ್‌ & ಗಿಲ್ಲೆ, ಪುಟ 84
  22. Wu, Zhong (7 ಫೆಬ್ರವರಿ 2007). "Power in China: Through a glass, darkly". Asia Times Online. Archived from the original on 9 ಜುಲೈ 2008. Retrieved 16 ಮೇ 2008. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  23. "ಹೂ ಜಿಂಟಾವೊ ರೀ-ಇಲೆಕ್ಟೆಡ್‌ ಚೈನೀಸ್‌ ಪ್ರೆಸಿಡೆಂಟ್‌", ಕ್ಸಿನ್‌ಹುವಾ (ಚೈನಾ ಡೇಲಿ ), 15 ಮಾರ್ಚ್‌ 2008.
  24. "The NEWSWEEK 50: Chinese President Hu Jintao". Newsweek. 5 ಜನವರಿ 2009. Retrieved 13 ಮಾರ್ಚ್ 2010.
  25. "The World's Most Powerful People". Forbes.com. Retrieved 13 ಮಾರ್ಚ್ 2010.
  26. "The Most Powerful People On Earth". Forbes. 3 ನವೆಂಬರ್ 2010. Archived from the original on 18 ಸೆಪ್ಟೆಂಬರ್ 2012. Retrieved 4 ನವೆಂಬರ್ 2010.
  27. Sisci, Francesco (5 ಏಪ್ರಿಲ್ 2005). "Strange cross-Taiwan Strait bedfellows". Asia Times Online. Archived from the original on 12 ಮೇ 2008. Retrieved 15 ಮೇ 2008. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  28. Zhong, Wu (29 ಮಾರ್ಚ್ 2005). "KMT makes China return in historic trip to ease tensions". The Standard. Retrieved 16 ಮೇ 2008. {{cite news}}: Cite has empty unknown parameter: |coauthors= (help)
  29. Sisci, Francesco (28 ಜೂನ್ 2006). "Hu Jintao and the new China". Asia Times Online. Archived from the original on 6 ಜುಲೈ 2008. Retrieved 15 ಮೇ 2008. {{cite news}}: More than one of |archivedate= and |archive-date= specified (help); More than one of |archiveurl= and |archive-url= specified (help)
  30. "Chinese, U.S. presidents hold telephone talks on Taiwan, Tibet". Xinhuanet. 27 ಮಾರ್ಚ್ 2008. Retrieved 15 ಮೇ 2008.
  31. "Hu Jintao regarding "The eight honors and eight shames"" (in Chinese). sohu.com (千龙网). 20 ಮಾರ್ಚ್ 2006. Retrieved 16 ಮೇ 2008.{{cite news}}: CS1 maint: unrecognized language (link)
  32. ದಿ ಆಸ್ಟ್ರೇಲಿಯನ್‌: ಹೂ'ಸ್‌ ಸೀಕ್ರೆಟ್‌ ವೆಪನ್‌: ಹಾರ್ಮೊನಿ
  33. "Asia-Pacific | Profile: Hu Jintao". BBC News. 16 ಸೆಪ್ಟೆಂಬರ್ 2004. Retrieved 13 ಮಾರ್ಚ್ 2010.
  34. ವಿಲ್ಲಿ ವೊ-ಲ್ಯಾಪ್‌ ಲ್ಯಾಮ್‌. (2006). ಚೈನೀಸ್‌ ಪಾಲಿಟಿಕ್ಸ್‌ ಇನ್‌ ದಿ ಹೂ ಜಿಂಟಾವೊ ಎರಾ: ನ್ಯೂ ಲೀಡರ್ಸ್‌, ನ್ಯೂ ಚಾಲೆಂಜಸ್‌. M.E. ಷಾರ್ಪೆ. ಪುಟ 5.

ಉಲ್ಲೇಖಗಳು

[ಬದಲಾಯಿಸಿ]
  • Nathan, Andrew J. (ಮಾರ್ಚ್ 2003). China's new rulers: the secret files. New York: The New York Review of Books. ISBN I-59017-072-5. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  • "ತೈವಾನ್‌." ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. 2008. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾ. ಆನ್‌ಲೈನ್‌ ಶಾಲೆ ಆವೃತ್ತಿ. 12 ಆಗಸ್ಟ್‌ 2008. APA ಶೈಲಿ: ತೈವಾನ್‌. (2008). ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದಲ್ಲಿ ಇರುವಂಥದ್ದು. ಎನ್‌ಸೈಕ್ಲೋಪೀಡಿಯಾ ಬ್ರಿಟಾನಿಕಾದ ಆನ್‌ಲೈನ್‌ ಶಾಲಾ ಆವೃತ್ತಿಯಿಂದ 2008ರ ಆಗಸ್ಟ್‌ 12ರಂದು ಮರುಸಂಪಾದಿಸಲಾಯಿತು

