ರೇಣುಕಾ ಜಲಾಶಯ
ಗೋಚರ
ಮಲಪ್ರಭಾ ನದಿಗೆ ಅಡ್ಡಲಾಗಿ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಹತ್ತಿರ ನವಿಲುತೀರ್ಥ ದಲ್ಲಿ ಕಲ್ಲಿನ ಬಾಂಧಕಾಮಿನ ಆಣೆಕಟ್ಟು ಕಟ್ಟಲಾಗಿದೆ. ಈ ಆಣೆಕಟ್ಟು ೧೫೪.೫೩ ಮೀಟರ ಉದ್ದವಿದ್ದು ೪೦.೨೩ ಮೀಟರ ಎತ್ತರವಿದೆ. ಆಣೆಕಟ್ಟಿನ ಸಂಗ್ರಹ ಸಾಮರ್ಥ್ಯವು ೩೦.೨೬ ಘನ ಮೀಟರಗಳಿಷ್ಟಿದೆ. ಆಣೆಕಟ್ಟಿನ ಹಿನ್ನೀರಿನಲ್ಲಿ ೧೩,೫೭೮ ಹೆಕ್ಟೇರುಗಳಷ್ಟು ಪ್ರದೇಶವು ಮುಳುಗಡೆಯಾಗಿದೆ. ಈ ಜಲಾಶಯಕ್ಕೆ ರೇಣುಕಾ ಜಲಾಶಯವೆಂದು ಕರೆಯಲಾಗುತ್ತದೆ.
ಕಾಲುವೆಗಳು
[ಬದಲಾಯಿಸಿ]ಮಲಪ್ರಭಾ ಆಣೆಕಟ್ಟಿನ ಎಡದಂಡೆಯ ಕಾಲುವೆಯು ೧೫೦ ಕಿಮೀ ಉದ್ದವಿದ್ದು, ಇದರಿಂದ ೫೩,೧೩೬ ಹೆಕ್ಟೇರ್ ಜಮೀನಿಗೆ ನೀರಾವರಿಯಾಗುತ್ತದೆ. ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ರೂವಾರಿಯಾದ ಇಂಜನಿಯರ ಎಸ್.ಜಿ.ಬಾಳೆಕುಂದ್ರಿಯವರ ಗೌರವಾರ್ಥ ಈ ಕಾಲುವೆಗೆ ಬಾಳೆಕುಂದ್ರಿ ಕಾಲುವೆ ಎಂದು ಹೆಸರಿಡಲಾಗಿದೆ. ಬಲದಂಡೆಯು ೧೪೨ ಕಿಮೀ ಉದ್ದವಿದ್ದು ೧,೩೯,೯೨೧ ಹೆಕ್ಟೇರ್ ಭೂಮಿಗೆ ನೀರುಣ್ಣಿಸುತ್ತದೆ. ರೇಣುಕಾ ಜಲಾಶಯ ದಿಂದ ಹುಬ್ಬಳ್ಳಿ ಹಾಗು ಧಾರವಾಡ ನಗರಗಳಿಗೆ ನೀರಿನ ಪೂರೈಕೆಯಾಗುತ್ತದೆ.