ಗಾರೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಟ್ಟಿಗೆಗಳನ್ನು ಹಿಡಿದಿಟ್ಟಿರುವ ಗಾರೆ

ಗಾರೆಯು (ಗಚ್ಚು) ಕಲ್ಲುಗಳು, ಇಟ್ಟಿಗೆಗಳು, ಮತ್ತು ಕಾಂಕ್ರೀಟಿನ ಕಟ್ಟಡ ಘಟಕಗಳಂತಹ ನಿರ್ಮಾಣ ಖಂಡಗಳನ್ನು ಬಂಧಿಸಲು, ಅವುಗಳ ನಡುವಿನ ಅನಿಯಮಿತ ಅಂತರಳನ್ನು ತುಂಬಿ ಮುಚ್ಚಲು, ಮತ್ತು ಕೆಲವೊಮ್ಮೆ ಕಟ್ಟಡದ ಗೋಡೆಗಳಲ್ಲಿ ಅಲಂಕಾರಿಕ ಬಣ್ಣಗಳು ಅಥವಾ ವಿನ್ಯಾಸಗಳನ್ನು ಸೇರಿಸಲು ಬಳಸಲಾಗುವ ರೂಪಿಸಬಲ್ಲ ಪೇಸ್ಟ್. ಅದರ ಅತ್ಯಂತ ವಿಶಾಲ ಅರ್ಥದಲ್ಲಿ, ಗಾರೆಯು ಡಾಮರು ಮೇಣ, ಕಲ್ಲರಗು, ಮತ್ತು ಮಣ್ಣಿನ ಇಟ್ಟಿಗೆಗಳ ನಡುವೆ ಬಳಸಲಾದಂತಹ ಮೃದು ಮಣ್ಣು ಅಥವಾ ಜೇಡಿಯನ್ನು ಒಳಗೊಂಡಿರುತ್ತದೆ.

ಸಿಮೆಂಟ್ ಗಾರೆಯು ಒಣಗಿದಾಗ ಗಟ್ಟಿಯಾಗುತ್ತದೆ, ಪರಿಣಾಮವಾಗಿ ಒಟ್ಟಾರೆ ರಚನೆಯು ಗಡುಸಾಗುತ್ತದೆ; ಆದರೆ ಗಾರೆಯು ನಿರ್ಮಾಣ ಖಂಡಗಳು ಹಾಗೂ ಗಾರೆಕೆಲಸದಲ್ಲಿನ ಬಿಟ್ಟುಕೊಡಲಾದ ಅಂಶಕ್ಕಿಂತ ದುರ್ಬಲವಾಗಿರಲು ಉದ್ದೇಶಿಸಲಾಗುತ್ತದೆ, ಏಕೆಂದರೆ ಗಾರೆಯ ರಿಪೇರಿಯು ನಿರ್ಮಾಣ ಖಂಡಗಳಿಗಿಂತ ಸುಲಭ ಮತ್ತು ಕಡಿಮೆ ದುಬಾರಿಯಾಗಿರುತ್ತದೆ. ಗಾರೆಗಳನ್ನು ಸಾಮಾನ್ಯವಾಗಿ ಮರಳು, ಒಂದು ಬಂಧಕ, ಹಾಗೂ ನೀರಿನ ಮಿಶ್ರಣದಿಂದ ತಯಾರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

"https://kn.wikipedia.org/w/index.php?title=ಗಾರೆ&oldid=1061067" ಇಂದ ಪಡೆಯಲ್ಪಟ್ಟಿದೆ