ಬಾಹ್ಯ ಕೊಂಡಿಗಳು

[ಬದಲಾಯಿಸಿ]
Wikiquote
Wikiquote
ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ:
[[wikiquote:kn:{{{1}}}|ಹೂ ಜಿಂಟಾವೊ]]
Party political offices
ಪೂರ್ವಾಧಿಕಾರಿ
Wang Zhaoguo
First Secretary of the Communist Youth League of China
1984–1985
ಉತ್ತರಾಧಿಕಾರಿ
Song Defu
ಪೂರ್ವಾಧಿಕಾರಿ
Zhu Houze
Provincial Committee Secretary of Guizhou
1985–1988
ಉತ್ತರಾಧಿಕಾರಿ
Liu Zhengwei
ಪೂರ್ವಾಧಿಕಾರಿ
Wu Jinghua
Provincial Committee Secretary of Tibet
1988–1992
ಉತ್ತರಾಧಿಕಾರಿ
Chen Kuiyuan
ಪೂರ್ವಾಧಿಕಾರಿ
Jiang Zemin
General Secretary of the Communist Party of China
2002–present
Incumbent
Chairman of the Central Military Commission of the Communist Party of China
2004–present
Academic offices
ಪೂರ್ವಾಧಿಕಾರಿ
Qiao Shi
President of the Central Party School
1993–2002
ಉತ್ತರಾಧಿಕಾರಿ
Zeng Qinghong
Political offices
ಪೂರ್ವಾಧಿಕಾರಿ
Rong Yiren
Vice President of the People's Republic of China
1998–2003
ಉತ್ತರಾಧಿಕಾರಿ
Zeng Qinghong
ಪೂರ್ವಾಧಿಕಾರಿ
Jiang Zemin
President of the People's Republic of China
2003–present
Incumbent
Chairman of the Central Military Commission of the People's Republic of China
2005–present

ಟೆಂಪ್ಲೇಟು:Leaders of the People's Republic of China

Portrait Information Party position(s) State position(s)
1st
[]
Xi Jinping
Xi Jinping
Name Xi Jinping General Secretary of the CPC Central Committee
Chairman of the CPC Central Military Commission
President of the People's Republic of China
Chairman of the PRC Central Military Commission
Birthplace Xicheng District, Beijing
NPC Constituency Shanghai At-large
Member since 22 October 2007
2nd
[]
Name Li Keqiang Party secretary of the State Council of the People's Republic of China Premier of the State Council of the People's Republic of China
Birthplace Dingyuan County, Anhui
NPC Constituency Shandong At-large
Member since 22 October 2007
3rd
[]
Zhang Dejiang
Zhang Dejiang
Name Zhang Dejiang Party secretary of the Standing Committee of the National People's Congress Chairman of the Standing Committee of the National People's Congress
Birthplace Tai'an County, Liaoning
NPC Constituency Zhejiang At-large
Member since 15 November 2012
4th
[]
Yu Zhengsheng
Yu Zhengsheng
Name Yu Zhengsheng Party secretary of the National Committee of the Chinese People's Political Consultative Conference Chairman of the National Committee of the Chinese People's Political Consultative Conference
Birthplace Shaoxing, Zhejiang
NPC Constituency Hubei At-large
Member since 15 November 2012
5th
[]
Liu Yunshan
Liu Yunshan
Name Liu Yunshan Top-ranked Secretary of the Central Secretariat of the CPC
Chairman of the Central Guidance Commission for Building Spiritual Civilization
President of the CPC Central Party School
 
Birthplace Tumed Right Banner, Inner Mongolia
NPC Constituency Inner Mongolia At-large
Member since 15 November 2012
6th
[]
Wang Qishan
Wang Qishan
Name Wang Qishan Secretary of the Central Commission for Discipline Inspection  
Birthplace Tianzhen County, Shanxi
NPC Constituency Beijing At-large
Member since 15 November 2012
7th
[]
Zhang Gaoli
Zhang Gaoli
Name Zhang Gaoli Deputy Party secretary of the State Council of the People's Republic of China First Vice Premier of the State Council of the People's Republic of China
Birthplace Jinjiang, Fujian
NPC Constituency Tianjin At-large
Member since 15 November 2012

  1. ೧.೦ ೧.೧ ೧.೨ ೧.೩ ೧.೪ ೧.೫ ೧.೬ "Xinhua Insight: China's new helmsmen". Xinhua. 15 ನವೆಂಬರ್ 2012. Retrieved 17 ನವೆಂಬರ್ 2012.