ಸೀತಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾಬುಕಳ ಸೇತುವೆ ಬಳಿಯ ಸೀತಾ ನದಿ

ಸೀತಾ ನದಿ ಪಶ್ಚಿಮಕ್ಕೆ ಹರಿಯುವ ನದಿಯಾಗಿದ್ದು, ಇದು ಭಾರತಕರ್ನಾಟಕ ರಾಜ್ಯದಲ್ಲಿದೆ, ಇದು ಮುಖ್ಯವಾಗಿ ಉಡುಪಿ ಜಿಲ್ಲೆಯಲ್ಲಿ ಹರಿಯುತ್ತದೆ.[೧]

ಹರಿವು[ಬದಲಾಯಿಸಿ]

ಈ ನದಿಯು ನರಸಿಂಹ ಪರ್ವತದ ಬಳಿ ಹುಟ್ಟಿಕೊಂಡಿದೆ ಮತ್ತು ಅಗುಂಬೆ ಕಾಡುಗಳ ಮೂಲಕ ಹಾದು ಹೆಬ್ರಿ, ಬಾರ್ಕೂರ್ ಬಳಿ ಹರಿಯುತ್ತಾ ಸುವರ್ಣ ನದಿಯ ಸಂಗಮವಾಗಿ ಅರಬ್ಬಿ ಸಮುದ್ರ ಸೇರುತ್ತದೆ. ಮಳೆಗಾಲದ ಸಮಯದಲ್ಲಿ ನದಿಯಲ್ಲಿ ನೀರಿನ ಹರಿವು ಹೆಚ್ಚಿನ ಮಟ್ಟಕ್ಕೆ ಏರುತ್ತದೆ. ನದಿ ಮತ್ತು ಅದರ ಸಣ್ಣ ಉಪನದಿಗಳು ಕುಡ್ಲು ಜಲಪಾತ, ಬರ್ಕಾನಾ ಜಲಪಾತ, ಜೊಮ್ಲು ತೀರ್ಥ ಜಲಪಾತ ಮುಂತಾದ ಹಲವಾರು ಜಲಪಾತಗಳನ್ನು ಮಾಡಿದೆ. ಸರ್ಕಾರಿ ಸಂಸ್ಥೆಗಳ ಸಮನ್ವಯದೊಂದಿಗೆ ಜೂನ್ ನಿಂದ ಅಕ್ಟೋಬರ್ ಅವಧಿಯಲ್ಲಿ ಸಾಹಸ ಪ್ರಿಯರು ರಿವರ್ ರಾಫ್ಟಿಂಗ್ ಅನ್ನು ಕೈಗೊಳ್ಳುತ್ತಾರೆ.[೨][೩][೪]

ಟಿಪ್ಪಣಿಗಳು[ಬದಲಾಯಿಸಿ]

  1. "Man drowns in Sita river". The Hindu, Newspaper. 9 February 2014. Retrieved 2 September 2015.
  2. "Landslides, rivers in spate as rains lash Dakshina Kannada, Udupi districts agai". Deccan Herald. 18 July 2015. Retrieved 2 September 2015.
  3. Naina, J A (27 November 2010). "Kudlu falls: Difficult to reach but it is worth it". Deccan Herald. Retrieved 2 September 2015.
  4. "Boost for adventure sports near Hebri". The Hindu, Newspaper. 28 September 2005.