ಸುಪಾ ಅಣೆಕಟ್ಟು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸುಪಾ ಅಣೆಕಟ್ಟಿನ ಹಿನ್ನೀರು

ಸುಪಾ ಅಣೆಕಟ್ಟು ಕರ್ನಾಟಕದ ರಾಜ್ಯದಲ್ಲಿ ಇರುವ ಕಾಳಿ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿರುವ ಅತ್ಯಂತ ಎತ್ತರದ ಅಣೆಕಟ್ಟು ಎಂಬ ಖ್ಯಾತಿ ಗಳಿಸಿದೆ. ಉತ್ತರ ಕನ್ನಡ ಜಿಲ್ಲೆಯ ಜೋಯ್ಡ ತಾಲೂಕಿನ ಸುಪಾದಲ್ಲಿ ಈ ಅಣೆಕಟ್ಟು ವಿದ್ಯುತ್ ಉತ್ಪಾದನೆಯ ಕಾರಣಕ್ಕಾಗಿಯೇ ನಿರ್ಮಾಣಗೊಂಡಿದೆ. ೧೧೦೧ ಮೀಟರ್ ಎತ್ತರ ಇರುವ ಸುಪಾ ಅಣೆಕಟ್ಟು ೩೩೨ ಮೀಟರ್ ಉದ್ದವಾಗಿದೆ. ೫೦ ಮೆ.ವ್ಯಾಟ್ ಉತ್ಪಾದನಾ ಸಾರ್ಮಥ್ಯದ ಎರಡು ವಿದ್ಯುತ್ ಜನಕಗಳು ಇರುವ ವಿದ್ಯುತ್ ಉತ್ಪಾದನಾ ಕೇಂದ್ರವು ಅಣೆಕಟ್ಟಿನ ತಳಭಾಗದಲ್ಲಿ ಇರುತ್ತದೆ. ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ತನ್ನು ಕರ್ನಾಟಕದ ರಾಜ್ಯದ ವಿವಿಧ ಭಾಗಗಳಲ್ಲಿ ಉಪಯೋಗಿಸಲಾಗುತ್ತದೆ. ಅಣೆಕಟ್ಟನ್ನು Hindustan Steel Works Construction Limited (HSCL) ಕಟ್ಟಿರುತ್ತಾರೆ. ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ವಿಭಾಗವು ಸುಪಾ ಅಣೆಕಟ್ಟಿನ ಉಸ್ತುವಾರಿ ನೋಡಿಕೊಂಡಿರುತ್ತಾರೆ. ಅಣೆಕಟ್ಟನ್ನು ೧೯೮೫ ರಂದು ಉದ್ಘಾಟಿಸಲಾಗಿದೆ. ಇದು ಕರ್ನಾಟಕದ ಎರಡನೇ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನೂ ಗಳಿಸಿಕೊಂಡಿದೆ. ಕಾಳಿನದಿಗೆ ಕಟ್ಟಲಾಗಿರುವ ಹಲವಾರು ದೊಡ್ಡ ಅಣೆಕಟ್ಟುಗಳಲ್ಲಿ ಇದೂ ಒಂದು.