ತಿಪ್ಪಗೊಂಡನಹಳ್ಳಿ ಜಲಾಶಯ
ಗೋಚರ
ತಿಪ್ಪಗೊಂಡನಹಳ್ಳಿ ಜಲಾಶಯ ಅಥವಾ ಟಿ.ಜಿ. ಹಳ್ಳಿ ಜಲಾಶಯ ಅಥವಾ ಚಾಮರಾಜ ಸಾಗರ ಅರ್ಕಾವತಿ ನದಿ ಹಾಗು ಕುಮುದಾವತಿ ನದಿ ಕೂಡುವ ಸ್ಥಳದಲ್ಲಿ ಅಡ್ಡವಾಗಿ ನಿರ್ಮಿಸಿರುವ ಒಂದು ಜಲಾಶಯ. ಇದು ಬೆಂಗಳೂರು ಮಾಗಡಿ ಮುಖ್ಯ ರಸ್ತೆಯಲ್ಲಿ ಬೆಂಗಳೂರಿನಿಂದ ಸುಮಾರು ೩೫ ಕಿ.ಮೀ ದೂರದಲ್ಲಿದೆ. ಇದನ್ನು ಬೆಂಗಳೂರು ನಗರಕ್ಕೆ ನೀರು ಸರಬರಾಜು ಮಾಡಲು ೧೯೩೩ ನಿರ್ಮಿಸಲಾಯಿತು. ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ನವರ ಮೇಲುಸ್ತುವಾರಿಯಲ್ಲಿ ಇದರ ನಿರ್ಮಾಣವಾಯಿತು.