ವಾಣಿವಿಲಾಸಸಾಗರ ಜಲಾಶಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಾಣಿ ವಿಲಾಸ ಸಾಗರ ಜಲಾಶಯ
ವಾಣಿವಿಲಾಸಸಾಗರ ಜಲಾಶಯ is located in India
ವಾಣಿವಿಲಾಸಸಾಗರ ಜಲಾಶಯ
Vani Vilasa Sagara Dam in Chitradurga district, Karnataka
Location Chitradurga district, Karnataka
Coordinates 13°53′26″N 76°28′37″E / 13.89056°N 76.47694°E / 13.89056; 76.47694Coordinates: 13°53′26″N 76°28′37″E / 13.89056°N 76.47694°E / 13.89056; 76.47694
Dam and spillways
Impounds Vedavathi River
ವಾಣಿವಿಲಾಸ ಸಾಗರ'
Vanivilas Dam-Loaps
A view across the dam.

ವಾಣಿ ವಿಲಾಸ ಸಾಗರ ಕರ್ನಾಟಕದ ಹಳೆಯ ಅಣೆಕಟ್ಟುಗಳಲ್ಲಿ ಒಂದು. ವೇದಾವತಿ ನದಿಗೆ ಅಡ್ಡಲಾಗಿ, 'ಮಾರಿಕಣಿವೆ' ಎಂಬಲ್ಲಿ ಕಟ್ಟಲಾಗಿರುವ ಈ ಅಣೇಕಟ್ಟು ಹಿರಿಯೂರಿನಿಂದ ಸುಮಾರು ೨೦ ಕಿ .ಮೀ. ದೂರದಲ್ಲಿದೆ. ಇದರ ಎತ್ತರ ೫೦ ಮೀ, ಉದ್ದ ೪೦೫ ಮೀಟರ್ ಗಳು. ೧೩೫ ಅಡಿಗಳವರೆಗೆ ನೀರನ್ನು ಸಂಗ್ರಹಿಸಬಹುದಾಗಿದೆ. ಹಿರಿಯೂರು ತಾಲ್ಲೂಕಿನ ಸುಮಾರು ೧/೩ ರಷ್ಟು (ಸುಮಾರು ೧೦,೦೦೦ ಹೆಕ್ಟೇರ್ ಪ್ರದೇಶ) ನೆಲಕ್ಕೆ ನೀರುಣಿಸುವುದಲ್ಲದೆ ಹಿರಿಯೂರು ಮತ್ತು ಚಿತ್ರದುರ್ಗ ನಗರಗಳಿಗೆ ಕುಡಿಯುವ ನೀರನ್ನೂ ಒದಗಿಸುತ್ತದೆ. ಸಿಮೆಂಟ್ ಉಪಯೋಗವಿಲ್ಲದೆ ಕೇವಲ ಗಾರೆಯಿಂದಲೇ ಇದನ್ನು ಕಟ್ಟಲಾಗಿದೆ. ಒಂದು ಬದಿಯಿಂದ ನೋಡಿದಾಗ, 'ಭಾರತದ ಭೂಪಟ'ವನ್ನು ನಾವು ಕಾಣಬಹುದಾಗಿದೆ.

ಸನ್, ೨೦೧೦ ರ ಮಳೆ, 'ವಾಣಿವಿಲಾಸ ಸಾಗರ'ದ ನೀರಿನಮಟ್ಟ ಹೆಚ್ಚಿಸಿದೆ[ಬದಲಾಯಿಸಿ]

  • ಸನ್, ೨೦೧೦ ರ ಮಳೆ ಜಲಾಶಯಕ್ಕೆ ಭರ್ಜರಿ ನೀರು ಒದಗಿಸಿದೆ. ಯಾವಾಗಲೂ 'ಚಿತ್ರದುರ್ಗ' ಮತ್ತು ಸುತ್ತಮುತ್ತಲ ಜಿಲ್ಲೆಗಳು ನೀರಿನ ಅಭಾವಕ್ಕೆ ಒಳಗಾಗಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು, ಹಲವಾರು ವರ್ಷಗಳು ಈ ಭೂಭಾಗಗಳು 'ಬರಗಾಲ ಪ್ರದೇಶ' ಗಳೆಂದು ಘೋಷಣೆಮಾಡಿರುವ ಸನ್ನಿವೇಷಗಳು ಹಲವುಬಾರಿ.
  • ಹಲವಾರು ವರದಿಗಳ ಪ್ರಕಾರ, ಈಗ ೧೦ ವರ್ಷಗಳ ನಂತರ ಜಲಾಶಯದ ನೀರಿನ ಮಟ್ಟ ೧೦೦ ಅಡಿ ಗಡಿ ದಾಟಿದೆ. ಒಟ್ಟು ಇದರ ಸಾಮರ್ಥ್ಯ, ೧೩೩ ಅಡಿಗಳು. ಈ 'ಮುಂಗಾರು ಹಂಗಾಮಿ'ನಲ್ಲಿ ೩೩ ಅಡಿ ನೀರು, ಸಂಗ್ರಹವಾಗಿದೆ. ಇಂದಿನ ಅಚ್ಚುಕಟ್ಟು ಪ್ರದೇಶದ 'ತೆಂಗು', 'ಅಡಕೆ', 'ಮಾವು' ಮುಂತಾದ ದೀರ್ಘಾವಧಿ ಬೆಳೆಗಳು ಮುಂದಿನ ೩-೪ ವರ್ಷಗಳವರೆಗೆ ಅನುಕೂಲವಾಗಲಿದೆ.

'ಗಾಯತ್ರಿ ಜಲಾಶಯ'[ಬದಲಾಯಿಸಿ]

'ಹಿರಿಯೂರು', ಮತ್ತು 'ಶಿರಾ' ತಾಲ್ಲೂಕಿನ ಸುಮಾರು ೭, ೦೦೦ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ 'ಗಾಯತ್ರಿ ಜಲಾಶಯ' ಪೂರ್ಣವಾಗಿ ತುಂಬಿದ್ದು 'ಕೋಡಿ' ಹರಿಯುತ್ತಿದೆ. ಒಟ್ಟಾರೆ ಪೂರ್ಣ ಸಂಗ್ರಹದ ಸಾಮರ್ಥ್ಯ, ೧೪೫ ಅಡಿಗಳು.

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: